ದ್ವಿತೀಯ ಪಿ.ಯು.ಸಿ ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ರಾಜ್ಯಶಾಸ್ತ್ರ ನೋಟ್ಸ್‌ | 2nd Puc Political Science Chapter 6 Notes in Kannada

ದ್ವಿತೀಯ ಪಿ.ಯು.ಸಿ ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ರಾಜ್ಯಶಾಸ್ತ್ರ ನೋಟ್ಸ್‌, 2nd Puc Political Science Chapter 6 Notes Question Answer in Kannada Kseeb Solutions For Class 12 Political Science Chapter 6 Notes in Kannada Medium 2023 2nd Puc Political Science 6th Lesson Question Answer Extract Mcq Pdf Download

2nd Puc Political Science 6th Chapter Question Answer

bharatada rajakiya nutana pravruttigalu notes

I ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.

1. ಸಮ್ಮಿಶ್ರ ಸರಕಾರ ಎಂದರೇನು ?

ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಸರ್ಕಾರ ರಚಿಸುವ ವ್ಯವಸ್ಥೆ.

2. “ಕೊಯಲಿಶನ್’ನ ಮೂಲಪದ ಯಾವುದು ?

‘ಕೊಯಲಷಿಯೇ’ ಎಂಬುವುದರಿಂದ ಬಂದಿದೆ.

3. C.M.P. ಯನ್ನು ವಿಸ್ತರಿಸಿರಿ.

Common Minimum Programme (ಸಾಮಾನ್ಯ ಕನಿಷ್ಟ ಕಾರ್ಯಕ್ರಮ)

4. ಅಸ್ಮಿತ ರಾಜಕಾರಣವನ್ನು ಯಾರು ಗುರುತಿಸಿದರು.

ಎಲ್.ಎ. ಕಾಫ್‌ಮನ್

5. LGBT ಯನ್ನು ವಿಸ್ತರಿಸಿರಿ.

Lesbian-Gay Bi-Sexual Transgender (ಸಲಿಂಗಿಗಳ ಹಕ್ಕುಗಳ ಚಳುವಳಿ)

6. ಯಾವ ದಿನವನ್ನು ಮತದಾರರ ದಿನ ಎಂದು ಆಚರಿಸಲಾಗುತ್ತಿದೆ?

ಜನೇವರಿ 25

7. ಭ್ರಷ್ಟಾಚಾರದ ಮೂಲಪದ ಯಾವುದು ?

ಭ್ರಷ್ಟಾಚಾರದ ಮೂಲಪದ ‘ರಂಪಿಯರ್’

8. ಸಮವರ್ತಿ ಪಟ್ಟಿಯಲ್ಲಿನ ಎರಡು ವಿಷಯಗಳನ್ನು ತಿಳಿಸಿ,

  • ವಿವಾಹ
  • ವಿಚ್ಛೇದನ

9. IAC ಯನ್ನು ವಿಸ್ತರಿಸಿರಿ.

India Against Corruption (ಭ್ರಷ್ಟಾಚಾರದ ವಿರುದ್ಧ ಭಾರತ)

10. ಭಾರತದಲ್ಲಿ ಎಷ್ಟು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ?

ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮೂರು ಬಾರಿ ಹೇರಲಾಗಿದೆ.

11. N.D.A. ಯನ್ನು ವಿಸ್ತರಿಸಿರಿ.

(ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ)

12, U.P.A. ಯನ್ನು ವಿಸ್ತರಿಸಿರಿ.

(ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟ)

13. ‘ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯತೆಗೆ ಸಾಲುವಷ್ಟು ಇದೆಯೇ ಹೊರತು ದುರಾಸೆಗಲ್ಲ’ ಎಂದು ಹೇಳಿದವರು ಯಾರು ?

ಮಹಾತ್ಮಾ ಗಾಂಧೀಜಿ

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.

Bharatada Rajakiya Nutana Pravruttigalu Notes Pdf

1. ಅಸ್ಮಿತ ರಾಜಕಾರಣದ ಅರ್ಥವನ್ನು ಬರೆಯಿರಿ.

ಅಸ್ಮಿತ ರಾಜಕೀಯವೆಂಬುದು ಒಂದು ರೀತಿಯಲ್ಲಿ ಸ್ವಂತಿಕೆ ವಿಧಾನ, ಸೌಖ್ಯದ ಹುಡುಕಾಟ, ಸಮುದಾಯವನ್ನು ತಲುಪುವುದು. ಇದು ಬಲಶಾಲಿಯಾಗಲು, ಪ್ರಾತಿನಿಧ್ಯ ಪಡೆಯಲು ಮತ್ತು ಸಾಮಾಜಿಕ ಅಸ್ತಿತ್ವದೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತದೆ.

2. ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಎಂದರೇನು ?

ಮೈತ್ರಿಕೂಟದ ಪಕ್ಷಗಳು ತಮ್ಮ ಸೈದ್ಧಾಂತಿಕ ವಿಚಾರಗಳನ್ನು ಬದಿಗೊತ್ತಿ ಸಮ್ಮಿಶ್ರ ಸರಕಾರವನ್ನು ನಡೆಸಿಕೊಂಡು ಹೋಗಲು, ಕೆಲವು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಒಪ್ಪಿಕೊಂಡು ಕಾರ್ಯ ನಿರ್ವಹಿಸುವುದೇ ಸಾಮಾನ್ಯ ಕನಿಷ್ಟ ಕಾರ್ಯಕ್ರಮ.

3. ಭ್ರಷ್ಟಾಚಾರ ಎಂದರೇನು ?

ಲಂಚ, ಮೋಸ, ವಂಚನೆ, ಕಳ್ಳತನ, ದಬ್ಬಾಳಿಕೆ, ಸ್ವಜನ ಪಕ್ಷಪಾತ, ಒತ್ತಾಯ, ಕ್ರೌರ್ಯ ಮುಂತಾದ ಎಲ್ಲ ಕುಕೃತ್ಯಗಳನ್ನು ಭ್ರಷ್ಟಾಚಾರ ಎನ್ನಲಾಗುತ್ತದೆ.

4. ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಇರುವ ಎರಡು ಅಡಚಣೆಗಳಾವುವು ?

ಭ್ರಷ್ಟಾಚಾರ ನಿರ್ಮೂಲನೆಗಿರುವ ಅಡಚಣೆಗಳು :

  • ನೈತಿಕತೆ ಕೊರತೆ
  • ಕಾರ್ಯ ಮತ್ತು ಗುರಿಗಳು

5. ಭ್ರಷ್ಟಾಚಾರ ನಿಮೂಲನೆಗೊಳಿಸಲು ನಡೆದ ಒಂದು ಅಂದೋಲನವನ್ನು ಹೆಸರಿಸಿ.

ಅಂದೋಲನದ ಹೆಸರು ‘ಭ್ರಷ್ಟಾಚಾರದ ವಿರುದ್ಧ ಭಾರತ’.

6. ಸಮ್ಮಿಶ್ರ ಸರಕಾರ ರಚನೆಯಾಗುವ ಎರಡು ಸಂದರ್ಭಗಳು ಯಾವುವು ?

ಸಮ್ಮಿಶ್ರ ಸರಕಾರ ರಚನೆಯಾಗುವ ಎರಡು ಸಂದರ್ಭಗಳು

  1. ರಾಷ್ಟ್ರೀಯ ವಿಪತ್ತಿನ ಸಂದರ್ಭ.
  2. ಒಂದೇ ಪಕ್ಷ ಸ್ಪಷ್ಟ ಬಹುಮತ ಪಡೆಯದಿದ್ದಾಗ.

7. ಸಮ್ಮಿಶ್ರ ಸರಕಾರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ಉದಾಹರಣೆ ಕೊಡಿ

  • ಭಾರತ
  • ಜರ್ಮನಿ

8. ಸಮ್ಮಿಶ್ರ ಸರಕಾರ ಎಂದರೇನು ?

ಸಾರ್ವತ್ರಿಕ ಚುನಾವಣೆಗಳ ನಂತರ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಇದ್ದಾಗ, ಎರಡಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಒಂದುಗೂಡಿ ಸರಕಾರ ರಚಿಸುವುದು.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ.

1. ಸಮ್ಮಿಶ್ರ ಸರಕಾರದ ಲಕ್ಷಣಗಳು ಯಾವುವು ?

  • ಸಮ್ಮಿಶ್ರ ಸರಕಾರದ ಲಕ್ಷಣಗಳು
  • ಸಮ್ಮಿಶ್ರ ಸರಕಾರ ಬಹುಪಕ್ಷ ಪದ್ಧತಿಯಲ್ಲಿ ಮಾತ್ರ ಸಾಧ್ಯ.
  • ಇದು ಚುನಾವಣಾ ಪೂರ್ವ ಅಥವಾ ಚುನಾವಣಾ ನಂತರದ ವ್ಯವಸ್ಥೆ.
  • ಮಿತ್ರ ಪಕ್ಷಗಳು ‘ಸಾಮಾನ್ಯ ಕನಿಷ್ಟ ಕಾರ್ಯಕ್ರಮ’ ಜಾರಿಗೆ ತರುತ್ತವೆ.
  • ಸರಕಾರದ ಮುಖ್ಯಸ್ಥ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.
  • ಸಮ್ಮಿಶ್ರ ಸರಕಾರದ ಮುಖ್ಯಸ್ಥನಾಗುವ ನಾಯಕ ಒಮ್ಮತದ ವ್ಯಕ್ತಿಯಾಗಿರಬೇಕು.
  • ಮಿತ್ರ ಪಕ್ಷಗಳು ಬೆಂಬಲ ವಾಪಸ್ ಪಡೆಯಲು ಸ್ವತಂತ್ರರು.
  • ಸಮ್ಮಿಶ್ರ ಸರಕಾರಗಳು ಸಾಮಾನ್ಯವಾಗಿ ಅಸ್ಥಿರವಾದವುಗಳು.

2. ಸಮ್ಮಿಶ್ರ ಸರಕಾರದ ಗುಣಗಳು ಯಾವುವು ?

ಸಮ್ಮಿಶ್ರ ಸರಕಾರದ ಗುಣಗಳು

  • ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡುತ್ತವೆ.
  • ಸಾರ್ವಜನಿಕ ಅಭಿಪ್ರಾಯವನ್ನು ಪ್ರತಿನಿಧಿಸುತ್ತದೆ.
  • ಆಡಳಿತದಲ್ಲಿ ವೈವಿಧ್ಯತೆ ಮತ್ತು ಬಹುತ್ವವನ್ನು ಕಲ್ಪಿಸುತ್ತದೆ.
  • ಜನರಿಗೆ ಉತ್ತಮ ಆಡಳಿತ ಒದಗಿಸುತ್ತದೆ.
  • ಬಹುಪಕ್ಷ ಪದ್ಧತಿಯಲ್ಲಿ ಜನತೆಗೆ ಆಯ್ಕೆಯ ಅವಕಾಶ ವಿಶಾಲವಾಗಿರುತ್ತದೆ.
  • ಸರ್ವಾಧಿಕಾರದ ಆಳ್ವಿಕೆಗೆ ಅವಕಾಶವಿಲ್ಲ.

3. ಸಮ್ಮಿಶ್ರ ಸರಕಾರದ ಅವಗುಣಗಳು (ದೋಷಗಳು) ಯಾವುವು?

  • ರಾಜಕೀಯ ಅಸ್ಥಿರತೆ ಉಂಟಾಗುತ್ತದೆ.
  • ಸರಕಾರದ ಮುಖ್ಯಸ್ಥರು ಮುಕ್ತವಾಗಿ ವರ್ತಿಸಲು ಸಾಧ್ಯವಿಲ್ಲ.
  • ಪ್ರತ್ಯೇಕ ಮತದಾರ ವರ್ಗವಿರುತ್ತದೆ.
  • ಆಡಳಿತಾತ್ಮಕ ಗೌಪ್ಯತೆ ನಿರ್ವಹಣೆ ಸಾಧ್ಯವಿಲ್ಲ.
  • ರಾಷ್ಟ್ರೀಯ ಹಿತಾಸಕ್ತಿ ನಿರ್ಲಕ್ಷ್ಯ 6. ಅಸ್ಥಿರತೆಯ ಕಾರಣ – ಪದೇ ಪದೇ ಚುನಾವಣೆ ಆರ್ಥಿಕ ಹೊರೆ.
  • ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ಇಲ್ಲ.
  • ಸರಕಾರಕ್ಕೆ ಒತ್ತಡ ಮತ್ತು ವಿರೋಧಗಳಿರುತ್ತವೆ.
  • ಸರಕಾರಕ್ಕೆ ದೂರದೃಷ್ಟಿ ಇರುವುದಿಲ್ಲ.

4. ಅಸ್ಮಿತೆ ರಾಜಕಾರಣದ ಉಗಮಕ್ಕೆ ಕಾರಣಗಳಾವುವು ?

  • ಒಂದು ಪ್ರದೇಶದ ಜನರ ಆರ್ಥಿಕ ದುಃಸ್ಥಿತಿ
  • ಭಾಷೆ, ಪ್ರದೇಶ, ಜಾತಿ, ಧರ್ಮದ ಬಗೆಗಿನ ಅರಿವು.
  • ಅತಿಯಾದ ಬಡತನ, ಶೋಷಣೆ, ಸೌಲಭ್ಯಗಳ ಕಡಿತ
  • ಜನಾಂಗಗಳ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಳು ಮಾಡಬಹುದೆಂಬ ಭೀತಿ,
  • ಉನ್ನತ ಜೀವನ ಶೈಲಿ, ಸಾಕ್ಷರತೆ ಮತ್ತು ಸಾಮಾಜಿಕ ರಾಜಕೀಯ ಜಾಗೃತಿ.
  • ನೈಸರ್ಗಿಕ ಸಂಪತ್ತಿನ ಅಸಮಾನ ಹಂಚಿಕೆ.
  • ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುವ ಭೀತಿ.
  • ಭಾಷೆ ಸಂಸ್ಕೃತಿಯನ್ನು ಧರಿಸಿದ ಅಸ್ಮಿತೆಯನ್ನು ಕಳೆದುಕೊಳ್ಳುವ ಭೀತಿ.

5. ಸಂವಿಧಾನದಲ್ಲಿರುವ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ವಿವಿಧ ವಿಧಿಗಳನ್ನು ವಿವರಿಸಿರಿ.

ಭಾರತದ ಸಂವಿಧಾನದ 18ನೇ ಭಾಗದಲ್ಲಿ ಮೂರು ರೀತಿಯ ತುರ್ತು ಪರಿಸ್ಥಿತಿಗಳಿಗೆ ಅವಕಾಶಗಳಿವೆ.

  1. ರಾಷ್ಟ್ರೀಯ ತುರ್ತು ಪರಿಸ್ಥಿತಿ : 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಯವರು ಘೋಷಣೆ ಮಾಡುತ್ತಾರೆ. ದೇಶದ ಮೇಲೆ ಬಾಹ್ಯ ಆಕ್ರಮಣಗಳು ನಡೆದಾಗ ಈ ವಿಧಿಯನ್ನು ಜಾರಿಗೊಳಿಸಲಾಗುತ್ತದೆ. ಇಲ್ಲಿಯವರೆಗೆ ಮೂರು ಬಾರಿ ಇದನ್ನು ಜಾರಿಗೊಳಿಸಲಾಗಿದೆ. ವ್ಯಕ್ತಿಯ ವೈಯಕ್ತಿಕ ಹಕ್ಕುಗಳು ರದ್ದಾಗುತ್ತವೆ.
  2. ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ : 356 ನೇ ವಿಧಿಯು ರಾಷ್ಟ್ರಪತಿಯವರಿಗೆ ಈ ಅಧಿಕಾರ ನೀಡಿದೆ. ದೇಶದ ಯಾವುದೇ ರಾಜ್ಯದಲ್ಲಿ ಸಂವಿಧಾನತ್ಮಕ ಪರಿಸ್ಥಿತಿ ಹದಗೆಟ್ಟಾಗ, ಆಡಳಿತ ಕುಸಿತಗೊಂಡಾಗ ಆ ರಾಜ್ಯದ ರಾಜ್ಯಪಾಲರು ನೀಡುವ ವರದಿಯನ್ನು ಆಧರಿಸಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಲಾಗುತ್ತದೆ. ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಸಲ ಈ ವಿಧಿ ಜಾರಿಯಾಗಿದೆ.
  3. ಆರ್ಥಿಕ ತುರ್ತು ಪರಿಸ್ಥಿತಿ : 360 ನೇ ವಿಧಿ ಪ್ರಕಾರ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಅದನ್ನು ಸರಿಪಡಿಸಲು, ರಾಷ್ಟ್ರಪತಿಯವರು ಈ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡುತ್ತಾರೆ. ಇಲ್ಲಿಯವರೆಗೂ ಈ ವಿಧಿಯನ್ನು ಜಾರಿಗೊಳಿಸಲಾಗಿಲ್ಲ.

6. ಭ್ರಷ್ಟಾಚಾರವನ್ನು ಯುವಜನತೆ ಹೇಗೆ ತಡೆಗಟ್ಟಬಲ್ಲದು ?

ಈ ಕೆಳಗಿನ ಅಂಶಗಳ ಮೂಲಕ ಯುವಜನತೆ ಪಾತ್ರ ವಹಿಸಬಹುದು.

  • ಶಿಕ್ಷಣ
  • ನೈತಿಕತೆ
  • ಕಾರ್ಯ ಮತ್ತು ಗುರಿಗಳು
  • ಮಾದರಿ ವ್ಯಕ್ತಿಗಳು
  • ಯುವ ಆಂದೋಲನ

7. ಭಯೋತ್ಪಾದನೆಯ ವಿರುದ್ಧ ಯುವಜನತೆಯ ಪಾತ್ರವನ್ನು ವಿವರಿಸಿರಿ.

  • ಯುವಕರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಿಸುವುದು.
  • ಭಯೋತ್ಪಾದಕ ಕೃತ್ಯ ತಡೆಗಟ್ಟವಲ್ಲಿ ಸರಕಾರಕ್ಕೆ ಸಹಾಯ.
  • ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿ.
  • ರಾಷ್ಟ್ರೀಯತೆ ಮತ್ತು ದೇಶಾಭಿಮಾನ ಮೂಡಿಸುವುದು.
  • ಯುವಕರು ಸ್ವಯಂ ಸಂಘಟಿತರಾಗಿ ನಕ್ಸಲ್ ದಾಳಿಯ ವಿರುದ್ಧ ಹೋರಾಟ.
  • ಯುವ ಶಕ್ತಿಯ ದುರುಪಯೋಗ ತಡೆಗಟ್ಟಲು ಶಿಕ್ಷಣದ
  • ಮಹತ್ವ ಸಾರುವುದು.
  • ನಮ್ಮ ರಾಷ್ಟ್ರದ ನೈತಿಕ ಮೌಲ್ಯಗಳನ್ನು ಅಳವಡಿಸಿ ಕೊಳ್ಳುವುದು.

8. ಯುವ ಜನಾಂಗ ಹೇಗೆ ಭಾರತದ ರಾಜಕೀಯ ವ್ಯವಸ್ಥೆಯನ್ನು ಬದಲಿಸಬಲ್ಲರು ?

  • ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಶೇ. 70 ರಷ್ಟು ಯುವ ಮತದಾರರಿದ್ದಾರೆ.
  • ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಇರುವುದರಿಂದ ಯುವ ಜನತೆ ಹೆಚ್ಚು ಪಾಲ್ಗೊಳ್ಳಲು ಅವಕಾಶ.
  • ರಾಜಕೀಯ ಕ್ಷೇತ್ರವನ್ನು ಶುದ್ಧಗೊಳಿಸುವ ಅದ್ಭುತ ಶಕ್ತಿಯಿದೆ.
  • ಯುವಜನತೆಯಲ್ಲಿ ಕ್ರಾಂತಿಕಾರಕ ಮನೋಭಾವ ಮತ್ತು ಉತ್ಸಾಹ ಹೆಚ್ಚು.
  • ಯುವ ಜನತೆಗೆ ದೇಶದ ಜ್ವಲಂತ ಸಮಸ್ಯೆಗಳನ್ನು
  • ಗ್ರಹಿಸಿಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯವಿದೆ.
  • ಯುವ ಜನಾಂಗದ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವದ
  • ಸಾಮರ್ಥ್ಯ ಹೆಚ್ಚಳ.
  • ರಾಜಕೀಯ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುತ್ತದೆ.

9. ಅಸ್ಮಿತೆ ರಾಜಕಾರಣದ ವಿವಿಧ ಅಂಶಗಳನ್ನು ಚರ್ಚಿಸಿ ?

1. ಧರ್ಮ

2. ಜಾತಿ

3. ಪ್ರದೇಶ

4. ಭಾಷೆ

ಧರ್ಮ : ಭಾರತ ಜಾತ್ಯಾತೀತ ರಾಷ್ಟ್ರ, ವಿವಿಧ ಧರ್ಮಗಳಿಗೆ ಸೇರಿದ ಜನರಿದ್ದಾರೆ. ಪ್ರತಿಯೊಂದು ಧರ್ಮ ತನ್ನ ವೈಯಕ್ತಿಕ ‘ಅಸ್ಮಿತೆ’ಯನ್ನು ಉಳಿಸಿಕೊಳ್ಳುವುದಕ್ಕಾಗಿ `ಧಾರ್ಮಿಕ ಸಂಘಟನೆಗಳನ್ನು ಹುಟ್ಟು ಹಾಕಿದೆ. ಓಟ್ ಬ್ಯಾಂಕ್‌ಗಾಗಿ ವಿವಿಧ ರಾಜಕೀಯ ಪಕ್ಷಗಳು ಧರ್ಮದ ಆಧಾರದ ಮೇಲೆ ಕಾರ್ಯ ಪ್ರವೃತ್ತವಾಗಿವೆ.

ಜಾತಿ : ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಸ್ಥಾನಮಾನವು ಬುದ್ಧಿವಂತಿಕೆ ಮತ್ತು ಸಾಧನೆಗಳಿಗಿಂತ ‘ಜಾತಿ’ಯನ್ನು ಆಧರಿಸಿದೆ. ಭಾರತದ ಸಮಾಜ ಸುಧಾರಕರು ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ. ಅದು ತನ್ನ ಅಸ್ಮಿತೆಗಾಗಿ ಗಟ್ಟಿಯಾಗಿ ನೆಲೆಯೂರಿದೆ.

ಪ್ರದೇಶ : ಪ್ರಾದೇಶಿಕ ಅಸ್ಮಿತೆಯನ್ನು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಂದು ಚಳುವಳಿಯ ಹಿಂದೆ ಪ್ರಾದೇಶಿಕತೆಯ ವಿಷಯ ಪ್ರಧಾನವಾಗಿರುತ್ತದೆ. ಉದಾ : ನಾಗಾಲ್ಯಾಂಡ್, ತೆಲಂಗಾಣ, ತ್ರಿಪುರಾ ಪ್ರತ್ಯೇಕ ರಾಜ್ಯಕ್ಕೆ ಹೋರಾಟ.

ಭಾಷೆ : ಭಾರತ ಹಲವಾರು ಭಾಷೆಗಳನ್ನು ಒಳಗೊಂಡಿದೆ. ಭಾಷೆಯ ಸಮಸ್ಯೆಗಳು ಸೂಕ್ಷ್ಮ ಹಾಗೂ ಉದ್ವೇಗಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತದೆ. ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡನೆ ಆಗಿರುವುದರಿಂದ ಪ್ರತಿಯೊಂದು ರಾಜ್ಯ ತನ್ನ ಅಸ್ಮಿತೆ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ.

10. ಭಾರತದ ಸಂವಿಧಾನದಲ್ಲಿ ಉಲ್ಲೇಖಿತವಾದಂತೆ ಅಧಿಕಾರ ವಿಕೇಂದ್ರಿಕರಣ ವಿವರಿಸಿ.

245ನೇ ವಿಧಿಯಿಂದ 255 ನೇ ವಿಧಿಯವರೆಗೆ ವಿವರಣೆ ನೀಡಲಾಗಿದೆ.

ಕೇಂದ್ರ ಪಟ್ಟಿ : ಇದು 100 ವಿಷಯಗಳನ್ನು ಒಳಗೊಂಡಿದೆ. ಉದಾ : ರಕ್ಷಣೆ, ವಿದೇಶಾಂಗ ವ್ಯವಹಾರ, ಅಣುಶಕ್ತಿ, ವಿಜ್ಞಾನ ಈ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ.

ರಾಜ್ಯ ಪಟ್ಟಿ : 63 ವಿಷಯಗಳನ್ನು ಹೊಂದಿದೆ. ಉದಾ: ಪೊಲೀಸ್, ಆರೋಗ್ಯ, ಕೃಷಿ, ಈ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದ.

ಸಮವರ್ತಿ ಪಟ್ಟಿ : ಇದರಲ್ಲಿ 52 ವಿಷಯಗಳಿವೆ. ಉದಾ: ವಿವಾಹ, ವಿಚ್ಛೇದನ, ಸಿವಿಲ್ ಮತ್ತು ಕ್ರಿಮಿನಲ್, ಕಾನೂನುಗಳು ಇವುಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಕೇಂದ್ರ-ರಾಜ್ಯ ಸರಕಾರಗಳೆರಡಕ್ಕೂ ಇದೆ. ಆದರೆ ಕೇಂದ್ರ ಸರಕಾರಕ್ಕೆ ಹೆಚ್ಚಿನ ಮಾನ್ಯತೆ ಇದೆ.

FAQ

1. ಸಮ್ಮಿಶ್ರ ಸರಕಾರ ಎಂದರೇನು ?

ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಸರ್ಕಾರ ರಚಿಸುವ ವ್ಯವಸ್ಥೆ.

2. ಭ್ರಷ್ಟಾಚಾರ ಎಂದರೇನು ?

ಲಂಚ, ಮೋಸ, ವಂಚನೆ, ಕಳ್ಳತನ, ದಬ್ಬಾಳಿಕೆ, ಸ್ವಜನ ಪಕ್ಷಪಾತ, ಒತ್ತಾಯ, ಕ್ರೌರ್ಯ ಮುಂತಾದ ಎಲ್ಲ ಕುಕೃತ್ಯಗಳನ್ನು ಭ್ರಷ್ಟಾಚಾರ ಎನ್ನಲಾಗುತ್ತದೆ.

3. ಯಾವ ದಿನವನ್ನು ಮತದಾರರ ದಿನ ಎಂದು ಆಚರಿಸಲಾಗುತ್ತಿದೆ?

ಜನೇವರಿ 25

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *

rtgh