ದ್ವಿತೀಯ ಪಿ.ಯು.ಸಿ ಹಣ ಮತ್ತು ಬ್ಯಾಂಕಿಂಗ್ ಅರ್ಥಶಾಸ್ತ್ರ ನೋಟ್ಸ್‌ | 2nd Puc Economics Chapter 9 Notes in Kannada Medium

ದ್ವಿತೀಯ ಪಿ.ಯು.ಸಿ ಹಣ ಮತ್ತು ಬ್ಯಾಂಕಿಂಗ್ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 2nd Puc Economics Chapter 9 Notes Question Answer Mcq Pdf Download in Kannada Medium 2023 Kseeb Solutions For Class 12 Economics Chapter 9 Notes in Kannada 2nd Puc Hana mattu Banking Economics Notes 2nd PUC Economics Part-2 Chapter-3 Money & Banking Notes 2nd Puc Economics 9th lesson Notes Pdf

2nd Puc Economics Chapter 9 Notes in Kannada

2nd Puc Economics Chapter 9 Notes in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

1. ವಸ್ತು ವಿನಿಮಯ ಪದ್ಧತಿ ಎಂದರೇನು?

ಹಣವನ್ನು ಮಾಧ್ಯಮವಾಗಿ ಬಳಸದೇ ನಡೆಯುವ ಸರಕುಗಳ ವಿನಿಮಯವನ್ನು ವಸ್ತು ವಿನಿಮಯ ಪದ್ಧತಿ ಎಂದು ಕರೆಯುವರು.

2. ಹಣದ ಅರ್ಥವನ್ನು ನೀಡಿ.

ಯಾವ ವಸ್ತುವು ಸರಕು ಮತ್ತು ಸೇವೆಗಳಿಗೆ ವಿನಿಮಯ ಮಾಧ್ಯಮವಾಗಿ ಸ್ವೀಕರಿಸಲ್ಪಟ್ಟ ಮತ್ತು ಮೌಲ್ಯಮಾಪನ ಸಾಧನವಾಗಿಯೂ ಕಾರ್ಯ ನಿರ್ವಹಿಸುತ್ತದೆಯೋ ಅದನ್ನು ಹಣ ಎಂದು ಕರೆಯಬಹುದು.

3. ವಾಯಿದೆ ಠೇವಣಿ ಎಂದರೇನು?

ಅವಧಿ ಠೇವಣಿಗಳನ್ನು ವಾಯಿದೆ ಠೇವಣಿಗಳು ಎನ್ನುವರು. ಉದಾ : ಬಾಂಡ್‌ಗಳು, ಬ್ಯಾಂಕ್‌, ಅಂಚೆ ಕಛೇರಿಯ ಅವಧಿ ಠೇವಣಿಗಳು,

4. ಫಿಯಟ್ ಹಣ ಎಂದರೇನು?

ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ಫಿಯಟ್ ಹಣ ಎನ್ನುವರು.

5. ‘ಅಧಿಕ ಶಕ್ತಿ ಹಣ’ದ ಅರ್ಥವನ್ನು ಬರೆಯಿರಿ.

ದೇಶದ ಹಣಕಾಸು ಪ್ರಾಧಿಕಾರ RBIನ ಒಟ್ಟು ಹೊಣೆಗಾರಿಕೆಯನ್ನು ಹಣಕಾಸಿನ ನೆಲೆ ಅಥವಾ ಅಧಿಕ ಶಕ್ತಿಯ ಹಣ ಎಂದು ಕರೆಯುತ್ತಾರೆ.

6. CRR ನ್ನು ವಿಸ್ತರಿಸಿ.

ನಗದು ಮೀಸಲು ಅನುಪಾತ

5. ಬ್ಯಾಂಕು ದರ ಎಂದರೇನು?

ಬ್ಯಾಂಕುಗಳು ತಮ್ಮ ಬೇಡಿಕೆ ಮತ್ತು ಅವಧಿ ಠೇವಣಿಗಳಲ್ಲಿ ನಿಗದಿತ ಭಾಗವನ್ನು ನಿರ್ದಿಷ್ಟ ದ್ರವ್ಯತಾ ಆಸ್ತಿಗಳ ರೂಪದಲ್ಲಿ ಕಾಯ್ದು ಕೊಳ್ಳಬೇಕಾಗುತ್ತದೆ. ಈ ಅನುಪಾತಗಳ ಹೊರತಾಗಿ rdr ಮೌಲ್ಯವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ‘ಬ್ಯಾಂಕು ದರ’ ಎಂದು ಕರೆಯಲಾಗುವ ನಿಶ್ಚಿತ ಬಡ್ಡಿದರವನ್ನು ಬಳಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ – RBI ನಿಗಧಿಪಡಿಸುವ ನಿಶ್ಚಿತ ಬಡ್ಡಿದರವನ್ನು ‘ಬ್ಯಾಂಕುದರ’ ಎಂದು ಕರೆಯುವರು.

ಕೆಳಗಿನ ಪ್ರಶ್ನೆಗಳಿಗೆ 4 ವಾಕ್ಯಗಳಲ್ಲಿ ಉತ್ತರಿಸಿ.

1. ಯಾವುದಾದರೂ ಹಣದ ಎರಡು ಕಾರ್ಯಗಳನ್ನು ತಿಳಿಸಿ.

ಹಣದ ಪ್ರಮುಖ ಎರಡು ಕಾರ್ಯಗಳೆಂದರೆ –

ಹಣವು ವಿನಿಮಯದ ಪ್ರಮುಖ ಮಾಧ್ಯಮವಾಗಿದೆ.

ವಸ್ತು ವಿನಿಮಯದಲ್ಲಿ ಹಣವು ಮಧ್ಯವರ್ತಿಯಾಗಿರುತ್ತದೆ.

2, CRR ಮತ್ತು SLRಗಳ ಅರ್ಥ ನೀಡಿ

CRR ಎಂದರೆ ನಗದು ಮೀಸಲು ಅನುಪಾತ, ಹಾಗೂ SLR ಎಂದರೆ, ಶಾಸನ ದ್ರವ್ಯತಾ ಅನುಪಾತ. ಇವು ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತವೆ.

CRR ಹಾಗೂ SLR ಹಣಗುಣಕದ ಮೌಲ್ಯವನ್ನು ಮತ್ತು ಹಣದ ಪೂರೈಕೆಯನ್ನು ಕಡಿಮೆ ಮಾಡುತ್ತದೆ ಅಥವಾ ಹೆಚ್ಚುಸುತ್ತವೆ.

3. ಸಾಲವನ್ನು ನಿಯಂತ್ರಿಸುವ RBIನ ಸಾಧನಗಳನ್ನು ತಿಳಿಸಿ.

ಸಾಲವನ್ನು ನಿಯಂತ್ರಿಸುವ RBIನ ಸಾಧನಗಳೆಂದರೆ –

 • ಬ್ಯಾಂಕ್‌ ದರದ ನೀತಿ ಚಲ
 • ಮೀಸಲು ಅಗತ್ಯಗಳು (CRR ಹಾಗೂ SLR ನ ಕಾರ್ಯಾಚರಣೆ)
 • ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಇತ್ಯಾದಿ.

4. ಹಣದ ಬೇಡಿಕೆಯ 2 ಉದ್ದೇಶಗಳನ್ನು ತಿಳಿಸಿ.

ಹಣದ ಬೇಡಿಕೆಯ 2 ಉದ್ದೇಶಗಳೆಂದರೆ

ಸಟ್ಟಾ ವ್ಯಾಪಾರ – ಇದು ನಗದು, ಬಾಂಡು, ಚೆಕ್, ಮೂಲಕ ನಡೆಯುವುದು.

ಚಿಲ್ಲರೆ ವ್ಯಾಪಾರದ ಉದ್ದೇಶ – ಇದು ಹಣದ ಬೇಡಿಕೆಯ ನಗದು ರೂಪದಲ್ಲಿ ನಡೆಯುವುದು,

ಈ ಹಣದ ಬೇಡಿಕೆಯು ಅರ್ಥ ವ್ಯವಸ್ಥೆಯ ನೈಜ ಆದಾಯದೊಂದಿಗೆ ಮತ್ತು ಸರಾಸರಿ ಬೆಲೆಯ ಮಟ್ಟದೊಂದಿಗೆ ಧನಾತ್ಮಕ ಸಂಬಂಧವನ್ನು ಹೊಂದಿದೆ.

5. ಬ್ಯಾಂಕು ದರವು ಹೇಗೆ ಹಣದ ಪೂರೈಕೆಯನ್ನು ಪ್ರಭಾವಿಸುತ್ತದೆ?

RBI ನ ಮುಖ್ಯ ಮಹತ್ವದ ಪಾತ್ರವೆಂದರೆ ಹಣದ ಪೂರೈಕೆ, ಹಣಕಾಸು ನೀತಿಯನ್ನು ನಿರ್ವಹಿಸಲು RBI ಸ್ವತಂತ್ರವಾಗಿರುವುದರಿಂದ ಹೂಡಿಕೆದಾರರಿಗೆ ಸಾಲವನ್ನು ನೀಡಲು ಉತ್ತೇಜಿಸುತ್ತದೆ. ಬ್ಯಾಂಕ್‌ದರವು ನಿಶ್ಚಿತ ಬಡ್ಡಿ ದರವಾಗಿರುವುದರಿಂದ ವಾಣಿಜ್ಯ ಬ್ಯಾಂಕುಗಳಿಗೆ ಬ್ಯಾಂಕರ್‌ನ ಸ್ಥಿತಿಯಿಂದ ಮುಕ್ತ ಗೊಳಿಸುತ್ತದೆ. rdr ರೀತಿಯಲ್ಲಿ ಹಣದ ಪೂರೈಕೆಯು CRR ಹಾಗೂ SLR ನ ಹಣ ಗುಣಕದ ಮೌಲ್ಯವನ್ನು ಮತ್ತು ಹಣದ ಪೂರೈಕೆಯನ್ನು ಹೆಚ್ಚಿಸುತ್ತದೆ. ಹಾಗೂ ಪ್ರಭಾವಿಸುತ್ತದೆ.

ಕೆಳಗಿನ ಪ್ರಶ್ನೆಗಳಿಗೆ 12 ಪಾಕ್ಯಗಳಲ್ಲಿ ಉತ್ತರಿಸಿ.

2nd Puc Economics Chapter 9 Notes in Kannada

1. RBI ನ ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

ಭಾರತೀಯ ರಿಜರ್ವ್ ಬ್ಯಾಂಕ್‌ ಕೇಂದ್ರ ಬ್ಯಾಂಕಿನ ಸಾಂಪ್ರದಾಯಿಕ ಕಾರ್ಯಗಳ ಜೊತೆಗೆ ಅಭಿವೃದ್ಧಿ ಹಾಗೂ ಇತರ ಕಾರ್ಯಗಳನ್ನು ನಿರ್ವಹಿಸುತ್ತದೆ. ರಿಜರ್ವ್ ಬ್ಯಾಂಕಿನ ಕಾರ್ಯಗಳನ್ನು ಈ ಕೆಳಗೆ ವಿವರಿಸಲಾಗಿದೆ. ರಿಜರ್ವ್ ಬ್ಯಾಂಕಿನ ಕಾರ್ಯಗಳನ್ನು ಪ್ರಮುಖವಾಗಿ ಮೂರು ಕಾರ್ಯವಿಭಾಗಗಳಾಗಿ ವಿಂಗಡಿಸಲಾಗಿದೆ.

ಅವುಗಳೆಂದರೆ-

1) ಸಾಂಪ್ರದಾಯಿಕ ಕಾರ್ಯಗಳು

2) ಅಭಿವೃದ್ಧಿ ಕಾರ್ಯಗಳು

3) ಇತರ ಕಾರ್ಯಗಳು

ಸಾಂಪ್ರದಾಯಿಕ ಕಾರ್ಯಗಳೆಂದರೆ-

1) ನೋಟು ಚಲಾವಣೆಯ ಪರಮಾಧಿಕಾರ: ಭಾರತೀಯ ರಿಜರ್ವ್ ಬ್ಯಾಂಕ್ ಕಾನೂನಿನ 22ನೇ ಪರಿಛೇದದ ಅಡಿಯಲ್ಲಿ ಈ ಬ್ಯಾಂಕ್ 10,20,50,100,500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆತರುವ ಏಕಸ್ವಾಮ್ಯ ಅಧಿಕಾರವನ್ನು ಹೊಂದಿದೆ. ಮೀಸಲು ಪದ್ಧತಿಯ ಪ್ರಕಾರ 200 ಕೋಟಿ ರೂಪಾಯಿ ಬಂಗಾರ, ಬೆಳ್ಳಿ, ಹಾಗೂ ವಿದೇಶಿ ವಿನಿಮಯವನ್ನು ಭದ್ರತೆಗಾಗಿ ಮೀಸಲಾಗಿಡಬೇಕಾಗಿದೆ.

ಸರ್ಕಾರದ ಬ್ಯಾಂಕ್‌: ಭಾರತೀಯ ರಿಜರ್ವ್‌ ಬ್ಯಾಂಕ್ ಸರ್ಕಾರದ ಬ್ಯಾಂಕ್‌ ಆಗಿ, ಪ್ರತಿನಿಧಿಯಾಗಿ

ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕ ಸಾಲ ನಿರ್ವಹಣ ಕಾರ್ಯ ಮಾಡುತ್ತದೆ.

ಬ್ಯಾಂಕುಗಳ ಬ್ಯಾಂಕ್: ಭಾರತೀಯ ರಿಜರ್ವ್‌ಬ್ಯಾಂಕ್‌ ಎಲ್ಲ ವಾಣಿಜ್ಯ ಬ್ಯಾಂಕುಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ ಹಾಗೂ ನಿರ್ದೇಶಿಸುತ್ತದೆ. ಬ್ಯಾಂಕ್’ ಚಟುವಟಿಕೆಗಳ ನಿಯಂತ್ರಣ ಲೈಸೆನ್ಸ್‌ ನೀಡುವುದು, ಶಾಖಾ ವಿಸ್ತರಣೆ, ಸ್ವತ್ತುಗಳ ದ್ರವ್ಯತೆಗೆ ಸಂಬಂಧಿಸಿದೆ.

ಅಂತಿಮ ಋಣದಾತ: ರಿಜರ್ವ್ ಬ್ಯಾಂಕ್‌ ವಾಣಿಜ್ಯ ಬ್ಯಾಂಕುಗಳಿಗೆ ಹಣಕಾಸಿನ ತೊಂದರೆಗಳಿದ್ದಾಗ ಸಹಾಯ ಮಾಡುತ್ತದೆ. ವಾಣಿಜ್ಯ ಬ್ಯಾಂಕುಗಳಿಗೆ ಯಾವುದೇ ಮೂಲದಿಂದ ಹಣಕಾಸಿನ ಸಹಾಯ ದೊರೆಯದಿದ್ದಾಗ ಭಾರತೀಯ ರಿಜರ್ವ್ ಬ್ಯಾಂಕ್ ಅವುಗಳ ನೆರವಿಗೆ ಧಾವಿಸುತ್ತದೆ.

ತೀರುವ ಮನೆ ಕಾರ್ಯ: ಭಾರತೀಯ ರಿಜರ್ವ ಬ್ಯಾಂಕ್‌ ತೀರುವ ಮನೆಯಾಗಿ ಬ್ಯಾಂಕುಗಳ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಪರಸ್ಪರ ನೀಡಬೇಕಾದ ಮತ್ತು ತೆಗೆದುಕೊಳ್ಳಬೇಕಾದ ಹಣಕಾಸಿನ ವ್ಯವಹಾರ ಹಾಗೂ ಹಣದ ವರ್ಗಾವಣೆ ಕಾರ್ಯಗಳನ್ನು ನಿರ್ವಹಿಸುತ್ತದೆ.

ಹಣದ ಮಾರುಕಟ್ಟೆಯ ನೇತಾರ: ಭಾರತೀಯ ರಿಜರ್ವ್ ಬ್ಯಾಂಕ್ ದೇಶದ ಹಣದ ಮಾರುಕಟ್ಟೆಯ ನೇತಾರನಾಗಿರುತ್ತದೆ. ಹಣಕಾಸಿನ ಸಂಸ್ಥೆಗಳು ಮುಂತಾದವು ಗಳ ಚಟುವಟಿಕೆಗಳನ್ನು ಅದು ನಿಯಂತ್ರಿಸುತ್ತದೆ.

ಸಾಲ ನಿಯಂತ್ರಕ: ಸಾಲ ನಿಯಂತ್ರಣವು ರಿಜರ್ವ್ ಬ್ಯಾಂಕಿನ ಪ್ರಮುಖವಾದ ಕಾರ್ಯವಾಗಿದೆ. ಸಾಲ ನೀಡಿಕೆ ಹಾಗೂ ಸಾಲದ ಬಳಕೆಗಳು ಯೋಗ್ಯ ಪ್ರಮಾಣ ಹಾಗೂ ಯೋಗ್ಯಾ ದಿಶೆಯಲ್ಲಿರಬೇಕಾಗುತ್ತದೆ. ರಿಜರ್ವ್ ಬ್ಯಾಂಕ್‌ ಬೆಲೆ, ಬಡ್ಡಿದರ ಮುಂತಾದ ಆರ್ಥಿಕ ಚಲಕಗಳನ್ನು ನಿಯಂತ್ರಿಸುತ್ತದೆ.

ವಿದೇಶ ವಿನಿಮಯದ ಸಂರಕ್ಷಕ: ಭಾರತೀಯ ರಿಜರ್ವ್ ಬ್ಯಾಂಕ್ ದೇಶದ ವಿದೇಶಿ ವಿನಿಮಯ ಸಂಗ್ರಹದ ಸಂರಕ್ಷಕನಾಗಿ ಕಾರ್ಯ ನಿರ್ವಹಿಸುತ್ತದೆ. ನೋಟುಗಳ ಭದ್ರತೆ ಜೊತೆಗೆ ಅಂತರಾಷ್ಟ್ರೀಯ ಪಾವತಿ ಕಾರ್ಯಗಳನ್ನು ಪೂರ್ಣಗೊಳಿಸುವ ಸಲುವಾಗಿ ಚಿನ್ನ, ಬೆಳ್ಳಿ ಹಾಗೂ ವಿದೇಶಿ ವಿನಿಮಯದ ಸಂಗ್ರಹವನ್ನು ಹೊಂದುವ ಅವಶ್ಯಕತೆ ಇದೆ.

2) ಅಭಿವೃದ್ಧಿ ಕಾರ್ಯಗಳು:

ಅಭಿವೃದ್ಧಿ ಕಾರ್ಯ ಗಳೆಂದರೆ: 1) ಕೃಷಿ ಹಣಕಾಸು 2) ಕೈಗಾರಿಕಾ ಹಣಕಾಸು ಹಾಗೂ ರಾಜ್ಯ ಹಣಕಾಸು ನಿಗಮದ SFC, IFCI IDBI, ICICI ಮುಂತಾದವುಗಳ ಮೂಲಕ ಸಾಲ ಸೌಲಭ್ಯ ಒದಗಿಸುತ್ತದೆ.

1) ಸಂಶೋಧನಾ ಕಾರ್ಯಗಳು, ಹಾಗೂ ವಿಶೇಷ ಕಾರ್ಯಗಳು, ಹಾಗೂ ಹಣಕಾಸು ನೀತಿ ಕಾರ್ಯಗಳು ಸಹ ಭಾರತೀಯ ರಿಜರ್ವ್ ಬ್ಯಾಂಕಿನ ಇತರ ಕಾರ್ಯಗಳಾಗಿವೆ.

ಕೆಳಗಿನ ಪ್ರಶ್ನೆಗಳಿಗೆ 20 ವಾಕ್ಯಗಳಲ್ಲಿ ಉತ್ತರಿಸಿ.

1. ಬ್ಯಾಂಕುಗಳ ಠೇವಣಿ ಮತ್ತು ಸಾಲ (ಪತ್ತು) ನಿರ್ಮಾಣ ಪ್ರಕ್ರಿಯೆಯ ಮೇಲೆ ಚಿನಿವಾರ ಲಾಲಾನ ಕಥೆಯನ್ನು ಬರೆಯಿರಿ.

ಕರೆನ್ಸಿ ನೋಟುಗಳು ಮತ್ತು ನಾಣ್ಯಗಳಲ್ಲದೆ ಸಾರ್ವಜನಿಕರು ವಾಣಿಜ್ಯ ಬ್ಯಾಂಕುಗಳಲ್ಲಿ ಹೊಂದಿರುವ ಉಳಿತಾಯಗಳು ಖಾತೆ, ಅಥವಾ ಚಾಲ್ತಿ ಖಾತೆಯ ಠೇವಣಿಗಳನ್ನು ಕೂಡಾ ಹಣವೆಂದು ಪರಿಗಣಿಸಲಾಗುತ್ತದೆ ಮತ್ತು ಮೇರೆಗೆ ಪಾವತಿ ಮಾಡುವುದರಿಂದ ಇಂತಹ ಠೇವಣಿಗಳನ್ನು ಬೇಡಿಕೆ ಠೇವಣಿಗಳು ಎಂದು ಕರೆಯುತ್ತಾರೆ. ಇತರೆ ಠೇವಣಿಗಳು – ಉದಾಹರಣೆಗೆ – ಪರಿಪಕ್ವತೆಗೆ ನಿಶ್ಚಿತ ಠೇವಣಿಗಳನ್ನು ಅವಧಿ ಠೇವಣಿಗಳೆಂದು ಕರೆಯುತ್ತಾರೆ. ಇದರೊಂದಿಗೆ ಅಂಚೆ ಕಛೇರಿ ಉಳಿತಾಯ ಬ್ಯಾಂಕಿನಲ್ಲಿರುವ ಉಳಿತಾಯ ಠೇವಣಿಗಳು,

ವಾಣಿಜ್ಯ ಬ್ಯಾಂಕುಗಳಲ್ಲಿನ ನಿವ್ವಳ ಅವಧಿ ಠೇವಣಿಗಳು (M1 ಮತ್ತು M2)

ಅಂಚೆ ಕಛೇರಿಯಲ್ಲಿರುವ ಒಟ್ಟು ಠೇವಣಿಗಳು (M3+ M1)

ಠೇವಣಿ ಹೆಚ್ಚಳದಿಂದ ಬ್ಯಾಂಕ್‌ನ ಹೊಣೆಗಾರಿಕೆ ಹೆಚ್ಚುತ್ತದೆ. (M3+ M4) ಸಟ್ಟಾ ವ್ಯಾಪಾರದಲ್ಲಿ ಬಾಂಡುಗಳು ಹೆಚ್ಚಿನ ಮಹತ್ವವಿದೆ, ವ್ಯಕ್ತಿ ಭೂ ಆಸ್ತಿ, ಚಿನ್ನ, ಬಾಂಡುಗಳು ಹಾಗೂ ಉಳಿತಾಯ ಪತ್ರಗಳು, ಹಣದ ರೂಪದಲ್ಲಿ ಸಂಪತ್ತಿನ ರೂಪದಲ್ಲಿ ಇಟ್ಟು ಕೊಳ್ಳಬಹುದು ಹಾಗೂ ಇದನ್ನು ಅಡಮಾನದ ರೂಪದಲ್ಲಿಇಟ್ಟು ಸಾಲ ಪಡೆಯಬಹುದಾಗಿದೆ.

2. ಮೀಸಲುಗಳ ಅಗತ್ಯವು ಹಣದ (ಸಾಲದ) ನಿರ್ಮಾಣಕ್ಕೆ ಒಂದು ಮಿತಿಯಾಗಿದೆ ವಿವರಿಸಿ.

ಸಾಲ ನಿಯಂತ್ರಣವು ರಿಜರ್ವ್ ಬ್ಯಾಂಕಿನ ಪ್ರಮುಖವಾದ ಕಾರ್ಯವಾಗಿದೆ. ಸಾಲ ನೀಡಿಕೆ ಹಾಗೂ ಸಾಲದ ಬಳಕೆಗಳು ಯೋಗ್ಯ ಪ್ರಮಾಣ ಹಾಗೂ ಯೋಗ್ಯ ದಿಶೆಯಲ್ಲಿರಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ರಿಜರ್ವ್ ಬ್ಯಾಂಕ್ ಸಾಲ ನಿಯಂತ್ರಣ ಕ್ರಮಗಳಾದ ಬ್ಯಾಂಕ್‌ ದರ, ಮುಕ್ತ ಮಾರುಕಟ್ಟೆಯ ವ್ಯವಹಾರ, ಮೀಸಲು ಹಣದ ಅನುಪಾತದಲ್ಲಿ ಬದಲಾವಣೆ ಹಾಗೂ ಆಯ್ಕೆಯ ಪತ್ತಿನ ವಿಧಾನ ಮುಂತಾದವುಗಳನ್ನು ಅನುಸರಿಸುತ್ತದೆ. ಹಣದ ಪೂರೈಕೆ ಹಾಗೂ ಸಾಲಗಳನ್ನು ನಿಯಂತ್ರಿಸುವ ಮೂಲಕ ರಿಜರ್ವ್ ಬ್ಯಾಂಕ್ ಬೆಲೆ, ಬಡ್ಡಿದರ ಮುಂತಾದ ಆರ್ಥಿಕ ಚಲಕಗಳನ್ನು ನಿಯಂತ್ರಿಸುತ್ತದೆ.

ಗುಣಾತ್ಮಕ ಅಥವಾ ಆಯ್ಕೆಯ ವಿಧಾನಗಳು ಪರೋಕ್ಷವಾಗಿ ಹಾಗೂ ವಿವೇಚನಾಯುತವಾಗಿ ಹಣದ ಪೂರೈಕೆಯ ಮೇಲೆ ಪರಿಣಾಮ ಬೀರುತ್ತವೆ. ಈ ವಿಧಾನಗಳು ಹಣದ ಪೂರೈಕೆಯು ಅಪೇಕ್ಷಿತ ಚಟುವಟಿಕೆಗಳಿಗೆ ಸಾಗುವಂತೆ ಮಾಡುವುದಲ್ಲದೆ ಅನಪೇಕ್ಷಿತ ಚಟುವಟಿಕೆಗಳಿಗೆ ಹಣ ಹರಿದು ಹೋಗುವುದನ್ನು ತಡೆಯುತ್ತದೆ.

ಉದಾಹರಣೆಗೆ – ಕೃಷಿ ಚಟುವಟಿಕೆಗಳಿಗೆ ಕಡಿಮೆ ಬಡ್ಡಿ ದರದ ಸಾಲ ಪೂರೈಸುವ ಮೂಲಕ ಅದರ ಬೆಳವಣಿಗೆ ಯನ್ನು ಉತ್ತೇಜಿಸಬಹುದಾಗಿದೆ. ಇತರ ವಲಯಗಳ ಸಾಲ ಗಳ ಮೇಲೆ ಮೊದಲಿನ ಬಡ್ಡಿ ದರವನ್ನು ಮುಂದುವರಿಸ ಬಹುದಾಗಿದೆ.

3. ಅನಾಣ್ಯೀಕರಣ ಅಥವಾ ಹಣದ ಅಮಾನ್ಯೀಕರಣ(ನೋಟು ರದ್ಧತಿ)ದ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

2016 ರ ನವಂಬರ್‌ನಲ್ಲಿ ನಮ್ಮ ದೇಶದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು 500/-ರೂ ಮೌಲ್ಯದ 1000/-ರೂ ಮೌಲ್ಯದ ನೋಟುಗಳನ್ನು ತಕ್ಷಣದಿಂದಲೇ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದರು. ಹಾಗೂ ಡಿಸಂಬರ್ 31ರೊಳಗೆ ತಮ್ಮ ಬಳಿ ಇದ್ದ ಹಣವನ್ನು ಬ್ಯಾಂಕಿನಲ್ಲಿ ಹೊಸ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಆದೇಶ ನೀಡಿದರು.

ಆದರೆ ಸಾಮಾನ್ಯ ಜನರಿಗೆ ಇದರಿಂದ ಸಾಕಷ್ಟು ತೊಂದರೆಯಾಯಿತು. ತಮ್ಮ ಖಾತೆ ಇದ್ದ ಬ್ಯಾಂಕಿನಲ್ಲಿ ಮಾತ್ರ ಹಣ ವಿನಿಮಯ ಮಾಡಿಕೊಳ್ಳಬೇಕಿತ್ತು. ಗಳಲ್ಲಿಯೂ ಹಣ ಸಿಗುತ್ತಿರಲಿಲ್ಲ, ಉದ್ದನೇಯ ಕ್ಯೂ, ಅದು ಕೊಡುತ್ತಿದದ್ದು 2000/ – ರೂಗಳ ನೋಟು, ಚಿಲ್ಲರೆ ವ್ಯಾಪಾರಿಗಳಿಗೆ, ಗೃಹಸ್ಥರಿಗೆ, ಆಟೋದಲ್ಲಿ ಓಡಾಡುವವರಿಗೆ, ಹೂ, ಹಾಲು, ಮೊಸರು, ಹಣ್ಣು – ತರಕಾರಿ ಕೊಳ್ಳುವವರು, ಮಾರುವವರಿಗೆ, ಎಲ್ಲರಿಗೂ ಆದ ತೊಂದರೆಯನ್ನು ವಿವರಿಸಲು ಸಾಧ್ಯವೇ ಇಲ್ಲ. ಹಣವಂತರನ್ನು ಬಗ್ಗು ಬಡಿಯಲು ಮಾಡಿದ ಪ್ರಯತ್ನದ ಉದ್ದೇಶ ನಿಜಕ್ಕೂ ಶ್ಲಾಘನೀಯವಾದರೂ, ಕೂಲಿಗಾರರು, ನೌಕರರು, ಗೃಹಿಣಿಯರು, ವೃದ್ಧರು, ಪಿಂಚಣಿದಾರರಿಗೆ ಮಾತ್ರ ಆದ ತೊಂದರೆ ಹೇಳಲು ಸಾಧ್ಯವೇ ಇಲ್ಲ. ಸದ್ಯಕ್ಕೆ ಪರಿಸ್ಥಿತಿ ಸುಧಾರಿಸಿದೆ, 500ರ ಹೊಸ ನೋಟು 100 ರೂ. ರ ಹೊಸನೋಟುಗಳು 200/-ರೂ ರ ನೋಟುಗಳ ಚಲಾವಣೆ ನಡೆಯುತ್ತಿದೆ. ಹೊಸದಾಗಿ ಬಂದ 2000/-ರೂ ನೋಟುಗಳು ಕೂಡ ಕಣ್ಮರೆಯಾಗುತ್ತಿದೆ.

ಅಭ್ಯಾಸದ ಪ್ರಶ್ನೆಗಳು

2nd Puc Economics Chapter 9 Notes in Kannada

1. ವಸ್ತು ವಿನಿಮಯ ಪದ್ಧತಿ ಎಂದರೇನು? ಅದರ ದೋಷಗಳಾವುವು ?

ಹಣವನ್ನು ಮಾಧ್ಯಮವಾಗಿ ಬಳಸದೇ ನಡೆಯುವ ಸರಕುಗಳ ವಿನಿಮಯವನ್ನು ವಸ್ತು ವಿನಿಮಯ ಪದ್ಧತಿ ಎಂದು ಕರೆಯುವರು.

ವಸ್ತು ವಿನಿಮಯವು ಹಲವಾರು ದೋಷಗಳನ್ನು ಹೊಂದಿದ್ದವು, ಅವುಗಳೆಂದರೆ –

 1. ವಸ್ತು ವಿನಿಮಯ ಪದ್ಧತಿಯಲ್ಲಿ ಒಟ್ಟು ವ್ಯಕ್ತಿಯು ಸಂಪತ್ತನ್ನು ಇಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು.
 2. ವಸ್ತುಗಳು ಸುಲಭವಾಗಿ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ವಸ್ತುಗಳನ್ನು ವಿನಿಮಯ ಮಾಡುವುದು ಬಹಳ ಕಷ್ಟದಾಯಕವಾಗುತ್ತಿತ್ತು.
 3. ಬೇಕಾದ ವಸ್ತುಗಳನ್ನು ಪಡೆಯಲು ಅಥವಾ ಕೊಡಲು ಜನರನ್ನು ಹುಡುಕಲು ಸಾಕಷ್ಟು ಸಮಯ ಬೇಕಾಗುತ್ತಿತ್ತು.
 4. ಜನರನ್ನು ಹುಡುಕಲು ಸಾಕಷ್ಟು ಸಂಪನ್ಮೂಲವನ್ನು ವ್ಯಯಿಸ ಬೇಕಾಗುತ್ತಿತ್ತು.
 5. ಕೆಲವು ವಸ್ತುಗಳು ಧೀರ್ಘಕಾಲ ಸಂಗ್ರಹಿಸಿಡಲು ಸ್ಥಳದ ಅಭಾವ ಹಾಗೂ ಸುರಕ್ಷತೆ ಸಂಕಟ ಎದುರಾಗುತ್ತಿತ್ತು.
 6. ವಸ್ತುಗಳನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಿರಲಿಲ್ಲ.
 7. ಕೆಲವು ವಸ್ತುಗಳ ವಿನಿಮಯದಲ್ಲಿ ಅದರ ಮೌಲ್ಯಗಳು ಬದಲಾಗುವುದರಿಂದ ಕೊಳ್ಳುವ ಕೊಡುವ ಜನರಲ್ಲಿ ಅಸಮಧಾನ ಉಂಟಾಗುವುದು, ಅವಿಶ್ವಾಸಕ್ಕೆ ಕಾರಣವಾಗುವುದು.

ಉದಾಹರಣೆಗೆ – ತರಕಾರಿಗೆ ಅಂದರೆ, ಕೇಜಿಯಷ್ಟು ತೂಗುವ ಟಮೋಟೋ ಗಾಗಿ 1 ಕೇಜಿ ಅಕ್ಕಿಯನ್ನು ವಿನಿಮಯ ಮಾಡಿಕೊಳ್ಳಲು ಯಾರು ಸಿದ್ಧರಿರುವುದಿಲ್ಲ.

 1. ವಸ್ತುಗಳಿಗೆ ನಿಖರ ಬೆಲೆ ತಿಳಿಯದಿದ್ದರೂ ಆ ವಸ್ತುಗಳ ಉಪಯುಕ್ತತೆಯ ಮೇಲೆ ಆಧರಿಸಿದ ವಿನಿಮಯಕ್ಕೆ ಜನರು ಒಪ್ಪುವುದಿಲ್ಲ. ಈ ತೆರನಾದ ಹಲವಾರು ದೋಷಗಳು ವಸ್ತು ವಿನಿಮಯದಲ್ಲಿವೆ.

2. ಹಣದ ಪ್ರಮುಖ ಕಾರ್ಯಗಳಾವುವು ? ಹಣವು ಹೇಗೆ ವಸ್ತು ವಿನಿಯಮ ಪದ್ದತಿಯ ದೋಷಗಳನ್ನು ಪರಿಹರಿಸಿವೆ.

 • ಹಣವು ವಿನಿಮಯದ ಪ್ರಮುಖ ಮಾಧ್ಯಮವಾಗಿದೆ.
 • ವಸ್ತು ವಿನಿಮಯದಲ್ಲಿ ಹಣವು ಮಧ್ಯವರ್ತಿಯಾಗಿರುತ್ತದೆ.
 • ವ್ಯಕ್ತಿಗಳು ಯಾವುದೇ ಉತ್ಪನ್ನವಾದರೂ ಹಣಕ್ಕೆ ಮಾರಬಹುದು, ಹಾಗೂ ಹಣವಿದ್ದ ವ್ಯಕ್ತಿಯು ತನಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಕೊಳ್ಳಬಹುದು.
 • ಹಣವು ಲೆಕ್ಕದ ಅತ್ಯಂತ ಅನುಕೂಲಕರ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ.
 • ಎಲ್ಲ ಸರಕು ಮತ್ತು ಸೇವೆಗಳ ಮೌಲ್ಯವನ್ನು ನಿಗದಿ ಪಡಿಸಬಹುದಾಗಿದೆ.
 • ಹಣವನ್ನು ಸುರಕ್ಷಿತವಾಗಿ ಯಾವುದೇ ವ್ಯಕ್ತಿ ಬೇಕಾದರೂ ಇಟ್ಟು ಕೊಳ್ಳಬಹುದು, ಇದಕ್ಕೆ ಬ್ಯಾಂಕ್ ಸಹಕಾರಿಯಾಗುತ್ತದೆ. ಹಣವನ್ನು ವ್ಯವಹಾರದ ಉದ್ದೇಶದಿಂದಲೇ ಇಟ್ಟು ಕೊಳ್ಳುವರು.
 • ಆಸ್ತಿ ಮೌಲ್ಯಗಳನ್ನು ಅಂದರೆ ಭೂಮಿ, ಬಂಗಾರ, ಗೃಹಗಳು, ಬಾಂಡುಗಳು ಇತರೆ ವಸ್ತು ವಸ್ತುಗಳೊಂದಿಗೆ ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೆ ಹಣ ಈ ದೋಷವನ್ನು ನಿವಾರಿಸುತ್ತದೆ, ಹಣದೊಂದಿಗೆ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು.
 • ಒಟ್ಟಾರೆ ವಿನಿಮಯವನ್ನು ಸುಗಮವಾಗಿಸುವುದೇ ಹಣದ ಪ್ರಧಾನ ಪ್ರಮುಖ ಕಾರ್ಯವಾಗಿದೆ.

3. ಹಣದ ವ್ಯವಹಾರದ ಬೇಡಿಕೆ ಎಂದರೇನು? ಇದು ಹೇಗೆ ನಿರ್ದಿಷ್ಟ ಕಾಲಾವಧಿಯಲ್ಲಿ ವ್ಯವಹಾರದ ಮೌಲ್ಯಕ್ಕೆ ಸಂಬಂದಿಸಿವೆ?

ಹಣವು ಸ್ಥಿರ ಮೌಲ್ಯವನ್ನು ಹೊಂದಿರುವುದರಿಂದ ಅದನ್ನು ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವುದರಿಂದ, ಹಾಗೂ ಅದನ್ನು ನಗದು ರೂಪದಲ್ಲಿ ಇಟ್ಟುಕೊಳ್ಳಬಹುದಾದ್ದರಿಂದ ಸುಲಭವಾಗಿ ವ್ಯವಹಾರದ ಉದ್ದೇಶಗಳನ್ನು ಈಡೇರಿಸ ಬಹುದ್ದಾದ್ದರಿಂದ ಇದನ್ನು ಹಣದ ವ್ಯವಹಾರದ ಬೇಡಿಕೆ ಎನ್ನುವರು.

ಹಣದ ವ್ಯವಹಾರದ ಬೇಡಿಕೆಯಲ್ಲಿ ನಿರ್ದಿಷ್ಟ ಕಾಲಾವಧಿಯಲ್ಲಿ ವ್ಯವಹಾರದ ಮೌಲ್ಯಕ್ಕೆ ಸಂಬಂಧಿಸಿವೆ. ಈ ಕಾರಣದಿಂದ ಎಲ್ಲಾ ಆಸ್ತಿಗಳಿಗಿಂತ ಹಣವು ಅತ್ಯಂತ ಹೆಚ್ಚು ದ್ರವ್ಯತೆಯನ್ನೂ ಹೊಂದಿದ್ದು ಅದನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ, ಆದ್ದರಿಂದ ಇದನ್ನು ಇತರೆ ಸರಕುಗಳಿಗೆ ಸುಲಭವಾಗಿ ವಿನಿಮಯ ಮಾಡಬಹುದಾಗಿದೆ, ಮತ್ತೊಂದು ಕಡೆ ಇದು ಸದಾವಕಾಶ ವೆಚ್ಚವನ್ನೂ ಹೊಂದಿದೆ. ಹಣವನ್ನು ನಗದು ರೂಪದಲ್ಲಿ ಇಟ್ಟು ಕೊಳ್ಳುವ ಬದಲು ಬ್ಯಾಂಕಿನಲ್ಲಿ ಠೇವಣಿಯಾಗಿ, ಚಾಲ್ತಿ ಖಾತೆಯಲ್ಲಿ ಇಟ್ಟುಕೊಳ್ಳಬಹುದು.

ಹಣವನ್ನು ವ್ಯವಹಾರದ ಉದ್ದೇಶಕ್ಕಾಗಿಯೇ ಇಟ್ಟಕೊಳ್ಳುವುದರಿಂದ ಸರಕು ಮತ್ತು ಸೇವೆಗಳನ್ನು ಕೊಂಡು ಕೊಳ್ಳಲು ಅಥವಾ ವ್ಯವಹರಿಸಲು ಮಧ್ಯವರ್ತಿಯಾಗಿರುತ್ತದೆ, ಈ ಮಧ್ಯವರ್ತಿ ಕಾರ್ಯವನ್ನು ಬ್ಯಾಂಕುಗಳು ನಿರ್ವಹಿಸುತ್ತವೆ (ದೊಡ್ಡ-ದೊಡ್ಡ ವ್ಯವಹಾರದ ಸಂದರ್ಭಗಳಲ್ಲಿ).

ಉದಾ : ಹೆಚ್ಚು ಮೌಲ್ಯದ ವಸ್ತುಗಳನ್ನು ಕೊಂಡಾಗ, ಸ್ಥಿರಾಸ್ಥಿಗಳನ್ನು ಕೊಳ್ಳಬಹುದಾದ (ಭೂಮಿ, ಬಂಗಾರ, ಮನೆ ಮುಂತಾದವುಗಳಿಗೆ), ಬ್ಯಾಂಕ್ ಚೆಕ್‌ ನೀಡುವುದರ ಮೂಲಕ, DD ಕೊಡುವುದರ ಮೂಲಕ ಸುಲಭವಾಗಿ ವ್ಯವಹರಿಸಬಹುದಾಗಿದೆ.

ವ್ಯವಹಾರವು ಎರಡು ಉದ್ದೇಶಗಳನ್ನು ಹೊಂದಿರುತ್ತದೆ.

1) ಚಿಲ್ಲರೆ ವ್ಯಾಪಾರದ ಉದ್ದೇಶ – ಇದು ಹಣದ ಬೇಡಿಕೆಯ ನಗದು ರೂಪದಲ್ಲಿ ನಡೆಯುವುದು.

2) ಸಟ್ಟಾ ವ್ಯಾಪಾರ – ಇದು ನಗದು, ಬಾಂಡು, ಚೆಕ್ ಮೂಲಕ ನಡೆಯುವುದು.

ಹಣದ ವ್ಯವಹಾರದ ಬೇಡಿಕೆಯು ಅರ್ಥವ್ಯವಸ್ಥೆಯ ನೈಜ ಆದಾಯದೊಂದಿಗೆ ಮತ್ತು ಸರಾಸರಿ ಬೆಲೆಯ ಮಟ್ಟದೊಂದಿಗೆ ಧನಾತ್ಮಕ ಸಂಬಂಧವನ್ನು ಹೊಂದಿದೆ.

4. ಎರಡು ವರ್ಷಗಳ ಅಂತ್ಯದಲ್ಲಿ ಯಾವುದೇ ಮಧ್ಯಂತರ ಪ್ರತಿಫಲವಿಲ್ಲದೆ 500 ರೂ ರ ಬಾಂಡು ವಚನವನ್ನು ನೀಡಿದ ಎಂದು ಊಹಿಸಿರಿ, ವಾರ್ಷಿಕ ಬಡ್ಡಿ ದರ 5% ರಷ್ಟು ಇದ್ದರೆ ಬಾಂಡಿನ ಬೆಲೆ ಎಷ್ಟಾಗುತ್ತದೆ ?

2nd Puc Economics Chapter 9 Notes in Kannada
2nd Puc Economics Chapter 9 Notes in Kannada

.

5. ಏಕೆ ಸಟ್ಟಾ ವ್ಯಾಪಾರದ ಹಣದ ಬೇಡಿಕೆ ಮತ್ತು ಬಡ್ಡಿಯ ದರ ನಡುವೆ ವಿಲೋಮದ ಸಂಬಂಧವಿದೆ ?

ಬ್ಯಾಂಕಿನ ಬೆಲೆಯು ಮಾರುಕಟ್ಟೆಯ ಬಡ್ಡಿಯ ದರವನ್ನು ವಿಲೋಮವಾಗಿ ಅನುಸರಿಸುತ್ತದೆ. ಉದಾಹರಣೆಗೆ ಮಾರುಕಟ್ಟೆ ಬಡ್ಡಿಯದರ ಶೇ 8 ಸ್ಥಿರವೆಂದು ಭಾವಿಸಿದಾಗ ಪ್ರಸಕ್ತದ 5 ಕ್ಕೆ ಇಳಿದಾಗ ಕಡಿಮೆಯಾಗುತ್ತದೆ ಎಂಬ ಭಾವನೆ ಬರುತ್ತದೆ. ಬಡ್ಡಿಯ ದರ ಹೆಚ್ಚಾದರೆ ಬಾಂಡಿನ ದರ ಕಡಿಮೆಯಾಗುತ್ತದೆ. ಹೀಗೆ ಬಾಂಡಿನ ಬೆಲೆಯಲ್ಲಿ ಆಗುವ ಇಳಿಕೆ ನಷ್ಟವೆಂದೆ ಹೇಳಬಹುದು. ಬಾಂಡಿನ ಬೆಲೆಗಳು ಕಡಿಮೆ ಆಗುವುದರಿಂದ ಆಗುವ ಅಂತಹ ನಷ್ಟವನ್ನು ಬಾಂಡುಧಾರಕನಿಗೆ ಆಗುವ ಬಂಡವಾಳ ನಷ್ಟವೆಂದು ಕರೆಯುವರು, ಅಂತಹ ಸಮಯದಲ್ಲಿ ಬಾಂಡುಗಳನ್ನು ಹೊಂದಿರುವವರು ಬಂಡವಾಳ ಗಳಿಕೆಯನ್ನು ನಿರೀಕ್ಷಿಸುತ್ತಾರೆ. ಇದರಿಂದಾಗಿ ಜನರು ಹಣವನ್ನು ಬಾಂಡುಗಳಿಗೆ ಪರಿವರ್ತಿಸುತ್ತಾರೆ,

ಹೀಗೆ ಸಟ್ಟಾ ವ್ಯಾಪಾರದ ಉದ್ದೇಶದ ಹಣದ ಬೇಡಿಕೆ ಕಡಿಮೆಯಾಗುತ್ತದೆ. ಯಾವಾಗ ಬಡ್ಡಿ ದರ ಕಡಿಮೆಯಾಗುತ್ತದೆಯೇ ಹೆಚ್ಚು ಹೆಚ್ಚು ಜನರು ಅದು ಭವಿಷ್ಯದಲ್ಲಿ ಹೆಚ್ಚಾಗುವ ಹಾಗೂ ಬಂಡವಾಳ ನಷ್ಟದ ನಿರೀಕ್ಷೆಯಲ್ಲಿರುತ್ತಾರೆ. ಆಗ ಅವರು ತಮ್ಮ ಬಾಂಡುಗಳನ್ನು ಹಣಕ್ಕೆ ಪರಿವರ್ತಿಸುವುದು ಸಟ್ಟಾ ವ್ಯಾಪಾರದ ಉದ್ದೇಶದ ಅಧಿಕ ಹಣದ ಬೇಡಿಕೆಗೆ ಕಾರಣವಾಗುತ್ತದೆ. ಹೀಗೆ ಸಟ್ಟಾ ವ್ಯಾಪಾರದ ಉದ್ದೇಶದ ಹಣದ ಬೇಡಿಕೆಯು ಬಡ್ಡಿಯ ದರದೊರಿಗೆ ನಿಲೋಮ ಸಂಬಂಧವನ್ನು ಹೊಂದಿದೆ.

6. ದ್ರವ್ಯತಾ ಬೆಲೆ ಎಂದರೇನು?

ಅರ್ಥವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಸಂಪತ್ತನ್ನು ಹಣದ ಶಿಲ್ಕಿನ ರೂಪದಲ್ಲಿ ಇಟ್ಟುಕೊಳ್ಳುವವರು ಅರ್ಥವ್ಯವಸ್ಥೆಯೊಳಗೆ ಹೆಚ್ಚುವರಿ ಹಣವನ್ನು ಸೇರಿಸಿದರೆ ಅದು ಬಾಂಡಿನ ಬೇಡಿಕೆಯನ್ನು ಹೆಚ್ಚಿಸದೆ ತಳ ಮಟ್ಟದಲ್ಲಿರುವ ಬಡ್ಡಿ ದರ – ಗಿಂತ ಕಡಿಮೆ ಮಾಡದೆ ಹಣದ ಶಿಲ್ಪಿಗಾಗಿ ಇರುವ ಜನರ ಇಚ್ಚೆಯನ್ನು ಪೂರೈಸುವ ಸನ್ನಿವೇಶವನ್ನು “ದ್ರವ್ಯತೆಯ ಬೆಲೆ” ಎಂದು ಕರೆಯುವರು.

7. ಭಾರತದಲ್ಲಿ ಹಣದ ಪೂರೈಕೆಯ ಪರ್ಯಾಯ ವ್ಯಾಖ್ಯೆಗಳು ಯಾವುವು?

ಭಾರತದಲ್ಲಿ ಹಣದ ಪೂರೈಕೆಯ ಪರ್ಯಾಯ ವ್ಯಾಖ್ಯೆಗಳೆಂದರೆ –

ಹಣದ ಪೂರೈಕೆಯ ಒಂದು ದಾಸ್ತಾನು ಚಲಕವಾಗಿದೆ.

ಒಂದು ನಿರ್ದಿಷ್ಟ ಸಮಯದಲ್ಲಿ ಸಾರ್ವಜನಿಕ ನಡುವೆ ಚಲಾವಣೆಯಾಗುವ ಹಣದ ಒಟ್ಟು ದಾಸ್ತಾನನ್ನು ಹಣದ ಪೂರೈಕೆ ಎಂದು ಕರೆಯಲಾಗುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್‌ ಹಣದ ಪೂರೈಕೆಯ ಅಂಕಿ ಅಂಶಗಳನ್ನು ನಾಲ್ಕು ಪರ್ಯಾಯ ಮಾಪನಗಳನ್ನು ಪ್ರಕಟಿಸುತ್ತದೆ. ಅವುಗಳೆಂದರೆ – M1, M2, M3, M4, ಇವುಗಳನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸಬಹುದು.

M1 = CU+ DD

M2 = M1 + ಅಂಚೆ ಕಛೇರಿ ಉಳಿತಾಯ ಬ್ಯಾಂಕಿನಲ್ಲಿರುವ ಉಳಿತಾಯ ಠೇವಣಿಗಳು,

M3 = MI + ವಾಣಿಜ್ಯ ಬ್ಯಾಂಕುಗಳಲ್ಲಿನ ನಿವ್ವಳ ಅವಧಿ ಠೇವಣಿಗಳು,

M4 + M3 + ಅಂಚೆ ಕಛೇರಿಯಲ್ಲಿರುವ ಒಟ್ಟು ಠೇವಣಿಗಳು (ರಾಷ್ಟ್ರೀಯ ಉಳಿತಾಯ ತತ್ವಗಳನ್ನು ಹೊರತು ಪಡಿಸಿ)

ಇಲ್ಲಿ U ಎಂದರೆ ಸಾರ್ವಜನಿಕರು ಹೊಂದಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು, DD ಎಂದರೆ ವಾಣಿಜ್ಯ ಬ್ಯಾಂಕಿನಲ್ಲಿರುವ ಬೇಡಿಕೆ, ಠೇವಣಿಗಳು, ಹಣದ ಪೂರೈಕೆಗೆ ಸೇರಿಸಲಾಗುವ, ಬ್ಯಾಂಕುಗಳಲ್ಲಿರುವ ಸಾರ್ವಜನಿಕರ ಠೇವಣಿಗಳನ್ನು ಮಾತ್ರ “ನಿವ್ವಳ” ಎಂಬ ಪದವು ಸೂಚಿಸುತ್ತದೆ.

ಆದರೆ ಒಂದು ಬ್ಯಾಂಕು ಇತರ ವಾಣಿಜ್ಯ ಬ್ಯಾಂಕುಗಳಲ್ಲಿ ಹೊಂದಿರುವ ಅಂತರ ಬ್ಯಾಂಕು ಠೇವಣಿಗಳನ್ನು ಹಣದ ಪೂರೈಕೆಯ ಭಾಗವೆಂದು ಪರಿಗಣಿಸಲಾಗುವುದಿಲ್ಲ.

8. ಶಾಸನ ಬದ್ಧ ಹಣ ಎಂದರೇನು? ಫಿಯೆಟ್ ಹಣ ಎಂದರೇನು?

ಯಾವುದೇ ವಿಧದ ವ್ಯವಹಾರವನ್ನು ಚುಕ್ತಾ ಮಾಡಲು ಹಣವನ್ನು ಬಳಸಿದಾಗ ದೇಶದ ಪ್ರಜೆಗಳು ಯಾರೂ ಕೂಡ ಅದನ್ನು ತಿರಸ್ಕರಿಸಲು ಸಾಧ್ಯವಾಗದ ಕಾರಣ ಅವುಗಳನ್ನು ಶಾಸನಬದ್ಧ ಹಣ” ಎಂದು ಕರೆಯುತ್ತಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರವರ ವಾಗ್ದಾನವು ಪ್ರತಿ ಕರೆನ್ಸಿ ನೋಟಿನ ಮೇಲಿರುತ್ತದೆ, ಆದ್ದರಿಂದ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು “ಫಿಯೆಟ್ ಹಣ” ಎಂದು ಕರೆಯುತ್ತಾರೆ.

9. ಅಧಿಕ ಶಕ್ತಿಯ ಹಣ ಎಂದರೇನು?

ದೇಶದ ಹಣಕಾಸು ಪ್ರಾಧಿಕಾರ RBI ನ ಒಟ್ಟು ಹೊಣೆಗಾರಿಕೆಯನ್ನು ಹಣಕಾಸಿನ ನೆಲೆ ಅಥವಾ ಅಧಿಕ ಶಕ್ತಿಯ ಹಣ ಎಂದು ಕರೆಯುತ್ತಾರೆ. ಇದು ಸಾರ್ವಜನಿಕರ ಬಳಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿನ ನಗದು ಮತ್ತು ಠೇವಣಿಗಳಾಗಿರುತ್ತವೆ.

10. ವಾಣಿಜ್ಯ ಬ್ಯಾಂಕಿನ ಕಾರ್ಯಗಳನ್ನು ವಿವರಿಸಿ.

ವಾಣಿಜ್ಯ ಬ್ಯಾಂಕಿನ ಪ್ರಮುಖ ಕಾರ್ಯಗಳೆಂದರೆ –

ವಾಣಿಜ್ಯ ಬ್ಯಾಂಕುಗಳು ಸಾರ್ವಜನಿಕರ ಠೇವಣಿಗಳನ್ನು ಸ್ವೀಕರಿಸಿ ಆ ಹಣದಲ್ಲಿ ಬಡ್ಡಿ ಗಳಿಸುವಂತಹ ಬಂಡವಾಳ ಯೊಜನೆಗಳಿಗೆ ಸಾಲ ನೀಡುತ್ತದೆ. ಸಾಲದಿಂದ ದೊರೆಯುವ ಬಡ್ಡಿಯನ್ನು ಬ್ಯಾಂಕುಗಳು ವಿನಿಯೋಗಿಸಿಕೊಳ್ಳುತ್ತವೆ.

ಬ್ಯಾಂಕುಗಳು ಠೇವಣಿಗಳನ್ನು ಸಂಗ್ರಹಿಸುವರು, ಇದರಲ್ಲಿ ಎರಡು ವಿಧಗಳು –

1) ಅವಧಿ ಠೇವಣಿಗಳು

2) ನಿಶ್ಚಿತ ಠೇವಣಿಗಳು

 • ವಾಣಿಜ್ಯ ಬ್ಯಾಂಕುಗಳು ಚಾಲ್ತಿ ಮತ್ತು ಉಳಿತಾಯ ಖಾತೆಯ ಠೇವಣಿಗಳನ್ನು ಹೊಂದಿರುತ್ತವೆ.
 • ಠೇವಣಿದಾರರಿಗೆ ವಾಣಿಜ್ಯ ಬ್ಯಾಂಕುಗಳು ಎರಡು ರೀತಿಯ ಸಾಲಗಳನ್ನು ಒದಗಿಸುತ್ತವೆ.

ಅವುಗಳೆಂದರೆ –

1) ‘ಅಲ್ಪಾವಧಿ ಸಾಲಗಳು

2) ಧೀರ್ಘಾವಧಿ ಸಾಲಗಳು

ವಾಣಿಜ್ಯ ಬ್ಯಾಂಕುಗಳು ಸಾರ್ವಜನಿಕರಿಗೆ ಬೆಳ್ಳಿ, ಬಂಗಾರ, ಬಾಂಡುಗಳನ್ನು ತಮ್ಮಲ್ಲಿರಿಸಿ ಭದ್ರತೆಯನ್ನು ಒದಗಿಸುತ್ತವೆ (Lockers), ಠೇವಣಿದಾರರಿಗೆ ಕೆಲವೊಮ್ಮೆ ಮುಂಗಡ ಸಾಲ ಸೌಲಭ್ಯವನ್ನು ಒದಗಿಸುತ್ತವೆ

ವಾಣಿಜ್ಯ ಬ್ಯಾಂಕುಗಳು ಸ್ಥಿರಾಸ್ತಿಗಳಾದ ಭೂಮಿ, ಮನೆ, ಬಂಗಾರಗಳ ಆಧಾರ ಮೇಲೆ ಅಡಮಾನವಾಗಿಟ್ಟುಕೊಂಡು(ಒತ್ತೆಯಾಗಿಟ್ಟುಕೊಂಡು) ಸಾಲವನ್ನು ಒದಗಿಸುತ್ತವೆ.

11. ಹಣದ ಗುಣಕ ಎಂದರೇನು? ಹೇಗೆ ಅದರ ಮೌಲ್ಯವನ್ನೂ ನೀವು ನಿರ್ಧರಿಸುವಿರಿ? ಯಾವ ಅನುಪಾತಗಳು ಹಣದ ಗುಣಕದ ಮೌಲ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಒಂದು ಅರ್ಥ ವ್ಯವಸ್ಥೆಯಲ್ಲಿ ಅಧಿಕ ಶಕ್ತಿಯ ಹಣದ ಸಂಗ್ರಹಕ್ಕೆ ಇರುವ ಹಣದ ಸಂಗ್ರಹದ ಅನುಪಾತವನ್ನೂ “ಹಣದ ಗುಣಕ” ಎಂದು ಕರೆಯುವರು.

ಹಣದ ಗುಣವನ್ನು M:H ಅನುಪಾತದಲ್ಲಿ ನಿರ್ಧರಿಸುವರು.

M ಅಂದರೆ M/H ಇದು 1 ಕ್ಕಿಂತ ಹೆಚ್ಚಾಗಿರುತ್ತದೆ.

ಹಣದ ಗುಣಕವನ್ನು ಪಡೆಯಲು ಸರಳವಾದ ಮಾರ್ಗವೆಂದರೆ –

M=CU+Dd=(1+cdr)DD

a cdr = CU/DD = cdr = CU/ DD

ಇದನ್ನು ಸರಳವಾಗಿ ಅರ್ಥೈಸಲು RBI ನಲ್ಲಿರುವ ಸರಕಾರದ ಖಜಾನೆ ಠೇವಣಿ ಶೂನ್ಯವಾಗಿದೆ ಎಂದು ಊಹಿಸಿದಾಗ, ಅಧಿಕ ಶಕ್ತಿಯ ಹಣವು RBI ನಲ್ಲಿರುವ ಠೇವಣಿಗಳು ಮತ್ತು ಬ್ಯಾಂಕಿನಲ್ಲಿರುವ ನಗದನ್ನು ಒಳಗೊಂಡಂತೆ ಇರುವ ವಾಣಿಜ್ಯ ಬ್ಯಾಂಕಿನ ಮೀಸಲು ಹಾಗೂ ಸಾರ್ವಜನಿಕರು ಹೊಂದಿರುವ ಕರೆನ್ಸಿಯನ್ನು ಒಳಗೊಂಡಿರುತ್ತದೆ.

12. RBI ನ ಹಣಕಾಸು ನೀತಿಯ ಸಾಧನಗಳಾವುವು? ಹೇಗೆ RBI ಹಣದ ಪೂರೈಕೆಯಲ್ಲಿ ಬಹಿರ್ಜಾತ ಆಘಾತಗಳ ವಿರುದ್ಧ ಸ್ಥಿರತೆಯನ್ನೂ ತರುತ್ತದೆ ?

ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿರ್ಣಾಯಕ ಪಾತ್ರವನ್ನೂ ವಹಿಸುತ್ತದೆ, ಬಿಕ್ಕಟ್ಟಿನ ಸನ್ನಿವೇಶದಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಋಣ ಪರಿಹಾರ ಸಾಮರ್ಥ್ಯದ ಖಾತರಿ ನೀಡುವ ಸಲುವಾಗಿ ಜಮೀನುದಾರನಾಗಿ ಮತ್ತು ಸಾಲವನ್ನು ನೀಡಿ ಆಸರೆಯಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿಗತ ಖಾತೆ ದಾರರಿಗೆ ಅವರ ಬ್ಯಾಂಕುಗಳು ಹಣವನ್ನು ಮರಳಿ ಚಿಂತಿಸುವ ಅಗತ್ಯವಿಲ್ಲ ಎನ್ನುವ ಭರವಸೆಯನ್ನು ಈ ಖಾತರಿ ವ್ಯವಸ್ಥೆಯು ನೀಡುತ್ತದೆ. ಹಣಕಾಸು ಪ್ರಾಧಿಕಾರದ ಈ ಪಾತ್ರವನ್ನು ಅಂತಿಮ ಋಣದಾತ ಎಂದು ಕರೆಯುವರು.

RBI ವಾಣಿಜ್ಯ ಬ್ಯಾಂಕುಗಳ ಬ್ಯಾಂಕಾಗಿ ಕಾರ್ಯನಿರ್ವಹಿಸುವುದಲ್ಲದೆ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೂ ಕೂಡಾ ಬ್ಯಾಂಕಾಗಿ ಕಾರ್ಯನಿರ್ವಹಿಸುತ್ತದೆ. ಬಜೆಟ್ ಕೊರತೆಯ ಸಂದರ್ಭದಲ್ಲಿ ಸರಕಾರ ಕೆಲವೊಮ್ಮೆ ‘ಹಣವನ್ನು ಮುದ್ರಿಸುತ್ತದೆ’ ಎನ್ನುವ ಸಾಮಾನ್ಯ ಭಾವನೆ ಇದೆ. ಅಂದರೆ ಅದು ಗಳಿಸಿದ ತೆರಿಗೆ ಆದಾಯದಿಂದ ತನ್ನ ವೆಚ್ಚಗಳನ್ನು ಭರಿಸಲು ಶಕ್ತವಾಗದೇ ಇರುವ ಸ್ಥಿತಿ. ಉದಾಹರಣೆಗೆ – ಸರ್ಕಾರಿ ನೌಕರರಿಗೆ ವೇತನ ಪಾವತಿ, ಉತ್ಪಾದಕರಿಂದ ರಕ್ಷಣಾ ಸಾಮಾಗ್ರಿಗಳನ್ನು ಅವುಗಳ ಉತ್ಪಾದಕರಿಂದ ಖರೀದಿಸುವುದು ಇತ್ಯಾದಿ ಸಂದರ್ಭದಲ್ಲಿ ಕರೆನ್ಸಿಯನ್ನೂ ಚಲಾವಣೆ ತರಲು ಸರಕಾರಕ್ಕೆ ಶಾಸನಬದ್ಧ ಅಧಿಕಾರವಿಲ್ಲ. ಆದ್ದರಿಂದ ಅದು ಖಜಾನೆ ಹುಂಡಿಗಳನ್ನು ಸರಕಾರದ ಭದ್ರತೆಗಳನ್ನು RBI ಗೆ ಮಾರಿ ಸಾಲವನ್ನು ಪಡೆಯುತ್ತದೆ ಅದಕ್ಕೆ ಪ್ರತಿಯಾಗಿ RBI ಸರಕಾರಕ್ಕೆ ಕರೆನ್ಸಿಯನ್ನು ನೀಡುತ್ತದೆ. ಈ ಮಾದರಿಯಲ್ಲಿ ಸರಕಾರದಿಂದ ಬಜೆಟ್‌ ಕೊರತೆಗೆ ಹಣಕಾಸು ಒದಗಿಸುವುದನ್ನು ಕೇಂದ್ರ ಬ್ಯಾಂಕಿನ ಸಾಲದಿಂದ ಕೊರತೆಯ ಹಣಕಾಸು ಪಾವತಿ ಎಂದು ಕರೆಯುತ್ತಾರೆ.

RBI ನ ಅತ್ಯಂತ ದೊಡ್ಡ ಮಹತ್ವದ ಪಾತ್ರವೆಂದರೆ ಆರ್ಥಿಕತೆಯ ಹಣದ ಪೂರೈಕೆ ಮತ್ತು ಪತ್ತು ನಿರ್ಮಾಣದ ನಿಯಂತ್ರಕ್ಕಾಗಿ ಕಾರ್ಯ ನಿರ್ವಹಿಸುವುದಾಗಿದೆ. ಹಣಕಾಸು ನೀತಿಯನ್ನು ನಿರ್ವಹಿಸಲು RBI ಸ್ವತಂತ್ರವಾಗಿದೆ. ಹೂಡಿಕೆದಾರರಿಗೆ ಸಾಲವನ್ನು ನೀಡಲು ಉತ್ತೇಜಿಸುತ್ತದೆ. ಹಣಕಾಸು ನೀತಿಯ ನಿರ್ವಹಣೆಗೆ ಬಳಸುವ ಸಾಧನಗಳು ಈ ಕೆಳಗಿನಂತಿವೆ. ಅವುಗಳೆಂದರೆ –

 • ಮುಕ್ತ ಮಾರುಕಟ್ಟೆ ಕಾರ್ಯಚರಣೆ
 • ಬ್ಯಾಂಕ್‌ ದರದ ನೀತಿ
 • ಚಲ ಮೀಸಲು ಆಗತ್ಯತೆಗಳು

ಇತ್ಯಾದಿಯನ್ನು RBI ನಿಯಂತ್ರಿಸುತ್ತದೆ. ಆರ್ಥಿಕತೆಯ ಅಧಿಕ ಶಕ್ತಿಯ ಹಣದ ಸಂಗ್ರಹ ಮತ್ತು ಒಟ್ಟು ಹಣದ ಪೂರೈಕೆ ಬದಲಾದಂತೆ ನೋಡಿಕೊಳ್ಳುತ್ತದೆ. ಈ ರೀತಿ ಅದು ಬಾಹ್ಯ ಪ್ರತಿ ಕೂಲ ಆಘಾತಗಳಿಂದ ಅರ್ಥವ್ಯವಸ್ಥೆಯಲ್ಲಿ ಸ್ಥಿರತೆಯನ್ನು ತರುತ್ತದೆ.

13. ಅರ್ಥ ವ್ಯವಸ್ಥೆಯ ವಾಣಿಜ್ಯ ಬ್ಯಾಂಕು ‘ಹಣದ ನಿರ್ಮಾತೃ’ ಎನ್ನುವುದನ್ನು ಪರಿಗಣಿಸಬಹುದು.

ಹೌದು, ಅರ್ಥವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕು ‘ಹಣದ ನಿರ್ಮಾತೃ’ ಎನ್ನುವುದನ್ನು ಪರಿಗಣಿಸಬಹುದು.

14. ‘ಅಂತಿಮ ಋಣದಾತನಾಗಿ’ RBI ನ ಪಾತ್ರವನ್ನು ಏನೆಂದು ಅರ್ಥೈಸುವಿರಿ?

RBI ನಿರ್ಣಾಯಕ ಪಾತ್ರವನ್ನು ವಹಿಸುವುದರ ಜೊತೆಗೆ ಬಿಕ್ಕಟ್ಟಿನ ಸನ್ನಿವೇಶದಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಋಣ ಪರಿಹಾರ ಸಾಮರ್ಥ್ಯದ ಖಾತರಿ ನೀಡುವ ಸಲುವಾಗಿ ಜಮೀನುದಾರನಾಗಿ ಮತ್ತು ಸಾಲವನ್ನು ನೀಡಿ ಆಸರೆ ಯಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿಗತ ಖಾತೆದಾರರಿಗೆ ಅವರ ಬ್ಯಾಂಕುಗಳು ಹಣವನ್ನು ಮರಳಿ ಪಾವತಿಸುತ್ತದೆ ಮತ್ತು ಆ ರೀತಿಯಲ್ಲಿ ಬ್ಯಾಂಕ್ ರನ್ ನಂತಹ ಸ್ಥಿತಿಯನ್ನು ತಪ್ಪಿಸುತ್ತಾ, ಚಿಂತಿಸುವ ಅಗತ್ಯವಿಲ್ಲಾ ಎನ್ನುವ ಭರವಸೆಯನ್ನು ಈ ಖಾತರಿ ವ್ಯವಸ್ಥೆಯು ನೀಡುತ್ತದೆ. ಹಣಕಾಸು ಪ್ರಾಧಿಕಾರದ ಈ ಪಾತ್ರವನ್ನು ಅರ್ಥವ್ಯವಸ್ಥೆಯಲ್ಲಿ RBI ನ “ಅಂತಿಮ ಋಣದಾತ” ಎಂದು ಕರೆಯುತ್ತಾರೆ.

ಒಂದು ವಾಕ್ಯದಲ್ಲಿ ಉತ್ತರಿಸಿ.

2nd Puc Economics Chapter 9 Notes in Kannada

1) RBI ನ್ನು ವಿಸ್ತರಿಸಿ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಎಂದು ಕರೆಯುತ್ತಾರೆ.

2) ಹಣದುಬ್ಬರ ಎಂದರೇನು?

ಪ್ರತಿ ಸರಕಿನ ಬೆಲೆಗಳನ್ನು ಏರಿಸುವುದರೊಂದಿಗೆ ಈ ಪ್ರಕ್ರಿಯೆಯು ಕೊನೆಗೊಳ್ಳುತ್ತದೆ. ಹೀಗೆ ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿ ಆಗುವ ಹೆಚ್ಚಳವನ್ನು ಹಣದುಬ್ಬರ ಎಂದು ಕರೆಯುವರು.

3) ಸ್ಥಿರೀಕರಣ ಎಂದರೇನು?

RBI ನ ಕಾರ್ಯಾಚರಣೆಯನ್ನು ‘ಸ್ಥಿರೀಕರಣ’ ಎಂದು ಕರೆಯುವರು.

4) ವಸ್ತು ವಿನಿಮಯ ಪದ್ಧತಿಯನ್ನು ಮತ್ತೆ ಯಾವ ಹೆಸರಿ ನಿಂದ ಕರೆಯುವರು?

ಸಾಟಿ ಪದ್ಧತಿ ಎಂದು ಕರೆಯುವರು.

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:-

1. ಸಟ್ಟಾ ವ್ಯಾಪಾರದ ಉದ್ದೇಶದ ಹಣದ ಬೇಡಿಕೆಯನ್ನು ರೇಖಾಚಿತ್ರದ ಮೂಲಕ ವಿವರಿಸಿ?

2nd Puc Economics Chapter 9 Notes in Kannada

ಚಿತ್ರ 3.1 ರಲ್ಲಿ ಸಟ್ಟಾ ವ್ಯಾಪಾರದ ಉದ್ದೇಶದ ಹಣದ ಬೇಡಿಕೆಯನ್ನು ಸಮನಾಂತರ ಅಕ್ಷದಲ್ಲಿ ಮತ್ತು ಬಡ್ಡಿಯ ದರವನ್ನು ಲಂಬ ಅಕ್ಷದಲ್ಲಿ ಗುರುತಿಸಲಾಗಿದೆ. ಯಾವಾಗ r=max ಆಗಿರುತ್ತದೋ ಸಟ್ಟಾ ವ್ಯಾಪಾರದ ಉದ್ದೇಶದ ಹಣದ ಬೇಡಿಕೆಯು ಶೂನ್ಯವಾಗಿರುತ್ತದೆ. ಬಡ್ಡಿ ದರವು ಎಷ್ಟು ಗರಿಷ್ಠವಾಗಿರುತ್ತದೆಂದರೆ, ಪ್ರತಿಯೊಬ್ಬರೂ ಭವಿಷ್ಯದಲ್ಲಿ ಅದು ಇಳಿಯುತ್ತದೆಂದು ನಿರೀಕ್ಷಿಸುತ್ತಾರೆ ಮತ್ತು ಆ ಮೂಲಕ ಭವಿಷ್ಯದ ಬಂಡವಾಳ ಲಾಭ ಗಳಿಸುವುದರ ಬಗ್ಗೆ ಖಾತ್ರಿಯಾಗಿರುತ್ತಾರೆ. ಹೀಗೆ ಪ್ರತಿಯೊಬ್ಬರೂ ಹಣದ ಶಿಲ್ಕನ್ನು ಬಾಂಡುಗಳಾಗಿ ಪರಿವರ್ತಿಸಿರುತ್ತಾರೆ. ಯಾವಾಗ r=min ಆಗಿರುವುದೋ ಆಗ ಅರ್ಥವ್ಯವಸ್ಥೆಯು ದ್ರವ್ಯತೆಯ ಬಲೆಯಲ್ಲಿರುತ್ತದೆ. ಭವಿಷ್ಯದಲ್ಲಿ ಬಡ್ಡಿ ದರವು ಹೆಚ್ಚಾಗುವ ಮತ್ತು ಬಾಂಡಿನ ದರ ಕಡಿಮೆಯಾಗುವ ಖಚಿತತೆ ಪ್ರತಿಯೊಬ್ಬರಿಗೂ ಇರುತ್ತದೆ. ಪ್ರತಿಯೊಬ್ಬರೂ ತಾವು ಸಂಪಾದಿಸಿದ ಸಂಪತ್ತನ್ನು ಹಣದ ರೂಪದಲ್ಲಿ ಇಡುತ್ತಾರೆ ಮತ್ತು ಸಟ್ಟಾ ವ್ಯಾಪಾರದ ಉದ್ದೇಶದ ಹಣದ ಬೇಡಿಕೆಯು ಅನಂತವಾಗಿರುತ್ತದೆ.

ಆದ್ದರಿಂದ ಅರ್ಥವ್ಯವಸ್ಥೆಯಲ್ಲಿ ಒಟ್ಟು ಹಣದ ಬೇಡಿಕೆಯು, ವಹಿವಾಟು ಬೇಡಿಕೆ ಮತ್ತು ಸಟ್ಟಾ ವ್ಯಾಪಾರದ ಬೇಡಿಕೆಯಿಂದ ಸಂಯೋಜಿತವಾಗಿರುತ್ತದೆ. ಇದರಲ್ಲಿ ಮೊದಲನೆಯದು ನೈಜ GDP ಮತ್ತು ಬೆಲೆಯ ಮಟ್ಟಕ್ಕೆ ಅನುಲೋಮವಾಗಿದ್ದರೆ ಎರಡನೆಯದು ಮಾರುಕಟ್ಟೆ ಬಡ್ಡಿಯ ದರಕ್ಕೆ ವಿಲೋಮವಾಗಿ ಇರುತ್ತದೆ.

2. ಕರೆನ್ಸಿ ಠೇವಣಿ ಅನುಪಾತ ಹಾಗೂ ಮೀಸಲು ಠೇವಣಿ ಅನುಪಾತವನ್ನು ವಿವರಿಸಿ?

ಕರೆನ್ಸಿ ಠೇವಣಿ ಅನುಪಾತ: ಕರೆನ್ಸಿ ಠೇವಣಿ ಅನುಪಾತ (cdr) ಎಂದರೆ ಸಾರ್ವಜನಿಕರು ಕರೆನ್ಸಿ ರೂಪದಲ್ಲಿ ಹೊಂದಿರುವ ಹಣ ಮತ್ತು ಅವರು ಬ್ಯಾಂಕ್ ಠೇವಣಿ ರೂಪದಲ್ಲಿ ಹೊಂದಿರುವ ಹಣದ ಅನುಪಾತವಾಗಿದೆ. ಅಂದರೆ cdr = CU/DD, ಒಬ್ಬ ₹ 1 ನ್ನು ಪಡೆದರೆ ಅವಳು ₹ 1/(1 + cdr)ನ್ನು ಬ್ಯಾಂಕ್‌ ಖಾತೆಯಲ್ಲಿ ಇಟ್ಟರೆ ₹ cdr/(1 + cdr) ನ್ನು ನಗದಾಗಿ ಇಟ್ಟುಕೊಳ್ಳುತ್ತಾಳೆ

ಇದು ಜನರ ದ್ರವ್ಯತಾ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ಇದೊಂದು ಅಪ್ಪಟ ನಡವಳಿಕೆ ಮಾನದಂಡವಾಗಿದ್ದು, ಇತರೆ ಸಂಗತಿಗಳೊಂದಿಗೆ, ಋತುಕಾಲಿಕ ವೆಚ್ಚದ ಮಾದರಿಯನ್ನು ಅವಲಂಬಿಸಿದೆ. ಉದಾ: ಹಬ್ಬದ ದಿನಗಳಲ್ಲಿ cdr ಹೆಚ್ಚಾಗುತ್ತದೆ ಏಕೆಂದರೆ ಜನರು ಆ ಅವಧಿಯಲ್ಲಿನ ಅಧಿಕ ವೆಚ್ಚವನ್ನು ಭರಿಸಲು ಠೇವಣಿಗಳನ್ನು ನಗದು ಶಿಲ್ಕಿಗೆ ಪರಿವರ್ತಿಸುತ್ತಾರೆ.

ಮೀಸಲು ಠೇವಣಿ ಅನುಪಾತ: ಬ್ಯಾಂಕುಗಳು ಜನರು ಬ್ಯಾಂಕಿನಲ್ಲಿ ಜಮಾ ಮಾಡುವ ಠೇವಣಿಯಲ್ಲಿ ಒಂದು ಭಾಗವನ್ನು ಮೀಸಲು ಹಣವಾಗಿ ಇಟ್ಟುಕೊಂಡು ಉಳಿದ ಭಾಗವನ್ನು ವಿವಿಧ ಹೂಡಿಕೆ ಯೋಜನೆಗಳಿಗೆ ಸಾಲವನ್ನು ನೀಡುತ್ತದೆ. ಮೀಸಲು ಹಣವು ಎರಡು ಅಂಶಗಳನ್ನು ಒಳಗೊಂಡಿರುತ್ತದೆ- ಬ್ಯಾಂಕಿನಲ್ಲಿರುವ ನಗದು ಮತ್ತು ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿ, ಬ್ಯಾಂಕುಗಳು ಈ ಮೀಸಲು ಹಣವನ್ನು ಖಾತೆದಾರರ ನಗದು ಬೇಡಿಕೆಯನ್ನು ಪೂರೈಸಲು ಬಳಸಿಕೊಳ್ಳುತ್ತವೆ. ಮೀಸಲು ಠೇವಣಿ ಅನುಪಾತವು (reserve deposit ratio-rdr) ವಾಣಿಜ್ಯ ಬ್ಯಾಂಕುಗಳು ಒಟ್ಟು ಠೇವಣಿಯಲ್ಲಿ ಮೀಸಲಾಗಿ ಇಟ್ಟುಕೊಳ್ಳುವ ಭಾಗವಾಗಿದೆ.

3. ಮುಕ್ತ ಮಾರುಕಟ್ಟೆಯ ಕಾರ್ಯಚರಣೆಯ ಬಗ್ಗೆ ವಿವರಿಸಿ?

ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳು: ಆರ್ಥಿಕತೆಯಲ್ಲಿ ಅಧಿಕಶಕ್ತಿಯ ಹಣದ ದಾಸ್ತಾನನ್ನು ಹೆಚ್ಚಿಸುವ (ಅಥವಾ ಇಳಿಸುವ) ಸಲುವಾಗಿ RBI ಸರ್ಕಾರಿ ಭದ್ರತೆಗಳನ್ನು ಸಾರ್ವಜನಿಕರಿಂದ ಕೊಳ್ಳುತ್ತದೆ (ಅಥವಾ ಮಾರಾಟ ಮಾಡುತ್ತದೆ). RBI ಬಾಂಡು ಮಾರುಕಟ್ಟೆಯಿಂದ ₹100ರಷ್ಟು ಬೆಲೆಬಾಳುವ ಸರ್ಕಾರಿ ಭದ್ರತೆಗಳನ್ನು ಕೊಳ್ಳುತ್ತದೆಂದು ಭಾವಿಸೋಣ ಆಗ ಅದು ತನ್ನ ಮೇಲೇ ಬರೆದುಕೊಂಡು ₹ 100 ರ ಚೆಕ್‌ನ್ನು ಬಾಂಡು ಮಾರಾಟಗಾರನಿಗೆ ನೀಡುತ್ತದೆ. ಅಂದರೆ ಚೆಕ್‌ನ್ನು ಹೊಂದಿರುವ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ RBIಗೆ ಅದನ್ನು ನೀಡಿದ ಪಕ್ಷದಲ್ಲಿ ಆ ವ್ಯಕ್ತಿಗೆ ಅಥವಾ ಸಂಸ್ಥೆಗೆ ಅದಕ್ಕೆ ಸಮನಾದ ಹಣವನ್ನು ಪಾವತಿಸಬೇಕಾಗುತ್ತದೆ. ಮಾರಾಟಗಾರನು ಆ ಚೆಕ್‌ನ್ನು ತನ್ನ ಬ್ಯಾಂಕಿನಲ್ಲಿ ಠೇವಣಿ ಮಾಡುತ್ತಾನೆ. ಪ್ರತಿಯಾಗಿ ಆ ಬ್ಯಾಂಕು ಆತನ ಖಾತೆಗೆ ₹700 ಜಮಾ ಮಾಡುತ್ತದೆ.

ಬ್ಯಾಂಕಿನ ಠೇವಣಿ ₹100 ರಷ್ಟು ಹೆಚ್ಚಾಗುತ್ತದೆ. ಇದು ಹೊಣೆಗಾರಿಕೆಯಾಗುತ್ತದೆ. ಆದಾಗ್ಯೂ ಈ ಚೆಕ್‌ನ್ನು ಬ್ಯಾ೦ಕಿನ ಹೊಂದಿರುವುದರಿಂದ ಅದರ ಆಸ್ತಿಯೂ ಕೂಡ ₹ 100 ರಷ್ಟು ಹೆಚ್ಚಾಗುತ್ತದೆ. ಇದು RBIನ ಮೇಲೆ ಮಾಡಿದ ಹಕ್ಕು ಕೋರಿಕೆಯಾಗಿರುತ್ತದೆ. ಬ್ಯಾಂಕು ಈ ಚೆಕ್ಕನ್ನು RBI ಗೆ ಠೇವಣಿಯಾಗಿ ನೀಡುತ್ತದೆ. ಪ್ರತಿಯಾಗಿ ಆ ಬ್ಯಾಂಕು RBIನಲ್ಲಿ ಹೊಂದಿರುವ ಖಾತೆಗೆ ₹ 100ನ್ನು RBI ಜಮಾ ಮಾಡುತ್ತದೆ.

RBIನ ಒಟ್ಟು ಹೊಣೆಗಾರಿಕೆ ಅಥವಾ ವ್ಯಾಖ್ಯಾನದಂತೆ ಅರ್ಥವ್ಯವಸ್ಥೆಯಲ್ಲಿ ಅಧಿಕ ಶಕ್ತಿಯ ಹಣದ ಪೂರೈಕೆಯು ₹ 100 ರಷ್ಟು ಹೆಚ್ಚಾಗಿದೆ. ಅಧಿಕ ಶಕ್ತಿಯ ಹಣದ ಪೂರೈಕೆಯನ್ನು ಕಡಿಮೆ ಮಾಡಲು RBI ಬಯಸಿದರೆ ವ್ಯತಿರಿಕ್ತ ರೀತಿಯಲ್ಲಿ ತನ್ನಲ್ಲಿರುವ ಸರಕಾರಿ ಭದ್ರತೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ ಆ ಮೂಲಕ ಹಣಕಾಸಿನ ಆಧಾರವನ್ನು ಕಡಿಮೆ ಮಾಡಲಾಗುತ್ತದೆ.

4. RBIನಿಂದ ಸ್ಥಿರೀಕರಣದ ಬಗ್ಗೆ ಬರೆಯಿರಿ?

RBI ನಿಂದ ಸ್ಥಿರೀಕರಣ: ಬಾಹ್ಯ ಆಘಾತಗಳಿಂದ ರ್ಥವ್ಯವಸ್ಥೆಯ ಹಣದ ಸಂಗ್ರಹದಲ್ಲಿ ಸ್ಥಿರತೆಯನ್ನು ತರಲು RBI ತನ್ನ ಹಣದ ಸೃಷ್ಟಿಯ ಸಾಧನವನ್ನು ಆಗಾಗ ಬಳಸುತ್ತದೆ. ಭವಿಷ್ಯದಲ್ಲಿ ಭಾರತದಲ್ಲಿ ಉತ್ತಮ ಬೆಳವಣಿಗೆ ರೀಕ್ಷಿಸಿ ಜಗತ್ತಿನಾದ್ಯಂತ ಇರುವ ಹೂಡಿಕೆದಾರರು ರತದ ಬಾಂಡುಗಳಲ್ಲಿ ಹೂಡುವುದನ್ನು ಹೆಚ್ಚಿಸುತ್ತಾರೆ ದುಕೊಳ್ಳೋಣ. ಈ ಸನ್ನಿವೇಶದಲ್ಲಿ ಬಾಂಡುಗಳು ಅಧಿಕ ದರದ ಪ್ರತಿಫಲವನ್ನು ನೀಡುವ ಸಾಧ್ಯತೆ ಇರುತ್ತದೆ. ಅವರು ಈ ಬಾಂಡುಗಳನ್ನು ವಿದೇಶಿ ಕರೆನ್ಸಿಯಿಂದ ಖರೀದಿಸುತ್ತಾರೆ. ಯಾರೂ ಕೂಡಾ ವಿದೇಶಿ ಹಣದಿಂದ ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳನ್ನು ಖರೀದಿಸಲು ಸಾಧ್ಯವಿಲ್ಲವಾದುದರಿಂದ, ಈ ಬಾಂಡುಗಳನ್ನು ವಿದೇಶೀ ಹೂಡಿಕೆದಾರರಿಗೆ ಮಾರಾಟ ಮಾಡುವ ವ್ಯಕ್ತಿ ಅಥವಾ ಸಂಸ್ಥೆ ಒಂದು ವಾಣಿಜ್ಯ ಬ್ಯಾಂಕಿನಲ್ಲಿ ಈ ವಿದೇಶಿ ಕರೆನ್ಸಿಯನ್ನು ರೂಪಾಯಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ ವಾಣಿಜ್ಯ ಬ್ಯಾಂಕು ವಿದೇಶಿ ಕರೆನ್ಸಿಯನ್ನು RBI ಗೆ ಒಪ್ಪಿಸುತ್ತದೆ ಹಾಗೂ ಅದಕ್ಕೆ ಸಮಾನವಾದ ಹಣದ ಮೊತ್ತವು RBIಯಲ್ಲಿನ ಅದರ ಠೇವಣಿಗೆ ಜಮಾ ಅಗುತ್ತದೆ.

ಈ ಇಡೀ ವಹಿವಾಟಿನಲ್ಲಿ ಯಾವ ವಿಧದ ಹೊಂದಾಣಿಕೆಗಳು ನಡೆಯುತ್ತವೆ? ವಾಣಿಜ್ಯ ಬ್ಯಾಂಕಿನ ಒಟ್ಟು ಮೀಸಲುಗಳು ಮತ್ತು ಠೇವಣಿಗಳು ಬದಲಾಗದೇ ಹಾಗೇಯೇ ಇರುತ್ತವೆ (ಇದು ತನ್ನ ಮಾರಾಟಗಾರನಿಂದ ವಿದೇಶಿ ಕರೆನ್ಸಿಯನ್ನು ತನ್ನ ನಗದು ಕೋಶದಿಂದ ಖರೀದಿಸಿರುತ್ತದೆ. ಆದ್ದರಿಂದ ಅದು ಕಡಿಮೆಯಾಗುತ್ತದೆ; ಆದರೆ RBIಯಲ್ಲಿನ ಠೇವಣಿಯು ಅದಕ್ಕೆ ಸಮಾನವಾಗಿ ಹೆಚ್ಚಾಗುತ್ತದೆ-ಒಟ್ಟು ಮೀಸಲು ಬದಲಾಗದೆ ಇರುತ್ತದೆ). ಆದರೆ RBI ನ ಅಢಾವೆ ಪತ್ರಿಕೆಯಲ್ಲಿನ ಆಸ್ತಿ ಮತ್ತು ಹೊಣೆಗಾರಿಕೆಗಳು ಹೆಚ್ಚಾಗುತ್ತವೆ. RBI ಅಧೀನದಲ್ಲಿರುವ ವಿದೇಶಿ ವಿನಿಮಯವೂ ಹೆಚ್ಚಾಗುತ್ತದೆ.

FAQ :

1. ವಸ್ತು ವಿನಿಮಯ ಪದ್ಧತಿ ಎಂದರೇನು?

ಹಣವನ್ನು ಮಾಧ್ಯಮವಾಗಿ ಬಳಸದೇ ನಡೆಯುವ ಸರಕುಗಳ ವಿನಿಮಯವನ್ನು ವಸ್ತು ವಿನಿಮಯ ಪದ್ಧತಿ ಎಂದು ಕರೆಯುವರು.

2. RBI ನ್ನು ವಿಸ್ತರಿಸಿ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಎಂದು ಕರೆಯುತ್ತಾರೆ.

3. ಹಣದುಬ್ಬರ ಎಂದರೇನು?

ಪ್ರತಿ ಸರಕಿನ ಬೆಲೆಗಳನ್ನು ಏರಿಸುವುದರೊಂದಿಗೆ ಈ ಪ್ರಕ್ರಿಯೆಯು ಕೊನೆಗೊಳ್ಳುತ್ತದೆ. ಹೀಗೆ ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿ ಆಗುವ ಹೆಚ್ಚಳವನ್ನು ಹಣದುಬ್ಬರ ಎಂದು ಕರೆಯುವರು.

ಇತರೆ ವಿಷಯಗಳು :

2nd Puc All Subject Notes

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh