9ನೇ ತರಗತಿ ಆರ್ಥಿಕ ರಚನೆ ಸಮಾಜ ವಿಜ್ಞಾನ ನೋಟ್ಸ್, 9th Standard Social Science Arthika Rachane Notes Question Answer Guide Extract Mcq Pdf Download in Kannada Medium Karnataka State Syllabus 2026 arthika rachane 9th standard notes Kseeb Solutions For Class 9 Social Science 14 Notes arthika rachane 9th class notes 9th class arthika rachane question answer 9th standard social science chapter 14 notes in kannada ಆರ್ಥಿಕ ರಚನೆ 9ನೇ ತರಗತಿ ಪ್ರಶ್ನೋತ್ತರಗಳು arthika rachane 9th class question answer

ಅಭ್ಯಾಸ
I. ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ.
- ರಚನಾತ್ಮಕ ಬದಲಾವಣೆ ಆರ್ಥಿಕ ಚಟುವಟಿಕೆಗೆ ಸಂಬಂಧಿಸಿದೆ.
- ಪ್ರಾಚೀನ ಅರ್ಥವ್ಯವಸ್ಥೆಯಲ್ಲಿ ಕೃಷಿ ಪ್ರಧಾನವಾಗಿತ್ತು.
- ಸರಳ ಅರ್ಥವ್ಯವಸ್ಥೆಯಲ್ಲಿ ಎರಡು ವಲಯಗಳು ಇರುತ್ತವೆ.
- ಸ್ಥಿರಾತ್ಮಕ ಅರ್ಥಶಾಸ್ತ್ರ ಗ್ರೀಕ್ನ ‘ಸ್ಟಾಟಿಕೆ’ ಪದದಿಂದ ಬಂದಿದೆ.
- ಕೈಗಾರಿಕಾ ಕ್ರಾಂತಿ ಮೊದಲಿಗೆ ಬ್ರಿಟನ್ ದೇಶದಲ್ಲಿ ನಡೆಯಿತು.
II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
6) ರಚನಾತ್ಮಕ ಬದಲಾವಣೆ ಎಂದರೇನು?
ಅರ್ಥವ್ಯವಸ್ಥೆಯ ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಉತ್ಪಾದನೆ, ಉದ್ಯೋಗದ ಸ್ವರೂಪ, ಆದಾಯದ ಮಟ್ಟ, ತಂತ್ರಜ್ಞಾನದ ಬಳಕೆ ಹಾಗೂ ಜೀವನ ವಿಧಾನಗಳಲ್ಲಿ ಆಗುವ ಬದಲಾವಣೆಗಳನ್ನು ರಚನಾತ್ಮಕ ಬದಲಾವಣೆ ಎನ್ನುವರು.
7) ಪ್ರಾಚೀನ ಅರ್ಥವ್ಯವಸ್ಥೆಯ ಲಕ್ಷಣಗಳನ್ನು ತಿಳಿಸಿ.
- ಪ್ರಾಚೀನ ಅರ್ಥವ್ಯವಸ್ಥೆಯು ಕೃಷಿ ಪ್ರಧಾನವಾಗಿತ್ತು.
- ದೇಶದ ಬಹುತೇಕ ಜನರು ಕೃಷಿಯನ್ನು ಅವಲಂಬಿಸಿದ್ದರು.
- ಕೃಷಿಯು ಜೀವನಾಧಾರ ಬೇಸಾಯವಾಗಿತ್ತು.
- ಜನರು ತಮ್ಮ ಅಗತ್ಯಕ್ಕೆ ತಕ್ಕಷ್ಟು ಆಹಾರವನ್ನು ಮಾತ್ರ ಬೆಳೆಯುತ್ತಿದ್ದರು.
- ಜನರ ಬಯಕೆಗಳು ಕಡಿಮೆಯಿದ್ದು, ಜೀವನ ಸರಳವಾಗಿತ್ತು.
- ಶ್ರಮವಿಭಜನೆಯು ಅಷ್ಟಾಗಿ ಬಳಕೆಯಲ್ಲಿರಲಿಲ್ಲ.
- ವಸ್ತು ವಿನಿಮಯ ಪದ್ಧತಿ ಬಳಕೆಯಲ್ಲಿತ್ತು.
8) ಬಂಡವಾಳವರ್ಗ ಹೇಗೆ ಉದಯವಾಯಿತು?
17 ಮತ್ತು 18ನೇ ಶತಮಾನಗಳಲ್ಲಿ ಬ್ರಿಟನ್ನಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯು ಬಂಡವಾಳವರ್ಗದ ಉದಯಕ್ಕೆ ಕಾರಣವಾಯಿತು. ಭೂಮಾಲೀಕರು ತಮ್ಮಲ್ಲಿದ್ದ ಹಣವನ್ನು ಕೈಗಾರಿಕೆಗಳಲ್ಲಿ ಬಂಡವಾಳವಾಗಿ ಹೂಡಿಕೆ ಮಾಡಿದರು. ನವೀನ ಸಂಶೋಧನೆ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸಿದರು. ಹೀಗೆ ಬಂಡವಾಳವರ್ಗ ಉದಯವಾಯಿತು.
9) ಆದಾಯದ ಮೂಲಗಳು ಯಾವುವು?
ಸರಳ ಅರ್ಥವ್ಯವಸ್ಥೆಯಲ್ಲಿ ಆದಾಯದ ಎರಡು ಮೂಲಗಳಿವೆ.
- ಗೃಹ ಘಟಕ
- ಉದ್ಯಮ ಘಟಕ
ಗೃಹ ಘಟಕಗಳು ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆಯನ್ನು ಉದ್ಯಮ ಘಟಕಗಳಿಗೆ ಒದಗಿಸುತ್ತವೆ. ಪ್ರತಿಯಾಗಿ ಗೇಣಿ, ಕೂಲಿ, ಬಡ್ಡಿ ಮತ್ತು ಲಾಭವನ್ನು ಆದಾಯವಾಗಿ ಪಡೆಯುತ್ತವೆ. ಉದ್ಯಮ ಘಟಕಗಳು ಸರಕು ಮತ್ತು ಸೇವೆಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತವೆ.
10) ಉದ್ಯೋಗದ ಮೂಲಗಳು ಯಾವುವು?
ಉದ್ಯೋಗದ ಮೂರು ಪ್ರಮುಖ ಮೂಲಗಳು:
- ಕೃಷಿ ವಲಯ
- ಕೈಗಾರಿಕಾ ವಲಯ
- ಸೇವಾ ವಲಯ
11) ಸ್ಥಿರಾತ್ಮಕ ಮತ್ತು ಚಲನಾತ್ಮಕ ಅರ್ಥಶಾಸ್ತ್ರದ ವ್ಯತ್ಯಾಸವನ್ನು ವಿವರಿಸಿ.
| ಸ್ಥಿರಾತ್ಮಕ ಅರ್ಥಶಾಸ್ತ್ರ | ಚಲನಾತ್ಮಕ ಅರ್ಥಶಾಸ್ತ್ರ |
|---|---|
| ಯಾವುದೇ ಬದಲಾವಣೆಗಳಿಲ್ಲದ ಸನ್ನಿವೇಶವನ್ನು ಅಧ್ಯಯನ ಮಾಡುತ್ತದೆ. | ಅರ್ಥವ್ಯವಸ್ಥೆಯಲ್ಲಿ ಆಗುವ ನಿರಂತರ ಬದಲಾವಣೆಗಳನ್ನು ಅಧ್ಯಯನ ಮಾಡುತ್ತದೆ. |
| ಜನಸಂಖ್ಯೆ, ಬಂಡವಾಳ, ಉತ್ಪಾದನಾ ವಿಧಾನ ಮತ್ತು ಜನರ ಬಯಕೆಗಳು ಸ್ಥಿರವಾಗಿರುತ್ತವೆ. | ಜನಸಂಖ್ಯೆ, ಬಂಡವಾಳ, ಉತ್ಪಾದನಾ ವಿಧಾನ ಮತ್ತು ಜನರ ಬಯಕೆಗಳು ಕಾಲಕಾಲಕ್ಕೆ ಬದಲಾಗುತ್ತವೆ. |
| ಆರ್ಥಿಕ ಬೆಳವಣಿಗೆ ಕುಂಠಿತವಾಗಿರುತ್ತದೆ. | ಆರ್ಥಿಕ ಬೆಳವಣಿಗೆಯಲ್ಲಿ ನಿರಂತರ ಬದಲಾವಣೆಗಳಾಗುತ್ತವೆ. |
| ಬ್ರಿಟಿಷರ ಆಳ್ವಿಕೆಯ ಕಾಲದ ಭಾರತದ ಅರ್ಥವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಬಹುದು. | ಸ್ವಾತಂತ್ರ್ಯಾನಂತರದ ಭಾರತದ ಅರ್ಥವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಬಹುದು. |
ಇತರೆ ವಿಷಯಗಳು:
9th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.