ಹತ್ತಿ ಚಿತ್ತ ಮತ್ತು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು ಸಾರಾಂಶ, 2nd PUC Hatti Chitta Mattu Kannada Notes Question Answer Guide Summery Pdf Download, 2nd puc kannada hatti chitta mattu summary in kannada, 12th standard hatti chitta mattu kannada notes, hatti chitta mattu summary in kannada.
ತರಗತಿ : ದ್ವಿತೀಯ ಪಿ.ಯು.ಸಿ
ಪದ್ಯದ ಹೆಸರು : ಹತ್ತಿ…ಚಿತ್ತ…ಮತ್ತು…
ಕೃತಿಕಾರರ ಹೆಸರು : ಟಿ. ಯಲ್ಲಪ್ಪ

2nd Puc Hatti Chitta Mattu Kannada Notes
ಕವಿ ಪರಿಚಯ:

ಪ್ರೊ . ಟಿ . ಯಲ್ಲಪ್ಪ ( ಜನನ : ೨.೧೦.೧೯೭೦ ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ . ನಾರಾಯಣಪುರದಲ್ಲಿ ಶ್ರೀಮತಿ ಮುನಿಯಮ್ಮ – ಶ್ರೀ ತಾಯಪ್ಪ ಎಂಬ ಕೃಷಿಕಾರ್ಮಿಕ ದಂಪತಿಗಳ ಮಗನಾಗಿ ದಲಿತ ಕುಟುಂಬದಲ್ಲಿ ಜನಿಸಿದರು .
ಪ್ರೌಢಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಯಲ್ಲಪ್ಪ ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತ . ಇಪ್ಪತ್ತೆರಡರ ಅಳಲು ( ಲಲಿತ ಪ್ರಬಂಧ ) , ಕಡಲಿಗೆ ಕಳಿಸಿದ ದೀಪ , ಚಿಟ್ಟೆ ಮತ್ತು ಜೀವಯಾನ , ನವಿಲಿಗೆ ಬಿದ್ದ ಕತ್ತಲ ಕನಸು ( ಕವಿತಾ ಸಂಕಲನಗಳು ) ಇತ್ಯಾದಿ ಕೃತಿಗಳನ್ನು ಹೊರತಂದಿದ್ದಾರೆ. ‘ ಕಡಲಿಗೆ ಕಳಿಸಿದ ದೀಪ ‘ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿರುವ ಶ್ರೀಯುತರು ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ , ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿಗಳನ್ನೂ ಪಡೆದಿರುವರು . ಇವರ ‘ ಕಡಲಿಗೆ ಕಳಿಸಿದ ದೀಪ ‘ ಕೃತಿಯು ” ANKLETS ” ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡಿದೆ . ‘ ಚಿಟ್ಟೆ ಮತ್ತು ಜೀವಯಾನ ‘ ಕೃತಿಗೆ ವೀಚೀ ಕಾವ್ಯ ಪುರಸ್ಕಾರ ಮತ್ತು ಹರಿಹರ ಕಾವ್ಯ ಪುರಸ್ಕಾರಗಳು ಲಭಿಸಿವೆ. ಪ್ರಸ್ತುತ ಬೆಂಗಳೂರಿನ ಕೆ.ಆರ್. ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ .
ಆತ್ಮ – ಪರಮಾತ್ಮಗಳ ಅಸ್ತಿತ್ವವನ್ನು ಹತ್ತಿ ಮತ್ತು ಚಿತ್ತಗಳ ಮೂಲಕ ಸಂಕೇತಿಸಲಾಗಿದೆ . ಜೀವಾತ್ಮದ ಸಾರ್ಥಕತೆಯಿರುವುದು ತನ್ನ ಅಹಂಕಾರವನ್ನು ಸುಟ್ಟುಕೊಂಡು ಬೆಳಕನ್ನು ಜ್ಞಾನವನ್ನು ಹೊಂದುವುದರಲ್ಲಿ . ಇಲ್ಲಿ ಹತ್ತಿಯ ಬೀಜವು ದೀಪದ ಬೆಳಕಿಗೆ ಜೀವದ್ರವ್ಯವಾಗಿದೆ . ಹತ್ತಿಯು ತನ್ನನ್ನು ತಾನೇ ಸುಟ್ಟುಕೊಂಡು ಬೆಳಕನ್ನು ನೀಡಿ ಜಗದ ಕತ್ತಲನ್ನು ನೀಗುವುದಕ್ಕೆ ಯತ್ನಿಸುತ್ತವೆ . ಜೀವಾತ್ಮವೂ ಇದೇ ರೀತಿ ಕಾರ್ಯಪ್ರವೃತ್ತವಾಗಬೇಕೆಂಬ ಆಶಯ ಕವಿಯದಾಗಿದೆ . ಹಾಗೆಯೇ ಸದ್ದಿಲ್ಲದೆ ದುಡಿದು ಲೋಕಕ್ಕೆ ದೊಡ್ಡ ಕೊಡುಗೆ , ಅರಿವಿನ ಬೆಳಕನ್ನು ಕೊಟ್ಟು ಹೋದ ಸಾಧಕರ ಸಾರ್ಥಕ ಬದುಕನ್ನು ವಿಶಿಷ್ಟ ರೀತಿಯಲ್ಲಿ ಕವಿತೆ ಧ್ವನಿಸುತ್ತದೆ .
ಕಾವ್ಯದ ಹಿನ್ನೆಲೆ :
ಒಂದು ಬೆಳಗುತ್ತಿರುವ ಹಣತೆ , ಮತ್ತೊಂದು ಜೀವಂತ ದೇಹ , ಭೌತಿಕವಾಗಿ ಅವೆರಡರ ಕಾರ್ಯ ಬೇರೆಬೇರೆಯಾಗಿ ಕಂಡರೂ ತಾತ್ವಿಕವಾಗಿ ಒಂದೇ ಆಶಯವನ್ನುಳ್ಳದ್ದೆನಿಸುತ್ತದೆ . ಆತ್ಮರೂಪಿಯಾದ ದೇಹ ಹಾಗೂ ಜ್ಞಾನರೂಪಿಯಾದ ಹಣತೆಗಳು ಒಂದೇ ತಾತ್ವಿಕತೆಯನ್ನು ಸಾದರಪಡಿಸುತ್ತವೆ . ದೇಹ ಜೀವಾತ್ಮನ ಆಲಯದಂತೆಯೂ ಹಣತೆಯು ಬೆಳಕಿನ ಸ್ವರೂಪದ ಜ್ಞಾನದ ಭೌತಿಕ ರೂಪದಂತೆಯೂ ಕಾಣುತ್ತದೆ . ಭೌತವಾದಿಗಳಿಗೆ ದೇಹವು ರಕ್ತಮಾಂಸಗಳಿಂದ ಕೂಡಿದ ಹಲವು ಅಂಗಾಂಗಗಳ ಸಮುಚ್ಛಯ ಮಾತ್ರ ಈಶ್ವರವಾದಿಗಳಿಗೆ ಅದು ಆತ್ಮದ ಆಲಯ .
ಇಲ್ಲಿ ಹತ್ತಿಯ ಬೀಜ ಬೆಳಕಿನ ಬೀಜವೂ , ದೀಪದ ಬೆಳಕಿಗೆ ಬೇಕಾದ ತೈಲರೂಪದ ಜೀವ ದ್ರವ್ಯವೂ , ದೀಪ ಹೊತ್ತಿಕೊಳ್ಳಲು ಬೇಕಾದ ಬತ್ತಿಯೂ ಆಗಿ ಅಂತಿಮವಾಗಿ ಇಲ್ಲವಾಗುತ್ತದೆ . ಆದರೆ ಅದು ಉಂಟುಮಾಡಿದ ಬೆಳಕು ಬೆಳಕಿನ ಬೀಜ ಜಗದ ಕತ್ತಲನ್ನು ಸ್ವಲ್ಪವಾದರೂ ನೀಗುತ್ತದೆ . ದೇಹ ಮಾಡುವುದೂ ಇದೇ ಪ್ರಕ್ರಿಯೆಯನ್ನೇ ಜೀವಜೀವಾತ್ಮಗಳ ಪರಿಕಲ್ಪನೆಗೆ ವಾಹಕವಾಗುವ ಮೂಲಕ ಇಡೀ ಭಾರತೀಯ ದೈತ – ಆದೈತಗಳ ಪರಿಕಲ್ಪನೆಗೆ ಪ್ರತೀಕವಾಗುತ್ತದೆ . ಒಂದು ಹತ್ತಿಯ ಬೀಜ ಕವಿಯ ತಾತ್ವಿಕತೆಯನ್ನು ಪ್ರತಿಪಾದಿಸಿರುವಂತೆ ಕಾಣಬರುತ್ತಿದ್ದರೂ ಭಾರತೀಯ ತತ್ವಶಾಸ್ತ್ರ ಪ್ರತಿಪಾದಿಸಿದ ಆತ್ಮ – ಪರಮಾತ್ಮಗಳ ಸಂಗತಿಯನ್ನು ಇಲ್ಲಿ ಹತ್ತಿ ಮತ್ತು ಚಿತ್ತದ ಮೂಲಕ ಸರಳವಾಗಿ ಪ್ರತಿಪಾದಿಸಲಾಗಿದೆ .
ಶಬ್ದಾರ್ಥ :
ತಮ – ಕತ್ತಲು , ಅಂಧಕಾರ ; ಬೆಳಕಬಟ್ಟೆ – ಜ್ಞಾನವೆಂಬ ಬಟ್ಟೆಯನ್ನು ಧರಿಸಿದವನು ; ಯೋಗಿ – ಯೋಗಶಾಸ್ತ್ರ ಬಲ್ಲಾತ , ದೇಹ ಮತ್ತು ಮನಸ್ಸುಗಳ ನಿಯಂತ್ರಣ ಸಾಧಿಸಿದವನು ; ಕೇಡು – ನಾಶ , ಕೆಡುಕು , ಅಳಿವು , ಕರ್ಮ ಕೆಲಸ ; ಆತ್ಮಪರಿನಿರ್ವಾಣ – ಮೋಕ್ಷ , ಮುಕ್ತಿ , ಆತ್ಮದ ಬಿಡುಗಡೆ ; ಬಿತ್ತ – ಬೀಜ ,
2nd Puc Hatti Chitta Mattu Kannada Notes
ಅ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )
ಚಿತ್ತವನ್ನು ಹತ್ತಿಗೆ ಹೋಲಿಸಲಾಗಿದೆ .
ತೈಲ ಮುಗಿದು ದೀಪ ಆರಿದ ಮೇಲೆ ಬರುವ ಕಮಟು ವಾಸನೆಯಿಂದ ತೀರಿದ್ದು ತಿಳಿಯುತ್ತದೆ .
ಅನಾಥ ಭಾವವನ್ನು ಸೂಚಿಸುವ ಪದ ‘ ಬಾಟ್ಲಿ ಹಾಲು
ವ್ಯರ್ಥವಲ್ಲದ ಕೆಲಸವೆಂದರೆ ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ .
ಎಣ್ಣೆಯಲ್ಲಿ ನೆನೆದ ಬತ್ತಿ , ಮಡಿಯುಟ್ಟ ಭಕ್ತನಂತೆ ಕಾಣುತ್ತದೆ .
ಹತ್ತಿಯ ಬೀಜಕ್ಕೆ ಬೆಣ್ಣೆಯಾಗುವುದು ತಪ್ಪದ ಕರ್ಮ .
ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )
2nd PUC Hatti Chitta Mattu Kannada Notes Question Answer
1 ) ಮಾಗುವ ಜೀವದ ಪಯಣ ಹೇಗೆ ಸಾಗುತ್ತಿದೆ ?
ಸದ್ದಿಲ್ಲದೆ ಈ ಜಗತ್ತಿನಲ್ಲಿ ಸಾಗುತ್ತಿದೆ .
2 ) ಆತ್ಮಕ್ಕೆ ಕಮಟು ಹತ್ತುವುದು ಎಂದರೇನು ?
ದೀಪ ಆರಿದ ಮೇಲೆ ತೈಲ ತೀರಿದೆಯೆಂದು ತಿಳಿಯಲು ಬರುವ ಸಮಯ ( ವಾಸನೆಯಂತೆ ) ನಂತೆ , ಆಗ ಬತ್ತಿಯು ಉರಿದು ನಾಶವಾದಂತೆ ಆತ್ಮವು ನಾಶವಾಗುವುದು ಎಂಬುದನ್ನು ಕವಿ ಆತ್ಮಕ್ಕೆ ಕಮಟು ಹತ್ತುವುದು ಎಂದಿದ್ದಾರೆ .
3 ) ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಯಾವ ಯಾವುದಕ್ಕೆ ಹೋಲಿಸಲಾಗಿದೆ .
ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಮಡಿಯುಟ್ಟ ಭಕ್ತನಿಗೆ , ಜ್ಞಾನವನ್ನು ತೋರುವ ಯೋಗಿಗೆ , ಬಲೆಯನ್ನು ಕಟ್ಟಿದ ಜೇಡನಿಗೆ ಹೋಲಿಸಲಾಗಿದೆ . ಮಾಗುವ ಜೀವದ ಪಯಣವು ತೈಲವೂ ಆಗಿ ಹೊತ್ತಿ ಉರಿಯುವ ಬೆಳಕು ಆ
4 ) ಎಣ್ಣೆ ತೀರಿದ ದೀಪಗಳು ಏನನ್ನು ಸೂಚಿಸುತ್ತದೆ ?
ಎಣ್ಣೆ ತೀರಿದ ದೀಪಗಳು , ಆಯಸ್ಸು ಮುಗಿದ ಜೀವನವನ್ನು ಸೂಚಿಸುತ್ತದೆ .
5 ) ಹತ್ತಿಯ ಬೀಜ ಲೋಕದ ಹಿತಕ್ಕೆ ತನ್ನನ್ನು ಹೇಗೆ ಸುಟ್ಟುಕೊಳ್ಳುತ್ತದೆ ?
ಹತ್ತಿಯ ಬೀಜ ಲೋಕದ ಹಿತಕ್ಕೆ ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ ಎಂಬುದನ್ನು ಕವಿ ಯಥಾವತ್ತಾಗಿ ಚಿತ್ರಿಸಿದ್ದಾರೆ – “ ಹತ್ತಿಯ ಬೀಜವು ಬೆಳಕಿನ ಬೀಜವಾಗಿದ್ದು , ಬೆಳಕಿಗೆ ಬೇಕಾದ ತೈಲರೂಪದ ಜೀವದ್ರವ್ಯದೊಡನೆ , ದೀಪಹೊತ್ತಿಕೊಳ್ಳಲು ಬೇಕಾದ ಬತ್ತಿಯಾಗಿ ಲೋಕಕ್ಕೆ ಬೆಳಕು ನೀಡುತ್ತಾ ತನ್ನನ್ನು ತಾನು ಸುಟ್ಟುಕೊಳ್ಳುತ್ತದೆ .
ಇ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕದ ಪ್ರಶ್ನೆಗಳು )
1 ) ‘ ಹತ್ತಿ … ಚಿತ್ತ …. ಮತ್ತು … ‘ ಕವಿತೆಯ ಸ್ವಾರಸ್ಯವನ್ನು ಚರ್ಚಿಸಿರಿ .
‘ಹತ್ತ … ಚಿತ್ತ … ಮತ್ತು .. ‘ ಕವಿತೆಯ ಸ್ವಾರಸ್ಯವೆಂದರೆ- ‘ ಆತ್ಮ – ಪರಮಾತ್ಮಗಳ ಅಸ್ತಿತ್ವನ್ನು ಹತ್ತಿ ಮತ್ತು ಚಿತ್ತಗಳ ಮೂಲಕ ಸಂಕೇತಿಸಲಾಗಿದೆ . ಜೀವಾತ್ಮದ ಸಾರ್ಥಕತೆಯಿರುವುದು ತನ್ನ ಅಹಂಕಾರವನ್ನು ಸುಟ್ಟುಕೊಂಡು ಬೆಳಕನ್ನು ಜ್ಞಾನವನ್ನು ಹೊಂದುವುದರಲ್ಲಿ ಇದೆ . ಇಲ್ಲಿ ಹತ್ತಿಯ ಬೀಜವು ದೀಪದ ಬೆಳಕಿಗೆ ಜೀವದ್ರವ್ಯವಾಗಿದೆ . ಹತ್ತಿಯು ತನ್ನನ್ನು ತಾನೇ ಸುಟ್ಟುಕೊಂಡು ಬೆಳಕನ್ನು ನೀಡಿ ಜಗದ ಕತ್ತಲನ್ನು ನೀಗಿಸುವುದಕ್ಕೆ ಯತ್ನಿಸುತ್ತದೆ . ಜೀವಾತ್ಮವು ಇದೇ ರೀತಿ ಕಾರ್ಯಪ್ರವೃತ್ತವಾಗಬೇಕೆಂಬ ಆಶಯವನ್ನು ಕವಿ ವ್ಯಕ್ತಪಡಿಸಿದ್ದಾರೆ .ಇಲ್ಲಿ ಆತ್ಮರೂಪಿಯಾದ ದೇಹ ಹಾಗೂ ಜ್ಞಾನರೂಪಿಯಾದ ಹಣತೆಯು ಬೆಳಕಿನ ಸ್ವರೂಪದ ಜ್ಞಾನದ ಭೌತಿಕ ರೂಪದಂತೆ ಕಾಣುತ್ತದೆ ಎಂಬುದಾಗಿ ಕವಿ ಭಾರತೀಯ ದೈತ – ಅದೈತಗಳ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದಾರೆ .
2 ) ಬತ್ತಿ , ಎಣ್ಣೆ , ಭಕ್ತ , ಯೋಗಿ , ಜೇಡ – ಇವುಗಳ ಆತ್ಮ ಸಮರ್ಪಣೆಯ ಆಶಯವನ್ನು ಕವಿತೆ ಹೇಗೆ ಚಿತ್ರಿಸಿದೆ ?
ಹತ್ತಿ ಹೊಸೆದು ಮಾಡಿದ ಬತ್ತಿ ಎಣ್ಣೆಯೊಳಗೆ ಮುಳುಗಿ ಹಚ್ಚಿಟ್ಟ ಹಣತೆಯಲ್ಲಿ ಕತ್ತಲನ್ನು ಸರಿಸಿ ಬೆಳಕನ್ನು ಕೊಡುತ್ತದೆ . ಎಣ್ಣೆಯಲ್ಲಿ ಮುಳುಗಿ ಎದ್ದ ಬತ್ತಿ ಬೆಳಕು ನೀಡುತ್ತಿದ್ದರೆ ಅದು ನೀರಲ್ಲಿ ಮಿಂದು ಮಡಿಯುಟ್ಟು ಬಂದ ಭಕ್ತನಂತೆ ಕಾಣುತ್ತದೆ . ದೀಪ ಉರಿಯುತ್ತಿರಲು ಆ ಬೆಳಕು ಜ್ಞಾನದ ಪ್ರತೀಕವಾಗಿ ಜನ್ಮವನ್ನು ಪಡೆದ ಯೋಗಿಯಂತೆ ಕಾಣುತ್ತಾನೆ . ಇನ್ನು ಎಣ್ಣೆ ಮುಗಿದ ಮೇಲೆ ಬತ್ತಿ ಉರಿದು ತನ್ನ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತದೆ . ಹೇಗೆ ಬೇಡವು ತನ್ನೊಡಲಿನಿಂದಲೇ ನೂಲು ತೆಗೆದು ಬಲೆ ಹೆಣೆದು ಆ ಬಲೆಯಲ್ಲಿ ತಾನೆ ಸಿಕ್ಕಿ ಅಂತ್ಯವಾಗುವುದೋ ಅದೇ ರೀತಿ ಬತ್ತಿಯ ಬದುಕು ಅಂತ್ಯವಾಗುತ್ತದೆ .
3 ) ಹತ್ತಿಯ ಬೀಜದ ಮತ್ತು ಮಾನವ ಜೀವದ ಪಯಣವನ್ನು ಕವಿ ಹೇಗೆ ಸಮೀಕರಿಸಿದ್ದಾರೆ ?
ಹತ್ತಿಯ ಬೀಜದ ಮತ್ತು ಮಾನವ ಜೀವನದ ಪಯಣವನ್ನು ಕವಿ ಬ ಸೊಗಸಾಗಿ ಆಧ್ಯಾತ್ಮಿಕ ರೀತಿಯಲ್ಲಿ ಸಮೀಕರಿಸಿದ್ದಾರೆ . ಇಲ್ಲಿ ಹತ್ತಿಯ ಬೀಜ ಬೆಳಕಿನ ಸಾಹಿತ್ಯ ಸಂಪದ ಬೀಜವೂ , ದೀಪದ ಬೆಳಕಿಗೆ ಬೇಕಾದ ತೈಲರೂಪದ ಜೀವ ದ್ರವ್ಯವೂ , ದೀಪ ಹೊತ್ತಿಕೊಳ್ಳಲು ಬೇಕಾದ ಬತ್ತಿಯೂ ಆಗಿ ಅಂತಿಮವಾಗಿ ಇಲ್ಲವಾಗುತ್ತದೆ . ಆದರೆ ಅದು ಉಂಟು ಮಾಡಿದ ಬೆಳಕು ಬೆಳಕಿನ ಬೀಜ ಜಗದ ಕತ್ತಲನ್ನು ಸ್ವಲ್ಪವಾದರೂ ನೀಗುತ್ತದೆ . ದೇಹ ಮಾಡುವುದೂ ಇದೇ ಪ್ರಕ್ರಿಯೆಯನ್ನೇ , ಜೀವ ಜೀವಾತ್ಮಗಳ ಪರಿಕಲ್ಪನೆಗೆ ವಾಹಕವಾಗುವ ಮೂಲಕ ಇಡೀ ಭಾರತೀಯ ದೈತ – ಅದೈತಗಳ ಪರಿಕಲ್ಪನೆಗೆ ಪ್ರತೀಕವಾಗುತ್ತದೆ . ಒಂದು ಹತ್ತಿಯ ಬೀಜ ಕವಿಯ ತಾತ್ವಿಕತೆಯನ್ನು ಪ್ರತಿಪಾದಿಸಿರುವಂತೆ ಕಾಣಬರುತ್ತಿದ್ದರೂ ಭಾರತೀಯ ತತ್ವಶಾಸ್ತ್ರ ಪ್ರತಿಪಾದಿಸಿದ ಆತ್ಮ – ಪರಮಾತ್ಮಗಳ ಸಂಗತಿಯನ್ನು ಇಲ್ಲಿ ಹತ್ತಿ ಮತ್ತು ಮಾನವ ಚಿತ್ರದ ಮೂಲಕ ಪ್ರತಿಪಾದಿಸಲಾಗಿದೆ .
ಈ ) ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :
1 ) “ ಮಾಗುವ ಜೀವದ ಪಯಣ ಸಾಗುತ್ತಿದೆ ಸದ್ದಿಲ್ಲದೆ ”
ಹೊ . ಟಿ . ಯಲ್ಲಪನವರ ‘ ಹತ್ತಿ … ಚಿತ್ರ .. ಮತ್ತು … ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ . ಈ ಸೃಷ್ಟಿಯಲ್ಲಿ ಪರಿಪಕ್ವತೆಯನ್ನು ಸಾಧಿಸಿದ ಜೀವಗಳೆಲ್ಲ ನಿಸ್ವಾರ್ಥದಿಂದ ಸಮಾಜದ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತವೆ . ಅವು ತಮ್ಮ ಕೆಲಸವು ಬೇರೆಯವರಿಗೆ ತಿಳಿಯಬೇಕೆಂದಾಗಲೀ , ಗಮನ ಸೆಳೆಯ ಬೇಕೆಂದಾಗಲೀ , ಹೊಗಳಿಸಿಕೊಳ್ಳಬೇಕೆಂದಾಗಲೀ ಆಶಿಸುವುದಿಲ್ಲ . ಅವು ಸದ್ದಿಲ್ಲದ ಕರ್ಮ ಯೋಗಿಯಂತೆ ತಮ್ಮ ಬಾಳ ಪಯಣವನ್ನು ಮುಂದುವರೆಸುತ್ತವೆ . ಇದು ಪಕ್ವಗೊಂಡ ,ಮಾಗಿದ ಜೀವದ ಬದುಕಿನ ಲಕ್ಷಣವೂ ಹೌದು . ಹತ್ತಿಯ ಬೀಜದ ಬದುಕಿನ ರೀತಿಯ ಮಾಗಿದ ಜೀವವೊಂದರ ಸದ್ದಿಲ್ಲದ ಪಯಣದಂತೆ ಕವಿಗೆ ಅನ್ನಿಸಿದೆ .
2 ) “ ನಿದ್ದೆ ತಿಳಿದೆದ್ದ ಮಗು ಅತ್ತದ್ದು ಹಾಲಿಗೋ ಅಮ್ಮನಿಗೋ ”
ಪ್ರೊ . ಟಿ . ಯಲ್ಲಪ್ಪನವರ ‘ ಹತ್ತಿ … . ಚಿತ್ತ .. ಮತ್ತು … ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ನಿದ್ದೆಯಿಂದ ಎದ್ದ ಮಗುವಿನ ಅಳು ‘ ಅಗತ್ಯದ ಸುಳಿವನ್ನು ನೀಡುತ್ತಿದೆ ಎಂದುಕೊಂಡು ನಾವು ಮಗುವು ಹಸಿವಿನಿಂದ ಹಾಲಿಗಾಗಿ ಅಳುತ್ತಿರಬಹುದೆಂದೋ ಅಥವಾ ಅಮ್ಮನಿಗಾಗಿ ಅಳುತ್ತಿರಬಹುದೆಂದೋ ಯೋಚಿಸು ತೇವೆ . ಅಮ್ಮ ಸಿಕ್ಕರೆ ಹಾಲು ಸಿಗುತ್ತದೆಯಲ್ಲವೆ ? ಎಂಬ ಪ್ರಶ್ನೆ ಎದುರಾಗುವುದು ಸಹಜ . ಆದರೆ ಎಷ್ಟು ಜನ ತಾಯಂದಿರು ಎದೆ ಹಾಲನ್ನೇ ಕುಡಿಸಿ ಬೆಳೆಸುತ್ತಾರೆ ? ಎಷ್ಟೋ ಮಕ್ಕಳು ಅಮ್ಮನಿದ್ದೂ ಬಾಟ್ಲಿಯ ಹಾಲಿಗೆ ಬಾಯೊಡ್ಡುವ ನತದೃಷ್ಟ ಮಗುವಿನ ಅನಾಥಪ್ರಜ್ಞೆ ಈ ಸೃಷ್ಟಿಯಲ್ಲಿ ಇದ್ದೇ ಇದೆ . ಅದನ್ನು ಈ ಸೃಷ್ಟಿಯೇ ವಿಶ್ವಮಾತೃಪ್ತಜ್ಞೆಯಾಗಿ ಸಂತೈಸುತ್ತದೆ ಎಂಬ ಭಾವನೆಯಿಂದ ಕವಿ ಈ ಮೇಲಿನ ಸಾಲನ್ನು ರಚಿಸಿದ್ದಾರೆ .
3 ) “ ಬೆಳಕ ಬಟ್ಟೆಯ ತೊಡುವ ಯೋಗಿಯಂತೆ ! ”
ಟಿ . ಯಲ್ಲಪ್ಪನವರ ‘ ಹತ್ತಿ … ಚಿತ್ತ .. ಮತ್ತು … ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಹಣತೆಯ ಎಣ್ಣೆಯಲ್ಲಿ ನೆನೆದು ತನ್ನನ್ನು ಸುಟ್ಟುಕೊಂಡು ಬೆಳಗುತ್ತಿರುವ ಬತ್ತಿಯನ್ನು ಕವಿಯು ಬೆಳಕಿನ ಬಟ್ಟೆ ತೊಡುವ ಯೋಗಿಗೆ ಹೋಲಿಸಿರುವುದು ಅರ್ಥಪೂರ್ಣವಾಗಿದೆ . ಯೋಗಿಯಾದವನು ತನ್ನ ದೇಹವನ್ನು ದಂಡಿಸಿ , ಮನೋನಿಗ್ರಹ ಮಾಡಿಕೊಂಡು ಜ್ಞಾನ ಸಂಪಾದಿಸಿ ಯೋಗಿಯಾಗಿ ಸಮಾಜಕ್ಕೆ ಉಪಯೋಗಿಯಾಗಿ ಬದುಕುತ್ತಾನೆ . ಅಂದರೆ ಸ್ವಾರ್ಥ ತ್ಯಾಗಮಾಡಿ ಲೋಕಕಲ್ಯಾಣಕ್ಕೆ ದುಡಿಯುತ್ತಾನೆ . ಹತ್ತಿಯೂ ಯೋಗಿ ಯಂತೆಯೇ ತನ್ನನ್ನು ಸುಟ್ಟುಕೊಂಡು ಬೆಳಕು ನೀಡಿ ಬೇರೆಯವರನ್ನು ಬೆಳಗುತ್ತದೆ . ಆ ಬತ್ತಿ ತನ್ನ ಬಣ್ಣ ಮತ್ತು ಉದ್ದೇಶಗಳಲ್ಲಿ ಬೆಳಕಿನ ಬಟ್ಟೆ ತೊಟ್ಟ ಯೋಗಿಯ ಹಾಗೆಯೇ ಕಾಣುತ್ತದೆ . ಇದು ಅರ್ಥದ ಸುಸಂಬದ್ಧತೆಯಿಂದಲೂ ಅರ್ಥಪೂರ್ಣ ಹೋಲಿಕೆಯಾಗಿದೆ .
4 ) “ ಬೆಣ್ಣೆಯಾಗುವ ಕರ್ಮ ತಪ್ಪಿದಲ್ಲ ”
ಪ್ರೊ . ಟಿ . ಯಲ್ಲಪನವರ ‘ ಹತ್ತಿ .. ಚಿತ್ತ .. ಮತ್ತು .. ‘ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು , ಎಣ್ಣೆಯು ಹತ್ತಿಯನ್ನೇ ಸುಡುವುದು ದುರಂತ ದಂತೆ ಕಾಣುತ್ತದೆ . ಆದರೆ ಅದೇ ಸೃಷ್ಟಿಯ ನಿಯಮ ಮತ್ತು ಅದೇ ಅವರ ಬದುಕಿನ ಸಾರ್ಥಕ್ಯವೂ ಆಗಿದೆ . ವ್ಯಕ್ತಿ ತನ್ನನ್ನು ಸುತ್ತಿದ ಮೋಹ – ಪಾಠಗಳು ಕಿಲುಬು ಹರಿದು ಕೊಂಡು , ಅವುಗಳನ್ನು ಸುಟ್ಟುಕೊಂಡು ಅದನ್ನೇ ಬೆಳಕು ಎಂದುಕೊಂಡು ಲೋಕ ಕಲ್ಯಾಣಕ್ಕೆ ಸಮರ್ಪಣೆಗೊಳ್ಳುವ ಜೀವನ ತತ್ತ್ವವನ್ನು ಈ ವಾಕ್ಯ ಧ್ವನಿಸುವುದರಿಂದ ಈ ಮೇಲಿನ ವಾಕ್ಯ ಮಹತ್ವದ್ದಾಗಿದೆ .
5 ) “ ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ ”
ಟಿ . ಯಲ್ಲಪ್ಪನವರು ರಚಿಸಿರುವ ‘ ಹತ್ತಿ … ಚಿತ್ತ .. ಮತ್ತು … ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಿದೆ . ಎಣ್ಣೆ ತೀರಿದ ದೀಪಗಳಿಗೆ ಬತ್ತಿ ಹೊಸೆಯುವುದು ಮೇಲ್ನೋಟಕ್ಕೆ ವ್ಯರ್ಥವೆಂಬುದು ಲೋಕಗ್ರಹಿಕೆ , ಅಂದರೆ ಆರಿ ಹೋದ ದೀಪಗಳಿಗೆ ಬತ್ತಿ ಹೊಸೆಯುವುದರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಎದುರಾಗಬಹುದು . ಆದರೆ ಮತ್ತೆ ಎಣ್ಣೆ ಹೊಯ್ಯುವ , ದೀಪವನ್ನು ಬೆಳಗಿಸುವ ಸಾಧ್ಯತೆಯೊಂದು ಇದ್ದೇ ಇದೆಯಲ್ಲವೆ ? ಈ ಆಶಾವಾದೀತನವೇ ಬದುಕಿನ ನಿಜವಾದ ಇಂಧನ . ಈ ಬಗೆಯ ಜೀವನ ಪ್ರೇಮವು ಬದುಕನ್ನು ಮತ್ತೆ ಹೊಸದಾಗಿ ಪ್ರಾರಂಭಿಸಬೇಕೆಂಬ ಪ್ರಯತ್ನಕ್ಕೆ ಕಾರಣವಾಗುತ್ತದೆ . ಆಯಸ್ಸು ಮುಗಿಯುತ್ತಿರುವ ಮಾಗಿದ ಮುತ್ತಿನ ಜೀವಿಗಳನ್ನೂ ನಾವು ಇದೇ ಬಗೆಯ ಆಶಾವಾದೀತನದಿಂದಲೇ ಆರೈಕೆ ಮಾಡಬೇಕೇ ವಿನಾ ಆರೈಕೆ ವ್ಯರ್ಥವೆಂದು ತಿಳಿಯಬೇಕಾಗಿಲ್ಲ ಎಂಬ ಧನಾತ್ಮಕ ಧೋರಣೆಯನ್ನು ಈ ಮೇಲಿನ ಪಾಕ ನೀಡಿದೆ .
2nd PUC Hatti Chitta Mattu Kannada Notes Question Answer Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.