rtgh

ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ನೋಟ್ಸ್ | 1st Puc Rajyashastra Ondu Adhyayana Notes in Kannada

ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ನೋಟ್ಸ್ ಪ್ರಶ್ನೆ ಉತ್ತರ, 1st Puc Political Science Chapter 1 Notes Question Answer Rajyashastra Ondu Adhyayana Notes rajyashastra ondu adhyayana notes in kannada Kseeb solution For Class 11 Chapter 1 Notes in Kannada Medium 1st Puc Political Science as a Discipline in Kannada

 
ರಾಜ್ಯಶಾಸ್ತ್ರ ಒಂದು ಅಧ್ಯಯನ notes

1st Puc Political Science as a Discipline in Kannada

I. ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1 ) ರಾಜ್ಯಶಾಸ್ತ್ರದ ಪಿತಾಮಹ ಯಾರು ?

ಅರಿಸ್ಟಾಟಲ್‌

2 ) ರಾಜ್ಯಶಾಸ್ತ್ರವನ್ನು ‘ ಉತ್ಕೃಷ್ಟ ವಿಜ್ಞಾನ ‘ ಎಂದವರು ಯಾರು ?

ಅರಿಸ್ಟಾಟಲ್ ರಾಜ್ಯಶಾಸ್ತ್ರವನ್ನು ‘ ಉತ್ಕೃಷ್ಟ ವಿಜ್ಞಾನ ‘ ಎಂದರು .

3 ) ‘ ಮಾನವನು ಸಮಾಜಜೀವಿ ‘ ಎಂದವರು ಯಾರು ?

ರಾಜ್ಯಶಾಸ್ತ್ರದ ಪಿತಾಮಹರಾದ ಅರಿಸ್ಟಾಟಲ್ ‘ ಮಾನವನು ಸಮಾಜಜೀವಿ ‘ ಎಂದಿದ್ದಾರೆ .

4 ) ‘ ಪಾಲಿಟಿಕ್ಸ್ ‘ ಗ್ರಂಥದ ರಚನೆಗೆ ಅರಿಸ್ಟಾಟಲ್ ಎಷ್ಟು ಸಂವಿಧಾನಗಳನ್ನು ಅಭ್ಯಸಿಸಿದ್ದರು ?

158 ಸಂವಿಧಾನಗಳನ್ನು ಅಭ್ಯಸಿಸಿದ್ದರು .

5 ) ರಾಜ್ಯಶಾಸ್ತ್ರದ ಮೂಲ ಪದ ಯಾವುದು ?

ಗ್ರೀಕ್ ಭಾಷೆಯ ‘ ಪಾಲಿಸ್ ‘ ರಾಜ್ಯಶಾಸ್ತ್ರದ ಮೂಲಪದ .

6 ) ರಾಜ್ಯಶಾಸ್ತ್ರವನ್ನು ಪ್ರಪ್ರಥಮ ಬಾರಿಗೆ ವೈಜ್ಞಾನಿಕವಾದ ಅಧ್ಯಯನ ಮಾಡಿದವರು ಯಾರು?

ಪ್ರಾಚೀನ ಗ್ರೀಕರು ರಾಜ್ಯಶಾಸ್ತ್ರವನ್ನು ಪ್ರಪ್ರಥಮ ಬಾರಿಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿದರು .

7 ) ಅರಿಸ್ಟಾಟಲ್‌ರವರ ಪ್ರಸಿದ್ಧ ಗ್ರಂಥ ಯಾವುದು ?

ಅರಿಸ್ಟಾಟಲ್‌ರವರ ಪ್ರಸಿದ್ಧ ಗ್ರಂಥ – ‘ ಪಾಲಿಟಿಕ್ಸ್ ‘

8 ) ಯಾವುದಾದರೊಂದು ಗ್ರೀಕ್ – ನಗರ ರಾಜ್ಯವನ್ನು ಹೆಸರಿಸಿ .

“ ಅಥೆನ್ಸ್ ‘ ಪ್ರಾಚೀನ ಗ್ರೀಕ್‌ನ ‘ ನಗರರಾಜ್ಯ ‘

9 ) ರಾಜ್ಯಶಾಸ್ತ್ರ ಎಂದರೇನು ?

ಸಾಮಾಜಿಕ ಶಾಸ್ತ್ರಗಳಲ್ಲೊಂದಾಗಿದ್ದು , ಮಾನವನ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ .

10 ) ‘ ಪಾಲಿಸ್ ‘ ಪದದ ಅರ್ಥವೇನು ?

‘ ಪಾಲಿಸ್ ‘ ಎಂದರೆ ‘ ನಗರ – ರಾಜ್ಯ ‘ ಎಂದರ್ಥ .

1st PUC Political Science Chapter 1 Question answer in Kannada

ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ರಾಜ್ಯಶಾಸ್ತ್ರವನ್ನು ವ್ಯಾಖ್ಯಾನಿಸಿ

“ ಅರ್ಥಶಾಸ್ತ್ರವು ಹಣ , ಸಂಪತ್ತನ್ನು , ಜೀವಶಾಸ್ತ್ರವು ಸಕಲ ಜೀವರಾಶಿಗಳ ಜೀವನವನ್ನು , ಸಂಖ್ಯಾಶಾಸ್ತ್ರವು ಅಂಕಿ ಅಂಶಗಳ ಅಧ್ಯಯನ ಮಾಡುವಂತೆ , ಸರ್ಕಾರದ ವಿದ್ಯಮಾನಗಳನ್ನು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ”.

2 ) ರಾಜ್ಯಶಾಸ್ತ್ರದ ವ್ಯಾಪ್ತಿಯಲ್ಲಿ ಬರುವ ಅಧ್ಯಯನದ ವಿಭಾಗಗಳು ಯಾವುವು ?

1 ) ರಾಜ್ಯದ ಅಧ್ಯಯನ

2 ) ಸರ್ಕಾರ ಅಧ್ಯಯನ

3 ) ರಾಜ್ಯ ಮತ್ತು ಸರ್ಕಾರಗಳೆರಡರ ಅಧ್ಯಯನ ವಿಭಾಗ

3 ) ರಾಜ್ಯಶಾಸ್ತ್ರ ಅಧ್ಯಯನದ ವಸ್ತು – ವಿಷಯಗಳು ಯಾವುವು ?

ರಾಜ್ಯ ಮತ್ತು ಸರ್ಕಾರಗಳು ರಾಜ್ಯಶಾಸ್ತ್ರದ ಅಧ್ಯಯನದ ಪ್ರಮುಖ ವಸ್ತು ವಿಷಯಗಳಾಗಿವೆ .

4 ) ಮಾನವ ಸಮಾಜ ಜೀವಿ ಹೇಗೆ ?

ಮಾನವನ ಅಗತ್ಯಗಳು ಈಡೇರುವುದು ಜೀವನದಲ್ಲಿ ಸುಖ , ಶಾಂತಿ ಮತ್ತು ನೆಮ್ಮದಿ ದೊರಕುವುದು , ಸಾಮಾಜಿಕ ಭದ್ರತೆ ಮತ್ತು ರಕ್ಷಣೆ ದೊರಕುವುದು ಸಮಾಜದಲ್ಲಿ ಹಾಗಾಗಿ ಮಾನವ ಸಮಾಜ ಜೀವಿಯಾಗಿದ್ದಾನೆ .

5 ) ರಾಜ್ಯಶಾಸ್ತ್ರದ ವ್ಯಾಪ್ತಿ ಎಂದರೇನು ?

ರಾಜ್ಯಶಾಸ್ತ್ರದ ವ್ಯಾಪ್ತಿ ಎಂದರೆ ಅಧ್ಯಯನದ ಮಿತಿ / ಗಡಿ / ಎಲ್ಲೆ / ಮೇರೆ ಎಂದರ್ಥ . ಅಂದರೆ ಇಲ್ಲಿ ಏನನ್ನು ಅಭ್ಯಾಸ ಮಾಡುತ್ತೇವೆ ಎಂಬುದಾಗಿದೆ .

6 ) ಗ್ರೀಕ್ ನಗರ – ರಾಜ್ಯಗಳ ಬಗ್ಗೆ ಬರೆಯಿರಿ .

ಪ್ರಾಚೀನ ಗ್ರೀಕ್‌ನಲ್ಲಿ ನಗರಗಳೇ ರಾಜ್ಯಗಳಾಗಿದ್ದವು . ಈ ನಗರ ರಾಜ್ಯಗಳು ಬೆಟ್ಟ , ಗುಡ್ಡ , ಸರೋವರ , ನದಿ ಕಣಿವೆಗಳಿಂದ ಆವರಿಸಲ್ಪಟ್ಟಿದ್ದವು . ಹೀಗಾಗಿ ಅವುಗಳ ನಡುವೆ ಸಾರಿಗೆ ಸಂಪರ್ಕದ ಕೊರತೆ ಇದ್ದುದರಿಂದ ಪ್ರತೀ ನಗರ – ರಾಜ್ಯಗಳು ಸ್ವಾವಲಂಬಿಗಳಾಗುವುದು ಅನಿವಾರವಾಗಿತ್ತು ಇವು ಕಡಿಮೆ ಜನಸಂಖ್ಯೆ ಮತ್ತು ಭೂ ಪ್ರದೇಶವನ್ನು ಹೊಂದಿದ್ದವು .

ಉದಾ : ಸ್ಪಾರ್ಟಾ , ಅಥೆನ್ಸ್ , ಮಿಲಾನ್ ಇತ್ಯಾದಿ .

7 ) ಯಾವ ಪುರಾತನ ಭಾರತೀಯ ಕೃತಿಗಳಲ್ಲಿ ರಾಜ್ಯಾಡಳಿತದ ಬಗ್ಗೆ ಉಲ್ಲೇಖಗಳಿವೆ?

ಕೌಟಿಲ್ಯನ ‘ ಅರ್ಥಶಾಸ್ತ್ರ ‘ ಮತ್ತು ಕಮಾಂಡಕದ ‘ ನೀತಿಸಾರ’ದಲ್ಲಿ ರಾಜ್ಯಾಡಳಿತದ ಬಗ್ಗೆ ಉಲ್ಲೇಖಗಳಿವೆ

8 ) ರಾಜ್ಯಶಾಸ್ತ್ರದ ಅಂತರರಾಷ್ಟ್ರೀಯ ಸಮ್ಮೇಳನ ಯಾವಾಗ , ಎಲ್ಲಿ ನಡೆಯಿತು ?

ಯುನೆಸ್ಕೋದ ಆಶ್ರಯದಲ್ಲಿ ಪ್ಯಾರಿಸ್‌ನಲ್ಲಿ ಸೆಪ್ಟೆಂಬರ್ 1948 ರಲ್ಲಿ .

9 ) ಗ್ರೀಸ್‌ನ ತತ್ವಜ್ಞಾನಿ ತ್ರಿಮೂರ್ತಿಗಳು ಯಾರು ?

ಸಾಕ್ರೆಟೀಸ್ ( ಕ್ರಿ.ಪೂ.470-399 )

ಪ್ಲೇಟೋ ( ಕ್ರಿಪೂ.427-347 )

ಅರಿಸ್ಟಾಟಲ್ ( ಕ್ರಿ.ಪೂ.384-322 )

ರಾಜ್ಯಶಾಸ್ತ್ರ ಒಂದು ಅಧ್ಯಯನ Notes

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ರಾಜ್ಯಶಾಸ್ತ್ರದ ಅಧ್ಯಯನದ ವಿಕಾಸವನ್ನು ಸಂಕ್ಷಿಪ್ತವಾಗಿ ವಿವರಿಸಿ.

ಮತ್ತು ರಾಜ್ಯಶಾಸ್ತ್ರ ಇತಿಹಾಸದಷ್ಟೇ ಪುರಾತನವಾದುದು . ರಾಜ್ಯಶಾಸ್ತ್ರದ ಉಗಮ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿದ ಕೀರ್ತಿ ಪ್ರಾಚೀನ ಗ್ರೀಕರಿಗೆ ಸಲ್ಲುತ್ತದೆ . ರಾಜ್ಯಶಾಸ್ತ್ರದ ರಾಜಕೀಯ ಚಿಂತನೆ ಪ್ರಾಚೀನ ಗ್ರೀಕ್‌ನಲ್ಲಿ ಸೋಷಿಸ್ಪರಿಂದಲೇ ಪ್ರಾರಂಭವಾಗಿದ್ದು ಅದರ ವೈಜ್ಞಾನಿಕ ಅಧ್ಯಯನ ಸಾಕ್ರೆಟಿಸ್ , ಪ್ಲೇಟೋ ಮತ್ತು ಅರಿಸ್ಟಾಟಲ್‌ರವರಿಂದ ಸಂವಾದದ ಮೂಲಕ ನೀಡಿದರೆ ಇವರ ಶಿಷ್ಯರಾದ ಪ್ಲೇಟೋ ‘ ದಿ ರಿಪಬ್ಲಿಕ್ ‘ , ‘ ದಿ ಲಾಸ್ ‘ ಮತ್ತು ‘ ದಿ ಸ್ಟೇಟ್‌ಮಾನ್ ‘ ಗ್ರಂಥಗಳಲ್ಲಿ ನೀಡಿದರು . ಇವೆಲ್ಲಕ್ಕೂ ಮಿಗಿಲಾದ ಅರಿಸ್ಟಾಟಲ್ ಸಂವಿಧಾನಗಳನ್ನು ಅಧ್ಯಯನ ಮಾಡಿ ರಚಿಸಿದ ಮೇರು ಕೃತಿ ‘ ದಿ ಪಾಲಿಟಿಕ್ಸ್ ‘ ನಲ್ಲಿ ರಾಜ್ಯಶಾಸ್ತ್ರಕ್ಕೆ ಪ್ರಪ್ರಥಮ ಬಾರಿಗೆ ವೈಜ್ಞಾನಿಕ ತಳಹದಿಯನ್ನು ನೀಡಿ ಇದನ್ನು ‘ ಶ್ರೇಷ್ಠ ವಿಜ್ಞಾನ ‘ ಎಂದು ಕರೆಯುವುದರ ಮೂಲಕ ‘ ರಾಜ್ಯಶಾಸ್ತ್ರದ ಪಿತಾಮಹ ‘ ಎಂಬ ಬಿರುದಿಗೆ ಭಾಜ್ಯರಾಗಿದ್ದಾರೆ . ಸಾಕ್ರೆಟಿಸ ಪ್ಲೇಟೋ ಮತ್ತು ಅರಿಸ್ಟಾಟಲ್‌ರವರನ್ನು ಪ್ರಾಚೀನ ಗ್ರೀಕ್‌ನ ‘ ತತ್ವಜ್ಞಾನಿತ್ರಯರು ‘ ಎಂದು ಕರೆಯಲಾಗಿದೆ . ವಾಸ್ತವವಾದ ರಾಜಕೀಯ ಚಿಂತನೆ ಪ್ರಾಚೀನ ಗ್ರೀಕರಿಗಿಂತ ಮೊದಲೇ ಭಾರತದಲ್ಲಿ ಆರಂಭವಾಗಿತ್ತು . ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಕಮಾಂಡಕದ ‘ ನೀತಿಸಾರ’ದಲ್ಲಿ ರಾಜ್ಯಾಡಳಿತದ ಬಗ್ಗೆ ಉಲ್ಲೇಖವಿದೆ . ಹಾಗೆಯೇ ಋಗ್ವದ , ಯಜುರ್ವೇದ ಮನುಸ್ಮೃತಿ , ಶುಕ್ರನೀತಿ ಸಾರ , ರಾಮಾಯಣ , ಮಹಾಭಾರತ ಮತ್ತು ಭಗವದ್ಗೀತೆ ಮುಂತಾದ ಪ್ರಾಚೀನ ಗ್ರಂಥಗಳಲ್ಲಿ ಭಾರತೀಯರು ಗ್ರೀಕರಿಗಿಂತ ಮೊದಲೇ ರಾಜ್ಯಶಾಸ್ತ್ರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರೆಂದು ತಿಳಿಯುತ್ತದೆ . ಆದರೆ ಈ ಗ್ರಂಥಗಳಲ್ಲಿ ರಾಜನೀತಿ ಪ್ರಜ್ಞೆಗಿಂತ ಧಾರ್ಮಿಕ ಪ್ರಜ್ಞೆಯೇ ಹೆಚ್ಚಾಗಿ ಕಂಡು ಬರುತ್ತಿತ್ತು ಹಾಗಾಗಿ ಅವರು ರಾಜ್ಯಶಾಸ್ತ್ರವನ್ನು ರಾಜಧರ್ಮ , ದಂಡನೀತಿ , ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು . ಆಧುನಿಕ ಕಾಲದಲ್ಲಿ ರಾಜ್ಯಶಾಸ್ತ್ರವನ್ನು ಇಟಲಿಯ ಮೆಕೆವೆಲ್ಲಿ ತನ್ನ ಗ್ರಂಥವಾದ ‘ ದಿ ಪ್ರಿನ್ಸ್ ‘ ಕೃತಿಯ ಮೂಲಕ ಮತ್ತಷ್ಟು ಸರ್ವಶ್ರೇಷ್ಠ ಅಧ್ಯಯನವನ್ನಾಗಿಸಿದ್ದಾರೆ .

2 ) ರಾಜ್ಯಶಾಸ್ತ್ರದ ಸ್ವರೂಪವನ್ನು ವಿವರಿಸಿ .

ರಾಜ್ಯಶಾಸ್ತ್ರದ ಸ್ವರೂಪವನ್ನು ಕುರಿತು ಪ್ರಾಚೀನ ಗ್ರೀಕರಿಂದ ಹಿಡಿದು ಇಂದಿನವರೆಗೆ ಗೊಂದಲವಿದೆ . ರಾಜ್ಯಶಾಸ್ತ್ರವನ್ನು ಕುರಿತು ಕೆಲವರು ‘ ವಿಜ್ಞಾನ’ವೆಂದರೆ , ಮತ್ತೆ ಕೆಲವರು ‘ ಕಲೆ ‘ ಎಂದು ಕರೆದಿದ್ದಾರೆ . ಜೆ.ಎಸ್.ಮಿಲ್ , ಬಕಲ್ , ಆಗಸ್ಟ್‌ ಕಾಯ್ದೆ , ಮೈಟ್‌ಲ್ಯಾಂಡ್ , ಜೇಮ್ಸ್ ಬ್ರೆಸ್ ಮುಂತಾದವರು ರಾಜ್ಯಶಾಸ್ತ್ರವನ್ನು ವಿಜ್ಞಾನವೆಂದು ಕರೆಯಲು ನಿರಾಕರಿಸಿದ್ದಾರೆ . ಬಕಲ್‌ರವರು ರಾಜ್ಯಶಾಸ್ತ್ರವನ್ನು ಕಲೆಯೆಂದು ಪರಿಗಣಿಸುವುದಷ್ಟೇ ಅಲ್ಲದೆ ಅದನ್ನು ಅತ್ಯಂತ ಹಿಂದುಳಿದ ಕಲೆಗಳಲ್ಲೊಂದು ‘ ಎಂದಿದ್ದಾರೆ . ಇವರ ಈ ಸಮರ್ಥನೆಗೆ ಕೆಳಗಿನ ಕಾರಣ ನೀಡಿದ್ದಾರೆ .

1 ) ರಾಜ್ಯಶಾಸ್ತ್ರದ ಮೂಲಭೂತ ಪರಿಕಲ್ಪನೆಗಳಲ್ಲಿ ಏಕಾಭಿಪ್ರಾಯವಿಲ್ಲ .

2 ) ರಾಜ್ಯಶಾಸ್ತ್ರದ ಸಿದ್ಧಾಂತ / ನಿಯಮಗಳು ಸಾರ್ವತ್ರಿಕವಾದವುಗಳಿಲ್ಲ .

3 ) ಇಲ್ಲಿ ಪ್ರಯೋಗಗಳನ್ನು ನಡೆಸಲಾಗುವುದಿಲ್ಲ .

4 ) ಖಚಿತವಾದ ರಾಜಕೀಯ ಭವಿಷ್ಯ ಹೇಳುವುದು ಕಷ್ಟ .

5 ) ರಾಜಕೀಯ ಪ್ರಕ್ರಿಯೆಗಳನ್ನು ಅಳತೆ ಮಾಡಲು ಸಾಧನಗಳಿಲ್ಲ .

ರಾಜ್ಯಶಾಸ್ತ್ರದ ಪಿತಾಮಹರಾದ ಅರಿಸ್ಟಾಟಲ್ ರಾಜ್ಯಶಾಸ್ತ್ರವನ್ನು ‘ ಶ್ರೇಷ್ಠ ವಿಜ್ಞಾನ ಎಂದಿದ್ದಾರೆ . ಆಧುನಿಕ ಕಾಲದಲ್ಲಿ ಹಾಬ್ , ಬೋಡಿನ್ , ಸಿಸ್ಟವಿಕ್ , ಸರ್‌ಫೆಡರಿಕ್ ಪೋಲಾಕ್ ಬಂಟಷ್ಠಿ , ಮೆಕೆವಲ್ಲಿ ಮೊದಲಾದವರು ಅರಿಸ್ಟಾಟಲ್‌ರವರ ಅಭಿಪ್ರಾಯವನ್ನು ಕೆಳಗಿನ ಕಾರಣ ನೀಡುತ್ತ ಸಮರ್ಥಿಸಿದ್ದಾರೆ .

1 ) ಇಲ್ಲಿ ಕ್ರಮಬದ್ಧ ಅಧ್ಯಯನ ಸಾಧ್ಯ .

2 ) ಇಲ್ಲಿ ಪ್ರಯೋಗಗಳನ್ನು ನಡೆಸಬಹುದು .

3 ) ರಾಜಕೀಯ ಭವಿಷ್ಯ ನುಡಿಯಬಹುದು .

4 ) ವಸ್ತುನಿಷ್ಠೆ ಅಧ್ಯಯನ ಸಾಧ್ಯ . ಈ ಮೇಲಿನ 2 ಬಣಗಳ ಅಭಿಪ್ರಾಯವನ್ನು ನೋಡಿದಾಗ ರಾಜ್ಯಶಾಸ್ತ್ರ ಕಲೆಯೂ ಹೌದು ಮತ್ತು ವಿಜ್ಞಾನವು ಹೌದಾಗಿದೆ .

3 ) ರಾಜ್ಯಶಾಸ್ತ್ರದ ವ್ಯಾಪ್ತಿಯನ್ನು ವಿವರಿಸಿ .

ರಾಜ್ಯಶಾಸ್ತ್ರದ ವ್ಯಾಪ್ತಿ ಎಂದರೆ , ಅಧ್ಯಯನದ ಮಿತಿ / ಗಡಿ / ಎಲ್ಲೆ / ಮೇರೆ ಎಲ್ಲಿಯವರೆಗೆ ವಿಸ್ತ್ರತವಾಗಿದೆ ಎಂಬುದನ್ನು ತಿಳಿಯುವುದೇ ಆಗಿದೆ . ಅಂದರೆ ರಾಜ್ಯಶಾಸ್ತ್ರದಲ್ಲಿ ಯಾವ ಯಾವ ವಿಷಯ ವಸ್ತುಗಳನ್ನು ಅಧ್ಯಯನ ಮಾಡಲಾಗುತ್ತದೆ ಎನ್ನುವುದರ ಪರಿಶೀಲನೆಯಾಗಿದೆ . ರಾಜ್ಯಶಾಸ್ತ್ರದ ವಸ್ತುವಿಷಯದ ವ್ಯಾಪ್ತಿಯ ಬಗ್ಗೆ ರಾಜ್ಯಶಾಸ್ತ್ರಜ್ಞರಲ್ಲಿ ಏಕಾಭಿಪ್ರಾಯವಿಲ್ಲದೆ ಮೂರು ರೀತಿಯ ಅಭಿಪ್ರಾಯಗಳನ್ನು ಕಾಣುತ್ತೇವೆ .

1 ) ರಾಜ್ಯಶಾಸ್ತ್ರದ ಅಧ್ಯಯನದ ವ್ಯಾಪ್ತಿ ರಾಜ್ಯದ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿದೆ . ಎಂಬುದು ಗ್ಯಾರಿಸ್ , ಗುಡ್‌ನಮ್ ಮತ್ತು ಬಂಟಫಿ ಮುಂತಾದವರ ಅಭಿಪ್ರಾಯವಾಗಿದೆ . ರಾಜ್ಯಶಾಸ್ತ್ರವು ರಾಜ್ಯದ ಉಗಮ , ವಿಕಾಸ , ಅಭಿವೃದ್ಧಿ ಮೂಲಾಂಶಗಳು , ಅಧಿಕಾರ ಮತ್ತು ವಿಧಗಳನ್ನು ಅಧ್ಯಯನ ಮಾಡುತ್ತದೆ .

2 ) ರಾಜ್ಯಶಾಸ್ತ್ರದ ಅಧ್ಯಯನದ ವ್ಯಾಪ್ತಿ ಸರ್ಕಾರದ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ ಎಂಬುದು ಜಾನ್‌ಶೀಲೆ , ಸ್ಟೀಫನ್‌ ಲೀಕಾಕ್ , ಕಾರ್ಲ್‌ಮ್ಯಾಚ್ ಮತ್ತು ರಾಬ್ಬನ್ ಮುಂತಾದವರ ಅಭಿಪ್ರಾಯವಾಗಿದೆ . ಅಂದರೆ , ರಾಜ್ಯಶಾಸ್ತ್ರ ಸರ್ಕಾರದ ಉಗಮ , ವಿಕಾಸ ಬೆಳವಣಿಗೆ , ವಿವಿಧ ಅಂಗಗಳು , ಅವುಗಳ ಅಧಿಕಾರ ಮತ್ತು ಕಾವ್ಯಗಳನ್ನು ಅಧ್ಯಯನ ಮಾಡುತ್ತದೆ .

3 ) ರಾಜ್ಯಶಾಸ್ತ್ರದ ಅಧ್ಯಯನದ ವ್ಯಾಪ್ತಿ ರಾಜ್ಯ ಮತ್ತು ಸರ್ಕಾರಗಳೆರಡರ ಅಧ್ಯಯನಕ್ಕೆ ಸಂಬಂಧಿಸಿದೆ ಎಂಬುದು ಗೆಟಲ್ , ಗಿಲ್‌ಕ್ರಿಸ್ಟ್ , ಪಾಲ್‌ ಜನೆಟ್ ಮತ್ತು ಲಾರವರ ಅಭಿಪ್ರಾಯವಾಗಿದೆ . ಈ ಅಭಿಪ್ರಾಯ ವಾಸ್ತವವಾದುದಾಗದೆ . ರಾಜ್ಯಶಾಸ್ತರದ ಅಧ್ಯಯನ ರಾಜ್ಯದಿಂದ ಆರಂಭಗೊಂಡಿದ್ದರೂ ಸರ್ಕಾರವಿಲ್ಲದೆ ರಾಜ್ಯದ ಅಸ್ತಿತ್ವ ಅಸಾಧ್ಯ . ರಾಜ್ಯವು ಸರ್ಕಾರದ ಮೂಲಕ ತನ್ನ ಇಚ್ಛೆಯನ್ನು ವ್ಯಕ್ತಪಡಿಸುತ್ತೆ ಹಾಗೂ ತನ್ನ ಧೈಯಧೋರಣೆಗಳನ್ನು ಈಡೇರಿಸಿಕೊಳ್ಳುತ್ತದೆ . ಹಾಗೆಯೇ ಸರ್ಕಾರ ಅಸ್ತಿತ್ವದಲ್ಲಿರಬೇಕಾದರೆ ಪರಮಾಧಿಕಾರ ಹೊಂದಿರುವ ರಾಜ್ಯವಿರಬೇಕು . 1948 ರಲ್ಲಿ ಪ್ಯಾರಿಸ್‌ನಲ್ಲಿ ಯುನೆಸ್ಕೋ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮಾವೇಶವು ರಾಜ್ಯಶಾಸ್ತ್ರದ ವಸ್ತು ವಿಷಯದ ಅಧ್ಯಯನ ವ್ಯಾಪ್ತಿಯನ್ನು ಹೀಗೆ ಗುರ್ತಿಸಿದೆ .

1 . ರಾಜಕೀಯ ಸಿದ್ದಾಂತ

2. ರಾಜಕೀಯ ಸಂಸ್ಥೆಗಳು

3.ರಾಜಕೀಯ ಪಕ್ಷಗಳು .

4. ಅಂತರರಾಷ್ಟ್ರೀಯ ಸಂಬಂಧಗಳು

4 ) ರಾಜ್ಯಶಾಸ್ತ್ರವು ವಿಜ್ಞಾನವೇ ವಿವರಿಸಿ .

ಅರಿಸ್ಟಾಟಲ್ , ಬೋಡಿನ್ , ಹಾಬ್ , ಮೆಕೆವೆಲ್ಲಿ , ಮಾಂಟೆಸ್ಕೋ ಮತ್ತು ಬಂಟ್‌ ಫಿ ಮೊದಲಾದವರು ರಾಜ್ಯಶಾಸ್ತ್ರವನ್ನು ವಿಜ್ಞಾನವೆಂದು ಕರೆದಿದ್ದಾರೆ . ಅರಿಸ್ಟಾಟಲ್‌ರವರು ರಾಜ್ಯಶಾಸ್ತ್ರವನ್ನು ಶ್ರೇಷ್ಠವಿಜ್ಞಾನ’ವೆಂದು ಕರೆದಿದ್ದಾರೆ . ಇವರು ವಿಜ್ಞಾನವೆಂದು ಕರೆಯಲು ಕೆಳಗಿನ ಕಾರಣ ನೀಡಿದ್ದಾರೆ .

1. ಕ್ರಮಬದ್ಧ ಅಧ್ಯಯನ ಸಾಧ್ಯ ? ರಾಜ್ಯಶಾಸ್ತ್ರದ ಅಧ್ಯಯನದಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತದೆ . ಅವಲೋಕನ , ಮಾಹಿತಿ ಸಂಗ್ರಹಣೆ , ಮಾಹಿತಿ ವಿಂಗಡಣೆ , ಪ್ರಾಯೋಗಿಕತೆ ಮತ್ತು ಸಂಶೋಧನೆಯ ಮೂಲಕ ಸತ್ಯಾನ್ವೇಷಣೆ ಹಾಗಾಗಿ ಇಲ್ಲಿಯೂ ಕ್ರಮಬದ್ಧ ಮತ್ತು ವಸ್ತುನಿಷ್ಠ ಅಧ್ಯಯನ ಸಾಧ್ಯ .

2. ಪ್ರಯೋಗಗಳನ್ನು ನಡೆಸಬಹುದು : ರಾಜ್ಯಶಾಸ್ತ್ರದಲ್ಲಿ ರಾಜನೀತಿಜ್ಞನಿಗೆ ಇಡೀ ವಿಶ್ವವೇ ಪ್ರಯೋಗಶಾಲೆ ಇದ್ದಂತೆ ಇಲ್ಲಿ ರಾಜಕೀಯ ಪ್ರಯೋಗಗಳು ಸದಾ ನಡೆಯುತ್ತಿರುತ್ತವೆ . ಇತಿಹಾಸ ಈ ಪ್ರಯೋಗಗಳಿಗೆ ಸಾಮಗ್ರಿಗಳನ್ನು ಒದಗಿಸುತ್ತದೆ . ಹೊಸ ಸಂವಿಧಾನ , ಹೊಸ ಸರ್ಕಾರ ಮತ್ತು ಹೊಸ ಕಾನೂನುಗಳು ಹೊಸ ಹೊಸ ಪ್ರಯೋಗಗಳಾಗಿವೆ .

3. ರಾಜಕೀಯ ಭವಿಷ್ಯ ನುಡಿಯಬಹುದು : ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುವ ಮೂಲಕ ಯಾವ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಬಹುದು , ಎಲ್ಲಿ ಸಾಮಾಜಿಕ ಅಸಮಾನತೆ , ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳು ತಾಂಡವಾಡುತ್ತವೆಯೋ ಅಲ್ಲಿ ಕ್ರಾಂತಿ ಸಂಭವಿಸುತ್ತದೆ ಎಂದು ಭವಿಷ್ಯ ನುಡಿಯಬಹುದು .

4. ರಾಜಕೀಯ ಪ್ರಕ್ರಿಯೆಗಳನ್ನು ಅಳತೆ ಮಾಡಲು ಸಾಧ್ಯ : ಸರ್ಕಾರದ ಧೋರಣೆ , ಆಡಳಿತ ನಿರ್ವಹಣೆ , ಅದರ ಕಾರಕ್ರಮಗಳ ಅನುಷ್ಠಾನ ಮುಂತಾದವುಗಳ ಬಗ್ಗೆ ವ್ಯಕ್ತವಾಗುವ ಸಾರ್ವಜನಿಕಾಭಿಪ್ರಾಯಗಳ ಮೂಲಕ ರಾಜಕೀಯ ಪ್ರಕ್ರಿಯೆಗಳನ್ನು ಅಳತೆ ಮಾಡಬಹುದು . ಈ ಮೇಲಿನ ಅಂಶಗಳ ಆಧಾರದ ಮೇಲೆ ರಾಜ್ಯಶಾಸ್ತ್ರವನ್ನು ವಿಜ್ಞಾನವೆನ್ನಬಹುದು . ಆದರೆ ಭೌತವಿಜ್ಞಾನಗಳಂತೆ ನಿರ್ದಿಷ್ಟ ವಿಜ್ಞಾನವಾಗಿರದೆ ಅನಿರ್ದಿಷ್ಟ ವಿಜ್ಞಾನವಾಗಿದೆ .

5 ) ರಾಜ್ಯಶಾಸ್ತ್ರವು ಕಲೆಯೇ ? ವಿವರಿಸಿ .

ಜೆ.ಎಸ್.ಮಿಲ್ , ಬಕಲ್ , ಆಗಸ್ಟ್ಕೋಮ್ಸ್ , ಮೈಟ್‌ಲ್ಯಾಂಡ್ , ಜೇಮ್ಸ್‌ಪ್ರೆಸ್ ಮೂಲಕ ಇದನ್ನು ಕಲೆ ಎಂದಿದ್ದಾರೆ . ಬಕಲ್‌ರವರು ರಾಜ್ಯಶಾಸ್ತ್ರವನ್ನು ಕಲೆ ಎಂದು ಮೊದಲಾದವರು ರಾಜ್ಯಶಾಸ್ತ್ರವನ್ನು ವಿಜ್ಞಾನವೆಂದು ಕರೆಯಲು ನಿರಾಕರಿಸುವುದರ ಪರಿಗಣಿಸುವುದಷ್ಟೇ ಅಲ್ಲದೆ ಅದನ್ನು ಅತ್ಯಂತ ಹಿಂದುಳಿದ ಕಲೆಗಳಲ್ಲೊಂದು ಎಂದಿದ್ದಾರೆ . ಈ ಸಮರ್ಥನೆಗೆ ಕೆಳಗಿನ ಕಾರಣಗಳನ್ನು ನೀಡಿದ್ದಾರೆ .

1 . ಮೂಲಭೂತ ಪಶಿಲ್ಪನೆಗಳಲ್ಲಿ ಏಕಾಭಿಪ್ರಾಯವಿಲ್ಲ : ರಾಜ್ಯಶಾಸ್ತ್ರದ ರಾಜ್ಯಶಾಸ್ತ್ರದ ವಸ್ತು ವಿಷಯ , ಸ್ವರೂಪ , ವ್ಯಾಪ್ತಿ , ವ್ಯಾಖ್ಯಾನ ಅಧ್ಯಯನ ವಿಧಾನ ಮೊದಲಾದವುಗಳಲ್ಲಿ ರಾಜ್ಯಶಾಸ್ತ್ರದಲ್ಲಿ ಏಕಾಭಿಪ್ರಾಯವಿಲ್ಲ .

2. ರಾಜ್ಯಶಾಸ್ತ್ರದ ಥಿಯಮ / ಸಿದ್ಧಾಂತಗಳು ಸಾರ್ವತ್ರಿಕವಾದವುಗಳಲ್ಲ : ರಾಜಕೀಯ ಪರಿಕಲ್ಪನೆಗಳಾದ ಪ್ರಜಾಪ್ರಭುತ್ವ , ನಿರಂಕುಶತ್ವ , ಸಮತಾವಾದ , ಉದಾರತಾವಾದ , ಸಾಮ್ರಾಜ್ಯಶಾಹಿ ನೀತಿ ಮತ್ತು ರಾಷ್ಟ್ರೀಯತೆ ಮುಂತಾದವುಗಳ ಬಗ್ಗೆ ಭೌತವಿಜ್ಞಾನಗಳಂತೆ ಸಾರ್ವತ್ರಿಕತೆ ಇಲ್ಲ .

3 ಪ್ರಯೋಗಗಳನ್ನು ನಡೆಸಲು ಸಾಧ್ಯವಿಲ್ಲ : ರಾಜ್ಯಶಾಸ್ತ್ರದ ನಿಯಮಗಳ ಮತ್ತು ಸಂಶೋಧನೆಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಪ್ರಯೋಗಗಳನ್ನು ನಡೆಸುವುದು ಅಸಾಧ್ಯ .

4. ಖಚಿತವಾದ ಭವಿಷ್ಯ ನುಡಿಯಲು ಸಾಧ್ಯವಿಲ್ಲ : ನೈಸರ್ಗಿಕ ವಿಜ್ಞಾನಗಳಲ್ಲಿ ಭವಿಷ್ಯದಲ್ಲಿ ಸಂಭವಿಸುವ ವಿದ್ಯಮಾನಗಳನ್ನು ಖಚಿತವಾಗಿ ನುಡಿದಂತೆ ರಾಜ್ಯಶಾಸ್ತ್ರದಲ್ಲಿ ಭವಿಷ್ಯದಲ್ಲಿ ಸಂಭವಿಸುವ ವಿದ್ಯಮಾನಗಳನ್ನು ಖಚಿತವಾಗಿ ನುಡಿಯಲು ಸಾಧ್ಯವಿಲ್ಲ . ಕಾರಣ ರಾಜ್ಯಶಾಸ್ತ್ರದ ಅಧ್ಯಯನ ವಸ್ತುವಾಗಿರುವ ಮನುಷ್ಯ ಆಗಾಗ ಅನೇಕ ರಾಗದ್ವೇಷಗಳಿಗೆ ಒಳಗಾಗಿ ವರ್ತಿಸುವುದೇ ಆಗಿದೆ .

5. ರಾಜಕೀಯ ಪ್ರಕ್ರಿಯೆಗಳನ್ನು ಅಳತೆ ಮಾಡಲು ಸಾಧನಗಳಲ್ಲ : ಭೌತ ಮತ್ತು ನೈಸರ್ಗಿಕ ವಿಜ್ಞಾನಗಳ ಅಧ್ಯಯನದಲ್ಲಿ ಭೌತತುಲಾಯಂತ್ರ ಸ್ಟೆತಾಸ್ಕೋಪ್ , ಥರ್ಮಾಮೀಟರ್ , ರಿಕ್ಟರ್‌ಸೈಲ್ ಮುಂತಾದ ಉಪಕರಣಗಳಿದ್ದಂತೆ ರಾಜ್ಯಶಾಸ್ತ್ರದಲ್ಲಿ ರಾಜಕೀಯ ಪ್ರಕ್ರಿಯೆಗಳನ್ನು ಅಳೆಯಲು ಮಾಪನಗಳಿಲ್ಲ .

IV . ಹತ್ತು ಅಂಕದ ಪ್ರಶ್ನೆಗಳು :

1 ) ರಾಜ್ಯಶಾಸ್ತ್ರ ಎಂದರೇನು ? ಸಮಕಾಲೀನ ಪ್ರಪಂಚದಲ್ಲಿ ರಾಜ್ಯಶಾಸ್ತ್ರದ ಅಧ್ಯಯನದ ಪ್ರಾಮುಖ್ಯತೆಯನ್ನು ವಿವರಿಸಿ .

ಸಾಮಾಜಿಕ ಶಾಸ್ತ್ರಗಳೊಲ್ಲಾಂದಾಗಿದ್ದು , ಮಾನವನ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ ಪ್ರತಿಯೊಂದು ವಿಜ್ಞಾನವು ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ಉಪಯುಕ್ತವಾಗಿದೆ . ಆದರೆ ಅದರ ಪ್ರಯೋಜನ ಪಡೆದುಕೊಳ್ಳುವುದು ಅಥವಾ ಬಿಡುವುದು ಜನರಿಗೆ ಸೇರಿದ್ದು . ಆಧುನಿಕ ಪ್ರಜಾಪ್ರಭುತ್ವ ಯುಗದಲ್ಲಿ ಇದರ ಅಧ್ಯಯನವು ಮಹತ್ವಪೂರ್ಣವಾದದು . ಜಾರ್ಜ್‌ಬರ್ನಾಡ್‌ಷಾ ಅಭಿಪ್ರಾಯಪಟ್ಟಿರುವಂತೆ , ‘ ರಾಜ್ಯಶಾಸ್ತ್ರವೊಂದರಿಂದಲೇ ನಾಗರೀಕತೆಯನ್ನು ರಕ್ಷಿಸಲು ಸಾಧ್ಯ ‘ . ಇದರ ಅಧ್ಯಯನ ಪ್ರಾಮುಖ್ಯತೆ ಕೆಳಕಂಡಂತಿದೆ .

1. ರಾಜಕೀಯ ಪ್ರಜ್ಞೆಯನ್ನು ಮೂಡಿಸುತ್ತದೆ : ಆಧುನಿಕ ಯುಗ ಪ್ರಜಾಪ್ರಭುತ್ವ ಯುಗವಾದದ್ದು , ಇಲ್ಲಿ ಆಳುವವರು ಮತ್ತು ಆಳಿಸಿಕೊಳ್ಳುವವರು ಪ್ರಜೆಗಳೇ ಆಗಿದ್ದುದರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ , ಇಂತಹ ಪ್ರಜೆಗಳಿಗೆ ರಾಜಕೀಯ ಜ್ಞಾನವಿರುವುದು ಅತ್ಯಗತ್ಯ ಈ ಜ್ಞಾನವನ್ನು ರಾಜ್ಯಶಾಸ್ತ್ರದ ಅಧ್ಯಯನದಿಂದ ಮಾತ್ರ ಸಾಧ್ಯ .

2. ರಾಜ್ಯ ಮತ್ತು ಶರ್ಕಾರಗಳ ಬಗ್ಗೆ ಜ್ಞಾನ ಹೊಂದಲು : ರಾಜ್ಯಶಾಸ್ತ್ರದ ಅಧ್ಯಯನದ ವಿಷಯ ವಸ್ತುಗಳಾದ ರಾಜ್ಯ ಮತ್ತು ಸರ್ಕಾರಗಳ ಬಗ್ಗೆ ತಿಳಿಯಬೇಕಾದರೆ ರಾಜ್ಯಶಾಸ್ತ್ರದ ಅಧ್ಯಯನ ಅಗತ್ಯ . ಅಂದರೆ ರಾಜ್ಯದ ಅರ್ಥ , ಉಗಮ , ವಿಕಾಸ , ಗುರಿ ಮತ್ತು ಧೈಯೋದ್ದೇಶಗಳು ಮತ್ತು ಮೂಲಾಂಶಗಳು ಹಾಗೆಯೇ ಸರ್ಕಾರದ ಅರ್ಥ , ರಚನೆ , ಅಂಗಗಳು , ಕಾರ ವ್ಯಾಪ್ತಿ ವಿಧಗಳು ಇನ್ನು ಮೊದಲಾದವುಗಳ ಬಗ್ಗೆ ಅರಿವು ಮೂಡಲು ರಾಜ್ಯಶಾಸ್ತ್ರದ ಅಧ್ಯಯನ ಅಗತ್ಯ .

3 ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು : ಪ್ರಜೆಗಳಿಗೆ ಸಂವಿಧಾನದತ್ತವಾಗಿ ಬಂದ ಹಕ್ಕು ಮತ್ತು ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಲು ರಾಜ್ಯಶಾಸ್ತ್ರದ ಅಧ್ಯಯನ ಅಗತ್ಯ . ಹಕ್ಕುಗಳು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆ ಅತ್ಯಗತ್ಯವಾದದ್ದು . ಇಂಥಹ ಹಕ್ಕುಗಳನ್ನು ಪಡೆಯಲು ಅಧೇ ಸಮಯದಲ್ಲಿ ವ್ಯಕ್ತಿಗಳು ಅದಕ್ಕೆ ಪ್ರತಿಯಾಗಿ ಕೆಲವೊಂದು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ . ಈ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಈ ಎಲ್ಲಾ ವಿಚಾರಗಳನ್ನು ಅರಿಯಲು ರಾಜ್ಯಶಾಸ್ತ್ರದ ಅಧ್ಯಯನ ಅಗತ್ಯ .

4. ರಾಜಕೀಯ ಸಿದ್ಧಾಂತಗಳ ಬಗ್ಗೆ ಅರಿವು: ಸಮಾಜವಾದ , ವ್ಯಕ್ತವಾಗಿ , ಮಾರ್ಕ್ಸ್‌ವಾದ , ನಾಝಿವಾದ , ಫ್ಯಾಜಿವಾದ ಮುಂತಾದ ಸಿದ್ಧಾಂತಗಳ ಹುಟ್ಟು ಬೆಳವಣಿಗೆ ಮನುಕುಲಕ್ಕೆ ಈ ಸಿದ್ಧಾಂತಗಳ ಸಮಾಜದ ಮೇಲೆ ಈ ಸಿದ್ಧಾಂತಗಳ ಪರಿಣಾಮ ಹಾಗು ಉಪಯುಕ್ತತೆ ಮುಂತಾದವುಗಳ ಬಗ್ಗೆ ರಾಜ್ಯಶಾಸ್ತ್ರದ ಅಧ್ಯಯನದಿಂದ ಅರಿಯುತ್ತೇವೆ .

5. ರಾಜಕೀಯ ನಾಯಕರಿಗೆ ತರಬೇತಿ ನೀಡುತ್ತದೆ : ಆಧುನಿಕ ಪ್ರಜಾಪ್ರಭುತವವು ಪ್ರತಿನಿಧಿಪ್ರಜಾಪ್ರಭುತ್ವವಾಗಿದ್ದು ಇಲ್ಲಿ ಪ್ರಶ್ನೆಗಳ ಪರವ ಪ್ರತಿನಿಧಿಗಳು ಆಳ್ವಿಕೆ ನಡೆಸುತ್ತಾರೆ . ಹಾಗಾಗಿ ಇಂಥಹ ಪ್ರತಿನಿಧಿಗಳು ಶಾಸನಗಳನ್ನು ರೂಪಿಸುವುದು , ಮಸೂದೆಗಳ ಬಗ್ಗೆ ಚರ್ಚಿಸುವುದು , ಸರ್ಕಾರದ ಯೋಜನೆಗಳನ್ನು ಮತ್ತು ಕಾಠ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಮುಂತಾದ ಜವಾಬ್ದಾರಿಗಳ ಬಗ್ಗೆ ರಾಜ್ಯಶಾಸ್ತ್ರದ ಅಧ್ಯಯನದಿಂದ ಮಾಹಿತಿ ಸಾಧ್ಯವಿದೆ.

6. ಸರ್ಕಾರದ ಅಧಿಕಾರದ ದುರುಪಯೋಗವನ್ನು ನಿಯಂತ್ರಿಸುತ್ತದೆ : ಮನುಷ್ಯರಂತೆ ಸರ್ಕಾರವು ಕೂಡ ತಪ್ಪು ಮಾಡುವುದು ಸಹಜ . ಇಂತಹ ತಪ್ಪುಗಳನ್ನು ಸರಿಯಾದ ಸಂದರ್ಭದಲ್ಲಿ ಗುರ್ತಿಸಿ ಬೆಳಕಿಗೆ ತಂದು ಮತ್ತೊಮ್ಮೆ ಸರ್ಕಾರ ತನ ಮಾಡದಂತೆ ಸದಾಜಾಗೃತ ಮನೋಭಾವನೆಯಿಂದ ಪ್ರಜೆಗಳು ಇರಬೇಕಾದರೆ ಪ್ರಜೆಗಳಿಗೆ ರಾಜಕೀಯ ಪರಿಜ್ಞಾನ ಅತ್ಯಗತ್ಯ .

7. ಸಂವಿಧಾನದ ಬಗ್ಗೆ ಅರಿವು : ರಾಷ್ಟ್ರದ ಮೂಲಭೂತ ಶಾಸನವೇ ಸಂವಿಧಾನವಾಗಿದ್ದು ಇದು ಒಂದು ರಾಷ್ಟ್ರದಲ್ಲಿನ ಸರ್ಕಾರದ ಅಂಗರಚನೆ ಅದರ ಅಧಿಕಾರಿಗಳು ಮತ್ತು ಕರ್ತವ್ಯಗಳು ಸಂವಿಧಾನದ ಗುರಿಗಳು ಹಾಗೂ ಅದರ ಮುಂದಿರುವ ಸವಾಲುಗಳು , ಪ್ರಜೆಗಳ ಆಶೋತ್ತರಗಳನ್ನು ಈಡೇರಿಸುವಲ್ಲಿ ನಿರ್ವಹಿಸುವ ಪಾತ್ರ ಇವೆಲ್ಲವುಗಳನ್ನು ಜವಾಬ್ದಾರಿಯುತ ಪ್ರಜೆಗಳು ಅರಿಯಲೇಬೇಕು . ಇಂಥಹ ಮಾಹಿತಿ ರಾಜ್ಯಶಾಸ್ತ್ರದ ಅಧ್ಯಯನದಿಂದ ಸಾಧ್ಯ .

8. ಶುಸಂಸ್ಕೃತ ಪ್ರಜೆಗಳನ್ನು ರೂಪಿಸುತ್ತವೆ : ಪ್ರಜೆಗಳು ನೀತಿವಂತರಾಗಿ ರೂಪಗೊಂಡು ರಾಜ್ಯಶಾಸ್ತ್ರದ ಅಧ್ಯಯನ ಅಗತ್ಯ . ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು

9. ಅಂತರರಾಷ್ಟ್ರೀಯ ಸಂಘಟನೆಗಳ ಬಗ್ಗೆ ಅರಿವು : ರೂಪಿಸುವ ಜಾಗತಿಕ ಮಟ್ಟದಲ್ಲಿ ರಾಷ್ಟ್ರ – ರಾಷ್ಟ್ರಗಳ ನಡುವೆ ಉದ್ಭವಿಸುವ ಭಿನ್ನಾಭಿಪ್ರಾಯಗಳನ್ನು ರಾಷ್ಟ್ರ – ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವನ್ನು ಸಾರ್ಕ್ , ಸೀಟೋ , ಸೆಂಟೋ , ವಾರ್ಸಾ ಮೊದಲಾದವುಗಳ ರಚನೆ , ಕಾರವಾಪ್ತಿ ಮತ್ತು ಉದ್ದೇಶಗಳನ್ನು ಅರಿಯಲು ರಾಜ್ಯಶಾಸ್ತ್ರದ ಅಧ್ಯಯನ ಅಗತ್ಯ

10. ಅಂತರರಾಷ್ಟ್ರೀಯ ಶಂಬಂಧಗಳ ಬಗ್ಗೆ ಅರಿವು : ವಿಶ್ವದಲ್ಲಿನ ವಿವಿಧ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು ಯುದ್ಧಕ್ಕೆ ನಾಂದಿಯಾಗುತ್ತವೆ . ಆದ್ದರಿಂದ ಯುದ್ಧದ ಅರ್ಥ , ಕಾರಣ ಮತ್ತು ತಡೆಗಟ್ಟುವ ಕ್ರಮಗಳನ್ನು ಅರಿಯುವುದರ ಮೂಲಕ ಅಂತರ ರಾಷ್ಟ್ರೀಯ ಸಂಬಂಧಗಳ ಮಹತ್ವವನ್ನು ಅರಿಯಬೇಕಾದರೆ ರಾಜ್ಯಶಾಸ್ತ್ರದ ಅಧ್ಯಯನ ಅಗತ್ಯ . ಆಡಳಿತ ಸೇವಾ ವರ್ಗಕ್ಕೆ ಮಾರ್ಗದರ್ಶಿ ಸರ್ಕಾರದ 4 ನೇ ಅಂಗವೆನಿಸಿಕೊಂಡಿರುವ ಆಡಳಿತ ಸೇವಾ ವರ್ಗವು ರಾಜ್ಯಶಾಸ್ತ್ರದ ಅಧ್ಯಯನದ ಮೂಲಕ ಸಂಘಟನೆ , ಸಮನ್ವಯತೆ ಮುಂತಾದ ಆಡಳಿತಕ್ಕೆ ವಿಷಯಗಳ ಬಗ್ಗೆ ಅರಿಯಲು ಸಾಧ್ಯ .

11. ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯ : ರಾಜ್ಯಶಾಸ್ತ್ರದ ಅಧ್ಯಯನದಿಂದ ಪ್ರಜೆಗಳು ಹೆಚ್ಚು ಪ್ರಬುದ್ಧರಾಗಿ , ಜಾಗರೂಕರಾಗಿ , ಸಹಕಾರ , ಸಮನ್ವಯತೆ ಮನೋಭಾವದಿಂದ ತಾಳ್ಮೆ ಸಹನಶೀಲತೆಯಿಂದ ಹಾಗೂ ಪ್ರಜಾಸತ್ತಾತ್ಮಕ ಸಿದ್ಧಾಂತಗಳ ಪರಿಜ್ಞಾನದಿಂದ

12. ಉತ್ತಮ ಸಮಾಜದ ನಿರ್ಮಾಣ ಸಾಧ್ಯ: ಇಂದಿನ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ರಾಜ್ಯಶಾಸ್ತ್ರದ ಮಹತ್ವ ಮತ್ತಷ್ಟು ಹೆಚ್ಚಿದೆ . ಈ ಎಲ್ಲಾ ಕಾರಣದಿಂದಲೇ ಅರಿಸ್ಟಾಟಲ್‌ರವರು ರಾಜ್ಯಶಾಸ್ತ್ರವನ್ನು “ Master Science ” ಎಂದು ಕರೆದಿದ್ದಾರೆ .

ಹೆಚ್ಚುವರಿ ಪ್ರಶ್ನೋತ್ತರಗಳು:

I. ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1 ) ಪ್ರತ್ಯಕ್ಷ ಪ್ರಜಾಪ್ರಭುತ್ವ ಗ್ರೀಕ್‌ನ ಯಾವ ‘ ನಗರ – ರಾಜ್ಯ’ದಲ್ಲಿ ಅಸ್ತಿತ್ವದಲ್ಲಿತ್ತು ?

‘ ಸ್ಪಾರ್ಟಾ’ದಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿತ್ತು .

2 ) ಪರೋಕ್ಷ ಪ್ರಜಾಪ್ರಭುತ್ವ ಗ್ರೀಕ್‌ನ ಯಾವ ‘ ನಗರ – ರಾಜ್ಯ ‘ ದಲ್ಲಿ ಅಸ್ತಿತ್ವದಲ್ಲಿತ್ತು ?

‘ ಅಥೆನ್ಸ್’ನಲ್ಲಿ ಪರೋಕ್ಷ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿತ್ತು .

3 ) ‘ ಸಮಾಜದಲ್ಲಿ ಬದುಕಲಾರದವನು ದೇವತೆ ಅಥವಾ ಪ್ರಾಣಿಗಳಾಗಿರಬೇಕು ‘ ಹೀಗೆಂದು ಹೇಳಿದವರು ಯಾರು ?

‘ ರಾಜ್ಯಶಾಸ್ತ್ರದ ಆದಿಗುರು ‘ ಅರಿಸ್ಟಾಟಲ್‌ರವರು ಹೇಳಿದ್ದಾರೆ .

4 ) ‘ ದಿ ರಿಪಬ್ಲಿಕ್ ‘ ಗ್ರಂಥದ ಕರ್ತೃ ಯಾರು ?

ಅರಿಸ್ಟಾಟಲ್‌ರವರ ಗುರು ಪ್ಲೇಟೋ ಈ ಗ್ರಂಥದ ಕರ್ತೃ .

5 ) ‘ ಮಾನವ ಸಂಘಜೀವಿ’- ಹೀಗೆಂದು ಹೇಳಿದವರು ಯಾರು ?

‘ ರಾಜ್ಯಶಾಸ್ತ್ರದ ಆದಿಗುರು ‘ ಅರಿಸ್ಟಾಟಲ್ ಹೇಳಿದ್ದಾರೆ .

6 ) “ ರಾಜ್ಯಶಾಸ್ತ್ರದ ಅಧ್ಯಯನ ಅರಿಸ್ಟಾಟಲ್‌ನಿಂದ ಆರಂಭವಾಗುತ್ತದೆ ಹೀಗೆಂದು ಹೇಳಿದವರು ಯಾರು ?

ಫ್ರೆಡರಿಕ್ ಪೊಲ್ಲಾಕ್ ಹೇಳಿದ್ದಾರೆ .

7 ) ‘ ರಾಜ್ಯಶಾಸ್ತ್ರ ‘ ಎಂಬ ಪದವನ್ನು ಸೂಚಿಸಿದವರು ಯಾರು ?

ಗೌಡ್ರಿನ್ ಮತ್ತು ಮೆರಿವಾಲ್ ಸ್ಟೋನ್ ಕ್ರಾಪ್‌ರವರು ರಾಜ್ಯಶಾಸ್ತ್ರ ಎಂಬ ಪದವನ್ನು ಸೂಚಿಸಿದರು .

8 ) 1948 ರಲ್ಲಿ ರಾಜ್ಯಶಾಸ್ತ್ರ ಸಮ್ಮೇಳನ ಎಲ್ಲಿ ನಡೆಯಿತು ?

ಪ್ಯಾರಿಸ್‌ನ ಯುನೆಸ್ಕೋ ಭವನದಲ್ಲಿ ನಡೆಯಿತು .

9 ) 1965 ರಲ್ಲಿ ರಾಜ್ಯಶಾಸ್ತ್ರ ಸಮ್ಮೇಳನ ಎಲ್ಲಿ ನಡೆಯಿತು ?

ಫೆಲಿಡೆಲ್ಲಿಯದಲ್ಲಿ ನಡೆಯಿತು .

10 ) ರಾಜ್ಯಶಾಸ್ತ್ರವನ್ನು ಇತರೆ ಸಾಮಾಜಿಕ ಶಾಸ್ತ್ರಗಳಿಂದ ಬೇರ್ಪಡಿಸಿದವರು ಯಾರು ?

ರಾಜ್ಯಶಾಸ್ತ್ರವನ್ನು ಸಾಮಾಜಿಕ ಶಾಸ್ತ್ರಗಳಿಂದ ಬೇರ್ಪಡಿಸಿದವರು ಮ್ಯಾಕ್ಸವೆಬರ್

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ

1 ) ಗ್ರೀಕ್ ನಗರ ರಾಜ್ಯಗಳನ್ನು ಹೆಸರಿಸಿ .

ಸ್ಪಾರ್ಟಾ , ಅಥೆನ್ಸ್ , ಸ್ಟಾಗರಾ , ಮೆಸಿಡೋನಿಯ ಮತ್ತು ಮಿಲನಾನ್

2 ) ‘ ತತ್ವಜ್ಞಾನಿತ್ರಯರು ‘ ಎಂದು ಯಾರನ್ನು ಕರೆಯುತ್ತಾರೆ ?

ಸಾಕ್ರೆಟಿಸ್ , ಪ್ಲೇಟೋ ಮತ್ತು ಅರಿಸ್ಟಾಟಲ್‌ರವರನ್ನು ತತ್ವಜ್ಞಾನಿತ್ರಯರೆಂದು ಕರೆಯುತ್ತಾರೆ .

3 ) 20 ನೇ ಶತಮಾನಕ್ಕೂ ಮೊದಲು ರಾಜ್ಯಶಾಸ್ತ್ರವನ್ನು ಯಾವ ಯಾವ ಹೆಸರುಗಳಿಂದ ಕರೆಯಲಾಗುತ್ತಿತ್ತು ?

‘ ಪಾಲಿಟಿಕ್ಸ್ ‘ ( ಅರಿಸ್ಟಾಟಲ್ ) , ‘ ರಾಜ್ಯದ ಅಧ್ಯಯನ ಮಾಡುವ ವಿಜ್ಞಾನ ( ಗೆಟಲ್ ) ಮತ್ತು ‘ ರಾಜಕೀಯ ವಿಜ್ಞಾನ ( ಸರ್ ಫೆಡರಿಕ್ ಪೊಲಾಕ್ ) ಎಂದು ಕರೆಯಲಾಗುತ್ತಿತ್ತು .

4) ಅಂತರರಾಷ್ಟ್ರೀಯ ರಾಜ್ಯಶಾಸ್ತ್ರಜ್ಞರ ಸಮಾವೇಶ ಎಲ್ಲಿ ಮತ್ತು ಯಾವಾಗ ನಡೆಯಿತು ?

ಅಂತರರಾಷ್ಟ್ರೀಯ ರಾಜ್ಯಶಾಸ್ತ್ರಜ್ಞರ ಸಮ್ಮೇಳನ 1948 ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಿತು .

5 ) ಫಿಲಿಡೆಲ್ಸಿಯ ( 1965 ) ರಲ್ಲಿ ನಡೆದ ರಾಜ್ಯಶಾಸ್ತ್ರಜ್ಞರ ಸಮ್ಮೇಳನದಲ್ಲಿ ಭಾಗವಹಿಸಿದ್ದ ರಾಜ್ಯಶಾಸ್ತ್ರಜ್ಞನ್ನು ಹೆಸರಿಸಿ .

ಡೇವಿಡ್ ಈಸ್ಟನ್ , ಹ್ಯಾನ್ಸ್‌ಮಾರ್ಗೆಂಥೋ ನರ್ಮನ್.ಡಿ . ಪಾಮರ್ ಮತ್ತು ಹ್ಯಾರಿ ಎಕಸ್ಟೀನ್ .

6 ) ಪ್ರಾಚೀನ ಭಾರತದಲ್ಲಿ ರಾಜ್ಯಶಾಸ್ತ್ರವನ್ನು ಯಾವ ಯಾವ ಹೆಸರುಗಳಿಂದ ಕರೆಯಲಾಗುತ್ತಿತ್ತು ?

ಪ್ರಾಚೀನ ಭಾರತದಲ್ಲಿ ರಾಜ್ಯಶಾಸ್ತ್ರವನ್ನು ‘ ರಾಜಧರ್ಮ ‘ , ‘ ದಂಡನೀತಿ ‘ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು .

7 ) ರಾಜ್ಯಶಾಸ್ತ್ರವು ಕೇವಲ ರಾಜ್ಯದ ಅಧ್ಯಯನಕ್ಕೆ ಮಾತ್ರ ಸಂಬಂಧಿಸಿದೆ ಎಂದು ಹೇಳಿದವರಾರು ?

ಗ್ಯಾರಿಸ್ , ಗಾರ್ನರ್ , ಗುಡ್‌ನಮ್ ಮತ್ತು ಬಂಟಷ್ಠಿ ಮುಂತಾದವರು ರಾಜ್ಯಶಾಸ್ತ್ರ ಕೇವಲ ರಾಜ್ಯದ ಅಧ್ಯಯನ ಮಾತ್ರ ಎಂದಿದ್ದಾರೆ . ಇದು ರಾಜ್ಯದ ಉಗಮ ಬೆಳವಣಿಗೆ ಸ್ವರೂಪ ವಿಧಗಳು ಹಾಗೂ ಕಾವ್ಯಗಳನ್ನು ಮಾತ್ರ ಕುರಿತು ಅಧ್ಯಯನ ಮಾಡುತ್ತಾರೆ ಎಂದಿದ್ದಾರೆ .

8 ) ‘ ರಾಜ್ಯಶಾಸ್ತ್ರದ ವ್ಯಾಪ್ತಿಯು ಕೇವಲ ಸರ್ಕಾರದ ಅಧ್ಯಯನಕ್ಕೆ ಸಂಬಂಧಿಸಿದೆ ‘ ಎಂದು ಹೇಳಿದವರು ಯಾರು ?

ಜಾನ್‌ಶೀಲೆ , ಲೀಕಾಕ್‌ರವರು ರಾಜ್ಯಶಾಸ್ತ್ರವು ಕೇವಲ ಸರ್ಕಾರವನ್ನು ಕುರಿತದ್ದಾಗದೆ ಎಂದಿದ್ದಾರೆ . ಇದು ಕೇವಲ ಸರ್ಕಾರದ ರಚನೆ , ಅದರ ವಿವಿಧ ಅಂಗಗಳ ರಚನೆ ಹಾಗೂ ಕಾವ್ಯಗಳನ್ನು ಕುರಿತು ಮಾತ್ರ ಅಭ್ಯಸಿಸುತ್ತದೆ ಎಂದಿದ್ದಾರೆ .

9 ) ರಾಜ್ಯಶಾಸ್ತ್ರದ ವ್ಯಾಪ್ತಿಯು ರಾಜ್ಯ ಹಾಗೂ ಸರ್ಕಾರಗಳೆರಡರ ಅಧ್ಯಯನಕ್ಕೆ ಸಂಬಂಧಿಸದೆ ‘ ಎಂದು ಹೇಳಿದವರು ಯಾರು ?

ಗಿಲ್‌ಕ್ರಿಸ್ಟ್ , ಗೆಟಲ್ , ಪಾಲ್‌ಜನೆಟ್ , ಎಚ್.ಜೆ. ಲಾಸ್ತಿ ಮುಂತಾದವರು ರಾಜ್ಯಶಾಸ್ತ್ರವು ರಾಜ್ಯದಿಂದ ಪ್ರಾರಂಭಗೊಂಡರು . ಸರ್ಕಾರವಿಲ್ಲದೆ ರಾಜ್ಯ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ . ರಾಜ್ಯ ಮತ್ತು ಸರ್ಕಾರಗಳೆರಡರ ಅಧ್ಯಯನ ಎಂದಿದ್ದಾರೆ . ರಾಜ್ಯಶಾಸ್ತ್ರದ ಅಧ್ಯಯನ ರಾಜ್ಯವು ಸರ್ಕಾರದ ಮೂಲಕ ತನ್ನ ಇಚ್ಛೆಯನ್ನು ವ್ಯಕ್ತಪಡಿಸುತ್ತದೆ ಆದ್ದರಿಂದ ರಾಜ್ಯ ತನ್ನ ಉದ್ದೇಶ ಸಾಧನೆಗೆ ಹಾಗೂ ದೈನಂದಿನ ವ್ಯವಹಾರ ನಡೆಸಬೇಕಾದರೆ ಸರ್ಕಾರ ಎಂಬ ಯಂತ್ರ ಅನಿವಾರ ಎಂದಿದ್ದಾರೆ .

10 ) ರಾಜ್ಯಶಾಸ್ತ್ರದ ವ್ಯಾಪ್ತಿಯ ನಾಲ್ಕು ವಿಭಾಗಗಳನ್ನು ಹೆಸರಿಸಿ

1 . ರಾಜಕೀಯ ಸಿದ್ಧಾಂತ

2. ರಾಜಕೀಯ ಸಂಸ್ಥೆಗಳು

3. ರಾಜಕೀಯ ಪಕ್ಷಗಳು ರಾಷ್ಟ್ರೀಯ

4. ಅಂತರ ಸಂಬಂಧಗಳು

FAQ

1 ) ರಾಜ್ಯಶಾಸ್ತ್ರದ ಪಿತಾಮಹ ಯಾರು ?

ಅರಿಸ್ಟಾಟಲ್‌

2 ) ಅರಿಸ್ಟಾಟಲ್‌ರವರ ಪ್ರಸಿದ್ಧ ಗ್ರಂಥ ಯಾವುದು ?

ಅರಿಸ್ಟಾಟಲ್‌ರವರ ಪ್ರಸಿದ್ಧ ಗ್ರಂಥ – ‘ ಪಾಲಿಟಿಕ್ಸ್ ‘

ಇತರೆ ವಿಷಯಗಳು :

First PUC All Textbooks Pdf

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

All Notes App

3 thoughts on “ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ನೋಟ್ಸ್ | 1st Puc Rajyashastra Ondu Adhyayana Notes in Kannada

Leave a Reply

Your email address will not be published. Required fields are marked *