ದ್ವಿತೀಯ ಪಿ.ಯು.ಸಿ ಪರಿಪೂರ್ಣ ಪೈಪೋಟಿಯಲ್ಲಿ ಉದ್ಯಮ ಘಟಕದ ಸಿದ್ಧಾಂತ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, 2nd Puc Economics Chapter 4 Notes in Kannada Medium Kseeb Solutions For Class 12 Economics Chapter 4 Notes 2nd Puc Economics 4th Chapter Question Answer Mcq pdf Download 2nd Puc Economics 4th Lesson Notes paripurna paipotiyalli Udyama ghatakada siddhantha Notes theory Of The Firm Under Perfect Competition Notes
2nd Puc Economics Chapter 4 Notes in Kannada
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಸಾಮಾನ್ಯ ಲಾಭ ಎಂದರೇನು?
ಉದ್ಯಮ ಘಟಕದ ವ್ಯಕ್ತ ವೆಚ್ಚಗಳು ಮತ್ತು ಅವಕಾಶ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುವಷ್ಟು ಲಾಭದಾಯಕ ಮಟ್ಟವನ್ನು ‘ಸಾಮಾನ್ಯ ಲಾಭ’ ಎಂದು ಕರೆಯಲಾಗುತ್ತದೆ.
2. ಅಸಾಮಾನ್ಯ ಲಾಭದ ಅರ್ಥ ನೀಡಿ.
ಶೂನ್ಯ ಮಟ್ಟದ ಲಾಭ ಸಾಧಾರಣ ಲಾಭಕ್ಕಿಂತ ಗಳಿಸಿದ ಹೆಚ್ಚಿನ ಲಾಭವನ್ನು ಅಸಾಮಾನ್ಯ ಲಾಭ ಎಂದು ಕರೆಯುವರು.
3. ಮಾರುಕಟ್ಟೆ ಪೂರೈಕೆ ರೇಖೆಯು ಏನನ್ನು ತೋರಿಸುತ್ತದೆ?
ಮಾರುಕಟ್ಟೆ ಪೂರೈಕೆ ರೇಖೆಯು ಸೀಮಾಂತ ವೆಚ್ಚವನ್ನು ತೋರಿಸುತ್ತದೆ.
4. ಸ್ಥಗಿತತೆಯ ಬಿಂದುವಿನ ಅರ್ಥವನ್ನು ನೀಡಿ
ಉದ್ಯಮ ಘಟಕವು ಉತ್ಪಾದನೆಯನ್ನು ಬೆಲೆಯು AVC ಗಿಂತ ಹೆಚ್ಚಾಗಿರುವವರೆಗೆ ಅಥವಾ AVC ಯ ಕನಿಷ್ಟ ಬಿಂದುವಿಗೆ ಸಮನಾಗಿರುವವರೆಗೂ ಮುಂದುವರೆಸುವುದು AVC ಯ ಕನಿಷ್ಟ ಬಿಂದುವಿನ ಕೆಳಬಿಂದುಗಳಲ್ಲಿ ಯಾವುದೇ ಉತ್ಪಾದನೆಯಿರುವುದಿಲ್ಲ. ಏಕೆಂದರೆ SMC ರೇಖೆಯು AVC ರೇಖೆಯನ್ನು ಒಂದು ಕನಿಷ್ಟ ಬಿಂದುವಿನಲ್ಲಿ ಸಂಧಿಸುತ್ತದೆ. ಈ ಕನಿಷ್ಟ ಬಿಂದುವಿನಲ್ಲಿ ಸಂಧಿಸುತ್ತವೆ. ಈ ಬಿಂದುವನ್ನು ಉದ್ಯಮ ಘಟಕದ ಅಲ್ಪಾವಧಿಯ ಸ್ಥಗಿತೆಯ ಬಿಂದು ಎಂದು ಕರೆಯುತ್ತಾರೆ. ಧೀರ್ಘಾವಧಿಯಲ್ಲಿ ಉದ್ಯಮ ಘಟಕದ ಸ್ಥಗಿತೆಯು LRAC ಯ ಕನಿಷ್ಟ ಬಿಂದುವಾಗಿರುತ್ತದೆ.
5. ಸದಾವಕಾಶ ವೆಚ್ಚದ ಅರ್ಥವನ್ನು ಉದಾಹರಣೆ ಸಹಿತ ಬರೆಯಿರಿ.
ಉತ್ಪಾದನೆಯಲ್ಲಿ ಇಂದು ಸದಾವಕಾಶ ವೆಚ್ಚವು ಮಹತ್ವವನ್ನು ಪಡೆದಿದೆ. “ಒಂದು ಸರಕನ್ನು ಉತ್ಪಾದಿಸಲು ತ್ಯಾಗ ಮಾಡಲಾದ ಅನಂತರದ ಉತ್ತಮ ಬದಲಿ ಸರಕಿನ ಮೊತ್ತದ ವೆಚ್ಚ” ಎಂದು ಸದಾವಕಾಶ ವೆಚ್ಚವೆಂದು ವ್ಯಾಖ್ಯಾನಿಸಬಹುದು.
ಉದಾಹರಣೆಗೆ –
ಒಬ್ಬ ವ್ಯಕ್ತಿಯು 2 ಎಕರೆಗಳಷ್ಟು ಭೂಮಿಯನ್ನು ಹೊಂದಿದ್ದು ಆ ಭೂಮಿಯಲ್ಲಿ ಭತ್ತ ಅಥವಾ ಗೋಧಿಯನ್ನು ಆತನು ಬೆಳೆಯಬಹುದು. ಭತ್ತವನ್ನು ಬೆಳೆದರೆ ಆತನು 40,000 ರೂ ಗಳಿಸುತ್ತಾನೆ. ಗೋಧಿಯನ್ನು ಬೆಳೆದರೆ 35,000 ರೂ ಗಳಿಸುತ್ತಾನೆ. ಭತ್ತವನ್ನು ಬೆಳೆಯು ಪ್ರಕ್ರಿಯೆಯಲ್ಲಿ ಆತನು 35,000 ರೂ ಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಆದುದರಿಂದ ಭತ್ತವನ್ನು ಬೆಳೆಯುವ ಸದಾವಕಾಶ ವೆಚ್ಚ 35,000 ರೂ ಇದರಂತೆ ಸದಾವಕಾಶದ ವೆಚ್ಚವನ್ನು ಅನುಭೋಗಕ್ಕೂ ಅನ್ವಯಿಸಬಹುದು.
6. ಒಂದು ಉದ್ಯಮ ಘಟಕದ ಪೂರೈಕೆ ರೇಖೆಯನ್ನು ನಿರ್ಧರಿಸುವ ಎರಡು ಅಂಶಗಳನ್ನು ತಿಳಿಸಿ.
ಆದಾನದ ಬೆಲೆಗಳು Input Prices
ಆದಾನಗಳ ಬೆಲೆಯ ಬದಲಾವಣೆಯು ಸಹ ಪೂರೈಕೆ ರೇಖೆಯ ಮೇಲೆ ಪ್ರಭಾವ ಬೀರುತ್ತದೆ. ಒಂದು ಆದಾನದ ಬೆಲೆ (ಉದಾಹರಣೆಗೆ ಕಾರ್ಮಿಕರ ಕೂಲಿ ದರ) ಹೆಚ್ಚಾದರೆ, ಉತ್ಪಾದನಾವೆಚ್ಚವೂ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಉದ್ಯಮಘಟಕದ ಯಾವುದೇ ಉತ್ಪನ್ನದ ಮಟ್ಟದಲ್ಲಿ ಸರಾಸರಿ ವೆಚ್ಚವು ಹೆಚ್ಚಾಗುವುದರೊಂದಿಗೆ ಸೀಮಾಂತ ವೆಚ್ಚವೂ ಹೆಚ್ಚಾಗುತ್ತದೆ. ಅಂದರೆ, ಇಲ್ಲಿ MC ರೇಖೆ ಎಡಭಾಗಕ್ಕೆ (ಅಥವಾ ಮೇಲ್ಮುಖವಾಗಿ ಪಲ್ಲಟಗೊಳ್ಳುತ್ತದೆ. ಇದರರ್ಥ ಉದ್ಯಮ ಘಟಕದ ಪೂರೈಕೆ ರೇಖೆಯ ಎಡಕ್ಕೆ ಪಲ್ಲಟಗೊಳ್ಳುತ್ತದೆ; ಯಾವುದೇ ನೀಡಿದ ಮಾರುಕಟ್ಟೆ ಬೆಲೆಯಲ್ಲಿ ಉದ್ಯಮಘಟಕವು ಈಗ ಕಡಿಮೆ ಪ್ರಮಾಣದಲ್ಲಿ ಉತ್ಪನ್ನದ ಘಟಕಗಳನ್ನು ಪೂರೈಸುತ್ತದೆ.
ಘಟಕ ತೆರಿಗೆ Unit Tax
ಸರಕು ಉತ್ಪಾದನೆಯ ಮಾರಾಟದ ಪ್ರತಿ ಘಟಕದ ಮೇಲೆ ಸರ್ಕಾರವು ವಿಧಿಸುವ ತೆರಿಗೆಗೆ ಘಟಕ ತೆರಿಗೆ ಎನ್ನುತ್ತೇವೆ. ಉದಾಹರಣೆಗೆ, ಸರ್ಕಾರ ಹೇರಿದ ಘಟಕ ತೆರಿಗೆ ರೂ. 2 ಆಗಿದೆ ಎಂದು ಕೊಳ್ಳೋಣ. ಆಗ ಉದ್ಯಮ ಘಟಕ 10 ಘಟಕಗಳನ್ನು ಉತ್ಪಾದಿಸಿ ಮತ್ತು ಮಾರಾಟ ಮಾಡಿದರೆ, ಉದ್ಯಮ ಘಟಕ ಸರ್ಕಾರಕ್ಕೆ ಪಾವತಿಸಬೇಕಾದ ಒಟ್ಟು ತೆರಿಗೆ 10 • ರೂ.2 = ರೂ.20 ಆಗಿದೆ.
7. ಬೆಲೆ ಪೂರೈಕೆ ಸ್ಥಿತಿ ಸ್ಥಾಪಕತ್ವದ ಅರ್ಥವನ್ನು ನೀಡಿ ಮತ್ತು ಸೂತ್ರವನ್ನು ಬರೆಯಿರಿ.
ಒಂದು ಸರಕಿನ ಮಾರುಕಟ್ಟೆಯ ಬೆಲೆಯಲ್ಲಾದ ಶೇಕಡವಾರು ಬದಲಾವಣೆಯ ಕಾರಣದಿಂದಾಗಿ ಸರಕುಗಳ ಪೂರೈಕೆಯ ಪ್ರಮಾಣದಲ್ಲಿನ ಶೇಕಡವಾರು ಬದಲಾವಣೆಯ ಬೆಲೆಯನ್ನು “ಬೆಲೆ ಪೂರೈಕೆಯ ಸ್ಥಿತಿಸ್ಥಾಪಕತ್ವ” ಎನ್ನುವರು.
ಕೆಳಗಿನ ಪ್ರಶ್ನೆಗಳಿಗೆ 12 ವಾಕ್ಯಗಳಲ್ಲಿ ಉತ್ತರಿಸಿ.
2nd Puc Economics Chapter 4 Notes in Kannada
1. ಈ ಕೆಳಗಿನ ಷರತ್ತುಗಳಡಿಯಲ್ಲಿ ಅಡಿಯಲ್ಲಿ ಪರಿಪೂರ್ಣ ಪೈಪೋಟಿಯಲ್ಲಿ ಉದ್ಯಮ ಘಟಕದ ಲಾಭ ಗರಿಷ್ಠಗೊಳಿಸುವಿಕೆಯ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಯನ್ನು ಬರೆಯಿರಿ.
a) P=MC
b) MC ಯು 4ನಲ್ಲಿ ಇಳಿಕೆಯಾಗುವುದಿಲ್ಲ.
ಮಾರುಕಟ್ಟೆ ಬೆಲೆ P ಆಗಿರುವಾಗ ಸೀಮಾಂತ ವೆಚ್ಚವು MC ಆಗಿರುತ್ತದೆ. ಸೀಮಾಂತ ವೆಚ್ಚವು ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿರುತ್ತದೆ, ಅಂದರೆ ಮಾರುಕಟ್ಟೆ ಬೆಲೆ P ಆಗಿರುವಾಗ ಲಾಭ ಗರಿಷ್ಟಗೊಳಿಸುವ ಉದ್ಯಮ ಘಟಕದ ಉತ್ಪನ್ನ ಮಟ್ಟವು q ಆದಾಗ ಮಾರುಕಟ್ಟೆ ಬೆಲೆಯು ಸೀಮಾಂತ ವೆಚ್ಚಕ್ಕಿಂತ ಹೆಚ್ಚಾಗಿದೆ. ಅಥವಾ ಸೀಮಾಂತ ವೆಚ್ಚವು ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿರುತ್ತದೆ.
ಒಂದನೇ ಷರತ್ತಿನಂತೆ ಲಾಭ ಗರಿಷ್ಠಗೊಳಿಸುವ ಉದ್ಯಮ ಘಟಕವು ಮಾರುಕಟ್ಟೆ ಬೆಲೆಯು ಸೀಮಾಂತ ವೆಚ್ಚಕ್ಕಿಂತ ಹೆಚ್ಚಾಗಿರುವ ಅಥವಾ ಸೀಮಾಂತ ವೆಚ್ಚವು ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿರುವ ಉತ್ಪನ್ನ ಮಟ್ಟದಲ್ಲಿ ಉತ್ಪಾದಿಸುವುದಿಲ್ಲ. ಎರಡನೇ ಷರತ್ತಿನಂತೆ ಲಾಭಾಂಶವನ್ನು ಗರಿಷ್ಠಗೊಳಿಸುವ ಉತ್ಪನ್ನ ಮಟ್ಟವು ಧನಾತ್ಮಕವಾಗಿರುತ್ತದೆ. ಮೂರನೇ ಷರತ್ತಿನಂತೆ ಲಾಭ ಗರಿಷ್ಟಗೊಳಿಸುವ ಬೆಲೆಯು ಉದ್ಯಮ ಘಟಕವು ಅಲ್ಪಾವಧಿಯಲ್ಲಿ ಮಾರುಕಟ್ಟೆ ಕಡಿಮೆ ಉತ್ಪನ್ನ ಮಟ್ಟದಲ್ಲಿ ಉತ್ಪಾದಿಸುವುದಿಲ್ಲ. ಎಂಬುದಾಗಿದೆ.
2. ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯ ಲಕ್ಷಣಗಳಾವುವು?
ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯ ಎರಡು ಪ್ರಮುಖ ಲಕ್ಷಣವನ್ನು ಹೊಂದಿರುತ್ತದೆ. ಅವುಗಳೆಂದರೆ
- ಈ ಮಾರುಕಟ್ಟೆಯು ಕೊಳ್ಳುವವರನ್ನು ಮತ್ತು ಮಾರುವವರನ್ನು ಉದ್ಯಮಘಟಕಗಳನ್ನು ಒಳಗೊಂಡಿರುತ್ತವೆ. ಮಾರುಕಟ್ಟೆಯ ಎಲ್ಲಾ ಉದ್ಯಮಘಟಕಗಳ ಒಂದು ನಿರ್ದಿಷ್ಟ ಏಕರೂಪದ ಸರಕನ್ನು ಉತ್ಪಾದಿಸುತ್ತದೆ.
- ಮಾರುಕಟ್ಟೆಯಲ್ಲಿನ ಪ್ರತಿಯೊಬ್ಬ ಕೊಳ್ಳುವವರು ಮತ್ತು ಮಾರುವವರು ಬೆಲೆ ಪಡೆಯುವವರಾಗಿರುತ್ತಾರೆ.
3. ಒಂದು ಉದ್ಯಮ ಘಟಕದ ಒಟ್ಟು ಆದಾಯ ಮಾರುಕಟ್ಟೆಯ ಬೆಲೆ ಮತ್ತು ಉದ್ಯಮ ಘಟಕ ಮಾರಾಟ ಮಾಡಿದ ಪ್ರಮಾಣ ಹೇಗೆ ಒಂದಕ್ಕೊಂದು ಸಂಬಂಧಿಸಿವೆ?
ಒಂದು ಉದ್ಯಮ ಘಟಕದ ಸರಕಿನ ಮಾರುಕಟ್ಟೆಯ ಬೆಲೆಯನ್ನು ಆ ಉದ್ಯಮ ಘಟಕದ ಉತ್ಪನ್ನ ಪ್ರಮಾಣದಿಂದ ಗುಣಿಸಿದರೆ ಬರುವುದೇ ಒಟ್ಟು ಆದಾಯ. ಬೆಲೆ ಪಡೆಯುವ ಉದ್ಯಮ ಘಟಕಕ್ಕೆ ಸರಾಸರಿ ಆದಾಯವು ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ, ಬೆಲೆ ಪಡೆಯುವ ಉದ್ಯಮ ಘಟಕಕ್ಕೆ ಸೀಮಾಂತ ಆದಾಯವು ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ.
ಅಂದರೆ ಒಂದು ಉದ್ಯಮ ಘಟಕವು ಮಾರುಕಟ್ಟೆಯಲ್ಲಿ ತಾನು ಉತ್ಪಾದಿಸಿದ ಸರಕುಗಳನ್ನು ಮಾರಾಟ ಮಾಡಿ ಆದಾಯವನ್ನು ಗಳಿಸುತ್ತದೆ. ಸರಕಿನ ಒಂದು ಘಟಕದ ಮಾರುಕಟ್ಟೆಯ ಬೆಲೆ P ಆದರೆ ಆ ಉದ್ಯಮ ಘಟಕ ಉತ್ಪಾದಿಸಿP ಬೆಲೆಯಲ್ಲಿ ಮಾರಾಟ ಮಾಡಿದ ಸರಕಿನ ಪ್ರಮಾಣ ಆಗಿರುತ್ತದೆ. ಆಗ ಮಾರುಕಟ್ಟೆಯ ಸರಕಿನ ಬೆಲೆ Pಯನ್ನು ಉದ್ಯಮ ಘಟಕದ ಉತ್ಪನ್ನದ ಪ್ರಮಾಣ 4 ದಿಂದ ಗುಣಿಸಿದಾಗ ಬರುವುದೇ ಉದ್ಯಮ ಉದ್ಯಮ ಘಟಕದ ಆದಾಯವಾಗಿರುತ್ತದೆ. ಹಣ ಉದ್ಯಮ ಘಟಕ ಹಣ ಮಾರಾಟ ಮಾಡಿದ ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ಆದ್ದರಿಂದ ಇದನ್ನು ಈ ಸಮೀಕರಣದಿಂದ ಸ್ವಲ್ಪ ಪಡಿಸಬಹುದು.
ಸೂತ್ರ:- TR= Pxq
4. ಬೆಲೆ ರೇಖೆ ಎಂದರೇನು?
ಮಾರುಕಟ್ಟೆ ಬೆಲೆ ಮತ್ತು ಉತ್ಪಾದನಾ ಘಟಕದ ಉತ್ಪನ್ನ ಮಟ್ಟಗಳ ನಡುವಿನ ಸಂಬಂಧವನ್ನು ತೋರಿಸುವ ಸಮಾನಾಂತರ ಸರಳ ರೇಖೆಯನ್ನು ಬೆಲೆರೇಖೆ” ಎನ್ನುತ್ತೇವೆ. ಬೆಲೆರೇಖೆಯನ್ನು ಉದ್ಯಮ ಘಟಕ ಎದುರಿಸುವ ಬೇಡಿಕೆ ರೇಖೆ ಎಂದು ಕೂಡ ಕರೆಯುವರು.
ಉದಾಹರಣೆಗೆ:
5. ಬೆಲೆ ಪಡೆಯುವ ಉದ್ಯಮ ಘಟಕದ ಒಟ್ಟು ಆದಾಯ ರೇಖೆಯು ಮೇಲ್ಮುಖ ಇಳಿಜಾರನ್ನು ಹೊಂದಿರುವ ಸರಳ ರೇಖೆಯಾಗಿದೆ ಏಕೆ? ರೇಖೆಯು ಏಕೆ ಮೂಲದಿಂದ ಹಾದು ಹೋಗುತ್ತದೆ?
ಬೆಲೆ ಪಡೆಯುವ ಉದ್ಯಮ ಘಟಕದ ಒಟ್ಟು ಆದಾಯ ರೇಖೆಯು ಮೇಲ್ಮುಖ ಇಳಿಜಾರನ್ನು ಹೊಂದಿರುವ ಸರಳ ರೇಖೆಯಾಗಿದೆ. ಎಂಬುದನ್ನು ಈ ಕೆಳಕಂಡ ರೇಖಾಚಿತ್ರದಿಂದ ತೋರಿಸಲಾಗಿದೆ.
ಉದ್ಯಮದ ಒಟ್ಟು ಆದಾಯ ರೇಖೆ ಉದ್ಯಮ ಘಟಕ ಗಳಿಸುವ ಒಟ್ಟು ಆದಾಯ ಮತ್ತು ಉತ್ಪನ್ನ ಮಟ್ಟಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ, ಇಲ್ಲಿ ಆದಾಯ ರೇಖೆ ಇಳಿಜಾರಾಗಿದೆ.
Aq1/Oq1 = P
P=ಮಾರುಕಟ್ಟೆ ಬೆಲೆಯಾಗಿದೆ
ಉತ್ಪನ್ನವು ಶೂನ್ಯವಾಗಿದ್ದಾಗ ಉದ್ಯಮ ಘಟಕವು ಒಟ್ಟು ಆದಾಯವು ಶೂನ್ಯವಾಗಿರುತ್ತದೆ, ಆದುದರಿಂದ ಒಟ್ಟು ಆದಾಯ ರೇಖೆಯು ‘೦’ ಮೂಲದಿಂದ ಹಾದು ಹೋಗಿರುತ್ತದೆ.
6. ಮಾರುಕಟ್ಟೆ ಬೆಲೆ ಮತ್ತು ಬೆಲೆ ಪಡೆಯುವ ಉದ್ಯಮ ಘಟಕದ (AP) ಸರಾಸರಿ ಆದಾಯಕ್ಕಿರುವ ಸಂಬಂಧವೇನು?
ಮಾರುಕಟ್ಟೆ ಬೆಲೆ ಮತ್ತು ಬೆಲೆ ಪಡೆಯುವ ಉದ್ಯಮ ಘಟಕದ ಸರಾಸರಿ ಆದಾಯಕ್ಕಿರುವ ಸಂಬಂಧವೆಂದರೆ
ಒಂದು ಬೆಲೆ ಪಡೆಯುವ ಉದ್ಯಮ ಘಟಕಕ್ಕೆ ಸರಾಸರಿ ಆದಾಯವು ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ, ಹೇಗೆಂದರೆ:- ಒಂದು ಉದ್ಯಮ ಘಟಕದ ಉತ್ಪನ್ನ ಪ್ರಮಾಣ q ಆದರೆ ಮತ್ತು ಮಾರುಕಟ್ಟೆ ಬೆಲೆಯ ಆದರೆ ಒಟ್ಟು ಆದಾಯ TR=Pxq ಗೆ ಸಮನಾಗಿರುತ್ತದೆ,
7. ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಗರಿಷ್ಟ ಲಾಭ ಗಳಿಸುವ ಉದ್ಯಮ ಘಟಕವು ಧನಾತ್ಮಕ ಉತ್ಪನ್ನ ಉತ್ಪಾದಿಸಬೇಕಾದರೆ ಯಾವ ಷರತ್ತುಗಳು ಈಡೇರಬೇಕು?
ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಗರಿಷ್ಟ ಲಾಭಗಳಿಸುವ ಉದ್ಯಮ ಘಟಕವು ಧನಾತ್ಮಕ ಉತ್ಪನ್ನ ಉತ್ಪಾದಿಸಬೇಕಾದರೆ 3 ನೇ ಷರತ್ತು ಎಡಭಾಗಗಳನ್ನು ಹೊಂದಿದೆ ಎಂಬು ದನ್ನು ಗಮನಿಸಿ ಒಂದು ಭಾಗ ಅಲ್ಪಾವಧಿ ಅನ್ವಯಿಸುತ್ತದೆ, ಮತ್ತೊಂದು ಧೀರ್ಘಾವಧಿಗೆ ಅನ್ವಯಿಸುತ್ತದೆ. ಅಂದರೆ :
ಒಂದು ಲಾಭ ಗರಿಷ್ಟಗೊಳಿಸುವ ಉದ್ಯಮ ಘಟಕವು ಈ ಅಲ್ಪಾವಧಿಯಲ್ಲಿ ಮಾರುಕಟ್ಟೆ ಬೆಲೆಯAVC ಗಿಂತ ಕಡಿಮೆ ಇರುವ ಉತ್ಪನ್ನ ಮಟ್ಟದಲ್ಲಿ ಉತ್ಪಾದಿಸುವುದಿಲ್ಲವೆಂದು ವಾದಿಸುತ್ತ ಸನ್ನಿವೇಶ 1 ರ ಹೇಳಿಕೆ ನಿಜವೆಂದು ಸಾಬೀತು ಪಡಿಸಬಹುದು.
ಇದೇ ರೀತಿ, ದೀರ್ಘಾವಧಿಯಲ್ಲಿ ಲಾಭ ಗರಿಷ್ಠಗೊಳಿಸುವ ಉದ್ಯಮ ಘಟಕವು ಮಾರುಕಟ್ಟೆ ಬೆಲೆಯು AC ಗಿಂತ ಕಡಿಮೆ ಇರುವ ಉತ್ಪನ್ನ ಮಟ್ಟದಲ್ಲಿ ಉತ್ಪಾದಿಸುವುದಿಲ್ಲವೆಂದು ವಾದಿಸುವ ಮೂಲಕ ಷರತ್ತು 2 ರ ಹೇಳಿಕೆಯನ್ನು ಸತ್ಯವೆಂದು ತೋರಿಸಬಹುದು.
8. ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಗರಿಷ್ಟ ಲಾಭಗಳಿಸುವ ಉದ್ಯಮ ಘಟಕವು ಧನಾತ್ಮಕ ಉತ್ಪನ್ನವನ್ನು ಉತ್ಪಾದಿಸುತ್ತದೆ. ಹಾಗೂ ಮಾರುಕಟ್ಟೆ ಬೆಲೆಯ ಸೀಮಾಂತ ವೆಚ್ಚಕ್ಕೆ ಸಮನಾಗಿರುವುದಿಲ್ಲ, ವಿವರಣೆ ನೀಡಿ,
ಎಲ್ಲಾ ಉತ್ಪನ್ನದ ಮಟ್ಟಗಳಿಗೂ ಮಾರುಕಟ್ಟೆ ಬೆಲೆಯು ಸೀಮಾಂತ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ ಈ ಉತ್ಪನ್ನದ ವಿಸ್ತರಣೆಯ ಉದ್ಯಮ ಘಟಕದ ಒಟ್ಟು ಆದಾಯದಲ್ಲಾದ ಹೆಚ್ಚಳವು ಬದಲಾದ ಪ್ರಮಾಣ ಮತ್ತು ಮಾರುಕಟ್ಟೆ ಬೆಲೆಯ ಗುಣಲಬ್ಧವಾಗಿದೆ. ಈ ಉತ್ಪನ್ನದ ವಿಸ್ತರಣೆಗೆ ಸಂಬಂಧಿಸಿದ ಒಟ್ಟು ವೆಚ್ಚದಲ್ಲಿನ ಹೆಚ್ಚಳ ಸೀಮಾಂತ ವೆಚ್ಚಕ್ಕೆ ಸಮನಾಗಿರುವುದಿಲ್ಲ .
ಉತ್ಪನ್ನ ಮಟ್ಟದಲ್ಲಿ ಮಾರುಕಟ್ಟೆ ಬೆಲೆಯು ಸೀಮಾಂತದ ವೆಚ್ಚಕ್ಕಿಂತ ಕಡಿಮೆ ಇದ್ದಾಗ ಉತ್ಪನ್ನ ಮಟ್ಟಗಳಲ್ಲಿ ಮಾರುಕಟ್ಟೆ ಬೆಲೆಯ ಸೀಮಾಂತ ವೆಚ್ಚಕ್ಕಿಂತ ಕಡಿಮೆ ಇರುತ್ತದೆ ಹೊರತು ಸಮನಾಗಿರುವುದಿಲ್ಲ.
9. ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಒಂದು ಉದ್ಯಮ ಘಟಕವು ಸೀಮಾಂತ ವೆಚ್ಚ ಇಳಿಯುತ್ತಿರುವ ಶ್ರೇಣಿಯಲ್ಲಿ ಧನಾತ್ಮಕ ಉತ್ಪನ್ನ ವನ್ನು ಉತ್ಪಾದಿಸುತ್ತದೆಯೆ? ವಿವರಣೆ ನೀಡಿ.
ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಒಂದು ಉದ್ಯಮ ಘಟಕವು ಸೀಮಾಂತ ವೆಚ್ಚ ಇಳಿಯುತ್ತಿರುವ ಶ್ರೇಣಿಯಲ್ಲಿ ಧನಾತ್ಮಕ ಉತ್ಪನ್ನವನ್ನು ಉತ್ಪಾದಿಸಲಾಗಲಾರದು, ಏಕೆಂದರೆ ಸೀಮಾಂತ ವೆಚ್ಚದ ರೇಖೆಯ ಕೆಳಮುಖವಾಗಿ ಇಳಿಯುತ್ತದೆ, ಒಂದು ವೇಳೆ ಉತ್ಪಾದಿಸಿದರೆ ಉತ್ಪಾದನೆಯು ಶೂನ್ಯವಾಗುತ್ತದೆ,
10. ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಲಾಭ ಗರಿಷ್ಠಗೊಳಿಸಿಕೊಳ್ಳುವ ಒಂದು ಉದ್ಯಮ ಘಟಕವು ಅಲ್ಪಾವಧಿಯಲ್ಲಿ ಮಾರುಕಟ್ಟೆ ಬೆಲೆಯ ಕನಿಷ್ಟ AVC ಗಿಂತ ಕಡಿಮೆ ಇದ್ದಾಗ ಧನಾತ್ಮಕ ಉತ್ಪನ್ನವನ್ನು ಉತ್ಪಾದಿಸುತ್ತದೆಯೇ? ವಿವರಣೆ ನೀಡಿ,
ಪರಿಪೂರ್ಣ ಪೈಪೋಟಿಯುತ ಮಾರುಕಟ್ಟೆಯಲ್ಲಿ ಲಾಭ ಗರಿಷ್ಟಗೊಳಿಸಿಕೊಳ್ಳುವ ಒಂದು ಉದ್ಯಮ ಘಟಕವು ಅಲ್ಪಾವಧಿಯಲ್ಲಿ ಮಾರುಕಟ್ಟೆ ಬೆಲೆಯ ಕನಿಷ್ಟ AVC ಗಿಂತ ಕಡಿಮೆ ಇದ್ದಾಗ ಧನಾತ್ಮಕ ಉತ್ಪನ್ನವನ್ನು ಉತ್ಪಾದಿಸುವುದಿಲ್ಲ,
ಏಕೆಂದರೆ ಮಾರುಕಟ್ಟೆ ಬೆಲೆ Pಅದರ ಕನಿಷ್ಟಸರಾಸರಿ ಬದಲಾಗುವ ವೆಚ್ಚ AVCಕ್ಕಿಂತ ಕಡಿಮೆ ಇದ್ದಾಗ ಅಲ್ಪಾವಧಿಯಲ್ಲಿ ಲಾಭವನ್ನು ಗರಿಷ್ಟ ಗೊಳಿಸುವ ಉದ್ಯಮ ಘಟಕ ಉತ್ಪನ್ನ ಮಟ್ಟವು ಶೂನ್ಯವಾಗಿರುತ್ತದೆ,
ಇದನ್ನು ಈ ಕೆಳಗಿನ ರೇಖಾ ಚಿತ್ರದೊಂದಿಗೆ ಇದನ್ನು ಸ್ಪಷ್ಟ ಪಡಿಸಬಹುದು.
ಉದ್ಯಮ ಘಟಕವು ಶೂನ್ಯ ಉತ್ಪಾದನೆಯನ್ನು ಉತ್ಪಾದಿಸಿದರೆ ಶೂನ್ಯವಾಗಿರುತ್ತದೆ.
11. ಅಲ್ಪಾವದಿಯಲ್ಲಿ ಉದ್ಯಮ ಘಟಕದ ಪೂರೈಕೆ ರೇಖೆ ಎಂದರೇನು?
ವಿವಿಧ ಮಾರುಕಟ್ಟೆ ಬೆಲೆಗಳಲ್ಲಿ ಉದ್ಯಮ ಘಟಕವು ಉತ್ಪಾದಿಸಲು ಬಯಸುವ ಉತ್ಪನ್ನ ಪೂರೈಕೆ ರೇಖೆಯು ತೋರಿಸುತ್ತದೆ. ಮಾರುಕಟ್ಟೆ ಬೆಲೆ ಎರಡು ಮೌಲ್ಯಗಳಿಗೆ ಅಲ್ಪಾವಧಿಯಲ್ಲಿ ಉದ್ಯಮ ಘಟಕ ಲಾಭ ಗರಿಷ್ಠಗೊಳಿಸುವ ಉತ್ಪನ್ನ ಮಟ್ಟವನ್ನು ನಿರ್ಧರಿಸುತ್ತದೆ,
12. ಧೀಘಾವಧಿಯಲ್ಲಿ ಉದ್ಯಮ ಘಟಕದ ಪೂರೈಕೆ ರೇಖೆ ಎಂದರೇನು?
ಮಾರುಕಟ್ಟೆಯ ಬೆಲೆಯ ಕನಿಷ್ಟ ಧೀರ್ಘಾವಧಿಗಿಂತ ಹೆಚ್ಚಾದರೆ ಅಥವಾ ಸಮನಾಗಿದ್ದರೆ ಉದ್ಯಮ ಘಟಕದ ಲಾಭಗೊಳಿಸುವ ಉತ್ಪನ್ನ ಮಟ್ಟವನ್ನು ಮೊದಲಿಗೆ ನಿರ್ಧರಿಸುತ್ತೇವೆ, ಇದಾದ ನಂತರ ಕನಿಷ್ಠ ( ಧೀರ್ಘಾವಧಿ) ಗಿಂತ ಮಾರುಕಟ್ಟೆ ಬೆಲೆಯು ಕಡಿಮೆ ಇದ್ದಾಗ ಲಾಭಗಳಿಸುವ ಉದ್ಯಮ ಘಟಕದ ಉತ್ಪನ್ನ ಮಟ್ಟವನ್ನು ನಿರ್ಧರಿಸುತ್ತದೆ.
13. ಉದ್ಯಮ ಘಟಕದ ಪೂರೈಕೆ ರೇಖೆಯ ಮೇಲೆ ತಂತ್ರಜ್ಞಾನದ ಪ್ರಗತಿಯು ಹೇಗೆ ಪರಿಣಾಮ ಬೀರುತ್ತದೆ?
ಉದ್ಯಮ ಘಟಕದ ಪೂರೈಕೆ ರೇಖೆಯ ಮೇಲೆ ತಂತ್ರಜ್ಞಾನದ ಪ್ರಗತಿಯು ಪರಿಣಾಮ ಬೀರುತ್ತದೆ. ತಂತ್ರ ಜ್ಞಾನದ ಪ್ರಗತಿಯ ನಿರೀಕ್ಷೆ ಉದ್ಯಮ ಘಟಕದ ಪೂರೈಕೆ ರೇಖೆಯ ರೇಖೆಯನ್ನು ಬಲಕ್ಕೆ ಪಲ್ಲಟಗೊಳಿಸುತ್ತದೆ. ತಂತ್ರಜ್ಞಾನದ ಪ್ರಗತಿಯು ಉದ್ಯಮ ಘಟಕವು ಈಗ ಹೆಚ್ಚು ಉತ್ಪನ್ನವನ್ನು ಪೂರೈಸುತ್ತದೆ, ಮಾನವನ ಶ್ರಮಕ್ಕಿಂತ ತಂತ್ರಜ್ಞಾನದ ಬಳಕೆಯಿಂದ ಅಧಿಕ ಉತ್ಪನ್ನ ಸಾಧ್ಯವಿದೆ.
14. ಘಟಕ ತೆರಿಗೆ ವಿಧಿಸುವುದರಿಂದ ಉಧ್ಯಮ ಘಟಕದ ಪೂರೈಕೆ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ?
ಸರಕು ಉತ್ಪಾದನೆಯ ಮಾರಾಟದ ಪ್ರತಿ ಘಟಕದ ಮೇಲೆ ಸರ್ಕಾರವು ವಿಧಿಸುವ ತೆರಿಗೆಗೆ ಘಟಕ ತೆರಿಗೆ ಎನ್ನುತ್ತೇವೆ.
ಒಂದು ಘಟಕ ತೆರಿಗೆ ವಿಧಿಸಿದಾಗ ಉದ್ಯಮ ಘಟಕದ ಧೀರ್ಘಾವಧಿ ಪೂರೈಕೆ ಬದಲಾಗುತ್ತದೆ. ಘಟಕ ತೆರಿಗೆ ವಿಧಿಸುವ ಮೊದಲು ಮತ್ತು ತೆರಿಗೆಯು ಉದ್ಯಮ ಘಟಕ ಪೂರೈಕೆಯಾಗುತ್ತದೆ. ಘಟಕ ತೆರಿಗೆಯ ಉದ್ಯಮ ಘಟಕದ ಧೀರ್ಘಾವಧಿ ಪೂರೈಕೆಯಲ್ಲಿ ಎಡಕ್ಕೆ ಪಲ್ಲಟಗೊಳಿಸುತ್ತದೆ, ಯಾವುದೇ ನೀಡಿದ ಮಾರುಕಟ್ಟೆ ಬೆಲೆಗೆ ಉದ್ಯಮ ಘಟಕವು ಉತ್ಪನ್ನದ ಕಡಿಮೆ ಘಟಕಗಳನ್ನು ಪೂರೈಸುತ್ತದೆ.
ಇದನ್ನು ಪೂರೈಕೆ ರೇಖೆಗಳು ಮತ್ತು ಘಟಕ ತೆರಿಗೆಗಳಿಂದ ಸೃಷ್ಟಿ ಪಡಿಸಬಹುದು.
ಘಟಕ ತೆರಿಗೆನ್ನು ವಿಧಿಸುವ ಮೊದಲು ಉದ್ಯಮ ಘಟಕದ ಪೂರೈಕೆ ರೇಖೆಯಾಗಿದೆ 1 ರೂ ಗಳ ಘಟಕ ತೆರಿಗೆ ವಿಧಿಸಿದ ನಂತರ S’ ಉದ್ಯಮ ಘಟಕದ ಪೂರೈಕೆಯನ್ನು ಪ್ರತಿನಿಧಿಸುತ್ತದೆ.
15, ಆದಾನಗಳ ಬೆಲೆಯ ಹೆಚ್ಚಳವು ಉದ್ಯಮ ಘಟಕದ ಪೂರೈಕೆ ರೇಖೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಆದಾನಗಳ ಬೆಲೆ ಬದಲಾವಣೆಯು ಸಹ ಪೂರೈಕೆ ರೇಖೆ ಯ ಮೇಲೆ ಪ್ರಭಾವ ಬೀರುತ್ತದೆ. ಒಂದು ಆದಾನದ ಬೆಲೆ ಅಂದರೆ ಉದಾಹರಣೆಗೆ ಕಾರ್ಮಿಕರ ಕೂಲಿದರ ಹೆಚ್ಚಾದರೆ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಉದ್ಯಮ ಘಟಕದ ಯಾವುದೇ ಉತ್ಪನ್ನದ ಮಟ್ಟದಲ್ಲಿ ಸರಾಸರಿ ವೆಚ್ಚವು ಹೆಚ್ಚಾಗುವುದರೊಂದಿಗೆ ಸೀಮಾಂತ ವೆಚ್ಚವು ಹೆಚ್ಚಾಗುತ್ತದೆ. ಅಂದರೆ ಉದ್ಯಮ ಘಟಕದ ಪೂರೈಕೆ ರೇಖೆಯ ಎಡಕ್ಕೆ ಪಲ್ಲಟಗೊಳ್ಳುತ್ತದೆ. ಯಾವುದೇ ಮಾರುಕಟ್ಟೆ ನೀಡಿದ ನೆಲೆಯಲ್ಲಿ ಉದ್ಯಮ ಘಟಕವು ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆ ನೀಡಿದ ಬೆಲೆಯಲ್ಲಿ ಉತ್ಪನ್ನದ ಘಟಕಗಳನ್ನು ಪೂರೈಸುತ್ತದೆ.
16. ಒಟ್ಟು ಆದಾಯವನ್ನು ವ್ಯಾಖ್ಯಾನಿಸಿ?
ಸರಕಿನ ಮಾರುಕಟ್ಟೆಯ ಬೆಲೆಯನ್ನು ಉದ್ಯಮ ಘಟಕದ ಉತ್ಪನ್ನದ ಪ್ರಮಾಣದಿಂದ ಗುಣಿಸಿದಾಗ ಬರುವುದೇ ಆ ಉದ್ಯಮ ಘಟಕದ ಒಟ್ಟು ಆದಾಯವೆಂದು ವ್ಯಾಖ್ಯಾನಿಸಬಹುದು, ಅಂದರೆ
TR=PxQ
17. ಸರಾಸರಿ ಆದಾಯ ಎಂದರೇನು?
ಉದ್ಯಮ ಘಟಕವು ತನ್ನ ಉತ್ಪನ್ನದ ಪ್ರತಿಯೊಂದು ಘಟಕದ ಉತ್ಪಾದನೆಯಿಂದ ಪಡೆಯುವ ಒಟ್ಟು ಆದಾಯವು ಸರಾಸರಿ ಆದಾಯ ಎನ್ನುವರು.
18. ಸೀಮಾಂತ ಆದಾಯವನ್ನು ವ್ಯಾಖ್ಯಾನಿಸಿ?
ಉದ್ಯಮ ಘಟಕದ ಉತ್ಪನ್ನದಲ್ಲಿ ಒಂದು ಘಟಕದ ಹೆಚ್ಚುವರಿ ಉತ್ಪಾದನೆಯಿಂದ ಒಟ್ಟು ಆದಾಯದಲ್ಲಾಗುವ ಹೆಚ್ಚಳವನ್ನು ಸೀಮಾಂತ ಆದಾಯ ಎಂದು ವ್ಯಾಖ್ಯಾನಿಸಬಹುದು.
19. ಲಾಭ ಗರಿಷ್ಠಗೊಳಿಸುವಿಕೆಯಲ್ಲಿ ಮೂರು ಷರತ್ತುಗಳಾವುವು?
ಲಾಭ ಗರಿಷ್ಟಗೊಳಿಸುವಿಕೆಯಲ್ಲಿ ಮೂರು ಷರತ್ತುಗಳೆಂದರೆ:
- ಮಾರುಕಟ್ಟೆ ಬೆಲೆ ಸೀಮಾಂತ ವೆಚ್ಚ 9ಗೆ ನಮನಾಗಿರುತ್ತದೆ. (P=q0)
- ಸೀಮಾಂತ ವೆಚ್ಚವು q0, ದಲ್ಲಿ ಸ್ಥಿರವಾಗಿರುತ್ತದೆ.
- ಅಲ್ಪಾವಧಿಯಲ್ಲಿ ಮಾರುಕಟ್ಟೆ ಬೆಲೆ P ಯು ಸರಾಸರಿ ಬದಲಾಗುವ ವೆಚ್ಚ q0 ಗಿಂತ ಹೆಚ್ಚು ಅಥವಾ ಸಮ ನಾಗಿರಲೇ ಬೇಕಾಗುತ್ತದೆ, ಧೀರ್ಘಾವಧಿಯಲ್ಲಿ ಮಾರು ಕಟ್ಟೆ ಬೆಲೆಯು ಸರಾಸರಿ ವೆಚ್ಚಕ್ಕಿಂತ q0 ಬಿಂದುವಿಗೆ ಹೆಚ್ಚು ಅಥವಾ ಸಮನಾಗಿರಲೇ ಬೇಕಾಗುತ್ತದೆ.
2nd Puc Economics Chapter 4 Notes in Kannada
5 ಅಂಕದ ಪ್ರಶ್ನೆಗಳು :
1. ಲಾಭ ಗರಿಷ್ಠಗೊಳಿಸುವ ರೇಖಾತ್ಮಕ ನಿರೂಪಣೆಯನ್ನು ವಿವರಿಸಿ.
ರೇಖಾ ಚಿತ್ರ 1,1ರಲ್ಲಿ ಮಾರುಕಟ್ಟೆ ಬೆಲೆ “p” ಎಂದು ಗಮನಿಸಿ, ಬೆಲೆ, ಮಾರುಕಟ್ಟೆ ಬೆಲೆಯನ್ನು (ಅಲ್ಪಾವಧಿಯಲ್ಲಿ) ಕನಿಷ್ಠ ವೆಚ್ಚದೊಂದಿಗೆ ವೆಚ್ಚಗಳು ಸಮೀಕರಿಸಿದಾಗ, ನಾವು q0 ಉತ್ಪನ್ನ ಮಟ್ಟವನ್ನು ಪಡೆದುಕೊಳ್ಳುತ್ತೇವೆ. q0 ನಲ್ಲಿ SMC ಯು ಮೇಲ್ಮುಖ ಇಳಿಜಾರು ಹೊಂದಿರುತ್ತದೆ. ಮತ್ತು ಯು AVC’ಯನ್ನು ಮುದ ಎಂದು ಗಮನಿಸಿ, ಇದರಿಂದ ವಿಭಾಗ 3.1 ರಿಂದ 3.3ರಲ್ಲಿ ಚರ್ಚಿಸಲಾದ ಮೂರು ಷರತ್ತುಗಳು q0 ನಲ್ಲಿ ನೆರವೇರುವುದರಿಂದ, ನಾವು `q0 ಉತ್ಪನ್ನ ಮಟ್ಟವು ಉದ್ಯಮ ಘಟಕದ ಲಾಭ ಗರಿಷ್ಠಗೊಳಿಸುವ ಉತ್ಪನ್ನ ಮಟ್ಟ ಎಂದು ತೀರ್ಮಾನಿಸುತ್ತೇವೆ.
2. ಒಂದು ಉದ್ಯಮ ಘಟಕದ ದೀರ್ಘಾವದಿ ಪೂರೈಕೆ ಯನ್ನು ವಿವರಿಸಿ?
ಒಂದು ಪ್ರಮುಖ ತೀರ್ಮಾನವನ್ನು ಪಡೆಯುತ್ತೇವೆ. ಉದ್ಯಮ ಘಟಕದ ದೀರ್ಘಾವದಿ ಪೂರೈಕೆ ರೇಖೆಯು ಕನಿಷ್ಟ ಬೆಲೆ, LRA ಯಿಂದ ಮೇಲೇರುವ ಮತ್ತು LRMC ರೇಖೆಯ ಭಾಗವಾಗಿದೆ ಮತ್ತು ಕನಿಷ್ಠ LRAC ಗಿಂತಲೂ ಕಡಿಮೆ ಇರುವ ಎಲ್ಲಾ ಬೆಲೆಗಳಲ್ಲಿ ಉತ್ಪನ್ನವು ಶೂನ್ಯವಾಗಿರುತ್ತದೆ. ರೇಖಾ ಚಿತ್ರ 4.10ರಲ್ಲಿ, ಗಾಢವಾದ ರೇಖೆಯು ಉದ್ಯಮ ಘಟಕದ ದೀರ್ಘಾವಧಿಯ ಪೂರೈಕೆ ರೇಖೆಯನ್ನು ಪ್ರತಿನಿಧಿಸುತ್ತದೆ.
3. ಸಾಮಾನ್ಯ ಲಾಭ ಮತ್ತು ಸಮಸ್ಥಿತಿ ಬಿಂದುವನ್ನು ವಿವರಿಸಿ
ಉತ್ಪಾದನಾ ಪ್ರಕ್ರಿಯೆಯಲ್ಲಿ ಈ ಆದಾನಗಳನ್ನು ಬಳಸುವ ಬದಲು ಉದ್ಯಮ ಘಟಕವು ಅವುಗಳನ್ನು ಬೇರೆ ಉದ್ದೇಶಕ್ಕಾಗಿ ಬಳಸಿಕೊಂಡಿರಬಹುದಾಗಿತ್ತು ಮತ್ತು ಸ್ವಲ್ಪ ಪ್ರತಿಫಲವನ್ನು ಗಳಿಸಬಹುದಾಗಿತ್ತು, ಈ ಬಿಟ್ಟುಕೊಟ್ಟ ಗಳಿಕೆಯು ಉದ್ಯಮಘಟಕದ ಅವಕಾಶವೆಚ್ಚವಾಗಿದೆ. ಉದ್ಯಮಘಟಕವು ಸಾಮಾನ್ಯವಾಗಿ ವ್ಯಕ್ತ ವೆಚ್ಚಗಳ ಜೊತೆಗೆ ಅವಕಾಶ ವೆಚ್ಚಗಳನ್ನು ಒಳಗೊಂಡಿರುವ ಲಾಭವನ್ನು ಗಳಿಸಲು ನಿರೀಕ್ಷಿಸುತ್ತದೆ. ಉದ್ಯಮಘಟಕದ ಪ್ರಕ್ಷ ವೆಚ್ಚಗಳು ಮತ್ತು ಅವಕಾಶ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುವಷ್ಟು ಲಾಭದಾಯಕ ಮಟ್ಟವನ್ನು ಸಾಮಾನ್ಯ ಲಾಭ ಎಂದು ಕರೆಯಲಾಗುತ್ತದೆ. ಒಂದು ಉದ್ಯಮಘಟಕದ ಒಟ್ಟು ವೆಚ್ಚದ ಲೆಕ್ಕಾಚಾರದಲ್ಲಿ ಅದರ ವ್ಯಕ್ತ (ಸ್ಪಷ್ಟವಾದ) ವೆಚ್ಚಗಳು ಮತ್ತು ಅವಕಾಶ ವೆಚ್ಚಗಳನ್ನು ಸೇರಿಸಿದರೆ, ಸಾಮಾನ್ಯ ಲಾಭವು ಒಟ್ಟು ಆದಾಯ ಮತ್ತು ಒಟ್ಟು ವೆಚ್ಚಕ್ಕೆ ಸಮನಾದ ಲಾಭದ ಮಟ್ಟವಾಗುತ್ತದೆ. ಅಂದರೆ ಶೂನ್ಯ ಮಟ್ಟದ ಲಾಭ, ಸಾಧಾರಣ ಲಾಭಕ್ಕಿಂತ ಗಳಿಸಿದ ಹೆಚ್ಚಿನ ಲಾಭವನ್ನು ಅಸಾಮಾನ್ಯ ಲಾಭ (ಅಸಾಧಾರಣ ಲಾಭ) ಎಂದು ಕರೆಯಲಾಗುತ್ತದೆ.
ದೀರ್ಘಾವಧಿಯಲ್ಲಿ, ಸಾಮಾನ್ಯ ಲಾಭಕ್ಕಿಂತ ಕಡಿಮೆ ಲಾಭ ಗಳಿಸಿದರೆ ಉದ್ಯಮ ಘಟಕವು ಉತ್ಪಾದನೆ ಮಾಡುವುದಿಲ್ಲ. ಅಲ್ಪಾವಧಿಯಲ್ಲಿ, ಲಾಭವು ಈ ಮಟ್ಟಕ್ಕಿಂತ ಕಡಿಮೆ ಇದ್ದರೂ ಸಹ ಉದ್ಯಮ ಘಟಕ ಉತ್ಪಾದಿಸಬಹುದು. ಉದ್ಯಮಘಟಕವು ಸಾಧಾರಣ ಲಾಭವನ್ನು ಗಳಿಸುವ ಪೂರೈಕೆ: ರೇಖೆಯ ಮೇಲಿನ ಬಿಂದುವನ್ನು ಸಮ ಸ್ಥಿತಿ ಬಿಂದು ಎಂದು ಕರೆಯಲಾಗುತ್ತದೆ. ಪೂರೈಕೆ ರೇಖೆಯನ್ನು LRAC ರೇಖೆಯು ಛೇದಿಸುವ ಸರಾಸರಿ ವೆಚ್ಚದ ಕನಿಷ್ಟ ಒಂದು ಉದ್ಯಮಘಟಕದ ಸಮಸ್ಥಿತಿ ಬಿಂದುವಾಗಿದೆ. (ಅಲ್ಪಾವಧಿಯಲ್ಲಿ SAC ರೇಖೆಯಲ್ಲಿ).
4. ಉದ್ಯಮ ಘಟಕದ ಪೂರೈಕೆ ರೇಖೆಯನ್ನು ನಿರ್ಧರಿಸುವ ನಿರ್ಧಾರಕಗಳು ಯಾವುವು?
ಉದ್ಯಮ ಘಟಕದ ಪೂರೈಕೆ ರೇಖೆ ನಿರ್ಧರಿಸುವ ನಿರ್ಧರಗಳೆಂದರೆ
- ತಂತ್ರಜ್ಞಾನ ಪ್ರಗತಿ
- ಆಧಾನದ ಬೆಲೆಗಳು
- ಘಟಕ ತೆರಿಗೆ
ಒಂದು ಉದ್ಯಮ ಘಟಕವು ಒಂದು ನಿರ್ದಿಷ್ಟ ಸರಕನ್ನು ಉತ್ಪಾದಿಸಲು ಎರಡು ಉತ್ಪಾದನಾಂಗಗಳನ್ನು ಬಳಸಿಕೊಳ್ಳುತ್ತದೆ. ಅವು ಬಂಡವಾಳ ಮತ್ತು ಶ್ರಮಗಳಾಗಿವೆ ಎಂದುಕೊಳ್ಳೋಣ. ಉದ್ಯಮಘಟಕವು ತನ್ನ ಸಂಘಟನೆಯಲ್ಲಿ ಹೊಸತನವನ್ನು ತಂದನಂತರ ಅದೇ ಮಟ್ಟದ ಬಂಡವಾಳ ಮತ್ತು ಶ್ರಮಗಳೊಂದಿಗೆ ಈಗ ಹೆಚ್ಚಿನ ಘಟಕಗಳನ್ನು ಉತ್ಪಾದಿಸುತ್ತದೆ. ಇದನ್ನೇ ವಿಭಿನ್ನವಾಗಿ ಹೇಳುವುದಾದರೆ, ಉದ್ಯಮ ಘಟಕದ ಸಂಘಟನಾ ಹೊಸತನವು ಆದಾನದ ಕಡಿಮೆ ಘಟಕಗಳನ್ನು ಬಳಸಿಕೊಂಡು ಅದೇ ಮಟ್ಟದ ಉತ್ಪನ್ನವನ್ನು ಉತ್ಪಾದಿಸಲು ಅವಕಾಶ ಮಾಡಿಕೊಡುತ್ತದೆ. ಇದು ಯಾವುದೇ ಉತ್ಪನ್ನದ ಮಟ್ಟದಲ್ಲಿ ಉದ್ಯಮ ಘಟಕದ ಸೀಮಾಂತ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ; ಅಂದರೆ, MC ರೇಖೆಯು ಬಲಭಾಗಕ್ಕೆ (ಅಥವಾ ಕೆಳಕ್ಕೆ) ಪಲ್ಲಟಗೊಳ್ಳುತ್ತದೆ. ಉದ್ಯಮ ಘಟಕದ ಪೂರೈಕೆ ರೇಖೆಯು ಅಗತ್ಯವಾಗಿ MC ರೇಖೆಯ ಭಾಗವಾಗಿರುವುದರಿಂದ, ತಂತ್ರಜ್ಞಾನದ ಪ್ರಗತಿಯು ಉದ್ಯಮ ಘಟಕದ ಪೂರೈಕೆ ರೇಖೆಯನ್ನು ಬಲಕ್ಕೆ ಪಲ್ಲಟಗೊಳಿಸುತ್ತದೆ. ಯಾವುದೇ ನೀಡಿದ ಮಾರುಕಟ್ಟೆ ಬೆಲೆಗೆ ಉದ್ಯಮಘಟಕವು ಈಗ ಹೆಚ್ಚು ಉತ್ಪನ್ನ ಘಟಕಗಳನ್ನು ಪೂರೈಸುತ್ತದೆ.
ಆದಾನದ ಬೆಲೆಗಳು Input Prices
ಆದಾನಗಳ ಬೆಲೆಯ ಬದಲಾವಣೆಯು ಸಹ ಪೂರೈಕೆ ರೇಖೆಯ ಮೇಲೆ ಪ್ರಭಾವ ಬೀರುತ್ತದೆ. ಒಂದು ಆದಾನದ ಬೆಲೆ (ಉದಾಹರಣೆಗೆ ಕಾರ್ಮಿಕರ ಕೂಲಿ ದರ) ಹೆಚ್ಚಾದರೆ, ಉತ್ಪಾದನಾವೆಚ್ಚವೂ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಉದ್ಯಮಘಟಕದ ಯಾವುದೇ ಉತ್ಪನ್ನದ ಮಟ್ಟದಲ್ಲಿ ಸರಾಸರಿ ವೆಚ್ಚವು ಹೆಚ್ಚಾಗುವುದರೊಂದಿಗೆ ಸೀಮಾಂತ ವೆಚ್ಚವೂ ಹೆಚ್ಚಾಗುತ್ತದೆ. ಅಂದರೆ, ಇಲ್ಲಿ MC ರೇಖೆ ಎಡಭಾಗಕ್ಕೆ (ಅಥವಾ ಮೇಲ್ಮುಖವಾಗಿ) ಪಲ್ಲಟಗೊಳ್ಳುತ್ತದೆ. ಇದರರ್ಥ ಉದ್ಯಮ ಘಟಕದ ಪೂರೈಕೆ ರೇಖೆಯ ಎಡಕ್ಕೆ ಪಲ್ಲಟಗೊಳ್ಳುತ್ತದೆ; ಯಾವುದೇ ನೀಡಿದ ಮಾರುಕಟ್ಟೆ ಬೆಲೆಯಲ್ಲಿ ಉದ್ಯಮಘಟಕವು ಈಗ ಕಡಿಮೆ ಪ್ರಮಾಣದಲ್ಲಿ ಉತ್ಪನ್ನದ ಘಟಕಗಳನ್ನು ಪೂರೈಸುತ್ತದೆ.
ಘಟಕ ತೆರಿಗೆ Unit Tax
ಸರಕು ಉತ್ಪಾದನೆಯ ಮಾರಾಟದ ಪ್ರತಿ ಘಟಕದ ಮೇಲೆ ಸರ್ಕಾರವು ವಿಧಿಸುವ ತೆರಿಗೆಗೆ ಘಟಕ ತೆರಿಗೆ ಎನ್ನುತ್ತೇವೆ. ಉದಾಹರಣೆಗೆ, ಸರ್ಕಾರ ಹೇರಿದ ಘಟಕ ತೆರಿಗೆ ರೂ. 2 ಆಗಿದೆ ಎಂದು ಕೊಳ್ಳೋಣ. ಆಗ ಉದ್ಯಮ ಘಟಕ 10 ಘಟಕಗಳನ್ನು ಉತ್ಪಾದಿಸಿ ಮತ್ತು ಮಾರಾಟ ಮಾಡಿದರೆ, ಉದ್ಯಮ ಘಟಕ ಸರ್ಕಾರಕ್ಕೆ ಪಾವತಿಸಬೇಕಾದ ಒಟ್ಟು 10 x ರೂ.2 = ರೂ.20 ಆಗಿದೆ.
FAQ :
ಮಾರುಕಟ್ಟೆ ಬೆಲೆ ಮತ್ತು ಉತ್ಪಾದನಾ ಘಟಕದ ಉತ್ಪನ್ನ ಮಟ್ಟಗಳ ನಡುವಿನ ಸಂಬಂಧವನ್ನು ತೋರಿಸುವ ಸಮಾನಾಂತರ ಸರಳ ರೇಖೆಯನ್ನು ಬೆಲೆರೇಖೆ” ಎನ್ನುತ್ತೇವೆ. ಬೆಲೆರೇಖೆಯನ್ನು ಉದ್ಯಮ ಘಟಕ ಎದುರಿಸುವ ಬೇಡಿಕೆ ರೇಖೆ ಎಂದು ಕೂಡ ಕರೆಯುವರು.
ವಿವಿಧ ಮಾರುಕಟ್ಟೆ ಬೆಲೆಗಳಲ್ಲಿ ಉದ್ಯಮ ಘಟಕವು ಉತ್ಪಾದಿಸಲು ಬಯಸುವ ಉತ್ಪನ್ನ ಪೂರೈಕೆ ರೇಖೆಯು ತೋರಿಸುತ್ತದೆ. ಮಾರುಕಟ್ಟೆ ಬೆಲೆ ಎರಡು ಮೌಲ್ಯಗಳಿಗೆ ಅಲ್ಪಾವಧಿಯಲ್ಲಿ ಉದ್ಯಮ ಘಟಕ ಲಾಭ ಗರಿಷ್ಠಗೊಳಿಸುವ ಉತ್ಪನ್ನ ಮಟ್ಟವನ್ನು ನಿರ್ಧರಿಸುತ್ತದೆ,
ಇತರೆ ವಿಷಯಗಳು :
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.