rtgh

ದ್ವಿತೀಯ ಪಿ.ಯು.ಸಿ ಸಮಗ್ರ ಅರ್ಥಶಾಸ್ತ್ರ ಭಾಗ-2 ಪೀಠಿಕೆ ನೋಟ್ಸ್‌ | 2nd Puc Economics Chapter 7 Notes in Kannada

ದ್ವಿತೀಯ ಪಿ.ಯು.ಸಿ ಸಮಗ್ರ ಅರ್ಥಶಾಸ್ತ್ರ ಭಾಗ-2 ಪೀಠಿಕೆ ನೋಟ್ಸ್‌ ಪ್ರಶ್ನೋತ್ತರಗಳು, 2nd Puc Economics Chapter 7 Notes Question Answer Mcq Pdf Download in Kannada Medium 2023 2nd Puc Introduction to Macro Economics in Kannada Kseeb Solutions For Class 12 Economics Chapter 7 Notes Samagra Arthashastrada Parichaya in Kannada 2nd Puc Economics 7th Lesson Notes 2nd Puc Economics Part 2 Chapter 1

2nd Puc Economics Chapter 7 Notes in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಬಂಡವಾಳ ಶಾಹಿ ದೇಶದ ಆರ್ಥಿಕತೆಯ ಕಾರ್ಯವೈಖರಿಯನ್ನು ವಿವರಿಸಿ.

1929 ರ ಮಹಾ ಆರ್ಥಿಕ ಕುಸಿತ ಉಂಟಾಗಿತ್ತು, ನಂತರದ ವರ್ಷಗಳು ಯೂರೋಪ್ ಮತ್ತು ಉತ್ತರ ಅಮೇರಿಕಾ ದೇಶಗಳಲ್ಲಿನ ಉತ್ಪಾದನೆ ಮತ್ತು ಉದ್ಯೋಗದ ಮಟ್ಟವು ಭಾರಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಯಿತು. ಇದು ಜಗತ್ತಿನ ಇತರ ದೇಶಗಳ ಮೇಲು ಪರಿಣಾಮ ಬೀರಿತು ಮಾರುಕಟ್ಟೆಯಲ್ಲಿ ಸರಕುಗಳಿಗೆ ಬೇಡಿಕೆ ಕಡಿಮೆಯಾಯಿತು. ಹಲವು ಕಾರ್ಖಾನೆಗಳು ಕೆಲಸವಿಲ್ಲದೆ ಸ್ಥಗಿತವಾಗಿದ್ದವು, ಕಾರ್ಮಿಕರು ಕೆಲಸ ಕಳೆದು ಕೊಂಡರು.

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ 1929 ರಿಂದ 1933 ರ ನಡುವೆ ನಿರುದ್ಯೋಗ ದರವು ಶೇ 3 ರಿಂದ ಶೇ 25 ಕ್ಕೆ ಏರಿತು. ಇದೇ ಅವಧಿಯಲ್ಲಿ USA ಒಟ್ಟು ಉತ್ಪನ್ನವು 33% ರಷ್ಟು ಕುಸಿಯಿತು. ಹೊಸ ಮಾರ್ಗವನ್ನು ಯೋಚಿಸುವಂತೆ ಮಾಡಿತು, ಇದು ಅರ್ಥವ್ಯವಸ್ಥೆಯು ಹೊಂದಿರಬಹುದಾದ ಧೀರ್ಘಕಾಲೀನ ನಿರುದ್ಯೋಗವನ್ನು ಸೈದ್ಧಾಂತಿಕರಿಸುವ ಮತ್ತು ವಿವರಿಸುವಂತೆ ಮಾಡಿತು. ಈ ದಿಶೆಯಲ್ಲಿ ಕೇನ್ಸರವರ ಗ್ರಂಥವು ಒಂದು ಪ್ರಯತ್ನವಾಗಿದೆ. ಇದರ ಮೂಲಕ ಅರ್ಥವ್ಯವಸ್ಥೆಯ ಕಾರ್ಯ ವಿಧಾನವನ್ನು ಅದರ ಸಮಗ್ರತೆಯಲ್ಲಿ ಪರೀಕ್ಷಿಸುವುದು ಮತ್ತು ವಿವಿಧ ವಲಯಗಳ ಪರಸ್ಪರಾವಲಂಬನೆಯನ್ನು ಪರೀಕ್ಷಿಸಲಾಯಿತು, ಒಟ್ಟಾರೆ ಸಮಗ್ರ ಅರ್ಥಶಾಸ್ತ್ರದ ಉದಯಕ್ಕೆ ಕಾರಣವಾಯಿತು.

2. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳೆರಡರಲ್ಲಿ ಸರ್ಕಾರದ (ರಾಜ್ಯ) ಮತ್ತು ಕುಟುಂಬ ವಲಯದ ಪಾತ್ರವನ್ನು ವಿವರಿಸಿ.

1) ಕುಟುಂಬ

ಏಷ್ಯಾದ ಕೆಲವು ದೇಶಗಳು ಬಂಡವಾಳಶಾಹಿ ದೇಶಗಳ ಅರ್ಹತೆಯನ್ನು ಪಡೆದಿವೆ, ಕೂಲಿ ಕಾರ್ಮಿಕರನ್ನು ಅಪರೂಪಕ್ಕೆ ಬಳಸಿಕೊಳ್ಳಲಾಗುತ್ತದೆ, ಮತ್ತು ಬಹುತೇಕ ಶ್ರಮವನ್ನು ಕುಟುಂಬದ ಸದಸ್ಯರು ಅವರಷ್ಟಕ್ಕೆ ಅವರೇ ನಿರ್ವಹಿಸುತ್ತಾರೆ.

ಉತ್ಪಾದನೆಯಲ್ಲವೂ ಪೂರ್ಣವಾಗಿ ಮಾರುಕಟ್ಟೆಗಾಗಿ ಅಲ್ಲ, ಅದರ ದೊಡ್ಡ ಭಾಗವು ಕುಟುಂಬದವರೇ ಅನುಭೋಗಿ ಸುತ್ತಾರೆ. ಹಲವು ರೈತರು ಕಾಲಾವಧಿಯಲ್ಲಿ ಬಂಡವಾಳ ದಾಸ್ತಾನಿನ ಗಮನಾರ್ಹ ಏರಿಕೆಯನ್ನು ಅನುಭವಿಸಲಾಗಲಿಲ್ಲ. ಕೆಲವು ಬುಡಕಟ್ಟು ಸಮಾಜಗಳಲ್ಲಿ ಭೂಮಿಯ ಒಡೆತನ ಅಸ್ತಿತ್ವದಲ್ಲಿಲ್ಲ ಭೂಮಿಯು ಇಡೀ ಬುಡಕಟ್ಟಿಗೆ ಸೇರಿರುತ್ತದೆ.

2) ಸರಕಾರ

ತೆರಿಗೆ ವಿಧಿಸುವುದು ಮತ್ತು ಸಾರ್ವಜನಿಕ ಮೂಲ ಸೌಕರ್ಯಗಳ ನಿರ್ಮಾಣ, ಶಾಲಾ ಕಾಲೇಜು ನಡೆಸುವುದು, ಆರೋಗ್ಯ ಸೇವೆ ಒದಗಿಸುವುದು ಇತ್ಯಾದಿಗಳಿಗೆ ಹಣವನ್ನು ಖರ್ಚು ಮಾಡುವುದಲ್ಲದೆ ರಾಜ್ಯವು ಉತ್ಪಾದನೆಯನ್ನು ನಿರ್ವಹಿಸುವ ಹಲವು ನಿದರ್ಶನಗಳಿವೆ. ನಾವು ದೇಶದ ಅರ್ಥವ್ಯವಸ್ಥೆಯನ್ನು ವಿವರಿಸಲು ಬಯಸುವಾಗ ರಾಜ್ಯದ ಈ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನೆ ಸರಕಾರ ಎಂದು ಕರೆಯುವರು.

ಅಭ್ಯಾಸದ ಪ್ರಶ್ನೆಗಳು :

1. ಸೂಕ್ಷ್ಮ ಅರ್ಥಶಾಸ್ತ್ರ ಮತ್ತು ಸಮಗ್ರ ಅರ್ಥಶಾಸ್ತ್ರದ ವ್ಯತ್ಯಾಸವೇನು ?

ಸೂಕ್ಷ್ಮ ಅರ್ಥಶಾಸ್ತ್ರ ಮತ್ತು ಸಮಗ್ರ ಅರ್ಥಶಾಸ್ತ್ರದಲ್ಲಿ ನಾವು ಈ ಕೆಳಕಂಡ ವ್ಯತ್ಯಾಸಗಳನ್ನು ಗುರ್ತಿಸಬಹುದು.

ಸೂಕ್ಷ್ಮ ಅರ್ಥಶಾಸ್ತ್ರ

  1. ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ ವೈಯಕ್ತಿಕ ಆರ್ಥಿಕ ಏಜೆಂಟ್ ಗಳು ಮತ್ತು ಅವುಗಳಿಗೆ ಚಾಲನೆ ನೀಡುವ ಉತ್ತೇಜನಗಳ ಸ್ವಭಾವವನ್ನು ಕಾಣಬಹುದು.
  2. ಸೂಕ್ಷ್ಮ ಅರ್ಥಶಾಸ್ತ್ರವು ವೈಯಕ್ತಿಕ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಗಳ ಅಧ್ಯಯನವಾಗಿದೆ.
  3. ತನ್ನ ಷೇರುದಾರರ ಹಿತಾಸಕ್ತಿಗೆ ತಕ್ಕಂತೆ ವ್ಯವಹರಿಸ ಬೇಕಾಗುತ್ತದೆ. ಒಟ್ಟಾರೆ ದೇಶದ ಹಿತಾಸಕ್ತಿಯಾಗಿರಲೇ ಬೇಕಾದ ಅವಶ್ಯಕತೆ ಇರುವುದಿಲ್ಲ

ಸಮಗ್ರ ಅರ್ಥಶಾಸ್ತ್ರ

  1. ಸಮಗ್ರ ಅರ್ಥಶಾಸ್ತ್ರವು, ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ ಸಮಗ್ರ ಆರ್ಥಿಕ ನೀತಿಯನ್ನು ರಾಜ್ಯ, ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ಭದ್ರತೆ ಮಂಡಳಿಯು ನೊಡಿಕೊಳ್ಳುತ್ತದೆ.
  2. ಸಮಗ್ರ ಅರ್ಥಶಾಸ್ತ್ರವು ಮಾರುಕಟ್ಟೆಗಳಲ್ಲಿನ ಬೇಡಿಕೆ ಮತ್ತು ಪೂರೈಕೆ ಶಕ್ತಿಗಳ ಸಮಗ್ರ ಪರಿಣಾಮಗಳನ್ನು ಅಧ್ಯಯನ ಮಾಡುತ್ತದೆ.
  3. ಆದರೆ ಸಮಗ್ರ ಅರ್ಥಶಾಸ್ತ್ರವು ಸಮಾಜ ಮತ್ತು ಸರ್ಕಾರದ ಕೆಲವು ಪ್ರಮುಖ ಸಾಮಾಜಿಕ ಗುರಿಗಳನ್ನು ಉದ್ಯೋಗ, ಆಡಳಿತ, ರಕ್ಷಣೆ, ಶಿಕ್ಷಣ ಮತ್ತು ಆರೋಗ್ಯಗಳಂಥಹ ಕ್ಷೇತ್ರಗಳು ನಿಸ್ವಾರ್ಥವಾಗಿ ಸಾಧಿಸ ಬೇಕೆಂಬುದನ್ನು ತಿಳಿಸುತ್ತದೆ.

2. ಬಂಡವಾಳ ಶಾಹಿ ಅರ್ಥವ್ಯವಸ್ಥೆಯ ಪ್ರಮುಖ ಲಕ್ಷಣ ಗಳಾವುವು ?

ಬಂಡವಾಳ ಶಾಹಿ ಅರ್ಥವ್ಯವಸ್ಥೆಯ ಪ್ರಮುಖ ಲಕ್ಷಣಗಳೆಂದರೆ –

  1. ಉತ್ಪಾದನಾ ಸಾಧನಗಳ ಖಾಸಗಿ ಒಡೆತನವಿರುತ್ತದೆ.
  2. 2. ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರುವ ಉದ್ದೇಶಕ್ಕಾಗಿ ಉತ್ಪಾದನೆಯಾಗುತ್ತದೆ.
  3. ಯಾವ ಬೆಲೆಗೆ ಶ್ರಮದ ಮಾರಟ ಮತ್ತು ಖರೀದಿ ಆಗುತ್ತದೋ ಅದನ್ನೇ ಕೂಲಿಯ ದರ ಎಂದು ಕರೆಯಲಾಗುತ್ತದೆ.

3. ಸಮಗ್ರ ಅರ್ಥಶಾಸ್ತ್ರದ ದೃಷ್ಟಿಕೋನದ ಪ್ರಕಾರ ಆರ್ಥಿ ಕತೆಯ ನಾಲ್ಕು ಪ್ರಮುಖ ವಲಯಗಳನ್ನು ವಿವರಿಸಿ.

ಸಮಗ್ರ ಅರ್ಥಶಾಸ್ತ್ರದ ದೃಷ್ಟಿಕೋನದ ಪ್ರಕಾರ ಆರ್ಥಿಕತೆಯ ಪ್ರಮುಖ ನಾಲ್ಕು ವಲಯಗಳೆಂದರೆ-

1) ಕುಟುಂಬ

2) ಉದ್ಯಮಗಳು

3) ಸರಕಾರ ಮತ್ತು

4) ಬಾಹ್ಯ ವಲಯ

1) ಕುಟುಂಬ

ಏಷ್ಯಾದ ಕೆಲವು ದೇಶಗಳು ಬಂಡವಾಳಶಾಹಿ ದೇಶಗಳ ಅರ್ಹತೆಯನ್ನು ಪಡೆದಿವೆ, ಕೂಲಿ ಕಾರ್ಮಿಕರನ್ನು ಅಪರೂಪಕ್ಕೆ ಬಳಸಿಕೊಳ್ಳಲಾಗುತ್ತದೆ, ಮತ್ತು ಬಹುತೇಕ ಶ್ರಮವನ್ನು ಕುಟುಂಬದ ಸದಸ್ಯರು ಅವರಷ್ಟಕ್ಕೆ ಅವರೇ ನಿರ್ವಹಿಸುತ್ತಾರೆ.

ಉತ್ಪಾದನೆಯಲ್ಲವೂ ಪೂರ್ಣವಾಗಿ ಮಾರುಕಟ್ಟೆಗಾಗಿ ಅಲ್ಲ, ಅದರ ದೊಡ್ಡ ಭಾಗವು ಕುಟುಂಬದವರೇ ಅನುಭೋಗಿ ಸುತ್ತಾರೆ. ಹಲವು ರೈತರು ಕಾಲಾವಧಿಯಲ್ಲಿ ಬಂಡವಾಳ ದಾಸ್ತಾನಿನ ಗಮನಾರ್ಹ ಏರಿಕೆಯನ್ನು ಅನುಭವಿಸಲಾಗಲಿಲ್ಲ. ಕೆಲವು ಬುಡಕಟ್ಟು ಸಮಾಜಗಳಲ್ಲಿ ಭೂಮಿಯ ಒಡೆತನ ಅಸ್ತಿತ್ವದಲ್ಲಿಲ್ಲ ಭೂಮಿಯು ಇಡೀ ಬುಡಕಟ್ಟಿಗೆ ಸೇರಿರುತ್ತದೆ.

2) ಉದ್ಯಮಗಳು

ಪ್ರಸ್ತುತ ಉತ್ಪಾದನಾ ಘಟಕಗಳನ್ನು ಉದ್ಯಮಗಳು ಎಂದು ಕರೆಯಲಾಗಿದೆ. ಉದ್ಯಮದಲ್ಲಿ ಉದ್ಯಮಿಗಳು ವ್ಯವಹಾರದ ಕೇಂದ್ರ ಬಿಂದುವಾಗಿರುತ್ತಾರೆ. ಅವರು ಮಾರುಕಟ್ಟೆಯಿಂದ ಕಾರ್ಮಿಕರನ್ನು ಕೂಲಿಗಾಗಿ ತೆಗೆದುಕೊಳ್ಳುತ್ತಾರೆ, ಜೊತೆಗೆ ಬಂಡವಾಳ ಮತ್ತು ಭೂಮಿಯ ಸೇವೆಗಳನ್ನು ನೇಮಿಸಿಕೊಳ್ಳುತ್ತಾರೆ. ಹೂಡುವಳಿಗಳೆಲ್ಲವನ್ನು ಕೈಗೆತ್ತಿಕೊಳ್ಳುತ್ತಾರೆ, ಸರಕು ಮತ್ತು ಸೇವೆಗಳನ್ನು ಇದನ್ನು ಇಲ್ಲಿ ಉತ್ಪಾದನೆ ಎಂದು ಕರೆಯಲಾಗಿದೆ. ಉತ್ಪಾದಿಸಲು ಅವರಿಗಿರುವ ಉತ್ತೇಜನವೆಂದರೆ ಅವುಗಳನ್ನು ಮಾರಾಟ ಮಾಡಿ ಲಾಭಗಳಿಸುವುದು. ಈ ಪ್ರಕ್ರಿಯೆಯಲ್ಲಿ ಅವರು ಗಂಡಾಂತರಗಳನ್ನು ಮತ್ತು ಅನಿಶ್ಚತೆಯನ್ನು ನಿಭಾಯಿಸುತ್ತಾರೆ.

ಉದಾಹರಣೆಗೆ – ಅವರು ಉತ್ಪಾದಿಸುತ್ತಿರುವ ಸರಕುಗಳಿಗೆ ಸಾಕಷ್ಟು ಹೆಚ್ಚಿನ ಬೆಲೆಯನ್ನು ಅವರು ಪಡೆಯುವುದಿಲ್ಲ. ಇವರು ಗಳಿಸುವ ಲಾಭದ ಇಳಿಕೆಗೆ ಕಾರಣವಾಗುತ್ತದೆ.

3) ಸರಕಾರ

ತೆರಿಗೆ ವಿಧಿಸುವುದು ಮತ್ತು ಸಾರ್ವಜನಿಕ ಮೂಲ ಸೌಕರ್ಯಗಳ ನಿರ್ಮಾಣ, ಶಾಲಾ ಕಾಲೇಜು ನಡೆಸುವುದು, ಆರೋಗ್ಯ ಸೇವೆ ಒದಗಿಸುವುದು ಇತ್ಯಾದಿಗಳಿಗೆ ಹಣವನ್ನು ಖರ್ಚು ಮಾಡುವುದಲ್ಲದೆ ರಾಜ್ಯವು ಉತ್ಪಾದನೆಯನ್ನು ನಿರ್ವಹಿಸುವ ಹಲವು ನಿದರ್ಶನಗಳಿವೆ. ನಾವು ದೇಶದ ಅರ್ಥವ್ಯವಸ್ಥೆಯನ್ನು ವಿವರಿಸಲು ಬಯಸುವಾಗ ರಾಜ್ಯದ ಈ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನೆ ಸರಕಾರ ಎಂದು ಕರೆಯುವರು.

4) ಬಾಹ್ಯ ವಲಯ

ಬಾಹ್ಯವಲಯವು ವಾಣಿಜ್ಯ – ವ್ಯಾಪಾರಕ್ಕೆ ಸಂಬಂಧಿ ಸಿರುತ್ತದೆ, ವ್ಯಾಪಾರವು ಎರಡು ವಿಧಗಳಲ್ಲಿ ನಡೆಯುವುದು

  1. ರಫ್ತು
  2. ಆಮದು

ಅಂದರೆ ಇದು ವಿದೇಶಿ ವ್ಯಾಪಾರದ ಪ್ರಮುಖ ಅಂಗವಾಗಿದೆ. ಹೀಗೆ ಸಮಗ್ರ ಅರ್ಥಶಾಸ್ತ್ರವು ಕುಟುಂಬ, ಉದ್ಯಮ, ಸರಕಾರ ಮತ್ತು ಬಾಹ್ಯವಲಯವೆಂಬ ನಾಲ್ಕು ವಲಯಗಳನ್ನು ಒಳಗೊಂಡಿರುತ್ತದೆ.

4. 1929 ರ ಮಹಾ ಆರ್ಥಿಕ ಕುಸಿತವನ್ನು ವಿವರಿಸಿ.

1929 ರ ಮಹಾ ಆರ್ಥಿಕ ಕುಸಿತ ಉಂಟಾಗಿತ್ತು, ನಂತರದ ವರ್ಷಗಳು ಯೂರೋಪ್ ಮತ್ತು ಉತ್ತರ ಅಮೇರಿಕಾ ದೇಶಗಳಲ್ಲಿನ ಉತ್ಪಾದನೆ ಮತ್ತು ಉದ್ಯೋಗದ ಮಟ್ಟವು ಭಾರಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಯಿತು. ಇದು ಜಗತ್ತಿನ ಇತರ ದೇಶಗಳ ಮೇಲು ಪರಿಣಾಮ ಬೀರಿತು ಮಾರುಕಟ್ಟೆಯಲ್ಲಿ ಸರಕುಗಳಿಗೆ ಬೇಡಿಕೆ ಕಡಿಮೆಯಾಯಿತು. ಹಲವು ಕಾರ್ಖಾನೆಗಳು ಕೆಲಸವಿಲ್ಲದೆ ಸ್ಥಗಿತವಾಗಿದ್ದವು, ಕಾರ್ಮಿಕರು ಕೆಲಸ ಕಳೆದು ಕೊಂಡರು.

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ 1929 ರಿಂದ 1933 ರ ನಡುವೆ ನಿರುದ್ಯೋಗ ದರವು ಶೇ 3 ರಿಂದ ಶೇ 25 ಕ್ಕೆ ಏರಿತು. ಇದೇ ಅವಧಿಯಲ್ಲಿ USA ಒಟ್ಟು ಉತ್ಪನ್ನವು 33% ರಷ್ಟು ಕುಸಿಯಿತು. ಹೊಸ ಮಾರ್ಗವನ್ನು ಯೋಚಿಸುವಂತೆ ಮಾಡಿತು, ಇದು ಅರ್ಥವ್ಯವಸ್ಥೆಯು ಹೊಂದಿರಬಹುದಾದ ಧೀರ್ಘಕಾಲೀನ ನಿರುದ್ಯೋಗವನ್ನು ಸೈದ್ಧಾಂತಿಕರಿಸುವ ಮತ್ತು ವಿವರಿಸುವಂತೆ ಮಾಡಿತು. ಈ ದಿಶೆಯಲ್ಲಿ ಕೇನ್ಸ್‌ರವರ ಗ್ರಂಥವು ಒಂದು ಪ್ರಯತ್ನವಾಗಿದೆ. ಇದರ ಮೂಲಕ ಅರ್ಥವ್ಯವಸ್ಥೆಯ ಕಾರ್ಯ ವಿಧಾನವನ್ನು ಅದರ ಸಮಗ್ರತೆಯಲ್ಲಿ ಪರೀಕ್ಷಿಸುವುದು ಮತ್ತು ವಿವಿಧ ವಲಯಗಳ ಪರಸ್ಪರಾವಲಂಬನೆಯನ್ನು ಪರೀಕ್ಷಿಸಲಾಯಿತು, ಒಟ್ಟಾರೆ ಸಮಗ್ರ ಅರ್ಥಶಾಸ್ತ್ರದ ಉದಯಕ್ಕೆ ಕಾರಣವಾಯಿತು.

III ಒಂದು ವಾಕ್ಯದಲ್ಲಿ ಉತ್ತರಿಸಿ.

1) ಸಮಗ್ರ ಅರ್ಥ ಶಾಸ್ತ್ರ ಎಂದರೇನು?

ಸಂಪೂರ್ಣ ಆರ್ಥಿಕತೆಯನ್ನು ಒಳಗೊಳ್ಳುವ ಸಮ ಗ್ರತೆಗಳ ಅಧ್ಯಯನವನ್ನು ‘ಸಮಗ್ರ ಅರ್ಥಶಾಸ್ತ್ರ’ ಎನ್ನುವರು. ದೇಶದ ಒಟ್ಟು ಉತ್ಪಾದನೆ ಮತ್ತು ಉದ್ಯೋಗ ಮಟ್ಟವು ಬೆಲೆಗಳು, ಬಡ್ಡಿದರ, ಕೂಲಿಯ ದರ, ಲಾಭಗಳು ಇತ್ಯಾದಿ ಗಳನ್ನು ವಿವರವಾಗಿ ತಿಳಿಸಿಕೊಡುವ ಅಧ್ಯಯನವೇ ಸಮಗ್ರ ಅರ್ಥಶಾಸ್ತ್ರವಾಗಿದೆ.

2)ಆರ್ಥಿಕ ಏಜೆಂಟರುಗಳೆಂದರೆ ಯಾರು?

ಆರ್ಥಿಕ ನಿರ್ಣಯಗಳನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳು ಎಂಬುದಾಗಿ ಅರ್ಥೈಸಬಹುದು, ಏಜೆಂಟರು ಉತ್ಪಾದಕರು ಆಗಿರಬಹುದು ಅಥವಾ ಅನುಭೋಗಿಗಳಾಗಿರಬಹುದು.

3) ಸಮಗ್ರ ಅರ್ಥಶಾಸ್ತ್ರವನ್ನು ಏನೆಂದು ಕರೆಯಲಾಗುತ್ತದೆ?

ಸಂಪ್ರದಾಯ ಪಂಥದ ಚಿಂತನೆ ಎಂದು ಕರೆಯಲಾಗುತ್ತದೆ.

4) ಅರ್ಥಶಾಸ್ತ್ರವನ್ನು ಪ್ರತಿ ಪಾದಿಸಿದವರು ಯಾರು?

ಪ್ರಸಿದ್ದ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡಕೀನ್ಸೆ

5) ಪ್ರಮುಖ ಮೂರು ಉತ್ಪಾದನಾಂಗಗಳು ಎಂದರೆ ಯಾವುವು?

ಬಂಡವಾಳ, ಭೂಮಿ ಮತ್ತು ಶ್ರಮ ಇವು ಪ್ರಮುಖ ಉತ್ಪಾದನಾಂಗಗಳಾಗಿವೆ.

6) ಸಂಪ್ರದಾಯ ಪಂಥದ ಚಿಂತನೆ ಎಂದರೇನು ?

ಕೆಲಸ ಮಾಡಲು ಸಿದ್ದರಿರುವ ಕಾರ್ಮಿಕರು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಇದನ್ನೆ ಸಂಪ್ರದಾಯ ಪಂಥದ ಚಿಂತನೆ ಎಂದು ಕರೆಯುವರು.

7) ಆಧುನಿಕ ಅರ್ಥಶಾಸ್ತ್ರದ ಪಿತಾಮಹಾ ಎಂದು ಯಾರನ್ನು ಕರೆಯುವರು ?

ಆಡಂ ಸ್ಮಿತ್

8) ಸಮಗ್ರ ಅರ್ಥಶಾಸ್ತ್ರದ ಉದಯಕ್ಕೆ ಕಾರಣರಾದವರುಯಾರು ?

ಜಾನ್ ಮೇನಾರ್ಡ್ ಕೇನ್ಸ್

9) ಉತ್ಪಾದನಾ ವೆಚ್ಚವನ್ನು ಹೆಚ್ಚಿಸುವ ವೆಚ್ಚವನ್ನು ಏನೆಂದು ಕರೆಯುವರು ?

ಹೂಡಿಕೆ ವೆಚ್ಚ

10) ಕೂಲಿ ಶ್ರಮ ಎಂದರೇನು ?

ಶ್ರಮವನ್ನು ಕೂಲಿಗೆ ಪ್ರತಿಯಾಗಿ ಖರೀದಿಸುವುದಕ್ಕೆ ಮಾರುವುದಕ್ಕೆ ‘ಕೂಲಿಶ್ರಮ’ ಎನ್ನುವರು.

11) ರಫ್ತು ಎಂದರೇನು ?

ಸ್ವದೇಶವು ಜಗತ್ತಿನ ಇತರ ರಾಷ್ಟ್ರಗಳಿಗೆ ಸರಕುಗಳನ್ನು ಮಾರುವುದನ್ನು ರಫ್ತು ಎನ್ನುವರು.

12) ಆಮದು ಎಂದರೇನು ?

ಜಗತ್ತಿನ ಇತರ ದೇಶಗಳಿಂದ ಸರಕುಗಳನ್ನು ಖರೀದಿಸುವುದನ್ನು ಆಮದು ಎನ್ನುವರು.

13) ಯಾವಾಗ ಸಮಗ್ರ ಅರ್ಥ ಶಾಸ್ತ್ರದ ಉದಯವಾಯಿತು?

1930 ರಲ್ಲಿ

14) ಸೂಕ್ಷ್ಮ ಅರ್ಥಶಾಸ್ತ್ರದಿಂದ ಸಮಗ್ರ ಅರ್ಥಶಾಸ್ತ್ರವನ್ನು ಪ್ರತ್ಯೇಕಿಸಿದವರು ಯಾರು ?

ಕೇನ್ಸ್ ರವರು

15) ಅರ್ಥ ವ್ಯವಸ್ಥೆಯ ನಾಲ್ಕು ವಲಯಗಳಾವುವು ?

  1. ಕುಟುಂಬ
  2. ಉದ್ಯಮ
  3. ಸರಕಾರ ಮತ್ತು
  4. ಬಾಹ್ಯವಲಯಗಳು

16) ಬಾಹ್ಯ ವಲಯದ ವ್ಯಾಪಾರದ ಎರಡು ವಿಧಗಳು ಯಾವುವು ?

  1. ರಫ್ತು
  2. ಆಮದು

IV. ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ:-

1. ಬಾಹ್ಯವಲಯದೊಂದಿಗೆ ವ್ಯಾಪಾರದ ವಿಧಗಳಾವುವು?

ಬಾಹ್ಯ ವಲಯದೊಂದಿಗೆ ವ್ಯಾಪಾರವು ಎರಡು ವಿಧದಲ್ಲಿ ನಡೆಯುವುವು.

ಅವುಗಳೆಂದರೆ- 1. ಆಮದು 2. ರಫ್ತು

  • ಇತರ ದೇಶಗಳಿಂದ ಸರಕುಗಳನ್ನು ತರಿಸಿ ಕೊಳ್ಳುವು ದನ್ನು ‘ಆಮದು’ ಎನ್ನುವರು.
  • ನಮ್ಮ ದೇಶದಿಂದ ಇತರ ಬೇರೆ ಬೇರೆ ದೇಶಗಳಿಗೆ ವಸ್ತುಗಳನ್ನು ಕಳುಹಿಸುವುದಕ್ಕೆ ‘ರಫ್ತು’ ಎನ್ನುವರು.

FAQ :

1. ಸಮಗ್ರ ಅರ್ಥಶಾಸ್ತ್ರವನ್ನು ಏನೆಂದು ಕರೆಯಲಾಗುತ್ತದೆ?

ಸಂಪ್ರದಾಯ ಪಂಥದ ಚಿಂತನೆ ಎಂದು ಕರೆಯಲಾಗುತ್ತದೆ.

2. ಸಮಗ್ರ ಅರ್ಥ ಶಾಸ್ತ್ರ ಎಂದರೇನು?

ಸಂಪೂರ್ಣ ಆರ್ಥಿಕತೆಯನ್ನು ಒಳಗೊಳ್ಳುವ ಸಮ ಗ್ರತೆಗಳ ಅಧ್ಯಯನವನ್ನು ‘ಸಮಗ್ರ ಅರ್ಥಶಾಸ್ತ್ರ’ ಎನ್ನುವರು. ದೇಶದ ಒಟ್ಟು ಉತ್ಪಾದನೆ ಮತ್ತು ಉದ್ಯೋಗ ಮಟ್ಟವು ಬೆಲೆಗಳು, ಬಡ್ಡಿದರ, ಕೂಲಿಯ ದರ, ಲಾಭಗಳು ಇತ್ಯಾದಿ ಗಳನ್ನು ವಿವರವಾಗಿ ತಿಳಿಸಿಕೊಡುವ ಅಧ್ಯಯನವೇ ಸಮಗ್ರ ಅರ್ಥಶಾಸ್ತ್ರವಾಗಿದೆ.

3. ರಫ್ತು ಎಂದರೇನು ?

ಸ್ವದೇಶವು ಜಗತ್ತಿನ ಇತರ ರಾಷ್ಟ್ರಗಳಿಗೆ ಸರಕುಗಳನ್ನು ಮಾರುವುದನ್ನು ರಫ್ತು ಎನ್ನುವರು.

ಇತರೆ ವಿಷಯಗಳು :

2nd Puc All Subject Notes

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *