rtgh

ದ್ವಿತೀಯ ಪಿ.ಯು.ಸಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ನೋಟ್ಸ್‌ | 2nd Puc Economics Chapter 12 Notes in Kannada

ದ್ವಿತೀಯ ಪಿ.ಯು.ಸಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, 2nd Puc Economics Chapter 12 Notes Question Answer Mcq Pdf Download in Kannada Medium 2023 Kseeb Solutions For Class 12 Economics Chapter 12 Notes Mukta Artikate Mattu Samagra Arthashastra Notes

2nd Puc Economics Chapter 12 Notes in Kannada

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯ ಅಥವಾ ಪದದಲ್ಲಿ ಉತ್ತರಿಸಿ.

1. ಮುಕ್ತ ಆರ್ಥಿಕತೆ ಎಂದರೆ ಏನೆಂದು ಅರ್ಥೈಸುವಿರಿ?

ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಸರಕು ಮತ್ತು ಸೇವೆಗಳ ಹಾಗೂ ಹಣಕಾಸು ಆಸ್ತಿ ಮುಂತಾದವುಗಳ ಆರ್ಥಿಕ ವ್ಯವಹಾರ ಸಂಬಂಧಗಳನ್ನು ಕಾಯ್ದುಕೊಂಡ ಅರ್ಥ ವ್ಯವಸ್ಥೆಯನ್ನು ಮುಕ್ತ ಆರ್ಥಿಕತೆ ಎನ್ನುವರು.

2. ಸಂದಾಯ ಬಾಕಿ ಎಂದರೇನು?

ಒಂದು ದೇಶದ ಜನರು ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಕು ಮತ್ತು ಸೇವೆಗಳಲ್ಲಿ ಹಾಗೂ ಸ್ವತ್ತುಗಳಲ್ಲಿ ನಡೆಸುವ ವ್ಯವಹಾರಗಳನ್ನು ಸಂದಾಯ ಬಾಕಿ ಎನ್ನುವರು.

3. ವ್ಯಾಪಾರ ಬಾಕಿ ಎಂದರೇನು?

ಸರಕುಗಳ ರಫ್ತು ಮತ್ತು ಆಮದುಗಳ ಬಾಕಿಯನ್ನು ವ್ಯಾಪಾರ ಬಾಕಿ ಎಂದು ಕರೆಯುವರು.

4. ಸ್ಥಿರ ವಿನಿಮಯ ದರ ಎಂದರೆ ಏನೆಂದು ಅರ್ಥೈಸುವಿರಿ?

ಸ್ಥಿರ ಮತ್ತು ನಿಗದಿತ ವಿನಿಮಯ ದರ ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ಮಟ್ಟದಲ್ಲಿ ನಿಗದಿಯಾದ ವಿನಿಮಯ ದರ ಪದ್ಧತಿಯನ್ನು ಸ್ಥಿರ ವಿನಿಮಯ ದರ ಎಂದು ಕರೆಯುವರು.

5. ಅಧಿಕೃತ ಮೀಸಲು ಮಾರಾಟದ ಅರ್ಥ ಬರೆಯಿರಿ.

ಒಂದು ದೇಶವು ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾದಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ಮಾರುವುದರ ಮೂಲಕ ವಿದೇಶಿ ವಿನಿಮಯ ಮೀಸಲನ್ನು ಕಡಿಮೆ ಮಾಡಿ ಮಾರಾಟ ಮಾಡುವುದನ್ನು ಅಧಿಕೃತ ಮೀಸಲು ಮಾರಾಟ ಎನ್ನುವರು.

6. ನಿರ್ವಹಣಾ ಹೊಂದಾಣಿಕೆಯ ಅರ್ಥ ನೀಡಿ.

ಯಾವುದೇ ಔಪಚಾರಿಕ ಅಂತರಾಷ್ಟ್ರೀಯ ಒಪ್ಪಂದವಿಲ್ಲದೆ, ವಿಶ್ವವು ಹೊಂದಾಣಿಕೆ ವಿನಿಮಯ ದರದ ಕಡೆಗೆ ವಾಲುತ್ತದೆ. ಇದು ಬದಲಾಗುವ ವಿನಿಮಯ ದರ ಪದ್ಧತಿ ಮತ್ತು ಸ್ಥಿರ ವಿನಿಮಯ ದರ ಪದ್ಧತಿಯ ಮಿಶ್ರಣವನ್ನು ನಿರ್ವಹಣಾ ಹೊಂದಾಣಿಕೆ ಎನ್ನುವರು.

ಕೆಳಗಿನ ಪ್ರಶ್ನೆಗಳಿಗೆ 4 ವಾಕ್ಯಗಳಲ್ಲಿ ಉತ್ತರಿಸಿ.

1. ಮುಕ್ತ ಆರ್ಥಿಕತೆಯ ಮೂರು ಕೊಂಡಿಗಳನ್ನು ತಿಳಿಸಿ,

ಮುಕ್ತ ಆರ್ಥಿಕತೆಯ ಮೂರು ಕೊಂಡಿಗಳೆಂದರೆ-

ಸರಕು ಮಾರುಕಟ್ಟೆ ಕೊಂಡಿ

ಹಣಕಾಸು ಮಾರುಕಟ್ಟೆ ಕೊಂಡಿ ಹಾಗೂ

ಉತ್ಪಾದನಾಂಗ ಮಾರುಕಟ್ಟೆ ಕೊಂಡಿ, ಇವಲ್ಲದೆ ಶ್ರಮದ ಮಾರುಕಟ್ಟೆ ಕೊಂಡಿ ಇದ್ದು ಈಗ ಇದು ಸಾಪೇಕ್ಷವಾಗಿ ಕಡಿಮೆಯಾಗಿದೆ.

2. ಚಾಲ್ತಿ ಖಾತೆ ಮತ್ತು ಬಂಡವಾಳ ಖಾತೆಗಳ ನಡುವಿನ ವ್ಯತ್ಯಾಸಗಳಾವುವು?

1) ಚಾಲ್ತಿಖಾತೆ: ಪಾವತಿ ಚಾಲ್ತಿಯ ಖಾತೆಯಲ್ಲಿ ಸರಕು ಮತ್ತು ಸೇವೆಗಳ ಹಾಗೂ ವರ್ಗಾವಣೆ ಪಾವತಿಗಳ ಆಮದು ಹಾಗೂ ರಫ್ತನ್ನು ದಾಖಲಿಸಲಾಗುತ್ತದೆ. ಚಾಲ್ತಿ ಖಾತೆಯ ಮೂರು ಉಪವಿಭಾಗಗಳನ್ನೊಳಗೊಂಡಿರುತ್ತದೆ. ಅವು ಗಳೆಂದರೆ- ಅ) ವ್ಯಾಪಾರ ಖಾತೆ ಆ) ಸೇವೆಗಳ ಖಾತೆ ಇ) ವರ್ಗಾವಣಾ ಪಾವತಿಗಳು.

2) ಬಂಡವಾಳ ಖಾತೆ: ಬಂಡವಾಳ ಖಾತೆಯ ಸಾಲಗಳ ಪಾವತಿ ಮತ್ತು ವಸೂಲಾತಿಗಳನ್ನೊಳ ಗೊಂಡಿರುತ್ತದೆ. ಈ ಖಾತೆಯಲ್ಲಿ ಸಾಲಗಳ ನೀಡಿಕೆ ಮತ್ತು ಪಡೆಯುವಿಕೆ, ಸಾಲಗಳ ಮರುಪಾವತಿ ಮತ್ತು ಮಾರಾಟ ಮಾಡುವುದು ಮುಂತಾದ ಬಂಡವಾಳ ವ್ಯವಹಾರಗಳು ದಾಖಲಾಗಿರುತ್ತದೆ. ಬಂಡವಾಳ ವ್ಯವಹಾರಗಳು ಜಮಾ ಮತ್ತು ಖರ್ಚುಗಳಲ್ಲಿಯೂ ಸಹ ಕಂಡುಬರುತ್ತವೆ. ಜಮೆಯ ಭಾಗದಲ್ಲಿ ವಿದೇಶಿ ಸಾಲ ಮತ್ತು ಹೂಡಿಕೆಗಳು, ವಿದೇಶಿ ಯರಿಂದ ಸಾಲ ಮರುಪಾವತಿ ಇತ್ಯಾದಿಗಳು ಇರುತ್ತವೆ. ಖರ್ಚಿನ ಭಾಗದಲ್ಲಿ ವಿದೇಶಗಳಲ್ಲಿ ನಾವು ಮಾಡುವ ಹೂಡಿಕೆ ಮತ್ತು ಕೊಡುವ ಸಾಲ, ವಿದೇಶಗಳಿಗೆ ಮಾಡುವ ಸಾಲ ಮರುಪಾವತಿ ಇತ್ಯಾದಿಗಳು ಇರುತ್ತವೆ. ಈ ರೀತಿಯ ಬಂಡವಾಳ ಚಲನೆಯು ಸರ್ಕಾರಿ ಹಾಗೂ ಖಾಸಗಿ ಮಟ್ಟಗಳಲ್ಲಿ ನಡೆಯುತ್ತದೆ.

3. ಬಂಡವಾಳ ಖಾತೆಯಲ್ಲಿ ಮಿಗುತೆ ಮತ್ತು ಕೊರತೆ ಯಾವಾಗ ಉಂಟಾಗುತ್ತದೆ?

ಒಬ್ಬ ವ್ಯಕ್ತಿಯು ತನ್ನ ಆದಾಯಕ್ಕಿಂತ ಅಧಿಕವಾಗಿ ಮಾಡಿದ ವೆಚ್ಚವನ್ನು ಹೇಗೆ ತನ್ನ ಆಸ್ತಿಗಳನ್ನು ಮಾರಾಟಮಾಡುವುದರಿಂದ ಅಥವಾ ಇತರರಿಂದ ಸಾಲವನ್ನು ಪಡೆಯುವುದರಿಂದ ಭರಿಸುತ್ತಾನೆಯೋ, ಅದೇ ರೀತಿ, ಒಂದು ದೇಶವು ತನ್ನ ಸಂದಾಯ ಬಾಕಿಯ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ಅನುಭವಿಸಿದರೆ (ವಿಶ್ವದ ಇತರ ರಾಷ್ಟ್ರಗಳಿಗೆ ಮಾರಾಟ ಮಾಡುವುದರಿಂದ ಪಡೆಯುವ ಸ್ವೀಕೃತಿಗಿಂತ ವಿದೇಶಗಳಲ್ಲಿ ಮಾಡಿದ ವೆಚ್ಚವು ಅಧಿಕವಾಗಿದ್ದರೆ) ಅದನ್ನು ತನ್ನ ಆಸ್ತಿಗಳನ್ನು ಮಾರಾಟ (ವಿದೇಶಗಳಲ್ಲಿ) ಮಾಡುವುದರ ಮೂಲಕ ಅಥವಾ ವಿದೇಶಗಳಿಂದ ಸಾಲವನ್ನು ಪಡೆಯುವುದರ ಮೂಲಕ ಭರಿಸಬೇಕಾಗುತ್ತದೆ. ಇದೇ ಅಂತರರಾಷ್ಟ್ರೀಯ ಪಾವತಿಯು ಮೂಲಾಂಶ (ಮೂಲತತ್ವವಾಗಿದೆ. ಹೀಗೆ, ನಿವ್ವಳ ಬಂಡವಾಳ ಒಳ- ಹರಿವಿನಿಂದ ಚಾಲ್ತಿ ಖಾತೆಯ ಕೊರತೆಯನ್ನು ನೀಗಿಸಲು ಅಗತ್ಯವಾದ ಹಣಕಾಸನ್ನು ಒದಗಿಸಲಾಗುತ್ತದೆ.

4. ಸಮತೋಲನ, ಮಿಗುತೆ ಮತ್ತು ಕೊರತೆ ವ್ಯಾಪಾರ ಬಾಕಿ (BOT) ಯ ಅರ್ಥವನ್ನು ಬರೆಯಿರಿ.

ಸ್ವಾಯತ್ತ ವೆಚ್ಚದ ಗುಣಕ ಮತ್ತು ಸ್ವಾಯತ್ತ ವೆಚ್ಚಗಳ ಮಟ್ಟದ ಗುಣಲಬ್ದವನ್ನು ಸಮತೋಲನ ಎನ್ನುವರು. ಒಬ್ಬ ವ್ಯಕ್ತಿಯು ತನ್ನ ಆದಾಯಕ್ಕಿಂತ ಅಧಿಕವಾಗಿ ಮಾಡಿದ ವೆಚ್ಚವನ್ನು ಹೇಗೆ ತನ್ನ ಆಸ್ತಿಗಳನ್ನು ಮಾರಾಟಮಾಡುವುದರಿಂದ ಅಥವಾ ಇತರರಿಂದ ಸಾಲವನ್ನು ಪಡೆಯುವುದರಿಂದ ಭರಿಸುತ್ತಾನೆಯೋ, ಅದೇ ರೀತಿ, ಒಂದು ದೇಶವು ತನ್ನ ಸಂದಾಯ ಬಾಕಿಯ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ಅನುಭವಿಸಿದರೆ (ವಿಶ್ವದ ಇತರ ರಾಷ್ಟ್ರಗಳಿಗೆ ಮಾರಾಟ ಮಾಡುವುದರಿಂದ ಪಡೆಯುವ ಸ್ವೀಕೃತಿಗಿಂತ ವಿದೇಶಗಳಲ್ಲಿ ಮಾಡಿದ ವೆಚ್ಚವು ಅಧಿಕವಾಗಿದ್ದರೆ) ಅದನ್ನು ತನ್ನ ಆಸ್ತಿಗಳನ್ನು ಮಾರಾಟ (ವಿದೇಶಗಳಲ್ಲಿ) ಮಾಡುವುದರ ಮೂಲಕ ಅಥವಾ ವಿದೇಶಗಳಿಂದ ಸಾಲವನ್ನು ಪಡೆಯುವುದರ ಮೂಲಕ ಭರಿಸಬೇಕಾಗುತ್ತದೆ. ಇದೇ ಅಂತರ ರಾಷ್ಟ್ರೀಯು ಪಾವತಿಯ ಮೂಲಾಂಶ (ಮೂಲತತ್ವ)ವಾಗಿದೆ. ಹೀಗೆ, ನಿವ್ವಳ ಬಂಡವಾಳ ಒಳ ಹರಿವಿನಿಂದ ಚಾಲ್ತಿ ಖಾತೆಯ ಕೊರತೆಯನ್ನು ನೀಗಿಸಲು ಅಗತ್ಯವಾದ ಹಣಕಾಸನ್ನು ಒದಗಿಸಲಾಗುತ್ತದೆ.

5. ಜನರು ವಿದೇಶಿ ವಿನಿಮಯವನ್ನು ಏಕೆ ಬೇಡುತ್ತಾರೆ?

ವಿನಿಮಯ ದರಗಳಲ್ಲಿನ ಬದಲಾವಣೆಗಳು ನೈಜ ವಿನಿಮಯ ದರಗಳಲ್ಲಿ ಬದಲಾವಣೆ ಆಗುವುದರಿಂದ ಅ೦ತರಾಷ್ಟ್ರೀಯ ಸಾಪೇಕ್ಷೆ ಬೆಲೆ ಬದಲಾವಣೆಯಾಗುತ್ತವೆ. ರೂಪಾಯಿಯ ಅಪಮೌಲ್ಯವು ವಿದೇಶಿ ಸರಕುಗಳ ಕೊಳ್ಳುವಿಕೆಯನ್ನು ಹೆಚ್ಚುಸುತ್ತದೆ. ದೇಶೀಯ ಸರಕುಗಳು ವೆಚ್ಚದಾಯವಾಗುತ್ತದೆ. ಹೀಗಾಗಿ ವಿನಿಮಯ ದರದಲ್ಲಿ ಬದಲಾವಣೆಯಿಂದ ಜನರು ವಿದೇಶಿ ವಿನಿಮಯವನ್ನು ಬೇಡುತ್ತಾರೆ.

6. ವಿದೇಶಿ ವಿನಿಮಯದರ ಎಂದರೇನು?

ಒಂದು ದೇಶ ತನ್ನ ಹಣವನ್ನು ಇನ್ನೊಂದು ದೇಶದ ಹಣಕ್ಕೆ ಯಾವ ದರದಲ್ಲಿ ವಿನಿಮಯ ಮಾಡಿಕೊಳ್ಳ ಲಾಗುತ್ತದೆಯೋ ಆ ದರವನ್ನು ವಿನಿಮಯ ದರ ಎಂಬುದಾಗಿ ಕರೆಯುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ “ಒಂದು ವಿದೇಶಿ ಹಣಕ್ಕೆ ದೇಶೀಯ ಹಣದ ರೂಪದಲ್ಲಿ ಪಾವತಿಸಲಾದ ಬೆಲೆಯೇ ವಿನಿಮಯ ದರವಾಗಿದೆ.

7. ಹಣದ ಇಳಿಕೆ (ಕುಸಿತ) ಮತ್ತು ಅಪಮೌಲೀಕರಣದ ವ್ಯತ್ಯಾಸ ತಿಳಿಸಿ.

ಒಂದು ದೇಶದಲ್ಲಿ ವ್ಯಾಪಾರದ ಕೊರತೆ ಉಂಟಾದಾಗ (ಸವಕಲು ಹರಕಲುಗಳಿಂದ ಪೋಲಾದಾಗ) ಉಳಿತಾಯದ ಅಂದರೆ ಹಣದ ಇಳಿಕೆ (ಕುಸಿತ)ವಾಗುತ್ತದೆ. ಹಣದ ಕೊರತೆಯು ಹಣದ ಇಳಿಕೆ (ಕುಸಿತಕ್ಕೆ) ಕಾರಣವಾಗುವುದು.

ರೂಪಾಯಿಯ ಅಪಮೌಲ್ಯವು ವಿದೇಶಿ ಸರಕುಗಳ ಕೊಳ್ಳುವಿಕೆಯ ವೆಚ್ಚವನ್ನು ಹೆಚ್ಚಿಸುತ್ತದೆ. ಹಾಗೂ ದೇಶೀಯ ಸರಕುಗಳು ವೆಚ್ಚದಾಯಕವಾಗುತ್ತದೆ. ಅಂದರೆ ಒಂದು ನಿಗದಿತ ವಿನಿಮಯ ದರ ವ್ಯವಸ್ಥೆಯಲ್ಲಿ ಸಾಮಾಜಿಕ ಕ್ರಿಯೆಯಿಂದ ವಿನಿಮಯ ದರ ಹೆಚ್ಚಾದಾಗ ಅಪಮೌಲೀಕರ ಸಂಭವಿಸುತ್ತದೆ.

ಕೆಳಗಿನ ಪ್ರಶ್ನೆಗಳಿಗೆ 12 ವಾಕ್ಯಗಳಲ್ಲಿ ಉತ್ತರಿಸಿ.

2nd Puc Economics Chapter 12 Notes in Kannada

1. ವ್ಯಾಪಾರ ಬಾಕಿಯ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

ರಫ್ತು ಸರಕುಗಳಿಂದ ಆಮದು ಸರಕುಗಳನ್ನು ಕಳೆಯುವುದರಿಂದ ವ್ಯಾಪಾರ ಬಾಕಿ ನೀಡುತ್ತದೆ. ಅಂದರೆ ಸರಕುಗಳ ರಫ್ತು ಮತ್ತು ಆಮದುಗಳ * ಬಾಕಿಯನ್ನು ವ್ಯಾಪಾರ ಬಾಕಿಯೆಂದು ಉಲ್ಲೇಖಿಸಲಾಗಿದೆ.

B ದೇಶಕ್ಕಿಂತ ‘A’ ದೇಶದ ಹಣದುಬ್ಬರವು ಅಧಿಕವಾಗಿದ್ದು ಮತ್ತು ಎರಡು ದೇಶಗಳ ನಡುವಿನ ವಿನಿಮಯದರವು ನಿಗದಿತವಾಗಿದ್ದರೆ, ಆಗ ಬಡ್ಡಿದರವು ಹೆಚ್ಚು ಇದ್ದ ಕಡೆ ಆಕರ್ಷಿತರಾಗುತ್ತಾರೆ.

ಉದಾಹರಣೆಗೆ:- A ದೇಶದ ಬಡ್ಡಿದರ 8% ಹಾಗೂ B ದೇಶದ ಬಡ್ಡಿದರ 10% ಎಂದಾಗ

‘A’ ದೇಶದಲ್ಲಿನ ಹೂಡಿಕೆದಾರರು B ದೇಶದಲ್ಲಿನ ಬಡ್ಡಿ ದರದಿಂದ ಆಕರ್ಷಿತರಾಗುತ್ತಾರೆ. ತಮ್ಮ ಸ್ವಂತಕರೆನ್ಸಿಯನ್ನು ಮಾರಾಟ ಮಾಡಿ B ದೇಶದ ಕರೆನ್ಸಿಯನ್ನು ಖರೀದಿಸುತ್ತಾರೆ. ಇದೇ ವೇಳೆಯಲ್ಲಿ B ದೇಶದ ಹೂಡಿಕೆಯನ್ನು ಸಹ ತಮ್ಮ ದೇಶದಲ್ಲಿ ಮಾಡುವುದು ಹೆಚ್ಚು ಆಕರ್ಷಿತವೆಂದು ಕಂಡು ಕೊಳ್ಳುತ್ತಾರೆ. ‘A’ ದೇಶದ ಕರೆನ್ಸಿಗೆ ಕಡಿಮೆಮಾಡುತ್ತದೆ.

‘A’ ದೇಶದ ಕರೆನ್ಸಿಯ ಬೇಡಿಕೆಯು ಎಡಗಡೆಗೆ ಪಲ್ಲಟಗೊಳ್ಳುತ್ತದೆ. ಮತ್ತು ಪೂರೈಕೆ ರೇಖೆಯ ಬಲಗಡೆ ಪಲ್ಲಟಗೊಳ್ಳುತ್ತದೆ. Bಇದು ದೇಶದ ‘A’ ಕರೆನ್ಸಿಯ ಅಪಮೌಲ್ಯಕ್ಕೆ ಹಾಗೂ ದೇಶದ B ಕರೆನ್ಸಿಯ ಮೌಲ್ಯದ ಹೆಚ್ಚಳಕ್ಕೆ ಕಾರಣವಾಗುತ್ತದೆ.

2. ಬಂಡವಾಳ ಖಾತೆಯ ಪಟವನ್ನು ಬರೆಯಿರಿ.

ಬಂಡವಾಳ ಖಾತೆ: ಬಂಡವಾಳ ಖಾತೆಯ ಸಾಲಗಳ ಪಾವತಿ ಮತ್ತು ವಸೂಲಾತಿಗಳನ್ನೊಳ ಗೊಂಡಿರುತ್ತದೆ. ಈ ಖಾತೆಯಲ್ಲಿ ಸಾಲಗಳ ನೀಡಿಕೆ ಮತ್ತು ಪಡೆಯುವಿಕೆ, ಸಾಲಗಳ ಮರುಪಾವತಿ ಮತ್ತು ಮಾರಾಟ ಮಾಡುವುದು ಮುಂತಾದ ಬಂಡವಾಳ ವ್ಯವಹಾರಗಳು ದಾಖಲಾಗಿರುತ್ತದೆ. ಬಂಡವಾಳ ವ್ಯವಹಾರಗಳು ಜಮಾ ಮತ್ತು ಖರ್ಚುಗಳಲ್ಲಿಯೂ ಸಹ ಕಂಡುಬರುತ್ತವೆ. ಜಮೆಯ ಭಾಗದಲ್ಲಿ ವಿದೇಶಿ ಸಾಲ ಮತ್ತು ಹೂಡಿಕೆಗಳು, ವಿದೇಶಿ ಯರಿಂದ ಸಾಲ ಮರುಪಾವತಿ ಇತ್ಯಾದಿಗಳು ಇರುತ್ತವೆ. ಖರ್ಚಿನ ಭಾಗದಲ್ಲಿ ವಿದೇಶಗಳಲ್ಲಿ ನಾವು ಮಾಡುವ ಹೂಡಿಕೆ ಮತ್ತು ಕೊಡುವ ಸಾಲ, ವಿದೇಶಗಳಿಗೆ ಮಾಡುವ ಸಾಲ ಮರುಪಾವತಿ ಇತ್ಯಾದಿಗಳು ಇರುತ್ತವೆ. ಈ ರೀತಿಯ ಬಂಡವಾಳ ಚಲನೆಯು ಸರ್ಕಾರಿ ಹಾಗೂ ಖಾಸಗಿ ಮಟ್ಟಗಳಲ್ಲಿ ನಡೆಯುತ್ತದೆ.

3. ಸ್ಥಿರ ವಿನಿಮಯ ದರ ಮತ್ತು ಬದಲಾಗುವ ವಿನಿಮಯ ದರಗಳ ಗುಣ ಮತ್ತು ದೋಷಗಳನ್ನು ವಿವರಿಸಿ.

ದೇಶಗಳು ಅವುಗಳ ಬಾಹ್ಯ ಖಾತೆಗಳಲ್ಲಿ ಸ್ಥಿರತೆಯನ್ನು ತರುವಂತಹ ಕೆಲವು ವಿನಿಮಯ ದರ ಏರ್ಪಾಟುಗಳಿವೆ,

ಅವುಗಳೆಂದರೆ – ನಮ್ಮ ವಿನಿಮಯ ದರದ ವ್ಯವಸ್ಥೆಯಲ್ಲಿ ವಿನಿಮಯ ದರವು ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆ ಶಕ್ತಿಗಳಿಂದ ನಿರ್ಧರಿತವಾಗುತ್ತದೆ. ಸಂಪೂರ್ಣವಾದ ನಮ್ಮ ವ್ಯವಸ್ಥೆಯಲ್ಲಿ ಕೇಂದ್ರ ಬ್ಯಾಂಕುಗಳು ಸರಳ ಕಾಯಿದೆಗಳನ್ನು ಅನುಸರಿಸುತ್ತದೆ. ಅವು ವಿನಿಮಯ ದರದ ಮಟ್ಟದ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ. ಅಂದರೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹಸ್ತ ಕ್ಷೇಮ ಮಾಡುವುದಿಲ್ಲ.

ಕೆಲವು ವಿನಿಮಯ ದರಗಳೆಂದರೆ, ಅಲ್ಪಾವಧಿ ವಿನಿಮಯ ದರಗಳು ಈ ವಿಷಯದಲ್ಲಿ ವಿದೇಶಿವಿನಿಮಯದ ಬೇಡಿಕೆ ಮತ್ತು ಪೂರೈಕೆಯನ್ನು ಸಮಾನ ಗೊಳಿಸುವುದಕ್ಕಾಗಿ ಮಾರುಕಟ್ಟೆಯನ್ನು ತೆರವು ಗೊಳಿಸಲು ವಿನಿಮಯ ದರವು ಮುಂದಾಗುತ್ತದೆ.

ಒಂದು ದೇಶವು ಅದರ ವಿನಿಮಯದಿಂದ ಮಟ್ಟವನ್ನು ನಿಗದಿಪಡಿಸುವ ಅಥವಾ ಸ್ಥಿರಗೊಳಿಸುವ ರೀತಿಯನ್ನು ಪರಿಶೀಲಿಸಿದಾಗ ವಿನಿಮಯ ದರವು ಸ್ಥಿರಗೊಳಿಸಲು ಇಚ್ಛಿಸುತ್ತದೆ. ಹಲವು ದೇಶಗಳು ಸ್ಥಿರ ವಿನಿಮಯ ದರ ಪದ್ಧತಿಯನ್ನು ತಿರಸ್ಕರಿಸುವುದನ್ನು ಅಂತರಾಷ್ಟ್ರೀಯ ಅನುಭವದಿಂದ ಕಾಣಬಹುದು. ಇದು ಬದಲಾಗುವ ವಿನಿಮಯ ದರ ಪದ್ಧತಿ ಮತ್ತು ಸ್ಥಿರ ವಿನಿಮಯ ದರ ಪದ್ಧತಿಯ ಮಿಶ್ರಣವಾಗಿದೆ. ಈ ಪದ್ಧತಿಯಲ್ಲಿ ತಮಗೆ ಉಚಿತವೆನಿಸಿದಾಗಲೆಲ್ಲ ಕೇಂದ್ರಿಯ ಬ್ಯಾಂಕುಗಳು ವಿನಿಮಯ ದರ ಚಲನೆಯನ್ನು ಮಿತಗೊಳಿಸಲು ವಿದೇಶಿ ವಿನಿಮಯಗಳನ್ನು ಕೊಳ್ಳಲು ಮತ್ತು ಮಾರಲು ಮಧ್ಯ ಪ್ರವೇಶಿಸುತ್ತದೆ. ನಾಮ ಮಾತ್ರ ವಿನಿಮಯ ದರವು ದೇಶಿಯ ಕರೆನ್ಸಿಯ ರೂಪದಲ್ಲಿನ ವಿದೇಶಿ ಕರೆನ್ಸಿಯ ಒಂದು ಘಟದ ಬೆಲೆ ಎಂದಾಗುತ್ತದೆ.

ನೈಜ ವಿನಿಮಯ ದರವು, ದೇಶೀಯ ಸರಕುಗಳ ರೂಪದಲ್ಲಿ ವಿದೇಶಿ ಸರಕುಗಳ ಸಾಪೇಕ್ಷೆ ಬೆಲೆ ಎಂಬ ಅರ್ಥ ನೀಡುತ್ತದೆ. ಇದು ದೇಶೀಯ ಬೆಲೆ ಮಟ್ಟದಿಂದ ಭಾಗಿಸಲ್ಪಟ್ಟ ವಿದೇಶಿ ಬೆಲೆ ಮಟ್ಟದಿಂದ ಭಾಗಿಸಲ್ಪಟ್ಟ ವಿದೇಶಿ ಬೆಲೆ ಮಟ್ಟದ ನಾಮ ಮಾತ್ರ ವಿನಿಮಯ ದರಕ್ಕೆ ಸಮನಾಗಿದೆ ಇದು ಅಂತರಾಷ್ಟ್ರೀಯ ಸ್ಪರ್ಧಾ ಸಾಮರ್ಥ್ಯವನ್ನು ವಾಪನ ಮಾಡುತ್ತದೆ. ನೈಜ ವಿನಿಮಯ ದರವು ಒಂದಕ್ಕೆ ಸಮನಾಗಿದ್ದಾಗ, ಎರಡು ದೇಶಗಳ ಕೊಳ್ಳುವ ಶಕ್ತಿಯು ಸಮಾನತೆಯಲ್ಲಿವೆ ಎಂದು ಹೇಳಲಾಗುತ್ತದೆ.

ಬದಲಾಗುವ ವಿನಿಮಯದರದ ಆಡಳಿತ ದರದಲ್ಲಿ ವಿನಿಮಯ ದರವು ನಿರ್ಧರಿಸಲ್ಪಡುತ್ತದೆ. ಅಂದರೆ ನಾಮ ಮಾತ್ರ ವಿನಿಮಯ ದರಗಳಲ್ಲಿನ ಬದಲಾವಣೆಗಳು ನೈಜ ವಿನಿಮಯ ದರದಲ್ಲಿ ಬದಲಾವಣೆಗಳಿರುತ್ತದೆ. ಮತ್ತು ಇದರಿಂದ ಅಂತರಾಷ್ಟ್ರೀಯ ಸಾಪೇಕ್ಷ ಬೆಲೆಗಳು ಕೂಡ ಬದಲಾವಣೆಯಾಗುತ್ತದೆ. ರೂಪಾಯಿಯ ಅಪಮೌಲ್ಯವು ವಿದೇಶಿ ಸರಕುಗಳ ಕೊಳ್ಳುವಿಕೆ ವೆಚ್ಚವನ್ನು ಹೆಚ್ಚಿಸುತ್ತದೆ. ಮತ್ತು ದೇಶೀಯ ಸರಕುಗಳ ಕಡಿದು ವೆಚ್ಚದಾಯಕವಾಗಿರುತ್ತದೆ. ಇದು ನಿವ್ವಳ ರಫ್ತುಗಳನ್ನು ಹೆಚ್ಚಿಸುತ್ತದೆ, ಆದ್ದರಿಂದ ಸಮಗ್ರ ಬೇಡಿಕೆಯು ಹೆಚ್ಚಾಗುತ್ತದೆ. ಪ್ರತಿಯಾಗಿ ರೂಪಾಯಿ ಮೌಲ್ಯ ಹೆಚ್ಚಾದರೆ ನಿವ್ವಳ ರಫ್ತುಗಳು ಕಡಿಮೆಯಾಗುತ್ತದೆ. ಹಾಗೂ ಸಮಗ್ರ ಬೇಡಿಕೆಯನ್ನು ಕಡಿತಗೊಳಿಸುತ್ತದೆ. ಅಂತರಾಷ್ಟ್ರೀಯ ವ್ಯಾಪಾರಿ ನಮೂನೆಗಳು ವಿನಿಮಯ ದರದ ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುತ್ತದೆ. ವಿನಿಮಯ ದರವನ್ನು ಸರ್ಕಾರದ ತೀರ್ಮಾನಗಳಿಲ್ಲದೆ ನಿಗದಿಪಡಿಸಲಾಗುತ್ತದೆ. ಮತ್ತು ಸರ್ಕಾರದ ಕಾರ್ಯಗಳಿಂದ ನಿರ್ವಹಿಸಿಕೊಂಡು ಬದಲಾಗುತ್ತದೆ.

ಕೆಳಗಿನ ಪ್ರಶ್ನೆಗಳಿಗೆ 20 ವಾಕ್ಯಗಳಲ್ಲಿ ಉತ್ತರಿಸಿ.

2nd Puc Economics Chapter 12 Notes in Kannada

1. ರೇಖಾಚಿತ್ರದ ಸಹಾಯದೊಂದಿಗೆ ಸ್ಥಿರವಿನಿಮಯ ದರದಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯನ್ನು ವಿವರಿಸಿ.

ಸ್ಥಿರ ಅಥವಾ ನಿಗದಿತ ವಿನಿಮಯ ದರ (pegged exchange rate) ಪದ್ಧತಿ ಎಂದು ಕರೆಯಲಾಗುವ ಒಂದು ನಿರ್ದಿಷ್ಟಮಟ್ಟದಲ್ಲಿ ನಿಗದಿಯಾದ ವಿನಿಮಯದರ ಪದ್ಧತಿಯನ್ನು ಬಹುತೇಕ ದೇಶಗಳು ಹೊಂದಿದ್ದವು. ಕೆಲವು ಸಂದರ್ಭಗಳಲ್ಲಿ, ಸ್ಥಿರ ಮತ್ತು ನಿಗದಿತ ವಿನಿಮಯ ದರಗಳ ನಡುವೆ ಒಂದು ಭಿನ್ನತೆ ಉಂಟಾಗುತ್ತದೆ. ಹಿಂದಿನ ದರವು ಸ್ಥಿರವಾಗಿದ್ದು ನಂತರದ ದರವನ್ನು ಹಣಕಾಸಿನ ಪ್ರಾಧಿಕಾರವು ನಿರ್ವಹಿಸುತ್ತಿರುವಾಗ, ವಿನಿಮಯದರವು ನಿಗದಿತವಾಗಿರುವ (ಸರಿಸಮಾನ ಮೌಲ್ಯ) ಅದರಲ್ಲಿನ ಮೌಲ್ಯವು ಒಂದು ಬದಲಾಯಿಸಬಹುದಾದ ನೀತಿಯಾಗಿದೆ-ಇದು ಬದಲಾಗಲೂಬಹುದು ಎಂಬುದನ್ನು ವಾದಿಸಲಾಗಿದೆ. ಎರಡೂ ಪದ್ಧತಿಗಳ ನಡುವೆ ಒಂದು ಸಾಮಾನ್ಯ ಅಂಶವಿದೆ. ಚಿನ್ನದ ಪ್ರಮಿತಿಯಂತಹ ಸ್ಥಿರ ವಿನಿಮಯದರ ಪದ್ಧತಿಯಲ್ಲಿ BOPಯಲ್ಲಿನ ಮಿಗುತೆ ಅಥವಾ ಕೊರತೆಗಳಿಗೆ ಹೊ೦ದಾಣಿಕೆಗಳು ಆರ್ಥಿಕ ಕಾರ್ಯಚರಣೆಯಿಂದ ಸ್ವಯಂಚಾಲಿತವಾಗಿ (ಹೂಮರ್‌ರವರು ವಿವರಿಸಿರುವ ಕಾರ್ಯ ಯಂತ್ರದ ಮೂಲಕ) ಬರಬೇಕಾಗುತ್ತದೆ ಅಥವಾ ಸರ್ಕಾರದಿಂದಾಗಲೀ ತರಬೇಕಾಗುತ್ತದೆ ವಿನಿಮಯ ದರವು ಎಲ್ಲಿಯವರೆಗೆ ಬದಲಾಗುವುದಿಲ್ಲವೋ ಮತ್ತು ಬದಲಾಗುವ ನಿರೀಕ್ಷೆಯಿರುವುದಿಲ್ಲವೋ ಅಲ್ಲಿಯವರೆಗೆ ನಿಗದಿತ ವಿನಿಮಯ ದರ ಪದ್ಧತಿಯು ಅದೇ ಲಕ್ಷಣವನ್ನು ಹೊರಸೂಸಬಹುದು. ಆದಾಗ್ಯೂ, ಇನ್ನೊಂದು ಆಯ್ಕೆಯು ಸರಕಾರದ ಮುಂದಿರುತ್ತದೆ-ಅದು ವಿನಿಮಯ ದರವನ್ನು ಬದಲಾಯಿಸಬಹುದು.

ಒಂದು ನಿಗದಿತ ವಿನಿಮಯದರ ವ್ಯವಸ್ಥೆಯಲ್ಲಿ ಸಾಮಾಜಿಕ ಕ್ರಿಯೆಯಿಂದ ವಿನಿಮಯದರವು ಹೆಚ್ಚಾದಾಗ, ಅಪಮೌಲೀಕರಣವು ಸಂಭವಿಸುತ್ತದೆ (ಅಪಮೌಲೀಕರಣಕ್ಕೆ ವಿರುದ್ಧವಾಗಿರುವುದು ಪುನರ್ ಮೌಲೀಕರಣ)ಅಥವಾ ಸರಕಾರವು ವಿನಿಮಯ ದರವನ್ನು ಬದಲಾಯಿಸದೆ ಹಾಗೇಯೆ ಇರಗೊಡಬಹುದು ಮತ್ತು ಹಣಕಾಸು ಹಾಗೂ ಕೋಶೀಯ ನೀತಿಗಳ ಬಳಕೆಯಿಂದ BOP ಸಮಸ್ಯೆಯನ್ನು ನಿರ್ವಹಿಸಬಹುದು. ಬಹುತೇಕ ಸರಕಾರಗಳು ವಿನಿಮಯದರದಲ್ಲಿ ಬದಲಾವಣೆ ಮಾಡುವುದು ಅತ್ಯಂತ ವಿರಳ. ನಮ್ಮ ವಿಶ್ಲೇಷಣೆಯಲ್ಲಿ ಸ್ಥಿರ ಮತ್ತು ನಿಗದಿತ ವಿನಿಮೆಯದರಗಳೆಂಬ ಪದಗಳನ್ನು ಅದಲು ಬದಲಾಗಿ, ಒಂದು ವಿನಿಮಯದರ ಆಳ್ವಿಕೆಯನ್ನು ಸೂಚಿಸಲು ಬಳಸುತ್ತೇವೆ. ಇಲ್ಲಿ ವಿನಿಮಯ ದರಗಳನ್ನು ಸರ್ಕಾರದ ತೀರ್ಮಾನಗಳಿಂದ ನಿಗದಿಪಡಿಸಲಾಗುತ್ತದೆ ಮತ್ತು ಸರ್ಕಾರದ ಕಾರ್ಯಗಳಿಂದ ನಿರ್ವಹಿಸಿಕೊಂಡು ಬರಲಾಗುತ್ತದೆ (ಸುಸ್ಥಿತಿಯಲ್ಲಿಡಲಾಗುತ್ತದೆ).

2. ಯಾವುದಾದರೂ ಐದು ದೇಶಗಳನ್ನು ಮತ್ತು ಅವುಗಳ ಕರೆನ್ಸಿಗಳನ್ನು ಪಟ್ಟಿ ಮಾಡಿ.

1) ಇಂಗ್ಲೆಂಡ್ – ಪೌಂಡ್

2) ಅಮೇರಿಕ ಡಾಲರ್

3) ಜಪಾನ್ – ಯೆನ್

4) ರಷ್ಯಾ – ರೂಬಲ್

5) ಸೌತ್ ಆಫ್ರಿಕಾ – ಬ್ಯಾಂಡ್

6) ಭಾರತ – ರೂಪಾಯಿ

ಅಭ್ಯಾಸದ ಪ್ರಶ್ನೆಗಳು

1. ವ್ಯಾಪಾರ ಬಾಕಿ ಮತ್ತು ಚಾಲ್ತಿ ಖಾತೆ ಬಾಕಿಯ ನಡುವಿನ ವ್ಯತ್ಯಾಸವನ್ನು ತಿಳಿಸಿ?

ವ್ಯಾಪಾರ ಬಾಕಿ ಮತ್ತು ಚಾಲ್ತಿ ಖಾತೆ ಬಾಕಿಯ ನಡುವಿನ ವ್ಯತ್ಯಾಸ ಇಂತಿದೆ:-

ವ್ಯಾಪಾರ ಬಾಕಿ

ರಫ್ತು ಸರಕುಗಳಿಂದ ಆಮದು ಸರಕುಗಳನ್ನು ಕಳೆಯುವುದರಿಂದ ವ್ಯಾಪಾರ ಬಾಕಿ ನೀಡುತ್ತದೆ.

ಅಂದರೆ ಸರಕುಗಳ ರಫ್ತು ಮತ್ತು ಆಮದುಗಳ ಬಾಕಿಯನ್ನು ವ್ಯಾಪಾರ ಬಾಕಿಯೆಂದು ಉಲ್ಲೇಖಿಸಲಾಗಿದೆ.

ಚಾಲ್ತಿ ಖಾತೆ

BOPಯಲ್ಲಿನ ಒಂದು ಖಾತೆಯ ಚಾಲ್ತಿ ಖಾತೆಯಾಗಿದೆ.

ವ್ಯಾಪಾರ ಬಾಕಿಗೆ ಸೇವೆಗಳಲ್ಲಿನ ವ್ಯಾಪಾರ ಮತ್ತು ನಿವ್ವಳ ವರ್ಗಾವಣೆಗಳನ್ನು ಸೇರಿಸುವುದರಿಂದ ಚಾಲ್ತಿ ಖಾತೆಯನ್ನು ಪಡೆಯಬಹುದು.

ಇದು ವ್ಯಾಪಾರದ ಕೊರತೆಯನ್ನು ನೀಗಿಸುತ್ತದೆ.

2. ಅಧೀಕೃತ ಮೀಸಲು ವ್ಯವಹಾರಗಳಾವುವು? ಸಂದಾಯ ಬಾಕಿಯಲ್ಲಿ ಅವುಗಳ ಪ್ರಾಮುಖ್ಯತೆಯನ್ನು ವಿವರಿಸಿ.

ಒಂದು ದೇಶವು ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾದಲ್ಲಿ ವಿದೇಶಿವಿನಿಮಯ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ಮಾರುವುದರ ಮೂಲಕ, ವೀದೇಶ ವಿನಿಮಯ ಮೀಸಲನ್ನು ಕಡಿಮೆ ಮಾಡಿಕೊಂಡು, ಅಧಿಕೃತ ಮೀಸಲು ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಬಹುದು, ಅಧಿಕೃತ ಮೀಸಲಿನಲ್ಲಿನ ಏರಿಕೆ- ಇಳಿಕೆಯನ್ನು ಒಟ್ಟಾರೆ ಸಂದಾಯ ಬಾಕಿಯ ಕೊರತೆ (ಮಿಗುತೆ) ಎಂದು ಕರೆಯುತ್ತೇವೆ, ಮುಖ್ಯ ವಿಷಯವೆಂದರೆ, ಸಂದಾಯ ಬಾಕಿಯಲ್ಲಿನ ಕೊರತೆಯನ್ನು ಸಾಗಿಸಲು ಹಣಕಾಸನ್ನು ಒದಗಿಸುವ ಪ್ರಾಧಿಕಾರವಾಗಿದೆ. ಚಾಲ್ತಿ ಖಾತೆ ಮತ್ತು ಬಂಡವಾಳ ಖಾತೆಯ ಬಾಕಿಯನ್ನು ರೂಡಿಸಿದಾಗ ಸಂದಾಯ ಬಾಕಿಯ ಕೊರತೆ ಅಥವಾ ಉಳಿತಾಯ(ಮಿಗುತೆ) ಲಭ್ಯವಾಗುತ್ತದೆ. ಇದು ಅಧಿಕೃತ ಮೀಸಲಿಗೆ ಸೇರ್ಪಡೆಯಾಗುವ ಮೊತ್ತವಾಗಿದೆ. ಸಂದಾಯ ಬಾಕಿಯ ಚಾಲ್ತಿ ಖಾತೆ ಮತ್ತು ಮೀಸಲು ರಹಿತ ಬಂಡವಾಳ ಖಾತೆಯ ಮೊತ್ತವು ಶೂನ್ಯಕ್ಕೆ ಸಮನಾಗಿದ್ದಾಗ ಒಂದು ದೇಶದ ಸಂದಾಯ ಬಾಕಿಯ ಸಮತೋಲನದಲ್ಲಿರುತ್ತದೆ. ಅಂದರೆ ಚಾಲ್ತಿ ಖಾತೆಯ ಬಾಕಿಯನ್ನು ಮೀಸಲು ಚಲನೆ ಇಲ್ಲದೆ ಪೂರ್ಣವಾಗಿ ಅಂತರರಾಷ್ಟ್ರೀಯ ಸಾಲದಿಂದ ಪೂರೈಸಲಾಗುವುದು.

3. ನಾಮ ಮಾತ್ರ ವಿನಿಮಯ ದರ ಮತ್ತು ನೈಜ ವಿನಿಮಯ ದರ ನಡುವಿನ ಭಿನ್ನತೆಯನ್ನು ಗುರುತಿಸಿ ದೇಶಿಯ ಸರಕುಗಳು ಇಲ್ಲವೇ ವಿದೇಶಿ ಸರಕುಗಳನ್ನು ಕೊಳ್ಳಲು ನೀವು ನಿರ್ಧರಿಸಿದ್ದರೆ ಯಾವ ದರವು ಹೆಚ್ಚು ಸೂಕ್ತ? ವಿವರಿಸಿ.

ಒಂದು ಕರೆನ್ಸಿಯ ಬೆಲೆಯನ್ನು ಇನ್ನೊಂದು ಕರೆನ್ಸಿರೂಪದಲ್ಲಿ ವ್ಯಕ್ತಪಡಿಸುವುದಕ್ಕೆ ವಿನಿಮಯ ದರ ಎನ್ನುತ್ತೇವೆ. ಎರಡು ಕರೆನ್ಸಿಗಳ ನಡುವೆ ಒಂದು ಸಾಮ್ಯತೆ ಇದ್ದಾಗ, ವಿನಿಮಯದರವನ್ನು ಎರಡರಲ್ಲಿ ಒಂದು ರೀತಿಯಲ್ಲಿ ವ್ಯಾಖ್ಯಾನಿಸ ಬಹುದು, ಆರ್ಥಿಕ ಭಾಷೆಯಲ್ಲಿ ಆಚರಣೆಯಲ್ಲಿರುವಂತೆ ವಿದೇಶಿ ಕರೆನ್ಸಿ ಬೆಲೆಯಲ್ಲಿ ಅಳೆಯುವಂತಹ ಒಂದು ವ್ಯಾಖ್ಯೆಯನ್ನು ಬಳಸುತ್ತೇವೆ. ದ್ವೀಪಕ್ಷೀಯ ದರ ಎಂದರೆ ಒಂದು ಕರೆನ್ಸಿಯ ಎದುರು ಇನ್ನೊಂದು ಕರೆನ್ಸಿಯ ವಿನಿಮಯಗೊಳ್ಳುವ ದರ ಎಂದರ್ಥ ಮತ್ತು ಅವು ನಾಮ ಮಾತ್ರವಾಗಿರುತ್ತವೆ, ಏಕೆಂದರೆ ಇಲ್ಲಿ ವಿನಿಮಯ ದರವು ಹಣದ ರೂಪದಲ್ಲಿ ಉಲ್ಲೇಖಿತವಾಗಿ ರುತ್ತದೆ, ಒಂದು ಡಾಲರ್ ಮತ್ತು ಪೌಂಡ್ ಗೆ ಇಂತಿಷ್ಟು ರೂಪಾಯಿಗಳು ಎಂದಾಗುತ್ತದೆ.

ಉದಾಹರಣೆಗೆ:- ಒಬ್ಬರು ಲಂಡನ್ನಗೆ ಪ್ರವಾಸ ಕೈಗೊಳ್ಳುವ ಯೋಜನೆ ಮಾಡಿದಾಗ ಅವರು ದೇಶೀಯ ಸರಕುಗಳಿಗೆ ಹೊಲಿಸಿದಾಗ ಬ್ರಿಟಿಷ್ ಸರಕುಗಳು ಎಷ್ಟು ದುಬಾರಿಯಾಗಿದೆ ಎಂಬುದನ್ನು ತಿಳಿಯುವ ಅಗತ್ಯವಿರುತ್ತದೆ. ಇದನ್ನು ಗ್ರಹಿಸುವ ಮಾಪನವೆಂದರೆ ನೈಜ ವಿನಿಮಯ ದರವಾಗಿದೆ. ಇದನ್ನು ಒಂದೇ ಕರೆನ್ಸಿಯಲ್ಲಿ ಮಾಪನ ಮಾಡಲಾಗುತ್ತದೆ, ಇದನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಬಹುದು

ನೈಜ ವಿನಿಮಯ ದರ=ep1/p

Pಮತ್ತು P1 ಗಳು ಅನುಕ್ರಮವಾಗಿ ಸ್ವದೇಶ ಮತ್ತು ವಿದೇಶದ ಬೆಲೆ ಮಟ್ಟಗಳಾಗಿದ ಮತ್ತು ರೂಪಾಯಿಯಲ್ಲಿ ವಿದೇಶಿವಿನಿಮಯ ದರ (ನಾಮಮಾತ್ರ ವಿನಿಮಯದ) ಬೆಲೆಯಾಗಿದೆ, ಈ ಅಂಶವು ರೂಪಾಯಿಯಲ್ಲಿ ಮಾಪನ ಮಾಡಿದ ವಿದೇಶಗಳಲ್ಲಿನ ಬೆಲೆಗಳನ್ನು ವ್ಯಕ್ತಪಡಿಸುತ್ತದೆ. ಭಾಜರಾಂಶವು ನೈಜ ವಿನಿಮಯದರವು ಸ್ವದೇಶದಲ್ಲಿನ ಬೆಲೆಗಳಿಗೆ ಸಾಪೇಕ್ಷವಾಗಿ ವಿದೇಶಿ ಬೆಲೆಗಳನ್ನು ಅಳೆಯುತ್ತಾರೆ ನೈಜ ವಿನಿಮಯ ದರಕ್ಕಿಂತ ಹೆಚ್ಚಾದರೆ, ಸ್ವದೇಶದಲ್ಲಿನ ಸರಕುಗಳಿಗಿಂತ ವಿದೇಶಿ ಸರಕುಗಳು ಹೆಚ್ಚು ದುಬಾರಿಯಾಗುತ್ತದೆ. ಆದ್ದರಿಂದ ವಿದೇಶಿದರವೇ ಸೂಕ್ತವಾಗಿರುತ್ತದೆ.

4. ಬದಲಾಗುವ ವಿನಿಮಯ ದರದ ಆಡಳಿತದರದಲ್ಲಿ ವಿನಿಮಯ ದರವು ಹೇಗೆ ನಿರ್ಧರಿಸಲ್ಪಡುತ್ತದೆ?

ಬದಲಾಗುವ ವಿನಿಮಯದರದ ಆಡಳಿತ ದರದಲ್ಲಿ ವಿನಿಮಯ ದರವು ನಿರ್ಧರಿಸಲ್ಪಡುತ್ತದೆ. ಅಂದರೆ ನಾಮ ಮಾತ್ರ ವಿನಿಮಯ ದರಗಳಲ್ಲಿನ ಬದಲಾವಣೆಗಳು ನೈಜ ವಿನಿಮಯ ದರದಲ್ಲಿ ಬದಲಾವಣೆಗಳಿರುತ್ತದೆ. ಮತ್ತು ಇದರಿಂದ ಅಂತರಾಷ್ಟ್ರೀಯ ಸಾಪೇಕ್ಷ ಬೆಲೆಗಳು ಕೂಡ ಬದಲಾವಣೆಯಾಗುತ್ತದೆ. ರೂಪಾಯಿಯ ಅಪಮೌಲ್ಯವು ವಿದೇಶಿ ಸರಕುಗಳ ಕೊಳ್ಳುವಿಕೆ ವೆಚ್ಚವನ್ನು ಹೆಚ್ಚಿಸುತ್ತದೆ. ಮತ್ತು ದೇಶೀಯ ಸರಕುಗಳ ಕಡಿದು ವೆಚ್ಚದಾಯಕವಾಗಿರುತ್ತದೆ. ಇದು ನಿವ್ವಳ ರಫ್ತುಗಳನ್ನು ಹೆಚ್ಚಿಸುತ್ತದೆ, ಆದ್ದರಿಂದ ಸಮಗ್ರ ಬೇಡಿಕೆಯು ಹೆಚ್ಚಾಗುತ್ತದೆ. ಪ್ರತಿಯಾಗಿ ರೂಪಾಯಿ ಮೌಲ್ಯ ಹೆಚ್ಚಾದರೆ ನಿವ್ವಳ ರಫ್ತುಗಳು ಕಡಿಮೆಯಾಗುತ್ತದೆ. ಹಾಗೂ ಸಮಗ್ರ ಬೇಡಿಕೆಯನ್ನು ಕಡಿತಗೊಳಿಸುತ್ತದೆ. ಅಂತರಾಷ್ಟ್ರೀಯ ವ್ಯಾಪಾರಿ ನಮೂನೆಗಳು ವಿನಿಮಯ ದರದ ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುತ್ತದೆ. ವಿನಿಮಯ ದರವನ್ನು ಸರ್ಕಾರದ ತೀರ್ಮಾನಗಳಿಲ್ಲದೆ ನಿಗದಿಪಡಿಸಲಾಗುತ್ತದೆ. ಮತ್ತು ಸರ್ಕಾರದ ಕಾರ್ಯಗಳಿಂದ ನಿರ್ವಹಿಸಿಕೊಂಡು ಬದಲಾಗುತ್ತದೆ.

5, ಅಪಮೌಲ್ಯೀಕರಣ ಮತ್ತು ಸವಕಳಿ ನಡುವಿನ ವ್ಯತ್ಯಾಸ ತಿಳಿಸಿ?

ಒಂದು ನಿಗದಿತ ವಿನಿಮಯ ದರ ವ್ಯವಸ್ಥೆಯಲ್ಲಿ ಸಾಮಾಜಿಕ ಕ್ರಿಯೆಯಿಂದ ವಿನಿಮಯದರವು ಹೆಚ್ಚಾದಾಗ ಅಪಮೌಲೀಕರಣವು ಸಂಭವಿಸುತ್ತದೆ,

ಒಂದು ವರ್ಷದಲ್ಲಿ ಬಂಡವಾಳದಲ್ಲಿ ಒಂದು ಭಾಗವು ಸವಕು – ಹರಕಲು ಗಳಿಂದ ಪೋಲಾಗುತ್ತದೆ, ಇದನ್ನು ಸವಕಳಿ ಎನ್ನುವರು, ಸವಕಳಿಯು ಯಾರೊಬ್ಬರ ಆದಾಯದ ಭಾಗವಾಗಿರುವುದಿಲ್ಲ.

6. ನಿರ್ವಹಣಾ ತೇಲುವ ಪದ್ಧತಿಯಲ್ಲಿ ಕೇಂದ್ರ ಬ್ಯಾಂಕು ಮಧ್ಯ ಪ್ರವೇಶಿಸುವ ಅಗತ್ಯತೆಯಿದೆಯೆ? ಏಕೆ? ವಿವರಿಸಿ,

ನಿರ್ವಹಣಾ ತೇಲುವ ಪದ್ಧತಿಯಲ್ಲಿ ವಿನಿಮಯ ದರ ಕೇಂದ್ರ ಬ್ಯಾಂಕಿನ ಯಾವುದೇ ಮದ್ಯ ಪ್ರವೇಶವಿಲ್ಲದೆ ಮಾರುಕಟ್ಟೆ ನಿರ್ಧಾರವಾಗುತ್ತದೆ. ನಿರ್ವಹಣಾ ತೇಲುವಿಕೆಯ ಸನ್ನಿವೇಶದಲ್ಲಿ ವಿನಿಮಯದರದಲ್ಲಿ ಏರಿಳಿತಗಳನ್ನು ಕಡಿಮೆ ಮಾಡಲು ಕೇಂದ್ರ ಬ್ಯಾಂಕ್‌ ಮಧ್ಯ ಪ್ರವೇಶ ಮಾಡುತ್ತದೆ.

ಆದರೆ ವಿನಿಮಯದರ ಪದ್ಧತಿ ಮತ್ತು ಸ್ಥಿರವಿನಿಮಯ ದರ ಪದ್ಧತಿಯಲ್ಲಿ ಉಚಿತವೆನಿಸಿದಾಗ ಕೇಂದ್ರ ಬ್ಯಾಂಕು ಮಧ್ಯಪ್ರವೇಶಿಸುತ್ತದೆ, ಇದು ಅಗತ್ಯವೂ ಹೌದು ಅನಿವಾರ್ಯವಾಗುತ್ತದೆ.

7. ದೇಶೀಯ ಸರಕುಗಳಿಗೆ ಬೇಡಿಕೆ ಮತ್ತು ಸರಕುಗಳಿಗೆ ದೇಶಿಯ ಬೇಡಿಕೆ ಎಂಬ ಪರಿಕಲ್ಪನೆಗಳು ಒಂದೇ ಆಗಿವೆಯೆ?

ಆದಾಯವು ಹೆಚ್ಚಾದಂತೆ ದೇಶೀಯ ಬೇಡಿಕೆಯ ಕೆಲವು ಭಾಗವು ವಿದೇಶಿ ಸರಕುಗಳ ಮೇಲೆ ವಾಲುತ್ತದೆ, ಹೀಗೆ ಆದಾಯದ ಹೆಚ್ಚಳದೊಂದಿಗೆ ದೇಶೀಯ ಸರಕುಗಳ ಬೇಡಿಕೆಯು ಒಟ್ಟು ದೇಶೀಯ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.

ದೇಶೀಯ ಉತ್ಪನ್ನದ ಪೂರೈಕೆಯು ದೇಶಿಯ ಉತ್ಪನ್ನದ ಬೇಡಿಕೆಗೆ ಸಮನಾಗಿದ್ದಾಗ ಸರಕುಗಳ ಮಾರುಕಟ್ಟೆಯು ಸಮತೋಲನದಲ್ಲಿರುತ್ತದೆ.

ನಮ್ಮ ರಫ್ತುಗಳು ಬೇಡಿಕೆಯಲ್ಲಿನ ಒಂದು ಹೆಚ್ಚಳವು ದೇಶೀಯವಾಗಿ ಉತ್ಪಾದಿಸಿದ ಉತ್ಪನ್ನದ ಸಮಗ್ರ ಬೇಡಿಕೆಯಲ್ಲಿ . ಒಂದು ಹೆಚ್ಚಳವಾಗಿದೆ ಮತ್ತು ಸರ್ಕಾರದ ವೆಚ್ಚದಲ್ಲಿನ ಹೆಚ್ಚಳದಂತೆಯೇ ಅಥವಾ ಸ್ವಾಯುತ ಹೂಡಿಕೆಯಲ್ಲಿನ ಹೆಚ್ಚಳದಂತೆಯೇ ಇದರ ಬೇಡಿಕೆಯನ್ನು ಹೆಚ್ಚಿಸುತ್ತದೆ, ಹೀಗಾಗಿ ದೇಶಿಯ ಸರಕುಗಳಿಗೆ ಬೇಡಿಕೆ ಮತ್ತು ಸರಕುಗಳಿಗೆ ದೇಶಿಯ ಬೇಡಿಕೆ ಒಂದು ಆಗಿದೆ.

8. ಮುಕ್ತ ಆರ್ಥಿಕತೆಯ ಸ್ವಾಯತ್ತ ವೆಚ್ಚದ ಗುಣಕವು ಮುಚ್ಚಿದ ಆರ್ಥಿಕತೆಗಿಂತ ಸಣ್ಣ ಪ್ರಮಾಣದಲ್ಲಿರುತ್ತದೆ, ಏಕೆ?

ಮುಕ್ತ ಆರ್ಥಿಕತೆಯ ಗುಣವು ಮುಚ್ಚಿದ ಆರ್ಥಿಕತೆಯಲ್ಲಿನ ಗುಣಕ್ಕಿಂತ ಸಣ್ಣ (ಕಡಿಮೆ) ಪ್ರಮಾಣದಾಗಿರುತ್ತದೆ. ಏಕೆಂದರೆ ದೇಶೀಯ ಬೇಡಿಕೆಯಲ್ಲಿನ ಒಂದು ಭಾಗವು ವಿದೇಶಿ ಸರಕುಗಳ ಮೇಲಾಗುತ್ತದೆ, ಆದ್ದರಿಂದ ಸ್ವಾಯತ್ತ ಬೇಡಿಕೆಯಲ್ಲಿನ ಹೆಚ್ಚಳವು ಮುಚ್ಚಿದ ಆರ್ಥಿಕತೆಗೆ ಹೋಲಿಸಿದರೆ ಉತ್ಪನ್ನದಲ್ಲಿ ಸಣ್ಣ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ವ್ಯಾಪಾರ ಬಾಕಿಯ ಕ್ಷೀಣತೆಗೆ ಕಾರಣವಾಗುತ್ತದೆ.

ಆದ್ದರಿಂದ ಮುಕ್ತ ಆರ್ಥಿಕತೆಯ ಸ್ವಾಯತ್ತ ವೆಚ್ಚದ ಗುಣಕವು ಮುಚ್ಚಿದ ಆರ್ಥಿಕತೆಗಿಂತ ಸಣ್ಣ ಪ್ರಮಾಣದಲ್ಲಿರುತ್ತದೆ.

9. ‘B’ ದೇಶಕ್ಕಿಂತ ‘A’ ದೇಶದ ಹಣದುಬ್ಬರವು ಅಧಿಕವಾಗಿದ್ದು ಮತ್ತು ಎರಡು ದೇಶಗಳ ನಡುವಿನ ವಿನಿಮಯದರವು ನಿಗದಿತವಾಗಿದ್ದರೆ, ಎರಡು ದೇಶಗಳ ನಡುವಿನ ವ್ಯಾಪಾರ ಬಾಕಿಗೆ ಏನು ಸಂಭವಿಸುವ ಸಾಧುತೆಯಿರುತ್ತದೆ?

Bದೇಶಕ್ಕಿಂತ ‘A’ ದೇಶದ ಹಣದುಬ್ಬರವು ಅಧಿಕವಾಗಿದ್ದು ಮತ್ತು ಎರಡು ದೇಶಗಳ ನಡುವಿನ ಏನಿಮಯದರವು ನಿಗದಿತವಾಗಿದ್ದರೆ, ಆಗ ಬಡ್ಡಿದರವು ಹೆಚ್ಚು ಇದ್ದ ಕಡೆ ಆಕರ್ಷಿತರಾಗುತ್ತಾರೆ.

ಉದಾಹರಣೆಗೆ:- ‘A’ ದೇಶದ ಬಡ್ಡಿದರ 8% ಹಾಗೂB ದೇಶದ ಬಡ್ಡಿದರ 10% ಎಂದಾಗ

‘A’ ದೇಶದಲ್ಲಿನ ಹೂಡಿಕೆದಾರರುB ದೇಶದಲ್ಲಿನ ಬಡ್ಡಿ ದರದಿಂದ ಆಕರ್ಷಿತರಾಗುತ್ತಾರೆ. ತಮ್ಮ ಸ್ವಂತಕರೆನ್ಸಿಯನ್ನು ಮಾರಾಟ ಮಾಡಿ B ದೇಶದ ಕರೆನ್ಸಿಯನ್ನು ಖರೀದಿಸುತ್ತಾರೆ, ಇದೇ ವೇಳೆಯಲ್ಲಿ B ದೇಶದ ಹೂಡಿಕೆಯನ್ನು ಸಹ ತಮ್ಮ ದೇಶದಲ್ಲಿ ಮಾಡುವುದು ಹೆಚ್ಚು ಆಕರ್ಷಿತವೆಂದು ಕಂಡು ಕೊಳ್ಳುತ್ತಾರೆ. ‘A’ ದೇಶದ ಕರೆನ್ಸಿಗೆ ಕಡಿಮೆ ಮಾಡುತ್ತದೆ.

‘A’ ದೇಶದ ಕರೆನ್ಸಿಯ ಬೇಡಿಕೆಯು ಎಡಗಡೆಗೆ ಪಲ್ಲಟಗೊಳ್ಳುತ್ತದೆ. ಮತ್ತು ಪೂರೈಕೆ ರೇಖೆಯ ಬಲಗಡೆ ಪಲ್ಲಟಗೊಳ್ಳುತ್ತದೆ Bಇದು ದೇಶದ ‘A’ ಕರೆನ್ಸಿಯ ಅಪಮೌಲ್ಯಕ್ಕೆ ಹಾಗೂ ದೇಶದ B ಕರೆನ್ಸಿಯ ಮೌಲ್ಯದ ಹೆಚ್ಚಳಕ್ಕೆ ಕಾರಣವಾಗುತ್ತದೆ.

10. ಒಂದು ಚಾಲ್ತಿ ಖಾತೆ ಕೊರತೆಯು ಎಚ್ಚರಿಕೆ ಪರಿಸ್ಥಿತಿಗೆ ಕಾರಣವಾಗುವುದೇ? ವಿವರಿಸಿ.

ಚಾಲ್ತಿ ಖಾತೆಯಲ್ಲಿನ ಒಂದು ಘಟಕದ ವ್ಯವಹಾರವು ಸ್ವೀಕೃತಿಯ ಒಳ ಹರಿವಿಗಿಂತ 26.8 ಮಿಲಿಯನ್ ಡಾಲರ್‌ಗಳಷ್ಟು ಪಾವತಿಯಾಗಿ ಅಧಿಕ ಹೊರ ಹರಿವಿಗೆ ಕಾರಣವಾಗಿದೆ ಎಂದರ್ಥ. ಇದು 2014-15ನೇ ಸಾಲಿನ ಚಾಲ್ತಿ ಖಾತೆ ಕೊರತೆ ಎಂದು ಉಲ್ಲೇಖಿಸಲ್ಪಟ್ಟಿದೆ. ಒಂದು ವೇಳೆ ಈ ಸಂಖ್ಯೆಯು ಧನಾತ್ಮಕ ಸಂಖ್ಯೆಯಾಗಿದ್ದರೆ ಅದು ಚಾಲ್ತಿ ಖಾತೆ ಮಿಗುತೆ (ಉಳಿತಾಯ) ಯಾಗುತ್ತಿತ್ತು. ಹಣ ದಾಸ್ತಾನುಗಳು, ಬಾಂಡುಗಳು ಇತ್ಯಾದಿ ಸ್ವತ್ತುಗಳ ಅಂತರಾಷ್ಟ್ರೀಯ ಖರೀದಿ ಮತ್ತು ಮಾರಾಟಗಳನ್ನು ಬಂಡವಾಳ ಖಾತೆಯು ದಾಖಲಿಸುತ್ತದೆ. ಯಾವುದೇ ವ್ಯವಹಾರವು ವಿದೇಶಿಯರಿಂದ ನಮಗೆ ಸ್ವೀಕೃತಿಯಾಗಿ ಬಂದರೆ ಅದು ಜಮವಾಗಿ ನಮೂದಿತವಾಗುತ್ತದೆ ಮತ್ತು ಇದು ಧನಾತ್ಮಕ ಸಂಕೇತವಾಗಿದೆ.

ವ್ಯಾಪಾರದಲ್ಲಿ ಕೊರತೆಯು ಪ್ರತಿ ವರ್ಷ ಮೇಲಿಂದ ಮೇಲೆ ಸಂಭವಿಸುವ ಲಕ್ಷಣವಾಗಿದ್ದರೂ ಶೇ 2.3 ರಷ್ಟು ಚಾಲ್ತಿ ಖಾತೆಯ ಮಿಗುತೆಯನ್ನು ಹೊಂದಿತ್ತು. ಏಕೆಂದರೆ ಸೇವೆಗಳಿಂದ ಬಂದಗಳಿಕೆ ಮತ್ತು ಖಾಸಗಿ ವರ್ಗಾವಣೆಗಳು ವ್ಯಾಪಾರ ಕೊರತೆಯನ್ನು ನೀಗಿಸಿದವು.

ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ಅನುಭವಿಸಿದರೆ ಅದನ್ನು ತನ್ನ ಆಸ್ತಿಯನ್ನು ಮಾರಾಟ ಮಾಡುವುದರ ಮೂಲಕ ಅಥವಾ ವಿದೇಶಗಳಿಂದ ಸಾಲವನ್ನು ಪಡೆಯುವುದರ ಮೂಲಕ ಭರಿಸಬೇಕಾಗುತ್ತದೆ. ನಿವ್ವಳ ಬಂಡವಾಳವು ಚಾಲ್ತಿ ಖಾತೆಯ ಕೊರತೆಯನ್ನು ನೀಗಿಸಲು ಅಗತ್ಯವಾದ ಹಣಕಾಸನ್ನು ಒದಗಿಸಲಾಗುತ್ತದೆ.

ಹೀಗಾಗಿ ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾದಲ್ಲಿ ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ಮಾರುವುದರ ಮೂಲಕ ವಿದೇಶ ವಿನಿಮಯ ಮೀಸಲನ್ನು ಕಡಿಮೆ ಕೊಂಡು ಮೀಸಲು ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಬಹುದು.

11. ದೇಶಗಳು, ಅವುಗಳ ಬಾಹ್ಯಖಾತೆಗಳಲ್ಲಿ ಸ್ಥಿರತೆಯನ್ನು ತರುವಂತಹ ಕೆಲವು ವಿನಿಮಯದರ ಏರ್ಪಾಟುಗಳನ್ನು ಚರ್ಚಿಸಿ.

ದೇಶಗಳು ಅವುಗಳ ಬಾಹ್ಯ ಖಾತೆಗಳಲ್ಲಿ ಸ್ಥಿರತೆಯನ್ನು ತರುವಂತಹ ಕೆಲವು ವಿನಿಮಯ ದರ ಏರ್ಪಾಟುಗಳಿವೆ, ಅವುಗಳೆಂದರೆ –

ನಮ್ಮ ವಿನಿಮಯ ದರದ ವ್ಯವಸ್ಥೆಯಲ್ಲಿ ವಿನಿಮಯ ದರವು ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆ ಶಕ್ತಿಗಳಿಂದ ನಿರ್ಧರಿತವಾಗುತ್ತದೆ. ಸಂಪೂರ್ಣವಾದ ನಮ್ಮ ವ್ಯವಸ್ಥೆಯಲ್ಲಿ ಕೇಂದ್ರ ಬ್ಯಾಂಕುಗಳು ಸರಳ ಕಾಯಿದೆಗಳನ್ನು ಅನುಸರಿಸುತ್ತದೆ. ಅವು ವಿನಿಮಯ ದರದ ಮಟ್ಟದ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ. ಅಂದರೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹಸ್ತ ಕ್ಷೇಮ ಮಾಡುವುದಿಲ್ಲ.

ಕೆಲವು ವಿನಿಮಯ ದರಗಳೆಂದರೆ, ಅಲ್ಪಾವಧಿ ವಿನಿಮಯ ದರಗಳು ಈ ವಿಷಯದಲ್ಲಿ ವಿದೇಶಿವಿನಿಮಯದ ಬೇಡಿಕೆ ಮತ್ತು ಪೂರೈಕೆಯನ್ನು ಸಮಾನ ಗೊಳಿಸುವುದಕ್ಕಾಗಿ ಮಾರುಕಟ್ಟೆಯನ್ನು ತೆರವು ಗೊಳಿಸಲು ವಿನಿಮಯ ದರವು ಮುಂದಾಗುತ್ತದೆ.

ಒಂದು ದೇಶವು ಅದರ ವಿನಿಮಯದಿಂದ ಮಟ್ಟವನ್ನು ನಿಗದಿಪಡಿಸುವ ಅಥವಾ ಸ್ಥಿರಗೊಳಿಸುವ ರೀತಿಯನ್ನು ಪರಿಶೀಲಿಸಿದಾಗ ವಿನಿಮಯ ದರವು ಸ್ಥಿರಗೊಳಿಸಲು ಇಚ್ಛಿಸುತ್ತದೆ. ಹಲವು ದೇಶಗಳು ಸ್ಥಿರ ವಿನಿಮಯ ದರ ಪದ್ಧತಿಯನ್ನು ತಿರಸ್ಕರಿಸುವುದನ್ನು ಅಂತರಾಷ್ಟ್ರೀಯ ಅನುಭವದಿಂದ ಕಾಣಬಹುದು. ಇದು ಬದಲಾಗುವ ವಿನಿಮಯ ದರ ಪದ್ಧತಿ ಮತ್ತು ಸ್ಥಿರ ವಿನಿಮಯ ದರ ಪದ್ಧತಿಯ ಮಿಶ್ರಣವಾಗಿದೆ. ಈ ಪದ್ಧತಿಯಲ್ಲಿ ತಮಗೆ ಉಚಿತವೆನಿಸಿದಾಗಲೆಲ್ಲ ಕೇಂದ್ರಿಯ ಬ್ಯಾಂಕುಗಳು ವಿನಿಮಯ ದರ ಚಲನೆಯನ್ನು ಮಿತಗೊಳಿಸಲು ವಿದೇಶಿ ವಿನಿಮಯಗಳನ್ನು ಕೊಳ್ಳಲು ಮತ್ತು ಮಾರಲು ಮಧ್ಯ ಪ್ರವೇಶಿಸುತ್ತದೆ.

ನಾಮ ಮಾತ್ರ ವಿನಿಮಯ ದರವು ದೇಶಿಯ ಕರೆನ್ಸಿಯ ರೂಪದಲ್ಲಿನ ವಿದೇಶಿ ಕರೆನ್ಸಿಯ ಒಂದು ಘಟದ ಬೆಲೆ ಎಂದಾಗುತ್ತದೆ.

ನೈಜ ವಿನಿಮಯ ದರವು, ದೇಶೀಯ ಸರಕುಗಳ ರೂಪದಲ್ಲಿ ವಿದೇಶಿ ಸರಕುಗಳ ಸಾಪೇಕ್ಷೆ ಬೆಲೆ ಎಂಬ ಅರ್ಥ ನೀಡುತ್ತದೆ. ಇದು ದೇಶೀಯ ಬೆಲೆ ಮಟ್ಟದಿಂದ ಭಾಗಿಸಲ್ಪಟ್ಟ ವಿದೇಶಿ ಬೆಲೆ ಮಟ್ಟದಿಂದ ಭಾಗಿಸಲ್ಪಟ್ಟ ವಿದೇಶಿ ಬೆಲೆ ಮಟ್ಟದ ನಾಮ ಮಾತ್ರ ವಿನಿಮಯ ದರಕ್ಕೆ ಸಮನಾಗಿದೆ ಇದು ಅಂತರಾಷ್ಟ್ರೀಯ ಸ್ಪರ್ಧಾ ಸಾಮರ್ಥ್ಯವನ್ನು ವಾಪನ ಮಾಡುತ್ತದೆ. ನೈಜ ವಿನಿಮಯ ದರವು ಒಂದಕ್ಕೆ ಸಮನಾಗಿದ್ದಾಗ, ಎರಡು ದೇಶಗಳ ಕೊಳ್ಳುವ ಶಕ್ತಿಯು ಸಮಾನತೆಯಲ್ಲಿವೆ ಎಂದು ಹೇಳಲಾಗುತ್ತದೆ.

2nd Puc Economics Chapter 12 Notes in Kannada

1. ಮುಕ್ತ ಆರ್ಥಿಕತೆ ಉದಾಹರಣೆಯೊಂದಿಗೆ ವಿವರಿಸಿ?

ವಾಸ್ತವದಲ್ಲಿ ಬಹಳಷ್ಟು ಆಧುನಿಕ ಆರ್ಥಿಕತೆಗಳು ಮುಕ್ತ ಆರ್ಥಿಕತೆಗಳಾಗಿವೆ. ಜಗತ್ತಿನ ಇತರೆ ಆರ್ಥಿಕತೆಗಳೊಂದಿಗಿನ ಸಂವಹನವು, ಆಯ್ಕೆಗಳನ್ನು ವಿಶಾಲವಾದ ಮೂರು ಮಾರ್ಗಗಳಲ್ಲಿ ವಿಸ್ತರಿಸಿದೆ.

  1. ಅನುಭೋಗಿಗಳು ಮತ್ತು ಉದ್ಯಮ ಘಟಕಗಳು ದೇಶೀಯ ಮತ್ತು ವಿದೇಶಿ ಸರಕುಗಳ ನಡುವಿನ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ, ಇದು ಸರಕು ಮಾರುಕಟ್ಟೆ ಕೊಂಡಿಯಾಗಿದ್ದು, ಅಂತರರಾಷ್ಟ್ರೀಯ ವ್ಯಾಪಾರದ ಮೂಲಕ ಸಂಭವಿಸುತ್ತದೆ.
  2. ಹೂಡಿಕೆದಾರರು, ದೇಶೀಯ ಮತ್ತು ವಿದೇಶಿ ಆಸ್ತಿಗಳ ನಡುವೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಇದು ಹಣಕಾಸು ಮಾರುಕಟ್ಟೆ ಕೊಂಡಿಯನ್ನು ಒಳಗೊಂಡಿದೆ.
  3. ಉದ್ಯಮ ಘಟಕಗಳು, ಉತ್ಪಾದನೆಯನ್ನು ಎಲ್ಲಿ ಕೈಗೊಳ್ಳಬೇಕು ಮತ್ತು ಕೆಲಸಗಾರರು ಎಲ್ಲಿ ಕೆಲಸ ಮಾಡಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಉತ್ಪಾದನಾಂಗ ಮಾರುಕಟ್ಟೆ ಕೊಂಡಿಯಾಗಿದೆ. ಶ್ರಮದ ಮಾರುಕಟ್ಟೆ ಕೊಂಡಿಗಳು ಸಾಪೇಕ್ಷವಾಗಿ ಕಡಿಮೆ ಇವೆ. ಏಕೆಂದರೆ, ವಲಸೆ ಕಾನೂನುಗಳ ಮೂಲಕ ಜನರ ಚಲನೆಯ ಮೇಲಿನ ಅನೇಕ ನಿರ್ಬಂಧಗಳನ್ನು ಹೇರುತ್ತವೆ. ಸರಕುಗಳ ಚಲನೆಯನ್ನು ಶ್ರಮದ ಚಲನೆಗೆ ಬದಲಿಯಾಗಿ ಸಾಂಪ್ರದಾಯಿಕ ರೀತಿಯಲ್ಲಿ ನೋಡಲಾಗಿದೆ. ಇಲ್ಲಿ ನಾವು ಮೊದಲ ಎರಡು ಕೊಂಡಿಗಳ ಬಗ್ಗೆ ನಮ್ಮ ಅಧ್ಯಯನವನ್ನು ಕೇಂದ್ರೀಕರಿಸೋಣ.

ಇತರ ರಾಷ್ಟ್ರಗಳೊಂದಿಗೆ ಸರಕು ಮತ್ತು ಸೇವೆಗಳ ವ್ಯಾಪಾರವನ್ನು, ಹಾಗೂ ಅನೇಕ ವೇಳೆ, ಆರ್ಥಿಕ ಸ್ವತ್ತುಗಳ ವ್ಯವಹಾರವನ್ನು ಕೈಗೊಳ್ಳುವ ಅರ್ಥವ್ಯವಸ್ಥೆಯೇ ಮುಕ್ತ ಆರ್ಥಿಕತೆಯಾಗಿದೆ. ಉದಾಹರಣೆಗೆ, ಭಾರತೀಯರು ಪ್ರಪಂಚದಾದ್ಯಂತ ಉತ್ಪಾದಿಸಲಾಗುವ ಉತ್ಪನ್ನಗಳನ್ನು ಅನುಭೋಗಿಸುತ್ತಾರೆ ಮತ್ತು ನಮ್ಮ ಕೆಲವು ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುತ್ತವೆ. ಆದ್ದರಿಂದ ವಿದೇಶಿ ವ್ಯಾಪಾರವು ಭಾರತೀಯ ಸಮಗ್ರ ಬೇಡಿಕೆಯನ್ನು ಎರಡು ವಿಧದಲ್ಲಿ ಪ್ರಭಾವಿಸುತ್ತದೆ. ಮೊದಲನೆಯದಾಗಿ, ಭಾರತೀಯರು ವಿದೇಶಿ ಖರೀದಿಗಾಗಿ ಮಾಡಿದ ವೆಚ್ಚವು ‘ಸೋರಿಕೆ’ ರೂಪದಲ್ಲಿ ಸಮಗ್ರ ಬೇಡಿಕೆಯನ್ನು ಕಡಿಮೆ ಮಾಡುತ್ತಾ, ಆದಾಯದ ವೃತ್ತಾಕಾರದ ಹರಿವಿನಿಂದ ತಪ್ಪಿಸಿಕೊಳ್ಳುತ್ತದೆ. ಎರಡನೆಯದಾಗಿ, ವಿದೇಶಿಯರಿಗೆ ಮಾಡಿದ ನಮ್ಮ ರಫ್ತು, ದೇಶೀಯವಾಗಿ ಉತ್ಪಾದಿಸಿದ ಸರಕುಗಳ ಸಮಗ್ರ ಬೇಡಿಕೆಯನ್ನು ಹೆಚ್ಚಿಸುತ್ತಾ, ಆದಾಯದ ಹರಿವಿನೊಳಗೆ ‘ಒಳಸೇರಿಕೆ’ ಯಾಗಿ ಸೇರಿಹೋಗುತ್ತದೆ. ಒಟ್ಟು ದೇಶೀಯ ಉತ್ಪನ್ನದ (GDP ಯ) ಅನುಪಾತವಾಗಿ ಒಟ್ಟು ವಿದೇಶಿ ವ್ಯಾಪಾರವು (ರಫ್ತು+ಆಮದು) ಒಂದು ಆರ್ಥಿಕತೆಯ ಮುಕ್ತತೆಯ ಮಟ್ಟದ ಮಾಪನವಾಗಿದೆ. ಭಾರತದ ಆರ್ಥಿಕತೆಯಲ್ಲಿ ವಿದೇಶಿ ವ್ಯಾಪಾರವು 2014-15 ರಲ್ಲಿ ಶೇಕಡ 48.8 ರಷ್ಟಿತ್ತು. ವಿದೇಶೀ ವ್ಯಾಪಾರದ ಪ್ರಮಾಣವು GDP ಯ ಶೇಕಡ 50ಕ್ಕಿಂತಲೂ ಅಧಿಕವಾಗಿರುವ ಅನೇಕ ರಾಷ್ಟ್ರಗಳೂ ಇವೆ.

2. BOPಯ ವಿರುತೆ ಮತ್ತು ಕೊರತೆಯನ್ನು ವಿವರಿಸಿ?

ಒಬ್ಬ ವ್ಯಕ್ತಿಯು ತನ್ನ ಆದಾಯಕ್ಕಿಂತ ಅಧಿಕವಾಗಿ ಮಾಡಿದ ವೆಚ್ಚವನ್ನು ಹೇಗೆ ತನ್ನ ಆಸ್ತಿಗಳನ್ನು ಮಾರಾಟಮಾಡುವುದರಿಂದ ಅಥವಾ ಇತರರಿಂದ ಸಾಲವನ್ನು ಪಡೆಯುವುದರಿಂದ ಭರಿಸುತ್ತಾನೆಯೋ, ಅದೇ ರೀತಿ, ಒಂದು ದೇಶವು ತನ್ನ ಸಂದಾಯ ಬಾಕಿಯ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ಅನುಭವಿಸಿದರೆ (ವಿಶ್ವದ ಇತರ ರಾಷ್ಟ್ರಗಳಿಗೆ ಮಾರಾಟ ಮಾಡುವುದರಿಂದ ಪಡೆಯುವ ಸ್ವೀಕೃತಿಗಿಂತ ವಿದೇಶಗಳಲ್ಲಿ ಮಾಡಿದ ವೆಚ್ಚವು ಅಧಿಕವಾಗಿದ್ದರೆ, ಅದನ್ನು ತನ್ನ ಆಸ್ತಿಗಳನ್ನು ಮಾರಾಟ (ವಿದೇಶಗಳಲ್ಲಿ) ಮಾಡುವುದರ ಮೂಲಕ ಅಥವಾ ವಿದೇಶಗಳಿಂದ ಸಾಲವನ್ನು ಪಡೆಯುವುದರ ಮೂಲಕ ಭರಿಸಬೇಕಾಗುತ್ತದೆ. ಇದೇ ಅಂತರರಾಷ್ಟ್ರೀಯ ಪಾವತಿಯ ಮೂಲಾಂಶ (ಮೂಲತತ್ವ)ವಾಗಿದೆ. ಹೀಗೆ, ನಿವ್ವಳ ಬಂಡವಾಳ ಒಳ-ಹರಿವಿನಿಂದ ಚಾಲ್ತಿ ಖಾತೆಯ ಕೊರತೆಯನ್ನು ನೀಗಿಸಲು ಅಗತ್ಯವಾದ ಹಣಕಾಸನ್ನು ಒದಗಿಸಲಾಗುತ್ತದೆ. ಪರ್ಯಾಯವಾಗಿ, ಒಂದು ದೇಶದ ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾದಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ಮಾರುವುದರ ಮೂಲಕ, ವಿದೇಶಿ ವಿನಿಮಯ ಮೀಸಲನ್ನು ಕಡಿಮೆ ಮಾಡಿಕೊಂಡು, ಅಧಿಕೃತ ಮೀಸಲು ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಬಹುದು. ಅಧಿಕೃತ ಮೀಸಲಿನಲ್ಲಿನ ಇಳಿಕೆಯನ್ನು (ಏರಿಕೆಯನ್ನು) ಒಟ್ಟಾರೆ ಸಂದಾಯಬಾಕಿಯ ಕೊರತೆ (ಮಿಗುತೆ) ಎಂದು ಕರೆಯುತ್ತೇವೆ. ಮುಖ್ಯ ವಿಷಯವೆಂದರೆ ಹಣಕಾಸು ಪ್ರಾಧಿಕಾರಗಳು ಸಂದಾಯ ಬಾಕಿಯಲ್ಲಿನ ಕೊರತೆಯನ್ನು ನೀಗಿಸಲು ಅಂತಿಮವಾಗಿ ಹಣಕಾಸನ್ನು ಒದಗಿಸುವ ಪ್ರಾಧಿಕಾರವಾಗಿದೆ (ಅಥವಾ ಹೆಚ್ಚಳದ ಸ್ವೀಕೃತರಾಗಿದ್ದಾರೆ). ಚಾಲ್ತಿ ಮುಕ್ತ ಆರ್ಥಿಕತೆ ಖಾತೆ ಮತ್ತು ಬಂಡವಾಳ ಖಾತೆಯ ಬಾಕಿಯನ್ನು ಕೂಡಿಸಿದಾಗ ಸಂದಾಯ ಬಾಕಿಯ ಕೊರತೆ ಅಥವಾ ಮಿಗುತೆ (ಉಳಿತಾಯ) ಲಭ್ಯವಾಗುತ್ತದೆ. ಇದು ಅಧಿಕೃತ ಮೀಸಲಿಗೆ ಸೇರ್ಪಡೆಯಾಗುವ ಮೊತ್ತವಾಗಿದೆ. ಸಂದಾಯ ಬಾಕಿಯ ಚಾಲ್ತಿ ಖಾತೆ ಮತ್ತು ಮೀಸಲು ರಹಿತ ಬಂಡವಾಳ ಖಾತೆಯ ಮೊತ್ತವು ಶೂನ್ಯಕ್ಕೆ ಸಮನಾಗಿದ್ದಾಗ ಒಂದು ದೇಶದ ಸಂದಾಯ ಬಾಕಿಯು ಸಮತೋಲನದಲ್ಲಿರುತ್ತ ದೆಂದು ಹೇಳಬಹುದು. ಅಂದರೆ ಇಲ್ಲಿ, ಚಾಲ್ತಿ ಖಾತೆಯ ಬಾಕಿಯನ್ನು ಮೀಸಲು ಚಲನೆ ಇಲ್ಲದೆ ಪೂರ್ಣವಾಗಿ ಅಂತರರಾಷ್ಟ್ರೀಯ ಸಾಲದಿಂದ ಪೂರೈಸಲಾಗುತ್ತದೆ. ಅಧಿಕೃತ ಮೀಸಲು ವ್ಯವಹಾರಗಳು, ತೇಲುವ ವಿನಿಮಯ ದರಕ್ಕಿಂತ ಸ್ಥಿರ ವಿನಿಮಯ ದರವಿದ್ದಾಗ ಹೆಚ್ಚು ಸಮಂಜಸವೆನಿಸು ಕೊಳ್ಳುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ.

ಸಂಕ್ಷಿಪ್ತ ಉತ್ತರಗಳನ್ನು ಬರೆಯಿರಿ

1. ಸ್ವಾಯತ್ತ ಮತ್ತು ಹೊಂದಾಣಿಕೆ ವ್ಯವಹಾರಗಳನ್ನು ವಿವರಿಸಿ?

ಸ್ವಾಯತ್ತ ಮತ್ತು ಹೊಂದಾಣಿಕೆ ವ್ಯವಹಾರಗಳು : ಸಂದಾಯ ಬಾಕಿಯ ಪರಿಸ್ಥಿತಿಯಿಂದ ಪ್ರಭಾವಿತವಾಗದೆ ಸ್ವತಂತ್ರವಾಗಿ ಕೈಗೊಳ್ಳುವ (ಲಾಭದ ಉದ್ದೇಶದಿಂದ ಕೈಗೊಳ್ಳಬಹುದು) ಅಂತರರಾಷ್ಟ್ರೀಯ ಅರ್ಥಿಕ ವ್ಯವಹಾರಗಳನ್ನು ಸ್ವಾಯತ್ತ ಆರ್ಥಿಕ ವ್ಯವಹಾರಗಳೆನ್ನುತ್ತೇವೆ. ಈ ಬಾಬುಗಳನ್ನು ಸಂದಾಯ ಬಾಕಿಯಲ್ಲಿನ ‘ರೇಖೆಯ ಮೇಲಿನ’ ಬಾಬುಗಳೆಂದು ಕರೆಯಲಾಗುತ್ತದೆ. ಸ್ವಾಯತ್ತ ಪಾವತಿಗಳಿಗಿಂತ ಸ್ವಾಯತ್ತ ಸ್ವೀಕೃತಿಗಳು ಅಧಿಕವಾಗಿದ್ದಾಗ (ಕಡಿಮೆಯಿದ್ದಾಗ) ಸಂದಾಯ ಬಾಕಿಯು ಮಿಗುತೆಯಲ್ಲಿದೆ (ಕೊರತೆಯಲ್ಲಿದೆ) ಎಂದು ಹೇಳಬಹುದು.

ಹೊಂದಾಣಿಕೆ ವ್ಯವಹಾರಗಳು ‘ರೇಖೆಯ ಕೆಳಗಿನ ಬಾಬುಗಳು’: ಸ್ವಾಯತ್ತ ಬಾಬುಗಳ ನಿವ್ವಳ ಪರಿಣಾಮದಿಂದ ನಿರ್ಧಾರವಾಗುತ್ತದೆ – ಅಂದರೆ ಸಂದಾಯ ಬಾಕಿಯಲ್ಲಿನ ಅಧಿಕೃತ ಮೀಸಲು ವ್ಯವಹಾರಗಳನ್ನು ಹೊಂದಾಣಿಕೆ ವ್ಯವಹಾರಗಳೆಂದು ಪರಿಗಣಿಸಲಾಗುತ್ತದೆ (ಇತರೆ ವ್ಯವಹಾರಗಳನ್ನು ಸ್ವಾಯತ್ತ ವ್ಯವಹಾರಗಳೆನ್ನುತ್ತಾರೆ).

ತಪ್ಪುಗಳು ಮತ್ತು ಲೋಪಗಳು: ಎಲ್ಲಾ ಅಂತರರಾಷ್ಟ್ರೀಯ ವ್ಯವಹಾರಗಳನ್ನು ನಿಖರವಾಗಿ ದಾಖಲಿಸಲು ಸಾಧ್ಯವಾಗದ ನಮ್ಮ ಅಸಮರ್ಥತೆಯನ್ನು ಪ್ರತಿಬಿಂಬಿಸುವ ಸಮತೋಲನ ಬಾಬುವಾದ BOP (ಚಾಲ್ತಿ ಮತ್ತು ಬಂಡವಾಳ ಖಾತೆಗಳನ್ನು ಹೊರತುಪಡಿಸಿ)ಯಲ್ಲಿ ಮೂರನೇ ಮೂಲಾಂಶವನ್ನು ಒಳಗೊಂಡಿವೆ.

FAQ

1. ವ್ಯಾಪಾರ ಬಾಕಿ ಎಂದರೇನು?

ಸರಕುಗಳ ರಫ್ತು ಮತ್ತು ಆಮದುಗಳ ಬಾಕಿಯನ್ನು ವ್ಯಾಪಾರ ಬಾಕಿ ಎಂದು ಕರೆಯುವರು.

2. ಸಂದಾಯ ಬಾಕಿ ಎಂದರೇನು?

ಒಂದು ದೇಶದ ಜನರು ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಕು ಮತ್ತು ಸೇವೆಗಳಲ್ಲಿ ಹಾಗೂ ಸ್ವತ್ತುಗಳಲ್ಲಿ ನಡೆಸುವ ವ್ಯವಹಾರಗಳನ್ನು ಸಂದಾಯ ಬಾಕಿ ಎನ್ನುವರು.

3. ಜನರು ವಿದೇಶಿ ವಿನಿಮಯವನ್ನು ಏಕೆ ಬೇಡುತ್ತಾರೆ?

ವಿನಿಮಯ ದರಗಳಲ್ಲಿನ ಬದಲಾವಣೆಗಳು ನೈಜ ವಿನಿಮಯ ದರಗಳಲ್ಲಿ ಬದಲಾವಣೆ ಆಗುವುದರಿಂದ ಅ೦ತರಾಷ್ಟ್ರೀಯ ಸಾಪೇಕ್ಷೆ ಬೆಲೆ ಬದಲಾವಣೆಯಾಗುತ್ತವೆ. ರೂಪಾಯಿಯ ಅಪಮೌಲ್ಯವು ವಿದೇಶಿ ಸರಕುಗಳ ಕೊಳ್ಳುವಿಕೆಯನ್ನು ಹೆಚ್ಚುಸುತ್ತದೆ. ದೇಶೀಯ ಸರಕುಗಳು ವೆಚ್ಚದಾಯವಾಗುತ್ತದೆ. ಹೀಗಾಗಿ ವಿನಿಮಯ ದರದಲ್ಲಿ ಬದಲಾವಣೆಯಿಂದ ಜನರು ವಿದೇಶಿ ವಿನಿಮಯವನ್ನು ಬೇಡುತ್ತಾರೆ.

ಇತರೆ ವಿಷಯಗಳು :

2nd Puc All Subject Notes

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  12ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *