ದ್ವಿತೀಯ ಪಿ.ಯು.ಸಿ ರಾಷ್ಟ್ರೀಯ ವರಮಾನ ಲೆಕ್ಕಾಚಾರ ಅರ್ಥಶಾಸ್ತ್ರ ನೋಟ್ಸ್‌ | 2nd Puc Economics Chapter 8 Notes

ದ್ವಿತೀಯ ಪಿ.ಯು.ಸಿ ರಾಷ್ಟ್ರೀಯ ವರಮಾನ ಲೆಕ್ಕಾಚಾರ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೊತ್ತರಗಳು, 2nd Puc Economics Chapter 8 Notes Question Answer Mcq Pdf Download in Kannada Medium 2023 Kseeb Solutions For Class 12 Economics Chapter 8 Notes 2nd Puc Economics 8th Lesson Notes Rashtriya Varamana Lekkachara Question Answer 2nd PUC EconomicsPart-2 Chapter-2 Notes National Income Accounting in Kannada

2nd Puc Economics Chapter 8 Notes in Kannada

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯ ಅಥವಾ ಪದದಲ್ಲಿ ಉತ್ತರಿಸಿ.

1. CPI ಯನ್ನು ವಿಸ್ತರಿಸಿ.

ಗ್ರಾಹಕ ಬೆಲೆ ಸೂಚ್ಯಂಕ

2. GNP mp ಯನ್ನು ವಿಸ್ತರಿಸಿ.

ದೇಶೀಯ ಉತ್ಪನ್ನ,

3. ನಿವ್ವಳ ಮೌಲ್ಯವರ್ಧನೆಯನ್ನು ಹೇಗೆ ಪಡೆಯುವಿರಿ?

ಉದ್ಯಮ ಘಟಕದ ಉತ್ಪಾದನಾ ಮೌಲ್ಯವನ್ನು ಲೆಕ್ಕಾಚಾರ ಗಣನೆ ಮಾಡುವಾಗ ನಿವ್ವಳ ಮೌಲ್ಯ ವರ್ಧನೆಯನ್ನು ಪಡೆಯಬಹುದು.

4. GDP ಯ ಅರ್ಥ ನೀಡಿ.

ಒಟ್ಟು ದೇಶೀಯ ಉತ್ಪನ್ನ.

5. ಮದ್ಯಂತರ ಸರಕುಗಳ ಅರ್ಥ ನೀಡಿ.

ಉದ್ಯಮ ಘಟಕವು ಉತ್ಪಾದನಾ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಬಳಸಲಾಗುವ ಕಚ್ಚಾ ಸರಕುಗಳನ್ನು ಮತ್ತೊಂದು ಉದ್ಯಮದಿಂದ ಖರೀದಿಸಿದರೆ ಅಂತಹ ಕಚ್ಚಾ ಸರಕುಗಳನ್ನು ಮದ್ಯಂತರ ಸರಕುಗಳು ಎಂದು ಕರೆಯುತ್ತೇವೆ.

6. ವೈಯಕ್ತಿಕ ವೆಚ್ಚ ಮಾಡಬಹುದಾದ ಆದಾಯವನ್ನು ಹೇಗೆ ಪಡೆಯುತ್ತವೆ?

ವೈಯಕ್ತಿಕ ತೆರಿಗೆ ವಾವತಿಗಳು ಮತ್ತು ತೆರಿಗೇತರ ಪಾವತಿಗಳನ್ನು P1 ನಲ್ಲಿ ಕಳೆದರೆ ವೈಯಕ್ತಿಕ ವೆಚ್ಚ ಮಾಡಬಹುದಾದ ಆದಾಯವನ್ನು ಪಡೆಯುತ್ತೇವೆ.

7. ಮಾರುಕಟ್ಟೆ ಬೆಲೆಗಳಲ್ಲಿ GVA ಯ ಸಮೀಕರಣವನ್ನು ಬರೆಯಿರಿ.

GVA = ಉದ್ಯಮ ಘಟಕದ ಮಾರಾಟದ ಮೌಲ್ಯ + ದಾಸ್ತಾನುಗಳಲ್ಲಿನ ಬದಲಾವಣೆಯ ಮೌಲ್ಯ – ಉದ್ಯಮ ಘಟಕ ಬಳಸುವ ಮದ್ಯಂತರ ಸರಕುಗಳ ಮೌಲ್ಯ.

8. GDP ಅನಪ್ರಸರಣಕ ಎಂದರೇನು?

ನೈಜ GDP ನಾಮ ಮಾತ್ರದ GDP ಯ ಅನುಪಾತವು ಒಂದು ಜನಪ್ರಿಯ ಬೆಲೆಗಳ ಸೂಚಿಯಾಗಿದೆ. ಇದನ್ನು ಯ ಅನಪ್ರಸರಣಕ ಎಂದು ಕರೆಯಲಾಗುತ್ತದೆ.

ಕೆಳಗಿನ ಪ್ರಶ್ನೆಗಳಿಗೆ 4 ವಾಕ್ಯಗಳಲ್ಲಿ ಉತ್ತರಿಸಿ.

1. ಅನುಭೋಗಿ ಸರಕುಗಳು ಮತ್ತು ಬಂಡವಾಳ ಸರಕುಗಳ ನಡುವಿನ ವ್ಯತ್ಯಾಸವೇನು?

ಅಂತಿಮ ಸರಕುಗಳುಮಧ್ಯಂತರ ಸರಕುಗಳು
ಅಂತಿಮ ಬಳಕೆಗಾಗಿ ಖರಿದಿಸುವ ಸರಕುಗಳನ್ನು ಅಂತಿಮ ಸರಕುಗಳು ಎನ್ನುತ್ತಾರೆ.ಕೆಲವು ಉತ್ಪಾದಕರು ತಯಾರಿಸಿದ ಸರಕುಗಳನ್ನು ಇತರ ಉತ್ಪಾದಕರು ಉತ್ಪಾದನೆಯಲ್ಲಿ ಭೌತಿಕ ಆದಾನವಾಗಿ ಬಳಸುವ ಸರಕುಗಳನ್ನು ಮದ್ಯಂತರ ಸರಕು ಎನ್ನುತ್ತಾರೆ.
ಉದಾ: ಟೆಲಿವಿಷನ್, ಕೈಗಡಿಯಾರಉದಾ : ಕಚ್ಚಾಹತ್ತಿ, ಹತ್ತಿ ಬಟ್ಟೆಯ ಉತ್ಪಾದನೆಯಲ್ಲಿ

ಕೆಳಗಿನ ಪ್ರಶ್ನೆಗಳಿಗೆ 12 ವಾಕ್ಯಗಳಲ್ಲಿ ಉತ್ತರಿಸಿ.

2nd Puc Economics Chapter 8 Notes

1. ಅಂತಿಮ ಸರಕು ಪರಿಕಲ್ಪನೆಯನ್ನು ಕುರಿತು ಲಘು ಟಿಪ್ಪಣಿ ಬರೆಯಿರಿ.

ಅಂತಿಮ ಬಳಕೆಯ ಉದ್ದೇಶವನ್ನು ಒಳಗೊಂಡಿರುವ ಯಾವುದೇ ರೂಪಾಂತರ ಅಥವಾ ಉತ್ಪಾದನೆಯ ಇತರ ಹಂತಗಳ ಮೂಲಕ ಹಾದು ಹೋಗದೇ ಇರುವ ಒಂದು ಸರಕನ್ನು ಅಂತಿಮ ಸರಕು ಎಂದು ಕರೆಯಲಾಗುತ್ತದೆ.

ಒಂದು ನಿರ್ದಿಷ್ಟ ಅವಧಿಯಲ್ಲಿ ಆರ್ಥಿಕತೆಯಲ್ಲಿ ಉತ್ಪಾದಿಸಿದ ಎಲ್ಲಾ ಅಂತಮ ಸರಕುಗಳು ಮತ್ತು ಸೇವೆಗಳು ಬಾಳಿಕ ಬರುವ ಬಾಳಿಕೆ ಬಾರದಿರುವ ಸರಕುಗಳೆರೆಡು ಅಥವಾ ಬಂಡವಾಳ ಸರಕುಗಳ ರೂಪದಲ್ಲಿರುತ್ತವೆ. ಇವು ಅಂತಿಮ ಸರಕುಗಳಾಗಿರುವುದರಿಂದ ಮುಂದೆ ಆರ್ಥಿಕ ಪ್ರಕ್ರಿಯೆಯಲ್ಲಿ ಯಾವುದೆ ರೂಪಾಂತರಕ್ಕೆ ಒಳಗಾಗುವುದಿಲ್ಲ.

ಅಂತಿಮ ಸರಕುಗಳಲ್ಲಿ ನಾವು ಅನುಭೋಗಿ ಸರಕುಗಳು ಹಾಗೂ ಬಂಡವಾಳ ಸರಕುಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು. ಅನುಭೋಗಿಸಲಾಗುವ ಆಹಾರ ಮತ್ತು ಬಟ್ಟೆಯಂತಹ ಮನರಂಜನೆಯಂತಹ ಸೇವೆಗಳನ್ನು ಅಂತಿಮ ಅನುಭೋಗಿಗಳು ಖರೀದಿಸಿದಾಗ ಅವುಗಳನ್ನು ಅನುಭೋಗಿ ಸರಕುಗಳು ಅಥವಾ ಗ್ರಾಹಕ ಸರಕು ಎನ್ನುವರು, ಅನುಭೋಗಿ ಸರಕುಗಳು ಟೆಲಿವಿಷನ್, ಕಂಪ್ಯೂಟರ್, ವಾಹನಗಳು ಮುಂತಾದವುಗಳು ಅಂತಿಮ ಬಳಕೆಗಳಾದರೂ ಧೀರ್ಘಕಾಲ ಬಳಕೆಯ ಸರಕುಗಳಾಗಿವೆ.

2. ಬಾಹ್ಯತೆಗಳನ್ನು ಕುರಿತು ಒಂದು ಟಿಪ್ಪಣಿ ಬರೆಯಿರಿ.

ಒಬ್ಬ ವ್ಯಕ್ತಿ ಅಥವಾ ಉದ್ದಿಮೆಯ ಮೇಲೆ ಉಂಟಾಗುವ ಬೇರೊಬ್ಬ ವ್ಯಕ್ತಿ ಅಥವಾ ಉದ್ದಿಮೆಯ ಆರ್ಥಿಕ ಚಟುವಟಿಕೆಗಳ ಅನೈಚ್ಚಿಕ ಅಥವಾ ಉದ್ದೇಶರಹಿತ ಪರಿಣಾಮಗಳನ್ನು ‘ಬಾಹ್ಯತೆ’ ಎನ್ನುತ್ತಾರೆ. ಇಂತಹ ಪರಿಣಾಮಗಳಿಂದ ಒಳಿತಾಗಬಹುದು ಅಥವಾ ಕೆಡಕಾಗಬಹುದು.

ಉದಾಹರಣೆಗೆ : ರಸ್ತೆ ನಿರ್ಮಿಸಿದಾಗ ಅದರ ಇಕ್ಕೆಲಗಳ ಜಮೀನಿನ ಬೆಲೆ ಏರುತ್ತದೆ. ಇದು ಒಂದು ಸಕಾರಾತ್ಮಕ ಅಥವಾ ಲಾಭದಾಯಕ ಬಾಹ್ಯತೆ, ಆದರೆ ರಸ್ತೆಗಳ ವಾಹನ ದಟ್ಟಣೆಯಿಂದ ಪರಿಸರ ಮಾಲಿನ್ಯ ಉಂಟಾಗುವುದು ಒಂದು ನಕಾರಾತ್ಮಕ ಬಾಹ್ಯತೆಯಾಗಿದೆ.

ಅಭ್ಯಾಸದ ಪ್ರಶ್ನೆಗಳು :

1. ಉತ್ಪಾದನೆಯ ನಾಲ್ಕು ಅಂಗಗಳಾವುವು? ಮತ್ತು ಇವುಗಳಲ್ಲಿ ಪ್ರತಿಯೊಂದಕ್ಕೆ ಸಂಭಾವನೆ ಏನೆಂದು ಕರೆಯುತ್ತಾರೆ ?

ಉತ್ಪಾದನೆಯ ನಾಲ್ಕು ಅಂಗಗಳೆಂದರೆ –

1. ಮಾನವ ಶ್ರಮದಿಂದ ನೀಡಲಾದ ಕೊಡುಗೆ ಇದಕ್ಕೆ ನೀಡುವ ಸಂಭಾವನೆಯನ್ನು ‘ಕೂಲಿ’ ಎನ್ನುತ್ತೇವೆ.

2. ಬಂಡವಾಳದಿಂದ ನೀಡಿದ ಕೊಡುಗೆ ಇದಕ್ಕೆ ನೀಡುವ ಸಂಭಾವನೆಯನ್ನು ‘ಬಡ್ಡಿ’ ಎನ್ನುತ್ತೇವೆ.

3. ಉದ್ಯಮ ಶೀಲನು ನೀಡಿದ ಕೊಡುಗೆ ಇದಕ್ಕೆ ನೀಡುವ ಸಂಭಾವನೆಯನ್ನು ‘ಲಾಭ’ ಎನ್ನುತ್ತೇವೆ.

4. ಸ್ಥಿರ ನೈಸರ್ಗಿಕ ಸಂಪನ್ಮೂಲಗಳು(ಭೂಮಿ) ನೀಡಿದ ಕೊಡುಗೆ. ಇದಕ್ಕೆ ನೀಡಿದ ಸಂಭಾವನೆಯನ್ನು ಗೇಣಿ, ಎನ್ನುವರು.

2. ಆರ್ಥಿಕತೆಯ ಒಟ್ಟು ಅಂತಿಮ ವೆಚ್ಚವು ಒಟ್ಟು ಉತ್ಪಾದನಾಂಗಗಳ ಪಾವತಿಗೆ ಏಕೆ ಸಮನಾಗಿರಬೇಕು?

ಉತ್ಪಾದನಾಂಗಗಳು ತಾವು ಉತ್ಪಾದಿಸಲು ಸಹಾಯ ಮಾಡಿದ ಸರಕು ಮತ್ತು ಸೇವೆಗಳನ್ನು ಕೊಳ್ಳಲು ತಮ್ಮ ಸಂಭಾವನೆಯನ್ನು ಬಳಸುತ್ತೇವೆ, ಆರ್ಥಿಕತೆಯ ಉದ್ಯಮ ಘಟಕಗಳು ಸರಕು ಮತ್ತು ಸೇವೆಗಳ ಮೇಲೆ ಮಾಡಿದ ಒಟ್ಟು ವೆಚ್ಚಕ್ಕೆ ಸಮನಾಗಿರುತ್ತದೆ, ಆದ್ದರಿಂದ ಆರ್ಥಿಕತೆಯ ಸಂಪೂರ್ಣ ಆದಾಯ, ಮಾರಾಟದ ಆದಾಯದ ರೂಪದಲ್ಲಿ ಉತ್ಪಾದಕರಿಗೆ ಹಿಂತಿರುಗಿ ಬರುತ್ತವೆ. ಉತ್ಪಾದನಾ ಘಟಕಗಳು ಉತ್ಪಾದನಾಂಗಗಳ ಆದಾಯಗಳ ರೂಪದಲ್ಲಿ ವಿತರಿಸಿದ ಮೊತ್ತ ಅಂದರೆ ನಾಲ್ಕು ಉತ್ಪಾದನಾಂಗಗಳ ಗಳಿಸಿದ ಸಂಭಾವನೆಗಳ ಒಟ್ಟು ಮೊತ್ತ ಮತ್ತು ಮಾರಾಟದ ಆದಾಯವಾಗಿ ಗಳಿಸಿದ ಸಮಗ್ರ ಅನುಭೋಗದ ವೆಚ್ಚಗಳ ನಡುವೆ ವ್ಯತ್ಯಾಸವಿರುವುದಿಲ್ಲ.

ಅಂದರೆ =

ಒಟ್ಟು ಆದಾಯ = ಕೂಲಿ + ಬಡ್ಡಿ + ಲಾಭ + ಗೇಣಿ ಇದನ್ನು ಈ ಕೆಳಕಂಡ ಚಿತ್ರದಿಂದ ಸ್ಪಷ್ಟ ಪಡಿಸಬಹುದು.

ದೇಶದ ಒಟ್ಟು ಆದಾಯವು ಎರಡು ವಲಯಗಳ ಮೂಲಕ ಉದ್ಯಮ ಘಟಕ ಮತ್ತು ಕುಟುಂಬಗಳ ಮೂಲಕ ವೃತ್ತಾಕಾರದ ರೀತಿಯಲ್ಲಿ ಹಾದು ಹೋಗುತ್ತದೆ, ಉದ್ಯಮ ಘಟಕಗಳಿಂದ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಮೇಲೆ ಆದಾಯವನ್ನು ವೆಚ್ಚ ಮಾಡಿದಾಗ, ಉದ್ಯಮ ಘಟಕಗಳಿಂದ ಸ್ವೀಕರಿಸಿದ ಸಮಗ್ರ ವೆಚ್ಚದ ರೂಪವನ್ನು ಪಡೆಯುತ್ತವೆ. ವೆಚ್ಚದ ಮೌಲ್ಯವು ಸರಕು ಮತ್ತು ಸೇವೆಗಳ ಮೌಲ್ಯಕ್ಕೆ ಸಮನಾಗಿರಬೇಕಾಗಿರುವುದ ರಿಂದ ಸಮಗ್ರ ಆದಾಯವನ್ನು ಉದ್ಯಮ ಘಟಕಗಳು ಉತ್ಪಾದಿಸಿದ ಸರಕು ಮತ್ತು ಸೇವೆಗಳ ಸಮಗ್ರ ಮೌಲ್ಯವನ್ನು ಲೆಕ್ಕಾಚಾರ ಮಾಡುವುದರಿಂದ ಮಾಪನ ಮಾಡಬಹು ದಾಗಿದೆ, ಈಗಾಗಲೇ ಮೇಲೆ ತಿಳಿಸಿದಂತೆ ಸಮಗ್ರ ಆದಾಯ ವನ್ನು ಉತ್ಪಾದನಾಂಗಗಳಿಗೆ ಪಾವತಿಸಿದಾಗ ಅದು ಸಮಗ್ರ ಆದಾಯ ರೂಪವನ್ನು ಪಡೆಯುತ್ತದೆ. ಅಂದರೆ .

ಒಟ್ಟು ಆದಾಯ = ಕೂಲಿ + ಲಾಭ + ಬಡ್ಡಿ + ಗೇಣಿ

3. ಸಂಗ್ರಹ ಮತ್ತು ಹರಿವಿನ ನಡುವಿನ ವ್ಯತ್ಯಾಸಗಳಾ ವುವು? ನಿವ್ವಳ ಹೂಡಿಕೆ ಮತ್ತು ಬಂಡವಾಳದ ನಡುವೆ ಸಂಗ್ರಹ ಯಾವುದು ? ಮತ್ತು ಹರಿವು ಯಾವುದು? ಒಂದು ತೊಟ್ಟಿಯಲ್ಲಿನ ನೀರಿನ ಹರಿವಿನೊಂದಿಗೆ ನಿವ್ವಳ ಬಂಡವಾಳ ಮತ್ತು ಬಂಡವಾಳವನ್ನು ಹೋಲಿಸಿ.

ಸಂಗ್ರಹ ಮತ್ತು ಹರಿವಿನ ನಡುವಿನ ವ್ಯತ್ಯಾಸಗಳನ್ನು ಈ ಕೆಳಕಂಡಂತೆ ವಿವರಿಸಬಹುದು.

ಸಂಗ್ರಹ

 1. ಸಂಗ್ರಹವು ಸಮಯ ಅಥವಾ ಅವಧಿಗೆ ಸಂಬಂಧಿಸುದಾಗಿದೆ.
 2. ನಿರ್ದಿಷ್ಟವಾದ ಪ್ರಮಾಣವಿರುವುದಿಲ್ಲ.
 3. ಇದೊಂದು ರಾಷ್ಟ್ರೀಯ ಬಂಡವಾಳವಾಗಿರುತ್ತದೆ.
 4. ಇದು ಲೆಕ್ಕಾಚಾರವನ್ನು ಹೊಂದಿರುತ್ತದೆ.
 5. ಪರಿಮಾಣಾತ್ಮಕ ಅಳತೆ ಪಡೆಯಲು ಸಮಯವನ್ನು ರೂಪಿಸಬೇಕಾಗುತ್ತದೆ.

ಹರಿವು

 1. ಹರಿವು ನಿರ್ದಿಷ್ಟವಾದ ಸಮಯ ಅಥವಾ ಅವಧಿಗೆ ಸಂಬಂಧಿಸುಮದಾಗಿದೆ.
 2. ನಿರ್ದಿಷ್ಟವಾದ ಅಳತೆ ಪ್ರಮಾಣವಿರುತ್ತದೆ.
 3. ಹರಿವು ರಾಷ್ಟ್ರೀಯ ಆದಾಯದ ಮೂಲವಾಗಿದೆ.
 4. ನಿರ್ದಿಷ್ಟವಾದ ಲೆಕ್ಕಚಾರವನ್ನು ಹೊಂದಿರುವುದಿಲ್ಲ.
 5. ಇದು ಯಾವ ದಿನ, ಗಂಟೆ, ಪಾಠವಾದರೂ ಆಗಬಹುದು.

ನಿವ್ವಳ ಹೂಡಿಕೆ ಮತ್ತು ಬಂಡವಾಳದ ನಡುವೆ ಬಂಡವಾಳವು ಸಂಗ್ರಹವಾಗಿದೆ, ನಿವ್ವಳ ಹೂಡಿಕೆ ಹರಿವು ಆಗಿರುತ್ತದೆ.

ದಾಸ್ತಾನು (ಸಂಗ್ರಹ) ಚಲಕಗಳ ಮತ್ತು ಹರಿವಿನ ಚಲಕಗಳ ನಡುವಿನ ವ್ಯತ್ಯಾಸವನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಈ ಕೆಳಕಂಡ ಉದಾಹರಣೆಯನ್ನು ನೋಡಬಹುದು. ಒಂದು ನೀರಿನ ತೊಟ್ಟಿಯನ್ನು ನಲ್ಲಿಯಿಂದ ಬರುವ ನೀರಿನಿಂದ ತುಂಬಿಸಲಾಗಿದೆ. ಒಂದು ನಿರ್ದಿಷ್ಟ ಸಮಯದಲ್ಲಿ ತೊಟ್ಟಿಯಲ್ಲಿ ಎಷ್ಟು ನೀರು ಇದೆ ಎಂಬುದು ದಾಸ್ತಾನಿನ ಪರಿಕಲ್ಪನೆಯಾಗಿದೆ.

4. ಯೋಜಿತ ಮತ್ತು ಯೋಜಿತವಲ್ಲದ ದಸ್ತಾನಿನ ನಡುವಿನ ವ್ಯತ್ಯಾಸವೇನು ? ದಾಸ್ತಾನುಗಳಲ್ಲಿನ ಬದಲಾವಣೆ ಮತ್ತು ಉದ್ಯಮ ಘಟಕಗಳ ಮೌಲ್ಯಾಧಾರಿತಗಳ ನಡುವಿನ ಸಂಬಂಧವನ್ನು ಬರೆಯಿರಿ.

ಯೋಜಿತ ಮತ್ತು ಯೋಜಿತವಲ್ಲದ ದಾಸ್ತಾನಿನ ನಡುವಿನ ವ್ಯತ್ಯಾಸಗಳೆಂದರೆ –

ಯೋಜಿತ

 1. ಉತ್ಪಾದಕರು ಅವರ ದಾಸ್ತಾನಿಗೆ ಎಷ್ಟು ಪ್ರಮಾಣವನ್ನು ಸೇರಿಸಲು ಯೋಜಿಸುತ್ತಾರೆ ಎಂಬುದನ್ನು ತಿಳಿಸುತ್ತದೆ.
 2. ಅನುಭೋಗ, ಹೂಡಿಕೆ, ಸರಕುಗಳ ಉತ್ಪನ್ನವು ಯೋಜಿಸಿದ ಉತ್ಪನ್ನಗಳಾಗಿರುತ್ತವೆ.
 3. ಯೋಜಿತ ಪೂರೈಕೆಯು ಯೋಜಿತ ಬೇಡಿಕೆಗೆ ಸಮನಾಗುತ್ತದೆ.
 4. ಯೋಜಿತ ದಸ್ತಾನು ದೊಡ್ಡದಾದರೂ ವಾಸ್ತವಕ್ಕೆ ಸಮವಾಗಿರುವುದು.

ಯೋಜಿತವಲ್ಲದ

 1. ಲೆಕ್ಕಾಚಾರ ಮಾಡಲಾದ ಮೌಲ್ಯಗಳನ್ನು ಯೋಜನಾರಹಿತ ಮಾಪನಗಳೆಂದು ಕರೆಯುವರು.
 2. ಯೋಜನಾ ರಹಿತ ಅಥವಾ ಯೊಜಿತವಲ್ಲದ ಮೌಲ್ಯವು ಆರ್ಥಿಕತೆಯ ಯೋಜನಾರಹಿತ ಹೂಡಿಕೆಯ ಮೊತ್ತಕ್ಕೆ ಸಮನಾಗಿರುತ್ತದೆ.
 3. ಯೋಜನಾರಹಿತ’ ಅಥವಾ ಯೋಜಿತವಲ್ಲದ ಬೇಡಿಕೆಯ ಉತ್ಪಾದಕರು ಯೋಜಿಸಿದ ಉತ್ಪನ್ನದ ಉತ್ಪಾದನೆಗಿಂತ ಕಡಿಮೆಯಾಗಬಹುದು.
 4. ಉದ್ದೇಶ ಪೂರ್ವಕವಲ್ಲದ ದಾಸ್ತಾನಿನ ಶೇಖರಣೆಯಾಗಿರುತ್ತದೆ.

ದಾಸ್ತಾನುಗಳಲ್ಲಿನ ಬದಲಾವಣೆ ಮತ್ತು ಉದ್ಯಮ ಘಟಕಗಳ ಮೌಲ್ಯಾಧಾರಿತ ನಡುವಿನ ಸಂಬಂಧವೆಂದರೆ- ದಾಸ್ತಾನುಗಳನ್ನು ನಿರ್ದಿಷ್ಟ ಕಾಲಘಟ್ಟದಲ್ಲಿ ವ್ಯಾಖ್ಯಾನಿಸಲಾಗಿದೆ. ಸಮಯದ ಅವಧಿಯಲ್ಲಿ ದಸ್ತಾನಿನ ಬದಲಾವಣೆಗಳನ್ನು ಅಳೆಯಬಹುದು. ದಾಸ್ತಾನಿನಲ್ಲಿನ ಇಂತಹ ಬದಲಾವಣೆಗಳನ್ನು ಹರಿವು ಎಂದು ಕರೆಯುತ್ತಾರೆ. ಇವುಗಳನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಮಾಪನ ಮಾಡಬಹುದಾಗಿದೆ. ಹಾಗೂ ನಿರ್ದಿಷ್ಟ ಯಂತ್ರವು ಅನೇಕ ವರ್ಷಗಳವರೆಗೆ ಬಂಡವಾಳ ದಾಸ್ತಾನಿನ ಭಾಗವಾಗಿರಬಹುದು.

5. ಮೂರು ವಿಧಾನಗಳಿಂದ ರಾಷ್ಟ್ರದ GDP ಯನ್ನು ಲೆಕ್ಕಾಚಾರ ಮಾಡುವ ಅನನ್ಯತೆಗಳನ್ನು ಬರೆಯಿರಿ. ಮೂರು ವಿಧಾನಗಳಿಂದ ರಾಷ್ಟ್ರದ GDP ಯನ್ನು ಲೆಕ್ಕಾಚಾರ ಮಾಡಬಹುದು.

1) GDP = Σn1=1 GVA1 ಉತ್ಪನ್ನದ ವಿಧಾನ

Σ ಸಂಕೇತವು ಸಂಕ್ಷಿಪ್ತ ರೂಪವಾಗಿದ್ದು ಇದನ್ನು ಸಂಕಲನವನ್ನು ಸೂಚಿಸಲು ಬಳಸಲಾಗುತ್ತದೆ.

2) GDP = Σn1=1 L RV1x+1+G+x-M ವೆಚ್ಚದ ವಿಧಾನವನ್ನು ತೋರಿಸುತ್ತದೆ.

3) GDP = Σm1=1GVA1 = C +1+G+x ಆದಾಯವನ್ನು ತೋರಿಸುವಾಗ

6. ಮುಂಗಡ ಪತ್ರದ ಕೊರತೆ ಮತ್ತು ವ್ಯಾಪಾರ ಕೊರತೆ ಯನ್ನು ವ್ಯಾಖ್ಯಾನಿಸಿ, ಒಂದು ನಿರ್ದಿಷ್ಟ ವರ್ಷದಲ್ಲಿ ಒಂದು ದೇಶದ ಉಳಿತಾಯದ ಮೇಲೆ ಖಾಸಗಿ ಹೂಡಿಕೆಯು 2000 ಕೋಟಿಗಳಷ್ಟಿತ್ತು, ಮುಂಗಡ ಪತ್ರದ ಕೊರತೆಯ ಮೊತ್ತವು (-) 1500 ಕೋಟಿ ರೂಗಳು ದೇಶದ ವ್ಯಾಪಾರ ಕೊರತೆಯ ಪ್ರಮಾಣ ಎಷ್ಟು ?

ಸರ್ಕಾರಗಳಿಸದ ತೆರಿಗೆ ಆದಾಯಕ್ಕೆ ಅದರ ವೆಚ್ಚವು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬುದನ್ನು G-T ಮಾಪನ ಮಾಡುತ್ತದೆ, ಇದನ್ನು “ಮುಂಗಡ ಪತ್ರದ ಕೊರತೆಯೆಂದು” ಉಲ್ಲೇಖಿಸಲಾಗುತ್ತದೆ.

M-x ನ್ನು ವ್ಯಾಪಾರ ವೆಚ್ಚವನ್ನು “ವ್ಯಾಪಾರ ಕೊರತೆಯೆಂದು” ಕರೆಯಲಾಗುತ್ತದೆ.

ಖಾಸಗಿ ಹೂಡಿಕೆ 2000 ರೂ ಮುಂಗಡ ಪತ್ರದ ಕೊರತೆ – (-1500) ಕೋಟಿರೂ ಅಂದರೆ –1500+2000 = 500ರೂಗಳು

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

2nd Puc Economics Chapter 8 Notes

1) ಚಿಲ್ಲರೆ ಬೆಲೆ ಎಂದರೇನು ?

ಗ್ರಾಹಕ ವಾಸ್ತವವಾಗಿ ಪಾವತಿಸುವ ಬೆಲೆಯನ್ನು ಚಿಲ್ಲರೆ ಬೆಲೆ ಎನ್ನುತ್ತೇವೆ.

2) ಸಗಟು ಬೆಲೆ ಎಂದರೇನು ?

ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವ ಬೆಲೆಯನ್ನು ಸಗಟುಬೆಲೆ ಎನ್ನುತ್ತೇವೆ.

3) ಆಡಂಸ್ಮಿತ್‌ ಪ್ರಭಾವ ಶಾಲಿ ಕೃತಿ ಯಾವುದು?

‘ರಾಷ್ಟ್ರಗಳ ಸಂಪತ್ತಿನ ಮತ್ತು ಕಾರಣಗಳ ಒಂದು ಪರಿಶೀಲನೆ.

4) ಅಂತಿಮ ಸರಕು ಎಂದರೇನು?

ಸರಕುಗಳನ್ನು ರೂಪಾಂತರಗೊಳ್ಳದೆ, ಬೇರೆಯೊಬ್ಬರ ಕೈಸೇರದೆ ಅಂತಿಮವಾಗಿ ಒಬ್ಬ ಅನುಭೋಗಿಯ ಕೈಯಲ್ಲಿ ಉಳಿಯುವುದನ್ನು ಅಂತಿಮ ಸರಕು ಎನ್ನುವರು.

5). ಮಧ್ಯಂತರ ಸರಕುಗಳಿಗೆ ಉದಾಹರಣೆ ಕೊಡಿ?

ವಾಹನಗಳ ತಯಾರಿಕೆಯಲ್ಲಿ ಬಳಸಲಾಗುವ ಉಕ್ಕಿನ ಹಾಳೆಗಳು ಮತ್ತು ಪಾತ್ರೆಗಳು ಉತ್ಪಾದಿಸಲು ಬಳಸುವ ಹಿತ್ತಾಳೆ ತಾಮ್ರ ಮೊದಲಾದವು ಮಧ್ಯಂತರ ಸರಕುಗಳಾಗಿವೆ.

6) ಸವಕಳಿ ಎಂದರೇನು?

ಬ೦ಡವಾಳ ನಿಯಮಿತ ಸವಕಲು ಹರಕಲಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಒಟ್ಟು ಹೂಡಿಕೆಯ ಮೌಲ್ಯದಿಂದ ಕಳೆದುದನ್ನು ಸವಕಳಿ ಎನ್ನುವರು.

7) ಆಧುನಿಕ ಅರ್ಥಶಾಸ್ತ್ರದ ಸಂಸ್ಥಾಪಕ ಪಿತನೆಂದು ಯಾರನ್ನು ಕರೆಯುವರು?

ಆಡಂ ಸ್ಮಿತ್

8) ಸಮಗ್ರ ಆರ್ಥಿಕ ಮಾದರಿ ಎಂದರೇನು?

ಕಾಲ್ಪನಿಕ ಆರ್ಥಿಕತೆಯ ವೃತ್ತಾಂತದ ವಿವರಣೆಯನ್ನು ಸಮಗ್ರ ಆರ್ಥಿಕ ಮಾದರಿ ಎನ್ನುತ್ತೇವೆ.

ಸಂಕ್ಷಿಪ್ತವಾಗಿ ಉತ್ತರಿಸಿ:-

1. ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವ ಸಮಯದಲ್ಲಿ ಮೂಲಭೂತವಾಗಿ ಮಾಡಬಹುದಾದ ನಾಲ್ಕು ವಿಧದ ಕೊಡುಗೆಗಳನ್ನು ವಿವರಿಸಿ?

ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವ ಸಮಯದಲ್ಲಿ ಮೂಲಭೂತವಾಗಿ ಮಾಡಬಹುದಾದ ನಾಲ್ಕು ವಿಧದ ಕೊಡುಗೆಗಳು ಇರಬಹುದು.

(ಎ) ಮಾನವ ಶ್ರಮದಿಂದ ನೀಡಲಾದ ಕೊಡುಗೆ, ಇದಕ್ಕೆ ನೀಡಿದ ಸಂಭಾವನೆಯನ್ನು ಕೂಲಿ ಎನ್ನುತ್ತೇವೆ.

(ಬಿ) ಬಂಡವಾದಿಂದ ನೀಡಿದ ಕೊಡುಗೆ, ಇದಕ್ಕೆ ನೀಡಿದ ಸಂಭಾವನೆಯನ್ನು ಬಡ್ಡಿ ಎಂದು ಕರೆಯುತ್ತೇವೆ

(ಸಿ) ಉದ್ಯಮಶೀಲರು ನೀಡಿದ ಕೊಡುಗೆ, ಇದಕ್ಕೆ ನೀಡಿದ ಸಂಭಾನೆಯನ್ನು ಲಾಭ ಎನ್ನುತ್ತೇವೆ

(ಡಿ) ಸ್ಥಿರ ನೈಸರ್ಗಿಕ ಸಂಪನ್ಮೂಲಗಳು (ಭೂಮಿ) ನೀಡಿದ ಕೊಡುಗೆ, ಇದಕ್ಕೆ ನೀಡಿದ ಸಂಭಾವನೆಯನ್ನು ಗೇಣಿ ಎಂದು ಕರೆಯುತ್ತೇವೆ.

2. ತಪಶೀಲ ಪಟ್ಟಿಯ ಯೋಜಿತ ಸಂಗ್ರಹಣೆ ಅಥವಾ ಕುಸಿತವನ್ನು ಉದಾಹರಣೆಯೊಂದಿಗೆ ವಿವರಿಸಿ?

ತಪಶೀಲುಪಟ್ಟಿಯ ಯೋಜಿತ ಸಂಗ್ರಹಣೆ ಅಥವಾ ಕುಸಿತಕ್ಕೆ ಯಾವುದು ಉದಾಹರಣೆಯಾಗಿರಬಹುದು? ಉದ್ಯಮ

ಘಟಕವು ವರ್ಷದಲ್ಲಿ 100 ಶರ್ಟ್‌ಗಳಿಂದ 200 ಶರ್ಟ್‌ಗಳಿಗೆ ತಪಶೀಲು ಪಟ್ಟಿಯನ್ನು ಹೆಚ್ಚಿಸಲು ಬಯಸಿದೆ ಎಂದು ಭಾವಿಸೋಣ. ವರ್ಷದಲ್ಲಿ 1000 ಶರ್ಟ್‌ಗಳ ಮಾರಾಟವನ್ನು (ಮೊದಲಿನಂತೆ) ನಿರೀಕ್ಷಿಸುತ್ತಾ ಉದ್ಯಮ ಘಟಕವು 1000 + 100 = 1100 ಶರ್ಟ್‌ಗಳನ್ನು ಉತ್ಪಾದಿಸುತ್ತದೆ. ವಾಸ್ತವವಾಗಿ ಮಾರಾಟವು 1,000 ಶರ್ಟ್‌ಗಳಾಗಿದ್ದರೆ, ಆ ಉದ್ಯಮ ಘಟಕವು ತಪಶೀಲುಪಟ್ಟಿಯ ಹೆಚ್ಚಳವನ್ನು ಹೊಂದುತ್ತದೆ. ಉದ್ಯಮ ಘಟಕವು ಯೋಚಿಸಿದಂತೆ ತಪಶೀಲುಪಟ್ಟಿ 200 ಶರ್ಟ್‌ಗಳಾಗುತ್ತದೆ. ಈ ಏರಿಕೆಯು

ತಪಶೀಲುಪಟ್ಟಿಯ ಯೋಜಿತ ಶೇಖರಣೆಯ ಒಂದು ಉದಾಹರಣೆಯಾಗಿದೆ. ಮತ್ತೊಂದೆಡೆ ಉದ್ಯಮವು 100 ರಿಂದ 25 ರವರೆಗೆ ತಪಶೀಲುಪಟ್ಟಿಯನ್ನು ಕಡಿಮೆ ಮಾಡಲು ಬಯಸಿದರೆ, ಆಗ ಅದು 1000 – 75 = 925 ಶರ್ಟ್‌ಗಳನ್ನು ಉತ್ಪಾದಿಸುತ್ತದೆ. ಏಕೆಂದರೆ ಇದು ಆರಂಭದ ತಪಶೀಲುಪಟ್ಟಿಯಲ್ಲಿನ 100 ಶರ್ಟ್‌ಗಳಲ್ಲಿ 75 ಅನ್ನು ಮಾರಾಟ ಮಾಡಲು ಯೋಜಿಸಿದೆ. (ಇದರಿಂದ ಈ ಉದ್ಯಮ ಘಟಕವು ವರ್ಷಾಂತ್ಯದ ಕೊನೆಯಲ್ಲಿ 100 – 75 = 25 ಶರ್ಟಗಳ ತಪಶೀಲು ಪಟ್ಟಿಯನ್ನು ಹೊಂದಲು ಬಯಸುತ್ತದೆ. ಒಂದು ವೇಳೆ ಉದ್ಯಮ ಘಟಕವು ನಿರೀಕ್ಷಿಸಿದಂತೆ ಮಾರಾಟವು ವಾಸ್ತವವಾಗಿ 1000 ಶರ್ಟ್‌ಗಳಾದರೆ ಉದ್ಯಮ ಘಟಕವು ಯೋಜಿತ ತಪಶೀಲುಪಟ್ಟಿಯಲ್ಲಿ 25 ಶರ್ಟ್‌ಗಳನ್ನು ಹೊಂದುತ್ತದೆ.

3. ವೆಚ್ಚದ ವಿಧಾನವನ್ನು ವಿವರಿಸಿ

GDPAಯನ್ನು ಲೆಕ್ಕಹಾಕಲು ಒಂದು ಪರ್ಯಾಯ ಮಾರ್ಗವೆಂದರೆ ಉತ್ಪನ್ನಗಳ ಬೇಡಿಕೆಯ ಪರಿಗಣನೆ. ಈ ವಿಧಾನವನ್ನು ವೆಚ್ಚದ ವಿಧಾನವೆಂದು ಕರೆಯಲಾಗುತ್ತದೆ. ಈ ಮೊದಲು ವಿವರಿಸಿದ ರೈತ, ಬೇಕರಿಯವನ ಉದಾಹರಣೆಯಲ್ಲಿ ವೆಚ್ಚದ ವಿಧಾನದಿಂದ ಆರ್ಥಿಕತೆಯಲ್ಲಿ ಉತ್ಪನ್ನದ ಸಮಗ್ರ ಮೌಲ್ಯವನ್ನು ಈ ಕೆಳಗಿನ ರೀತಿಯಲ್ಲಿ ಲೆಕ್ಕಚಾರ ಮಾಡಲಾಗುತ್ತದೆ. ಈ ವಿಧಾನದಲ್ಲಿ ನಾವು ಪ್ರತಿ ಉದ್ಯಮ ಘಟಕವು ಕೈಗೊಳ್ಳುವ ಅಂತಿಮ ವೆಚ್ಚವನ್ನು ಸೇರಿಸುತ್ತೇವೆ. ಅಂತಿಮ ವೆಚ್ಚವೆಂದರೆ, ಮಧ್ಯಂತರ ಉದ್ದೇಶಗಳಿಗಾಗಿ ಮಾಡದಿರುವ ವೆಚ್ಚದ ಭಾಗವಾಗಿದೆ. ಬೇಕರಿಯವರು ರೈತರಿಂದ ಖರೀದಿಸುವ * 50 ಮೌಲ್ಯದ ಗೋಧಿಯನ್ನು ಮಧ್ಯವರ್ತಿ ಸರಕುಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅಂತಿಮ ವಿಭಾಗದ ವೆಚ್ಚದ ಆಡಿಯಲ್ಲಿ ಇದು ಬರುವುದಿಲ್ಲ. ಆದ್ದರಿಂದ ಆರ್ಥಿಕತೆಯ ಉತ್ಪನ್ನದ ಮೌಲ್ಯವು 7 200 ಆಗಿದೆ. (ಬೇಕರಿಯವನು ಸ್ವೀಕರಿಸಿದ ಅಂತಿಮ ವೆಚ್ಚ) + 7 50 (ರೈತರು ಪಡೆದ ಅಂತಿಮ ವೆಚ್ಚ) = ವರ್ಷಕ್ಕೆ 7 250.

ಉದ್ಯಮ ಘಟಕ 1, ಈ ಕೆಳಗಿನ ಖಾತೆಗಳಲ್ಲಿ ಅಂತಿಮ ವೆಚ್ಚವನ್ನು ಮಾಡಬಹುದು. (2) ಉದ್ಯಮ ಘಟಕವು ಉತ್ಪಾದಿಸಿದ ಸರಕು ಸೇವೆಗಳ ಮೇಲೆ ಮಾಡಿದ ಅಂತಿಮ ಅನುಭೋಗದ ವೆಚ್ಚ ಇದನ್ನು, ನಾವು Ci ಯಿಂದ ಸೂಚಿಸುತ್ತೇವೆ. ಅನುಭೋಗದ ವೆಚ್ಚವನ್ನು ಕೈಗೊಳ್ಳುವವರು ಹೆಚ್ಚಾಗಿ ಕುಟುಂಬಗಳೇ ಆಗಿವೆಯೆಂದು ನಾವು ಗಮನಿಸಬಹುದು. ಕೆಲವೊಮ್ಮೆ ಉದ್ಯಮಘಟಕಗಳು, ತಮ್ಮ ಅತಿಥಿಗಳು ಅಥವಾ ನೌಕರರನ್ನು ಸತ್ಕರಿಸಲು ಉಪಭೋಗ್ಯಗಳನ್ನು ಖರೀದಿಸುವಂತಹ ಸನ್ನಿವೇಶವು ಇದಕ್ಕೆ ಅಪವಾದವಾಗಬಹುದು.

(ಬಿ) ಉದ್ಯಮ ಘಟಕ 1 ಯು ಉತ್ಪಾದಿಸಿದ ಬಂಡವಾಳ ಸರಕುಗಳ ಮೇಲೆ ಉಂಟಾಗುವ ಇತರ ಉದ್ಯಮಘಟಕಗಳ ಅಂತಿಮ ಹೂಡಿಕೆಯ ವೆಚ್ಚ Ii ಆಗಿದೆ. GDP ಯ ಲೆಕ್ಕಚಾರದಲ್ಲಿ ಮಧ್ಯಂತರ ಸರಕುಗಳ ಮೇಲಿನ ವೆಚ್ಚವನ್ನು ಸೇರಿಸುವುದಿಲ್ಲ ಎಂಬುದನ್ನು ಗಮನಿಸಿ, ಆದರೆ ಹೂಡಿಕೆಯ ಮೇಲಿನ ವೆಚ್ಚವನ್ನು ಸೇರಿಸಲಾಗಿದೆ. ಕಾರಣವೇನೆಂದರೆ ಹೂಡಿಕೆಯ ಸರಕುಗಳು ಉದ್ಯಮ ಘಟಕದೊಂದಿಗೆ ಉಳಿಯುತ್ತವೆ, ಆದರೆ ಮಧ್ಯಂತರ ಸರಕುಗಳನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ಉಪಯೋಗಿಸಲಾಗುತ್ತದೆ.

(ಸಿ) ಉದ್ಯಮ ಘಟಕವು ಉತ್ಪಾದಿಸಿದ ಅಂತಿಮ ಸರಕು ಮತ್ತು ಸೇವೆಗಳ ಮೇಲೆ ಸರ್ಕಾರವು ಮಾಡುವ ವೆಚ್ಚi – ನಾವು ಅದನ್ನು Gi ನಿಂದ ಸೂಚಿಸೋಣ, ಸರ್ಕಾರದ ಅಂತಿಮ ವೆಚ್ಚವು ಅನುಭೋಗದ ಮತ್ತು ಹೂಡಿಕೆಯ ವೆಚ್ಚಗಳೆರಡನ್ನೂ ಒಳಗೊಂಡಿದೆ ಎಂಬುದನ್ನು ಗಮನಿಸಿ.

(ಡಿ) ವಿದೇಶದಲ್ಲಿ ತನ್ನ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡುವ ಮೂಲಕ ಉದ್ಯಮ ಘಟಕವು ರಫ್ತು ಆದಾಯವನ್ನು ಗಳಿಸುತ್ತದೆ. ಇದನ್ನು Xi ನಿಂದ ಸೂಚಿಸಲಾಗುತ್ತದೆ.

4. ಮೂರು ವಿಧಾನಗಳಿಂದ GDPಯನ್ನು ರೇಖಾಚಿತ್ರದಿಂದ ಪ್ರತಿನಿಧಿಸುವುದನ್ನು ತೋರಿಸಿ.

ಕುಟುಂಬಗಳು ಹೇಗೆ ಅವರ ಆದಾಯವನ್ನು ವಿಲೇವಾರಿ ಮಾಡುತ್ತವೆಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಅವರು ವಿಲೇವಾರಿ ಮಾಡಬಹುದಾದ ಮೂರು ಪ್ರಮುಖ ಮಾರ್ಗಗಳಿವೆ. ಒಂದೋ ಅವರು ಅದನ್ನು ಅನುಭೋಗಿಸುತ್ತಾರೆ, ಅಥವಾ ಉಳಿತಾಯ ಮಾಡಿರುತ್ತಾರೆ ಅಥವಾ ತೆರಿಗೆಗಳನ್ನು ಪಾವತಿಸಿರುತ್ತಾರೆ. (ಯಾವುದೇ ನೆರವು ಅಥವಾ ಕೊಡುಗೆ, ವರ್ಗಾವಣೆ ಪಾವತಿಗಳನ್ನು ಸಾಮಾನ್ಯವಾಗಿ ವಿದೇಶಗಳಿಗೆ ಕಳುಹಿಸಲಾಗಿಲ್ಲ ಎಂದು ಭಾವಿಸಲಾಗಿದೆ. ಇದು ಅವರ ಆದಾಯವನ್ನು ವೆಚ್ಚ ಮಾಡಲು ಇರುವ ಮತ್ತೊಂದು ಮಾರ್ಗವಾಗಿದೆ). S ಅವರ ಸಮಗ್ರ ಉಳಿತಾಯವನ್ನು ಮತ್ತು T ಅವರು ಪಾವತಿಸಿದ ಒಟ್ಟು ತೆರಿಗೆಗಳ ಮೊತ್ತವನ್ನು ಪ್ರತಿನಿಧಿಸುತ್ತದೆ ಎಂದುಕೊಳ್ಳೋಣ ಆದ್ದರಿಂದ

GDP C+I+T

(2.4)ಅನ್ನು (2.7) ರ ಜೊತೆ ಹೋಲಿಸಿದರೆ

C+I+G+X-M=S+T ಆಗುತ್ತದೆ

ಎರಡೂ ಕಡೆಗಳಲ್ಲಿ ಅಂತಿಮ ಅನುಭೋಗದ ವೆಚ್ಚ ‘C’ ಅನ್ನು ತೆಗೆದು ಹಾಕಿದರೆ

(I-S)+(G-T) =M-X ಯನ್ನು ಪಡೆಯುತ್ತೇವೆ ಇನ್ನೊಂದು ರೀತಿಯಲ್ಲಿ

ಸರ್ಕಾರ ಗಳಿಸಿದ ತೆರಿಗೆ ಆದಾಯಕ್ಕಿಂತ ಅದರ ವೆಚ್ಚವು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬುದನ್ನು ಮಾಪನ ಮಾಡುತ್ತದೆ. ಇದನ್ನು ಮುಂಗಡ ಪತ್ರದ ಕೊರತೆಯೆಂದು ಉಲ್ಲೇಖಿಸಲಾಗುತ್ತದೆ. ಆದಾಯಕ್ಕಿಂತ ಆಮದು ವೆಚ್ಚವು ಹೆಚ್ಚಾಗಿರುವುದನ್ನು ಮಾಪನ ಮಾಡುತ್ತದೆ. M ದೇಶದ ಹೊರಹರಿವಾಗಿದೆ. X ದೇಶದ ಒಳಹರಿವಾಗಿದೆ)

5. ವೆಚ್ಚ ಮಾಡಬಹುದಾದ ರಾಷ್ಟ್ರೀಯ ಆದಾಯ ಮತ್ತು ಖಾಸಗಿ ಆದಾಯವನ್ನು ವಿವರಿಸಿ.

ವೆಚ್ಚ ಮಾಡಬಹುದಾದ ರಾಷ್ಟ್ರೀಯ ಆದಾಯ ಮತ್ತು ಖಾಸಗಿ ಆದಾಯ

ಈ ವರ್ಗಗಳ ಸಮಗ್ರ ಆರ್ಥಿಕ ಚಲಕಗಳಲ್ಲದೆ ಭಾರತದಲ್ಲಿ, ಕೆಲವು ಇತರ ಸಮಗ್ರ ಆದಾಯದ ವರ್ಗಗಳನ್ನು ರಾಷ್ಟ್ರೀಯ ಆದಾಯದ ಲೆಕ್ಕಾಚಾರದಲ್ಲಿ ಬಳಸಲಾಗುತ್ತದೆ.

ವೆಚ್ಚ ಮಾಡಬಹುದಾದ ರಾಷ್ಟ್ರೀಯ ಆದಾಯ = ಮಾರುಕಟ್ಟೆ ಬೆಲೆಗಳಲ್ಲಿ ನಿವ್ವಳ ರಾಷ್ಟ್ರೀಯ ಉತ್ಪನ್ನ + ವಿಶ್ವದ ಉಳಿದ ಭಾಗಗಳ ಇತರ ಪ್ರಸ್ತುತ ವರ್ಗಾವಣೆಗಳು

ದೇಶೀಯ ಆರ್ಥಿಕತೆಯು ವಿಲೇವಾರಿ ಮಾಡಬಹುದಾದ ಸರಕು ಮತ್ತು ಸೇವೆಗಳ ಗರಿಷ್ಠ ಪ್ರಮಾಣ ಎಷ್ಟೆಂಬುದರ ಬಗ್ಗೆ ಒಂದು ಕಲ್ಪನೆಯನ್ನು ವೆಚ್ಚ ಮಾಡಬಹುದಾದ ರಾಷ್ಟ್ರೀಯವು ನೀಡುತ್ತದೆ. ವಿಶ್ವದ ಇತರ ಭಾಗಗಳಿಂದಾದ ಪ್ರಸ್ತುತ ವರ್ಗಾವಣೆಗಳು ಒಳಗೊಂಡಿರುವ ಅಂಶಗಳೆಂದರೆ ಉಡುಗೊರೆಗಳು, ಅನುದಾನಗಳು ಇತ್ಯಾದಿ.

ಖಾಸಗಿ ಆದಾಯ = ಖಾಸಗಿ ವಲಯಯಕ್ಕೆ ನಿವ್ವಳ ದೇಶೀಯ ಉತ್ಪನ್ನಗಳಿಂದ ಸೇರುವ ಉತ್ಪಾದನಾಂಗದ ಆದಾಯ + ರಾಷ್ಟ್ರೀಯ ಸಾಲದ ಬಡ್ಡಿ + ವಿದೇಶಗಳ ಉತ್ಪಾದನಾಂಗದ ನಿವ್ವಳ ಆದಾಯ + ಸರ್ಕಾರದ ಪ್ರಸ್ತುತ ವರ್ಗಾವಣೆಗಳು + ವಿಶ್ವದ ಉಳಿದ ಭಾಗಗಳ ಇತರ ನಿವ್ವಳ ವರ್ಗಾವಣೆಗಳು

6. ವಿತವಲ್ಲದ ವಿನಿಮಯಗಳು ಯಾವುವು?

ವಿತ್ತೀಯವಲ್ಲದ ವಿನಿಮಯಗಳು: ಆರ್ಥಿಕತೆಯಲ್ಲಿ ಅನೇಕ ಚಟುವಟಿಕೆಗಳು ಹಣದ ಮೂಲಕ (ವಿತ್ತೀಯ) ಮಾಪನಕ್ಕೆ ಒಳಗಾಗುವುದಿಲ್ಲ. ಉದಾಹರಣೆಗೆ, ಮನೆಯಲ್ಲಿ ಮಹಿಳೆಯರು ನಿರ್ವಹಿಸುವ ಗೃಹಕೃತ್ಯ ಸೇವೆಗಳಿಗೆ ಹಣ ಪಾವತಿಸಲಾಗುವುದಿಲ್ಲ. ಹಣದ ಸಹಾಯವಿಲ್ಲದೇ ಅನೌಪಚಾರಿಕ ವಲಯದಲ್ಲಿ ನಡೆಯುವ ವಿನಿಮಯ ಪದ್ಧತಿಯನ್ನು ಸಾಟಿ ವಿನಿಮಯ ಪದ್ಧತಿ ಎಂದು ಕರೆಯಲಾಗುತ್ತದೆ. ವಿನಿಮಯದಲ್ಲಿ ಸರಕುಗಳನ್ನು (ಅಥವಾ ಸೇವೆಗಳು) ನೇರವಾಗಿ ಸರಕುಗಳಿಗೆ ವಿನಿಮಯ ಮಾಡಲಾಗುತ್ತದೆ. ಆದರೆ ಹಣವನ್ನು ಬಳಸದೆ ಇರುವುದರಿಂದ, ಈ ವಿನಿಮಯಗಳನ್ನು ಆರ್ಥಿಕ ಚಟುವಟಿಕೆಯ ಭಾಗವಾಗಿ ನೋಂದಾಯಿಸಲಾಗಿರುವುದಿಲ್ಲ ಅಭಿವೃದ್ಧಿಶೀಲ ದೇಶಗಳಲ್ಲಿ, ಅನೇಕ ಹಿಂದುಳಿದ ಪ್ರದೇಶಗಳಲ್ಲಿ ಈ ರೀತಿಯ ವಿನಿಮಯ ನಡೆಯುತ್ತದೆ, ಆದರೆ ಅವುಗಳನ್ನು ಸಾಮಾನ್ಯವಾಗಿ ಆ ದೇಶಗಳ GDPಗಳಲ್ಲಿ ಪರಿಗಣಿಸಲಾಗುವುದಿಲ್ಲ. ಇದು ಒಂದು GDPಯ ಕಡಿಮೆ ಅಂದಾಜಿನ ಪ್ರಕರಣವಾಗುತ್ತದೆ. ಆದ್ದರಿಂದ ಪ್ರಮಾಣಿತ ರೀತಿಯಲ್ಲಿ ಲೆಕ್ಕ ಹಾಕಿದ GDPಯು ಆ ದೇಶದ ಉತ್ಪಾದನಾ ಚಟುವಟಿಕೆ ಮತ್ತು ಯೋಗಕ್ಷೇಮದ ಸ್ಪಷ್ಟ ಸೂಚನೆಯನ್ನು ಕೊಡದಿರಬಹುದು.

FAQ :

1. GDP ಅನಪ್ರಸರಣಕ ಎಂದರೇನು?

ನೈಜ GDP ನಾಮ ಮಾತ್ರದ GDP ಯ ಅನುಪಾತವು ಒಂದು ಜನಪ್ರಿಯ ಬೆಲೆಗಳ ಸೂಚಿಯಾಗಿದೆ. ಇದನ್ನು ಯ ಅನಪ್ರಸರಣಕ ಎಂದು ಕರೆಯಲಾಗುತ್ತದೆ.

2. ಚಿಲ್ಲರೆ ಬೆಲೆ ಎಂದರೇನು ?

ಗ್ರಾಹಕ ವಾಸ್ತವವಾಗಿ ಪಾವತಿಸುವ ಬೆಲೆಯನ್ನು ಚಿಲ್ಲರೆ ಬೆಲೆ ಎನ್ನುತ್ತೇವೆ.

3. ಅಂತಿಮ ಸರಕು ಎಂದರೇನು?

ಸರಕುಗಳನ್ನು ರೂಪಾಂತರಗೊಳ್ಳದೆ, ಬೇರೆಯೊಬ್ಬರ ಕೈಸೇರದೆ ಅಂತಿಮವಾಗಿ ಒಬ್ಬ ಅನುಭೋಗಿಯ ಕೈಯಲ್ಲಿ ಉಳಿಯುವುದನ್ನು ಅಂತಿಮ ಸರಕು ಎನ್ನುವರು.

ಇತರೆ ವಿಷಯಗಳು :

2nd Puc All Subject Notes

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh