ಪ್ರಥಮ ಪಿ.ಯು.ಸಿ ಪ್ರಪಂಚದ ಕ್ರಾಂತಿಗಳು ( 8.4 ರಷ್ಯಾದ ಕ್ರಾಂತಿ – 1917) ಇತಿಹಾಸ ನೋಟ್ಸ್ | Rashya Kranti History Notes

ಪ್ರಥಮ ಪಿ.ಯು.ಸಿ ಪ್ರಪಂಚದ ಕ್ರಾಂತಿಗಳು ( 8.4 ರಷ್ಯಾದ ಕ್ರಾಂತಿ – 1917) ಇತಿಹಾಸ ನೋಟ್ಸ್, 1st Puc Rashya Kranti History Notes‌ Question Answer in Kannada Medium Kseeb Solution For Class 11 Chapter 8 Notes The Russian Revolution 1917 Notes Karnataka Rashyada Kranti 1917 Notes Pdf

 

8.4 ರಷ್ಯಾದ ಕ್ರಾಂತಿ – 1917

Rashya Kranti History Notes

Rashya Kranti History Notes Pdf

1. ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ .

1. ಜಾರ್ ದೊರೆಗಳು ಯಾವ ತತ್ವ ಸಿದ್ಧಾಂತದ ಮೇಲೆ ರಷ್ಯಾದಲ್ಲಿ ಆಳ್ವಿಕೆ ನಡೆಸುತ್ತಿದ್ದರು ?

‘ ದೈವದತ್ತ ಸಿದ್ಧಾಂತ ‘ ತತ್ವದ ಮೇಲೆ ರಾಜ್ಯದ ಆಳ್ವಿಕೆ ನಡೆಸುತ್ತಿದ್ದರು .

2. ರೂಸಿಕರಣ ನೀತಿಯನ್ನು ಪರಿಚಯಿಸಿದವರು ಯಾರು ?

3 ನೇ ಅಲೆಕ್ಸಾಂಡರನು ಪರಿಚಯಿಸಿದನು . 2 ನೇ ನಿಕೊಲಸನು ಮುಂದುವರೆಸಿದನು .

3. ‘ ಪೂರ್ ಘೋರ್ ‘ ಕೃತಿಯ ಕರ್ತೃ ಯಾರು ?

ಮ್ಯೂಡರ್ ದೋಸ್ಕೋ ವೆಸ್ಕಿ

4. ‘ ಫಾದರ್ ಆಡ್ ಸನ್ಸ್ ‘ ಕೃತಿಯನ್ನು ಬರೆದವರು ಯಾರು ?

ತರ್ಗಿನೆವ್

5. ರಷ್ಯಾಕ್ರಾಂತಿಯು ಯಾವ ತತ್ವವನ್ನು ಪ್ರತಿಪಾದಿಸಿತು ?

ಸಮಾಜವಾದಿ ತತ್ವವನ್ನು ಪ್ರತಿಪಾದಿಸಿತು .

6. ಕ್ರಾಂತಿಯ ಕಾಲದಲ್ಲಿ ರಷ್ಯವನ್ನು ಆಳುತ್ತಿದ್ದ ಜಾರ್ ಯಾರು ?

ಜಾರ್ 2 ನೇ ನಿಕೋಲಸ್

7. ಕ್ರಾಂತಿಯ ಕಾಲದಲ್ಲಿ ರಷ್ಯವನ್ನು ಆಳುತ್ತಿದ್ದ ಮನೆತನ ಯಾವುದು ?

ರೋಮನೋವ್

8. ಜಾರ್ 2 ನೇ ನಿಕೋಲಸ್‌ನ ರಾಣಿಯನ್ನು ಹೆಸರಿಸಿ .

ರಾಣಿ ಅಲೆಕ್ಸಾಂಡ್ರಾ

9. ಜಾರ್ 2 ನೇ ನಿಕೋಲನ ಆಡಳಿತದ ಮೇಲೆ ಪ್ರಭಾವ ಬೀರಿದ ಸನ್ಯಾಸಿ ಯಾರು ?

ಸನ್ಯಾಸಿ ರಾಸ್ ಪುಟಿನ್

10. ರಕ್ತಸಿಕ್ತ ರವಿವಾರ ‘ ಘಟನೆಯು ಯಾವಾಗ ನಡೆಯಿತು ?

1905 ಜನವರಿ 22 ರಂದು

11.1905 ರಲ್ಲಿ ರಷ್ಯಾವನ್ನು ಯಾವ ರಾಷ್ಟ್ರ ಸೋಲಿಸಿತು ?

ಜಪಾನ್

12. ಮೆನ್ಸ್‌ವಿಕ್ ಪಕ್ಷದ ನಾಯಕ ಯಾರು ?

ಅಲೆಕ್ಸಾಂಡರ್ ಕೆರೆನ್ಸ್ಕಿ .

13. ಲೆನಿನನು ಯಾವ ಪಕ್ಷದ ಮುಖಂಡರಾಗಿದ್ದರು ?

ತೀವ್ರವಾದಿಗಳೆನಿಸಿದ ಬೋಲ್ಪವಿಕ್ಕ ಪಕ್ಷದ ಮುಖಂಡನಾಗಿದ್ದನು .

14. ರಷ್ಯಾದಲ್ಲಿ ತಾತ್ಕಾಲಿಕ ಸರ್ಕಾರ ಯಾರ ನಾಯಕತ್ವದಲ್ಲಿ ಸ್ಥಾಪನೆಯಾಯಿತು?

ಅಲೆಕ್ಸಾಂಡರ್ ಕರೆನ್ಸ್ಕಿ ನಾಯಕತ್ವದಲ್ಲಿ ಸ್ಥಾಪನೆಯಾಯಿತು .

15. ಎನ್.ಇ.ಪಿ – ವಿಸ್ತರಿಸಿ .

‘ ಹೊಸ ಆರ್ಥಿಕ ನೀತಿ

16. ಯು.ಎಸ್.ಎಸ್.ಆರ್.ನ್ನು ವಿಸ್ತರಿಸಿ .

“ ಯೂನಿಯನ್ ಆಫ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ”

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ರಷ್ಯಾದ ಸಮಾಜದಲ್ಲಿದ್ದ ಎರಡು ವರ್ಗಗಳನ್ನು ಹೆಸರಿಸಿ .

1 ) ಸವಲತ್ತಿನ ನಗರ 2 ) ಸವಲತ್ತಿಲ್ಲದ ವರ್ಗ

2 ) ರೂಸೀಕರಣ ನೀತಿಯ ಘೋಷಣೆ ಯಾವುದು ?

ರಷ್ಯಾಕ್ಕೆ ಒಂದು ರಾಷ್ಟ್ರ , ಒಂದು ಭಾಷೆ , ಒಂದು ಚರ್ಚ್ ಮತ್ತು ಒಬ್ಬ ಜಾರ್ ; ಎಂಬುದು ರೂಸೀಕರಣ ನೀತಿಯ ಘೋಷಣೆಯಾಗಿತ್ತು .

3 ) ರಷ್ಯಾ ಕ್ರಾಂತಿಗೆ ಪ್ರೇರಣೆ ನೀಡಿದ ಇಬ್ಬರು ಬುದ್ಧಿಜೀವಿಗಳನ್ನು ಹೆಸರಿಸಿ .

1 ) ಲಿಯೋಟಾಲ್‌ಸ್ಟಾಯ್ 2 ) ಮಾಕ್ಸಿಂಗಾರ್ಕಿ

4 ) ‘ ಲಿಯೋಟಾಲ್‌ಸ್ಟಾಯ್’ನ ಎರಡು ಕೃತಿಗಳನ್ನು ಹೆಸರಿಸಿ .

1 ವಾರ್ ಅಂಡ್ ಪೀಸ್ 2 ) ಅನ್ನಾ ಕರೆನಿನ

5 ) ಮ್ಯಾಕ್ಸಿಂ ಗಾರ್ಕಿ ಯಾರು ? ಅವರ ಕೃತಿಯನ್ನು ಹೆಸರಿಸಿ .

ಮಾಕ್ಸಿಂ ಗಾರ್ಕಿ ‘ ರಷ್ಯದಲ್ಲಿನ ಒಬ್ಬ ಮಹಾನ್ ಬುದ್ಧಿಜೀವಿ , ಕೃತಿಗಳೆಂದರೆ – ‘ಇವರ ಪ್ರಮುಖ * ಮದರ್ ಮತ್ತು ಚಿಲ್ಟನ್ ಆಫ್ ದಿ ಸನ್ .

6 ) ಮಾರ್ಕ್ಸ್‌ವಾದದ ಪ್ರಭಾವಕ್ಕೆ ಒಳಗಾದ ರಷ್ಯಾದ ಬುದ್ಧಿಜೀವಿಗಳನ್ನು ಹೆಸರಿಸಿ

ಲೆನಿನ್ , ಕೌತ್ಸಕೀ ಮತ್ತು ಟ್ರಾಟ್ಸಕಿ ,

7 ) ಕಾರ್ಲ್ ಮಾರ್ಕ್ಸ್ ಯಾರು ? ಅವನ ಎರಡು ಕೃತಿಗಳನ್ನು ಹೆಸರಿಸಿ .

ಕಾರ್ಲ್‌ಮಾರ್ಕ್ಸ್ ಒಬ್ಬ ಜರ್ಮನ್ ತತ್ವಶಾಸ್ತ್ರಜ್ಞ ಮತ್ತು ಕ್ರಾಂತಿಕಾರಿ ಸಮಾಜವಾದಿ , ಇವನ ಕೃತಿಗಳೆಂದರೆ 1 ) ಕಮ್ಯುನಿಸ್ಟ್ ಮ್ಯಾನಿಫೆಸ್ಟ್ 2 ) ದಾಸ್ ಕ್ಯಾಪಿಟಲ್

8 ) ಕಾರ್ಲ್‌ಮಾರ್ಕ್ಸ್ ವಿಶ್ವ ಕಾರ್ಮಿಕರಿಗೆ ಏನೆಂದು ಕರೆಕೊಟ್ಟನು ?

“ ವಿಶ್ವ ಕಾರ್ಮಿಕರೇ , ಒಂದಾಗಿ , ನೀವು ನಿಮ್ಮ ಗುಲಾಮಗಿರಿಯ ಬಂಧನದ ಸಂಕೋಲೆಗಳನ್ನು ಹೊರತು ಬೇರೆನನ್ನು ಕಳೆದುಕೊಳ್ಳುವುದಿಲ್ಲ ” ಎಂದು ಕಾರ್ಲ್‌ಮಾರ್ಕ್ಸ್ ವಿಶ್ವಕಾರ್ಮಿಕರಿಗೆ ಕರೆಕೊಟ್ಟನು .

9 ) “ ರಕ್ತ ಸಿಕ್ತ ರವಿವಾರ ” ಎಂದರೇನು ?

1905 ರ ಜನವರಿ 22 ರಂದು ಭಾನುವಾರದಂದು ಫಾದರ್‌ಗ್ಯಾಪನ್ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಕಾರ್ಮಿಕರು ಸೇಂಟ್‌ಪೀಟರ್ ಬರ್ಗನಲ್ಲಿ ಜಾರ್‌ನನ್ನು ಭೇಟಿ ಮಾಡಿ , ಅವನಲ್ಲಿ ತಮ್ಮ ಕುಂದುಕೊರತೆಗಳನ್ನು ತೋಡಿಕೊಳ್ಳಲು ಹೊರಟರು . ಆದರೆ ಅವರ ಮೇಲೆ ಸೇನೆಯು ಧಾಳಿ ನಡೆಸಿ , ಅವರಲ್ಲಿ ಅನೇಕರನ್ನು ನಿರ್ದಯವಾಗಿ ಕೊಂದು ಹಾಕಿತು . ಇದನ್ನು ರಕ್ತ ಸಿಕ್ಕ ರವಿವಾರ ‘ ಎಂದು ಕರೆಯಲಾಗಿದೆ .

10 ) ರಷ್ಯಾ ಕ್ರಾಂತಿಯ ಸಮಯದಲ್ಲಿದ್ದ ಎರಡು ಪಕ್ಷಗಳನ್ನು ಹೆಸರಿಸಿ .

1 ) ಬೋಲ್ಪವಿಕ್ಸ್ – ತೀವ್ರವಾದಿ ಪಕ್ಷ 2 ) ಮೆನ್ನವಿಕ್ – ಸೌಮ್ಯವಾದಿ ಪಕ್ಷ

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ರಷ್ಯಾ ಕ್ರಾಂತಿಗೆ ಕಾರಣವಾದ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ವಿವರಿಸಿ .

ರಷ್ಯಾ ಕ್ರಾಂತಿಗೆ ಕಾರಣವಾದ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳೆಂದರೆ ಅಂದಿನ ರಷ್ಯಾ ಸಮಾಜವು ಎರಡು ವರ್ಗಗಳಾಗಿ ವಿಭಜನೆಗೊಂಡಿತು

1. ಸವಲತ್ತಿಲ್ಲದ ವರ್ಗ 2. ಸವಲತ್ತಿನ ವರ್ಗ

ಸವಲತ್ತಿನ ವರ್ಗ ಎಂದರೆ – ರಾಜಪರಿವಾರದವರನ್ನು , ಭೂಮಾಲೀಕರನ್ನು ಮತ್ತು ಬಂಡವಾಳಗಾರರನ್ನು ( ಕಾರ್ಖಾನೆಯ ಮಾಲಿಕ ) ಒಳಗೊಂಡಿತ್ತು . ಇದರಲ್ಲಿ ಶ್ರೀಮಂತರಾಗಿದ್ದು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದರು .

ಸವಲತ್ತಿಲ್ಲದ ವರ್ಗವೆಂದರೆ – ರೈತರು , ಕಾರ್ಮಿಕರನ್ನು ಒಳಗೊಂಡಿದ್ದು ಬಹುಸಂಖ್ಯಾತರಾಗಿದ್ದರು . ಇವರು ಬಡತನದಲ್ಲಿ ಬದುಕುತ್ತಿದ್ದು , ತೀವ್ರ ತೋಷ – ಒಳಗಾಗಿದ್ದರು . ಕಾರ್ಮಿಕರು ಕಡಿಮೆ ಕೂಲಿಗೆ ಹೆಚ್ಚಿನ ಅವಧಿ ದುಡಿಯಬೇಕಾಗಿತ್ತು , ಅಪಾಯಕಾ ಹಾಗೂ ಅನಾರೋಗ್ಯಕರ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕಾಯಿತು , ಕಾರ್ಮಿಕರಿಗೆ ಸಂಭವಿಸಬಹುದಾದ ಅಪಘಾತ ಹಾಗೂ ಸಾವಿಗೆ ಯಾವುದೇ ಪರಿಹಾರ ಸಿಗುತ್ತಿರಲಿಲ್ಲ ಭೂಮಾಲೀಕರು ಕೈಗಾರಿಕಾದಾರರಾಗಿದ್ದುದರಿಂದ ಕೃಷಿಯನ್ನು ಕಡೆಗಣಿಸಿದ್ದರು . ಕೃಷಿ ಕಾರ್ಮಿಕರನ್ನು ಕೈಗಾರಿಕೆಗಳಲ್ಲಿ ದುಡಿಯುವಂತೆ ಒತ್ತಾಯಿಸಿದರು . ಇದರಿಂದಾಗಿ ಕೃಷಿ ಉತ್ಪನ್ನವು ಗಣನೀಯವಾಗಿ ಇಳಿಮುಖವಾಗಿಯಿತು . ಇದರ ಪರಿಣಾಮ ಹಣದುಬರ ಉಂಟಾಗಿ ಜನರು ಸಂಕಷ್ಟಕ್ಕೆ ದೂಡಲ್ಪಟ್ಟರು .

2 ) ರಷ್ಯಾಕ್ರಾಂತಿಯಲ್ಲಿ ಬುದ್ಧಿಜೀವಿಗಳ ಪಾತ್ರವನ್ನು ಕುರಿತು ಬರೆಯಿರಿ .

ರಷ್ಯಾ ಕ್ರಾಂತಿಯಲ್ಲಿ ಬುದ್ಧಿಜೀವಿಗಳ ಪಾತ್ರ ಹಿರಿದುದಾಗಿದೆ . ಪ್ರಮುಖ ಸಾಹಿತಿಗಳಾದ ಲಿಯೋಟಾಲ್‌ಸ್ಟಯ್ ರವರು ತಮ್ಮ ಕೃತಿ “ ವಾರ್ ಅಂಡ್ ಪೀಸ್ ಮತ್ತು ‘ ಅನ್ನಕರೆನಿನ ‘ ‘ ಮ್ಯುಡಲ್ ರೋಸೋ ವೆರವರು ರಚಿಸಿದ ‘ ಹೊರ್‌ಪ್ಲೆಕ್ ‘ ಮಾಕ್ಸಿಂ ಗಾರ್ಕಿರವರು ರಚಿಸಿದ ‘ ಮದರ್ ಮತ್ತು ಚಿಲ್ಲನ್ ಆಫ್ ದಿ ಸನ್ ‘ , ` ತರ್ಗಿನವ ಅವರ ‘ ಫಾದರ್ ಅಂಡ್ ಸನ್ಸ್ , ರಷ್ಯನ್ನರಲ್ಲಿ ಜಾಗೃತಿಯ ಹೊಸ ಪ್ರಜ್ಞೆಯನ್ನು ಮೂಡಿಸಿದವು . ಜೀವನದ ಅರ್ಥವನ್ನು ಕುರಿತು ಆಳವಾಗಿ ಯೋಚಿಸಲು ಪ್ರೇರೇಪಿಸಿದವು . ರಷ್ಯನ್ ಬುದ್ಧಿ ಜೀವಿಗಳು ಮಾರ್ಕ್ಸವಾದದ ಸೆಳೆತಕ್ಕೊಳಗಾದರು . ಕಾರ್ಲ್‌ಮಾರ್ಕ್ಸ್‌ನ ಕೃತಿಗಳು ‘ ಕಮ್ಯುನಿಷ್‌ ಮ್ಯಾನಿಫೆಸ್ಟ್ ಮತ್ತು ‘ ದಾಸ್ ಕ್ಯಾಪಿಟಲ್ ‘ ಬರವಣಿಗೆಗಳು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಆಧಾರಿತ ಸಮಾಜವಾದದ ತತ್ವಗಳನ್ನು ಎತ್ತಿ ಹಿಡಿದವು . ಕಾರ್ಲ್‌ಮಾರ್ಕ್ಸ್‌ನು ಕೊಟ್ಟ ಕರೆಯಿಂದಾಗಿ ಸಾವಿರಾರು ಯುವಕ – ಯುವತಿಯರಲ್ಲಿ ಸ್ಫೂರ್ತಿ ತಂದಿತು . ಲೆನಿನ್ ಕೌತ್ಸಕಿ ಮತ್ತು ಟ್ರಾಟ್ಯಕಿ- ಮಾರ್ಕ್ಸ್‌ನ ಬರಹಗಳ ಸೆಳೆತಕ್ಕೆ ಒಳಗಾದರು .

3 ) ರಷ್ಯಾ ಕ್ರಾಂತಿಯ ಗತಿಯನ್ನು ವಿವರಿಸಿ .

ರಷ್ಯಾದ ದುಡಿಯುವ ವರ್ಗಪು ಮಾರ್ಕ್ವಾದದಿಂದ ಪ್ರಭಾವಿತಗೊಂಡಿತ್ತು . ಅವರು “ ಕಾರ್ಮಿಕರ ಸಮಾಜವಾದಿ ಪ್ರಜಾಸತ್ತಾತ್ಮಕ ಪಕ್ಷವನ್ನು ಲಘತಿಸಿದರು . ತೀವ್ರವಾದಿಗಳನ್ನು ‘ ದೊಡ್ಡವಿಕ್ಕರು ‘ , ಎಂಬುದಾಗಿ ಹಾಗೂ ಅಲೆಕ್ಸಾಂಡರ್ ಕರೆಸ 1903 ರಲ್ಲಿ ಈ ಪಕ್ಷವು ತಾತ್ವಿಕ ಹಿನ್ನಲೆಯದ ಇವಾಗವಾಯಿತು . ಅವಳ ಕತ್ತ ನಾಯಕತ್ವದವರನ್ನು ಸೌಮ್ಯವಾದಿಗಳೆಂದು ದುನ್ನವಿಕ್ಕಾರೆಂತಲೂ ಕರೆಯಲಾಯಿತು . 1915 ರಲ್ಲಿ ರಷ್ಯವು ಮೊದಲ ಜಾಗತಿಕ ಯುದ್ಧದಲ್ಲಿ ಸೋತ ನಂತರ ಕ್ರಾಂತಿಕಾರಿಗಳು ಜಾರ್ ಪ್ರಭುತ್ವವನ್ನು ಕಿತ್ತೊಗೆಯಲು ಪಟ್ಟುಹಿಡಿದರು . 1914 ರಲ್ಲಿ ರಾಸಾಟಿನ್ ಸನ್ಯಾಸಿಯನ್ನು ಕೊಲ್ಲಲಾಯಿತು . ಯುದ್ದಕ್ಕೂ ಮೊದಲೇ ಸಂಸತ್ತಿನಲ್ಲಿ ( ಡ್ಯೂಮದಲ್ಲಿ ) ಸಂವಿಧಾನಿಕ ಸುಧಾರಣೆಗಾಗಿ ಬೇಡಿಕೆ ಆರಂಭವಾಗಿದ್ದವು . ಹಾರನು ಸಂಸತ್ತನ್ನು ವಿಸರ್ಜಿಸಿ ಅನೇಕ ಸದಸ್ಯರನ್ನು ಬಂಧನಕ್ಕೊಳಪಡಿಸಿದನು .

ಆಡಳಿತದಲ್ಲಿನ ಉದಾಸೀನತೆ ಆಹಾರ ಸರಬರಾಜಿನ ಮೇಲೆ ದುಷ್ಪರಿಣಾಮ ಬೀರಿತು . ಸೈನಿಕರಿಗೆ , ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಲು ಆದೇಶ ನೀಡಲಾಯಿತಾದರೂ ಅವರು ನೀರಾಕರಿಸಿ ಕಾರ್ಮಿಕರಿಗೆ ತಮ್ಮ ಐಕ್ಯಮತ್ಯವನ್ನು ವ್ಯಕ್ತಪಡಿಸಿದರು . ಇದು ಜಾರ 2 ನೇ ನಿಕೋಲಸನಿಗೆ ಅವಮಾನವಾಗಿತ್ತು . ಅಂತಿಮವಾಗಿ ಮಾರ್ಚ್ 15 ರಂದು ಜಾರನು ಸಿಂಹಾಸನವನ್ನು ತ್ಯಜಿಸಬೇಕಾಯಿತು . ಜಾರನ ಪದಚ್ಯುತಿಯ ನಂತರ ರಷ್ಯಾದಲ್ಲಿ ಅಲೆಗ್ಲಾಂಡರ್‌ ಕರೆನ್ಸ್ತಿಯ ತಾತ್ಕಾಲಿಕ ಸರ್ಕಾರ ಸ್ಥಾಪನೆಯಾಯಿತು . ಇದನ್ನು ಮೆನ್ನವಿಕ್ ಕ್ರಾಂತಿ ಅಥವಾ ‘ ಮಾರ್ಚ್‌ಕ್ರಾಂತಿ ‘ ಎಂದು ಕರೆಯಲಾಗಿದೆ . ಈ ಸರ್ಕಾರವು ವಾಕ್ ಸ್ವಾತಂತ್ರ್ಯ ಸಂಘಟನಾ ಸ್ವಾತಂತ್ರ್ಯ ನೀಡಿ ಧಾರ್ಮಿಕ ವಿಚಾರಗಳಿಗೆ ಪ್ರೋತ್ಸಾಹ ನೀಡಿತು . ಆದರೆ ರಷ್ಯನ್ನರ ಆಶೋತ್ತರಗಳಾದ ಭೂಮಿ , ಶಾಂತಿ ಮತ್ತು ಭದ್ರತೆ ನೀಡಲಾಗಲಿಲ್ಲವಾದ್ದರಿಂದ ಅಧಿಕಾರದಲ್ಲಿ ವಿಫಲವಾಯಿತು . ಅಕ್ಟೋಬರ್ 15 , 1917 ರಂದು ಲೆನಿನ್ ನೇತೃತ್ವದ ಬೋಲ್ಪವಿಕರು , ಮೆನ್ನವಿಕ್ ಸರ್ಕಾರವನ್ನು ಪ್ರತಿಭಟಿಸಿ ಪದಚ್ಯುತಿಗೊಳಿಸಿದರು . ಇದನ್ನು ‘ ಅಕ್ಟೋಬರ್‌ ಕ್ರಾಂತಿ ‘ ಅಥವಾ ಬೋಲ್ಪವಿಕ್ ಕ್ರಾಂತಿ ಎಂದು ಕರೆಯಲಾಗಿದೆ . ನಂತರ ಲೆನಿನ್ ಯೂನಿಯನ್ ಆಫ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ( ಯು.ಎಸ್.ಎಸ್.ಆರ್ ) ಸ್ಥಾಪಿಸಿ , ರಷ್ಯಾ ಗಣರಾಜ್ಯವನ್ನು ಒಟ್ಟುಗೂಡಿಸಿ ಅದರ ಅಧ್ಯಕ್ಷನಾದನು .

4 ) ರಷ್ಯಾ ಕ್ರಾಂತಿಯಲ್ಲಿ ಲೆನಿನ್‌ನ ಪಾತ್ರವನ್ನು ವಿವರಿಸಿ .

ಲೆನಿನ್ 1903 ರಲ್ಲಿ ತೀವ್ರಗಾಮಿ ಕ್ರಾಂತಿಕಾರಿ ಬಣದ ಬೋಲ್ಪವಿಕ್ ಪಕ್ಷದ ನಾಯಕನಾದನು . ಜಾರ್‌ ಪ್ರಭುತ್ವದ ವಿರುದ್ಧ ಹೋರಾಟವನ್ನು ಮುಂದುವರಿಸಿದನು . 1917 ರಲ್ಲಿ ಅಕ್ಟೋಬರ್ 25 ರಂದು ಕೆರೆನ್ ನೇತೃತ್ವದ ಮೆನ್ನವಿಕ್ ಸರ್ಕಾರವನ್ನು 203

ಸ್ಪಧಿ ಪ್ಯಾಕೇಟ್ ಪದಚ್ಯುತಿಗೊಳಿಸಿದನು . ಅವನ ಸೈನಿಕರಿಗೆ , ಬಡ ರೈತರಿಗೆ ಕಾರ್ಮಿಕರಿಗೆ ಭೂಮಿ ಆಹಾರ , ಶಾಂತಿ ಒದಗಿಸುವ ಆಶ್ವಾಸನೆ ಇತ್ತನು . 1917 ರಲ್ಲಿ ಬೆಸ್ಟ್ ಲಿಟೋಸ್ಕ ಒಪ್ಪಂದದ ಮೂಲಕ ಜಾಗತಿಕ ಯುದ್ಧದಿಂದ ಹಿಂದೆ ಸರಿದನು . 1918 ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಿದನು . ಇವನು ಹೊಸ ಆರ್ಥಿಕ ನೀತಿಯನ್ನು ( ಎನ್.ಇ.ಪಿ ) ಯನ್ನು 1921 ರ ಮಾರ್ಚ್‌ನಲ್ಲಿ ಜಾರಿಗೆ ತಂದನು ಯೂನಿಯನ್ ಆಫ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ( ಯು.ಎಸ್.ಎಸ್.ಆರ್ ) 1922 ರ ಡಿಸೆಂಬರ್ 30 ರಂದು ರೂಪುಗೊಂಡಿತು . ನಿರುದ್ಯೋಗ ಸಮಸ್ಯೆ , ಆಹಾರದ ಕೊರತೆ ಮತ್ತು ಕುಂಠಿತಗೊಂಡ ಕೈಗಾರಿಕಾ ಬೆಳವಣಿಗೆ ಇವುಗಳನ್ನು ಯಶಸ್ವಿಯಾಗಿ ಪರಿಹರಿಸಿದನು . ವ್ಯಾಪಾರ , ವಾಣಿಜ್ಯ , ಸಂವಹನ ಮಾಧ್ಯಮ , ಕೈಗಾರಿಕೆಗಳು ಮತ್ತು ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದನು . ಈ ಹೊಸ ಸಿದ್ಧಾಂತವನ್ನು ವಿರೋಧಿಸಿದ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳು ರಷ್ಯಾದಲ್ಲಿ ಪ್ರತಿಕ್ರಾಂತಿ ಏಳುವಂತೆ ಪ್ರಚೋದನೆ ನೀಡಿದವು . ಲೆನಿನನು ಕೆಂಪು ಸೇನೆ ಮತ್ತು “ ಛೇಕಾ ‘ ಎಂಬ ರಹಸ್ಯ ಪೋಲಿಸ್ ಪಡೆಯ ನೆರವಿನಿಂದ ದೇಶಿಯ ಮತ್ತು ವಿದೇಶಿಯ ಅಪಾಯಕಾರಿ ಶಕ್ತಿಗಳನ್ನು ಯಶಸ್ವಿಯಾಗಿ ನಿಗ್ರಹಿಸಿದನು . 1 .

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1. ರಷ್ಯಾಕ್ರಾಂತಿಯ ಕಾರಣಗಳು ಹಾಗೂ ಪರಿಣಾಮಗಳನ್ನು ವಿವರಿಸಿ .

ರಷ್ಯಾ ಕ್ರಾಂತಿಗೆ ಪ್ರಮುಖ ಕಾರಣಗಳೆಂದರೆ –

1 ) ರಾಜಕೀಯ ಕಾರಣಗಳು

( 2 ) ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು

3 ) ರೂಸೀಕರಣ

4 ) ಬುದ್ಧಿಜೀವಿಗಳ , ಸಾಹಿತಿಗಳ ಪ್ರಭಾವ

5 ) ರಕ್ತ – ಸಿಕ್ಕ ರವಿವಾರ

6 ) ಸೈನಿಕ ಕಾರಣಗಳು ಹಾಗೂ ಕ್ರಾಂತಿಯ ಗತಿಯು ರಷ್ಯಾಕ್ರಾಂತಿಗೆ ಕಾರಣವಾಯಿತು .

1 ) ರಾಜಕೀಯ ಕಾರಣಗಳು : ಜಾರ್ ದೊರೆಗಳು ನಿರಂಕುಶ ಪ್ರಭುಗಳು ಹಾಗೂ ಅಸಮರ್ಥರು ಆಗಿದ್ದರು . ಆಡಳಿತದ ಕೇಂದ್ರಿಕರಣ ಹಾಗೂ ತೀವ್ರ ಭ್ರಷ್ಟಾಚಾರವು ಜನಜೀವನದ ಮೇಲೆ ಪರಿಣಾಮ ಬೀರಿತು . ಸಂಸತ್ತು ( ಡ್ಯೂಮ್ ) ಹೆಸರಿಗಾಗಿ ಮಾತ್ರ ಇದ್ದು ಜಾರನು ಸಮಾಲೋಚನೆ ನಡೆಸುತ್ತಿರಲಿಲ್ಲ . ರಾಣಿ ಅಲೆಕ್ಸಾಂಡ್ರಾ ಹಾಗು ಕುಖ್ಯಾತ ಸನ್ಯಾಸಿ ರಾಸ್‌ಪುಟಿನ್‌ನವರ ಹಸ್ತಕ್ಷೇಪದಿಂದ ಜನ ತುಂಬಾ ತೊಂದರೆಗೆ ಒಳಗಾಗಿದ್ದರು . ಜನರು ಆಡಳಿತದ ಬಗ್ಗೆ ತೋರಿಸಿದ ಪ್ರತಿಕ್ರಿಯೆ ಕ್ರಾಂತಿಗೆ ಕಾರಣವಾಯಿತು .

2 ) ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು : ಸವಲತ್ತಿಲ್ಲದ ವರ್ಗ , ಸವಲತ್ತಿನ ವರ್ಗದವರಿಂದ ತೀವ್ರವಾಗಿ ಶೋಷಣೆಗೆ ಒಳಗಾಗಿದ್ದರು . ಕೃಷಿ ಪ್ರಧಾನವಾಗಿದ್ದರು .

ಶ್ರೀಮಂತರು ಕೈಗಾರಿಕೆಗಳ ಬಗ್ಗೆ ತೋರಿದ ಒಲವು ಹಾಗೂ ರೈತರನ್ನು ಬಲವಂತವಾಗಿ ಕಾರ್ಮಿಕರನ್ನಾಗಿ ಮಾಡಿದುದು ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸಿದಂ , ಕೃಷಿ ಉತ್ಪನ್ನವು ಗಣನೀಯವಾಗಿ ಇಳಿಮುಖವಾಯಿತು . ಇದರಿಂದ ಹಣದುಬ್ಬರ ಉಂಟಾಗಿ ಜನ ಸಂಕಷ್ಟಕ್ಕೆ 04.03 ಸೀುಕಿದರು .

3 ) ಕರಣ : ‘ ಒಂದು ರಾಷ್ಟ್ರ , ಒಂದು ಭಾಷೆ , ಒಂದು ಚರ್ಚ್ ಮತ್ತು ಒಬ್ಬ ಜಾರ್ ” ಎಂಬುದು ರಷ್ಯನ್ನರ ಘೋಷಣೆಯಾಗಿದ್ದು ಪೋಲೆಂಡ್ , ಜರ್ಮನ್ ಯಹೂದಿಯವರನ್ನು ಬಲವಂತವಾಗಿ ಈ ನೀತಿಗೆ ಅಧೀನರನ್ನಾಗಿಸಿದ್ದು ರೂಸೀಕರಣಕ್ಕೆ ಕಾರಣವಾಯಿತು . 3 ನೇ ಅಲೆಕ್ಸಾಂಡರ್ ಹಾಗೂ 2 ನೇ ನಿಕೋಲಸ್‌ನ ಈ ನೀತಿ ಅವರನ್ನು ರೊಚ್ಚಿಗೆಬ್ಬಿಸಿ ರಷ್ಯಾ ಕ್ರಾಂತಿಗೆ ಕಾರಣವಾಯಿತು .

4 ) ರಷ್ಯಾಕ್ರಾಂತಿಯಲ್ಲಿ ಬುದ್ಧಿಜೀವಿಗಳು ಹಾಗೂ ಅವರ ಸಾಹಿತ್ಯ ಪ್ರದರ್ಶನ ಜನರಲ್ಲಿ ಹೊಸ ತಿರುವು ತಂದಿತು . ಲಿಯೋಟಾಲ್‌ಸ್ಟಾಯ್‌ರವರ ‘ ವಾರ್ ಅಂಡ್ ಪೀಸ್ ‘ ಮ್ಯಾಕ್ಸಿಂಗಾರ್ಕಿಯವರ ಕಾರ್ಲ್‌ಮಾರ್ಕ್ಸ್‌ನ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಹಾಗು ‘ ದಾಸ್ ಕ್ಯಾಪಿಟಲ್ ‘ ಮುಖ್ಯವಾದವುಗಳಾಗಿವೆ .

5 ) ಜಾರ್‌ನ ಬಳಿ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದ ರೈತರನ್ನು , ಕಾರ್ಮಿಕರನ್ನು ನಿರ್ದಯವಾಗಿ ಕೊಂದು ಹಾಕಿದ್ದು ರಷ್ಯಾಕ್ರಾಂತಿಗೆ ಕಾರಣವಾಯಿತು . ಇದು ರಕ್ತಸಿಕ್ತ ರವಿವಾರವೆಂದೇ ಪ್ರಖ್ಯಾತವಾಯಿತು .

6 ) 1905 ರಲ್ಲಿ ಪುಟ್ಟ ರಾಷ್ಟ್ರವಾದ ಜಪಾನಿನ ಎದುರು ರಷ್ಯಾದ ಸೋಲು ಜಾರ್ ವಿರುದ್ಧ ರಷ್ಯನ್ನರಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯಿತು .

7 ) ಕ್ರಾಂತಿಯಗತ ತೀವ್ರಗೊಂಡಿದ್ದು ಅಂದರೆ ದುಡಿಯುವ ವರ್ಗವು ಮಾರ್ಕ್ಸ್‌ವಾದದಿಂದ ಪ್ರಭಾವಿತಗೊಂಡು ಪ್ರಜಾಸತ್ತಾತ್ಮಕ ಪಕ್ಷವನ್ನು ಸಂಘಟಿಸಿದುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದು . ಜಾರನನ್ನು ಪದಚ್ಯುತಿ ಗೊಳಿಸಿ ಮೊದಲು ಅಲೆಕ್ಸಾಂಡರ್ ಕೆರೆನ್‌ಸ್ಕಿ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಿದರು . ಇಲ್ಲಿಯೂ ರಷ್ಯನ್ನರ ಆಶೋತ್ತರಗಳು ಈಡೇರದಿದ್ದಾಗ ಲೆನಿನ್ ತೀವ್ರವಾದಿ ಪಕ್ಷ ಬೋಲ್ಪಸ್ಕರು ನಾಯಕನಾಗಿ ಬಂದನು .‌

FAQ

1. ಜಾರ್ 2 ನೇ ನಿಕೋಲಸ್‌ನ ರಾಣಿಯನ್ನು ಹೆಸರಿಸಿ .

ರಾಣಿ ಅಲೆಕ್ಸಾಂಡ್ರಾ

2. ರಕ್ತಸಿಕ್ತ ರವಿವಾರ ‘ ಘಟನೆಯು ಯಾವಾಗ ನಡೆಯಿತು ?

1905 ಜನವರಿ 22 ರಂದು

ಇತರೆ ವಿಷಯಗಳು :

1st PUC History Notes

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *

rtgh