ಪ್ರಥಮ ಪಿ.ಯು.ಸಿ ಅಧ್ಯಾಯ 8.2 ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ನೋಟ್ಸ್, 1st Puc America Swatantra Sangrama Notes Question Answer Kannada Medium Kseeb Solution For Class 11 Chapter 8 Notes The American War of Independence Notes in Kannada 2023
8.2 ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ ನೋಟ್ಸ್
1 . ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಇಂಗ್ಲೆಂಡಿನ ಅರಸ ಯಾರು ?
3 ನೇ ಜಾರ್ಜ್
2 .ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮದ ಘೋಷಣೆ ಸಿದ್ಧಪಡಿಸಿದವರು ಯಾರು ?
ಜಾರ್ಜ್‌ವಾಷಿಂಗ್‌ಟನ್ ವಸಾಹತುಗಳ ಸೈನ್ಯದ ಮುಖ್ಯಸ್ಥ
3. ಅಮೆರಿಕ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ ಯಾವುದು ?
1776 .
4 . ವಸಾಹತು ಸೇನಾ ಮುಖ್ಯಸ್ಥರು ಯಾರು ?
ಜಾರ್ಜ್ ವಾಷಿಂಗ್ಟನ್
5. ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಥಮ ಅಧ್ಯಕ್ಷ ಯಾರು ?
ಜಾರ್ಜ್ ವಾಷಿಂಗ್ಟನ್
6. ಯಾವ ವರ್ಷ ಅಮೆರಿಕಾ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು ?
1787 ರಲ್ಲಿ
Prapanchada Krantigalu Question Answer
1 ) ಅಮೆರಿಕದಲ್ಲಿನ ಬ್ರಿಟಿಷರ ಯಾವುದಾದರೂ ಎರಡು ವಸಾಹತುಗಳನ್ನು ಹೆಸರಿಸಿ .
1 ) ನ್ಯೂಯಾರ್ಕ್ 2 ) ವರ್ಜಿನಿಯಾ
2 ) ‘ ಬೋಸ್ಟನ್ ಟೀ ಪಾರ್ಟಿ ‘ ಎಂದರೇನು ?
1773 ರಲ್ಲಿ ಚಹಪಡಿ ತುಂಬಿದ ಪೆಟ್ಟಿಗೆಗಳೊಂದಿಗೆ ಹಡಗು ‘ ಬೋಸ್ಟನ್ ‘ ಬಂದರಿಗೆ ಬಂದಾಗ ‘ ಪಾಲ್‌ರೇವರ್ ‘ ನೇತೃತ್ವದಲ್ಲಿ ವಸಾಹತುಗಾರರು ರೆಡ್ ಇಂಡಿಯನ್ನರ ವೇಷದಲ್ಲಿ ಹಡಗನ್ನು ಪ್ರವೇಶಿಸಿ ಅಲ್ಲಿದ್ದ ಚಹಪುಡಿ ಪೆಟ್ಟಿಗೆಗಳನ್ನು ಸಮುದ್ರಕ್ಕೆಸೆದರು . ಈ ಘಟನೆಯನ್ನು ‘ ಬೋಸ್ಟನ್ ಟೀಪಾರ್ಟಿ ‘ ಎನ್ನುವರು .
3 ) ನೌಕಾ ಕಾಯಿದೆಯ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿ .
ನೌಕಾ ಕಾಯಿದೆಯ ಪ್ರಮುಖ ಎರಡು ಅಂಶಗಳೆಂದರೆ
1) ಅಮೇರಿಕಾ ಉತಾಪಿಸುವ ಕಚ್ಚಾವಸ್ತುಗಳು ಕಾಫಿ , ಹತ್ತಿ , ತಂಬಾಕು ಮುಂತಾದವು ಇಂಗ್ಲೆಂಡಿಗೆ ಮಾತ್ರವೇ ರಫ್ತು ಮಾಡಬೇಕು .
2 ) .ವಸಾಹತುಗಾರರ ಆಗತ್ಯ ವಸ್ತುಗಳಾದ ಹತ್ತಿ , ಲಿನನ್ , ಬಟ್ಟೆ , ಗಾಜು , ಸಕ್ಕರೆ , ` ಇತ್ಯಾದಿಗಳನ್ನು ಇಂಗ್ಲೆಂಡಿನಿಂದ ಮಾತ್ರ ಆಮದು ಮಾಡಿಕೊಳ್ಳಬೇಕು .
4) ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಪ್ರಭಾವ ಬೀರಿದ ಇಬ್ಬರು ತತ್ವಜ್ಞಾನಿಗಳನ್ನು ಹಸರಿಸಿ .
ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಪ್ರಭಾವ ಬೀರಿದ ಇಬ್ಬರು ತತ್ವಜ್ಞಾನಿಗಳೆಂದರೆ –
1 ) ಜಾನ್ ಆಡಮ್ಸ್
2 ) ರೋಜರ್ ವಿಲಿಯಂ
5 ) ಅಮೆರಿಕಾ ಸ್ವಾತಂತ್ರ್ಯ ಘೋಷಣೆಯನ್ನು ಯಾರು ಮತ್ತು ಯಾವ ವರ್ಷ ಸಿದ್ಧಪಡಿಸಿದರು ?
ಅಮೆರಿಕಾ ಸ್ವಾತಂತ್ರ್ಯ ಘೋಷಣೆಯನ್ನು 1776 ರ ಜುಲೈ 4 ರಂದು ಜಾರ್ಜ್ ವಾಷಿಂಗ್‌ಟನ್ ಸಿದ್ಧಪಡಿಸಿದರು .
6 ) ಇಂಗ್ಲೆಂಡ್ ವಸಾಹತುಗಳ ಮೇಲೆ ಹೇರಿದ ಯಾವುದಾದರೂ ಎರಡು ತೆರಿಗೆಗಳನ್ನು ಹೆಸರಿಸಿ .
ಇಂಗ್ಲೆಂಡ್ ವಸಾಹತುಗಳ ಮೇಲೆ ಹೇರಿದ ಎರಡು ತೆರಿಗೆಗಳೆಂದರೆ –
1 ) 1764 ರಲ್ಲಿ ಸಕ್ಕರೆ ಮತ್ತು ಕಾಕಂಬಿ ‘ ಕಾಯಿದೆಯಂತೆ ಸಕ್ಕರೆ ಮತ್ತು ಕಾಕಂಬಿ ಮೇಲೆ ಅಧಿಕ ತೆರಿಗೆ ವಿಧಿಸಿತು .
2 ) 1767 ರಲ್ಲಿ ‘ ಟೌನ್‌ಷೆಂಡ್ ‘ ಕಾಯಿದೆ ಜಾರಿಗೊಳಿಸಿತು . ಈ ಕಾಯಿದೆ ಗಾಜು , ಕಾಗದ , ಚಹ ಮೇಲೆ ಅಧಿಕ ತೆರಿಗೆ ವಿಧಿಸಿತು .
1 ) ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮಗಳನ್ನು ವಿವರಿಸಿ .
ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮಗಳೆಂದರೆ – ಅಮೆರಿಕಾ ಸಂಯುಕ್ತ ಸಂಸ್ಥಾನವೆಂಬ ಹೊಸ ರಾಷ್ಟ್ರವು ( ಯುಎಸ್‌ಎ ) ಅಸ್ತಿತ್ವಕ್ಕೆ ಬಂದಿತು . 1787 ರಲ್ಲಿ ಸಂಯುಕ್ತ ಮಾದರಿಯ ಗಣತಂತ್ರ ಸರ್ಕಾರವನ್ನು ಅಳವಡಿಸಿಕೊಂಡಿತು . ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡ ಮೊಟ್ಟಮೊದಲ ರಾಷ್ಟ್ರದ ಹೆಗ್ಗಳಿಕೆಗೆ ಪಾತ್ರವಾಗಿದೆ . 13 ಸಂಪನ್ಮೂಲ ವಸಾಹತುಗಳನ್ನು ಕಳೆದುಕೊಂಡ ಇಂಗ್ಲೆಂಡ್ ಆರ್ಥಿಕವಾಗಿ ಅಧಿಕ ನಷ್ಟಕ್ಕೊಳಗಾಯಿತು . ಅಮೆರಿಕನ್ನರ ಗೆಲವು ಪ್ರಜಾಪ್ರಭುತ್ವ ತತ್ವಗಳನ್ನು ಪ್ರಪಂಚದಾದ್ಯಂತ ಬಲಪಡಿಸಿತು . “ ಸೂರ್ಯ ಮುಳಗದ ಸಾಮ್ರಾಜ್ಯ ” ಎಂದು ಬೀಗುತ್ತಿದ್ದ ಇಂಗ್ಲೆಂಡಿಗೆ ಮುಖಭಂಗವಾಗಿ ಅವರ ನಂಬಿಕೆಗೆ ಕೊಡಲಿಪೆಟ್ಟು ಬಿತ್ತು . ಫ್ರಾನ್ಸ್ ಕ್ರಾಂತಿಗೆ ಪ್ರೇರಣೆಯಾಯಿತು . ಇಂಗ್ಲೆಂಡಿನಲ್ಲಿ ರಾಜಪ್ರಭುತ್ವ ಅಂತ್ಯಗೊಂಡು ಸಂವಿಧಾನಾತ್ಮಕ ರಾಜಪಭುತ್ವ ಅಸ್ತಿತ್ವಕ್ಕೆ ಬರಲು ಕಾರಣವಾಯಿತು .
ಪ್ರಪಂಚದ ಕ್ರಾಂತಿಗಳು Notes
1 . ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದ ಕಾರಣಗಳನ್ನು ವಿವರಿಸಿ .
ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳೆಂದರೆ –
1. ಇಂಗ್ಲೆಂಡಿನ ವಾಣಿಜ್ಯ ನೀತಿ : ವಸಾಹತುಗಳ ಮೇಲೆ ವ್ಯಾಪಾರ ನಿರ್ಬಂಧಿಸಲು ‘ ನೌಕಾ ಕಾಯಿದೆ ‘ ಜಾರಿ ಮಾಡಿತು . ಈ ಕಾಯಿದೆಯ ಮುಖ್ಯ ಲಕ್ಷಣಗಳೆಂದರೆ – ಅಮೆರಿಕಾ ಉತ್ಪಾದಿಸುವ ಕಚ್ಚಾವಸ್ತುಗಳಾದ ಕಾಫಿ , ಹತ್ತಿ , ತಂಬಾಕು ಮುಂತಾದವು ಇಂಗ್ಲೆಂಡಿಗೆ ಮಾತ್ರವೇ ರಫ್ತು ಮಾಡಬೇಕು . ಗಾಜು , ಸಕ್ಕರೆ , ಹತ್ತಿ , ಬಟ್ಟೆ ಮೊದಲಾದವುಗಳನ್ನು ಇಂಗ್ಲೆಂಡಿನಿಂದ ಮಾತ್ರವೇ ಆಮದು ಮಾಡಿಕೊಳ್ಳಬೇಕು . ಅಮೆರಿಕನ್ನರು ತಮ್ಮ ವ್ಯಾಪಾರಕ್ಕೆ ಬ್ರಿಟಿಷ್ ಹಡಗುಗಳನ್ನು ಮಾತ್ರ ಬಳಸಬೇಕು ಎಂದು ನಿರ್ಬಂಧಿಸಿತು . ಬ್ರಿಟನ್ ಉತ್ಪಾದನೆ ಮಾಡುತ್ತಿದ್ದ ವಸ್ತುಗಳಾದ ಕಬ್ಬಿಣ , ನೀಲಿ ಕಾಗದ , ಹತ್ತಿ , ಲಿನನ್ ಇತ್ಯಾದಿಗಳನ್ನು ಅಮೆರಿಕನ್ನರು ಉತ್ಪಾದಿಸ ಕೂಡದು . • ಅಮೇರಿಕನ್ನರು ಬ್ರಿಟಿಷ್ ವರ್ತಕ ಏಜೆಂಟರನ್ನು ಇಟ್ಟುಕೊಂಡು ಅವರಿಗೆ ರಕಣೆ ನೀಡಬೇಕಿತ್ತು .
2. ಸಪ್ತ ವಾರ್ಷಿಕ ಯುದ್ಧ : ಫ್ರಾನ್ಸ್‌ನ ಬೆಳವಣಿಗೆಯನ್ನೂ ಸಹಿಸದ ಇಂಗ್ಲೆಂಡ್ ಫ್ರಾನ್ಸ್ ಮೇಲೆ 1756 ರಲ್ಲಿ ಯುದ್ಧ ಘೋಷಿಸಿತು . ಇದು 1763 ರವರೆಗೂ ಮುಂದುವರೆಯಿತು ಇದನ್ನು ಸಪ್ತ ವಾರ್ಷಿಕ ಯುದ್ಧ ‘ ಎಂದು ಕರೆಯಲಾಗಿದೆ . ಇಂಗ್ಲೆಂಡ್ ಜಯಗಳಿಸಿತು . ಯುದ್ಧವು ಪ್ಯಾರಿಸ್ ಒಪ್ಪಂದ ದೊಂದಿಗೆ ಮುಕ್ತಾಯವಾಯಿತು .
3 ಬೌದ್ಧಿಕ ಕಾರಣಗಳು : ವಸಾಹತುಗಾರರು ತಮ್ಮದೇ ಆದ ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದರು . ಬುದ್ಧಿಜೀವಿಗಳು ಮತ್ತು ತತ್ವಜ್ಞಾನಿಗಳು ಅಮೆರಿಕಾ ಕ್ರಾಂತಿಗೆ ಭದ್ರ ಬುನಾದಿ ಹಾಕಿದರು . 4. ಇಟಿಷ್ ತೆಲಗೆ ಭೀತಿ : ಸಪ್ತ ವಾರ್ಷಿಕ ಯುದ್ಧದಿಂದ ಬ್ರಿಟನ್ ಮೇಲೆ ಆರ್ಥಿಕ ಹೊರೆ ಹೆಚ್ಚಾಯಿತು . ಅದಕ್ಕಾಗಿ ವಸಾಹತುಗಳ ಮೇಲೆ ವಿವಿಧ ರೀತಿಯ ಹೆಚ್ಚಿನ ತೆರಿಗೆಗಳನ್ನು ವಿಧಿಸಿತು . 1764 ರ ಸಕ್ಕರೆ ಮತ್ತು ಕಾಕಂಬಿ ಕಾಯಿದೆ 1764 ರ ಸ್ಟ್ಯಾಂಪ್ ಕಾಯಿದೆ 1767 ರ ಟೌನ್‌ಹೆಂಡ್ 1770 ರ ಬೋಸ್ಟನ್ ಕಗ್ಗೋಲೆ
5. ಅಸಹನೀಯ ಶಾಶನಗಳು : ಬೋಸ್ಟನ್ ಚಹ ಹಗರಣಕ್ಕೆ ಪ್ರತಿಕಾರ ತೆಗೆದುಕೊಳ್ಳಲು ನಾಲ್ಕು ನಿರ್ಬಂಧಕ ಶಾಸನಗಳನ್ನು ಜಾರಿಗೆ ತಂದನು . ಬ್ರಿಟನ್‌ಗೆ ಆದ ನಷ್ಟವನ್ನು ಮೆಸ್ಸಾಚುಸೆಟ್ಸ್ ತುಂಬಿಕೊಡುವವರೆಗೆ ಬೋಸ್ಟನ್ ಬಂದರನ್ನು ಮುಚ್ಚಬೇಕು . ಸೈನ್ಯಾಧಿಕಾರಿಗೆ ಪೂರ್ಣ ಅಧಿಕಾರ ನೀಡಬೇಕು . ಬ್ರಿಟಿಷ್ ಸೈನಿಕರು ವಾಸಿಸಲು ಖಾಸಗಿ ಮನೆಗಳಲ್ಲಿ ಅನುಮತಿ ನೀಡಬೇಕು . ಮೆಸ್ಸಾಚುಸೆಟ್ಸ್ ನ್ಯಾಯಾಲಯದಲ್ಲಿ ಬ್ರಿಟಿಷ್ ಸೈನಿಕರನ್ನು ವಿಚಾರಣೆಗೆ ಒಳಪಡಿಸಿಕೂಡದು .
FAQ
ಜಾರ್ಜ್ ವಾಷಿಂಗ್ಟನ್
3 ನೇ ಜಾರ್ಜ್
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್