ಕನ್ನಡ ನಾಡಿನ ಹಿರಿಮೆ ಪ್ರಬಂಧ, Kannada Nadina Hirime Prabandha, kannada nadina hirime essay in kannada
Kannada Nadina Hirime Prabandha
ಪೀಠಿಕೆ
ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು “ಮೈಸೂರು ರಾಜ್ಯ” ಎಂದು ಇತ್ತು.
ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.
“ಕರ್ನಾಟಕ” ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು “ಕರು+ನಾಡು” ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ.
ವಿಷಯ ಬೆಳವಣಿಗೆ
ಕನ್ನಡ ನಾಡಿನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಗಳೆಲ್ಲವೂ ನಮ್ಮನಾಡಿನ ಹಿರಿಮೆಗಳೇ ಆಗಿರುವುದನ್ನು ನೆನಪಿಟ್ಟು ಕೊಳ್ಳಬೇಕು.
ಈ ನಾಡನ್ನು ಆಳಿದ ಅನೇಕ ಕನ್ನಡದ ದೊರೆಗಳು ನಮಗೆ ಅದ್ಭುತವಾದ ಮೇಲಂಕ್ತಿಯನ್ನು ಹಾಕಿಕೊಟ್ಟಿದ್ದಾರೆ .
ಕರು ನಾಡು ಎಂದರೆ “ಎತ್ತರದ ಪ್ರದೇಶ” ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
ಕರ್ನಾಟಕವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳನಾಡುವಿನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಚಿತ್ರಕಲೆ , ಶಿಲ್ಪ ಕಲೆ , ಸಂಗೀತ , ಸಾಹಿತ್ಯ ಮುಂತಾದವುಗಳಲ್ಲಿ ಕನ್ನಡದ ಹಿರಿಮೆಯು ಜಗದ್ವಿಖ್ಯಾತವಾಗಿವೆ . ಈ ನೆಲದ ಜಾನಪದ ಸಂಸ್ಕೃತಿ , ಜೈನಕವಿಗಳ ಸಾಹಿತ್ಯ , ಶಿವಶರಣರ ವಚನಗಳು , ದಾಸರ ಹಾಡು ಎಲ್ಲವೂ ನಮ್ಮ ಹಿರಿಮೆಯ ಸೂಚಕಗಳು .
ದಾಸರು ಸೃಷ್ಟಿಸಿದ ಕರ್ಣಾಟ ಸಂಗೀತ ಪರಂಪರೆಗೆ ವಿಶ್ವಮಾನ್ಯತೆ ದೊರೆತಿದೆ . ನಮ್ಮ ನಾಡು ಕಂಡ ಅಪೂರ್ವ ವ್ಯಕ್ತಿತ್ವದ ರಾಜರು , ದಿವಾನರು , ಸಂಗೀತಗಾರರು , ನಟರು ,
ಕಲಾವಿದರು , ಕೃಷಿಕರು , ಕ್ರೀಡಾಪಟುಗಳು ಮುಂತಾದ ವಿವಿಧ ಕ್ಷೇತ್ರದ ತಜ್ಞರು ನಮ್ಮ ನಾಡಿನ ಹೆಮ್ಮೆ ಈ ನಾಡಿನಲ್ಲಿರುವ ಹೊಯ್ಸಳರ ಕಾಲದ ದೇಗುಲಗಳು , ಹಂಪಿ , ಬಾದಾಮಿ , ಐಹೂಳ , ಸ್ಮಾರಕಗಳು , ಶ್ರವಣಬೆಳಗೊಳದ ಪಟ್ಟಿಯೇ ಇದೆ.
Kannada Nadina Hirime Prabandha
ಇನ್ನು ಪ್ರಕೃತಿ ಸಮೃದ್ಧಿ ಸಂಪನ್ನತೆ , ಸಹಾ ಜಲಪಾತ , ತುಂಗ , ಭದ್ರಾ , ಎಲ್ಲವೂ ನಮ್ಮ ನಾಡಿನ ಬಿಜಾಪುರದ ಗೋಳಗೊಮ್ಮಟ ಮುಂತಾದ ದೊಡ್ಡ ಪಟ್ಟಿಯೇ ಇದೆ.
ಇನ್ನು ಪ್ರಾಕೃತಿಕವಾಗಿ ಹೋಂದಿರುವ ಸಮೃದ್ದಿ ಈ ನಾಡು ಹೊಂದಿರುವ ಹಸಿರು ಎಲ್ಲವೂ ನಮ್ಮ ಹಿರಿಮೆ .
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಾಡಿನ ನುಡಿ ಶ್ರೀಮಂತಿಕೆ , ವೈಜ್ಞಾನಿಕ ಸಾಧನೆ , ಸಾಹಿತ್ಯ ಸೃಷ್ಟಿ ಈಗ ವಿಶ್ವದ ಗಮನ ಸೆಳೆದಿದೆ . ಈ ಮಣ್ಣಿನ ಗುಣವೇ ನಾಡನ್ನು ಪ್ರೀತಿಸುವಂತೆ ರೇಪಿಸುತ್ತದೆ .
ಕನ್ನಡ ನಾಡಿನ ಹಿರಿಮೆಯನ್ನು ಕನ್ನಡದ ಕವಿಗಳು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ . ಈ ನಾಡಿನ ಹಿರಿಮೆಯನ್ನು ಕುರಿತು ಯೋಚಿಸಿದಂತೆಲ್ಲಾ ಇದರ ಬಗೆಗಿನ ಅಭಿಮಾನ ಇಮ್ಮಡಿಸುತ್ತಾ ಹೋಗುತ್ತದೆ
ಇಲ್ಲಿನ ಜನಪದ ಕುಣಿತಗಳೆಂದರೆ ‘ಯಕ್ಷಗಾನ’ ಮತ್ತು ‘ಗುಳ್ಳು ಕುಣಿತ’, ಇವುಗಳನ್ನು ಇಲ್ಲಿ ನಡೆಯುವ ಕಾರ್ಯಕ್ರಮ ಅಥವಾ ಮದುವೆಯಲ್ಲಿ ಬಹಳ ವಿಜೃಂಭಣೆಯಿಂದ ಪ್ರದರ್ಶಿಸಲಾಗುತ್ತದೆ. ಈ ನೃತ್ಯವು ಇಲ್ಲಿ ಅತ್ಯಂತ ಜನಪ್ರಿಯ ನೃತ್ಯವಾಗಿದೆ.
ಕರ್ನಾಟಕ ಜಾನಪದವು ಕರ್ನಾಟಕ ಸಂಗೀತವಾಗಿದೆ, ಇದು ಭಾರತೀಯ ಸಂಗೀತ ಮತ್ತು ಪರಂಪರೆಯನ್ನು ಕನ್ನಡ ನಾಡಿನ ಹಿರಿಮೆಯನ್ನು ಬೆಂಬಲಿಸುತ್ತದೆ.
ಇಲ್ಲಿನ ಜನಪದ ಹಾಡು ಭಾರತದಾದ್ಯಂತ ಪ್ರಸಿದ್ಧವಾಗಿದೆ. ಕನ್ನಡ ನಾಡಿನ ಅನೇಕ ಸಂಗೀತಗಾರರು ಇದ್ದಾರೆ.
ಚಿತ್ರವೀಣೆ ಕರ್ನಾಟಕದ ಪ್ರಸಿದ್ಧ ಸಂಗೀತ ವಾದ್ಯ. ಇದನ್ನು ಪ್ರತಿಯೊಬ್ಬ ಭಾರತೀಯ ಸಂಗೀತಗಾರರು ಬಳಸುತ್ತಾರೆ.
ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ.
ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ.
ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು ಜ್ಞಾನಪಪೀಠ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.
ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ.
ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ.
ಬಂದರುಗಳು
ನವ ಮಂಗಳೂರು ಬಂದರು
ಹಳೆ ಮಂಗಳೂರು ಬಂದರು
ಬೆಲರ್ಕಿ ಬಂದರು
ಟಾಡಿ ಬಂದರು
ಹೊನ್ನಾವರ ಬಂದರು
ಭಟ್ಕಳ ಬಂದರು
ಕುಂದಾಪುರ (ಗಂಗೊಳ್ಳಿ) ಬಂದರು
ಹಂಗರಕಟ್ಟಾ ಬಂದರು
ಮಲ್ಪೆ ಬಂದರು
ಪಡುಬಿದ್ರಿ ಬಂದರು
ಒಳನಾಡಿನ ಜಲ ಸಾರಿಗೆ
ಪ್ರಸಿದ್ಧ ದೇವಾಲಯಗಳು
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಉಡುಪಿ ಶ್ರೀ ಕೃಷ್ಣ ದೇವಸ್ಥಾನ
ಧರ್ಮಸ್ಥಳ ಮಂಜುನಾಥ ದೇವಸ್ಥಾನ
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ
ಮುರುಡೇಶ್ವರ ದೇವಸ್ಥಾನ
ಕುಕ್ಕೆ ಸುಬ್ರಮಣ್ಯಂ ದೇವಸ್ಥಾನ
ಹೊರಂದು ಅನ್ನಪೂರ್ಣೇಶ್ವರಿ ದೇವಸ್ಥಾನ
ಗುರ್ಗಾಂವ್ ಮಹಾಗಣಪತಿ ದೇವಸ್ಥಾನ
ಇವು ಇಲ್ಲಿನ ಪ್ರಸಿದ್ದ ಸ್ಥಳಗಳಾಗಿವೆ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಿಂದ ದಸರಾ ವರೆಗಿನ ಎಲ್ಲಾ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಅನೇಕ ಧರ್ಮಗಳ ಜನರು ಈ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ, ಆದರೆ ಎಲ್ಲರೂ ಸಮಾನತೆಯಿಂದ ಬದುಕುತ್ತಾರೆ.
ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು ಜ್ಞಾನಪಪೀಠ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.
ಉಪ ಸಂಹಾರ
ಕನ್ನಡ ನಾಡು ನಮ್ಮ ಹಿರಿಮೆಯಾಗಿದೆ. ನಮ್ಮ ನಾಡನ್ನು ಉಳಿಸುವುದು ನಮ್ಮೆಲ್ಲರ ಕರ್ಥವ್ಯವಾಗಿದೆ. ನಮ್ಮ ಕನ್ನಡ ಭಾಷೆ, ಸಂಸೃತಿ,ನಮ್ಮ ಹಿರಿಮೆಯಾಗಿದೆ.
ನಮ್ಮ ನಾಡಿನ ಹಿರಿಮೆಯಿಂದ ನಾವೆಲ್ಲರು ಹೆಮ್ಮೆ ಪಡಬೇಕಾಗಿದೆ. ಹಾಗೂ ನಮ್ಮ ಕನ್ನಡ ನಾಡಿನ ಹಿರಿಮೆ ಉಳಿಸಿ ಬೆಳೆಸುವುದು ನಮ್ಮ ಕರ್ಥವ್ಯವಾಗಿದೆ.
ಕನ್ನಡ ನಾಡಿನ ಹಿರಿಮೆ ಪ್ರಬಂಧ | Kannada Nadina Hirime Prabandha
ಇತರ ಪ್ರಬಂಧಗಳು
ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಕನ್ನಡ ನಾಡಿನ ಹಿರಿಮೆ ಕನ್ನಡದಲ್ಲಿ ಪ್ರಬಂಧ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ
Very good