ದ್ವಿತೀಯ ಪಿ.ಯು.ಸಿ ವರಮಾನದ ನಿರ್ಧಾರ ಅರ್ಥಶಾಸ್ತ್ರ ನೋಟ್ಸ್‌ | 2nd Puc Economics Chapter 10 Notes in Kannada

ದ್ವಿತೀಯ ಪಿ.ಯು.ಸಿ ವರಮಾನದ ನಿರ್ಧಾರ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 2nd Puc Economics Chapter 10 Notes Question Answer Pdf in Kannada Medium 2023 Kseeb Solutions For Class 12 Economics Chapter 10 Notes Varamanada Nirdhara Economics Notes in Kannada 2nd Puc Economics 10th Lesson Notes Pdf in Kannada Consumption and Investment Function Notes

2nd Puc Economics Chapter 10 Notes in Kannada

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯ ಅಥವಾ ಪದದಲ್ಲಿ ಉತ್ತರಿಸಿ.

1. ಸ್ವಾಯತ್ತ ಅನುಭೋಗದ ಅರ್ಥವನ್ನು ಬರೆಯಿರಿ.

ಅನುಭೋಗವು ಒಂದು ನಿರ್ದಿಷ್ಟ ವರ್ಷದಲ್ಲಿ ಜನರು ವಾಸ್ತವವಾಗಿ ಏನನ್ನು ಅನುಭೋವಿಸಿದ್ದಾರೆ ಎಂಬುದನ್ನು ಸೂಚಿಸುವ ಅರ್ಥವನ್ನು ನಿಡುತ್ತದೆ.

2. ಸೀಮಾಂತ ಉಳಿತಾಯದ ಪ್ರವೃತ್ತಿ (MPS) ಯ ಅರ್ಥವನ್ನು ಬರೆಯಿರಿ.

ಅರ್ಥವ್ಯವಸ್ಥೆಯ ಹೆಚ್ಚುವರಿ ಆದಾಯದ ಎಷ್ಟು ಭಾಗವನ್ನು ಉಳಿತಾಯ ಮಾಡಲು ಬಯಸುತ್ತಾರೆ, ಎಂಬುದರ ಚಿತ್ರಣವೇ ಸೀಮಾಂತ ಉಳಿತಾಯ ಪ್ರವೃತ್ತಿಯಾಗಿದೆ.

3. ಸರಾಸರಿ ಉಳಿತಾಯ ಪ್ರವೃತ್ತಿ (APS) ಯನ್ನು ವ್ಯಾಖ್ಯಾನಿಸಿ.

ಸರಾಸರಿ ಉಳಿತಾಯಲ್ಲದ ಬದಲಾವಣೆಯನ್ನು ಸರಾಸರಿ ಉಳಿತಾಯದ ಪ್ರವೃತ್ತಿ ಎನ್ನುವರು.

4. ಪೂರ್ಣ ಉದ್ಯೋಗ ಮಟ್ಟದ ಆದಾಯದ ಅರ್ಥವನ್ನು ಬರೆಯಿರಿ.

ಅನುಭೋಗವು ಹೆಚ್ಚಾದಂತೆ ಆದಾಯ ಹೆಚ್ಚಾಗುತ್ತದೆ. ಉತ್ಪಾದನೆಯನ್ನು ಉದ್ಯೋಗ ಹೆಚ್ಚಿಸುವುದನ್ನು ಪೂರ್ಣ ಉದ್ಯೋಗ ಎನ್ನುವರು.

5. ಸಮಗ್ರ ಬೇಡಿಕೆಯ ಮೇಲೆ ಪ್ರಭಾವ ಬೀರುವ ಎರಡು ಕೋಶೀಯ ಚಲಕಗಳನ್ನು ಹೆಸರಿಸಿ.

ಯೋಜಿತ ಅನುಭೋಗ ವೆಚ್ಚ ಹಾಗೂ

ಯೋಜಿತ ಹೂಡಿಕೆಗಳ ವೆಚ್ಚ

6. ಸೀಮಾಂತ ಅನುಭೋಗ ಪ್ರವೃತ್ತಿ (MPC) ಯ ಸೂತ್ರವನ್ನು ಬರೆಯಿರಿ.

MPC = C/y

ಕೆಳಗಿನ ಪ್ರಶ್ನೆಗಳಿಗೆ 4 ವಾಕ್ಯಗಳಲ್ಲಿ ಉತ್ತರಿಸಿ.

1. ಹೆಚ್ಚುವರಿ ಬೇಡಿಕೆ ಮತ್ತು ಕೊರತೆ ಬೇಡಿಕೆಗಳ ಅರ್ಥವನ್ನು ಬರೆಯಿರಿ.

ಮಾರುಕಟ್ಟೆಯಲ್ಲಿ ಉತ್ಪನ್ನಗಳ (ಸರಕುಗಳ) ಪೂರೈಕೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆಗ ಹೆಚ್ಚು ಹೆಚ್ಚು ಉತ್ಪನ್ನವನ್ನು ಉತ್ಪಾದಿಸಬೇಕಾಗುತ್ತದೆ. ಇದನ್ನೇ ಹೆಚ್ಚುವರಿ ಬೇಡಿಕೆ ಎನ್ನುವರು.

2. ಹೂಡಿಕೆ ಬಿಂಬಕದ ಅರ್ಥವನ್ನು ನೀಡಿ, ಅದರ ಸೂತ್ರವನ್ನು ಬರೆಯಿರಿ.

ಕೇನ್ಸ್‌ರವರು ತಮ್ಮ ಉದ್ಯೋಗ ಸಿದ್ಧಾಂತದಲ್ಲಿ ಹೂಡಿಕೆ ಬಿಂಬಕ್ಕೆ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಉದ್ಯೋಗವು ಪರಿಣಾಮಕಾರಿ ಬೇಡಿಕೆಯನ್ನು ಅವಲಂಬಿಸಿದೆ, ಪರಿಣಾಮಕಾರಿ ಬೇಡಿಕೆ ಮತ್ತು ಸಮಗ್ರ ಪೂರೈಕೆಯು ಸಮವಾಗಿರುವ ಸ್ಥಿತಿಯಾಗಿದೆ. ಹೂಡಿಕೆ ಮತ್ತು ಅನುಭೋಗದ ಪರಿಣಾಮಕಾರಿ ಬೇಡಿಕೆಯ ಎರಡು ಪ್ರಮುಖ ಭಾಗಗಳು, ಇವೆರೆಡರಲ್ಲಿ ಹೂಡಿಕೆ ಅತೀ ಮಹತ್ವದ ಚಲಕ, ಅನುಭೋಗ ಅಲ್ಪಾವಧಿಯಲ್ಲಿ ಸ್ಥಿರವಾಗಿರುತ್ತದೆ. y=c+s

3. ಸಮಗ್ರ ಬೇಡಿಕೆಯಲ್ಲಿ ಬದಲಾವಣೆ ತರುವ ಅಂಶಗಳಾವುವು?

ಸಮಗ್ರ ಬೇಡಿಕೆಯಲ್ಲಿ ಬದಲಾವಣೆ ತರುವ ಅಂಶಗಳೆಂದರೆ – ಪರಿಣಾಮಕಾರಿ ಬೇಡಿಕೆ ತತ್ವದಡಿಯಲ್ಲಿ ಅಂತಿಮ ಸರಕುಗಳ ಸಮತೋಲನ ಉತ್ಪನ್ನದ ಮೌಲ್ಯವು ಯೋಜಿತ ಸಮಗ್ರ ಬೇಡಿಕೆಗೆ ಸಮನಾಗಿರುತ್ತದೆ.

ಉತ್ಪನ್ನ ಮಟ್ಟದಲ್ಲಿ ಯೋಜಿತ ಸಮಗಬೇಡಿಕೆಯು ಬೇಡಿಕೆಯ ಹೆಚ್ಚಳದ ಸನ್ನಿವೇಶವನ್ನು ಸೂಚಿಸುತ್ತದೆ.

ಕೆಳಗಿನ ಪ್ರಶ್ನೆಗಳಿಗೆ 12 ವಾಕ್ಯಗಳಲ್ಲಿ ಉತ್ತರಿಸಿ.

2nd Puc Economics Chapter 10 Notes in Kannada

1. ಸಮಗ್ರ ಬೇಡಿಕೆ ಬಿಂಬಕದ ಅರ್ಥವನ್ನು ಬರೆಯಿರಿ, ರೇಖಾತ್ಮಕವಾಗಿ ಅದನ್ನು ಹೇಗೆ ಪಡೆಯಬಹುದು?

ಸ್ಥಿರ ಬೆಲೆಯಲ್ಲಿ ಅಂತಿಮ ಸರಕುಗಳ ಯೋಜಿತವನ್ನು ಸಮಗ್ರ ಬೇಡಿಕೆ ಎನ್ನುವರು . ಇದನ್ನು ಕೆಳಕಂಡ ರೇಖಾಚಿತ್ರದೊಂದಿಗೆ ಸ್ಪಷ್ಟಪಡಿಸಬಹುದು.

ಈ ಸಮೀಕರಣದಲ್ಲಿ m > 0 ಆಗಿದ್ದು ಇದನ್ನು ಸರಳರೇಖೆಯ ಇಳಿಜಾರು ಎಂದು ಕರೆಯುತ್ತೇವೆ ಹಾಗೂ e>0 ಆಗಿದ್ದು ಅದು ಲಂಬಾಕ್ಷದ (ಅಂದರೆ b) ಸ್ಥಿರಾಂಕವಾಗಿದೆ. (ರೇಖಾಚಿತ್ರ 4.1). ಇಲ್ಲಿ a ಚಲಕವು 1 ಘಟಕದಷ್ಟು ಹೆಚ್ಚಳವಾದಾಗ bಯ ಮೌಲ್ಯವು m ಘಟಕಗಳಷ್ಟು ಹೆಚ್ಚಳವಾಗುತ್ತದೆ. ಇವುಗಳನ್ನು ನಕ್ಷೆಯೊಂದಿಗಿನ ಚಲಕಗಳ ಚಲನೆಗಳೆಂದು ಕರೆಯುವರು.

2. ಅನುಭೋಗ ಮತ್ತು ಹೂಡಿಕೆ ಬಿಂಬಕವನ್ನು ರೇಖಾನಕ್ಷೆಗಳ ಮೂಲಕ ವಿವರಿಸಿ.

ಅನುಭೋಗ ಬಿಂಬಕವು ಕೇನ್ಸ್ರವರ ಸಾಮಾನ್ಯ ಸಿದ್ಧಾಂತದ ಒಂದು ಪ್ರಮುಖ ಪರಿಕಲ್ಪನೆ. ಇದನ್ನು ಅನುಭೋಗ ಪ್ರವೃತ್ತಿ ಎಂದು ಕರೆಯುತ್ತಾರೆ. ಅನುಭೋಗ ಬಿಂಬಕವು ಆದಾಯ ಮತ್ತು ಅನುಭೋಗದ ನಡುವಿನ ಸಂಬಂಧವನ್ನು ತೋರಿಸುತ್ತದೆ. ಈ ಸಂಬಂಧವನ್ನು ಸಾಂಕೇತಿಕವಾಗಿ ಈ ಕೆಳಗಿನಂತೆ ಪ್ರತಿನಿಧಿಸಬಹುದು.

C = f ( y )

“C” ಎಂದರೆ ಅನುಭೋಗ ಮತ್ತು y ಅಂದರೆ ಆದಾಯ, ಅನುಭೋಗವು ಆದಾಯದಿಂದ ನಿರ್ಧರಿಸಲ್ಪಡುತ್ತದೆ ಎಂಬುದನ್ನು ಅನುಭೋಗ ಬಿಂಬಕವು ಸೂಚಿಸುತ್ತದೆ. ಅನುಭೋಗ ಬಿಂಬಕ ಅಥವಾ ಅನುಭೋಗ ಪ್ರವೃತ್ತಿಯ ವಿವಿಧ ಆದಾಯ ಮಟ್ಟದಲ್ಲಿ ಅನುಭೋಗದ ಮೇಲೆ ಮಾಡುವ ವಿವಿಧ ವೆಚ್ಚಗಳ ಪಟ್ಟಿಯಾಗಿದೆ. ಅನುಭೋಗ ಪಟ್ಟಿಯು ಕೋಷ್ಠಕ 10.1ರಲ್ಲಿ ನೀಡಲಾಗಿದೆ.

ಕೋಷ್ಠಕ 10.1ರಲ್ಲಿ ತೋರಿಸಿದಂತೆ ಆದಾಯ ಹೆಚ್ಚಾದಂತೆ ಅನುಭೋಗ ವೆಚ್ಚವು ಹೆಚ್ಚಾಗುತ್ತದೆ. ಆರ್ಥಿಕ ಅಧಃಪತನ ಕಾಲದಲ್ಲಿ ಆದಾಯ ಶೂನ್ಯವಾಗಿದ್ದಾಗ ಜನರು ತಮ್ಮ ಹಿಂದಿನ ಉಳಿತಾಯವನ್ನು ಅನುಭೋಗಕ್ಕಾಗಿ ಖರ್ಚು ಮಾಡುತ್ತಾರೆ. ಆದಾಯ 50 ರೂ. ಕೋಟಿಗೆ ಏರಿಕೆ ಯಾದರೂ ಅದು ಅನುಭೋಗ ವೆಚ್ಚ 60 ರೂ. ಕೋಟಿಯನ್ನು ಭರಿಸಲು ಸಾಕಾಗುವುದು. ಈ ಹಂತದಲ್ಲಿ 10 ರೂ. ಕೋಟಿ ಹಿಂದಿನ ಉಳಿತಾಯವನ್ನು ಖರ್ಚು ಮಾಡ ಬೇಕಾಗುವುದು. ಆದಾಯ 100 ರೂ. ಕೋಟಿಗೆ ಏರಿಕೆ ಯಾದಾಗ ಅನುಭೋಗ ವೆಚ್ಚವೂ 100 ರೂ. ಕೋಟಿ ಆಗಿರುತ್ತದೆ. ಈ ಹಂತದ ನಂತರ ಆದಾಯ 50 ರೂ. ಕೋಟಿಯಂತೆ ಮತ್ತು ವೆಚ್ಚವು 40 ರೂ. ಕೋಟಿಯಂತೆ
ಏರಿಕೆಯಾಗುತ್ತದೆ. ಇದು ಅನುಭೋಗ ಹೆಚ್ಚಳವು ಆದಾಯ ಹೆಚ್ಚಳಕ್ಕಿಂತ ಕಡಿಮೆ ಇರುತ್ತದೆ ಎಂದು ತೋರಿಸುತ್ತದೆ.

ಕೇನ್ಸ್ ಉದ್ಯೋಗ ಸಿದ್ಧಾಂತದಲ್ಲಿ ಹೂಡಿಕೆ ಬಿಂಬಕಕ್ಕೆ ತುಂಬಾ ಮಹತ್ವವನ್ನು ನೀಡಲಾಗಿದೆ. ಉದ್ಯೋಗವು ಪರಿಣಾಮಕಾರಿ ಬೇಡಿಕೆಯನ್ನು ಅವಲಂಬಿಸಿದೆ. ಪರಿಣಾಮಕಾರಿ ಬೇಡಿಕೆಯು ಸಮಗ್ರ ಬೇಡಿಕೆ ಮತ್ತು ಸಮಗ್ರ ಪೂರೈಕೆಯು ಸಮವಾಗಿರುವ ಸ್ಥಿತಿಯಾಗಿದೆ. ಪರಿಣಾಮಕಾರಿ ಬೇಡಿಕೆಯು ಆದಾಯ, ಉತ್ಪನ್ನ ಮತ್ತು ಉದ್ಯೋಗವನ್ನು ನಿರ್ಧರಿಸುತ್ತದೆ. ಹೂಡಿಕೆ ಮತ್ತು ಅನುಭೋಗ ಪರಿಣಾಮಕಾರಿ ಬೇಡಿಕೆಯ ಎರಡು ಪ್ರಮುಖ ಭಾಗಗಳು, ಇವೆರಡರಲ್ಲಿ ಹೂಡಿಕೆ ಅತೀ ಮಹತ್ವದ ಚಲಕ, ಅನುಭೋಗ ಅಲ್ಪಾವಧಿಯಲ್ಲಿ ಸ್ಥಿರವಾಗಿರುತ್ತದೆ.

ಕೇನ್ಸರವರು ನೀಡಿದ ಹೂಡಿಕೆಯ ಅರ್ಥವು ಸಾಮಾನ್ಯ ಅರ್ಥಕ್ಕಿಂತ ವಿಭಿನ್ನವಾಗಿದೆ. ಸಾಮಾನ್ಯವಾಗಿ ಹೂಡಿಕೆ ಎಂದರೆ ಶೇರುಗಳು, ಡಿಜೆಂಚರುಗಳು, ಸರ್ಕಾರಿ ಬಾಂಡುಗಳು ಇತ್ಯಾದಿಗಳನ್ನು ಕೊಂಡುಕೊಳ್ಳುವುದು, ಆದರೆ ಕೇನ್ಸ್‌ರವರ ಪ್ರಕಾರ ಹೂಡಿಕೆ ಎಂದರೆ ರಾಷ್ಟ್ರದ ಬಂಡವಾಳ ಸರಕುಗಳ ಭೌತಿಕ ಸಂಗ್ರಹಣೆಗಳಲ್ಲಿ ಆಗುವ ಸೇರ್ಪಡೆ.

ಉದಾಹರಣೆಗೆ- ನೂತನ ಕಾರ್ಖಾನೆಯ ಕಟ್ಟಡಗಳು, ಯಂತ್ರ, ಸಾಧನ ಸಲಕರಣೆಗಳು ಇತ್ಯಾದಿ ಹೂಡಿಕೆಯ ಸಿದ್ಧ ಸರಕುಗಳ ಸಂಗ್ರಹಣೆ, ಉತ್ಪಾದನಾ ಹಂತದಲ್ಲಿರುವ ಸರಕುಗಳು, ಸ್ಥಿರ ಬಂಡವಾಳ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಹೂಡಿಕೆಯು ಅತೀ ಮಹತ್ವದ ಚಲಕ, ಒಂದು ಸಮುದಾಯದ ಆದಾಯ ಹೆಚ್ಚಾದಂತೆ ಅನುಭೋಗವು ಹೆಚ್ಚಾಗುತ್ತದೆ. ಆದರೆ ಅವಾಯ ಹೆಚ್ಚಾದ ದರದಲ್ಲಿ ಅನುಭೋಗ ಹೆಚ್ಚಾಗುವುದಿಲ್ಲ. ಆದಾಯ ಮತ್ತು ಅನುಭೋಗದ ನಡುವೆ ಅಂತರ ಇರುತ್ತದೆ. ಉದ್ಯೋಗ ಉತ್ಪಾದನೆಯ ಹೆಚ್ಚಿಸಲು ಈ ಅಂತರವನ್ನು ತುಂಬಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಹೂಡಿಕೆಯನ್ನು ಹೆಚ್ಚಿಸದೆ ಉದ್ಯೋಗವನ್ನು ಹೆಚ್ಚಿಸಲು ಸಾಧ್ಯವಿಲ್ಲ.

ಕೆಳಗಿನ ಪ್ರಶ್ನೆಗಳಿಗೆ 20 ವಾಕ್ಯಗಳಲ್ಲಿ ಉತ್ತರಿಸಿ,

1. ಆದಾಯ ಮತ್ತು ಉತ್ಪನ್ನದ ಮೇಲೆ ಸಮಗ್ರ ಬೇಡಿಕೆಯಲ್ಲಿನ ಸ್ವಾಯತ್ತ ಬದಲಾವಣೆಯ ಪರಿಣಾಮವನ್ನು ವಿವರಿಸಿ.

ಬೇಡಿಕೆಯು ಹೆಚ್ಚಾದಂತೆ ಅದರ ಹೆಚ್ಚಳವು ಹಂತಹಂತವಾಗಿ ಮುಂದುವರಿಸುತ್ತದೆ. ಪ್ರತೀ ಹಂತದಲ್ಲಿ ಉತ್ಪಾದಕರು ಬೇಡಿಕೆಯ ಹೆಚ್ಚಳವನ್ನು ಈಡೇರಿಸಲು ಅವರ ಉತ್ಪಾದಕರು ಬೇಡಿಕೆಯ ಹೆಚ್ಚಳವನ್ನು ಈಡೇರಿಸಲು ಅವರ ಉತ್ಪನ್ನವನ್ನು ಹೆಚ್ಚಿಸುತ್ತಾ ಹೋಗುತ್ತಾರೆ ಹಾಗೂ ಅನುಭೋಗಿಗಳು ಈ ಹೆಚ್ಚುವರಿ ಉತ್ಪಾದನೆಯ ಹೆಚ್ಚಳದಿಂದ ಉಂಟಾದ ಆದಾಯದ ಹೆಚ್ಚಳದ ಒಂದು ಭಾಗವನ್ನು ಅನುಭೋಗಿ ಸರಕುಗಳಿಗೆ ವ್ಯಯಿಸುತ್ತಾರೆ. ಈ ಮೂಲಕ ಮುಂದಿನ ಹಂತದಲ್ಲಿ ಬೇಡಿಕೆಯು ಮತ್ತಷ್ಟು ಹೆಚ್ಚಳವನ್ನು ಸೃಷ್ಟಿಸುತ್ತದೆ. ಪ್ರತಿಹಂತದಲ್ಲಿ ಸಮಗ್ರ ಬೇಡಿಕೆ ಮತ್ತು ಉತ್ಪನ್ನಗಳ ಮೌಲ್ಯಗಳಲ್ಲಾದ ಬದಲಾವಣೆಯನ್ನು ಈ ಕೆಳಕಂಡ ಕೋಷ್ಟಕದಿಂದ ಸ್ಪಷ್ಟ ಪಡಿಸಬಹುದು.

ಅಂತಿಮ ಸರಕುಗಳ ಉತ್ಪನ್ನದ ಮೌಲ್ಯದಲ್ಲಿ ಆರ್ಥಿಕತೆಯ ಆದಾಯವನ್ನು ಪ್ರತಿ ಹಂತದಲ್ಲಿ ಹೆಚ್ಚಳವನ್ನು ಕೊನೆಯ ಕಂಬ ಸಾಲುಗಳ ಮಾಪನ ಮಾಡುತ್ತವೆ. ಅದೇ ರೀತಿ ಆರ್ಥಿಕತೆಯ ಒಟ್ಟು ವೆಚ್ಚದಲ್ಲಾದ ಹೆಚ್ಚಳ ಮತ್ತು ಸಮಗ್ರ ಬೇಡಿಕೆಯ ಮೌಲ್ಯದಲ್ಲಾದ ಹೆಚ್ಚಳವನ್ನು ಎರಡು ಮತ್ತು ಮೂರನೆಯ ಕಂಬ ಸಾಲುಗಳು ಲೆಕ್ಕಾಚಾರ ಮಾಡುತ್ತವೆ.

2. ಗುಣಕದ ಯಾಂತ್ರಿಕತೆಯನ್ನು ವಿವರಿಸಿ,

ಗುಣಕ ಪರಿಕಲ್ಪನೆಯು ಆರ್ಥಿಕ ವಿಶ್ಲೇಷಣೆಗೆ ಕೇನ್ಸ್ರವರು ನೀಡಿದ ಪ್ರಮುಖ ಕಾಣಿಕೆಯಾಗಿದೆ. ಕೇನ್ಸರವರ ಉದ್ಯೋಗ ಸಿದ್ಧಾಂತದಲ್ಲಿ ಗುಣಕ ಪ್ರಮುಖ ಸ್ಥಾನ ಪಡೆದಿದೆ. ಗುಣಕ ಪರಿಕಲ್ಪನೆಯನ್ನು ಮೊದಲು ಸಂಶೋಧಿಸಿದವರು ಕೇನ್ಸರವರು. ಇವರು ಗುಣಕ ಪರಿಕಲ್ಪನೆಯನ್ನು ತನ್ನ ಉದ್ಯೋಗ ಸಿದ್ಧಾಂತದಲ್ಲಿ ಯಶಸ್ವಿಯಾಗಿ ಬಳಸಿಕೊಂಡರು. ಕೇನ್ಸ್ ಪ್ರಕಾರ ಆರಂಭದ ಹೂಡಿಕೆಯ ಹೆಚ್ಚಳದಿಂದಾಗಿ ಅಂತಿಮವಾಗಿ ಆದಾಯದಲ್ಲಿ ಹಲವು ಪಟ್ಟು ಹೆಚ್ಚಳ ವಾಗುತ್ತದೆ. ಹೂಡಿಕೆಯಲ್ಲಿನ ಬದಲಾವಣೆ ಅನುಭೋಗದಲ್ಲಿ ಬದಲಾವಣೆ ಉಂಟುಮಾಡುತ್ತದೆ. ಅಂತಿಮವಾಗಿ ಆದಾಯದಲ್ಲಿ ಹಲವು ಪಟ್ಟು ಹೆಚ್ಚಳವಾಗುತ್ತದೆ. ಆರಂಭದ ಹೂಡಿಕೆಯಲ್ಲಿನ ಬದಲಾವಣೆಯಿಂದಾಗಿ ಆದಾಯದಲ್ಲಾಗುವ ಒಟ್ಟು ಬದಲಾವಣೆಯ ಅನುಪಾತವನ್ನು ಗುಣಕ ಎನ್ನುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಗುಣಕವು ಆದಾಯದ ಹೆಚ್ಚಳ ಮತ್ತು ಹೂಡಿಕೆಯ ಹೆಚ್ಚಳಗಳ ನಡುವಿನ ಪರಿಮಾಣಾತ್ಮಕ ಅನುಪಾತವನ್ನು ವಿವರಿಸುತ್ತದೆ.

ಆದದರಿಂದ – K = y/I ಈ ಸೂತ್ರದಲ್ಲಿ K. ಎಂದರೆ ಗುಣಕ

y ಆದಾಯದ ಹೆಚ್ಚಳ ಮತ್ತು I ಹೂಡಿಕೆಯ ಹೆಚ್ಚಳವಾಗಿದೆ.

ಆರಂಭಿಕ ಹೂಡಿಕೆಯ ಹೆಚ್ಚಳದಿಂದಾಗುವ ಗುಣಕ ಪರಿಣಾಮವು ಸೀಮಾಂತ ಅನುಭೋಗ ‘ಪ್ರವೃತ್ತಿಯನ್ನು ಅವಲಂಬಿಸಿದೆ. ಗುಣಕದ ಮೌಲ್ಯವು ಸೀಮಾಂತ ಅನುಭೋಗ ಪ್ರವೃತ್ತಿಯಿಂದ ನಿರ್ಧರಿಸಲ್ಪಡುತ್ತದೆ. ಸೀಮಾಂತ ಅನುಭೋಗ ಪ್ರವೃತ್ತಿ ಹೆಚ್ಚಾದರೆ ಗುಣಕವು ಹೆಚ್ಚಾಗುತ್ತದೆ. ಇದರ ವಿರುದ್ಧ ದಿಶೆಯೂ ಸತ್ಯ. ಆದರೆ ಗುಣಕದ ಮೌಲ್ಯ ಯಾವಾಗಲೂ ಒಂದಕ್ಕಿಂತ ಹೆಚ್ಚಾಗಿರುತ್ತದೆ. ಅಂದರೆ ಗುಣಕವು ಯಾವಾಗಲೂ ಧನಾತ್ಮಕವಾಗಿರುತ್ತದೆ.

3. ‘ಮಿತವ್ಯಯದ ವಿರೋಧಾಭಾಸ’ವನ್ನು ಚರ್ಚಿಸಿರಿ.

ಅಂತಿಮ ಸರಕುಗಳ ಮಾರುಕಟ್ಟೆಯ ಸ್ಥಿರ ಬೆಲೆ – ಬಡ್ಡಿದರಗಳ ವಿಶ್ಲೇಷಣೆಯನ್ನು ಒಂದು ಅಂತರ್ಬೋಧೆಗೆ ವಿರುದ್ಧವಾದ ಸತ್ಯ ಅಥವಾ ವಿರೋಧಾಭಾಸದಿಂದ ಮುಕ್ತಾಯಗೊಳಿಸಿದರು. ಒಂದು ಆರ್ಥಿಕತೆಯಲ್ಲಿನ ಎಲ್ಲಾ ಜನರು ಉಳಿತಾಯ ಮಾಡುವ ಆದಾಯದ ಒಟ್ಟು ಮೌಲ್ಯವು ಹೆಚ್ಚಾಗಲಾರದು ಅದು ಕಡಿಮೆಯಾಗಬಹುದು ಅಥವಾ ಬದಲಾಗದೆ ಇರಬಹುದು. ಇದನ್ನು “ಮಿತವ್ಯಯದ ವಿರೋಧಾಭಾಸ” ಎನ್ನುವರು ಜನರು ಹೆಚ್ಚು ಮಿತವ್ಯಯಗಳಾದರೆ ಅವರು ಕಡಿಮೆ ಉಳಿತಾಯ ಮಾಡುತ್ತಾರೆ ಅಥವಾ ಮೊದಲಿನಷ್ಟೇ ಉಳಿತಾಯ ಮಾಡುತ್ತಾರೆ ಎಂದು ಅದು ತಿಳಿಸುತ್ತದೆ.

ಅಭ್ಯಾಸದ ಪ್ರಶ್ನೆಗಳು

1. ಸೀಮಾಂತ ಅನುಭೋಗ ಪ್ರವೃತ್ತಿ ಎಂದರೇನು? ಅದು ಯಾವ ರೀತಿ ಸೀಮಂತ ಉಳಿತಾಯ ಪ್ರವೃತ್ತಿಗೆ ಸಂಬಂಧಿಸಿದೆ ?

ಆರ್ಥಿಕತೆಯ ಒಂದು ಘಟಕದಷ್ಟು ಆದಾಯವು ಹೆಚ್ಚಳವಾಗುವುದರಿಂದಾಗಿ ಯೋಜಿತ ಅನುಭೋಗದ ದರದಲ್ಲಿನ ಏರಿಕೆಯನ್ನು ‘ಸೀಮಾಂತ ಅನುಭೋಗದ ಪ್ರವೃತ್ತಿ’ ಎಂದು ಕರೆಯುತ್ತೇವೆ.

1-mps ಅಂದರೆ ಒಂದರಿಂದ ಸೀಮಾಂತ ಉಳಿತಾಯದ ಪ್ರವೃತ್ತಿಯನ್ನು (mpc) ಯನ್ನು ಪಡೆಯಬಹುದು. ಇದು ಜನರು ಅನುಭೋಗಕ್ಕಾಗಿ ವ್ಯಯಿಸಿದ ಹೆಚ್ಚುವರಿ ಆದಾಯದ ಭಾಗವಾಗಿರುತ್ತದೆ.

ಉಳಿತಾಯವು ಆದಾಯದ ಒಂದು ಭಾಗವಾಗಿರುತ್ತದೆ. ಆದ್ದರಿಂದ ಇದನ್ನು ಈ ರೀತಿ ವಿವರಿಸಬಹುದು

1-mps = mpc

1=mpc+mps

ಅಂದರೆ mpc ಮತ್ತು mps ಸಮನಾಗಿದೆ mpcmps ಸೀಮಾಂತ ಉಳಿತಾಯ ಪ್ರವೃತ್ತಿ ಹಾಗೂ ಸೀಮಾಂತ ಅನುಭೋಗದ ಪ್ರವೃತ್ತಿಗೆ ಸಮನಾಗಿರುತ್ತದೆ.

2. ಯೋಜಿತ ಹೂಡಿಕೆ ಮತ್ತು ಯೋಜನಾರಹಿತ ಹೂಡಿಕೆಗಳ ನಡುವಿನ ವ್ಯತ್ಯಾಸಗಳಾವುವು ?

ಯೋಜಿತ ಹೂಡಿಕೆ ಮತ್ತು ಯೋಜನಾರಹಿತ ಹೂಡಿಕೆಗಳ ನಡುವಿನ ವ್ಯತ್ಯಾಸಗಳನ್ನು ಈ ಕೆಳಗಿನಂತಿವೆ-

ಯೋಜಿತ ಹೂಡಿಕೆ

  1. ಭೌತಿಕ ಬಂಡವಾಳ ಸರಕುಗಳ ಸಂಗ್ರಹಣೆಗೆ ಆಗುವ ಸೇರ್ಪಡೆಯನ್ನು ಮತ್ತು ಉತ್ಪಾದಕನೊಬ್ಬನ ದಾಸ್ತಾನಿನಲ್ಲಿ ಆಗುವ ಬದಲಾವಣೆಯನ್ನು “ಯೋಜಿತ ಹೂಡಿಕೆ” ಎಂದು ವ್ಯಾಖ್ಯಾನಿಸುವರು.
  2. ಯೋಜಿತ ಹೂಡಿಕೆಯ ಯೋಜಿತ ಬೇಡಿಕೆಗೆ ಸಮನಾಗಿರುತ್ತದೆ.
  3. ಪ್ರತಿವರ್ಷ ಒಂದೇ ಮೊತ್ತದ ಹೂಡಿಕೆಯನ್ನು ಮಾಡಲು ಬಯಸುತ್ತವೆ. ಇದನ್ನು I ಎಂದು ಸಂಕೇತಿಸಬಹುದಾಗಿದೆ.

ಯೋಜನಾ ರಹಿತ ಹೂಡಿಕೆ

  1. ಉದ್ದೇಶ ಪೂರ್ವಕವಲ್ಲದ ದಾಸ್ತಾನಿನ ಶೇಖರಣೆಗೆ ಯೋಜನಾರಹಿತ ಹೂಡಿಕೆ ಎನ್ನುವರು.
  2. ಯೋಜನಾ ರಹಿತ ಮೌಲ್ಯವು ಆರ್ಥಿಕತೆಯ ಯೋಜನಾರಹಿತ ಹೂಡಿಕೆಗಳ ಒಟ್ಟು ಮೊತ್ತಕ್ಕೆ ಸಮನಾಗಿರುತ್ತದೆ.
  3. ಉತ್ಪಾದಕರು ಯೋಜಿಸಿದ ಉತ್ಪನ್ನದ ಉತ್ಪಾದನೆಗಿಂತ ಕಡಿಮೆಯಾದರೆ ಯೋಜನಾರಹಿತ ಹೂಡಿಕೆಯ ಭಾಗವಾಗಿದೆ. ಯೋಜನಾರಹಿತವನ್ನು Y ಎಂದು ಸೂಚಿಸಬಹುದು.

3. ರೇಖೆಯ ಪರಾಮಿತಿ ಪಲ್ಲಟ ಎಂಬುದನ್ನು ನೀವು ಹೇಗೆ ಅರ್ಥೈಸುವಿರಿ? ಒಂದು ರೇಖೆಯು –

1. ಇಳಿಜಾರು ಇಳಿಕೆಯಾದಾಗ ಮತ್ತು

2. ಅದರ(ಛೇದಕ) ಹೆಚ್ಚಾದಾಗ ಯಾವ ರೀತಿ ಪಲ್ಲಟವಾಗುತ್ತದೆ?

ಒಂದು ರೇಖೆಗಿಂತ ಮತ್ತೊಂದು ರೇಖೆಯ ಇಳಿಜಾರು ಹೆಚ್ಚಾಗಿರುತ್ತದೆ. E ನ ಸ್ಥಿರ ಮೌಲ್ಯ m=1 ಈ

ಅಂಶಗಳನ್ನು ರೇಖಾ ನಕ್ಷೆಯನ್ನು ಪರಾಮಿತಿಗಳೆಂದು ಕರೆಯುತ್ತೇವೆ. m ನ ಮೌಲ್ಯ ಹೆಚ್ಚಾದಂತೆ ಸರಳರೇಖೆಯು ಮೇಲ್ಮುಖವಾಗಿ ಚಲಿಸುತ್ತದೆ. ಇದನ್ನು “ರೇಖಾನಕ್ಷೆಯ ಪರಾಮಿತಿ ಪಲ್ಲಟ” ಎನ್ನುವರು.

1. ಸರಳ ರೇಖೆಯ ಇಳಿಜಾರಿನಲ್ಲಿ ಇಳಿಜಾರು ದುಪ್ಪಟ್ಟಾದಂತೆ ಮೇಲ್ಬಾಗಕ್ಕೆ ಪಲ್ಲಟಗೊಳ್ಳುತ್ತದೆ.

2. ಅದರ ಛೇದಕ ಹೆಚ್ಚಾದಾಗ ಈ ಸರಳ ರೇಖೆಯು ಸಮಾನಾಂತರವಾಗಿ ಮೇಲ್ಬಾಗಕ್ಕೆ ಪಲ್ಲಟಗೊಳ್ಳುತ್ತದೆ.

4. ಪರಿಣಾಮಕಾರಿ ಬೇಡಿಕೆ ಎಂದರೇನು? ಅಂತಿಮ ಸರಕುಗಳ ಬೆಲೆ ಹಾಗೂ ಬಡ್ಡಿದರಗಳನ್ನು ನೀಡಿದಾಗ ಸ್ವಾಯತ್ತ ವೆಚ್ಚದ ಗುಣಕವನ್ನು ನೀವು ಹೇಗೆ ಪಡೆಯುವಿರಿ?

ಆರ್ಥಿಕತೆಯ ಈ ಬೆಲೆಯಲ್ಲಿ ಸಮತೋಲನ ಉತ್ಪನ್ನವು ಸಮಗ್ರ ಬೇಡಿಕೆಯ ಪರಿಣಾಮ ಒಂದರಿಂದಲೇ ನಿರ್ಧಾರವಾಗುತ್ತದೆ, ಇದನ್ನು ನಾವು “ಪರಿಣಾಮಕಾರಿ ಬೇಡಿಕೆ” ಎನ್ನುವರು.

ಸ್ಥಿರ ಬೆಲೆಯಲ್ಲಿ ಅಂತಿಮ ಸರಕುಗಳ ಯೋಜಿತ ಸಮಗ್ರ ಬೇಡಿಕೆ ಮೌಲ್ಯವಾದ ಯೋಜಿತ ಅನುಭೋಗ ವೆಚ್ಚ ಮತ್ತು ಯೋಜಿತ ಹೂಡಿಕೆ ವೆಚ್ಚಗಳ ಒಟ್ಟು ಮೊತ್ತಕ್ಕೆ ಸಮನಾಗಿರುತ್ತದೆ. ಪರಿಣಾಮಕಾರಿ ಬೇಡಿಕೆಯ ತತ್ವದಡಿಯಲ್ಲಿ ಅಂತಿಮ ಸರಕುಗಳ ಸಮತೋಲನ ಉತ್ಪನ್ನದ ಮೌಲ್ಯವು ಯೋಜಿತ ಸಮಗ್ರ ಬೇಡಿಕೆಗೆ ಸಮನಾಗಿರುತ್ತದೆ.

5. ಮಿತವ್ಯಯದ ವಿರೋಧಾಭಾಸವನ್ನು ವಿವರಿಸಿರಿ.

ಅಂತಿಮ ಸರಕುಗಳ ಮಾರುಕಟ್ಟೆಯ ಸ್ಥಿರ ಬೆಲೆ – ಬಡ್ಡಿದರಗಳ ವಿಶ್ಲೇಷಣೆಯನ್ನು ಒಂದು ಅಂತರ್ಬೋಧೆಗೆ ವಿರುದ್ಧವಾದ ಸತ್ಯ ಅಥವಾ ವಿರೋಧಾಭಾಸದಿಂದ ಮುಕ್ತಾಯಗೊಳಿಸಿದರು. ಒಂದು ಆರ್ಥಿಕತೆಯಲ್ಲಿನ ಎಲ್ಲಾ ಜನರು ಉಳಿತಾಯ ಮಾಡುವ ಆದಾಯದ ಒಟ್ಟು ಮೌಲ್ಯವು ಹೆಚ್ಚಾಗಲಾರದು ಅದು ಕಡಿಮೆಯಾಗಬಹುದು ಅಥವಾ ಬದಲಾಗದೆ ಇರಬಹುದು. ಇದನ್ನು “ಮಿತವ್ಯಯದ ವಿರೋಧಾಭಾಸ” ಎನ್ನುವರು ಜನರು ಹೆಚ್ಚು ಮಿತವ್ಯಯಗಳಾದರೆ ಅವರು ಕಡಿಮೆ ಉಳಿತಾಯ ಮಾಡುತ್ತಾರೆ ಅಥವಾ ಮೊದಲಿನಷ್ಟೇ ಉಳಿತಾಯ ಮಾಡುತ್ತಾರೆ ಎಂದು ಅದು ತಿಳಿಸುತ್ತದೆ.

ಒಂದು ವಾಕ್ಯದಲ್ಲಿ ಉತ್ತರಿಸಿ : –

1. ಯೋಜಿತ ಮಾಪನಗಳೆಂದರೇನು?

ಅನುಭೋಗ, ಹೂಡಿಕೆ ಅಥವಾ ಅಂತಿಮ ಸರಕುಗಳ ಉತ್ಪನ್ನಗಳ ಯೋಜಿತ ಮೌಲ್ಯಗಳನ್ನು ಯೋಜಿತ ಮಾಪನಗಳೆಂದು ಕರೆಯುವರು.

2. ಯೋಜನಾರಹಿತ ಮಾಪನಗಳೆಂದರೇನು?

ನೈಜ ಅಥವಾ ಲೆಕ್ಕಾಚಾರ ಮಾಡಲಾದ ಮೌಲ್ಯಗಳನ್ನು ಯೋಜನಾರಹಿತ ಮಾಪನಗಳೆಂದು ಕರೆಯುತ್ತೇವೆ.

3. ಸೀಮಾಂತ ಉಳಿತಾಯ ಪ್ರವೃತ್ತಿ ಎಂದರೇನು?

ಇಡೀ ಅರ್ಥ ವ್ಯವಸ್ಥೆಯು ಹೆಚ್ಚಾಗಿ ಆದಾಯದ ಎಷ್ಟು ಭಾಗವನ್ನು ಉಳಿತಾಯ ಮಾಡಲು ಬಯಸುತ್ತಾರೆ ಎಂಬುದರ ಚಿತ್ರಣವನ್ನು ಸೀಮಾಂತ ಉಳಿತಾಯ ಪ್ರವೃತ್ತಿ ಎನ್ನುವರು.

4. ಸೀಮಾಂತ ಅನುಭೋಗದ ಪ್ರವೃತ್ತಿ ಎಂದರೇನು?

ಆರ್ಥಿಕತೆಯ ಹೆಚ್ಚುವರಿ ಆದಾಯವನ್ನು ಜನರು ಹೆಚ್ಚುವರಿ ಅನುಭೋಗಕ್ಕಾಗಿ ಉಪಯೋಗಿಸುತ್ತಾರೆ ಇದನ್ನು ಸೀಮಾಂತ ಅನುಭೋಗ ಪ್ರವೃತ್ತಿ ಎನ್ನುವರು.

5. ಆರ್ಥಿಕತೆಯ ಒಟ್ಟು ಅನುಭೋಗದ ಸಮೀಕರಣವನ್ನು ಬರೆಯಿರಿ ?

C=c(y-0)=c.y

ಸಂಕ್ಷಿಪ್ತ ಉತ್ತರಗಳನ್ನು ಬರೆಯಿರಿ

1. ಉತ್ಪನ್ನ ಮಾರುಕಟ್ಟೆಯ ಅಲ್ಪಾವಧಿ ಸ್ಥಿರ ಬೆಲೆಯನ್ನು ವಿಶ್ಲೇಷಿಸಿ?

ನಾವೀಗ ಆರ್ಥಿಕತೆಯಲ್ಲಿ ಅಂತಿಮ ಸರಕುಗಳ ಸ್ಥಿರ ಬೆಲೆ ಮತ್ತು ಸ್ಥಿರ ಬಡ್ಡಿದರಗಳಲ್ಲಿ ಸಮಗ್ರ ಬೇಡಿಕೆಯನ್ನು ಪಡೆಯಲು ಯತ್ನಿಸೋಣ. ಆದಾಗ್ಯೂ ಒಂದು ನಿರ್ದಿಷ್ಟ ಮಟ್ಟದಲ್ಲಿ ಬೆಲೆಯನ್ನು ಸ್ಥಿರವಾಗಿರಿಸಲು, ಆ ಬೆಲೆಯಲ್ಲಿ ಅನುಭೋಗಿಗಳ ಬೇಡಿಕೆಗೆ ತಕ್ಕಂತೆ ಪೂರೈಕೆದಾರರು ಪೂರೈಸಲು ಬಯಸುತ್ತಾರೆ ಎಂಬ ಕಲ್ಪನೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಆ ಬೆಲೆಯಲ್ಲಿ ಪೂರೈಕೆಯಾದ ಪ್ರಮಾಣವು ಬೇಡಿಕೆಗಿಂತ ಹೆಚ್ಚಾದರೆ ಅಥವಾ ಕಡಿಮೆಯಾದರೆ, ಆ ಬೆಲೆಯು ಹೆಚ್ಚುವರಿ ಪೂರೈಕೆ ಅಥವಾ ಬೇಡಿಕೆಗಳ ಹೆಚ್ಚಳದ ಕಾರಣದಿಂದ ಬದಲಾಗಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಪೂರೈಕೆಯ ಸ್ಥಿತಿಸ್ಥಾಪಕತ್ವವು ಅನಂತವಾಗಿದೆ ಎಂದು ನಾವು ಊಹಿಸುತ್ತೇವೆ-ಅಂದರೆ ಸ್ಥಿರ ಬೆಲೆಯಲ್ಲಿ ಪೂರೈಕೆಯ ಅನುಸೂಚಿಯು ಸಮಾನಾಂತರವಾಗಿರುತ್ತದೆ.. ಇಂತಹ ಸನ್ನಿವೇಶಗಳಲ್ಲಿ ಆರ್ಥಿಕತೆಯಲ್ಲಿ ಈ ಬೆಲೆಯಲ್ಲಿ ಸಮತೋಲನ ಉತ್ಪನ್ನವು ಸಮಗ್ರ ಬೇಡಿಕೆಯ ಪರಿಣಾಮ ಒಂದರಿಂದಲೇ ನಿರ್ಧಾರವಾಗುತ್ತದೆ. ಇದನ್ನು ನಾವು ಪರಿಣಾಮಕಾರಿ ಬೇಡಿಕೆಯ ತತ್ವ ಎನ್ನುತ್ತೇವೆ.

ಅಲ್ಪಾವಧಿ ಎಂಬ ಪದವನ್ನೂ ಗಮನಿಸೋಣ. ಇಲ್ಲಿ ಆರ್ಥಿಕತೆಯ ಬೆಲೆಯು ಹೆಚ್ಚುವರಿ ಪೂರೈಕೆ ಅಥವಾ ಬೇಡಿಕೆಯ ಶಕ್ತಿಗಳಿಗೆ ಸ್ಪಂದಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಊಹಿಸುತ್ತೇವೆ. ಅದೇ ಸಂದರ್ಭದಲ್ಲಿ ಉತ್ಪಾದಕರು ಪೂರೈಕೆ ಅಥವಾ ಬೇಡಿಕೆಯ ಹೆಚ್ಚಳವನ್ನು ತಪ್ಪಿಸಲು ಉತ್ಪಾದನೆಯ ಯೋಜನೆಗಳನ್ನು ನವೀಕರಿಸಲು ಯತ್ನಿಸುತ್ತಾರೆ. ಉದಾಹರಣೆಗೆ ಅವರು ಪ್ರಸ್ತುತ ಉತ್ಪಾದನಾ ವರ್ತುಲದಲ್ಲಿ ಹೆಚ್ಚುವರಿ ಪೂರೈಕೆಯ ಹೆಚ್ಚಳವನ್ನು ಎದುರಿಸಿದರೆ ಅವರ ಗೋದಾಮುಗಳಲ್ಲಿ ದಾಸ್ತಾನುಗಳು ಶೇಖರಣೆಯಾಗುವುದನ್ನು ತಡೆಯಲು ಮುಂದಿನ ಉತ್ಪಾದನಾ ವರ್ತುಲದಲ್ಲಿ ಕಡಿಮೆ ಉತ್ಪಾದನೆ ಮಾಡಲು ಯೋಜಿಸುತ್ತಾರೆ. ಒಬ್ಬ ವೈಯುಕ್ತಿಕ ಉತ್ಪಾದಕರು ರಾಷ್ಟ್ರೀಯ ಮಾರುಕಟ್ಟೆಯ ಗಾತ್ರಕ್ಕೆ ಹೋಲಿಸಿದರೆ ಒಬ್ಬ ಉತ್ಪಾದಕನ ಮಾರುಕಟ್ಟೆಯ ಗಾತ್ರವು ತುಂಬಾ ಚಿಕ್ಕದಾಗಿರುತ್ತದೆ. ಆದುದರಿಂದ ಒಬ್ಬ ಉತ್ಪಾದಕ ಮಾರುಕಟ್ಟೆಯ ಬೆಲೆಯ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಪ್ರತಿಯೊಬ್ಬ ಉತ್ಪಾದಕರು ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಬೆಲೆಯನ್ನು ಸ್ವೀಕರಿಸಬೇಕಾಗುತ್ತದೆ.

FAQ :

1. ಯೋಜಿತ ಮಾಪನಗಳೆಂದರೇನು?

ಅನುಭೋಗ, ಹೂಡಿಕೆ ಅಥವಾ ಅಂತಿಮ ಸರಕುಗಳ ಉತ್ಪನ್ನಗಳ ಯೋಜಿತ ಮೌಲ್ಯಗಳನ್ನು ಯೋಜಿತ ಮಾಪನಗಳೆಂದು ಕರೆಯುವರು.

2. ಯೋಜನಾರಹಿತ ಮಾಪನಗಳೆಂದರೇನು?

ನೈಜ ಅಥವಾ ಲೆಕ್ಕಾಚಾರ ಮಾಡಲಾದ ಮೌಲ್ಯಗಳನ್ನು ಯೋಜನಾರಹಿತ ಮಾಪನಗಳೆಂದು ಕರೆಯುತ್ತೇವೆ.

3. ಸೀಮಾಂತ ಅನುಭೋಗದ ಪ್ರವೃತ್ತಿ ಎಂದರೇನು?

ಇಡೀ ಅರ್ಥ ವ್ಯವಸ್ಥೆಯು ಹೆಚ್ಚಾಗಿ ಆದಾಯದ ಎಷ್ಟು ಭಾಗವನ್ನು ಉಳಿತಾಯ ಮಾಡಲು ಬಯಸುತ್ತಾರೆ ಎಂಬುದರ ಚಿತ್ರಣವನ್ನು ಸೀಮಾಂತ ಉಳಿತಾಯ ಪ್ರವೃತ್ತಿ ಎನ್ನುವರು.

ಇತರೆ ವಿಷಯಗಳು :

2nd Puc All Subject Notes

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh