ದ್ವಿತೀಯ ಪಿ.ಯು.ಸಿ ಮಾರುಕಟ್ಟೆ ಸಮತೋಲನ ಅರ್ಥಶಾಸ್ತ್ರ ನೋಟ್ಸ್‌ | 2nd Puc Economics Chapter 5 Notes in Kannada

ದ್ವಿತೀಯ ಪಿ.ಯು.ಸಿ ಮಾರುಕಟ್ಟೆ ಸಮತೋಲನ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 2nd Puc Economics Chapter 5 Notes Question Answer Pdf in Kannada Medium Kseeb Solutions For Class 12 Economics Chapter 5 Notes 2024 2nd Puc Marukatte Samatholana Economics Notes 2nd Puc Economics 5th Chapter Notes in Kannada Market Equilibrium Questions and Answers 2nd Puc Economics 5th Lesson Notes in Kannada Medium

2nd Puc Economics Chapter 5 Notes in Kannada

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯ ಅಥವಾ ಪದದಲ್ಲಿ ಉತ್ತರಿಸಿ.

1. ಸಮತೋಲನ ಬೆಲೆ ಎಂದರೇನು?

ಬೇಡಿಕೆ ಮತ್ತು ಪೂರೈಕೆ ಪ್ರಮಾಣಗಳ ಸಮ ಪ್ರಮಾಣವನ್ನು ಸಮತೋಲನ ಬೆಲೆ ಎನ್ನುವರು.

2. ಮಾರುಕಟ್ಟೆಯಲ್ಲಿ ಒಂದು ಸರಕಿಗೆ ಅಧಿಕ ಬೇಡಿಕೆ ಇದೆ ಎಂದು ನಾವು ಯಾವಾಗ ಹೇಳುತ್ತೇವೆ?

ಗ್ರಾಹಕರು ಅಥವಾ ಕೊಳ್ಳುವವರು ಹೆಚ್ಚಾದಾಗ,

3. ಬೆಲೆ ಮಿತಿ ಎಂದರೇನು?

ಸರಕಾರವು ಸರಕು ಅಥವಾ ಸೇವೆಯ ಬೆಲೆಗೆ ವಿಧಿಸಿದ ಮೇಲ್ಮೀತಿಯನ್ನು ಬೆಲೆ ಮಿತಿ ಎಂದು ಕರೆಯಲಾಗುತ್ತದೆ.

4. ಬೆಲೆ ಅಂತಸ್ತು ಎಂದರೇನು?

ನಿರ್ದಿಷ್ಟ ಸರಕು ಅಥವಾ ಸೇವೆಗೆ ವಿಧಿಸಬಹುದಾದ ಬೆಲೆಗೆ ಸರ್ಕಾರವು ಕನಿಷ್ಠಮಿತಿ ವಿಧಿಸಿರುವುದನ್ನು ಬೆಲೆ ಅಂತಸ್ತು ಎಂದು ಕರೆಯಲಾಗುವುದು.

5. ಯಾವ ಕಾಯಿದೆ ಮೂಲಕ ಕಾರ್ಮಿಕರ ವೇತನದರ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಆಗುವುದಿಲ್ಲ ಎಂದು ಸರ್ಕಾರ ಖಾತ್ರಿ ಪಡಿಸುತ್ತದೆ?

ಕನಿಷ್ಠ ಕೂಲಿ ಕಾಯಿದೆ.

6. ಸಮತೋಲನ ಬೆಲೆ ಮತ್ತು ಪ್ರಮಾಣವನ್ನು ವ್ಯಾಖ್ಯಾನಿಸಿ.

ಸಮತೋಲನ ಬೆಲೆ : ಬೇಡಿಕೆ ಮತ್ತು ಪೂರೈಕೆ ಪ್ರಮಾಣಗಳ ಸಮ ಪ್ರಮಾಣವನ್ನು ಸಮತೋಲನ : ಎನ್ನುವರು.

ಸಮತೋಲನ ಪ್ರಮಾಣ : ಸಮತೋಲನ ಬೆಲೆಯಲ್ಲಿ ಖರೀದಿಸಿದ ಮತ್ತು ಮಾರಾಟ ಮಾಡಲಾದ ಪ್ರಮಾಣವು ಸಮತೋಲನ ಪ್ರಮಾಣ ಎಂದು ಕರೆಯಲಾಗುತ್ತದೆ.

7. ಅಧಿಕ ಬೇಡಿಕೆ ಮತ್ತು ಅಧಿಕ ಪೂರೈಕೆಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ.

ಅಧಿಕ ಬೇಡಿಕೆ

  1. ಯಾವ ಬೆಲೆಯಲ್ಲಿ ಮಾರುಕಟ್ಟೆ ಬೇಡಿಕೆಯು ಮಾರುಕಟ್ಟೆ ಪೂರೈಕೆಯನ್ನು ಮೀರುತ್ತದೆಯೋ ಆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದೆ ಎಂದರ್ಥವಾಗುತ್ತದೆ.
  2. ಅಧಿಕ ಬೇಡಿಕೆ ಶೂನ್ಯ ಕಾಣದ ಕೈ ಕಾರ್ಯಾಚರಣೆ ಯಲ್ಲಿ ಅಧಿಕ ಬೇಡಿಕೆ ಸನ್ನಿವೇಶಗಳಲ್ಲಿ ಬೆಲೆಗಳನ್ನು ಹೆಚ್ಚಿಸಬೇಕು.

ಅಧಿಕ ಪೂರೈಕೆ

ಯಾವ ಒಂದು ಬೆಲೆಯಲ್ಲಿ ಮಾರುಕಟ್ಟೆ ಪೂರೈಕೆಯು ಮಾರುಕಟ್ಟೆ ಬೇಡಿಕೆಗಿಂತ ಅಧಿಕವಾಗಿರುತ್ತದೆಯೋ ಆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಧಿಕ ಪೂರೈಕೆ ಎಂದರ್ಥವಾಗುತ್ತದೆ.

ಅಧಿಕ ಪೂರೈಕೆ – ಸನ್ನಿವೇಶ, ಕಾಣದ ಕೈ ಕಾರ್ಯಾಚರಣೆ ಸನ್ನಿವೇಶದಲ್ಲಿ ಅಧಿಕ ಪೂರೈಕೆ ಬೆಲೆಗಳನ್ನು ಕಡಿಮೆ ಗೊಳಿಸಬೇಕು.

8. ಶ್ರಮದ ಮಾರುಕಟ್ಟೆಯಲ್ಲಿ ಕೂಲಿಯು ಹೇಗೆ ನಿರ್ಧಾರವಾಗುತ್ತದೆ?

ಪರಿಪೂರ್ಣ ಪೈಪೋಟಿಯುತ ಶ್ರಮದ ಮಾರುಕಟ್ಟೆಯಲ್ಲಿ, ಒಂದು ಹೆಚ್ಚುವರಿ ಘಟಕದ ಶ್ರಮದ ನೇಮಕಾತಿ ತಗಲುವ ಹೆಚ್ಚುವರಿ ವೆಚ್ಚವು ಕೂಲಿಯ ದರ (W) ಆಗಿದೆ.

ಶ್ರಮದ ಸೀಮಾಂತ ಉತ್ಪನ್ನದ ಮೌಲ್ಯವು ಕೂಲಿಯ ದರಕ್ಕಿಂತ ಅಧಿಕವಾಗಿರುತ್ತದೆಯೋ, ಅಲ್ಲಿಯವರೆಗೆ ಉದ್ಯಮ ಘಟಕವು ಅಧಿಕ ಲಾಭ ಗಳಿಸುತ್ತದೆ. ಉದ್ಯಮ ಘಟಕವು ಯಾವಾಗಲೂ ಕೂಲಿಯ ದರಕ್ಕೆ ಸಮನಾಗಿರುವ ಶ್ರಮದ ಸೀಮಾಂತ ಉತ್ಪನ್ನದ ಮೌಲ್ಯ W=VMP1 ಉತ್ಪಾದಿಸುತ್ತದೆ.

ಅಭ್ಯಾಸದ ಪ್ರಶ್ನೆಗಳು

2nd Puc Economics Chapter 5 Notes in Kannada

1. ಮಾರುಕಟ್ಟೆ ಸಮತೋಲನವನ್ನು ವಿವರಿಸಿ?

ಮಾರುಕಟ್ಟೆಯಲ್ಲಿನ ಎಲ್ಲಾ ಪರಿಭಾವನೆಗಳು ಮತ್ತು ಎಲ್ಲಾ ಉದ್ಯಮ ಘಟಕಗಳ ಯೋಜನೆಗಳು ಹೊಂದಾಣಿಕೆಯಾಗುವ ಒಂದು ಸನ್ನಿವೇಶವನ್ನು ಸಮತೋಲನ ವೆಂದು ಕರೆಯುತ್ತಾರೆ.

2. ಮಾರುಕಟ್ಟೆಯಲ್ಲಿ ಒಂದು ಸರಕಿಗೆ ಅಧಿಕ ಬೇಡಿಕೆ ಇದೆ ಎಂದು ನಾವು ಯಾವಾಗ ಹೇಳುತ್ತೇವೆ?

ಯಾವ ಬೆಲೆಯಲ್ಲಿ ಮಾರುಕಟ್ಟೆ ಬೇಡಿಕೆಯು ಮಾರುಕಟ್ಟೆ ಪೂರೈಕೆಯನ್ನು ಮೀರುತ್ತದೆಯೋ ಆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಆ ಸರಣಿ ಅಧಿಕ ಬೇಡಿಕೆ ಇದೆ ಎನ್ನುತ್ತೇವೆ.

3. ಮಾರುಕಟ್ಟೆಯಲ್ಲಿ ಒಂದು ಸರಕಿಗೆ ಅಧಿಕ ಪೂರೈಕೆ ಇದೆ ಎಂದು ನಾವು ಯಾವಾಗ ಹೇಳುತ್ತೇವೆ?

ಯಾವ ಒಂದು ಬೆಲೆಯಲ್ಲಿ ಮಾರುಕಟ್ಟೆ ಪೂರೈಕೆ ಮಾರುಕಟ್ಟೆ ಬೇಡಿಕೆಗಿಂತ ಅಧಿಕವಾಗಿರುತ್ತದೆಯೋ ಆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಆ ಸರಕಿಗೆ “ಅಧಿಕ ಪೂರೈಕೆ ಇದೆ ಎಂದು ಹೇಳುತ್ತೇವೆ,

4. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬೆಲೆಯು ಈ ಕೆಳಗಿನಂತಿದ್ದಾಗ ಏನು ಸಂಭವಿಸುತ್ತದೆ?

ಎ) ಸಮತೋಲನ ಬೆಲೆಗಿಂತ ಜಾಸ್ತಿ

ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬೆಲೆಯು ಸಮತೋಲನ ಬೆಲೆಗಿಂತ ಜಾಸ್ತಿ ಇದ್ದಾಗ ಬೇಡಿಕೆಯ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಪೂರೈಕೆಯ ಪ್ರಮಾಣ ಹೆಚ್ಚುತ್ತದೆ.

ಬಿ) ಸಮತೋಲನ ಬೆಲೆಗಿಂತ ಕಡಿಮೆ

ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬೆಲೆಯು ಸಮತೋಲನ ಬೆಲೆಗಿಂತ ಕಡಿಮೆ ಇದ್ದಾಗ – ಬೇಡಿಕೆಯ ಪ್ರಮಾಣ

ಅಧಿಕವಾಗುತ್ತಾ ಹೋಗುತ್ತದೆ ಹಾಗೂ ಪೂರೈಕೆಯ ಪ್ರಮಾಣ ಕಡಿಮೆಯಾಗುತ್ತದೆ.

5. ಸ್ಥಿರ ಸಂಖ್ಯೆಯ ಉದ್ಯಮ ಘಟಕಗಳಿದ್ದಾಗ, ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಬೆಲೆ ಹೇಗೆ ನಿರ್ಧರಿಸಲ್ಪಡುತ್ತದೆ ಎಂಬುದನ್ನು ವಿವರಿಸಿ?

ಉದ್ಯಮ ಘಟಕಗಳ ಸಂಖ್ಯೆ ಸ್ಥಿರವಿದ್ದಾಗ, ಪರಿಪೂರ್ಣ ಪೈಪೋಟಿಯ ಮಾರುಕಟ್ಟೆಯ ಸಮತೋಲನವನ್ನು ನಿರೂಪಿಸುತ್ತದೆ.

ಮೇಲ್ಕಂಡ ರೇಖಾಚಿತ್ರ ದಲ್ಲಿ SS ರೇಖೆಯ ಒಂದು ಸರಕಿನ ಮಾರುಕಟ್ಟೆ ಪೂರೈಕೆ ರೇಖೆಯಾಗಿದ್ದು DD ರೇಖೆಯು ಮಾರುಕಟ್ಟೆ ಬೇಡಿಕೆ ರೇಖೆಯಾಗಿದೆ.

ಜಾರಿಯಲ್ಲಿರುವ ಬೆಲೆ P1 ಆದಾಗ ಮಾರುಕಟ್ಟೆ ಬೆಡಿಕೆಯ q1 ಹಾಗೂ ಮಾರುಕಟ್ಟೆ ಪೂರೈಕೆಯು q1 ಆಗಿರುತ್ತದೆ. ಮಾರುಕಟ್ಟೆಯಲ್ಲಿ ಬೆಲೆಯು ಹೆಚ್ಚಾದಂತೆ, ಬೇಡಿಕೆಯ ಪ್ರಮಾಣ ಕಡಿಮೆಯಾಗುತ್ತದೆ. ಮತ್ತು ಪೂರೈಕೆಯ ಪ್ರಮಾಣ ಹೆಚ್ಚುತ್ತದೆ.

ಪೂರೈಕೆಯ ಇದೇ ರೀತಿ ಚಾಲ್ತಿಯಲ್ಲಿರುವ ಬೆಲೆ P2 ಆದಾಗ ಮಾರುಕಟ್ಟೆ ಪೂರೈಕೆq2 ಯು ಮಾರುಕಟ್ಟೆ ಬೇಡಿಕೆ(q 12) ಯನ್ನು ಮೀರುತ್ತದೆ, ಮತ್ತು ಆ ಬೆಲೆಯು q12q2, 4, ಗೆ ಸಮನಾದ ಅಧಿಕ ಪೂರೈಕೆಗೆ ಕಾರಣವಾಗುತ್ತದೆ. ಎಲ್ಲಾ ಅಂಶಗಳು ಸ್ಥಿರವಿದ್ದು ಬೆಲೆಕಡಿಮೆಯಾದಂತೆ ಬೇಡಿಕೆಯ ಪ್ರಮಾಣವು ಅಧಿಕವಾಗುತ್ತಾ ಹೋಗುತ್ತದೆ ಹಾಗೂ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ. q ಸಮತೋಲನ ಪ್ರಮಾಣವಾದರೆ p* ಗಿಂತ ಹೆಚ್ಚಿನ ಬೆಲೆಯು ಅಧಿಕ ಪೂರೈಕೆಗೂ ಮತ್ತು P*ಗಿಂತ ಕಡಿಮೆ ಬೆಲೆಯ ಅಧಿಕ ಬೇಡಿಕೆಗೂ ಕಾರಣವಾಗುತ್ತದೆ.

6. ಅಭ್ಯಾಸ (ಪ್ರಶ್ನೆ)5 ರಲ್ಲಿ ಸಾಧಿತವಾಗಿರುವ ಸಮತೋಲನ ಬೆಲೆಯು, ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಉದ್ಯಮ ಘಟಕಗಳ ಕನಿಷ್ಠ ಸರಾಸರಿ ವೆಚ್ಚಕ್ಕಿಂತ ಜಾಸ್ತಿ ಇದೆ ಎಂದು ಭಾವಿಸೋಣ. ಈಗ ಒಂದು ವೇಳೆ ನಾವು ಉದ್ಯಮ ಘಟಕಗಳ ಮುಕ್ತ ಪ್ರವೇಶ ಮತ್ತು ಮುಕ್ತ ನಿರ್ಗಮನಕ್ಕೆ ಅವಕಾಶ ಮಾಡಿಕೊಟ್ಟರೆ, ಮಾರುಕಟ್ಟೆ ಬೆಲೆಯು ಹೇಗೆ ಹೊಂದಿಕೊಳ್ಳುತ್ತದೆ?

ಸ್ಥಿರ ಸಂಖ್ಯೆಯ ಉದ್ಯಮಘಟಕಗಳಿದ್ದಾಗ, ಸಾಧಿತವಾಗಿರುವ ಸಮತೋಲನ ಬೆಲೆಯು ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಉದ್ಯಮ ಘಟಕಗಳ ಕನಿಷ್ಠ ಸರಾಸರಿ ವೆಚ್ಚಕ್ಕಿಂತ ಜಾಸ್ತಿ ಇದೆ ಎಂದು ಭಾವಿಸಿದಾಗ ಅಂದರೆ ಏಕರೂಪದ ಉದ್ಯಮ ಘಟಕಗಳಿದ್ದು ಉದ್ಯಮ ಘಟಕಗಳು ಮುಕ್ತವಾಗಿ, ಮಾರುಕಟ್ಟೆಯನ್ನು ಪ್ರವೇಶಿಸಿರುವ ಮತ್ತು ನಿರ್ಗಮಿಸುವ ಅವಕಾಶವಿದ್ದಾಗ ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಸಮತೋಲನ ಬೆಲೆಯು ಯಾವಾಗಲೂ ಉದ್ಯಮ ಘಟಕಗಳ ಕನಿಷ್ಠ ಸರಾಸರಿ ವೆಚ್ಚಕ್ಕೆ ಸಮನಾಗಿರುತ್ತದೆ.

7. ಮಾರುಕಟ್ಟೆಯಲ್ಲಿ ಮುಕ್ತ ಪ್ರವೇಶ ಮತ್ತು ಮುಕ್ತ ನಿರ್ಗಮನಕ್ಕೆ ಅವಕಾಶವಿರುವಾಗ, ಪರಿಪೂರ್ಣ ಪೈಪೋಟಿ ಯುತ ಮಾರುಕಟ್ಟೆಯಲ್ಲಿ ಉದ್ಯಮಘಟಕ ಗಳು ಯಾವ ಮಟ್ಟದ ಬೆಲೆಯಲ್ಲಿ ಪೂರೈಸುತ್ತವೆ? ಇಂತಹ ಮಾರುಕಟ್ಟೆಯಲ್ಲಿ ಸಮತೋಲನ ಪ್ರಮಾಣವು ಹೇಗೆ ನಿರ್ಧರಿಸಲ್ಪಡುತ್ತದೆ?

ಮಾರುಕಟ್ಟೆಯಲ್ಲಿನ ಉದ್ಯಮ ಘಟಕಗಳ ಸಾಮಾನ್ಯ ಲಾಭ ಸಾಮಾನ್ಯಲಾಭಕ್ಕಿಂತ ಕಡಿಮೆ ಲಾಭಗಳಿಸುತ್ತಿದ್ದರೆ ಕೆಲವು ಉದ್ಯಮಗಳು ಮಾರುಕಟ್ಟೆಯಿಂದ ನಿರ್ಗಮಿಸುತ್ತವೆ. ಇದು ಉದ್ಯಮ ಘಟಕಗಳ ಲಾಭಗಳಿಕೆಯಲ್ಲಿನ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಸಾಕಷ್ಟು ಸಂಖ್ಯೆಯ ಉದ್ಯಮ ಘಟಕಗಳೊಂದಿಗೆ, ಪ್ರತಿ ಉದ್ಯಮ ಘಟಕದ ಲಾಭವು ಸಾಮಾನ್ಯ ಲಾಭದ ಮಟ್ಟಕ್ಕೆ ಹೆಚ್ಚಾಗುತ್ತದೆ. ಈ ಸ್ಥಿತಿಯಲ್ಲಿರುವ ಉದ್ಯಮ ಘಟಕವು ಹೊರಹೋಗಲು ಬಯಸುವುದಿಲ್ಲ, ಏಕೆಂದರೆ ಅವುಗಳು ಈ ಸ್ಥಿತಿಯಲ್ಲಿ ಲಾಭಗಳಿಸುತ್ತಿರುತ್ತವೆ, ಹೀಗೆ ಮುಕ್ತ ಪ್ರವೇಶ ಮತ್ತು ಮುಕ್ತ ನಿರ್ಗಮನದೊಂದಿಗೆ ಪ್ರತಿಯೊಂದು ಉದ್ಯಮ ಘಟಕವೂ ಸದ್ಯದ ಮಾರುಕಟ್ಟೆ ಬೆಲೆಯಲ್ಲಿ ಯಾವಾಗಲೂ ಸಾಮಾನ್ಯಲಾಭಗಳಿಸುತ್ತಿರುತ್ತವೆ,

ಅಂದರೆ P ಕನಿಷ್ಠ AC

8. ಪ್ರವೇಶ ಮತ್ತು ನಿರ್ಗಮನವನ್ನು ಅನುಮತಿಸುವ ಮಾರುಕಟ್ಟೆಯಲ್ಲಿ ಉದ್ಯಮ ಘಟಕಗಳ ಸಮತೋಲನ ಸಂಖ್ಯೆಯು ಹೇಗೆ ನಿರ್ಧರಿಸಲ್ಪಡುತ್ತದೆ?

ಮಾರುಕಟ್ಟೆಯಲ್ಲಿ ಉದ್ಯಮ ಘಟಕಗಳ ಸಮತೋಲನ ಸಂಖ್ಯೆಯು Po ಬೆಲೆಯಲ್ಲಿ qo, ಉತ್ಪನ್ನವನ್ನು ಪೂರೈಸಲು ಅಗತ್ಯವಿರುವ ಉದ್ಯಮಘಟಕಗಳ ಸಂಖ್ಯೆಗೆ ಸಮನಾಗಿರುತ್ತದೆ, ಪ್ರತಿಯೊಂದು ಸಂಖ್ಯೆಯು ಆ ಬೆಲೆಗೆ q, ಪ್ರಮಾಣವನ್ನು ಪೂರೈಸುತ್ತದೆ, ಇದರ ಸಮತೋಲನ ಸಂಖ್ಯೆಯನ್ನು ಎಂದು ವ್ಯಕ್ತ ಪಡಿಸಿದರೆ ಆಗ

no=qo/qo ಆಗುತ್ತದೆ.

ಮುಕ್ತ ಪ್ರವೇಶ ಮತ್ತು ನಿರ್ಗಮನದ ಸನ್ನಿವೇಶ ವಿರುವಾಗ, ಬೇಡಿಕೆಯಲ್ಲಿನ ಪಲ್ಲಟವು ಸಮತೋಲನ ಬೆಲೆ ಮೇಲೆ ಯಾವುದೇ ಪರಿಣಾಮ ಹೊಂದಿರುವುದಿಲ್ಲ, ಆದರೆ ಬೇಡಿಕೆಯಲ್ಲಿನ ಬದಲಾವಣೆಯೊಂದಿಗೆ ಸಮತೋಲನ ಪ್ರಮಾಣ ಮತ್ತು ಉದ್ಯಮ ಘಟಕಗಳ ಸಂಖ್ಯೆಯು ಒಂದೇ ದಿಕ್ಕಿನಲ್ಲಿ ಬದಲಾಗುತ್ತದೆ,

9. ಈ ಕೆಳಗಿನ ಸಂದರ್ಭಗಳಲ್ಲಿ ಸಮತೋಲನ ಬೆಲೆ ಮತ್ತು ಸಮತೋಲನ ಪ್ರಮಾಣಗಳು ಹೇಗೆ ಪ್ರಭಾವಿತ ವಾಗುತ್ತದೆ?

ಎ) ಅನುಭೋಗಿಗಳ ಆದಾಯವು ಹೆಚ್ಚಾದಾಗ

ಅನುಭೋಗಿಗಳ ಆದಾಯವು ಹೆಚ್ಚಾದಾಗ ಸಮತೋಲನ ಬೆಲೆ ಮತ್ತು ಸಮತೋಲನದ ಪ್ರಮಾಣಗಳು ಈ ರೀತಿ ಗುರ್ತಿಸಬಹುದು.

ಎ). ಅತೃಪ್ತ ಅನುಭೋಗಿಗಳು ಸರಕಿಗೆ ಅಧಿಕ ಬೆಲೆ ಪಾವತಿಸಲು ಬಯಸುತ್ತಾರೆ ಹೀಗಾಗಿ ಬೆಲೆ ಏರಿಕೆ ಪ್ರವೃತ್ತಿಯನ್ನು ಹೊಂದುತ್ತದೆ, ಅಂದ ಮೇಲೆ ಸಮತೋಲನ ಪ್ರಮಾಣವು ಹೆಚ್ಚಾಗುತ್ತದೆ.

ಬಿ) ಅನುಬೋಗಿಗಳ ಆದಾಯವು ಕಡಿಮೆಯಾದಾಗ?

ಅನುಭೋಗಿಗಳ ಆದಾಯ ಕಡಿಮೆ ಇದ್ದಾಗ, ಬೆಲೆ ಸಮಸ್ಥಿತಿಯಲ್ಲಿರುತ್ತದೆ, ಬೆಲೆಯು ಬದಲಾಗದೆ ಉಳಿಯುತ್ತದೆ, ಆದರೆ ಸಮತೋಲನ ಪ್ರಮಾಣವು ಕಡಿಮೆಯಾಗುತ್ತದೆ.

ಇದನ್ನು ಈ ಕೆಳಕಂಡ ರೇಖಾ ಚಿತ್ರದೊಂದಿಗೆ ಸ್ಪಷ್ಟಪಡಿಸಬಹುದು.

ಆರಂಭದಲ್ಲಿ ಬೇಡಿಕೆರೇಖೆಯು DDo ಆಗಿರುತ್ತದೆ, ಸಮತೋಲನ ಪ್ರಮಾಣ ಮತ್ತು ಸಮತೋಲನ ಬೆಲೆಗಳು ಕ್ರಮವಾಗಿ qo ಮತ್ತು Po ಆಗಿರುತ್ತದೆ. ಬೇಡಿಕೆ ರೇಖೆಯು ಬಲಭಾಗಕ್ಕೆ DD1 ಗೆ ಪಲ್ಲಟವಾಗುವುದರೊಂದಿಗೆ ರೇಖಾಚಿತ್ರ ಫಲಕ (ಎ)ದಲ್ಲಿ ತೋರಿಸಿರುವಂತೆ ಸಮತೋಲನ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಬೇಡಿಕೆ ರೇಖೆಯು ಎಡಭಾಗಕ್ಕೆ DD2 ಗೆ ಪಲ್ಲಟವಾಗುದರೊಂದಿಗೆ .

ರೇಖಾಚಿತ್ರ (b) ಯಲ್ಲಿ ತೋರಿಸಿರುವಂತೆ ಸಮತೋಲನ ಪ್ರಮಾಣವು ಕಡಿಮೆಯಾಗುತ್ತದೆ. ಈ ಎರಡು ಸನ್ನಿವೇಶಗಳಲ್ಲಿ ಸಮತೋಲನ ಬೆಲೆಯು ಬದಲಾಗದೆ Poನಲ್ಲಿ ಉಳಿದಿದೆ

10. ಷೂ ಗಳ ಬೆಲೆಯಲ್ಲಿನ ಹೆಚ್ಚಳವು ಒಂದು ಜೊತೆ ಸಾಕ್ಷಗಳ ಬೆಲೆ ಮತ್ತು ಹಲವು ಜೊತೆ ಸಾಕ್ಸ್ ಗಳ ಖರೀದಿ ಮತ್ತು ಮಾರಾಟದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಪೂರೈಕೆ ಮತ್ತು ಬೇಡಿಕೆ ರೇಖೆಗಳನ್ನು ಬಳಸಿ ನಿರೂಪಿಸಿ

ಷೂಗಳ ಬೆಲೆಯಲ್ಲಿನ ಹೆಚ್ಚಳವು ಒಂದು ಜೊತೆ ಸಾಕ್ಷಗಳ ಬೆಲಕೆ ಮತ್ತು ಹಲವು ಜೊತೆ ಸಾಕ್ಸ್‌ ಗಳ ಖರೀದಿ ಮತ್ತು ಮಾರಾಟದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಈ ಕೆಳಕಂಡ ಪೂರೈಕೆ ಮತ್ತು ಬೇಡಿಕೆ: ರೇಖೆಗಳನ್ನು ಬಳಸಿ ನಿರೂಪಿಸಬಹುದು.

ಮೇಲ್ಕಂಡ ರೇಖಾ ಚಿತ್ರದಲ್ಲಿ ಆರಂಭದಲ್ಲಿ ಸಮತೋಲನವು ಬೇಡಿಕೆ ರೇಖೆ DDಮತ್ತು ಪೂರೈಕೆ ರೇಖೆಗಳು: ಬಿಂದುವಿನಲ್ಲಿ ಸಂಧಿಸುತ್ತವೆ. (೩) ರೇಖಾಚಿತ್ರದಲ್ಲಿ, ಪೂರೈಕೆ ಮತ್ತು ಬೇಡಿಕೆ ರೇಖೆಗಳೆರಡೂ ಬಲಭಾಗಕ್ಕೆ ಪಲ್ಲಟ ಗೊಂಡಿದೆ ಇದರಿಂದ ಸಮತೋಲನ ಪ್ರಮಾಣವು ಹೆಚ್ಚಾಗುತ್ತದೆ ಆದರೆ ಬೆಲೆಯ ಬದಲಾವಣೆ ಉಳಿಯುತ್ತದೆ. (b) ರೇಖಾಚಿತ್ರದಲ್ಲಿ ಪೂರೈಕೆ ರೇಖೆಯು ಬಲಭಾಗಕ್ಕೆ ಪಲ್ಲಟಗೊಳ್ಳುತ್ತದೆ, ಅಂದರೆ ಸಮತೋಲನ ಪ್ರಮಾಣ ಬದಲಾಗದೇ ಇರುತ್ತದೆ. ಬೇಡಿಕೆಯಲ್ಲಿನ ಎಡಭಾಗ ಮತ್ತು ಪೂರೈಕೆಯಲ್ಲಿನ ಬಲಭಾಗದ ಪಲ್ಲಟದಿಂದಾಗಿ ಸಮತೋಲನ ಬೆಲೆಯು ಇಳಿಯುತ್ತದೆ,

(a)ರೇಖಾಚಿತ್ರದಲ್ಲಿ ಷೂಗಳ ಬೆಲೆಯಲ್ಲಿ ಬದಲಾಗದೆ ಹಾಗೆ ಉಳಿಯುತ್ತದೆ, ಷೂಗಳ ಜೊತೆ ಸಾಕ್ಸ್ ಬೇಡಿಕೆ ಹೆಚ್ಚುತ್ತದೆ.

11. ಕಾಫಿ ಬೆಲೆಯಲ್ಲಿನ ಬದಲಾವಣೆಯು ಚಹಾದ ಸಮತೋಲನ ಬೆಲೆ ಹಾಗೂ ಸಮತೋಲನ ಪ್ರಮಾಣದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ರೇಖಾಚಿತ್ರದೊಂದಿಗೆ ವಿವರಿಸಿ?

ಕಾಫಿ ಬೆಲೆಯಲ್ಲಿನ ಬದಲಾವಣೆಯು ಚಹಾದ ಸಮ ತೋಲನ ಬೆಲೆ ಹಾಗೂ ಸಮತೋಲನ ಪ್ರಮಾಣದ ಮೇಲೆ ಬೀರುತ್ತದೆ. ಇದನ್ನು ಈ ಕೆಳಕಂಡ ರೇಖಾಚಿತ್ರ ದೊಂದಿಗೆ ವಿವರಿಸಬಹುದು.

ಕಾಫಿಯ ಬೆಲೆಯಲ್ಲಿನ ಬದಲಾವಣೆಯು, ಚಹಾದ ಸಮತೋಲನ ಬೆಲೆ ಮತ್ತು ಪ್ರಮಾಣಗಳು ಅನುಕ್ರಮವಾಗಿ p*ಹಾಗೂ ಆಗಿವೆ P* ಬೆಲೆ peಗೆ ಚಹಾಗೆ ಅಧಿಕ ಬೇಡಿಕೆಸಿಗುತ್ತದೆ.

12. ಉತ್ಪಾದನೆಯಲ್ಲಿ ಬಳಸಿದ ಆದಾನಗಳ ಬೆಲೆಯಲ್ಲಿ ಬದಲಾವಣೆಗಳಾದಾಗ ಒಂದು ಸರಕಿನ ಸಮತೋಲನ ಬೆಲೆ ಮತ್ತು ಸಮತೋಲನ ಪ್ರಮಾಣಗಳು ಹೇಗೆ ಬದಲಾಗುತ್ತವೆ?

ಎಲ್ಲಾ ಅಂಶಗಳು ಸ್ಥಿರವಾಗಿರುವ ಒಂದು ಸರಕಿನ ಉತ್ಪಾದನೆಯಲ್ಲಿ ಬಳಸುವ ಆದಾನವೊಂದರ ಬೆಲೆಯಲ್ಲಿ ಹೆಚ್ಚಳವಾಗುವ ಸನ್ನಿವೇಶದಲ್ಲಿ ಈ ಆದಾನವೊಂದರ ಬೆಲೆಯಲ್ಲಿ ಉದ್ಯಮ ಘಟಕಗಳ ಸೀಮಾಂತ ಉತ್ಪಾದನಾ ವೆಚ್ಚದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಪ್ರತಿ ಬೆಲೆ ಯಲ್ಲಿ ಮಾರುಕಟ್ಟೆ ಪೂರೈಕೆಯು ಈ ಮೊದಲಿಗಿಂತ ಕಡಿಮೆ ಯಾಗುತ್ತದೆ ಹೀಗಾಗಿ ಪೂರೈಕೆ ರೇಖೆಯು ಎಡಗಡೆಗೆ ಪಲ್ಲಟವಾಗುತ್ತದೆ,

ಇದನ್ನು ಈ ಕೆಳಕಂಡ ರೇಖಾಚಿತ್ರದೊಂದಿಗೆ ಸ್ಪಷ್ಟ ಪಡಿಸಬಹುದು. ಮೇಲ್ಕಂಡ ರೇಖಾಚಿತ್ರದಲ್ಲಿ ಪೂರೈಕೆ ರೇಖೆಯು SSದಿಂದ SS ಗೆ ಪಲ್ಲಟಗೊಂಡಿರುವುದನ್ನು ತೋರಿಸ ಲಾಗಿದೆ, ಆದರೆ ಆದಾನದ ಬೆಲೆಯಲ್ಲಿನ ಈ ಏರಿಕೆಯು ಅನುಭೋಗಿಗಳ ಬೇಡಿಕೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ, ಏಕೆಂದರೆ ಬೇಡಿಕೆಯು ಆದಾನ ಬೆಲೆಗಳನ್ನು ನೇರವಾಗಿ ಅವಲಂಬಿಸಿರುವುದಿಲ್ಲ. ಆದ್ದರಿಂದ ಬೇಡಿಕೆ ರೇಖೆಯು ಬದಲಾಗದೇ ಉಳಿಯುತ್ತದೆ. ಮೇಲ್ಕಂಡ ಈ ರೇಖಾಚಿತ್ರದಲ್ಲಿ ಬೇಡಿಕೆ ರೇಖೆಯು DDoದಲ್ಲಿ ಬದಲಾಗದೇ ಉಳಿದಿದೆ, ಪರಿಣಾಮವಾಗಿ ಮೊದಲಿನ ಸಮ ತೋಲನಕ್ಕೆ ಹೋಲಿಸಿದರೆ ಈಗ ಮಾರುಕಟ್ಟೆ ಬೆಲೆಯು ಏರುತ್ತದೆ ಮತ್ತು ಉತ್ಪನ್ನದ ಪ್ರಮಾಣ ಕಡಿಮೆಯಾಗುತ್ತದೆ.

ಮೇಲ್ಕಂಡ x ರೇಖಾಚಿತ್ರದಲ್ಲಿ “G” ಬಿಂದು ಸಮ ತೋಲನವಾಗಿದೆ (ಬಿ) (b) ರೇಖಾಚಿತ್ರದಲ್ಲಿ F ಬಿಂದುವು ಸಮತೋಲನವಾಗಿದೆ, ಪೂರೈಕೆ ರೇಖೆಯ ಬಲ ಭಾಗದ ಪಲ್ಲಟದೊಂದಿಗೆ ಸಮತೋಲನ ಪ್ರಮಾಣವು ಹೆಚ್ಚಾಗುತ್ತದೆ. ಮತ್ತು ಬೆಲೆ ಕಡಿಮೆಯಾಗುತ್ತದೆ. ಪೂರೈಕೆ ರೇಖೆಯ ಎಡ ಭಾಗದ ಪಲ್ಲಟದೊಂದಿಗೆ ಸಮತೋಲನ ಪ್ರಮಾಣವು ಕಡಿಮೆ ಯಾಗುತ್ತದೆ, ಮತ್ತು ಸಮತೋಲನ ಬೆಲೆ ಹೆಚ್ಚಾಗುತ್ತದೆ.

13. X ಸರಕಿನ ಬದಲೀ ಸರಕಾರದ yನ ಬೆಲೆಯಲ್ಲಿ ಹೆಚ್ಚಳ ವಾದರೆ ಇದು X ಸರಕಿನ ಸಮತೋಲನ ಬೆಲೆ ಮತ್ತು ಸಮತೋಲನ ಪ್ರಮಾಣದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?

ಕೆಲವು ಸರಕುಗಳು ಮತ್ತು ಸೇವೆಗಳು ಬೆಲೆಗಳು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಕೆಳಗಿಳಿಯುವುದು ಸಾಧ್ಯವಾದುದಲ್ಲ ಹಾಗಾಗಿ ಸರ್ಕಾರವು ಇಂತಹ ಸರಕುಗಳು ಮತ್ತು ಸೇವೆಗಳಿಗೆ ಅಂತಸ್ತುಗಳನ್ನು ಅಥವಾ ಕನಿಷ್ಟ ಬೆಲೆಯನ್ನು ನಿಗದಿ ಪಡಿಸುತ್ತದೆ. ಇದನ್ನು ಬೆಲೆ ಅಂತಸ್ತು ಎಂದು ಹೇಳ ಬಹುದು. ಈ ಕೆಳಕಂಡ ರೇಖಾಚಿತ್ರದಿಂದ ಸ್ಪಷ್ಟಪಡಿಸಬಹುದು.

ಸರಕುಗಳ ಮಾರುಕಟ್ಟೆಯ ಮೇಲೆ ಬೆಲೆ ಅಂತಸ್ತಿನ ಪರಿಣಾಮ ಮಾರುಕಟ್ಟೆ ಸಮತೋಲನವು P* q ನಲ್ಲಿದೆ, P1 ನಲ್ಲಿನ ಬೆಲೆ ಅಂತಸ್ತಿನ ವಿಧಿಸುವಿಕೆಯ ಅಧಿಕ ಪೂರೈಕೆಗೆ ಕಾರಣವಾಗಿರುವುದು x ಸರಕಿನ ಬದಲೀ ಸರಕಿನಲ್ಲಿನ ಬೆಲೆಯಲ್ಲಿ ಹೆಚ್ಚಳವಾದರೆ ಇದು xಸರಕಿನ ಸಮತೋಲನ ಬೆಲೆ ಮತ್ತು ಸಮತೋಲನ ಪ್ರಮಾಣದ ಅಧಿಕ ಪೂರೈಕೆಯ ಪರಿಣಾಮವನ್ನು ಬೀರುತ್ತವೆ.

14. ಪ್ರವೇಶ ನಿರ್ಗಮನವನ್ನು ಅನುಮತಿಸುವ ಸನ್ನಿವೇಶದಲ್ಲಿ ಮಾರುಕಟ್ಟೆಯಲ್ಲಿ ಉದ್ಯಮ ಘಟಕಗಳ ಸಂಖ್ಯೆ ಸಮತೋಲನದ ಮೇಲೆ ಬೇಡಿಕೆ ರೇಖೆಯ ಪಲ್ಲಟದ ಪರಿಣಾಮವನ್ನು ಹೋಲಿಸಿ?

ಪ್ರವೇಶ ನಿರ್ಗಮನದ ಅನುಮತಿಸುವ ಸನ್ನಿವೇಶದಲ್ಲಿ ಮಾರುಕಟ್ಟೆಯಲ್ಲಿ ಉದ್ಯಮ ಘಟಕಗಳ ಸಂಖ್ಯೆ ಸಮ ತೋಲನದ ಮೇಲೆ ಬೇಡಿಕೆ ರೇಖೆಯ ಪಲ್ಲಟದ ಪರಿಣಾಮವನ್ನು ಈ ಕೆಳಕಂಡ ರೇಖಾ ಚಿತ್ರದೊಂದಿಗೆ ವಿವರಿಸಬಹುದು.

ಉದ್ಯಮ ಘಟಕಗಳ ಸಂಖ್ಯೆ ಸ್ಥಿರವಿದ್ದಾಗ, ಬೇಡಿಕೆ ಪಲ್ಲಟದಿಂದಾಗುವ ಪರಿಣಾಮವನ್ನು ಮೇಲ್ಕಂಡ ರೇಖಾ ಚಿತ್ರವು ಚಿತ್ರಿಸುತ್ತದೆ, ಇಲ್ಲಿ E ಬಿಂದು ಪ್ರಾರಂಭಿಕ ಸಮ ತೋಲನ ಬಿಂದುವಾಗಿದೆ. ಈ ಬಿಂದುವಿನಲ್ಲಿ ಮಾರುಕಟ್ಟೆ ಬೇಡಿಕೆ ಮತ್ತು ಮಾರುಕಟ್ಟೆ ಪೂರೈಕೆ ರೇಖೆಗಳು ಪರಸ್ಪರ ಛೇಧಿಸುತ್ತವೆ ಹಾಗಾಗಿ q0 ಮತ್ತು P0 ಗಳು ಅನುಕ್ರಮವಾಗಿ ಸಮತೋಲನದ ಪ್ರಮಾಣ ಮತ್ತು ಸಮತೋಲನ ಬೆಲೆಗಳಾಗಿವೆ. ರೇಖಾಚಿತ್ರದ (a) ನಲ್ಲಿ ಸಮ ತೋಲನವು G ಆಗಿದೆ, ಮತ್ತು ಬೇಡಿಕೆ ಎಡಭಾಗದ ಪಲ್ಲಟದಿಂದಾಗಿ ರೇಖಾಚಿತ್ರ (b) ನಲ್ಲಿ ಸಮತೋಲನವು ಆಗಿದೆ ಬಲಭಾಗದ ಪಲ್ಲಟದೊಂದಿಗೆ ಸಮತೋಲನ ಪ್ರಮಾಣ ಮತ್ತು ಸಮತೋಲನ ಬೆಲೆ ಹೆಚ್ಚುತ್ತದೆ ಅಂತೆಯೇ ಎಡಭಾಗದ ಪಲ್ಲಟವಾದಾಗ ಸಮತೋಲನ ಪ್ರಮಾಣ ಮತ್ತು ಸಮತೋಲನ ಬೆಲೆ ಕಡಿಮೆಯಾಗುತ್ತದೆ.

15. ಬೇಡಿಕೆ ಮತ್ತು ಪೂರೈಕೆ ರೇಖೆಗಳೆರಡರ ದರ ಬಲಗಡೆ ಪಲ್ಲಟವು ಸಮತೋಲನ ಬೆಲೆ ಮತ್ತು ಸಮತೋಲನ ಪ್ರಮಾಣ ಗಳ ಮೇಲೆ ಬೀರುವ ಪರಿಣಾಮವನ್ನು ರೇಖಾಚಿತ್ರದ ಮೂಲಕ ಹೋಲಿಸಿ?

ಮೇಲ್ಕಂಡ (a) ರೇಖಾಚಿತ್ರದಲ್ಲಿ ಬೇಡಿಕೆ ಮತ್ತು ಪೂರೈಕೆ ರೇಖೆಗಳೆರಡರಲ್ಲಿ ಒಳಭಾಗದ ಪಲ್ಲಟದಿಂದಾಗಿ ಸಮ ತೋಲನ ಪ್ರಮಾಣವು ಹೆಚ್ಚಾಗುತ್ತದೆ, ಆದರೆ ಸಮತೋಲನ ಬೆಲೆಯು ಬದಲಾಗದೇ ಉಳಿದಿರುವುದನ್ನು ಕಾಣಬಹುದು (b) ಚಿತ್ರದಲ್ಲಿ ಸಮತೋಲನ ಪ್ರಮಾಣವು ಬದಲಾಗದೇ ಇರುತ್ತದೆ. ಆದರೆ ಬೇಡಿಕೆ ರೇಖೆಯಲ್ಲಿನ ಎಡಭಾಗದ ಪಲ್ಲಟ ಮತ್ತು ಪೂರೈಕೆ ರೇಖೆಯಲ್ಲಿನ ಬಲಭಾಗದ ಪಲ್ಲಟದ ಕಾರಣದಿಂದಾಗಿ ಸಮತೋಲನ ಬೆಲೆಯು ಇಳಿಕೆಯಾಗುತ್ತದೆ,

16. ಕೆಳಗಿನ ಸನ್ನಿವೇಶಗಳಲ್ಲಿ ಸಮತೋಲನ ಬೆಲೆ ಮತ್ತು ಸಮತೋಲನ ಪ್ರಮಾಣಗಳು ಹೇಗೆ ಪ್ರಭಾವಿತ ಗೊಳ್ಳುತ್ತದೆ?

ಎ. ಬೇಡಿಕೆ ಮತ್ತು ಪೂರೈಕೆ ರೇಖೆಗಳೆರೆಡೂ ಒಂದೇ ದಿಕ್ಕಿನಲ್ಲಿ ಪಲ್ಲಟಗೊಂಡಾಗ?

ಬೇಡಿಕೆ ಮತ್ತು ಪೂರೈಕೆ ರೇಖೆಗಳೆರೆಡೂ ಒಂದೇ ದಿಕ್ಕಿನಲ್ಲಿ ಪಲ್ಲಟಗೊಂಡಾಗ ಸಮತೋಲನ ಬೆಲೆಯ ಮೇಲಿನ ಪರಿಣಾಮವು ಪಲ್ಲಟಗಳ, ಪರಿಣಾಮವನ್ನು ಅವಲಂಬಿಸಿರುತ್ತದೆ, ಹಾಗೂ ಸಮತೋಲನ ಪ್ರಮಾಣದ ಮೇಲಿನ ಪರಿಣಾಮವನ್ನು ಸ್ಪಷ್ಟವಾಗಿ ನಿರ್ಧರಿಸಬಹುದು.

ಬಿ. ‘ಬೇಡಿಕೆ ಮತ್ತು ಪೂರೈಕೆ ರೇಖೆಗಳು ವಿರುದ್ಧ ದಿಕ್ಕಿನಲ್ಲಿ ಪಲ್ಲಟಗೊಂಡಾಗ?

ಬೇಡಿಕೆ ಮತ್ತು ಪೂರೈಕೆ ರೇಖೆಗಳು ವಿರುದ್ಧ ದಿಕ್ಕಿನಲ್ಲಿ ಪಲ್ಲಟಗೊಂಡಾಗ ಸಮತೋಲನ ಬೆಲೆಯ ಮೇಲಿನ ಪರಿಣಮವನ್ನು ಸ್ಪಷ್ಟವಾಗಿ ನಿರ್ಧರಿಸಬಹುದು, ಆದರೆ ಸಮತೋಲನ ಪ್ರಮಾಣದ ಮೇಲಿನ ಪರಿಣಾಮ ಪಲ್ಲಟಗಳ ಪರಿಮಾಣವನ್ನು ಅವಲಂಬಿಸಿರುತ್ತದೆ.

17. ಶ್ರಮದ ಮಾರುಕಟ್ಟೆಯಲ್ಲಿನ ಪೂರೈಕೆ ಮತ್ತು ಬೇಡಿಕೆ ರೇಖೆಗಳು ಸರಕುಗಳ ಮಾರುಕಟ್ಟೆಯ ಪೂರೈಕೆ ಮತ್ತು ಬೇಡಿಕೆ ರೇಖೆಗಿಂತ ಯಾವ ರೀತಿ ಭಿನ್ನವಾಗಿದೆ?

ಶ್ರಮದ ಬೇಡಿಕೆ ಮತ್ತು ಪೂರೈಕೆ ರೇಖೆಗಳು ಸಂಧಿಸುವ ಬಿಂದುವಿನಲ್ಲಿ ಕೂಲಿ ನಿರ್ಧಾರವಾಗುತ್ತದೆ.

ಕೂಲಿ ಹೆಚ್ಚಿದಾಗ ಶ್ರಮಿಕರಿಗೆ ಕಡಿಮೆ ಬೇಡಿಕೆಯಾಗುತ್ತದೆ, ಇದು ಕೆಳಮುಖ ಚಲನೆಯ ಬೇಡಿಕೆ ರೇಖೆಗೆ ಕಾರಣ ವಾಗುತ್ತದೆ. ಬೇಡಿಕೆ ರೇಖೆಯಿಂದ ಮಾರುಕಟ್ಟೆ ಬೇಡಿಕೆ ರೇಖೆಯನ್ನು ಪಡೆಯಲು ವಿಭಿನ್ನ ಕೂಲಿದರದಲ್ಲಿ ವೈಯಕ್ತಿಕ ಉದ್ಯಮ ಘಟಕಗಳ ಶ್ರಮದ ಬೇಡಿಕೆಯನ್ನು ಒಗ್ಗೂಡಿಸ ಬೇಕಾಗುತ್ತದೆ ಹೀಗಾಗಿ ಶ್ರಮದ ಮಾರುಕಟ್ಟೆ ಬೇಡಿಕೆ ರೇಖೆಯೂ ಕೂಡಾ ಇಳಿಮುಖ ಇಳಿಜಾರು ಹೊಂದಿರುತ್ತದೆ.

ಇದೇ ರೀತಿ ನಿರ್ದಿಷ್ಟ ಕೂಲಿದರದಲ್ಲಿ ಎಷ್ಟು ಪ್ರಮಾಣದ ಶ್ರಮಿಕರ ಪೂರೈಕೆಯಾಗ ಬೇಕೆಂಬುದನ್ನು ಕುಟುಂಬಗಳು ನಿರ್ಧರಿಸುತ್ತವೆ. ಕುಟುಂಬಗಳ ಪೂರೈಕೆ ನಿರ್ಧಾರವು ಪ್ರಮುಖವಾಗಿ ಆದಾಯ ಮತ್ತು ವಿಶ್ರಾಂತಿ ನಡುವಿನ ಆಯ್ಕೆಯಾಗುತ್ತಾ ಮೇಲ್ಮುಖ ಇಳಿಜಾರಿನ ಪೂರೈಕೆ ರೇಖೆ ಮತ್ತು ಕೆಳಮುಖ ಇಳಿಜಾರಿನ ಬೇಡಿಕೆ ರೇಖೆಗಳು ಸಂಧಿಸುವ ಬಿಂದುವಿನಲ್ಲಿ ಸಮತೋಲನ ಕೂಲಿದರ ನಿರ್ಧಾರವಾಗುತ್ತದೆ,

18. ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಸಾಧ್ಯವಿರುವ ಅತ್ಯುತ್ತಮ (ಆದರ್ಶ ಶ್ರಮಿಕರ ಪ್ರಮಾಣವು ಹೇಗೆ ನಿರ್ಧರಿಸ್ಪಡುತ್ತದೆ?

ಪರಿಪೂರ್ಣ ಪೈಪೋಟಿಯಿರುವ ಮಾರುಕಟ್ಟೆಯಲ್ಲಿ ಸಾಧ್ಯವಿರುವ ಆದರ್ಶ ಅತ್ಯುತ್ತಮ ಶ್ರಮಿಕರ ಪ್ರಮಾಣವು ಬೇಡಿಕೆಯ ಮೂಲಗಳಿಗೆ ಸಂಬಂಧಿಸಿರುತ್ತದೆ. ಶ್ರಮಗಳ ಪ್ರಮಾಣವು ಶ್ರಮಿಕರ ಸಮಯವನ್ನು ಅವಲಂಬಿಸಿರುತ್ತದೆ. ಶ್ರಮದ ಬೇಡಿಕೆ ಮತ್ತು ಪೂರೈಕೆ ಸಮತೋಲನ ಸ್ಥಿತಿಯಲ್ಲಿ ಶ್ರಮಿಕರ ಬೇಡಿಕೆ ಮತ್ತು ಪೂರೈಕೆಗಳು ಅವರ ಕೂಲಿ ದರವನ್ನು ನಿರ್ಧರಿಸುತ್ತದೆ. ಶ್ರಮಿಕರ ಶ್ರಮವು ಏಕೈಕ ಬದಲಾಗುವ ಉತ್ಪಾದನಾಂಗವಾಗಿದೆ ಮತ್ತು ಶ್ರಮದ ಮಾರು ಕಟ್ಟೆಯು ಪರಿಪೂರ್ಣ ಪೈಪೋಟಿಯುತವಾಗಿದೆ, ಪ್ರತಿಯೊಂದು ಉದ್ಯಮ ಘಟಕವು ಪರಿಪೂರ್ಣ ಪೈಪೋಟಿ ಸ್ವರೂಪವನ್ನು ಹೊಂದಿರುತ್ತದೆ ಮತ್ತು ಲಾಭವನ್ನು ಗರಿಷ್ಠ ಗೊಳಿಸಿಕೊಳ್ಳುವ ಗುರಿಯೊಂದಿಗೆ ಉತ್ಪಾದಿಸುತ್ತಾರೆ.

ಉದ್ಯಮ ಘಟಕವು ಲಾಭಗಳಿಕೆಯ ಗುರಿಹೊಂದಿರುವುದರಿಂದ, ಶ್ರಮದ ಕೊನೆಯ ಘಟಕವನ್ನು ಉತ್ಪಾದನೆಯಲ್ಲಿ ತೊಡಗಿಸಿದಾಗ ತಗಲುವ ಹೆಚ್ಚುವರಿ ಲಾಭಕ್ಕೆ ಸಮನಾಗಿರುವ ವರೆಗೂ ಶ್ರಮವನ್ನು ಉತ್ಪಾದನೆಯಲ್ಲಿ ತೊಡಗಿಸುತ್ತಾ ಹೋಗುತ್ತದೆ.

ಶ್ರಮದ ಪೂರೈಕೆಯು ಹೆಚ್ಚಳವನ್ನು ವ್ಯಕ್ತಪಡಿಸುತ್ತದೆ, ಹೆಚ್ಚುಕೂಲಿ ಪಡೆಯುವ ಶ್ರಮಿಕರು ಹೆಚ್ಚು ಹೆಚ್ಚು ಶ್ರಮವನ್ನು ಪಡೆಬೇಕಾಗುವುದು.

19. ಪರಿಪೂರ್ಣ ಪೈಪೋಟಿಯುತ ಶ್ರಮದ ಮಾರುಕಟ್ಟೆಯಲ್ಲಿ ಕೂಲಿದರವು ಹೇಗೆ ನಿರ್ಧರಿಸಲ್ಪಡುತ್ತದೆ?

ಪರಿಪೂರ್ಣ ಪೈಪೋಟಿಯುತ ಶ್ರಮದ ಮಾರುಕಟ್ಟೆಯಲ್ಲಿ, ಒಂದು ಹೆಚ್ಚುವರಿ ಘಟಕದ ಶ್ರಮದ ನೇಮಕಾತಿ ತಗಲುವ ಹೆಚ್ಚುವರಿ ವೆಚ್ಚವು ಕೂಲಿಯ ದರ (W) ಆಗಿದೆ.

ಶ್ರಮದ ಸೀಮಾಂತ ಉತ್ಪನ್ನದ ಮೌಲ್ಯವು ಕೂಲಿಯ ದರಕ್ಕಿಂತ ಅಧಿಕವಾಗಿರುತ್ತದೆಯೋ, ಅಲ್ಲಿಯವರೆಗೆ ಉದ್ಯಮ ಘಟಕವು ಅಧಿಕ ಲಾಭ ಗಳಿಸುತ್ತದೆ. ಉದ್ಯಮ ಘಟಕವು ಯಾವಾಗಲೂ ಕೂಲಿಯ ದರಕ್ಕೆ ಸಮನಾಗಿರುವ ಶ್ರಮದ ಸೀಮಾಂತ ಉತ್ಪನ್ನದ ಮೌಲ್ಯ W=VMP1 ಉತ್ಪಾದಿಸುತ್ತದೆ.

ಈ ಕೆಳಕಂಡ ರೇಖಾಚಿತ್ರದೊಂದಿಗೆ ಇದನ್ನು ಸ್ಪಷ್ಟಪಡಿಸಬಹುದು.

ಕೂಲಿ ದರ W ಇದ್ದಾಗ ಶ್ರಮ 1 ಆಗಿರುತ್ತದೆ. ಕೂಲಿದರವು w1w2 ಗೆ ಹೆಚ್ಚಾದರೆ ಶ್ರಮವು 11 ಮತ್ತು 12 ಆಗುತ್ತದೆ. ಒಟ್ಟಾರೆ ಹೇಳುವುದಾದರೆ ಬೇಡಿಕೆ ಮತ್ತು ಪೂರೈಕೆ ರೇಖೆಗಳು ಸಂದಿಸುವ ಬಿಂದುವಿನಲ್ಲಿ ಕೂಲಿ ನಿರ್ಧಾರವಾಗುತ್ತದೆ. ಕೂಲಿದರ ಹೆಚ್ಚಾದಂತೆ ಉದ್ಯಮ ಘಟಕವು ಕಡಿಮೆ ಶ್ರಮ ಹೊಂದಲು ಬಯಸುವುದರಿಂದ ಶ್ರಮದ ಮಾರುಕಟ್ಟೆ ಬೇಡಿಕೆ ರೇಖೆಯೂ ಕೆಳಮುಖ ಇಳಿಜಾರು ಹೊಂದಿರುತ್ತದೆ. D ಇದಕ್ಕೆ ಉದಾಹರಣೆಯಾಗಿದೆ.

20. ಭಾರತದಲ್ಲಿ ಯಾವುದಾದರೂ ಸರಕಿನ ಬೆಲೆ ಮಿತಿಯನ್ನು ವಿಧಿಸಲಾಗಿದೆಯೆಂದು ಭಾವಿಸುವಿರಾ? ಬೆಲೆಮಿತಿಯ ಪರಿಣಾಮವೇನಾಗಬಹುದು.

ಭಾರತದಲ್ಲಿ ಸರ್ಕಾರವು, ಸಾಮಾನ್ಯವಾಗಿ ಅವಶ್ಯಕ ಸರಕುಗಳಾದ ಗೋಧಿ, ಅಕ್ಕಿ, ಜೋಳ, ಸಕ್ಕರೆ, ಸೀಮೆ ಎಣ್ಣೆ ಇತ್ಯಾದಿಗಳ ವಸ್ತುಗಳ ಮೇಲೆ ಬೆಲೆ ಮಿತಿಯನ್ನು ವಿಧಿಸುತ್ತದೆ, ಈ ವಸ್ತುಗಳ ಬೆಲೆಗಳು ಮಾರುಕಟ್ಟೆ ನಿರ್ಧರಿತ ಬೆಲೆಗಿಂತ ಕಡಿಮೆ ನಿಗದಿಯಾಗಿರುತ್ತದೆ. ಏಕೆಂದರೆ ಮಾರುಕಟ್ಟೆ ನಿರ್ಧರಿತ ಬೆಲೆಯಲ್ಲಿ ಜನಸಂಖ್ಯೆಯ ಕೆಲಭಾಗವು ಈ ಸರಕುಗಳನ್ನು ಪಡೆಯಲು ಶಕ್ತವಾಗಿರುವುದಿಲ್ಲ.

ಉದಾಹರಣೆಗೆ:- ಗೋಧಿ ಮಾರುಕಟ್ಟೆಯಲ್ಲಿ ಬೆಲೆಮಿತಿಯ ಪರಿಣಾಮವನ್ನು ಈ ಕೆಳಕಂಡ ಉದಾಹರಣೆಯಿಂದ ಸ್ಪಷ್ಟ ಪಡಿಸಬಹುದು.

p*ಮತ್ತು q* ನಲ್ಲಿ Pe ದರದ ಬೆಲೆಮಿತಿಯನ್ನು ವಿಧಿಸುವುದರಿಂದ ಗೋಧಿಗೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಸಂಭವಿಸುತ್ತದೆ, ಅನುಭೋಗಿಗಳಿಗೆ ಸಹಾಯ ಮಾಡುವುದು ಸರ್ಕಾರದ ಉದ್ದೇಶವಾಗಿದ್ದರೂ ಅಂದು ಅಂತಿಮವಾಗಿ

ಗೋಧಿಯ ಕೊರತೆಯನ್ನು ಸೃಷ್ಟಿಸುತ್ತದೆ, ಆದ್ದರಿಂದ ಎಲ್ಲರಿಗೂ ಗೋಧಿ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳಲು ಅನುಭೋಗಿಗಳಿಗೆ ಪಡಿತರ ಚೀಟಿಯನ್ನು ನೀಡಲಾಗುವುದು, ಹೀಗಾದಾಗ ಯಾವೊಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಪ್ರಮಾಣದ ಗೋಧಿಗಿಂತ ಹೆಚ್ಚು ಖರೀದಿಸಲಾರ ಮತ್ತು ಈ ನಿರ್ದಿಷ್ಟ ಪ್ರಮಾಣದ ಗೋಧಿಯನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ಮಾರಾಟ ಮಾಡಲಾಗುವುದು,

ಸಾಮಾನ್ಯವಾಗಿ ಸರಕುಗಳು ಪಡಿತರ ಜೊತೆಗೂಡಿ ಬೆಲೆಮಿತಿಯ ಅನುಭೋಗಿಗಳಿಗೆ ಕೆಳಗಿನ ಪ್ರತಿಕೂಲ ಪರಿಣಾಮ ಹೊಂದಬಹುದು, ಅವುಗಳೆಂದರೆ:

ಪ್ರತಿಯೊಬ್ಬ ಅನುಭೋಗಿಯು ಪಡಿತರ ಅಂಗಡಿ ಗಳಿಂದ ಸರಕುಗಳನ್ನು ಖರೀದಿಸಲು Qನಲ್ಲಿ ನಿಲ್ಲ ಬೇಕಾಗುವುದು ಸಮಯದ ಅಭಾವ ಹಾಗೂ ಅರೋಗ್ಯದ ದೃಷ್ಟಿಯಿಂದ ಇದು ಸಾಧ್ಯವಾಗದೆ ಹೋಗಬಹುದು,

ನ್ಯಾಯ ಬೆಲೆ ಅಂಗಡಿಯಿಂದ ಪಡೆಯಲಾದ ಸರಕುಗಳ ಪ್ರಮಾಣದಿಂದ ಎಲ್ಲ ಅನುಭೋಗಿಗಳು ತೃಪ್ತಿಯನ್ನು ಪಡೆಯುವುದಿಲ್ಲವಾದ್ದರಿಂದ ಅವರಲ್ಲಿ ಕೆಲವರು ಹೆಚ್ಚಿನ ಬೆಲೆ ಪಾವತಿಸಲು ಸಿದ್ಧರಿರುತ್ತಾರೆ ಇದರಿಂದ ಕಾಳಸಂತೆ (Black Market) ಸೃಷ್ಟಿಗೆ ಕಾರಣವಾಗುವುದು.

21. ಮುಕ್ತ ಪ್ರವೇಶ ಮತ್ತು ಮುಕ್ತ ನಿರ್ಗಮನವನ್ನು ಅನುಮತಿಸುವ ಸನ್ನಿವೇಶಕ್ಕೆ ಹೋಲಿಸಿದರೆ, ಉದ್ಯಮ ಘಟಕಗಳ ಸಂಖ್ಯೆ ಸ್ಥಿರವಿರುವಾಗ ಬೇಡಿಕೆ ರೇಖೆಯಲ್ಲಿನ ಪಲ್ಲಟವು ಬೆಲೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಮತ್ತು ಪ್ರಮಾಣದ ಮೇಲೆ ಸಣ್ಣ ಪರಿಣಾಮವನ್ನು ಉಂಟುಮಾಡುತ್ತದೆ. ವಿವರಿಸಿ?

ಮುಕ್ತ ಪ್ರವೇಶ ಮತ್ತು ನಿರ್ಗಮನವನ್ನು ಅನುಮತಿಸುವ ಸನ್ನಿವೇಶಕ್ಕೆ ಹೋಲಿಸಿದರೆ, ಉದ್ಯಮ ಘಟಕಗಳ ಸಂಖ್ಯೆ ಸ್ಥಿರವಿರುವಾಗ ಬೇಡಿಕೆ ರೇಖೆಯಲ್ಲಿನ ಪಲ್ಲಟವು ಬೆಲೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಮತ್ತು ಪ್ರಮಾಣದ ಮೇಲೆ ಸಣ್ಣ ಪರಿಣಾಮವನ್ನು ಉಂಟುಮಾಡುತ್ತದೆ, ಅಂದರೆ

ಮುಕ್ತ ಪ್ರವೇಶ ಮತ್ತು ಮುಕ್ತ ನಿರ್ಗಮನದೊಂದಿಗೆ ಬೇಡಿಕೆ ಯಲ್ಲಿನ ಪಲ್ಲಟವು ಸ್ಥಿರ ಸಂಖ್ಯೆಯ ಉದ್ಯಮ ಘಟಕಗಳ ಸಂಖ್ಯೆಯಮೇಲಿನ ಪರಿಣಾಮಕ್ಕಿಂತ ಪ್ರಮಾಣದ ಮೇಲೆ ಹೆಚ್ಚಿನ ಪರಿಣಾಮ ಹೊಂದಿರುತ್ತದೆ, ಆದರೆ ಸ್ಥಿರ ಸಂಖ್ಯೆಯ ಉದ್ಯಮ ಘಟಕಗಳಂತೆ, ಇಲ್ಲಿ ಸಮತೋಲನ ಬೆಲೆಯ ಮೇಲೆ ಯಾವುದೇ ಪರಿಣಾಮವಿರುವುದಿಲ್ಲ. 22. ಪರಿಪೂರ್ಣ ಪೈಪೋಟಿಯುತ ಮಾರುಕಟೆಯಲಿ VS ಸಿನ

ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:

2nd Puc Economics Chapter 5 Notes in Kannada

1. ಸಮತೋಲನವನ್ನು ವ್ಯಾಖ್ಯಾನಿಸಿ

ಮಾರುಕಟ್ಟೆಯಲ್ಲಿನ ಎಲ್ಲಾ ಅನುಭೋಗಿಗಳು ಮತ್ತು ಎಲ್ಲಾ ಉದ್ಯಮಘಟಕಗಳ ಯೋಜನೆಗಳು ಹೊಂದಾಣಿಕೆಯಾಗುವ ಬಿಂದು ಸನ್ನಿವೇಶವನ್ನು ‘ಸಮತೋಲನ’ ಎಂದು ವ್ಯಾಖ್ಯಾನಿಸಲಾಗಿದೆ.

2. ‘ಕಾಣದ ಕೈ’ ಯಾವಾಗ ಕಾರ್ಯಚರಣೆಗೆ ಬರುತ್ತದೆ?

ಮಾರುಕಟ್ಟೆಯಲ್ಲಿ ಅಸಮತೋಲನ ಕಂಡುಬಂದಾಗ ಲೆಲ್ಲಾ ಕಾಣದ ಕೈ ಕಾರ್ಯಚರಣೆಗೆ ಬರುತ್ತದೆ.

3. ಶ್ರಮದ ಸೀಮಾಂತ ಆದಾಯದ ಉತ್ಪನ್ನ ಎಂದರೇನು?

ಪ್ರತಿ ಹೆಚ್ಚುವರಿ ಘಟಕದ ಶ್ರಮಕ್ಕೆ ಪಡೆಯುವ ಹೆಚ್ಚುವರಿ ಲಾಭವು ಸೀಮಾಂತ ಆದಾಯದಷ್ಟೇ ಪ್ರಮಾಣದ ಸೀಮಾಂತ ಉತ್ಪನ್ನಕ್ಕೆ ಸಮನಾಗಿರುವುದನ್ನು ಶ್ರಮದ ಆದಾಯದ ಉತ್ಪನ್ನ

ಸಂಕ್ಷಿಪ್ತ ಉತ್ತರ ಬರೆಯಿರಿ :

1. ಸಮತೋಲನದ ಆಚೆಗಿನ ವರ್ತನೆಯನ್ನು ವಿವರಿಸಿ?

ಸಮತೋಲನದ ಆಚೆಗಿನ ವರ್ತನೆ (ಅಸಮತೋಲನದ ನಡವಳಿಕೆ) Out-of-equilibrium Behaviour ಆಡಂಸ್ಮಿತ್‌ರವರ ಕಾಲ(1723-1790)ದಿಂದಲೂ, ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ‘ಕಾಣದ ಕೈ’ ಕಾರ್ಯಾಚರಣೆಯಲ್ಲಿದ್ದು, ಮಾರುಕಟ್ಟೆಯಲ್ಲಿ ಅಸಮತೋಲನ ಕಂಡು ಬಂದಾಗಲೆಲ್ಲಾ ಈ ಕಾಣದ ಕೈ ನ ಕಾರ್ಯಾಚರಣೆಯು ಬೆಲೆಯಲ್ಲಿ ಬದಲಾವಣೆ ತರುತ್ತದೆ ಎಂಬ ನಂಬಿಕೆಯನ್ನು ಉಳಿಸಿಕೊಂಡು ಬರಲಾಗಿದೆ. ಈ ಕಾಣದ ಕೈ ‘ಅಧಿಕ ಬೇಡಿಕೆ ಸನ್ನಿವೇಶಗಳಲ್ಲಿ ಬೆಲೆಗಳನ್ನು ಹೆಚ್ಚಿಸಬೇಕು ಮತ್ತು ‘ಅಧಿಕ ಪೂರೈಕೆ’ ಸನ್ನಿವೇಶಗಳಲ್ಲಿ ಬೆಲೆಗಳನ್ನು ಕಡಿಮೆಗೊಳಿಸಬೇಕು ಎಂದು ನಮ್ಮ ಒಳರಿವು ಸಹ ನಮಗೆ ಹೇಳುತ್ತದೆ. ನಾವು ನಮ್ಮ ವಿಶ್ಲೇಷಣೆಯುದ್ದಕ್ಕೂ ಕಾಣದ ಕೈ ಈ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆಂದು ಸಮರ್ಥಿಸಿಕೊಂಡು ಹೋಗೋಣ. ಇದಕ್ಕಿಂತ ಹೆಚ್ಚಾಗಿ ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ‘ಕಾಣದ ಕೈ’ಯು ಸಮತೋಲನವನ್ನು ತಲುಪಲು ಸಮರ್ಥವಾಗಿರುತ್ತದೆ ಎಂದು ನಾವು ತಿಳಿದುಕೊಳ್ಳೋಣ. ನಾವು ಪಠ್ಯದಲ್ಲಿ ಚರ್ಚಿಸುವ ಎಲ್ಲವನ್ನೂ ಈ ಕಲ್ಪನೆಯ ಮೂಲಕ ಕೊಂಡೊಯ್ಯಲಾಗುತ್ತದೆ.

2. ಬೇಡಿಕೆ ಮತ್ತು ಪೂರೈಕೆಗಳೆರಡು ಏಕಕಾಲಕ್ಕೆ ಪಲ್ಲಟ ಗೊಂಡರೆ ಏನಾಗುತ್ತದೆ?

ನಾಲ್ಕು ಸಂಭವನೀಯ ವಿಧಾನಗಳಲ್ಲಿ ಪಲ್ಲಟಗಳು ಏಕಕಾಲದಲ್ಲಿ ಸಂಭವಿಸುವುವು..̈

(i) ಪೂರೈಕೆ ರೇಖೆ ಮತ್ತು ಬೇಡಿಕೆ ರೇಖೆಗಳೆರಡೂ ಬಲಗಡೆಗೆ ಪಲ್ಲಟಗೊಳ್ಳುವುದು.

(ii) ಪೂರೈಕೆ ರೇಖೆ ಮತ್ತು ಬೇಡಿಕೆ ರೇಖೆಗಳೆರಡೂ ಎಡಗಡೆಗೆ ಪಲ್ಲಟಗೊಳ್ಳುವುದು.

(iii) ಪೂರೈಕೆ ರೇಖೆಯು ಎಡಗಡೆಗೆ ಪಲ್ಲಟಗೊಳ್ಳುವುದು ಮತ್ತು ಬೇಡಿಕೆ ರೇಖೆಯು ಬಲಗಡೆಗೆ ಪಲ್ಲಟ ಗೊಳ್ಳುವುದು.

(iv) ಪೂರೈಕೆ ರೇಖೆಯು ಬಲಗಡೆಗೆ ಪಲ್ಲಟಗೊಳ್ಳುವುದು ಮತ್ತು ಬೇಡಿಕೆ ರೇಖೆಯು ಎಡಗಡೆಗೆ ಪಲ್ಲಟ ಗೊಳ್ಳುವುದು.

3. ಪ್ರವೇಶ ಮತ್ತು ನಿರ್ಗಮನ ಕಲ್ಪನೆಯ ಅಂತರಾರ್ಥವೇನು?

ಮಾರುಕಟ್ಟೆಯ ಸಮತೋಲನದಲ್ಲಿ ಯಾವ ಉದ್ಯಮ ಘಟಕಗಳು ಅತಿ ಹೆಚ್ಚಿನ ಲಾಭಗಳಿಸುವುದಿಲ್ಲ ಅಥವಾ ಉತ್ಪಾದನೆಯಲ್ಲಿ ಇರುವ ಯಾವುದೇ ಘಟಕವು ನಷ್ಟವನ್ನು ಅನುಭವಿಸುವುದಿಲ್ಲ, ಅಂದರೆ ಯಾವುದೇ ಸಮತೋಲನ ಬೆಲೆಯು ಉದ್ಯಮ ಘಟಕಗಳ ಕನಿಷ್ಟ ಸರಾಸರಿವೆಚ್ಚಕ್ಕೆ ಸಮನಾಗಿರುತ್ತದೆ.

ಉದಾ:- ಮಾರುಕಟ್ಟೆಯ ಬೆಲೆಯಲ್ಲಿ, ಪ್ರತಿ ಉದ್ಯಮ ಘಟಕವು ಅಸಾಮಾನ್ಯ ಲಾಭಗಳಿಸಿದಾಗ ಹೊಸ ಉದ್ಯಮ ಘಟಕಗಳು ಪ್ರಾರಂಭಿಸುವುದು, ಹೆಚ್ಚು ಉತ್ಪಾದನೆಯಾದಾಗ ಬೇಡಿಕೆ ಕಡಿಮೆಯಾದರೆ ಲಾಭವು ಕಡಿಮೆಯಾಗುತ್ತದೆ. ಇದರಿಂದ ಉದ್ಯಮದಾರರಿಗೆ ನಿರಾಶೆಯನ್ನು ಉಂಟುಮಾಡುತ್ತದೆ.

ಅಂದರೆ ಮಾರುಕಟ್ಟೆಯಲ್ಲಿನ ಎಲ್ಲಾ ಉದ್ಯಮಗಳು ಲಾಭಗಳಿಸುವುದರ ಉದ್ದೇಶದಿಂದ ಪ್ರವೇಶಿಸಿದಾಗ ಸಾಮಾನ್ಯಲಾಭ ಪಡೆಯಬಹುದು, ನಷ್ಟವನ್ನು ಅನುಭವಿಸುವ ಸಾಧ್ಯತೆಯು ಇರಬಹುದು, ಇದರಿಂದ ಹೊಸ ಉದ್ಯಮಗಳಿಗೆ ಮಾರುಕಟ್ಟೆಯಲ್ಲಿ ಪ್ರವೇಶಪಡೆಯದೆ ಮುಕ್ತವಾಗಿ ನಿರ್ಗಮಿಸಬಹುದು

ಹೀಗೆ ಮುಕ್ತ ಪ್ರವೇಶ ಹಾಗೂ ಮುಕ್ತ ನಿರ್ಗಮನವು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿರುತ್ತದೆ. ಆದ್ದರಿಂದ ಕನಿಷ್ಟ ಸರಾಸರಿ ವೆಚ್ಚವು ಹೆಚ್ಚಾಗಿರುವ ಬೆಲೆಗಳಲ್ಲಿ ಹೊಸ ಉದ್ಯಮಘಟಕಗಳು ಮಾರುಕಟ್ಟೆ ಪ್ರವೇಶಿಸುತ್ತದೆ. ಕನಿಷ್ಟ ಸರಾಸರಿ ವೆಚ್ಚಕ್ಕೆ ಸಮನಾದ ಉದ್ಯಮ ಘಟಕಗಳು ನಿರ್ಗಮಿಸುತ್ತವೆ.

ಒಟ್ಟಾರೆ ಮಾರುಕಟ್ಟೆ ಬೆಲೆಯು ಯಾವಾಗಲೂ ಕನಿಷ್ಟ ಸರಾಸರಿ ವೆಚ್ಚಕ್ಕೆ ಸಮನಾಗಿರುತ್ತದೆ, ಉದ್ಯಮಘಟಕಗಳು ಮಾರುಕಟ್ಟೆಯ ಪ್ರವೇಶ ಮತ್ತು ನಿರ್ಗಮನದ ಸಂಕೇತವಾಗಿದೆ. ಇದನ್ನು ಈ ಸಮೀಕರಣದ ಮೂಲಕ ವ್ಯಕ್ತ ಪಡಿಸಬಹುದು.

4. ಕೃಷಿ ಬೆಂಬಲಕ್ಕಾಗಿ ಸರ್ಕಾರ ಕೈಗೊಳ್ಳಬೇಕಾದ ನಿರ್ಧಾರವೇನು?

ಕೃಷಿ ಬೆಲೆ ಬೆಂಬಲಕ್ಕಾಗಿ ಸರ್ಕಾರವು ಕೆಲವು ಕೃಷಿ ಸರಕುಗಳಿಗೆ ಖರೀದಿ ಬೆಲೆಯ ಮೇಲೆ ಕೆಳಮಿತಿಯನ್ನು ವಿಧಿಸುತ್ತದೆ. ಮತ್ತು ಬೆಲೆ ಅಂತಸ್ತು ಸಾಮಾನ್ಯವಾಗಿ ಈ ಸರಕುಗಳಿಗೆ ಮಾರುಕಟ್ಟೆ ನಿರ್ಧಾರಿತ ಬೆಲೆಗಿಂತ ಹೆಚ್ಚಿನ ಮಟ್ಟದಲ್ಲಿ ನಿಗದಿ ಪಡಿಸುತ್ತದೆ. ಹಾಗೆಯೇ “ಕನಿಷ್ಟ ಕೂಲಿ ಕಾಯಿದೆಯ ಮೂಲಕ ಕಾರ್ಮಿಕರ ವೇತನದರ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಾಗುವುದಿಲ್ಲ ಎಂದು ಸರ್ಕಾರ ಖಾತ್ರಿ ಪಡಿಸುತ್ತದೆ ಮತ್ತು ಇಲ್ಲಿ ವೇತನ ದರವನ್ನು ಸಮತೋಲನ ವೇತನದರಕ್ಕಿಂತಲೂ ಹೆಚ್ಚಿಗೆ ನಿಗದಿ ಪಡಿಸುತ್ತದೆ.

ಕೃಷಿ ಬೆಂಬಲದ ವಿಷಯದಲ್ಲಿ ಅಧಿಕ ಪೂರೈಕೆಯ ಕಾರಣದಿಂದಾಗಿ ಬೆಲೆ ಇಳಿಕೆಯನ್ನು ತಡೆಗಟ್ಟಲು ಸರ್ಕಾರವು ಹೆಚ್ಚುವರಿ ಪ್ರಮಾಣವನ್ನು ಪೂರ್ವ ನಿರ್ಧರಿತ ಬೆಲೆಯಲ್ಲಿ ಖರೀದಿ ಮಾಡಬೇಕಾಗುತ್ತದೆ.

FAQ :

1. ಸಮತೋಲನ ಬೆಲೆ ಎಂದರೇನು?

ಬೇಡಿಕೆ ಮತ್ತು ಪೂರೈಕೆ ಪ್ರಮಾಣಗಳ ಸಮ ಪ್ರಮಾಣವನ್ನು ಸಮತೋಲನ ಬೆಲೆ ಎನ್ನುವರು.

2. ಬೆಲೆ ಮಿತಿ ಎಂದರೇನು?

ಸರಕಾರವು ಸರಕು ಅಥವಾ ಸೇವೆಯ ಬೆಲೆಗೆ ವಿಧಿಸಿದ ಮೇಲ್ಮೀತಿಯನ್ನು ಬೆಲೆ ಮಿತಿ ಎಂದು ಕರೆಯಲಾಗುತ್ತದೆ.

3. ಯಾವ ಕಾಯಿದೆ ಮೂಲಕ ಕಾರ್ಮಿಕರ ವೇತನದರ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಆಗುವುದಿಲ್ಲ ಎಂದು ಸರ್ಕಾರ ಖಾತ್ರಿ ಪಡಿಸುತ್ತದೆ?

ಕನಿಷ್ಠ ಕೂಲಿ ಕಾಯಿದೆ.

ಇತರೆ ವಿಷಯಗಳು :

2nd Puc All Subject Notes

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh