1st PUC Kannada Matte Surya Baruttane Notes | ಪ್ರಥಮ ಪಿಯುಸಿ ಕನ್ನಡ ಮತ್ತೆ ಸೂರ್ಯ ಬರುತ್ತಾನೆ ನೋಟ್ಸ್‌

ಪ್ರಥಮ ಪಿ.ಯು.ಸಿ ಮತ್ತೆ ಸೂರ್ಯ ಬರುತ್ತಾನೆ ಕನ್ನಡ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 1st Puc Matte Surya Baruttane Kannada Notes Question Answer Summary Guide Pdf Download in Kannada Medium Karnataka State Syllabus 2023, Kseeb Solutions For Class 11 Kannada Poem 11 Notes 1st Puc Kannada 11th Poem Notes Saramsha

Matte Surya Baruthane Kannada Notes

 

ತರಗತಿ: ಪ್ರಥಮ ಪಿ.ಯು.ಸಿ

ಕವನ- ಕವಿ ಹೆಸರು: ಡಾ . ಲೋಕೇಶ ಅಗಸನಕಟ್ಟೆ

ಕಾವ್ಯಾ ಭಾಗದ ಹೆಸರು: ಮತ್ತೆ ಸೂರ್ಯ ಬರುತ್ತಾನೆ.

1st Puc Kannada Poem Question Answer

1st P.U.C Kannada Matte Surya Baruttaneಪ್ರಥಮ ಪಿ.ಯು.ಸಿ ಕನ್ನಡ ಮತ್ತೆ ಸೂರ್ಯ ಬರುತ್ತಾನೆ.
1st PUC Kannada Matte Surya Baruttane‌ ಪ್ರಥಮ ಪಿ.ಯು.ಸಿ ಕನ್ನಡ ಮತ್ತೆ ಸೂರ್ಯ ಬರುತ್ತಾನೆ

ಕವನ – ಕವಿ ಪರಿಚಯ : ಡಾ . ಲೋಕೇಶ ಅಗಸನಕಟ್ಟೆ ( ೧೯೫೮ )

ಲೋಕೇಶ ಅಗಸನಕಟ್ಟೆ ದಾವಣಗೆರೆ ಜಿಲ್ಲೆ ಅಗಸನಕಟ್ಟೆ ಗ್ರಾಮದವರು . ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಇವರು ‘ಕನ್ನಡ ಕಾವ್ಯ – ಸಮಾಜ ಸಂಸ್ಕೃತಿ ‘ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ . ಪ್ರಸ್ತುತ ಚಿತ್ರದುರ್ಗದ ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .

ಮತ್ತೆ ಸೂರ್ಯ ಬರುತ್ತಾನೆ , ಮನೆಯಂಗಳದ ಮರ ಮತ್ತು ಧರಣಿಯ ಧ್ಯಾನ ಕವನ ಸಂಕಲಗಳು , ಅಭಿಮುಖ , ಒಳಗಿನ ಬೆಳಗು ವಿಮರ್ಶಾ ಸಂಕಲಗಳು – ಇವರ ಕೃತಿಗಳು . ‘ ನೀರೊಳಗಣಕಿಚ್ಚು ‘ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ .

‘ಹಟ್ಟಿಯೆಂಬ ಭೂಮಿಯ ತುಣುಕು ‘ ಕಥಾ ಸಂಕಲನಕ್ಕೆ ಛಂದ ಪ್ರಶಸ್ತಿ ಬಂದಿದೆ . ನಮ್ಮೆಲ್ಲರ ಬುದ್ಧ ಎಂಬ ನಾಟಕ ಹಲವಾರು ಪ್ರಯೋಗಳನ್ನು ಕಂಡಿದೆ . ಮನುಷ್ಯನ ಅತಿ ಆಸೆ ಬದುಕನ್ನು ನರಕಸದೃಶ್ಯವಾಗಿಸಿದೆ . ಮುಗ್ಧ ಜನರ ಬದುಕು ತುಳಿತಕ್ಕೆ ಸಿಕ್ಕಿದೆ .

ಧರ್ಮ , ದೇವರು , ಮತಾಚರಣೆ , ಮತ ವೈಭವೀಕರಣಗಳಲ್ಲಿ ಅವರು ದಿಕ್ಕು ತಪ್ಪಿದ್ದಾರೆ . ಅರಾಜಕತೆ , ಅಸಹಾಯಕತೆ , ದಾರುಣತೆ ತುಂಬಿ ಹೋಗಿ ಎಲ್ಲರೂ ಹತಾಶರಾಗಿದ್ದಾರೆ . ಭವಿಷ್ಯದ ದಿನಗಳಲ್ಲಿ ಕಾಲ ಬದಲಾಗುತ್ತದೆ ಎನ್ನುವ ಭರವಸೆ ಇದೆ .

ಪದಕೋಶ :

ಚಿತಾಭಸ್ಮ- ಬೂದಿ ; ಘೀಳಿಟ್ಟು – ಕೂಗಿ ; ಹಾಯಿ – ದಿಕ್ಸಚಿ ; ಜೀಕುಗಾಣ – ಶಬ್ಧಮಾಡುತ್ತ ತಿರುಗುವ ಗಾಣ ; ಸನ್ನಿಪಾತ – ಮಂಕುಕವಿದ ಸ್ಥಿತಿ ; ಕಾರ್ನಿಯ – ಕಣ್ಣಿನ ಪಾಪೆ ; ನಖ ಉಗುರು ; ಗಹ್ವರ – ಗುಹೆ ; ಬದನಿಕೆ – ಬಂದಳಿಕೆ , ಪರಾವಲಂಬಿ .

1st Puc Kannada Poem Matte Surya Baruttane Question Answer

I. ಒಂದು ವಾಕ್ಯದಲ್ಲಿ ಉತ್ತರಿಸಿ .

1 . ಮಲೆಯ ಮೂಲೆ ಯಾವುದು ?

ಅನಾಥ ಕಡಿದುಳಿದ ಕಾಂಡಗಳು ಮಲೆಯಮಾಲೆಯಾಗಿದೆ .

2. ನಖಗಳು ಯಾರನ್ನು ಕಬಳಿಸಲು ಬಂದಿವೆ ?

ನಖಗಳು , ಕಾರ್ನಿಗಳನ್ನು ಕಬಳಿಸಲು ಬಂದಿವೆ .

3. ಶ್ರೀಗಂಧದ ತರುಗಳು ಏನಾದವು ?

ಶ್ರೀಗಂಧದ ತರುಗಳು ಯಜ್ಞಕುಂಡದಲ್ಲಿ ಬಸವಾದವು .

4. ಕರುಳ ಬಳ್ಳಿಗೆ ತೊಡದಿದ ಹುಳು ಯಾವುದು ?

ಕರುಳ ಬಳ್ಳಿಗೆ ತೊಡಗಿದ ಹುಳು ಕ್ಯಾನ್ಸರ್ .

5.ಅಣುಬಾಂಬುಗಳಿಂದಾಗಿ ನೆಲ ಏನಾಗಿದೆ ?

ಅಣುಬಾಂಬಿನಿಂದಾಗಿ ನೆಲ ಬಂಜೆಯಾಗಿದೆ , ಬರಡಾಗಿದೆ .

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಜನರು ತತ್ತರಿಸುವುದು ಯಾವುದಕ್ಕೆ?

ಲಾಠಿ ಬೂಟುಗಳ ಶಬ್ದಕ್ಕೆ ಜನ ತತ್ತರಿಸಿದರು .

2. ಅಮಾಯಕರಿಗೆ ಕವಿ ನೀಡುವ ಆಶ್ವಾಸನೆ ಯಾವುದು ?

ಕನ್ನಡ ಅವಾಯಕರನ್ನು ಕಂಡು ಕವಿ ನೀಡುವ ಆಶ್ವಾಸನೆ ಎಂದರೆ ಚಿಂತೆ ಏಕೆ , ಮತ್ತೆ ಸೂರ್ಯ ಬರುತ್ತಾನೆ . ‘ ಒಳ್ಳೆಯ ದಿನಗಳು ಮತ್ತೆ ಬರುತ್ತವೆ ‘

3. ಹಕ್ಕಿಗಳು ತನ್ನ ಕಂಠದಿಂದ ಏನನ್ನು ಮಾರ್ದನಿಸುತ್ತಿವೆ ?

ಹಕಿಗಳು ತನ್ನ ಏಕಕಂಠದಿಂದ ಹಾಡಿ ಕಾಡು ಕಣಿವೆ ಬೆಟ್ಟಗಳು ಮಾರ್ದನಿಸುವಂತೆ ಮಾಡಿವೆ .

4.ಚಿತಾಭಸ್ಮವಾದ ತರು ಯಾವುದು ? ಎಲ್ಲಿ ?

ಚಿತಾಭಸ್ಮವಾದ ತರು ಶ್ರೀಗಂಧ ಅದು ಮಾಲೆಯ ಮೂಲೆಗಳಲ್ಲಿ ,

IV . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ಪ್ರಸ್ತುತ ಕಾಲದೊಂದಿಗೆ ಈ ಕವಿತೆ ಹೇಗೆ ಹೊಂದಿಕೊಳ್ಳುತ್ತಿದೆ ? ವಿಮರ್ಶಿಸಿರಿ .

ಪ್ರಸ್ತುತ ಕಾಲದೊಂದಿಗೆ ಈ ಕವಿತೆ ಹೊಂದಿಕೊಳ್ಳುತ್ತಿದೆ . ಹೇಗೆಂದರೆ ಗಂಧದ ಮರಗಳನ್ನು ಕಡಿದರು . ಇಂದು ವಿದೇಶಗಳಿಗೆ ಮಾರಿ ಹಣ ಸಂಪಾದಿಸಲು ಕಾನೂನು ಬಾಹಿರವಾಗಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ . ಅಂದು ಹಿರೋಶಿಮ – ನಾಗಸಾಕಿಗಳು ಅಣುಬಾಂಬಿನಿಂದ ತತ್ತರಿಸಿದವು . ಇಂದು ಉಗ್ರರ , ನಕ್ಸಲರ ದಾಳಿಯಿಂದ ದೇಶ ತತ್ತರಿಸುತ್ತಿದೆ . ಇಂದು ರಾಜಕಾರಣಿಗಳ ಅಮಾಯಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ . ಇಂದು ಹಕ್ಕಿಗಳು ಏಕಕಂಠ ಮಾರ್ದನಿಸಲು ಕಾಡುಗಳೇ ಕಣ್ಮರೆಯಾಗಿ ಪಕ್ಷಿ ಸಂಕುಲವೇ ಕಾಣದಾಗಿದೆ .

2. ಕವಿಯ ಆತಂಕಕ್ಕೆ ಕಾರಣವಾದ ಸನ್ನಿವೇಶಗಳು ಕವಿತೆಯಲ್ಲಿ ಹೇಗೆ ಮೂಡಿ ಬಂದಿವೆ ?

ಕವಿಯು ಆತಂಕಕ್ಕೆ ಕಾರಣವಾದ ಸನ್ನಿವೇಶಗಳು ಕವಿತೆಯಲ್ಲಿ ಬಹಳ ಮಾರ್ಮಿಕವಾಗಿ ಮೂಡಿ ಬಂದಿವೆ . ಉದಾಹರಣೆಗೆ : ಶ್ರೀಗಂಧದ ಮರಗಳು ಯಜ್ಞಕುಂಡದಲ್ಲಿ ಚಿತಾಭಸ್ಮವಾಗಿದೆ . ವಿಶಾಲ ಸಾಗರದಲ್ಲಿ ನಡೆದ ನಾವಿಕರನ್ನು ಅಮಾಯಕರನ್ನು ದಿಕ್ಕು ತಪ್ಪಿಸುತ್ತವೆ , ಲಾಟಿ ಬೂಟುಗಳ ಶಬ್ದಕ್ಕೆ ತತ್ತರಿಸಿದ ಜನ ಗಂಟೆ ಜಾಗಟೆಗಳ ಸದ್ದಿಗೂ ತತ್ತರಿಸಿದ್ದಾರೆ . ನಮ್ಮ ಗುರುಗಳೇ ನಮ್ಮ ಕಣ್ಣನ್ನು ಚುಚ್ಚುತ್ತಿವೆ . ಪುಟ್ಟ ಪುಟ್ಟ ಹಕ್ಕಿಗಳ ಹಾಡುಗಳು ಬೆಟ್ಟಗುಡ್ಡಗಳಲ್ಲಿ ಮಾರ್ದನಿಸುತ್ತಿವೆ

3. ಮತ್ತೆ ಸೂರ್ಯ ಬರುತ್ತಾನೆ ‘ ಎಂಬ ಕವಿತೆಯ ಆಶಯವನ್ನು ಚರ್ಚಿಸಿ .

ಇಂದು ಮನುಷ್ಯನ ಅತಿ ಆಸೆ ಬದುಕನ್ನು ನರಕ ಸದೃಶ್ಯವಾಗಿಸಿದೆ . ಮುಗ್ಧ ಜನರ ಬದುಕು ತುಳಿತಕ್ಕೆ ಸಿಕ್ಕಿದೆ . ಧರ್ಮ , ದೇವರು ಹಾಗೂ ಮತಾಚರಣೆ ಮತ ವೈಭವೀಕರಣಗಳಲ್ಲಿ ಅವರು ದಿಕ್ಕು ತಪ್ಪಿದ್ದಾರೆ . ಅರಾಜಕತೆ , ಅಸಹಾಯಕತೆ , ದಾರುಣತೆ ತುಂಬಿ ಹೋಗಿ ಎಲ್ಲರೂ ಹತಾಶರಾಗಿದ್ದಾರೆ . ‘ ಭವಿಷ್ಯದ ದಿನಗಳಲ್ಲಿ ಕಾಲ ಬದಲಾಗುತ್ತದೆ ‘ ಎಂಬುದೇ ‘ ಮತ್ತೆ ಸೂರ್ಯ ಬರುತ್ತಾನೆ ‘ ಎಂಬ ವಾಕ್ಯದ ಪರ್ಯಾಯ ವಾಚಕ ಅರ್ಥವಾಗಿದೆ . ಒಳ್ಳೆಯ ಕಾಲ ಒಂದೇ ಬರುತ್ತದೆ ಎಂಬುದು ಇದರ ಸಂಕೇತವಾಗಿದೆ . ಇದೇ ಕವಿ ಆಶಯವಾಗಿದೆ .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ .

1. ದಿಕ್ಕು ತಪ್ಪಿದ ಹಡಗು ಹಾಯಿಯೋ

ಪ್ರಸ್ತಾವನೆ : ಈ ವಾಕ್ಯವನ್ನು ಡಾ || ಲೋಕೇಶ ಅಗಸನಕಟ್ಟೆಯವರು ರಚಿಸಿರುವ ‘ ಮತ್ತೆ ಸೂರ್ಯ ಬರುತ್ತಾನೆ ‘ ಎಂಬ ಕವನದಿಂದ ಆರಿಸಲಾಗಿದೆ .

ಸಂದರ್ಭ : ಸಮುದ್ರದ ಮೇಲೆ ತೇಲುತ್ತಿದ್ದ ಹಡಗು ಕತ್ತಲಲ್ಲಿ ದಿಕ್ಕು ತಪ್ಪಿ ಹಾಯುತ್ತಿರುವಾಗ ಈ ಮಾತನ್ನು ಕವಿ ಓದುಗರಿಗೆ ಹೇಳುತ್ತಾರೆ .

ವಿವರಣೆ : ಸಮುದ್ರಯಾನ ನಿಧಾನವಾಗಿ ಸಾಗುತ್ತದೆ . ಹಗಲು – ರಾತ್ರಿ ಯಾನ ಮುಂದುವರೆಯುತ್ತಿದ್ದಲ್ಲಿ ದಿಕ್ಕು ತಪ್ಪಿದಾಗ ತಬ್ಬಿಬ್ಬಾಗುವರು . ಆಗ ಕವಿಯು ಮತ್ತೆ ಸೂರ್ಯ ಬರುತ್ತಾನೆ . ದಾರಿ ಸಿಗುತ್ತದೆ ಎನ್ನುತ್ತಾರೆ .

ವಿಶೇಷತೆ : ಕಷ್ಟ ಎಂಬ ಕತ್ತಲೂ ಹರಿದ ಮೇಲೆ ಸುಖ ಎಂಬ ಸೂರ್ಯನ ಬೆಳಕು ಮತ್ತೆ ಸಿಗುತ್ತದೆ .

2. ಚಿತಾಭಸ್ಮವಾದ ಶ್ರೀಗಂಧ ತರುಗಳೇ

ಪ್ರಸ್ತಾವನೆ : ಈ ವಾಕ್ಯವನ್ನು ಡಾ || ಲೋಕೇಶ ಅಗಸನಕಟ್ಟೆಯವರು ರಚಿಸಿರುವ ‘ ಮತ್ತೆ ಸೂರ್ಯ ಬರುತ್ತಾನೆ ‘ ಎಂಬ ಕವನದಿಂದ ಆರಿಸಲಾಗಿದೆ .

ಸಂದರ್ಭ : ಈ ವಾಕ್ಯವನ್ನು ಶ್ರೀಗಂಧದ ಉಪಯೋಗ ಹಾಗೂ ಅ ಯಜ್ಞಯಾಗಕ್ಕೆ ಇದು ಪವಿತ್ರ ಭಸ್ಮವಾಗಿದೆ . ಇದು ಅತಿ ಮೌಲ್ಯದ ಮರಗಳು ಎಂಬ ಅದನ್ನು ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ .

ವಿವರಣೆ : ಶ್ರೀಗಂಧದ ಮರಗಳು ಯಜ್ಞಕುಂಡಗಳಲ್ಲಿ ಬೇಂದು ಚಿತಾಭಸ್ಮಗಳಾಗಿವೆ ಎಂಬುದು ಈ ಮಾತಿನ ಅರ್ಥ .

ವಿಶೇಷತೆ : ನಮ್ಮ ನಾಡಿನ ಸಂಪತ್ತು ಕ್ರಮೇಣ ನಶಿಸುತ್ತಿರುವುದರ ಬಗ್ಗೆ ತಿಳಿಸಲಾಗಿದೆ .

3. ಕರುಳ ಬಳ್ಳಿಗೆ ತೊಡರಿದ ಕ್ಯಾನ್ಸರ್ ಹುಳುವೇ ?

ಪ್ರಸ್ತಾವನೆ : ಈ ವಾಕ್ಯವನ್ನು ಡಾ || ಲೋಕೇಶ ಅಗಸನಕಟ್ಟೆಯವರು ರಚಿಸಿರುವ ` ಮತ್ತೆ ಸೂರ್ಯ ಬರುತ್ತಾನೆ ” ಎಂಬ ಕವನದಿಂದ ಆರಿಸಲಾಗಿದೆ . 4

ಸಂದರ್ಭ : ನಮ್ಮ ಮಕ್ಕಳಿಂದಲೇ ನಮಗೆ ನೋವು ಉಂಟಾದಾಗ ಅದು ಕ್ಯಾನ್ಸರ್‌ನಷ್ಟು ಭಯಂಕರ ನೋವು ಕೊಡುವಂತಹುದು ಎಂದು ಹೇಳುವುದನ್ನು ಕವಿ ಅಲಂಕರಿಕವಾಗಿ ಹೇಳಿದ್ದಾರೆ .

ವಿವರಣೆ : ಮಕ್ಕಳಿಗಾಗಿ ತಂದೆ ತಾಯಿಗಳು ಬಹಳ ಕಷ್ಟಪಡುತ್ತಾರೆ . ಆದರೆ ಆ ಮಕ್ಕಳು ತಂದೆ ತಾಯಿಗೆ ಯಾವ ರೀತಿ ಗೌರವ ಕೊಡಲಿಲ್ಲ ಎಂದು ಕವಿ ಹೇಳಿದ್ದಾರೆ .

ವಿಶೇಷತೆ : ಪರೋಕ್ಷವಾಗಿ ಮಕ್ಕಳಿಂದಾಗುವ ನೋವನ್ನು ತಿಳಿಸಿದ್ದಾರೆ .

4. ಕಾಡು ಕಣಿವೆ ಬೆಟ್ಟಗಳು ಮಾರ್ದನಿಸಲಿ

ಪ್ರಸ್ತಾವನೆ : ಈ ವಾಕ್ಯವನ್ನು ಡಾ || ಲೋಕೇಶ ಅಗಸನಕಟ್ಟೆಯವರು ರಚಿಸಿರುವ ‘ ಮತ್ತೆ ಸೂರ್ಯ ಬರುತ್ತಾನೆ ” ಎಂಬ ಕವನದಿಂದ ಆರಿಸಲಾಗಿದೆ .

ಸಂದರ್ಭ : ಹಕ್ಕಿ ಪಕ್ಷಿಗಳು ಒಟೊಟ್ಟಿಗೆ ಹಾಡುವ ಧ್ವನಿಯು ಬೆಟ್ಟಗುಡ್ಡಗಳಲ್ಲಿ ಮತ್ತೆ ಮತ್ತೆ ಕೇಳಿಬರುತ್ತದೆ . ಅದನ್ನು ಹೇಳುವ ಸಂದರ್ಭದಲ್ಲಿ ಕವಿ ಹೇಳಿದ್ದಾರೆ .

ವಿವರಣೆ : ಹಕ್ಕಿಗಳು ಒಟ್ಟಿಗೆ ಒಂದೇ ಕಂಠದಿಂದ ಹಾಡುವುದನ್ನು ಮೈದಾನ ಬೆಟ್ಟ , ಗುಡ್ಡ ಪ್ರದೇಶದಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತದೆ .

ವಿಶೇಷತೆ : ವೈಜ್ಞಾನಿಕ ಸಿದ್ಧಾಂತ ಶಬ್ದಗಳು ಪ್ರತಿಧ್ವನಿಸುವ ವಿಚಾರ ಇಲ್ಲಿದೆ .

5. ಸರಿಗಾತ್ರವಾಗಿ ಸಮನಿಸಲಿ ನಿನ್ನ ತನ .

ಪ್ರಸ್ತಾವನೆ : ಈ ವಾಕ್ಯವನ್ನು ಡಾ || ಲೋಕೇಶ ಅಗಸನಕಟ್ಟೆಯವರು ರಚಿಸಿರುವ ‘ ಮತ್ತೆ ಸೂರ್ಯ ಬರುತ್ತಾನೆ ” ಎಂಬ ಕವನದಿಂದ ಆರಿಸಲಾಗಿದೆ .

ಸಂದರ್ಭ : ನಮ್ಮ ಜನ ಎಷ್ಟೊಂದು ಸೂಕ್ಷ್ಮಮತಿಗಳಾಗಿರುವವರೆಂದು ಕೇವಲ ಗಂಟೆ ಜಾಗಟೆಗಳ ಸದ್ದಿಗೆ ಗಾಬರಿಯಾಗಿರುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆದಿದ್ದಾರೆ .

ವಿವರಣೆ : ಗಂಟೆ ಜಾಗಟೆಗಳ ಸದ್ದು ಮುಖ್ಯವಾಗಿ ಪೂಜಾ ಸಮಯದಲ್ಲಿ ಕಂಡು ಬರುತ್ತದೆ . ಈ ಸದ್ದನ್ನು ಕೇಳಲಾರದ ಜನ ಮಂಕು ಕವಿಯಂತೆ ಕುಳಿತಿದ್ದಾರೆ ಎಂಬುದು ಈ ವಾಕ್ಯದ ಸ್ವಾರಸ್ಯ

ವಿಶೇಷತೆ : ಚಿಕ್ಕ ನೋವನ್ನು ಸಹಿಸಲಾರದ ಜನ ಈಗ ಮತ್ತೆನೂ ಸಹಿಸಲಾರದು .

1st Puc Kannada Poem Question Answer Notes pdf

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh