9th Standard Ninna Muttina Sattigeyanittu Salahu Kannada Poem Notes | ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್

9ನೇ ತರಗತಿ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 9th Standard Ninna Muttina Sattigeyanittu Salahu Notes Pdf Download in Kannada Medium Karnataka State Syllabus 2023, Ninna Muttina Sattigeyanittu Salahu 9th Kannada Notes Question Answer Summery Guide Mcq Pdf Kseeb Solutions For Class 9 Kannada Poem 7 Notes Ninna Muttina Sattigeyanittu Salahu 9th Kannada Notes 9th Class Kannada 7th Poem Notes

 

9th Standard Ninna Muttina Sattigeyanittu Salahu Poem Kannda Notes

Contents hide

ಪದ್ಯ ಭಾಗ – 7 

ಪದ್ಯದ ಹೆಸರು : ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು

ಕೃತಿಕಾರರ ಹೆಸರು : ರಾಘವಾಂಕ

ಕೃತಿಕಾರರ ಪರಿಚಯ

ರಾಘವಾಂಕ ನಡುಗನ್ನಡದ ಅಗ್ರಮಾನ್ಯ ಕವಿಗಳಲ್ಲಿ ಒಬ್ಬ ( ಕ್ರಿಸ್ತ ಶಕ ಸುಮಾರು 1225 ) , ಹಂಪಿ ಕ್ಷೇತ್ರದವನು ಪಂಪಾಪತಿ ವಿರೂಪಾಕ್ಷನ ಪರಮಭಕ್ತ , ರಗಳೆ ಕವಿಯೆಂದೆನಿಸಿದ ಹರಿಹರನ ಸೋದರಳಿಯ ಮತ್ತು ಶಿಷ್ಯ , ವಿರೂಪಾಕ್ಷನ ಪರಮಭಕ್ತ , ಹರಿಶ್ಚಂದ್ರಕಾವ್ಯ , ಸಿದ್ಧರಾಮಚಾರಿತ್ರ

ವೀರೇಶ್ವರಚರಿತೆ , ಸೋಮನಾಥಚರಿತೆ , ಶರಭಚಾರಿತ್ರ , ಹರಿಹರ ಮಹತ್ವ ಮುಂತಾದ ಕಾವ್ಯಗಳನ್ನು . ಪಟದಿ ಛಂದಸ್ತುಗಳಲ್ಲಿ ರಚಿಸಿದ್ದಾನೆ . ಉಭಯಕವಿ ಕಮಲ ರವಿ , ಕವಿ ತರಭ ಭೇರುಂಡ , ಪಟದಿ ಬಹ ಅಭಿದಾನಗಳನ್ನು ಹೊಂದಿದ್ದು ಷಟ್ಟದಿ ಕಾವ್ಯದ ನಿರ್ಮಾಪಕನೆಂಬ ಅಗ್ಗಳಿಕೆಗೆ ಪಾತ್ರವಾದ ಕವಿ ,

ರಾಘವಾಂಕ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ಗ್ರಂಥದ ‘ ವಿಶ್ವಾಮಿತಾಶ್ರಮ ಪ್ರವೇಶ ‘ ಭಾಗದಿಂದ ( ಪದ್ಯ 25 ರಿಂದ 34 ) ` ಆಯ್ತು ನಿಗದಿಪಡಿಸಲಾಗಿದೆ .

ಆಶಯ ಭಾವ

ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯಪರಿಪಾಲನೆಯ ಪರಾಕಾಷ್ಠೆಯನ್ನು ಕಾಣುತ್ತೇವೆ . “ ಹರನೆಂಬುದೇ ಸತ್ಯ , ಸತ್ಯವೆಂಬುದೇ ಹರನು “ ಎಂದು ಸಾಧಿಸಿ ತೋರಿದ ಮಹಾ ಸತ್ಯಸಂಧ ಹರಿಶ್ಚಂದ್ರನಿಗೆ ಅವನ ರಾಣಿ ಚಂದ್ರಮತಿಯೇ ನೈತಿಕ ಸ್ಪೂರ್ತಿಯಾಗಿದ್ದಳು .

ಬೇಟೆಗೆಂದು ಪರಿವಾರದೊಂದಿಗೆ ಅರಣ್ಯಕ್ಕೆ ತೆರಳಿದ ಹರಿಶ್ಚಂದನು . ಅರಿಯದೆ ವಿಶ್ವಾಮಿತ್ತನ ಆಶ್ರಮ ಪ್ರದೇಶವನ್ನು ತುಳಿಯುತ್ತಾನೆ . ಆಗ ಗುರುವಿನಾಜ್ಞೆ ಮೀರಿ ಬಂದುದರ ಅರಿವಾಗುತ್ತದೆ .

ಅದೇ ಸಮಯಕ್ಕೆ ವಿಶ್ವಾಮಿತ್ರನು ತನ್ನ ತಮೋಬಲದಿಂದ ಗಾನ ರಾಣಿಯರನ್ನು ಸೃಷ್ಟಿಸಿ , ಹರಿಶ್ಚಂದ್ರನನ್ನು ಪರೀಕ್ಷಿಸಲು ಕಳುಹಿಸುತ್ತಾನೆ . ಬೇಟೆಯಾಡಿ ಆಯಾಸಗೊಂಡಿದ್ದ ಹರಿಶ್ಚಂದ್ರನನ್ನು ಅವರು ತಮ್ಮ ಹಾಡು , ನೃತ್ಯಗಳಿಂದ ಸಂತೋಷ ಪಡಿಸುತ್ತಾರೆ .

ಅವರ ಹಾಡು ಮತ್ತು ನೃತ್ಯವನ್ನು ಮೆಚ್ಚಿದ ಹರಿಶ್ಚಂದ್ರನು ತನ್ನ ಕೊರಳಿನಲ್ಲಿದ್ದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ ಕೊಡಲು ಹೋಗುತ್ತಾನೆ .

ಆದರೆ ಆ ಕನೈಯರು ಅದನ್ನು ತಿರಸ್ಕರಿಸಿ ‘ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲದು ” ಎಂದು ಕೇಳುತ್ತಾರೆ ಆಗ ಪರಿಶ್ಚಂದ್ರ ಮತ್ತು ಕನೈಯರ ನಡುವೆ ನಡೆಯುವ ಸಂವಾದವು ಕವಿ ರಾಘವಾಂಕನ ಕೈಯಲ್ಲಿ ಮನೋಜ್ಞವಾಗಿ ಮೂಡಿದೆ ಜೀವನದಲ್ಲಿ ಸತ್ಯ ಹಾಗೂ ನಿಯಮ ಪರಿಪಾಲನೆ ಮೌಲ್ಯವನ್ನು ಅಳವಡಿಸಿಕೊಳ್ಳಬೇಕೆಂಬುದೇ ಈ ಪದ್ಯಪಾಠದ ಆಶಯವಾಗಿದೆ .

ಪದಗಳ ಅರ್ಥ

ಆಡಸಿ – ಮುತ್ತಿ , ಆವರಿಸಿ , ಬಯಸಿ

ಅನಿಮಿತ್ತ – ಕಾರಣವಿಲ್ಲದೆ ;

ಆದಟ – ಶೂರ

ಅಬುಧಿ – ಸಮುದ್ರ ;

ಅವನಿ – ಭೂಮಿ ;

ಆಸಣ್ – ಬಳಲಿಕೆ , ದಣಿವು :

ಎಕ್ಕಲ – ಹಂದಿ :

ಕಡವರ – ಚಿನ್ನ , ನಿಧಿ

ಪರಿಭವ – ತಿರಸ್ಕಾರ , ಸೋಲು ಮಝ – ಕೊಂಡಾಟದ ಒಂದು ಮಾತು ;

ರುಜೆ – ರೋಗ , ಖಾಯಿಲೆ :

ಸಾಲಭಂಜಿಕೆಗಳ – ಗೊಂಬೆಗಳು , ಮತ್ಥಳಿಗಳು , ವಿಗ್ರಹಗಳು .

ಅಜ್ಯ – ತುಪ್ಪ , ಧೃತ ;

ಉದ್ಯೋಗಿಸಿದರು – ಪ್ರಯತ್ನಿಸಿದರು ;

ಒಸೆದು – ಮೆಚ್ಚಿ ,

ಧುರ – ಕಾಳಗ

ಪಸಾಯ -ಉಡುಗೊರೆ , ಬಹುಮಾನ :

ಮೂಜಗ – ಮೂರು ಲೋಕ :

ಸತ್ತಿಗೆ – ಛತ್ರಿ

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ಸಾರಾಂಶ

ಒಮ್ಮೆ ದೇವ ಸಭೆ ನಡೆದಿದ್ದಾಗ ಇಂದ್ರನು ” ಭೂಲೋಕದಲ್ಲಿ ಸತ್ಯವಂತ ಅರಸ ಯಾರು ? ” ಎಂದು ವಸಿಷ್ಠರಲ್ಲಿ ವಿಚಾರಿಸಿದನು . ಆಗ ಅವನು “ ಅಯೋಧ್ಯೆಯನ್ನಾಳುತ್ತಿರುವ ಹರಿಶ್ಚಂದ್ರನ ಹೆಸರನ್ನು ಹೇಳಿ ಆತನ ಸತ್ಯನಿಷ್ಠೆಯನ್ನು ವಿವರಿಸಿದನು . ವಸಿಷ್ಠ ಹೇಳಿದ್ದನ್ನೆಲ್ಲ ವಿರೋಧಿಸುವ ಸ್ವಭಾವದವನಾದ ವಿಶ್ವಾಮಿತ್ರ ಅದನ್ನು ಅಲ್ಲಗಳೆದನು .

ಸಾಲದ್ದಕ್ಕೆ ಹರಿಶ್ಚಂದನ ಬಾಯಿಂದ ಸುಳ್ಳನ್ನು ಹೇಳಿಸಿಯೇ ಸಿದ್ಧ ಎಂದು ಪಂಥವೊಡ್ಡಿದನು . ಹರಿಶ್ಚಂದ್ರನು ಲೋಕ ಕಲ್ಯಾಣಾರ್ಥವಾಗಿ ತನ್ನ ಅರಮನೆಯಲ್ಲಿ ನಡೆಸುತ್ತಿದ್ದ ಬಹು ಸುವರ್ಣಯಾಗಶಾಲೆಗೆ ವೇಷಮರೆಸಿಕೊಂಡು ಬಂದು ಬಹುದೊಡ್ಡ ದಾನವನ್ನು ಕೇಳಿ ಕೊಡಲಾಗದ ಸ್ಥಿತಿಗೆ ಆತನನ್ನು ತಂದೊಡ್ಡಿ ಸತ್ಯವ್ರತಕ್ಕೆ ಭಂಗ ತರಬೇಕೆಂದು ವಿಶ್ವಾಮಿತ್ರನು ಯೋಚಿಸಿದನು .

ninna muttina sattigeyanittu poem summary in kannada

ಆದರೆ ಹರಿಶ್ಚಂದ್ರ ಆತ ಕೇಳಿದಷ್ಟೆಲ್ಲವನ್ನೂ ಭಯಭಕ್ತಿಯಿಂದ ನೀಡಿ ಸೈ ಎನಿಸಿಕೊಂಡನು . ಹೀಗೆ ಮೊದಲ ಪ್ರಯತ್ನದಲ್ಲೇ ಎಡವಿದ ವಿಶ್ವಾಮಿತ್ರ ಹೇಗಾದರೂ ಮಾಡಿ ಆತನನ್ನು ಮಣಿಸಲೇ ಬೇಕೆಂದುಕೊಂಡು ಇನ್ನೊಂದು ತಂತ್ರವನ್ನು ಹೂಡಿದನು . ಬೇಟೆಯ ನೆವದಲ್ಲಿ ಹರಿಶ್ಚಂದ್ರನನ್ನು ಕಾಡಿನಲ್ಲಿ ಅಲೆದಾಡಿಸಿ ಕಾಡಬೇಕೆಂದು ಯೋಚಿಸಿದನು .

ವಿವಿಧ ಮೃಗಪಕ್ಷಿಗಳನ್ನು ಸೃಷ್ಟಿಸಿ ನಾಡಿನ ಬೆಳೆಗಳನ್ನು ಕೆಡಿಸುವಂತೆ ಮಾಡಿದರೆ ರೈತಾಪಿ ಜನರು ರಾಜನಿಗೆ ಮೊರೆಯಿಡುತ್ತಾರೆ . ಆಗ ಹರಿಶ್ಚಂದ್ರ ಬೇಟೆಗೆಂದು ಕಾಡಿಗೆ ಬಂದೇ ಬರುತ್ತಾನೆ . ಎಂದು ನಿಶ್ಚಯಿಸಿದ ವಿಶ್ವಾಮಿತ್ರ ಕೂಡಲೇ ಕಾರ್ಯಪ್ರವೃತ್ತನಾದನು .

ಆತನು ತಪಃಪ್ರಭಾವದಿಂದ ಕಣ್ಮುಚ್ಚಿ ತೆರೆಯುವುದರೊಳಗೆ ನಾನಾವಿಧವಾದ ಪ್ರಾಣಿಪಕ್ಷಿಗಳು ಹುಟ್ಟಿಕೊಂಡು ನಾಡಿನ ಕೃಷಿಭೂಮಿಗೆ ಲಗ್ಗೆಯಿಟ್ಟವು . ಇದರಿಂದಾಗಿ ಎಲ್ಲೆಲ್ಲೂ ಹಾಹಾಕಾರವೆದ್ದಿತು . ರೈತರೆಲ್ಲರು ಅರಮನೆಗೆ ಬಂದು ತಮ್ಮ ದೊರೆಯ ಮುಂದೆ ಗೋಳಿಟ್ಟರು .

ನಾಡಿನ ಅನ್ನದಾತರ ಮೊರೆಯನ್ನು ತಾಳ್ಮೆಯಿಂದ ಆಲಿಸಿದ ಹರಿಶ್ಚಂದ್ರನು ತನ್ನ ಹೆಂಡತಿ , ಮಗ ಹಾಗೂ ಪರಿವಾರದೊಂದಿಗೆ ಬೇಟೆಗೆ ಹೊರಡಲು ನಿರ್ಧರಿಸಿದನು . ಕಾಡುದಾರಿಯಲ್ಲಿ ಸಿಗುವ ವಸಿಷ್ಠಾಶ್ರಮಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದನು , ಅವರಿಂದ “ ಅಯ್ಯಾ ನಿನ್ನ ಕುಲಾಚಾರಕ್ಕೆ ಧಕ್ಕೆಯಾಗದಂತೆ ನಡೆದುಕೊ .

ಸತ್ಯನಿಷ್ಠೆಯನ್ನು ಉಳಿಸಿಕೊ , ಮುಂದೆ ದಾರಿಯಲ್ಲಿ ಸಿಗುವ ವಿಶ್ವಾಮಿತ್ರನ ಆಶ್ರಮ ಪ್ರದೇಶಕ್ಕೆ ತಪ್ಪಿಯೂ ಕಾಲಿರಿಸಬೇಡ ” ಎಂಬ ಎಚ್ಚರಿಕೆಯ ಸೂಚನೆಯನ್ನು ಪಡೆದು ಪರಿವಾರದೊಂದಿಗೆ ಬೇಟೆಗೆ ಹೊರಟನು , ಬೇಟೆಯನ್ನು ಆಡುತ್ತಾ ಅವನು ಅವನಿಗೆ ಅರಿವಿಲ್ಲದಂತೆ ವಿಶ್ವಾಮಿತ್ರನ ತಪೋವನವನ್ನು ಪ್ರವೇಶಿಸಿದನು .

ಆಗ ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಪರೀಕ್ಷಿಸಲು ತನ್ನ ಕೋಪದಿಂದ ಗಾನ ರಾಣಿಯರನ್ನು ಸೃಷ್ಟಿಸಿ , “ ಸರ್ವಬುದ್ಧಿಗಳನ್ನು ಬಳಸಿ ಅವನನ್ನು ಮರುಳು ಮಾಡುತ್ತಿರಿ ” ಎಂದು ಹೇಳಿ , ಹರಿಶ್ಚಂದ್ರನ ಬಳಿಗೆ ಕಳುಹಿಸಿದನು . ಮುಂದೇನಾಯಿತೆಂಬುದನ್ನು ಇಲ್ಲಿ ಆಯ್ಕೆ ಮಾಡಿದ ಪದ್ಯಗಳು ತಿಳಿಸುತ್ತವೆ .

1. ಸಂದ ಕಾರಿರುಳು ಕನ್ನೆಯರು ಹಗಲಂ ನೋಡ ತಿಂದು ಬಂದರೆ ಸುರಾಸುರರಬುಧಿಯಂ ಮಥಿಸು ವಂದು ಹೊಸ ವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದನೊಂದು ಮಾನಿಸರಾದರೋ ಕಮಲಜಂ ನೀಲ ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ

ಸಾರಾಂಶ ::ಕಾಳರಾತ್ರಿ ಕನೈಯರು ಹಗಲನ್ನು ನೋಡಲೆಂದು ಬಂದರೋ ! ಸುರಾಸುರರು ಸಮುದ್ರವನ್ನು ಮಂಥನ ಮಾಡುವ ಸಮಯದಲ್ಲಿ ಹೊರಬಂದ ಹೊಸ ವಿಷದ ಹೊಗೆ ಸುರಿದು ,

ಕಪ್ಪಾಗಿ ಕಂದಿ ಜಲದೇವಿಯರು ಮನದಲ್ಲಿ ನೊಂದು , ಮನುಷ್ಯರಾದರೋ ಬ್ರಹ್ಮನು ನೀಲಿ ಬಣ್ಣದಿಂದ ಮಾಡಿದ ಗೊಂಬೆಗಳು ಜೀವವನ್ನು ಪಡೆದವೋ ಎನ್ನುವಂತೆ ಗಾನರಾಣಿಯರು ಮಹಾರಾಜ ಹರಿಶ್ಚಂದ್ರನೆಡೆಗೆ ಬಂದರು .

2. ಮಾಯದಬಲೆಯರು ಕಾಣುತ್ತ ಮಝ ಭಾಷದಟ ರಾಯ ಮಝರೇ ರಾಯ ರಾಯದಳವುಳಕಾಣಿ ರಾಯಕಂಟಕ ರಾಯಜಗಜಟ್ಟಿ ರಾಯದಲ್ಲಣ ರಾಯಕೋಳಾಹಳ ರಾಯಭುಜಬಲಭೀಮ ರಾಯಮರ್ಧನ ರಾಯ ಜೀಯ

ಸ್ಥಿರಂಜೀವಯೆಂದು ಕೀರ್ತಿಸಿ ಗಾಣ ನಾಯಕಿಯರೊಲಿದು ದಂಡಿಗೆವಿಡಿದು ಪೊಡಮಟ್ಟು ಹಾಡಲುದ್ಯೋಗಿಸಿದರು

ಸಾರಾಂಶ ಮಾಯಾದಬಲೆಯರು ಮಹಾರಾಜ ಹರಿಶ್ಚಂದ್ರನನ್ನು ಕಂಡು “ ಮಝ , ಭಾಘು . ಅದಟರಾಯ , ಮಝೇರೇ , ರಾಯ , ರಾಯದಳವುಳಕಾರ , ರಾಯಕಂಟಕ ,

ರಾಯಜಗಜಟ್ಟಿ , ರಾಯದಣ , ರಾಯಕೋಳಾಹಳ , ರಾಯ ಭುಜಬಲಭೀಮ ರಾಯ ವರ್ಧನ , ರಾಯಜೀಯ , ಚಿರಂಜೀವಿಯಾಗು ” ಎಂದು ಕೀರ್ತಿಸಿದರು . ನಂತರ ಗಾನರಾಣಿಯರು ಪ್ರೀತಿಯಿಂದ ನಮಸ್ಕರಿಸಿ ದಂಡಿಗೆ ಹಿಡಿದು ಹಾಡಲು ಪ್ರಾರಂಭಿಸಿದರು .

3. ಎಕ್ಕಲವ ಬಳಿಬಿಡಿದು ಸುತ್ತಿದಾಸನು ಮುನಿ ರಕ್ಕಸನ ಬನಕೆ ಬಂದಂಜಿಕೆಯನೆರಡನೆಯ ಮುಕ್ಕಣ್ಣನೆನಿಪ ಗುರುವಾಜ್ಞೆಗೆಟ್ಟಳಲನಲ್ಲದೆ ಕನಸ ಕಂಡ ಭಯವ ಮಿಕ್ಕು ಮವಂತಡಸಿ ಕವಿವ ಗತಿಗಳ ಸೊಗಸ ನಕ್ಕಿಸದೆ

ಸಮಯೋಚಿತದ ಪಸಾಯಕ್ಕೆ ಮನ ವುಕ್ಕಿ ಸರ್ವಾಭರಣಮಂ ಗಾಣರಾಣಿಯರಿಗಿತ್ತನು ಹರಿಶ್ಚಂದ್ರನು

ಸಾರಾಂಶ ಕಾಡುಹಂದಿಯನ್ನು ಹಿಂಬಾಲಿಸಿ ಬಂದ ಬಳಲಿಕೆಯನ್ನು , ವಿಶ್ವಾಮಿತನ ಬನಕ್ಕೆ ಬಂದ ಅಂಜಿಕೆಯನ್ನು ಎರಡೆಯ ಶಿವನೆನಿಸಿದ ಗುರು ವಾಲ್ಮೀಕಿಯ ಆಜ್ಞೆಯನ್ನು

ಮೀರಿದ ದುಃಖವನ್ನು ಹಾಗೂ ಕಾಡಿನಲ್ಲಿ ಕನಸು ಕಂಡ ಭಯವನ್ನು ಅತಿಶಯವಾಗಿ ಮರೆಯುವಂತೆ ಗಾನರಾಣಿಯರು ಹಾಡು ನೃತ್ಯಗಳಿಂದ ಸಂತೋಷಗೊಳಿಸಿದರು . ಇವರಿಗೆ ಹರಿಶ್ಚಂದ್ರನು ಬಹುಮಾನವಾಗಿ ಸರ್ವಾಬರಣವನ್ನು ಕೊಟ್ಟನು .

4. ಬಡತನದ ಹೊತ್ತಾನೆ ದೊರಕಿ ಫಲವೇನು ನೀ ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ ಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು ಸಾವ ಹೊತ್ತು ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು ಹೊಡೆದು

ಬೆಂಡಾಗಿ ಬೀಳ್ವೆಮಗೆ ನೀನೊಲಿದು ಮಣಿ ದೊಡಿಗೆಗಳನಿತ್ತು ಫಲವೇನು ಭೂಪಾಲ ಹೇಳೆನುತ ಮತ್ತಿಂತೆಂದರು

ಸಾರಾಂಶ . ಗಾನರಾಣಿಯರು ಬಹುಮಾನವನ್ನು ತಿರಸ್ಕರಿಸಿ “ ಬಡತನವಿದ್ದಾಗ ಆನೆ ದೊರಕಿ ಫಲವೇನು ? ಬಾಯಾರಿಕೆಯ ಸಮಯದಲ್ಲಿ ತುಪ್ಪ ದೊರಕಿ ಫಲವೇನು ? ರೋಗಿಗೆ ರಂಭೆ ದೊರಕಿ ಫಲವೇನು ?

ಸಾವಿನ ಸಮಯದಲ್ಲಿ ಭೂಮಿಯ ಒಡೆತನ ದೊರಕಿ ಫಲವೇನು ? ಕಡುಬಿಸಿಲಿನಲ್ಲಿ ಬಳಲಿ ಬೆಂಡಾದ ಸಮಯದಲ್ಲಿ ನೀನು ನಮಗೆ ಒಡವೆಗಳನ್ನು ಕೊಟ್ಟು ಫಲವೇನು ? ಭೂಪಾಲ ಎಂದರು .

5. ಕಡಲೊಳಾಳ್ವಂಗೆ ತೆಪ್ಪವನು ದಾರಿದ್ರಂಗೆ ಕಡವರವನತಿರೋಗಿಗಮೃತಮಂ ಕೊಟ್ಟಡವ ರಡಿಗಡಿಗದಾವ ಹರುಷವನೆಯು ತಿಪ್ಪರವರಂ ಪೋಲ್ವರೀ ಹೊತ್ತಿನ ಸುಡುಸುಡುನೆ ಸುಡುವ ಬಿರುಬಿಸಿಲ ಸೆಕೆಯುಸುರ ಬಿಸಿ ಹೊಡೆದುದುರಿಹತ್ತಿ ಬಾಯ್ ಬತ್ತಿಡಗೆ ಸುತ್ತಿ ಸಾ ವಡಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು

ಸಾರಾಂಶ “ ಕಡಲಿನಲ್ಲಿ ಮುಳುಗುವವನಿಗೆ ತೆಪ್ಪವನ್ನು , ದಾರಿದ್ರವಿರುವವನಿಗೆ ನಿಧಿಯನ್ನು , ಅತಿರೋಗಿಗೆ ಅಮೃತವನ್ನು ಕೊಟ್ಟರೆ , ಅವರು ಸಂತೋಷ ಪಡುತ್ತಾರೆ . ಈ ಸುಡುಸುಡುವ ಬಿರುಬಿಸಿಲಿನಲ್ಲಿ ಇರುವ ನಮಗೆ ನಿಮ್ಮ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲಹು ” ಎಂದು ಹರಿಶಂದ್ರನನ್ನು ಕೇಳುತ್ತಾರೆ .

6. ರವಿಕುಲದ ಪೀಳಿಗೆಯೊಳೊಗದ ರಾಯರ್ಗೆ ಪ ಟ್ಟವ ಕಟ್ಟುವಂದಿದಿಲ್ಲದಡರಸುತನ ಸಲ್ಲ ದವನಿಯೊಳು ಯುದ್ಧರಂಗದೊಳಿದಂ ಕಂಡ ಹಗೆಗಳು ನಿಲ್ಲರಿದು ಕೆಳಗೆ ಕವಿವ ನೆಳಲೊಳಗಾವನಿರ್ದನಾತಂಗೆ ತಾಂ ತಎಲೆಡರು ಬಡತನಂ ರೋಗವಪಕೀರ್ತಿ ಪರಿ ಭವ ಭಯಂ ಹರೆವುದಿದನದದು ಸತ್ತಿಗೆಯ ಕೊಡಬಹುದೆ ಹೇಳೆಂದನು

ಸಾರಾಂಶ “ ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಸತ್ತಿಗೆಯು ಇಲ್ಲದಿದ್ದರೆ ದೊರೆತನವು ಶೋಭಿಸುವುದಿಲ್ಲ .

ಭೂಮಿಯಲ್ಲಿ , ಯುದ್ಧರಂಗದಲ್ಲಿ ಸತ್ತಿಗೆಯನ್ನು ಕಂಡ ಶತ್ರುಗಳು ನಿಲ್ಲುವುದಿಲ್ಲ . ಸತ್ತಿಗೆಯ ಕೆಳಗಿನ ನೆರಳಲ್ಲಿ ಇದ್ದವರಿಗೆ ವಿಪತ್ತುಗಳು , ಎಡರುತೊಡರುಗಳು ಇರುವುದಿಲ್ಲ . ಬಡತನ , ರೋಗ , ಅಪಕೀರ್ತಿ , ಸೋಲಿನ ಭಯವು ಇರುವುದಿಲ್ಲ

” . ಆದ್ದರಿಂದ ಮುತ್ತಿನ ಸತ್ತಿಗೆಯನ್ನು ಕೊಡಲು ಸಾಧ್ಯವಿಲ್ಲ . ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು .

7. ಜನನಿಯಂ ಜನಕನಂ ನಳಂ ದೈವವಂ ಮನವಾರೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು ಜನರೊಳಗೆ ಜನಿಸರೆಂದೆನಲು ನೀನೀಗ ಪೇ ಧ್ವನಿತಳು ಬೇಡಿದಡೆ ಕೊಡಬೇಡ ಕೊಡೆಯನೀ ಯೆನೆ ಲೋಭವೇಕರಸ ಎನಲಿದಲ್ಲದೆ ಬೇಡ ಮಾತೆಪಿತರಿಲ್ಲಂದನು

ಸಾರಾಂಶ ಹರಿಶ್ಚಂದ್ರನು ಗಾನ ರಾಣಿಯರನ್ನು ಕುರಿತು ಪ್ರೀತಿಯಿಂದ ಎಲ್ಲವನ್ನೂ ಕೊಡಬಹುದು .ತಾಯಿಯನ್ನು , ತಂದೆಯನ್ನು ಸತಿಯನ್ನು ದೇವರನ್ನು ಮನಸಾರೆ ನಂಬಿ ವಿಶ್ವಾಸವಿಟ್ಟ ಪರಿವಾರವನ್ನು ಕೊಡುವ ಅತಿಶೂರರು ಜನರಲ್ಲಿ ಜನಿಸರು ”

      ಎಂದನು ಆಗ ಗಾನ ರಾಣಿಯರು ಹರಿಶ್ಚಂದ್ರನನ್ನು ಕುರಿತು “ ಮಹಾರಾಜ ನೀನು ಈಗ ಹೇಳಿದ ಅನಿತರಲ್ಲಿ ಬೇಡಿದೊಡೆ ಕೊಡಬೇಡ , ಸತ್ತಿಗೆಯನ್ನು ಕೊಡು ಎಂದರೆ ಲೋಭವೇಕೆ ? ” ಎಂದರು .

ಆಗ ಹರಿಶ್ಚಂದ್ರನು ಇದಲ್ಲದೇ ಬೇರೆ ತಂದೆತಾಯಿಯರು ಇಲ್ಲ ‘ ಎಂದನು .

8. ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ ವಾಗಿ ಬಂದುದಂದ ತಂದೆ ಪಟ್ಟವ ಕಟ್ಟು ವಾಗಲರ್ಚಿಸಿಕೊಂಬುದಾಗಿ ದೈವಂ ನೆಳಲ ತಂಪನೊಸೆದೀವುದಾಗಿ ಸಾಗಿಸುವ ತಾಯ್ ಧುರದೊಳರಿಗಳಂ ನಡುಗಿಸುವು ದಾಗಿ ಚತುರಂಗಬಲವೆನಿಸಿತೀ ಛತ್ರವೆಂ ಬಾಗಳಿದನದಂದು ಬೇಡುವರನತಿಮರುಳರೆನ್ನರೇ ಮೂಜಗದೊಳು

ಸಾರಾಂಶ “ ಈ ಸತ್ತಿಗೆಯನ್ನು ಸಾಮಾನ್ಯ ಜನರಿಗೆ ಕೊಡಬಾರದು . ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿಕೊಳ್ಳುವುದಿರಿಂದ ಇದು ದೇವರು .

ಎಲ್ಲರಿಗೂ ನೆರಳನ್ನು ನೀಡುವ ತಾಯಿ . ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವ ಇದು ಚದುರಂಗಬಲಕ್ಕೆ ಸಮಾನ ಎನಿಸಿಕೊಂಡಿದೆ . ಇದನ್ನು ತಿಳಿದುತಿಳಿದು ಬೇಡುವವರನ್ನು ಮೂರುಲೋಕದಲ್ಲಿಯೂ ಅತಿದಡ್ಡರು ಎನ್ನುವುದಿಲ್ಲವೆ ? ಎಂದು ಹೇಳುತ್ತಾನೆ .

ಅಭ್ಯಾಸ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾನೆ ?

ಉತ್ತರ : ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಕಾಳರಾತ್ರಿಯ ಕನ್ನೆಯರು ಹಗಲನ್ನು ನೋಡುವುದಕ್ಕೆಂದು ಬಂದಂತೆ ಎಂದು ಹೋಲಿಸಿದ್ದಾರೆ .

2. ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು ?

ಉತ್ತರ : ಗಾನ ರಾಣಿಯರಿಗೆ ಹರಿಶ್ಚಂದ್ರನು ಮುತ್ತಿನಹಾರ ( ಸರ್ವಾಭರಣ ) ವನ್ನು ಬಹುಮಾನವಾಗಿ ಕೊಟ್ಟನು .

3. ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು ?

ಉತ್ತರ : ಗಾನರಾಣಿಯರು ಹರಿಶಂದ್ರನನ್ನು ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಹೇಳಿದರು .

4. ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ ?

ಉತ್ತರ : ರಾಜರಿಗೆ ಪಟ್ಟ ಕಟ್ಟುವಾಗ ಸತ್ತಿಗೆಯು ದೈವ ಸ್ವರೂಪವಾಗುತ್ತದೆ ಎಂದು ಹರಿಶಂದ್ರನು ಹೇಳುತ್ತಾನೆ .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನೈಯರ ರೂಪಲಾವಣ್ಯ ಹೇಗಿತ್ತು ? ವಿವರಿಸಿ .

ಉತ್ತರ : ಕಾಳರಾತ್ರಿಯ ಕನೈಯರು ಹಗಲನ್ನು ನೋಡುವುದಕ್ಕೆಂದು ಬಂದರೋ ಸುರಾಸುರರು ಸಮುದ್ರ ಮಥಿಸುವಾಗ ಹೊರಹೊಮ್ಮಿದ ಹೊಸ ವಿಷದ ಹೊಗೆ ಆವರಿಸಿ ಜಲದೇವಿಯರೆಲ್ಲ ಕಂದು ಬಣ್ಣಕ್ಕೆ ತಿರುಗಿ

ಮನನೊಂದು ಮಾಣಿಸರ್ ಆದಂತೆ ಕಮಲಜ ನೀಲವರ್ಣಕ್ಕೆ ತಿರುಗಿ ಮತ್ಥಳಿಯಾದನೋ ಎಂಬಂತೆ ಜೀವಂತ ಪುತ್ಥಳೀಯರಂತೆ ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನ್ನೆಯರು ಇದ್ದರು ಎಂದು ಅವರ ರೂಪಲಾವಣ್ಯ ಹೀಗಿತ್ತು ಎಂದು ವರ್ಣಿಸಿದ್ದಾರೆ .

2. ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು ? ವಿವರಿಸಿ .

ಉತ್ತರ : ವಿಶ್ವಾಮಿತ್ರನು ನಿರ್ಮಿಸಿದ ಗಾನರಾಣಿಯರು ಧೀರ , ವೀರ ರಾಯರರಾಯ ರಾಯಜಗಜಟ್ಟಿ , ಭಾಪು , ಅದಟರಾಯ , ಮಝೇರೇ ರಾಯ , ರಾಯಭುಜಬಲಭೀಮ ,

ರಾಯಕೋಲಾಹಲ , ರಾಯಮರ್ಧನ , ರಾಯ ಕಂಟಕ ಚಿರಂಜೀವಿಯಾಗು ಎಂದು ಹರಿಶಂದರಾಜನ ಕೀರ್ತಿಯನ್ನು ಕೊಂಡಾಡುತ್ತಾ ದಂಡಿಗೆ ಹಿಡಿದು ಹಾಡಲು ಪ್ರಾರಂಭಿಸಿದರು .

3. ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು ?:

ಉತ್ತರ ; ಹರಿಶ್ಚಂದ್ರನು ಗಾನರಾಣಿಯರಿಗೆ ಮುತ್ತಿನ ಮಣಿಹಾರವನ್ನು ಉಡುಗೊರೆಯಾಗಿ ನೀಡಲು ಹೋದನು . ಅದನ್ನು ಒಪ್ಪದ ಅಂಗನೆಯರು ಅವನ ಬಳಿಯಿರುವ ಮುತ್ತಿನ ಸತ್ತಿಗೆಯನ್ನು ನೀಡಬೇಕೆಂದು ಕೇಳಿದರು .

ಆಗ ಹರಿಶಂದ್ರನು “ ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಸತ್ತಿಗೆಯು ಇಲ್ಲದಿದ್ದರೆ ದೊರೆತನವು ಶೋಭಿಸುವುದಿಲ್ಲ .

ಭೂಮಿಯಲ್ಲಿ , ಯುದ್ಧರಂಗದಲ್ಲಿ ಸತ್ತಿಗೆಯನ್ನು ಕಂಡ ಶತ್ರುಗಳು ನಿಲ್ಲುವುದಿಲ್ಲ ಸತ್ತಿಗೆಯ ಕೆಳಗಿನ ನೆರಳಲ್ಲಿ ಇದ್ದವರಿಗೆ ವಿಪತ್ತುಗಳು , ಎಡರುತೊಡರುಗಳು ಇರುವುದಿಲ್ಲ . ಬಡತನ , ರೋಗ ಅಪಕೀರ್ತಿ , ಸೋಲಿನ ಭಯವು ಇರುವುದಿಲ್ಲ ” , ಆದ್ದರಿಂದ ಈ ಮುತ್ತಿನ ಸತ್ತಿಗೆಯನ್ನು ಕೊಡಲು ಸಾಧ್ಯವಿಲ್ಲ ಎಂದು ಹರಿಶಂದ್ರನು ಹೇಳಿದನು .

4. ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ ?

ಉತ್ತರ; ಗಾನರಾಣಿಯರು ಸುಡುವ ಬಿಸಿಲನ್ನು ಸಹಿಸಲು ಸಾಧ್ಯವಿಲ್ಲ ನಿನ್ನ ಮುತ್ತಿನಸತ್ತಿಗೆಯನ್ನು ಕೊಡು ಎಂದು ಹರಿಶ್ಚಂದ್ರ ರಾಜನ್ನು ಕೇಳುತ್ತಾರೆ . ಆಗ ಹರಿಶ್ಚಂದ್ರನು ಗಾನರಾಣಿಯರಿಗೆ “ ಈ ಸತ್ತಿಗೆಯನ್ನು ಸಾಮಾನ್ಯ ಜನರಿಗೆ ಕೊಡಬಾರದು .

ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿಕೊಳ್ಳುವುದಿರಿಂದ ಇದು ದೇವರು . ಎಲ್ಲರಿಗೂ ನೆರಳನ್ನು ನೀಡುವ ತಾಯಿ . ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವ ಇದು ಚದುರಂಗಬಲಕ್ಕೆ ಸಮಾನ ” ಎಂದು ಹರಿಶಂದ್ರನು ಮುತ್ತಿನ ಸತ್ತಿಗೆಯ ವಿಶೇಷತೆಯನ್ನು ಕುರಿತು ಹೇಳಿದನು .

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಸುಮಾರು ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ

 1. ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೇಳಿದ ಮಾತುಗಳನ್ನು ತಿಳಿಸಿ ,

ಉತ್ತರ : ವಿಶ್ವಾಮಿತನು ತನ್ನ ತಪೋಬಲದಿಂದ ಗಾನರಾಣಿಯರನ್ನು ಸೃಷ್ಟಿಸಿ , ಹರಿಶಂದ್ರನನ್ನು ಪರೀಕ್ಷಿಸಲು ಕಳುಹಿಸುತ್ತಾನೆ , ಬೇಟೆಯಾಡಿ ಆಯಾಸಗೊಂಡಿದ್ದ ಹರಿಶಂದ್ರನನ್ನು ಅವರು ತಮ್ಮ ಹಾಡು , ನೃತ್ಯಗಳಿಂದ ಸಂತೋಷ ಪಡಿಸುತ್ತಾರೆ .

ಅವರ ಹಾಡು ಮತ್ತು ನೃತ್ಯವನ್ನು ಮೆಚ್ಚಿದ ಹರಿಶಂದ್ರನು ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ ಕೊಡಲು ಹೋಗುತ್ತಾನೆ . ಆದರೆ ಆ ಗಾನರಾಣಿಯರು . ಬಹುಮಾನವನ್ನು ತಿರಸ್ಕರಿಸಿ “ ಬಡತನವಿದ್ದಾಗ ಆನೆ ದೊರಕಿ ಫಲವೇನು ?

ಬಾಯಾರಿಕೆಯ ಸಮಯದಲ್ಲಿ ತುಪ್ಪ ದೊರಕಿ ಫಲವೇನು ? ರೋಗಿಗೆ ರಂಭೆ ದೊರಕಿ ಫಲವೇನು ? ಸಾವಿನ ಸಮಯದಲ್ಲಿ ಭೂಮಿಯ ಒಡೆತನ ದೊರಕಿ
ಫಲವೇನು ?

ಕಡುಬಿಸಿಲಿನಲ್ಲಿ ಬಳಲಿ ಬೆಂಡಾದ ಸಮಯದಲ್ಲಿ ನೀನು ನಮಗೆ ಒಡವೆಗಳನ್ನು ಕೊಟ್ಟು ಫಲವೇನು ? ಭೂಪಾಲ ಎಂದರು . ಅದರ ಬದಲು “ ಕಡಲಿನಲ್ಲಿ ಮುಳುಗುವವನಿಗೆ ತೆಪ್ಪವನ್ನು , ದಾರಿದ್ರವಿರುವವನಿಗೆ ನಿಧಿಯನ್ನು , ಅತಿರೋಗಿಗೆ ಅಮೃತವನ್ನು ಕೊಟ್ಟರೆ ,

ಅವರು ಸಂತೋಷ ಪಡುತ್ತಾರೆ . ಈ ಸುಡುಸುಡುವ ಬಿರುಬಿಸಿಲಿನಲ್ಲಿ ಇರುವ ನಮಗೆ ನಿಮ್ಮ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲಹು ” ಎಂದು ಹರಿಶಂದ್ರನನ್ನು ಕೇಳುತ್ತಾರೆ .

2. ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂವಾದವನ್ನು ಸಂಗ್ರಹಿಸಿ ಬರೆಯಿರಿ .

ಉತ್ತರ : ಹರಿಶ್ಚಂದ್ರನ ಮನಸ್ಸಿನಲ್ಲಿ ಸಂತೋಷ , ಸಂತಸವನ್ನು ಮೂಡಿಸಿದ ಗಾನರಾಣಿಯರಿಗೆ ಸರ್ವಾಭರಣವನ್ನು ಬಹುಮಾನವಾಗಿ ಕೊಡುತ್ತಾನೆ .

ಆಗ ಗಾನರಾಣಿಯರು “ ಬಡತನ ಬಂದ ಸಮಯದಲ್ಲಿ ಆನೆ ದೊರಕಿದರೆ ಏನು ಉಪಯೋಗ , ಬಾಯಾರಿಕೆಯ ಸಮಯದಲ್ಲಿ ನೀರು ಬೇಕು ತುಪ್ಪ ಸಿಕ್ಕರೆ ಪ್ರಯೋಜನವೇನು ? ಸಾಯುವ ಸಮಯದಲ್ಲಿ ರಾಜ ಪದವಿ ಸಿಕ್ಕರೆ ಉಪಯೋಗವಿಲ್ಲ .

ಅದಕ್ಕಾಗಿ ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪ ಕೊಡಬೇಕು . ಬಡವನಿಗೆ ಚಿನ್ನವನ್ನು ಕೊಟ್ಟರೆ , ರೋಗಿಗೆ ಅಮೃತವನ್ನು ಕೊಟ್ಟರೆ ಸಂತೋಷ ಪಡುತ್ತಾರೆ . ನಮಗೆ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟರೆ ಸಂತೋಷವಾಗುತ್ತದೆ .

ಎಂದಾಗ ಹರಿಶಂದನು “ ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಸತ್ತಿಗೆಯು ಇಲ್ಲದಿದ್ದರೆ ದೊರೆತನವು ಶೋಭಿಸುವುದಿಲ್ಲ . ಭೂಮಿಯಲ್ಲಿ , ಯುದ್ಧರಂಗದಲ್ಲಿ ಸತ್ತಿಗೆಯನ್ನು ಕಂಡ ಶತ್ರುಗಳು ನಿಲ್ಲುವುದಿಲ್ಲ .

ಸತ್ತಿಗೆಯ ಕೆಳಗಿನ ನೆರಳಲ್ಲಿ ಇದ್ದವರಿಗೆ ವಿಪತ್ತುಗಳು , ಎಡರುತೊಡರುಗಳು ಇರುವುದಿಲ್ಲ . ಬಡತನ , ರೋಗ , ಅಪಕೀರ್ತಿ , ಸೋಲಿನ ಭಯವು ಇರುವುದಿಲ್ಲ . ಆದ್ದರಿಂದ ಮುತ್ತಿನ ಸತ್ತಿಗೆಯನ್ನು ಕೊಡಲು ಸಾಧ್ಯವಿಲ್ಲ .

“ ಈ ಸತ್ತಿಗೆಯನ್ನು ಸಾಮಾನ್ಯ ಜನರಿಗೆ ಕೊಡಬಾರದು . ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿಕೊಳ್ಳುವುದಿರಿಂದ ಇದು ದೇವರು , ಎಲ್ಲರಿಗೂ ನೆರಳನ್ನು ನೀಡುವ ತಾಯಿ , ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವ ಇದು ಚದುರಂಗಬಲಕ್ಕೆ ಸಮಾನ ” ಎಂದು ಹೇಳುತ್ತಾನೆ .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. ” ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲೆಂದು ಬಂದರೆ

ಆಯ್ಕೆ : ಈ ವಾಕ್ಯವನ್ನು ‘ ರಾಘವಾಂಕ ‘ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ‘ ಗ್ರಂಥದಿಂದ ಆಯ್ದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಪರೀಕ್ಷಿಸಲು ತನ್ನ ಕೋಪದಿಂದ ಗಾನ ರಾಣಿಯರನ್ನು ಸೃಷ್ಟಿಸಿ , “ ಸರ್ವಬುದ್ಧಿಗಳನ್ನು ಬಳಸಿ ಅವನನ್ನು ಮರುಳು ಮಾಡುತ್ತಿರಿ ” ಎಂದು ಹೇಳಿ , ಹರಿಶ್ಚಂದ್ರನ ಬಳಿಗೆ ಕಳುಹಿಸಿದನು . ಆ ಗಾನ ರಾಣಿಯರ ರೂವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಗಾನ ರಾಣಿಯರನ್ನು ಕವಿ ಕಾರಿರುಳಿಗೆ ಹೋಲಿಸಿ ವರ್ಣಿಸಿರುವುದು ಸ್ವಾರಸ್ಯಕರವಾಗಿದೆ .

2. “ ಬಡತನದ ಹೊತ್ತಾನೆ ದೊರಕಿ ಫಲವೇನು ”

ಆಯ್ಕೆ : ಈ ವಾಕ್ಯವನ್ನು ‘ ರಾಘವಾಂಕ ‘ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ‘ ಗ್ರಂಥದಿಂದ ಆಯ್ದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಗಾನರಾಣಿಯರು ಹರಿಶಂದ್ರನನ್ನು ತಮ್ಮ ಹಾಡು , ನೃತ್ಯಗಳಿಂದ ಸಂತೋಷ ಪಡಿಸುತ್ತಾರೆ .

ಅವರ ಹಾಡು ಮತ್ತು ನೃತ್ಯವನ್ನು ಮೆಚ್ಚಿದ ಹರಿಶಂದ್ರನು ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ
ಕೊಡಲು ಹೋಗುತ್ತಾನೆ . ಆದರೆ ಆ ಗಾನರಾಣಿಯರು ಬಹುಮಾನವನ್ನು ತಿರಸ್ಕರಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಬಹುಮಾನವನ್ನು ಕೊಡುವಾಗ ಯಾರಿಗೆ ಯಾವ ವಸ್ತು ಅವಶ್ಯಕತೆ ಇದೆಯೋ ಅದನ್ನು ಬಹುಮಾನವಾಗಿ ಕೊಟ್ಟರು ಬಹುಮಾನ ಪಡೆದವರು ಸಂತೋಷ ಪಡುತ್ತಾರೆ ಎಂಬುದು ಸ್ವಾರಸ್ಯಕರವಾಗಿದೆ .

3. “ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು ”

ಆಯ್ಕೆ : ಈ ವಾಕ್ಯವನ್ನು ‘ ರಾಘವಾಂಕ ‘ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ‘ ಗ್ರಂಥದಿಂದ ಆಯ್ದ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಗಾನರಾಣಿಯರು “ ಕಡಲಿನಲ್ಲಿ ಮುಳುಗುವವನಿಗೆ ತೆಪ್ಪವನ್ನು , ದಾರಿದ್ರವಿರುವವನಿಗೆ ನಿಧಿಯನ್ನು , ಅತಿರೋಗಿಗೆ ಅಮೃತವನ್ನು ಕೊಟ್ಟರೆ , ಅವರು ಸಂತೋಷ ಪಡುತ್ತಾರೆ .

ಈ ಸುಡುಸುಡುವ ಬಿರುಬಿಸಿಲಿನಲ್ಲಿ ಇರುವ ನಮಗೆ ನಿಮ್ಮ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲಹು ” ಎಂದು ಹರಿಶಂದ್ರನನ್ನು ಕೇಳುವ ಸಂದರ್ಭದಲ್ಲಿ ಗಾನರಾಣಿಯರು ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಗಾನರಾಣಿಯರು ಹರಿಶ್ಚಂದ್ರನ ವಂಶ ಪರಂಪಾರ್ಯವಾಗಿ ಬಂದಿದ್ದ ಮುತ್ತಿನ ಸತ್ತಿಗೆಯನ್ನೇ ಬಹುಮಾನ ಕೇಳಿರುವುದು ಸ್ವಾರಸ್ಯಕರವಾಗಿದೆ .

4. “ ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು ” 

ಆಯ್ಕೆ : ಈ ವಾಕ್ಯವನ್ನು ‘ ರಾಘವಾಂಕ ‘ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ‘ ಗ್ರಂಥದಿಂದ ಆಯ್ದ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ವ್ಯಕ್ತಿಯನ್ನು ಎದು

ಸಂದರ್ಭ : ಗಾನ ರಾಣಿಯರು ಹರಿಶ್ಚಂದ್ರನನ್ನು ಮುತ್ತಿನ ಸತ್ತಿಗೆಯನ್ನು ಬಹುಮಾನವಾಗಿ ಕೊಡು ಎಂದು ಕೇಳಿದ ಸಂದರ್ಭದಲ್ಲಿ ಪ್ರೀತಿಯಿಂದ ಎಲ್ಲವನ್ನು ಕೊಡಬಹುದು . ತಾಯಿ , ತಂದೆ , ಸತಿ , ಪರಿವಾರವನ್ನು ಕೊಡುವ ಜನರು ಇದ್ದಾರೆ ಲೋಕದಲ್ಲಿ ಎಂದು ಹರಿಶ್ಚಂದ್ರನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ಪ್ರೀತಿಯಿಂದ ಎಲ್ಲವನ್ನೂ ದಾನವಾಗಿ ಕೊಡಬಹುದು ಎಂಬ ಹರಿಶ್ಚಂದ್ರನ ಮಾತಿನ ಮೂಲಕ ಕವಿ ಸ್ವಾರಸ್ಯಕರವಾಗಿ ಮೂಡಿ ಬಂದಿದೆ .

ಭಾಷಾ ಚಟುವಟಿಕೆ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1. ಷಟ್ಪದಿ ಎಂದರೇನು ? ವಿಧಗಳಾವುವು ?

ಉತ್ತರ : ಷಟ್ಪದಿ ಮಾತ್ರಾಗಣಕ್ಕೆ ಸೇರಿದ ಪದ್ಯ ಪ್ರಕಾರ , ಷಟ್ಪದಿಯಲ್ಲಿ ಶರ , ಕುಸುಮ , ಭೋಗ , ಭಾಮಿನಿ , ಪರಿವರ್ಧಿನಿ , ವಾರ್ಧಕ ಎಂಬ ಆರು ವಿಧಗಳಿವೆ.ಷಟ್ – ಆರು , ಪದಿ – ಸಾಲು , ಆರುಸಾಲುಗಳ ಪದ್ಯ – ಷಟ್ಪದಿ .

2. ಭಾಮಿನಿ ಷಟ್ಪದಿಯ ಲಕ್ಷಣವೇನು ?

ಉತ್ತರ : 1 , 2 , 4 ಮತ್ತು 5 ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಎರಡೆರಡು ಬರುತ್ತವೆ . 3 ಮತ್ತು 6 ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಮೂರು ಮೂರು ಇದ್ದು , ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ .

3. ವಾರ್ಧಕ ಷಟ್ಪದಿಯ ಲಕ್ಷಣವನ್ನು ವಿವರಿಸಿ .

ಉತ್ತರ : 1. 2. 4 ಮತ್ತು 5 ನೆಯ ಸಾಲುಗಳಲ್ಲಿ 5 ಮಾತ್ರೆಗಳ 4 ಗಣಗಳಿರುತ್ತವೆ . 3. ಮತ್ತು 6 ನೆಯ ಸಾಲುಗಳಲ್ಲಿ 5 ಮಾತ್ರೆಗಳ 6 ಗಣಗಳು ಮತ್ತು ಒಂದು ಗುರು ನಿಯತವಾಗಿರುತ್ತದೆ .

ಆ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ , ಕಂಠಪಾಠ ಮಾಡಿರಿ .

ಸಂದ ಕಾರಿರುಳು ಕನ್ನೆಯರು ಹಗಲಂ ನೋಡ

ಲೆಂದು ಬಂದರೂ ಸುರಾಸುರರಬುಧಿಯಂ ಮಥಿಸು

ವಂದು ಹೊಸ ವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ

ನೊಂದು ಮಾನಿಸರಾದರೋ ಕಮಲಜಂ ನೀಲ

ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ

ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ

ಬಡತನದ ಹೊತ್ತಾನೆ ದೊರಕಿ ಫಲವೇನು ನೀ

ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ

ಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು ಸಾವ ಹೊತ್ತು

ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು

ಹೊಡೆದು ಬೆಂಡಾಗಿ ಬೀಳ್ವೆಮಗೆ ನೀನೊಲಿದು ಮಣಿ

ದೊಡಿಗೆಗಳನಿತ್ತು ಫಲವೇನು ಭೂಪಾಲ ಹೇಳೆನುತ ಮತ್ತಿಂತೆಂದರು

ಇ ) ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ , ಗಣ ವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ .

FAQ :

1. ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು ?

ಉತ್ತರ : ಗಾನರಾಣಿಯರು ಹರಿಶಂದ್ರನನ್ನು ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಹೇಳಿದರು .

2. ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ ?

ಉತ್ತರ : ರಾಜರಿಗೆ ಪಟ್ಟ ಕಟ್ಟುವಾಗ ಸತ್ತಿಗೆಯು ದೈವ ಸ್ವರೂಪವಾಗುತ್ತದೆ ಎಂದು ಹರಿಶಂದ್ರನು ಹೇಳುತ್ತಾನೆ .

3. ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು ?

ಉತ್ತರ : ಗಾನ ರಾಣಿಯರಿಗೆ ಹರಿಶ್ಚಂದ್ರನು ಮುತ್ತಿನಹಾರ ( ಸರ್ವಾಭರಣ ) ವನ್ನು ಬಹುಮಾನವಾಗಿ ಕೊಟ್ಟನು .

Download all 9th Standard Kannada notes Click Here

ಇತರೆ ವಿಷಯಗಳು :

9th Standard All Subject Notes

9th Standard Kannada Textbook karnataka Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh