ದ್ವಿತೀಯ ಪಿ.ಯು.ಸಿ ಸರ್ಕಾರದ ಮುಂಗಡ ಪತ್ರ ಮತ್ತು ಆರ್ಥಿಕತೆ ಅರ್ಥಶಾಸ್ತ್ರ ನೋಟ್ಸ್‌ | 2nd Puc Economics Chapter 11 Notes in Kannada

ದ್ವಿತೀಯ ಪಿ.ಯು.ಸಿ ಸರ್ಕಾರದ ಮುಂಗಡ ಪತ್ರ ಮತ್ತು ಆರ್ಥಿಕತೆ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 2nd Puc Economics Chapter 11 Notes Question Answer Pdf Download in Kannada Medium Kseeb Solutions For Class 12 Economics Chapter 11 Notes in Kannada Mungada Patra Mattu Artikate Economics Notes Pdf 2023 2nd Puc Economics 11 Chapter Notes in Kannada 2nd Puc Economics 11 Lesson Notes in Kannada medium Government Budget and the Economy Notes in Kannada

2nd Puc Economics Chapter 11 Notes in Kannada

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯ ಅಥವಾ ಪದದಲ್ಲಿ ಉತ್ತರಿಸಿ,

1. ಸಾರ್ವಜನಿಕ ಸರಕುಗಳೆಂದರೇನು?

ಯಾವುದೇ ಒಬ್ಬ ನಿರ್ದಿಷ್ಟ ಅನುಭೋಗಿಗೆ ಸೀಮಿತವಾಗಿರದೆ ಎಲ್ಲರಿಗೂ ಲಭ್ಯವಾಗುವ ಸರಕುಗಳಿಗೆ ಸಾರ್ವಜನಿಕ ಸರಕು ಎನ್ನುವರು.

2. ಪುಕ್ಕಟೆ ಸವಾರರೆಂದರೆ ಯಾರು?

ಸಾಮಾನ್ಯವಾಗಿ ಸುಂಕ (ತೆರಿಗೆ)ಯನ್ನು ಪಾವತಿಸದೇ ಅನುಕೂಲಗಳನ್ನು ಪಡೆಯುವವರನ್ನು ಪುಕ್ಕಟೆ ಸವಾರರು ಎನ್ನುವರು.

ಅಥವಾ

ಹಣ ಪಾವತಿಸದೆ ಸಾರ್ವಜನಿಕ ಸರಕುಗಳ ಬಳಕೆದಾರರನ್ನು ಪುಕ್ಕಟೆ ಸವಾರರು ಎಂದು ಕರೆಯುತ್ತರೆ.

3. ಸಾರ್ವಜನಿಕ ಸರಬರಾಜು ಎಂದರೆ ಏನೆಂದು ಅರ್ಥೈಸುವಿರಿ?

ಆಯವ್ಯಯದ ಮೂಲಕ ಹಣಕಾಸನ್ನು ಒದಗಿಸಲ್ಪಟ್ಟು ಮತ್ತು ಯಾವುದೇ ನೇರ ಪಾವತಿಯಿಂದ ಮುಕ್ತವಾಗಿ ದೊರೆಯುವಂಥಹ ಸರಕುಗಳಿಗೆ ಸಾರ್ವಜನಿಕ ಸರಬರಾಜು ಎನ್ನುವರು. ಈ ಸರಕುಗಳನ್ನು ಸರ್ಕಾರದ ನಿರ್ವಹಣೆಯಲ್ಲಿ ಅಥವಾ ಖಾಸಗಿ ವಲಯದಲ್ಲಿ ಉತ್ಪಾದಿಸಬಹುದಾಗಿದೆ.

4. ಪುರೋಗಾಮಿ ತೆರಿಗೆಯ ಅರ್ಥ ನೀಡಿ.

ಮರು ಹಂಚಿಕೆಯ ಉದ್ದೇಶವನ್ನು ಸಾಧಿಸಲು ವಿಧಿಸಲಾಗುವ ತೆರಿಗೆಯನ್ನು ಪುರೋಗಾಮಿ ತೆರಿಗೆ ಎನ್ನುವರು.

5. ಕಂದಾಯ ಸ್ವೀಕೃತಿ ಎಂದರೇನು?

ಮರು ಪಾವತಿ ಮಾಡಲಾಗದ ಸರಕಾರದ ಸ್ವೀಕೃತಿಗಳನ್ನು ಕಂದಾಯ ಸ್ವೀಕೃತಿ ಎನ್ನುವರು.

6. ಬಂಡವಾಳ ಸ್ವೀಕೃತಿಯ ಅರ್ಥ ಬರೆಯಿರಿ.

ಹೊಣೆಗಾರಿಕೆಯನ್ನು ಸೃಷ್ಟಿಸುವಂತಹ ಅಥವಾ ಹಣಕಾಸಿನ ಆಸ್ತಿಗಳನ್ನು ಕಡಿಮೆ ಮಾಡುವಂತಹ ಸರಕಾರದ ಎಲ್ಲಾ ಸ್ವೀಕೃತಿಗಳನ್ನು ಬಂಡವಾಳ ಸ್ವೀಕೃತಿಗಳು ಎನ್ನುವರು.

7. ಕಂದಾಯ ವೆಚ್ಚದ ಅರ್ಥ ನೀಡಿ.

ಕೇಂದ್ರ ಸರಕಾರದ ಭೌತಿಕ ಅಥವಾ ಹಣಕಾಸಿನ ಆಸ್ತಿಗಳ ಸೃಷ್ಟಿಯ ಹೊರತಾದ ಉದ್ದೇಶಗಳಿಗೆ ಮಾಡುವ ವೆಚ್ಚವನ್ನು ಕಂದಾಯ ವೆಚ್ಚ ಎನ್ನುವರು.

8. ಬಂಡವಾಳ ವೆಚ್ಚದ ಅರ್ಥ ನೀಡಿ.

ಭೌತಿಕ ಅಥವಾ ಹಣಕಾಸಿನ ಆಸ್ತಿಗಳನ್ನು ಸೃಷ್ಟಿಸುವಂತಹ ಅಥವಾ ಹಣಕಾಸಿನ ಹೊಣೆಗಾರಿಕೆಯನ್ನು ಕಡಿತಕ್ಕೆ ಕಾರಣವಾಗುವ ಸರ್ಕಾರದ ವೆಚ್ಚಗಳನ್ನು ಬಂಡವಾಳ ವೆಚ್ಚ ಎನ್ನುವರು.

9, FRBMA ಯನ್ನು ವಿಸ್ತರಿಸಿ.

“ಕೋಶೀಯ ಹೊಣೆಗಾರಿಕೆ ಮತ್ತು ಮುಂಗಡಪತ್ರ ನಿರ್ವಹಣೆಯ ಕಾಯಿದೆ”.

10, .ಪ್ರಾಥಮಿಕ ಕೊರತೆ ಎಂದರೇನು?

ಸರ್ಕಾರ ಪಡೆಯುವ ಸಾಲದ ಅಗತ್ಯತೆಯು ಸಂಚಿತ ಸಾಲದ ಮೇಲಿನ ಬಡ್ಡಿಯ ಹೊರೆಗಳನ್ನು ಒಳಗೊಂಡಿರುವು ಪ್ರಾಥಮಿಕ ಕೊರತೆ ಎನ್ನುವರು.

ಕೆಳಗಿನ ಪ್ರಶ್ನೆಗಳಿಗೆ 4 ವಾಕ್ಯಗಳಲ್ಲಿ ಉತ್ತರಿಸಿ.

2nd Puc Economics Chapter 11 Notes in Kannada

1. ಸಾರ್ವಜನಿಕ ಸರಬರಾಜು ಮತ್ತು ಸಾರ್ವಜನಿಕ ಉತ್ಪಾದನೆಯ ವ್ಯತ್ಯಾಸವನ್ನು ತಿಳಿಸಿ,

ಸಾರ್ವಜನಿಕ ಸರಬರಾಜುಸಾರ್ವಜನಿಕ ಉತ್ಪಾದನೆ
ಆಯವ್ಯಯದ ಮೂಲಕ ಹಣಕಾಸನ್ನು ಒದಗಿಸಲ್ಪಟ್ಟು ಮತ್ತು ಯಾವುದೇ ನೇರ ಪಾವತಿಯಿಂದ ಮುಕ್ತವಾಗಿ ದೊರೆಯುವಂಥಹುವುದನ್ನು ಸಾರ್ವಜನಿಕ ಸರಬರಾಜು ಎನ್ನುವರು.ಸರಕುಗಳನ್ನು ಸಾರ್ವಜನಿಕರಿಗಾಗಿ ನೇರವಾಗಿ ಸರ್ಕಾರದ ನಿರ್ವಹಣೆಯಲ್ಲಿ ಅಥವಾ ಖಾಸಗಿ ವಲಯದಲ್ಲಿ ಉತ್ಪಾದಿಸುವುದನ್ನು ಸಾರ್ವಜನಿಕ ಉತ್ಪಾದನೆ ಎನ್ನುವರು
ಸಾರ್ವಜನಿಕ ಸರಬರಾಜು ಸಾರ್ವಜನಿಕ ಉತ್ಪಾದನೆಯಂತೆ ಇರತೆ ಭಿನ್ನವಾಗಿರುತ್ತದೆಸಾರ್ವಜನಿಕ ಉತ್ಪಾದನೆಯು ಯಾವುದೇ ಒಟ್ಟು ನಿರ್ದಿಷ್ಟ ಅನುಭೋಗಿಗೆ ಸೀಮಿತವಾಗಿಲ್ಲ

2. ಪುಕ್ಕಟೆ ಸವಾರರೆಂದರೆ ಯಾರು? ಅವರನ್ನು ಏಕೆ ಹಾಗೆ ಕರೆಯುತ್ತಾರೆ?

ಸಾಮಾನ್ಯವಾಗಿ ಸುಂಕ (ತೆರಿಗೆ)ಯನ್ನು ಪಾವತಿಸದೇ ಅನುಕೂಲಗಳನ್ನು ಪಡೆಯುವವರನ್ನು ಪುಕ್ಕಟೆ ಸವಾರರು ಎನ್ನುವರು.

ಅನುಭೋಗಿಗಳು ತಾವು ಉಚಿತವಾಗಿ ಪಡೆದುದಕ್ಕೆ ಸ್ವ ಇಚ್ಛೆಯಿಂದ ಪಾವತಿಸುವುದಿಲ್ಲ ಮತ್ತು ಅವರು ಯಾರಿಗೂ ವಿಶೇಷವಾಗಿ ಸೇರದ ಆಸ್ತಿಯನ್ನು ಅನುಭವಿಸಿದ್ದಕ್ಕೆ ಯಾವುದೇ ಪಾವತಿ ಮಾಡುವುದಿಲ್ಲ. ಆದ್ದರಿಂದ ಇವರನ್ನು ಪುಕ್ಕಟೆ ಸವಾರರು ಎನ್ನುತ್ತಾರೆ.

3. ಮಿಗುತೆ ಮುಂಗಡ ಪತ್ರ ಮತ್ತು ಕೊರತೆ ಮುಂಗಡ ಪತ್ರದ ನಡುವಿನ ವ್ಯತ್ಯಾಸವನ್ನು ತಿಳಿಸಿ.

ಮಿಗತೆ ಮುಂಗಡ ಪತ್ರವು ಸರ್ಕಾರದ ಆರ್ಥಿಕ ಸುಸ್ಥಿತಿಯನ್ನು ಸೂಚಿಸುತ್ತದೆ. ಕೆಲವೊಮ್ಮೆ ಇದು ಸಾಮಾಜಿಕ ಕಲ್ಯಾಣದ ದೃಷ್ಟಿಯಲ್ಲಿ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಸರ್ಕಾರವು ಸಂಪನ್ಮೂಲಗಳನ್ನು ಜನರ ಕಲ್ಯಾಣಕ್ಕಾಗಿ ಖರ್ಚು ಮಾಡುವ ಬದಲಾಗಿ ಸಂಪತ್ತನ್ನು ಸಂಗ್ರಹಿಸುವುದರಲ್ಲಿ ತಲ್ಲೀನವಾಗಿರುತ್ತದೆ.

ಕೋಶೀಯ ಮುಂಗಡ ಪತ್ರವು ಆದಾಯಕ್ಕಿಂತ ಹೆಚ್ಚಿನ ವೆಚ್ಚವನ್ನು ಸೂಚಿಸುತ್ತದೆ. ಆರ್ಥಿಕ ಮುಗ್ಗಟ್ಟಿನ ಹೊಡೆತದಿಂದ ಹೊರ ಬರಲು ಸರ್ಕಾರ ಉದ್ದೇಶ ಪೂರ್ವಕ ಆದಾಯಕ್ಕಿಂತ ಅಧಿಕ ವೆಚ್ಚದ ನೀತಿಗೆ ಹೆಚ್ಚು ಆದ್ಯತೆ ಕೊಡುತ್ತದೆ.

4. ಕೇಂದ್ರ ಸರ್ಕಾರದ ತೆರಿಗೆಯೇತರ ಆದಾಯಗಳನ್ನು ತಿಳಿಸಿ.

ಕೇಂದ್ರ ಸರ್ಕಾರದ ತೆರಿಗೇಯೇತರ ಆದಾಯವು ಮುಖ್ಯವಾಗಿ ಕೇಂದ್ರ ಸರ್ಕಾರ ನೀಡುವ ಸಾಲದ ಮೇಲಿನ ಬಡ್ಡಿ ಸ್ವೀಕೃತಿ, ಲಾಭಾಂಶ ಮತ್ತು ಸರ್ಕಾರದ ಹೂಡಿಕೆ ಮೇಲಿನ ಲಾಭಾಂಶಗಳು ಮತ್ತು ಲಾಭಗಳು, ಶುಲ್ಕಗಳು ಮತ್ತು ಸರ್ಕಾರದಿಂದ ಮಾಡಲಾದ ಸೇವೆಗಳಿಗೆ ನೀಡಿದ ಸೇವೆಗಳ ಇತರೆ ಸ್ವೀಕೃತಿಗಳನ್ನು ಒಳಗೊಂಡಿರುತ್ತದೆ. ವಿದೇಶಗಳ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ನಗದು ಅನುದಾನಗಳೂ ಸಹ ಇದರಲ್ಲಿ ಸೇರಿರುತ್ತವೆ.

5. ಪ್ರಮಾಣಾನುಗುಣ ಆದಾಯದ ತೆರಿಗೆಯು ಸ್ವಯಂಚಾಲಿತ ಸ್ಥಿರಕಾರಕವಾಗಿ (ಕಂಪನ ಗ್ರಾಹಕವಾಗಿ) ಏಕೆ ಕೆಲಸ ಮಾಡುತ್ತದೆ?

ಪ್ರಮಾಣಾನುಗುಣ ತೆರಿಗೆಗಳು ಕೇವಲ ಆದಾಯದ ಪ್ರತಿಹಂತದಲ್ಲಿನ ಅನುಭೋಗವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಅನುಭೋಗ ಬಿಂಬಕದ ಇಳಿಜಾರನ್ನು ಕಡಿಮೆ ಮಾಡುತ್ತದೆ. ಪರಿಮಾಣಾತ್ಮಕ ಆದಾಯ ತೆರಿಗೆಯು ಸ್ವಯಂ ಚಾಲಿತ ಸ್ಥಿರಕಾರರವಾಗಿ ಕೆಲಸ ಮಾಡುತ್ತದೆ. ಇದು ಒಂದು ಕಂಪನಗ್ರಾಹಕ (ಆಘಾತವನ್ನು ತಡೆಯುವ) ಏಕೆಂದರೆ ಇದು ಖರ್ಚು ಮಾಡಬಹುದಾದ ಆದಾಯ ಮತ್ತು ಅನುಭೋಗಿಗಳ ವೆಚ್ಚವನ್ನು GDPಯಲ್ಲಿನ ಏರಿಳಿತಗಳಿಗೆ ಕಡಿಮೆ ಸಂವೇದನಾಶೀಲವಾಗಿಸುತ್ತದೆ. GDP ಯು ಏರಿಕೆಯಾದಾಗ, ಖರ್ಚು ಮಾಡಬಹುದಾದ ಆದಾಯವು ಸಹ ಹೆಚ್ಚುತ್ತದೆ. ಆದರೆ ಇದು GDP ಯ ಹೆಚ್ಚಳದ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ, ಏಕೆಂದರೆ ಇದರ ಒಂದು ಭಾಗವು ತೆರಿಗೆಯಾಗಿ ಹಾರಿ ಹೋಗುತ್ತದೆ.

ಕೆಳಗಿನ ಪ್ರಶ್ನೆಗಳಿಗೆ 12 ವಾಕ್ಯಗಳಲ್ಲಿ ಉತ್ತರಿಸಿ.

2nd Puc Economics Chapter 11 Notes in Kannada

1. ರಿಕಾರ್ಡೊನ ಸಮಾನತೆಯನ್ನು ಕುರಿತು ಒಂದು ಲಘು ಟಿಪ್ಪಣಿ ಬರೆಯಿರಿ.

19ನೇ ಶತಮಾನದ ಶ್ರೇಷ್ಠ ಅರ್ಥಶಾಸ್ತ್ರಜರಲ್ಲಿ ಒಬ್ಬನಾದ ಡೇವಿಡ್ ರಿಕಾರ್ಡೋರವರು – ‘ಅತ್ಯಧಿಕ ಕೊರತೆಯ – ಸಮ್ಮುಖದಲ್ಲಿ ಜನರು ಹೆಚ್ಚು ಉಳಿತಾಯ ಮಾಡುತ್ತಾರೆ’ ಎಂಬುದಾಗಿ ವಾದಿಸಿದರು. ಇದನ್ನೇ ‘ರಿಕಾರ್ಡೋವಿನ ಸಮಾನತೆ’ ಎಂದು ಕರೆಯಲಾಗಿದೆ. ಏಕೆಂದರೆ ತೆರಿಗೆ ಮತ್ತು ಸಾಲಗಳೆರೆಡೂ ವೆಚ್ಚಕ್ಕೆ ಹಣಕಾಸನ್ನು ಒದಗಿಸುವ ಸಮಾನ ಸಾಧನಗಳಾಗಿವೆ. ಸರಕಾರ ಇಂದು ಸಾಲವನ್ನು ಪಡೆಯುವ ಮೂಲಕ ಅಧಿಕ ವೆಚ್ಚವನ್ನು ಮಾಡಿದರೆ ಈ ಸಾಲವನ್ನು ಭವಿಷ್ಯತ್ತಿನಲ್ಲಿ ತೆರಿಗೆಗಳ ಮೂಲಕ ಮರುಪಾವತಿ ಮಾಡಲಾಗುವುದು. ಇಂದಿನ ತೆರಿಗೆ ಹೆಚ್ಚಳದಿಂದ ಭರಿಸಲಾಗುವ ಸರ್ಕಾರದ ವೆಚ್ಚ ಹೆಚ್ಚಳವು ಆರ್ಥಿಕತೆಯ ಮೇಲೆ ಯಾವ ಪರಿಣಾಮ ಬೀರುತ್ತದೋ ಅದೇ ಪರಿಣಾಮವನ್ನು ಇದು ಬೀರುತ್ತದೆ.

ಅನುಭೋಗಿಗಳು ಭವಿಷ್ಯತ್ತಿನ ಪೀಳಿಗೆಯವರ ಬಗ್ಗೆ ಕಾಳಜಿಯುಳ್ಳವರಾಗಿರುತ್ತಾರೆ. ಏಕೆಂದರೆ ಅವರು ಪ್ರಸ್ತುತ ಪೀಳಿಗೆಯವರ ಮಕ್ಕಳು ಮತ್ತು ಮೊಮ್ಮಕ್ಕಳಾಗಿರುತ್ತಾರೆ, ಮತ್ತು ಸಂಬಂಧಿತ ನಿರ್ಧಾರ ಮಾಡುವ ಘಟಕವಾದ ಕುಟುಂಬದ ಅಸ್ಥಿತ್ವ ಸದಾ ಮುಂದುವರೆಯುತ್ತದೆ. ಅವರು ಇಂದು ಉಳಿತಾಯವನ್ನು ಹೆಚ್ಚಿಸಬಹುದು ಇದು ಸರ್ಕಾರ ಉಳಿತಾಯ ಮಾಡದೆ ಇರುವುದನ್ನು ಸರಿದೂಗಿಸುತ್ತದೆ. ಹಾಗಾಗಿ ರಾಷ್ಟ್ರೀಯ ಉಳಿತಾಯವು ಬದಲಾಗುವುದಿಲ್ಲ. ಆದ್ದರಿಂದಲೇ ರಿಕಾರ್ಡೋವಿನ ಈ ಅಭಿಪ್ರಾಯವನ್ನು ರಿಕಾರ್ಡೋವಿನ ಸಮಾನತೆ’ ಎಂದು ಕರೆದಿದ್ದಾರೆ.

2. ಸ್ವೀಕೃತಿಗಳ ವರ್ಗೀಕರಣವನ್ನು ವಿವರಿಸಿ.

ಸರ್ಕಾರದ ಮುಂಗಡ ಪತ್ರಗಳಲ್ಲಿ ಪ್ರಮುಖ ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ

1) ಕಂದಾಯ ಮುಂಗಡ ಪತ್ರ

2) ಬಂಡವಾಳ ಮುಂಗಡ ಪತ್ರ

ಸ್ವೀಕೃತಿಗಳನ್ನು ಈ ಮೇಲ್ಕಂಡ ವಿಧಗಳಲ್ಲಿ ಕಾಣಬಹುದು. ಅವುಗಳೆಂದರೆ –

1) ಕಂದಾಯ ಸ್ವೀಕೃತಿಗಳು

2) ಬಂಡವಾಳ ಸ್ವೀಕೃತಿಗಳು

ಕಂದಾಯ ಸ್ವೀಕೃತಿಗಳು :

ಕಂದಾಯ ಸ್ವೀಕೃತಿಗಳು ಮರುಪಾವತಿ ಮಾಡಲಾಗದ ಸರ್ಕಾರದ ಸ್ವೀಕೃತಿಗಳಾಗಿವೆ. ಇವುಗಳು ಸರಕಾರದಿಂದ ಮರುಪಾವತಿಯಾಗುವುದಿಲ್ಲ. ಈ ಸ್ವೀಕೃತಿಗಳನ್ನು ತೆರಿಗೆ ಆದಾಯ ಮತ್ತು ತೆರಿಗೇತರ ಆದಾಯಗಳೆಂದು ವಿಂಗಡಿಸಲಾಗುವುದು, ತೆರಿಗೆ ಆದಾಯಗಳು ಕೇಂದ್ರ ಸರ್ಕಾರ ವಿಧಿಸುವ ತೆರಿಗೆಗಳು ಮತ್ತು ಇತರ ಸುಂಕಗಳನ್ನು ಒಳಗೊಂಡಿರುತ್ತದೆ. ತೆರಿಗೆ ಆದಾಯಗಳು ಕಂದಾಯ ಸ್ವೀಕೃತಿಯ ಒಂದು ಪ್ರಮುಖ ಭಾಗವಾಗಿದೆ. ಅವುಗಳೆಂದರೆ ವೈಯುಕ್ತಿಕ ವರಮಾನ ತೆರಿಗೆ ಕಾರ್ಮೋರೇಷನ್ ತೆರಿಗೆ, ಅಬಕಾರಿ ತೆರಿಗೆ, ಆಮದು – ರಫ್ತು ಸುಂಕ, ಸೇವಾ ತೆರಿಗೆ, ಸಂಪತ್ತಿನ ತೆರಿಗೆ ಮುಂತಾದವುಗಳು, ಕೇಂದ್ರ ಸರ್ಕಾರದ ತೆರಿಗೆಯೇತರ ಆದಾಯವು ಮುಖ್ಯವಾಗಿ ಕೇಂದ್ರ ಸರ್ಕಾರ ನೀಡುವ ಸಾಲದ ಮೇಲಿನ ಬಡ್ಡಿ

ಸ್ವೀಕೃತಿ ಲಾಭಾಂಶ, ಶುಲ್ಕಗಳು, ಸೇವೆಗಳಿಗೆ ನೀಡಿದ ಸೇವೆಗಳ ಇತರೆ ಸ್ವೀಕೃತಿಗಳನ್ನು ಒಳಗೊಂಡಿರುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳ ನಗದು ಅನುದಾನಗಳೂ ಸಹ ಇದರಲ್ಲಿ ಸೇರಿರುತ್ತದೆ. ಹಣಕಾಸಿನ ಬಿಲ್ಲಿನಲ್ಲಿ ಮಾಡಲಾದ ತೆರಿಗೆ ಪ್ರಸ್ತಾವನೆಯ ಪರಿಣಾಮಗಳನ್ನು ಕಂದಾಯ ಸ್ವೀಕೃತಿಯ ಅಂದಾಜು ಲೆಕ್ಕ ತೆಗೆದುಕೊಳ್ಳುತ್ತದೆ.

ಬಂಡವಾಳ ಸ್ವೀಕೃತಿಗಳು :

ಹೊಣೆಗಾರಿಕೆಯನ್ನು ಸೃಷ್ಟಿಸುವಂಥಹ ಅಥವಾ ಹಣಕಾಸಿನ ಆಸ್ತಿಗಳನ್ನು ಕಡಿಮೆ ಮಾಡುವಂಥಹ ಸರಕಾರದ ಎಲ್ಲಾ ಸ್ವೀಕೃತಿಗಳನ್ನು ಬ೦ಡವಾಳ ಸ್ವೀಕೃತಿಗಳು ಎನ್ನುವರು. ಬಂಡವಾಳ ಸ್ವೀಕೃತಿಗಳ ಪ್ರಮುಖ ಬಾಬುಗಳೆಂದರೆ ಮಾರುಕಟ್ಟೆ ಸಾಲಗಳೆಂದು ಕರೆಯಲಾಗುವ ಸಾರ್ವಜನಿಕರಿಂದ ಸರ್ಕಾರ ಎತ್ತುವ ಸಾಲುಗಳು, ಖಜಾನೆ ಹುಂಡಿಗಳನ್ನು ಮಾರಾಟ ಮಾಡುವ ಮೂಲಕ ರಿಸರ್ವ್ ಬ್ಯಾಂಕ್‌ನಿಂದ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸರ್ಕಾರ ಪಡೆಯುವ ಸಾಲ, ಉಳಿತಾಯ ಖಾತೆಗಳು, ಪ್ರಮಾಣ ಪತ್ರಗಳು, ಭವಿಷ್ಯ ನಿಧಿಗಳು ಇತ್ಯಾದಿಗಳು ಇದರಲ್ಲಿ ಸೇರ್ಪಡೆಯಾಗುತ್ತದೆ.

3. ಕೋಶೀಯ ಕೊರತೆಯು ಸರ್ಕಾರದ ಸಾಲದ ಅಗತ್ಯತೆಯನ್ನು ತೋರಿಸುತ್ತದೆ ಇದನ್ನು ಸ್ಪಷ್ಟಪಡಿಸಿ.

ಸರ್ಕಾರದ ಒಟ್ಟು ವೆಚ್ಚ ಮತ್ತು ಅದರ ಸಾಲವನ್ನು ಹೊರತು ಪಡಿಸಿದ ಒಟ್ಟು ಸ್ವೀಕೃತಿಗಳ ನಡುವಿನ ವ್ಯತ್ಯಾಸ ವನ್ನು ಕೋಶೀಯ ಕೊರತೆ ಎನ್ನುವರು.

ಕೋಶೀಯ ಕೊರತೆ = ಒಟ್ಟು ವೆಚ್ಚ – (ಕಂದಾಯ ಸ್ವೀಕೃತಿಗಳು + ಸೃಷ್ಟಿಸಿದ ಬಂಡವಾಳ ಸ್ವೀಕೃತಿಗಳು) ಸಾಲದ ಮೂಲಕ ಹಣಕಸನ್ನು ಪೂರೈಸುವುದರಿಂದ ಕೋಶೀಯ ಕೊರತೆಯನ್ನು ತೊಂಬ ಬೇಕಾಗುತ್ತದೆ. ಸರ್ಕಾರದ ಎಲ್ಲಾ ಮೂಲಗಳಿಂದ ಬರುವ ಒಟ್ಟು ಸಾಲಗಳ ಅವಶ್ಯಕತೆಯನ್ನು ಸೂಚಿಸುತ್ತದೆ.

ಸರ್ಕಾರ ಸಂಗ್ರಹಿಸಿದ ಆದಾಯಕ್ಕಿಂತ ಅಧಿಕ ವೆಚ್ಚವನ್ನು ಮಾಡಿದಾಗ ಅದು ಮುಂಗಡ ಪತ್ರದ ಕೊರತೆಗೆ ಕಾರಣವಾಗುತ್ತದೆ. ಕೋಶೀಯ ಕೊರತೆಯು ಸರ್ಕಾರದ ಒಟ್ಟು ವೆಚ್ಚ ಮತ್ತು ಅದರ ಸಾಲವನ್ನು ಹೊರತುಪಡಿಸಿದ ಒಟ್ಟು ಸ್ವೀಕೃತಿಗಳ ನಡುವಿನ ವ್ಯತ್ಯಾಸವಾಗಿದೆ.

ಅಂದರೆ, ಒಟ್ಟು ಕೋಶೀಯ ಕೊರತೆ = ಒಟ್ಟು ವೆಚ್ಚ – ಕಂದಾಯ ಸ್ವೀಕೃತಿಗಳು + ಸಾಲವನ್ನು ಸೃಷ್ಟಿಸಿದ ಬಂಡವಾಳ ಸ್ವೀಕೃತಿಗಳು ಸಾಲದ ಮೂಲಕ ಹಣಕಾಸನ್ನು ಪೂರೈಸುವುದರಿಂದ ಕೋಶೀಯ ಕೊರತೆಯನ್ನು ತುಂಬ ಬೇಕಾಗುತ್ತದೆ. ಇದು ಸರ್ಕಾರದ ಎಲ್ಲಾ ಮೂಲಗಳಿಂದ ಬರುವ ಒಟ್ಟು ಸಾಲಗಳ ಅವಶ್ಯಕತೆಯನ್ನು ಸೂಚಿಸುತ್ತದೆ. ಒಟ್ಟು ಕೋಶೀಯ ಕೊರತೆ = ದೇಶದಲ್ಲಿನ ನಿವ್ವಳ ಸಾಲಗಳು = ದೇಶದಲ್ಲಿನ ನಿವ್ವಳ ಸಾಲಗಳು + RBI ನಿಂದ ಪಡೆದ ಸಾಲಗಳು + ವಿದೇಶದಿಂದ ಪಡೆದ ಸಾಲಗಳು

ಪ್ರಾಥಮಿಕ ಕೊರತೆ : ಸರ್ಕಾರ ಪಡೆಯುವ ಸಾಲದ ಅಗತ್ಯತೆಯು ಸಂಚಿತ ಸಾಲದ ಮೇಲಿನ ಬಡ್ಡಿಯ ಹೊರೆಗಳನ್ನು ಒಳಗೊಂಡಿರುತ್ತದೆ. ಪ್ರಾಥಮಿಕ ಕೊರತೆಯನ್ನು ಮಾಪನ ಮಾಡುವ ಗುರಿಯು ಪ್ರಸ್ತುತ ಕೋಶೀಯ ಅಸಮ ತೋಲನದ ಮೇಲೆ ಗಮನವನ್ನು ಕೇಂದ್ರೀಕರಿಸುವುದಾಗಿದೆ. ವೆಚ್ಚದ ಕಾರಣದಿಂದ ಮಾಡಿದ ಸಾಲದ ಅಂದಾಜು ಮಾಡಲು, ಪ್ರಾಥಮಿಕ ಕೊರತೆಯನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ.

ಒಟ್ಟು ಪ್ರಾಥಮಿಕ ಕೊರತೆ = ಒಟ್ಟು ಕೋಶೀಯ ಕೊರತೆ – ನಿವ್ವಳ ಬಡ್ಡಿ ಹೊಣೆಗಾರಿಕೆಗಳು,

ಕೋಶೀಯ ಕೊರತೆಯು ಸರ್ಕಾರದ ವೆಚ್ಚ ಮತ್ತು ಅದರ ಸಾಲವನ್ನು ಹೊರತು ಪಡಿಸಿದ ಒಟ್ಟು ಸ್ವೀಕೃತಿಗಳ ನಡುವಿನ ವ್ಯತ್ಯಾಸವಾಗಿದೆ.

ಅಭ್ಯಾಸದ ಪ್ರಶ್ನೆಗಳು

2nd Puc Economics Chapter 11 Notes in Kannada

1. ಸಾರ್ವಜನಿಕ ಸರಕುಗಳನ್ನು ಸರ್ಕಾರವೇ ಏಕೆ ಪೂರೈಸಬೇಕೆಂಬುದನ್ನು ವಿವರಿಸಿ?

ಆರ್ಥಿಕ ಜೀವನದ ಮೇಲೆ ಸರ್ಕಾರವು ಪ್ರಭಾವ ಬೀರುತ್ತದೆ. ಆದ್ದರಿಂದ ಸಾರ್ವಜನಿಕ ಸರಕುಗಳನ್ನು (ರಾಷ್ಟ್ರೀಯ ರಕ್ಷಣೆ ರಸ್ತೆಗಳು, ಸರ್ಕಾರದ ಆಡಳಿತ) ಮಾರುಕಟ್ಟೆ ಯಾಂತ್ರಿಕತೆಯ ಮೂಲಕ ಒದಗಿಸುವುದು ಸಾಧ್ಯವಿಲ್ಲ ಅಂದರೆ ವೈಯಕ್ತಿಕ ಅನುಭೋಗಿಗಳು ಮತ್ತು ಉತ್ಪಾದಕರ ನಡುವಿನ ವ್ಯವಹಾರದಿಂದ ಒದಗಿಸುವುದು ಸಾಧ್ಯವಿಲ್ಲ ಮತ್ತು ಅವುಗಳನ್ನು ಸರ್ಕಾರವೇ ಒದಗಿಸಬೇಕಾಗುತ್ತದೆ,

ಸಾರ್ವಜನಿಕ ಸರಕುಗಳನ್ನು ಸರ್ಕಾರವು ಪೂರೈಸುವ ಅಗತ್ಯತೆಯನ್ನು ಅರ್ಥಮಾಡಿಕೊಳ್ಳಲು ಯಾವ ಅಂಶಗಳು ಅವುಗಳನ್ನು ಖಾಸಗಿ ಸರಕುಗಳಿಂದ ಭಿನ್ನವಾಗಿಸುತ್ತದೆ ಎಂಬುದನ್ನು ನಾವು ಪರಿಗಣಿಸಬೇಕಾಗುತ್ತದೆ,

ಅದರಲ್ಲಿ ಎರಡು ಪ್ರಮುಖ ವ್ಯತ್ಯಾಸಗಳಿವೆ. ಅವುಗಳೆಂದರೆ-

ಮೊದಲನೇಯದಾಗಿ, ಖಾಸಗಿ ಸರಕುಗಳನ್ನು ಸಾರ್ವಜನಿಕ ಸರಕುಗಳ ಪ್ರಯೋಜನವು ಯಾವುದೇ ಒಬ್ಬ ನಿರ್ದಿಷ್ಟ ಅನುಭೋಗಿಗೆ ಸೀಮಿತವಾಗಿಲ್ಲ ಆದರೆ ಅವುಗಳು ಎಲ್ಲರಿಗೂ ಲಭ್ಯವಾಗುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಯು ಚಾಕೋಲೇಟನ್ನು ಅನುಭೋಗಿಸಿದಾಗ ಅಥವಾ ಶರ್ಟನ್ನು ಧರಿಸಿದಾಗ ಅವು ಇತರೆ ವ್ಯಕ್ತಿಗಳಿಗೆ ಲಭ್ಯವಾಗುವುದಿಲ್ಲ. ಈ ವ್ಯಕ್ತಿಯು ಅನುಭೋಗದ ಪ್ರತಿಸ್ಪರ್ಧಿ ಸಂಬಂಧದ ಮೇಲೆ ನಿಂತಿದೆ, ಆದಾಗ್ಯೂ ಒಂದು ಸಾರ್ವಜನಿಕ ಉದ್ಯಾನವನ ಅಥವಾ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ನಾವು ಪರಿಗಣಿಸಿದಾಗ ಅವುಗಳ ಪ್ರಯೋಜನವು ಎಲ್ಲರಿಗೂ ಲಭ್ಯವಾಗುತ್ತದೆ. ಹಲವು ವ್ಯಕ್ತಿಗಳು ಅನುಭೋಗಿಸುವುದರಿಂದ ಇಂತಹ ಉತ್ಪನ್ನಗಳು ಪ್ರತಿಸ್ಪರ್ದಿತವಾಗುವುದಿಲ್ಲ ಖಾಸಗಿ ಸರಕುಗಳಿಗೆ ಸಂಬಂಧಿಸಿದಂತೆ ಯಾರೇ ಆಗಲಿ ಸರಕುಗಳಿಗೆ ಹಣವನ್ನು ಪಾವತಿಸದಿದ್ದರೆ ಅವುಗಳ ಅನುಕೂಲಗಳನ್ನು ಅನುಭವಿಸುವುದರಿಂದ ಅಂತಹವರನ್ನು ಹೊರತುಪಡಿಸಲಾಗುತ್ತದೆ.

ಉದಾಹರಣೆಗೆ:- ಟೀಕೆಟ್ ಖರೀದಿಸದೆ ಸಿನಿಮಾ ಮಂದಿರದಲ್ಲಾಗಲಿ, ಬಸ್‌ ಪ್ರಯಾಣವಾಗಲಿ, ರೈಲು ಪ್ರಯಾಣವಾಗಲಿ ಮಾಡಲಾಗದು.

2. ಕಂದಾಯ ವೆಚ್ಚ ಮತ್ತು ಬಂಡವಾಳ ವೆಚ್ಚದ ನಡುವಿನ ವ್ಯತ್ಯಾಸಗಳನ್ನು ತಿಳಿಸಿ?

ಕಂದಾಯ ವೆಚ್ಚ ಮತ್ತು ಬಂಡವಾಳ ವೆಚ್ಚದ ನಡುವಿನ ವ್ಯತ್ಯಾಸವನ್ನು ಈ ಕೆಳಕಂಡಂತೆ ತಿಳಿಸಬಹುದು

ಕಂದಾಯ ವೆಚ್ಚ

  • ಕಂದಾಯ ವೆಚ್ಚವು ಕೇಂದ್ರ ಸರ್ಕಾರದ ಭೌತಿಕ ಆಥವಾ ಹಣಕಾಸಿನ ಆಸ್ತಿಗಳ ಸೃಷ್ಠಿಯ ಹೊರತಾದ ಉದ್ದೇಶಗಳಿಗೆ ಮಾಡುವ ವೆಚ್ಚವಾಗಿದೆ.
  • ಇದು ಸರ್ಕಾರದ ಇಲಾಖೆಗಳ ಸಹಜ ಕಾರ್ಯ ನಿರ್ವಹಣೆ ಮತ್ತು ವಿವಿಧ ಸೇವೆಗಳಿಗಾಗಿ ಮಾಡುವ ವೆಚ್ಚಗಳಾಗಿವೆ.
  • ಯೋಜನೇತರ ವೆಚ್ಚದ ಪ್ರಮುಖ ಬಾಬುಗಳೆಂದರೆ, ಬಡ್ಡಿ ಪಾವತಿಗಳು, ರಕ್ಷಣಾ ಸೇವೆಗಳು, ಸಹಾಯಧನಗಳು, ವೇತನಗಳು ಮತ್ತು ಪಿಂಚಣಿಗಳಾಗಿರುತ್ತದೆ.
  • ಮಾರುಕಟ್ಟೆ ಸಾಲಗಳು, ಬಾಹ್ಯಸಾಲಗಳು ಮತ್ತು ವಿವಿಧ ಮೀಸಲು ನಿಧಿಗಳಿಂದ ಪಡೆಯುವ ಸಾಲವಾಗಿದ್ದು ಯೋಜನೇತರ ವೆಚ್ಚದ ಏಕೈಕ ಬಹುದೊಡ್ಡ ಭಾಗವೆನಿಸಿದೆ.

ಬಂಡವಾಳ ವೆಚ್ಚ

  • ಬಂಡವಾಳ ವೆಚ್ಚವು ಭೌತಿಕ ಮತ್ತು ಹಣಕಾಸಿನ ಆಸ್ತಿಗಳನ್ನು ಸೃಷ್ಟಿಸುವಂತಹ ಅಥವಾ ಹಣಕಾಸಿನ ಹೋಣೆಗಾರಿಕೆಯ ಕಡಿತಕ್ಕೆ ಕಾರಣವಾಗುವ ಸರ್ಕಾರದ ವೆಚ್ಚಗಳು ಬಂಡವಾಳ ವೆಚ್ಚಗಳಾಗಿವೆ.
  • ಇದು ಭೂಸ್ವಾದೀನ ಕಟ್ಟಡ ಯಂತ್ರಗಳು, ಸಂ ಕರಣೆಗಳು ಶೇರುಗಳಲ್ಲಿನ ಹೂಡಿಕೆ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನೀಡುವ ಸಾಲಗಳು ಮತ್ತು ಮುಂಗಡಗಳ ಮೇಲೆ ಮಾಡುವ ವೆಚ್ಚವಾಗಿದೆ.
  • ಯೋಜನೇತರ ಬಂಡವಾಳ ವೆಚ್ಚವು ಸರ್ಕಾರ ಒದಗಿಸುವ ವಿವಿಧ ಸಾಮಾನ್ಯ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳನ್ನು ಒಳಗೊಂಡಿರುತ್ತದೆ.

3. ಕೋಶೀಯ ಕೊರತೆಯ ಸರ್ಕಾರದ ಸಾಲದ ಅಗತ್ಯತೆಯನ್ನು ತೋರಿಸುತ್ತದೆ “ ಇದನ್ನು ಸ್ಪಷ್ಟಪಡಿಸಿ?

ಕೋಶೀಯ ಕೊರತೆಯು ಸರ್ಕಾರದ ಒಟ್ಟು ವೆಚ್ಚ ಮತ್ತು ಅದರ ಸಾಲವನ್ನು ಹೊರತು ಪಡಿಸಿದ ಒಟ್ಟು ಕೃತಿಗಳ ನಡುವಿನ ವ್ಯತ್ಯಾಸವಾಗಿದೆ. ಸಾಲದ ಮೂಲಕ ಹಣಕಾಸನ್ನು ಪೂರೈಸುವುದರಿಂದ ಕೋಶೀಯ ಕೊರತೆಯನ್ನು ತುಂಬಬೇಕಾಗುತ್ತದೆ, ಹೀಗಾಗಿ ಇದು ಸರ್ಕಾರದ ಎಲ್ಲಾ ಮೂಲಗಳಿಂದ ಬರುವ ಒಟ್ಟು ಸಾಲಗಳ ಅವಶ್ಯಕತೆಯನ್ನು ಸೂಚಿಸುತ್ತದೆ.

4. ಕಂದಾಯ ಕೊರತೆ ಮತ್ತು ಕೋಶೀಯ ಕೊರತೆಯ ನಡುವಿನ ಸಂಬಂಧವನ್ನು ತಿಳಿಸಿ.

ಕಂದಾಯ ಕೊರತೆ ಮತ್ತು ಕೋಶೀಯ ಕೊರತೆಯ ನಡುವಿನ ಸಂಬಂಧವನ್ನು ಹೀಗೆ ಸ್ಪಷ್ಟ ಪಡಿಸಬಹುದಾಗಿದೆ.

ಕಂದಾಯ ಕೊರತೆ

  • ಸರ್ಕಾರದ ಕಂದಾಯ ಸ್ವೀಕೃತಿ ಗಿಂತ ಕಂದಾಯ ವೆಚ್ಚ ಅಧಿಕವಾಗಿರುವುದನ್ನು ಕಂದಾಯ ಕೊರತೆ ಎಂದು ಕರೆಯುವರು.
  • ಕಂದಾಯ ಕೊರತೆ = ಕಂದಾಯ ವೆಚ್ಚ – ಕಂದಾಯ ಸ್ವೀಕೃತಿಗಳು
  • ಕಂದಾಯ ಕೊರತೆಯು ಸರ್ಕಾರದ ಪ್ರಸ್ತುತ ಆದಾಯ ಮತ್ತು ವೆಚ್ಚಗಳ ಮೇಲೆ ಪರಿಣಾಮ ಬೀರುವಂತಹ ವ್ಯವಹಾರಗಳನ್ನು ಮಾತ್ರ ಒಳಗೊಂಡಿರುತ್ತದೆ,
  • ಸರ್ಕಾರವು ಆಗಾಗ್ಗೆ ಉತ್ಪಾದಕ ಬಂಡವಾಳ ವೆಚ್ಚ ಅಥವಾ ಕಲ್ಯಾಣ ವೆಚ್ಚವನ್ನು ಕಡಿತಗೊಳಿಸುತ್ತದೆ

ಕೋಶೀಯ ಕೊರತೆ

  • ಸರ್ಕಾರದ ಒಟ್ಟು ವೆಚ್ಚ ಮತ್ತು ಅದರ ಸಾಲವನ್ನು ಹೊರತು ಪಡಿಸಿದ ಒಟ್ಟು ಸ್ವೀಕೃತಿಗಳ ನಡುವಿನ ವ್ಯತ್ಯಾಸ ವನ್ನು ಕೋಶೀಯ ಕೊರತೆ ಎನ್ನುವರು.
  • ಕೋಶೀಯ ಕೊರತೆ = ಒಟ್ಟು ವೆಚ್ಚ – (ಕಂದಾಯ ಸ್ವೀಕೃತಿಗಳು + ಸೃಷ್ಟಿಸಿದ ಬಂಡವಾಳ ಸ್ವೀಕೃತಿಗಳು)
  • ಸಾಲದ ಮೂಲಕ ಹಣಕಸನ್ನು ಪೂರೈಸುವುದರಿಂದ ಕೋಶೀಯ ಕೊರತೆಯನ್ನು ತೊಂಬ ಬೇಕಾಗುತ್ತದೆ.
  • ಸರ್ಕಾರದ ಎಲ್ಲಾ ಮೂಲಗಳಿಂದ ಬರುವ ಒಟ್ಟು ಸಾಲಗಳ ಅವಶ್ಯಕತೆಯನ್ನು ಸೂಚಿಸುತ್ತದೆ.

5. ಒಂದು ನಿರ್ದಿಷ್ಟ ಆರ್ಥಿಕತೆಯಲ್ಲಿ ಹೂಡಿಕೆಯು 200ಕ್ಕೆ ಸಮನಾಗಿರುತ್ತದೆ, ಸರ್ಕಾರದ ಖರೀದಿಗಳು 150 ಆಗಿವೆ, ನಿವ್ವಳ ತೆರಿಗೆಗಳ 100( ಅಂದರೆ ಒಟ್ಟು ತೆರಿಗೆಗಳ – ವರ್ಗಾವಣೆಗಳ) ಮತ್ತು ಅನುಭೋಗವು C = 100+0.75 y ಎಂದು ನೀಡಲಾಗಿದೆ ಎಂದುಕೊಂಡಾಗ

ಎ. ಸಮತೋಲನ ಆದಾಯವನ್ನು ಕಂಡು ಹಿಡಿಯಿರಿ.

ಬಿ. ಸಮತೋಲನ ಆದಾಯದಲ್ಲಿ ತೆರಿಗೆ ಆದಾಯಗಳಾವುವು?

ಸಮೀಕರಣ :-

6. ಸರ್ಕಾರದ ಕೊರತೆ ಮತ್ತು ಸರ್ಕಾರದ ಸಾಲದ ನಡುವಿನ ಸಂಬಂಧವನ್ನು ವಿವರಿಸಿ.

ಮುಂಗಡದ ಕೊರತೆಗಳನ್ನು ತುಂಬಲು ತೆರಿಗೆಗಳು, ಸಾಲಗಳು ಅಥವಾ ನೋಟು ಮುದ್ರಣದ ಮೂಲಕ ಹಣಕಾಸನ್ನು ಪೂರೈಸಬೇಕಾಗುತ್ತದೆ. ಸರಕಾರ ಬಹುತೇಕವಾಗಿ ಸಾಲದ ಮೇಲೆ ಅವಲಂಬಿತವಾಗಿದೆ. ಇದು ಸರ್ಕಾರದ ಸಾಲ ಎಂದು ಕರೆಯಲಾಗುವ ಸಾಲದ ಏರಿಕೆಗೆ ಕಾರಣವಾಗುತ್ತದೆ, ಕೊರತೆಗಳು ಮತ್ತು ಸಾಲ ಪರಿಕಲ್ಪನೆಗಳು ನಿಕಟ ಸಂಬಂಧವನ್ನು ಹೊಂದಿದೆ ಕೊರತೆಗಳನ್ನು ಒಂದು ಹರಿವು ಎಂದು ಯೋಚಿಸಬಹುದು ಅದು ಸಾಲದ ದಾಸ್ತಾನಿಗೆ ಸೇರ್ಪಡೆಯಾಗುತ್ತದೆ.

ಸರ್ಕಾರವು ವರ್ಷದಿಂದ ವರ್ಷಕ್ಕೆ ಸಾಲವನ್ನು ಪಡೆಯುವುದನ್ನು ಮುಂದುವರೆಸಿದರೆ ಅದು ಸಾಲದ ಮೊತ್ತದ ಏರಿಕೆಗೆ ಕಾರಣವಾಗುತ್ತದೆ ಮತ್ತು ಸರ್ಕಾರ ಬಡ್ಡಿಯ ರೂಪದಲ್ಲಿ ಹೆಚ್ಚು ಹೆಚ್ಚು ಪಾವತಿಸಬೇಕಾಗುತ್ತದೆ. ಈ ಬಡ್ಡಿ ಪಾವತಿಗಳು ಸಾಲದ ಏರಿಕೆಗೆ ತಮ್ಮದೇ ಆದ ಕೊಡುಗೆ ನೀಡುತ್ತವೆ, ತೆರಿಗೆಗಳ ಹೆಚ್ಚಳದಿಂದ ಅಥವಾ ವೆಚ್ಚದಲ್ಲಿನ ಕಡಿತದಿಂದ ಸರ್ಕಾರದ ಕೊರತೆಯನ್ನು ಕಡಿಮೆ ಮಾಡಬಹುದು. ಹೀಗಾಗಿ ಸರ್ಕಾರದ ಕೊರತೆ ಮತ್ತು ಸರ್ಕಾರದ ಸಾಲದ ನಡುವಿನ ಸಂಬಂಧವನ್ನು ವಿವರಿಸುತ್ತದೆ,

7. ಸಾರ್ವಜನಿಕ ಸಾಲವು ಹೊರೆಯಾಗುತ್ತದೆ? ವಿವರಿಸಿ,

ಉತ್ಪನ್ನದಲ್ಲಿನ ಭವಿಷ್ಯದ ಬೆಳವಣಿಗೆಯನ್ನು ಕಡಿಮೆ ಮಾಡಿದರೆ ಸಾರ್ವಜನಿಕ ಸಾಲವು ಹೊರೆಯಾಗುವುದು, ಯುವಜನತೆಯ ಮೇಲೆ ಸಾಲವನ್ನು ಹೇರಿದಾಗ ಅವರು ವೆಚ್ಚ ಮಾಡಬಹುದಾದ ಆದಾಯ ಮತ್ತು ಆ ಮೂಲಕ ಅನುಭೋಗ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ರಾಷ್ಟ್ರೀಯ ಉಳಿತಾಯಗಳು ಕಡಿಮೆಯಾಗುತ್ತವೆ. ಎಂದು ವಾದಿಸಲಾಗಿದೆ.ಅಲ್ಲದೆ ಸರ್ಕಾರ ಜನರಿಂದ ಎತ್ತುವ ಸಾಲಗಳು ಖಾಸಗಿ ವಲಯಕ್ಕೆ ಲಭ್ಯವಾಗುವ ಉಳಿತಾಯಗಳನ್ನು ಕಡಿಮೆ ಮಾಡುತ್ತವೆ,

ಒಂದು ಹಂತದವರೆಗೆ ಇದು ಬಂಡವಾಳ ಶೇಖರಣೆ ಮತ್ತು ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ, ಹೀಗಾಗಿ ಸಾಲವು ಭವಿಷ್ಯದ ಪೀಳಿಗೆಯ ಮೇಲೆ ‘ಹೊರೆ’ಯಾಗಿ ಪರಿಣಮಿಸುತ್ತದೆ, ಆದರೆ ಉತ್ಪನ್ನದಲ್ಲಿನ ಬೆಳವಣಿಗೆಯಿಂದ ವಾಸ್ತವಿಕ ಸಾಲವನ್ನು ಪಾವತಿಸಲಾಗುತ್ತದೆ. ಆಗ ಸಾಲವನ್ನು “ಹೊರೆ” ಎಂದು ಪರಿಗಣಿಸಬೇಕಾಗಿಲ್ಲ

8. ಕೋಶಿಯ ಕೊರತೆಗಳು ಹಣದುಬ್ಬರಕ್ಕೆ ಕಾರಣವಾಗುತ್ತವೆಯೇ?

ಕೋಶಿಯ ಕೊರತೆಗಳ ಮೇಲಿನ ಪ್ರಮುಖ ಟೀಕೆಗಳಲ್ಲಿ ಒಂದೆಂದರೆ ಅವು ಹಣದುಬ್ಬರಕ್ಕೆ ಕಾರಣವಾಗುತ್ತದೆ, ಏಕೆಂದರೆ ಸರ್ಕಾರವು ವೆಚ್ಚವನ್ನು ಹೆಚ್ಚಿಸಿದಾಗ ಅಥವಾ ತೆರಿಗೆಗಳಲ್ಲಿ ಕಡಿತ ಮಾಡಿದಾಗ ಸಮಗ್ರ ಬೇಡಿಕೆಯು ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದರೆ ಅಧಿಕ ಪ್ರಮಾಣದ ಉತ್ಪಾದನೆಯನ್ನು ಮಾಡಲು ಉದ್ಯಮ ಘಟಕಗಳಿಗೆ ಸಾದ್ಯವಾಗದೇ ಇರಬಹುದು, ಆದುದರಿಂದ ಬೆಲೆಗಳು ಹೆಚ್ಚಾಗ ಬೇಕಾಗುತ್ತದೆ, ಇದರಿಂದ ಹಣದುಬ್ಬರ ಉಂಟಾಗಬಹುದು.

9. ಕೊರತೆ ಕಡಿತದ ಸಮಸ್ಯೆಯನ್ನು ಚರ್ಚಿಸಿ?

ತೆರಿಗೆಗಳ ಹೆಚ್ಚಳ ಅಥವಾ ವೆಚ್ಚದಲ್ಲಿನ ಕಡಿತದಿಂದ ಸರ್ಕಾರದ ಕೊರತೆಯನ್ನು ಕಡಿಮೆ ಮಾಡಬಹುದು. ಭಾರತದಲ್ಲಿ ಸರ್ಕಾರವು ನೇರ ತೆರಿಗೆಗಳನ್ನು ಹೆಚ್ಚಾಗಿ ನಂಬಿಕೊಂಡು ತೆರಿಗೆ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಸಾರ್ವಜನಿಕ ವಲಯದ ಘಟಕಗ(PSUS)ಳಲ್ಲಿನ ಶೇರುಗಳನ್ನು ಮಾರಾಟ ಮಾಡುವ ಮೂಲಕ ಕೂಡ ಸ್ವೀಕೃತಿಗಳನ್ನೂ ಹೆಚ್ಚಿಸುವ ಪ್ರಯತ್ನ ನಡೆಯುತ್ತದೆ. ಆದಾಗ್ಯೂ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡುವಂಥಹ ಒತ್ತಡ ಇದ್ದೆ ಇರುತ್ತದೆ, ಬೃಹತ್ ಕೊರತೆಗಳು ಯಾವಾಗಲು ಕೋಶೀಯ ನೀತಿಯ ಅಧಿಕ ವಿಸ್ತರಣೆಯ ಸೂಚಕವಲ್ಲ ಎಂಬುದನ್ನು ಗಮನಿಸಬೇಕು, ಆರ್ಥಿಕತೆಯ ಸ್ಥಿತಿಯನ್ನು ಅವಲಂಬಿಸಿದಂತೆ, ಇದೇ ಕೋಶೀಯ ಕ್ರಮಗಳು ಒಂದು ಬೃಹತ್‌ ಅಥವಾ ಸಣ್ಣ ಕೊರತೆಗೆ ಕಾರಣವಾಗಬಹುದು.

ಉದಾಹರಣೆಗೆ ಒಂದು ಆರ್ಥಿಕತೆ, ಹಿಂಜರಿತವನ್ನು ಅನುಭವಿಸುತ್ತಿದ್ದು GDP ಇಳಿಕೆಯಾದರೆ, ತೆರಿಗೆ ಆದಾಯ ಇಳಿಯುತ್ತದೆ, ಏಕೆಂದರೆ ಉದ್ಯಮ ಘಟಕಗಳು ಮತ್ತು ಕುಟುಂಬಗಳು ಕಡಿಮೆ ಆದಾಯವನ್ನು ಗಳಿಸುತ್ತಿರುವಾಗ ಕಡಿಮೆ ತೆರಿಗೆಗಳನ್ನು ನೀಡುತ್ತಾರೆ, ಕೋಶೀಯ ಕೊರತೆಯನ್ನು ಯಾವ ಬದಲಾವಣೆಗಳು ಇಲ್ಲದಿದ್ದರೂ ಕೂಡ ಕೊರತೆಯು ಹಿಂಜರಿತ ಸಮಯದಲ್ಲಿ ಏರಿಕೆಯಾಗುತ್ತದೆ ಮತ್ತು ಸಮೃದ್ಧಿ ಸಮಯದಲ್ಲಿ ಇಳಿಕೆಯಾಗುತ್ತದೆ.

ಸಂಕ್ಷಿಪ್ತ ಉತ್ತರಗಳನ್ನು ಬರೆಯಿರಿ

1. ಸರ್ಕಾರದ ಮುಂಗಡ ಪತ್ರದ ಭಾಗಗಳನ್ನು ವಿವರಿಸಿ?

ಏಪ್ರಿಲ್ 1 ರಿಂದ ಮಾರ್ಚ್ 31 ರ ಅವಧಿಯ ಪ್ರತಿಯೊಂದೂ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದಾಯ ಮತ್ತು ವೆಚ್ಚದ ಅಂದಾಜು ಪಟ್ಟಿಯನ್ನು ಸಂಸತ್ತಿನಲ್ಲಿ ಮಂಡಿಸುವುದು ಭಾರತದಲ್ಲಿ ಸಂವಿಧಾನಾತ್ಮಕ (ಅನುಚ್ಛೇದ 112) ಅವಶ್ಯಕತೆಯಾಗಿದೆ. ಈ ‘ವಾರ್ಷಿಕ ಹಣಕಾಸಿನ ಪಟ್ಟಿಯು ಮುಂಗಡಪತ್ರದ ಪ್ರಮುಖ ದಾಖಲೆಯಾಗಿರುತ್ತದೆ. ನಂತರ, ಮುಂಗಡ ಪತ್ರವು ಕಂದಾಯ ಖಾತೆಯಲ್ಲಿನ ವೆಚ್ಚವನ್ನು ಇತರೆ ವೆಚ್ಚಗಳಿಂದ ಪ್ರತ್ಯೇಕಿಸಬೇಕಾಗುತ್ತದೆ. ಆದುದರಿಂದ ಮುಂಗಡ ಪತ್ರವು

(ಎ) ಕಂದಾಯ ಮುಂಗಡ ಪತ್ರ ಮತ್ತು

(ಬಿ) ಬಂಡವಾಳ ಮುಂಗಡ ಪತ್ರಗಳನ್ನು ಒಳಗೊಂಡಿರುತ್ತದೆ.

2. ಸರ್ಕಾರದ ಮುಂಗಡ ಪತ್ರದ ನಕ್ಷೆಯನ್ನು ತಯಾರಿಸಿ?

3. ಅಧಿಕ ಸರ್ಕಾರದ ವೆಚ್ಚದ ಪರಿಣಾಮವನ್ನು ರೇಖಾಚಿತ್ರದ ಮೂಲಕ ವಿವರಿಸಿ

ತೆರಿಗೆಗಳನ್ನು ಸ್ಥಿರವಾಗಿಟ್ಟುಕೊಂಡು ಹೆಚ್ಚುತ್ತಿರುವ ಸರ್ಕಾರದ ಖರೀದಿಗಳ (G) ಪರಿಣಾಮಗಳನ್ನು ಪರಿಗಣಿಸೋಣ. ‘G’ ಯು ‘T’ ಯನ್ನು ಮೀರಿದಾಗ ಸರ್ಕಾರ ಕೊರತೆಯನ್ನು ಅನುಭವಿಸುತ್ತದೆ. ಏಕೆಂದರೆ G ಯು ಸಮಗ್ರ ವೆಚ್ಚದ ಒಂದು ಅಂಶವಾಗಿದೆ, ಯೋಜಿತ ಸಮಗ್ರ ವೆಚ್ಚವು ಹೆಚ್ಚಾಗುತ್ತದೆ. ಸಮಗ್ರ ಬೇಡಿಕೆ ಅನುಸೂಚಿಯು AD’ ಗೆ ಪಲ್ಲಟಗೊಳ್ಳುತ್ತದೆ. ಆರಂಭಿಕ ಉತ್ಪನ್ನ ಮಟ್ಟದಲ್ಲಿ ಬೇಡಿಕೆಯು ಪೂರೈಕೆಗಿಂತ ಹೆಚ್ಚಿರುತ್ತದೆ

4. ಸಾಲ ಎಂದರೇನು ? ಸರ್ಕಾರ ಸಾಲದ ಸೂಕ್ತ ಮೊತ್ತದ ಮೇಲಿನ ನಿರೀಕ್ಷೆಗಳನ್ನು ತಿಳಿಸಿ.

ಮುಂಗಡದ ಕೊರತೆಗಳನ್ನು ತುಂಬಲು ತೆರಿಗೆಗಳು, ಸಾಲಗಳು ಅಥವಾ ನೋಟು ಮುದ್ರಣದ ಮೂಲಕ ಹಣಕಾಸನ್ನು ಪೂರೈಸಬೇಕಾಗುತ್ತದೆ. ಸರಕಾರ ಬಹುತೇಕವಾಗಿ ಸಾಲದ ಮೇಲೆ ಅವಲಂಬಿತವಾಗಿದೆ. ಇದು ಸರ್ಕಾರದ ಸಾಲ ಎಂದು ಕರೆಯಲಾಗುವ ಸಾಲದ ಏರಿಕೆಗೆ ಕಾರಣವಾಗುತ್ತದೆ. ಕೊರತೆಗಳು ಮತ್ತು ಸಾಲ ಪರಿಕಲ್ಪನೆಗಳು ನಿಕಟ ಸಂಬಂಧವನ್ನು ಹೊಂದಿವೆ. ಸಾಲದ ದಾಸ್ತಾನಿಗೆ ಸೇರ್ಪಡೆಯಾಗುವ ಕೊರತೆಗಳನ್ನು ಒಂದು ಹರಿವು ಎಂದು ಯೋಚಿಸಬಹುದು. ಸರ್ಕಾರವು ವರ್ಷದಿಂದ ವರ್ಷಕ್ಕೆ ಸಾಲವನ್ನು ಪಡೆಯುವುದನ್ನು ಮುಂದುವರೆಸಿದರೆ, ಅದು ಸಾಲದ ಮೊತ್ತದ ಏರಿಕೆಗೆ ಕಾರಣವಾಗುತ್ತದೆ ಮತ್ತು ಸರ್ಕಾರ ಬಡ್ಡಿಯ ರೂಪದಲ್ಲಿ ಹೆಚ್ಚು ಹೆಚ್ಚು ಪಾವತಿಸಬೇಕಾಗುತ್ತದೆ. ಈ ಬಡ್ಡಿ ಪಾವತಿಗಳು ಸಾಲದ ಏರಿಕೆಗೆ ತಮ್ಮದೇ ಆದ ಕೊಡುಗೆ ನೀಡುತ್ತವೆ.

ಸರ್ಕಾರಿ ಸಾಲದ ಸೂಕ್ತ ಮೊತ್ತದ ಮೇಲಿನ ನಿರೀಕ್ಷೆಗಳು : ಈ ಸಂಗತಿಯಲ್ಲಿ ಪರಸ್ಪರ ಜೋಡಣೆಯಾದ ಎರಡು ಅಂಶಗಳಿವೆ. ಮೊದಲನೆಯದು ಸರ್ಕಾರದ ಸಾಲವು ಹೊರೆಯೇ ಎಂಬುದು ಮತ್ತು ಎರಡನೆಯದು ಸಾಲಕ್ಕೆ ಹಣಕಾಸನ್ನು ಒದಗಿಸುವ ಸಮಸ್ಯೆ ಒಂದು ಸಣ್ಣ ವ್ಯಾಪಾರಿಯ ಸಾಲದ ವಿಷಯದಲ್ಲಿ ಏನು ನಿಜವಾಗಿರುತ್ತದೆಯೋ ಅದು ಸರ್ಕಾರದ ಸಾಲದ ವಿಷಯದಲ್ಲಿ ನಿಜವಾಗದೇ ಇರಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡೇ ಸಾಲದ ಹೊರೆಯ ಬಗ್ಗೆ ಚರ್ಚಿಸಬೇಕು ಮತ್ತು ಇಡೀ’ (Whole) ಯೊಡನೆ ‘ಭಾಗ’ (part) ಕ್ಕಿಂತ ಭಿನ್ನವಾಗಿ ವ್ಯವಹರಿಸಬೇಕಾಗುತ್ತದೆ. ಯಾವುದೇ ಒಬ್ಬ ವ್ಯಾಪಾರಿಯಂತಲ್ಲದೆ ಸರ್ಕಾರವು ತೆರಿಗೆಗಳು ಮತ್ತು ನೋಟು ಮುದ್ರಣದ ಮೂಲಕ ಸಂಪನ್ಮೂಲವನ್ನು ಸೃಷ್ಟಿಸಬಹುದು.

ಸಾಲಪಡೆಯುವುದರಿಂದ ಸರ್ಕಾರವು ಕಡಿತಗೊಂಡ ಅನುಭೋಗದ ಹೊರೆಯನ್ನು ಭವಿಷ್ಯದ ಪೀಳಿಗೆಗಳ ಮೇಲೆ ವರ್ಗಾಯಿಸುತ್ತದೆ. ಇದು ಏಕೆಂದರೆ ಇಂದಿನ ಜನರಿಗೆ ಭದ್ರತೆಗಳನ್ನು (ಬಾಂಡುಗಳು ಮಾರಾಟ ಮಾಡುವ ಮೂಲಕ ಸರ್ಕಾರ ಸಾಲವನ್ನು ಎತ್ತುತ್ತದೆ. ಆದರೆ 20 ವರ್ಷಗಳ ನಂತರ ತೆರಿಗೆಯನ್ನು ಹೆಚ್ಚಿಸುವ ಮೂಲಕ ಈ ಭದ್ರತೆಗಳ ಹಣವನ್ನು ಮರುಪಾವತಿಸಲು ನಿರ್ಧರಿಸಬಹುದು. ಇದನ್ನು ಆಗ ತಾನೆ ಶ್ರಮಬಲಕ್ಕೆ ಪ್ರವೇಶಿಸುತ್ತಿರುವ ಯುವಜನತೆಯ ಮೇಲೆ ಹೇರಬಹುದು. ಹಾಗಾಗಿ ಅವರ ವೆಚ್ಚಮಾಡಬಹುದಾದ ಆದಾಯ ಮತ್ತು ಆ ಮೂಲಕ ಅನುಭೋಗ ಪ್ರಮಾಣ ಕಡಿಮೆಯಾಗುತ್ತವೆ. ಹೀಗಾಗಿ ರಾಷ್ಟ್ರೀಯ ಉಳಿತಾಯಗಳು ಕಡಿಮೆಯಾಗುತ್ತವೆ ಎಂದು ವಾದಿಸಲಾಗಿದೆ. ಅಲ್ಲದೆ ಸರ್ಕಾರ ಜನರಿಂದ ಎತ್ತುವ ಸಾಲಗಳು ಖಾಸಗಿ ವಲಯಕ್ಕೆ ಲಭ್ಯವಾಗುವ ಉಳಿತಾಯಗಳನ್ನು ಕಡಿಮೆ ಮಾಡುತ್ತವೆ.

ಒಂದು ಹಂತದವರೆಗೆ ಇದು ಬಂಡವಾಳ ಶೇಖರಣೆ ಮತ್ತು ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ, ಸಾಲವು ಭವಿಷ್ಯದ ಪೀಳಿಗೆಯ ಮೇಲೆ ‘ಹೊರೆ’ಯಾಗಿ ಪರಿಣಮಿಸುತ್ತದೆ. ಸಾಂಪ್ರದಾಯಿಕವಾಗಿ, ಸರ್ಕಾರವು ತೆರಿಗೆಗಳನ್ನು ಕಡಿಮೆ ಮಾಡಿ, ಕೊರತೆ, ಮುಂಗಡ ಪತ್ರವನ್ನು ಹೊಂದಿದರೆ, ಅನುಭೋಗಿಗಳು ತೆರಿಗೆ ನಂತರದ ತಮ್ಮ ಆದಾಯಕ್ಕೆ ಹೆಚ್ಚು ವೆಚ್ಚ ಮಾಡುವುದರ ಮೂಲಕ ಪ್ರತಿಕ್ರಿಯಿಸುತ್ತಾರೆ ಎಂದು ವಾದಿಸಲಾಗಿದೆ. ಏಕೆಂದರೆ, ಈ ಜನರು ದೂರ ದೃಷ್ಟಿ ಇಲ್ಲದವರಾಗಿದ್ದು, ಅವರು ಮುಂಗಡ ಪತ್ರದ ಕೊರತೆಯ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳದಿರುವ ಸಾಧ್ಯತೆಯೂ ಇರಬಹುದು. ಭವಿಷ್ಯದಲ್ಲಿ ಒಂದು ದಿನ ಸಾಲ ಮತ್ತು ಸಂಚಿತವಾದ ಬಡ್ಡಿಯನ್ನು ಮರುಪಾವತಿಸಲು ಸರ್ಕಾರ ತೆರಿಗೆಯನ್ನು ಹೆಚ್ಚಿಸಬೇಕೆಂಬುದನ್ನು ಬಹುಶಃ ಅರ್ಥಮಾಡಿಕೊಳ್ಳದಿರಬಹುದು. ಅವರು ಇದನ್ನು ಅರ್ಥಮಾಡಿಕೊಂಡರೂ, ಭವಿಷ್ಯತ್ತಿನಲ್ಲಿ ತೆರಿಗೆಗಳು ತಮ್ಮ ಮೇಲೆ ಬೀಳುವುದಿಲ್ಲ ಬದಲಾಗಿ ಭವಿಷ್ಯದ ಪೀಳಿಗೆಯ ಮೇಲೆ ಬೀಳುತ್ತದೆಂದು ನಿರೀಕ್ಷಿಸಬಹುದು.

FAQ :

1. ಸಾರ್ವಜನಿಕ ಸರಕುಗಳೆಂದರೇನು?

ಯಾವುದೇ ಒಬ್ಬ ನಿರ್ದಿಷ್ಟ ಅನುಭೋಗಿಗೆ ಸೀಮಿತವಾಗಿರದೆ ಎಲ್ಲರಿಗೂ ಲಭ್ಯವಾಗುವ ಸರಕುಗಳಿಗೆ ಸಾರ್ವಜನಿಕ ಸರಕು ಎನ್ನುವರು.

2. ಕಂದಾಯ ವೆಚ್ಚದ ಅರ್ಥ ನೀಡಿ.

ಕೇಂದ್ರ ಸರಕಾರದ ಭೌತಿಕ ಅಥವಾ ಹಣಕಾಸಿನ ಆಸ್ತಿಗಳ ಸೃಷ್ಟಿಯ ಹೊರತಾದ ಉದ್ದೇಶಗಳಿಗೆ ಮಾಡುವ ವೆಚ್ಚವನ್ನು ಕಂದಾಯ ವೆಚ್ಚ ಎನ್ನುವರು.

8. ಬಂಡವಾಳ ವೆಚ್ಚದ ಅರ್ಥ ನೀಡಿ.

ಭೌತಿಕ ಅಥವಾ ಹಣಕಾಸಿನ ಆಸ್ತಿಗಳನ್ನು ಸೃಷ್ಟಿಸುವಂತಹ ಅಥವಾ ಹಣಕಾಸಿನ ಹೊಣೆಗಾರಿಕೆಯನ್ನು ಕಡಿತಕ್ಕೆ ಕಾರಣವಾಗುವ ಸರ್ಕಾರದ ವೆಚ್ಚಗಳನ್ನು ಬಂಡವಾಳ ವೆಚ್ಚ ಎನ್ನುವರು.

ಇತರೆ ವಿಷಯಗಳು :

2nd Puc All Subject Notes

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh