rtgh

ದ್ವಿತೀಯ ಪಿ.ಯು.ಸಿ ಪೈಪೋಟಿ ರಹಿತ ಮಾರುಕಟ್ಟೆ ಅರ್ಥಶಾಸ್ತ್ರ ನೋಟ್ಸ್‌ | 2nd Puc Economics Chapter 6 Notes

ದ್ವಿತೀಯ ಪಿ.ಯು.ಸಿ ಪೈಪೋಟಿ ರಹಿತ ಮಾರುಕಟ್ಟೆ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 2nd Puc Economics Chapter 6 Notes Question Answer Mcq Pdf Download in Kannada Medium 2023 Kseeb Solutions For Class 12 Economics Chapter 6 Notes 2nd Puc Paipoti Rahitha Marukatte Arthashastra Notes 2nd Puc Economics 6th Chapter Notes in Kannada 2nd Puc Economics 6th lesson Notes Imperfect Competitive Markets Notes

2nd Puc Economics Chapter 6 Notes

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯ ಅಥವಾ ಪದದಲ್ಲಿ ಉತ್ತರಿಸಿ.

1. ಏಕಸ್ವಾಮ್ಯ ಎಂದರೇನು?

ಒಬ್ಬನೇ ಮಾರಾಟಗಾರನಿರುವ ಮಾರುಕಟ್ಟೆ ಸಂರಚನೆಯನ್ನು ಏಕಸ್ವಾಮ್ಯ ಎಂದು ಕರೆಯಲಾಗುತ್ತದೆ.

2. ಬೇಡಿಕೆ ಬಿಂಬಕದ ಒಂದು ಸೂತ್ರವನ್ನು ಬರೆಯಿರಿ.

q=20-2P

3. ಸ್ವಾಮ್ಯಯುತ ಪೈಪೋಟಿ ಮಾರುಕಟ್ಟೆ ಅರ್ಥ ನೀಡಿ,

ಉತ್ಪಾದಿಸುವ ಸರಕುಗಳು ಏಕರೂಪದಲ್ಲಿರುವುದಿಲ್ಲ ಅಂತಹ ಮಾರುಕಟ್ಟೆ ಸಂರಚನೆಯನ್ನು ಸ್ವಾಮ್ಯಯುತ ಪೈಪೋಟಿ ಎಂದು ಕರೆಯುತ್ತೇವೆ.

4. ಕೆಲಜನ ಸ್ವಾಮ್ಯ ಮಾರುಕಟ್ಟೆಯ ಅರ್ಥ ನೀಡಿ.

ಒಂದು ನಿರ್ದಿಷ್ಟ ಸರಕಿನ ಮಾರುಕಟ್ಟೆಯ ಒಬ್ಬ ಮಾರಾಟಗಾರನಿಗಿಂತ ಹೆಚ್ಚು ಆದರೆ ಕೆಲವೆ ಸಂಖ್ಯೆಯ ಮಾರಾಟಗಾರರನ್ನು ಹೊಂದಿದ್ದರೆ ಅಂತಹ ಮಾರುಕಟ್ಟೆ ಸಂರಚನೆಯನ್ನು ಕೆಲಜನ ಸ್ವಾಮ್ಯ ಎನ್ನುವರು.

5. ದ್ವಿಜನ ಸ್ವಾಮ್ಯ ಎಂದರೇನು?

ಕೆಲಜನ ಸ್ವಾಮ್ಯ ವಿಶೇಷ ಸನ್ನಿವೇಶವನ್ನು ದ್ವಿಜನ ಸ್ವಾಮ್ಯ ಎಂದು ಕರೆಯುವರು.

ಕೆಳಗಿನ ಪ್ರಶ್ನೆಗಳಿಗೆ 4 ವಾಕ್ಯಗಳಲ್ಲಿ ಉತ್ತರಿಸಿ.

2nd Puc Economics Chapter 6 Notes

1. ಏಕಸ್ವಾಮ್ಯ ಮಾರುಕಟ್ಟೆ ಸಂರಚನೆಯ ಅವಶ್ಯಕತೆಗಳನ್ನು ತಿಳಿಸಿ.

ಏಕಸ್ವಾಮ್ಯ ಮಾರುಕಟ್ಟೆ ಸಂರಚನೆಯಿಂದ ಮಾರುಕಟ್ಟೆಯಲ್ಲಿ ಮಾಡಲ್ಪಡುವ ಸರಕಿನ ಬೆಲೆಯನ್ನು ಪ್ರಭಾವಿಸಲು ಅವಶ್ಯಕತೆ ಇರುತ್ತದೆ, ಹಾಗೂ ಮಾರುಕಟ್ಟೆ ಬೆಲೆಗಳಲ್ಲಿ ತಾನು ಮಾರಾಟ ಮಾಡಲು ಬಯಸುವ ಸರಕನ್ನು ಮಾರಲು ಸಮರ್ಥವಾಗಿರುತ್ತದೆ, ಇಷ್ಟೇ ಅಲ್ಲದೆ ತನ್ನ ಉತ್ಪನ್ನಗಳಿಗೆ ಮಾರುಕಟ್ಟೆ ಪಡೆಯಲು ಅವಶ್ಯಕತೆ ಇರುತ್ತದೆ. ಸ್ಪರ್ಧಾತ್ಮಕ ಉತ್ಪನ್ನ ಕಡಿಮೆ ಇರುತ್ತದೆ.

2. ಸರಾಸರಿ ಆದಾಯ ಮತ್ತು ಸೀಮಾಂತ ಆದಾಯಗಳ ಅರ್ಥ ತಿಳಿಸಿ.

ಮಾರಾಟಗಾರ ಅಥವಾ ಉತ್ಪಾದಕ ಪ್ರತಿಘಟಕದ ಮಾರಾಟದಿಂದ ಸ್ವೀಕರಿಸುವ ಆದಾಯವನ್ನು ಸರಾಸರಿ ಆದಾಯ ಎನ್ನುವರು.

ವಸ್ತುವಿನ ಒಂದು ಹೆಚ್ಚುವರಿ ಘಟಕವನ್ನು ಮಾರಾಟ ಮಾಡಿದಾಗ ಒಟ್ಟು ಆದಾಯಕ್ಕೆ ಸೇರ್ಪಡೆಯಾಗುವ ನಿವ್ವಳ ಬದಲಾವಣೆಯನ್ನು ‘ಸೀಮಾಂತ ಆದಾಯ’ ಎನ್ನುವರು.

3. ಸೀಮಾಂತ ಆದಾಯ ಮತ್ತು ಬೆಲೆ ಬೇಡಿಕೆಯ ಸ್ಥಿತಿಸ್ಥಾಪಕತ್ವದ ನಡುವಿನ ಸಂಬಂಧವೇನು?

ಸೀಮಾಂತ ಆದಾಯದ ಮೌಲ್ಯಗಳು ಬೆಲೆ ಬೇಡಿಕೆಯ ಸ್ಥಿತಿಸ್ಥಾಪಕತ್ವದೊಂದಿಗೆ ಸಂಬಂಧ ಹೊಂದಿದೆ, ಸೀಮಾಂತ ಆದಾಯದ ಧನಾತ್ಮಕ ಮೌಲ್ಯವನ್ನು ಹೊಂದಿದಾಗ ಬೇಡಿಕೆ ಸ್ಥಿತಿಸ್ಥಾಪಕತ್ವ ಒಂದಕ್ಕಿಂತ ಹೆಚ್ಚು ಇರುತ್ತದೆ ಮತ್ತು ಋಣಾತ್ಮಕ ಮೌಲ್ಯವನ್ನು ಹೊಂದಿದಾಗ ಸ್ಥಿತಿಸ್ಥಾಪಕತ್ವ ಒಂದಕ್ಕಿಂತ ಕಡಿಮೆಯಾಗುತ್ತದೆ.

4. ಸ್ವಾಮ್ಯಯುತ ಪೈಪೋಟಿ ಮಾರುಕಟ್ಟೆಯ ಅರ್ಥ ಬರೆಯಿರಿ. ಒಂದು ಉದಾಹರಣೆ ಕೊಡಿ.

ಅವರು ಉತ್ಪಾದಿಸುವ ಸರಕುಗಳು ಏಕರೂಪದಲ್ಲಿ ಇರುವುದಿಲ್ಲ. ಅಂತಹ ಮಾರುಕಟ್ಟೆ ಸಂರಚನೆಯನ್ನು ಸ್ವಾಮಯುತ ಪೈಪೋಟಿ ಎಂದು ಕರೆಯುತ್ತೇವೆ. ಈ ರೀತಿಯ ಉದ್ಯಮ ಘಟಕಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.

ಉದಾ : ಬಿಸ್ಕತ್ ಉತ್ಪಾದಿಸುವ ಉದ್ಯಮ ಘಟಕಗಳು ಅಧಿಕ ಸಂಖ್ಯೆಯಲ್ಲಿವೆ, ಆದರೆ ಉತ್ಪಾದಿಸಲಾಗುವ ಅನೇಕ ಬಿಸ್ಕತ್‌ಗಳು ಕೆಲವು ಬ್ರಾಂಡ್‌ನೊಂದಿಗೆ ಗುರುತಿಸಲ್ಪಟ್ಟಿವೆ ಮತ್ತು ಅವುಗಳಲ್ಲಿ ಒಂದರಿಂದ ಇನ್ನೊಂದು ಬ್ರಾಂಡ್ ಹೆಸರು ಪ್ಯಾಕೇಜಿಂಗ್ ಮತ್ತು ರುಚಿಯಲ್ಲಿ ಇರುವ ಸ್ವಲ್ಪ ವ್ಯತ್ಯಾಸಗಳಿಂದ ಗುರುತಿಸಬಹುದು.

5. ಏಕಸ್ವಾಮ್ಯ ಮಾರುಕಟ್ಟೆಯ ಲಕ್ಷಣಗಳನ್ನು ಬರೆಯಿರಿ.

ಒಬ್ಬನೇ ಮಾರಾಟಗಾರ :

ಏಕಸ್ವಾಮ್ಯ ಮಾರುಕಟ್ಟೆಯಲ್ಲಿ ಒಂದು ವಸ್ತುವಿನ ಮಾರಾಟಗಾರ ಒಬ್ಬನೇ ಇರುತ್ತಾನೆ, ಏಕಸ್ವಾಮ್ಯ ಹೊಂದಿದ ವ್ಯಕ್ತಿ ವಸ್ತುವಿನ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾನೆ. ಏಕಸ್ವಾಮ್ಯ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿ ಇರುವುದಿಲ್ಲ ಹೀಗಾಗಿ ಅಲ್ಲಿ ಪೈಪೋಟಿ ಕಂಡುಬರುವುದಿಲ್ಲ.

ನಿಕಟ ಬದಲಿ ವಸ್ತುಗಳು ಅಲಭ್ಯ :

ಏಕಸ್ವಾಮ್ಯವುಳ್ಳ ಉತ್ಪಾದಕ ಉತ್ಪಾದಿಸುವ ವಸ್ತುವಿಗೆ ನಿಕಟ ಬದಲಿ ವಸ್ತು ಇರುವುದಿಲ್ಲ. ಇತರೆ ಉತ್ಪಾದನಾ ಘಟಕಗಳು ಈ ತೆರನಾದ ವಸ್ತು ಉತ್ಪಾದಿಸುವುದಿಲ್ಲ. ಆದ್ದರಿಂದ ಒಬ್ಬನೇ ಉತ್ಪಾದಕನಿರುವುದರಿಂದ ಪೈಪೋಟಿ ಇರುವುದಿಲ್ಲ.

ಕೆಳಗಿನ ಪ್ರಶ್ನೆಗಳಿಗೆ 12 ವಾಕ್ಯಗಳಲ್ಲಿ ಉತ್ತರಿಸಿ,

1. ಈ ಕೆಳಗಿನ ಕೋಷ್ಟಕದ ಸಹಾಯದಿಂದ TR & MR ಗಳನ್ನು ಕಂಡುಹಿಡಿಯಿರಿ

ಕೆಳಗಿನ ಪ್ರಶ್ನೆಗಳಿಗೆ 20 ವಾಕ್ಯಗಳಲ್ಲಿ ಉತ್ತರಿಸಿ.

1. ಅಲ್ಪಾವಧಿಯಲ್ಲಿ ಉತ್ಪಾದನಾ ವೆಚ್ಚ ಧನಾತ್ಮಕವಾಗಿದ್ದಾಗ TR ಮತ್ತು TC ರೇಖೆಗಳ ಬಳಕೆಯಿಂದ ಏಕಸ್ವಾಮ್ಯ ಉದ್ಯಮ ಘಟಕದ ಸಮತೋಲನವನ್ನು ರೇಖಾ ಚಿತ್ರದೊಂದಿಗೆ ವಿವರಿಸಿ.

ಉತ್ಪಾದನಾ ವೆಚ್ಚ ಧನಾತ್ಮಕವಾಗಿದ್ದಾಗ, ಅಲ್ಪಾವಧಿಯಲ್ಲಿ ಏಕಸ್ವಾಮ್ಯ ಘಟಕ ಸಮತೋಲನ ಹೊಂದುವುದನ್ನು ಒಟ್ಟು ಆದಾಯ TR ಹಾಗೂ ಒಟ್ಟು ವೆಚ್ಚದ TC ವಿಧಾನದ ಮೂಲಕ ಸಮತೋಲನ ಹೊಂದುವುದನ್ನು ಈ ಕೆಳಕಂಡ ರೇಖಾಚಿತ್ರದೊಂದಿಗೆ ವಿವರಿಸಬಹುದಾಗಿದೆ.

ಈ ವಿಧಾನದ ಪ್ರಕಾರ ಯಾವಾಗ ಒಟ್ಟು TR ಆದಾಯ ಮತ್ತು ಒಟ್ಟು ವೆಚ್ಚ TCದ ಅನಂತರ ಗರಿಷ್ಠಮಟ್ಟದಲ್ಲಿ ಇರುತ್ತದೆಯೋ ಆಗ ಏಕಸ್ವಾಮ್ಯ ಉತ್ಪಾದನಾ ಘಟಕವು ಸಮತೋಲನ ಸ್ಥಿತಿಯಲ್ಲಿರುತ್ತದೆ.

ಈ ಹಂತದಲ್ಲಿ ಉತ್ಪಾದಕ ಗರಿಷ್ಟ ಲಾಭ ಪಡೆದುಕೊಂಡು ಸಮತೋಲನ ಸ್ಥಿತಿಯಲ್ಲಿರುತ್ತಾನೆ, ಗರಿಷ್ಟ ಲಾಭಗಳಿಸುವುದು ಏಕಸ್ವಾಮ್ಯ ಉತ್ಪಾದಕನ ಗುರಿಯಾಗಿರುತ್ತದೆ. ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ವಿಧಾನದ ಮೂಲಕ ಆಲ್ಪಾವಧಿಯಲ್ಲಿ ಏಕಸ್ವಾಮ್ಯ ಉತ್ಪಾದಕನ ಸಮತೋಲನ ಸ್ಥಿತಿಯನ್ನು ಈ ಕೆಳಕಂಡ ಚಿತ್ರದೊಂದಿಗೆ ವಿವರಿಸಲಾಗಿದೆ.

ಈ ಮೇಲ್ಕಂಡ ರೇಖಾಚಿತ್ರದಲ್ಲಿ TR ಮತ್ತು TC ರೇಖೆಗಳು ಏಕಸ್ವಾಮ್ಯ ಉತ್ಪಾದನಾ ಘಟಕದ ಒಟ್ಟು ಆದಾಯ ಹಾಗೂ ಒಟ್ಟು ವೆಚ್ಚದ ಪ್ರಮಾಣವನ್ನು ಸೂಚಿಸುವ ರೇಖೆಗಳಾಗಿವೆ, ಅದರಂತೆ 7 ಲಾಭದ ಪ್ರಮಾಣ ತೋರಿಸುವ ರೇಖೆಯಾಗಿದೆ.

ಏಕಸ್ವಾಮ್ಯ ಉತ್ಪಾದನಾ ಘಟಕದ ಲಾಭ 1=TR-TC ಇಲ್ಲಿ bd ಅಂತರ ಗರಿಷ್ಟ ಮಟ್ಟ, ಆದ್ದರಿಂದ ಏಕಸ್ವಾಮ್ಯ ಉತ್ಪಾದನಾ ಘಟಕ bಬಿಂದುವಿನಲ್ಲಿ ಸಮತೋಲ ಸ್ಥಿತಿಯನ್ನು ಮುಟ್ಟಿರುತ್ತದೆ. ಈ ಬಿಂದುವಿನಲ್ಲಿ ಏಕಸ್ವಾಮ್ಯ ಉತ್ಪಾದಕ ಗರಿಷ್ಟ bd ಪಮಾಣದ ಲಾಭವನ್ನು ಗಳಿಸುತ್ತಾನೆ. ಆಗ OQ ಸಮತೋಲನ ಉತ್ಪಾದನೆಯನ್ನು ಸೂಚಿಸುತ್ತದೆ. ಉತ್ಪಾದನೆಯ ಪ್ರಮಾಣ ) ಮತ್ತು ದಲ್ಲಿದ್ದಾಗ ಒಟ್ಟು ಆದಾಯವು (TR) ಒಟ್ಟು ವೆಚ್ಚಕ್ಕೆ (TC) ಸಮ ವಾಗಿರುವುದನ್ನು ಕಾಣುತ್ತೇವೆ, ಇಲ್ಲಿ ೩ ಮತ್ತು ಬಿಂದುಗಳು ಸಮಸ್ಥಿತಿ ಬಿಂದುಗಳಾಗಿರುತ್ತವೆ, ಅಂದರೆ ೩ ಮತ್ತು C ಬಿಂದುಗಳಲ್ಲಿ (TR) ರೇಖೆಯು ಮತ್ತು TC ರೇಖೆಯನ್ನು ಛೇದಿಸುತ್ತವೆ. ಉತ್ಪಾದನೆಯ ಪ್ರಮಾಣವು Q ಹಾಗೂ ಇದ್ದು ಲಾಭ ಸೊನ್ನೆಯಾಗಿರುತ್ತದೆ, ಲಾಭದ ರೇಖೆ π ಯು x ಅಕ್ಷವನ್ನು Q ಹಾಗೂ ಬಿಂದುಗಳಲ್ಲಿ ಛೇದಿಸುತ್ತವೆ. ಈ Q ಬಿಂದುವಿಗಿಂತ ಮೊದಲು Q ಬಿಂದುವಿನ ನಂತರ ಘಟಕವು ನಷ್ಟವನ್ನು ಅನುಭವಿಸುತ್ತಿರುತ್ತದೆ. ಏಕೆಂದರೆ ಒಟ್ಟು ವೆಚ್ಚವು ಒಟ್ಟು ಆದಾಯಕ್ಕಿಂತ ಹೆಚ್ಚಾಗಿರುತ್ತದೆ. TC>TR ಆದ್ದರಿಂದ ಲಾಭದ ರೇಖೆ T ಯು X ಅಕ್ಷದ ಕೆಳಗೆ ಚಲಿಸುತ್ತಿರುತ್ತದೆ, ಇದು ಋಣಾತ್ಮಕ ಹಂತವಾಗಿರುತ್ತದೆ, Q ಹಾಗೂ , ಬಿಂದುಗಳ ಮಧ್ಯದಲ್ಲಿ TR>TC ಅಂದರೆ ಒಟ್ಟು ಆದಾಯವು ಒಟ್ಟು ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ. ಆಗ ಲಾಭದ ರೇಖೆ π ಧನಾತ್ಮಕ ಹಂತದಲ್ಲಿರುತ್ತದೆ. Qಬಿಂದುವಿನಲ್ಲಿ TR ಮತ್ತು TCಗಳ ಅಂತರ ಗರಿಷ್ಟ ಪ್ರಮಾಣದಲ್ಲಿರುವುದರಿಂದ 0Q ಪ್ರಮಾಣದ ಉತ್ಪಾದನೆ ಅಲ್ಪಾವಧಿಯಲ್ಲಿ ಸಮತೋಲನ ಉತ್ಪಾದನೆಯಾಗಿರುತ್ತದೆ.

ಅಭ್ಯಾಸದ ಪ್ರಶ್ನೆಗಳು

1. ಒಟ್ಟು ಆದಾಯ ರೇಖೆಯು

ಎ. ಮೂಲದಿಂದ ಹಾದು ಹೋಗುವ ಧನಾತ್ಮಕ ಇಳಿಜಾರು ಹೊಂದಿರುವ ಸರಳ ರೇಖೆಯಾಗಿದ್ದಾಗ

ಬಿ. ಒಂದು ಸಮತಲ ರೇಖೆಯಾಗಿದ್ದಾಗ, ಬೇಡಿಕೆ ರೇಖೆಯ ಆಕಾರ ಹೇಗಿರುತ್ತದೆ?

ಒಟ್ಟು ಆದಾಯ ರೇಖೆಯು :- ಮೂಲದಿಂದ ಹಾದು ಹೋಗುವ ಧನಾತ್ಮಕ ಇಳಿಜಾರು ಹೊಂದಿರುವ ಸರಳರೇಖೆಯಾಗಿದ್ದಾಗ ಹಾಗೂ ಒಂದು ಸಮತಲ ರೇಖೆ ಯಾಗಿದ್ದಾಗ ಬೇಡಿಕೆ ರೇಖೆಯನ್ನು ಈ ಕೆಳಕಂಡ ಚಿತ್ರರ ಮೂಲಕ ವ್ಯಕ್ತಪಡಿಸಬಹುದಾಗಿದೆ.

ಒಟ್ಟು ಆದಾಯ TRರೇಖೆಯ C ಬಿಂದುವಿನಲ್ಲಿ L1ರೇಖೆಯ ಇಳಿಜಾರು ಮತ್ತು b ಬಿಂದುವಿನಲ್ಲಿ L2 ರೇಖೆಯ ಇಳಿ ಜಾರು ಹೊಂದಿದ್ದರೂ L2 ರೇಖೆಯು L1 ರೇಖೆಗಿಂತ ಹೆಚ್ಚು ಸಮತಟ್ಟಾಗಿರುವುದು ಕಂಡುಬರುತ್ತದೆ. ಅಂದರೆ L2 ಕಡಿಮೆ ಇಳಿಜಾರು ಹೊಂದಿದೆ ಎಂದರ್ಥ ಅದೇ ಮಟ್ಟದ ಪ್ರಮಾಣದಲ್ಲಿ MR ನ ಮೌಲ್ಯವು ಸಹ ಕಡಿಮೆ ಇರುತ್ತದೆ. 10 ಘಟಕಗಳು ಮಾರಾಟವಾದಾಗ TRನ ಸ್ಪರ್ಶ ರೇಖೆ ಸಮತಲವಾಗಿದ್ದು ಇದರ ಇಳಿಜಾರು ಶೂನ್ಯವಾಗಿದೆ, ಅದೇ ಪ್ರಮಾಣಕ್ಕೆ MR ನ ಮೌಲ್ಯವು ಶೂನ್ಯವಾಗಿರುತ್ತದೆ TR ರೇಖೆಯು d ಬಿಂದುವಿನಲ್ಲಿ ಸ್ಪರ್ಶರೇಖೆ ಋಣಾತ್ಮಕ ಇಳಿಜಾರು ಹೊಂದಿರುತ್ತದೆ.

ಒಟ್ಟು ಆದಾಯವು ಹೆಚ್ಚುತ್ತಿರುವ ಸೀಮಾಂತ ಆದಾಯವು ಧನಾತ್ಮಕವಾಗಿರುತ್ತದೆ.

2. ಕೆಳಗೆ ಒದಗಿಸಲಾದ ಅನುಸೂಚಿಯಿಂದ ಒಟ್ಟು ಆದಾಯ, ಬೇಡಿಕೆ ರೇಖೆ ಮತ್ತು ಬೆಲೆ ಬೇಡಿಕೆಯ ಸ್ಥಿತಿಸ್ಥಾಪಕತ್ವವನ್ನು ಲೆಕ್ಕಾಚಾರ ಮಾಡಿ,

3. ಸ್ಥಿತಿಸ್ಥಾಪಕ ಬೇಡಿಕೆ ರೇಖೆ ಇದ್ದಾಗ ಸೀಮಾಂತ ಆದಾಯದ ಮೌಲ್ಯವೇನು?

MRನ ಮೌಲ್ಯಗಳು (ಸೀಮಾಂತ ಆದಾಯ)ದ ಮೌಲ್ಯಗಳು ಕೂಡಾ ಬೆಲೆ ಬೇಡಿಕೆಯ ಸ್ಥಿತಿಸ್ಥಾಪಕತ್ವದೊಂದಿಗೆ ಸಂಬಂಧ ಹೊಂದಿದೆ, ಸೀಮಾಂತ ಆದಾಯದ MR ಧನಾತ್ಮಕ ಮೌಲ್ಯವನ್ನು ಹೊಂದಿದಾಗ ಬೇಡಿಕೆಯ ಸ್ಥಿತಿಸ್ಥಾಪಕತ್ವ ಒಂದಕ್ಕಿಂತ ಹೆಚ್ಚು ಇರುತ್ತದೆ, ಮತ್ತು MRಋಣಾತ್ಮಕ ಮೌಲ್ಯವನ್ನು ಹೊಂದಿದ್ದಾಗ ಸ್ಥಿತಿಸ್ಥಾಪಕತ್ವ ಒಂದಕ್ಕಿಂತ ಕಡಿಮೆಯಾಗುತ್ತದೆ.

4. ಸ್ವಾಮ್ಯಯುತ ಪೈಪೋಟಿಯುತ ಉದ್ಯಮ ಘಟಕದ ದೀರ್ಘಾವಧಿ ಸಮತೋಲನವು ಶೂನ್ಯ ಲಾಭದಲ್ಲಿರಲು ಕಾರಣವೇನು?

ಸ್ವಾಮ್ಯಯುತ ಪೈಪೋಟಿಯಲ್ಲಿ ಉದ್ಯಮ ಘಟಕದ ದೀರ್ಘಾವಧಿ ಸಮತೋಲನವು ಶೂನ್ಯ ಲಾಭದಲ್ಲಿರುತ್ತದೆ. ಹೆಚ್ಚಿನ ಉದ್ಯಮ ಘಟಕಗಳು ಮಾರುಕಟ್ಟೆ ಪ್ರವೇಶಿಸಿದಾಗ ಉತ್ಪನ್ನವು ಹೆಚ್ಚಾಗಿ ಬೆಲೆಯು ಕಡಿಮೆಯಾಗುತ್ತದೆ. ಇದರಿಂದ ಅಸ್ತಿತ್ವದಲ್ಲಿರುವ ಉದ್ಯಮ ಘಟಕಗಳ ಗಳಿಕೆಯು ಕಡಿಮೆಯಾಗುತ್ತದೆ. ಉದ್ಯಮ ಘಟಕಗಳು ನಷ್ಟವನ್ನು ಎದುರಿಸುತ್ತದೆ. ಅಷ್ಟೆ ಅಲ್ಲದೆ ಮುಕ್ತ ಆಗಮನ ನಿರ್ಗಮನದಿಂದಾಗಿಯೂ ಪರಿಪೂರ್ಣ ಉದ್ಯಮ ಘಟಕವು ಶೂನ್ಯಲಾಭವನ್ನು ಪಡೆಯುತ್ತದೆ. ಮತ್ತೊಂದು ಕಾರಣವೆಂದರೆ ಹೊಸ ಸರಕಿನ ಉತ್ಪಾದನೆ ಹೆಚ್ಚಾಗಿ ಅದರ ಬೆಲೆಗಳು ಮಾರುಕಟ್ಟೆಯಲ್ಲಿ ಇಳಿಕೆಯಾಗುವುದರಿಂದ ಲಾಭ ಶೂನ್ಯ ಆಗುವುದು.

ಬೆಲೆ ಹೆಚ್ಚಳದಿಂದ ಸರಕನ್ನು ಕೊಳ್ಳುವ ಗ್ರಾಹಕರು (ಅನುಭೋಗಿಗಳು) ಕಡಿಮೆಯಾದಾಗಲೂ ಲಾಭವು ಶೂನ್ಯವಾಗುತ್ತದೆ, ಆ ಬೆಲೆಯನ್ನು ಗರಿಷ್ಟ ಗೊಳಿಸಿದಾಗಲು ಎಲ್ಲಾ ಅನುಭೋಗಿಗಳು ಅದನ್ನು ಕೊಳ್ಳಲಾಗದೆ ಪೈಪೋಟಿಯಲ್ಲಿ ಲಾಭವು ಶೂನ್ಯವಾಗುವುದು,

5. ಮೂರು ವಿಭಿನ್ನ ವಿಧಾನದಲ್ಲಿ ಕೆಲಜನ ಸ್ವಾಮ್ಯ ಉದ್ಯಮ ಘಟಕದ ವರ್ತನೆಯನ್ನು ಪಟ್ಟಿ ಮಾಡಿ?

ಮೂರು ವಿಭಿನ್ನ ವಿಧಾನದಲ್ಲಿ ಕೆಲಜನ ಸ್ವಾಮ್ಯ – ಉದ್ಯಮ ಘಟಕದ ವರ್ತನೆಯನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು

ಮೊದಲನೇಯಾದಾಗಿ ಕೆಲಜನ ಸ್ವಾಮ್ಯದ ಉದ್ಯಮ ಘಟಕಗಳು ಒಗ್ಗೂಡಬಹುದು ಮತ್ತು ಪರಸ್ಪರ ಪೈಪೋಟಿ ನಡೆಸದಿರಲು ತೀರ್ಮಾನಿಸಬಹುದು ಮತ್ತು ಎರಡೂ ಉದ್ಯಮ ಘಟಕಗಳು ಒಟ್ಟಾಗಿ ಲಾಭವನ್ನು ಗರಿಷ್ಟಗೊಳಿಸಬಹುದು ಆಗ ಎರಡು ಉದ್ಯಮ ಘಟಕಗಳ ಏಕ ಸ್ವಾಮ್ಯದ ಉದ್ಯಮ ಘಟಕಗಳಂತೆ ಏರ್ಪಡಿಸಿ ಎರಡು ವಿಭಿನ್ನ ಕಾರ್ಖಾನೆಗಳಲ್ಲಿ ಸರಕನ್ನು ಉತ್ಪಾದಿಸುತ್ತದೆ.

ಎರಡನೇದಾಗಿ ಕೆಲಜನ ಸ್ವಾಮ್ಯದಲ್ಲಿ ಎರಡು ಉದ್ಯಮ ಘಟಕಗಳು ಪ್ರತಿಯೊಂದು ಘಟಕವು ಇನ್ನೊಂದು ಉದ್ಯಮ ಘಟಕವಾಗಿದ್ದು ಪೂರೈಸುವ ಪ್ರಮಾಣವನ್ನು ಬದಲಾಯಿಸುವುದಿಲ್ಲ ತನ್ನ ಲಾಬವನ್ನು ಗರಿಷ್ಠಗೊಳಿಸಲು ಎಷ್ಟು ಪ್ರಮಾಣವನ್ನು ಉತ್ಪಾದಿಸಬೇಕೆಂದು ನಿರ್ಧರಿಸುತ್ತವೆ,

ಮೂರನೇಯದಾಗಿ ಕೆಲವು ಅರ್ಥ ಶಾಸ್ತ್ರಜ್ಞರು ಕೆಲಜನ ಸ್ವಾಮ್ಯದ ಮಾರುಕಟ್ಟೆ ಸಂರಚನೆಯು ಸರಕಿನ ಮಾರುಕಟ್ಟೆ ಬೆಲೆಯನ್ನು ಕಠಿಣಗೊಳಿಸುತ್ತದೆಂದು ವಾದಿಸುತ್ತಾರೆ ಏಕೆಂದರೆ ಬೇಡಿಕೆಯ ಬದಲಾವಣೆಗೆ ಪ್ರತಿಕ್ರಿಯೆಯಾಗಿ ಮಾರುಕಟ್ಟೆಯ ಬೆಲೆಯು ಮುಕ್ತವಾಗಿ ಚಲಿಸುತ್ತದೆ, ಇದಕ್ಕೆ ಕಾರಣ ಯಾವುದೇ ಉದ್ಯಮ ಘಟಕವು ಬೆಲೆಯಲ್ಲಿ ಮಾಡಿದ ಬದಲಾವಣೆಗಳಿಗೆ ಕೆಲಜನ ಸ್ವಾಮ್ಯದ ಉದ್ಯಮ ಘಟಕಗಳು ಹೇಗೆ ಪ್ರತಿಕ್ರಿಯಿಸುತ್ತದೆ. ಎನ್ನುವುದನ್ನು ಅವಲಂಬಿಸಿದೆ, ಹೀಗಾಗಿ ಪರಿಪೂರ್ಣ ಪೈಪೋಟಿಗೆ ಹೋಲಿಸಿದರೆ ಕೆಲಜನ ಸ್ವಾಮ್ಯದಲ್ಲಿ ಬೆಲೆಗಳು ಹೆಚ್ಚು ಕಠಿಣವಾಗಿರುತ್ತದೆ,

6. ಬೆಲೆ ಕಾಠಿಣ್ಯತೆಯ ಅರ್ಥವೇನು? ಈ ರೀತಿಯಾಗಿ ಫಲಿತಾಂಶಕ್ಕೆ ಕೆಲಜನ ಸ್ವಾಮ್ಯದ ವರ್ತನೆಯು ಹೇಗೆ ಕಾರಣವಾಗಿದೆ?

ಕೆಲಜನ ಸ್ವಾಮ್ಯದ ಮಾರುಕಟ್ಟೆಯ ಸಂರಚನೆಯು ಸರಕಿನ ಮಾರುಕಟ್ಟೆಯ ಬೆಲೆಯನ್ನು ಕಾಠಿಣ್ಯ ಎಂದು -ಜನ ಅರ್ಥೈಸುವರು ಈ ರೀತಿಯ ಫಲಿತಾಂಶಕ್ಕೆ ಕೆಲಜನ ಸ್ವಾಮ್ಯದ ವರ್ತನೆ ಕಾರಣವಾಗಿದೆ ಇಲ್ಲಿ ಬೇಡಿಕೆಯ ಬದಲಾವಣೆಗೆ ಇದು ಪ್ರತಿಯಾಗಿ ಮಾರುಕಟ್ಟೆ ಬೆಲೆಯು ಮುಕ್ತವಾಗಿ ಚಲಿಸುವುದಿಲ್ಲ. ಹೆಗೆ ಇದಕ್ಕೆ ಕಾರಣವೆಂದರೆ, ಯಾವುದೇ ಉದ್ಯಮ ಘಟಕವು ಬೆಲೆಯಲ್ಲಿ ಮಾಡಿದ ಬದಲಾವಣೆಗಳಿಗೆ ಕೆಲಜನ ಸ್ವಾಮ್ಯದ ಉದ್ಯಮ ಘಟಕಗಳು ಹೇಗೆ ಪ್ರತಿಕ್ರಿಯಿಸುತ್ತದೆ. ಎನ್ನುವುದನ್ನು ಹೇಗೆ ಅವಲಂಬಿಸಿದೆ. ಬೆಲೆ ಏರಿಕೆಯು ಹೆಚ್ಚು ಲಾಭದಾಯಕ ಎಂದು ಉದ್ಯಮ ಘಟಕಗಳು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ, ಬೆಲೆ ಏರಿಕೆಯು ಉದ್ಯಮ ಘಟಕ ಮಾರಾಟ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದರಿಂದ ಆದಾಯ ಮತ್ತು ಲಾಭಗಳು ಕಡಿಮೆಯಾಗುತ್ತದೆ. ಆದುದರಿಂದ ಬೆಲೆ ಏರಿಸುವುದು ಯಾವುದೇ ಉದ್ಯಮ ಘಟಕಕ್ಕೆ ವಿವೇಚನೆಯುತವಾದುದಲ್ಲ ಉದ್ಯಮ ಘಟಕವೊಂದು – ಸರಕಿನ ಬೆಲೆ ಇಳಿಸಿ ಹೆಚ್ಚು ಪ್ರಮಾಣ ಉತ್ಪನ್ನವನ್ನು ಮಾರಾಟ ಮಾಡಿ ಹೆಚ್ಚು ಆದಾಯ ಮತ್ತು ಲಾಭವನ್ನೂಗಳಿಸ – ಬಹುದೆಂದು ಅಂದಾಜಿಸಿ ಮಾರಾಟ ಮಾಡುವ ಸರಕಿನ ಬೆಲೆಯನ್ನು ಇಳಿಸಬಹುದು ಈ ಕ್ರಿಯೆಯನ್ನು ಬೆದರಿಕೆ ಯಿಂದ ಉಳಿದ ಉದ್ಯಮ ಘಟಕಗಳು ಹಂಚಿಕೊಳ್ಳುತ್ತದೆ, ಆರಂಭದಲ್ಲಿ ಬೆಲೆ ಇಳಿಸಿದ ಉದ್ಯಮ ಘಟಕವು ಮಾರಾಟ ಪ್ರಮಾಣದಲ್ಲಿ ಸ್ವಲ್ಪ ಮಾತ್ರವೇ ಹೆಚ್ಚಳವನ್ನು ಸಾಧಿಸಲು ಶಕ್ತವಾಗುತ್ತದೆ. ಸಾಪೇಕ್ಷವಾಗಿ ದೊಡ್ಡ ಪ್ರಮಾಣದಲ್ಲಿ ಬೆಲೆಯನ್ನು ಇಳಿಸುತ್ತಿರುವ ಮೊದಲ ಉದ್ಯಮ ಘಟಕವು ಮಾರಾಟದ ಈ ಉದ್ಯಮ ಘಟಕದ ಬೇಡಿಕೆ ರೇಖೆಯು ಸ್ಥಿತಿಸ್ಥಾಪಕ ರಹಿತವಾಗಿರುತ್ತದೆ. ಮತ್ತು ಬೆಲೆ ಇಳಿಕೆಯ ತೀರ್ಮಾನವು ಆದಾಯ ಮತ್ತು ಲಾಭಗಳ ಇಳಿಕೆಗೆ ಕಾರಣ ವಾಗುತ್ತದೆ. ಯಾವುದೇ ಉದ್ಯಮ ಘಟಕವು ಬೆಲೆ ಇಳಿಕೆಯನ್ನು ವಿವೇಚನಾ ರಹಿತ ಎಂದು ಭಾವಿಸುತ್ತದೆ. ಇದರಿಂದ ಪರಿಪೂರ್ಣ ಪೈಪೋಟಿ ಹೋಲಿಸಿದರೆ ಕೆಲಜನ ಸ್ವಾಮ್ಯದಲ್ಲಿ ಬೆಲೆಗಳು ಹೆಚ್ಚು ಕಾಠಿಣ್ಯವಾಗಿರುತ್ತದೆ.

ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:

2nd Puc Economics Chapter 6 Notes

1.ಸ್ವಾಮ್ಯಯುತ ಎಂದರೇನು?

ಮಾರುಕಟ್ಟೆಯ ಸಂರಚನೆಯನ್ನು ಸ್ವಾಮ್ಯಯುತ ಪೈಪೋಟಿ ಎನ್ನುವರು

2. ಕೆಲಜನ ಸ್ವಾಮ್ಯ ಎಂದರೇನು?

ಒಂದು ನಿರ್ದಿಷ್ಟ ಸರಕಿನ ಮಾರುಕಟ್ಟೆಯ ಒಬ್ಬ ಮಾರಾಟಗಾರನಿಗಿಂತ ಹೆಚ್ಚು ಆದರೆ ಕೆಲವೆ ಸಂಖ್ಯೆಯ ಮಾರಾಟಗಾರರನ್ನು ಹೊಂದಿದ್ದರೆ ಅಂತಹ ಮಾರುಕಟ್ಟೆ ಸಂರಚನೆಯನ್ನು ಕೆಲಜನ ಸ್ವಾಮ್ಯ ಎನ್ನುವರು.

3. ದ್ವಿಜನ ಸ್ವಾಮ್ಯ ಎಂದು ಯಾವುದನ್ನು ಕರೆಯುವರು?

ಕೆಲಜನ ಸ್ವಾಮ್ಯ ವಿಶೇಷ ಸನ್ನಿವೇಶವನ್ನು ದ್ವಿಜನ ಸ್ವಾಮ್ಯಎಂದು ಕರೆಯುವರು.

4. ಕೆಲಜನ ಸ್ವಾಮ್ಯದಲ್ಲಿ ಬೆಲೆಗಳ ಏನಾಗುತ್ತದೆ?

ಹೆಚ್ಚು ಕಠಿಣವಾಗಿರುತ್ತದೆ.

5. ಏಕಸ್ವಾಮ್ಯ ಎಂದರೇನು?

ಒಬ್ಬನೇ ಮಾರಾಟಗಾರನಿರುವ ಮಾರುಕಟ್ಟೆ ಸಂರಚನೆ ಯನ್ನು ಏಕಸ್ವಾಮ್ಯ ಎಂದು ಕರೆಯಲಾಗುತ್ತದೆ.

ಸಂಕ್ಷಿಪ್ತ ಉತ್ತರ ಬರೆಯಿರಿ

1.ಸರಕು ಮಾರುಕಟ್ಟೆಯಲ್ಲಿ ಸರಳ ಏಕಸ್ವಾಮ್ಯದ ಬಗ್ಗೆ ತಿಳಿಸಿ?

ಒಬ್ಬನೇ ಮಾರಾಟಗಾರನಿರುವ ಮಾರುಕಟ್ಟೆ ಸಂರಚನೆಯನ್ನು ಏಕಸ್ವಾಮ್ಯ ಎಂದು ಕರೆಯಲಾಗುತ್ತದೆ. ಆದಾಗ್ಯೂ ಒಂದೇ ವಾಕ್ಯದ ಈ ವ್ಯಾಖ್ಯೆಯಲ್ಲಿ ಅಡಕವಾಗಿರುವ ಷರತ್ತುಗಳು ವ್ಯಾಪಕವಾಗಿ ವಿವರಣೆಗೆ ಒಳಪಡಿಸಬಹುದಾಗಿದೆ. ಏಕಸ್ವಾಮ್ಯದ ಮಾರುಕಟ್ಟೆಯ ಸಂರಚನೆಯಲ್ಲಿ ಏಕಮಾತ್ರ ಉತ್ಪಾದಕನು ಒಂದು ನಿರ್ದಿಷ್ಟ ಸರಕನ್ನು ಉತ್ಪಾದಿಸುವ ಅವಶ್ಯಕತೆಯಿರುತ್ತದೆ, ಇತರ ಯಾವುದೇ ಸರಕುಗಳು ಈ ಸರಕಿಗೆ ಪರ್ಯಾಯ ಸರಕುಗಳಾಗಿರುವುದಿಲ್ಲ ಮತ್ತು ಈ ಸನ್ನಿವೇಶವು ಕಾಲಾನಂತರದಲ್ಲಿ ಮುಂದುವರಿಯಲು ಯಾವುದೇ ಉದ್ಯಮ ಘಟಕವು ಮಾರುಕಟ್ಟೆಗೆ ಪ್ರವೇಶಿಸಿ ಸರಕುಗಳನ್ನು ಮಾರಾಟ ಮಾಡದಂತೆ ಸಾಕಷ್ಟು ನಿರ್ಬಂಧಗಳ ಅವಶ್ಯಕತೆಯಿದೆ.

2. ಸ್ಪರ್ಧಾತ್ಮಕ ವರ್ತನೆ ಎದುರಾಗಿ ಸ್ವಾರ್ಧಾತ್ಮಕ ಸಂರಚನೆ ಯನ್ನು ಉದಾಹರಣೆಯ ಮೂಲಕ ವಿವರಿಸಿ?

ಒಂದು ಉದ್ಯಮ ಘಟಕವು ಮಾರುಕಟ್ಟೆಯಲ್ಲಿ ಮಾರ ಲ್ಪಡುವ ಸರಕಿನ ಬೆಲೆಯನ್ನು ಪ್ರಭಾವಿಸಲು ಸಾಧ್ಯವಿಲ್ಲವಿರುವುದನ್ನು ಪರಿಪೂರ್ಣ ಪೈಪೋಟಿ ಮಾರುಕಟ್ಟೆ ಎಂದು ವ್ಯಾಖ್ಯಾನಿಸಲಾಗಿದೆ. ಒಂದು ಉದ್ಯಮ ಘಟಕದ ಯಾವುದೇ ಮಟ್ಟದ ಉತ್ಪನ್ನದ ಬೆಲೆಯು ಒಂದೇ ಆಗಿದ್ದಾಗ ಅಂತಹ ಉದ್ಯಮ ಘಟಕವು ನೀಡಲಾದ ಮಾರುಕಟ್ಟೆ ಬೆಲೆಗಳಲ್ಲಿ ತಾನು ಮಾರಾಟ ಮಾಡಲು ಬಯಸುವ ಯಾವುದೇ ಪ್ರಮಾಣವನ್ನು ಮಾರಲು ಸಮರ್ಥವಾಗಿರುತ್ತದೆ. ಆದ್ದರಿಂದ ಇದು ತನ್ನ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಪಡೆಯಲು ಇತರ ಉದ್ಯಮ ಘಟಕಗಳೊಂದಿಗೆ ಸ್ಪರ್ಧಿಸುವ ಅವಶ್ಯಕತೆ ಇರುವುದಿಲ್ಲ.

ಇದು, ಸಾಮಾನ್ಯವಾಗಿ ಅರ್ಥೈಸಲಾಗಿರುವ ಪೈಪೋಟಿ ಅಥವಾ ಪೈಪೋಟಿ ವರ್ತನೆಗೆ ಸ್ಪಷ್ಟವಾಗಿ ವಿರುದ್ಧವಾಗಿದೆ. ಕೋಕ್ ಮತ್ತು ಪೆಪ್ಸಿಗಳು ಅಧಿಕ ಮಟ್ಟದ ಮಾರಾಟವನ್ನು ಸಾಧಿಸಲು ಅಥವಾ ಮಾರುಕಟ್ಟೆಯಲ್ಲಿ ಅಧಿಕ ಪಾಲನ್ನು ಪಡೆಯಲು ವಿಭಿನ್ನ ರೀತಿಯಲ್ಲಿ ಪರಸ್ಪರ ಸ್ಪರ್ಧಿಸುವುದನ್ನು ನಾವು ಕಾಣುತ್ತೇವೆ. ಇದಕ್ಕೆ ವಿರುದ್ಧವಾಗಿ ಒಬ್ಬ ರೈತನು ದೊಡ್ಡ ಮೊತ್ತದಲ್ಲಿ ಬೆಳೆಯನ್ನು ಮಾರಾಟ ಮಾಡಲು ತಮ್ಮ ತಮ್ಮೊಳಗೆ ಉಳಿದ ರೈತರೊಡನೆ ಪೈಪೋಟಿ ನಡೆಸುವುದು ಕಂಡುಬರುವುದಿಲ್ಲ. ಏಕೆಂದರೆ ಕೋಕ್ ಮತ್ತು ಪೆಪ್ಸಿಗಳೆರಡು ತಂಪು ಪಾನೀಯದ ಮಾರುಕಟ್ಟೆ ಬೆಲೆಯನ್ನು ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದರೆ ಒಬ್ಬ ರೈತನಿಗೆ ಇದು ಸಾಧ್ಯವಾಗುವುದಿಲ್ಲ.

ಹೀಗೆ ಪೈಪೋಟಿಯ ವರ್ತನೆ ಮತ್ತು ಪೈಪೋಟಿಯ ಮಾರುಕಟ್ಟೆ ಸಂರಚನೆ ಸಾಮಾನ್ಯವಾಗಿ ವಿರುದ್ಧ ಸಂಬಂಧವನ್ನು ಹೊಂದಿದೆ. ಮಾರುಕಟ್ಟೆ ಸಂರಚನೆ ಹೆಚ್ಚು ಸ್ಪರ್ಧಾತ್ಮಕವಾಗಿದ್ದರೆ ಉದ್ಯಮ ಘಟಕಗಳ ಸ್ಪರ್ಧಾತ್ಮಕ ವರ್ತನೆ ಕಡಿಮೆ ಇರುತ್ತದೆ. ಇನ್ನೊಂದೆಡೆ ಮಾರುಕಟ್ಟೆ ಸಂರಚನೆಯಲ್ಲಿ ಕಡಿಮೆ ಸ್ಪರ್ಧೆ ಇದ್ದರೆ, ಉದ್ಯಮ ಘಟಕಗಳ ವರ್ತನೆಯಲ್ಲಿ ಅಧಿಕ ಸ್ಪರ್ಧಾತ್ಮಕ ವರ್ತನೆ ಕಂಡು ಬರುತ್ತದೆ. ಶುದ್ಧ ಏಕಸ್ವಾಮ್ಯ ಇದಕ್ಕೆ ಅಪವಾದವಾಗಿರುವುದನ್ನು ಕಾಣಬಹುದು.

ಹೆಚ್ಚುವರಿ ಪ್ರಶ್ನೆಗಳು

2nd Puc Economics Chapter 6 Notes in Kannada

1. ಒಟ್ಟು ಸರಾಸರಿ ಮತ್ತು ಸೀಮಾಂತ ಆದಾಯ ರೇಖೆಗಳನ್ನು ರೇಖಾ ಚಿತ್ರದ ಮೂಲಕ ವಿವರಿಸಿ?

ಚಿತ್ರ 6.2ರ ರೇಖಾ ನಕ್ಷೆಯಲ್ಲಿ ಚಿತ್ರಿಸಲಾಗಿದೆ. ಲಂಬ ಅಕ್ಷದಲ್ಲಿ ಬೆಲೆಗಳನ್ನು, ಸಮತಲ ಅಕ್ಷದಲ್ಲಿ ಪ್ರಮಾಣಗಳನ್ನು ತೋರಿಸಲಾಗಿದೆ. ಸರಕುಗಳ ವಿವಿಧ ಪ್ರಮಾಣಕ್ಕೆ ಲಭ್ಯವಿರುವ ಬೆಲೆಗಳನ್ನು ಗಾಢವಾದ ನೇರ ರೇಖೆ D ತೋರಿಸುತ್ತದೆ. ಉದ್ಯಮ ಘಟಕವು ತನ್ನ ಸರಕುಗಳನ್ನು ಮಾರಾಟ ಮಾಡಿದಾಗ ದೊರೆಯುವ ಒಟ್ಟು ಆದಾಯ (TR) ಉತ್ಪನ್ನದ ಬೆಲೆ ಮತ್ತು ಮಾರಾಟ ಮಾಡಿದ ಪ್ರಮಾಣಕ್ಕೆ ಸಮವಾಗಿರುತ್ತದೆ. ಏಕಸ್ವಾಮ್ಯದ ಉದ್ಯಮ ಘಟಕದಲ್ಲಿ ಒಟ್ಟು ಆದಾಯದ (TR) ರೇಖೆಯು ನೇರ ರೇಖೆಯಾಗಿರುವುದಿಲ್ಲ. ಅದರ ಆಕಾರವು ಬೇಡಿಕೆ ರೇಖೆಯ ಆಕಾರವನ್ನು ಅವಲಂಭಿಸಿರುತ್ತದೆ. ಗಣಿತಾತ್ಮಕವಾಗಿ TR ಮಾರಾಟ ಮಾಡಿದ ಪ್ರಮಾಣದ ಬಿಂಬಕವನ್ನು ಪ್ರತಿನಿಧಿಸುತ್ತದೆ. ಆದುದರಿಂದ ನಮ್ಮ ಉದಾಹರಣೆಯಲ್ಲಿ

ಇದು ಒಂದು ಸರಳ ರೇಖೆಯ ಸಮೀಕರಣವಲ್ಲ. ಇದು ಒಂದು ವರ್ಗ ಸಮೀಕರಣವಾಗಿದ್ದು, ಋಣಾತ್ಮಕ ಸಹಗುಣಕ ಹೊಂದಿರುವ ವರ್ಗವಾಗಿರುತ್ತದೆ. ಇಂತಹ ಒಂದು ಸಮೀಕರಣವು ತಲೆಕೆಳಗಾದ ಲಂಬ ಪರವಲಯವನ್ನು ಪ್ರತಿನಿಧಿಸುತ್ತದೆ.

2. ಸರಾಸರಿ ಆದಾಯ ಮತ್ತು ಒಟ್ಟು ಆದಾಯ ರೇಖೆಗಳ ನಡುವಿನ ಸಂಬಂಧವನ್ನು ರೇಖಾಚಿತ್ರದ ಮೂಲಕ ವಿವರಿಸಿ?

ರೇಖಾತ್ಮಕವಾಗಿ ARನ ಮೌಲ್ಯವನ್ನು TR ರೇಖೆಯಿಂದ ಯಾವುದೇ ಮಟ್ಟದ ಮಾರಾಟ ಪ್ರಮಾಣವನ್ನು ಸುಲಭವಾಗಿ ರಚಿಸಲಾಗಿರುವ ಚಿತ್ರ 6.3ರಲ್ಲಿ 6 ಘಟಕಗಳಷ್ಟು ಆಗಿದ್ದಾಗ ಸಮಾನಾಂತರ ಅಕ್ಷದಲ್ಲಿ 6ರ ಮೌಲ್ಯದ ಮೂಲಕ ಹಾದು ಹೋಗುವ ಒಂದು ಲಂಬ ರೇಖೆಯನ್ನು ಎಳೆಯಿರಿ. ಈ ರೇಖೆಯು TR ರೇಖೆಯನ್ನು, ಎತ್ತರವು 42ಕ್ಕೆ ಸಮವಾಗಿರುವ ಬಿಂದು ‘a’ ನಲ್ಲಿ ಛೇದಿಸುತ್ತದೆ. ಈಗ ಮೂಲ ‘0’ ಮತ್ತು ಬಿಂದು ‘a’ಗಳನ್ನು ನೇರ ರೇಖೆಯಿಂದ ಜೋಡಿಸಿ. ಮೂಲದಿಂದ TRರೇಖೆಯ ‘a’ ಬಿಂದುವಿನ ವರೆಗಿನ ರೇಖೆಯ ಇಳಿಜಾರು ARನ ಮೌಲ್ಯವನ್ನು ನೀಡುತ್ತದೆ.

3. ವೆಚ್ಚವು ಶೂನ್ಯವಿದ್ದಾಗ ಏಕಸ್ವಾಮ್ಯ ಮಾರಾಟಗಾರನ ಅಲ್ಪಾವಧಿ ಸಮತೋಲನವನ್ನು ರೇಖಾಚಿತ್ರದ ಸಹಾಯದೊಂದಿಗೆ ವಿವರಿಸಿ?

ಉದ್ಯಮ ಘಟಕವು ಪಡೆದ ಆದಾಯವನ್ನು ಭರಿಸಿದವೆಚ್ಚವನ್ನು ಕಳೆದರೆ ಅದು ಉದ್ಯಮ ಘಟಕವು ಗಳಿಸಿದ ಲಾಭಕ್ಕೆ ಸಮಾನಾಗಿರುತ್ತದೆ. ಅಂದರೆ ಲಾಭ = TR TC. ಈ ಪ್ರಕರಣದಲ್ಲಿ TCಯು ಶೂನ್ಯವಾಗಿರುವುದರಿಂದ TR ಗರಿಷ್ಠವಾದಾಗ ಲಾಭವೂ ಗರಿಷ್ಠವಾಗುತ್ತದೆ. ನಾವು ಮೊದಲು ನೋಡಿದ ಹಾಗೆ ಇದು ಉತ್ಪಾದನೆಯು 10 ಘಟಕಗಳಾಗಿರುವಾಗ ಸಂಭವಿಸುತ್ತದೆ. ಇದು MR ಶೂನ್ಯಕ್ಕೆ ಸಮವಾಗಿರುವ ಹಂತವೂ ಆಗಿರುತ್ತದೆ. aಯಿಂದ ಸಮತಲ ಈ ಅಕ್ಷದವರೆಗಿನ ಲಂಬ ರೇಖೆಯ ಉದ್ದದ ಭಾಗವು ಲಾಭದ ಈ ಮೊತ್ತವನ್ನು ತೋರಿಸುತ್ತದೆ.

ಈ ಉತ್ಪನ್ನವು ಮಾರಾಟವಾಗುವ ಬೆಲೆಯು ಅನುಭೋಗಿಗಳು ಒಟ್ಟಾಗಿ ಪಾವತಿಸಲು ಇಚ್ಛಿಸುವ ಬೆಲೆಯಾಗಿರುತ್ತದೆ. ಮಾರುಕಟ್ಟೆ ಬೇಡಿಕೆ ರೇಖೆ D ಯಲ್ಲಿ ಇದನ್ನು ನೀಡಲಾಗಿದೆ. ಉತ್ಪನ್ನದ ಮಟ್ಟವು 10 ಆಗಿರುವಾಗ ಬೆಲೆಯು ರೂ. 5 ಆಗಿರುತ್ತದೆ. ಏಕ ಸ್ವಾಮ್ಯ ಉದ್ಯಮ ಘಟಕದ ಮಾರುಕಟ್ಟೆ ಬೇಡಿಕೆ ರೇಖೆಯು AR ರೇಖೆ ಆಗಿರುವುದರಿಂದ ಉದ್ಯಮ ಘಟಕವು ಪಡೆಯುವ ಆದಾಯವು ರೂ. 5 ಆಗಿರುತ್ತದೆ. AR ನ ಉತ್ಪನ್ನ ಮತ್ತು ಮಾರಾಟ ಮಾಡಲಾದ ಪ್ರಮಾಣಗಳು ಒಟ್ಟು ಆದಾಯವನ್ನು ನೀಡುತ್ತದೆ. ಅದು ರೂ. 5 x10 = ರೂ. 50 ಆಗಿರುತ್ತದೆ. ರೇಖಾಚಿತ್ರ 6.6ರಲ್ಲಿ ಛಾಯೆಯಿಂದ ಆವೃತವಾದ ಆಯತ ಪ್ರದೇಶವು ಇದನ್ನು ತೋರಿಸುತ್ತದೆ.

4. ಏಕಸ್ವಾಮ್ಯದ ವಿಷಯಕ್ಕೆ ಸಂಬಂಧಿಸಿದಂತೆ ಅರ್ಥಶಾಸ್ತ್ರಜ್ಞರ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ?

ಆದಾಗ್ಯೂ, ಅರ್ಥಶಾಸ್ತ್ರಜ್ಞರು ಏಕಸ್ವಾಮ್ಯದ ವಿಷಯಕ್ಕೆ ಸಂಬಂಧಿಸಿದಂತೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮೊದಲನೆಯದಾಗಿ, ನೈಜ ಜಗತ್ತಿನಲ್ಲಿ ಮೇಲೆ ವಿವರಿಸಿದಂತಹ ಏಕಸ್ವಾಮ್ಯ ಆಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಹೇಳಬಹುದು. ಏಕೆಂದರೆ ಒಂದರ್ಥದಲ್ಲಿ ಎಲ್ಲಾ ಸರಕುಗಳು ಪರಸ್ಪರ ಬದಲಿ ಸರಕುಗಳಾಗಿರುತ್ತವೆ. ಎಲ್ಲಾ ಉದ್ಯಮ ಘಟಕಗಳು ಅಂತಿಮವಾಗಿ ಅನುಭೋಗಿಗಳ ಕೈಯಲ್ಲಿರುವ ಆದಾಯವನ್ನು ಪಡೆಯಲು ಪೈಪೋಟಿ ನಡೆಸುತ್ತವೆ.

ಒಂದು ಶುದ್ಧ ಏಕಸ್ವಾಮ್ಯ ಸನ್ನಿವೇಶದಲ್ಲಿನ ಉದ್ಯಮ ಘಟಕವು ಸಹ ಪೈಪೋಟಿಗೆ ಒಳಗಾಗದಿರುವುದಿಲ್ಲ. ಎಂಬುದು ಮತ್ತೊಂದು ವಾದವಾಗಿದೆ. ಏಕೆಂದರೆ ಆರ್ಥಿಕತೆಯು ಯಾವತ್ತೂ ನಿಶ್ಚಲವಾಗಿರುವುದಿಲ್ಲ. ಹೊಸ ತಂತ್ರಜ್ಞಾನವನ್ನು ಬಳಸಿ ಹೊಸ ಹೊಸ ಸರಕುಗಳು ಮಾರುಕಟ್ಟೆಗೆ ಯಾವಾಗಲೂ ಪ್ರವೇಶಿಸುತ್ತವೆ. ಅವು ಏಕಸ್ವಾಮ್ಯ ಉದ್ಯಮ ಘಟಕವು ಉತ್ಪಾದಿಸುವ ಸರಕಿಗೆ ನಿಕಟ ಪರ್ಯಾಯ ಸರಕುಗಳಾಗಿರುತ್ತದೆ. ಹೀಗೆ ದೀರ್ಘಾವಧಿಯಲ್ಲಿ ಏಕಸ್ವಾಮ್ಯ ಉದ್ಯಮ ಘಟಕಕ್ಕೆ ಯಾವಾಗಲೂ ಪೈಪೋಟಿ ಇರುತ್ತದೆ. ಅಲ್ಪಾವಧಿಯಲ್ಲಿಯೂ ಸಹ, ಯಾವಾಗಲೂ ಪೈಪೋಟಿಯ ಭಯ ಇರುತ್ತದೆ ಮತ್ತು ಏಕಸ್ವಾಮ್ಯ ಉದ್ಯಮ ಘಟಕವು ಮೇಲೆ ನಾವು ವಿವರಿಸಿದ ರೀತಿಯಲ್ಲಿ ವರ್ತಿಸಲು ಅಸಾಧ್ಯವಾಗುತ್ತದೆ.

ಏಕಸ್ವಾಮ್ಯದ ಅಸ್ತಿತ್ವವು ಸಮಾಜಕ್ಕೆ ಪ್ರಯೋಜವನ್ನುಂಟು ಮಾಡುಬಹುದು ಎಂಬುದು ಇನ್ನೊಂದು ದೃಷ್ಟಿಕೋನದ ವಾದವಾಗಿದೆ. ಏಕಸ್ವಾಮ್ಯ ಉದ್ಯಮ ಘಟಕವು ಅಧಿಕ ಲಾಭವನ್ನು ಗಳಿಸುವುದರಿಂದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಕಷ್ಟು ನಿಧಿಯನ್ನು ಹೊಂದಿರುತ್ತವೆ. ಪರಿಪೂರ್ಣ ಪೈಪೋಟಿಯ ಸಣ್ಣ ಉದ್ಯಮ ಘಟಕಗಳಿಗೆ ಇದು ಸಾಧ್ಯವಾಗುವುದಿಲ್ಲ. ಇಂತಹ ಸಂಶೋಧನೆಗಳನ್ನು ಮಾಡುವುದರಿಂದ ಏಕಸ್ವಾಮ್ಯದ ಉದ್ಯಮ ಘಟಕಗಳು ಉತ್ತಮ ಗುಣಮಟ್ಟದ ಸರಕುಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಅಲ್ಲದೆ ಹೆಚ್ಚು ಆಧುನಿಕ ತಂತ್ರಜ್ಞಾನಗಳನ್ನು ಅಂತಹ ಉದ್ಯಮ ಘಟಕಗಳು ಉಪಯೋಗಿಸಲು ಸಮರ್ಥವಾಗಿರುತ್ತದೆ. ಅವುಗಳ ಸೀಮಾಂತ ವೆಚ್ಚವು ಉತ್ಪನ್ನದ ಸಮತೋಲನ ಮಟ್ಟಕ್ಕಿಂತ ಬಹಳಷ್ಟು ಕಡಿಮೆ ಇರಬಹುದು.

ಇಲ್ಲಿ MC = MR ಆಗಿದ್ದು, ಅದು ಪರಿಪೂರ್ಣ ಪೈಪೋಟಿಯ ಸನ್ನಿವೇಶಕ್ಕಿಂತ ಹೆಚ್ಚಾಗಿರಲೂಬಹುದು.

5. ಸಾಮ್ಯಯುತ ಪೈಪೋಟಿ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ?

ಅಧಿಕ ಸಂಖ್ಯೆಯ ಉದ್ಯಮ ಘಟಕಗಳಿರುವ ಮಾರುಕಟ್ಟೆ ಸಂರಚನೆಯನ್ನು ಪರಿಗಣಿಸೋಣ. ಇಲ್ಲಿ ಉದ್ಯಮ ಘಟಕಗಳ ಮುಕ್ತ ಪ್ರವೇಶ ಮತ್ತು ನಿರ್ಗಮನವಿರುತ್ತದೆ. ಆದರೆ ಅವರು ಉತ್ಪಾದಿಸುವ ಸರಕುಗಳು ಏಕರೂಪದಲ್ಲಿರುವುದಿಲ್ಲ. ಅಂತಹ ಮಾರುಕಟ್ಟೆ ಸಂರಚನೆಯನ್ನು ಸ್ವಾಮ್ಯಯುತ ಪೈಪೋಟಿ ಎಂದು ಕರೆಯುತ್ತೇವೆ.

ಈ ರೀತಿಯ ಉದ್ಯಮ ಘಟಕಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಉದಾ: ಬಿಸ್ಕತ್ತು ಉತ್ಪಾದಿಸುವ ಉದ್ಯಮ ಘಟಕಗಳು ಅಧಿಕ ಸಂಖ್ಯೆಯಲ್ಲಿವೆ. ಆದರೆ ಉತ್ಪಾದಿಸಲಾಗುವ ಅನೇಕ ಬಿಸ್ಕತ್‌ಗಳು ಕೆಲವು ಬ್ರಾಂಡ್ ಹೆಸರಿನೊಂದಿಗೆ ಗುರುತಿಸಲ್ಪಟ್ಟಿವೆ ಮತ್ತು ಅವುಗಳಲ್ಲಿ ಒಂದರಿಂದ ಇನ್ನೊಂದನ್ನು ಬ್ರಾಂಡ್ ಹೆಸರು, ಪ್ಯಾಕೇಜಿಂಗ್ ಮತ್ತು ರುಚಿಯಲ್ಲಿ ಇರುವ ಸ್ವಲ್ಪ ವ್ಯತ್ಯಾಸಗಳಿಂದ ಗುರುತಿಸಬಹುದು. ಅನುಭೋಗಿಯು ಕಾಲಾನಂತರದಲ್ಲಿ ಒಂದು ನಿರ್ದಿಷ್ಟ ಬ್ರಾಂಡ್‌ನ ಬಿಸ್ಕತ್‌ ಬಗ್ಗೆ ಅಭಿರುಚಿ ಬೆಳೆಸಿಕೊಂಡಿರುತ್ತಾನೆ. ಅಥವಾ ಒಂದು ನಿರ್ದಿಷ್ಟ ಬ್ರಾಂಡ್‌ಗೆ ಕೆಲವು ಕಾರಣಗಳಿಂದ ವಿಧೇಯಳಾಗಿರುತ್ತಾನೆ. ಆದುದರಿಂದ ಅದನ್ನು ತಕ್ಷಣದಲ್ಲಿ ಇನ್ನೊಂದು ಬಿಸ್ಕತ್‌ಗೆ ಬದಲಾಯಿಸಲು ಬಯಸುವುದಿಲ್ಲ. ಆದಾಗ್ಯೂ, ಬೆಲೆಯಲ್ಲಿನ ವ್ಯತ್ಯಾಸವು ತುಂಬಾ ಹೆಚ್ಚಾದಾಗ ಇನ್ನೊಂದು ಬ್ಯಾಂಡ್‌ನ ಬಿಸ್ಕತ್‌ನ್ನು ಆಯ್ಕೆ ಮಾಡಲು ಬಯಸುತ್ತಾನೆ. ಅನುಭೋಗಿಗೆ ಅನುಭೋಗಿಸುವ ಬ್ರಾಂಡ್‌ನ್ನು ಬದಲಾಯಿಸಲು ಅಗತ್ಯವಾದ ಬೆಲೆ ವ್ಯತ್ಯಾಸವು ಬೇರೆ ಬೇರೆಯಾಗಿರಬಹುದು. ಆದುದರಿಂದ ಒಂದು ನಿರ್ದಿಷ್ಟ ಬ್ಯಾಂಡ್‌ನ ಬೆಲೆಯು ಕಡಿಮೆಯಾದಾಗ ಕೆಲವು ಅನುಭೋಗಿಗಳು ಆ ಬ್ರಾಂಡ್‌ನ್ನು ಅನುಭೋಗಿಸಲು ಪಲ್ಲಟಗೊಳ್ಳಬಹುದು. ಅಲ್ಲದೆ ಬೆಲೆಯಲ್ಲಿನ ಇಳಿಕೆಯು ಅಧಿಕ ಸಂಖ್ಯೆಯ ಅನುಭೋಗಿಗಳು ಕಡಿಮೆ ಬೆಲೆಯ ಬ್ಯಾಂಡ್‌ನತ್ತ ಪಲ್ಲಟಗೊಳ್ಳಲು ಕಾರಣವಾಗಬಹುದು.

ಈ ಕಾರಣದಿಂದಾಗಿ ಸ್ವಾಮ್ಯಯುತ ಪೈಪೋಟಿಯ ಉದ್ಯಮ ಘಟಕವು ಪರಿಪೂರ್ಣ ಪೈಪೋಟಿಯ ಉದ್ಯಮ ಘಟಕಕ್ಕೆ ಹೋಲಿಸಿದರೆ ಕಡಿಮೆ ಉತ್ಪನ್ನವನ್ನು ಉತ್ಪಾದನೆ ಮಾಡುತ್ತದೆ. ನೀಡಲಾದ ಕಡಿಮೆ ಉತ್ಪನ್ನದಲ್ಲಿ

ಅನುಭೋಗಿಗಳೆಲ್ಲರೂ ಪ್ರತಿ ಘಟಕಕ್ಕೆ ಹೆಚ್ಚು ಪಾವತಿಸಲು ಇಚ್ಚಿಸುವುದರಿಂದ ಸರಕಿನ ಬೆಲೆಯು ಪರಿಪೂರ್ಣ ಪೈಪೋಟಿಗಿಂತ ಹೆಚ್ಚಾಗುತ್ತದೆ.

ಮೇಲೆ ವಿವರಿಸಿದ ಸನ್ನಿವೇಶವು ಅಲ್ಪಾವಧಿಯಲ್ಲಿ ಆಸ್ತಿತ್ವದಲ್ಲಿರುವ ಒಂದು ಸನ್ನಿವೇಶವಾಗಿದೆ. ಆದರೆ ಸ್ವಾಮ್ಯಯುತ ಪೈಪೋಟಿಯ ಮಾರುಕಟ್ಟೆ ಸಂರಚನೆಯು ಮಾರುಕಟ್ಟೆಗೆ ಹೊಸ ಉದ್ಯಮ ಘಟಕಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ. ಕೈಗಾರಿಕೆಯಲ್ಲಿರುವ ಉದ್ಯಮ ಘಟಕಗಳು ಅಲ್ಪಾವಧಿಯಲ್ಲಿ ಧನಾತ್ಮಕ ಲಾಭಗಳಿಸಿದರೆ, ಹೊಸ ಉದ್ಯಮ ಘಟಕಗಳು ಸರಕಿನ ಉತ್ಪಾದನೆಯನ್ನು ಆರಂಭಿಸಲು ಆಕರ್ಷಿಸುತ್ತದೆ (ಮಾರುಕಟ್ಟೆಗೆ ಪ್ರವೇಶ), ಸರಕಿನ ಉತ್ಪನ್ನವು ವಿಸ್ತರಣೆಯಾದಂತೆ ಲಾಭ ಶೂನ್ಯ ಆಗುವವರೆಗೆ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಕೆಯಾಗಬಹುದು ಮತ್ತು

ಹೊಸ ಉದ್ಯಮ ಘಟಕಗಳಿಗೆ ಪ್ರವೇಶಿಸಲು ಯಾವುದೇ ಆಕರ್ಷಣೆ ಇರುವುದಿಲ್ಲ ಇದಕ್ಕೆ ವಿರುದ್ಧವಾಗಿ ಅಲ್ಪಾವಧಿಯಲ್ಲಿ ಉದ್ಯಮ ಘಟಕಗಳು ನಷ್ಟ ಅನುಭವಿಸಿದರೆ ಕೆಲವು ಉದ್ಯಮ ಘಟಕಗಳು ಉತ್ಪಾದನೆಯನ್ನು ನಿಲ್ಲಿಸುತ್ತವೆ. (ಮಾರುಕಟ್ಟೆಯಿಂದ ನಿರ್ಗಮನ) ಮತ್ತು ಉತ್ಪಾದನೆ ಪ್ರಮಾಣ ಕಡಿಮೆಯಾಗುವುದರಿಂದ ಬೆಲೆ ಹೆಚ್ಚಾಗುತ್ತದೆ. ಒಮ್ಮೆಲೆ ಲಾಭವು ಶೂನ್ಯವಾದಾಗ ಆಗಮನ ಮತ್ತು ನಿರ್ಗಮನ ನಿಂತು ಹೋಗುತ್ತವೆ. ಇದುವೇ ದೀರ್ಘಾವಧಿ ಸಮತೋಲನವಾಗಿದೆ.

ಇದರಿಂದ ಪ್ರತಿಯೊಂದು ಉದ್ಯಮ ಘಟಕದ ಉತ್ಪನ್ನಗಳ ಬ್ರಾಂಡ್‌ನ ಬೆಲೆ ಕಡಿಮೆಯಾದಾಗ ಬೇಡಿಕೆಯು ನಿರಂತರವಾಗಿ ಹೆಚ್ಚಳವಾಗುತ್ತದೆ. ಪರಿಪೂರ್ಣ ಪೈಪೋಟಿಗೆ ಹೋಲಿಸಿದರೆ, ದೀರ್ಘಾವಧಿ ಸಮತೋಲನವು ಕಡಿಮೆ ಮಟ್ಟದ ಉತ್ಪನ್ನ ಮತ್ತು ಹೆಚ್ಚಿನ ಬೆಲೆಗೆ ಸಂಬಂಧಿಸಿದೆ.

6. ಸರಾಸರಿ ಆದಾಯ ಮತ್ತು ಸೀಮಾಂತ ಆದಾಯ ರೇಖೆಗಳ ನಡುವಿನ ಸಂಬಂಧ,AR ರೇಖೆಯು ಕಡಿದಾಗಿದ್ದಾಗ MR ರೇಖೆಯು AR ರೇಖೆಗಿಂತ ತುಂಬ ಕೆಳಗಿರುತ್ತದೆ. ಎಂಬುದನ್ನು ರೇಖಾ ಚಿತ್ರದ ಮೂಲಕ ವಿವರಿಸಿ?

AR ಮತ್ತು MR ರೇಖೆಗಳ ನಡುವೆ ಇನ್ನೊಂದು ಸಂಬಂಧವನ್ನು ಕಾಣಬಹುದು. ರೇಖಾಚಿತ್ರ 6.2ರಲ್ಲಿ MR ರೇಖೆಯು AR ರೇಖೆಗಿಂತ ಕೆಳಗಿರುವುದನ್ನು ತೋರಿಸಲಾಗಿದೆ. ಯಾವುದೇ ಮಟ್ಟದ ಉತ್ಪನ್ನದಲ್ಲಿ ARನ ಮೌಲ್ಯಕ್ಕೆ ಅನುಗುಣವಾಗಿ MRನ ಮೌಲ್ಯವು ಕಡಿಮೆಯಾಗಿರುವುದನ್ನು ಕೋಷ್ಟಕ 6.1ರಲ್ಲಿ ನೋಡಬಹುದಾಗಿದೆ. AR ರೇಖೆಯು (ಅಂದರೆ ಬೇಡಿಕೆ ರೇಖೆ) ಕಡಿದಾದ ಇಳಿಕೆಯಾಗುತ್ತಿದ್ದರೆ MR ರೇಖೆಯು AR ರೇಖೆಗಿಂತ ಬಹಳ ಕೆಳಗಿರುತ್ತದೆಂಬ ತೀರ್ಮಾನಕ್ಕೆ ನಾವು ಬರಬಹುದು. ಇನ್ನೊಂದೆಡೆ AR ರೇಖೆಯು ಕಡಿಮೆ ಇಳಿಜಾರನ್ನು ಹೊಂದಿದ್ದರೆ AR ಮತ್ತು MRಗಳ ನಡುವಣ ಲಂಬ ಅಂತರವು ಕಡಿಮೆ ಇರುತ್ತದೆ. ಚಿತ್ರ 6.5 (a) ದಲ್ಲಿ AR ರೇಖೆಯು ಹೆಚ್ಚು ಸಮತಟ್ಟಾಗಿದ್ದು, ಚಿತ್ರ 6.5 (b)ಯು ಕಡಿದಾದ AR ರೇಖೆಯನ್ನು ತೋರಿಸುತ್ತದೆ.

ಸರಕಿನ ಅಷ್ಟೇ ಘಟಕಗಳಿಗೆ AR ಮತ್ತು MR ರ ನಡುವಣ ವ್ಯತ್ಯಾಸವು, ಫಲಕ (a) ಯಲ್ಲಿ (b) ಫಲಕಕ್ಕಿಂತ ಕಡಿಮೆ ಇದೆ.

FAQ :

1. ಏಕಸ್ವಾಮ್ಯ ಎಂದರೇನು?

ಒಬ್ಬನೇ ಮಾರಾಟಗಾರನಿರುವ ಮಾರುಕಟ್ಟೆ ಸಂರಚನೆಯನ್ನು ಏಕಸ್ವಾಮ್ಯ ಎಂದು ಕರೆಯಲಾಗುತ್ತದೆ.

2. ಬೇಡಿಕೆ ಬಿಂಬಕದ ಒಂದು ಸೂತ್ರವನ್ನು ಬರೆಯಿರಿ.

q=20-2P

ಇತರೆ ವಿಷಯಗಳು :

2nd Puc All Subject Notes

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *