ದ್ವಿತೀಯ ಪಿ.ಯು.ಸಿ ಉತ್ಪಾದನೆ ಮತ್ತು ವೆಚ್ಚಗಳು ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, 2nd Puc Economics Chapter 3 Notes Question Answer Pdf Download in Kannada Medium Kseeb Solutions For Class 12 Economics Chapter 3 Notes 2nd Puc Economics 3rd Lesson Question Answer Mcq Pdf in Kannada 2nd Puc Utpadane Mattu Vecchagalu Economics Notes Question Answer Pdf 2nd Puc Economics 3rd Chapter Notes Kannada Medium Production and Costs Notes in Kannada
2nd Puc Economics Chapter 3 Notes in Kannada
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ಒಟ್ಟು ಉತ್ಪನ್ನ ಎಂದರೇನು?
ಒಂದು ನಿರ್ದಿಷ್ಟ ಅವಧಿಯಲ್ಲಿ ಅಂದರೆ ಸಾಮಾನ್ಯವಾಗಿ ಒಂದು ವರ್ಷದಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಪ್ರಮಾಣವನ್ನು ಒಟ್ಟು ಉತ್ಪನ್ನ ಎನ್ನುವರು.
2. ಸರಾಸರಿ ಉತ್ಪನ್ನ ಎಂದರೇನು?
ಬದಲಾಗುವ ಉತ್ಪದನಾಂಗಗಳ ಪ್ರತಿ ಘಟಕದ `ಉತ್ಪನ್ನವನ್ನು ಸರಾಸರಿ ಉತ್ಪನ್ನ ಎನ್ನುವರು.
3. ಸೀಮಾಂತ ಉತ್ಪನ್ನದ ಅರ್ಥವನ್ನು ನೀಡಿ.
ಪ್ರತಿ ಹೆಚ್ಚುವರಿ ಘಟಕದ ಹೆಚ್ಚಳದಿಂದ ಒಟ್ಟು ಉತ್ಪನ್ನಕ್ಕೆ ಸೇರ್ಪಡೆಯಾಗುವ ಉತ್ಪನ್ನವನ್ನು ಸೀಮಾಂತ ಉತ್ಪನ್ನ ಎನ್ನುವರು.
4. ಉದ್ಯಮ ಘಟಕದ ವೆಚ್ಚ ಬಿಂಬಕದ ಅರ್ಥವನ್ನು ಬರೆಯಿರಿ.
ಉತ್ಪಾದನಾಂಗಗಳ ಬೆಲೆಯ ಆಧಾರದ ಮೇಲೆ ಅತ್ಯಂತ ಕಡಿಮೆ ವೆಚ್ಚದ ಆದಾನ ಸಂಯೋಜನೆಯನ್ನು ಆಯ್ಕೆ ಮಾಡಿ ಕೊಳ್ಳುತ್ತದೆ, ಹೀಗಾಗಿ ಪ್ರತಿ ಉತ್ಪನ್ನದ ಮಟ್ಟಕ್ಕೆ ಕನಿಷ್ಟ ವೆಚ್ಚದ ಆದಾನ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡ ವೆಚ್ಚವೇ ವೆಚ್ಚ ಬಿಂಬಕವಾಗಿದೆ.
5. ಒಟ್ಟು ಸ್ಥಿರ ವೆಚ್ಚ ಎಂದರೇನು?
ಅಲ್ಪಾವಧಿಯ ಕೆಲವೊಂದು ಉತ್ಪಾದನಾಂಗಗಳು ಬದಲಾಗುವುದಿಲ್ಲ. ಆದ್ದರಿಂದ ಅವು ಸ್ಥಿರವಾಗಿರುತ್ತದೆ. ಈ ಸ್ಥಿರ ಆದಾನಗಳನ್ನು ಬಳಸಿಕೊಳ್ಳಲು ಉದ್ಯಮವು ಮಾಡುವ ವೆಚ್ಚವನ್ನು ಒಟ್ಟು ಸ್ಥಿರ ವೆಚ್ಚ ಎನ್ನುವರು.
6. ಸರಾಸರಿ ಸ್ಥಿರ ವೆಚ್ಚ ಎಂದರೇನು?
ಒಟ್ಟು ಸರಾಸರಿ ಬದಲಾಗುವ ವೆಚ್ಚ ಮತ್ತು ಒಟ್ಟು ಸ್ಥಿರ ವೆಚ್ಚಗಳ ಮೊತ್ತವು ಸರಾಸರಿ ವೆಚ್ಚವಾಗಿದೆ.
7. ಸಮ ಉತ್ಪನ್ನ ರೇಖೆ ಎಂದರೇನು?
ಒಂದೇ ಮಟ್ಟದ ಉತ್ಪಾದನೆಯನ್ನು ನೀಡುವ ಎರಡು ಆದಾನಗಳ ಎಲ್ಲಾ ಸಾಧ್ಯತಾ ಸಂಯೋಜನೆಗಳ ರೇಖೆಯನ್ನು ಸಮ ಉತ್ಪನ್ನ ರೇಖೆಯೆನ್ನುತ್ತೇವೆ.
8. ಅಲ್ಪಾವದಿ ವೆಚ್ಚಗಳನ್ನು ಹೆಸರಿಸಿ. ಅಲ್ಪಾವಧಿ ವೆಚ್ಚಗಳೆಂದರೆ –
1) ಸ್ಥಿರ ವೆಚ್ಚ
2) ಒಟ್ಟು ಬದಲಾಗುವ ವೆಚ್ಚ
3) ಒಟ್ಟು ವೆಚ್ಚ
4) ಸರಾಸರಿ ಸ್ಥಿರ ವೆಚ್ಚ
9. ಧೀರ್ಘಾವಧಿ ವೆಚ್ಚಗಳಾವುವು?
ಧೀರ್ಘಾವಧಿ ಒಳಗೊಂಡ ವೆಚ್ಚಗಳೆಂದರೆ –
1) ಸದಾವಕಾಶದ ವೆಚ್ಚ
2) ನೈಜ ವೆಚ್ಚ
3) ಖಾಸಗಿ ವೆಚ್ಚ
4) ಸಾಮಾಜಿಕ ವೆಚ್ಚ
10. ಸಮ ಉತ್ಪನ್ನ ರೇಖೆಯನ್ನು ರೇಖಾಚಿತ್ರದ ಸಹಾಯದಿಂದ ವಿವರಿಸಿ.
ಒಂದೇ ಗರಿಷ್ಠ ಮಟ್ಟದ ಉತ್ಪಾದನೆಯನ್ನು ನೀಡುವ ಎರಡು ಘಟಕ 2 ಅಧಾನಗಳ ಎಲ್ಲಾ ಸಂಭವನೀಯ ಸಂಯೋಜನೆಗಳ ಸಮೂಹವನ್ನು ಸಮ ಉತ್ಪನ್ನ ರೇಖೆಯೆನ್ನುತ್ತೇವೆ. ಪ್ರತಿಯೊಂದು ಸಮ ಉತ್ಪನ್ನ ರೇಖೆಯು ಒಂದು ನಿರ್ದಿಷ್ಟ ಮಟ್ಟದ ಉತ್ಪನ್ನವನ್ನು ಪ್ರತಿನಿಧಿಸುತ್ತದೆ. ರೇಖಾ ಚಿತ್ರದಲ್ಲಿ ತೋರಿಸಿರುವಂತೆ ಮೂರು ಉತ್ಪನ್ನ ಮಟ್ಟಗಳಿಗೆ ಮೂರು ಸಮ ಉತ್ಪನ್ನ ರೇಖೆಗಳನ್ನು ಹೊಂದಿದ್ದೇವೆ. ಅವೆಂದರೆ – ಉತ್ಪನ್ನಗಳ ಸಮತಲದಲ್ಲಿ, q=q1 q=q2 ಇವೆ. ಉತ್ಪನ್ನಗಳ ಎರಡು ಸಂಯೋಜನೆಗಳಾದ (x11x112) ಮತ್ತು (x111x12) ಗಳು ಒಂದೇ
ಮಟ್ಟದ ಉತ್ಪನ್ನವಾದ 4 ಅನ್ನು ನೀಡುತ್ತದೆ. ನಾವು ಉತ್ಪಾದನಾಂಗ 2ನ್ನು xಗೆ ನಿರ್ದಿಷ್ಟಗೊಳಿಸಿದಾಗ ಉತ್ಪಾದನಾಂಗ 1 ನ್ನು X ಗೆ ಹೆಚ್ಚಿಸಿದಾಗ ಉತ್ಪನ್ನವು ಹೆಚ್ಚುತ್ತದೆ, ಮತ್ತು ಉತ್ಪನ್ನ ರೇಖೆಯನ್ನು ತಲುಪುತ್ತದೆ. 4 = ಸೀಮಾಂತ ಉತ್ಪನ್ನಗಳು ಧನಾತ್ಮಕವಾಗಿರುವಾಗ, ಅಧಿಕ ಪ್ರಮಾಣದ ಒಂದು ಆದಾನದೊಂದಿಗೆ ಕಡಿಮೆ ಮಟ್ಟದ ಉಳಿದ ಉತ್ಪಾದನಾಂಗವನ್ನು ಕಡಿಮೆ ಉಪಯೋಗಿಸಿ ಅದೇ ಮಟ್ಟದ ಉತ್ಪನ್ನವನ್ನು ಉತ್ಪಾದಿಸಬಹುದು. ಆದ್ದರಿಂದ ಸಮ ಉತ್ಪನ್ನ ರೇಖೆ ಋಣಾತ್ಮಕ ಇಳಿಜಾರು ರೇಖೆಯಾಗಿರುತ್ತದೆ.
11. ಧೀರ್ಘಾವಧಿ ವೆಚ್ಚಗಳನ್ನು ವಿವರಿಸಿ.
ಧೀರ್ಘಾವಧಿ ವೆಚ್ಚಗಳನ್ನು ಈ ಕೆಳಕಂಡ ರೇಖಾಚಿತ್ರದ ಸಹಾಯದಿಂದ ವಿವರಿಸಬಹುದಾಗಿದೆ.
LAC ಮತ್ತು LMC ಗಳು ಏರಿಕೆಯ ಪ್ರತಿಫಲಗಳ ಪ್ರಮಾಣದ ಕಾರ ನಿರ್ವಹಿಸಿರುವುದರಿಂದ ಆರಂಭದಲ್ಲಿ ಇಳಿಕೆಯಾಗುತ್ತದೆ. ಸ್ಥಿರ ಪ್ರತಿಫಲಗಳ ಪ್ರಮಾಣದ ನಿಯಮ ಕಾರ ನಿರ್ವಹಿಸುವುದರಿಂದ ಅವು ಮಧ್ಯದಲ್ಲಿ ಸಮತಲವಾಗಿರುತ್ತವೆ. LMC ರೇಖೆಯು LAC ರೇಖೆಯನ್ನು ಅದರ ಕನಿಷ್ಟ ಬಿಂದುವಿನಲ್ಲಿ ಅಥವಾ ಕೆಳಭಾಗದಿಂದ ಛೇದಿಸುತ್ತದೆ. LMC ಮತ್ತು LAC ಗಳು ಇಳಿಕೆಯ ಪ್ರತಿಫಲಗಳ ಪ್ರಮಾಣ ನಿಯಮವು DRS ಅನ್ವಯವಾಗುವುದರಿಂದ ಹೆಚ್ಚಾಗುತ್ತದೆ.
12. ವಿವಿಧ ಅಲ್ಪಾವಧಿ ವೆಚ್ಚಗಳನ್ನು ಕೋಷ್ಟಕದ ಸಹಾಯದಿಂದ ವಿವರಿಸಿ.
ವಿವಿಧ ಅಲ್ಪಾವಧಿ ವೆಚ್ಚಗಳೆಂದರೆ –
1) ಒಟ್ಟು ಸ್ಥಿರ ವೆಚ್ಚ (TFC)
2) ಒಟ್ಟು ಬದಲಾಗುವ ವೆಚ್ಚ (TVC)
3) ಒಟ್ಟು ವೆಚ್ಚ (TC) 4) ಸರಾಸರಿ ಸ್ಥಿರ ವೆಚ್ಚ (AFC)
5) ಸರಾಸರಿ ಬದಲಾಗುವ ವೆಚ್ಚ (AVC) ಮತ್ತು
6) ಸರಾಸರಿ ವೆಚ್ಚ ‘AC’ ಗಳು.
7) ಸೀಮಾಂತ ವೆಚ್ಚ (MC)
1) ಒಟ್ಟು ಸ್ಥಿರ ವೆಚ್ಚ (TFC): ಅಲ್ಪಾವಧಿಯಲ್ಲಿ ಸ್ಥಿರ ಉತ್ಪಾದನಾಂಗಗಳಿಗೆ ಪಾವತಿ ಮಾಡಲಾದ ವೆಚ್ಚವನ್ನು ಸ್ಥಿರ ವೆಚ್ಚವೆನ್ನುವರು. ಅದು ಉತ್ಪಾದನೆ ಮಟ್ಟದ ಬದಲಾವಣೆಯೊಂದಿಗೆ ಬದಲಾಗುವುದಿಲ್ಲ. ಉತ್ಪನ್ನದ ಪ್ರಮಾಣದೊಂದಿಗೆ ಯಾವ ವೆಚ್ಚ ಬದಲಾಗುವುದಿಲ್ಲವೋ ಅದುವೇ ಸ್ಥಿರ ವೆಚ್ಚ ಎಂಬುದಾಗಿ ಅಂಟಲ್ ಮುರಾದ್ ವ್ಯಾಖ್ಯಾನಿಸಿದ್ದಾರೆ.
ಉದಾಹರಣೆಗೆ :
ಖಾಯಂ ಉದ್ಯೋಗಿಗಳ ವೇತನ, ವಿಮಾ ಪ್ರೀಮಿಯಂ, ಕಟ್ಟಡ ನಿರ್ವಹಣಾ ವೆಚ್ಚ, ಪರವಾನಗಿ ಶುಲ್ಕ ಇತ್ಯಾದಿಗಳು ಸ್ಥಿರ ವೆಚ್ಚಕ್ಕೆ ಉದಾಹರಣೆಯಾಗಿದೆ.
2) ಒಟ್ಟು ಬದಲಾಗುವ ವೆಚ್ಚ (TVC): ಉತ್ಪಾದನೆಯಲ್ಲಿ ಬದಲಾಗುವ ಉತ್ಪಾದನಾಂಗಗಳಿಗೆ ಮಾಡಲಾಗುವ ಪಾವತಿಯನ್ನು ಬದಲಾಗುವ ವೆಚ್ಚ ಎನ್ನುವರು. ಉತ್ಪನ್ನದ ಪ್ರಮಾಣದೊಂದಿಗೆ ಅದು ಬದಲಾಗುತ್ತದೆ. ಬದಲಾಗುವ ವೆಚ್ಚವನ್ನು ವಿಶೇಷ ವೆಚ್ಚ ನೇರವೆಚ್ಚ ಅಥವಾ ಮೂಲವೆಚ್ಚವೆಂದೂ ಕರೆಯುವರು.
ಉದಾಹರಣೆಗೆ :
ತಾತ್ಕಾಲಿಕ ಶ್ರಮಿಕರ ಕೂಲಿ, ವಿದ್ಯುತ್ ವೆಚ್ಚ ಇಂಧನದ ವೆಚ್ಚ ಒಟ್ಟು ಬದಲಾಗುವ ವೆಚ್ಚಕ್ಕೆ ಉದಾಹರಣೆಯಾಗಿದೆ.
3) ಒಟ್ಟು ವೆಚ್ಚ (TC):
ಒಟ್ಟು ವೆಚ್ಚವು ಒಟ್ಟು ಬದಲಾಗುವ ವೆಚ್ಚ ಮತ್ತು ಒಟ್ಟು ಸ್ಥಿರ ವೆಚ್ಚಗಳನ್ನು ಒಳಗೊಂಡಿದೆ. ಒಟ್ಟು ವೆಚ್ಚವನ್ನು TC= TFC + TVCಎಂದು ಬರೆಯಬಹುದಾಗಿದೆ.
4) ಸರಾಸರಿ ಸ್ಥಿರ ವೆಚ್ಚ (AFC): ಉತ್ಪಾದಿಸಲ್ಪಟ್ಟ ಸರಕಿನ ಪ್ರತಿಘಟಕದ ಸ್ಥಿರ ವೆಚ್ಚವನ್ನು ಸರಾಸರಿ ಸ್ಥಿರ ವೆಚ್ಚವೆನ್ನುವರು. ಒಟ್ಟು ಸ್ಥಿರ ವೆಚ್ಚವನ್ನು ಒಟ್ಟು ಉತ್ಪಾದಿಸಲಾದ ಘಟಕಗಳಿಂದ ಭಾಗಿಸುವ ಮೂಲಕ ಪಡೆಯುತ್ತೇವೆ. ಆದುದರಿಂದ
ಅಂದರೆ = AFC = TFC/Q
AFC = ಸರಾಸರಿ ಸ್ಥಿರ ವೆಚ್ಚ
TFC = ಒಟ್ಟು ಸ್ಥಿರ ವೆಚ್ಚ
Q= ಉತ್ಪಾದಿಸಲಾದ ಘಟಕಗಳ ಸಂಖ್ಯೆ.
TVC= ಒಟ್ಟು ಬದಲಾಗುವ ವೆಚ್ಚ
5) ಸರಾಸರಿ ಬದಲಾಗುವ ವೆಚ್ಚ (AVC):
ಉತ್ಪಾದಿಸಲ್ಪಟ್ಟ ಸರಕಿನ ಪ್ರತಿ ಘಟಕದ ಬದಲಾಗುವ ವೆಚ್ಚವನ್ನು ಸರಾಸರಿ ಬದಲಾಗುವ ವೆಚ್ಚವನ್ನುವರು. ಒಟ್ಟು ಬದಲಾಗುವ ವೆಚ್ಚವನ್ನು ಉತ್ಪಾದಿಸಲಾದ ಘಟಕಗಳ ಸಂಖ್ಯೆಯಿಂದ ಭಾಗಿಸುವ ಮೂಲಕ ಇದನ್ನು ಪಡೆಯುತ್ತೇವೆ.
AFC= TVC / Q
13. TP MP ಮತ್ತುAP ರೇಖೆಗಳ ಆಕಾರಗಳನ್ನು ವಿವರಿಸಿ.
ಮೇಲ್ಕಂಡ ರೇಖಾ ಚಿತ್ರದಲ್ಲಿ ‘0’ ಮೂಲ ಬಿಂದುವಿನಿಂದ “R” ಬಿಂದುವಿನವರೆಗೆ TP ಯು ಒಟ್ಟು ಉತ್ಪನ್ನ ರೇಖೆಯ ಇಳಿಜಾರಿನಲ್ಲಿ ಏರಿಕೆಯ ದರದಲ್ಲಿ ಹೆಚ್ಚಾಗುತ್ತದೆ, ಇದು ಮೊದಲ ಹಂತವಾಗಿದೆ. ಈ ಹಂತದಲ್ಲಿ ಬದಲಾಗುವ ಉತ್ಪಾದನಾಂಗದ ಸೀಮಾಂತ ಉತ್ಪನ್ನ ರೇಖೆಯು ಏರಿಕೆಯಾಗುತ್ತದೆ. ಮತ್ತು ಅನಂತರ ಇಳಿಯುತ್ತದೆ. ಇಲ್ಲಿ ಸರಾಸರಿ ಉತ್ಪನ್ನ ರೇಖೆಯು ಏರುತ್ತಾ ಹೋಗುತ್ತದೆ ಮತ್ತು ಅದು MP ರೇಖೆಯ ಕೆಳೆಗೆ ಇರುತ್ತದೆ. ಎರಡನೆ ಹಂತದಲ್ಲಿ ಒಟ್ಟು ಉತ್ಪನ್ನ ಹೆಚ್ಚಾದರೂ ಅದು ಇಳಿಕೆಯ ದರದಲ್ಲಿ ಆಗುತ್ತದೆ. Tಬಿಂದುವಿನವರೆಗೆ ಎರಡನೇ ಹಂತದಲ್ಲಿ ಬದಲಾಗುವ ಘಟಕದ , MP ಮತ್ತು AP ಗಳು ಇಳಿಕೆಯಾಗುತ್ತದೆ. ಆದರೆ ಧನಾತ್ಮಕವಾಗಿರುತ್ತವೆ. ಈ ಹಂತದಲ್ಲಿ ಒಟ್ಟು ಉತ್ಪಾದನೆಯು ಗರಿಷ್ಟ ಬಿಂದುವನ್ನು T ಬಿಂದು ತಲುಪುವವರೆಗೂ ಹೆಚ್ಚುತ್ತದೆ. ಹಾಗೂ ಅಲ್ಲಿಗೆ ಎರಡನೇ ಹಂತ ಮುಕ್ತಾಯವಾಗುತ್ತದೆ. TP ರೇಖೆಯ ಬಿಂದುವಿನಲ್ಲಿ ತನ್ನ ದಿಕ್ಕನ್ನು ಬಾಹ್ಯಗೋಲಾಕಾರದಿಂದ ಅಂತ ಗೋಲಾಕಾರಕ್ಕೆ ಬದಲಾಯಿಸುವುದೋ ಅದನ್ನು ವಿಭಜಕ ಬಿಂದು ಎನ್ನುವರು.
ಮೂರನೇ ಹಂತದಲ್ಲಿ TP ರೇಖೆಯ ಇಳಿಜಾರು ಕೆಳಮುಖವಾಗಿರುತ್ತದೆ. Tಬಿಂದುವಿನಿಂದ MPರೇಖೆಯು Uಬಿಂದುವಿನಲ್ಲಿ ಶೂನ್ಯಕ್ಕೆ ಇಳಿಯುತ್ತದೆ ಮತ್ತು ಅನಂತರ ಋಣಾತ್ಮಕವಾಗಿರುತ್ತದೆ. ಅದು ಬದಲಾಗುವ ಉತ್ಪಾದನಾಂಗದ ಬಳಕೆ (ಶ್ರಮ) ಹೆಚ್ಚಾದಂತೆ Xಅಕ್ಷೆಯ ಕೆಳಗೆ ಹೋಗುತ್ತದೆ.
14. ಬದಲಾಗುವ ಪರಿಮಾಣಗಳ ನಿಯಮವನ್ನು ರೇಖಾ ಚಿತ್ರದ ಸಹಾಯದಿಂದ ವಿವರಿಸಿ
ಬದಲಾಗುವ ಪರಿಮಾಣದ ನಿಯಮವನ್ನು ರೇಖಾ ಚಿತ್ರದ ಮೂಲಕ ಈ ರೀತಿ ವಿವರಿಸಬಹುದಾಗಿದೆ.
ಬದಲಾಗುವ ಪರಿಮಾಣಗಳ ನಿಯಮಗಳೆಂದರೆ –
1) ಏರಿಕೆಯ ಪ್ರತಿಫಲಗಳು
2) ಇಳಿಮುಖವಾಗುವ ಪ್ರತಿಫಲಗಳು
3) ಋಣಾತ್ಮಕ ಪ್ರತಿಫಲಗಳು
ಮೇಲ್ಕಂಡ ರೇಖಾಚಿತ್ರದಲ್ಲಿ ತೋರಿಸಿರುವಂತೆ ‘O’ ಮೂಲಬಿಂದುವಿನಿಂದ R ಬಿಂದುವಿನವರೆಗೆ TPಯು ಒಟ್ಟು ಉತ್ಪನ್ನ ರೇಖೆ ಇಳಿಜಾರಿನಲ್ಲಿ ಏರಿಕೆಯ ದರದಲ್ಲಿ ಹೆಚ್ಚಾಗುತ್ತದೆ. ಇದು ಮೊದಲ ಹಂತವಾಗಿದೆ. ಈ ಹಂತದಲ್ಲಿ ಬದಲಾಗುವ ಉತ್ಪಾದನಾಂಗದ ಸೀಮಾಂತ ಉತ್ಪನ್ನ ರೇಖೆಯು ಏರಿಕೆಯಾಗುತ್ತದೆ ಮತ್ತು ಅನಂತರ ಇಳಿಯುತ್ತದೆ. ಇಲ್ಲಿ ಸರಾಸರಿ, ಉತ್ಪನ್ನ ರೇಖೆಯು ಏರುತ್ತಾ ಹೋಗುತ್ತದೆ ಹಾಗೂ ಅದು (MP ರೇಖೆಯ ಕೆಳಗೆ ಇರುತ್ತದೆ.
ಎರಡನೆ ಹಂತದಲ್ಲಿ ಒಟ್ಟು ಉತ್ಪನ್ನ ಹೆಚ್ಚಾದರೂ ಅದು ಇಳಿಕೆಯ ದರದಲ್ಲಿ ಆಗುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ Tಬಿಂದುವಿನವರೆಗೆ ಎರಡನೆ ಹಂತದಲ್ಲಿ ಬದಲಾಗುವ ಘಟಕದ MPಮತ್ತು APಗಳು ಇಳಿಕೆಯಾಗುತ್ತದೆ. ಆದರೆ ಅದು ಧನಾತ್ಮಕವಾಗಿರುತ್ತದೆ. ಈ ಹಂತದಲ್ಲಿ ಒಟ್ಟು ಉತ್ಪಾದನೆಯು ಗರಿಷ್ಟ ಬಿಂದುವನ್ನು Tಬಿಂದುವವರೆಗೂ ಹೆಚ್ಚುತ್ತದೆ ಹಾಗೂ ಅಲ್ಲಿಗೆ ಎರಡನೆ ಹಂತ ಮುಕ್ತಾಯವಾಗುತ್ತದೆ.
TP ರೇಖೆಯ ಯಾವ ಬಿಂದುವಿನಲ್ಲಿ ತನ್ನ ದಿಕ್ಕನ್ನು ಬಾಹ್ಯಗೋಲಾಕಾರಿದಿಂದ ಅಂತರ್‌ಗೋಲಾಕಾರಕ್ಕೆ ಬದಲಾಯಿಸುತ್ತದೆಯೋ ಅದನ್ನು ವಿಭಜಕ ಬಿಂದು ಎನ್ನುವರು. F ಬಿಂದು ಮೂರನೇ ಹಂತದಲ್ಲಿ TP ರೇಖೆಯ ಇಳಿಜಾರು ಕೆಳಮುಖವಾಗುತ್ತದೆ. 1ಬಿಂದುವಿನಿಂದ MP ರೇಖೆಯು Uಬಿಂದುವಿನಲ್ಲಿ ಶೂನ್ಯಕ್ಕೆ ಇಳಿಯುತ್ತದೆ ಮತ್ತು ಅನಂತರ ಋಣಾತ್ಮಕವಾಗಿರುತ್ತದೆ. ಅದು ಬದಲಾಗುವ ಉತ್ಪಾದನಾಂಗದ (ಬಳಕೆ) ಶ್ರಮ ಹೆಚ್ಚಾದಂತೆ ‘X’ ಅಕ್ಷಯ ಕೆಳಗೆ ಹೋಗುತ್ತದೆ.
15. ‘ಉತ್ಪಾದನಾ ಬಿಂಬಕದ ಪರಿಕಲ್ಪನೆಯನ್ನು ವಿವರಿಸಿ.
ಒಂದು ಉದ್ಯಮ ಘಟಕವು ಬಳಸಿದ ಆದಾನಗಳು ಮತ್ತು ಉತ್ಪಾದಿಸಿದ ಉತ್ಪನ್ನಗಳ ನಡುವಿನ ಸಂಬಂಧ ಸೂಚಕವೇ “ಉತ್ಪಾದನಾ ಬಿಂಬಕ” ವಾಗಿದೆ.
ಅಂದರೆ ಆದಾನಗಳ ವಿವಿಧ ಸಂಯೋಜನೆಗಳನ್ನು ಬಳಸಿಕೊಂಡು ಉತ್ಪಾದಿಸಬಹುದಾದ ಗರಿಷ್ಟ ಮಟ್ಟದ ಉತ್ಪಾದನೆಯನ್ನು “ಉತ್ಪದನಾ ಬಿಂಬಕ” ಎಂದು ಗುರ್ತಿಸಬಹುದಾಗಿದೆ. ಇಲ್ಲಿ ಒಂದು ಉದ್ಯಮವು ಉತ್ಪಾದನಾ ಪ್ರಕ್ರಿಯೆಯಲ್ಲಿ ಉತ್ಪಾದನಾಂಗಗಳೆಂದು ಕರೆಯಲಾಗಿದೆ.
ಉತ್ಪಾದನಾಂಗ 1 ಮತ್ತು ಉತ್ಪಾದನಾಂಗ 2 ನ್ನು ಬಳಸಿಕೊಂಡು ನಮ್ಮ ಉತ್ಪಾದನಾ ಬಿಂಬಕವು ಗರಿಷ್ಟ ಮಟ್ಟದ ಉತ್ಪದನೆಯನ್ನು ಬಳಸಬಹುದು.
ಉತ್ಪಾದನಾ ಬಿಂಬಕವನ್ನು ಹೀಗೆ ಬರೆಯಬಹುದು q= f(x1x₂)
16. ಆದಾನದ ಒಟ್ಟು ಉತ್ಪನ್ನ ಎಂದರೇನು ?
ಎಲ್ಲ ಆದಾನಗಳನ್ನು ಸ್ಥಿರವಾಗಿರಿಸಿ ಬದಲಾಗುವ ಆದಾನ ಮತ್ತು ಉತ್ಪನ್ನಗಳ ನಡುವಿನ ಸಂಬಂಧವನ್ನು ಸಾಮಾನ್ಯವಾಗಿ ಆದಾನದ ಒಟ್ಟು ಉತ್ಪನ್ನ ಎನ್ನಲಾಗುತ್ತದೆ.
2nd Puc Economics Chapter 3 Notes
17. ಆದಾನದ ಸರಾಸರಿ ಉತ್ಪನ್ನ ಎಂದರೇನು ?
ಬದಲಾಗುವ ಪ್ರತಿ ಘಟಕದ ಆದಾನದ ಉತ್ಪನ್ನವನ್ನು ಸರಾಸರಿ ಉತ್ಪನ್ನ ಎಂದು ವ್ಯಾಖ್ಯಾನಿಸಿದ್ದಾರೆ. ಅದರ ಲೆಕ್ಕಾಚಾರಕ್ಕಾಗಿ ಈ ಸೂತ್ರವನ್ನು ಬಳಸುವರು.
AP1= TP/X1 = f(x1x2)/X1
18. ಆದಾನದ ಸೀಮಾಂತ ಉತ್ಪನ್ನ ಎಂದರೇನು ?
ಇತರ ಎಲ್ಲಾ ಆದಾನಗಳು ಸ್ಥಿರವಾಗಿದ್ದು ಒಂದು ಆದನದ ಪ್ರತಿ ಘಟಕದ ಬದಲಾವಣೆಗೆ ಉತ್ಪನ್ನದಲ್ಲಾಗುವ ಬದಲಾವಣೆಯನ್ನು ಸೀಮಾಂತ ಉತ್ಪನ್ನ ಎಂದು ವ್ಯಾಖ್ಯಾನಿಸಲಾಗಿದೆ.
19. ಆದಾನದ ಸೀಮಾಂತ ಉತ್ಪನ್ನ ಹಾಗೂ ಒಟ್ಟು ಉತ್ಪನ್ನದ ನಡುವಿನ ಸಂಬಂಧವನ್ನು ವಿವರಿಸಿ.
ಆದಾನದ ಸೀಮಾಂತ ಉತ್ಪನ್ನ ಹಾಗೂ ಒಟ್ಟು ಉತ್ಪನ್ನದ ನಡುವಿನ ಸಂಬಂಧವನ್ನು ಹೀಗೆ ವಿವರಿಸಲಾಗಿದೆ.
1) ಸೀಮಾಂತ ಉತ್ಪನ್ನಗಳು ಒಟ್ಟು ಉತ್ಪನ್ನಕ್ಕೆ ಸೇರ್ಪಡೆಯಾಗಿದೆ. ಯವುದೇ ಮಟ್ಟದ ಆದಾನದ ಬಳಕೆಗೆ ಆ ಮಟ್ಟದವರೆಗಿನ ಆದಾನದ ಪ್ರತಿಯೊಂದು ಘಟಕಗಳ ಸೀಮಂತ ಉತ್ಪನ್ನಗಳ ಮೊತ್ತವು ಆ ಮಟ್ಟದಲ್ಲಿನ ಆದಾನದ ಒಟ್ಟು ಉತ್ಪನ್ನವನ್ನು ನೀಡುತ್ತದೆ, ಆದ್ದರಿಂದ ಒಟ್ಟು ಉತ್ಪನ್ನವು ಸೀಮಾಂತ ಉತ್ಪನ್ನಗಳ ಮೊತ್ತವಾಗಿದೆ.
2) ಆದಾನದ ಯಾವುದೇ ಮಟ್ಟದ ಬಳಕೆಯ ಸರಾಸರಿ ಉತ್ಪನ್ನವು ಆ ಆದಾನದ ಆ ಮಟ್ಟದವರೆಗಿನ ಎಲ್ಲ ಸೀಮಾಂತ ಉತ್ಪನ್ನಗಳ ಸರಾಸರಿಯಾಗಿದೆ.
3) ಬದಲಾಗುವ ಆದಾನದ ಸರಾಸರಿ ಮತ್ತು ಸೀಮಾಂತ ಉತ್ಪನ್ನವನ್ನು ಕ್ರಮವಾಗಿ ಅದರ ಸರಾಸರಿ ಮತ್ತು ಸೀಮಾಂತ ಪ್ರತಿಫಲ ಎಂದು ಉಲ್ಲೇಖಿಸಲಾಗುತ್ತದೆ.
20. ಅಲ್ಪಾವಧಿ ಮತ್ತು ಧೀರ್ಘಾವಧಿ ಪರಿಕಲ್ಪನೆಯನ್ನು ವಿವರಿಸಿ.
ಅಲ್ಪಾವಧಿ ಮತ್ತು ಧೀರ್ಘಾವಧಿಯನ್ನು ದಿನಗಳು, ತಿಂಗಳುಗಳು ಮತ್ತು ವರ್ಷಗಳಲ್ಲಿ ವ್ಯಾಖ್ಯಾನಿಸುವುದು ಸೂಕ್ತವಲ್ಲ ಎಲ್ಲ ಆದಾನಗಳು ಬದಲಾಯಿಸಲು ಸಾಧ್ಯ ಇದೆಯೇ ಇಲ್ಲವೇ ಎಂಬುದನ್ನು ಮಾತ್ರ ಗಮನಿಸುವುದರ ಮೂಲಕ ಅಲ್ಪಾವಧಿ ಮತ್ತು ಧೀರ್ಘಾವಧಿಯನ್ನು ವ್ಯಾಖ್ಯಾನಿಸಬೇಕಾಗಿದೆ. ಉತ್ಪಾದನಾಂಗ ನ್ನು ವಿವಿಧ ಪ್ರಮಾಣದಲ್ಲಿ ಬಳಸಿ ಉತ್ಪಾದಿಸಬಹುದಾದ ಉತ್ಪನ್ನದ ಮಟ್ಟವನ್ನು ತೋರಿಸುವ ಅವಧಿಯನ್ನು ಅಲ್ಪಾವಧಿ ಎಂದು ಕರೆಯುವರು.
ಸ್ಥಿರ ಆದಾನಗಳು ಇಲ್ಲದೆ ಇರುವ ಇಂದು ಉದ್ಯಮವು ವಿಭಿನ್ನ ಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಬಳಸುವ ಅವಧಿಯನ್ನು ಧೀರ್ಘಾವಧಿ ಎನ್ನುವರು. ಧೀರ್ಘಾವಧಿಯು ಅಲ್ಪಾವಧಿಗಿಂತ ಧೀರ್ಘಕಾಲಾವಧಿಯನ್ನು ಸೂಚಿಸುತ್ತದೆ.
21. ಇಳಿಮುಖ ಸೀಮಾಂತ ಉತ್ಪನ್ನ ಎಂದರೇನು ?
ಆದಾನಗಳು ಸ್ಥಿರವಾಗಿದ್ದು ಒಂದು ಆದಾನದ ಬಳಕೆಯು ಹೆಚ್ಚಿಸುತ್ತಾ ಹೋದಂತೆ ಕ್ರಮೇಣವಾಗಿ ಅದರಿಂದ ಸೇರ್ಪಡೆ ಯಾಗುವ ಉತ್ಪನ್ನವು ಇಳಿಯಲು ಪ್ರಾರಂಭವಾಗುತ್ತದೆ. ಇದಕ್ಕೆ ಇಳಿಮುಖ ಸೀಮಾಂತ ಉತ್ಪನ್ನ ಎಂದು ಕರೆಯುವರು.
22 ಬದಲಾಗುವ ಪರಿಣಾಮಗಳೆಂದರೇನು ?
ಒಂದು ಆದಾನದ ಸೀಮಾಂತ ಉತ್ಪನ್ನವು ಆರಂಭದಲ್ಲಿ ಹೆಚ್ಚಾಗುತ್ತದೆ ಮತ್ತು ನಂತರ ಒಂದು ನಿರ್ದಿಷ್ಟ ಮಟ್ಟದ ಬಳಕೆಯ ನಂತರ ಕಡಿಮೆಯಾಗಲು ಪ್ರಾರಂಭವಾಗುತ್ತದೆ, ಇದನ್ನು ಬದಲಾಗುವ ಪರಿಣಾಮಗಳು ಎನ್ನುವರು.
23. ಉತ್ಪಾದನಾ ಬಿಂಬಕವು ಯಾವಾಗ ಸ್ಥಿರ ಪ್ರತಿಫಲನಗಳ ಪ್ರಮಾಣವನ್ನು ತೃಪ್ತಿಗೊಳಿಸುತ್ತದೆ ?
ಎಲ್ಲಾ ಆದಾನಗಳು ಸಮ ಪ್ರಮಾಣದಲ್ಲಿ ಹೆಚ್ಚಿಸಿದಾಗ ಅದೇ ಪ್ರಮಾಣದಲ್ಲಿ ಉತ್ಪನ್ನವು ಹೆಚ್ಚಾಗಿ ಉತ್ಪಾದನಾ ಬಿಂಬಕವು ಸ್ಥಿರ ಪ್ರತಿಫಲನಗಳ ಪ್ರಮಾಣವನ್ನು ತೃಪ್ತಿ ಗೊಳಿಸುತ್ತದೆ.
24. ಉತ್ಪಾದನಾ ಬಿಂಬಕವು ಯವಾಗ ಏರಿಕೆಯ ಪ್ರತಿಫಲನಗಳ ಪ್ರಮಾಣವನ್ನು ತೃಪ್ತಿಗೊಳಿಸುತ್ತದೆ ?
ಎಲ್ಲಾ ಆದಾನಗಳನ್ನು ಸಮ ಪ್ರಮಾಣದಲ್ಲಿ ಹೆಚ್ಚಿಸಿದಾಗ ಉತ್ಪನ್ನವು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಆಗ ಉತ್ಪಾದನಾ ಬಿಂಬಕವು ಏರಿಕೆಯ ಪ್ರತಿಫಲನಗಳ ಪ್ರಮಾಣವನ್ನು ತೃಪ್ತಿಗೊಳಿಸುತ್ತದೆ.
25. ಉತ್ಪಾದನಾ ಬಿಂಬಕವು ಯವಾಗ ಇಳಿಕೆಯ ಪ್ರತಿಫಲನಗಳ ಪ್ರಮಾಣವನ್ನು ತೃಪ್ತಿಗೊಳಿಸುತ್ತದೆ ?
ಉತ್ಪನ್ನದಲ್ಲಾದ ಹೆಚ್ಚಳವು ಉತ್ಪಾದನಾಂಗಗಳ ಪ್ರಮಾಣದಲ್ಲಿನ ಹೆಚ್ಚಳಕ್ಕಿಂತ ಕಡಿಮೆ ಇರುವ ಗುಣಲಕ್ಷಣ ಹೊಂದಿರುವಾಗ ಉತ್ಪಾದನಾ ಬಿಂಬಕವು ಇಳಿಕೆಯ ಪ್ರತಿಫಲನಗಳ ಪ್ರಮಾಣವನ್ನು ತೃಪ್ತಿಗೊಳಿಸುತ್ತದೆ.
26. ವೆಚ್ಚ ಬಿಂಬಕದ ಪರಿಕಲ್ಪನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
ಉತ್ಪಾದನಾಂಗಗಳ ಬೆಲೆಯ ಆಧಾರದ ಮೇಲೆ ಅತ್ಯಂತ ಕಡಿಮೆ ವೆಚ್ಚದ ಆದಾನ ಸಂಯೋಜನೆಯನ್ನು ಆಯ್ಕೆ ಮಾಡಿ ಕೊಳ್ಳುತ್ತದೆ, ಹೀಗಾಗಿ ಪ್ರತಿ ಉತ್ಪನ್ನದ ಮಟ್ಟಕ್ಕೆ ಕನಿಷ್ಟ ವೆಚ್ಚದ ಆದಾನ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡ ವೆಚ್ಚವೇ ವೆಚ್ಚ ಬಿಂಬಕವಾಗಿದೆ.
27. ಒಂದು ಉದ್ಯಮ ಘಟಕದ ಒಟ್ಟು ಸ್ಥಿರ ವೆಚ್ಚ, ಒಟ್ಟು ಬದಲಾಗುವ ವೆಚ್ಚ ಮತ್ತು ಒಟ್ಟು ವೆಚ್ಚಗಳಾವುವು ? ಅವು ಹೇಗೆ ಸಂಬಂಧಪಟ್ಟಿವೆ ?
ಅಲ್ಪಾವಧಿಯ ಕೆಲವೊಂದು ಉತ್ಪಾದನಾಂಗಗಳು ಬದಲಾಗುವುದಿಲ್ಲ ಆದ್ದರಿಂದ ಅವು ಸ್ಥಿರವಾಗಿರುತ್ತದೆ, ಈ ಸ್ಥಿರ ಆದಾನಗಳನ್ನು ಬಳಸಿಕೊಳ್ಳಲು ಉದ್ಯಮವು ಮಾಡುವ ವೆಚ್ಚವನ್ನು ಒಟ್ಟು ಸ್ಥಿರ ವೆಚ್ಚ (TFC) ಎಂದು ಕರೆಯಲಾಗುತ್ತದೆ.
ಅಲ್ಪಾವಧಿಯ ಉದ್ಯಮ ಘಟಕವು ಕೇವಲ ಬದಲಾಗುವ ಆದಾನಗಳನ್ನು ಮಾತ್ರ ಸರಿಹೊಂದಿಸಬಹುದು. ಈ ರೀತಿ ಬದಲಾಗುವ ಆದಾನಗಳನ್ನು ಅಳವಡಿಸಿ ಕೊಳ್ಳಲು ಉದ್ಯಮ ಘಟಕವು ಮಾಡುವ ವೆಚ್ಚವನ್ನು ಒಟ್ಟು ಬದಲಾಗುವ ವೆಚ್ಚ (TVC) ಎಂದು ಕರೆಯಲಾಗುತ್ತದೆ .
ಉತ್ಪನ್ನದ ಉತ್ಪಾದನೆಯನ್ನು ಹೆಚ್ಚಿಸಲು ಉದ್ಯಮದ ಅಧಿಕ ಆದಾನಗಳನ್ನು ಬಳಸುವ ಅಗತ್ಯವಿದೆ, ಆದ್ದರಿಂದ ಉತ್ಪನ್ನವು ಹೆಚ್ಚಿದಂತೆ ಒಟ್ಟು ಬದಲಾಗುವ ವೆಚ್ಚ ಮತ್ತು ಒಟ್ಟು ವೆಚ್ಚ ಹೆಚ್ಚಾಗುತ್ತದೆ.
ಸ್ಥಿರ ಮತ್ತು ಬದಲಾಗುವ ವೆಚ್ಚಗಳನ್ನು ಸೇರಿಸುವುದ ರಿಂದ ನಾವು ಉದ್ಯಮ ಘಟಕದ ಒಟ್ಟು ವೆಚ್ಚವನ್ನು ಸೇರಿಸುವುದರಿಂದ ನಾವು ಉದ್ಯಮ ಘಟಕದ ಒಟ್ಟು ವೆಚ್ಚವನ್ನು ಪಡೆಯಬಹುದು.
ಅಂದರೆ TC TVC+TFC
ಇದನ್ನು ಕೆಳಕಂಡ ರೇಖಾ ಚಿತ್ರದ ಮೂಲಕ ಇವುಗಳ ಸಂಬಂಧವನ್ನು ಸ್ಪಷ್ಟ ಪಡಿಸಬಹುದು.
ಇವುಗಳಲ್ಲಿ ಒಂದು ಉದ್ಯಮ ಘಟಕದ ಒಟ್ಟು ಸ್ಥಿರ ವೆಚ್ಚ TFC, ಒಟ್ಟು ಬದಲಾಗುವ ವೆಚ್ಚ TVC ಮತ್ತು ಒಟ್ಟು ವೆಚ್ಚ TC ರೇಖೆಗಳಾಗಿವೆ. ಒಟ್ಟು ವೆಚ್ಚ ಒಟ್ಟು ಸ್ಥಿರ ವೆಚ್ಚ ಮತ್ತು ಒಟ್ಟು ಬದಲಾಗುವ ವೆಚ್ಚದ ಲಂಬ ಸಾರಾಂಶವಾಗಿದೆ.
ಈ ಮೇಲ್ಕಂಡ ರೇಖಾಚಿತ್ರದಲ್ಲಿ ಒಂದು ವಿಶಿಷ್ಟ ಉಧ್ಯಮದ ಒಟ್ಟು ಸ್ಥಿರ ವೆಚ್ಚ (TFC) ಒಟ್ಟು ಬದಲಾಗುವ ವೆಚ್ಚ (TVC) ಮತ್ತು ಒಟ್ಟು ವೆಚ್ಚ TC ರೇಖೆಗಳ ಆಕಾರಗಳನ್ನು ವಿವರಿಸುತ್ತದೆ. TFC ಸ್ಥಿರವಾಗಿದ್ದು C ಮೌಲ್ಯವನ್ನು ಪಡೆಯುತ್ತದೆ, ಮತ್ತು ಉತ್ಪಾದನೆಯಲ್ಲಿನ ಬದಲಾವಣೆಯೊಂದಿಗೆ ಇದು ಬದಲಾಗುವುದಿಲ್ಲ. ಹೀಗಾಗಿ ಒಂದು ಸಮತಲ ರೇಖೆಯು ವೆಚ್ಚದ ಅಕ್ಷರವನ್ನು C ಬಿಂದುವಿನಲ್ಲಿ ಛೇದಿಸುತ್ತದೆ, q1 ನಲ್ಲಿ TVC ಯು C ಮತ್ತು TC ಯು ಆಗಿರುತ್ತದೆ.
28. ಕೆಲವು ಸ್ಥಿರ ವೆಚ್ಚಗಳು ಧೀರ್ಘಾವಧಿಯಲ್ಲಿ ಇರ ಬಹುದೇ? ಇಲ್ಲದಿದ್ದರೆ ಏಕೆ ?
ಧೀರ್ಘಾವಧಿಯಲ್ಲಿ ಎಲ್ಲಾ ಆದಾನುಗಳು ಬದಲಾಗು ತದೆ, ಆದ್ದರಿಂದ ಒಟ್ಟು ವೆಚ್ಚ ಮತ್ತು ಒಟ್ಟು ಬದಲಾಗುವ ವೆಚ್ಚಗಳು ಜೊತೆಯಾಗಿರುತ್ತವೆ, ಒಂದು ಹಂತದವರೆಗೆ ಎಲ್ಲಾ ವೆಚ್ಚಗಳು ಇರುತ್ತವೆ.
ಆದ್ದರಿಂದ ಧೀರ್ಘಾವದಿಯಲ್ಲಿ ಸ್ಥಿರವೆಚ್ಚಗಳು ಇರುವುದಿಲ್ಲ. ಮುಖ್ಯವಾಗಿ ಧೀರ್ಘಾವಧಿಯಲ್ಲಿ ಯಾವುದೇ ವೆಚ್ಚವು ಸ್ಥಿರವಾಗಿರುವುದಿಲ್ಲ.
29. AVC ರೇಖೆಯು ಕನಿಷ್ಟ ಬಿಂದುವಿನಲ್ಲಿ SMC ರೇಖೆಯು AVC ರೇಖೆಯನ್ನು ಏಕೆ ಛೇದಿಸುತ್ತದೆ ?
AVC ಇಳಿಕೆಯಾಗುವವರೆಗೂ SMC ಯು ಗಿಂತಲೂ ಕಡಿಮೆ ಇರಬೇಕು, AVCಯು ಹೆಚ್ಚಾದಂತೆ SMC ಯು AVC ಗಿಂತಲೂ ಹೆಚ್ಚಾಗಿರಲೇಬೇಕು, ಆದ್ದರಿಂದ AVC ರೇಖೆಯನ್ನು ಅದರ ಕನಿಷ್ಟ ಬಿಂದುವಿನಲ್ಲಿ ಛೇದಿಸುತ್ತದೆ.
30. ಯಾವ ಬಿಂದುವಿನಲ್ಲಿ SMC ರೇಖೆಯು AVC ರೇಖೆಯನ್ನು ಛೇದಿಸುತ್ತದೆ ? ಉತ್ತರವನ್ನು ಸಮರ್ಥಿಸಲು ಕಾರಣ ಕೊಡಿ.
SMC ರೇಖೆಯು AVC ರೇಖೆಗಿಂತ ಕಡಿಮೆ ಇರುತ್ತದೆ, AV ಯು ಹೆಚ್ಚಾದಂತೆ SMC ಯು ಹೆಚ್ಚುತ್ತದೆ, ಆದ್ದರಿಂದ SMC ರೇಖೆಯು AVC ರೇಖೆಯನ್ನು ಅದರ ಕನಿಷ್ಟ ಬಿಂದುವಿನಲ್ಲಿ ಛೇದಿಸುತ್ತದೆ.
31. ಅಲ್ಪಾವಧಿ ಸೀಮಾಂತ ವೆಚ್ಚದ ರೇಖೆಯು ಏಕೆ U ಆಕಾರದಲ್ಲಿದೆ ?
ಅಲ್ಪಾವಧಿ ಸೀಮಂತ ವೆಚ್ಚ (SMC) ವು ಹೆಚ್ಚುವರಿ ವೆಚ್ಚವಾಗಿದ್ದು, ಒಂದು ಹೆಚ್ಚುವರಿ ಘಟಕದ ಉತ್ಪನ್ನವನ್ನು ಉತ್ಪಾದಿಸಲು, ಒಂದು ಉದ್ಯಮ ಘಟಕವು ಭರಿಸುವ ವೆಚ್ಚವಾಗಿದೆ, ಬದಲಾಗುವ ನಿಯಮದ ಪ್ರಕಾರ ಆರಂಭದಲ್ಲಿ ಉದ್ಯೋಗ ಹೆಚ್ಚಳವಾದಂತೆ ಒಂದು ಆದಾನದ ಸೀಮಾಂತ ಉತ್ಪನ್ನವು ಹೆಚ್ಚಾಗಿರುತ್ತದೆ, ಒಂದು ನಿರ್ದಿಷ್ಟ ಮಟ್ಟದ ನಂತರ ಅದು ಕಡಿಮೆಯಾಗುತ್ತದೆ, ಇದರ ಪರಿಣಾಮವಾಗಿ ನೀಡಲಾದ ಆದಾನದ ಬೆಲೆಯಲ್ಲಿ ಆರಂಭದಲ್ಲಿ ಇಳಿಮುಖವಾಗುತ್ತದೆ, ಮತ್ತು ನಂತರ ಒಂದು ನಿರ್ದಿಷ್ಟ ಹಂತದ ನಂತರ ಅದು ಏರುತ್ತದೆ, ಆದ್ದರಿಂದ SMC ರೇಖೆಯು ‘U’ ಆಕಾರ ದಲ್ಲಿರುತ್ತದೆ.
32. ಧೀರ್ಘಾವಧಿ ಸೀಮಾಂತ ವೆಚ್ಚ ಹಾಗೂ ಸರಾಸರಿ ವೆಚ್ಚದ ರೇಖೆಗಳು ಹೇಗೆ ಕಾಣುತ್ತವೆ ?
33. ಉತ್ಪಾದನಾ ಪ್ರಕ್ರಿಯೆ ಎಂದರೇನು?
ಆದಾನಗಳಾದ ಶ್ರಮ, ಯಂತ್ರಗಳು, ಭೂಮಿ, ಕಚ್ಚಾ ಸರಕುಗಳನ್ನು ಸಂಗ್ರಹಿಸಿ ಅವುಗಳನ್ನು ಸಂಯೋಜಿಸಿ ಉದ್ಯಮ ಘಟಕವು ಉತ್ಪನ್ನವನ್ನೇ ಉತ್ಪಾದಿಸುತ್ತದೆ. ಇದನ್ನು *ಉತ್ಪಾದನಾ ಕ್ರಿಯೆ” ಎನ್ನುವರು.
34. ಉತ್ಪಾದನಾ ಬಿಂಬಕವನ್ನು ಸಮೀಕರಣದಲ್ಲಿ ಬರೆಯಿರಿ.
q= f (x1x2)
35. ದೀರ್ಘಾದಿ ವೆಚ್ಚವನ್ನು ಏನೆಂದು ವ್ಯಾಖ್ಯಾನಿಸಲಾಗಿದೆ?
ಉತ್ಪನ್ನದ ಪ್ರತಿಘಟಕದ ವೆಚ್ಚವೆಂದು ವ್ಯಾಖ್ಯಾನಿಸಲಾಗಿದೆ.
36. LRAC ಮತ್ತು LRMC ರೇಖೆಗಳು ಯಾವ ಆಕಾರ ಹೊಂದಿವೆ.
U ಆಕಾರ ಹೊಂದಿವೆ.
37. ಪ್ರತಿಫಲಗಳ ಪ್ರಮಾಣವನ್ನು ವಿವರಿಸಿ.
ಆದಾನ ಬದಲಾಗುತ್ತಿರುವಾಗ ಮತ್ತು ಇತರ ಎಲ್ಲಾ ಅಂಶಗಳು ಸ್ಥಿರವಾಗಿದ್ದಾಗ ಉತ್ಪಾದನಾ ಬಿಂಬಕದ ವಿವಿಧ ಆಯಾಮಗಳನ್ನು ನೋಡಿದ್ದೇವೆ. ಎಲ್ಲಾ ಆದಾನಗಳು ಏಕಕಾಲದಲ್ಲಿ ಬದಲಾಗುತ್ತಿರುವಾಗ ಏನಾಗುತ್ತವೆ ಎಂದು ಈಗ ನಾವು ನೋಡೋಣ.
ಸ್ಥಿರ ಪ್ರತಿಫಲಗಳ ಪ್ರಮಾಣ (constant returns scale – CRS)ಇದು ಉತ್ಪಾದನಾ ಬಿಂಬಕದ ಒಂದು ಲಕ್ಷಣವಾಗಿದ್ದು ಎಲ್ಲಾ ಆದಾನಗಳ ಸಮ ಪ್ರಮಾಣದ ಹೆಚ್ಚಳವು ಅದೇ ಪ್ರಮಾಣದ ಉತ್ಪನ್ನದ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಏರಿಕೆಯ ಪ್ರತಿಫಲಗಳ ಪ್ರಮಾಣ (Increasing returns scale – IRS)ಇದು ಎಲ್ಲಾ ಆದಾನಗಳನ್ನು ಸಮ ಪ್ರಮಾಣದಲ್ಲಿ ಹೆಚ್ಚಿಸಿದಾಗ ಉತ್ಪನ್ನವು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
ಇಳಿಕೆಯ ಪ್ರತಿಫಲಗಳ ಪ್ರಮಾಣ (Decreasing returns scale – DRS) ಎಂದರೆ ಉತ್ಪನ್ನದಲ್ಲಾದ ಹೆಚ್ಚಳವು ಉತ್ಪಾದನಾಂಗಗಳ ಪ್ರಮಾಣದಲ್ಲಾದ ಹೆಚ್ಚಳಕ್ಕಿಂತ ಕಡಿಮೆ ಇರುವ ಗುಣಲಕ್ಷಣ ಹೊಂದಿರುವುದಾಗಿದೆ.
ಉದಾಹರಣೆಗೆ ಒಂದು ವೇಳೆ ಒಂದು ಉತ್ಪಾದನಾ ಪ್ರಕ್ರಿಯೆಯಲ್ಲಿ ಎಲ್ಲಾ ಆದಾನಗಳನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ ಎಂದುಕೊಳ್ಳೋಣ. ಇದರ ಪರಿಣಾಮವಾಗಿ ಉತ್ಪನ್ನವೂ ಎರಡು ಪಟ್ಟು ಹೆಚ್ಚಾದರೆ, ಈ ಉತ್ಪಾದನಾ ಬಿಂಬಕವು CRS ಅನ್ನು ತೋರಿಸುತ್ತದೆ. ಉತ್ಪನ್ನವು ಎರಡು ಪಟ್ಟಿಗಿಂತ ಕಡಿಮೆಯಾದರೆ DRS ಅನ್ವಯಿಸುತ್ತದೆ, ಹಾಗೂ ಉತ್ಪನ್ನವು ಎರಡು ಪಟ್ಟಿಗಿಂತ ಹೆಚ್ಚಾದರೆ IRS ಅನ್ನು ಅನ್ವಯಿಸುತ್ತದೆ.
38. . ಇಳಿಮುಖ ಸೀಮಾಂತ ಉತ್ಪನ್ನ ನಿಯಮ ಮತ್ತು ಬದಲಾಗುವ ಪರಿಮಾಣಗಳ ನಿಯಮವನ್ನು ವಿವರಿಸಿ.
ಇಳಿಮುಖ ಸೀಮಾಂತ ಉತ್ಪನ್ನದ ನಿಯಮದ ಪ್ರಕಾರ, ಇತರ ಆದಾನಗಳನ್ನು ಸ್ಥಿರವಾಗಿಟ್ಟುಕೊಂಡು, ಒಂದು ಆದಾನದ ಬಳಕೆಯನ್ನು ಹೆಚ್ಚಿಸುತ್ತಾ ಹೋದಂತೆ, ಕೊನೆಗೆ ಒಂದು ಬಿಂದು (ಹಂತ)ವನ್ನು ತಲುಪುತ್ತೇವೆ, ಆದರಿಂದಾಚೆಗೆ, ಆ ಆದಾನದಿಂದ ಉತ್ಪನ್ನಕ್ಕೆ ಆಗುವ ಸೇರ್ಪಡೆಯು ಇಳಿಯಲಾರಂಭಿಸುತ್ತದೆ.
ಇಳಿಮುಖ ಸೀಮಾಂತ ಉತ್ಪನ್ನದ ನಿಯಮದೊಂದಿಗೆ ತಕ್ಕಮಟ್ಟಿಗೆ ಸಂಬಂಧವಿರುವ ಪರಿಕಲ್ಪನೆಯೆಂದರೆ, ಬದ ಲಾಗುವ ಪರಿಮಾಣಗಳ ನಿಯಮ. ಇದರ ಪ್ರಕಾರ ಆರಂಭದಲ್ಲಿ ಉತ್ಪಾದನಾಂಗದ ಬಳಕೆಯ ಹೆಚ್ಚಳದೊಂದಿಗೆ, ಒಂದು ಉತ್ಪಾದನಾ ಘಟಕದ ಸೀಮಾಂತ ಉತ್ಪನ್ನವು ಹೆಚ್ಚುತ್ತಾ ಹೋಗುತ್ತದೆ. ಆದರೆ ಬಳಕೆಯ ಒಂದು ಹಂತವನ್ನು ತಲುಪಿದ ನಂತರ ಅದು ಇಳಿಯಲಾರಂಭಿಸುತ್ತದೆ.
ಇಳಿಮುಖ ಸೀಮಾಂತ ಉತ್ಪನ್ನದ ನಿಯಮ ಅಥವಾ ಬದಲಾಗುವ ಪರಿಮಾಣಗಳ ನಿಯಮದ ಹಿಂದಿರುವ ಕಾರಣ ಹೀಗಿದೆ. ನಾವು ಆದಾನದ ಒಂದು ಉತ್ಪಾದನಾಂಗವನ್ನು * ಸ್ಥಿರವಾಗಿಟ್ಟುಕೊಂಡು ಮತ್ತೊಂದನ್ನು ಹೆಚ್ಚಿಸುತ್ತಾ ಹೋಗುವುದರಿಂದ, ಉತ್ಪಾದನಾಂಗಗಳ ಅನುಪಾತಗಳು ಬದಲಾಗುತ್ತವೆ. ಪ್ರಾರಂಭದಲ್ಲಿ ನಾವು ಬದಲಾಗುವ ಆದಾನದ ಪ್ರಮಾಣವನ್ನು ಹೆಚ್ಚಿಸಿದಂತೆ, ಉತ್ಪಾದನಾ ಅನುಪಾತಗಳು ಉತ್ಪಾದನೆಗೆ ಹೆಚ್ಚು ಸೂಕ್ತವಾಗುತ್ತವೆ, ಮತ್ತು ಸೀಮಾಂತ ಉತ್ಪನ್ನ ಹೆಚ್ಚುತ್ತದೆ. ಆದರೆ ಒಂದು ನಿರ್ದಿಷ್ಟ ಮಟ್ಟದ ಬಳಕೆಯ ನಂತರ ಉತ್ಪಾದನಾ ಪ್ರಕ್ರಿಯೆಯು ಬದಲಾಗುವ ಆದಾನದೊಂದಿಗೆ ತುಂಬಾ ಕ್ಕಿಕ್ಕಿರಿದು (crowded) ಉತ್ಪಾದನಾಂಗಗಳ ಅನುಪಾತಗಳು ಉತ್ಪಾದನೆಗೆ ಕಡಿಮೆ ಸೂಕ್ತವಾಗುತ್ತವೆ. ಈ ಹಂತದಲ್ಲಿ ಬದಲಾಗುವ ಆದಾನದ ಸೀಮಾಂತ ಉತ್ಪನ್ನವು ಇಳಿಮುಖವಾಗಲು ಪ್ರಾರಂಭಿಸುತ್ತದೆ.
FAQ :
ಆದಾನಗಳು ಸ್ಥಿರವಾಗಿದ್ದು ಒಂದು ಆದಾನದ ಬಳಕೆಯು ಹೆಚ್ಚಿಸುತ್ತಾ ಹೋದಂತೆ ಕ್ರಮೇಣವಾಗಿ ಅದರಿಂದ ಸೇರ್ಪಡೆ ಯಾಗುವ ಉತ್ಪನ್ನವು ಇಳಿಯಲು ಪ್ರಾರಂಭವಾಗುತ್ತದೆ. ಇದಕ್ಕೆ ಇಳಿಮುಖ ಸೀಮಾಂತ ಉತ್ಪನ್ನ ಎಂದು ಕರೆಯುವರು.
ಇತರೆ ವಿಷಯಗಳು :
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.