10ನೇ ತರಗತಿ ಅಧ್ಯಾಯ-24 ಸಾಮಾಜಿಕ ಸವಾಲುಗಳು ಸಮಾಜ ವಿಜ್ಞಾನ ನೋಟ್ಸ್‌ | 10th Class Social Science Chapter 24 Notes

10ನೇ ತರಗತಿ ಅಧ್ಯಾಯ-24 ಸಾಮಾಜಿಕ ಸವಾಲುಗಳು ಸಮಾಜ ವಿಜ್ಞಾನ ನೋಟ್ಸ್‌,10th Class Social Science Chapter 24 Notes Question Answer Mcq Pdf in Kannada 2024 Kseeb Solution For Class 10 Social Science Notes in Kannada Medium 10th Standard Samajika Savalugalu Notes in Kannada

 
10th Class Social Science Chapter 24

10th Class Social Science Chapter 24 Notes

I, ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ,

1. ಬಾಲಕಾರ್ಮಿಕರು ಎಂದರೆ ಯಾರು?

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಅಂತಹವರನ್ನು ಬಾಲ ಕಾರ್ಮಿಕರು ಎಂದು ಕರೆಯಲಾಗಿದೆ

2. “ಹದಿಹರೆಯದವರ ದುಡಿಮೆ ನಿಷೇಧವನ್ನು ಯಾವಾಗ ಜಾರಿಗೆ ಬಂದಿತು?

2016

3. ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆಯನ್ನು ಯಾವಾಗ ಜಾರಿಗೆ ತರಲಾಯಿತು?

2012

4. ಭಾರತದಲ್ಲಿ 2001ರ ಜನಗಣತಿಯ ಪ್ರಕಾರ ಪ್ರತಿ 1000 ಪುರುಷರಿಗೆ ಹೆಣ್ಣುಮಕ್ಕಳ ಸಂಖ್ಯೆ ಎಷ್ಟು?

933

5. ಭಾರತದಲ್ಲಿ 2012ರಲ್ಲಿ ಪ್ರತಿ 1000 ಪುರುಷರಿಗೆ ಹೆಣ್ಣುಮಕ್ಕಳ ಸಂಖ್ಯೆ ಎಷ್ಟು?

940

6. ಪರ್-ಕಾನ್ಸೆಪ್ಶನ್ ಮತ್ತು ಪ್ರಿ-ನಾಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ಸ್ ಆಕ್ಟ್ ಮೊಟೆನ್ ಯಾವಾಗ ಜಾರಿಗೆ ಬಂತು?

1994

7. ಕಾಣದ ಹಸಿವು ಎಂದರೇನು?

ಪೋಷಕಾಂಶಗಳ ಅಭಾವವನ್ನು ‘ಕಾಣದ ಹಸಿವು’ ಎನ್ನುತ್ತಾರೆ

8. ನಮ್ಮ ಸಮಾಜವನ್ನು ಪರಂಪರಾಗತವಾಗಿ ಕಾಡಿದ ಒಂದು ಸಾಮಾಜಿಕ ಸಮಸ್ಯೆ ಯಾವುದು?

ಬಾಲ್ಯವಿವಾಹ

9. ಬಾಲ್ಯ ವಿವಾಹ ನಿಷೇಧ ಕಾಯಿದೆ ಯಾವಾಗ ಜಾರಿಗೆ ಬಂದಿದೆ?

2006

10. ಮಕ್ಕಳ ಸಹಾಯವಾಣಿ ಸಂಖ್ಯೆ ಯಾವುದು?

1098

11. ಸಮಾಜಕ್ಕೆ ಅತ್ಯಂತ ದೊಡ್ಡ ಸವಾಲಾಗಿರುವ ಪ್ರಪಂಚದ ಅತ್ಯಂತ ದೊಡ್ಡ ದೌರ್ಜನ್ಯ ಮತ್ತು ಶೋಷಣೆ ಯಾವುದು?

ಮಾನವ ಕಳ್ಳ ಸಾಗಾಣಿಕೆ

12. ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಕಳ್ಳ ವ್ಯವಹಾರದ ನಂತರ ಎರಡನೇ ಅತ್ಯಂತ ದೊಡ್ಡ ವ್ಯವಹಾರ ಅಥವಾ ಮಾರಾಟ ಯಾವುದು?

ಮಾನವ ಕಳ್ಳ ಸಾಗಾಣಿಕೆ

13. ಹೆಣ್ಣುಭ್ರೂಣ ಹತ್ಯೆ ಎಂದರೇನು?

ಸ್ವಾಭಾವಿಕವಾಗಿ ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು ಭ್ರೂಣವನ್ನು ಬೆಳೆಯದಂತೆ ತಡೆಯುವುದು ಅಥವಾ ಕಾನೂನನ್ನು ಕಡೆಗಣಿಸಿ ಹತ್ಯೆ ಮಾಡುವುದನ್ನು ಹೆಣ್ಣು ಭ್ರೂಣ ಹತ್ಯೆ ಎನ್ನುವರು.

14. ಬಾಲ್ಯವಿವಾಹ ಎಂದರೇನು?

18 ವರ್ಷದೊಳಗಿನ ಹುಡುಗಿಗೆ (ಬಾಲಕಿಗೆ) ಅಥವಾ 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡಿದರೆ ಅದನ್ನು ಬಾಲ್ಯವಿವಾಹ ಎಂದು ಕರೆಯಲಾಗುತ್ತದೆ.

15. ಲಿಂಗತಾರತಮ್ಯ ಎಂದರೇನು?

ಸ್ತ್ರೀ ಪುರುಷರ ನಡುವಿನ ತಾರತಮ್ಯವನ್ನು ಲಿಂಗತಾರತಮ್ಯ ಎನ್ನುವರು

16. ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ಎಂದರೇನು?

18 ವರ್ಷದೊಳಗಿನ ಯಾವುದೇ ವ್ಯಕ್ತಿಯ ಆಕ್ರಮ ಮಾರಾಟವನ್ನು ಮಕ್ಕಳ ಮಾರಾಟ ಎನ್ನುವರು 18 ವರ್ಷದೊಳಗಿನ ಯಾವುದೇ ವ್ಯಕ್ತಿಯ (ದೇಶದ ಒಳಗೆ ಅಥವಾ ದೇಶದ ಹೊರಗೆ) ನೇಮಕಾತಿ, ಸಾಗಾಣಿಕೆ, ವರ್ಗಾವಣೆ, ಆಶ್ರಯ, ರವಾನಿಸುವುದು, ಸ್ವಾಧೀನ ಪಡಿಸುವುದು ಅಥವಾ ಶೋಷಣೆಯ ಉದ್ದೇಶಕ್ಕಾಗಿ ನಡೆಯುವ ಕೃತ್ಯವನ್ನು ಮಕ್ಕಳ ಸಾಗಾಣಿಕೆ ಎಂದು ಕರೆಯುತ್ತಾರೆ.

10th Class Social Science Chapter 24 Question Answer

II. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಬಾಲಕಾರ್ಮಿಕ ಸಮಸ್ಯೆಗೆ ಕಾರಣಗಳಾವುವು? ತಿಳಿಸಿ.

  • ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗದಿರುವುದು
  • ಎಲ್ಲಾ ಮಕ್ಕಳಿಗೂ 10ನೇ ತರಗತಿ ವರೆಗೆ ಶಿಕ್ಷಣ ಸಂಪೂರ್ಣ ಉಚಿತವಾಗಿ ದೊರಕದಿರುವುದು
  • ಕುಟುಂಬದ ಆರ್ಥಿಕ ಸ್ಥಿತಿ
  • ಕನಿಷ್ಠ ಕೂಲಿ
  • ಭೂಸುಧಾರಣಾ ಕಾಯ್ದೆಯ ಅನುಷ್ಠಾನದ ಕೊರತೆಗಳು
  • ಹೋಟೆಲ್, ಸಣ್ಣ ಕೈಗಾರಿಕೆ, ಪಟಾಕಿ ತಯಾರಿಕಾ ಘಟಕಗಳು
  • ಅಸಂಘಟಿತ ದುಡಿಮೆಯ ವಲಯ
  • ಬರದಿಂದ ಉಂಟಾಗುವ ಕೃಷಿ ಸಮಾಜದ ಬಿಕ್ಕಟ್ಟುಗಳು
  • ವಲಸೆ
  • ಪೋಷಕರ ದುಶ್ಚಟಗಳು

2. ಬಾಲ್ಯವಿವಾಹದ ಪರಿಣಾಮಗಳು ಯಾವುವು?

  • ಮಕ್ಕಳ ಸರ್ವತೋಮುಖ ಬೆಳವಣಿಗೆ ಕುಂತಿತವಾಗಿ, ಅವರು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ.
  • ಇದರ ಪರಿಣಾಮವಾಗಿ ಮಕ್ಕಳ ಮೇಲೆ ಅತಿಯಾದ ದೌರ್ಜನ್ಯ, ನಿರ್ಲಕ್ಷ್ಯ, ಹಿಂಸೆ, ಶೋಷಣೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಹೆಚ್ಚುತ್ತವೆ.
  • ಮಕ್ಕಳ ಎಲ್ಲಾ ಹಕ್ಕುಗಳ ಉಲ್ಲಂಘನೆ – ಬಾಲ್ಯತನ, ಶಿಕ್ಷಣ, ಮನೋರಂಜನೆ, ಗೆಳೆಯರ ಒಡನಾಟಕ್ಕೆ ಧಕ್ಕೆ, ಅಪೌಷ್ಟಿಕತೆ, ರಕ್ತಹೀನತೆ, ಅನಾರೋಗ್ಯ, ಗರ್ಭಪಾತ, ಶಿಶುಮರಣ, ತಾಯಿಮರಣಕ್ಕೆ ಕಾರಣವಾಗುತ್ತದೆ.
  • ವಿಶೇಷವಾಗಿ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗುವ ಸಂಭವ ಹೆಚ್ಚು. ಹೆಣ್ಣು ಮಕ್ಕಳು
  • ಯಾವುದೇ ಸಾಮಾಜಿಕ ಭದ್ರತೆಗಳಿಲ್ಲದೆ ಆಗಾಗ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭಗಳು ಹೆಚ್ಚು.

3. ಬಾಲಕಾರ್ಮಿಕ ಸಮಸ್ಯೆಯ ನಿರ್ಮೂಲನಾ ಕ್ರಮಗಳಾವುವು? ವಿವರಿಸಿ.

  • ಎಲ್ಲಾ ಸಂದರ್ಭಗಳಲ್ಲಿ ಲಿಂಗ ಸಮಾನತೆಯನ್ನು ಕಾಪಾಡುವುದು ಮತ್ತು ತರುವುದು.
  • ಈ ಅಸಹಾಯಕ ಕುಟುಂಬಗಳು ಬದುಕಿಗೆ ವಲಸೆ / ಗುಳೆ ಹೋಗುವುದನ್ನು ತಡೆಗಟ್ಟುವುದು.
  • ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ/ಮಾರಾಟ ತಡೆ ಕುರಿತು ಅರಿವನ್ನು ಹೆಚ್ಚಿಸುವುದು.
  • ಮಕ್ಕಳ ರಕ್ಷಾಣಾತ್ಮಕ ಹಕ್ಕುಗಳನ್ನು ಪಂಚಾಯತಿಗಳು ಜವಾಬ್ದಾರಿಯಿಂದ ನಿರ್ವಹಿಸುವುದು.

4. ಭಾರತದ ಯಾವುದಾದರೂ ಸಾಮಾಜಿಕ ಸಮಸ್ಯೆಗಳನ್ನು ಹೆಸರಿಸಿ,

ಬಾಲ ಕಾರ್ಮಿಕರು (ಮಕ್ಕಳ ದುಡಿಮೆ)

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ

ಹೆಣ್ಣು ಭ್ರೂಣಹತ್ಯೆ

ಹಸಿವು ಮತ್ತು ಅಪೌಷ್ಟಿಕತೆ

ಲಿಂಗತಾರತಮ್ಯ

ಬಾಲ್ಯ ವಿವಾಹ

ಮಕ್ಕಳ ಸಾಗಾಣಿಕೆ ಮತ್ತು ಮಾರಾಟ

5. ಹಸಿವಿನ ಸೂಚಕಗಳು ಯಾವುವು?

  • ಬದುಕಿರಲು ಅಗತ್ಯವಾಗಿ ಬೇಕಾದಷ್ಟು ಆಹಾರ ಸಿಗದಿರುವುದು
  • ಸತತ ಆಹಾರದ ಮತ್ತು ಪೋಷಕಾಂಶಗಳ ಕೊರತೆಯಿಂದ ನಿಶ್ಯಕ್ತಿ
  • ತೀವ್ರ ಅನಾರೋಗ್ಯ
  • ವಿಕಲಾಂಗತ
  • ಅಕಾಲಿಕ ಮರಣ

6. ಹಸಿವಿನ ಸೂಚಕವನ್ನು ಹೇಗೆ ಕಂಡು ಹಿಡಿಯಲಾಗುವುದು?

  • ಕನಿಷ್ಠ ಕ್ಯಾಲೋರಿ ದೊರಕದ ಆಹಾರ ಸೇವಿಸುವವರ ಶೇಕಡವಾರು ಪ್ರಮಾಣ
  • ಸರಾಸರಿ ತೂಕಕ್ಕಿಂತ ಕಡಿಮೆ ತೂಕ ಇರುವ 5 ವರ್ಷದವರೆಗಿನ ಮಕ್ಕಳ ಶೇಕಡವಾರು ಪ್ರಮಾಣ
  • 5 ವರ್ಷದವರೆಗಿನ ಮಕ್ಕಳ ಮರಣದ ಶೇಕಡವಾರು ಪ್ರಮಾಣ
  • ಈ ಮೂರು ಅಂಶಗಳನ್ನು ಕೂಡಿ ಮೂರರಿಂದ ಭಾಗಿಸಿದರೆ ಬರುವ ಸಂಖ್ಯೆಯೇ ಹಸಿವಿನ ಸೂಚಕ,

7. ಬಾಲ್ಯವಿವಾಹಕ್ಕೆ ಪರಿಹಾರಗಳು ಯಾವುವು?

  • 18 ವರ್ಷದ ತನಕ ಯಾವ ಮಕ್ಕಳು ಶಾಲೆ | ಕಾಲೇಜು ಬಿಡದಿರುವಂತೆ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ.
  • 100% ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಬೇಕು.
  • ಹಾಜರಾತಿಯ ಜೊತೆಗೆ 100 ಜನನ ನೋಂದಣಿ ಮತ್ತು ಜನನ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ ಮಾಡುವುದು.
  • ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು
  • ಬಾಲಕಿಯರ ಬಲವರ್ಧನೆ ಮತ್ತು ಸಬಲೀಕರಣ ಆದ್ಯತೆ
  • ಎಲ್ಲೇ ಬಾಲ್ಯವಿವಾಹ ನಡೆದರು ತಪ್ಪದೇ ದೂರು ನೀಡುವುದು, ಖಂಡಿಸುವುದು, ಪ್ರಶ್ನಿಸುವುದು

8. ಬಾಲಕಾರ್ಮಿಕ, ಹದಿಹರೆಯದವರ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ- 1986ರ ಪ್ರಮುಖ ಅಂಶಗಳು ಯಾವುವು?

  • ಈ ಕಾಯ್ದೆಯ ಪ್ರಕಾರ 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕಾರಣಕ್ಕೂ, ಯಾವುದೇ ಕ್ಷೇತ್ರದಲ್ಲಿ, ಎಲ್ಲಿಯೂ ಕೂಡ ದುಡಿಸುವಂತಿಲ್ಲ. ಮಕ್ಕಳನ್ನು ದುಡಿಮೆಯಲ್ಲಿ ಇಟ್ಟು ಕೊಳ್ಳುವವರಿಗೆ, 2 ವರ್ಷದ ತನಕ ಜೈಲು ಮತ್ತು ರೂ. 50,000/- ತನಕ ದಂಡ ವಿಧಿಸಲಾಗುತ್ತದೆ
  • ಯಾವುದೇ ಕುಟುಂಬದವರೂ ಕೂಡ ಅವರ ಹೊಲ, ಗದ್ದೆ, ವ್ಯಾಪಾರಗಳು ಅವರ 14 ವರ್ಷದೊಳಗಿನ ಅವರ ಸ್ವಂತ ಮಕ್ಕಳನ್ನು ಕೂಡ “ಶಾಲಾ” ಅವಧಿಯಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಇಟ್ಟುಕೊಂಡರೆ ಮಕ್ಕಳ ತಂದೆ, ತಾಯಿ ಅಥವಾ ಕುಟುಂಬಸ್ಥರೇ ಮಾಲೀಕರಾಗಿ ಅಪರಾಧಿಗಳಾಗುತ್ತಾರೆ. ಅವರಿಗೆ ರೂ 10,000/- ದಂಡ ವಿಧಿಸಲಾಗುತ್ತೆ
  • 15 ರಿಂದ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸುವಂತಿಲ್ಲ. ಒಂದು ವೇಳೆ ದುಡಿಸಿದರೆ ಎರಡು ವರ್ಷ ಜೈಲು, ರೂ. 50,000 ದಂಡ ವಿಧಿಸಲಾಗುತ್ತದೆ.

9. ಮಕ್ಕಳ ದುಡಿಮೆಯ ದುಷ್ಪರಿಣಾಮಗಳು ಯಾವುವು?

  • ಬಾಲಕಾರ್ಮಿಕತೆಯು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಅತ್ಯಂತ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತದೆ.
  • ಬಾಲಕಾರ್ಮಿಕರಾಗಿ ದುಡಿಯುವ ಮಕ್ಕಳು ಯುವಕರಾದಾಗ ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಾರೆ.
  • ಚಿಕ್ಕ ವಯಸ್ಸಿನಲ್ಲಿಯೇ ದುಡಿಮೆಯಲ್ಲಿ ಭಾಗವಹಿಸುವುದರಿಂದ, ಕಲಿಕೆಯ ವಯಸ್ಸಿನಲ್ಲಿ ಶಿಕ್ಷಣ ದಿಂದ ವಂಚಿತರಾಗಿ ಅನರಕ್ಷರಸ್ಥರಾಗುತ್ತಾರೆ.
  • ಇದು ಅವರ ಹಕ್ಕುಗಳನ್ನು, ಸ್ವಾತಂತ್ರವನ್ನು ಕಸಿದುಕೊಳ್ಳುತ್ತದೆ.
  • ಮಕ್ಕಳ ದುಡಿಮೆಯು ಕುಟುಂಬಗಳ ಸಾಮಾಜಿಕ ಚಲನೆ, ಆರ್ಥಿಕ ಚಲನೆ ಕುಸಿಯುವಂತೆ ಮಾಡುತ್ತದೆ.
  • ಅಂತಹ ಕುಟುಂಬಗಳಲ್ಲಿ ಮಕ್ಕಳು ಮತ್ತೆ ಮತ್ತೆ ದುಡಿಮೆಗೆ, ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾತ್ತಿರುತ್ತಾರೆ. ಬಾಲ್ಯವಿವಾಹ, ಮಕ್ಕಳ ಮಾರಾಟ ಮತ್ತು ಸಾಗಾಣೆ ಮಾಡುವ, ಸಮಾಜ ವಿರೋಧಿ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತವೆ.

10. ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ – 2012’ ಕಾಯಿದೆಯ ಪ್ರಮುಖ ಅಂಶಗಳು ಯಾವುವು?

  • ಲೈಂಗಿಕ ದೌರ್ಜನ್ಯ (ಭೇದಕ ಹಠದ ದೌರ್ಜನ್ಯ)
  • ಬಲತ್ಕಾರ/ದುರುಪಯೋಗದ/ತೀವ್ರ ಭೇದಕ ಲೈಂಗಿಕ ದೌರ್ಜನ್ಯ
  • ಲೈಂಗಿಕ ಹಲ್ಲೆ
  • ತೀವ್ರ ಸ್ವರೂಪದ ಲೈಂಗಿಕ ಜಿಲ್ಲೆ
  • ಲೈಂಗಿಕ ಕಿರುಕುಳ
  • ಅಶ್ಲೀಲ ಚಿತ್ರ ತಯಾರಿಕೆಗೆ ಮಕ್ಕಳ ಬಳಕೆ
  • ಆಶ್ಲೀಲ ಚಿತ್ರ ಸಂಗ್ರಹ

11. ಲಿಂಗತಾರತಮ್ಯದ ಪ್ರಕಾರಗಳು ಯಾವುವು?

  • ಜನನ ಪ್ರಮಾಣದಲ್ಲಿ ಅಸಮಾನತೆ
  • ಮೂಲಸೌಕರ್ಯದಲ್ಲಿ ಅಸಮಾನತೆ
  • ಅವಕಾಶಗಳಲ್ಲಿ ಅಸಮಾನತೆ
  • ಒಡೆತನದ ಅಸಮಾನತೆ
  • ಕೌಟುಂಬಿಕ ಅಸಮಾನತೆ

12. ಬಾಲ್ಯವಿವಾಹಕ್ಕೆ ಕಾರಣಗಳು ಯಾವುವು?

ಬಾಲ್ಯವಿವಾಹಕ್ಕೆ ಪ್ರಮುಖ ಕಾರಣ ‘ಲಿಂಗ ತಾರತಮ್ಯ’ ಹೆಣ್ಣು ಬೇರೆಯವರ ಮನೆಗೆ ಹೋಗುವವಳು ಅವಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕು ಎಂಬ ನಂಬಿಕೆ

‘ಹೆಣ್ಣು’ ಮತ್ತು ‘ಗಂಡು’ ಮಕ್ಕಳ ಹಾಗೂ ನಡುವಿನ ಬೇಧಭಾವ

‘ಶಿಕ್ಷಣ ಇಲ್ಲದಿರುವಿಕೆ’, ಬಾಲಕಾರ್ಮಿಕತೆ, ಮಕ್ಕಳ ಸಾಗಾಣಿಕೆ ಮತ್ತು ಮಾರಾಟ,

ಕಾನೂನಿನ ಕನಿಷ್ಠ ಮಟ್ಟದ ಅನುಷ್ಠಾನ ಮತ್ತು ಬಳಕೆಯ ಕೊರತೆ,

ಶಿಕ್ಷಣ ವ್ಯವಸ್ಥೆಯಲ್ಲಿ ಕಾನೂನುಗಳ ಅನುಷ್ಠಾನದ ಕೊರತೆ,

ಶಿಕ್ಷಣಕ್ಕೆ, ಸಮಾಜದ / ಸಮುದಾಯಗಳ / ಸಾರ್ವಜನಿಕ ಅಸಹಕಾರ,

ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳ ದೋಷಪೂರಿತವಾದ ಅನುಷ್ಠಾನ,

13. ಬಾಲ್ಯವಿವಾಹದ ದುಷ್ಪರಿಣಾಮಗಳು ಯಾವುವು?

  • ಮಕ್ಕಳ ಸರ್ವತೋಮುಖ ಬೆಳವಣಿಗೆ ಕುಂಠಿತವಾಗಿ, ಅವರು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ.
  • ಇದರ ಪರಿಣಾಮವಾಗಿ ಮಕ್ಕಳ ಮೇಲೆ ಅತಿಯಾದ ದೌರ್ಜನ್ಯ, ನಿರ್ಲಕ್ಷ್ಯ, ಹಿಂಸೆ, ಶೋಷಣೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಹೆಚ್ಚುತ್ತವೆ.
  • ಮಕ್ಕಳ ಎಲ್ಲಾ ಹಕ್ಕುಗಳ ಉಲ್ಲಂಘನೆ – ಬಾಲ್ಯತನ, ಶಿಕ್ಷಣ, ಮನೋರಂಜನೆ, ಗೆಳೆಯರ ಒಡನಾಟಕ್ಕೆ ಧಕ್ಕೆ, ಅಪೌಷ್ಟಿಕತೆ, ರಕ್ತಹೀನತೆ, ಅನಾರೋಗ್ಯ, ಗರ್ಭಪಾತ, ಶಿಶುಮರಣ, ತಾಯಿಮರಣಕ್ಕೆ ಕಾರಣವಾಗುತ್ತದೆ.
  • ವಿಶೇಷವಾಗಿ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗುವ ಸಂಭವ ಹೆಚ್ಚು.
  • ಹೆಣ್ಣು ಮಕ್ಕಳು ಯಾವುದೇ ಸಾಮಾಜಿಕ ಭದ್ರತೆಗಳಿಲ್ಲದೆ ಆಗಾಗ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭಗಳು ಹೆಚ್ಚು.

14. ಬಾಲ್ಯವಿವಾಹಕ್ಕೆ ಪರಿಹಾರಗಳು ಯಾವುವು?

  • 18 ವರ್ಷದ ತನಕ ಯಾವ ಮಕ್ಕಳು ಶಾಲೆ | ಕಾಲೇಜು ಬಿಡದಿರುವಂತೆ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ. ಅಂದರೆ 100 ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಬೇಕು.
  • ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು, ಬಾಲಕಿಯರ ಬಲವರ್ಧನೆ ಮತ್ತು ಸಬಲೀಕರಣ ಆದ್ಯತೆ ಎಲ್ಲೇ ಬಾಲ್ಯವಿವಾಹ ನಡೆದರೂ ತಪ್ಪದೇ ದೂರು ನೀಡುವುದು, ಖಂಡಿಸುವುದು, ಪ್ರಶ್ನಿಸುವುದು,

15. ಮಕ್ಕಳ ಸಾಗಾಣಿಕೆಗೆ ಕಾರಣಗಳು ಯಾವುವು?

  • ಬಾಲಕಾರ್ಮಿಕತೆ,
  • ಬಾಲ್ಯವಿವಾಹ.
  • ಶಾಲೆಬಿಡುವುದು,
  • ಬಡತನ,
  • ಕುಟುಂಬಗಳಲ್ಲಿ ಮಕ್ಕಳ ಬಗ್ಗೆ ಅಸಡ್ಡೆ,
  • ಜೀತ ಪದ್ಧತಿ,
  • ಅನಿಯಮಿತ ವಲಸೆ ಮತ್ತು ಸ್ಥಳಾಂತರ.
  • ಹೆಚ್ಚಾಗುತ್ತಿರುವ ಸಂಪರ್ಕ ತಂತ್ರಜ್ಞಾನ ಹಾಗೂ ಇಂಟರ್‌ನೆಟ್ ಬಳಕೆ

16. ಮಕ್ಕಳ ಸಾಗಾಣಿಕೆಯ ದುಷ್ಪರಿಣಾಮಗಳು ಯಾವುವು?

  • ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾರಕ,
  • ದೈಹಿಕ ಹಾಗೂ ಲೈಂಗಿಕ ಶೋಷಣೆಗೆ ಬಲಿ,
  • ಮಕ್ಕಳ ಸಾವು ಮತ್ತು ಗಂಭೀರ ರೋಗದ ಅಪಾಯ/ಹೆಚ್.ಐ.ವಿ/ಲೈಂಗಿಕ ಕಾಯಿಲೆ,
  • ಅನಗತ್ಯ ಗರ್ಭಧಾರಣೆ,
  • ಬಲವಂತದ ಗರ್ಭಧಾರಣೆ,
  • ಕೊಲೆ, ಮಾದಕ ವ್ಯಸನಗಳಿಗೆ ಬಲಿ

17. ಮಕ್ಕಳ ಸಾಗಾಣಿಕೆಯ ಪರಿಹಾರ ಕ್ರಮಗಳು ಯಾವುವು?

ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ “ಮಕ್ಕಳ ಹಕ್ಕುಗಳ ಕ್ಲಬ್” ರಚಿಸಿ ಅನುಷ್ಠಾನಕ್ಕೆ ತರುವುದು,

ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ “ಮಕ್ಕಳ ಸುರಕ್ಷತಾ ಸಮಿತಿ” ರಚಿಸಿ ಅನುಷ್ಠಾನಕ್ಕೆ ತರುವುದು.

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ವರ್ಷ ಕಡ್ಡಾಯವಾಗಿ “ಮಕ್ಕಳ ಗ್ರಾಮ ಸಭೆ” ಗಳನ್ನು ನಡೆಸಿ ಆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 18 ವರ್ಷದೊಳಗಿನ ಎಲ್ಲಾ ಮಕ್ಕಳ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು.

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ, ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ “ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ರಚಿಸಿ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ 18 ವರ್ಷದೊಳಗಿನ ಎಲ್ಲಾ ಮಕ್ಕಳ ಸಮಸ್ಯೆಯ ಪರಿಹಾರಕ್ಕೆ ಕ್ರಮ

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ, ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಕಡ್ಡಾಯವಾಗಿ “ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಮತ್ತು ಮಾರಾಟ ತಡೆ” ಸಮಿತಿ ರಚಿಸುವುದು

FAQ

1. ಬಾಲ್ಯ ವಿವಾಹ ನಿಷೇಧ ಕಾಯಿದೆ ಯಾವಾಗ ಜಾರಿಗೆ ಬಂದಿದೆ?

2006

2. ಕಾಣದ ಹಸಿವು ಎಂದರೇನು?

ಪೋಷಕಾಂಶಗಳ ಅಭಾವವನ್ನು ‘ಕಾಣದ ಹಸಿವು’ ಎನ್ನುತ್ತಾರೆ

3. ಲಿಂಗತಾರತಮ್ಯ ಎಂದರೇನು?

ಸ್ತ್ರೀ ಪುರುಷರ ನಡುವಿನ ತಾರತಮ್ಯವನ್ನು ಲಿಂಗತಾರತಮ್ಯ ಎನ್ನುವರು

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh