8th Standard jeevana darshana kannada poem Notes | 8ನೇ ತರಗತಿ ಜೀವನ ದರ್ಶನ ಕನ್ನಡ ನೋಟ್ಸ್ 

8ನೇ ತರಗತಿ ಕನ್ನಡ ಜೀವನ ದರ್ಶನ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 8th Standard Jeevana Darshana Kannada Notes Question Answer Summary Mcq Pdf Download in Kannada Medium Karnataka state Syllabus 2024, Kseeb Solutions For Class 8 Kannada Poem 7 Notes Jeevana Darshana Saramsha Kannada 8th Standard Kannada Poem Jeevana Darshana Notes 8th Class Kannada 7th poem Notes

8th Kannada Jeevana Darshana Poem Notes

Contents hide

ಪದ್ಯ ಭಾಗ- 7

ಪದ್ಯದ ಹೆಸರು : ಜೀವನ ದರ್ಶನ 

ಕೃತಿಕಾರರ ಪರಿಚಯ :

ಶ್ರೀಪಾದರಾಜ : 

ದಾಸ ಶ್ರೇಷ್ಠರಲೊಬ್ಬರು ಕಾಲ ಕ್ರಿ. ಶ ಸುಮಾರು 1404ರಿಂದ 1502. ಪೂರ್ವಾಶ್ರಮದ ಹೆಸರು
ಲಕ್ಷ್ಮಿನಾರಾಯಣ. ದ್ವೈತತತ್ವದ ಪ್ರತಿಪಾದಕರು ಹಾಗೂ ಆದ್ಯಕೀರ್ತನಕಾರರು ಚನ್ನಪಟ್ಟಣ ತಾಲೂಕಿನ ಅಬ್ಬೂರು ಗ್ರಾಮದಲ್ಲಿ ಜನಿಸಿದ್ದಾರೆ. ತಂದೆ ಶೇಷಗಿರಿಯಪ್ಪ ತಾಯಿ ಗಿರಿಯಮ್ಮ. ಇವರ ಅಂಕಿತ ಶ್ರೀರಂಗವಿಠಲ. ಇವರ ಶಿಷ್ಯರಲ್ಲಿ ಪ್ರಮುಖರು ಶ್ರೀವ್ಯಾಸರಾಯರು. ಶ್ರೀಪಾದರಾಜ ಅವರ82 ಕೀರ್ತನೆಗಳು, 3ಸುಳಾದಿಗಳು, 15 ಉಗಾಭೋಗಗಳು, 1ದಂಡಕವು ಲಭ್ಯವಾಗಿವೆ. ಮಾನವನ ಜೀವನದ ಮುಖ್ಯ ಗುರಿ ಮುಕ್ತಿ ಸಂಪಾದನೆ. ಹರಿದಾಸರು ಭಕ್ತಿಯ ಮೂಲಕ ಮುಕ್ತಿ ಪಡೆಯುವ ಮಾರ್ಗವನ್ನು ತೋರಿದರು. 

ಗೋಪಾಲದಾಸರು :

ಇವರ ಕಾಲ ಕ್ರಿ.ಶ. 1721. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ
ಮೊಸರುಕಲ್ಲಿನಲ್ಲಿ ಜನಿಸಿದರು. ತಂದೆ ಮುರಾರಿ, ತಾಯಿ ವೆಂಕಮ್ಮ, ಗುರುಗಳು ವಿಜಯದಾಸರು. ಇವರದು
ಸಾಮಾನ್ಯವಾದ ರೈತ ಕುಟುಂಬ. ದಾಸರ ಮೊದಲ ಹೆಸರು ಬಾಗಣ್ಣ. ತುಂಬಾ ಬಡತನದಲ್ಲಿದ್ದ ಇವರು ಜೋತಿಷ್ಯವನ್ನು ಹೇಳುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು. ಇವರ ಅಂಕಿತನಾಮ ಗೋಪಾಲವಿಠಲ. ಇವರ 96ಕೀರ್ತನೆಗಳು, 70ಸುಳಾದಿಗಳು, ೨೧ ಉಗಾಭೋಗಗಳು ಉಪಲಬ್ದವಾಗಿವೆ. 

ವಿಜಯದಾಸರು :

ಇವರ ಕಾಲ ಕ್ರಿ.ಶ. ಸುಮಾರು (1682 – 1755) ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೇಕನಪರಿವಿಯಲ್ಲಿ ಜನಿಸಿದರು. ಮೊದಲಿನ ಹೆಸರು ದಾಸಪ್ಪ. ತಂದೆ ಶ್ರೀನಿವಾಸ, ತಾಯಿ ಕೂಸಮ್ಮ ದಂಪತಿಗಳ ಮಗನೇವಿಜಯದಾಸರು. ತುಂಬಾ ಬಡತನವನ್ನು ಅನುಭವಿಸುತ್ತಿದ್ದ
ಕುಟುಂಬ ಇವರದು. ಕಾಶಿಯಲ್ಲಿ ನಾಲ್ಕುವರ್ಷಗಳು ಸಂಸ್ಕೃತ ಅಧ್ಯಯನ ಮಾಡುತ್ತಾರೆ. ಪುರಂದರದಾಸರು ಇವರಿಗೆ ದೀಕ್ಷೆಯಿತ್ತ ಗುರುಗಳು. ಇವರ ಅಂಕಿತನಾಮ ವಿಜಯವಿಠಲ. ಪ್ರಸ್ತುತ ‘ಜೀವನ ದರ್ಶನ’ ಪದ್ಯದಲ್ಲಿರುವ ದಾಸರ ಕೀರ್ತನೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಪ್ರಕಟಿಸಿರುವ ‘ಸಮಗ್ರ ದಾಸ ಸಾಹಿತ್ಯ ಸಂಪುಟ’ಗಳಿಂದ ಆಯ್ದು ನಿಗದಿಪಡಿಸಿದೆ .

ಆಶಯ ಭಾವ

ಕೃತ ಪದ್ಯದಲ್ಲಿ ಮುಕ್ತಿಯನ್ನು ಬಯಸುವವರರಿಗೆ ವಾತಾವರಣ ಹೇಗೆ ಅನುಕೂಲವಾಗಿರಬೇಕು ಎಂಬ
ಚಿತ್ರಣವಿದೆ. ಇವರ ಕೀರ್ತನೆಗಳಲ್ಲಿ ಆತ್ಮಶೋಧನೆ, ಭಗವಂತನ ಆರಾಧನೆ, ದ್ವೈತತತ್ತ್ವ   ಪ್ರತಿಪಾದನೆ ಮತ್ತು
ಲೋಕನೀತಿ, ನೀತಿಬೋಧನೆಗಳು ಅಡಕವಾಗಿವೆ. ‘ಕಂಗಳಿದ್ಯಾತಕೋ ಕಾವೇರಿರಂಗನ ನೋಡದ’ ಕೀರ್ತನೆ
ಜನಪ್ರಿಯವಾದದ್ದು. ಶ್ರೀಯುತರ ಕೀರ್ತನೆಗಳಲ್ಲಿ ದೇಸಿಯತೆಯ ಸೊಗಡಿದೆ. ದೇವರು ಭಕ್ತ ಪರಾಧೀನ. ಅನಾಥರಕ್ಷಕ. ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ ಅವರ ಸಂಕಷ್ಟಗಳನ್ನು ಪರಿಹರಿಸುತ್ತಾನೆ. ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು ಸಂಕಷ್ಟಗಳನ್ನು ನಿವಾರಿಸುವ ಗುಣ ಈ ಪರಮಾತ್ಮನದು. ಆದುದರಿಂದ ಆ ಭಗವಂತನ್ನು ಹೃದಯಕಮಲದಲ್ಲಿಟ್ಟು ಆರಾಧಿಸಬೇಕು. ನಂಬಿಕೆಟ್ಟವರಿಲ್ಲ. ನಂಬಿಕೆ, ಪ್ರೀತಿ, ದೃಢಸಂಕಲ್ಪಗಳು ಸದಾ ಅಚಲವಾಗಿರಬೇಕು ಎಂದು ತಮ್ಮ ಈ ಕೀರ್ತನೆಯಲ್ಲಿ ದಾಸರು ಸ್ತುತಿಸಿದ್ದಾರೆ. ಮಾನವನ ಜನ್ಮದ ಸಾರ್ಥಕತೆ ಮುಕ್ತಿಗಳಿಸುವಲ್ಲಿ ಇದೆ. ಇಹಲೋಕದಿಂದ ಮುಕ್ತನಾಗಲು
ಸದಾ ಹರಿ ನಾಮಸ್ಮರಣೆ ಮಾಡಬೇಕು. ಅಚಲವಾದ ದೃಢ ಭಕ್ತಿಯಿಂದ ದೈವ ಸಾಕ್ಷಾತ್ಕಾರವಾಗುತ್ತದೆ. ಭಕ್ತಿ – ಭಕ್ತ 
ಒಂದಾದಾಗ ಮಾತ್ರ ಮುಕ್ತಿ ಸಾಧ್ಯವೆಂದು, ಈ ಪ್ರಕೃತ ಕೀರ್ತನೆಯಲ್ಲಿ ವ್ಯಕ್ತವಾಗಿದೆ.

ಪದಗಳ ಅರ್ಥ

ವಿರಕ್ತಿ – ವೈರಾಗ್ಯ, ಆಸೆ ಆಮಿಷಗಳಿಗೆ ಒಳಗಾಗದಿರುವುದು;              ಮುಕ್ತಿ – ಬಿಡುಗಡೆ; ಸತಿ – ಹೆಂಡತಿ;

ಸುತ -ಮಗ;        ಮತ- ಅಭಿಪ್ರಾಯ. ಗುರಿ ;         ಜಾನುವೆ – ಜಾಣ್ಮೆ, ಬುದ್ಧಿವಂತಿಕೆ;    ಉಪಶಾಂತ – ನೆಮ್ಮದಿ, ಸಮಾಧಾನ;

ಸುಸಂಗ – ಒಒಳ್ಳೆಯವರ  ಸ್ನೇಹ;       ದುಸ್ಸಂಗ – ಕೆಟ್ಟವರ ಸಹವಾಸ;     ನೆರೆ – ಪೂರ್ಣ; ಪಾತಕ – ಪಾಪ, ಕೆಟ್ಟಕೆಲಸ;

ನಕ್ರ – ಮೊಸಳೆ;                ಬಾಧೆ – ನೋವು, ಸಂಕಟ;           ಅನಾಥ – ದಿಕ್ಕಿಲ್ಲದ, ತಬ್ಬಲಿ;       ಮೊರೆ – ಆಶ್ರಯ; ರಮಣ –

ಗಂಡ, ಯಜಮಾನ;           ಕಮಲಮುಖಿ – ಲಕ್ಷ್ಮಿ                     ಹರಿವಾಣ – ಅಗಲವಾದ ತಟ್ಟೆ;       ಘನ – ಶ್ರೇಷ್ಠ;

8th Standard Jeevana Darshana Kannada Poem question answers

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ವ್ಯಕ್ತಿಯು ಮುಕ್ತಿ ಪಡೆಯಲು ಏನು ಮಾಡಬೇಕು?

ಉತ್ತರ : ವ್ಯಕ್ತಿಯು ಮುಕ್ತಿಯನ್ನು ಪಡೆಯಲು ಭಕ್ತಿಬೇಕು, ವಿರಕ್ತಿ ಬೇಕು ಹಾಗೂ ಸರ್ವ ಶಕ್ತಿಬೇಕು.

೨. ಸುತರಲ್ಲಿ ಎಂಥಹ ಗುಣವಿರಬೇಕು?

ಉತ್ತರ : ಸುತರಲ್ಲಿ ಒಳ್ಳೆಯ ಗುಣವಿರಬೇಕು.

೩. ದೇವನು ಯಾರ ಪಾತಕಗಳನ್ನು ಪರಿಹರಿಸುವವನು?

ಉತ್ತರ : ದೇವರು ಪ್ರೀತಿಯಿಂದಲಿ ಸ್ಮರಿಸುವವರ  ಪಾತಕಗಳನ್ನು ಪರಿಹರಿಸುವನು.

೪. ದೇವನು ಯಾವ ಮಂತ್ರಕ್ಕೆ ಒಲಿಯುವನು?

ಉತ್ತರ : ದೇವನು ಪ್ರೀತಿಯ ಭಕ್ತಿಯ ಮಂತ್ರಕ್ಕೆ ಒಲಿಯುವನು.

೫. ಸದಾ ಹೃದಯದಲ್ಲಿ ವಾಸಮಾಡುವವನು ಯಾರು?

ಉತ್ತರ : ಸದಾ ಹೃದಯದಲ್ಲಿ ವಾಸಮಾಡುವವನು ಶ್ರೀಹರಿಯು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.

೧. ಮುಕ್ತಿ ಪಡೆಯಲು ಹೇಗೆ ನಡೆದುಕೊಳ್ಳಬೇಕು?

ಉತ್ತರ : ಭಕ್ತಿ ಬೇಕು ವಿರಕ್ತಿ ಬೇಕು ಸರ್ವ ಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ  ಅಂದರೇ  ಮಾನವನು ಮುಕ್ತಿಯನ್ನು ಪಡೆಯಲು ದೇವರಲ್ಲಿ ಭಕ್ತಿ ಇರಬೇಕು. ಮನೆ ಮಕ್ಕಳು ಎಂಬ ವ್ಯಾಮೋಹವನ್ನು ತೊರೆದು, ಸುಖ ಭೋಗಗಳ ಬಗ್ಗೆ ವೈರಾಗ್ಯವುಳ್ಳವನಾಗಿರಬೇಕು. ದೈಹಿಕ, ಮಾನಸಿಕ, ಆಧ್ಯಾತ್ಮಿಕ, ನೈತಿಕ ಶಕ್ತಿಗಳನ್ನು ಪಡೆದುಕೊಂಡು ಇರಬೇಕು ಎಂದು ಶ್ರೀ ಪಾದರಾಜರು ಹೇಳಿದ್ದಾರೆ.

೨. ದೇವನು ತನ್ನ ಭಕ್ತರನ್ನು ಹೇಗೆ ರಕ್ಷಿಸಿದರೆಂದು ಗೋಪಾಲದಾಸರು ಹೇಳಿದ್ದಾರೆ ?

ಉತ್ತರ : ನಮ್ಮ ದೇವನು ಪ್ರೀತಿಯಿಂದಲಿ ಸ್ಮರಿಸುವವರ ಪಾತಕಗಳ ಪರಿಹರಿಪನು. ಅಕ್ರೂರನನ್ನು ಪ್ರೀತಿಯಿಂದ ಸಲುಹಿದನು. ತನ್ನ ಶಂಖವನ್ನು ಪ್ರಯೋಗಿಸಿ ಗಜೇಂದ್ರನನ್ನು ಮೊಸಳೆಯ ಬಾಧೆಯಿಂದ ಕಾಪಾಡಿದನು. ಅಜಮಿಳನು ಭಕ್ತಿಯಿಂದ ‘ನಾರಾಯಣ’ ಎಂದು ಕರೆದಾಗ ಬಂದು ಸಲುಹಿದನು. ಹೀಗೆ ದೇವನು ತನ್ನ ಭಕ್ತರು ಪ್ರೀತಿಯಿಂದ ಕರೆದಾಗ ಬಂದು ರಕ್ಷಿಸುವವನು ಎಂದು ಗೋಪಾಲದಾಸರು ಹೇಳಿದ್ದಾರೆ.

೩. ಮುಕ್ತರಾಗಲು ಏನು ಮಾಡಬೇಕೆಂದು ವಿಜಯದಾಸರು ಹೇಳಿದ್ದಾರೆ?

ಉತ್ತರ : ಮಾನವನು ಮುಕ್ತನಾಗಲು ಸದಾ ಶ್ರೀಹರಿಯನ್ನು ಪ್ರೀತಿಯಿಂದ ಭಜಿಸಬೇಕು. ಸದಾ ನಮ್ಮ ಹೃದಯದಲ್ಲಿ ಶ್ರೀಹರಿಯು ವಾಸಿಸುವಂತೆ ಮನಸ್ಸನ್ನು ಶುದ್ಧಯಾಗಿ ಇಟ್ಟುಕೊಂಡಿರಬೇಕು. ಜ್ಞಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ ಗಾನಲೋಲನಾದ ಶ್ರೀಹರಿಯನ್ನು ಕುಳ್ಳಿರಿಸಿ ಧ್ಯಾನಮಾಡುತ್ತಾ ದೇವನನ್ನು ಭಜಿಸಬೇಕು. ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಂದ ಮುತ್ತಿನ ಆರತಿಯನ್ನು ಎತ್ತುವ ಮೂಲಕ ನನ್ನನ್ನು ಮುಕ್ತನನ್ನಾಗಿ ಮಾಡು ಎಂದು ಪ್ರಾರ್ಥಿಸಬೇಕು ಎಂದು ವಿಜಯದಾಸರು ಹೇಳಿದ್ದಾರೆ.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು ಆರು ವಾಕ್ಯದಲ್ಲಿ ಉತ್ತರಿಸಿ.

೧. ಶ್ರೀಪಾದರು ನೀಡಿರುವ ಜೀವನ ಸಂದೇಶ ತಿಳಿಸಿ.

ಉತ್ತರ : ಶ್ರೀಪಾದರು ಮುಕ್ತಿಯನ್ನು ಬಯಸುವವರರಿಗೆ ವಾತಾವರಣ ಹೇಗೆ ಅನುಕೂಲವಾಗಿರಬೇಕು ಮಎಂದು ಹೇಳಿದ್ದಾರೆ. ಭಕ್ತಿ ಬೇಕು ವಿರಕ್ತಿ ಬೇಕು ಸರ್ವ ಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ ಅಂದರೆ ಮಾನವನು ಮುಕ್ತಿಯನ್ನು ಪಡೆಯಲು ದೇವರಲ್ಲಿ ಭಕ್ತಿ ಇರಬೇಕು. ಮನೆ ಮಕ್ಕಳು ಎಂಬ ವ್ಯಾಮೋಹವನ್ನು ತೊರೆದು, ಸುಖ ಭೋಗಗಳ ಬಗ್ಗೆ ವೈರಾಗ್ಯವುಳ್ಳವನಾಗಿರಬೇಕು. ದೈಹಿಕ, ಮಾನಸಿಕ, ಆಧ್ಯಾತ್ಮಿಕ, ನೈತಿಕ ಶಕ್ತಿಗಳನ್ನು ಪಡೆದುಕೊಂಡು ಇರಬೇಕು. ಮಗನು ಒಳ್ಳೆಯ ಗುಣಗಳನ್ನು ಹೊಂದಿ, ಬುದ್ಧಿವಂತನಾಗಿಬೇಕು. ಎಲ್ಲಾರ ಅಭಿಪ್ರಾಯಗಳು ಎಂದು ಶ್ರೀ ಪಾದರಾಜರು ಹೇಳಿದ್ದಾರೆ.

೨. ಗೋಪಾಲದಾಸರು ದೇವರು ಭಕ್ತಪ್ರಿಯ ಎಂಬುದನ್ನು ಹೇಗೆ ವಿವರಿಸಿದ್ದಾರೆ ?

ಉತ್ತರ : ದೇವರು ಭಕ್ತ ಪರಾಧೀನ. ಅನಾಥರಕ್ಷಕ. ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ
ಅವರ ಸಂಕಷ್ಟಗಳನ್ನು ಪರಿಹರಿಸುತ್ತಾನೆ. ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು
ಸಂಕಷ್ಟಗಳನ್ನು ನಿವಾರಿಸುವ ಗುಣ ಈ ಪರಮಾತ್ಮನದು. ಆದುದರಿಂದ ಆ ಭಗವಂತನ್ನು
ಹೃದಯಕಮಲದಲ್ಲಿಟ್ಟು ಆರಾಧಿಸಬೇಕು. ನಂಬಿಕೆಟ್ಟವರಿಲ್ಲ. ನಂಬಿಕೆ, ಪ್ರೀತಿ, ದೃಢಸಂಕಲ್ಪಗಳು ಸದಾ
ಅಚಲವಾಗಿರಬೇಕು. ನಮ್ಮ ದೇವನು ಪ್ರೀತಿಯಿಂದಲಿ ಸ್ಮರಿಸುವವರ ಪಾತಕಗಳ ಪರಿಹರಿಪನು. ಅಕ್ರೂರನನ್ನು
ಪ್ರೀತಿಯಿಂದ ಸಲುಹಿದನು. ತನ್ನ ಶಂಖವನ್ನು ಪ್ರಯೋಗಿಸಿ ಗಜೇಂದ್ರನನ್ನು ಮೊಸಳೆಯ ಬಾಧೆಯಿಂದ
ಕಾಪಾಡಿದನು. ಅಜಮಿಳನು ಭಕ್ತಿಯಿಂದ ‘ನಾರಾಯಣ’ ಎಂದು ಕರೆದಾಗ ಬಂದು ಸಲುಹಿದನು. ಹೀಗೆ
ದೇವನು ತನ್ನ ಭಕ್ತರು ಪ್ರೀತಿಯಿಂದ ಕರೆದಾಗ ಬಂದು ರಕ್ಷಿಸುವವನು. ಎಂದು ತಮ್ಮ ಈ ಕೀರ್ತನೆಯಲ್ಲಿ
ದಾಸರು ಸ್ತುತಿಸಿದ್ದಾರೆ.

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಸುಸಂಗ ಹಿಡಿಯಲೆಬೇಕು ದುಸ್ಸಂಗ ಬಿಡಬೇಕು”

ಆಯ್ಕೆ : ಶ್ರೀಪಾದರಾಜರ ಕೀರ್ತನೆಯ ಈ ಸಾಲನ್ನು ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಬೆಂಗಳೂರು ಇವರು
ಪ್ರಕಟಿಸಿರುವ ‘ಸಮಗ್ರ ದಾಸ ಸಾಹಿತ್ಯ ಸಂಪುಟ’ಗಳಿಂದ ಆಯ್ದು ನಿಗದಿಪಡಿಸಿದ ‘ಜೀವನ ದರ್ಶನ
ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಮಾನವನು ಮುಕ್ತಿಯನ್ನು ಪಡೆಯಲು ಭಕ್ತಿ ಬೇಕು ವಿರಕ್ತಿ ಬೇಕು ಸರ್ವ ಶಕ್ತಿ ಬೇಕು ಸತಿ
ಅನುಕೂಲ ಬೇಕು ಸುತನಲ್ಲಿ ಒಳ್ಳೆಯ ಗುಣಗಳಿರಬೇಕು ಎಂದು ವಿವರಿಸುವ ಸಂದರ್ಭದಲ್ಲಿ ಈ ಮಾತು
ಬಂದಿದೆ.
ಸ್ವಾರಸ್ಯ : ಮಾನವನು ಮುಕ್ತಿಯನ್ನು ಪಡೆಯಲು ಸಂಗವು ಬಹಳ ಮುಖ್ಯ ಎನ್ನುವುದು. ನಾವು
ಯಾವಾಗಲೂ ಒಳ್ಳೆಯವರ ಸಂಗವನ್ನು ಮಾಡಿ ಸದ್ವಿಚಾರಗಳನ್ನು ಕಲಿಯ  ಬೇಕೆಂಬುದು ಸ್ವಾರಸ್ಯಕರವಾಗಿದೆ.

೨. “ಅನಾದಿ ಮೊರೆಯ ಕೇಳಿ ಅನಿಮಿದೊಳು ಒದಗಿದಾತ”

ಆಯ್ಕೆ : ಗೋಪಾಲದಾಸರ ಕೀರ್ತನೆಯ ಈ ಸಾಲನ್ನು ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಬೆಂಗಳೂರು ಇವರು
ಪ್ರಕಟಿಸಿರುವ ‘ಸಮಗ್ರ ದಾಸ ಸಾಹಿತ್ಯ ಸಂಪುಟ’ಗಳಿಂದ ಆಯ್ದು ನಿಗದಿಪಡಿಸಿದ ‘ಜೀವನ ದರ್ಶನ’
ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ದೇವರು ಭಕ್ತ ಪರಾಧೀನ. ಅನಾಥರಕ್ಷಕ. ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ
ಅವರ ಸಂಕಷ್ಟಗಳನ್ನು ಪರಿಹರಿಸುತ್ತಾನೆ. ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು
ಸಂಕಷ್ಟಗಳನ್ನು ನಿವಾರಿಸುವ ಗುಣ ಈ ಪರಮಾತ್ಮನದು. ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು
ಹೇಳಿದ್ದಾರೆ.
ಸ್ವಾರಸ್ಯ : ದೇವರು ತನ್ನ ಭಕ್ತನು ಕಷ್ಟದಲ್ಲಿ ಇದ್ದಾಗ ಭಕ್ತಿಯಿಂದ ಮೊರೆಯಿಟ್ಟು ಪ್ರಾರ್ಥಿಸಿದ ತಕ್ಷವೇ ಬಂದು
ಭಕ್ತಿರ ಕಷ್ಟಗಳನ್ನು ಪರಿಹರಿಸುವುದು ಸ್ವಾರಸ್ಯಕರವಾಗಿದೆ.

೩. “ನಿನ್ನನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ”

ಆಯ್ಕೆ : ವಿಜಯದಾಸರ ಕೀರ್ತನೆಯ ಈ ಸಾಲನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು
ಪ್ರಕಟಿಸಿರುವ ‘ಸಮಗ್ರ ದಾಸ ಸಾಹಿತ್ಯ ಸಂಪುಟ’ಗಳಿಂದ ಆಯ್ದು ನಿಗದಿಪಡಿಸಿದ ‘ಜೀವನ ದರ್ಶನ’
ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಮಾನವನ ಜನ್ಮದ ಸಾರ್ಥಕತೆ ಮುಕ್ತಿಗಳಿಸುವಲ್ಲಿ ಇದೆ. ಇಹಲೋಕದಿಂದ ಮುಕ್ತನಾಗಲು ಸದಾ
ಹರಿ ನಾಮಸ್ಮರಣೆ ಮಾಡಬೇಕು. ಅಚಲವಾದ ದೃಢ ಭಕ್ತಿಯಿಂದ ದೈವ ಸಾಕ್ಷಾತ್ಕಾರವಾಗುತ್ತದೆ. ಭಕ್ತಿ – ಭಕ್ತ
ಒಂದಾದಾಗ ಮಾತ್ರ ಮುಕ್ತಿ ಸಾಧ್ಯವೆಂದು, ಹೇಳಿದ ಸಂದರ್ಭದಲ್ಲಿ ಈ ಮಾತನ್ನ ಹೇಳಿದ್ದಾರೆ.
ಸ್ವಾರಸ್ಯ : ಮಾನವನು ಭಕ್ತನಾದ ನಾನು ನಿನ್ನನ್ನು ಬಿಡುವುದಿಲ್ಲ, ದೇವರಾದ ನೀನು ನನ್ನನ್ನು ಕೈಬಿಡದೆ
ರಕ್ಷಿಸಬೇಕು ಎಂಬ ಮಾತು ಸ್ವಾರಸ್ಯಕರವಾಗಿದೆ.

ಉ. ಮೊದಲೆರಡು ಪದಗಳಿಗಿರುವ ಸಂಬಂಧದಂತೆ   ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

೧. ಶ್ರೀಪಾದರು : ಅಬ್ಬೂರು : : ಗೋಪಾಲದಾಸರು : _______

೨. ಜ್ಞಾನವೆಂಬೋ : ನವರತ್ನ : : ಭಕ್ತಿರಸವೆಂಬೋ : ________

೩. ಹೃದಯ : ಎದೆ : : ಜ್ಞಾನ : __________

೪. ಗೋಪಾಲದಾಸರು : ಗೋಪಾಲವಿಠಲ : : ವಿಜಯದಾಸರು : ________

೫. ಮೋದ : ಆನಂದ : : ರಮಣ : _____________

ಸರಿ ಉತ್ತರಗಳು.

೧. ಮೊಸರುಕಲ್ಲು

೨. ಮುತ್ತುಮಾಣಿಕ್ಯ

೩. ಜಾನ

೪. ವಿಜಯವಿಠಲ

೫. ಪತಿ

ಪ್ರಾಯೋಗಿಕ ಭಾಷಾಭ್ಯಾಸ

ಅ. ಈ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

ಸತಿ – ಹೆಂಡತಿ, ಪತ್ನಿ

ನಕ್ರ – ಮೊಸಳೆ

ರಮಣ – ಗಂಡ, ಪತಿ

ಪಾತಕ – ಕೆಟ್ಟ ಕೆಲಸ, ಪಾಪ, ದೋಷ

ಮೋದ – ಆನಂದ, ಸಂತೋಷ

ಅನಾಥ – ದಿಕ್ಕಿಲ್ಲದವನು, ತಬ್ಬಲಿ 

ಆ. ಕೊಟ್ಟಿರುವ ಪದಗಳಿಗೆ ತದ್ಭವ ರೂಪ ಬರೆಯಿರಿ.

ಮುಕ್ತಿ – ಮುಕುತಿ

ಹೃದಯ – ಎದೆ

ಪಕ್ಷಿ – ಪಕ್ಕಿ/ ಹಕ್ಕಿ

ಶ್ರೀ – ಸಿರಿ

ಮುಕ್ತ – ಮುಕುತ

ಮಾಣಿಕ್ಯ – ಮಾಣಿಕ

ಪಠ್ಯಾಧಾರಿತ ಚಟುವಟಿಕೆ.

ಕೊಟ್ಟಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ.

೧. ಶ್ರೀಪಾದರಾಜರ ಕೀರ್ತನೆಯಲ್ಲಿನ ಎರಡು ಮತ್ತು ಮೂರನೆ ಚರಣದ

(ಸತಿ ಅನುಕೂಲ ———— – ಉಪಶಾಂತವಿರಬೇಕು) ನಾಲ್ಕು ಸಾಲುಗಳು.

ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕು

ಮತಿವಂತನಾಗಬೇಕು ಮತ ಒಂದಾಗಬೇಕು

ಜಪದ ಜಾಣುವೆ ಬೇಕು ತಪದ ನೇಮವೆ ಬೇಕು

ಉಪವಾಸ ವ್ರತ ಬೇಕು ಉಪಶಾಂತವಿರಬೇಕು.

೨. ವಿಜಯದಾಸರ ಕೀರ್ತನೆಯ ಮೊದಲೆರಡು ಚರಣ

(ಜ್ಞಾನವೆಂಬೋ —————- ಮುತ್ತಿನಾರತಿಯೆತ್ತುವೆ) ನಾಲ್ಕು ಸಾಲುಗಳು.

ಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿ

ಗಾನಲೋಲನ ಕುಳ್ಳಿರಿಸಿ | ಧ್ಯಾನದಿಂದ ಭಜಿಸುವೆ

ಭಕ್ತಿರಸವೆಂಬ ಮುತ್ತು ಮಾ | ಣಿಕ್ಯದ ಹರಿವಾಣದಿ

ಮುಕ್ತನಾಗಬೇಕುಯೆಂದು ಮುತ್ತಿನಾರತಿ ಎತ್ತುವೆ 

FAQ :

1. ವ್ಯಕ್ತಿಯು ಮುಕ್ತಿ ಪಡೆಯಲು ಏನು ಮಾಡಬೇಕು?

ಉತ್ತರ : ವ್ಯಕ್ತಿಯು ಮುಕ್ತಿಯನ್ನು ಪಡೆಯಲು ಭಕ್ತಿಬೇಕು, ವಿರಕ್ತಿ ಬೇಕು ಹಾಗೂ ಸರ್ವ ಶಕ್ತಿಬೇಕು.

2. ದೇವನು ಯಾವ ಮಂತ್ರಕ್ಕೆ ಒಲಿಯುವನು?

ಉತ್ತರ : ದೇವನು ಪ್ರೀತಿಯ ಭಕ್ತಿಯ ಮಂತ್ರಕ್ಕೆ ಒಲಿಯುವನು.

3. ಸದಾ ಹೃದಯದಲ್ಲಿ ವಾಸಮಾಡುವವನು ಯಾರು?

ಉತ್ತರ : ಸದಾ ಹೃದಯದಲ್ಲಿ ವಾಸಮಾಡುವವನು ಶ್ರೀಹರಿಯು.

ಇತರೆ ವಿಷಯಗಳು :

8th Standard All Subject Notes

8th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh