ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ರಾಜ್ಯ ನೋಟ್ಸ್ ಪ್ರಶ್ನೋತ್ತರಗಳು, 1st Puc Political Science Chapter 2 Notes Question answer in Kannada Medium 2024 1st Puc Rajya Notes in Kannada Kseeb Solution For Class 11 Political Science Chapter 2 Notes Pdf download
I. ಒಂದು ಅಂಕದ ಪ್ರಶ್ನೆಗಳು :
1 ) ರಾಜ್ಯ ಎಂದರೇನು ?
ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ಸರ್ಕಾರದ ಆಶ್ರಯದಲ್ಲಿ ಪರರ ನಿಯಂತ್ರಣಕ್ಕೆ ಒಳಪಡದ ಜನಸಮುದಾಯವೇ ರಾಜ್ಯ
2 ) ನಗರ – ರಾಜ್ಯಕ್ಕೆ ಒಂದು ಉದಾಹರಣೆ ಕೊಡಿ .
ನಗರ – ರಾಜ್ಯಕ್ಕೆ ಒಂದು ಉದಾಹರಣೆ ಅಥೆನ್ಸ್ ಮತ್ತು ಸ್ಟಾರ್ಟ್ .
3 ) ರಾಜ್ಯವನ್ನು ‘ ಸಿವಿಟಾಸ್ ‘ ಎಂದು ಯಾರು ಕರೆಯುತ್ತಿದ್ದರು ?
ಪ್ರಾಚೀನ ರೋಮನ್ನರು ರಾಜ್ಯವನ್ನು ‘ ಸಿವಿಟಾಸ್ ‘ ಎಂದು ಕರೆಯುತ್ತಿದ್ದರು .
4 ) ಮಾನವನ ಅತ್ಯಗತ್ಯವಾದ ಸಂಸ್ಥೆ ಯಾವುದು ?
ರಾಜ್ಯವು ಮಾನವನ ಅತ್ಯಗತ್ಯವಾದ ಸಂಸ್ಥೆಯಾಗಿದೆ .
5 ) ರಾಜ್ಯದ ಮುಖ್ಯ ಉದ್ದೇಶ ಯಾವುದು ?
ಜನತೆಯ ನಡವಳಿಕೆಯನ್ನು ನಿಯಂತ್ರಿಸಿ ಸಮಾಜದಲ್ಲಿ ಶಾಂತಿ ಕಾಪಾಡುವ ಉದ್ದೇಶವನ್ನು ರಾಜ್ಯ ಹೊಂದಿದೆ .
6 ) ಮಾನವ ಸಾಮಾಜಿಕ ಮತ್ತು ರಾಜಕೀಯ ಜೀವಿ ಎಂದು ಯಾರು ಹೇಳಿದರು ?
ಮಾನವ ಸಾಮಾಜಿಕ ಮತ್ತು ರಾಜಕೀಯ ಜೀವಿ ಎಂದು ಹೇಳಿದವರು ಅರಿಸ್ಟಾಟಲ್ .
7 ) ರಾಜ್ಯದ ಮೂಲ ಪದ ಯಾವುದು ?
ಗ್ರೀಕ್ ಭಾಷೆಯ ‘ ಪಾಲಿಸ್ ರಾಜ್ಯದ ಮೂಲಪದ .
8 ) ‘ ರಾಜ್ಯ ‘ ಎಂಬ ಪದವನ್ನು ಮೊದಲು ಯಾರು ಬಳಸಿದರು ?
ಇಟಲಿಯ ನಿಕೊಲೋ ಮೆಕೆವೆಲ್ಲಿ ರಾಜ್ಯ ಎಂಬ ಪದವನ್ನು ಮೊದಲು ಬಳಸಿದರು .
9 ) ‘ ದಿ ಪ್ರಿನ್ಸ್ ‘ ಕೃತಿಯನ್ನು ಯಾರು ಬರೆದರು ?
ಇಟಲಿಯ ಮೆಕೆವೆಲ್ಲಿ ‘ ದಿ ಪ್ರಿನ್ಸ್’ನ ಕರ್ತೃ .
10 ) ಎಲ್ಲ ಸಂಘ ಸಂಸ್ಥೆಗಳಲ್ಲಿಯೂ ಶ್ರೇಷ್ಠ ಸಂಸ್ಥೆ ಯಾವುದು ?
‘ ರಾಜ್ಯ ‘ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಶ್ರೇಷ್ಠ .
11) ಪ್ರಜೆಗಳಿಗೆ ಹುಟ್ಟಿನಿಂದ ಸಾಯುವವರೆಗೂ ಸೇವೆ ಸಲ್ಲಿಸುವ ಸಂಸ್ಥೆ ಯಾವುದು ?
ರಾಜ್ಯ
12) ಸಪ್ತಾಂಗ ಸಿದ್ಧಾಂತವನ್ನು ಯಾರು ಪ್ರತಿಪಾದಿಸಿದರು ?
ಸಪ್ತಾಂಗ ಸಿದ್ಧಾಂತದ ಪ್ರತಿಪಾದಕ ಕೌಟಿಲ್ಯ
13 ) .ಪ್ಲೇಟೋರವರ ಪ್ರಕಾರ ರಾಜ್ಯದ ಜನಸಂಖ್ಯೆ ಎಷ್ಟು ?
ಪ್ಲೇಟೋರವರ ಪ್ರಕಾರ ಆದರ್ಶ ರಾಜ್ಯದ ಜನಸಂಖ್ಯೆ 5040 ಇರಬೇಕು .
14 ) ‘ ಅರ್ಥಶಾಸ್ತ್ರ ‘ ಕೃತಿಯನ್ನು ಯಾರು ರಚಿಸಿದರು ?
ಕೌಟಿಲ್ಯ ‘ ಅರ್ಥಶಾಸ್ತ್ರ ‘ ಕೃತಿಯನ್ನು ರಚಿಸಿದ್ದಾನೆ .
15 ) ರಾಜ್ಯದ ಜನಸಂಖ್ಯೆಯು 10000 ಇರಬೇಕು ಎಂದು ಯಾರು ಹೇಳಿದರು ?
ರೂಸೋ
16) ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು ?
ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾ ( 145 ಕೋಟಿ )
17) ವಿಶ್ವದಲ್ಲಿಯೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಯಾವುದು ?
ವಿಶ್ವದಲ್ಲಿಯೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ನಾರು ( 9000 ) .
18) “ ಉತ್ತಮ ಪ್ರಜೆಗಳು ಉತ್ತಮ ರಾಜ್ಯ ನಿರ್ಮಿಸುತ್ತಾರೆ ” ಈ ಮಾತನ್ನು ಹೇಳಿದವರಾರು ?
ಅರಿಸ್ಟಾಟಲ್ ಈ ಮಾತನ್ನು ಹೇಳಿದ್ದಾರೆ .
19 ) ಭೂ ಪ್ರದೇಶ ಎಂದರೇನು ?
ಭೂಪ್ರದೇಶ ಎಂದರೆ , ಅಲ್ಲಿನ ನೆಲ , ನದಿ , ಸರೋವರ , ಬೆಟ್ಟ – ಗುಡ್ಡ ಹಾಗು ಸಕಲ ಪರಿಸರವನ್ನು ಒಳಗೊಂಡಿದೆ .
20 ) ಸರ್ಕಾರ ಎಂದರೇನು ?
ರಾಜ್ಯದ ಧ್ಯೇಯ ಧೋರಣೆಗಳ ಈಡೇರಿಕೆಗಾಗಿ ಇರುವ ಸಾಧನವೇ ಸರ್ಕಾರ
21 ) ರಾಜ್ಯದ ಏಜೆಂಟ್ ಯಾವುದು ?
ಸರ್ಕಾರ ರಾಜ್ಯದ ಏಜೆಂಟ್ .
22 ) “ ರಾಜ್ಯದ ಹೃದಯ ಮತ್ತು ಆತ್ಮ ” ಯಾವುದು ?
ಪರಮಾಧಿಕಾರ ‘ ರಾಜ್ಯದ ಹೃದಯ ಮತ್ತು ಆತ್ಮ .
23 ) ಪರಮಾಧಿಕಾರ ಎಂದರೇನು ?
ರಾಜ್ಯದ ಸರ್ವಶ್ರೇಷ್ಠ ಅಧಿಕಾರವೇ ಪರಮಾಧಿಕಾರ .
24 ) ಸಂಘ – ಸಂಸ್ಥೆ ಎಂದರೇನು ?
ಒಂದು ನಿರ್ದಿಷ್ಟ ಧೈಯ – ಧೋರಣೆಗಳ ಈಡೇರಿಕೆಗಾಗಿ ಸುಸಂಘಟಿತವಾದ ಜನಸಮುದಾಯವೇ ಸಂಘ – ಸಂಸ್ಥೆ,
25 ) ‘ ಸಂಘ – ಸಂಸ್ಥೆಗಳ ಸಂಘ ‘ ಎಂದು ಯಾವುದನ್ನು ಕರೆಯುತ್ತಾರೆ ?
ರಾಜ್ಯವನ್ನು ಸಂಘ ಸಂಸ್ಥೆಗಳ ಸಂಘ ‘ ಎನ್ನುವರು .
26 ) ಸಮಾಜ ಎಂದರೇನು ?
ಸಾಮಾಜಿಕ ಸಂಬಂಧಗಳ ಬಲೆಯೇ ಸಮಾಜ
27 ) “ ಸಮಾಜವು ಸಮಾಜಿಕ ಸಂಬಂಧಗಳ ಬಲೆ ” ಎಂದವರು ಯಾರು ?
ಸಮಾಜವು ಸಾಮಾಜಿಕ ಸಂಬಂಧಗಳ ಬಲೆ ಎಂದವರು ಮ್ಯಾಕ್ಸ್‌ವೆಬರ್ .
28 ) ಯಾವುದನ್ನು ಸರ್ವಶ್ರೇಷ್ಠ ಸಂಘ ಎಂದು ಕರೆಯುತ್ತೇವೆ ?
ರಾಜ್ಯ
29 ) ‘ ನೇಷನ್ ‘ ಪದದ ಮೂಲ ಪದ ಯಾವುದು ?
‘ ನೇಷನ್’ನ ಮೂಲಪದ ‘ ನೇಶಿಯೋ ‘ ಎಂಬ ಲ್ಯಾಟಿನ್ ಪದ .
30 ) ರಾಷ್ಟ್ರ ಎಂಬುದು ‘ ರಾಜ್ಯ ಮತ್ತು ರಾಷ್ಟ್ರೀಯತೆ ‘ ಎಂದು ಯಾರು ಹೇಳಿದರು ?
ರಾಷ್ಟ್ರ ಎಂಬುದು ‘ ರಾಜ್ಯ ಮತ್ತು ರಾಷ್ಟ್ರೀಯತೆ ‘ ಎಂದವರು ಗಿಲ್‌ಕ್ರಿಸ್ಟ್ ,
31 ) ಭಾರತವು ಯಾವಾಗ ಪರಮಾಧಿಕಾರ ರಾಜ್ಯವಾಯಿತು ?
15 ನೇ ಆಗಸ್ಟ್ 1947 ರಂದು ಭಾರತವು ಪರಮಾಧಿಕಾರ ರಾಜ್ಯವಾಯಿತು .
32 ) ರಾಷ್ಟ್ರ ಎಂದರೇನು ?
ರಕ್ತ ಸಂಬಂಧದಿಂದ ಬಂದಿಸಲ್ಪಟ್ಟ ಒಂದೇ ಜನಾಂಗ ಸೇರಿದ ಜನರನ್ನು ರಾಷ್ಟ್ರ ಎನ್ನುವರು .
1st PUC Political Science Question Bank Chapter 2 State
II . ಎರಡು ಅಂಕಗಳ ಪ್ರಶ್ನೆಗಳು
1. ರಾಜ್ಯದ ಅರ್ಥವನ್ನು ಬರೆಯಿರಿ .
ರಾಜ್ಯವು ರಾಜ್ಯಶಾಸ್ತ್ರದ ಅಧ್ಯಯನದ ಪ್ರಮುಖ ವಿಷಯವಾಗಿದೆ . ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ಸರ್ಕಾರದ ಆಶ್ರಯದಲ್ಲಿ , ಪರರ ನಿಯಂತ್ರಣಕ್ಕೆ ಒಳಪಡದ ಜನಸಮುದಾಯವೇ ರಾಜ್ಯ ಇದು ನಾಲ್ಕು ಮೂಲಾಂಶಗಳನ್ನು ಒಳಗೊಂಡಿದೆ .
2 ) ರಾಜ್ಯ ಅನಿವಾರ್ಯ ಏಕೆ ?
ರಾಜ್ಯವು ಜನತೆಯ ನಡವಳಿಕೆಯನ್ನು ನಿಯಂತ್ರಿಸಿ , ಸಮಾಜದಲ್ಲಿ ಶಾಂತಿಯನ್ನು ಕಾಪಾಡುವುದರ ಮೂಲಕ ವ್ಯಕ್ತಿಯ ಅವಶ್ಯಕತೆಗಳನ್ನು ಪೂರೈಸುತ್ತದೆ ಹಾಗಾಗಿ ರಾಜ್ಯ ಅನಿವಾರ್ಯ .
3 ) ರಾಜ್ಯದ ಉದಯದ ಎರಡು ಸಿದ್ಧಾಂತಗಳನ್ನು ಹೆಸರಿಸಿ .
ರಾಜ್ಯದ ಉದಯದ ಸಿದ್ಧಾಂತಗಳೆಂದರೆ ,
1. ದೈವಿಕ ಸಿದ್ಧಾಂತ
2. ಸಾಮಾಜಿಕ ಒಪ್ಪಂದ ಸಿದ್ಧಾಂತ
3. ಶಕ್ತಿ ಸಿದ್ಧಾಂತ
4 ) ರಾಜ್ಯವನ್ನು ವ್ಯಾಖ್ಯಾನಿಸಿ .
ಬ್ಲಂಟಷ್ಲಿ ಪ್ರಕಾರ ರಾಜ್ಯ ಎಂದರೆ “ ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ರಾಜಕೀಯವಾಗಿ ಸುಸಂಘಟಿತವಾದ ಜನ ಸಮುದಾಯವೇ ರಾಜ್ಯ ” .
5 ) ಕಲ್ಯಾಣರಾಜ್ಯ ಎಂದರೇನು ?
ಜನರ ಜೀವ ಮತ್ತು ಆಸ್ತಿಯ ರಕ್ಷಣೆಯೊಂದಿಗೆ ಅವರ ಸರ್ವತೋಮುಖ ಪ್ರಗತಿಗೆ ಶ್ರಮಿಸುವ ರಾಜ್ಯವೇ ಕಲ್ಯಾಣ ರಾಜ್ಯ ಆಧುನಿಕ ರಾಜ್ಯಗಳು ಕಲ್ಯಾಣ ರಾಜ್ಯಗಳಾಗಿವೆ .
6 ) ಸಪ್ತಾಂಗ ಸಿದ್ಧಾಂತದ ಅಂಗಗಳನ್ನು ತಿಳಿಸಿ .
ಕೌಟಿಲ್ಯನ ಸಪ್ತಾಂಗ ಸಿದ್ಧಾಂತದ ಅಂಗಗಳೆಂದರೆ – ಅರ್ಥ ಸದ
1. ಸ್ವಾಮಿನ್ 2. ಜನಪದ 3. ದುರ್ಗಾ 4. ಅಮಾತ್ಯ 5 . ಕೋಶ 6. ಬಲ 7. ಮಿತ್ರ
7 ) ರಾಜ್ಯದ ನಾಲ್ಕು ಮೂಲಾಂಶಗಳನ್ನು ಹೆಸರಿಸಿ .
1. ಜನಸಂಖ್ಯೆ 2. ಭೂಪ್ರದೇಶ 3. ಸರ್ಕಾರ 4. ಪರಮಾಧಿಕಾರ
8 ) ನಿಯಮಿತ ಜನಸಂಖ್ಯೆಯಿಂದಾಗುವ ಆಗುವ ಎರಡು ಉಪಯೋಗಗಳನ್ನು ಬರೆಯಿರಿ ?
ನಿಯಮಿತ ಜನಸಂಖ್ಯೆಯಿಂದಾಗುವ ಎರಡು ಉಪಯೋಗಗಳೆಂದರೆ
1 ) .ಬಡತನವಿರದು
2 ) ನಿರುದ್ಯೋಗ ಸಮಸ್ಯೆ ಕಾಡದು
3 ) ವಸತಿ ಸಮಸ್ಯೆ ಕಾಡದು ಮುಂತಾದವು .
9 ) ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ರಾಜ್ಯಗಳನ್ನು ಹೆಸರಿಸಿ .
ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ರಾಜ್ಯಗಳೆಂದರೆ ,
1 ) ಚೀನಾ ( 145 ಕೋಟಿ )
2 ) ಭಾರತ ( 125 ಕೋಟಿ )
10 ) ಕಡಿಮೆ ಭೂ ಪ್ರದೇಶ ಹೊಂದಿರುವುದರಿಂದ ಆಗುವ ಎರಡು ಉಪಯೋಗಗಳನ್ನು ತಿಳಿಸಿ .
ಕಡಿಮೆ ಭೂ ಪ್ರದೇಶ ಹೊಂದಿರುವುದರಿಂದ ಎರಡು ಉಪಯೋಗಗಳೆಂದರೆ –
1) ರಾಷ್ಟ್ರ ರಕ್ಷಣೆ ಸುಲಭ .
2 ) ದಕ್ಷ ಆಡಳಿತ ಸಾಧ್ಯ .
11 ) ಹೆಚ್ಚು ಭೂ ಪ್ರದೇಶ ಹೊಂದಿರುವುದರಿಂದ ಆಗುವ ಎರಡು ಉಪಯೋಗಗಳನ್ನು ತಿಳಿಸಿ .
ಹೆಚ್ಚು ಭೂ ಪ್ರದೇಶ ಹೊಂದಿರುವುದರಿಂದ ಎರಡು ಉಪಯೋಗಗಳೆಂದರೆ –
1 ) ಹೇರಳವಾದ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ,
2 ) ವಸತಿ ಸಮಸ್ಯೆ ಕಾಡದು .
12 ) ದೊಡ್ಡ ಭೂಪ್ರದೇಶ ಹೊಂದಿರುವ 2 ದೇಶಗಳನ್ನು ಹೆಸರಿಸಿ .
ಹೆಚ್ಚು ಭೂಪ್ರದೇಶ ಹೊಂದಿರುವ 2 ದೇಶಗಳೆಂದರೆ –
1 ) ಕೆನಡ
2 ) ಅಮೇರಿಕಾ
13 ) ಕಡಿಮೆ ಭೂಪ್ರದೇಶ ಹೊಂದಿರುವ ಎರಡು ದೇಶಗಳನ್ನು ಹೆಸರಿಸಿ ,
ಕಡಿಮೆ ಭೂಪ್ರದೇಶ ಹೊಂದಿರುವ ಎರಡು ದೇಶಗಳೆಂದರೆ –
1 ) ವ್ಯಾಟಿಕನ್ ನಗರ ಮೆನಾಕೋ
2 ) ಸ್ಯಾನ್‌ಮೆರಿನೊ
14 ) ಸರ್ಕಾರದ ಅರ್ಥವನ್ನು ಬರೆಯಿರಿ .
ರಾಜ್ಯದ ಧೈಯಧೋರಣೆಗಳ ಈಡೇರಿಕೆಗಾಗಿರುವ ಸಾಧನವೇ ಸರ್ಕಾರ , ಇರು ರಾಜ್ಯದ 4 ಮೂಲಾಂಶಗಳಲ್ಲೊಂದು ಹಾಗು ರಾಜ್ಯದ ಒಂದು ಆಡಳಿತ ಯಂತ್ರ ಪ್ರತಿನಿಧಿ ಅಥವಾ ನಿಯೋಗವಾಗದೆ .
15 ) ಸರ್ಕಾರದ ಅಂಗಗಳನ್ನು ತಿಳಿಸಿ .
ಸರ್ಕಾರವು ಪ್ರಮುಖವಾದ 3 ಅಂಗಗಳನ್ನು ಹೊಂದಿದೆ ಅವುಗಳೆಂದರೆ
1 ) ಶಾಸಕಾಂಗ
2 ) ಕಾರ್ಯಾಂಗ
3 ) ನ್ಯಾಯಾಂಗ
16 ) ಪರಮಾಧಿಕಾರ ಎಂದರೇನು ?
ರಾಜ್ಯದ ಸರ್ವೋಚ್ಛ ಅಧಿಕಾರವೇ ಪರಮಾಧಿಕಾರ . ಇದು ರಾಜ್ಯವನ್ನು ಇತರ ಸಂಘ – ಸಂಸ್ಥೆಗಳಿಂದ ಬೇರ್ಪಡಿಸುತ್ತದೆ . ಇದು ರಾಜ್ಯದ 4 ಮೂಲಾಂಶಗಳನ್ನು ಅತ್ಯಂತ ಪ್ರಮುಖವಾದುದಾಗಿದೆ .
17 ) ಸರ್ಕಾರ ಎಂದರೇನು ?
ಸರ್ಕಾರವು ರಾಜ್ಯದ ಒಂದು ಆಡಳಿತ ಯಂತ್ರ ಪ್ರತಿನಿಧಿ ಅಥವಾ ನಿಯೋಗಿಯಾಗಿದೆ . ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಾರ್ಯ ನಿರ್ವಹಿಸುತ್ತದೆ . ಆದ್ದರಿಂದ ಬಂಟಷ್ಠಿ ಹೇಳಿದಂತೆ “ ಸರ್ಕಾರವೇ ಇಲ್ಲದ ರಾಜ್ಯ ಅವ್ಯವಸ್ಥೆ ಮತ್ತು ಅರಾಜಕತೆಯಿಂದ ನಶಿಸುತ್ತದೆ .
18 ) ಪರಮಾಧಿಕಾರದ ಸ್ವರೂಪಗಳಾವುವು ?
ಪರಮಾಧಿಕಾರವು ಈ ಕೆಳಗಿನ 2 ಸ್ವರೂಪಗಳನ್ನು ಹೊಂದಿದೆ .
1 ) ಆಂತರಿಕ ಪರಮಾಧಿಕಾರ
2 ) ಬಾಹ್ಯ ಪರಮಾಧಿಕಾರ
19 ) ಆಂತರಿಕ ಪರಮಾಧಿಕಾರ ಎಂದರೇನು ?
ರಾಜ್ಯದ ವ್ಯಾಪ್ತಿಯೊಳಗಿನ ಎಲ್ಲಾ ವ್ಯಕ್ತಿಗಳು ಹಾಗೂ ಸಂಘ – ಸಂಸ್ಥೆಗಳನ್ನು ನಿಯಂತ್ರಿಸುವ ರಾಜ್ಯದ ಸರ್ವೋಚ್ಛ ಅಧಿಕಾರವೇ ಆಂತರಿಕ ಪರಮಾಧಿಕಾರ ರಾಜ್ಯದ ವ್ಯಾಪ್ತಿಯೊಳಗಿನ ಎಲ್ಲಾ ವ್ಯಕ್ತಿಗಳು ಹಾಗು ಸಂಘ – ಸಂಸ್ಥೆಗಳು ರಾಜ್ಯದ ಕಾನೂನನ್ನು ಪಾಲಿಸಬೇಕು ಹಾಗೂ ಗೌರವಿಸಬೇಕು . ಇಲ್ಲದಿದ್ದಲ್ಲಿ ರಾಜ್ಯ ಶಿಕ್ಷಿಸುವ ಅಧಿಕಾರ ಹೊಂದಿದೆ .
20 ) ಬಾಹ್ಯ ಪರಮಾಧಿಕಾರ ಎಂದರೇನು ?
ರಾಜ್ಯವು ಬಾಹ್ಯ ನಿಯಂತ್ರಣದಿಂದ ಅಂದರೆ ಅನ್ಯದೇಶಗಳ ನಿಯಂತ್ರಣದಿಂದ ಸ್ವತಂತ್ರವಾಗಿರುವುದಕ್ಕೆ ಬಾಹ್ಯ ಪರಮಾಧಿಕಾರ ಎನ್ನುವರು . ಬಾಹ್ಯ ಪರಮಾಧಿಕಾರವನ್ನು ಹೊಂದಿರುವ ರಾಜ್ಯವು ಸ್ವತಂತ್ರವಾದ ವಿದೇಶಾಂಗ ನೀತಿಯನ್ನು ಅನುಸರಿಸಬಹುದು . ಈ ಪರಮಾಧಿಕಾರವನ್ನು ಹೊಂದಿರದ ಯಾವುದೇ ಭೂಭಾಗವು ರಾಜ್ಯ ಎನಿಸಿಕೊಳ್ಳುವುದಿಲ್ಲ .
21 ) ಸಮಾಜದ ಅರ್ಥವನ್ನು ಬರೆಯಿರಿ .
ಒಟ್ಟಾಗಿ ವಾಸಿಸುವ ವ್ಯಕ್ತಿಗಳ ಸಮೂಹವೇ ಸಮಾಜ , ಮಾನವ ಸಮಾಜ ಜೀವಿಯಾಗದಿರುವುದರಿಂದ ಸಮಾಜ ಉಗಮವಾಗಿದೆ .
22 ) ರಾಜ್ಯ ಮತ್ತು ಸಮಾಜದ ನಡುವಿನ 2 ವ್ಯತ್ಯಾಸಗಳನ್ನು ತಿಳಿಸಿ .
ರಾಜ್ಯ ಮತ್ತು ಸಮಾಜದ ನಡುವಿನ 2 ವ್ಯತ್ಯಾಸಗಳೆಂದರೆ –
1. ಸಮಾಜ ರಾಜ್ಯಕ್ಕಿಂತ ಪುರಾತನವಾದುದು ಆದರೆ ರಾಜ್ಯ ಸಮಾಜ ಹುಟ್ಟಿದ ನಂತರ ಹುಟ್ಟಿದೆ .
2. ಸಮಾಜ ಸಾಮಾಜಿಕ ಸಂಸ್ಥೆ ಆದರೆ ರಾಜ್ಯ ರಾಜಕೀಯ ಸಂಸ್ಥೆ .
23 ) ಸಂಘ – ಸಂಸ್ಥೆ ಎಂದರೇನು ? ಉದಾಹರಣೆ ನೀಡಿ .
ಯಾವುದಾದರೊಂದು ಬೇಡಿಕೆಯ ಈಡೇರಿಕೆಗಾಗಿ ವ್ಯಕ್ತಿಗಳು ಸ್ಥಾಪಿಸಿಕೊಂಡ ಸುಸಂಘಟಿತ ಜನಸಮುದಾಯವೇ ಸಂಘ – ಸಂಸ್ಥೆ , ಉದಾಹರಣೆ – ಲಯನ್ಸ್ ಕ್ಲಬ್ , ರೋಟರಿ ಕ್ಲಬ್ ‘ ಇತ್ಯಾದಿ .
24 ) ರಾಜ್ಯ ಮತ್ತು ಸಂಘ – ಸಂಸ್ಥೆಗಳ ನಡುವಿನ 2 ವ್ಯತ್ಯಾಸಗಳನ್ನು ತಿಳಿಸಿ .
ರಾಜ್ಯ ಮತ್ತು ಸಂಘ – ಸಂಸ್ಥೆಗಳ ನಡುವಿನ 2 ವ್ಯತ್ಯಾಸಗಳೆಂದರೆ –
1 ) ರಾಜ್ಯ ಶಾಶ್ವತವಾದುದು ಆದರೆ ಸಂಘ – ಸಂಸ್ಥೆಗಳು ಶಾಶ್ವತವಾದವುಗಳಲ್ಲ .
2 ) ರಾಜ್ಯದ ಸದಸ್ಯತ್ವ ಕಡ್ಡಾಯವಾದುದು ಆದರೆ ಸಂಘ – ಸಂಸ್ಥೆಗಳ ಸದಸ್ಯತ್ವ ಕಡ್ಡಾಯವಾದುದಲ್ಲ .
25 ) ರಾಷ್ಟ್ರ ಎಂದರೇನು ?
ರಕ್ತ ಸಂಬಂಧದಿಂದ ಬಂದಿಸಲ್ಪಟ್ಟು ಒಂದೇ ಜನಾಂಗಕ್ಕೆ ಸೇರಿದ ಜನರನ್ನು ರಾಷ್ಟ್ರ ಎನ್ನುವರು .
26 ) ರಾಜ್ಯ ಮತ್ತು ರಾಷ್ಟ್ರಗಳ ನಡುವಿನ 2 ವ್ಯತ್ಯಾಸಗಳನ್ನು ತಿಳಿಸಿ .
ರಾಜ್ಯ ಮತ್ತು ರಾಷ್ಟ್ರಗಳ ನಡುವಿನ 2 ವ್ಯತ್ಯಾಸಗಳೆಂದರೆ ,
1) ರಾಜ್ಯದ ವ್ಯಾಪ್ತಿ ಸಂಕುಚಿತವಾದುದು ಆದರೆ ರಾಷ್ಟ್ರದ ವ್ಯಾಪ್ತಿ ವಿಶಾಲವಾದುದು .
2 ) ರಾಜ್ಯ ಭೌತಿಕವಾದುದು ಆದರೆ ರಾಷ್ಟ್ರ ಭಾವನಾತ್ಮಕವಾದುದು .
1st Puc Political Science State Lesson Notes in Kannada
III . ಐದು ಅಂಕದ ಪ್ರಶ್ನೆಗಳು :
1 ) ರಾಜ್ಯದ ಮಹತ್ವವನ್ನು ವಿವರಿಸಿ .
ರಾಜ್ಯವು ಮಾನವ ಕಟ್ಟಿಕೊಂಡಿರುವ ಹಲವಾರು ಸಂಘ – ಸಂಸ್ಥೆಗಳಲ್ಲಿ ಸರ್ವಶ್ರೇಷ್ಠವಾದ ಹಾಗೂ ಅನಿವಾರವಾದ ಸಂಘವಾಗಿದೆ . ಈ ಕಾರಣದಿಂದ ಅರಿಸ್ಟಾಟಲ್‌ರವರು “ ರಾಜ್ಯವು ಜೀವನದ ರಕ್ಷಣೆಗಾಗಿ ಹುಟ್ಟಿಕೊಂಡಿದೆ . ಅದು ಒಳ್ಳೆಯ ಜೀವನವನ್ನು ಒದಗಿಸಲು ಮುಂದುವರೆದಿದೆ ” ಎಂದಿದ್ದಾರೆ . ಹಾಗಾಗ ರಾಜ್ಯದ ಹೊರತಾಗಿ ನಾಗರಿಕ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ . ಇಂಥಹ ರಾಜ್ಯದ ಮಹತ್ವ ಈ ಕೆಳಗಿನಂತಿದೆ .
1 ) ಇದು ಜನತೆಗೆ ಆಂತರಿಕ ರಕ್ಷಣೆ ಹಾಗೂ ಬಾಹ್ಯ ಭದ್ರತೆಯನ್ನು ಒದಗಿಸುತ್ತದೆ .
2 ) ಜನತೆಗೆ ನ್ಯಾಯವನ್ನು ದೊರಕಿಸಿಕೊಡುತ್ತದೆ .
3 ) ಜನತೆಯ ವಿಭಿನ್ನ ಚಟುವಟಿಕೆಗಳನ್ನು ನಿಯಂತ್ರಿಸಿ ಕಾನೂನು , ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತದೆ .
4 ) ಜನತೆಯ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸಂರಕ್ಷಿಸುತ್ತದೆ .
5 ) ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳಾದ ಆರೋಗ್ಯ , ಶಿಕ್ಷಣ ಇತ್ಯಾದಿಗಳನ್ನು ಒದಗಿಸುತ್ತದೆ .
6 ) ಜನರಿಗೆ ಸಾಮಾನ್ಯ ಭದ್ರತೆ , ಉದ್ಯೋಗ , ನಿವೃತ್ತಿ ವೇತನ ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತದೆ .
7 ) ಆಧುನಿಕ ರಾಜ್ಯವು ಕಲ್ಯಾಣರಾಜ್ಯವಾಗಿದ್ದು ಜನನದಿಂದ ಮರಣದವರೆಗೆ ಎಲ್ಲಾ ಪ್ರಜೆಗಳಿಗೆ ಸಕಲ ಸೌಲಭ್ಯ ಮತ್ತು ಸಲವತ್ತುಗಳನ್ನು ಒದಗಿಸುತ್ತದೆ .
ಈ ರೀತಿ ಆಧುನಿಕ ರಾಜ್ಯವು ಕಲ್ಯಾಣ ರಾಜ್ಯವಾಗದ್ದು ಜನತೆಯ ಸರ್ವತೋಮುಖ ಪ್ರಗತಿಗಾಗಿ ಸದಾ ಶ್ರಮಿಸುತ್ತದೆ .
2 ) ಪರಮಾಧಿಕಾರ ಎಂದರೇನು ? ಅದರ 2 ಸ್ವರೂಪಗಳನ್ನು ವಿವರಿಸಿ .
ಪರಮಾಧಿಕಾರವು ರಾಜ್ಯದ ನಾಲ್ಕು ಮೂಲಾಂಶಗಳಲ್ಲಿ ಪ್ರಮುಖವಾದದ್ದಾಗಿದ್ದು , ಇದು ರಾಜ್ಯವನ್ನು ಇತರ ಸಂಘ – ಸಂಸ್ಥೆಗಳಿಂದ ಬೇರ್ಪಡಿಸಿದೆ . ಇದು ರಾಜ್ಯದ ಪರಮಶ್ರೇಷ್ಠ ಅಧಿಕಾರವಾಗಿದ್ದು ಇದನ್ನು ರಾಜ್ಯದ ‘ ಜೀವಾಳ ಮತ್ತು ಆತ್ಮ ‘ ಎಂದು ಕರೆಯಲಾಗಿದೆ .
ಪರಮಾಧಿಕಾರ ಎಂದರೆ , ರಾಜ್ಯದ ಪರಮಶ್ರೇಷ್ಠ ಅಧಿಕಾರ ಅಥವಾ ಯಾರೂ ಪ್ರಶ್ನಿಸದಂತಹ ಅಧಿಕಾರ , ಕಾನೂನುಗಳನ್ನು ರಚಿಸುವ ಕಾನೂನುಗಳಿಗೆ ವಿಧೇಯತೆ ತೋರಿಸುವಂತೆ ಪ್ರಜೆಗಳಿಗೆ ಒತ್ತಾಯಿಸುವ ಹಾಗು ಅವುಗಳನ್ನು ದಿಕ್ಕರಿಸಿದವರಿಗೆ ಶಿಕ್ಷೆ ವಿಧಿಸುವ ಅಧಿಕಾರ ರಾಜ್ಯಕ್ಕೆ ಮಾತ್ರ ಇದೆ . ಇದೇ ಪರಮಾಧಿಕಾರ . ಈ ಪರಮಾಧಿಕಾರ ಈ ಕೆಳಗಿನ 2 ಸ್ವರೂಪಗಳನ್ನು ಹೊಂದಿದೆ .
1 ) ಅಂತಲಕ ಸ್ವರೂಪದ ಪರಮಾಧಿಕಾರ : ರಾಜ್ಯದ ವ್ಯಾಪ್ತಿಯೊಳಗಿನ ಎಲ್ಲಾ ವ್ಯಕ್ತಿ ಮತ್ತು ಸಂಘ – ಸಂಸ್ಥೆಗಳನ್ನು ನಿಯಂತ್ರಿಸುವ ಅಧಿಕಾರವೇ ಆಂತರಿಕ ಸ್ವರೂಪದ ಪರಮಾಧಿಕಾರ . ಕಾನೂನು ರಚನೆ , ಅನುಷ್ಠಾನ ಇವುಗಳನ್ನು ಉಲ್ಲಂಘಿಸಿದರೆ ಶಿಕ್ಷೆ ನೀಡುವ ಹಾಗು ಅಗತ್ಯವೆನಿಸಿದರೆ ನೀತಿಕಾರಕ್ರಮಗಳನ್ನು ಹಮ್ಮಿಕೊಳ್ಳುವ ಆಂತರಿಕ ಸ್ವಾತಂತ್ರ್ಯವೇ ಆಂತರಿಕ ಸ್ವರೂಪದ ಪರಮಾಧಿಕಾರವಾಗಿದೆ .
2 ) ಬಾಹ್ಯ ಸ್ವರೂಪದ ಪರಮಾಧಿಕಾರ : ಒಂದು ರಾಜ್ಯದ ಬಾಹ್ಯ ನಿಯಂತ್ರಣದಿಂದ ಅಂದರೆ ಅನ್ಯದೇಶಗಳ ನಿಯಂತ್ರಣದಿಂದ ಅಂದರೆ ಅನ್ಯದೇಶಗಳ ನಿಯಂತ್ರಣದಿಂದ ಸ್ವಾತಂತ್ರ್ಯವಾಗಿರುವುದೇ ಬಾಹ್ಯಪರಮಾಧಿಕಾರ . ಈ ಪರಮಾಧಿಕಾರವನ್ನು ಹೊಂದಿರುವ ರಾಜ್ಯವು ಪರರಾಷ್ಟ್ರಗಳೊಡನೆ ತನಗೆ ಸರಿತೋರಿದ ಸಂಬಂಧವನ್ನಿಟ್ಟುಕೊಳ್ಳುವ ಅಧಿಕಾರ , ಅದು ತನಗೆ ಸರಿತೋರಿದ ವಿದೇಶಾಂಗ ನೀತಿಯನ್ನು ಅನುಸರಿಸುವ ಅಧಿಕಾರವನ್ನು ಹೊಂದಿದೆ . ಈ ಮೇಲಿನ ಎರಡು ಸ್ವರೂಪದ ಪರಮಾಧಿಕಾರವನ್ನು ಒಂದು ನಿರ್ದಿಷ್ಟ ಭೂಪ್ರದೇಶದ ಜನಾಂಗ ಹೊಂದಿದ್ದರೆ ಮಾತ್ರ ಅದು ರಾಜ್ಯ ಎನಿಸಿಕೊಳ್ಳಲು ಸಾಧ್ಯ .
3 ) ರಾಜ್ಯ ಮತ್ತು ಸಮಾಜದ ನಡುವಿನ ವ್ಯತ್ಯಾಸಗಳಾವುವು ?
ಮಾನವ ಸಮಾಜಜೀವಿಯಾಗಿರುವುದರಿಂದ ಸಮಾಜ ಉಗಮವಾದಂತೆ , ಆ ರಾಜಕೀಯ ಜೀವಿಯೂ ಆಗಿರುವುದರಿಂದ ರಾಜ್ಯ ಉಗಮವಾಗಿದೆ . ಸಮಾಜದಲ್ಲಿ ಉದ್ಭವಿಸುವ ಕಲಹಗಳನ್ನು ತೀರ್ಮಾನಿಸಲು ಅಗತ್ಯವಾದ ಅಧಿಕಾರವನ್ನು ಹೊಂದಿರುವ ಸಂಸ್ಥೆಯೇ ರಾಜ್ಯ . ಇವೆರಡು ಒಂದೇ ಉದ್ದೇಶವನ್ನು ಹೊಂದಿವೆ ಅದೇ ವ್ಯಕ್ತಿಯ ಅಭಿವೃದ್ಧಿ ಆದರೆ ಅವೆರಡು ಒಂದೇ ಅಲ್ಲ ಅವುಗಳ ನಡುವಿನ ವ್ಯತ್ಯಾಸಗಳನ್ನು ಕೆಳಗಿನಂತೆ ಕಾಣಬಹುದಾಗದೆ .
ರಾಜ್ಯ
- ಸಮಾಜದ ನ೦ತರ ಅಸ್ತಿತ್ವಕ್ಕೆ ಬಂದದ್ದು
- ಮಾನವ ಸ್ವ – ಇಚ್ಛೆಯಿಂದ ಅಸ್ತಿತ್ವಕ್ಕೆ ತಂದದ್ದು
- ಇದು ಪರಮಾಧಿಕಾರವನ್ನು ಹೊಂದಿದೆ
- ಇದು ಸಮಾಜದ ಒ೦ದು ಅಂಗವಾಗಿದೆ
- ಇದಕ್ಕೆ ನಿರ್ದಿಷ್ಟ ಭೂಪ್ರದೇಶದ ಅವಶ್ಯಕತೆ ಇದೆ
- ಇದಕ್ಕೆ ಸರ್ಕಾರವೆಂಬ ಸಾಧನವಿದೆ
- ಇದಕ್ಕೆ ಪ್ರಾದೇಶಿಕ ಮಿತಿಯಿದೆ
- ಇದು ಸುಸಂಘಟಿತವಾಗಿರಬೇಕು
- ಇದರ ಕಟ್ಟಳೆಗಳು ಕಡ್ಡಾಯ
- ಇದು ಒಂದೇ ಉದ್ದೇಶವನ್ನು ಹೊಂದಿದೆ . ಅದೇ ಜನತಾ ಕಲ್ಯಾಣ .
- ಇದರ ಸದಸ್ಯತ್ವ ಕಡ್ಡಾಯ
- ಇದು ರಾಜಕೀಯ ವ್ಯವಸ್ಥೆ
ಸಮಾಜ
- ರಾಜ್ಯಕ್ಕಿಂತ ಪೂರ್ವವಾದದ್ದು
- ಇದು ಸ್ವಾಭಾವಿಕವಾಗಿ ಅಸ್ತಿತ್ವಕ್ಕೆ ಬಂದಿದ್ದು
- ಇದು ಪರಮಾಧಿಕಾರ ಹೊಂದಿಲ್ಲ
- ಇದು ರಾಜ್ಯಕ್ಕಿಂತ ವಿಶಾಲವಾದದ್ದು
- ಇದಕ್ಕೆ ನಿರ್ದಿಷ್ಟ ಭೂ ಪ್ರದೇಶ ಅನಿವಾರ್ಯವಲ್ಲ
- ಇದಕ್ಕೆ ಸರ್ಕಾರವೆಂಬ ಸಾಧನವಿಲ್ಲ
- ಪ್ರಾದೇಶಿಕ ಮಿತಿ ಇಲ್ಲ
- ಇದು ಸುಸಂಘಟಿತವಾಗಿರಬಹುದು, ಅಸಂಘಟಿತವಾಗಿರಬಹುದು
- ಇದರ ಕಟ್ಟಳೆಗಳು ಕಡ್ಡಾಯವಲ್ಲ .
- ಇದು ಭೌತಿಕ ನೈತಿಕ , ಧಾರ್ಮಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಮೊದಲಾದ ಉದ್ದೇಶಗಳನ್ನು ಹೊಂದಿದೆ .
- ಇದರ ಸದಸ್ಯತ್ವ ಕಡ್ಡಾಯವಲ್ಲ
- ಇದು ಸಾಮಾಜಿಕ ವ್ಯವಸ್ಥೆ
4 ) ರಾಜ್ಯ ಮತ್ತು ಸಂಘ – ಸಂಸ್ಥೆಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿ .
ಮಾನವ ಹಲವಾರು ಆಸೆ ಆಕಾಂಕ್ಷೆಗಳನ್ನು ಹೊಂದಿದ್ದು , ಅವುಗಳ ಈಡೇರಿಕೆಗಾಗಿ ಹಲವಾರು ಸಂಘ – ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿದ್ದಾನೆ . ಆದ್ದರಿಂದಲೇ ಪ್ರೊ . ಎಚ್.ಜೆ. ಲಾ “ ಮಾನವ ಸಂಘ – ಸಂಸ್ಥೆಗಳನ್ನು ನಿರ್ಮಿಸುವ ಪ್ರಾಣಿ ” ಎಂದಿದ್ದಾರೆ . ಯಾವುದಾದರೊಂದು ಬೇಡಿಕೆಯ ಪೂರೈಕೆಗಾಗಿ ವ್ಯಕ್ತಿ ಸ್ಥಾಪಿಸಿಕೊಂಡಿರುವ ಸುಸಂಘಟಿತ ಸಮುದಾಯವೇ ರಾಜ್ಯ ಉದಾ : ರೋಟರಿ ಕ್ಲಬ್ , ಲಯನ್ಸ್ ಕ್ಲಬ್ ಇತ್ಯಾದಿ ಎಲ್ಲಾ ಸಂಘಗಳಲ್ಲಿ ರಾಜ್ಯ ಅತ್ಯಂತ ಶ್ರೇಷ್ಠ ಸಂಘವಾಗಿದೆ . ಹಾಗಾಗಿ ಇದನ್ನು ಸಂಘಗಳ ಸಂಘ ” ಎನ್ನುವರು .
ರಾಜ್ಯ ಮತ್ತು ಸಂಘ – ಸಂಸ್ಥೆಗಳ ನಡುವಿನ ವ್ಯತ್ಯಾಸಗಳನ್ನು ಕೆಳಗಿನಂತೆ ಕಾಣಬಹುದು .
ರಾಜ್ಯ :
- ಸದಸ್ಯತ್ವ ಕಡ್ಡಾಯವಾದುದು .
- ಶಾಶ್ವತವಾದುದು
- ನಿರ್ದಿಷ್ಟ ಭೂಪ್ರದೇಶದ ಅಗತ್ಯವಿದೆ .
- ಪರಮಾಧಿಕಾರ ಹೊಂದಿದೆ
- ಕಾರಕ್ಷೇತ್ರ ವಿಶಾಲ .
- ಏಕಕಾಲದಲ್ಲಿ ಒಬ್ಬ ವ್ಯಕ್ತಿ ಹಲವು ಸಂಘ – ಸಂಸ್ಥೆಗಳ ಸದಸ್ಯನಾಗ ಒಂದಕ್ಕಿಂತ ಹೆಚ್ಚು ರಾಜ್ಯದ ಸದಸ್ಯನಾಗುವಂತಿಲ್ಲ
- ಇದರ ಸದಸ್ಯತ್ವವನ್ನು ಸುಲಭವಾಗಿ ಬಿಡಲು ಸಾಧ್ಯವಿಲ್ಲ .
- ಇದಕ್ಕೆ ಶಿಕ್ಷಿಸುವ ಕಾನೂನು ಬದ್ಧ ಅಧಿಕಾರವಿದೆ
- ಸೀಮಿತ ಸದಸ್ಯತ್ವ
- ಇದು ಸಂಘ – ಸಂಸ್ಥೆಗಳಿಗಿಂತ ಉನ್ನತಸ್ಥಾನ ಹೊಂದಿದೆ .
- ತನ್ನದೇ ಆದ ಗಡಿ ಪ್ರದೇಶ ಹೊಂದಿದೆ
ಸಂಘ – ಸಂಸ್ಥೆಗಳು :
- ಸದಸ್ಯತ್ವ ಐಚ್ಛಿಕವಾದುದು
- ಶಾಶ್ವತವಾದುದಲ್ಲ
- ನಿರ್ದಿಷ್ಟ ಭೂಪ್ರದೇಶದ ಅಗತ್ಯತೆ ಇಲ್ಲ
- ಪರಮಾಧಿಕಾರ ಹೊಂದಿಲ್ಲ
- ಸಂಕುಚಿತ ಕಾರ್ಯಕ್ಷೇತ್ರ
- ಏಕ ಕಾಲದಲ್ಲಿ ಒಬ್ಬ ವ್ಯಕ್ತಿ ಹಲವು ಸಂಘ ಸಂಸ್ಥೆಗಳ ಸದಸ್ಯನಾಗಬಹುದು
- ಇದರ ಸದಸ್ಯತ್ವವನ್ನು ಸುಲಭವಾಗಿ ಬಿಡಬಹುದು .
- ಇಂತಹ ಅಧಿಕಾರ ಇದಕ್ಕಿಲ್ಲ
- ಸಾರ್ವತ್ರಿಕ ಸದಸ್ಯತ್ವ .
- ಇದು ರಾಜ್ಯದ ಅಧೀನವಾಗಿರುತ್ತವೆ .
- ಇದಕ್ಕೆ ಗಡಿ ಎಂಬುದಿರುವುದಿಲ್ಲ .
5 ) ರಾಜ್ಯ ಮತ್ತು ರಾಷ್ಟ್ರಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿ ,
ರಾಜ್ಯ ಮತ್ತು ರಾಷ್ಟ್ರ ಪದಗಳೆರಡನ್ನು ಒಂದೇ ಅರ್ಥದಲ್ಲಿ ಬಳಸುತ್ತಿದ್ದುದ್ದನ್ನು ಕಾಣಬಹುದು ರಾಷ್ಟ್ರ ಪದದ ದುರುಪಯೋಗಕ್ಕೆ ಮುಖ್ಯ ಕಾರಣ ರಾಷ್ಟ್ರಗಳು ರಾಜ್ಯಗಳ ಆಗಿರುವುದಾಗಿದೆ . ರಾಷ್ಟ್ರ / ಜನಪದ ಲ್ಯಾಟಿನ್ ಭಾಷೆಯ ‘ ನೇಶಿಯೋ ‘ ದಿಂದ ಬಂದಿದೆ . ‘ ನೇಶಿಯೋ ‘ ಎಂದರೆ ಹುಟ್ಟು / ಜನಿಸಿದ್ದು ಎಂದರ್ಥ . ಆದ್ದರಿಂದ ಜನಪದ ( ರಾಷ್ಟ್ರ ) ಎಂದರೆ ರಕ್ತ ಸಂಬಂಧದಿಂದ ಒಟ್ಟುಗೂಡಲ್ಪಟ್ಟ ಒಂದು ನಿರ್ದಿಷ್ಟ ಭ ಪ್ರದೇಶದಲ್ಲಿ ನೆಲಸಿರುವ ಜನಸಮುದಾಯವೇ ಆಗಿದೆ . ಒಂದು ಜನಸಮುದಾಯ ಜನಪದ / ರಾಷ್ಟ್ರವಾಗಬೇಕಾದರೆ ಒಂದೇ ಬುಡಕಟ್ಟು / ಒಂದೇ ಭಾಷೆ / ಒಂದೇ ಮತ / ಒಂದೇ ಸಂಸ್ಕೃತಿ / ಒಂದೇ ಇತಿಹಾಸನವನ್ನು ಹೊಂದಿರಬೇಕು . ಆಗ ಮಾತ್ರ ಸಾಧ್ಯ ರಾಜ್ಯ ಮತ್ತು ರಾಷ್ಟ್ರಗಳೆರಡನ್ನು ಒಂದೇ ಅರ್ಥದಲ್ಲಿ ಬಳಸುತ್ತಿದ್ದರು ಆದರೆ ಅವೆರಡು ಒಂದೇ ಅಲ್ಲವೆಂಬುದನ್ನು ಕೆಳಗಿನ ವ್ಯತ್ಯಾಸಗಳನ್ನು ತಿಳಿಯುವುದರಿಂದ ಅರಿಯಬಹುದು .
ರಾಜ್ಯ :
1. ರಾಜಕೀಯ ದೃಷ್ಟಿಯಿಂದ ಸುಸಂಘಟಿತವಾದ ಜನಸಮುದಾಯ .
2. ಇದಕ್ಕೆ ನಿರ್ದಿಷ್ಟ ಭೂಪ್ರದೇಶದ ಅಗತ್ಯವಿದೆ .
3. ಭೌತಿಕವಾದದ್ದು .
4 . ಸೀಮಿತ ವ್ಯಾಪ್ತಿ .
5. ಸರ್ಕಾರವೆಂಬ ಆಡಳಿತ ಯಂತ್ರದ ಅಗತ್ಯವಿದೆ .
6. ಪರಮಾಧಿಕಾರ ಹೊಂದಿರುವ ಸಾರ್ವಭೌಮ ಸಂಘ .
ರಾಷ್ಟ್ರ :
1. ನಾವೆಲ್ಲರೂ ಒಂದೇ ಎಂಬುವ ಭಾವನೆಯನ್ನು ಹೊಂದಿರುವ ಜನಸಮುದಾಯ
2. ನಿರ್ದಿಷ್ಟ ಭೂಪ್ರದೇಶ ಅನಿವಾರ್ಯವಲ್ಲ ,
3. ಭಾವನಾತ್ಮಕವಾದದ್ದು .
4. ವಿಶಾಲವ್ಯಾಪ್ತಿ .
5. ಇದಕ್ಕೆ ಅಗತ್ಯವಿಲ್ಲ .
6. ಸಾರ್ವಭೌಮ ಅಧಿಕಾರವಿಲ್ಲ .
1st Puc Political Science Chapter 2 Notes Pdf
IV . ಹತ್ತು ಅಂಕದ ಪ್ರಶ್ನೆಗಳು :
1 ) ರಾಜ್ಯಶಾಸ್ತ್ರ ರಾಜ್ಯ ಎಂದರೇನು ? ಅದರ ಮೂಲಾಂಶಗಳನ್ನು ವಿವರಿಸಿ .
ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ , ಸರ್ಕಾರದ ಆಶ್ರಯದಲ್ಲಿ , ಪರರ ನಿಯಂತ್ರಣಕ್ಕೆ ಒಳಪಡದೆ ಇರುವ ಜನಮುದಾಯವೇ ರಾಜ್ಯ ರಾಜ್ಯ ರಾಜ್ಯಶಾಸ್ತ್ರದ ಅಧ್ಯಯನದ ವಸ್ತು / ತಿರುಳಾಗಿದೆ . ರಾಜ್ಯವಿಲ್ಲದೆ ರಾಜ್ಯಶಾಸ್ತ್ರವಿರಲಾರದು . ಸಮಾಜದಲ್ಲಿರುವ ಅನೇಕ ಸಂಘ – ಸಂಸ್ಥೆಗಳಲ್ಲಿ ರಾಜ್ಯವೂ ಒಂದು ಅತ್ಯಂತ ಮಹತ್ವದ ಸಂಸ್ಥೆಯಾಗಿದೆ . ಇದು ಸ್ವಾಭಾವಿಕವಾದ , ಅಗತ್ಯವಾದ ಮತ್ತು ಸರ್ವವ್ಯಾಪಿಯಾದ ಸಂಸ್ಥೆಯಾಗಿದೆ . ರಾಜ್ಯದ ಅಸ್ತಿತ್ವಕ್ಕೆ ಅಗತ್ಯವಾದ ಪರಿಕರಗಳನ್ನು ರಾಜ್ಯದ ಮೂಲಾಂಶ ಎನ್ನುವರು .
ಪ್ರಾಚೀನ ಭಾರತದ ರಾಜಕೀಯ ಇತಿಹಾಸದ ಪಿತಾಮಹಾನಾದ ಕೌಟಿಲ್ಯ ರಾಜ್ಯದ ಅಸ್ತಿತ್ವಕ್ಕೆ ಏಳು ಅಂಗಗಳು ( ಸಪ್ತಾಂಗ ಸಿದ್ಧಾಂತ ) ಅಗತ್ಯವೆಂದು ತನ್ನ “ ಅರ್ಥಶಾಸ್ತ್ರ ” ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ . ಆದರೆ ಆಧುನಿಕ ಪಾಶ್ಚಾತ್ಯ ರಾಜಕೀಯ ಚಿಂತಕರ ಪ್ರಕಾರ ರಾಜ್ಯದ ಮೂಲಾಂಶಗಳು 4. ಅವುಗಳು ಕೆಳಗಿನಂತಿವೆ .
1 ) ಜನಸಂಖ್ಯೆ : ರಾಜ್ಯ ಮಾನವ ನಿರ್ಮಿತ ಸಂಸ್ಥೆಯಾಗಿರುವುದರಿಂದ ಜನಸಂಖ್ಯೆಯು ರಾಜ್ಯದ ಅತ್ಯಂತ ಪ್ರಮುಖ ಮುಲಾಂಶವಾಗಿದೆ . ಜನರಿಲ್ಲದಿದ್ದರೆ ಆಳುವವರು ಇರುವುದಿಲ್ಲ . ಆಳಿಸಿಕೊಳ್ಳುವವರು ಇರುವುದಿಲ್ಲ . ಆದ್ದರಿಂದ ಮಾನವರಹಿತ ರಾಜ್ಯದ ಅಸ್ತಿತ್ವ ಅಸಾಧ್ಯ ಜನಸಂಖ್ಯೆ ಪ್ರಮಾಣ ಎಷ್ಟಿರಬೇಕೆಂಬುದರ ಬಗ್ಗೆ ರಾಜಕೀಯ ಚಿಂತಕರಲ್ಲಿ ಏಕಾಭಿಪ್ರಾಯವಿಲ್ಲ . ನಗರ – ರಾಜ್ಯಗಳ ಕಾಲದಲ್ಲಿ ಜೀವಿಸಿದಂತಹ ಪ್ಲೇಟೋ ಪ್ರಕಾರ ಆದರ್ಶ ರಾಜ್ಯದ ಜನಸಂಖ್ಯೆ 5040 ಇರಬೇಕು . [ ಗುಲಾಮರು , ಸ್ತ್ರೀಯರು , ಅಪ್ರಾಪ್ತ ವಯಸ್ಕರು , ವೃದ್ಧರು , ವ್ಯಾಪಾರಸ್ಥರುಗಳನ್ನು ಹೊರತುಪಡಿಸಿ ] ರುಸೋ ಪ್ರಕಾರ 10,000 ಜನರಿರಬೇಕು . ಅರಿಸ್ಟಾಟಲ್ ಪ್ರಕಾರ ರಾಜ್ಯ ರಕ್ಷಣೆ ಮಾಡಿಕೊಳ್ಳುವಷ್ಟು ಚಿಕ್ಕದಾಗಿಯೂ ಮತ್ತು ಆಡಳಿತವನ್ನು ದಕ್ಷವಾಗಿ ನಡೆಸಿ ಜನರ ಅವಶ್ಯಕತೆಗಳನ್ನು ಪೂರೈಸುವಷ್ಟೇ ವಿಶಾಲವಾಗಿರಬೇಕು ಎಂದಿದ್ದಾರೆ . ಆದರೆ ಆಧುನಿಕ ಕಾಲದಲ್ಲಿ ಅತೀ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯವನ್ನು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ . ಹಾಗಾಗಿ ಆಧುನಿಕ ರಾಜಕೀಯ ಚಿಂತಕರು ನಿರ್ದಿಷ್ಟ ಜನಸಂಖ್ಯೆಯನ್ನು ನಿಗದಿ ಮಾಡುವ ಪ್ರಯತ್ನ ಮಾಡಿಲ್ಲ . ಆದ್ದರಿಂದ ರಾಜ್ಯದ ರಚನೆಯಲ್ಲಿ ಜನಸಂಖ್ಯೆಯು ನಿರ್ಧಾರಕ ಅಂಶವೇ ವಿನಃ ಜನಸಂಖ್ಯೆಯ ಗಾತ್ರವಲ್ಲ . ಒಂದು ರಾಜ್ಯಕ್ಕೆ ಅತಿ ಕಡಿಮೆ ಜನಸಂಖ್ಯೆ ಅಥವಾ ಅತಿ ಹೆಚ್ಚು ಜನಸಂಖ್ಯೆ ಒಳ್ಳೆಯದಲ್ಲಿ , ಜನಸಂಖ್ಯೆ ಹೆಚ್ಚಾಗಿದ್ದರೆ , ಆಹಾರ , ಉಡುಗೆ – ತೊಡುಗೆ , ವಸತಿ , ಶಿಕ್ಷಣ ಉದ್ಯೋಗ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ . ಹಾಗೆಯೇ ಅತಿ ಕಡಿಮೆ ಜನಸಂಖ್ಯೆ ಇದ್ದಲ್ಲಿ ರಾಷ್ಟ್ರರಕ್ಷಣೆ ಸಮಸ್ಯೆ & ಮಾನವ ಸಂಪನ್ಮೂಲಗಳ ಕೊರತೆ ಉದ್ಭವವಾಗುವುದು . ಆದ್ದರಿಂದ ಒಂದು ರಾಜ್ಯದಲ್ಲಿ ಜನಸಂಖ್ಯೆ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳಿಗನುಗುಣವಾಗಿ ಇರಬೇಕು . ಕೂಡ ದೇಶಭಕ್ತರು , ಆ ಜನರ ವಿದ್ಯಾವಂತರು , ಪ್ರಾಮಾಣಿಕರು , ದಕ್ಷರು , ತ್ಯಾಗಗಳು ಮತ್ತು ಶ್ರಮಜೀವಿಗಳು ಆಗಿದ್ದಲ್ಲಿ ಮಾತ್ರ ಆ ರಾಜ್ಯ ಪ್ರಗತಿ ಸಾಧಿಸಬಹುದಾಗಿದೆ .
2 ) ಭೂಪ್ರದೇಶ : ಕೇವಲ ಜನಸಂಖ್ಯೆ ಮಾತ್ರವೇ ಇದ್ದರೆ ರಾಜ್ಯವಾಗುವುದಿಲ್ಲ . ಆ ಜನರು ಶಾಶ್ವತವಾಗಿ ನೆಲೆಸಲು ಒಂದು ನಿರ್ದಿಷ್ಟ ಭೂಪ್ರದೇಶವಿರಬೇಕು . ಈ ಕಾರಣದಿಂದಲೇ ಕ್ಯೂಬರ್ ನಿರ್ದಿಷ್ಟವಾದ ಭೂಪ್ರದೇಶವನ್ನು ಹೊಂದಿರುವ ಪ್ರಜಾಸಮುದಾಯವೇ ರಾಜ್ಯ ಎಂದಿದ್ದಾರೆ . ಒಂದು ನಿರ್ದಿಷ್ಟ ಪ್ರದೇಶವನ್ನು ಹೊಂದಿಲ್ಲದ ಕಾರಣ ಯಹೂದಿಗಳು 1948 ರ ಪ್ಯಾಲಿಸ್ತೇನ್ ವಿಭಜನೆಯವರೆಗೂ ತಮ್ಮದೇ ಆದ ರಾಜ್ಯ ಹೊಂದಲಾಗಲಿಲ್ಲ . ಭೂ ವಿಸ್ತೀರ್ಣದ ಬಗ್ಗೆ ರಾಜಕೀಯ ಚಿಂತಕರಲ್ಲಿ ಒಮ್ಮತವಿಲ್ಲ ಅರಿಸ್ಟಾಟಲ್ ರುಸೋ ಮೊದಲಾದವರು ಸೀಮಿತ ಭೂಪ್ರದೇಶ ಇರಬೇಕೆಂದಿದ್ದಾರೆ . ಆಧುನಿಕ ರಾಜ್ಯಗಳು ವಿಶಾಲ ಭೂ ಪ್ರದೇಶಗಳ ಕಡೆ ಒಲವು ಹೊಂದಿವೆ . ಅತಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ರಾಜ್ಯಗಳು ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಾಗಿ ಹೊಂದಬಹುದು . ಜನರ ವಾಸ್ತವ್ಯಕ್ಕೆ ವಿಶಾಲವಾದ ಭೂ ಪ್ರದೇಶ ಒದಗಿಸಬಹುದು ಮತ್ತು ಅಂತರರಾಷ್ಟ್ರೀಯ ಸ್ಥಾನಮಾನಗಳನ್ನು ಗಳಿಸಬಹುದು . ಆದರೆ ರಾಜ್ಯ ತನ್ನ ಆದಾಯದ ಹೆಚ್ಚು ಭಾಗವನ್ನು ರಕ್ಷಣೆಗಾಗಿ ಮೀಸಲಿಡಬೇಕಾಗುತ್ತದೆ . ಆದರೆ ಸೀಮಿತ ಭೂ ಪ್ರದೇಶ ಹೊಂದಿರುವ ರಾಜ್ಯಗಳು ಪರಿಣಾಮಕಾರಿ ಆಡಳಿತ , ರಾಜ್ಯ ಮತ್ತು ಪ್ರಜೆಗಳ ಸುಮಧುರ ಸಂಬಂಧಕ್ಕೆ ಸಹಕಾರಿಯಾಗಿದ್ದು ನೈಸರ್ಗಿಕ ಸಂಪನ್ಮೂಲಗಳಿಂದ ವಂಚಿತವಾಗಿರುತ್ತವೆ .
3 ) ಸರ್ಕಾರ : ರಾಜ್ಯದ ಮುಖ್ಯ ಉದ್ದೇಶ ಜನತೆಯ ಕಲ್ಯಾಣವಾಗಿದ್ದು ಅದನ್ನು ಸಾಧಿಸಲು ಸರ್ಕಾರವೆಂಬ ಸಾಧನಬೇಕು . ಸರ್ಕಾರವು ರಾಜ್ಯದ ಒಂದು ಆಡಳಿತಯಂತ್ರ ಪ್ರತಿನಿಧಿ ಅಥವಾ ನಿಯೋಗಯಾಗದೆ . ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಾರ ನಿರ್ವಹಿಸುತ್ತದೆ . ಆದ್ದರಿಂದ ಬಂಟಷ್ಠಿ ಪ್ರಕಾರ “ ಸರ್ಕಾರವೇ ಇಲ್ಲದ ರಾಜ್ಯ ಅವ್ಯವಸ್ಥೆ ಮತ್ತು ಅರಾಜಕತೆಯಿಂದ ನಶಿಸುತ್ತದೆ , ಈ ಸರ್ಕಾರವು ಕೆಳಗಿನ 3 ಅಂಗಗಳನ್ನು ಹೊಂದಿದೆ .
1 ) ಶಾಸಕಾಂಗ – ಕಾನೂನುಗಳನ್ನು ರೂಪಿಸುತ್ತದೆ .
2 ) ಕಾರ್ಯಾಂಗ – ಕಾನೂನುಗಳನ್ನು ಕಾರರೂಪಕ್ಕೆ ತರುತ್ತದೆ .
3 ) ನ್ಯಾಯಾಂಗ – ಕಾನೂನಿನ ಅರ್ಥ ವಿವರಣೆ ನೀಡಿ , ನ್ಯಾಯ ನಿರ್ವಹಣೆ ಮಾಡುತ್ತದೆ .
ರಾಜ್ಯದ ಅಸ್ತಿತ್ವಕ್ಕೆ ಇಂತಹ ಸರ್ಕಾರವೇ ಬೇಕೆಂಬ ನಿಯಮವಿಲ್ಲ .
4 ) ಪರಮಾಧಿಕಾರ : ರಾಜ್ಯದ ಮೂಲಾಂಶಗಳಲ್ಲಿ ಅತಿ ಮುಖ್ಯವಾದ ಮೂಲಾಂಶವೆಂದರೆ , ಪರಮಾಧಿಕಾರ , ರಾಜ್ಯದ ಸರ್ವಶ್ರೇಷ್ಠ ಅಧಿಕಾರವೇ ಪರಮಾಧಿಕಾರ . ಕಾನೂನುಗಳನ್ನು ರೂಪಿಸುವ , ಅವುಗಳಿಗೆ ವಿಧೇಯತೆ ತೋರುವಂತೆ ಪ್ರಜೆಗಳಿಗೆ ಒತ್ತಾಯಿಸುವ ಹಾಗು ಅವುಗಳನ್ನು ದಿಕ್ಕರಿಸಿದವರಿಗೆ ಶಿಕ್ಷೆ ವಿಧಿಸುವ ಅಧಿಕಾರವೇ ಪರಮಾಧಿಕಾರ . ಪರಮಾಧಿಕಾರ ರಾಜ್ಯವನ್ನು ಇತರ ಸಂಘ – ಸಂಸ್ಥೆಗಳಿಂದ ಬೇರ್ಪಡಿಸುವ ಮುಖ್ಯವಾದ ಮೂಲಾಂಶವಾಗಿದೆ . ಹಾಗಾಗಿ ಇದನ್ನು ರಾಜ್ಯದ ಜೀವಾಳ , ಹೃದಯ ಅಥವಾ ಆತ್ಮ ಎಂದಿದ್ದಾರೆ . ಈ ಪರಮಾಧಿಕಾರವು ಎರಡು ಸ್ವರೂಪಗಳನ್ನು ಹೊಂದಿದೆ . ಆಂತರಿಕ ಸರಮಾಭಿಕಾರ : ರಾಜ್ಯದ ವ್ಯಾಪ್ತಿಯೊಳಗಿನ ಎಲ್ಲಾ ವ್ಯಕ್ತಿ ಮತ್ತು ಸಂಘ – ಸಂಸ್ಥೆಗಳ ಮೇಲೆ ರಾಜ್ಯವು ಹೊಂದಿರುವ ಪರಮೋಚ್ಛ ಅಧಿಕಾರ . 9 ) ಬಾಹ್ಯ ಪರಮಾಧಿಕಾರ : ರಾಜ್ಯ ಬಾಹ್ಯ ನಿಯಂತ್ರಣದಿಂದ ಅಂದರೆ , ಅನ್ಯದೇಶಗಳ ನಿಯಂತ್ರಣದಿಂದ ಸ್ವಾತಂತ್ರ್ಯವಾಗಿರುವುದೇ ಬಾಹ್ಯಪರಮಾಧಿಕಾರ . ಈ ಆಂತರಿಕ ಮತ್ತು ಬಾಹ್ಯ ಪರಮಾಧಿಕಾರವನ್ನು ಒಂದು ನಿರ್ದಿಷ್ಟ ಭೂ ಪ್ರದೇಶದ ಜನಾಂಗ ಹೊಂದಿದ್ದರೆ ಅದು ರಾಜ್ಯವೆನಿಸಿಕೊಳ್ಳಲು ಸಾಧ್ಯ .
5 ) ಅಂತರ ರಾಷ್ಟ್ರೀಯ ಮನ್ನಣೆ : ಕೆಲವು ವಿದ್ವಾಂಸರು ಅಂತರ ರಾಷ್ಟ್ರೀಯ ಮನ್ನಣೆ ಎಂಬ ಮತ್ತೊಂದು ಅಂಶವನ್ನ ರಾಜ್ಯದ ಮೂಲಾಂಶಗಳ ಪಟ್ಟಿಗೆ ಸೇರಿಸಿದ್ದಾರೆ . ಇದು ಎರಡು ಅಂಶಗಳನ್ನು ಹೊಂದಿದೆ . ಒಂದು ರಾಜ್ಯಗಳ ವ್ಯಕ್ತಿಗತ ಮನ್ನಣೆ ಮತ್ತೊಂದು ವಿಶ್ವಸಂಸ್ಥೆಯ ಮನ್ನಣೆ .
5 ) ರಾಜ್ಯ ಎಂದರೇನು ? ಅದರ ಮಹತ್ವವನ್ನು ವಿವರಿಸಿ .
ಮಹತ್ವ : ರಾಜ್ಯವು ಮಾನವ ಕಟ್ಟಿಕೊಂಡಿರುವ ಹಲವಾರು ಸಂಘ – ಸಂಸ್ಥೆಗಳಲ್ಲಿ ಸರ್ವಶ್ರೇಷ್ಠವಾದ ಹಾಗೂ ಅನಿವಾರವಾದ ಸಂಘವಾಗದೆ . ಈ ಕಾರಣದಿಂದ ಅರಿಸ್ಟಾಟಲ್‌ರವರು “ ರಾಜ್ಯವು ಜೀವನದ ರಕ್ಷಣೆಗಾಗಿ ಹುಟ್ಟಿಕೊಂಡಿದೆ . ಅದು ಒಳ್ಳೆಯ ಜೀವನವನ್ನು ಒದಗಿಸಲು ಮುಂದುವರೆದಿದೆ ” ಎಂದಿದ್ದಾರೆ . ಹಾಗಾಗ ರಾಜ್ಯದ ಹೊರತಾಗಿ ನಾಗರಿಕ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ .
ಇಂಥಹ ರಾಜ್ಯದ ಮಹತ್ವ ಈ ಕೆಳಗಿನಂತಿದೆ .
1 ) ಇದು ಜನತೆಗೆ ಆಂತರಿಕ ರಕ್ಷಣೆ ಹಾಗೂ ಬಾಹ್ಯ ಭದ್ರತೆಯನ್ನು ಒದಗಿಸುತ್ತದೆ .
2 ) ಜನತೆಗೆ ನ್ಯಾಯವನ್ನು ದೊರಕಿಸಿಕೊಡುತ್ತದೆ .
3 ) ಜನತೆಯ ವಿಭಿನ್ನ ಚಟುವಟಿಕೆಗಳನ್ನು ನಿಯಂತ್ರಿಸಿ ಕಾನೂನು , ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತದೆ .
4 ) ಜನತೆಯ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸಂರಕ್ಷಿಸುತ್ತದೆ .
5 ) ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳಾದ ಆರೋಗ್ಯ , ಶಿಕ್ಷಣ ಇತ್ಯಾದಿಗಳನ್ನು ಒದಗಿಸುತ್ತದೆ .
6 ) ಜನರಿಗೆ ಸಾಮಾನ್ಯ ಭದ್ರತೆ , ಉದ್ಯೋಗ , ನಿವೃತ್ತಿ ವೇತನ ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತದೆ .
7 ) ಆಧುನಿಕ ರಾಜ್ಯವು ಕಲ್ಯಾಣರಾಜ್ಯವಾಗಿದ್ದು ಜನನದಿಂದ ಮರಣದವರೆಗೆ ಎಲ್ಲಾ ಪ್ರಜೆಗಳಿಗೆ ಸಕಲ ಸೌಲಭ್ಯ ಮತ್ತು ಸಲವತ್ತುಗಳನ್ನು ಒದಗಿಸುತ್ತದೆ .
ಈ ರೀತಿ ಆಧುನಿಕ ರಾಜ್ಯವು ಕಲ್ಯಾಣ ರಾಜ್ಯವಾಗದ್ದು ಜನತೆಯ ಸರ್ವತೋಮುಖ ಪ್ರಗತಿಗಾಗಿ ಸದಾ ಶ್ರಮಿಸುತ್ತದೆ .
FAQ
ಗ್ರೀಕ್ ಭಾಷೆಯ ‘ ಪಾಲಿಸ್ ರಾಜ್ಯದ ಮೂಲಪದ .
ರಾಜ್ಯದ ಧ್ಯೇಯ ಧೋರಣೆಗಳ ಈಡೇರಿಕೆಗಾಗಿ ಇರುವ ಸಾಧನವೇ ಸರ್ಕಾರ
ಇತರೆ ವಿಷಯಗಳು :
First Puc Political Science Notes
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
ಸೂಪರ್
1puc all anyval exam key answer and midterm exam key answers pz
Tq