ದ್ವಿತೀಯ ಪಿ.ಯು.ಸಿ ಒಂದು ಹೂ ಹೆಚ್ಚಿಗೆ ಇಡುತೀನಿ ಕನ್ನಡ ಸಾರಾಂಶ | 2nd PUC Ondu Hoo Hechige Idutini Kannada Summary

ದ್ವಿತೀಯ ಪಿ.ಯು.ಸಿ ಒಂದು ಹೂ ಹೆಚ್ಚಿಗೆ ಇಡುತೀನಿ ಕನ್ನಡ ಸಾರಾಂಶ, 2nd PUC Ondu Hoo Hechige Idutini Summary in Kannada Saramsha Pdf Download 2022

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಒಂದು ಹೂ ಹೆಚ್ಚಿಗೆ ಇಡುತೀನಿ

ಕೃತಿಕಾರರ ಹೆಸರು : ಲಲಿತಾ ಸಿದ್ಧಬಸವಯ್ಯ

2nd PUC Ondu Hoo Hechige Idutini Kannada Summary | ಕನ್ನಡ ಸಾರಾಂಶ

Ondu Hoo Hechige Idutini Summary

ಶ್ರೀಮತಿ ಲಲಿತಾ ಸಿದ್ಧಬಸವಯ್ಯರವರು ಬೇರ್ಪಟ್ಟ ಹಿರಿಯ ಜೀವಗಳೆರಡರ ತುಯ್ದಾಟವನ್ನು ಪ್ರಸ್ತುತ “ ಒಂದು ಹೂ ಹೆಚ್ಚಿಗೆ ಇಡುತೀನಿ ” ಎಂಬ ಪದ್ಯಭಾಗದಲ್ಲಿ ಬಹಳ ಮಾರ್ಮಿಕವಾಗಿ ಮನಮುಟ್ಟುವಂತೆ ವ್ಯಕ್ತಪಡಿಸಿದ್ದಾರೆ .

ದೂರದಲ್ಲಿರುವ ತನ್ನ ಬಾಳ ಸಂಗಾತಿಯಾದ ಮುದುಕನೊಬ್ಬನನ್ನು ನೆನೆದು ಚಡಪಡಿಸುವ ಮುದುಕಿಯೊಬ್ಬಳ ಮನಸ್ಸಿನ ತಲ್ಲಣಗಳು ಈ ಕವಿತೆಯಲ್ಲಿ ಚಿತ್ರಿತಗೊಂಡಿವೆ . ಮುದುಕಿ ಹಿರಿಮಗ , ಸೊಸೆ ಮತ್ತು ಮೊಮ್ಮಗಳ ಜೊತೆ ಕನ್ನಡದ ನೆಲದಲ್ಲಿ ನೆಲೆಸಿದ್ದಾಳೆ . ಮುದುಕ ಕಿರಿಮಗ ಮತ್ತು ಸೊಸೆಯ ಜೊತೆ ದೂರದ ಅಸ್ಸಾಮಿನಲ್ಲಿದ್ದಾನೆ . ಅವನ ದೂರವಾಣಿ ಕರೆಗಾಗಿ ಕಾತರಿಸುವ ಮುದುಕಿಯ ಮನದಾಳವನ್ನು ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಅಂತಕರಣದಿಂದ ಇಲ್ಲಿ ಚಿತ್ರಿಸಿದ್ದಾರೆ .

ಒಬ್ಬ ಮಗನ ಬಳಿ ಇರುವ ತಾಯಿ ( ಇಲ್ಲಿ ಮುದುಕಿ ಎಂದೇ ಸಂಬೋಧಿಸಲಾಗಿದೆ ) ಫೋನಿನ ರಿಂಗ್ ಕೇಳಿ ತವಕಪಡುತ್ತಾಳೆ . ಆದರೆ ಸೊಸೆ ಏನೆನ್ನುವಳೋ ಎಂಬ ಭಯ . ಫೋನ್ ಎತ್ತಿಕೊಳ್ಳಲೋ ಬೇಡವೋ ಎಂದು ಮನ ಚಡಪಡಿಸುತ್ತದೆ . ಮಗ ಗದರಬಹುದು ಎಂಬ ಆತಂಕ . ಫೋನ್ ರಿಂಗ್ ಆಗುವವರೆಗೂ ಒಂದು ಸಲ ಅಡಿಗೆ ಮನೆ ಕಡೆಗೆ ( ಕಿಚನ್ನಿನ ಕಡೆಗೆ ) ಮತ್ತೊಮ್ಮೆ ಸ್ಟಡಿರೂವಿನ ಕಡೆಗೆ ನೋಡುತ್ತಾ ಕಳವಳಪಡುತ್ತಾಳೆ . ಎಲ್ಲಿ ರಿಂಗ್ ಆಗುವುದು ನಿಂತು ಹೋಗುವುದೋ ? ಯಾರಾದರೂ ಬೇಗ ಬಂದು ತೆಗೆದು ಕೊಳ್ಳಲಾರರೆ ಎಂದು ಮನಮಿಡಿಯುತ್ತದೆ . ಆ ಫೋನ್ ತನ್ನ ಜೀವನ ಸಂಗಾತಿ ಮುದುಕನದೆ ಆಗಿರಬಹುದೇನೋ ? ಎಂದು ಮನಸ್ಸು ಚಡಪಡಿಸುತ್ತದೆ . ಮುದುಕ – ಮುದುಕಿಯರಿಗೆ ಇಬ್ಬರು ಮಕ್ಕಳು , ಜವಾಬ್ದಾರಿಯು ನಿಭಾಯಿಸುವ ನೆಪದಲ್ಲಿ ಒಬ್ಬರನ್ನು ಹಿರಿಯ ಮಗ , ಮುದುಕನನ್ನು ಕಿರಿಯಮಗ ಹಂಚಿಕೊಂಡಿದ್ದಾರೆ .

ಮುದುಕಿ ಹಿರಿಯ ಮಗನ ಬಳಿ ಕರ್ನಾಟಕದಲ್ಲಿದ್ದರೆ ಕಿರಿಯ ಮಗನ ಬಳಿ ಮುದುಕ ದೂರದ ಅಸ್ಸಾಂನಲ್ಲಿ ಇದ್ದಾನೆ . ಆತನಿಗೆ ಆ ಭಾಷೆ ಸ್ವಲ್ಪವೂ ಬಾರದು . ಮಗ – ಸೊಸೆ ಹೊರಗೆ ಹೋದಾಗ ಮುದುಕಿ ಫೋನಿನ ಮೂಲಕ ಮುದುಕನ ಯೋಗಕ್ಷೇಮ ವಿಚಾರಿಸಿ ಮಾತನಾಡುತ್ತಾಳೆ . ಕಿರಿಮಗ ಮತ್ತು ಅವನ ಹೆಂಡತಿ ಒಂಬತ್ತು ಗಂಟೆಗೆ ಗುಡ್ಡದ ಕ್ವಾಟ್ರಸ್ಸು ಬಿಟ್ಟರೆ ಮತ್ತೆ ಮನೆಗೆ ಹಿಂತಿರುಗಿ ಬರುವುದು ಹೊತ್ತು ಮುಳುಗಿದ ಮೇಲೆ , ಮನೆಯಲ್ಲಿ ಆತನೊಡನೆ ಮಾತನಾಡುವವರಿಲ್ಲ . ಹೊರಗೆ ಯಾರ ಬಳಿಯಾದರೂ ಸ್ನೇಹ ಮಾಡಲು ಮಾತುಬಾರದು . ಇದರಿಂದ ನೊಂದ ಮುದುಕ ಫೋನು ಮಾಡಿದಾಗ ‘ ಮಾತೆ ಮರೆತು ಹೋಗಿದೆ . ಕಣೆ ಮಾತಾಡು , ಮಾತಾಡು ಎಂದು ಗೋಗರೆಯುತ್ತಾನೆ .

ಮುದುಕಿ ಅಳುನುಂಗಿ , ಆತನಿಗೆ ಗೊತ್ತಾಗದಂತೆ ಮಾತಾಡುತ್ತಾಳೆ . ಎಲ್ಲಿ ತಾನು ಅಳುತ್ತಿರುವುದು ಗೊತ್ತಾಗುವುದೋ , ಗೊತ್ತಾದರೆ ಮುದುಕ ಎಲ್ಲಿ ಬೇಸರ ಪಟ್ಟುಕೊಂಡಾನೊ ಎಂಬ ದಿಗಿಲು ಒಂದುಕಡೆ , ಮಗ ಎಲ್ಲಿ ಕೇಳಿಸಿಕೊಂಡು ಗದರುತ್ತಾನೋ ಎಂಬ ಭಯ ಮತ್ತೊಂದೆಡೆ . ಅಳುವಂಥದ್ದೇನಾಗಿದೆಯಮ್ಮ ಈಗ ನಿನಗೆ ಸುಮ್ಮನಿರು ‘ ಎಂದು ಗದರುವನು ಎಂಬ ಭಯ ಮುದುಕಿಗೆ ವಯೋಧರ್ಮಕ್ಕೆ ತಕ್ಕ ಹಾಗೆ ಮುದುಕಿಗೆ ಮಂಡಿನೋವು ಜಾಸ್ತಿ ಆದಾಗ ಮಂಡಿಗಳನ್ನು ಅಂಗೈಯಲ್ಲಿ ಅದು ಮುತ್ತ ಗಾಜುಬಿಲ್ಲೆಯಂತಿರುವ ಮೆಟ್ಟಿಲ್ಲನ್ನು ನಿಧಾನವಾಗಿ ಹತ್ತುತ್ತ ಮೊಮ್ಮಗಳನ್ನು ಕರೆಯುತ್ತಾಳೆ . ಆದರೆ ಆ ಜಾಣೆ ತನಗೆ ಕೇಳಿಸಲೇ ಇಲ್ಲವೇನೋ ಎಂಬಂತೆ ಸ್ವಂತ ಕಂಪ್ಯೂಟರಿನಲ್ಲಿ ಮುಳುಗಿದ್ದಾಳೆ .

ಅವಳನ್ನು ಅಜ್ಜಿ ಡಿಸ್ಟರ್ಬು ಮಾಡಬಹುದೇ ? ಅಜ್ಜಿಯ ಕಾಟದಿಂದ ಬೇಸತ್ತ ಆಕೆ ಸಿಡಿಮಿಡಿಗುಡುತ್ತಲೇ ಅಟ್ಟವಿಳಿದು ಬಂದು , ಧಡ್ಡನೆ ಫೋನೆತ್ತಿ ಕುಕ್ಕಿ ‘ ರಾಂಗ್ ನಂಬರ್‌ ‘ ಎಂದು ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟಳು ತನ್ನ ಲೋಕಕ್ಕೆ ಮುದುಕಿಗೆ ಅನುಮಾನ ಮೊಮ್ಮಗಳ ಮೇಲೆ ಅವಳು ಸರಿಯಾಗಿ ಕೇಳಿಸಿಕೊಳ್ಳದೆ ಅವಸರದಲ್ಲಿ ರೈಟನ್ನೇ ರಾಂಗ್ ಎಂದಿರಬಹುದೆಂದು ಮುದುಕಿ ಯೋಚಿಸುತ್ತಾಳೆ . ಬಚ್ಚಲು ಮನೆಗೆ ಹೋಗಿ ಬಂದ ಮುದುಕಿ ಆ ಕಡೆ ಈ ಕಡೆ ನೋಡಿ ಮತ್ತೆ ಫೋನಿನ ಬಳಿಗೆ ಬಂದು ನಿಲ್ಲುತ್ತಾಳೆ . ಮತ್ತೆ ತನ್ನ ಮುದುಕನಿಂದ ಕರೆ ಬಂದೀತೆಂಬ ನಿರೀಕ್ಷೆ ಅವಳದು .

ಮುದುಕಿಯ ನಿರೀಕ್ಷೆಯಂತೆಯೇ ಮತ್ತೆ ಫೋನು ಝಣಝಣತ್ಕರಿಸುತ್ತದೆ . ಮುದುಕಿಗೆ ಜೀವವೇ ಬಾಯಿಗೆ ಬಂದಂತಾಗುತ್ತದೆ . ತಡವರಿಸುತ್ತಾ ಎರಡೂ ಕೈಯಲ್ಲಿ ಫೋನಿನ ರಿಸೀವರ್ ಅನ್ನು ಎತ್ತಿಕೊಂಡು ‘ ಹಲೋ ನಾನೇ ಕಂಡಿ ಮಾತಾಡಿ ಎಂದು ಹೇಳುತ್ತಾಳೆ . ಅವಳ ನಿರೀಕ್ಷೆಯೂ ನಿಜವಾಗಿದೆ . ಮುದುಕನೊಂದಿಗೆ ನಿರಾಳವಾಗಿ ಮಾತನಾಡಲು ಯಾವ ಅಡ್ಡಿ ಆತಂಕವೂ ಬಾರದಿರಲೆಂದು ಆಕೆ ಪ್ರಾರ್ಥಿಸುತ್ತಾಳೆ . ಮಗನ ಕಾರು ಹೊರಟ , ಹಿಂದೆಯೇ ಮೊಮ್ಮಗಳ ಸ್ಕೂಟಿಯೂ ಹೊರಟ ಶಬ್ದ ಕೇಳುತ್ತದೆ . ಮೊಮ್ಮಗ ಶಾಲೆಗೆ ಹೋಗುವ ವ್ಯಾನೂ ಬಂದಾಯಿತು .

ಇನ್ನು ಮನೆಯಲ್ಲಿರು ವುದು ಮುದುಕಿ ಮತ್ತು ಸೊಸೆ ಇಬ್ಬರೇ , ಸೊಸೆಗೂ ಯಾವುದಾದರೂ ಹೊರಗಡೆಯ ಕೆಲಸ ಒದಗಿ ಬರಲಿ . ಆಗ ತಾನೊಂದಷ್ಟು ಹೊತ್ತು ತನ್ನ ಮುದುಕನೊಂದಿಗೆ ನಿರಾತಂಕವಾಗಿ ಹರಟೆ ಹೊಡೆಯಬಹುದು . ದೇವರು ಅಷ್ಟು ಸಹಾಯ ಮಾಡಿದರೆ ಅವನ ಪಾದಕ್ಕೆ ತಾನು ಇಂದು ಒಂದು ಹೂ ಹೆಚ್ಚಿಗೆ ಇಡುವುದಾಗಿ ಮುದುಕಿ ತನ್ನ ಮನೆದೇವರಾದ ಗುಟೆಮಲ್ಲಪ್ಪನಿಗೆ ಪ್ರಾರ್ಥಿಸಿಕೊಳ್ಳುತ್ತಾಳೆ . ಅವಳ ಇಂತಹ ಅನೇಕ ಪ್ರಾರ್ಥನೆಗಳ ಗಂಟೆ ದೇವರ ಬಳಿ ಇದೆ . ಈಗ ಅವುಗಳ ಜೊತೆ ಇನ್ನೊಂದರ ಸೇರ್ಪಡೆ ಎಂದು ಕವಯಿತ್ರಿ ವಿಷಾದಿಸಿದ್ದಾರೆ .

2nd PUC Ondu Hoo Hechige Idutini Summary in Kannada Saramsha Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh