ದ್ವಿತೀಯ ಪಿ.ಯು.ಸಿ ಅನುಭೋಗಿಯ ವರ್ತನೆಯ ಸಿದ್ಧಾಂತ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, 2nd Puc Economics Chapter 2 Notes Question Answer Pdf Download Kseeb Solutions For Class 12 Economics Chapter 2 Notes Anubhogiya Vartaneya Siddanta Notes 2nd Puc Economics 2nd Lesson Question Answer
2nd Puc Economics Chapter 2 Notes
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ಸಂಖ್ಯಾಸೂಚಕ ತುಷ್ಟಿಗುಣ ವಿಶ್ಲೇಷಣೆ ಎಂದರೇನು?
ಆದ್ಯತೆಗಳನ್ನು ಪ್ರತಿನಿಧಿಸಲು ಕೆಲವೊಮ್ಮೆ ಸಂಯೋಜನೆಗಳಿಗೆ ಸಂಖ್ಯೆಗಳನ್ನು ನಿಡುವುದರ ಮೂಲಕ ಅವುಗಳ ಶ್ರೇಣಿಗಳನ್ನು ಕಾಪಾಡಿಕೊಂಡು ಬರುವ ಸಾಧ್ಯತೆ ಇದೆ. ಇದನ್ನು ಸಂಖ್ಯಾ ಸೂಚಕಗಳಿಂದ ಗುರ್ತಿಸಬೇಕಾಗುತ್ತದೆ. ಈ ರೀತಿ ಸಂಯೋಜನೆಗಳಿಗೆ ನೀಡಿದ ಸಂಖ್ಯೆಗಳನ್ನು ಸಂಯೋಜನೆಗಳ ತುಷ್ಟಿಗುಣ ಎಂದು ವಿಶ್ಲೇಷಿಸಲಾಗುತ್ತದೆ.
2. ಸೀಮಾಂತ ತುಷ್ಟಿಗುಣ ವಿಶ್ಲೇಷಣೆ ಎಂದರೇನು?
ಒಂದು ಘಟಕದಷ್ಟು ವಸ್ತುವನ್ನು ಹೆಚ್ಚಿಗೆ ಅನುಭೋಗಿಸಿದಾಗ ಒಟ್ಟು ತುಷ್ಟಿಗುಣಕ್ಕೆ ಒಂದು ಸೇರುವ ತುಷ್ಟಿಗುಣವನ್ನು “ಸೀಮಾಂತ ತುಷ್ಟಿಗುಣ” ಎನ್ನುವರು. ಸೀಮಾಂತ ತುಷ್ಟಿಗುಣವು ಒಟ್ಟು ತುಷ್ಟಿಗುಣದಲ್ಲಿ ಉಂಟಾದ ಬದಲಾವಣೆಯಾಗಿದೆ.
3. ತುಷ್ಟಿಗುಣ ಎಂದರೇನು?
ಬಯಕೆಯನ್ನು ತೃಪ್ತಿ ಪಡಿಸುವ ಸರಕು ಮತ್ತು ಸೇವೆಗಳಲ್ಲಿನ ಶಕ್ತಿಗೆ “ತುಷ್ಟಿಗುಣ” ಎನ್ನುವರು.
4. MRS ನ್ನು ವಿಸ್ತರಿಸಿ.
MRS ಎಂದರೆ Marginal Rate of Substitution” ಅಂದರೆ ಪ್ರತಿನಿಧಾನ ದರನಿಯಮ ಅಥವಾ ಸೀಮಾಂತ ಬದಲಿಕೆಯ ದರ ನಿಯಮ.
5. ಬೇಡಿಕೆ ಎಂದರೇನು?
ಒಂದು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಬೆಲೆಯಲ್ಲಿ ಅನುಭೋಗಿಯೊಬ್ಬನು ಮಾರುಕಟ್ಟೆಯಲ್ಲಿ ಕೊಳ್ಳುವ ಸರಕೊಂದರ ಪ್ರಮಾಣವನ್ನು “ಬೇಡಿಕೆ” ಎನ್ನುತ್ತಾರೆ.
6. MRS ಎಂದರೇನು?
MRS ಎಂದರೆ Marginal Rate of Substitution” ಅಂದರೆ ಪ್ರತಿನಿಧಾನ ದರನಿಯಮ ಅಥವಾ ಸೀಮಾಂತ ಬದಲಿಕೆಯ ದರ ನಿಯಮ.
7. ಬಜೆಟ್ ರೇಖೆ ಮತ್ತು ಬಜೆಟ್‌ಗಣದಲ್ಲಿನ ವ್ಯತ್ಯಾಸಗಳಾವುವು?
ಬಜೆಟ್ ರೇಖೆ | ಬಜೆಟ್‌ಗಣ |
---|---|
ಅನುಭೋಗಿಯು ತನ್ನ ಆದಾಯವನ್ನು ಸಂಪೂರ್ಣ ವಾಗಿ ಖರ್ಚು ಮಾಡಿಕೊಳ್ಳಬಹುದಾದ ಸರಕುಗಳ ಎಲ್ಲಾ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ. ಇದು | ಇಳಿಮುಖ ಇಳಿಜಾರನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಬಜೆಟ್ ರೇಖೆಯು ಅನುಭೋಗಿಯ ಆದಾಯಕ್ಕಿಂತ ಕಡಿಮೆ ವೆಚ್ಚದ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ. | ಅನುಭೋಗಿಯು ತನ್ನ ನಿರ್ದಿಷ್ಟ ಆದಾಯದಲ್ಲಿ ಬೆಲೆಗಳಲ್ಲಿ ಕಂಡುಕೊಳ್ಳಬಹುದಾದ ನಿರ್ದಿಷ್ಟ ಪ್ರಮಾಣ ದಲ್ಲಿ ಕೊಂಡುಕೊಳ್ಳಬಹುದಾದ ಸರಕುಗಳ ಸಂಯೋಜನೆಗಳನ್ನು ಒಬ್ಬ ಅನುಭೋಗಿಯ ಬಜೆಟ್ ಗಣ’ ಎನ್ನುವರು. |
8. ಕೆಳದರ್ಜೆಯ ಸರಕುಗಳೆಂದರೇನು? ಉದಾಹರಣೆ ಕೊಡಿ.
ಅನುಭೋಗಿಯ ಆದಾಯ ಹೆಚ್ಚಿದಂತೆ ಅವುಗಳ ಬೇಡಿಕೆ ಕಡಿಮೆಯಾಗುತ್ತದೆ ಮತ್ತು ಆದಾಯ ಕಡಿಮೆ ಕಡಿಮೆಯಾದಂತೆ ಬೇಡಿಕೆ ಹೆಚ್ಚಾಗುತ್ತದೆ. ಇಂಥಹ ಸರಕುಗಳನ್ನು ಕೆಳದರ್ಜೆಯ ಸರಕುಗಳು ಎನ್ನುತ್ತಾರೆ. ಉದಾಹರಣೆಗೆ – ನವಣೆ, ಸಜ್ಜೆ, ಮುಂತಾದ ಧಾನ್ಯಗಳು.
9. ಬೇಡಿಕೆ ನಿಯಮವನ್ನು ತಿಳಿಸಿ.
ಅನುಭೋಗಿಯ ಒಂದು ಸರಕಿನ ಬೇಡಿಕೆಯು ಆ ಆದಾಯದ ದಿಕ್ಕಿನಲ್ಲಿಯೇ ಚಲಿಸಿದರೆ ಆ ಅನುಭೋಗಿಯ ಬೇಡಿಕೆಯು ಆ ಸರಕಿನ ಬೆಲೆಯೊಂದಿಗೆ ವಿರುದ್ಧ ಸಂಬಂಧವನ್ನು ಹೊಂದಿರುತ್ತದೆ.
10. ಅನುಭೋಗಿಯ ವರ್ತನೆಯನ್ನು ವಿವರಿಸುವ ಎರಡು ವಿಧಾನಗಳನ್ನು ತಿಳಿಸಿ,
ಒಬ್ಬ ಅನುಭೋಗಿಯು ನೀಡಿದ ಬೆಲೆಯಲ್ಲಿ ಲಭ್ಯವಿರುವ ಎರಡು ಸರಕುಗಳ ಎಲ್ಲಾ ಸಂಯೋಜನೆಗಳನ್ನು ಕೊಂಡು ಕೊಳ್ಳುವುದು ಸಾಧ್ಯವಿಲ್ಲ. ಅನುಭೋಗಿಗೆ ಲಭ್ಯವಿರುವ ಎರಡು ಸರಕುಗಳ ಬೆಲೆ ಮತ್ತು ಅನುಭೋಗಿಯ ಆದಾಯವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಅನುಭೋಗಿಯ ಬಜೆಟ್, ಅನುಭೋಗಿ ಹೊಂದಿರುವ ನಿರ್ದಿಷ್ಟ ಆದಾಯ ಮತ್ತು ನಿರ್ದಿಷ್ಟ ಬೆಲೆಗಳಲ್ಲಿ ಕೊಂಡುಕೊಳ್ಳಬಹುದಾದ ನಿರ್ದಿಷ್ಟ ಪ್ರಮಾಣದ ಎರಡು ಸರಕುಗಳ ಸಂಯೋಜನೆಗಳನ್ನು ತಿಳಿಸುತ್ತದೆ. ಅಂದರೆ ಅನುಭೋಗಿಯು ತನ್ನ ಆದಾಯಕ್ಕೆ ಸಮನಾದ ಅಥವಾ ಅದಕ್ಕಿಂತ ಕಡಿಮೆ ವೆಚ್ಚದ ಸರಕುಗಳ ಸಂಯೋಜನೆಗಳನ್ನು ಮಾತ್ರ ಕೊಂಡು ಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾನೆ.
11. ಒಟ್ಟು ತುಷ್ಟಿಗುಣ ಮತ್ತು ಸೀಮಾಂತ ತುಷ್ಟಿಗುಣಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
ಒಟ್ಟು ತುಷ್ಟಿಗುಣ | ಸೀಮಾಂತ ತುಷ್ಟಿಗುಣ |
---|---|
ಅನುಭೋಗಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ನಿರ್ದಿಷ್ಟ ಪ್ರಮಾಣದ ಸರಕು ಮತ್ತು ಸೇವೆಗಳ ಅನುಭೋಗದಿಂದ ಪಡೆಯುವ ತುಷ್ಟಿ ಗುಣವೇ ಒಟ್ಟು ತುಷ್ಟಿಗುಣವಾಗಿದೆ. ಉದಾ : ಅನುಭೋಗಿಯು 5 ಘಟಕಗಳಷ್ಟು ವಸ್ತುಗಳನ್ನು ಅನುಭೋಗಿಸಿದಾಗ ಪಡೆಯುವ ತುಷ್ಟಿಗುಣವು ಅನುಕ್ರಮವಾಗಿ U1 U2 U3U4 U5 ಆದಾಗ ಆತನ ತುಷ್ಟಿಗುಣವು TU=U1+U₂+U3+U4+U5 | ಅನುಭೋಗಿಯು ಒಂದು ಘಟಕದಷ್ಟು ಹೆಚ್ಚಿಗೆ ವಸ್ತುವನ್ನು ಅನುಭೋಗಿಸಿದಾಗ ಆ ಘಟಕದಿಂದ ಪಡೆಯುವ ಹೆಚ್ಚುವರಿ ತೃಪ್ತಿ ಎಂದು ವರ್ಣಿಸಲಾಗಿದೆ ಸಂಕ್ಷಿಪ್ತವಾಗಿ ಹೇಳುವುದಾದರೆ ಒಂದು ಘಟಕದಷ್ಟು ವಸ್ತುವನ್ನು ಹೆಚ್ಚಿಗೆ ಅನುಭೋಗಿಸಿದಾಗ ಒಟ್ಟು ತುಷ್ಟಿಗುಣಕ್ಕೆ ಸೇರುವ ತುಷ್ಟಿಗುಣವೇ ಸೀಮಾಂತ ತುಷ್ಟಿಗುಣವಾಗಿದೆ. ಉದಾ : ಎರಡನೇ ಘಟಕವನ್ನು ಅನುಭೋಗಿಸಿದಾಗ ಎರಡನೇ ಘಟಕದ ಸೀಮಾಂತ ತುಷ್ಟಿಗುಣವು ಒಟ್ಟು ತುಷ್ಟಿಗುಣದಲ್ಲಿ ಉಂಟಾದ ಬದಲಾವಣೆಯಾಗಿದೆ MU= ATU /AQ, ATU ತುಷ್ಟಿಗುಣದಲ್ಲಿ ಆದ ಬದಲಾವಣೆ |
ಅನುಭೋಗಿಯ ತುಷ್ಟಿಗುಣದ ಮೊತ್ತ ಆತನ ಅನುಭೋಗದ ಮಟ್ಟಕ್ಕೆ ಅನುಗುಣವಾಗಿರುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಅನುಭೋಗ ಹೆಚ್ಚಾಗುತ್ತದೆ. ವಸ್ತುಗಳನ್ನು ಹೆಚ್ಚು ಹೆಚ್ಚು ಅನುಭೋಗಿಸಿದಂತೆಲ್ಲ ಒಟ್ಟು ತುಷ್ಟಿಗುಣವು ಹೆಚ್ಚಾಗುತ್ತದೆ. ಒಟ್ಟು ತುಷ್ಟಿಗುಣವು ನಿಧಾನಗತಿಯಲ್ಲಿ ಹೆಚ್ಚಾಗುತ್ತದೆ. | ಅನುಭೋಗಿಯು ವಸ್ತುವಿನ ಒಟ್ಟು ಘಟಕದ ಅನುಭೋಗದಿಂದ 10 ಯೂನಿಟ್ ಗೆ ಷ್ಟು ತುಷ್ಟಿಗುಣವನ್ನು ಮತ್ತು ಒಂದು ಹೆಚ್ಚುವರಿ ಘಟಕವನ್ನು ಅನುಭೋಗಿಸಿದ ಒಟ್ಟು 15 ಯೂನಿಟ್‌ಗಳಷ್ಟು ತುಷ್ಟಿಗುಣವನ್ನು ಪಡೆದಿದ್ದಾನೆ ಎಂದಾಗ ಎರಡನೇ ಘಟಕದ ಸೀಮಾಂತ ತುಷ್ಟಿಗುಣ 5 ಯೂನಿಟ್‌ಗಳಾಗಿರುತ್ತವೆ. |
12. ಬಜೆಟ್‌ಗಣವನ್ನು ರೇಖಾ ಚಿತ್ರದ ಸಹಾಯದಿಂದ ಸಂಕ್ಷಿಪ್ತವಾಗಿ ವಿವರಿಸಿ.
ಸರಕು 1 ನ್ನು OX ಅಕ್ಷದಲ್ಲಿ, ಸರಕು 2ನ್ನು oy ಲಂಬಾಕ್ಷದಲ್ಲಿ ಮಾಪನ ಮಾಡಲಾಗಿದೆ. ಈ ರೇಖೆಯಲ್ಲಿನ ಯಾವುದೇ ಬಿಂದುವು ಎರಡು ಸರಕುಗಳ ಒಂದು ಸಂಯೋಜನೆಯನ್ನು ವ್ಯಕ್ತಪಡಿಸುತ್ತದೆ. P1X1 + P2X2= M ಸಮೀಕರಣವನ್ನು ಹೊಂದಿರುವ ಸರಳರೇಖೆಯ ಮೇಲ್ಬಾಗದಲ್ಲಿ ಅಥವಾ ಕೆಳಭಾಗದಲ್ಲಿ ಬರುವ ಎಲ್ಲಾ ಬಿಂದುಗಳನ್ನು ಬಜೆಟ್‌ಗಣ ಒಳಗೊಂಡಿರುತ್ತದೆ.
2nd Puc Economics Chapter 2 Notes
13. ಬಜೆಟ್‌ರೇಖೆಯ ಇಳಿಜಾರಿನ ನಿಷ್ಪತ್ತಿಯನ್ನು ರೇಖಾಚಿತ್ರದೊಂದಿಗೆ ವಿವರಿಸಿ.
ಬಜೆಟ್ ರೇಖೆಯ ಇಳಿಜಾರಿನ ನಿಷ್ಪತ್ತಿ
ಬಜೆಟ್ ರೇಖೆಯ ಮೇಲೆ ಸರಕು 1ರ ಪ್ರತಿ ಘಟಕದ ಬದಲಾವಣೆಗೆ ಸರಕು 2 ರಲ್ಲಿ ಬೇಕಾಗುವ ಬದಲಾವಣೆಯ ಪ್ರಮಾಣವನ್ನು ಬಜೆಟ್‌ರೇಖೆಯ ಇಳಿಜಾರು ಮಾಪನ ಮಾಡುತ್ತದೆ.
14. ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮವನ್ನು ಕೋಷ್ಠಕ ಮತ್ತು ರೇಖಾಚಿತ್ರದ ಸಹಾಯದಿಂದ ವಿವರಿಸಿ
. ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮವು ತುಷ್ಟಿಗುಣ ವಿಶ್ಲೇಷಣೆಯ ಪ್ರಮುಖ ನಿಯಮಗಳಲ್ಲಿ ಒಂದಾಗಿದೆ. ಇದು ಅನುಭೋಗಿಯ ವರ್ತನೆಯನ್ನು ಗಾಢಾವಾಗಿ ಅಧ್ಯಯನ ಮಾಡುತ್ತದೆ. ಈ ನಿಯಮದ ಪ್ರಕಾರ ಅನುಭೋಗಿಯು ಇತರ ವಸ್ತುಗಳ ಅನುಭೋಗವನ್ನು ಸ್ಥಿರವಾಗಿಸಿ, ಯಾವುದೇ ಒಂದು ನಿರ್ದಿಷ್ಟ ವಸ್ತುವಿನ ಅನುಭೋಗವನ್ನು ಹೆಚ್ಚಿಸಿದಂತೆಲ್ಲಾ ಆ ವಸ್ತುವಿನ ವಿವಿಧ ಘಟಕಗಳಿಂದ ದೊರೆಯುವ ಸೀಮಾಂತ ತುಷ್ಟಿಗುಣ ಇಳಿಮುಖವಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅನುಭೋಗಿಯೋರ್ವನು ಯಾವುದೇ ವಸ್ತುವನ್ನು ಹೆಚ್ಚು ಹೆಚ್ಚು ಅನುಭೋಗಿಸಿದಂತೆಲ್ಲಾ ಆತ
ಪಡೆಯುವ ಒಟ್ಟು ತುಪ್ಪಿ ಗುಣ ಹೆಚ್ಚುತ್ತದೆ. ಆದರೆ ಒಟ್ಟು ತುಷ್ಟಿಗುಣದ ಹೆಚ್ಚಳ ಆತನ ಅನುಭೋಗದ ಹೆಚ್ಚಳಕ್ಕೆ ಪ್ರಮಾಣಾನುಗುಣವಾಗಿ ಇರುವುದಿಲ್ಲ.
OX ಅಕ್ಷದಲ್ಲಿ ನೀರನ್ನು ಮತ್ತು OY ಅಕ್ಷದಲ್ಲಿ ತುಷ್ಟಿಗುಣವನ್ನು ಅಳೆಯಲಾಗಿದೆ. TUರೇಖೆಯು ಒಟ್ಟು ತುಷ್ಟಿಗುಣದ ರೇಖೆಯಾಗಿದೆ. ಈ ರೇಖೆಯು ಪ್ರಾರಂಭದಲ್ಲಿ ಎಡದಿಂದ ಬಲಕ್ಕೆ ಮೇಲ್ಮುಖವಾಗಿ ಚಲಿಸಿ ನಂತರ ಇಳಿಮುಖವಾಗಿದೆ. MU ರೇಖೆಯು ಸೀಮಾಂತ ತುಷ್ಟಿಗುಣ ರೇಖೆಯಾಗಿದ್ದು ಎಡದಿಂದ ಬಲಕ್ಕೆ ಇಳಿಮುಖವಾಗಿದೆ.
ಸೀಮಾಂತ ತುಷ್ಟಿಗುಣವನ್ನು ಅನುಭೋಗಿಯೋರ್ವನು ಒಂದು ಘಟಕದಷ್ಟು ಹೆಚ್ಚಿಗೆ ವಸ್ತುವನ್ನು ಅನುಭೋಗಿಸಿದಾಗ ಆ ಘಟಕದಿಂದ ಪಡೆಯುವ ಹೆಚ್ಚುವರಿ ತೃಪ್ತಿ ಎಂದು ವರ್ಣಿಸಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಒಂದು ಘಟಕದಷ್ಟು ವಸ್ತುವನ್ನು ಹೆಚ್ಚಿಗೆ ಅನುಭೋಗಿಸಿದಾಗ ಒಟ್ಟು ತುಷ್ಟಿಗುಣಕ್ಕೆ ಸೇರುವ ತುಷ್ಟಿಗುಣವೇ ಸೀಮಾಂತ ತುಷ್ಟಿಗುಣವಾಗಿದೆ.
15. ಔದಾಸೀನ್ಯ ವಕ್ರರೇಖೆಯ ಲಕ್ಷಣಗಳನ್ನು ರೇಖಾಚಿತ್ರಗಳೊಂದಿಗೆ ವಿವರಿಸಿ.
ಔದಾಸೀನ ವಕ್ರರೇಖೆ ಮತ್ತು ಔದಾಸೀನ್ಯ ನಕ್ಷೆಯನ್ನು ಅನುಸೂಚಿ ಮತ್ತು ರೇಖಾ ಚಿತ್ರದ ಸಹಾಯದಿಂದ ವಿವರಿಸಬಹುದು.
ಈ ಮೇಲ್ಕಂಡ ಅನುಸೂಚಿಯಲ್ಲಿ ಬಿಸ್ಕತ್ ಸಂಖ್ಯೆ ಹೆಚ್ಚಿದಂತೆ ಬಾಳೆಹಣ್ಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಇದನ್ನು ಈ ಕೆಳಕಂಡ ನಕ್ಷೆಯ ಮೂಲಕ ವಿವರಿಸಬಹುದಾಗಿದೆ.
ಔದಾಸೀನ್ಯ ಅನುಸೂಚಿಯಲ್ಲಿನ ದತ್ತಾಂಶಗಳನ್ನು ನಕ್ಷೆಯ ಮೂಲಕ ನಿರೂಪಿಸಲಾಗಿದೆ. X ಅಕ್ಷದಲ್ಲಿ ಬಿಸ್ಕತ್ತುಗಳನ್ನು ಮತ್ತು Y ಅಕ್ಷದಲ್ಲಿ ಬಾಳೆಹಣ್ಣನ್ನು ನಮೂದಿಸಲಾಗಿದೆ. ಈ ಎರಡು ಸರಕುಗಳ ವಿವಿಧ ಸಂಯೋಜನಾ ಬಿಂದುಗಳನ್ನು ಸಂಯೋಜಿಸಿದಾಗ ಉಂಟಾಗುವ ರೇಖೆಯನ್ನು ಔದಾಸೀನ್ಯ ವಕ್ರರೇಖೆ’ ಎಂದು ಕರೆಯುವರು, ಅನುಭೋಗಿಯು ಒಂದೇ ಮಟ್ಟದ ತೃಪ್ತಿಯನ್ನು ಪಡೆಯುವ ಎರಡು ಸರಕುಗಳ ವಿವಿಧ ಸಂಯೋಜನೆಗಳನ್ನು ಔದಾಸಿನ್ಯ ವಕ್ರರೇಖೆಯು ವ್ಯಕ್ತಪಡಿಸುತ್ತದೆ. ಪ್ರಸ್ತುತ ರೇಖಾ ಚಿತ್ರದಲ್ಲಿ ಔದಾಸೀನ್ಯ ಅನುಸೂಚಿಯಲ್ಲಿ ವ್ಯಕ್ತಪಡಿಡಿರುವ ಎರಡು ಸರಕುಗಳ ವಿವಿಧ ಸಂಯೋಜನೆಗಳನ್ನು ತೋರಿಸುವ ಔದಾಸೀನ್ಯ ವಕ್ರರೇಖೆ ICಯನ್ನು ನೀಡಲಾಗಿದೆ.
ಔದಾಸೀನ್ಯ ವಕ್ರರೇಖಾ ನಕ್ಷೆ
ಔದಾಸೀನ್ಯ ನಕ್ಷೆಯನ್ನು ಈ ಕೆಳಗೆ ಚಿತ್ರಲಾಗಿದೆ.
16. ಒಬ್ಬ ಅನುಭೋಗಿಯ ಬಜೆಟ್‌ಗಣ ಎಂದರೇನು?
ಅನುಭೋಗಿಯು ತನ್ನ ನಿರ್ದಿಷ್ಟ ಆದಾಯದಲ್ಲಿ ಮತ್ತು ನಿರ್ದಿಷ್ಟ ಬೆಲೆಗಳಲ್ಲಿ ಕಂಡುಕೊಳ್ಳಬಹುದಾದ ನಿರ್ದಿಷ್ಟ ಪ್ರಮಾಣದಲ್ಲಿ ಕೊಂಡುಕೊಳ್ಳಬಹುದಾದ ಸರಕುಗಳ ಸಂಯೋಜನೆಗಳನ್ನು “ಒಬ್ಬ ಅನುಭೋಗಿಯ ಬಜೆಟ್ ಗಣ” ಎನ್ನುವರು.
17. ಬಜೆಟ್ ರೇಖೆ ಎಂದರೇನು ?
ಅನುಭೋಗಿಯು ತನ್ನ ಆದಾಯವನ್ನು ಸಂಪೂರ್ಣವಾಗಿ ಖರ್ಚುಮಾಡಿಕೊಳ್ಳಬಹುದಾದ ಸರಕುಗಳ ಎಲ್ಲಾ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ, ಇದು ಇಳಿಮುಖ ಇಳಿಜಾರನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಬಜೆಟ್ ರೇಖೆಯು ಅನುಭೋಗಿಯ ಆದಾಯಕ್ಕಿಂತ ಕಡಿಮೆ ಮೆಚ್ಚಿದ ಸಂಯೋಜನೆಯನ್ನು ಪ್ರತಿನಿದಿಸುತ್ತದೆ.
18. ಬಜೆಟ್ ರೇಖೆಯು ಇಳಿಮುಖ ಇಳಿಜಾರನ್ನು ಹೊಂದಿದೆ ಏಕೆ? ವಿವರಿಸಿ.
ಬಜೆಟ್ ರೇಖೆಯು ಇಳಿಮುಖ ಇಳಿಜಾರನ್ನು ಹೊಂದಿದೆ, ಏಕೆಂದರೆ ಬಜೆಟ್ ರೇಖೆಯ ಮೇಲಿನ ಯಾವುದೇ ಬಿಂದುವನ್ನು ಪರಿಗಣಿಸಿ, ಆ ಬಿಂದುವು ಅನುಭೋಗಿಯ ಸಂಪೂರ್ಣ ಆದಾಯವು ವೆಚ್ಚ ಮಾಡುವ ಒಂದು ಸಂಯೋಜನೆಯನ್ನು ಪ್ರತಿನಿಧಿಸುತ್ತದೆ, ಅನುಭೋಗಿಯ ಸರಕು ಒಂದನ್ನು ಹೆಚ್ಚುವರಿ ಘಟಕವನ್ನು ಕೊಂಡುಕೊಳ್ಳಲು ಬಯಸಿದರೆ ಮತ್ತೊಂದು ಸರಕನ್ನು ಸ್ವಲ್ಪ ಪ್ರಮಾಣದಲ್ಲಿ ಬಿಟ್ಟುಕೊಡಬೇಕಾಗುತ್ತದೆ. ಸರಕು 1 ಹೆಚ್ಚುವರಿ ಘಟಕವನ್ನು ಪಡೆಯಲು ಎಷ್ಟು ಪ್ರಮಾಣದಲ್ಲಿ ಸರಕನ್ನು 2ನ್ನು ಬಿಟ್ಟು ಕೊಡಬೇಕಾಗುತ್ತದೆ? ಎಂಬುದನ್ನು ಯೋಚಿಸಿದರೆ- ಇದು ಎರಡು ಸರಕುಗಳ ಬೆಲೆಯನ್ನು ಅವಲಂಭಿಸಿರುತ್ತದೆ.
19. ಸಾಮಾನ್ಯ ಸರಕುಗಳೆಂದರೇನು ?
ಅನುಭೋಗಿಯ ಆದಾಯ ಹೆಚ್ಚಾದಂತೆ ಒಂದು ಸರಕಿಗಿರುವ ಅನುಭೋಗಿಯ ಬೇಡಿಕೆಯ ಪ್ರಮಾಣ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು, ಇದು ಕೊಳ್ಳುವ ಸರಕಿನ ಸ್ವರೂಪದ ಮೇಲೆ ಅವಲಂಬಿತವಾಗಿದೆ ಬಹಳಷ್ಟು ಸರಕುಗಳಿಗೆ ಅನುಭೋಗಿಯ ಆದಾಯ ಹೆಚ್ಚಾದಂತೆ, ಬೇಡಿಕೆಯ ಪ್ರಮಾಣವು ಹೆಚ್ಚಾಗುತ್ತದೆ, ಮತ್ತು ಅನುಭೋಗಿಯ ಆದಾಯ ಕಡಿಮೆಯಾದಂತೆ ಬೇಡಿಕೆಯ ಪ್ರಮಾಣವು ಕಡಿಮೆಯಾಗುತ್ತದೆ, ಇಂತಹ ಸರಕುಗಳನ್ನು “ಸಾಮಾನ್ಯ ಸರಕು’ ಗಳೆಂದು ಕರೆಯಲಾಗುತ್ತದೆ.
20. ಕೆಳದರ್ಜೆ ಸರಕುಗಳೆಂದರೇನು ? ಉದಾಹರಣೆ ಕೊಡಿ.
ಸಾಮಾನ್ಯ ಸರಕುಗಳಿಗಿರುವ ಬೇಡಿಕೆಯು ಅನುಭೋಗಿಯ ಆದಾಯದ ದಿಕ್ಕಿನಲ್ಲಿಯೇ ಚಲಿಸುತ್ತದೆ. ಅದಾಗ್ಯೂ ಕೆಲವು ಸರಕುಗಳ ಬೇಡಿಕೆಯು ಅನುಭೋಗಿಯ ಆದಾಯದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ, ಇಂತಹ ಸರಕುಗಳನ್ನು “ಕೆಳದರ್ಜೆಯ ಸರಕುಗಳು” ಎಂದು ಕರೆಯಲಾಗುತ್ತದೆ.
ಉದಾ :- ನವಣೆ, ಸಜ್ಜೆ, ಬಾರ್ಲಿ, ರಾಗಿ ಇತ್ಯಾದಿ ಧಾನ್ಯಗಳು ಕಡಿಮೆ ಬೆಲೆಗೆ ಸಿಗುತ್ತವೆ.
ಒಂದು ಸರಕು, ಕೆಲವು ಆದಾಯದ ಮಟ್ಟದಲ್ಲಿ ಒಬ್ಬ ಅನುಭೋಗಿಗೆ ಸಾಮಾನ್ಯ ಸರಕಾಗಿರಬಹುದು ಮತ್ತು ಅದೇ ಅನುಭೋಗಿಗೆ ಇತರ ಆದಾಯದ ಮಟ್ಟದಲ್ಲಿ ಆ ಸರಕು ಕೆಳದರ್ಜೆಯ ಸರಕುಗಳಾಗಬಹುದು.
21. ಪೂರಕ ಸರಕುಗಳೆಂದರೇನು ? ಪರಸ್ಪರ ಪೂರಕ ಸರಕುಗಳಾಗಿರುವ ಯಾವುದಾದರು ಎರಡು ಸರಕುಗಳ ಉದಾಹರಣೆ ಕೊಡಿ.
ಒಂದು ನಿರ್ದಿಷ್ಟ ಬಯಕೆಯನ್ನು ತೃಪ್ತಿ ಪಡಿಸಿಕೊಳ್ಳಲು ಒಟ್ಟಿಗೆ ಅನುಭೋಗಿಸಲಾಗುವ ಸರಕುಗಳನ್ನು ಪರಸ್ಪರ “ಪೂರಕ ಸರಕುಗಳು” ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಚಹಾ ಮತ್ತು ಸಕ್ಕರೆ, ಪೆನ್ನು,
ಮತ್ತು ಇಂಕು, ಶೂಗಳು ಮತ್ತು ಸಾಕ್ಸ್‌ಗಳು ಇತ್ಯಾದಿ.
ಚಹಾ ಮತ್ತು ಸಕ್ಕರೆಯನ್ನು ಒಟ್ಟಿಗೆ ಬಳಸುವುದರಿಂದ ಸಕ್ಕರೆಯ ಬೆಲೆ ಹೆಚ್ಚಾದರೆ, ಚಹಾಕ್ಕೆ ಬೇಡಿಕೆ ಕಡಿಮೆಯಗುತ್ತದೆ. ಹಾಗೆಯೇ ಸಕ್ಕರೆಯ ಬೆಲೆ ಕಡಿಮೆಯಾದರೆ ಚಹಾದ ಬೆಡಿಕೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
22. ಬದಲಿ ಸರಕುಗಳೆಂದರೇನು ? ಪರಸ್ಪರ ಬದಲಿ ಸರಕುಗಳಾಗಿರುವ ಯಾವುದದರೂ ಎರಡು ಸರಕುಗಳ ಉದಾಹರಣೆ ಕೊಡಿ.
ಒಂದು ಸರಕಿನ ಬೆಲೆಯಲ್ಲಿ ಬದಲಾವಣೆಯಾದಾಗ ಅನುಭೋಗಿಯು ಸರಕು 1ರ ಅನುಭೋಗವನ್ನು ಕಡಿಮೆ ಮಾಡುವುದಿಲ್ಲ. ಒಂದು ಸರಕಿನ ಬೆಲೆಯಲ್ಲಿ ಬದಲಾವಣೆ ಯಾದಾಗ ಅನುಭೋಗಿಯು ತನ್ನ ಆದಾಯವನ್ನು ಬೆಲೆಯ ಬದಲಾವಣೆಗೂ ಪೂರ್ವದಲ್ಲಿ ಕೊಂಡುಕೊಳ್ಳುತ್ತಿದ್ದ ಪ್ರಮಾಣ ದಷ್ಟೆ ಸರಕನ್ನು ಕೊಂಡುಕೊಳ್ಳಲು ಸರಿದೂಗಿಸಿದಾಗ ಅ ಸರಕಿನ ಆದರ್ಶ ಪ್ರಮಾಣದಲ್ಲೂ ಬದಲಾವಣೆಯಾಗುತ್ತದೆ, ಇದನ್ನು ಬದಲಿ ಸರಕುಗಳು ಎಂದು ಕರೆಯುವರು.
ಉದಾಹರಣೆ ಎಂದರೆ – ಸರಕುಗಳಿಗೆ ಭಿನ್ನವಾಗಿ ಚಹ ಕಾಫಿಯಂತಹ ಸರಕುಗಳನ್ನು ಒಟ್ಟಾಗಿ ಅನುಭೋಗಿಸುವುದಿಲ್ಲ, ವಾಸ್ತವವಾಗಿ ಅವುಗಳಿಗೆ ಪರಸ್ಪರ ಬದಲಿ ಸರಕುಗಳಿವೆ. ಕಾಫಿಗೆ ಚಹವು ಬದಲೀ ಸರಕುಗಳಾಗಿರುವುದರಿಂದ ಕಾಫಿಯ ಬೆಲೆ ಹೆಚ್ಚಾದರೆ ಅನುಭೋಗಿಗಳು ಸರಕುಗಳಾಗಿರುವುದರಿಂದ ಕಾಫಿಯ ಬೆಲೆ ಹೆಚ್ಚಾದರೆ ಅನುಭೋಗಿಗಳು ಚಹಾಕ್ಕೆ ತಮ್ಮ ಬೇಡಿಕೆಯನ್ನು ಬದಲಾಯಿಸಿಕೊಳ್ಳಬಹುದು, ಹಾಗಾಗಿ ಚಹಾದ ಅನುಭೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮತ್ತೊಂದು ರೀತಿಯಲ್ಲಿ ಕಾಫಿಯ ಬೆಲೆಯಲ್ಲಿ ಇಳಿಕೆಯಾದರೆ ‘ಚಹದ ಬೇಡಿಕೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಒಂದು ಸರಕಿನ ಬೇಡಿಕೆಯು ಅದರ ಬದಲೀ ಸರಕುಗಳ ಬೆಲೆಯ ದಿಕ್ಕಿನಲ್ಲಿ ಚಲಿ ಸುತ್ತದೆ.
23. ಬೆಲೆ ಬೇಡಿಕೆ ಸ್ಥಿತಿ ಸ್ಥಾಪಕತ್ವವನ್ನು ವಿವರಿಸಿ.
ಸರಕೊಂದರ ಬೇಡಿಕೆಯಲ್ಲಿನ ಪ್ರಮಾಣದಲ್ಲಿನ ಶೇಕಡವಾರು ಬದಲಾವಣೆಯನ್ನು ಅದೇ ಸರಕಿನ ಬೆಲೆಯ ಪ್ರಮಾಣದಲ್ಲಿನ ಶೇಕಡವಾರು ಬದಲಾವಣೆಯಿಂದ ಭಾಗಿ ಸುವುದನ್ನು ಬೆಲೆಯ ಬೇಡಿಕೆಯ ಸ್ಥಿತಿ ಸ್ಥಾಪಕತ್ವ ಎಂದು ಕರೆಯುವರು.
ಮತ್ತಷ್ಟು ಸರಳವಾಗಿ ಹೇಳುವುದಾದರೆ ಸರಕಿನ ಬೇಡಿಕೆಯು ಅದರ ಬೆಲೆಯಲ್ಲಿನ ಬದಲಾವಣೆಗನುಗುಣವಾಗಿ ಪ್ರತಿಕ್ರಿಯಿಸುವುದನ್ನು ಮಾಪನ ಮಾಡುವ ಪರಿಕಲ್ಪನೆಯೆ ಬೆಲೆಯ ಬೇಡಿಕೆಯ ಸ್ಥಿತಿಸ್ಥಾಪಕವಾಗಿದೆ.
ಒಂದು ಸರಕಿನ ಬೇಡಿಕೆಯು ಆ ಸರಕಿನ ಬೆಲೆ ಯೊಂದಿಗೆ ಋಣಾತ್ಮಕ ಸಂಬಂಧವನ್ನು ಹೊಂದಿರುವುದ ರಿಂದ ಬೆಲೆ ಬೇಡಿಕೆಯ ಸ್ಥಿತಿ ಸ್ಥಾಪಕತ್ವವು ಒಂದು ಋಣಾತ್ಮಕ ಸಂಖ್ಯೆಯಾಗಿದೆ.
ಆದರೂ ಇದನ್ನು ಸರಳೀಕರಣಗೊಳಿಸಲು ನಾವು ಯಾವಾಗಲೂ ಸ್ಥಿತಿ ಸ್ಥಾಪಕತ್ವದ ನಿರಪೇಕ್ಷ ಮೌಲ್ಯವನ್ನು ಪರಿಗಣಿಸುತ್ತೇವೆ. ಬೆಲೆಯ ಬದಲಾವಣೆಗೆ ಒಂದು ಸರಕಿನ ಬೇಡಿಕೆಯ ಬದಲಾವಣೆ ಪ್ರತಿಕ್ರಮ ಹೆಚ್ಚಾಗಿದ್ದರೆ ಸರಕಿನ ಬೇಡಿಕೆಯ ಶೇಕಡವಾರು ಬದಲಾವಣೆಯು ಅದರ ಬೆಲೆ ಯಲ್ಲದ ಶೇಕಡವಾರು ಬದಲಾವಣೆಗಿಂತ ಹೆಚ್ಚಿನ ಪ್ರಮಾಣ ದಲ್ಲಿದ್ದರೆ ಆಗ [eD}>1 ಆಗುತ್ತದೆ, ಇದನ್ನು ಬೆಲೆಬೇಡಿಕೆಯ ಸ್ಥಿತಿಸ್ಥಾಪಕತ್ವವೆಂದು ಕರೆಯಲಾಗುವುದು.
ಬೆಲೆ ಬೇಡಿಕೆಯ ಸ್ಥಿತಿ ಸ್ಥಾಪಕತ್ವವು ಪರಿಪೂರ್ಣ ಸಂಖ್ಯೆಯಾಗಿದೆ ಮತ್ತು ಬೆಲೆ ಮತ್ತು ಬೇಡಿಕೆಯ ಪ್ರಮಾಣ ವನ್ನು ಮಾಪನ ಮಾಡುವ ಘಟಕಗಳನ್ನು ಅವಲಂಬಿಸಿಲ್ಲ.
25. ತುಷ್ಟಿಗುಣ ಎಂದರೇನು?
ಬಯಕೆಯನ್ನು ತೃಪ್ತಿಪಡಿಸುವ ಸರಕು ಮತ್ತು ಸೇವೆಗಳಲ್ಲಿನ ಶಕ್ತಿಗೆ ‘ತುಷ್ಟಿಗುಣ’ ಎನ್ನುವರು.
26. ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮವನ್ನು ಪರಿಚಯಿಸಿದವರು ಯಾರು?
ಅರ್ಥಶಾಸ್ತ್ರಜ್ಞ ‘ಗೋಸೆನ್’ ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮವನ್ನು ಪರಿಚಯಿಸಿದವರಾಗಿದ್ದಾರೆ.
27. ಔದಾಸೀನ್ಯ ವಕ್ರರೇಖೆಯನ್ನು ವ್ಯಾಖ್ಯಾನಿಸಿ.
ಅನುಭೋಗಿಯ ಅಭಿರುಚಿ ಮತ್ತು ಒಲವನ್ನು ಸ್ಥಾನದರ್ಶಕ ಸೂಚಕ ಸಂಖ್ಯೆಗಳಿಂದ ಮಾಪನ ಮಾಡಿ, ಅನುಭೋಗಿ ತನ್ನ ಆದಾಯವನ್ನು ಖರ್ಚು ಮಾಡುವುದರ ಮೂಲಕ ತೃಪ್ತಿಯನ್ನು ಗರಿಷ್ಠಗೊಳಿಸಲು ತೋರಿಸುವ ರೇಖೆಯನ್ನು ಔದಾಸೀನ್ಯ ವಕ್ರರೇಖೆ ಎನ್ನುವರು.
28. ‘ಏಕಾತ್ಮಕ ಒಲವು’ ಎಂದರೇನು?
ಅನುಭೋಗಿಯು ಹೆಚ್ಚಿನ ಮಟ್ಟದ ತೃಪ್ತಿಯನ್ನು ನೀಡುವ ಎತ್ತರದ ಔದಾಸೀನ್ಯ ರೇಖೆಯ ಕಡೆಗೆ ಯಾವಾಗಲೂ ಒಲವು ತೋರುತ್ತಾನೆ. ಇದನ್ನು ಏಕಾತ್ಮಕ ಒಲವು’ ಎಂದು ಕರೆಯುತ್ತಾರೆ.
29. ಔದಾಸೀನ್ಯ ನಕ್ಷೆ ಎಂದರೇನು?
ವಿವಿಧ ಮಟ್ಟದ ತೃಪ್ತಿಯನ್ನು ವ್ಯಕ್ತಪಡಿಸುವ ಎರಡು ಸರಕುಗಳ ವಿವಿಧ ಸಂಯೋಜನೆಗಳನ್ನು ತೋರಿಸುವ ಔದಾಸೀನ್ಯ ವಕ್ರರೇಖೆಗಳ ಗುಂಪನ್ನು ‘ಔದಸೀನ್ಯ ನಕ್ಷೆ’ ಎನ್ನುವರು.
30. ಅನುಭೋಗಿಯ ಆದ್ಯತೆಗಳನ್ನು ವಿವರಿಸಿ.
ಬಜೆಟ್ ಗಣವು ಅನುಭೋಗಿಗೆ ಲಭ್ಯವಿರುವ ಎಲ್ಲಾ ಸಂಯೋಜನೆಗಳನ್ನು ಒಳಗೊಂಡಿರುತ್ತದೆ. ಈ ಬಜೆಟ್ ಗಣದಿಂದ ಅನುಭೋಗಿಯು ತನಗೆ ಬೇಕಾಗುವ ಅನು ಭೋಗದ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳ ಬಹುದು. ಆದರೆ ಅನುಭೋಗಿಯು ತನಗೆ ಲಭ್ಯವಿರುವ ಸಂಯೋಜನೆಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳು ತಾನೆ? ಬಜೆಟ್ ಗಣದಲ್ಲಿರುವ ಸಂಯೋಜನೆಗಳಲ್ಲಿ ಅನುಭೋಗಿಯು ತನ್ನ ಅನುಭೋಗದ ಸಂಯೋಜನೆ ಯನ್ನು ತನ್ನ ಅಭಿರುಚಿ ಮತ್ತು ಆದ್ಯತೆಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುತ್ತಾನೆ ಎಂದು ಅರ್ಥಶಾಸ್ತ್ರದಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಎಲ್ಲಾ ಸಾಧ್ಯವಾದ ಸಂಯೋಜನೆಗಳ ಗಣದ ಮೇಲೆ ಅನುಭೋಗಿಗೆ ಸ್ಪಷ್ಟ ಆದ್ಯತೆಗಳಿರುತ್ತದೆಂದು ಕಲ್ಪಿಸಿಕೊಳ್ಳಲಾಗಿದೆ. ಅನುಭೋಗಿಯು ಯಾವುದಾದರೂ ಎರಡು ಸಂಯೋಜನೆಗಳನ್ನು ಹೋಲಿಕೆ ಮಾಡಬಹುದು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಯಾವುದೇ ಎರಡು ಸಂಯೋಜನೆಗಳಲ್ಲಿ ಒಂದಕ್ಕಿಂತ ಇನ್ನೊಂದಕ್ಕೆ ಆದ್ಯತೆ ನೀಡಬಹುದು ಅಥವಾ ಎರಡರ ನಡುವೆ ಉದಾಸೀನವಾಗಿರಬಹುದು. ಮುಂದುವರೆದು, ಅನುಭೋಗಿಯು ತನ್ನ ಆದ್ಯತಾನುಸಾರವಾಗಿ ಸಂಯೋಜನೆಗಳಿಗೆ ಶ್ರೇಣಿಯನ್ನು ನೀಡಬಹುದೆಂದು ಕಲ್ಪಿಸಿಕೊಳ್ಳಲಾಗಿದೆ.
31. ಔದಾಸೀನ್ಯ ವಕ್ರರೇಖೆಯು ಅನುಭೋಗಿಯ ಔದಾಸೀನ್ಯತೆಯನ್ನು ಪರಿಗಣಿಸುವ ಸಂಯೋಜನೆಗಳ ಎಲ್ಲಾ ಬಿಂದುಗಳನ್ನು ಸೇರಿಸುತ್ತದೆ ಎಂಬುದನ್ನು ರೇಖಾಚಿತ್ರದ ಮೂಲಕ ತಿಳಿಸಿರಿ.
ಲಭ್ಯವಿರುವ ಸಂಯೋಜನೆಗಳ ಮೇಲಿನ ಅನುಭೋಗಿ ಯೊಬ್ಬಳ ಆದ್ಯತೆಗಳನ್ನು ರೇಖಾತ್ಮಕವಾಗಿ ಪ್ರತಿನಿಧಿಸಬಹುದು. ಅನುಭೋಗಿಗೆ ಲಭ್ಯವಿರುವ ಸಂಯೋಜನೆಗಳನ್ನು ಎರಡು ಆಯಾಮಗಳುಳ್ಳ ರೇಖಾಚಿತ್ರದಲ್ಲಿ ಬಿಂದುಗಳಾಗಿ ಗುರುತಿಸಬಹುದೆಂದು ಈಗಾಗಲೇ ನೋಡಿದ್ದೇವೆ (ತಿಳಿದುಕೊಂಡಿದ್ದೇವೆ). ಅನುಭೋಗಿಯು ಔದಾಸೀನ್ಯತೆ ಹೊಂದಿರುವನೆಂದು ಪರಿಗಣಿಸಿರುವ ಸಂಯೋಜನೆಗಳನ್ನು ಪ್ರತಿನಿಧಿಸುವ ಬಿಂದುಗಳನ್ನು ಸೇರಿಸಿ ರೇಖಾಚಿತ್ರದಲ್ಲಿ ತೋರಿಸಿರುವಂತೆ ಒಂದು ವಕ್ರರೇಖೆಯನ್ನು ಪಡೆಯ ಬಹುದು. ಅನುಭೋಗಿಯು ಔದಾಸೀನ್ಯತೆ ಹೊಂದಿರುವ ಸಂಯೋಜನೆಗಳ ಬಿಂದುಗಳನ್ನು ಸೇರಿಸುವಂತಹ ವಕ್ರ ರೇಖೆಯನ್ನು ಔದಾಸೀನ್ಯ ವಕ್ರರೇಖೆ ಎನ್ನುತ್ತೇವೆ.
32. ತುಷ್ಟಿಗುಣ ಬಿಂಬಕ ಅಥವಾ ತುಷ್ಟಿಗುಣ ಪ್ರಾತಿನಿಧ್ಯತೆ ಯನ್ನು ವಿವರಿಸಿ.
ಆದ್ಯತೆಗಳನ್ನು ಪ್ರತಿನಿಧಿಸಲು ಕೆಲವೊಮ್ಮೆ ಸಂಯೋಜನೆ ಗಳಿಗೆ ಸಂಖ್ಯೆಗಳನ್ನು ನೀಡುವುದರ ಮೂಲಕ ಅವುಗಳ ಶ್ರೇಣಿಗಳನ್ನು ಕಾಪಾಡಿಕೊಂಡು ಬರುವ ಸಾಧ್ಯತೆಯಿದೆ. ಶ್ರೇಣಿಗಳನ್ನು ಕಾಪಾಡಿಕೊಳ್ಳಲು ಔದಾಸೀನ್ಯತೆ ಇರುವ ಸಂಯೋಜನೆಗಳಿಗೆ ಒಂದೇ ಸಂಖ್ಯೆಯನ್ನು ನೀಡಬೇಕಾ ಗುತ್ತದೆ ಮತ್ತು ಆದ್ಯತೆ ಸಂಯೋಜನೆಗಳಿಗೆ ಹೆಚ್ಚಿನ ಸಂಖ್ಯೆ ಗಳನ್ನು ನೀಡಬೇಕಾಗುತ್ತದೆ. ಈ ರೀತಿ ಸಂಯೋಜನೆಗಳಿಗೆ ನೀಡಿದ ಸಂಖ್ಯೆಗಳನ್ನು ಸಂಯೋಜನೆಗಳ ತುಷ್ಟಿಗುಣ ಎನ್ನುತ್ತೇವೆ. ಮತ್ತು ತುಷ್ಟಿಗುಣ ಸಂಖ್ಯೆಗಳ ಮೂಲಕ ಆದ್ಯತೆಗಳನ್ನು ಪ್ರತಿನಿಧಿಸುವುದನ್ನು ತುಷ್ಟಿಗುಣ ಬಿಂಬಿಕ ಅಥವಾ ತುಷ್ಟಿಗುಣ ಪ್ರಾತಿನಿಧ್ಯತೆ ಎನ್ನುತ್ತೇವೆ. ಈ ರೀತಿ ತುಷ್ಟಿಗುಣ ಬಿಂಬಕವು ಅನುಭೋಗಿಗೆ ಲಭ್ಯವಿರುವ ಪ್ರತಿಯೊಂದು ಸಂಯೋಜನೆಗಳಿಗೂ ಸಂಖ್ಯೆಗಳನ್ನು ನೀಡುತ್ತದೆ. ಯಾವ ರೀತಿ ಎಂದರೆ ಒಂದು ಸಂಯೋಜನೆಗಿಂತ ಮತ್ತೊಂದು ಸಂಯೋಜನೆಗೆ ಅನುಭೋಗಿಯು ಹೆಚ್ಚಿನ ಒಲವನ್ನು ವ್ಯಕ್ತಪಡಿಸಿದರೆ ಅದಕ್ಕೆ ಹೆಚ್ಚಿನ ಸಂಖ್ಯೆಯನ್ನು, ಒಂದು ವೇಳೆ ಎರಡು ಸಂಯೋಜನೆಗಳಿಗೆ ಒಂದೇ ರೀತಿಯ ಒಲವನ್ನು ವ್ಯಕ್ತಪಡಿಸಿದರೆ, ಅವುಗಳಿಗೆ ಒಂದೇ ಸಂಖ್ಯೆಯನ್ನು ನೀಡಲಾಗುವುದು.
33. ಅನುಭೋಗಿಯ ಆದರ್ಶದ ಔದಾಸೀನ್ಯ ವಕ್ರ ರೇಖೆ ಯನ್ನು ವಿವರಿಸಿ.
ರೇಖಾಚಿತ್ರ 2.10 ಅನುಭೋಗಿಯ ಆದರ್ಶವನ್ನು ವಿವರಿಸುತ್ತದೆ. (x1, x2) ದಲ್ಲಿ ಬಜೆಟ್ ರೇಖೆಯು ಕಪ್ಪು ಬಣ್ಣದ ಔದಾಸೀನ್ಯ ವಕ್ರರೇಖೆಯನ್ನು ಸ್ಪರ್ಶಿಸಿದೆ. ಮೊಟ್ಟ ಮೊದಲಾಗಿ ಗಮನಿಸಬೇಕಾದ ವಿಷಯವೆಂದರೆ, ಬಜೆಟ್ ರೇಖೆಯನ್ನು ಸ್ಪರ್ಶಿಸುವ ಔದಾಸೀನ್ಯ ವಕ್ರರೇಖೆಯು, ಅನುಭೋಗಿಯ ನಿರ್ದಿಷ್ಟ ಬಜೆಟ್‌ನಲ್ಲಿ ಪಡೆಯಬಹುದಾದ ಹೆಚ್ಚಿನ ಮಟ್ಟದ ಔದಾಸೀನ್ಯ ವಕ್ರರೇಖೆಯಾಗಿರುತ್ತದೆ. ಇದಕ್ಕಿಂತ ಉನ್ನತ ಮಟ್ಟದ ಔದಾಸೀನ್ಯ ವಕ್ರರೇಖೆಯ ಸಂಯೋಜನೆಗಳು, ಉದಾಹರಣೆಗೆ ಕಂದು ಬಣ್ಣದ ಔದಾಸೀನ್ಯ ವಕ್ರರೇಖೆಯ ಸಂಯೋಜನೆಗಳು ಪಡೆಯಲಸಾಧ್ಯವಾದ ಸಂಯೋಜನೆಗಳಾಗಿವೆ. ಇದಕ್ಕಿಂತ ಕೆಳಗೆ ಇರುವ ಔದಾಸೀನ್ಯ ವಕ್ರರೇಖೆಯ ಸಂಯೋಜನೆಗಳು ಉದಾಹರಣೆಗೆ ನೀಲಿ ಬಣ್ಣದ ಔದಾಸೀನ್ಯ ವಕ್ರರೇಖೆಯ ಸಂಯೋಜನೆಗಳು ಬಜೆಟ್ ರೇಖೆಯನ್ನು ಸ್ಪರ್ಶಿಸುವ ಔದಾಸೀನ್ಯ ವಕ್ರರೇಖೆಯ ಸಂಯೋಜನೆಗಳಿಗಿಂತ ಕೆಳಮಟ್ಟದ್ದಾಗಿರುತ್ತದೆ. ಬಜೆಟ್ ರೇಖೆಯ ಮೇಲಿನ ಇತರ ಯಾವುದೇ ಬಿಂದುವು ಕೆಳಮಟ್ಟದ ಔದಾಸೀನ್ಯ ವಕ್ರರೇಖೆಯ ಮೇಲಿರುತ್ತದೆ ಮತ್ತು (x1, x2) ಗಿಂತ ಕೆಳಮಟ್ಟದ್ದಾಗಿರು ತ್ತದೆ. ಆದ್ದರಿಂದ (x1, x2) ಅನುಭೋಗಿಯ ಆದರ್ಶ ಸಂಯೋಜನೆಯಾಗಿದೆ.
34. ಬೇಡಿಕೆ ರೇಖೆಯಲ್ಲಿನ ಪಲ್ಲಟಗಳನ್ನು ವಿವರಿಸಿ.
ಅನುಭೋಗಿಯ ಆದಾಯ ಅಭಿರುಚಿ ಮತ್ತು ಒಲವು, ಹಾಗೂ ಇತರೆ ಸರಕುಗಳ ಬೆಲೆಗಳನ್ನು ನೀಡಲಾಗಿದೆ ಎಂಬ ಕಲ್ಪನೆಯ ಆಧಾರದ ಮೇಲೆ ಬೇಡಿಕೆ ರೇಖೆಯನ್ನು ರಚಿಸಲಾಗಿದೆ. ಒಂದು ವೇಳೆ ಈ ಸಂಗತಿಗಳಲ್ಲಿ ಬದಲಾವಣೆಯಾದರೆ ಬೇಡಿಕೆ ರೇಖೆಗೆ ಏನಾಗುತ್ತದೆ ?
ಒಬ್ಬ ಅನುಭೋಗಿಯ ಆದ್ಯತೆಗಳು ಮತ್ತು ಇತರೆ ಸರಕುಗಳ ಬೆಲೆಗಳನ್ನು ನೀಡಿದ್ದಾಗ, ಆಕೆಯ ಆದಾಯದಲ್ಲಿ ಹೆಚ್ಚಳ ಉಂಟಾದರೆ, ಸರಕಿನ ಬೇಡಿಕೆಯು ಪ್ರತಿ ಬೆಲೆಗಳಲ್ಲಿ ಬದಲಾವಣೆಗೊಳ್ಳುತ್ತದೆ ಮತ್ತು ಇದರಿಂದ ಬೇಡಿಕೆ ರೇಖೆಯಲ್ಲಿ ಪಲ್ಲಟ ಉಂಟಾಗುತ್ತದೆ. ಸಾಮಾನ್ಯ ಸರಕುಗಳಿಗೆ ಬೇಡಿಕೆರೇಖೆಯು ಬಲಭಾಗಕ್ಕೆ ಪಲ್ಲಟಗೊಳ್ಳುತ್ತದೆ ಹಾಗೂ ಕೆಳದರ್ಜೆಯ ಸರಕುಗಳಿಗೆ ಬೇಡಿಕೆ ರೇಖೆಯು ಎಡಭಾಗಕ್ಕೆ ಪಲ್ಲಟಗೊಳ್ಳುತ್ತದೆ.
ಅನುಭೋಗಿಯ ಆದಾಯ ಮತ್ತು ಆದ್ಯತೆಗಳನ್ನು ನೀಡಿದ್ದಾಗ ಸಂಬಂಧಿತ ಸರಕಿನ ಬೆಲೆಯಲ್ಲಿ ಬದಲಾವಣೆ ಉಂಟಾದರೆ, ಆ ಸರಕಿನ ಬೇಡಿಕೆಯು ಪ್ರತಿ ಬೆಲೆಗಳ ಮಟ್ಟದಲ್ಲಿ ಬದಲಾವಣೆಗೊಳ್ಳುತ್ತದೆ ಮತ್ತು ಇದರಿಂದ ಬೇಡಿಕೆ ರೇಖೆಯು ಪಲ್ಲಟಗೊಳ್ಳುತ್ತದೆ. ಬದಲಿ ಸರಕಿನ ಬೆಲೆಯಲ್ಲಿ ಏರಿಕೆ ಉಂಟಾದರೆ ಬೇಡಿಕೆ ರೇಖೆಯು ಬಲಗಡೆ ಪಲ್ಲಟಗೊಳ್ಳುತ್ತದೆ ಮತ್ತೊಂದು ರೀತಿಯಲ್ಲಿ, ಪೂರಕ ಸರಕಿನ ಬೆಲೆಯಲ್ಲಿ ಏರಿಕೆ ಉಂಟಾದರೆ ಬೇಡಿಕೆ ರೇಖೆಯು ಎಡಗಡೆಗೆ ಪಲ್ಲಟಗೊಳ್ಳುತ್ತದೆ.
ಅನುಭೋಗಿಯ ಅಭಿರುಚಿ ಮತ್ತು ಆದ್ಯತೆಗಳಲ್ಲಿ ಬದಲಾವಣೆ ಉಂಟಾದರೂ ಕೂಡ ಬೇಡಿಕೆ ರೇಖೆಯು ಪಲ್ಲಟಗೊಳ್ಳುತ್ತದೆ. ಒಂದು ಸರಕಿನ ಪರವಾಗಿ ಅನುಭೋಗಿಯ ಆದತ್ಯೆಗಳು ಬದಲಾವಣೆಯಾದರೆ, ಅಂತಹ ಸರಕಿನ ಬೇಡಿಕೆ ರೇಖೆಯು ಬಲಗಡೆಗೆ ಪಲ್ಲಟಗೊಳ್ಳುತ್ತದೆ. ಇದಕ್ಕೆ ಪ್ರತಿಯಾಗಿ, ಒಂದು ಸರಕಿನ ವಿರುದ್ಧವಾಗಿ ಅನುಭೋಗಿಯ ಅಭಿರುಚಿ ಮತ್ತು ಆದ್ಯತೆಗಳು ಬದಲಾವಣೆಯಾದರೆ ಬೇಡಿಕೆರೇಖೆಯು ಎಡಗಡೆಗೆ ಪಲ್ಲಟಗೊಳ್ಳುತ್ತದೆ. ಉದಾಹರಣೆ ಬೇಸಿಗೆ ಕಾಲದಲ್ಲಿ ಅನುಭೋಗಿಯು ಐಸ್‌ಕ್ರೀಂ ಕೊಳ್ಳಲು ಹೆಚ್ಚು ಆದ್ಯತೆ ವ್ಯಕ್ತಪಡಿಸುತ್ತಾಳೆ. ಆಗ ಬೇಡಿಕೆ ರೇಖೆಯು ಬಲಭಾಗಕ್ಕೆ ಪಲ್ಲಟಗೊಳ್ಳುತ್ತದೆ. ತಂಪುಪಾನೀಯಗಳು ಆರೋಗ್ಯಕ್ಕೆ ಹಾನಿಕಾರಕವೆಂಬ ಸಂಗತಿಯಿಂದಾಗಿ ಅನುಭೋಗಿಯು ತಂಪುಪಾನೀಯಗಳಿಗೆ ಆದ್ಯತೆ ನೀಡದಿದ್ದರೆ, ಬೇಡಿಕೆಯ ರೇಖೆಯು ಎಡಭಾಗಕ್ಕೆ ಪಲ್ಲಟಗೊಳ್ಳುತ್ತದೆ.
FAQ :
ಅನುಭೋಗಿಯು ತನ್ನ ಆದಾಯವನ್ನು ಸಂಪೂರ್ಣವಾಗಿ ಖರ್ಚುಮಾಡಿಕೊಳ್ಳಬಹುದಾದ ಸರಕುಗಳ ಎಲ್ಲಾ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ, ಇದು ಇಳಿಮುಖ ಇಳಿಜಾರನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಬಜೆಟ್ ರೇಖೆಯು ಅನುಭೋಗಿಯ ಆದಾಯಕ್ಕಿಂತ ಕಡಿಮೆ ಮೆಚ್ಚಿದ ಸಂಯೋಜನೆಯನ್ನು ಪ್ರತಿನಿದಿಸುತ್ತದೆ.
ಒಂದು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಬೆಲೆಯಲ್ಲಿ ಅನುಭೋಗಿಯೊಬ್ಬನು ಮಾರುಕಟ್ಟೆಯಲ್ಲಿ ಕೊಳ್ಳುವ ಸರಕೊಂದರ ಪ್ರಮಾಣವನ್ನು “ಬೇಡಿಕೆ” ಎನ್ನುತ್ತಾರೆ.
ಬಯಕೆಯನ್ನು ತೃಪ್ತಿ ಪಡಿಸುವ ಸರಕು ಮತ್ತು ಸೇವೆಗಳಲ್ಲಿನ ಶಕ್ತಿಗೆ “ತುಷ್ಟಿಗುಣ” ಎನ್ನುವರು.
ಇತರೆ ವಿಷಯಗಳು :
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.