10ನೇ ತರಗತಿ ಅಧ್ಯಾಯ-25 ಭಾರತದ ಭೂ ಬಳಕೆ ಹಾಗೂ ಕೃಷಿ ಸಮಾಜ ವಿಜ್ಞಾನ ನೋಟ್ಸ್‌ | 10th Class Social Science Chapter 25 Notes

10ನೇ ತರಗತಿ ಅಧ್ಯಾಯ-25 ಭಾರತದ ಭೂ ಬಳಕೆ ಹಾಗೂ ಕೃಷಿ ಸಮಾಜ ವಿಜ್ಞಾನ ನೋಟ್ಸ್‌, 10th Class Social Science Chapter 25 Notes Question Answer Mcq in Kannada Kseeb Solution For Class 10 Social Science Chapter 25 Notes in Kannada Medium SSLC Bharatada Bhu Balake Hagu Krushi Social Notes

 

ತರಗತಿ : 10ನೇ ತರಗತಿ

ವಿಷಯ : ಸಮಾಜ ವಿಜ್ಞಾನ

ಪಾಠದ ಹೆಸರು : ಭಾರತದ ಭೂ ಬಳಕೆ ಹಾಗೂ ಕೃಷಿ

ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 10ನೇ ತರಗತಿ ಭಾರತದ ಭೂ ಬಳಕೆ ಹಾಗೂ ಕೃಷಿ ಸಮಾಜ ವಿಜ್ಞಾನ ನೋಟ್ಸ್‌ ನ್ನು ಕೊಟ್ಟಿರುತ್ತೇವೆ, ಈ ಪಾಠದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 10ನೇ ತರಗತಿ ಭಾರತದ ಭೂ ಬಳಕೆ ಹಾಗೂ ಕೃಷಿ ಪಾಠದ ಪ್ರಶ್ನೋತ್ತರಗಳ ನೋಟ್ಸ್‌ ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿ

1. ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ಭೂ ಬಳಕೆ ಎನ್ನುವರು.

2. ಒಂದೇ ವ್ಯವಸಾಯದ ಭೂಮಿಯಲ್ಲಿ ಏಕಕಾಲದಲ್ಲಿ ಎರಡು ಮೂರು ಬೆಳೆಗಳನ್ನು ಬೆಳೆಯುವುದಕ್ಕೆ ಸಾಂದ್ರ ಬೇಸಾಯ ಎಂದು ಕರೆಯುವರು.

3. ರೈತರು ತಮ್ಮ ಜೀವನಕ್ಕೆ ಅವಶ್ಯಕವಿರುವ ಹುಟ್ಟುವಳಿಗಳನ್ನು ಮಾತ್ರ ಬೆಳೆಯುವುದಕ್ಕೆ ಜೀವನಾಧಾರ ಬೇಸಾಯ ಎಂದು ಕರೆಯುವರು.

4. ವಾಣಿಜ್ಯ ಬೇಸಾಯದ ಬೆಳೆ ಕಬ್ಬು ಮತ್ತು ಹೊಗೆಸೊಪ್ಪು.

5. ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಪಶ್ಚಿಮ ಬಂಗಾಳ.

ಈ ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ಭೂ ಬಳಕೆ ಎಂದರೇನು?

ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ಭೂ ಬಳಕೆ ಎನ್ನುವರು.

2. ಭೂ ಬಳಕೆ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು?

ಭೂ ಬಳಕೆ ಮೇಲೆ ಪ್ರಭಾವ ಬೀರುವ ಅಂಶಗಳು:

  • ಭೂ ಸ್ವರೂಪಗಳು
  • ವಾಯುಗುಣ
  • ಮಣ್ಣಿನ ಲಕ್ಷಣಗಳು
  • ಭೂ ಹಿಡುವಳಿ
  • ಜನಸಂಖ್ಯೆ
  • ಜನರ ಮನೋಭಾವ
  • ಸಾಮಾಜಿಕ ಪರಿಸ್ಥಿತಿ
  • ಮಾರುಕಟ್ಟೆ
  • ನೀರಾವರಿ ಸೌಲಭ್ಯ
  • ಭೂ ಒಡೆತನ

3. ವ್ಯವಸಾಯ ಎಂದರೇನು?

ಭೂಮಿಯನ್ನು ಉಳಿಮೆ ಮಾಡಿ ಬೆಳೆಗಳನ್ನು ಬೆಳೆಯುವುದನ್ನು ವ್ಯವಸಾಯ ಎನ್ನುವರು.

4. ವ್ಯವಸಾಯದ ವಿಧಗಳು ಯಾವುವು?

ವ್ಯವಸಾಯದ ವಿಧಗಳು:

  • ಸಾಂದ್ರ ಬೇಸಾಯ
  • ಜೀವನಾಧಾರದ ಬೇಸಾಯ
  • ವಾಣಿಜ್ಯ ಬೇಸಾಯ.
  • ಮಿಶ್ರ ಬೇಸಾಯ
  • ತೋಟಗಾರಿಕಾ ಬೇಸಾಯ

5. ಖಾರೀಫ್‌ ಬೇಸಾಯ ಎಂದರೇನು?

ನೈಋತ್ಯ ಮಾನ್ಸೂನ್‌ ಮಾರುತಗಳ ಅವಧಿಯ ಬೇಸಾಯವನ್ನೇ ಖಾರೀಫ್‌ ಬೇಸಾಯ (ಮುಂಗಾರು ಬೇಸಾಯ) ಎನ್ನುವರು.

6. ರಬಿ ಬೇಸಾಯ ಎಂದರೇನು?

ಈಶಾನ್ಯ ಮಾನ್ಸೂನ್‌ ಮಾರುತಗಳ ಅವಧಿಯ ಬೇಸಾಯವನ್ನೇ ರಬಿ ಬೇಸಾಯ (ಹಿಂಗಾರು ಬೇಸಾಯ) ಎನ್ನುವರು.

7. ಹತ್ತಿ ಬೆಳೆ ಬೆಳೆಯಲು ಅವಶ್ಯಕವಿರುವ ಪೂರಕಾಂಶಗಳಾವುವು?

ಹತ್ತಿ ಬೆಳೆಯ ಅವಶ್ಯಕ ಪೂರಕಾಂಶಗಳು:

  • ಇದು ರಷ್ಣವಲಯ ಮತ್ತು ಉಪ ಉಷ್ಣವಲಯದ ಬೆಳೆ
  • 20° ರಿಂದ 25° ಸೆಲ್ಸಿಯಸ್‌ ಉಷ್ಣಾಂಶ ಅವಶ್ಯಕ
  • 75ರಿಂದ 150 C.M ಮಳೆ ಅವಶ್ಯಕ.
  • ಕಪ್ಪು ಮಣ್ಣು ಮತ್ತು ಮೆಕ್ಕಲು ಮಣ್ಣು ಅವಶ್ಯಕ
  • ಇದು ಮುಂಗಾರು ಬೆಳೆಯಾಗಿದೆ.
  • ಭಾರತವು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ.

8. ಪುಷ್ಪ ಬೇಸಾಯದಲ್ಲಿ ನಿಮ್ಮ ಸುತ್ತ-ಮುತ್ತ ಬೆಳೆಯುತ್ತಿರುವ ಪುಷ್ಪಗಳ ಪಟ್ಟಿ ತಯಾರಿಸಿ

ನಮ್ಮ ಸುತ್ತ-ಮುತ್ತ ಬೆಳೆಯುತ್ತಿರುವ ಪುಷ್ಪಗಳ ಪಟ್ಟಿ:

  • ಮಲ್ಲಿಗೆ
  • ದುಂಡು ಮಲ್ಲಿಗೆ
  • ಸಂಪಿಗೆ
  • ಸೇವಂತಿಗೆ
  • ಚೆಂಡು ಹೂವು
  • ಸೇವಂತಿಗೆ
  • ಕನಕಾಂಬರ
  • ಗುಲಾಬಿ

ಹೆಚ್ಚಿನ ಪ್ರಶ್ನೋತ್ತರಗಳು

1. ಭೂ ಬಳಕೆ ಎಂದರೇನು? ಭೂ ಬಳಕೆಯ ಪ್ರಕಾರಗಳು ಯಾವುವು?

ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ಭೂ ಬಳಕೆ ಎನ್ನುವರು.

ಭೂ ಬಳಕೆಯ ಪ್ರಕಾರಗಳು

  • ನಿವ್ವಳ ಸಾಗುವಳಿ ಕ್ಷೇತ್ರ
  • ಅರಣ್ಯ ಭೂಮಿ
  • ವ್ಯವಸಾಯೇತರ ಭೂ ಬಳಕೆ
  • ಬೀಳು ಭೂಮಿ
  • ಹುಲ್ಲುಗಾವಲು
  • ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ.

2. ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ತಿಳಿಸಿ

ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆ:

  • ಜನರ ಜೀವನಾಧಾರವಾಗಿದೆ.
  • ಆಹಾರ ಪೂರೈಕೆ
  • ಕಚ್ಚಾವಸ್ತುಗಳ ಪೂರೈಕೆ
  • ಸಾರಿಗೆ ಸಂಪರ್ಕದ ಅಭಿವೃದ್ದಿ
  • ವಿದೇಶಿ ವ್ಯಾಪಾರದ ಅಭಿವೃದ್ದಿ
  • ತೃತೀಯ ರಂಗಕ್ಕೆ ಸಹಾಯಕ
  • ತಲಾ ಆದಾಯದ ಹೆಚ್ಚಳ
  • ರಾಷ್ಟ್ರೀಯ ಆದಾಯದ ಹೆಚ್ಚಳ

11. ಬೆಳೆಯ ಮಾದರಿಯನ್ನು ನಿರ್ಧರಿಸುವ ಅಂಶಗಳಾವುವು?

ಬೆಳೆಯ ಮಾದರಿಯನ್ನು ನಿರ್ಧರಿಸುವ ಅಂಶಗಳು:

  • ನೈಸರ್ಗಿಕ ಅಂಶಗಳು
  • ಆರ್ಥಿಕ ಅಂಶಗಳು
  • ಸಾಮಾಜಿಕ ಅಂಶಗಳು
  • ರೈತರ ಮನೋಭಾವ

12. ವಿವಿಧ ಬೆಳೆಗೆ ಬೇಕಾಗಿರುವ ಭೌಗೋಳಿಕ ಅಂಶಗಳನ್ನು ತಿಳಿಸಿರಿ.

Sl Noಬೆಳೆಗಳುಉಷ್ಣಾಂಶ
ಸೆಲ್ಸಿಯಸ್
ಮಳೆ
C.M
ಮಣ್ಣುಋತುಹೆಚ್ಚು
ಬೆಳೆಯುವ
ರಾಜ್ಯ
ವಿಶೇಷತೆ
1ಭತ್ತ25° 100-200ಮೆಕ್ಕಲು ಮಣ್ಣು
ಜೇಡಿ ಮಣ್ಣು
ಖಾರೀಫ್ಪಶ್ಚಿಮ ಬಂಗಾಳ
2ಗೋಧಿ10° -15° 50-70ಕಪ್ಪು ಮಣ್ಣು
ಜೇಡಿ ಮಣ್ಣು
ರಬಿಉತ್ತರ ಪ್ರದೇಶಪಂಜಾಬ್‌ ಗೋಧಿಯ ಕಣಜ
3ಕಬ್ಬು21° -26° 100-150ಮೆಕ್ಕಲು ಮಣ್ಣು
ಜೇಡಿ ಮಣ್ಣು
ವಾರ್ಷಿಕ ಬೆಳೆಉತ್ತರ ಪ್ರದೇಶ
4ಹೊಗೆಸೊಪ್ಪು21° -27° 50ಮರಳು ಮಿಶ್ರತ ಮಣ್ಣುಆಂಧ್ರ ಪ್ರದೇಶ
5ಹತ್ತಿ20° -25° 75-100ಕಪ್ಪು ಮಣ್ಣು
ಮೆಕ್ಕಲು ಮಣ್ಣು
ಖಾರೀಫ್ಗುಜರಾತ್
6ಚಹ21° 150-200ಮರಳು ಮಿಶ್ರಿತ ಜೇಡಿಮಣ್ಣುಅಸ್ಸಾಂ

FAQ:

ಖಾರೀಫ್‌ ಬೇಸಾಯ ಎಂದರೇನು?

ನೈಋತ್ಯ ಮಾನ್ಸೂನ್‌ ಮಾರುತಗಳ ಅವಧಿಯ ಬೇಸಾಯವನ್ನೇ ಖಾರೀಫ್‌ ಬೇಸಾಯ (ಮುಂಗಾರು ಬೇಸಾಯ) ಎನ್ನುವರು.

ರಬಿ ಬೇಸಾಯ ಎಂದರೇನು?

ಈಶಾನ್ಯ ಮಾನ್ಸೂನ್‌ ಮಾರುತಗಳ ಅವಧಿಯ ಬೇಸಾಯವನ್ನೇ ರಬಿ ಬೇಸಾಯ (ಹಿಂಗಾರು ಬೇಸಾಯ) ಎನ್ನುವರು.

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh