1st Puc Political Science Chapter 3 Notes | ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-3 ಮೂಲಭೂತ ರಾಜಕೀಯ ಪರಿಕಲ್ಪನೆಗಳು ನೋಟ್ಸ್‌

ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-3 ಮೂಲಭೂತ ರಾಜಕೀಯ ಪರಿಕಲ್ಪನೆಗಳು ನೋಟ್ಸ್‌, 1st Puc Political Science Chapter 3 Notes Question Answer in Kannada 2024 1st Puc Basic Political Concepts in Kannada Kseeb Slotion For Class Political science Chapter 3 Notes pdf ಮೂಲಭೂತ ರಾಜಕೀಯ ಪರಿಕಲ್ಪನೆಗಳು ನೋಟ್ಸ್ mulabhutha rajakiya parikalpane in kannada

 

1st Puc Political Science Chapter 3 Notes in kannada

1st Puc Political Science Chapter 3 Notes in kannada

1st Puc ರಾಜ್ಯಶಾಸ್ತ್ರ ಮೂಲಭೂತ ರಾಜಕೀಯ ಪರಿಕಲ್ಪನೆಗಳು ನೋಟ್ಸ್

I. ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1 ) ಪರಮಾಧಿಕಾರ ಎಂದರೇನು ?

ರಾಜ್ಯದ ಸರ್ವೋಚ್ಛ ಅಧಿಕಾರವೇ ಪರಮಾಧಿಕಾರ ,

2 ) ರಾಜ್ಯದ ಆತಿ ಮುಖ್ಯ ಮೂಲಾಂಶ ಯಾವುದು ?

ಪರಮಾಧಿಕಾರವು ರಾಜ್ಯದ ಆತಿ ಮುಖ್ಯ ಮೂಲಾಂಶವಾಗಿದೆ .

3 ) ಪರಮಾಧಿಕಾರದ ಮೂಲ ಪದ ಯಾವುದು ?

ಲ್ಯಾಟಿನ್ ಭಾಷೆಯ ‘ ಸೂಪರಾನಸ್ ‘ ಪರಮಾಧಿಕಾರದ ಮೂಲ ಪದವಾಗಿದೆ .

4 ) ಆಧುನಿಕ ಅರ್ಥದಲ್ಲಿ ಪರಮಾಧಿಕಾರದ ಪರಿಕಲ್ಪನೆಯನ್ನು ಯರು ಪ್ರತಿಪಾದಿಸಿದರು ?

ಜೀನ್‌ಬೋಡಿನ್‌ರವರು ಆಧುನಿಕ ಅರ್ಥದಲ್ಲಿ ಪರಮಾಧಿಕಾರದ ಪರಿಕಲ್ಪನೆಯನ್ನು ಪ್ರತಿಪಾದಿಸಿದರು .

5 ) ಜೀನ್‌ ಜೋಡಿನ್ ಬರೆದ ಪುಸ್ತಕವನ್ನು ಹೆಸರಿಸಿ .

‘ ಸಿಕ್ಸ್‌ ಬುಕ್ಸ್ ಆನ್ ದಿ ರಿಪಬ್ಲಿಕ್ ‘ ಅಥವಾ ‘ ಡಿ ರಿಪಬ್ಲಿಕ್ ‘ ಗ್ರಂಥ .

6 ) ಆಂತರಿಕ ಪರಮಾಧಿಕಾರದ ಪ್ರತಿಪಾದಕರು ಯಾರು ?

ಜೀನ್‌ಬೋಡಿನ್ ಆಂತರಿಕ ಪರಮಾಧಿಕಾರದ ಪ್ರತಿಪಾದಕರಾಗಿದ್ದಾರೆ .

7 ) ಬಾಹ್ಯ ಪರಿಮಾಧಿಕಾರದ ಪ್ರತಿಪಾದಕರು ಯಾರು ?

ಹ್ಯುನೋಗ್ರೋಷಿಯಸ್ ಬಾಹ್ಯ ಪರಮಾಧಿಕಾರದ ಪ್ರತಿಪಾದಕರಾಗಿದ್ದಾರೆ . ‌

8 ) ಕಾನೂನು ಎಂದರೇನು ?

ರಾಜ್ಯ ತನ್ನ ಪ್ರಜೆಗಳ ಸಾಧಾರಣ ವರ್ತನೆಯನ್ನು ನಿರ್ಧರಿಸಲು ಮತ್ತು ನಿಯಂತ್ರಿಸಲು ರೂಪಿಸುವ ನಿಯಮಗಳೇ ಕಾನೂನು .

9 ) ಕಾನೂನಿನ ಮೂಲಪದ ಯಾವುದು ?

ಓಲ್ಡ್ ಟ್ಯೂಟಾನಿಕ್‌ನ ‘ ಲ್ಯಾಗ್ ‘ ಎಂಬುದು ಕಾನೂನಿನ ಮೂಲ ಪದವಾಗಿದೆ .

10 ) ಕಾನೂನಿನ ಆಳ್ವಿಕೆ ಎಲ್ಲಿ ಅಸ್ತಿತ್ವದಲ್ಲಿತ್ತು ?

ಪ್ರಜಾಪ್ರಭುತ್ವ ಸರ್ಕಾರ ವ್ಯವಸ್ಥೆಯಲ್ಲಿ .

11 ) ಕಾನೂನುಗಳನ್ನು ಯಾರು ಹೇರುವರು ?

ಸರ್ಕಾರ ಕಾನೂನುಗಳನ್ನು ಪ್ರಜೆಗಳ ಮೇಲೆ ಹೇರುತ್ತದೆ .

12 ) ನೈತಿಕ ಕಾನೂನಿನ ಮೂಲಾಧಾರ ಯಾವುದು ?

ನೈತಿಕ ಕಾನೂನಿನ ಮೂಲಾಧಾರ ನೈತಿಕತೆ .

13 ) ಮುನಿಸಿಪಲ್ ಕಾನೂನಿನ ಮತ್ತೊಂದು ಹೆಸರೇನು ?

ಮುನಿಸಿಪಲ್ ಕಾನೂನಿನ ಮತ್ತೊಂದು ಹೆಸರು ರಾಷ್ಟ್ರೀಯ ಕಾನೂನು .

14 ) ಸುಗ್ರೀವಾಜ್ಞೆ ಎಂದರೇನು ?

ಕಾರಾಂಗದ ಆಜ್ಞೆ ಅಥವಾ ಆದೇಶಗಳೇ ಸುಗ್ರೀವಾಜ್ಞೆ

15 ) ಆಡಳಿತಾತ್ಮಕ ಕಾನೂನು ಎಂದರೇನು ?

ಒಂದು ರಾಷ್ಟ್ರದಲ್ಲಿ ರಾಜ್ಯ ಮತ್ತು ನಾಗರಿಕ ಸೇವಾ ವರ್ಗದ ನಡುವಿನ ಸಂಬಂಧವನ್ನು ನಿರ್ಧರಿಸುವ ನಿಯಮಗಳೇ ಆಡಳಿತಾತ್ಮಕ ಕಾನೂನು .

16 ) ಭಾರತದಲ್ಲಿ ಕಾನೂನುಗಳನ್ನು ಯಾರು ಮಾಡುತ್ತಾರೆ?

ಸರ್ಕಾರ ಕಾನೂನುಗಳನ್ನು ಮಾಡುತ್ತಾರೆ .

17 ) ಸ್ವಾತಂತ್ರ್ಯ ಎಂದರೇನು ?

ವ್ಯಕ್ತಿಯು ತನ್ನ ಇಚ್ಛೆಗನುಸಾರವಾಗಿ ಚಿಂತಿಸಲು ಕೆಲಸ ಮಾಡಲು ಮತ್ತು ಮಾತನಾಡಲು ಇರುವ ಅನಿರ್ಬಂಧಿತ ಅವಕಾಶವೇ ಸ್ವಾತಂತ್ರ್ಯ

18 ) ಸ್ವಾತಂತ್ರ್ಯದ ಎರಡು ಸ್ವರೂಪಗಳನ್ನು ಹೆಸರಿಸಿ .

ಸ್ವಾತಂತ್ರ್ಯದ ಎರಡು ಸ್ವರೂಪಗಳೆಂದರೆ , ನಕಾರಾತ್ಮಕ ಸ್ವರೂಪ ಸಕಾರಾತ್ಮಕ ಸ್ವರೂಪ

19 ) ಸ್ವಾತಂತ್ರ್ಯದ ಮೂಲ ಪದ ಯಾವುದು ?

ಸ್ವಾತಂತ್ರ್ಯದ ಮೂಲಪದ ಲ್ಯಾಟಿನ್ ಭಾಷೆಯ ‘ ಲಿಬರ್ ,

20 ) ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವ ಈ ಮೂರು ತತ್ವಗಳನ್ನು ಯಾವ ಕ್ರಾಂತಿಯು ಎತ್ತಿ ಹಿಡಿಯಿತು ?

ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವ ಈ ಮೂರು ತತ್ವಗಳನ್ನು 1789 ರ ಫ್ರಾನ್ಸ್ ಕ್ರಾಂತಿಯು ಎತ್ತಿ ಹಿಡಿಯಿತು.

21 ) ಸ್ವಾತಂತ್ರ್ಯದ ನಕಾರಾತ್ಮಕ ಸ್ವರೂಪ ಎಂದರೇನು ?

ನಿರ್ಬಂಧ ರಹಿತವಾದ ಸ್ವಾತಂತ್ರ್ಯವೇ ನಕಾರಾತ್ಮಕ ಸ್ವರೂಪವಾಗಿದೆ .

22 ) ಸ್ವಾತಂತ್ರ್ಯದ ಸಕಾರಾತ್ಮಕ ಸ್ವರೂಪ ಎಂದರೇನು ?

ರಾಜ್ಯ ಒದಗಿಸಿಕೊಟ್ಟಿರುವ ಸಮಾನ ಅವಕಾಶಗಳನ್ನು ಪಡೆದು ತನ್ನ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಮೂಲಕ ಇತರರು ಸಹಾ ಸಮಾನ ಅವಕಾಶಗಳನ್ನು ಅನುಭವಿಸುವುದಕ್ಕೆ ಅಡ್ಡಿಯನ್ನುಂಟು ಮಾಡದೆ ಪರಸ್ಪರ ಸಾಮಾಜಿಕ ಕಲ್ಯಾಣ ಸಾಧಿಸಲು ನೆರವಾಗುವುದೇ ಸ್ವಾತಂತ್ರ್ಯದ ಸಕಾರಾತ್ಮಕ ಸ್ವರೂಪ .

23 ) ಫ್ರಾನ್ಸಿನ ಕ್ರಾಂತಿಯು ಯಾವಾಗ ನಡೆಯಿತು ?

1789 ರಲ್ಲಿ ಫ್ರಾನ್ಸಿನ ಕ್ರಾಂತಿ ನಡೆಯಿತು .

24 ) ಅಮೇರಿಕದ ಸ್ವಾತಂತ್ರ್ಯ ಕ್ರಾಂತಿ ಯಾವ ವರ್ಷ ನಡೆಯಿತು ?

1776 ರಲ್ಲಿ ಸ್ವಾತಂತ್ರ್ಯ ಕ್ರಾಂತಿ ನಡೆಯಿತು .

25 ) ನೈಸರ್ಗಿಕ ಸ್ವಾತಂತ್ರ್ಯವನ್ನು ಯಾರು ಅನುಭವಿಸುತ್ತಿದ್ದರು ?

ನೈಸರ್ಗಿಕ ಸ್ವಾತಂತ್ರ್ಯವನ್ನು ಸಮಾಜದ ಅಸ್ತಿತ್ವದ ಪೂರ್ವದಲ್ಲಿ ಮಾನವ ಅನುಭವಿಸುತ್ತಿದ್ದ

26 ) ನೈಸರ್ಗಿಕ ಸ್ವಾತಂತ್ರ್ಯದ ಇತರ ಹೆಸರುಗಳಾವುವು ?

ನೈಸರ್ಗಿಕ ಸ್ವಾತಂತ್ರ್ಯದ ಇತರ ಹೆಸರುಗಳೆಂದರೆ , ಸ್ವಾಭಾವಿಕ ಸ್ವಾತಂತ್ರ್ಯ

27 ) ಸಮಾನತೆಯ ಅರ್ಥವೇನು ?

ಮಾನವ ನಿರ್ಮಿತ ಅಸಮಾನತೆಯನ್ನು ತೊಡೆದು ಹಾಕಿ ಪ್ರತಿಯೊಬ್ಬರು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವುದೇ ಸಮಾನತೆ .

28 ) ಆರ್ಥಿಕ ಹಕ್ಕು ಎಂದರೇನು ?

ಒಬ್ಬ ವ್ಯಕ್ತಿಗೆ ತನ್ನ ಜೀವನಾವರಕೆಗಳಾದ ಆಹಾರ , ಬಟ್ಟೆ & ವಸತಿ ಇವುಗಳನ್ನು ಪೂರೈಸುವ ಹಕ್ಕುಗಳೇ ಆರ್ಥಿಕ ಹಕ್ಕಿಗಳು .

1st Puc Political Science Chapter 3 Question Answer

II . ಎರಡು ಅಂಕದ ಪ್ರಶ್ನೆಗಳು :

1 ) ಪರಮಾಧಿಕಾರವನ್ನು ವ್ಯಾಖ್ಯಾನಿಸಿ .

ಹ್ಯುಗೋಗೋಷಿಯಸ್ ಪ್ರಕಾರ “ ಯಾರ ಆಜ್ಞೆಯನ್ನು ಇತರರು ತಿರಸ್ಕರಿಸಲು ಸಾಧ್ಯವಿಲ್ಲವೋ , ಹಾಗೆಯೇ ಯಾರ ಕಾರ್ಯಬದ್ಧತೆಯನ್ನು ಇತರರು ಪ್ರಶ್ನಿಸುವಂತಿಲ್ಲವೋ ಅಂತವರಲ್ಲಿ ಇರತಕ್ಕ ಸರ್ವೋಚ್ಛ ರಾಜಕೀಯ ಅಧಿಕಾರವೇ ಪರಮಾಧಿಕಾರ ” ,

2 ) ಪರಮಾಧಿಕಾರದ ಎರಡು ಸ್ವರೂಪಗಳಾವುವು ?

ಪರಮಾಧಿಕಾರದ ಎರಡು ಸ್ವರೂಪಗಳೆಂದರೆ –

1. ಆಂತರಿಕ ಸ್ವರೂಪ .

2. ಬಾಹ್ಯ ಸ್ವರೂಪ

3 ) ಕಾನೂನಿನ ವಿಧಗಳನ್ನು ಬರೆಯಿರಿ .

ಕಾನೂನಿನ ವಿಧಗಳೆಂದರೆ –

I.ರಾಷ್ಟ್ರೀಯ ಕಾನೂನು II .ಅಂತರಾಷ್ಟ್ರೀಯ ಕಾನೂನು

1 ಸಂವಿಧಾನಾತ್ಮಕ ಕಾನೂನು

2 ಸಾಧಾರಣ ಕಾನೂನು

  • ಖಾಸಗಿ ಕಾನೂನು
  • ಸಾರ್ವತ್ರಿಕ ಕಾನೂನು
  • ಆಡಳಿತಾತ್ಮಕ ಕಾನೂನು
  • ಸಾಮಾನ್ಯ ಕಾನೂನು

4 ) ಕಾನೂನನ್ನು ವ್ಯಾಖ್ಯಾನಿಸಿ .

ಜಾನ್ ಆಸ್ಟಿನ್ ಪ್ರಕಾರ ಕಾನೂನು ಎಂದರೆ “ ನಿರ್ದಿಷ್ಟ ಶ್ರೇಷ್ಟ ವ್ಯಕ್ತಿ ಕನಿಷ್ಟ ವ್ಯಕ್ತಿಗೆ ನೀಡುವ ಆಜ್ಞೆಯೇ ಕಾನೂನು.

5 ) ಸ್ವಾತಂತ್ರ್ಯದ ಅರ್ಥವನ್ನು ಬರೆಯಿರಿ .

ವ್ಯಕ್ತಿಯು ತನ್ನ ಇಚ್ಛೆಗನುಸಾರವಾಗಿ ಚಿಂತಿಸಲು , ಕೆಲಸ ಮಾಡಲು ಮತ್ತು ಮಾತನಾಡಲು ಇರುವ ಅನಿರ್ಬಂಧಿತ ಅವಕಾಶವೇ ಸ್ವಾತಂತ್ರ್ಯ

6 ) ಯಾವುದಾದರು ಎರಡು ಆರ್ಥಿಕ ಸ್ವಾತಂತ್ರ್ಯಗಳನ್ನು ತಿಳಿಸಿ .

ಆರ್ಥಿಕ ಸ್ವಾತಂತ್ರ್ಯಗಳೆಂದರೆ

1. ಉದ್ಯೋಗದ ಸ್ವಾತಂತ್ರ್ಯ

2 . ಆಸ್ತಿಯ ಸ್ವಾತಂತ್ರ್ಯ ಇತ್ಯಾದಿ .

7 ) ಯಾವುದಾದರೂ ಎರಡು ರಾಜಕೀಯ ಹಕ್ಕುಗಳನ್ನು ತಿಳಿಸಿ ,

ರಾಜಕೀಯ ಹಕ್ಕುಗಳೆಂದರೆ

1. ಮತದಾನದ ಹಕ್ಕು

2. ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇತ್ಯಾದಿ .

8) ಹಕ್ಕು ಎಂದರೇನು ?

ರಾಜ್ಯವು ಮನ್ನಿಸಿದ ಮತ್ತು ವ್ಯಕ್ತಿಗಳು ಅನುಭವಿಸುವ ಅಧಿಕಾರವೇ ಹಕ್ಕುಗಳು . ಸಮಾಜದ ಸದಸ್ಯರು ಪರಿಪೂರ್ಣ ಜೀವನ ನಡೆಸಲು ಮತ್ತು ಸರ್ವತೋಮುಖ ಅಭಿವೃದ್ಧಿಗೆ ಹಕ್ಕುಗಳು ಅವಶ್ಯಕ .

9 ) ರಾಷ್ಟ್ರೀಯ ಕಾನೂನು ಎಂದರೇನು ?

ಪ್ರಜೆಗಳ ವರ್ತನೆಯನ್ನು ನಿಯಂತ್ರಿಸಲು ರಾಜ್ಯ ರೂಪಿಸುವ ಕಾನೂನುಗಳೇ ರಾಷ್ಟ್ರೀಯ ಕಾನೂನು . ಈ ಕಾನೂನುಗಳನ್ನು ಶಾಸಕಾಂಗ ರೂಪಿಸುತ್ತದೆ .

10 ) ಸುಗ್ರೀವಾಜ್ಞೆಯ ಅರ್ಥವನ್ನು ಬರೆಯಿರಿ .

ಕಾರ್ಯಾಂಗ ಹೊರಡಿಸುವ ವಿಶೇಷ ಆದೇಶ / ಆಜ್ಞೆ ಇದಾಗದೆ , ಶಾಸಕಾಂಗವು ಅಧಿವೇಶನದಲ್ಲಿ ಇಲ್ಲದಿದ್ದಾಗ ರಾಷ್ಟ್ರದ ಮುಖ್ಯಸ್ಥರು ತುರ್ತು ಸಮಸ್ಯೆಗಳನ್ನು ನಿವಾರಿಸಲು ಸಲುವಾಗಿ ಈ ಆಜ್ಞೆಯನ್ನು ಹೊರಡಿಸುತ್ತಾರೆ .

11 ) ಆಡಳಿತಾತ್ಮಕ ಕಾನೂನು ಎಂದರೇನು ?

ಒಂದು ರಾಷ್ಟ್ರದಲ್ಲಿ ರಾಜ್ಯ ಮತ್ತು ನಾಗರೀಕ ಸೇವಾ ವರ್ಗದ ನಡುವಿನ ಸಂಬಂಧವನ್ನು ನಿರ್ಧರಿಸುವ ನಿಯಮಗಳೇ ಆಡಳಿತಾತ್ಮಕ ಕಾನೂನು , ಸಾರ್ವಜನಿಕ ಪಾಲಿಸಬೇಕಾಗುತ್ತದೆ . ಆಡಳಿತದಲ್ಲಿ ನಿರತರಾಗಿರುವ ನಾಗರಿಕ ಸೇವಾ ವರ್ಗವು ಈ ಕಾನೂನನ್ನು ರಾಜ್ಯದ ಮೂಲಾಂಶಗಳೆಂದರೆ

12 ) ರಾಜ್ಯದ ಯಾವುದಾದರು ಎರಡು ಮೂಲಾಂಶಗಳನ್ನು ತಿಳಿಸಿ .

ಜನಸಂಖ್ಯೆ

ಭೂ ಪ್ರದೇಶ

ಪರಮಾಧಿಕಾರ

ಸರ್ಕಾರ

13 ) ಕಾನೂನಿನ ಆಳ್ವಿಕೆ ಎಂದರೇನು ?

ಕಾನೂನಿನ ಮೂಲಕ ಆಳ್ವಿಕೆ ನಡೆಸುವುದೇ ಕಾನೂನಿನ ಆಳ್ವಿಕೆ , ಪ್ರಜಾಪ್ರಭುತ್ವದಲ್ಲಿ ಇದನ್ನು ಕಾಣಬಹುದಾಗಿದೆ.

14 ) ಆಂತರಿಕ ಪರಮಾಧಿಕಾರ ಎಂದರೇನು ?

ರಾಜ್ಯವು ತನ್ನ ಭೂ ಪ್ರದೇಶದ ವ್ಯಾಪ್ತಿಯೊಳಗೆ ಹೊಂದಿರುವ ಶ್ರೇಷ್ಠವಾದ ಅಧಿಕಾರವೇ ಆಂತರಿಕ ಪರಮಾಧಿಕಾರ .

15 ) ಹಕ್ಕನ್ನು ವ್ಯಾಖ್ಯಾನಿಸಿ .

ಮಾನವನು ತನ್ನ ಜೀವನದ ಪರಿಪೂರ್ಣತೆಯನ್ನು ಸಾಧಿಸಲು ರಾಜ್ಯ ಒದಗಿಸಿರುವ ಸಾಮಾಜಿಕ ವಾತಾವರಣವೇ ಹಕ್ಕುಗಳು .

16 ) ರಾಜಕೀಯ ಹಕ್ಕನ್ನು ವಿವರಿಸಿ .

ರಾಜ್ಯಾಡಳಿತದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಜೆಗಳು ಭಾಗವಹಿಸಲು ಇರುವ ಅವಕಾಶವೇ ರಾಜಕೀಯ ಹಕ್ಕು . ಇಂತಹ ಹಕ್ಕುಗಳನ್ನು ರಾಜ್ಯವು ತನ್ನ ಪೌರರಿಗೆ ಮಾತ್ರ ನೀಡಿರುತ್ತದೆ .

17 ) ಸಮಾನತೆ ಎಂದರೇನು ?

ಸಮಾಜದಲ್ಲಿ ಎಲ್ಲರಿಗೂ ತಮ್ಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯಗಳ ಬೆಳವಣಿಗೆಗೆ ಅಗತ್ಯವಾದ ಅವಕಾಶಗಳನ್ನು ನೀಡುವುದಕ್ಕೆ ಸಮಾನತೆ ಎನ್ನುವರು . ಸಮಾನತೆ ಎಂದರೆ , ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದು ಎಂದರ್ಥವಲ್ಲ . ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಸಾಮರ್ಥ್ಯಕ್ಕನುಗುಣವಾಗಿ ಅವಕಾಶಗಳನ್ನು ನೀಡುವುದು ಎಂದಾಗುತ್ತದೆ .

18 ) ಬಾಹ್ಯ ಪರಮಾಧಿಕಾರ ಎಂದರೇನು ?

ಒಂದು ರಾಷ್ಟ್ರ ಅನ್ಯರಾಷ್ಟ್ರಗಳ ನಿಯಂತ್ರಣಕ್ಕೊಳಪಡೆದೆ ಸ್ವತಂತ್ರವಾಗಿರುವುದೇ ಬಾಹ್ಯ ಪರಮಾಧಿಕಾರ . ಅದು ತನಗೆ ಇಷ್ಟ ಬಂದ ಸ್ವತಂತ್ರ್ಯ ವಿದೇಶಾಂಗ ನೀತಿಯನ್ನು ಅನುಸರಿಸಬಹುದು ಹಾಗೆಯೇ ಅದು ಪರರಾಷ್ಟ್ರಗಳೊಡನೆ ಯುದ್ಧಮಾಡುವ ಇಲ್ಲವೇ ಒಪ್ಪಂದ ಮಾಡಿಕೊಳ್ಳುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ .

1st Puc Political Science Chapter 3

III . ಐದು ಅಂಕದ ಪ್ರಶ್ನೆಗಳು :

1 ) ಪರಮಾಧಿಕಾರದ ಲಕ್ಷಣಗಳನ್ನು ವಿವರಿಸಿ .

ರಾಜ್ಯದ ಪರಮೋಚ್ಛ ಅಧಿಕಾರವೇ ಪರಮಾಧಿಕಾರವಾಗಿದ್ದು ಇದರ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ .

1. ಸ್ಥಿರತೆ : ರಾಜ್ಯವು ಸ್ಥಿರತೆ ಮತ್ತು ನಿರಂತರತೆಯನ್ನು ಹೊಂದಿರುವುದರಿಂದ ಪರಮಾದಿಕಾರವೂ ಶಾಶ್ವತ / ಸ್ಥಿರವಾಗಿರುತ್ತದೆ . ಪರಮಾಧಿಕಾರ ಅಸ್ಥಿರವಾದರೆ , ರಾಜ್ಯದ ಅಸ್ಥಿತ್ವಕ್ಕೆ ಧಕ್ಕೆಯುಂಟಾಗುತ್ತದೆ . ಸರ್ಕಾರಗಳ ತಾತ್ಕಾಲಿಕ ಬದಲಾವಣೆಯಿಂದ ಪರಮಾಧಿಕಾರಕ್ಕೆ ಧಕ್ಕೆಯಾಗುವುದಿಲ್ಲ .

2. ಅವಿಭಾಜ್ಯತೆ : ಪರಮಾಧಿಕಾರವನ್ನು ಯಾವುದೇ ರೀತಿಯಿಂದಲೂ ವಿಭಜಿಸಲಾಗುವುದಿಲ್ಲ . ಅದು ಅಖಂಡವಾದುದು . ಇದನ್ನು ವಿಭಜಿಸಿದರೆ , ಅದು ನಾಶ ಹೊಂದಿದಂತೆ , ರಾಜ್ಯದ ಆಡಳಿತಾಧಿಕಾರವನ್ನು ವಿಭಜಿಸಬಹುದೇ ಹೊರತು ಪರಮಾಧಿಕಾರವನ್ನಲ್ಲ ಪರಮಾಧಿಕಾರವನ್ನು ವಿಭಜಿಸುವುದೆಂದರೆ ಎರಡು ರಾಜ್ಯಗಳನ್ನು ಸೃಷ್ಟಿಸಿದಂತೆ .

3. ಸಮಗ್ರತೆ : ಪರಮಾಧಿಕಾರ ಸಮಗ್ರ ಮತ್ತು ಅನಿರ್ಬಂಧಿತವಾದುದು . ಇದು ತನ್ನ ಭೂ ವ್ಯಾಪ್ತಿಯೊಳಗಿನ ಎಲ್ಲಾ ಸಂಘ – ಸಂಸ್ಥೆಗಳ ಮೇಲೂ ಅಧಿಕಾರವನ್ನು ಹೊಂದಿರುತ್ತದೆ . ಇದಕ್ಕೆ ಯಾವುದೇ ಇತಿ – ಮಿತಿಗಳಿರುವುದಿಲ್ಲ . ಇದಕ್ಕೆ ಧಕ್ಕೆ ಬಂದಾಗ ರಾಜ್ಯ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತದೆ .

4. ಅವರ್ಗಿಯತೆ : ಪರಮಾಧಿಕಾರವನ್ನು ವರ್ಗಾವಣೆಯಾಗಲಿ / ಪರಬಾರೆಯಾಗಲಿ ಮಾಡಲು ಸಾಧ್ಯವಿಲ್ಲ . ಕಾರಣ ಅದು ರಾಜ್ಯದ ಅವಿಭಾಜ್ಯ ಅಂಗ . ಸರ್ಕಾರದ ಅಧಿಕಾರದ ಪರಬಾರೆ ಸಾಧ್ಯವೇ ಹೊರತು ಪರಮಾಧಿಕಾರದ ಪರಬಾರೆ ಅಸಾಧ್ಯ . ಪರಮಾಧಿಕಾರದ ಹಂಚಿಕೆ ಮತ್ತು ವರ್ಗಾವಣೆಯಿಂದ ರಾಜ್ಯನಾಶವಾಗುತ್ತದೆ .

5. ಸರ್ವವ್ಯಾಪಕತೆ : ಪರಮಾಧಿಕಾರವು ಸರ್ವವ್ಯಾಪಿಯಾಗಿದ್ದು ರಾಜ್ಯದ ವ್ಯಾಪ್ತಿಯೊಳಗೆ ಬರುವ ಎಲ್ಲಾ ವ್ಯಕ್ತಿಗಳ , ಸಂಘ – ಸಂಸ್ಥೆಗಳ ಮೇಲೆ ರಾಜ್ಯ ತನ್ನ ನಿಯಂತ್ರಣಾಧಿಕಾರವನ್ನು ಹೊಂದಿರುತ್ತವೆ . ಎಲ್ಲರೂ ಪರಮಾಧಿಕಾರದ ಆಳ್ವಿಕೆಗೆ ಒಳಪಟ್ಟಿರುತ್ತಾರೆ . ರಾಜ್ಯದ ಪರಮಾಧಿಕಾರದ ಆಜ್ಞೆಯನ್ನು ಯಾರೂ ದಿಕ್ಕರಿಸುವಂತಿಲ್ಲ .

6. ಪ್ರತ್ಯೇಕತೆ : ಪರಮಾಧಿಕಾರವು ಕೇವಲ ರಾಜ್ಯದ ಸ್ವತ್ತಾಗಿರುತ್ತದೆ . ರಾಜ್ಯದಲ್ಲಿ ಇತರ ಯಾವುದೇ ಸಂಘ – ಸಂಸ್ಥೆಗಳು ಇಂತಹ ಅಧಿಕಾರವನ್ನು ಹೊಂದಿರುವುದಿಲ್ಲ .

2 ) ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಟಿಪ್ಪಣಿ ಬರೆಯಿರಿ

ಒಬ್ಬ ವ್ಯಕ್ತಿಯು ತನ್ನ ಮೂಲಭೂತ ಅವಶ್ಯಕತೆಗಳನ್ನು ಪಡೆಯುವ ಮುನ್ನ ಜೀವನಮಟ್ಟವನ್ನು ಸುಧಾರಿಸಿಕೊಳ್ಳುವ ಸ್ವಾತಂತ್ರ್ಯವೇ ಆರ್ಥಿಕ ಸ್ವಾತಂತ್ರ್ಯ ಇದು ನಾಗರಿಕ ಮತ್ತು ರಾಜಕೀಯ ಸ್ವಾತಂತ್ರ್ಯಗಳಿಗಿಂತಲು ಮುಖ್ಯವಾದುದಾಗಿದೆ . ಈ ಸ್ವಾತಂತ್ರ್ಯ ಜನರನ್ನು ಹಸಿವು , ಬಡತನ , ನಿರುದ್ಯೋಗ ಮತ್ತು ಆರ್ಥಿಕ ಅಭದ್ರ ಮುಂತಾದ ಸಮಸ್ಯೆಗಳಿಂದ ರಕ್ಷಿಸುತ್ತದೆ . ಆರ್ಥಿಕ ಸ್ವಾತಂತ್ರ್ಯವಿಲ್ಲ ಪ್ರಜೆಗಳು ಪ್ರಜಾಪ್ರಭುತ್ವದಲ್ಲಿ ತಾವು ಹೊಂದಿರುವ ಇತರ ಸ್ವಾತಂತ್ರ್ಯಗಳನ್ನು ಅನುಭವಿಸಬೇಕಾಗ ಹಸಿವು , ಬಡತನ , ನಿರುದ್ಯೋಗಗಳಿಂದ ಮುಕ್ತರಾಗಬೇಕು , ಆರ್ಥಿಕ ಸ್ವಾತಂತ್ರವ ರಾಜಕೀಯ ಸ್ಥಿರತೆ ಮತ್ತು ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ . ಆರ್ಥಿಕ ಸ್ವಾತಂತ್ರ್ಯವು ಆರ್ಥಿಕ ಹಕ್ಕುಗಳ ಸೃಷ್ಟಿ ಒಟ್ಟಾರೆ ಒಬ್ಬ ವ್ಯಕ್ತಿಯ ನಾಳಿನ ಭಯದಿಂದ ಮುಕ್ತನಾಗಿ ಸ್ವಾವಲಂಭಿ ಗೌರವಯುತ ಜೀವನವನ್ನು ನಡೆಸುವ ಸಲುವಾಗಿ ಈ ಕೆಳಗಿನ ಆರ್ಥಿಕ ಸ್ವಾತಂತ್ರ್ಯಗಳನ್ನು ನೀಡಲಾಗಿದೆ .

1. ಉದ್ಯೋಗದ ಸ್ವಾತಂತ್ರ್ಯ

2. ಆಸ್ತಿಯ ಸ್ವಾತಂತ್ರ್ಯ

3. ವಿಶ್ರಾಂತಿಯ ಸ್ವಾತಂತ್ರ್ಯ

4 . ಕನಿಷ್ಠ ಕೂಲಿಯ ಸ್ವಾತಂತ್ರ್ಯ

5. ನಿಯಮಿತ ವೇಳೆಯ ಕೆಲಸದ ಸ್ವಾತಂತ್ರ್ಯ ಇತ್ಯಾದಿ .

3 ) ಸಮಾನತೆಯ ವಿಧಗಳನ್ನು ವಿವರಿಸಿ

ಪ್ರತಿಯೊಬ್ಬ ವ್ಯಕ್ತಿಗೆ ಅತ್ಯುತ್ತಮವಾದ ವಿಕಾಸ ಹೊಂದಲು ಸಮಾನ ಅವಕಾಶ ಕಲ್ಪಿಸಿಕೊಡುವುದೇ ಸಮಾನತೆ ಜಾತಿ , ಮತ , ಲಿಂಗ , ಸಾಮಾಜಿಕ ಸ್ಥಾನಮಾನ , ಹುಟ್ಟು ಇವುಗಳ ಆಧಾರದ ಮೇಲೆ ವ್ಯಕ್ತಿಗಳ ನಡುವೆ ಯಾವುದೇ ತಾರತಮ್ಯ ಮಾಡದಿರುವುದೇ ಸಮಾನತೆ ಈ ಸಮಾನತೆಯ ವಿಧಗಳು ಕೆಳಗಿನಂತಿವೆ .

1. ನೈಸರ್ಗಿಕ ಸಮಾನತೆ : ಸಮಾನತೆಯು ನಿಸರ್ಗದ ನಿಯಮ . ಪ್ರಕೃತಿಯು ವ್ಯಕ್ತಿಗಳ ನಡುವೆ ಯಾವ ಬಗೆಯ ಪಕ್ಷಪಾತವನ್ನು ಮಾಡುವುದಿಲ್ಲ ಹಾಗಾಗಿ ಮಾನವನು ಸ್ವಾಭಾವಿಕವಾಗಿ ಸಮಾನತೆಯನ್ನು ಹೊಂದಿದ್ದಾರೆ .

2. ನಾಗರಿಕ ಸಮಾನತೆ : ಜಾತಿ , ಮತ , ಲಿಂಗ , ಜನ್ಮಸ್ಥಳ ಬಣ್ಣ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದ ಮೇಲೆ ಭಿನ್ನತೆಯನ್ನು ಮಾಡದೆ ರಾಜ್ಯದೊಳಗೆ ವಾಸಿಸುವ

3. ರಾಜಕೀಯ ಸಮಾನತೆ : ಎಲ್ಲಾ ಪ್ರಜೆಗಳಿಗೂ ಎಲ್ಲಾ ರೀತಿಯ ರಾಜಕೀಯ ಹಕ್ಕುಗಳನ್ನು ನೀಡುವುದೇ ರಾಜಕೀಯ ಸಮಾನತೆ , ಈ ಸಮಾನತೆ ಪ್ರಜಾಪ್ರಭುತ್ವ ಸರ್ಕಾರದ ಆಧಾರ ಸ್ತಂಭವಾಗಿದೆ . ಚುನಾವಣೆಗೆ ಸ್ಪರ್ಧಿಸುವ ಹಕ್ಕು ಮತದಾನದ ಹಕ್ಕು , ಸಾರ್ವಜನಿಕ ಹುದ್ದೆ ಅಲಂಕರಿಸುವ ಹಕ್ಕು ಇವೇ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ರಾಜಕೀಯ ನೀಡುವುದೇ ರಾಜಕೀಯ ಸಮಾನತೆ .

4. ಆರ್ಥಿಕ ಸಮಾನತೆ : ಪ್ರತಿಯೊಬ್ಬ ಪ್ರಜೆಯು ಮೂಲಭೂತ ಅವಶ್ಯಕತೆಗಳಾದ ಆಹಾರ , ವಸತಿ , ಉಡುಗೆ ತೊಡುಗೆಗಳನ್ನು ಪಡೆಯುವ ಅವಕಾಶವನ್ನು ನೀಡುವುದೇ ಆರ್ಥಿಕ ಸಮಾನತೆ , ಆರ್ಥಿಕ ಸಮಾನತೆ ಇಲ್ಲದಿದ್ದಲ್ಲಿ ನಾಗರಿಕ , ಸಾಮಾಜಿಕ ಮತ್ತು ರಾಜಕೀಯ ಸಮಾನತೆಗಳಿರುವುದು ಅಸಾಧ್ಯ

5. ಸಾಮಾಜಿಕ ಸಮಾನತೆ : ಸಮಾಜದಲ್ಲಿ ಜಾತಿ , ಮತ , ಲಿಂಗ , ಸಾಮಾಜಿಕ ಸ್ಥಾನಮಾನ ಮುಂತಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ಕಾಣುವುದೇ ಸಾಮಾಜಿಕ ಸಮಾನತೆ . ಮೊದಲಾದವುಗಳನ್ನು ಹಕ್ಕುಗಳನ್ನು

4 ) ಕಾನೂನಿನ ವಿಧಗಳನ್ನು ವಿವರಿಸಿ .

ರಾಜ್ಯ ತನ್ನ ಪ್ರಜೆಗಳ ಸಾಧಾರಣ ವರ್ತನೆಯನ್ನು ನಿರ್ಧರಿಸಲು ಮತ್ತು ನಿಯಂತ್ರಿಸಲು ರೂಪಿಸುವ ನಿಯಮಗಳೇ ಕಾನೂನುಗಳಾಗಿದ್ದು , ಈ ಕಾನೂನಿನ ವಿಧಗಳನ್ನು ಕೆಳಗಿನಂತೆ ಕಾಣಬಹುದಾಗಿದೆ . ಮೆಕೈವರ್‌ರವರ ಪ್ರಕಾರ ಕಾನೂನು ರಾಷ್ಟ್ರೀಯ ಕಾನೂನು ಸಂವಿಧಾನಾತ್ಮಕ ಕಾನೂನು ಸಾರ್ವತ್ರಿಕ ಕಾನೂನು ಅಂತರ ರಾ ರಾಷ್ಟ್ರೀಯ ಕಾನೂನು ಸಾಧಾರಣ ಕಾನೂನು ಖಾಸಗಿ ಕಾನೂನು ಆಡಳಿತಾತ್ಮಕ ಕಾನೂನು ಸಾಮಾನ್ಯ ಕಾನೂನು

1. ರಾಷ್ಟ್ರೀಯ ಕಾನೂನು : ರಾಜ್ಯದ ವ್ಯಾಪ್ತಿಯೊಳಗೆ ಬರುವ ಎಲ್ಲ ವ್ಯಕ್ತಿಗಳ ಮತ್ತು ಸಂಘ – ಸಂಸ್ಥೆಗಳ ಬಾಹ್ಯ ವರ್ತನೆಯನ್ನು ನಿಯಂತ್ರಿಸುವ ನಿಯಮಗಳೇ ರಾಷ್ಟ್ರೀಯ ಕಾನೂನು . ವ್ಯಕ್ತಿ – ರಾಜ್ಯ , ವ್ಯಕ್ತಿ – ವ್ಯಕ್ತಿ ಮತ್ತು ವ್ಯಕ್ತಿ – ಸಂಘಸಂಸ್ಥೆಗಳ ನಡುವಣ ಸ್ಥಳೀಯ / ಮುನಿಸಿಪಲ್ ಕಾನೂನು ಎನ್ನುವರು . ಸಂಬಂಧವನ್ನು ನಿಯಂತ್ರಿಸಲು ರಾಜ್ಯದ ಶಾಸಕಾಂಗ ರೂಪಿಸುತ್ತದೆ .

2. ಅಂತರರಾಷ್ಟ್ರೀಯ ಕಾನೂನು : ರಾಷ್ಟ್ರ – ರಾಷ್ಟ್ರಗಳ ನಡುವಣ ಸಂಬಂಧವನ್ನು ನಿರ್ಧರಿಸುವ ಕಾನೂನುಗಳೇ ಅಂತರರಾಷ್ಟ್ರೀಯ ಕಾನೂನು ಈ ಕಾನೂನನ್ನ ಯಾವುದೇ ಪರಮಾಧಿಕಾರ ಹೊಂದಿರುವ ಸಂಸ್ಥೆ ರೂಪಿಸಿದ್ದಲ್ಲಿ ಹಾಗಾಗ ಈ ಕಾನೂನುಗಳಿಗೆ ರಾಜ್ಯದ ಬೆಂಬಲ ಮಾತ್ರವಿದ್ದು , ಇದನ್ನು ದಿಕ್ಕರಿಸುವಂತಹ ರಾಷ್ಟ್ರಗಳಿಗೆ ಶಿಕ್ಷೆ ವಿಧಿಸುವ ಅಧಿಕಾರ ಯಾರಿಗೂ ಇಲ್ಲ .

3. ಸಂವಿಧಾನಾತ್ಮಕ ಕಾನೂನು : ರಾಷ್ಟ್ರದ ಮೂಲಭೂತ ಶಾಸನವೇ ಸಂವಿಧಾನ . ಈ ಕಾನೂನುಗಳು ರಾಜ್ಯದ ಉದ್ದೇಶ , ಸ್ವರೂಪ ಮತ್ತು ವ್ಯಾಪ್ತಿಯನ್ನು , ಸರ್ಕಾರದ ಅಧಿಕಾರ , ಕರ್ತವ್ಯ ಮತ್ತು ಸ್ವರೂಪವನ್ನು ನಿರ್ಧರಿಸುತ್ತದೆ

4 . ಸಾಧಾರಣ ಕಾನೂನು : ಪ್ರಜೆಗಳ ಬಾಹ್ಯವರ್ತನೆಯನ್ನು ನಿಯಂತ್ರಿಸಲು ರಾಜ್ಯಗಳ ಶಾಸಕಾಂಗ ಸಂವಿಧಾನದ ನಿಯಮಗಳಿಗನುಗುಣವಾಗಿ ರೂಪಿಸುವ ಕಾನೂನುಗಳೇ ಸಾಧಾರಣ ಕಾನೂನು . ಈ ಕಾನೂನುಗಳು ಜನತೆ – ರಾಜ್ಯ ಹಾಗೂ ಜನತೆ – ಸರ್ಕಾರಗಳ ನಡುವಣ ಸಂಬಂಧವನ್ನು ನಿರ್ಧರಿಸಿ ನಿಯಂತ್ರಿಸುತ್ತದೆ .

5. ಸಾರ್ವಜನಿಕ ಕಾನೂನು : ರಾಜ್ಯ ಮತ್ತು ಪ್ರಜೆಗಳ ಸಂಬಂಧವನ್ನು ಸ್ಪಷ್ಟಪಡಿಸಿ ನಿಯಂತ್ರಿಸುವ ನಿಯಮಗಳೇ ಸಾರ್ವಜನಿಕ ಕಾನೂನು . ಸರ್ಕಾರ ಈ ಕಾನೂನನ್ನು ರಾಜ್ಯದ ಹೆಸರಿನಲ್ಲಿ ಜಾರಿಗೆ ತರುತ್ತದೆ .

6. ಖಾಸಗಿ ಕಾನೂನು : ವ್ಯಕ್ತಿ – ವ್ಯಕ್ತಿಗಳ ನಡುವಣ ಸಂಬಂಧವನ್ನು ನಿರ್ಧರಿಸಿ , ನಿಯಂತ್ರಿಸುವ ನಿಯಮಗಳೇ ಖಾಸಗಿ ಕಾನೂನು , ಸಮಾಜದಲ್ಲಿ ವ್ಯಕ್ತಿಗಳು ಹೇಗೆ ವರ್ತಿಸಬೇಕೆಂದು ಮಾರ್ಗದರ್ಶನ ಮಾಡಿ ಅವರ ಹಕ್ಕುಗಳಾಗಿ ರಕ್ಷಣೆ ನೀಡುತ್ತದೆ .

7. ಆಡಳಿತಾತ್ಮಕ ಕಾನೂನು : ಸರ್ಕಾರ ಮತ್ತು ಸರ್ಕಾರಿ ನೌಕರರ ನಡುವಣ ಸಂಬಂಧವನ್ನು ನಿಯಂತ್ರಿಸುವ ನಿಯಮಗಳೇ ಆಡಳಿತಾತ್ಮಕ ಕಾನೂನು . ಆಡಳಿತಾತ್ಮಕ ಸೇವೆಗೆ ಸಂಬಂಧಿಸಿದ ವಿವಾದಗಳನ್ನು ವಿಚಾರಣೆ ಮಾಡಿ ತೀರ್ಮಾನ ಮಾಡ ಕೇಂದ್ರ ಮಟ್ಟದಲ್ಲಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ , ರಾಜ್ಯಗಳ ಮಟ್ಟದಲ್ಲಿ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಗಳಿವೆ .

8. ಸಾಮಾನ್ಯ ಕಾನೂನು : ರಾಜ್ಯದ ಪ್ರಜೆಗಳಿಗೆ ಅನ್ವಯಿಸುವ ಕಾನೂನುಗಳೇ ಸಾಮಾನ್ಯ ಕಾನೂನುಗಳು ರಾಜ್ಯದ ಜನರ ಆಚಾರ – ವಿಚಾರ ರೂಢಿ , ಪದ್ಧತಿ ಮತ್ತು ಸಂಪ್ರದಾಯಗಳ ಆಧಾರದ ಮೇಲೆ ಈ ಕಾನೂನುಗಳನ್ನು ರಚಿಸಲಾಗುವುದು .

9. ಸುಗ್ರೀವಾಜ್ಞೆ : ಶಾಸಕಾಂಗ ಅಧಿವೇಶನವಿಲ್ಲದಿದ್ದಾಗ ರಾಜ್ಯದ ಮುಖ್ಯಸ್ಥರು ತುರ್ತು ಸಮಸ್ಯೆಗಳನ್ನು ಬಗೆಹರಿಸಲು ಹೊರಡಿಸುವ ಆಜ್ಞೆಗಳೇ ಸುಗ್ರೀವಾಜ್ಞೆಗಳು.

5 ) ಹಕ್ಕುಗಳು ಎಂದರೇನು ? ಅದರ ವಿಧಗಳನ್ನು ವಿವರಿಸಿ .

ರಾಜ್ಯವು ಮನ್ನಿಸಿದ ಮತ್ತು ವ್ಯಕ್ತಿಯು ಅವನುಭವಿಸುವ ಅಧಿಕರಾವೇ ಹಕ್ಕುಗಳು , ಈ ಹಕ್ಕುಗಳ ವಿಧಗಳು ಇಂತಿವೆ .

I. ನೈತಿಕ ಹಕ್ಕುಗಳು : ನೀತಿ ನಿಯಮಗಳ ಅಥವಾ ನೈತಿಕ ಅಂಶಗಳ ಆಧಾರದ ಮೇಲೆ ನಿಂತಿರುವ ಹಕ್ಕುಗಳೇ ನೈತಿಕ ಹಕ್ಕುಗಳು . ಈ ಹಕ್ಕುಗಳಿಗೆ ರಾಜ್ಯದ ಕಾನೂನಿನ ಬೆಂಬಲವಾಗಲಿ , ನ್ಯಾಯಾಂಗದ ರಕ್ಷಣೆಯಾಗಲಿ ಇಲ್ಲದೆ ಕೇವಲ ಸಾರ್ವಜನಿಕಾಭಿಪ್ರಾಯ ಹಾಗು ರೂಢಿ ಸಂಪ್ರದಾಯಗಳ ಬೆಂಬಲವನ್ನು ಮಾತ್ರ ಹೊಂದಿರುತ್ತದೆ . ಹಾಗಾಗಿ ಈ ಹಕ್ಕುಗಳ ಉಲ್ಲಂಘನೆಗೆ ಶಿಕ್ಷೆ ಇರುವುದಿಲ್ಲ . ಉದಾ : ವಿದ್ಯಾರ್ಥಿಗಳಿಂದ ವಿಧೇಯತೆಯನ್ನು ನಿರೀಕ್ಷಿಸುವುದು ಶಿಕ್ಷಕನ ನೈತಿಕ ಕರ್ತವ್ಯ .

II . ಕಾನೂನುಬದ್ಧ ಹಕ್ಕುಗಳು : ರಾಜ್ಯದ ಕಾನೂನುಗಳಿಂದ ಅನುಷ್ಠಾನಗೊಳಿಸುವ ಹಕ್ಕುಗಳೇ ಕಾನೂನುಬದ್ಧ ಹಕ್ಕುಗಳು . ಈ ಹಕ್ಕುಗಳಿಗೆ ಕಾನೂನಿನ ಬೆಂಬಲ ಮತ್ತು ನ್ಯಾಯಾಂಗದ ರಕ್ಷಣೆ ಇರುತ್ತದೆ . ಹಾಗಾಗಿ ಈ ಹಕ್ಕುಗಳ ಉಲ್ಲಂಘನೆಗೆ ಶಿಕ್ಷೆ ವಿಧಿಸಲಾಗುತ್ತದೆ . ಈ ಕಾನೂನು ಬದ್ಧ ಹಕ್ಕುಗಳನ್ನು ಕೆಳಗಿನ ರೀತಿಯಲ್ಲಿ ವರ್ಗಿಕರಿಸಲಾಗಿದೆ.

1. ನಾಗರಿಕ ಹಕ್ಕುಗಳು : ವ್ಯಕ್ತಿಯು ಸಮಾಜದಲ್ಲಿ ಶಾಂತಿಯುತವಾದ ಮತ್ತು ನೆಮ್ಮದಿಯ ಸಾಮಾಜಿಕ ಜೀವನವನ್ನು ನಡೆಸಲು ಅವಶ್ಯಕವಾಗಿ ಬೇಕಾಗಿರುವ ಹಕ್ಕುಗಳೇ ನಾಗರಿಕ ಹಕ್ಕುಗಳು. ಅವುಗಳೆಂದರೆ

1 ) ಜೀವಿಸುವ ಹಕ್ಕು 2) ಕುಟುಂಬದ ಹಕ್ಕು 3 ) ಸ್ವಾತಂತ್ರ್ಯದ ಹಕ್ಕು 4 ) ಸಮಾನತೆಯ ಹಕ್ಕು 5 ) ವಾಕ್ ಸ್ವಾತಂತ್ರ್ಯದ ಹಕ್ಕು 6 ) ಶಿಕ್ಷಣದ ಹಕ್ಕು 7) ಸಂಘ – ಸಂಸ್ಥೆಗಳ ಸ್ಥಾಪನೆಯ ಹಕ್ಕು 8 ) ಪತ್ರಿಕಾ ಸ್ವಾತಂತ್ರ್ಯದ ಹಕ್ಕು 9 ) ಧಾರ್ಮಿಕ ಹಕ್ಕು

2. ರಾಜಕೀಯ ಹಕ್ಕುಗಳು : ರಾಜ್ಯಾಡಳಿತದಲ್ಲಿ ನಾಗರಿಕರಿಗೆ ಭಾಗವಹಿಸಲು ಇರುವ ಹಕ್ಕುಗಳೇ ರಾಜಕೀಯ ಹಕ್ಕುಗಳು ರಾಜ್ಯವು ಪೌರರಿಗೆ ಮಾತ್ರ ಈ ಹಕ್ಕುಗಳನ್ನು ನೀಡಿರುತ್ತವೆ . ಅವುಗಳೆಂದರೆ –

1 ) ಮತದಾನದ ಹಕ್ಕು 2 ) ಚುನಾವಣೆಗೆ ಸ್ಪರ್ಧಿಸುವ ಹಕ್ಕು 3 ) ಸಾರ್ವಜನಿಕ ಉದ್ಯೋಗದ ಹಕ್ಕು 4 ) ಸರ್ಕಾರವನ್ನು ಟೀಕಿಸುವ ಹಕ್ಕು 5 ) ದೂರು / ಮನವಿ ಸಲ್ಲಿಸುವ ಹಕ್ಕು 6 ) ಸರ್ಕಾರವನ್ನು ಟೀಕಿಸುವ ಹಕ್ಕು .

3. ಆರ್ಥಿಕ ಹಕ್ಕುಗಳು : ಹಸಿವು , ದಾರಿದ್ರ ಮತ್ತು ನಿರುದ್ಯೋಗದ ಭಯದಿಂದ ಮುಕ್ತವಾಗಿರುವುದೇ ಆರ್ಥಿಕ ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನೋಪಾಯಕ್ಕೆ ಬೇಕಾದ ಉದ್ಯೋಗವನ್ನು ಪಡೆದು ತನ್ನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾನೆ .

1) ಆಸ್ತಿ ಹಕ್ಕು 2 ) ಒಪ್ಪಂದದ ಹಕ್ಕು 3 ) ಉದ್ಯೋಗದ ಹಕ್ಕು4 ) ವಿರಾಮ ಮತ್ತು ವಿಶ್ರಾಂತಿಯ ಹಕ್ಕು 5 ) ಭೌತಿಕ ಸುಭದ್ರತೆಯ ಹಕ್ಕು

IV . ಹತ್ತು ಅಂಕದ ಪ್ರಶ್ನೆಗಳು :

1 ) ಪರಮಾಧಿಕಾರದ ಅರ್ಥ ಮತ್ತು ಲಕ್ಷಣಗಳನ್ನು ವಿವರಿಸಿ ,

ಪರಮಾಧಿಕಾರ ಎಂಬ ಪದವು ‘ ಸಾವರಿಂಟಿ ‘ ಎಂಬ ಇಂಗ್ಲೀಷ್ ಪದದ ಕನ್ನಡ ಅನುವಾದ . ‘ ಸಾವರಿಂಟಿ ‘ ಎಂಬ ಪದವು ಲ್ಯಾಟಿನಿನ ಸುಪರಾನಸ್ ಎಂಬ ಪದದಿಂದ ಬಂದಿದೆ . ಸುಫರಾನಸ್ ಎಂದರೆ ಪರಮ , ಶ್ರೇಷ್ಠ , ಸರ್ವೋಚ್ಛ ಎಂದರ್ಥ . ಆದ್ದರಿಂದ ರಾಜ್ಯದ ಸರ್ವೋಚ್ಛ ಅಧಿಕಾರವೇ ಪರಮಾಧಿಕಾರವಾಗಿದೆ . ಈ ಪರಮಾಧಿಕಾರವು ರಾಜ್ಯದ 4 ಮೂಲಾಂಶಗಳಲ್ಲೇ ಅತ್ಯಂತ ಪ್ರಮುಖವಾದುದು . ಹಾಗಾಗಿ ಇದನ್ನು ರಾಜ್ಯದ ‘ ಜೀವಾಳ ಮತ್ತು ಅತ್ಮ ‘ ಎಂದಿದ್ದಾರೆ .

ಈ ಅಧಿಕಾರವು ರಾಜ್ಯದ ಆಸ್ತಿಕ ಕಾರಣವಾಗಿದ್ದು ರಾಜ್ಯವನ್ನು ಇತರ ಸಂಘ – ಸಂಸ್ಥೆಗಳಿಂದ ಬೇರ್ಪಡಿಸುತ್ತದೆ . ಈ ಅಧಿಕಾರದ ಮೂಲಕ ರಾಜ್ಯ ಕಾನೂನುಗಳನ್ನು ರಚಿಸಿ , ಕಾರರೂಪಕ್ಕೆ ತಂದು , ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ವಿಧಿಸುತ್ತದೆ .

2 ) ಕಾನೂನು ಎಂದರೇನು ? ಅದರ ವಿಧಗಳನ್ನು ವಿವರಿಸಿ

ರಾಜ್ಯವು ತನ್ನ ಪ್ರಜೆಗಳ ಸಾಧಾರಣ ವರ್ತನೆಯನ್ನು ನಿರ್ಧರಿಸಲು ಮತ್ತು ನಿಯಂತ್ರಿಸಲು ರೂಪಿಸುವ ನಿಯಮಗಳೇ ಕಾನೂನುಗಳು . ಈ ಕಾನೂನು ವ್ಯಕ್ತಿಯ ಆಂತರಿಕ ಭಾವನೆಗಳು ಹಾಗೂ ಆಲೋಚನೆಗಳಿಗೆ ಸಂಬಂಧಿಸಿರುವುದಿಲ್ಲ . ಇದು ವ್ಯಕ್ತಿಯ ಬಾಹ್ಯ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸಿದೆ . ಕಾನೂನುಗಳನ್ನು ರಚಿಸಿ ಜಾರಿಗೆ ತರುವ ಅಧಿಕಾರವನ್ನು ಸರ್ಕಾರ ನಿರ್ವಹಿಸುತ್ತದೆ .

3 ) ಹಕ್ಕುಗಳ ಅರ್ಥ ಮತ್ತು ವಿಧಗಳನ್ನು ವಿವರಿಸಿ .

ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಅತ್ಯವಶ್ಯಕವಾದ ಸಾಮಾಜಿಕ ವಾತಾವರಣ | ಸೌಲಭ್ಯಗಳೇ ಹಕ್ಕುಗಳು . ಸಮಾಜದಲ್ಲಿ ಮನುಷ್ಯನು ನಾಗರಿಕನಾಗಿ ಬಾಳಬೇಕಾದರ ಈ ಹಕ್ಕುಗಳು ಅತ್ಯವಶ್ಯಕ . ಆದ್ದರಿಂದ ‘ ಹಕ್ಕುಗಳು ಒಬ್ಬ ವ್ಯಕ್ತಿಗೆ ಪ್ರಾಣವಾಯುವಿದ್ದಂತೆ . ಹಕ್ಕುಗಳು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ನಿಯಂತ್ರಣಗಳ ನಡುವೆ ಸಮತೋಲನವನ್ನು ಕಾಪಾಡುತ್ತದೆ . ಹಾಗೆಯೇ ಸರ್ಕಾರದ ಸರ್ವಾಧಿಕಾರವನ್ನು ನಿಯಂತ್ರಿಸುವುದರ ಮೂಲಕ ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ . ಆದ್ದರಿಂದಲೇ ಪ್ರೊ . ಎಚ್.ಜೆ. ಲಾಸ್ತಿಯವರು “ ಪ್ರತಿಯೊಂದು ರಾಜ್ಯವು ತನ್ನ ಪ್ರಜೆಗಳಿಗೆ ನೀಡಿರುವ ಹಕ್ಕುಗಳಿಂದ ಗುರ್ತಿಸಲ್ಪಡುತ್ತದೆ ” ಎಂದಿದ್ದಾರೆ .

4 ) ಸ್ವಾತಂತ್ರ್ಯದ ಅರ್ಥ ಮತ್ತು ವಿಧಗಳನ್ನು ವಿವರಿಸಿ .

ಸ್ವಾತಂತ್ರ್ಯ ಮತ್ತು ಸಮಾನತೆಗೆ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ಮತ್ತು ಇವುಗಳು ಮಾನವನ ಆಸ್ತಿಗಳಿದ್ದಂತೆ . ವ್ಯಕ್ತಿಯ ಜೀವನವನ್ನು ಅರ್ಥಪೂರ್ಣಗೊಳಿಸುವ ಪರಿಕಲ್ಪನಾ ಶಕ್ತಿಗಳಾಗಿವೆ . ಹಾಗಾಗಿ ಸ್ವಾತಂತ್ರ್ಯವು ವ್ಯಕ್ತಿಗೆ ಕಲ್ಪಿಸಿಕೊಡುವ ವಿಶಿಷ್ಠ ವಾತಾವರಣವಾಗಿದ್ದು , ಈ ವಾತಾವಣವಿಲ್ಲದೆ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ವಿಕಾಸ ಮಾಡಿಕೊಳ್ಳಲು ಸಾಧ್ಯವಿಲ್ಲ . ಇದು ವ್ಯಕ್ತಿಯ ಸಮಾಜದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅತ್ಯಾವಶ್ಯಕವಾಗಿದೆ . ಸ್ವಾತಂತ್ರ್ಯ ಎಂಬ ಪದ ‘ ಲಿಬರ್ಟಿ ‘ ಎಂಬ ಆಂಗ್ಲ ಪದದ ಕನ್ನಡ ಅನುವಾದ . ಇದು ಲ್ಯಾಟಿನ್ ಪದವಾದ ‘ ಲಿಬರ್’ನಿಂದ ಬಂದಿದೆ . ‘ ಲಿಬರ್ ‘ ಎಂದರೆ , ‘ ಮುಕ್ತ ‘ ಎಂದರ್ಥ ಆದ್ದರಿಂದ ಸ್ವಾತಂತ್ರ್ಯ ಎಂದರೆ , ನಿರ್ಬಂಧ ರಹಿತ ವಾತಾವರಣ ಎಂದಾಗುತ್ತದೆ .

ಹಾಗಾಗಿ ಸ್ವಾತಂತ್ರ್ಯ ಎಂದರೆ , ವ್ಯಕ್ತಿಯು ತನ್ನ ಇಚ್ಛೆಗೆ ಅನುಸಾರವಾಗಿ ಚಿಂತಿಸಲು , ಕೆಲಸ ಮಾಡಲು ಮತ್ತು ಮಾತನಾಡಲು ಇರುವ ಅನಿರ್ಬಂಧಿತ ಅವಕಾಶವೇ ಸ್ವಾತಂತ್ರ್ಯ ಇದರ ವಿಧಗಳೆಂದರೆ

1. ನೈಸರ್ಗಿಕ ಸ್ವಾತಂತ್ರ್ಯ : ಅನಿರ್ಬಂಧಿತವಾದ ಸ್ವಾತಂತ್ರ್ಯವೇ ನೈಸರ್ಗಿಕ ಸ್ವಾತಂತ್ರ್ಯ ಇದರ ಪ್ರಕಾರ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ ಇದು ನಿಸರ್ಗದತ್ತವಾಗಿದ್ದು , ರಾಜ್ಯ ಮತ್ತು ಸಮಾಜ ಪೂರ್ವ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿತ್ತೆಂದು ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರಾದ ಹಾಬ್ , ಲಾಕ್ ಮತ್ತು ರುಸೋರವರ ಅಭಿಪ್ರಾಯವಾಗಿದೆ .

2.ನಾಗರಿಕ ಸ್ವಾತಂತ್ರ್ಯ : ಸಮಾಜದಲ್ಲಿ ಒಬ್ಬ ವ್ಯಕ್ತಿ ನಾಗರಿಕನಾಗ ಬದುಕಲು ಅಗತ್ಯವಾದ ವಾತಾವರಣವನ್ನು ಕಲ್ಪಿಸುವ ಸ್ವಾತಂತ್ರ್ಯವೇ ನಾಗರಿಕ ಸ್ವಾತಂತ್ರ್ಯ ನಾಗರಿಕ ಹಕ್ಕುಗಳು ನಾಗರಿಕ ಸ್ವಾತಂತ್ರ್ಯದ ಮೂಲಗಳಾಗಿವೆ . ರಾಜ್ಯವು ತನ್ನ ಶಾಸನಗಳ ಮೂಲಕ ನಾಗರಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ .

3 . ರಾಜಕೀಯ ಸ್ವಾತಂತ್ರ್ಯ : ವ್ಯಕ್ತಿಯು ರಾಜ್ಯದ ರಾಜಕೀಯ ಅಥವಾ ರಾಜ್ಯಾಡಳಿತದಲ್ಲಿ ಪ್ರತ್ಯಕ್ಷ / ಪರೋಕ್ಷವಾಗಿ ಭಾಗವಹಿಸಲು ಇರುವ ಸ್ವಾತಂತ್ರ್ಯವೇ ರಾಜಕೀಯ ಸ್ವಾತಂತ್ರ್ಯ ಪ್ರಜಾಪ್ರಭುತ್ವದಲ್ಲಿ ಈ ರಾಜಕೀಯ ಸ್ವಾತಂತ್ರ್ಯ ಹೆಚ್ಚು ಮಹತ್ವ ಪಡೆದಿದೆ . ಈ ಕಾರಣದಿಂದಲೇ ಗಿಲ್‌ಕ್ರಿಸ್ಟ್‌ರವರು ‘ ಪ್ರಜಾಪ್ರಭುತ್ವದ ಮತ್ತೊಂದು ಹೆಸರೇ ರಾಜಕೀಯ ಸ್ವಾತಂತ್ರ್ಯ ‘ ಎಂದಿದ್ದಾರೆ . ರಾಜಕೀಯ ಸ್ವಾತಂತ್ರ್ಯವು ರಾಜಕೀಯ ಹಕ್ಕುಗಳ ಸೃಷ್ಟಿಯಾಗಿದೆ .

4. ಆರ್ಥಿಕ ಸ್ವಾತಂತ್ರ್ಯ : ಒಬ್ಬ ವ್ಯಕ್ತಿಯು ತನ್ನ ಮೂಲಭೂತ ಅವಶ್ಯಕತೆಗಳನ್ನು ಸುಧಾರಿಸಿಕೊಳ್ಳುವ ಸ್ವಾತಂತ್ರ್ಯವೇ ಆರ್ಥಿಕ ಸ್ವಾತಂತ್ರ್ಯ ಇದು ನಾಗರಿಕ ಮತ್ತು ರಾಜಕೀಯ ಸ್ವಾತಂತ್ರ್ಯಗಳಿಗಿಂತಲೂ ಮುಖ್ಯವಾದುದಾಗಿದೆ . ಈ ಸ್ವಾತಂತ್ರ್ಯ ಜನರನ್ನು ಹಸಿವು , ಬಡತನ , ನಿರುದ್ಯೋಗ ಮತ್ತು ಆರ್ಥಿಕ ಅಭದ್ರತೆ ಮುಂತಾದ ಸಮಸ್ಯೆಗಳಿಂದ ರಕ್ಷಿಸುತ್ತದೆ .

5. ರಾಷ್ಟ್ರೀಯ ಸ್ವಾತಂತ್ರ್ಯ : ಒಂದು ರಾಷ್ಟ್ರ ಬೇರೊಂದು ರಾಷ್ಟ್ರದ ನಿಯಂತ್ರಣದಿಂದ ಮುಕ್ತವಾಗುವುದೇ ರಾಷ್ಟ್ರೀಯ ಸ್ವಾತಂತ್ರ್ಯ , ರಾಷ್ಟ್ರೀಯ ಸ್ವಾತಂತ್ರ್ಯವನ್ನು ಹೊಂದಿದ ದೇಶವು ಪರಮಾಧಿಕಾರವನ್ನು ಹೊಂದಿರುವುದರಿಂದ ತನ್ನದೇ ಆದ ವಿದೇಶಾಂಗ ನೀತಿಯನ್ನು ಅನುಸರಿಸಬಹುದು . ರಾಷ್ಟ್ರೀಯ ಸ್ವಾತಂತ್ರ್ಯವು ನಾಗರಿಕ ಸ್ವಾತಂತ್ರ್ಯ , ಆರ್ಥಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂತ್ರ್ಯಗಳ ಆಧಾರಸ್ತಂಭವಾಗಿದೆ .

5 ) ರಾಜಕೀಯ ಹಕ್ಕುಗಳನ್ನು ವಿವರಿಸಿ ,

ರಾಜ್ಯಾಡಳಿತದಲ್ಲಿ ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಪ್ರಜೆಗಳು ಭಾಗವಹಿಸಲು ಆಧಾರ ಸ್ತಂಭವಿದ್ದಂತೆ ಏಕೆಂದರೆ ಈ ಹಕ್ಕುಗಳು ಪ್ರಜೆಗಳಿಗೆ ಆಡಳಿತದಲ್ಲಿ ಭಾಗವಹಿಸಲ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸುತ್ತವೆ . ಈ ಹಕ್ಕುಗಳ ರಾಜ್ಯದ ನಿರಂಕುಶತೆಯನ್ನು ನಿಯಂತ್ರಿಸಿ ಪ್ರಜೆಗಳ ಸ್ವಾತಂತ್ರ್ಯವನ್ನು ರಕ್ಷಿಸುತ್ತವೆ . ಈ ಹಕ್ಕುಗಳ ಅನುಪಸ್ಥಿತಿಯಲ್ಲಿ ನಾಗರಿಕ ಹಕ್ಕುಗಳು ತಮ್ಮ ಅರ್ಥವನ್ನು ಕಳೆದುಕೊಳ್ಳುತ್ತವೆ . ಈ ಹಕ್ಕುಗಳನ್ನು ಪೌರರಿಗೆ ಮಾತ್ರ ನೀಡಲಾಗಿರುತ್ತದೆ . ಅಂಥಹ ಹಕ್ಕುಗಳೆಂದರೆ –

1.ಮತದಾನದ ಹಕ್ಕು : ಈ ಹಕ್ಕು ಕಾಲಕಾಲಕ್ಕೆ ನಡೆಯುವ ಚುನಾವಣೆಗಳಲ್ಲಿ ಪ್ರಜೆಗಳಿಗೆ ಮತ ನೀಡುವ ಅವಕಾಶ ಕಲ್ಪಿಸಿದೆ . ಹಾಗಾಗಿ ನಿರ್ದಿಷ್ಟ ವಯೋಮಾನವನ್ನು ತಲುಪಿದ ಪ್ರತಿಯೊಬ್ಬ ಪೌರನು ತನಗೆ ಇಷ್ಟಬಂದ ವ್ಯಕ್ತಿ / ಪಕ್ಷ / ಸರ್ಕಾರವನ್ನು ಆಯ್ಕೆ ಮಾಡಲು ಇದು ಸಹಾಯಕವಾಗಿದೆ .

2. ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು : ರಾಷ್ಟ್ರದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ಚುನಾವಣೆಗೆ ಸಂವಿಧಾನವು ನಿಗದಿಪಡಿಸಿದ ಅರ್ಹತೆಗಳನ್ನು ಹೊಂದಿರುವ ಪ್ರತಿಯೊಬ್ಬ ಪ್ರಜೆಯು ಸ್ಪರ್ಧಿಸುವ ಹಕ್ಕನ್ನು ಹೊಂದಿರುತ್ತಾನೆ . ಈ ಹಕ್ಕಿನ ಮೂಲಕ ಪ್ರಜೆಗಳು ಚುನಾವಣೆಗಳಲ್ಲಿ ಗೆದ್ದು ಜನ ಪ್ರತಿನಿಧಿಗಳಾದ ಆಡಳಿತದಲ್ಲಿ ನೇರವಾಗಿ ಭಾಗವಹಿಸಬಹುದು .

3. ಸಾರ್ವಜನಿಕ ಉದ್ಯೋಗದ ಹಕ್ಕು : ಈ ಹಕ್ಕು ಎಲ್ಲಾ ಅರ್ಹ ಪ್ರಜೆಗಳಿಗೆ ಸರ್ಕಾರಿ ಉದ್ಯೋಗವನ್ನು ಪಡೆಯುವ ಅವಕಾಶ ಕಲ್ಪಿಸಿದೆ . ಜಾತಿ , ಮತ , ಪಂಥ , ಧರ್ಮ , ಜನ್ಮಸ್ಥಳ , ಲಿಂಗ ಭೇದವಿಲ್ಲದೆ ಎಲ್ಲರೂ ಅರ್ಹತೆಗನುಗುಣವಾಗಿ ಸರ್ಕಾರಿ ಹುದ್ದೆಗೆ ಸ್ಪರ್ದಿಸಬಹುದು . ಆದ ಕಾರ

4. ಮನವಿ / ದೂರು ನೀಡುವ ಹಕ್ಕು : ಈ ಹಕ್ಕು ಪ್ರಜೆಗಳಿಗೆ ತಮ್ಮ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ಸರ್ಕಾರದ ಮುಂದಿಟ್ಟು ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಅವಕಾಶ ನೀಡಿದೆ . ಜನತಾ ಪರಮಾಧಿಕಾರವು ಪ್ರಜೆಗಳ ಕೈಯಲ್ಲಿ ಇರುವುದರಿಂದ ಸರ್ಕಾರವು ದೂರುಗಳನ್ನು ಪರಿಶೀಲಿಸಿ ಆದ್ಯತೆಯ ಮೇರೆಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಬೇಕು . ಇಲ್ಲವಾದಲ್ಲಿ ಜನರು ಮುಂಬರುವ ಚುನಾವಣೆಯಲ್ಲಿ ಸರ್ಕಾರಕ್ಕೆ ಸರಿಯಾದ ಪಾಠವನ್ನು ಮತದಾನದ ಮೂಲಕ ಕಲಿಸುತ್ತಾರೆ .

5. ಸರ್ಕಾರವನ್ನು ಟೀಕಿಸುವ ಹಕ್ಕು : ಪ್ರಜಾಪ್ರಭುತ್ವ ಸರ್ಕಾರವು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದರೆ , ಪ್ರತಿಯೊಬ್ಬ ಪ್ರಜೆಯು ಸರ್ಕಾರವನ್ನು ಟೀಕಿಸುವ ಸ್ವಾತಂತ್ರ್ಯವನ್ನು ಮಾನ್ಯ ಮಾಡಬೇಕಾಗುತ್ತದೆ , ಆದರೆ ಟೀಕೆ ರಚನಾತ್ಮಕವಾಗಿರಬೇಕು . ಈ ಹಕ್ಕನ್ನು ಸರ್ಕಾರಿ ಹುದ್ದೆಯಲ್ಲಿರುವ ಆಡಳಿತ ವರ್ಗಕ್ಕೆ ನೀಡಿರುವುದಿಲ್ಲ . ಈ ಹಕ್ಕು ಸರ್ಕಾರವನ್ನು ಸರಿದಾರಿಯಲ್ಲಿ ನಡೆಸಬಲ್ಲದು .

6 ) ಆರ್ಥಿಕ ಹಕ್ಕುಗಳನ್ನು ವಿವರಿಸಿ .

ಒಬ್ಬ ವ್ಯಕ್ತಿಗೆ ತನ್ನ ಜೀವನಾವಶ್ಯಕತೆಗಳಾದ ಆಹಾರ , ಬಟ್ಟೆ , ವಸತಿ ಇವುಗಳನ್ನು ಪೂರೈಸುವ ಹಕ್ಕುಗಳನ್ನು ಆರ್ಥಿಕ ಹಕ್ಕು ಎನ್ನುವರು . ಈ ಹಕ್ಕುಗಳು ನಾಗರೀಕ ಜೀವನದ ಅವಿಭಾಜ್ಯ ಅಂಗವಾಗಿದೆ . ಆರ್ಥಿಕ ಹಕ್ಕುಗಳು ಕೆಳಗಿನಂತಿವೆ .

1. ಆಸ್ತಿಯ ಹಕ್ಕು : ಒಬ್ಬ ವ್ಯಕ್ತಿಯು ಆಸ್ತಿಯನ್ನು ಹೊಂದುವ , ಅನುಭವಿಸುವ ಮತ್ತು ಪರಭಾರೆ ಮಾಡುವ ಹಕ್ಕನ್ನು ಹೊಂದಿರುತ್ತಾನೆ . ಆಸ್ತಿಯು ಸಾಮಾಜಿಕ ಪ್ರಗತಿಯ ಸಂಕೇತವಾಗಿದೆ . ಆಸ್ತಿಯ ಹಕ್ಕು ಒಬ್ಬ ವ್ಯಕ್ತಿಗೆ ಭದ್ರತೆ ಮತ್ತು ಗೌರವವನ್ನು ನೀಡುತ್ತದೆ .

2. ಒಪ್ಪಂದದ ಹಕ್ಕು : ಪ್ರತಿಯೊಬ್ಬ ಪ್ರಜೆಯೂ ತನ್ನ ಆರ್ಥಿಕ ಚಟುವಟಿಕೆಗಳನ್ನು ಸುಗಮವಾಗಿ ಮಾಡಿಕೊಳ್ಳಲು ಸರ್ಕಾರ ಈ ಹಕ್ಕನ್ನು ಒದಗಿಸಿಕೊಟ್ಟಿದೆ . ಇದರ ಮೂಲಕ ಖಾಸಗಿ ವ್ಯಕ್ತಿಗಳು ಇತರರೊಂದಿಗೆ ತಮ್ಮ ವ್ಯಾಪಾರ – ವಹಿವಾಟುಗಳನ್ನು ಮುಂದುವರಿಸಬಹುದು .

3. ಉದ್ಯೋಗದ ಹಕ್ಕು : ಪ್ರತಿಯೊಬ್ಬ ಪ್ರಜೆಯು ಅವರ ಅರ್ಹತೆ ಮತ್ತು ಇಚ್ಛೆಗನುಗುಣವಾಗಿ ಉದ್ಯೋಗವನ್ನು ಹೊಂದುವ ಹಕ್ಕನ್ನು ಹೊಂದಿರುತ್ತಾನೆ . ಇದೇ ಉದ್ಯೋಗದ ಹಕ್ಕು . ವ್ಯಕ್ತಿ ಈ ಹಕ್ಕಿನ ಮೂಲಕ ತಮ್ಮ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಂಡು ಗೌರವಯುತವಾದ ಜೀವನ ನಡೆಸುತ್ತಾನೆ . ಇದು ವ್ಯಕ್ತಿಯ ಹಸಿವು , ಅಭದ್ರತೆ ಮತ್ತು ನಿರುದ್ಯೋಗದ ಭಯವನ್ನು ನಿವಾರಿಸುತ್ತದೆ . ಈ ಹಕ್ಕು ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಭರವಸೆಯ ಹಕ್ಕಾಗಿದೆ .

4. ವಿರಾಮ ಮತ್ತು ವಿಶ್ರಾಂತಿಯ ಹಕ್ಕು : ತನ್ನದೇ ಆದ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಹೊಂದಿರುವ ವ್ಯಕ್ತಿ ನಿರಂತರ ಕೆಲಸದ ನಡುವೆ ವಿಶ್ರಾಂತಿ ಪಡೆಯುವ ಹಕ್ಕನ್ನು ಹೊಂದಿದ್ದಾನೆ . ಒಬ್ಬ ವ್ಯಕ್ತಿಗೆ ತನ್ನ ಕಾವ್ಯದಲ್ಲಿ ಆಸಕ್ತಿ , ಹುರುಪು ಹಾಗೂ ಉತ್ಸಾಹವನ್ನು ಮೂಡಿಸುವುದರ ಮೂಲಕ ಕೆಲಸಕ್ಕೆ ಅಣಿಯಾಗುವಂತೆ ಮಾಡಲು ವಿಶ್ರಾಂತಿ ಮತ್ತು ವಿರಾಮದ ಹಕ್ಕು ಅವಶ್ಯಕವಾಗಿದೆ . ಈ ಹಕ್ಕು ವ್ಯಕ್ತಿಯ ಕಾರದಕ್ಷತೆ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ .

5. ಭೌತಿಕ ಸುಭದ್ರತೆಯ ಹಕ್ಕು : ಆಧುನಿಕ ಕಲ್ಯಾಣ ರಾಜ್ಯಗಳು ಪ್ರಜೆಗಳ ಯೋಗಕ್ಷೇಮಕ್ಕಾಗಿ ಹಲವಾರು ಯೋಜನೆಗಳು ಮತ್ತು ಕಾಠ್ಯಕ್ರಮಗಳ ಮೂಲಕ ಆಶಕ್ತರಿಗೆ ನೆರವು ನೀಡಲು ವಿವಿಧ ರೀತಿಯ ಸಹಾಯವನ್ನು ಮಾಡುತ್ತವೆ . ಉದಾ : ವೃದ್ಧರಿಗೆ ವೃದ್ಧಾಪ್ಯ ವೇತನ , ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ , ವಿಧವೆಯರಿಗೆ ಮಾಶಾಸನ , ಅಶಕ್ತರಿಗೆ ವೈದ್ಯಕೀಯ ನೆರವು . ಇವುಗಳ ಮೂಲಕ ಭದ್ರತೆಯನ್ನು ನೀಡುತ್ತವೆ .

6. ಉದ್ಯಮವನ್ನು ನಿಯಂತ್ರಿಸುವ ಹಕ್ಕು : ಈ ಹಕ್ಕು ಕಾರ್ಮಿಕರಿಗೆ ತಾವು ಕೆಲ ಮಾಡುತ್ತಿರುವ ಕೈಗಾರಿಕೆಗಳು ಹಾಗು ಇತರೆ ಉದ್ಯಮಗಳನ್ನು ನಿಯಂತ್ರಿಸುವ ಅವಕಾಶವನ್ನು ನೀಡುತ್ತದೆ . ಹಾಗೆಯೇ ಕಾರ್ಮಿಕರಿಗೆ ಉದ್ಯಮದ ನಿರ್ವಹಣೆ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡುತ್ತದೆ . ಕಾರ್ಮಿಕ ಸಂಘಗಳ ಸ್ಥಾಪನೆಗೂ ಈ ಹಕ್ಕು ಅವಕಾಶ ನೀಡಿದೆ . ,

ಹೆಚ್ಚುವರಿ ಪ್ರಶೋತ್ತರಗಳು

I. ಎರಡು ಅಂಕದ ಪ್ರಶ್ನೆಗಳು :

1 ) ಕಾನೂನಿನ ಅರ್ಥವನ್ನು ವಿವರಿಸಿ .

ವ್ಯಕ್ತಿಯ ಬಾಹ್ಯ ಚಟುವಟಿಕೆ , ವರ್ತನೆ ಹಾಗೂ ನಡವಳಿಕೆಗಳನ್ನು ನಿಯಂತ್ರಿಸುವ ನಿಯಮಗಳೇ ಕಾನೂನು ವ್ಯಕ್ತಿಯ ಆಂತರಿಕೆ ಭಾವನೆಗಳು ಹಾಗೂ ಆಲೋಚನೆಗಳಿಗೆ ಸಂಬಂಧಿಸಿರದೆ , ವ್ಯಕ್ತಿಯ ಬಾಹ್ಯ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸಿದೆ .

2) ಅಂತರ ರಾಷ್ಟ್ರೀಯ ಕಾನೂನು ಎಂದರೇನು ?

ವಿವಿಧ ರಾಷ್ಟ್ರಗಳ ನಡುವಿನ ಸಂಬಂಧವನ್ನು ನಿಯಂತ್ರಿಸುವ ನಿಯಮಗಳೇ ಅಂತರರಾಷ್ಟ್ರೀಯ ಕಾನೂನು . ಇವುಗಳಿಗೆ ಪರಮಾಧಿಕಾರದ ಬೆಂಬಲವಿರದೆ ಕೇವಲ ರಾಷ್ಟ್ರಗಳ ಸೌಜನಾತ್ಮಕ ಸಹಕಾರ ಮಾತ್ರ ಇದಕ್ಕಿರುವ ಶ್ರೀರಕ್ಷೆ .

3. ಸಂವಿಧಾನಾತ್ಮಕ ಕಾನೂನು ಎಂದರೇನು ?

ಅಧಿಕಾರ ಒಂದು ರಾಷ್ಟ್ರದ ಮೂಲಭೂತ ಕಾನೂನನ್ನು ಸಂವಿಧಾನಾತ್ಮಕ ಕಾನೂ ಎನ್ನುವರು . ಈ ಕಾನೂನು ಸರ್ಕಾರದ ಮತ್ತು ಇದರ ಅಂಗಗಳ ರಚನ ಹಾಗೂ ಕಾರಗಳನ್ನು ನಿರ್ಧರಿಸುತ್ತದೆ . ಹಾಗೆಯೇ ರಾಜ್ಯ ಮತ್ತು ಪ್ರಜೆಗಳ ನಡುವಿನ ಸಂಬಂಧವನ್ನು ನಿರ್ಧರಿಸುತ್ತದೆ .

4 ) ನೈಸರ್ಗಿಕ ಸ್ವಾತಂತ್ರ್ಯ ಎಂದರೇನು ?

ಅನಿರ್ಬಂಧಿತವಾದ ಸ್ವಾತಂತ್ರ್ಯವನ್ನು ನೈಸರ್ಗಿಕ ಸ್ವಾತಂತ್ರ್ಯ ಎನ್ನುವರು . ಇವರ ಪ್ರಕಾರ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ . ಇದು ಎರ್ಷ ದತ್ತವಾಗಿದ್ದು , ರಾಜ್ಯ ಮತ್ತು ಸಮಾಜ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ ಅಸ್ತಿತ್ವದಲ್ಲಿತ್ತೆಂದು ಹೇಳಲಾಗಿದೆ .

1st Puc Political Science Chapter 3 Notes in kannada

ಹತ್ತು ಅಂಕದ ಪ್ರಶ್ನೆಗಳು :

1 ) ನಾಗರಿಕ ಹಕ್ಕುಗಳೆಂದರೇನು ? ಅದರ ವಿಧಗಳನ್ನು ವಿವರಿಸಿ

ವ್ಯಕ್ತಿಯು ಸಮಾಜದಲ್ಲಿ ಶಾಂತಿಯುತವಾದ ಮತ್ತು ನೆಮ್ಮದಿಯ ಸಾಮಾಜಿಕ ಜೀವನ ನಡೆಸಲು ಅವಶ್ಯಕವಾಗಿರುವ ಹಕ್ಕುಗಳೇ ನಾಗರಿಕ ಹಕ್ಕುಗಳು , ರಾಜ್ಯದಲ್ಲಿರುವ ಎಲ್ಲರಿಗೂ ಈ ಹಕ್ಕನ್ನು ಅನುಭವಿಸುವ ಅಧಿಕಾರವಿದೆ . ಅವುಗಳೆಂದರೆ –

1 ಜೀವಿಸುವ ಹಕ್ಕು : ಇದು ನಾಗರಿಕ ಹಕ್ಕುಗಳಲ್ಲೇ ಅತಿ ಮುಖ್ಯವಾದುದು . ಮಾನವನು ಮೊದಲು ಜೀವಂತವಾಗಿರಬೇಕು . ಅನಂತರ ಉತ್ತಮ ಜೀವನ ಈ ಹಕ್ಕುಗಳು ಇಲ್ಲದಿದ್ದರೆ , ವ್ಯಕ್ತಿಗೆ ಮತ್ತು ಸಮಾಜಕ್ಕೆ ಭದ್ರತೆ ಇರುವುದಿಲ್ಲ .

2. ಕುಟುಂಬದ ಹಕ್ಕು : ಪ್ರತಿಯೊಬ್ಬ ವ್ಯಕ್ತಿಯು ವಿವಾಹವಾಗುವ , ಮಕ್ಕಳನ್ನು ಪಡೆಯುವ ಹಾಗೂ ಪಿತ್ರಾರ್ಜಿತ ಆಸ್ತಿಯನ್ನು ಹೊಂದುವ ಹಕ್ಕನ್ನು ಹೊಂದಿದ್ದಾನೆ . ಕುಟುಂಬವು ನಾಗರಿಕತೆಯ ತೊಟ್ಟಿಲು ಆಗಿರುವುದರಿಂದ ರಾಜ್ಯ ಮತ್ತು ಸಮಾಜದ ಒಳಿತಿಗಾಗಿ ಈ ಹಕ್ಕನ್ನು ನಿರ್ಬಂಧಿಸಬಹುದಾಗಿದೆ .

3. ಸ್ವಾತಂತ್ರ್ಯದ ಹಕ್ಕು : ಈ ಹಕ್ಕು ಅತ್ಯಂತ ಮುಖ್ಯವಾದ ಹಕ್ಕಾಗಿದ್ದು , ಕಾನೂನಿನ ಮಿತಿಯೊಳಗೆ , ವ್ಯಕ್ತಿಯು ಅನೇಕ ರೀತಿಯ ಸ್ವಾತಂತ್ರ್ಯಗಳನ್ನು ಅನುಭವಿಸಬಹುದು . ಪ್ರತಿಯೊಬ್ಬರು ಈ ಸ್ವಾತಂತ್ರ್ಯದ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಹಾಗೂ ರಾಜ್ಯದ ಎಲ್ಲೆಯೊಳಗೆ ತಮಗೆ ಬೇಕಾದ ಸ್ಥಳಗಳಲ್ಲಿ , ವಾಸಿಸುವ ಮತ್ತು ಸಂಚರಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ . ಆದರೆ ಈ ಹಕ್ಕುಗಳು ನಿರ್ಬಂಧಿತವಾದುದು ಮತ್ತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಇದನ್ನು ನಿಯಂತ್ರಿಸಬಹುದಾಗಿದೆ .

4. ಸಮಾನತೆಯ ಹಕ್ಕು : ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು ಹಾಗೂ ಯಾವುದೇ ರೀತಿಯ ತಾರತಮ್ಯತೆ ಇಲ್ಲದೆ ಪ್ರತಿಯೊಬ್ಬರು ರಾಜ್ಯದ ಸೌಲಭ್ಯ ಸವಲತ್ತು ಹಾಗು ರಕ್ಷಣೆಯನ್ನು ಪಡೆಯುವ ಮತ್ತು ಅನುಭವಿಸುವ ಹಕ್ಕಾಗಿದೆ . ಈ ವಿಶೇಷ ಸೌಲಭ್ಯಗಳನ್ನು ನೀಡುವುದನ್ನು ನಿಷೇಧಿಸುತ್ತದೆ . ಹಕ್ಕು

5. ವಾಕ್ ಮತ್ತು ಅಭಿವ್ಯಕ್ತ ಸ್ವಾತಂತ್ರ್ಯದ ಹಕ್ಕು : ಒಬ್ಬ ವ್ಯಕ್ತಿ ಸ್ವತಂತ್ರವಾಗಿ ಚಿಂತಿಸುವ ಹಾಗೂ ತನ್ನ ಅನಿಸಿಕೆಗಳನ್ನು ಅಭಿವ್ಯಕ್ತಿಗೊಳಿಸುವ ಅವಕಾಶವನ್ನು ನೀಡುವ ಹಕ್ಕುಗಳೇ ಈ ಹಕ್ಕಾಗಿದೆ . ಈ ಹಕ್ಕು ಪ್ರಜಾಪ್ರಭುತ್ವವನ್ನು ಸರಿಯಾದ ಜನವಿರೋಧ ನೀತಿ ಮತ್ತು ಕಾಠ್ಯಕ್ರಮಗಳನ್ನು ಟೀಕಿಸುವ ಅವಕಾಶ ನೀಡಿದೆ . ಆದರೆ ರಾಜ್ಯದ ಹಿತರಕ್ಷಣೆಗಾಗಿ ಈ ಹಕ್ಕನ್ನು ಸರ್ಕಾರ ನಿರ್ಬಂಧಿಸಬಹುದಾಗಿದೆ .

6. ಶೈಕ್ಷಣಿಕ ಹಕ್ಕು : ರಾಜ್ಯವು ತನ್ನ ಪ್ರಜೆಗಳ ಶಿಕ್ಷಣಕ್ಕೆ ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸುವುದಕ್ಕೆ ಶೈಕ್ಷಣಿಕ ಹಕ್ಕು ಎನ್ನುವರು . ಈ ಹಕ್ಕಿನ ಪ್ರಕಾರ ರಾಜ್ಯದ ಸಂಯೋಜನ ಹಾಗೂ ಅನುದಾನವನ್ನು ಪಡೆದಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ .

7. ಸಂಘ – ಸಂಸ್ಥೆಗಳ ಸ್ಥಾಪನೆಯ ಹಕ್ಕು :

ವ್ಯಕ್ತಿಯು ತನ್ನ ಆರ್ಥಿಕ , ಸಾಮಾಜಿಕ , ರಾಜಕೀಯ , ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಸ್ವಯಂ ಸೇವಾ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ಹೊಂದಿದ್ದಾನೆ . ಇದೇ ಈ ಹಕ್ಕು .

8. ಪತ್ರಿಕಾ ಸ್ವಾತಂತ್ರ್ಯದ ಹಕ್ಕು :

ಪ್ರತಿಯೊಬ್ಬ ಪೌರನು ತನ್ನ ಅನಿಸಿಕೆಗಳನ್ನು ಪತ್ರಿಕೆ ಮತ್ತು ಸಮೂಹ ಮಾದ್ಯಮಗಳ ಮೂಲಕ ವ್ಯಕ್ತಪಡಿಸಲು ಅವಕಾಶವನ್ನು ಈ ಹಕ್ಕು ನೀಡಿದೆ . ಈ ಹಕ್ಕಿನ ಮೂಲಕ ಅದಕ್ಷ ಸರ್ಕಾರದ ಕಾರವೈಖರಿಯನ್ನು ವಿರೋಧಿಸುವುದುರ ಮೂಲಕ ಸರ್ಕಾರವನ್ನು ಸರಿದಾರಿಗೆ ತರಬಹುದು . ರಾಜ್ಯವು ಸಮಾಜದಲ್ಲಿನ ಶಾಂತಿ , ಭದ್ರತೆಗಾಗಿ ಈ ಹಕ್ಕನ್ನು ನಿರ್ಬಂಧಿಸಬಹುದಾಗಿದೆ .

9. ಧಾರ್ಮಿಕ ಹಕ್ಕು : ಒಬ್ಬ ವ್ಯಕ್ತಿಯು ತನಗಿಷ್ಟ ಬಂದ ಧರ್ಮವನ್ನು ಅನುಸರಿಸುವ , ಪ್ರಚಾರ ಮಾಡುವ ಮತ್ತು ಬೋಧಿಸುವ ಸ್ವಾತಂತ್ರ್ಯ ಹೊಂದಿರುವುದೇ ಧಾರ್ಮಿಕ ವಿಧಿಸುತ್ತದೆ . ಸ್ವಾತಂತ್ರ್ಯ ರಾಜ್ಯ ಈ ನಿಟ್ಟಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಆದರೆ ಕೆಲವು ನಿಯಂತ್ರಣಗಳನ್ನು

10. ಸಾಂಸ್ಕೃತಿಕ ಹಕ್ಕು : ಯಾವುದೇ ಒಂದು ಜನಾಂಗವು ತನ್ನ ಭಾಷೆ ಹಾಗೂ ಸಾಂಸ್ಕೃತಿಕ ಹಕ್ಕು . ಲಿಪಿಯನ್ನು ಅಭಿವೃದ್ಧಿಪಡಿಸುವ ಮತ್ತು ಸಂರಕ್ಷಿಸುವ ಹಕ್ಕನ್ನು ಹೊಂದಿರುತ್ತದೆ .\

FAQ

1 ) ಜೀನ್‌ ಜೋಡಿನ್ ಬರೆದ ಪುಸ್ತಕವನ್ನು ಹೆಸರಿಸಿ .

‘ ಸಿಕ್ಸ್‌ ಬುಕ್ಸ್ ಆನ್ ದಿ ರಿಪಬ್ಲಿಕ್ ‘ ಅಥವಾ ‘ ಡಿ ರಿಪಬ್ಲಿಕ್ ‘ ಗ್ರಂಥ .

2 ) ಕಾನೂನು ಎಂದರೇನು ?

ರಾಜ್ಯ ತನ್ನ ಪ್ರಜೆಗಳ ಸಾಧಾರಣ ವರ್ತನೆಯನ್ನು ನಿರ್ಧರಿಸಲು ಮತ್ತು ನಿಯಂತ್ರಿಸಲು ರೂಪಿಸುವ ನಿಯಮಗಳೇ ಕಾನೂನು .

ಇತರೆ ವಿಷಯಗಳು :

First PUC All Textbooks Pdf

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

All Notes App

Leave a Reply

Your email address will not be published. Required fields are marked *

rtgh