ದ್ವಿತೀಯ ಪಿ.ಯು.ಸಿ ಸಮಕಾಲೀನ ರಾಜಕೀಯ ವಿದ್ಯಮಾನಗಳು ರಾಜ್ಯಶಾಸ್ತ್ರ ನೋಟ್ಸ್‌ | 2nd Puc Political Science Chapter 7 Notes in Kannada

ದ್ವಿತೀಯ ಪಿ.ಯು.ಸಿ ಸಮಕಾಲೀನ ರಾಜಕೀಯ ವಿದ್ಯಮಾನಗಳು ರಾಜ್ಯಶಾಸ್ತ್ರ ನೋಟ್ಸ್‌, 2nd Puc Political Science Chapter 7 Notes Question Answer in Kannada Medium Kseeb Solutions For Class 12 Political Science Chapter 7 Notes Pdf Samakalina Rajakiya Vidyamanagalu Notes in Kannada Pdf 2nd Puc Political science 7th Lesson Question Answer

2nd Puc Political Science 7th Chapter Notes in Kannada

2nd Puc Political Science Chapter 7

I. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.

2nd Puc Political Science Chapter 7

1. ಉದಾರೀಕರಣ ಎಂದರೇನು ?

ಆರ್ಥಿಕ ವಲಯವು ಸರ್ಕಾರದ ನಿಯಂತ್ರಣದಿಂದ ಹೆಚ್ಚು ಮುಕ್ತವಾಗಿರುವ ಮತ್ತು ತೆರಿಗೆ, ಸುಂಕಗಳಿಂದ ವಿನಾಯಿತಿ ಪಡೆಯುವ ಪ್ರಕ್ರಿಯೆಯೆ ಉದಾರೀಕರಣ.

2. ಲೇಸಸಫೇರ್ ಎಂದರೇನು ?

ಮುಕ್ತ ವ್ಯಾಪಾರ ನೀತಿ

3. ಖಾಸಗೀಕರಣ ಎಂದರೇನು ?

ಸಾರ್ವಜನಿಕ ಉದ್ಯಮಗಳ ಮೇಲಿನ ಸರ್ಕಾರಿ ಒಡೆತನವನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವದೇ ಖಾಸಗೀಕರಣ.

4. ಜಾಗತೀಕರಣ ಎಂದರೇನು ?

ವಿಶ್ವದ ಆರ್ಥಿಕತೆಯೊಂದಿಗೆ ರಾಷ್ಟ್ರದ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಯೆ ಜಾಗತೀಕರಣ.

5. ಭಾರತದಲ್ಲಿ ಜಾಗತೀಕರಣವು ಯಾವಾಗ ಪ್ರಾರಂಭವಾಯಿತು?

1990 ರಲ್ಲಿ ಭಾರತದ ಹೊಸ ಆರ್ಥಿಕ ನೀತಿಯೊಂದಿಗೆ ಜಾಗತೀಕರಣವು ಆರಂಭವಾಯಿತು.

6. ಆಪ್ತಸ್ನೇಹಿ ಬಂಡವಾಳಶಾಹಿ ಎಂದರೇನು ?

ಬಂಡವಾಳಶಾಹಿಗಳು ಮತ್ತು ಸರ್ಕಾರಿ ಅಧಿಕಾರಿ ವರ್ಗದವರ ನಿಕಟ ಸಂಬಂಧದ ಮೂಲಕ ನಡೆಯುವ ಆರ್ಥಿಕ ವ್ಯವಸ್ಥೆಯನ್ನು ಆಪ್ತಸ್ನೇಹಿ ಬಂಡವಾಳಶಾಹಿ ಎನ್ನುವರು.

7. ಪ್ರಜಾಸತ್ತಾತ್ಮಕ ಚಳುವಳಿ ಎಂದರೇನು ?

21ನೇ ಶತಮಾನದಲ್ಲಿ ಆಮ್ರ-ವಿಶಿಯನ್ ರಾಷ್ಟ್ರಗಳಲ್ಲಿ ನಿರಂಕುಶ ಪ್ರಭುತ್ವವನ್ನು ಮತ್ತು ಅಧಿಕಾರಯುಕ್ತ ಸರ್ಕಾರಗಳನ್ನು ಕಿತ್ತೊಗೆಯುವ ಹೋರಾಟಕ್ಕೆ ಪ್ರಜಾಸತ್ತಾತ್ಮಕ ಚಳುವಳಿ ಎನ್ನುವರು.

8. ನೇಪಾಳದಲ್ಲಿ ಮಾಗ್ನಾಕಾರ್ಟ್ ಎಂದು ಯಾವುದನ್ನು ಕರೆಯಲಾಗಿದೆ ?

ಮೇ 18 2006 ರಲ್ಲಿ ಲೋಕತಾಂತ್ರಿಕ ಆಂದೋಲನವು ರಾಜ ಪ್ರಭುತ್ವವನ್ನು ಅಂತ್ಯಗೊಳಿಸಿ 1990 ರ ಸಂವಿಧಾನವನ್ನು ರದ್ದುಗೊಳಿಸಿ ಜನಪರ ಕಾನೂನುಗಳನ್ನು ಜಾರಿಗೊಳಿಸಿತು. ಇದನ್ನು ನೇಪಾಳದ ಮ್ಯಾಗ್ನಾಕಾರ್ಟ ಎನ್ನುವರು.

9. ಭೂತಾನನಲ್ಲಿ ಯಾವ ಮಾದರಿ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ?

ಭೂತಾನನಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ.

10. ಭೂತಾನನಲ್ಲಿ ಪ್ರಜಾಸತ್ತಾತ್ಮಕ ಚಳುವಳಿ ಪ್ರಾರಂಭವಾಗಲು ಸ್ಫೂರ್ತಿ ಯಾರು ?

ರಾಂಗ್ ತೊಂಗ್ ಕುನಲಿ ದೊರಜಿ

11. ಭೂತಾನನಲ್ಲಿ ಪ್ರಥಮ ಪ್ರಜಾಸತ್ತಾತ್ಮಕ ಚುನಾವಣೆ ಯಾವಾಗ ನಡೆಯಿತು ?

ಮಾಎಚ್ 24, 2008

12.‌ ಭೂತಾನ ಸಂವಿಧಾನವನ್ನು ಯಾವಾಗ ರಚಿಸಲಾಯಿತು ?

18-07-2007

13. ಆಫ್ಘಾನಿಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಭೆಗೆ ಯಾವಾಗ ಚುನಾವಣೆಗಳು ನಡೆದವು ?

2010

14. ಆಫ್ಘಾನಿಸ್ಥಾನದ ಪ್ರಸ್ತುತ ಅಧ್ಯಕ್ಷರನ್ನು ಹೆಸರಿಸಿ.

ಅಶ್ರಫ ಘನಿ

15. ಈಜಿಪ್ತನಲ್ಲಿ ಸ೦ವಿಧಾನವನ್ನು ಯಾವಾಗ ಜಾರಿಗೊಳಿಸಲಾಯಿತು ?

ಜನವರಿ 1956

16. ಲಿಬಿಯಾದ ನಿರಂಕುಶಾಧಿಕಾರಿಯನ್ನು ಹೆಸರಿಸಿ,

ಕರ್ನಲ್ ಗಢಾಪಿ

17. ಲಿಬಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಗಳು ಯಾವಾಗ ಪ್ರಾರಂಭವಾಯಿತು ?

27-02-2011

18.ರಿಯಾ ದೇಶವು ಫ್ರಾನ್ಸನಿಂದ ಯಾವಾಗ ಮುಕ್ತಿ ಪಡೆಯಿತು?

1946

19. ಸಿರಿಯಾದ ಪ್ರಸ್ತುತ ಅಧ್ಯಕ್ಷರನ್ನು ಹೆಸರಿಸಿ.

ಬಸರ್‌ ಅಲ್‌ ಅಸ್ಸದ್

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಉದಾರೀಕರಣದ ಅರ್ಥವೇನು ?

18 ನೇ ಶತಮಾನದಲ್ಲಿ ಬ್ರಿಟನ್‌ನಂತಹ ಮುಕ್ತ ವ್ಯಾಪಾರ ನೀತಿಯನ್ನು ಉದಾರೀಕರಣದ ಮೂಲ ಎಂದು ಗುರುತಿಸಲಾಗಿದೆ. ಅದರ ಪ್ರಕಾರ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲವು ನಿಯಂತ್ರಣಗಳನ್ನು ತೆಗೆದುಹಾಕುವ ನೀತಿಯಾಗಿದೆ.

2. ಐ.ಎಂ.ಎಫ್.ನ್ನು ವಿಸ್ತರಿಸಿ.

International Monetary Fund ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ.

3. ನವ ಉದಾರವಾದಿ ಚಿಂತನೆಗಳೆಂದು ಯಾವುದನ್ನು ಕರೆಯಲಾಗುತ್ತದೆ ?

 • ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಮುಕ್ತ ಮಾರುಕಟ್ಟೆ
 • ಕಠಿಣ ನೀತಿಗಳನ್ನು ಸಡಿಲಗೊಳಿಸುವದು.
 • ಖಾಸಗೀಕರಣಕ್ಕೆ ಒತ್ತು ನೀಡುವುದು.
 • ತೆರಿಗೆ ಸುಧಾರಣೆ ಮತ್ತು ಹಣದುಬ್ಬರ ಕಡಿಮೆ ಮಾಡುವ ಅಂಶಗಳಿಗೆ ನವ ಉದಾರವಾದಿ ಚಿಂತನೆಗಳೆಂದು ಕರೆಯಲಾಗುತ್ತದೆ.

4. ಯಾವ ದೇಶದಲ್ಲಿ ಮತ್ತು ಯಾವಾಗ ಖಾಸಗೀಕರಣ ಪ್ರಾರಂಭವಾಯಿತು ?

1980 ರಲ್ಲಿ ಬ್ರಿಟನ ಮತ್ತು ಅಮೇರಿಕಾದಲ್ಲಿ ಖಾಸಗೀಕರಣವು ಪ್ರಾರಂಭವಾಯಿತು.

5. ಪ್ರತಿಭಾ ಪಲಾಯನ ಎಂದರೇನು ?

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಸಮೂಹ ಹೆಚ್ಚಿನ ಹಣ, ಸೌಲಭ್ಯ ಮತ್ತು ಗೌರವ, ಪ್ರತಿಷ್ಠೆಗಳಿಗಾಗಿ ವಿದೇಶಗಳಿಗೆ ಉದ್ಯೋಗಕ್ಕಾಗಿ ಪಲಾಯನ ಮಾಡುತ್ತಿದ್ದಾರೆ. ಇದನ್ನೇ ಪ್ರತಿಭಾ ಪಲಾಯನ ಎನ್ನುವರು.

6. ಮುಕ್ತ ಮಾರುಕಟ್ಟೆ ಎಂದು ಯಾವುದನ್ನು ಕರೆಯಲಾಗುತ್ತದೆ?

ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಒಂದು ಅರ್ಥವ್ಯವಸ್ಥೆಯಾಗಿದೆ. ಇದರಲ್ಲಿ ಸರಕಾರವು ಕೆಲವು ನಿರ್ದಿಷ್ಟ ವಿಷಯಗಳಿಗೆ ನಿಬಂಧನೆಗಳನ್ನು ಹಾಕುವ ಮೂಲಕ ಬಂಡವಾಳಶಾಹಿ ಪರವಾಗಿ ಹಸ್ತಕ್ಷೇಪ ಮಾಡುತ್ತದೆ.

7. ಪ್ರಪಂಚದ ಇಬ್ಬರು ಅಧಿಕಾರಯುತ ಆಡಳಿತಗಾರರನ್ನು ಹೆಸರಿಸಿ.

ಈಜಿಪ್ತನ ಹೊನ್ನ ಮುಬಾರಕ್, ಲಿಬಿಯದ ಕರ್ನಲ್‌ ಗಢಾಪಿ

8. ಲೋಕತಾಂತ್ರಿಕ ದಿನವನ್ನು ನೇಪಾಳದಲ್ಲಿ ಏಕೆ ಆಚರಿಸಲಾಗುತ್ತದೆ?

ಮೇ 18 2006 ರಲ್ಲಿ ಲೋಕತಾಂತ್ರಿಕ ಆಂದೋಲನವು ರಾಜಪ್ರಭುತ್ವವನ್ನು ಅಂತ್ಯಗೊಳಿಸಿದ ಮತ್ತು 1990 ರ ಸಂವಿಧಾನ ರದ್ದುಗೊಳಿಸಿ ಜನಪರ ಕಾನೂನುಗಳಿಗೆ ಮಾನ್ಯತೆ ನೀಡಿ ಜಾರಿಗೊಳಿಸಿದ ದಿನದ ಸ್ಮರಣಾರ್ಥ ಮತ್ತು ಪ್ರಧಾನ ಮಂತ್ರಿ ಕೊಯಿರಾಲಾ ಪ್ರಕಾರ ಇದು ನೇಪಾಳಿಯರ ಭಾವನೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದಲೇ ಮೇ 18ರ ದಿನವನ್ನು ಲೋಕತಾಂತ್ರಿಕ ದಿನ ಎಂದು ಕರೆಯಲಾಗುತ್ತದೆ.

9. ನೇಪಾಳದ ಮೊದಲ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಹೆಸರಿಸಿ.

ನೇಪಾಳದ ಮೊದಲ ಅಧ್ಯಕ್ಷ – ರಾಮ್‌ಬಾನ್ ಯಾದವ, ನೇಪಾಳದ ಮೊದಲ ಪ್ರಧಾನಿ – ಪುಷ್ಪ ಕಮಲ್‌ಧಾ‌

10. ಭೂತಾನ ಸಂವಿಧಾನದ ಬಗ್ಗೆ ಬರೆಯಿರಿ.

ಭೂತಾನ ಸಂವಿಧಾನವನ್ನು ದಿನಾಂಕ 18-07-2007 ರಿಂದ ಜಾರಿಗೆ ತರಲಾಯಿತು. ಇದು ರಾಜನಿಗೆ ಹೆಚ್ಚಿನ ಅಧಿಕಾರ ನೀಡಿದ್ದು ಸಂವಿಧಾನದ 2ನೇ ವಿಧಿಯನ್ವಯ ಸಂವಿಧಾನದ ಯಾವುದೇ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

11. ಅಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ಯಾವಾಗ ಪ್ರಾರಂಭವಾದವು ?

2010 ರಲ್ಲಿ ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ಬೆಳೆದು ಬಂದರೂ ಕೂಡ ಅಲ್ಲಿಯ ರಾಜಕೀಯ ಅಸ್ಥಿರತೆ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಉತ್ತಮ ಸಮಾಜವನ್ನು ಸೃಷ್ಟಿಸುವಂತಹ ಭದ್ರ ಬುನಾದಿಯನ್ನು ಹಾಕುವಲ್ಲಿ ಯಶಸ್ವಿಯಾಗಲಿಲ್ಲ.

12. ಈಜಿಪ್ತ ಸಂವಿಧಾನವನ್ನು ಯಾರು ರದ್ದು ಪಡಿಸಿದರು ? ಮತ್ತು ಯಾವಾಗ ?

ಈಜಿಪ್ತಿನ ಜನರಲ್‌ ಅಬ್ದುಲ್ ಫತಾ ಆಲ್ ಯವರು ಹಾಲಿ ಅಧ್ಯಕ್ಷ ಮಹಮದ ಮುರಸಿಯವರನ್ನು ಅಧಿಕಾರದಿಂದ ಇಳಿಸಿ ಅಸ್ತಿತ್ವದಲ್ಲಿದ್ದ ಸಂವಿಧನವನ್ನು ಜೂನ 2013 ರಲ್ಲಿ ರದ್ದುಗೊಳಿಸಿದರು.

13. ಲಿಬಿಯಾದಲ್ಲಿ ಪ್ರಜಾಸತ್ತಾತ್ಮಕ ಆಂದೋಲನವನ್ನು ಯಾರು ಆರಂಭಿಸಿದರು ? ಮತ್ತು ಯಾವಾಗ ?

ಲಿಬಿಯಾದಲ್ಲಿ ಪ್ರಜಾಸತ್ತಾತ್ಮಕ ಆಂದೋಲನವನ್ನು ಗಡಾಪಿ ವಿರುದ್ಧ 27-02-2011 ರಲ್ಲಿ NTC (National Tranitional Council) ಮಾಡಿತು.

14. ಸಿರಿಯಾದ ಯಾವುದಾದರೂ ಎರಡು ಜನಾಂಗೀಯ ಗುಂಪುಗಳನ್ನು ಹೆಸರಿಸಿ.

ಸಿರಿಯಾದ ಜನಾಂಗೀಯ ಗುಂಪುಗಳು

 • ಅರಮೇನಿಯನ್ಸ್
 • ಅಸ್‌ಯಾರಿಯನ್
 • ಟರ್ಕಮೇನಿಸ್

15. ಸಿರಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿರಿ.

ಸಿರಿಯಾದ ಪ್ರಜಾಸತ್ತಾತ್ಮಕ ಚಳುವಳಿಯ ಉದ್ದೇಶಗಳೆಂದರೆ :

 • 1963 ರಿಂದ ಅಸ್ತಿತ್ವದಲ್ಲಿದ್ದ ಮಿಲಿಟರ ಸರ್ವಾಧಿಕಾರಿ ಆಳ್ವಿಕೆಯನ್ನು ರದ್ದುಪಡಿಸುವುದು ಹಾಗೂ ಹಳೆಯ ಕಾನೂನಿನಲ್ಲಿದ್ದ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ರದ್ದುಪಡಿಸುವುದು.
 • ಭಾತ ಪಕ್ಷದ ಆಳ್ವಿಕೆಯನ್ನು ರದ್ದುಪಡಿಸುವುದು.
 • ಬಹುಪಕ್ಷಗಳು ಮುಕ್ತ ಚುನಾವಣೆ ಮೂಲಕ ಅಧಿಕಾರ ವರ್ಗಾವಣೆ.
 • ಉದಾರತಾ ಪ್ರಜಾಪ್ರಭುತ್ವ ತತ್ವಗಳಿಗೆ ಅನುಗುಣವಾಗಿ ಸರ್ಕಾರ ರಚಿಸುವದು.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ.

1. ಉದಾರೀಕರಣದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ.

ಅರ್ಥ : “ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲವು ನಿಯಂತ್ರಣಗಳನ್ನು ತೆಗೆದು ಹಾಕುವುದೇ

ಉದಾರೀಕರಣ. ಪ್ರಾಮುಖ್ಯತೆಗಳು :

 • ಗ್ರಾಹಕ ಸ್ನೇಹಿ
 • ಸರ್ಕಾರದ ನೀತಿಗಳಿಂದ ಮುಕ್ತ
 • ಪೈಪೋಟಿಯನ್ನು ಉತ್ತೇಜಿಸುತ್ತದೆ.
 • ವಿಶ್ವ ಉದ್ಯಮಿಗಳ ದರ್ಜೆಯನ್ನು ಉತ್ತೇಜಿಸುತ್ತದೆ.
 • ಖಾಸಗಿ ಹೂಡಿಕೆದಾರ ಸಂಸ್ಥೆಗಳನ್ನು ಉನ್ನತೀಕರಿಸುತ್ತದೆ.
 • ಆರ್ಥಿಕ ಪ್ರಗತಿ ಸಾಧಿಸುತ್ತದೆ.
 • ತಂತ್ರಜ್ಞಾನವನ್ನು ಆಧುನಿಕತೆಗೆ ಉನ್ನತಿಕರಿಸುತ್ತದೆ.

2. ಉದಾರೀಕರಣದ ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಉದಾರೀಕರಣದ ರಾಜಕೀಯ ಪರಿಣಾಮಗಳು ಈ ಕೆಳಕಂಡಂತಿವೆ.

 • ಬೌದ್ಧಿಕ ಪಲಾಯನ
 • ಕಾರ್ಮಿಕರ ಅವಲಂಬನೆ ಕಡಿಮೆಯಾಗುತ್ತದೆ.
 • ಪರಿಸರ ವಿನಾಶ ಹೆಚ್ಚಾಗುತ್ತದೆ.
 • ಅಗತ್ಯ ವಸ್ತುಗಳ ಬೆಲೆಗಳ ನಿಯಂತ್ರಣವಾಗುತ್ತದೆ.
 • ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರುತ್ತದೆ.
 • ಹಣಕಾಸಿನ ಅಸ್ಥಿರತೆ

3. ಖಾಸಗೀಕರಣ ಎಂದರೇನು ? ಅದರ ಮಹತ್ವವನ್ನು ವಿವರಿಸಿ.

ಅರ್ಥ : ಖಾಸಗೀಕರಣ ಎಂದರೆ ಸರ್ಕಾರಿ ಸ್ವಾಮ್ಯದಲ್ಲಿರುವ ಕೈಗಾರಿಕಾ ಸಂಸ್ಥೆಗಳನ್ನು ಖಾಸಗಿಯವರ ನಿಯಂತ್ರಣಕ್ಕೆ ನೀಡುವದಾಗಿದೆ.

ಪ್ರಾಮುಖ್ಯತೆಗಳು :

 1. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ.
 2. ಸಾಮರ್ಥ್ಯ ಹೆಚ್ಚಿಸುತ್ತದೆ.
 3. ಕಾರ್ಯದಕ್ಷತೆ
 4. ವಿನೂತನ ಯೋಜನೆ
 5. ಗುರಿ
 6. ಬಂಡವಾಳ
 7. ಏಕಸ್ವಾಮ್ಯ

4. ಖಾಸಗೀಕರಣದ ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಖಾಸಗೀಕರಣದ ರಾಜಕೀಯ ಪರಿಣಾಮಗಳು ಕೆಳಕಂಡಂತಿವೆ.

 • ಸಂಪತ್ತಿನ ಕೇಂದ್ರೀಕರಣ
 • ಅಧಿಕ ಲಾಭ
 • ಸ್ಥಳೀಯ ಕೈಗಾರಿಕೆಗಳು ಮುಚ್ಚುತ್ತದೆ.
 • ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ
 • ಸೇವಾ ಮನೋಭಾವ ಕಡಿಮೆ
 • ಉದ್ಯೋಗ ಭದ್ರತೆ ಇಲ್ಲ
 • ಸಾರ್ವಭೌಮತ್ವಕ್ಕೆ ಧಕ್ಕೆ

5. ಜಾಗತೀಕರಣದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ.

ಜಾಗತೀಕರಣದ ಅರ್ಥ : ವಿಶ್ವದ ಆರ್ಥಿಕತೆಯೊಂದಿಗೆ ರಾಷ್ಟ್ರದ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಯೆ ಜಾಗತೀಕರಣ ಎಂದರ್ಥ.

ಜಾಗತೀಕರಣದ ಪ್ರಾಮುಖ್ಯತೆಗಳು :

 • ಸಾಮರ್ಥ್ಯ
 • ಉನ್ನತೀಕರಣಗೊಂಡ ತಂತ್ರಜ್ಞಾನದ ಬಳಕೆ
 • ವಿಶ್ವಗ್ರಾಮ
 • ಉದ್ಯೋಗಿಗಳ ಮುಕ್ತ ಸಂಚಾರ
 • ವಿಶ್ವದ ಸ್ಪರ್ಧೆಗೆ ಅವಕಾಶ
 • ಹೊರಗುತ್ತಿಗೆ
 • ಮಾನವ ಸಂಪನ್ಮೂಲ ಬಳಕೆ

6. ಜಾಗತೀಕರಣದ ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಜಾಗತೀಕರಣದ ರಾಜಕೀಯ ಪರಿಣಾಮಗಳು (ಮಾ-2015,18,19,ಜು-2017)

 1. ಶಕ್ತಿ ರಾಷ್ಟ್ರಗಳ ಒತ್ತಡ
 2. ಪರಮಾಧಿಕಾರಕ್ಕೆ ಧಕ್ಕೆ
 3. ಸಾಂಸ್ಕೃತಿಕ ವ್ಯಭಿಚಾರ
 4. ಜೀವನಶೈಲಿಗೆ ಗುಲಾಮರಾಗುತ್ತಾರೆ.
 5. ಸಾಲಮನ್ನಾ ರದ್ದುಗೊಳಿಸುವುದು.
 6. ರಾಜಕೀಯ ಅಸ್ಥಿರತೆ
 7. ಸಮೂಹ ಮಾಧ್ಯಮಗಳ ಮೇಲೆ ನಿಯಂತ್ರಣ.

7. ಆಪ್ತಸ್ನೇಹಿ ಬಂಡವಾಳಶಾಹಿ ಎಂದರೇನು ? ಅದರ ಸ್ವರೂಪವನ್ನು ವಿವರಿಸಿ.

ಆರ್ಥಿಕ ವ್ಯವಸ್ಥೆಯ ವಾಣಿಜ್ಯ ವ್ಯಾಪಾರಗಳಲ್ಲಿ ಯಶಸ್ವಿ ಕಾಣಲು ವಾಣಿಜ್ಯೋದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿ ವೃಂದದ ನಡುವೆ ಇರುವ ನಿಕಟ ಸಂಬಂಧವಾಗಿರುತ್ತದೆ.

 • ಆಪ್ತಸ್ನೇಹಿ ಬಂಡವಾಳಶಾಹಿಯ ಸ್ವರೂಪ ರಾಜಕೀಯ ಹತೋಟಿಯ ಪರವಾಗಿರುತ್ತದೆ.
 • ಆಪ್ತಸ್ನೇಹಿ ಬಂಡವಾಳ ಮತ್ತು ಪ್ರತಿಫಲ
 • ಆಸ್ತಿಯ ಸಂರಕ್ಷಣೆ
 • ಲಾಭಾಂಶದ ಹಣ ಸಂಬಂಧಿಕರಲ್ಲಿ ಹಂಚಿಕೆ
 • ಆರ್ಥಿಕ ಶಕ್ತಿಯ ಕೇಂದ್ರೀಕರಣ

8. ನೇಪಾಳದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

ಪೀಠಿಕೆ :

 • 18ನೇ ಶತಮಾನದಲ್ಲಿ ರಾಜಪ್ರಭುತ್ವದ ಅಸ್ತಿತ್ವ
 • ಪ್ರಜಾಸತ್ತಾತ್ಮಕ ಚಳುವಳಿಗೆ ಭಾರತ ಮತ್ತು ಚೀನಾ ದೇಶಗಳ ಪ್ರಭಾವ
 • ಬೀರೇಂದ್ರಬಿ‌ ಬಿಕ್ರಮ್ ಷಾ ಆಳ್ವಿಕೆ ಕಾಲದಲ್ಲಿ ಪ್ರಜಾಸತ್ತಾತ್ಮಕ ಮತ್ತು ಮಾವೋವಾದಿ ಚಳುವಳಿ ಪ್ರಾರಂಭ.
 • 1960-1979 ರವರೆಗೆ ಹೋರಾಟ
 • ಪ್ರಪ್ರಥಮ ಚುನಾಯಿತ ಸರ್ಕಾರ National Congressನ ಕೊಯಿರಾಲ ಸರ್ಕಾರದಿಂದ ವಿಸರ್ಜನೆಗೊಂಡಿತು.
 • 1980 ರಲ್ಲಿ ಸೀಮಿತ ಪ್ರಜಾಪ್ರಭುತ್ವ / ಬಹುಪಕ್ಷಗಳ
 • ಸಂಸದೀಯ ರಾಜಪ್ರಭುತ್ವ
 • ಕಮ್ಯುನಿಷ್ಠ (ಮಾವೋವಾದಿ) ರಾಜಕೀಯ ಕದನಕ್ಕೆ ಚಾಲನೆ ನೀಡಿತು.
 • ಸಮಗ್ರ ಶಾಂತಿ ಒಪ್ಪಂದ – 2006 ನವೆಂಬರ 21
 • ಜ್ಞಾನೇಂದ್ರರ “ಏಳು ಪಕ್ಷಗಳ ಮೈತ್ರಿ” ಸಂಘಟನೆ.
 • 18 ಮೇ 2006 – ಲೋಕತಾಂತ್ರಿಕ ಆಂದೋಲನ
 • ನೇಪಾಳ ಮ್ಯಾಗ್ನಾಕಾರ್ಟ
 • ಮೇ 18 ಲೋಕತಾಂತ್ರಿಕ ದಿನ
 • 2008 ಮೇ 29 ಹೊಸ ಸಂವಿಧಾನ ರಚನೆ
 • ಜೂನ್ 2008 ನೇಪಾಳ ಅಧಿಕೃತ ಸಂಯುಕ್ತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಮರುನಾಮಕರಣ.
 • ಪ್ರಥಮ ಅಧ್ಯಕ್ಷ – ರಾಮ್ ಬರನ ಯಾದವ
 • ಪ್ರಥಮ ಪ್ರಧಾನಿ – ಪುಷ್ಪ ಕಮಲ್‌ದಾಲ್

9. ಭೂತಾನನಲ್ಲಿ ನಡೆದ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

 • 1950 ಭೂತಾನ ದೇಶವು ನಿರಂಕುಶ ರಾಜ ಪ್ರಭುತ್ವದಿಂದ ಬಹುಪಕ್ಷೀಯ ಪ್ರಜಾಪ್ರಭುತ್ವಕ್ಕೆ ಬದಲಾವಣೆಗೊಂಡಿದೆ.
 • 1972 ಜಿನ್ಮಸಯೇ ವಾಂಗ್‌ಚುಕ್ ಅಧಿಕಾರದ ವಿರುದ್ಧ
 • ಜನರ ಶಾಂತಿಯುತ ಹೋರಾಟ
 • 1990 ರಲ್ಲಿ ಎಸ್.ಕೆ. ನ್ಯೂಪಾಣಿ ನೇತೃತ್ವದಲ್ಲಿ ಹೋರಾಟ

1990 ರಲ್ಲಿ ಭೂತಾನ ಚಳುವಳಿಗೆ ಕಾರಣಗಳು :

 • ರಾಜಪ್ರಭುತ್ವ ವಿರೋಧ
 • ಸರ್ಕಾರದ ಸಾಂಸ್ಕೃತಿಕ ಶೋಷಣೆ
 • ಮಾನವ ಹಕ್ಕುಗಳ ಉಲ್ಲಂಘನೆ
 • ಖೈದಿಗಳ ಹಿಂಸೆ
 • ಜನರ ದಸ್ತಗಿರಿ ಮತ್ತು ಸೆರೆಮನೆಗೆ ಹಾಕುವದು
 • ಜನರ ವಾಕ್‌ ಸ್ವಾತಂತ್ರ್ಯ ಮುಂತಾದವುಗಳು. ಮೊಟಕುಗೊಳಿಸುವಿಕೆ
 • ಭೂತಾನ ಜನರ ಹೋರಾಟದ ಸ್ಫೂರ್ತಿಯ ಚಿಲುಮೆ ರಾಂಗ್-ತೊಂಗ್ ಕುನಲಿ ದೊರಜಿ
 • 24 ಮಾರ್ಚ 2008 ಪ್ರಥಮ ರಾಷ್ಟ್ರೀಯ ಮಂಡಳಿಗೆ ಪ್ರಜಾಸತ್ತಾತ್ಮಕ ಚುನಾವಣೆ
 • 18-07-2007 ಭೂತಾನನ ಹೊಸ ಸಂವಿಧನ ಜಾರಿ.

10. ಆಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

 • ಪೀಠಿಕೆ : ಎಪ್ರೀಲ್ 27 1978 ಸೌಹುರ ಕ್ರಾಂತಿ
 • ಮೇ1 1978 PDPA-People’s Democratic Party.
 • ಅಧ್ಯಕ್ಷ – ತಾರಕಿ ಆಡಳಿತ 1992ರ ವರೆಗೆ
 • ಕಾಮೂಲ್ನ ಆಡಳಿತಾವಧಿ ಬೆಳವಣಿಗೆಗಳು
 • ಡಾ|| ನಜಿಬುಲ್ಲಾ ಅಧಿಕಾರವಧಿಯಲ್ಲಿ ಬೆಳವಣಿಗೆಗಳು

ಬಾನ್ ಒಪ್ಪಂದ – 2001 ಪ್ರಮುಖ ಅಂಶಗಳು

 1. ಲಿಂಗ ತಾರತಮ್ಯ
 2. ಜನಾಂಗೀಯ ಸುಧಾರಣೆ
 3. ಜನರ ಸರ್ಕಾರದ ಭಾಗವಹಿಸುವಿಕೆ
 4. ಆರ್ಥಿಕ ಪ್ರಗತಿ ಮುಂತಾದವುಗಳು.
 • 2004 ಜನೇವರಿ ಹೊಸ ಸಂವಿಧಾನ ಜಾರಿ –
 • 2004 ಅಕ್ಟೋಬರ – ರಾಷ್ಟ್ರೀಯ ಚುನಾವಣೆ
 • 2005 – ಸಂಸತ್ತು ಮತ್ತು ಪ್ರಾಂತೀಯ ಚುನಾವಣೆ.
 • 2005-2006 – ಉಗ್ರರ ಅಟ್ಟಹಾಸ
 • 2009 – ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು NATO ಒಪ್ಪಂದದಂತೆ ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ಸರಕಾರಕ್ಕೆ ಪ್ರಯತ್ನ.
 • 2010 – ರಾಷ್ಟ್ರೀಯ ಸಂಸತ್ತಿನ ಚುನಾವಣೆ
 • ಪ್ರಸ್ತುತ ಆಫ್ಘಾನಿಸ್ತಾನದ ಅಧ್ಯಕ್ಷ – ಅಶ್ರಫ ಘನಿ

11. ಈಜಿಪ್ತನಲ್ಲಿ ನಡೆದ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

 • ಪೀಠಿಕೆ : ಈಜಿಪ್ತನಲ್ಲಿ ಎಪ್ರಿಲ್ 1923 ರ ವರೆಗೂ ರಾಜಪ್ರಭುತ್ವ ಅಸ್ತಿತ್ವದಲ್ಲಿತ್ತು. ರಾಜಪ್ರಭುತ್ವ ತನ್ನ ನಿಯಂತ್ರಣ ಕಳೆದುಕೊಂಡಂತೆ ಹೊಸ ಸಂವಿಧಾನೇತರ ಸರ್ಕಾರ ರಚನೆಗೆ 3 ಹಂತದ ರಾಜಕೀಯ ಬೆಳವಣಿಗೆ ಆರಂಭಗೊಂಡಿತು.
 • ಬದಲಾವಣೆ ಮೊದಲ ಹಂತ : 1956 ರಲ್ಲಿ ಹೊಸ ಸಂವಿಧಾನ ಜಾರಿ ಗಾಮಾಲ್ ಅಬ್‌ದಲ್ ನಾಸಿರ ಅಧಿಕೃತವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
 • ಬದಲಾವಣೆ 2ನೇ ಹಂತ : 2011 ರಲ್ಲಿ ಪ್ರಜಾಪ್ರಭುತ್ವ ಅಲೆ ಆರಂಭ ಮತ್ತು ಪ್ರಜಾಸತ್ತಾತ್ಮಕ ಸರ್ಕಾರದ ಅಸ್ತಿತ್ವಕ್ಕಾಗಿ ಹೋರಾಟ.
 • ಬದಲಾವಣೆ 3ನೇ ಹಂತ : ಮಹಮದ ಮುರಸಿ ಅಧಿಕಾರ ಅಂತ್ಯ ಮತ್ತು ಹೊಸ ಸರ್ಕಾರ ಜಾರಿ,
 • 2012 ರ ಚುನಾವಣೆ ಮತ್ತೊಮ್ಮೆ ಮಹಮ್ಮದ ಮುರಸಿ ಚುನಾಯಿತ ಅಧ್ಯಕ್ಷರಾದರು.
 • ಈಜಿಪ್ತನಲ್ಲಿ ಮತ್ತೆ ಮಿಲಿಟರಿ ದಂಗೆ
 • 2011 ಈಜಿಪ್ತ ಗಣರಾಜ್ಯವಾದಿ ಮತ್ತು ಅರೆ ಅಧ್ಯಕ್ಷೀಯ ಪದ್ಧತಿಯ ಸರ್ಕಾರಕ್ಕೆ ಮಾನ್ಯತೆ.
 • ಹೊನ್ನ ಮುಬಾರಕ ರಾಜಿನಾಮೆ ನೀಡಿದರು.
 • ಸಂಸತ ಮತ್ತು ಸಂವಿಧಾನವನ್ನು ಮಿಲಿಟರಿ ಆಡಳಿತ ರದ್ದು ಪಡಿಸಿತು.
 • ಹಂಗಾಮಿ ಅಧ್ಯಕ್ಷರಾಗಿ ಆದಿ ಮನಸೂರ ಆಡಳಿತ
 • ಈಜಿಪ್ತನಲ್ಲಿ ಹೊಸ ಪ್ರಜಾಪ್ರಭುತ್ವ ಸರ್ಕಾರದ ಸಂವಿಧಾನಾತ್ಮಕ ಸರ್ಕಾರದ ಅವಶ್ಯಕತೆಯಿದೆ.

12. ಲಿಬಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

 • ಲಿಬಿಯಾ ಒಂದು ಅರಬ್ ರಾಷ್ಟ್ರ
 • 24 ಡಿಸೆಂಬರ 1951 ರಲ್ಲಿ ಸ್ವತಂತ್ರವಾಯಿತು.
 • ದೊರೆ ಯಡ್ರಿಸ್ ಲಿಬಿಯಾದ ಸಂವಿಧಾನತ್ಮಕ ಮತ್ತು
 • ಆನುವಂಶಿಕ ರಾಜಪ್ರಭುತ್ವದ ಅರಸನಾಗಿದ್ದನು. ಕರ್ನಲ್ ಗಡಾಪಿ ದಾಳಿ 2011 ರ ವರೆಗೆ ಈತನ – ಆಡಳಿತ.
 • NTC-National Transitional Council
 • ಇದು ಗಡಾಫಿ ವಿರುದ್ಧ 27-02-2011 ಹೋರಾಟ ಆರಂಭ.
 • ಬಹುಪಕ್ಷ ಪದ್ಧತಿ ಜಾರಿಗೆ ತಂದಿತು.
 • 2011 ರಲ್ಲಿ ಹಂಗಾಮಿ ಸರ್ಕಾರದ ಸ್ಥಾಪನೆ.
 • NTC ಅಧಿಕಾರ ಪಡೆಯಿತು
 • ಮಿಲಿಟರಿ ಆಳ್ವಿಕೆಯಿಂದ
 • 2012 ಅಕ್ಟೋಬರ 23 ಲಿಬಿಯಾ ಸ್ವಾತಂತ್ರ್ಯದ ಘೋಷಣೆ.
 • GNS – General National Congress ನಡೆದು NTC ಹಂಗಾಮಿ ಸರ್ಕಾರವನ್ನು – ವರ್ಗಾಯಿಸಲಾಯಿತು.
 • GNC – ಬಹುಮುಖ್ಯ ಜವಾಬ್ದಾರಿ – ಜನಮತ ಗಣನೆ – ಮೂಲಕ ಸಂವಿಧಾನವನ್ನು ರಚಿಸುವದು.
 • ಇದು ಲಿಬಿಯಾದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆಗೆ ಭದ್ರಬುನಾದಿ ಹಾಕಿತು.

13. ಸಿರಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

ಪೀಠಿಕೆ :

ಸಿರಿಯಾದ ಬಹುಜನಾಂಗೀಯ ಗುಂಪುಗಳು

 1. ಅರಬ್ ಕರ್ಡ್ಸ್
 2. ಅಸ್‌ಯಾರಿಯನ
 3. ಅರವೇನಿಯನ್ಸ್
 4. ಟರ್ಕಮೇನಿಸ್
 • 1946 ರಲ್ಲಿ ಫ್ರಾನ್ಸ್ ದೇಶದಿಂದ ಮುಕ್ತಗೊಳಿಸಿ ತನ್ನದೇ ಆದ ಸ್ವತಂತ್ರ ಸಂವಿಧಾನ ರಚಿಸಿಕೊಂಡು ಗಣತಂತ್ರ ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಯಿತು.
 • ಬಾತ್ ಪಕ್ಷದ ದಂಗೆ – 1963
 • ಏಕಪಕ್ಷದ ಪ್ರಾಬಲ್ಯ ಮತ್ತು ಸರ್ವಾಧಿಕಾರತ್ವ ಧೋರಣೆ.
 • ಸಿರಿಯಾದ ನಾಗರಿಕರು ಭಾತ ಪಕ್ಷದ ವಿರುದ್ಧ ಹೋರಾಟಕ್ಕೆ ಇಳಿದರು.
 • ಸಿರಿಯಾದ ಪ್ರಜಾಸತ್ತಾತ್ಮಕ ಚಳುವಳಿಯ ಉದ್ದೇಶಗಳು
 • 1. 1963 ರಿಂದ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಆಳ್ವಿಕೆಯನ್ನು ರದ್ದು ಪಡಿಸುವುದು.
 • ಹಳೆಯ ಕಾನೂನಿನಲ್ಲಿ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ರದ್ದುಪಡಿಸುವುದು.
 • ಬಾತ ಪಕ್ಷದ ಆಳ್ವಿಕೆ ರದ್ದುಪಡಿಸುವುದು.
 • ಬಹುಪಕ್ಷಗಳು ಮುಕ್ತ ಚುನಾವಣೆ ಮೂಲಕ ಅಧಿಕಾರ ವರ್ಗಾವಣೆ
 • ಉದಾರತಾ ಪ್ರಜಾಪ್ರಭುತ್ವ ತತ್ವಗಳಿಗೆ ಅನುಗುಣವಾಗಿ ಸರ್ಕಾರ ರಚಿಸುವದು.
 • 2012 ಮೇ 07 ಸಂಸತ್ ಚುನಾವಣೆ ಪ್ರಚಂಡ ಬಹುಮತದಿಂದ ಬಾತ ಪಕ್ಷ ಮತ್ತೆ ಅಧಿಕಾರ ಪಡೆದುಕೊಂಡಿತು
 • ಸಿರಿಯಾದಲ್ಲಿ ಈಗಲೂ ಕೂಡ ಜನಾಂಗೀಯ ಧಾರ್ಮಿಕ ಮತ್ತು ಪ್ರಾಂತೀಯ ಭಿನ್ನತೆ ಹೆಚ್ಚಾಗಿದೆ.
 • ಪ್ರಸ್ತುತ ಸಿರಿಯಾದ ಅಧ್ಯಕ್ಷ : – ಬಸರ್‌ ಅಲ್ ಆಸಾದ್
 • ಸಿರಿಯಾದ ಪ್ರಸ್ತುತ ಪ್ರಧಾನಿ : ನದಿ‌ ಅಲ್ ಅರಿಜಿ.

FAQ

1. ಜಾಗತೀಕರಣ ಎಂದರೇನು ?

ವಿಶ್ವದ ಆರ್ಥಿಕತೆಯೊಂದಿಗೆ ರಾಷ್ಟ್ರದ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಯೆ ಜಾಗತೀಕರಣ.

2. ಖಾಸಗೀಕರಣ ಎಂದರೇನು ?

ಸಾರ್ವಜನಿಕ ಉದ್ಯಮಗಳ ಮೇಲಿನ ಸರ್ಕಾರಿ ಒಡೆತನವನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವದೇ ಖಾಸಗೀಕರಣ.

3. ಉದಾರೀಕರಣ ಎಂದರೇನು ?

ಆರ್ಥಿಕ ವಲಯವು ಸರ್ಕಾರದ ನಿಯಂತ್ರಣದಿಂದ ಹೆಚ್ಚು ಮುಕ್ತವಾಗಿರುವ ಮತ್ತು ತೆರಿಗೆ, ಸುಂಕಗಳಿಂದ ವಿನಾಯಿತಿ ಪಡೆಯುವ ಪ್ರಕ್ರಿಯೆಯೆ ಉದಾರೀಕರಣ.

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *

rtgh