10ನೇ ತರಗತಿ ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು ಸಮಾಜ ವಿಜ್ಞಾನ ನೋಟ್ಸ್‌ | 10th Class Samuhika Vartane Mattu Pratibhatanegalu Notes in Kannada

10ನೇ ತರಗತಿ ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು ಸಮಾಜ ನೋಟ್ಸ್‌,10th Social Science Chapter 23 Notes Question Answer Pdf Mcq in Kannada Medium 2024 Kseeb Solution For Class 10 Social Science Sociology Chapter 23 Notes In Kannada 10th Class Samuhika Vartane Mattu Pratibhatanegalu Notes in Kannada

 
Samuhika Vartane Mattu Pratibhatanegalu

Sslc Samuhika Vartane Mattu Pratibhatanegalu Notes

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ,

1. ಸಾಮಾಜಿಕ ಚಳವಳಿ ಎಂದರೇನು?

ಸಾಮಾಜಿಕ ಚಳವಳಿ ಎಂದರೆ ಮಾನವ ಸಮಾಜದ ಚಲನೆ, ಬದಲಾವಣೆ ಮತ್ತು ರೂಪಾಂತರಗಳಿಗೆ ಸಂಬಂಧಿಸಿ ನಡೆಯುವ ಒಂದು ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧದ ಸಾಮಾಜಿಕ ಪ್ರತಿಕ್ರಿಯೆ

2. ಸಮೂಹ ವರ್ತನೆ ಎಂದರೇನು?

ಜನರು ಆಕಸ್ಮಿಕವಾದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ಹಾಗೂ ವರ್ತನೆಗಳನ್ನು ಸಮೂಹ ವರ್ತನೆ ಎನ್ನಬಹುದು.

3. ಜನಮಂದೆ ಎಂದರೇನು?

ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿಯೇ ಜನಮಂದೆ

4. ದೊಂಬಿ/ಗಲಭೆ ಎಂದರೇನು?

ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆಯನ್ನು ದೊಂಬಿ ಗಲಭೆ ಎಂದು ಕರೆಯಬಹುದು.

5. ಪರಿಸರ ಚಳವಳಿ ಎಂದರೇನು?

ಪರಿಸರ ಚಳವಳಿ ಎಂದರೆ ಪರಿಸರದಲ್ಲಿರುವ ಜೀವ ಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ಚಳವಳಿ,

6. ಚಿಪ್ಕೋ ಚಳವಳಿ ಎಲ್ಲಿ ನಡೆಯಿತು?

ಉತ್ತರ ಪ್ರದೇಶದ ತೆಹ್ರಿ-ಘರ್ವಾಲ್ ಜಿಲ್ಲೆಯ ರೆನ್ನಿ ಗ್ರಾಮದಲ್ಲಿ ಚಿಪ್ಕೋ ಚಳವಳಿ ನಡೆಯಿತು

7. ಕರ್ನಾಟಕದ ಅಪ್ಪಿಕೋ ಚಳವಳಿ ಎಲ್ಲಿ ನಡೆಯಿತು?

ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮ

8. ನರ್ಮದಾ ಬಚಾವೋ ಆಂದೋಲನದ ನಾಯಕತ್ವ ವಹಿಸಿದವರು ಯಾರು?

ಮೇಧಾ ಪಾಟ್ಕರ್

9. ಕೈಗಾ ವಿರೋಧಿ ಚಳವಳಿಯ ಉದ್ದೇಶವೇನು?

ಕೈಗಾ ಅಣುಶಕ್ತಿ ಸ್ಥಾವರ ಸ್ಥಾಪನೆಯಿಂದ ಅರಣ್ಯನಾಶ, ಅಣುವಿಕಿರಣದಿಂದ ಪರಿಸರ ಮಾಲಿನ್ಯ ಮುಂತಾದ ದುಷ್ಪರಿಣಾಮಗಳಿಂದ ಜೀವ ಪ್ರಭೇದಗಳ ಮೇಲೆ ಹಾನಿಯಾಗುತ್ತದೆ ಎಂದು ಕೈಗಾ ವಿರೋಧಿ ಚಳವಳಿಯನ್ನು ಆರಂಭಿಸಲಾಯಿತು.

10. ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪನೆ ಮಾಡಿದವರು ಯಾರು?

ಪ್ರೊ. ಎಂ.ಡಿ. ನಂಜುಂಡಸ್ವಾಮಿ

11. ಲಂಡನ್ ನಲ್ಲಿ ಪ್ರಾರಂಭವಾದ ಮೊದಲ ಕಾರ್ಮಿಕರ ಸಂಘಟನೆ ಯಾವುದು?

“The International Working men’s Association’

12. ಆತ್ಮಗೌರವ ಚಳವಳಿಯನ್ನು ಪ್ರಾರಂಭಿಸಿದರು ಯಾರು?

ಪೆರಿಯಾರ್ ರಾಮಸ್ವಾಮಿರವರು ಆತ್ಮಗೌರವ ಚಳವಳಿಯನ್ನು ಪ್ರಾರಂಭಿಸಿದರು

III.ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಚಿಪ್ಕೋ ಚಳವಳಿಯ ಉದ್ದೇಶವೇನು?

ಉತ್ತರ ಪ್ರದೇಶದ ತೆ-ಘರ್ವಾಲ್ ಜಿಲ್ಲೆಯ ರೆನ್ನಿ ಗ್ರಾಮದಲ್ಲಿ 2500 ಮರಗಳನ್ನು ಸರ್ಕಾರವು ಕಡಿಯಲು ಅನುಮತಿ ನೀಡಿತ್ತು. ಇದರಿಂದ ಅರಣ್ಯ ನಾಶವಾಗುತ್ತದೆ ಮತ್ತು ಪರಿಸರ ಹಾಳಾಗುತ್ತದೆ ಎಂದು ತಿಳಿದು ಅಲ್ಲಿನ ಮಹಿಳೆಯರೇ ಮುಂದಾಗಿ ಯಾವ ಆಮಿಷ-ಬೆದರಿಕೆಗಳಿಗೆ ಮಣಿಯದೆ ಮರಗಳನ್ನು ತಬ್ಬಿಕೊಂಡು ‘ಅಪ್ಪಿಕೋ'(ಚಿಪ್ಕೋ) ಚಳವಳಿಯನ್ನು ಪ್ರಾರಂಭಿಸಿದರು.

2. ಸಮೂಹ ವರ್ತನೆಯ ಮಾದರಿಗಳಾವುವು?

  • ಚಿಪ್ಕೋ ಚಳವಳಿ
  • ಕರ್ನಾಟಕದ ಆಪ್ಪಿಕೋ ಚಳವಳಿ
  • ನರ್ಮದಾ ಬಚಾವೋ ಆಂದೋಲನ
  • ಮೌನ ಕಣಿವೆ ಆಂದೋಲನ . ಕರ್ನಾಟಕ ಕರಾವಳಿ ತೀರದ ಪರಿಸರ ಚಳವಳಿ
  • ಕೈಗಾ ಅಣು ಸ್ಥಾವರ ವಿರೋಧಿ ಚಳವಳಿ

3. ಮಹಿಳಾ ಚಳವಳಿ ಎಂದರೇನು? ಉದಾಹರಣೆ ಕೊಡಿ.

ಪುರುಷ ಪ್ರಾಧಾನ್ಯದ ಅಸಮಾನತೆಯ ದೃಷ್ಟಿಕೋನಗಳು, ಮಹಿಳೆಯ ಮೇಲೆ ಪುರುಷ ಪ್ರಾಧಾನ್ಯ ಸಂಸ್ಕೃತಿ ನಡೆಸಿದ ದರ್ಪ, ಶೋಷಣೆ, ದೌರ್ಜನ್ಯಗಳ ವಿರುದ್ಧ ಮಹಿಳೆಯರು ನಡೆಸಿದ ಪ್ರತಿಭಟನೆಯೇ ಮಹಿಳಾ ಚಳವಳಿ. ಉದಾ: ಮದ್ಯಪಾನ ನಿಷೇಧ ಚಳವಳಿ:

4. ಜನಮಂದೆಯ ಸ್ವರೂಪವನ್ನು ತಿಳಿಸಿ,

  • ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿಯೇ ಜನಮಂದೆ,
  • ಉದಾಹರಣೆಗೆ ಚಲನಚಿತ್ರ ಮಂದಿರದ ಹತ್ತಿರ ಟಿಕೆಟ್ ಪಡೆಯಲು ಮುತ್ತಿಗೆ ಹಾಕಿದಂತೆ ಸೇರಿರುವ
  • ಜನಸ್ತೋಮ, ರಸ್ತೆ ಅಪಘಾತ ವೀಕ್ಷಿಸಲು ಸೇರಿರುವ ಜನರ ಗುಂಪು – ಇತ್ಯಾದಿ.
  • ಜನಮಂದೆಯಲ್ಲಿರುವ ಜನರ ಅನಿಯಂತ್ರಿತ ನಡವಳಿಕೆಯು ಎಷ್ಟೋ ಬಾರಿ ಲೋಪದೋಷಗಳನ್ನು ಸೂಚಿಸುವುದುಂಟು.
  • ಇದು ಕೆಲವೊಮ್ಮೆ ಸಾಮಾಜಿಕ ಸಂಸ್ಥೆಗಳ ಕಾರ್ಯವಿಧಾನದ ಬಗೆಗಿರುವ ಜನರ ಅಸಂತೃಪ್ತಿಯನ್ನು ಪ್ರಕಟಿಸುವುದಲ್ಲದೆ ಸರ್ಕಾರದ ಯೋಜನೆಗಳು, ಧೋರಣೆಗಳು ಮತ್ತು ನಿರ್ದಿಷ್ಟ ಕಾರ್ಯಕ್ರಮಗಳ ಬಗೆಗಿನ ಜನರ ಅಸಮಾಧಾನವನ್ನು ಹೊರಹಾಕುತ್ತದೆ.

5. ಪರಿಸರ ಚಳವಳಿಯ ಅರ್ಥ ಮತ್ತು ಸ್ವರೂಪವನ್ನು ತಿಳಿಸಿ.

  • ಪರಿಸರ ಚಳವಳಿ ಎಂದರೆ ಪರಿಸರದಲ್ಲಿರುವ ಜೀವ ಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ಚಳವಳಿ,
  • ಅಂದರೆ ನಮ್ಮ ಸುತ್ತಮುತ್ತಲಿನ ಭೂಮಿ, ಗಾಳಿ, ನೀರು ಸೇರಿದಂತೆ ಇಡೀ ಜೀವಮಂಡಲವನ್ನು ನಾಶ ಮಾಡುತ್ತಿರುವುದು ಮತ್ತು ಕಲುಷಿತ ಮಾಡುತ್ತಿರುವುದನ್ನು ವೈಜ್ಞಾನಿಕವಾಗಿ ಪ್ರತಿಭಟಿಸುವ ಚಳವಳಿಯೇ ಪರಿಸರ ಚಳವಳಿ,
  • ಪರಿಸರ ಚಳವಳಿ ದಿಢೀರನೆ ಕಾಣಿಸಿಕೊಂಡ ಚಳವಳಿಯಲ್ಲ.
  • ಹಲವಾರು ವರ್ಷಗಳು ಪರಿಸರ ಮತ್ತು ಪರಿಸರ ವಾಸಿಗಳ ಮೇಲೆ ನಡೆಸಿದ ದೌರ್ಜನ್ಯಗಳಿಗೆ ಹುಟ್ಟಿಕೊಂಡ ಪ್ರತಿರೋಧಗಳು ಈ ಚಳವಳಿಗಳಲ್ಲಿವೆ.

6. ದೊಂಬಿ ಎಂದರೇನು? ಅದರ ಸ್ವರೂಪವನ್ನು ವಿವರಿಸಿ.

  • ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆಯನ್ನು ದೊಂಬಿ /ಗಲಭೆ ಎಂದು ಕರೆಯಬಹುದು.
  • ದೊಂಬಿ ಗಲಭೆ ಎಂಬುದು ಜನಮಂದೆ ವರ್ತನೆಯ ಮತ್ತೊಂದು ಮಾದರಿ,
  • ಜನಮಂದೆಯಲ್ಲಿ ಕಾಣುವಷ್ಟು ಕನಿಷ್ಠ ಮಟ್ಟದ ಉದ್ದೇಶ, ಏಕತೆ ಕೂಡ ದೊಂಬಿಯಲ್ಲಿರುವುದಿಲ್ಲ.
  • ದೊಂಬಿ/ ಗಲಭೆಗಳಲ್ಲಿ ವಿವಿಧ ಸಮಾಜಘಾತಕ ಗುಂಪುಗಳು ತಮ್ಮ ಹಿತಾಸಕ್ತಿಗಳನ್ನು ಬಳಸಿಕೊಳ್ಳುವ
  • ಉದ್ದೇಶದಿಂದಲೇ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾಳು ಮಾಡುತ್ತಾ ಮುಂದೆ ಹೋಗುತ್ತವೆ.
  • ದೊಂಬಿ/ಗಲಭೆಗಳು ಮೊದಲಿಗೆ ಗೊಂದಲವನ್ನು ಸೃಷ್ಟಿ ಮಾಡುತ್ತವೆ.
  • ಆ ಮೂಲಕ ಅಪಪ್ರಚಾರಗಳನ್ನು ನಡೆಸಿ ಗಲಭೆಗಳನ್ನು ಸೃಷ್ಟಿಸುತ್ತವೆ. ಕೆಲವೊಮ್ಮೆ ದೊಂಬಿ/ಗಲಭೆಗಳು ಅಪಾರವಾದ ಜೀವ ಹಾನಿಯನ್ನುಂಟು ಮಾಡುತ್ತವೆ.

7. ಕರ್ನಾಟಕದ ಅಪ್ಪಿಕೋ ಚಳವಳಿಯನ್ನು ವಿವರಿಸಿ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮದ ರೈತರು 1983ರಲ್ಲಿ ಅಪ್ಪಿಕೋ ಚಳವಳಿಯನ್ನು ನಡೆಸಿದರು. ಕಲಸೆ ಎಂದು ಕರೆಯುವ ಅರಣ್ಯದಲ್ಲಿ ಗುತ್ತಿಗೆದಾರರು ಮರ ಕಡಿಯಲು ಬಂದಾಗ ಅದನ್ನು ತಡೆಯಲು ಸ್ಥಳೀಯ ಜನರು ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಪ್ರತಿಭಟಿಸಿದರು. ಮರಗಳ ಕಳ್ಳ ಸಾಗಾಣಿಕೆ ತಪ್ಪಿಸುವುದು, ಗಿಡಮರಗಳನ್ನು ಬೆಳೆಸುವುದು ಹಾಗೂ ಪರಿಸರ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ಅಲ್ಲಿನ ಸ್ಥಳೀಯ ರೈತರ ಉದ್ದೇಶವಾಗಿತ್ತು.

8. ನರ್ಮದಾ ಬಚಾವೋ ಆಂದೋಲನವನ್ನು ವಿವರಿಸಿ,

ಗುಜರಾತ್ ರಾಜ್ಯದ ಸರ್ದಾರ್ ಸರೋವರ ಯೋಜನೆಯಡಿಯಲ್ಲಿ ನರ್ಮದಾ ನದಿಗೆ ಕಟ್ಟಲಾದ ಆಣೆಕಟ್ಟು ನಿರ್ಮಾಣ ಅಲ್ಲಿನ ಸ್ಥಳೀಯ ಜನರನ್ನು ಮತ್ತು ಬುಡಕಟ್ಟು ಜನರನ್ನು ನಿರ್ಗತಿಕರಣಕ್ಕೆ ಒಳಪಡಿಸಿತ್ತು. ಅರಣ್ಯ ನಾಶ, ಪರಿಸರ ನಾಶ, ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ತಿಳಿದು ಅವುಗಳನ್ನು ಸಂರಕ್ಷಣೆ ಮಾಡಬೇಕು ಎನ್ನುವ ಆಶಯದಿಂದ ‘ನರ್ಮದಾ ಬಚಾವೋ ಆಂದೋಲನ’ವನ್ನು ಆರಂಭಿಸಲಾಯಿತು.

9. ಮೌನ ಕಣಿವೆ ಆಂದೋಲನವನ್ನು ವಿವರಿಸಿ,

ಕೇರಳದ ಪಾಲ್‌ಘಾಟ್ ತಾಲೂಕಿನ ಮೌನ ಕಣಿವೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಆಣೆಕಟ್ಟಿನ ನಿರ್ಮಾಣದಿಂದ ತೊಂದರೆಯಾಗುತ್ತದೆ. ಪರಿಸರ ನಾರದ ಜೊತೆಗೆ ಅನೇಕ ಜೀವ ಪ್ರಭೇದಗಳು ಜೀವಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು ಮತ್ತು ವನ್ಯಮೃಗ ಆಸಕ್ತರು ಆಣೆಕಟ್ಟಿನ ನಿರ್ಮಾಣದ ವಿರುದ್ಧ ಚಳವಳಿಯನ್ನು ನಡೆಸಿದರು. ಈ ಚಳವಳಿ ಅನೇಕ ಜೀವಸಂಕುಲಗಳನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಯಿತು.

10. ಮದ್ಯಪಾನ ನಿಷೇಧ ಚಳವಳಿಯನ್ನು ವಿವರಿಸಿ,

  • ಮಹಿಳೆಯರು ರೂಪಿಸಿದ ಪ್ರಮುಖ ಚಳವಳಿಗಳಲ್ಲಿ ಮದ್ಯಪಾನ ನಿಷೇಧ ಚಳವಳಿ ಪ್ರಮುಖವಾದುದು.
  • ಈ ಚಳವಳಿ ವಿಭಿನ್ನವಾದದ್ದು, ಯಾಕೆಂದರೆ ಪಾನನಿಷೇಧದ ಸಂದರ್ಭದಲ್ಲಿ ಮಹಿಳೆಯರು ಒಗ್ಗಟ್ಟಾಗಿ ಸಂಘಟಿತವಾಗಿರುತ್ತಾರೆ.
  • ಮದ್ಯಪಾನ ನಿಷೇಧವು ಸ್ವಾತಂತ್ರ್ಯ ಚಳವಳಿಯ ಭಾಗ ಗಾಂಧಿ ಮದ್ಯಪಾನ ನಿಷೇಧಿಸುವ ವಿಚಾರ ಪ್ರತಿಪಾದಿಸುತ್ತಾರೆ. ಮಹಿಳೆಯರ ಮದ್ಯಪಾನ ನಿಷೇಧ ಚಳವಳಿಯು ಚಿಸ್ಕೊ ಚಳವಳಿಯ ಭಾಗವಾಗಿ ರೂಪುಗೊಳ್ಳುತ್ತದೆ.
  • ಕರ್ನಾಟಕದಲ್ಲಿ ಪರಿಸರ ಚಳವಳಿಯ ಭಾಗವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮದ್ಯಪಾನ ನಿಷೇಧ ಚಳವಳಿ ಪ್ರಾರಂಭವಾಗುತ್ತದೆ.
  • ಕುಸುಮಾ ಸೊರಬ ಅವರ ಜೊತೆಗೆ ಹಲವರು ಈ ಚಳವಳಿಯಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.
  • ಇದಲ್ಲದೆಯೂ ಹಾಸನ, ಕೋಲಾರ, ಮಂಡ್ಯ, ಚಾಮರಾಜನಗರ ಇನ್ನೂ ಮುಂತಾದ ಜಿಲ್ಲೆಗಳ ಮಹಿಳೆಯರು ಮದ್ಯಪಾನ ಮಾರಾಟದ ವಿರುದ್ಧ ಚಳವಳಿಗಳನ್ನು ನಡೆಸಿದ್ದಾರೆ.
  • ಮದ್ಯಪಾನವು ಉಂಟುಮಾಡಿದ ಪರಿಣಾಮಗಳನ್ನು ಸಹಿಸಲಾಗದೆ ಮದ್ಯಪಾನ ನಿಷೇಧ ಚಳವಳಿಗಳನ್ನು ಮಹಿಳೆಯರೇ ಸಂಘಟಿಸಿದ್ದಾರೆ

11. ಕಾರ್ಮಿಕ ಚಳವಳಿಯನ್ನು ವಿವರಿಸಿ

  • ‘ಕಾರ್ಮಿಕ ಚಳವಳಿ’ ಅಥವಾ ‘ಕಾರ್ಮಿಕ ಸಂಘ’ ಎನ್ನುವುದು ಸಾಮಾನ್ಯವಾಗಿ ದುಡಿಯುವ ಜನರನ್ನು ಪ್ರತಿನಿಧಿಸುವ ಸಂಘಟನೆ
  • ಉತ್ತಮ ದುಡಿಯುವ ವಾತಾವರಣ, ಗೌರವಯುತ ನಡವಳಿಕೆ, ಕಾರ್ಮಿಕ ಮತ್ತು ಉದ್ಯೋಗ ಕಾನೂನುಗಳ ಅನುಷ್ಠಾನಕ್ಕೆ ಸರ್ಕಾರಗಳನ್ನು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಮೂಲಕ ನಡೆಯುವ ಚಳವಳಿಯನ್ನು ಕಾರ್ಮಿಕ ಚಳವಳಿ ಎಂದು ಕರೆಯಲಾಗುತ್ತದೆ.
  • ಕೆಲವು ದೇಶಗಳಲ್ಲಿ ಕಾರ್ಮಿಕ ಚಳವಳಿಗಳು ರಾಜಕೀಯ ಪಕ್ಷಗಳ ಸಹ ಸಂಘಟನೆಗಳಾಗಿವೆ.
  • ಕೈಗಾರಿಕಾ ಬಂಡವಾಳಶಾಹಿ ಶೋಷಣೆಯ ವಿರುದ್ಧವಾಗಿ ಸಮಕಾಲೀನ ಕಾರ್ಮಿಕ ಪರ ಸಿದ್ಧಾಂತವು ಬೆಳೆಯುತ್ತ ಬಂದಿದೆ

12. ಅಸ್ಪೃಶ್ಯತೆ ಆಚರಣೆ ವಿರೋಧಿ ಚಳವಳಿಯ ಚರಿತ್ರೆಯನ್ನು ವಿವರಿಸಿ,

  • ಅಸ್ಪಶ್ಯತೆ ಆಚರಣೆ ವಿರೋಧಿ ಚಳವಳಿಯ ಚರಿತ್ರೆಯನ್ನು 19ನೇ ಶತಮಾನದಿಂದ ಗುರುತಿಸಬಹುದು. ಮಹಾರಾಷ್ಟ್ರದ ಜ್ಯೋತಿರಾವ್‌ ಪುಲೆಯವರು ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರನ್ನು ಒಳಗೊಂಡ ಚಳವಳಿಯನ್ನು ಆರಂಭಿಸಿದರು.
  • ‘ಚಾತುರ್ವಣ್ರ ಆಧಾರಿತ ಮಾನವ ವಿರೋಧಿ ಆಚರಣೆಗಳನ್ನು ಮತ್ತು ಅವುಗಳ ಪ್ರಾಬಲ್ಯವನ್ನು ತಡೆಯುವುದು ಈ ಚಳವಳಿಯ ಉದ್ದೇಶ,
  • ಈ ಆಶಯದಲ್ಲಿಯೇ ನಂತರ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತಿತರ ಭಾಗಗಳಲ್ಲಿ ಅಸ್ಪೃಶ್ಯತೆ ಆಚರಣೆ ವಿರೋಧಿ ಚಳವಳಿಗಳು ಹುಟ್ಟಿಕೊಂಡಿತು.
  • ಪೆರಿಯಾರ್ ರಾಮಸ್ವಾಮಿರವರು ಆತ್ಮಗೌರವ ಚಳವಳಿಯನ್ನು ಪ್ರಾರಂಭಿಸಿದರು.
  • ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟದೊಂದಿಗೆ ಅಸ್ಪೃಶ್ಯತೆ ಆಚರಣೆ ವಿರೋಧಿ ಚಳವಳಿಯು ತೀವ್ರ ಸ್ವರೂಪ ಪಡೆಯುತ್ತದೆ.

FAQ

1. ಚಿಪ್ಕೋ ಚಳವಳಿ ಎಲ್ಲಿ ನಡೆಯಿತು?

ಉತ್ತರ ಪ್ರದೇಶದ ತೆಹ್ರಿ-ಘರ್ವಾಲ್ ಜಿಲ್ಲೆಯ ರೆನ್ನಿ ಗ್ರಾಮದಲ್ಲಿ ಚಿಪ್ಕೋ ಚಳವಳಿ ನಡೆಯಿತು

2. ಸಮೂಹ ವರ್ತನೆ ಎಂದರೇನು?

ಜನರು ಆಕಸ್ಮಿಕವಾದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ಹಾಗೂ ವರ್ತನೆಗಳನ್ನು ಸಮೂಹ ವರ್ತನೆ ಎನ್ನಬಹುದು.

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh