ಪ್ರಥಮ ಪಿ ಯು ಸಿ ಪ್ರವಾದಿ ಮಹಮ್ಮದ್‌ ರ ಜೀವನ ಮತ್ತು ಬೋಧನೆಗಳು | 1st Puc History Chapter 5 Notes | Life And Teachings Of Prophet Mohammed Notes

1st puc ಪ್ರವಾದಿ ಮಹಮ್ಮದ್ ರ ಜೀವನ ಮತ್ತು ಬೋಧನೆಗಳು notes Pdf,1st Puc History Chapter 5 Question Answer Life And Teachings Of Prophet Mohammed Notes Kseeb Solution For Class 11 Chapter 5 notes pravadi mohammad paigambar jeevana mattu bodhanegalu notes in Kannada Medium 1st Puc History Chapter 5 Notes Pdf Download

 

Contents

1st Puc History Chapter 5 Question Answer Pdf Karnataka

1st Puc History Chapter 5 Question Answer Pdf Karnataka

1. ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ .

1. ಮಹಮದನು ಯಾವ ಬೆಟ್ಟದ ಗುಹೆಯಲ್ಲಿ ಧ್ಯಾನ ಮಾಡುತ್ತಿದ್ದನು ?

ಹಿರಾ ಬೆಟ್ಟದ ಗುಹೆಯಲ್ಲಿ ,

2 . ಪೈಗಂಬರರಿಗೆ ದೈವವಾಣಿಗಳನ್ನು ಉಪದೇಶಿಸಿದ ದೇವರೂಪ ಯಾರು ?

ಗೇಬ್ರಿಯಲ್

3. ಮೆಕ್ಕಾದಲ್ಲಿ ಮುಸ್ಲಿಂರು ಪೂಜಿಸುತ್ತಿದ್ದ ಶಿಲೆಯ ಹೆಸರೇನು ?

ಕಾಬಾ ಶಿಲೆ

4 . ಪೈಗಂಬರ್ ಯಾವಾಗ ತೀರಿಕೊಂಡರು ?

ಸಾ.ಶ. 632 ರಲ್ಲಿ

5. ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಯಾವುದು ?

ಕುರಾನ್

6. ಇಸ್ಲಾಂ ಧರ್ಮದ ಸ್ಥಾಪಕ ಯಾರು ?

ಮಹಮ್ಮದ್ ಪೈಗಂಬರ್

7. ಮುಸ್ಲಿಂ ಪವಿತ್ರ ಧಾರ್ಮಿಕ ಸ್ಥಳ ಯಾವುದು ?

ಮೆಕ್ಕಾ

8. ಪೈಗಂಬರನ ಚಿಕ್ಕಪ್ಪ ಯಾರು ?

ಅಬುತಾಲಿಬ್

9. ಪೈಗಂಬರ್‌ನ ಪತ್ನಿ ಯಾರು ?

ಖದೀಜ

10. ‘ ಕಲೀಮಾ ‘ ಎಂದರೇನು ?

ಕಲೀಮಾ ಎಂದರೆ ನಂಬಿಕೆ .

11. ನಮಾಜ್ ಎಂದರೇನು ?

ನಮಾಜ್ ಎಂದರೆ ಪ್ರಾರ್ಥನೆ .

12. ಜಕಾತ್ ಎಂದರೇನು ?

‘ ಜಕಾತ್ ‘ ಎಂದರೆ ಬಡವರಿಗೆ ದಾನ ಮಾಡುವುದು .

13 , ರೋಜಾ ಎಂದರೇನು ?

ರೋಜಾ ಎಂದರೆ ಉಪವಾಸ

14. ಹಜ್ ‘ ಎಂದರೇನು ?

ಪವಿತ್ರ ಮೆಕ್ಕಾ ಯಾತ್ರೆ

1st Puc History Chapter 5 Question Answer Pdf Download 2023

II ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ

1. ಇಸ್ಲಾಂನ ಅರ್ಥವೇನು ?

‘ ಇಸ್ಲಾಂ ‘ ಎಂದರೆ – “ ದೇವರಾದ ಅಲ್ಲಾಗೆ ಶರಣಾಗು ” , ವ್ಯಾಪಕ ಅರ್ಥವೆಂದರೆ – “ ಸತ್ಯವಂತನಾಗಿರುವುದು ” , ” ನಂಬಿಕೆಗೆ ಅರ್ಹನಾಗಿರುವುದು ” , ” ಸದ್ಗುಣಿಯಾಗಿರು ” , ‘ ಇಸ್ಲಾಂ ‘ ಶಬ್ದದ ಇನ್ನೊಂದು ಹೆಸರು – ‘ ಶಾಂತಿ ‘ ಸಮಾನತೆ

2. ಇಸ್ಲಾಂ ಧರ್ಮದ ಎರಡು ಪ್ರಮುಖ ಪಂಗಡಗಳಾವುವು ?

ಇಸ್ಲಾಂ ಧರ್ಮದ ಎರಡು ಪ್ರಮುಖ ಪಂಗಡಗಳೆಂದರೆ – 1 ) ಸುನ್ನಿಗಳು 2 ) ಷಿಯಾಗಳು

3. ಇಸ್ಲಾಂ ಧರ್ಮದ ಚಿಹ್ನೆ ಯಾವುದು ಮತ್ತು ಮುಸ್ಲಿಂ ಧಾರ್ಮಿಕ ಸ್ಥಳ ಯಾವುದು ?

ಇಸ್ಲಾಂ ಧರ್ಮದ ಚಿಹ್ನೆ – ” ಅರ್ಥ ಚಂದ್ರ ಮತ್ತು ನಕ್ಷತ್ರ ” ಹಾಗೂ ಮುಸ್ಲಿಂರ ಧಾರ್ಮಿಕ ಸ್ಥಳ – ಮೆಕ್ಕಾ ,

4. ಮಹಮ್ಮದನ ತಂದೆ – ತಾಯಿಗಳು ಯಾರು ?

ಅಬ್ದುಲ್ಲಾ ಮತ್ತು ಅಮೀನಾ ಮಹಮ್ಮದ್‌ನ ತಂದೆ – ತಾಯಿಗಳು .

5. ಮಹಮ್ಮದನ ಮಗಳು ಮತ್ತು ಅಳಿಯನನ್ನು ಹೆಸರಿಸಿ .

ಮಹಮ್ಮದನ ಮಗಳು ‘ ಫಾತೀಮಾ ‘ , ಅಳಿಯ ‘ ಅಲಿ ‘ ,

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ಇಸ್ಲಾಂ ಧರ್ಮದ ಉದಯದ ಹಿನ್ನಲೆಯನ್ನು ವಿವರಿಸಿ .

“ ಇಸ್ಲಾಂ ” ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಒಂದು . ಈ ಧರ್ಮ ಏಷ್ಯಾ ಖಂಡದ ನೈರುತ್ಯ ಭಾಗದಲ್ಲಿರುವ ಅರೇಬಿಯಾದಲ್ಲಿ ಉದಯಿಸಿತು . ಇದು ಮರುಭೂಮಿಯ ಪ್ರದೇಶವಾಗಿದೆ . ‘ ಮೆಕ್ಕಾ ‘ ಹಾಗೂ ‘ ಮಧೀನ ‘ ಮಾತ್ರ ಇಲ್ಲಿನ ಎರಡು ಮುಖ್ಯ ನಗರಗಳಾಗಿದ್ದವು . ಮಳೆ ಇಲ್ಲದ ಕಾರಣ ವ್ಯವಸಾಯ ಸಾಧ್ಯವಿರಲಿಲ್ಲ . ಶೇ .80 ರಷ್ಟು ಅರಬ್ಬರು ಅಲೆಮಾರಿಗಳಾಗಿದ್ದರು . ಅವರು ಒಂಟೆಗಳನ್ನು ಸಾಕುತ್ತಿದ್ದರು .

ಇಲ್ಲಿಯ ಅರಬ್ಬರು 300 ಕ್ಕೂ ಹೆಚ್ಚು ವಿಗ್ರಹಗಳನ್ನು ಪೂಜಿಸುತ್ತಿದ್ದರು . ಪ್ರಾಣಿಬಲಿ ಮತ್ತು ಕುರುಡು ನಂಬಿಕೆಗಳು ಸಮಾಜದಲ್ಲಿತ್ತು . ಇಂತಹ ಅನಿಷ್ಟಗಳ ನಡುವೆಯೂ ಅರಬ್ಬರನ್ನು ಒಂದು ಗೂಡಿಸಿದ್ದು ಮೆಕ್ಕಾದ ಕಾಬಾ ಶಿಲೆಯಲ್ಲಿದ್ದ ಅವರ ಸಾಮೂಹಿಕ ನಂಬಿಕೆ , ಮೆಕ್ಕಾದಲ್ಲಿ ಅಬ್ರಹಾಂನು ಸಾ.ಶ. 6 ನೇ ಶತಮಾನದಲ್ಲಿ ದೇವದೂತ ಗೇಬ್ರಿಯಲ್ ನಿಂದ ಪಡೆದುಕೊಂಡ ಶಿಲೆಯನ್ನು ಪೂಜಿಸಲು ಕಾಬಾ ದೇವಾಲಯ ನಿರ್ಮಿಸಿದನು . ಅರಬ್ಬರಿಗೆ ನಿರ್ದಿಷ್ಟವಾದ ಸಾಮಾಜಿಕ , ನೈತಿಕ , ಸಾಂಸ್ಕೃತಿಕ ಹಾಗೂ ಧಾರ್ಮಿಕ ಚೌಕಟ್ಟುಗಳಿರಲಿಲ್ಲ . ಇಂತಹ ಸಂದರ್ಭದಲ್ಲಿ ಮಹಮ್ಮದನು ಇಸ್ಲಾಂ ಧರ್ಮ ಸ್ಥಾಪಿಸಿದನು . ಇಸ್ಲಾಂ ಧರ್ಮದ ಸ್ಥಾಪನೆಯ ಮೂಲಕ ಮುಸ್ಲಿಂರನ್ನು ಒಂದು ಧಾರ್ಮಿಕ ಚೌಕಟ್ಟಿನಲ್ಲಿ ಒಂದುಗೂಡಿಸಿದನು . ಈ ರೀತಿ ಇಸ್ಲಾಂ ಧರ್ಮದ ಉದಯವಾಯಿತು .

2 ) ಮಹಮ್ಮದನ ಜೀವನ ಚರಿತ್ರೆಯ ಬಗ್ಗೆ ಬರೆಯಿರಿ .

ಮಹಮ್ಮದನು ಸಾ.ಶಿ. 570 ರಲ್ಲಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಜನಿಸಿದನು . ಅಬ್ದುಲ್ಲಾ ಮತ್ತು ಅಮೀನಾ ಈತನ ತಂದೆ ತಾಯಿಗಳು . ಇವರು ಮೆಕ್ಕಾದ ಖುರೇಷಿ ಮನೆತನಕ್ಕೆ ಸೇರಿದವನು . ಬಾಲ್ಯದಲ್ಲಿಯೇ ತಂದೆ – ತಾಯಿಗಳನ್ನು ಕಳೆದುಕೊಂಡು ತನ್ನ ಚಿಕ್ಕಪ್ಪ ‘ ಅಬುತಾಲಿಬನ ಪಾಲನೆಯಲ್ಲಿ ಬೆಳೆದನು , ಬಡತನದ ಕಾರಣದಿಂದ ಶಿಕ್ಷಣ ಪಡೆಯಲಾಗಲಿಲ್ಲ . ಕುರಿ ಮತ್ತು ಒಂಟೆ ಮೇಯಿಸುವುದರಲ್ಲಿ ತರಬೇತಿ ಪಡೆದು ತನ್ನ ಪ್ರಾಮಾಣಿಕತೆಯಿಂದ ಎಲ್ಲರಿಗೂ ಚಿರಪರಿಚಿತನಾಗಿ ಎಲ್ಲರ ವಿಶ್ವಾಸಗಳಿಸಿದನು . ಯುವಕನಾಗಿದ್ದಾಗ ವರ್ತಕರ ತಂಡದೊಂದಿಗೆ ಸಂಚರಿಸಿ ವಿಶ್ವಾಸಕ್ಕೆ ಪಾತ್ರನಾದನು . ಇವನನ್ನು ‘ ಅಮೀನ ‘ ಎಂದು ಕರೆಯುತ್ತಿದ್ದರು .

ಮಹಮ್ಮದ್ ತನ್ನ 25 ನೇ ವಯಸ್ಸಿನಲ್ಲಿ ‘ ಖದೀಜ’ಎಂಬ ಶ್ರೀಮಂತ ಮಹಿಳೆಯ ಬಳಿ ಸೇವೆಗೆ ಸೇರಿಕೊಂಡನು . ಆಕೆಯ ಒಂಟೆಗಳನ್ನು ಸಿರಿಯಾ ಮತ್ತು ಪ್ಯಾಲಿಸ್ಟೈನ್‌ಗಳಲ್ಲಿ ಮಾರಾಟ ಮಾಡುತ್ತಿದ್ದನು . ನಂತರ ಆಕೆಯನ್ನು ವಿವಾಹವಾದನು . ಇವರಿಗೆ ಇಬ್ಬರು ಹೆಣ್ಣು ಇಬ್ಬರು ಗಂಡು ಮಕ್ಕಳು ಹುಟ್ಟಿದರು . ಆದರೆ ಫಾತೀಮಳನ್ನು ಬಿಟ್ಟು ಎಲ್ಲರೂ ತೀರಿಕೊಂಡರು . ಫಾತೀಮಳನು ‘ ಅಲಿ ‘ ಎಂಬ ಹುಡುಗನೊಂದಿಗೆ ಮದುವೆ ಮಾಡಿದನು . ಹೆಚ್ಚು ಹೊತ್ತು ಹಿರಾ ‘ ಗುಹೆಯಲ್ಲಿ ಧ್ಯಾನ ಮಗ್ನನಾಗಿರುತ್ತಿದ್ದನು . ಸಮಾಧಿ ಸ್ಥಿತಿಯಲ್ಲಿದ್ದಾಗ ಭಗವಂತನವಾಣಿಗಳನ್ನು ‘ ಗೇಬ್ರಿಯಲ್ ‘ ಎಂಬ ದೇವರ ಉಪದೇಶಿಸಿದನು , ಆತನ ಶಿಷ್ಯರು ಅವುಗಳನ್ನು ಖುರಾನ್‌ನಲ್ಲಿ ದಾಖಲಿಸಿದರು . ಬಹಳ ಬೇಗ ಅನೇಕ ಶಿಷ್ಯರು ಇವನನ್ನ ಒಟ್ಟುಗೂಡಿದರು .ಮಹಮ್ಮದನು . ‘ ಅಲ್ಲಾ ಒಬ್ಬನೇ ದೇವರು , ಮಹಮದ್ ಆತನ ಪ್ರವಾದಿ ‘ ಎಂದು ಘೋಷಿಸಿದನು . ಅರಬರ ಮೂರ್ತಿಪೂಜೆ , ಮೂಢನಂಬಿಕೆಗಳನ್ನು ಖಂಡಿಸಿದರು .

3 ) ಇಸ್ಲಾಂ ಧರ್ಮದ ಐದು ಆಧಾರಸ್ತಂಭಗಳ ಬಗ್ಗೆ ಬರೆಯಿರಿ ,

ಇಸ್ಲಾಂ ಧರ್ಮದ ಐದು ಆಧಾರ ಸ್ಥಂಭಗಳೆಂದರೆ –

( 1 ) ಕಲೀಮ್

( 2 ) ನಮಾಜ್

( 3 ) ಜಕಾತ್

( 4 ) ರೋಜಾ

( 5 ) ಹಜ್ ‌

1 ) ಕಲೀಮಾ : ಎಂದರೆ ದೇವರನಲ್ಲಿ ನಂಬಿಕೆ , ಆತನಿಗೆ ಶರಣಾಗುವುದು ಹಾಗೂ ಆತನನ್ನು ಗೌರವಿಸುವುದು , ಇದು ಖುರಾನಿನ ಮುಖ್ಯ ಸಂದೇಶ .

2 ) ನಮಾಜ್ : ನಮಾಜ್ ಎಂದರೆ ಪ್ರಾರ್ಥನೆ . ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡಬೇಕು . ದೇವರನ್ನು ಒಲಿಸಿಕೊಳ್ಳಲು ಪ್ರಾರ್ಥನೆ ಸರಿಯಾದ ಮಾರ್ಗ

3 ) ಜಕಾತ್ : ‘ ಜಕಾತ್ ‘ ಎಂದರೆ ಬಡವರಿಗೆ ದಾನ ಮಾಡುವುದು . ಇದು ಪ್ರತಿಯೊಬ್ಬ ಮುಸ್ಲಿಂನ ಕರ್ತವ್ಯ ತನ್ನ ಬಳಿಯ 2.5 % ರಷ್ಟನ್ನು ಧಾರ್ಮಿಕ ಉನ್ನತಿಗಾಗಿ ಮತ್ತು ಬಡವರಿಗೆ ಸಹಾಯ ನೀಡಬೇಕು .

4 ) ರೋಜಾ : ‘ ರೋಜಾ ‘ ಎಂದರೆ ಉಪವಾಸ . ಪ್ರತಿಯೊಬ್ಬ ಮುಸ್ಲಿಂನು ತನ್ನ ಆತ್ಮಶುದ್ಧಿಗೋಸ್ಕರ ರಂಜಾನ್ ತಿಂಗಳಲ್ಲಿ 29 ರಿಂದ 30 ದಿನಗಳ ಕಾಲ ಪ್ರಾತಃಕಾಲದಿಂದ ಸೂರ್ಯಸ್ತದವರೆಗೆ ಉಪವಾಸ ಆಚರಿಸಬೇಕು . ಉಪವಾಸ ಹೃದಯವನ್ನು ಶುದ್ಧಗೊಳಿಸುತ್ತದೆ ಆಸೆಗಳನ್ನು ಸಮತೋಲನಗೊಳಿಸುತ್ತದೆ .

5 ) ಹಜ್ : ಹಜ್ ಎಂದರೆ ಪವಿತ್ರ ಮೆಕ್ಕಾ ಯಾತ್ರೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು . ಅಂಥಹವರಿಗೆ ಸ್ವರ್ಗದ ಬಾಗಿಲು ತೆರೆಯುತ್ತದೆ .

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1. ಪೈಗಂಬರ್‌ನ ಜೀವನ ಮತ್ತು ಬೋಧನೆಗಳನ್ನು ವಿವರಿಸಿ .

ಮಹಮದ್ ಪೈಗಂಬರ್ ಸಾ.ಶಿ. 570 ರಲ್ಲಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಜನಿಸಿದನು . ಅಬ್ದುಲ್ಲಾ ಮತ್ತು ಅಮೀನಾ ಈತನ ತಂದೆ – ತಾಯಿಗಳು . ಈತನು ಮೆಕ್ಕಾದ ಖುರೇಷಿ ಮನೆತನಕ್ಕೆ ಸೇರಿದವನು , ಬಡತನದ ಕಾರಣ ಶಿಕ್ಷಣ ಪಡೆಯಲಿಲ್ಲ . ಬಾಲ್ಯದಲ್ಲಿ ತಂದೆ – ತಾಯಿಗಳನ್ನು ಕಳೆದುಕೊಂಡು ಚಿಕ್ಕಪ್ಪ ಅಬುತಾಲಿಬ ಮನೆಯಲ್ಲಿ ಬೆಳೆದನು . ಕುರಿ ಒಂಟೆಗಳ ವ್ಯಾಪಾರವನ್ನು ಕಲಿತು ವರ್ತಕರ ವಿಶ್ವಾಸ ಸಂಪಾದಿಸಿದನು . ನಂತರ ತನಗಿಂತ 15 ವರ್ಷ ಹಿರಿಯವಳಾದ ‘ ಖದೀಜ ‘ ಎಂಬ ವಿಧವೆಯನ್ನು ಮದುವೆಯಾದನು .

ಇವರಿಗೆ ನಾಲ್ಕು ಜನ ಮಕ್ಕಳಾದರೂ ಉಳಿದುದು ಒಬ್ಬಳೆ ಮಗಳು ಫಾತೀಮಾ , ಈಕೆಯ ಮದುವೆ ‘ ಅಲಿ ‘ ಎಂಬ ಯುವಕನ ಜೊತೆ ಆಯಿತು . ಮುಂದೆ ಮಹಮ್ಮದ್ ಹೆಚ್ಚು ವೇಳೆ ಧ್ಯಾನದಲ್ಲಿ ಇರುತ್ತಿದ್ದ , ‘ ಹಿರಾ ‘ ಎಂಬ ಗುಹೆಯಲ್ಲಿ ಹೆಚ್ಚು ಸಮಯ ಸಮಾಧಿಸ್ಥಿತಿಯಲ್ಲಿರುತ್ತಿದ್ದಾಗ ಭಗವಂತನ ವಾಣಿಯನ್ನು ದೇವದೂತ ‘ ಗೇಬ್ರಿಯಲ್ ‘ ಪೈಗಂಬರನಿಗೆ ಉಪದೇಶಿಸಿದನು . ಇದನ್ನು ಮಹಮ್ಮದ್ ತಿಳಿಸಿದಾಗ ಆತನ ಶಿಷ್ಯರು ಕುರಾನ್‌ನಲ್ಲಿ ದಾಖಲಿಸಿದರು . ಸಾಕಷ್ಟು ಜನ ಇವನ ಅನುಯಾಯಿಗಳಾದರು , ‘ ಅಲ್ಲಾ ಒಬ್ಬನೇ ದೇವರು , ಮಹಮ್ಮದ್ ಆತನ ಪ್ರವಾದಿ ಎಂದು ಘೋಷಿಸಿದನು .

ಮಹಮ್ಮದ್ ಪೈಗಂಬರನ ಬೋಧನೆ ಎಂದರೆ –

1 . ಜಗತ್ತಿನಲ್ಲಿ ಯಾರು ಪಾಪಿಗಳಲ್ಲ . ಯಾರು ಒಳ್ಳೆಯದು ಮಾಡುವರೋ ಅವರಿಗೆ ಸ್ವರ್ಗ ಸಿಗುತ್ತದೆ . ಕೆಟ್ಟದ್ದನ್ನು ಮಾಡಿದವರಿಗೆ ಅಲ್ಲಾ ನರಕಕ್ಕೆ ಕಳುಹಿಸಿ ಶಿಕ್ಷಿಸುತ್ತಾನೆ .

2. ಮದ್ಯಪಾನ ಮಾಡುವುದು , ಜೂಜಾಡುವುದು , ಮತ್ತು ವ್ಯಭಿಚಾರವನ್ನು ವರ್ಜಿಸಬೇಕೆಂದು , ಹಂದಿ ಮಾಂಸವನ್ನು ಸೇವಿಸಬಾರದೆಂದು ತಿಳಿಸಿದನು .

3. ಇಸ್ಲಾಂ ಧರ್ಮ ಸಮಾನತೆ ಮತ್ತು ವಿಶ್ವಭಾತೃತ್ವದಂತಹ ತತ್ವಗಳನ್ನು ಒಳಗೊಂಡಿದೆ .

4. ಮಹಿಳೆಯರನ್ನು ಮತ್ತು ತಂದೆ – ತಾಯಿಯರನ್ನು ಗೌರವಿಸುವುದು , ಸೇವಕರಲ್ಲಿ ಕರುಣೆ ಹಾಗೂ ಪ್ರಾಣಿದಯಗಳನ್ನು ಖುರಾನ್ ಪ್ರತಿಪಾದಿಸಿದೆ . 5 . ಗುರು ಹಿರಿಯರಲ್ಲಿ ಗೌರವ ಮತ್ತು ಅನಾಥ ರಕ್ಷಣೆಗಳನ್ನು ಬೋಧಿಸಿದೆ . ವಿವಾಹ ವಿಚ್ಛೇದನ , ಬಹುಪತ್ನಿತ್ವ ಮತ್ತು ವಿಧವಾ ವಿವಾಹಕ್ಕೆ ಖುರಾನ್ ಅವಕಾಶ ಕಲ್ಪಿಸಿದೆ .

2. ಇಸ್ಲಾಂ ಧರ್ಮದ ಸ್ಥಾಪನೆ ಮತ್ತು ಅದರ ಆಧಾರ ಸ್ತಂಭಗಳನ್ನು ವಿವರಿಸಿ .

ಇಸ್ಲಾಂ ಧರ್ಮದ ಸ್ಥಾಪಕರು ಮಹಮದ್ ಪೈಗಂಬರ್ , ಇದು ಏಷ್ಯಾ ಖಂಡದ ನೈರುತ್ಯದಲ್ಲಿರುವ ಅರೇಬಿಯಾದಲ್ಲಿ ಸಾ.ಶ. 622 ರಲ್ಲಿ ಸ್ಥಾಪನೆಯಾಯಿತು . ‘ ಮಸೀದಿ ‘ ಇವರ ಧಾರ್ಮಿಕ ಕೇಂದ್ರ ಅರ್ಧಚಂದ್ರ ಮತ್ತು ನಕ್ಷತ್ರ ‘ ಈ ಧರ್ಮದ ಚಿಹ್ನೆ , “ ಖುರಾನ್ ” ಇವರ ಪವಿತ್ರ ಗ್ರಂಥ .

ಇಸ್ಲಾಂ ಧರ್ಮದ ಸ್ಥಾಪನೆ ಮತ್ತು ಅದರ ಆಧಾರಸ್ತಂಭಗಳೆಂದರೆ –

1 ) ಕಲೀಮಾ ( 2 ) ನಮಾಜ್ ( 3 ) ಜಕಾತ್ ( 4 ) ರೋಜಾ ( 5 ) ಹಚ್ 1 )

ಕಮಾ : ಎಂದರೆ ದೇವರನಲ್ಲಿ ನಂಬಿಕೆ , ಆತನಿಗೆ ಶರಣಾಗುವುದು ಹಾಗೂ ಆತನನ್ನು ಗೌರವಿಸುವುದು , ಇದು ಖುರಾನಿನ ಮುಖ್ಯ ಸಂದೇಶ .
2 ) ನಮಾಜ್ : ನಮಾಜ್ ಎಂದರೆ ಪ್ರಾರ್ಥನೆ . ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡಬೇಕು . ದೇವರನ್ನು ಒಲಿಸಿಕೊಳ್ಳಲು ಪ್ರಾರ್ಥನೆ ಸರಿಯಾದ ಮಾರ್ಗ .

3 ) ಜಕಾತ್ : ‘ ಜಕಾತ್ ‘ ಎಂದರೆ ಬಡವರಿಗೆ ದಾನ ಮಾಡುವುದು . ಇದು ಪ್ರತಿಯೊಬ್ಬ ಮುಸ್ಲಿಂನ ಕರ್ತವ್ಯ . ತನ್ನ ಬಳಿಯ 2.5 % ರಷ್ಟನ್ನು ಧಾರ್ಮಿಕ ಉನ್ನತಿಗಾಗಿ ಮತ್ತು ಬಡವರಿಗೆ ಸಹಾಯ ನೀಡಬೇಕು .

4 ) ರೋಜಾ : ‘ ರೋಜಾ ‘ ಎಂದರೆ ಉಪವಾಸ . ಪ್ರತಿಯೊಬ್ಬ ಮುಸ್ಲಿಂನು ತನ್ನ ಆತ್ಮಶುದ್ಧಿಗೋಸ್ಕರ ರಂಜಾನ್ ತಿಂಗಳಲ್ಲಿ 29 ರಿಂದ 30 ದಿನಗಳ ಕಾಲ ಪ್ರಾತಃಕಾಲದಿಂದ ಸೂರ್ಯಸ್ತದವರೆಗೆ ಉಪವಾಸ ಆಚರಿಸಬೇಕು . ಉಪವಾಸ ಹೃದಯವನ್ನು ಶುದ್ಧಗೊಳಿಸುತ್ತದೆ ಆಸೆಗಳನ್ನು ಸಮತೋಲನಗೊಳಿಸುತ್ತದೆ .

5 ) ಹಜ್ : ಹಜ್ ಎಂದರೆ ಪವಿತ್ರ ಮೆಕ್ಕಾ ಯಾತ್ರೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು . ಅಂಥಹವರಿಗೆ ಸ್ವರ್ಗದ ಬಾಗಿಲು ತೆರೆಯುತ್ತದೆ .

FAQ

1. ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಯಾವುದು ?

ಕುರಾನ್

2. ಇಸ್ಲಾಂ ಧರ್ಮದ ಸ್ಥಾಪಕ ಯಾರು ?

ಮಹಮ್ಮದ್ ಪೈಗಂಬರ್

ಇತರೆ ವಿಷಯಗಳು :

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1st PUC History Notes

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

One thought on “ಪ್ರಥಮ ಪಿ ಯು ಸಿ ಪ್ರವಾದಿ ಮಹಮ್ಮದ್‌ ರ ಜೀವನ ಮತ್ತು ಬೋಧನೆಗಳು | 1st Puc History Chapter 5 Notes | Life And Teachings Of Prophet Mohammed Notes

Leave a Reply

Your email address will not be published. Required fields are marked *