ಪ್ರಥಮ ಪಿ.ಯು.ಸಿ ಅಧ್ಯಾಯ-4 ಸಂವಿಧಾನ ಮತ್ತು ಸರ್ಕಾರ ರಾಜ್ಯಶಾಸ್ತ್ರ ನೋಟ್ಸ್, 1st Puc Political Science Chapter 4 Question Answer Notes Pdf Download samvidhana mattu sarkara Constitution and Government in Kannada Notes Kseeb Solution For Class11 Chapter 4 Notes Pdf In Kannada Medium
1st Puc Political Science Chapter 4 Notes
1. ಸಂವಿಧಾನದ ಮೂಲ ಪದ ಯಾವುದು ?
ಗ್ರೀಕ್ ಭಾಷೆಯ ‘ ಕಾನ್‌ಸ್ಟಿಟ್ಯೂಟ್ ‘ ಪದವು ಸಂವಿಧಾನದ ಮೂಲ ಪದ .
2. ಸಂವಿಧಾನ ಎಂದರೇನು ?
ರಾಷ್ಟ್ರದ ಮೂಲಭೂತ ಶಾಸನವೇ ಸಂವಿಧಾನ .
3. ಸಂವಿಧಾನಾತ್ಮಕ ಸರ್ಕಾರ ಎಂದರೇನು ?
ಸಂವಿಧಾನದ ನಿಯಮಗಳಿಗನುಗುಣವಾಗಿ ಕಾರ್ಯ ನಿರ್ವಹಿಸುವ ಸರ್ಕಾರವೇ ಸಂವಿಧಾನಾತ್ಮಕ ಸರ್ಕಾರ ,
4. ಲಿಖಿತ ಸಂವಿಧಾನ ಎಂದರೇನು ?
ಬರವಣಿಗೆ ರೂಪದಲ್ಲಿರುವ ಸಂವಿಧಾನವೇ ಲಿಖಿತ ಸಂವಿಧಾನ .
5. ಅಲಿಖಿತ ಸಂವಿಧಾನ ಎಂದರೇನು ?
ಬರವಣಿಗೆ ರೂಪದಲ್ಲಿರದ ಸಂವಿಧಾನವೇ ಅಲಿಖಿತ ಸಂವಿಧಾನ .
6. ಅನಮ್ಯ ಸಂವಿಧಾನ ಎಂದರೇನು ?
ಯಾವ ಸಂವಿಧಾನವನ್ನು ಸಾಮಾನ್ಯ ತಿದ್ದುಪಡಿ ವಿಧಾನದ ಮೂಲಕ ತಿದ್ದುಪಡಿ ಮಾಡಲು ಸಾಧ್ಯವಾಗದೆ ವಿಶೇಷ ವಿಧಾನದ ಮೂಲಕ ತಿದ್ದುಪಡಿ ಮಾಡಬೇಕಾಗುತ್ತದೋ ಅದೇ ಅನವ್ಯ ಸಂವಿಧಾನ .
7. ನವ್ಯ ಸಂವಿಧಾನ ಎಂದರೇನು ?
ಯಾವ ಸಂವಿಧಾನವನ್ನು ಸಾಮಾನ್ಯ ತಿದ್ದುಪಡಿ ವಿಧಾನದ ಆಧಾರದ ಮೇಲೆ ತಿದ್ದುಪಡಿ ಮಾಡಬಹುದೋ ಅಂತಹ ಸಂವಿಧಾನವೇ ನವ್ಯ ಸಂವಿಧಾನ .
8. ಲಿಖಿತ ಸಂವಿಧಾನಕ್ಕೆ ಉತ್ತಮ ಉದಾಹರಣೆ ಕೊಡಿ .
ಲಿಖಿತ ಸಂವಿಧಾನಕ್ಕೆ ಉತ್ತಮ ಉದಾಹರಣೆ ಅಮೇರಿಕಾದ ಸಂವಿಧಾನ .
9. ಅಲಿಖಿತ ಸಂವಿಧಾನಕ್ಕೆ ಉತ್ತಮ ಉದಾಹರಣೆ ಕೊಡಿ .
ಅಲಿಖಿತ ಸಂವಿಧಾನಕ್ಕೆ ಉತ್ತಮ ಉದಾಹರಣೆ ಇಂಗ್ಲೆಂಡಿನ ಸಂವಿಧಾನ .
10. ಅನಮ್ಯ ಸಂವಿಧಾನಕ್ಕೆ ಉತ್ತಮ ಉದಾಹರಣೆ ಕೊಡಿ .
ಅನಮ್ಯ ಸಂವಿಧಾನಕ್ಕೆ ಉತ್ತಮ ಉದಾಹರಣೆ ಅಮೇರಿಕಾದ ಸಂವಿಧಾನ .
11. ನಮ್ಯ ಸಂವಿಧಾನಕ್ಕೆ ಉತ್ತಮ ಉದಾಹರಣೆ ಕೊಡಿ .
ನಮ್ಯ ಸಂವಿಧಾನಕ್ಕೆ ಉತ್ತಮ ಉದಾಹರಣೆ ಇಂಗ್ಲೆಂಡಿನ ಸಂವಿಧಾನ .
12. ಪ್ರಜಾಸತಾತ್ಮಕ ಸರ್ಕಾರ ಎಂದರೇನು ?
ಜನರ ಆಳ್ವಿಕೆಯೇ ಪ್ರಜಾಸತಾತ್ಮಕ ಸರ್ಕಾರ .
13. ನೇರ ಪ್ರಜಾಪ್ರಭುತ್ವದ ಅರ್ಥವನ್ನು ನೀಡಿ .
ಜನರು ನೇರವಾಗಿ ಸ್ವತಃ ರಾಜ್ಯಾಡಳಿತದಲ್ಲಿ ಭಾಗವಹಿಸುವ ರಾಜಕೀಯ ವ್ಯವಸ್ಥೆಯೇ ನೇರ ಪ್ರಜಾಪ್ರಭುತ್ವ
14. ನೇರ ಪ್ರಜಾಪ್ರಭುತ್ವಕ್ಕೆ ಒಂದು ಉದಾಹರಣೆ ನೀಡಿ .
ಗ್ರಾಮ ಪಂಚಾಯತ್‌ನ ಗ್ರಾಮಸಭೆ
15. ಪರೋಕ್ಷ ಪ್ರಜಾಪ್ರಭುತ್ವದ ಅರ್ಥವನ್ನು ನೀಡಿ .
ಪ್ರಜೆಗಳು ಪರೋಕ್ಷವಾಗಿ ರಾಜ್ಯಾಡಳಿತದಲ್ಲಿ ಭಾಗವಹಿಸುವ ರಾಜಕೀಯ ವ್ಯವಸ್ಥೆಯೇ ಪರೋಕ್ಷ ಪ್ರಜಾಪ್ರಭುತ್ವ
16. ಪರೋಕ್ಷ ಪ್ರಜಾಪ್ರಭುತ್ವಕ್ಕೆ ಒಂದು ಉದಾಹರಣೆ ನೀಡಿ .
ಪ್ರತಿನಿಧಿ ಪ್ರಜಾಪ್ರಭುತ್ವ ,
17. ನಿರಂಕುಶ ಸರ್ಕಾರ ಎಂದರೇನು ?
ರಾಷ್ಟ್ರದ ಸಮಸ್ತ ಅಧಿಕಾರ ಒಬ್ಬ ಬಲಿಷ್ಟ ವ್ಯಕ್ತಿ ಅಥವಾ ಗುಂಪಿನಲ್ಲಿ ಕೇಂದ್ರೀಕೃತವಾಗಿದ್ದರೆ ಇಂತಹ ಸರ್ಕಾರವನ್ನು ನಿರಂಕುಶ ಸರ್ಕಾರ ಎನ್ನುವರು .
18. ನಿರಂಕುಶ ಸರ್ಕಾರಕ್ಕೆ ಒಂದು ಉದಾಹರಣೆ ಕೊಡಿ .
ಹಿಟ್ಲರ್ ಸರ್ಕಾರ .
19. ಪುರಾತನ ನಿರಂಕುಶತ್ವ ಎಂದರೇನು ?
ತುರ್ತು ಮತ್ತು ಆಪತ್ಕಾಲಿಕ ಸನ್ನಿವೇಷಗಳನ್ನು ನಿಭಾಯಿಸಲು ತಾತ್ಕಾಲಿಕವಾಗಿ ಅಸ್ತಿತ್ವಕ್ಕೆ ಬಂದು ಸಮಸ್ಯೆಗಳು ಬಗೆಹರಿದ ಕೂಡಲೆ ಅನುಷ್ಟಾನವಾಗುವವೇ ಪುರಾತನ ನಿರಂಕುಶತ್ವ .
20. ಪುರಾತನ ನಿರಂಕುಶತ್ವಕ್ಕೆ ಒಂದು ಉದಾಹರಣೆ ಕೊಡಿ .
ರೋಮನ್ ಸರ್ಕಾರ .
21. ಆಧುನಿಕ ನಿರಂಕುಶತ್ವ ಎಂದರೇನು ?
ಮೂಲಕ ಅಧಿಕಾರಕ್ಕೆ ಬಂದು ನಿರಂತರವಾಗಿ ಅಧಿಕಾರವನ್ನು ಅನುಭವಿಸಲು ಕಾನೂನು ಬದ್ಧದಲ್ಲಿರುವ ರೀತಿಯಲ್ಲಿ ದೌರ್ಜನ್ಯದಿಂದ ಶಕ್ತಿಬಲದಿಂದ , ಕ್ರಾಂತಿಯ ಪ್ರಯತ್ನಿಸುವುದೇ ಆಧುನಿಕ ನಿರಂಕುಶತ್ವ
22. ಆಧುನಿಕ ನಿರಂಕುಶತ್ವಕ್ಕೆ ಒಂದು ಉದಾಹರಣೆ ಕೊಡಿ .
ಆಧುನಿಕ ನಿರಂಕುಶತ್ವಕ್ಕೆ ಉದಾಹರಣೆ ಇಟಲಿಯ ಮುಸಲೋನಿ
23. ಪ್ರಜಾಪ್ರಭುತ್ವದ ಮೂಲಪದ ಯಾವುದು ?
ಪ್ರಜಾಪ್ರಭುತ್ವದ ಮೂಲಪದ ಗ್ರೀಕ್ ಪದಗಳಾದ “ ಡೆಮೋಸ್ ” ಮತ್ತು “ ಕಾಟೆಯೊ ”
24. ಸಂಸದೀಯ ಸರ್ಕಾರ ಎಂದರೇನು ?
ಕಾರ್ಯಾಂಗವು ಶಾಸಕಾಂಗದಿಂದ ಸೃಷ್ಟಿಸಲ್ಪಟ್ಟಿದ್ದು , ಕಾರ್ಯಾಂಗದ ಅಸ್ತಿತ್ವ ಶಾಸಕಾಂಗದ ಇಚ್ಛೆಗೆ ಒಳಪಟ್ಟಿದ್ದರೆ ಅಂತಹ ಸರ್ಕಾರವನ್ನು ಸಂಸದೀಯ ಸರ್ಕಾರ ಎನ್ನುವರು .
25. ಸಂಸದೀಯ ಸರ್ಕಾರಕ್ಕೆ ಒಂದು ಉದಾಹರಣೆ ಕೊಡಿ .
ಸಂಸದೀಯ ಸರ್ಕಾರಕ್ಕೆ ಉತ್ತಮ ಉದಾಹರಣೆ ಇಂಗ್ಲೆಂಡ್ ,
26. ಅಧ್ಯಕ್ಷೀಯ ಸರ್ಕಾರ ಎಂದರೇನು ?
ಪ್ರಜೆಗಳಿಂದ ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ನಿರ್ಧಿಷ್ಟ ಅವಧಿಗೆ ಚುನಾಯಿತರಾದ ಅಧ್ಯಕ್ಷರು ಆಡಳಿತ ನಡೆಸುವ ಸರ್ಕಾರವೇ ಅಧ್ಯಕ್ಷೀಯ ಸರ್ಕಾರ .
27. ಅಧ್ಯಕ್ಷೀಯ ಸರ್ಕಾರಕ್ಕೆ ಒಂದು ಉದಾಹರಣೆ ಕೊಡಿ .
ಅಧ್ಯಕ್ಷೀಯ ಸರ್ಕಾರಕ್ಕೆ ಒಂದು ಉದಾಹರಣೆ ಅಮೇರಿಕಾ . 28. ‘ ಫೆಡರೇಷನ್ ‘ ನ ಮೂಲ ಪದ ಯಾವುದು ? ಲ್ಯಾಟೀನ್ ಭಾಷೆಯ “ ಪ್ಯೂಡಸ್ ” ‘ ಫೆಡರೇಷನ್ ‘ ನ ಮೂಲ ಪದ
29. ಸಂಯುಕ್ತ ಸರ್ಕಾರ ಎಂದರೇನು ?
ರಾಷ್ಟ್ರದ ಸಮಸ್ತ ಅಧಿಕಾರ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂವಿಧಾನಾತ್ಮಕವಾಗಿ ಹಂಚಲ್ಪಟ್ಟಿದ್ದರೆ ಅಂತಹ ಸರ್ಕಾರವನ್ನು ಸಂಯುಕ್ತ ಸರ್ಕಾರ ಎನ್ನುವರು .
30. ಸಂಯುಕ್ತ ಸರ್ಕಾರಕ್ಕೆ ಒಂದು ಉದಾಹರಣೆ ಕೊಡಿ .
ಸಂಯುಕ್ತ ಸರ್ಕಾರಕ್ಕೆ ಉತ್ತಮ ಉದಾಹರಣೆ ಅಮೇರಿಕಾ
31. ಏಕಾತ್ಮಕ ಸರ್ಕಾರ ಎಂದರೇನು ?
ರಾಷ್ಟ್ರದ ಸಮಸ್ತ ಅಧಿಕಾರ ಕೇಂದ್ರಸರ್ಕಾರ ವೊಂದರಲ್ಲೇ ಕೇಂದ್ರೀಕೃತವಾಗಿದ್ದರೆ ಅಂತಹ ಸರ್ಕಾರವೇ ಏಕಾತ್ಮಕ ಸರ್ಕಾರ .
32. ಏಕಾತ್ಮಕ ಸರ್ಕಾರಕ್ಕೆ ಒಂದು ಉದಾಹರಣೆ ಕೊಡಿ .
ಏಕಾತ್ಮಕ ಸರ್ಕಾರಕ್ಕೆ ಉತ್ತಮ ಉದಾಹರಣೆ ಇಂಗ್ಲೆಂಡ್ .
1 Puc Political Science Notes in Kannada Chapter 4
II . ಎರಡು ಅಂಕದ ಪ್ರಶ್ನೆಗಳು :
1. ಸಂವಿಧಾನದ ಅರ್ಥವನ್ನು ತಿಳಿಸಿ .
ಒಂದು ರಾಷ್ಟ್ರದಲ್ಲಿ ಸರ್ಕಾರವು ಯಾವ ನಿಯಮಗಳಿಗನುಗುಣವಾಗಿ ಆಳ್ವಿಕೆ ನಿರ್ವಹಿಸುತ್ತಾರೆಯೋ ಅಂತಹ ನಿಯಮಗಳ ಸಂಕಲವೇ ಸಂವಿಧಾನ ಇದನ್ನು ರಾಷ್ಟ್ರದ ನಡೆಸುತ್ತದೆಯೋ ಹಾಗೂ ಪ್ರಜೆಗಳು ಹಕ್ಕುಗಳನ್ನು ಅನುಭವಿಸಿ ಕರ್ತವ್ಯವನ್ನು ಮೂಲಭೂತ ಶಾಸನ ಎನ್ನುವರು .
2. ಸಂವಿಧಾನಾತ್ಮಕ ಸರ್ಕಾರದ ಅರ್ಥವನ್ನು ಬರೆಯಿರಿ .
ಸಂವಿಧಾನದ ನಿಯಮಗಳು ಹಾಗೂ ತತ್ವಗಳಿಗನುಗುಣವಾಗಿ ಕಾರ್ಯನಿರ್ವಹಿಸುವ ಸರ್ಕಾರವೇ ಸಂವಿಧಾನಾತ್ಮಕ ಸರ್ಕಾರ ,
ಈ ವ್ಯವಸ್ಥೆಯಲ್ಲಿ ಸರ್ಕಾರದ ಅಂಗಗಳಾದ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂಗಗಳ ರಚನೆ , ಅಧಿಕಾರ ಕಾರ್ಯವ್ಯಾಪ್ತಿಯನ್ನು ಸಂವಿಧಾನವೇ ನಿರ್ಧರಿಸುತ್ತದೆ .
3. ಲಿಖಿತ ಸಂವಿಧಾನವನ್ನು ವ್ಯಾಖ್ಯಾನಿಸಿ .
ಸಂವಿಧಾನ ರಚನಾ ಸಮಿತಿಯಿಂದ ತಜ್ಞರ ಮೂಲಕ ಪ್ರಜ್ಞಾಪೂರ್ವಕವಾಗಿ ರಚಿಸಲ್ಪಟ್ಟ ಸಂವಿಧಾನವೇ ಲಿಖಿತ ಸಂವಿಧಾನ . ಇಲ್ಲಿ ಸರ್ಕಾರದ ಅಂಗ ರಚನೆ ಮತ್ತು ಮೂಲತತ್ವಗಳು ಒಂದು ಅಥವಾ ಹಲವು ದಾಖಲೆಗಳಲ್ಲಿರುತ್ತದೆ .
4. ಅಲಿಖಿತ ಸಂವಿಧಾನವನ್ನು ವ್ಯಾಖ್ಯಾನಿಸಿ .
ಸರ್ಕಾರದ ಮೂಲತತ್ವ , ಅಂಗರಚನೆ , ಆಡಳಿತ ವಿಧಾನ ಮತ್ತು ಪ್ರಜೆಗಳ ಹಕ್ಕುಬಾದ್ಯತೆಗಳು ಲಿಖಿತ ರೂಪದಲ್ಲಿರದೆ ಕಾಲಕ್ರಮೇಣ ವಿಕಸಿತಗೊಂಡು ರೂಢಿ , ಪದ್ಧತಿಗಳು ಮತ್ತು ಸಂಪ್ರದಾಯಗಳ ಮೂಲಕ ರೂಪಿಸಲ್ಪಟ್ಟಿರುವುದನ್ನು ಅಲಿಖಿತ ಸಂವಿಧಾನ ಎನ್ನುವರು .
5. ಅನಮ್ಯ ಸಂವಿಧಾನವನ್ನು ವ್ಯಾಖ್ಯಾನಿಸಿ .
ಯಾವ ಸಂವಿಧಾನದಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನುಗಳ ನಡುವೆ ವ್ಯತ್ಯಾಸವಿರುತ್ತದೆಯೋ ಅಂತಹ ಸಂವಿಧಾನದ ತಿದ್ದುಪಡಿಗೆ ವಿಶೇಷ ವಿಧಾನದ ಅವಶ್ಯಕತೆ ಇರುತ್ತದೆಯೋ ಅಂತಹ ಸಂವಿಧಾನವೇ ಅನಮ್ಯ ಸಂವಿಧಾನ .
6. ನಮ್ಮ ಸಂವಿಧಾನವನ್ನು ವ್ಯಾಖ್ಯಾನಿಸಿ .
ಯಾವ ಸಂವಿಧಾನದಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನುಗಳ ನಡುವೆ ವ್ಯತ್ಯಾಸವಿರುವುದಿಲ್ಲವೋ ಹಾಗೆಯೇ ಅಂತಹ ಸಂವಿಧಾನದ ತಿದ್ದುಪಡಿಗೆ ವಿಶೇಷ ವಿಧಾನದ ಅವಶ್ಯಕತೆ ಇರುವುದಿಲ್ಲವೋ ಅಂತಹ ಸಂವಿಧಾನವೇ ನಮ್ಮ ಸಂವಿಧಾನ .
7. ಪ್ರಜಾಸತಾತ್ಮಕ ಸರ್ಕಾರದ ಅರ್ಥವನ್ನು ಬರೆಯಿರಿ .
ಪ್ರಜಾಸತಾತ್ಮಕ ಸರ್ಕಾರ ಎಂದರೆ ಪ್ರಜೆಗಳ ಅಧಿಕಾರ , ಪ್ರಜೆಗಳ ಇಚ್ಚೆಯ ಮೇಲೆ ಪ್ರಜಾಶಕ್ತಿಯ ಆಧಾರದ ಮೇಲಿರುವ ಸರ್ಕಾರವಾಗಿದ್ದು ಪ್ರಜೆಗಳೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರತಿನಿಧಿಗಳ ಮೂಲಕ ನಡೆಸುವ ರಾಜ್ಯಭಾರವಾಗದೆ ಇದು ಪ್ರಜೆಗಳ ಸರ್ಕಾರವಾಗಿದ್ದು ಇಲ್ಲಿ ಪ್ರಜೆಗಳೇ ಪ್ರಭುಗಳಾಗಿರುತ್ತಾರೆ .
8. ನಿರಂಕುಶತ್ವ ಸರ್ಕಾರದ ಅರ್ಥವೇನು ?
ಒಬ್ಬ ಬಲಿಷ್ಠ ಅಥವಾ ಒಂದು ಬಲಿಷ್ಠ ಗುಂಪಿನ ಆಳ್ವಿಕೆಯೇ ನಿರಂಕುಶತ್ವ ಸರ್ಕಾರವಾಗಿದೆ . ಈ ಸರ್ಕಾರವು ಶಕ್ತಿ ಮತ್ತು ಬಲದ ಆಧಾರದ ಮೇಲೆ ನೆಲೆ ನಿಂತಿರುತ್ತದೆ . ಇಲ್ಲಿ ಪ್ರಜೆಗಳ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿರುವುದಿಲ್ಲ .
9. ಸಂಸದೀಯ ಸರ್ಕಾರದ ಅರ್ಥವೇನು ?
ಕಾರಾಂಗ ಶಾಸಕಾಂಗದಿಂದ ಸೃಷ್ಟಿಸಲ್ಪಟ್ಟದ್ದು ಕಾರಾಂಗದ ಅಸ್ತಿತ್ವ ಶಾಸಕಾಂಗದ ಇಚ್ಛೆಗೆ ಒಳಪಟ್ಟಿದ್ದಾರೆ . ಅಂತಹ ಸರ್ಕಾರವನ್ನು ಸಂಸದೀಯ ಸರ್ಕಾರ ಎನ್ನುವರು . ಇಲ್ಲಿ ಕಾರಾಂಗಕ್ಕೆ ಶಾಸಕಾಂಗದ ಬೆಂಬಲ ಇರುವವರೆಗೆ ಸರ್ಕಾರ ಅಧಿಕಾರದಲ್ಲಿರುತ್ತಾರೆ .
10. ಅಧ್ಯಕ್ಷೀಯ ಸರ್ಕಾರದ ಅರ್ಥವೇನು ?
ರಾಷ್ಟ್ರಾಧ್ಯಕ್ಷರೇ ರಾಜ್ಯ ಹಾಗೂ ಸರ್ಕಾರಳೆರಡರ ಮುಖ್ಯಸ್ಥರಾಗಿರುವ ಪದ್ಧತಿಯನ್ನು ಅಧ್ಯಕ್ಷೀಯ ಸರ್ಕಾರ ಎನ್ನುವರು . ಇಲ್ಲಿ ಸಂಸದೀಯ ಸರ್ಕಾರದಲ್ಲಿರುವಂತೆ ನಾಮಮಾತ್ರ ಕಾರಾಂಗ ಮತ್ತು ನೈಜ ಕಾರಾಂಗಗಳ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ . ಇಲ್ಲಿ ಕಾಲ್ಯಾಂಗ ಶಾಸಕಾಂಗಕ್ಕೆ ಹೊಣೆಯಾಗಿರುವುದಿಲ್ಲ .
11. ಸಂಯುಕ್ತ ಸರ್ಕಾರದ ಅರ್ಥವೇನು ?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂವಿಧಾನಾತ್ಮಕವಾಗಿ ಅಧಿಕಾರ ವಿಭಜನೆಯಾಗಿದ್ದರೆ , ಅದನ್ನು ಸಂಯುಕ್ತ ಅಥವಾ ವಿಭಜನೆಯಾಗಿದ್ದರೆ , ಅದನ್ನ ಸಂಯುಕ್ತ ಅಥವಾ ಒಕ್ಕೂಟ ಸರ್ಕಾರ ಎನ್ನುವರು ಇಲ್ಲಿ ರಾಜ್ಯ ಸರ್ಕಾರಗಳು ಸ್ವತಂತ್ರ್ಯವಾದ ಅಸ್ತಿತ್ವವನ್ನು ಹೊಂದಿರುತ್ತವೆ .
12. ಏಕಾತ್ಮಕ ಸರ್ಕಾರದ ಅರ್ಥವೇನು ?
ರಾಜ್ಯಾಧಿಕಾರವೆಲ್ಲವೂ ಕೇಂದ್ರ ಸರ್ಕಾರದಲ್ಲಿ ಕೇಂದ್ರೀಕೃತವಾಗಿದ್ದರೆ , ಅಂತಹ ಸರ್ಕಾರವನ್ನು ಏಕಾತ್ಮಕ ಸರ್ಕಾರ ಎನ್ನುವರು . ಇಲ್ಲಿ ಪ್ರಾಂತೀಯ ಸರ್ಕಾರಗಳು ಸ್ವತಂತ್ರ್ಯವಾದ ಅಸ್ತಿತ್ವವನ್ನು ಹೊಂದಿರುವುದಿಲ್ಲ .
II . ಐದು ಅಂಕದ ಪ್ರಶ್ನೆಗಳು :
1. ಸಂವಿಧಾನದ ಮಹತ್ವವನ್ನು ವಿವರಿಸಿ .
ಆಧುನಿಕ ರಾಜ್ಯಗಳು ಸಂವಿಧಾನಾತ್ಮಕ ರಾಜ್ಯಗಳು , ಪ್ರತಿಯೊಂದು ರಾಜ್ಯವು ತನ್ನದೇ ಆದ ಸಂವಿಧಾನವನ್ನು ಹೊಂದಿರುತ್ತದೆ . ಸಂವಿಧಾನವಿಲ್ಲದ ರಾಜ್ಯವನ್ನು ಊಹಿಸಿಕೊಳ್ಳುವುದು ಅಸಾಧ್ಯ . ಈ ಸಂವಿಧಾನದ ಮಹತ್ವವನ್ನು ಕೆಳಗಿನಂತೆ ಕಾಣಬಹುದು .
1. ಸರ್ಕಾರದ ನಿರಂಕುಶಾಧಿಕಾರವನ್ನು ಮತ್ತು ಕಾವ್ಯ ವೈಕರಿಯನ್ನು ಸಂವಿಧಾನ ನಿಯಂತ್ರಿಸುತ್ತದೆ .
2. ಪ್ರಜೆಗಳ ಅಭಿವೃದ್ಧಿಯನ್ನು ಸಾಧಿಸಲು ಸಂವಿಧಾನ ಸರ್ಕಾರವನ್ನು ನಿಯಂತ್ರಿಸುತ್ತದೆ .
3. ಸಂವಿಧಾನ ಜನರ ವರ್ತನೆಯನ್ನು ನಿಯಂತ್ರಿಸುತ್ತದೆ . ಹಾಗೆಯೇ ಆಡಳಿತ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ .
4. ರಾಷ್ಟ್ರದ ಮತ್ತು ಪ್ರಜೆಗಳ ಭದ್ರತೆಗೆ ಸಂವಿಧಾನ ಅವಶ್ಯಕವಾಗಿದೆ .
5. ದೇಶದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪನೆಗೆ ಸಂವಿಧಾನ ಅಗತ್ಯವಾಗಿದೆ . ಸಂವಿಧಾನವಿಲ್ಲದೆ ಇರುವ ರಾಜ್ಯ ಅದೊಂದು ಅಜಾಗರೂಕತೆಯ ನಾಡು ,
6. ಆಡಳಿತ ಯಂತ್ರದ ಸರಳ ಮತ್ತು ಸುವ್ಯವಸ್ಥೆಗಾಗಿ ಸಂವಿಧಾನ ಅನಿವಾರವಾಗಿದೆ . ಸಂವಿಧಾನವಿಲ್ಲದ ರಾಜ್ಯವನ್ನು ಊಹಿಸಲಸಾಧ್ಯ . ಆದುದರಿಂದ ರಾಷ್ಟ್ರದ ಮೂಲಭೂತ ಶಾಸನವಾದ ಸಂವಿಧಾನ ದೇಶಕ್ಕೆ ಅವಶ್ಯಕವಾಗಿದ್ದು ಮಹತ್ವಸ್ಥಾನ ಪಡೆದಿದೆ .
2. ಸಂವಿಧಾನಾತ್ಮಕ ಸರ್ಕಾರದ ಲಕ್ಷಣಗಳನ್ನು ವಿವರಿಸಿ .
ಸಂವಿಧಾನದ ನೀತಿ , ನಿಯಮಗಳಿಗನುಗುಣವಾಗಿ ಕಾರ ನಿರ್ವಹಿಸುವ ಸರ್ಕಾರವೇ ಸಂವಿಧಾನಾತ್ಮಕ ಸರ್ಕಾರವಾಗಿದ್ದು , ಇದರ ಲಕ್ಷಣಗಳು ಇಂತಿವೆ .
1. ಸಂವಿಧಾನದ ಸಾರ್ವಭೌಮತ್ವ : ಇಲ್ಲಿ ಸರ್ಕಾರವು ಸಂವಿಧಾನಕ್ಕನುಗುಣವಾಗಿ ಕಾರ ನಿರ್ವಹಿಸುತ್ತದೆ . ಸರ್ಕಾರದ 3 ಅಂಗಗಳ ಅಧಿಕಾರ ಮತ್ತು ಕಾವ್ಯಗಳನ್ನು ಸಂವಿಧಾನ ಸ್ಪಷ್ಟಪಡಿಸಿರುತ್ತದೆ . ಅದಕ್ಕನುಗುಣವಾಗಿ ಅವುಗಳ ಕಾರ ನಿರ್ವಹಿಸಬೇಕು .
2. ಕಾನೂನಿನ ದೃಷ್ಟಿಯಲ್ಲಿ ಸಮಾನತೆ : ರಾಜ್ಯದ ಪ್ರಜೆಗಳೆಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ . ಇಲ್ಲಿ ಯಾವುದೇ ತಾರತಮ್ಯವಿಲ್ಲದೆ ಕಾನೂನು ಆಳುವ ಮತ್ತು ಆಳಿಸಿಕೊಳ್ಳುವ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ .
3. ವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ : ಸಂವಿಧಾನವು ಪ್ರಜೆಗಳಿಗೆ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡುವುದರೊಂದಿಗೆ , ಪ್ರಜೆಗಳ ಹಕ್ಕುಗಳಿಗೆ ಸಂವಿಧಾನಾತ್ಮಕ ರಕ್ಷಣೆಯನ್ನು ಒದಗಿಸಿದೆ .
4. ಪ್ರತಿನಿಧಿ ಸರ್ಕಾರ : ಸಂವಿಧಾನಾತ್ಮಕ ಸರ್ಕಾರಗಳು ಪ್ರಜೆಗಳು ಇಚ್ಛೆಗನುಗುಣವಾಗಿ ರಚನೆಯಾಗುತ್ತದೆ . ಇದು ಪ್ರತಿನಿಧಿ ಸರ್ಕಾರವನ್ನು ಒದಗಿಸುತ್ತದೆ .
3. ಲಿಖಿತ ಸಂವಿಧಾನದ ಲಕ್ಷಣಗಳನ್ನು ವಿವರಿಸಿ .
ಸಂವಿಧಾನ ರಚನಾ ಸಮಿತಿಯಿಂದ ತಜ್ಞರ – ಮೂಲಕ ಪ್ರಜ್ಞಾಪೂರ್ವಕವಾಗಿ ರಚಿಸಲ್ಪಟ್ಟ ಸಂವಿಧಾನವೇ ಲಿಖಿತ ಸಂವಿಧಾನ . ಇದರ ಲಕ್ಷಣಗಳು ಇಂತಿವೆ .
ಸಂವಿಧಾನ ರಚನಾ ಸಮಿತಿಯಿಂದ ತಜ್ಞರ ಮೂಲಕ ಪ್ರಜ್ಞಾಪೂರ್ವಕವಾಗಿ ರಚಿಸಲ್ಪಟ್ಟ ಸಂವಿಧಾನವೇ ಲಿಖಿತ . ಸಂವಿಧಾನವಾಗಿದ್ದು ಇದರ ಲಕ್ಷಣಗಳು ಕೆಳಗಿನಂತಿವೆ .
1. ಸರ್ಕಾರದ ಅಂಗರಚನೆ ಮತ್ತು ಇತರ ಎಲ್ಲಾ ಮೂಲಭೂತ ನಿಯಮಗಳಲ್ಲಿ 1 . ಸ್ಪಷ್ಟತೆ ಮತ್ತು ನಿರ್ದಿಷ್ಟತೆ ಇರುತ್ತದೆ .
2 . ಈ ಸಂವಿಧಾನ ಪ್ರಜ್ಞಾಪೂರ್ವಕವಾಗಿ ಸಂವಿಧಾನ ರಚನಾ ಸಮಿತಿಯಿಂದ ತಜ್ಞರ ಮೂಲಕ ರಚಿಸಲ್ಪಟ್ಟಿದ್ದು ,
3 . ಇದು ಒಂದು ಗೊತ್ತಾದ ದಿನಾಂಕದಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರುತ್ತದೆ .
4. ಇಲ್ಲಿ ರಾಜ್ಯದ ಆಳ್ವಿಕೆಗೆ ಸಂಬಂಧಿಸಿದ ಎಲ್ಲಾ ಮೂಲಭೂತ ನಿಯಮಗಳು ಒಂದು ಅಥವಾ ಹಲವು ದಾಖಲೆಗಳಿರುತ್ತವೆ .
5 . ಇದರ ತಿದ್ದುಪಡಿ ವಿಧಾನ ತುಂಬಾ ಕಠಿಣವಾಗಿದ್ದು ವಿಶೇಷ ವಿಧಾನವನ್ನು ಅನುಸರಿಸಬೇಕಾಗಿದೆ .
6 . ಇಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನಿಗೂ ವ್ಯತ್ಯಾಸವಿದ್ದು , ಸಂವಿಧಾನಾತ್ಮಕ ಕಾನೂನು ಅತ್ಯಂತ ಶ್ರೇಷ್ಠ ಕಾನೂನಾಗಿರುತ್ತದೆ .
7 . ಇಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ವಿವರವಾಗಿ ನಿರೂಪಿಸಲ್ಪಟ್ಟಿದ್ದು , ಇವುಗಳಿಗೆ ನ್ಯಾಯಾಲಯದ ರಕ್ಷಣೆ ನೀಡಲಾಗಿರುತ್ತದೆ .
8 . ನ್ಯಾಯಾಲಯವು ಶಾಸಕಾಂಗ ಮತ್ತು ಕಾರಾಂಗಗಳ ಅತಿಕ್ರಮೇಣದಿಂದ ಸಂವಿಧಾನವನ್ನು ನ್ಯಾಯಿಕ ವಿಮರ್ಶೆಯ ಮೂಲಕ ರಕ್ಷಿಸುತ್ತದೆ
4 ) ಅಲಿಖಿತ ಸಂವಿಧಾನದ ಲಕ್ಷಣಗಳನ್ನು ವಿವರಿಸಿ .
ಸರ್ಕಾರದ ಮೂಲತತ್ವಗಳು , ಅಂಗರಚನೆ , ಆಡಳಿತ ವಿಧಾನ ಮತ್ತು ಪ್ರಜೆಗಳ ಹಕ್ಕುಬಾಧ್ಯತೆಗಳು ಲಿಖಿತ ರೂಪದಲ್ಲಿರದೆ ಕಾಲಕ್ರಮೇಣ ವಿಕಸಿತಗೊಂಡು ರೂಢಿ ಪದ್ಧತಿ ಮತ್ತು ಸಂಪ್ರದಾಯಗಳ ಮೂಲಕ ರೂಪಿಸಲ್ಪಟ್ಟ ಸಂವಿಧಾನವೇ ಅಲಿಖಿತ * ಸಂವಿಧಾನ . ಇದರ ಲಕ್ಷಣಗಳೆಂದರೆ –
1. ಇದು ಅಸ್ಪಷ್ಟತೆ , ಅನಿಶ್ಚತತೆ ಮತ್ತು ಗೊಂದಲದಿಂದ ಕೂಡಿರುತ್ತದೆ .
2. ಇಲ್ಲಿ ಸರ್ಕಾರದ ಮೂಲತತ್ವಗಳು ಮತ್ತು ಅಂಗರಚನೆ , ಮುಂತಾದವುಗಳು ಲಿಖಿತ ರೂಪದಲ್ಲಿರದೆ , ಸಂವಿಧಾನದ ರಚನಾ ಸಮಿತಿಯಿಂದ ರಚಿಸಲ್ಪಟ್ಟರದೆ , ಸಂಪ್ರದಾಯಗಳು ರೂಢಿನಿಯಮಗಳು ಕಾಲಕಾಲಕ್ಕೆ ಮೂಡಿಬಂದ ನ್ಯಾಯಾಂಗದ ವ್ಯಾಖ್ಯೆಗಳು ಹಾಗೂ ಕಾಲಕಾಲಕ್ಕೆ ರೂಪಿವಾದ ಕಾನೂನಿನ ಮೂಲಕ ಬೆಳೆದು ಬಂದಿರುತ್ತದೆ .
3. ಈ ಸಂವಿಧಾನದ ತಿದ್ದುಪಡಿ ಸುಲಭವಾಗಿದೆ . ಇಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನಿನ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ . ಈ ವ್ಯವಸ್ಥೆಯಲ್ಲಿ ಪಾರ್ಲಿಮೆಂಟ್ ಶ್ರೇಷ್ಠತೆಯನನು ಪಡೆದಿರುತ್ತದೆ .
4 . ಈ ಸಂವಿಧಾನ ಸ್ಥಿತಿಸ್ಥಾಪಕತ್ವಗುಣ ಹೊಂದಿರುವುದರಿಂದ ಯಾವುದೇ ಬದಲಾವಣೆಯನ್ನು ಸುಲಭವಾಗಿ ಮಾಡಿ ದೇಶದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸಬಹುದು .
5 .ಅಲಿಖಿತ ಸಂವಿಧಾನವಿರುವಲ್ಲಿ ನ್ಯಾಯಾಂಗವು ತನ್ನ ನ್ಯಾಯಿಕ ವಿಮರ್ಶೆಯ ಮೂಲಕ ಸಂವಿಧಾನವನ್ನು ರಕ್ಷಿಸುವಲ್ಲಿ ಹೆಚ್ಚಿನ ಅಧಿಕಾರವನ್ನು ಹೊಂದಿರುವುದಿಲ್ಲ .
5 ) ಅನಮ್ಯ ಸಂವಿಧಾನದ ಲಕ್ಷಣಗಳನ್ನು ವಿವರಿಸಿ .
ಒಂದು ರಾಷ್ಟ್ರದ ಸಂವಿಧಾನವನ್ನು ಸಾಮಾನ್ಯ ಶಾಸನ ಕ್ರಮದಂತೆ ತಿದ್ದುಪಡಿ ಮಾಡದೆ ವಿಶೇಷ ಕ್ರಮದಿಂದ ತಿದ್ದುಪಡಿ ಮಾಡುವುದನ್ನು ಅನಮ್ಯ ಸಂವಿಧಾನ ಎನ್ನುವರು . ಈ ಸಂವಿಧಾನದ ಲಕ್ಷಣಗಳು ಇಂತಿವೆ .
1. ಅನಮ್ಯ ಸಂವಿಧಾನದಲ್ಲಿ ಸಂವಿಧಾನಾತ್ಮಕ ಕಾನೂನು ಸಾಮಾನ್ಯ ಕಾನೂನಿನಂತೆ ಮೇಲ್ಮಟ್ಟದಲ್ಲಿರುತ್ತದೆ .
2. ಇದರ ತಿದ್ದುಪಡಿಗೆ ವಿಶೇಷ ವಿಧಾನವನ್ನು ಅನುಸರಿಸಬೇಕಾಗುತ್ತದೆ .
3. ಇಲ್ಲಿ ಸಂವಿಧಾನಾತ್ಮಕ ಕಾನೂನುಗಳು ವಿಶಿಷ್ಟ ಬಗೆಯ ಶಾಸನಗಳಿದ್ದು , ಇವು ಸಂವಿಧಾನ ತಜ್ಞರಿಂದ ರಚಿಸಲ್ಪಟ್ಟಿರುತ್ತವೆಯೇ ಹೊರತು ಪಾರ್ಲಿಮೆಂಟಿನಿಂದ .
4. ಈ ಸಂವಿಧಾನದಲ್ಲಿ ಸರ್ಕಾರದ ಅಧಿಕಾರಗಳು ಸ್ಪಷ್ಟವಾಗಿ ನಿರೂಪಿಸಲ್ಪಟ್ಟಿದ್ದು , ಸಂವಿಧಾನದ ಮಿತಿಗೊಳಪಟ್ಟಿರುತ್ತದೆ .
5. ಇಂತಹ ಸಂವಿಧಾನವಿರುದಿಲ್ಲ ಸರ್ಕಾರದ ಎಲ್ಲಾ ಕಾರಚರಣೆಗಳು ನ್ಯಾಯಿಕ ವಿಮರ್ಶೆಗೆ ಒಳಪಟ್ಟಿರುತ್ತವೆ . ಅಂದರೆ , ಸಂವಿಧಾನಕ್ಕೆ ನ್ಯಾಯಾಂಗದ ರಕ್ಷಣೆ ಇರುತ್ತದೆ .
6 ) ನಮ್ಮ ಸಂವಿಧಾನದ ಲಕ್ಷಣಗಳನ್ನು ವಿವರಿಸಿ .
ಒಂದು ರಾಷ್ಟ್ರದ ಸಂವಿಧಾನವನ್ನು ಸಾಮಾನ್ಯ ಶಾಸನ ಕ್ರಮದಂತೆಯೇ ಸರಳ ರೀತಿಯಲ್ಲಿ ತಿದ್ದುಪಡಿ ಮಾಡಿದ್ದಲ್ಲಿ ಅಂತಹ ಸಂವಿಧಾನವನ್ನು ನಮ್ಮ ಸಂವಿಧಾನ ಎನ್ನುವರು . ಇದರ ಲಕ್ಷಣಗಳು ಇಂತಿವೆ .
1. ಇಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನಿನ ನಡುವೆ ವ್ಯತ್ಯಾಸವಿರುವುದಿಲ್ಲ .
2. ಇಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನುಗಳೆರಡನ್ನು ಪಾರ್ಲಿಮೆಂಟ್ ರಚಿಸುತ್ತದೆ .
3 . ಈ ಸಂವಿಧಾದ ತಿದ್ದುಪಡಿಗೆ ವಿಶೇಷ ವಿಧಾನದ ಅವಶ್ಯಕತೆ ಇಲ್ಲ .
4. ಇಲ್ಲಿ ಸರ್ಕಾರದ ಅಧಿಕಾರಗಳು ಪಾರ್ಲಿಮೆಂಟಿನಿಂದ ನಿರೂಪಿಸಲ್ಪಟ್ಟ ಪಾರ್ಲಿಮೆಂಟಿನಿಂದ ನಿರೂಪಿಸಲ್ಪಟ್ಟ ಪಾರ್ಲಿಮೆಂಟಿನ ಮಿತಿಗೊಳಪಟ್ಟಿರುತ್ತದೆ .
5. ಇಂತಹ ಸಂವಿಧಾನದಲ್ಲಿ ಪಾರ್ಲಿಮೆಂಟಿನಿಂದ ರಚಿಸಲ್ಪಟ್ಟ ಎಲ್ಲಿ ಶಾಸನಗಳು ನ್ಯಾಯಿಕ ವಿಮರ್ಶೆಗೆ ಒಳಪಡದೆ , ಪಾರ್ಲಿಮೆಂಟ್ ಪಾರಮ್ಯತೆಯನ್ನು ಹೊಂದಿರುತ್ತದೆ .
7 ) ಆದರ್ಶ ಸಂವಿಧಾನದ ಅಗತ್ಯಾಂಶಗಳನ್ನು ವಿವರಿಸಿ .
ಉತ್ತಮವಾದ ಅಂಗಗಳನ್ನು ಹೊಂದಿರುವ ಸಂವಿಧಾನವೇ ಆದರ್ಶ ಸಂವಿಧಾನ ಹಾಗಾಗಿ ಆದರ್ಶ ಸಂವಿಧಾನವೆನಿಸಿಕೊಳ್ಳಲು ಅಗತ್ಯವಾದ ಅಂಶಗಳೆಂದರೆ :
1 . ಸಂವಿಧಾನ ಲಿಖಿತ , ಸಂಕ್ಷಿಪ್ತ , ಸ್ಪಷ್ಟ ಮತ್ತು ವ್ಯಾಪಕವಾಗಿರಬೇಕು : ಸಂವಿಧಾನವು ಬರವಣಿಗೆಯ ರೂಪದಲ್ಲಿರಬೇಕು ಹಾಗೂ ನಿರ್ದಿಷ್ಟ ಮತ್ತು ನಿಖರವಾಗಿರಬೇಕು . ಎಲ್ಲಿಯೂ ಸಂದೇಹಕ್ಕಾಗಲಿ , ಕ್ಲಿಷ್ಟತೆಗಾಗಲೀ ಎಡೆಕೊಡವ ರೀತಿಯಲ್ಲಿರಬೇಕು . ಸರ್ಕಾರದ ವ್ಯವಸ್ಥೆಗೆ ಸಂಬಂಧಿಸಿದಂತೆ ಪಡೆದುಕೊಂಡಿರಬೇಕು . ಅದೇ ಸಂದರ್ಭದಲ್ಲಿ ಅನಗತ್ಯ ವಿವರಗಳನ್ನು ಹೊಂದಿರದೆ , ಅಗತ್ಯ ವಿವರಗಳನ್ನು ಮಾತ್ರ ಹೊಂದಿದ್ದು ಸಂಕ್ಷಿಪ್ತವಾಗಿರಬೇಕು .
2 . ಧ್ಯೇಯ ಮತ್ತು ಗುರಿಗಳನ್ನು ವಿವರಿಸಿರಬೇಕು : ದೇಶದ ಧೈಯ ಮತ್ತು ಗಿರಿಗಳೇನೆಂಬುದನ್ನು ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಸ್ಪಷ್ಟಿಕರಿಸಿರಬೇಕು .
3. ಮೂಲಭೂತ ಹಕ್ಕುಗಳ ಪಟ್ಟಿ ಹೊಂದಿರಬೇಕು : ಪ್ರತೀ ಪ್ರಜೆಯ ಪ್ರಗತಿಗೆ ಮೂಲಭೂತ ಹಕ್ಕುಗಳು ಅತ್ಯಾವಶ್ಯಕವಾಗಿರುವುದರಿಂದ ಪೌರರಿಗೆ ನೀಡಲಾಗಿರುವ ಈ ಹಕ್ಕುಗಳ ಪಟ್ಟಿಯನ್ನು ಹೊಂದಿರಬೇಕು .
4. ಸಂವಿಧಾನದ ತಿದ್ದುಪಡಿ ವಿಧಾನ ತಿಳಿಸಿರಬೇಕು : ಸಂವಿಧಾನ ರಚನಾಕಾರರು ಭವಿಷ್ಯದಲ್ಲಿ ಆಗಬಹುದಾದ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಆದಕಾರಣ ಕಾಲಕಾಲಕ್ಕೆ ಆಗುವ ಬದಲಾವಣೆಗೆ ಹೊಂದಿಕೊಳ್ಳುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಅನುಸರಿಸಬೇಕಾದ ವಿಧಾನವನ್ನು ತಿಳಿಸಿರಬೇಕು .
5. ಸರ್ಕಾರದ ಪದ್ಧತಿ , ಸ್ವರೂಪ , ರಚನೆ ಹಾಗೂ ವಿವಿಧ ಅಂಗಗಳ ರಚನೆ ಮತ್ತು ಅಧಿಕಾರ ವ್ಯಾಪ್ತಿಯನ್ನು ವಿವರಿಸಿರಬೇಕು . ಸರ್ಕಾರದ ಮಾದರಿ , ಸ್ವರೂಪ , ರಚನೆ ಅಧಿಕಾರ ವ್ಯಾಪ್ತಿ ಹಾಗೆಯೇ ಸರ್ಕಾರದ ಅಂಗಗಳಾದ ಶಾಸಕಾಂಗ , ಕಾರಾಂಗ ಮತ್ತು ನ್ಯಾಯಾಂಗಗಳ ರಚನೆ , ಅಧಿಕಾರ ವ್ಯಾಪ್ತಿಗಳನ್ನು ಸ್ಪಷ್ಟವಾಗಿ ವಿವರಿಸಿರಬೇಕು .
6 . ಸಂವಿಧಾನದ ತಿದ್ದುಪಡಿ ತೀರಾ ಸುಲಭವಾಗಿಯೂ ಇರಬಾರದು ಹಾಗೆಯೇ ಸಂವಿಧಾನ ಕಾಠಿಣ್ಯತೆ ಮತ್ತು ನಮ್ಯತಾ ಗುಣಗಳೆರಡನ್ನು ಹೊಂದಿರಬೇಕು: ತುಂಬಾ ಕಠಿಣವಾಗಿಯೂ ಇರಬಾರದು . ತುಂಬಾ ಸುಲಭಾಗಿದ್ದರೆ , ಅಸ್ತಿತ್ವದಲ್ಲಿದ ಸರ್ಕಾರ ತನ್ನ ಮನಸಿಗೆ ಬಂದಂತೆ ತಿದ್ದುಪಡಿ ಮಾಡಬಹುದು ಹಾಗೆಯೇ ತುಂಬಾ ಕಷ್ಟವಾಗಿದ್ದರೆ , ಪ್ರಗತಿಗೆ ತಕ್ಕಂತೆ ಸಂವಿಧಾನ ಹೊಂದಿಕೊಳ್ಳಲಾರದು . ಪ್ರಜಾಪ್ರಭುತ್ವದ ಯಶಸ್ವಿ
7. ಸ್ವಾತಂತ್ರ್ಯನ್ಯಾಯಿಕ ವ್ಯವಸ್ಥೆಗೆ ಅವಕಾಶವಿರಬೇಕು : ಸಂವಿಧಾನವೆಂಬುದು ನ್ಯಾಯಾಂಗದ ಸ್ವಾತಂತ್ರ್ಯವನ್ನು ಹೊಂದಿರುವುದು ಪ್ರಮುಖ ಕಾರನಿರ್ವಹಣೆಗೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಅಗತ್ಯ . ಆದರ್ಶ ಅವಶ್ಯಕತೆಗಳಲ್ಲೊಂದಾಗಿದೆ .
8. ಏಕಾತ್ಮಕ ಸರ್ಕಾರದ ಲಕ್ಷಣಗಳನ್ನು ವಿವರಿಸಿ .
ರಾಷ್ಟ್ರದ ಸಮಸ್ತ ಅಧಿಕಾರ ಕೇಂದ್ರ ಸರ್ಕಾರವೊಂದರಲ್ಲೇ ಕೇಂದ್ರೀಕೃತವಾಗಿದ್ದರೆ , ಅಂತಹ ಸರ್ಕಾರವನ್ನು ಏಕಾತ್ಮಕ ಸರ್ಕಾರ ಎನ್ನುವರು . ಇದರ ಲಕ್ಷಣಗಳು ಕೆಳಗಿನಂತಿವೆ .
1. ಅಧಿಕಾರದ ಕೇಂದ್ರೀಕರಣ : ರಾಷ್ಟ್ರದ ಸಮಸ್ತ ಅಧಿಕಾರ ಅಂದರೆ , ಶಾಸನೀಯ , ಕಾರಾಂಗೀಯ ಮತ್ತು ನ್ಯಾಯಿಕ ಅಧಿಕಾರವೆಲ್ಲವೂ ಕೇಂದ್ರಸರ್ಕಾರವೊಂದರಲ್ಲೇ ಕೇಂದ್ರೀಕೃತವಾಗಿರುತ್ತದೆ .
2. ಕೇಂದ್ರದಿಂದ ರಚಿತವಾದ ಸ್ಥಳೀಯ ಘಟಕಗಳು : ಇಲ್ಲಿ ಸ್ಥಳೀಯ ಘಟಕಗಳು ಸಂವಿಧಾನದ ಮೂಲಕ ರಚಿತವಾಗಿರದೆ , ಕೇಂದ್ರ ಸರ್ಕಾರದಿಂದ ಆಡಳಿತದ ಅನುಕೂಲಕ್ಕಾಗಿ ಮಾತ್ರ ರಚಿತವಾಗಿರುತ್ತದೆ .
3. ಸ್ಥಳೀಯ ಘಟಕಗಳಿಗೆ ಸ್ವಯಂ ಅಧಿಕಾರವಿಲ್ಲ : ಸ್ಥಳೀಯ ಘಟಕಗಳು ಪಡೆದಿರುವ ಈ ಅಧಿಕಾರ ಸಂವಿಧಾನದತ್ತವಾಗಿರದೆ , ಕೇಂದ್ರಸಕಾರದಿಂದ ಪಡೆದವು ಆಗಿರುತ್ತದೆ .
4. ಸಂವಿಧಾನಕ್ಕೆ ಪರಮಾಧಿಕಾರವಿಲ್ಲ : ಏಕಾತ್ಮಕ ಸರ್ಕಾರದಲ್ಲಿ ಸಂವಿಧಾನವು ಪರಮಾಧಿಕಾರ ಮತ್ತು ಲಿಖಿತ ಸ್ವರೂಪವನ್ನು ಹೊಂದುವ ಅಗತ್ಯತೆ ಇಲ್ಲ .
5. ವಿಶೇಷ ನ್ಯಾಯಾಲಯ ಅನಗತ್ಯ : ಇಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ * ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳು ನಡುವೆ ಘರ್ಷಣೆಗೆ ಸಂವಿಧಾನಾತ್ಮಕವಾಗಿ ಅಧಿಕಾರದ ವಿಭಜನೆ ಇಲ್ಲಿದ್ದರಿಂದ ಅಧಿಕಾರವ್ಯಾಪ್ತಿಗೆ ಅವಕಾಶವಿರುವುದಿಲ್ಲ ಹಾಗಾಗಿ ವಿಶೇಷ ನ್ಯಾಯಾಲಯ ಅನಗತ್ಯ .
6. ಸಂವಿಧಾನ ಲಿಖಿತ ಅಥವಾ ಅಲಿಖಿತ ಅಪ್ರಸ್ತುತ : ಇಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂವಿಧಾನಾತ್ಮಕವಾದ ಅಧಿಕಾರ ವಿಭಜನೆ ಇಲ್ಲದ್ದರಿಂದ ಸಂವಿಧಾನ ಲಿಖಿತವಾಗಿರಬೇಕೆಂಬ ನಿಯಮವಿಲ್ಲ .
7. ನೌಕರಶಾಹಿಯ ಮೇಲೆ ಅವಲಂಬನೆ : ಅಧಿಕಾರದ ಕೇಂದ್ರೀಕರಣದ ಫಲವಾಗಿ ಇಡೀ ರಾಷ್ಟ್ರದ ಆಡಳಿತ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿರುತ್ತದೆ . ಹೀಗಾಗಿ ಕೇಂದ್ರ ಸರ್ಕಾರವು ಆಡಳಿತ ನಿರ್ವಹಣೆಗಾಗಿ ನೌಕರಶಾಹಿಯ ಮೇಲೆ ಅವಲಂಬನೆಗೆ ಅನಿವಾರವಾಗುತ್ತದೆ .
8. ಪ್ರಬಲ , ಏಕಕೇಂದ್ರ ಸರ್ಕಾರ : ಏಕಾತ್ಮಕ ಸರ್ಕಾರ ಏಕೈಕ ಪ್ರಬಲ ಕೇಂದ್ರ ಸರ್ಕಾರವನ್ನು ಹೊಂದಿದೆ . ಇದು ಇಡೀ ರಾಷ್ಟ್ರಕ್ಕೆ ಬೇಕಾಗುವ ಆಡಳಿತವನ್ನು ನಡೆಸುತ್ತದೆ .
9 ) ಸಂಯುಕ್ತ ಸರ್ಕಾರದ ಲಕ್ಷಣಗಳನ್ನು ವಿವರಿಸಿ .
ರಾಷ್ಟ್ರದ ಸಮಸ್ತ ಅಧಿಕಾರ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂವಿಧಾನಾತ್ಮಕವಾಗಿ ಹಂಚಲ್ಪಟ್ಟು ಉಭಯ ಸರ್ಕಾರಗಳಾದ ಕೇಂದ್ರ ಮತ್ತು ರಾಜ್ಯಗಳು ಅಸ್ತಿತ್ವದಲ್ಲಿರುವುದೇ ಸಂಯುಕ್ತ ಸರ್ಕಾರ ಇದರ ಲಕ್ಷಣಗಳು ಕೆಳಗಿನಂತಿವೆ .
1 . ಅಧಿಕಾರ ವಿಭಜನೆ : ಇಲ್ಲಿ ರಾಷ್ಟ್ರದ ಸಮಸ್ತ ಅಧಿಕಾರ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂವಿಧಾನಾತ್ಮಕವಾಗಿ ಹಂಚಲ್ಪಟ್ಟಿರುತ್ತದೆ .
2. ರಾಜ್ಯ ಸರ್ಕಾರಗಳಿಗೆ ಸ್ವಾಯತ್ತತೆ : ಇಲ್ಲಿ ರಾಜ್ಯ ಸರ್ಕಾರಗಳು ಹೊಂದಿರುವ ಅಧಿಕಾರ ಸಂವಿಧಾನದತ್ತವಾಗಿರುವುದರಿಂದ ರಾಜ್ಯ ಸರ್ಕಾರಗಳು ಕೇಂದ್ರದಿಂದ ಸಂಪೂರ್ಣವಾಗಿ ಸ್ವತಂತ್ರ್ಯವಾಗಿರುತ್ತದೆ .
3. ಸಂವಿಧಾನದ ಪಾರಮ್ಯತೆ : ಇಲ್ಲಿ ಎಲ್ಲಾ ಅಧಿಕಾರಿಗಳು ಸಂವಿಧಾನದಿಂದ ನಿರ್ಧರಿಸಲ್ಪಟ್ಟು , ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನಾತ್ಮಕ್ಕನುಗುಣವಾಗಿ ಆಡಳಿತ ನಡೆಸಬೇಕು . ಹಾಗಾಗಿ ಸಂವಿಧಾನ ಪಾರಮ್ಯತೆಯನ್ನು ಪಡೆದುಕೊಂಡಿದೆ .
4. ಸ್ವತಂತ್ರ್ಯ ನ್ಯಾಯಾಂಗ : ಸಂಯುಕ್ತ ಸರ್ಕಾರಗಳು ಅಧಿಕಾರ ವಿಭಜನಾ ತತ್ವದ ಆಧಾರದ ಮೇಲೆ ರಚಿತವಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಆಗಾಗ ಘರ್ಷಣೆಗಳು ಸಂಭವಿಸುವುದು ಸಹಜ . ಹಾಗಾಗಿ ಇಂತಹ ವಿವಾದಗಳನ್ನು ತೀರ್ಮಾನಿಸಿ ಸಂಯುಕ್ತ ವ್ಯವಸ್ಥೆ ರಕ್ಷಣೆಗೆ ನ್ಯಾಯಾಂಗ ಅಗತ್ಯ .
5 . ದ್ವಿಸದನ ಶಾಸಕಾಂಗ ಪದ್ಧತಿ : ಕೆಳ ಸದನವು ಇಡೀ ರಾಷ್ಟ್ರವನ್ನು ಪ್ರತಿನಿಧಿಸಿ , ಮೇಲ್ವಿಸದನ ರಾಜ್ಯವನ್ನು ಪ್ರತಿನಿಧಿಸಲು ಇಲ್ಲಿ ಎರಡು ಸದನಗಳಿರುತ್ತವೆ .
6 . ದ್ವಿಸರ್ಕಾರ : ಇಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆಂಬ ದ್ವಿಸರ್ಕಾರ ವ್ಯವಸ್ಥೆ ಇರುತ್ತದೆ .
7 . ಲಿಖಿತ ಮತ್ತು ಅನಮ್ಯ ಸಂವಿಧಾನ : ಸಂಯುಕ್ತ ಸರ್ಕಾರಗಳು ಕಡ್ಡಾಯವಾಗಿ 8. ದ್ವಿ ಪೌರತ್ವ : ಇಲ್ಲಿ ಪೌರ ರಾಷ್ಟ್ರೀಯ ಪೌರತ್ನ ಮತ್ತು ಪ್ರಾಂತೀಯ ಪೌರತ್ನಗಳೆರಡನ್ನ ಲಿಖಿತ ಮತ್ತು ಅನಮ್ಯ ಸಂವಿಧಾನವನ್ನು ಹೊಂದಿರಬೇಕು .
1st Puc Political Science Chapter 4 Notes In Kannada
IV . ಹತ್ತು ಅಂಕದ ಪ್ರಶ್ನೆಗಳು :
1. ಲಿಖಿತ ಮತ್ತು ಅಲಿಖಿತ ಸಂವಿಧಾನದ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ ,
ಸಂವಿಧಾನ ರಚನಾ ಸಮಿತಿಯಿಂದ ತಜ್ಞರ ಮೂಲಕ ಪ್ರಜ್ಞಾಪೂರ್ವಕವಾಗಿ ರಚಿಸಲ್ಪಟ್ಟ ಸಂವಿಧಾನವೇ ಲಿಖಿತ ಸಂವಿಧಾನವಾಗಿದ್ದರೆ , ಸರ್ಕಾರದ ಮೂಲತತ್ವ ಅಂಗರಚನೆ , ಆಡಳಿತ ವಿಧಾನ ಮತ್ತು ಪ್ರಜೆಗಳ ಹಕ್ಕು ಭಾದ್ಯತೆಗಳು ಲಿಖಿತರೂಪದಲ್ಲಿರದೆ ಕಾಲಕ್ರಮೇಣ ವಿಕಸಿತಗೊಂಡು ರೂಢಿ , ಪದ್ಧತಿಗಳು ಮತ್ತು ಸಂಪ್ರದಾಯಗಳ ಮೂಲಕ ರೂಪಿಸಲ್ಪಟ್ಟ ಸಂವಿಧಾನವೇ ಅಲಿಖಿತ ಸಂವಿಧಾನ . ಇವೆರಡರ ನಡುವಣ ವ್ಯತ್ಯಾಸಗಳು ಕೆಳಗಿನಂತಿವೆ
ಲಿಖಿತ ಸಂವಿಧಾನ :
1 ) ರಾಜ್ಯದ ಆಳ್ವಿಕೆಗೆ ಸಂಬಂಧಿಸಿದ ಎಲ್ಲಾ ಮೂಲಭೂತ ನಿಯಮಗಳು ಒಂದು | ಹಲವು ದಾಖಲೆಗಳಲ್ಲಿರುತ್ತದೆ .
2 ) ಇದು ಸಂವಿಧಾನ ತಜ್ಞರು ಸುದೀರ್ಘವಾಗಿ ಚರ್ಚಿಸಿ ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದ ದಾಖಲೆ
3 ) ಇದು ಒಂದು ಗೊತ್ತಾದ ದಿನಾಂಕದಂದು ಅಧಿಕೃತವಾಗ ಅಸ್ತಿತ್ವಕ್ಕೆ ಬಂದಿದೆ .
4 ) ಇದು ಗ್ರಂಥ ರೂಪದಲ್ಲಿದೆ .
5 ) ಇದು ಸಂವಿಧಾನ ರಚನಾ ಸಭೆಯ ಮೂಲಕ
6 ) ಇದು ಕಠಿಣ ಸಂವಿಧಾನವಾಗಿದೆ . ಅ ಅಸ್ತಿತ್ವಕ್ಕೆ ಬಂದಿದೆ .
7 ) ಇಲ್ಲಿ ಸಂವಿಧಾನಾತ್ಮಕ ಕಾನೂನಿಗೂ ಮತ್ತು ಸಾಮಾನ್ಯ ಕಾನೂನಿಗೂ ನಡುವೆ ವ್ಯತ್ಯಾಸವಿದ್ದು , ಸಂವಿಧಾನಾತ್ಮಕ ಕಾನೂನು ಅತ್ಯಂತ ಶ್ರೇಷ್ಠ ಕಾನೂನಾಗಿರುತ್ತದೆ .
8 ) ನ್ಯಾಯಾಲಯವು ಶಾಸಕಾಂಗ ಮತ್ತು ಕಾರಾಂಗದ ಅತಿಕ್ರಮಣದಿಂದ ಸಂವಿಧಾನವನ್ನು ನ್ಯಾಯಿಕ ವಿಮರ್ಶೆಯ ಮೂಲಕ ರಕ್ಷಿಸುತ್ತದೆ .
9 ) ಈ ಸಂವಿಧಾನದಲ್ಲಿ ಸ್ಪಷ್ಟತೆ ಮತ್ತು ನಿರ್ದಿಷ್ಟತೆ ಇರುತ್ತದೆ .
ಅಲಿಖಿತ ಸಂವಿಧಾನ :
1 ) ಇಲ್ಲಿ ರಾಜ್ಯದ ಆಳ್ವಿಕೆಗೆ ಸಂಬಂಧಿಸಿದ ಎಲ್ಲಾ ನಿಯಮಗಳು ದಾಖಲೆ ರೂಪದಲ್ಲಿರುವುದಿಲ್ಲ .
2 ) ಇದು ಸಂವಿಧಾನ ತಜ್ಞರಿಂದಾಗಲೀ ಅಥವಾ ಪ್ರಜ್ಞಾಪೂರ್ವಕವಾಗಿ ಆಗಲಿ ಸೃಷ್ಟಿಯಾದುದಲ್ಲ .
3 ) ಇದು ಗೊತ್ತಾದ ದಿನಾಂಕದಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿಲ್ಲ .
4 ) ಇದು ಗ್ರಂಥ ರೂಪದಲ್ಲಿಲ್ಲ .
5 ) ಇದು ಸಂವಿಧಾನ ರಚನಾ ಸಭೆಯ ಮೂಲಕ ಅಸ್ತಿತ್ವಕ್ಕೆ ಬಂದಿಲ್ಲ .
6 ) ಇದು ನಮ್ಮ ಸಂವಿಧಾನವಾಗಿದೆ .
7 ) ಇಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮನ್ಯ ಕಾನೂನಿನ ನಡುವೆ ವ್ಯತ್ಯಾಸವಿರುವುದಿಲ್ಲ . ಇಲ್ಲಿ ಪಾರ್ಲಿಮೆಂಟ್ ಶ್ರೇಷ್ಠತೆಯನ್ನು ಪಡೆದಿರುತ್ತದೆ .
8) ಇಲ್ಲಿ ನ್ಯಾಯಾಂಗವು ತನ್ನ ನ್ಯಾಯಿಕ ವಿಮರ್ಶೆಯ ಮೂಲಕ ಸಂವಿಧಾನವನ್ನು ರಕ್ಷಿಸುವಲ್ಲಿ ಹೆಚ್ಚಿನ ಅಧಿಕಾರ ಹೊಂದಿರುವುದಿಲ್ಲ .
9 ) ಇಲ್ಲಿ ಸ್ಪಷ್ಟತೆ ಮತ್ತು ನಿರ್ದಿಷ್ಟತೆ ಇರುವುದಿಲ್ಲ .
2 ) ಅನಮ್ಯ ಮತ್ತು ನಮ್ಯ ಸಂವಿಧಾನದ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ .
ಅನಮ್ಯ ಮತ್ತು ನಮ್ಮ ಸಂವಿಧಾನ ಎಂಬ ಪದಗಳನ್ನು ಲಾರ್ಡ್ ಬ್ರೇನ್‌ರವರು ಮೊಟ್ಟಮೊದಲ ಬಳಸಿದರು . ಅನಮ್ಯ ಸಂವಿಧಾನವೆಂದರೆ , ಸಂವಿಧಾನಾತ್ಮಕ ಕಾನೂನಿಗೂ ಮತ್ತು ಸಾಮಾನ್ಯ ಕಾನೂನಿಗೂ ವ್ಯತ್ಯಾಸವಿದ್ದು ಸಂವಿಧಾನಾತ್ಮಕ ಕಾನೂನನ್ನು ಆ ರಾಷ್ಟ್ರದ ಶಾಸನ ಸಭೆಯ ಸಾಮಾನ್ಯ ಬಹುಮತದಿಂದ ತಿದ್ದಲು ಸಾಧ್ಯವಿಲ್ಲವೋ ಮತ್ತು ತಿದ್ದಲು ವಿಶೇಷ ತಿದ್ದುಪಡಿ ವಿಧಾನಬೇಕಾಗುತ್ತದೋ ಅಂತಹ ಸಂವಿಧಾನವೇ ಆಗಿದೆ . ಆದರೆ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನಿಗೂ ವ್ಯತ್ಯಾಸವಿಲ್ಲದೆ , ಸಾಮಾನ್ಯ ಕಾನೂನನ್ನು ಮಾಡಲು ಅನುಸರಿಸುವ ವಿಧಾನವನ್ನೇ ಅನುಸರಿಸಿ ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶವಿದ್ದರೆ , ಅಂತಹ ಸಂವಿಧಾನವನ್ನು ನಮ್ಮ ಸಂವಿಧಾನ ಎನ್ನುವರು . ಇವೆರಡರ ನಡುವಿನ ವ್ಯತ್ಯಾಸಗಳೆಂದರೆ
ಅನಮ್ಯ ಸಂವಿಧಾನ
1 ) ಇಲ್ಲಿ ಸಂವಿಧಾನಾತ್ಮಕ ಕಾನೂನು ಸಾಮಾನ್ಯ ಕಾನೂನಿಗಿಂತ ಮೇಲ್ಮಟ್ಟದಲ್ಲಿರುತ್ತದೆ .
2 ) ಇದರ ತಿದ್ದುಪಡಿಗೆ ವಿಶೇಷ ವಿಧಾನವನ್ನು ಅನುಸರಿಸಬೇಕಾಗುತ್ತದೆ .
3 ) ಇಲ್ಲಿ ಸಂವಿಧಾನಾತ್ಮಕ ಕಾನೂನುಗಳು ವಿಶಿಷ್ಟ ಬಗೆಯ ಶಾಸನಗಳಾಗಿದ್ದು , ಇವು ಸಂವಿಧಾನ ತಜ್ಞರಿಂದ ರಚಿಸಲ್ಪಟ್ಟಿರುತ್ತವೆಯೇ ಹೊರತು ಪಾರ್ಲಿಮೆಂಟಿನಿಂದಲ್ಲ .
4 ) ಇಂತಹ ಸಂವಿಧಾನವಿರುವಲ್ಲಿ ಸರ್ಕಾರದ ಎಲ್ಲಾ ಕಾರಚರಣೆಗಳು , ನ್ಯಾಯಿಕ ವಿಮರ್ಶೆಗೆ ಒಳಪಟ್ಟಿರುತ್ತದೆ . ಅಂದರೆ ಸಂವಿಧಾನಕ್ಕೆ ನ್ಯಾಯಾಂಗದ ರಕ್ಷಣೆ ಇರುತ್ತದೆ .
5 ) ಈ ಸಂವಿಧಾನದಲ್ಲಿ ನಿರ್ದಿಷ್ಟತೆ ಮತ್ತು ಸ್ಪಷ್ಟತೆ ಇರುತ್ತದೆ .
6 ) ಇಲ್ಲಿ ಪ್ರಜೆಗಳೇ ಮೂಲಭೂತ ಹಕ್ಕುಗಳಿಗೆ ಭದ್ರತೆ ಇದೆ .
7 ) ಈ ಸಂವಿಧಾನ ಸ್ಥಿತಿಸ್ಥಪಕತೆಯನ್ನು ಪಡೆದುಕೊಂಡಿಲ್ಲ .
ನಮ್ಯ ಸಂವಿಧಾನ
1 ) ಇಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನುಗಳ ನಡುವೆ ವ್ಯತ್ಯಾಸವಿರುವುದಿಲ್ಲ .
2 ) ಇವರ ತಿದ್ದುಪಡಿಕೆ , ವಿಶೇಷ ವಿಧಾನದ ಅವಶ್ಯಕತೆ ಇಲ್ಲ .
3 ) ಇಲ್ಲಿ ಸಂವಿಧಾನಾತ್ಮಕ ಕಾನೂನು ಮತ್ತು ಸಾಮಾನ್ಯ ಕಾನೂನುಗಳೆರಡನ್ನು ಪಾರ್ಲಿಮೆಂಟ್ ರಚಿಸುತ್ತದೆ .
4 ) ಇಲ್ಲಿ ಸರ್ಕಾರದ ಅಧಿಕಾರಗಳು ಪಾರ್ಲಿಮೆಂಟಿನಿಂದ ನಿರೂಪಿಸಲ್ಪಟ್ಟಿದ್ದು . ಪಾರ್ಲಿಮೆಂಟಿನ ಮಿತಿಗೊಳಪಟ್ಟಿರುತ್ತದೆ .
5 ) ಇಲ್ಲಿ ಸರ್ಕಾರದ ಅಧಿಕಾರಿಗಳು ಸ್ಪಷ್ಟವಾಗಿ ನಿರೂಪಿಸಲ್ಪಟ್ಟಿದ್ದು ಮಿತಿಗೊಳಪಟ್ಟಿರುತ್ತವೆ .
6 ) ಇಂತಹ ಸಂವಿಧಾನವಿರುವಲ್ಲಿ ಪಾರ್ಲಿಮೆಂಟಿನಿಂದ ರಚಿಸಲ್ಪಟ್ಟ ಎಲ್ಲಾ ಶಾಸನಗಳು ನ್ಯಾಯಿಕ ವಿಮರ್ಶೆಗೆ ಒಳಪಟ್ಟಿದೆ .
7 ) ಇಲ್ಲಿ ನಿರ್ದಿಷ್ಟತೆ ಮತ್ತು ಸ್ಪಷ್ಟತೆ ಇರುವುದಿಲ್ಲ .
8 ) ಇಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಭದ್ರತೆ ಇಲ್ಲ .
9 ) ಈ ಸಂವಿಧಾನ ಸ್ಥಿತಿಸ್ಥಾಪಕತೆಯನ್ನು ಪಡೆದಿದೆ .
4. ಪ್ರಜಾಸತಾತ್ಮಕ ಸರ್ಕಾರದ ಲಕ್ಷಣಗಳನ್ನು ವಿವರಿಸಿ
ಪ್ರಜೆಗಳ ಕೈಯಲ್ಲಿ ರಾಜ್ಯಾಧಿಕಾರವಿರುವ ರಾಜಕೀಯ ವ್ಯವಸ್ಥೆಯೇ ಪ್ರಜಾಸತಾತ್ಮಕ ಸರ್ಕಾರವಾಗಿದ್ದು ಇದರ ಪ್ರಮುಖ ಲಕ್ಷಣಗಳು ಕೆಳಗಿನಂತಿವೆ .
1. ಪ್ರಜೆಗಳಿಂದ ನಡೆಯುವ ಸರ್ಕಾರ : – ಇಲ್ಲಿ ಆಳುವವರು ಮತ್ತು ಆಳ್ವಿಕೆಗೆ ಒಳಪಡುವವರು ಪ್ರಜೆಗಳೇ ಆಗಿರುತ್ತಾರೆ . ಈ ವ್ಯವಸ್ಥೆಯಲ್ಲಿ ಪ್ರಜೆಗಳಲ್ಲಿ ಅಂತಿಮವಾಗಿ ಪರಮಾಧಿಕಾರ ಕೇಂದ್ರೀಕೃತವಾಗಿರುತ್ತದೆ .
2. ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ : – ಪ್ರಜಾಪ್ರಭುತ್ವವು ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ತತ್ವಗಳ ಮೂಲಾಧಾರವಾಗಿದೆ . ಇಲ್ಲಿ ಎಲ್ಲಾ ವ್ಯಕ್ತಿಗಳಿಗೆ ಮುಕ್ತ ಸ್ವಾತಂತ್ರ್ಯ ಸಮಾನ ಅವಕಾಶ ನೀಡುವುದರ ಮೂಲಕ ಭ್ರಾತೃತ್ವ ಭಾವನೆಯನ್ನು ಇದು ಮೂಡಿಸುತ್ತದೆ .
3. ಜನತಾ ಪರಮಾಧಿಕಾರ : – ಇಲ್ಲಿ ಸರ್ಕಾರವನ್ನು ರಚಿಸುವ , ನಿಯಂತ್ರಿಸುವ ಹಾಗೂ ಅಧಿಕಾರದಿಂದ ಉಚ್ಚಟಿಸುವ ಅಧಿಕಾರವು ಪ್ರಜೆಗಳ ಕೈಯಲ್ಲಿರುತ್ತದೆ . ಇದೇ ಜನತಾ ಪರಮಾಧಿಕಾರ .
4 . ಕಾನೂನಿನ ಆಡಳಿತ : – ಇಲ್ಲಿ ಪ್ರಜಾಪ್ರತಿನಿಧಿಗಳು ಸ್ಟೇಚ್ಚೆಯಿಂದ ಆಡಳಿತವನ್ನು ನಡೆಸದ ಕಾನೂನುಗಳು ಹಾಗೂ ನಿಯಮಗಳಿಗನುಗುಣವಾಗಿ ಆಡಳಿತ ನಡೆಸಬೇಕು .
5. ಬಹುಮತ ತತ್ವ : – ಇಲ್ಲಿ ಶಾಸನ ಸಭೆಯಲ್ಲಿ ಬಹುಮತ ಪಡೆದ ಪಕ್ಷ ಸರ್ಕಾರವನ್ನು ರಚಿಸುತ್ತದೆ . ಹಾಗೆಯೇ ಮಸೂದೆಗಳನ್ನು ಅನುಮೋದಿಸುವುದು , ಆಡಳಿತವನ್ನು ನಡೆಸುವುದು , ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ನಿರ್ಣಯಗಳನ್ನು ಪಾಸು ಮಾಡುವುದು ಬಹುಮತ ತತ್ವದ ಆಧಾರದ ಮೇಲೆಯೇ ಆಗಿದೆ .
6. ಹಕ್ಕುಗಳು : – ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಅಗತ್ಯವಾದ ನಾಗರೀಕ , ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಪ್ರಜಾಸತಾತ್ಮಕ ಸರ್ಕಾರ ತನ್ನ ಎಲ್ಲಾ ಪ್ರಜೆಗಳಿಗೆ ನೀಡುವುದರ ಮೂಲಕ ಆ ಹಕ್ಕುಗಳಿಗೆ ರಕ್ಷಣೆ ನೀಡುತ್ತದೆ .
7. ಸಂವಿಧಾನಾತ್ಮಕ ಸರ್ಕಾರ : – ಪ್ರಜಾಸತಾತ್ಮ ಸರ್ಕಾರ ಸ್ಟೇಚ್ಚೆಯಿಂದ ಆಡಳಿತ ನಡೆಸದೆ ಸಂವಿಧಾನದ ನಿಯಮಗಳಿಗನುಗುಣವಾಗಿ ಆಡಳಿತವನ್ನು ನಡೆಸುತ್ತದೆ . ಇಲ್ಲಿ ಸರ್ಕಾರದ ರಚನೆ , ಅಧಿಕಾರ ಮತ್ತು ಕಾರ್ಯವ್ಯಾಪ್ತಿ ಪ್ರಜೆಗಳು ಹಾಗೂ ರಾಜ್ಯದ ನಡುವಣ ಸಂಭಂದಗಳನ್ನು ಸಂವಿಧಾನವೇ ನಿರ್ಧರಿಸುತ್ತದೆ .
8. ಜವಾಬ್ದಾರಿಯುತ ಸರ್ಕಾರ : – ಸರ್ಕಾರವು ತನ್ನ ಆಡಳಿತ ನಿರ್ವಹಣೆ , ಕಾರ್ಯಕ್ರಮ ಹಾಗೂ ಧೋರಣೆಗಳಲ್ಲಿ ಪ್ರಜೆಗಳಿಗೆ ಹೊಣೆಯಾಗಿರುತ್ತದೆ . ಬೇಜವಾಬ್ದಾರಿಯಿಂದ ವರ್ತಿಸುವ ಸರ್ಕಾರವನ್ನು ಪ್ರಜೆಗಳು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸುತ್ತಾರೆ .
9. ಸಾರ್ವಜನಿಕ ಇಚ್ಚೆಯಾಧಾರಿತ ಸರ್ಕಾರ : – ಈ ಸರ್ಕಾರ ಆಧಾರ ಸಾರ್ವಜನಿಕ ಇಚ್ಚೆಯೇ ಹೊರತು ಬಲವಲ್ಲ . ಸರ್ಕಾರ ಎಲ್ಲಿಯವರೆಗೆ ಸಾರ್ವಜನಿಕ ಇಚ್ಛೆಗನುಗುಣವಾಗಿ ಆಡಳಿತವನ್ನು ನಡೆಸುತ್ತದೆಯೋ ಅಲ್ಲಿಯವರೆಗೆ ಮಾತ್ರ ಅಧಿಕಾರದಲ್ಲಿ ಮುಂದುವರೆಯುತ್ತದೆ .
10. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ : – ಇಲ್ಲಿ ಪ್ರಜೆಗಳು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯ ಮೂಲಕ ನಿಯತಕಾಲಿಕ ಚುನಾವಣೆಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಚುನಾಯಿಸುತ್ತಾರೆ .
11. ಸರ್ಕಾರದ ಶಾಂತಿಯುತ ಬದಲಾವಣೆ : – ಇಲ್ಲಿ ಸರ್ಕಾರದ ಬದಲಾವಣೆ ರಕ್ತಕ್ರಾಂತಿಯಿಂದ ಆಗದೆ ನಿಯತಕಾಲಿಕ ಚುನಾವಣೆಗಳ ಮೂಲಕ ಶಾಂತಿಯುತವಾಗಿ ಆಗುತ್ತದೆ . ಈ ರೀತಿ ಇನ್ನೂ ಅನೇಕ ಲಕ್ಷಣಗಳನ್ನು ಪ್ರಜಾಸತಾತ್ಮಕ ಸರ್ಕಾರ ಹೊಂದಿದೆ .
5. ನಿರಂಕುಶ ಸರ್ಕಾರದ ಲಕ್ಷಣಗಳನ್ನು ವಿವರಿಸಿ ,
ಅಂತಹ ಸರ್ಕಾರವನ್ನು ನಿರಂಕುಶ ಸರ್ಕಾರ ಎನ್ನುವರು , ಈ ಸರ್ಕಾರದ ಲಕ್ಷಣಗಳು ರಾಷ್ಟ್ರದ ಸಮಸ್ತ ಅಧಿಕಾರ ಏಕೈಕ ಬಲಿಷ್ಟ ವ್ಯಕ್ತಿಯಲ್ಲಿ ಕೇಂದ್ರೀಕೃತವಾಗಿದ್ದರೆ ಕೆಳಗಿನಂತಿವೆ .
1. ಏಕ ವ್ಯಕ್ತಿ ಆಳ್ವಿಕೆ : ಇಲ್ಲಿ ರಾಜ್ಯಾಧಿಕಾರವೆಲ್ಲವೂ ಏಕೈಕ ಬಲಿಷ್ಟ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾಗಿರುತ್ತದೆ . ಈತನೇ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂಗ ಎಲ್ಲವೂ ಆಗಿರುತ್ತದೆ .
2. ವ್ಯಕ್ತಿ ಸ್ವಾತಂತ್ರ್ಯದಲ್ಲಿ : ನಿರಂಕುಶ ಸರ್ಕಾರಗಳಲ್ಲಿ ನಿರಂಕುಶಾಧಿಕಾರಿಗಳಿಗೆ ವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇಲ್ಲದಿರುವುದರಿಂದ ವ್ಯಕ್ತಿಗಳಿಗೆ ಯಾವುದೇ ರೀತಿಯ ಸ್ವಾತಂತ್ರ್ಯವನ್ನು ನೀಡಿರುವುದಿಲ್ಲ . ಇಲ್ಲಿ ಜನರ ಸ್ವಾತಂತ್ರ್ಯವನ್ನು ತನ್ನ ಸೈನ್ಯದ ಮೂಲಕ ಹತ್ತಿಕ್ಕಲಾಗುತ್ತದೆ .
3. ಹಕ್ಕುಗಳಿರುವುದಿಲ್ಲ : ಇಲ್ಲಿ ಸಮಾನತೆ , ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಿಂತ ಕರ್ತವ್ಯ ಅರ್ಪಣೆ ಮತ್ತು ಶಿಸ್ತುಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದರಿಂದ ಪ್ರಜೆಗಳಿಗೆ ಯಾವುದೇ ರೀತಿಯ ಹಕ್ಕನ್ನು ನೀಡಿರುವುದಿಲ್ಲ .
4. ಜನತೆಯ ಬೆಂಬಲವಿಲ್ಲ : ನಿರಂಕುಶ ಸರ್ಕಾರಕ್ಕೆ ಜನತೆಯ ಬೆಂಲವಿರುವುದಿಲ್ಲ . ಅದರ ಮೂಲಾಧಾರ ಸೈನ್ಯದ ಬಲ ಸಾರ್ವಜನಿಕಾಭಿಪ್ರಾಯ ಅತಿಯಾಗಿರದೆ ಒಬ್ಬ ನಾಯಕ / ಒಂದು ಪಕ್ಷ ರಾಜ್ಯಾಧಿಕಾರ ಚಲಾಯಿಸುತ್ತದೆ .
5. ದಬ್ಬಾಳಿಕೆಯೇ ನಿರಂಕುಶತ್ವದ ಅಡಿಗಲ್ಲು : ನಿರಂಕುಶ ಪ್ರಜೆಗಳು : ಬಲಪ್ರಯೋಗ / ದಬ್ಬಾಳಿಕೆಯ ಮೂಲಕ ಅಧಿಕಾರಕ್ಕೆ ಬರುವುದಲ್ಲದೆ ದಬ್ಬಾಳಿಕೆಯ ಮೂಲಕವೇ ಅಧಿಕಾರದಲ್ಲಿ ಮುಂದುವರಿಯುತ್ತಾರೆ .
6. ಯುದ್ಧದ ವೈಭವೀಕರಣ : ನಿರಂಕುಶ ಪ್ರಭುಗಳು ರಕ್ತಪಿಪಾಸುಗಳು ಹಾಗೂ ಇವರು ಯುದ್ಧವೊಂದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬ ತತ್ವದಲ್ಲಿ ಅಚಲವಾದ ಯುದ್ಧಕಾಂಕ್ಷಿಗಳಾಗಿರುತ್ತಾರೆ . ನಂಬಿಕೆಯನ್ನು ಇಟ್ಟಿರುತ್ತಾರೆ . ಯುದ್ಧ ಮಾಡದೆ ಸುಮ್ಮನೆ ಕೂರುವುದು ಹೇಡಿಗಳ ಕೆಲಸವೆಂಬುದು ಅವರ ಅಭಿಪ್ರಾಯ ಹಾಗಾಗಿಯೇ ಮುಸಲೋನಿ “ ಹೆಣ್ಣಿಗೆ ತಾಯ್ತನವು ಎಷ್ಟು ಮುಖ್ಯವೋ , ಗಂಡಿಗೆ ಯುದ್ಧವೂ ಅಷ್ಟೇ ಮುಖ್ಯ ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ .
7. ರಾಜ್ಯದ ವೈಭವೀಕರಣ : ಸರ್ವಾಧಿಕಾರಿಗಳು ರಾಜ್ಯವನ್ನು ದೇವರ ಸಮವೆಂದು ವಾದಿಸಿ ರಾಜ್ಯದ ಏಳಿಗೆಗಾಗಿ ಎಲ್ಲರೂ ಬಲಿದಾನ ಮಾಡಲು ಸದಾ ಸಿದ್ಧರಾಗಿರಬೇಕು ಎಂದರು .
8. ಜನಾಂಗೀಯ ಪ್ರಾಮುಖ್ಯತೆ : ನಿರಂಕುಶ ಸರ್ಕಾರವು ಒಂದು ನಿರ್ಧಿಷ್ಟ ಜನಾಂಗಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತವೆ . ಉದಾ : – ಹಿಟ್ಲರ್ ಆರ್ಯರನ್ನು , ಸದ್ದಾಂ ಹುಸೇನ್ ಮುಸ್ಲಿಂರನ್ನು ಶ್ರೇಷ್ಟ ಜನಾಂಗಗಳೆಂದು ಘೋಷಿಸಿದ್ದರು .
9. ಉಗ್ರರಾಷ್ಟ್ರೀಯತೆ : ಉಗ್ರರಾಷ್ಟ್ರೀಯತೆಯನ್ನು ಪ್ರಜೆಗಳಲ್ಲಿ ಪ್ರಚೋದಿಸುವುದು ನಿರಂಕುಶತ್ವದ ಲಕ್ಷಣವಾಗಿದೆ . ರಾಷ್ಟ್ರದ ಪ್ರಜೆಗಳಲ್ಲಿ ತಮ್ಮ ಜನಾಂಗದ ಶ್ರೇಷ್ಟತೆ , ಸಂಸ್ಕೃತಿ , ಭಾಷಾ ಮತ್ತು ಸಾಹಿತ್ಯದ ಪ್ರೇಮ ಮುಂತಾದವುಗಳ ಬಗ್ಗೆ ಅಭಿಮಾನವನ್ನು ಮೂಡಿಸಿ ಬೇರೆ ದೇಶಗಳ ಬಗ್ಗೆ ಮತ್ತು ಅವುಗಳ ಜನಾಂಗ ಮತ್ತು ಸಂಸ್ಕೃತಿಯ ಬಗ್ಗೆ ದ್ವೇಷವನ್ನು ಮೂಡಿಸುತ್ತದೆ .
10. ವಿಶ್ವಶಾಂತಿಗೆ ಮಾರಕ : ನಿರಂಕುಶತ್ವವು ಅಂತರ್‌ರಾಷ್ಟ್ರೀಯ ಶಾಂತಿಯನ್ನು ಕಡೆಗಣಿಸಿ ರಾಷ್ಟ್ರದ ಪ್ರಜೆಗಳಲ್ಲಿ ಆಕ್ರಮಣಕಾರಿ ಮನೋಭಾವನೆಯನ್ನು ಮೂಡಿಸುತ್ತದೆ .
11. ಪ್ರಜಾಪ್ರಭುತ್ವಕ್ಕೆ ವಿರೋಧ : ಇಲ್ಲಿ ಪ್ರಜಾಪ್ರಭುತ್ವದಲ್ಲಿರುವಂತೆ ವ್ಯಕ್ತಿಯ ಅಭಿಪ್ರಾಯಗಳಿಗೆ ಮತ್ತು ಅನಿಸಿಕೆಗಳಿಗೆ ಪ್ರಾಮುಖ್ಯತೆ ಇರುವುದಿಲ್ಲ . ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ತತ್ವಕ್ಕೆ ವಿರುದ್ಧವಾಗಿರುತ್ತದೆ .
6. ಸಂಸದೀಯ ಸರ್ಕಾರದ ಲಕ್ಷಣಗಳನ್ನು ವಿವರಿಸಿ .
1. ನಾಮಮಾತ್ರ ಕಾರ್ಯಾಂಗ :ಶಾಸಕಾಂಗದಿಂದ ಸೃಷ್ಟಿಸಲ್ಪಟ್ಟಿದ್ದು ಕಾರ್ಯಾಂಗದ ಅಸ್ತಿತ್ವ ಶಾಸಕಾಂಗದ ಇಚ್ಚೆಗೆ ಒಳಪಟ್ಟಿದ್ದರೆ ಅಂತಹ ಸರ್ಕಾರವೇ ಸಂಸದೀಯ ಸರ್ಕಾರ , ಈ ಸರ್ಕಾರದ ಲಕ್ಷಣಗಳು ಇಂತಿವೆ .
ಮಾತ್ರ ಸಂಸದೀಯ ಸರ್ಕಾರ ವ್ಯವಸ್ಥೆಯಲ್ಲಿ ನಾಮಮಾತ್ರ ಕಾರ್ಯಾಂಗ ಮತ್ತು ನೈ ಕಾರ್ಯಾಂಗ ಎಂಬ ಎರಡು ವಿಧದ ಕಾರ್ಯಾಂಗಗಳು ಅಸ್ತಿತ್ವದಲ್ಲಿರುತ್ತವೆ . ಸಂವಿಧಾನ ಬದ್ದವಾಗಿ ರಾಷ್ಟ್ರದ ಸಮಸ್ತ ಕಾರ್ಯ ನಿರ್ವಾಹಕ ಅಧಿಕಾರಿಗಳು ನಾಮ ಕಾರ್ಯಾಂಗದಲ್ಲಿ ಕೇಂದ್ರೀಕೃತವಾಗಿರುತ್ತದೆ .
2. ಸಚಿವ ಸಂಪುಟ ನೈಜ ಕಾರ್ಯಾಂಗ : ಈ ಪ್ರಧಾನಿಯ ನಾಯಕತ್ವದ ಸಚಿವ ಸಂಪುಟವು ನೈಜ ಕಾರ್ಯಾಂಗವಾಗಿರುತ್ತದೆ . ರಾಷ್ಟ್ರಪತಿಗಳ ಹೆಸರಿನಲ್ಲಿರುವ ಕಾರ್ಯಾಂಗದ ಎಲ್ಲಾ ಅಧಿಕಾರಗಳನ್ನು ವಾಸ್ತವವಾಗಿ ಸಚಿವ ಸಂಪುಟವು ಚಲಾಯಿಸುತ್ತದೆ .
3 . ಸಚಿವ ಸಂಪುಟ ಸಂಸತ್ತಿನಿಂದ ಸೃಷ್ಟಿಸಲ್ಪಟ್ಟಿರುತ್ತದೆ : ಸಂಸದೀಯ ಪದ್ಧತಿಯಲ್ಲಿ ಸಚಿವ ಸಂಪುಟವು ಸಂಸತ್ತಿನಿಂದ ಸೃಷ್ಟಿಸಲ್ಪಟ್ಟಿರುತ್ತದೆ . ಸಾಮಾನ್ಯವಾಗಿ ಸಂಸತ್ತಿನ ಕೆಳಮನೆಯಲ್ಲಿ ಬಹುಮತ ಪಡೆದ ಪಕ್ಷದ ನಾಯಕನನ್ನು ಪ್ರಧಾನಿಯನ್ನಾಗಿ ನೇಮಕ ಮಾಡಲಾಗುತ್ತದೆ . ಹಾಗೂ ಬಹುಮತ ಪಡೆದ ಪಕ್ಷದ ಸದಸ್ಯರನ್ನು ಮಂತ್ರಿಗಳನ್ನಾಗಿ ನೇಮಕ ಮಾಡಲಾಗುತ್ತದೆ .
4. ವೈಯಕ್ತಿಕ ಹೊಣೆಗಾರಿಕೆ : ಮಂತ್ರಿಮಂಡಲದ ಪ್ರತಿಯೊಬ್ಬ ಸದಸ್ಯನು ತನ್ನ ಖಾತೆಯ ಆಡಳಿತ ನಿರ್ವಹಣೆ , ನಿರ್ಧಾರ ಹಾಗೂ ಆಗು – ಹೋಗುಗಳಿಗೆ ಸಂಭಂದಿಸಿದಂತೆ ರಾಷ್ಟ್ರಾಧ್ಯಕ್ಷರಿಗೆ ವೈಯಕ್ತಿಕವಾಗಿ ಹೊಣೆಯಾಗಿರುತ್ತಾನೆ
5. ಸಾಮೂಹಿಕ ಹೊಣೆಗಾರಿಕೆ : ಇಲ್ಲಿ ಮಂತ್ರಿಮಂಡಲವು ತನ್ನ ಆಡಳಿತ , ನಿರ್ಧಾರ , ನೀತಿ ನಿರೂಪಣೆ ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾಮೂಹಿಕವಾಗಿ ಸಂಸತ್ತಿಗೆ ಹೊಣೆಯಾಗಿರುತ್ತದೆ . ಮಂತ್ರಿಮಂಡಲವು ಎಲ್ಲಿಯವರೆಗೆ ಸಂಸತ್ತಿನ ವಿಶ್ವಾಸವನ್ನು ಹೊಂದಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ಅಧಿಕಾರದಲ್ಲಿರುತ್ತದೆ . ಈ ಅಧಿವ
6. ಪ್ರಧಾನಿಯ ನಾಯಕತ್ವ : ಇಲ್ಲಿ ಪ್ರಧಾನಿಯು ಮಂತ್ರಿಮಂಡಲದ ನಾಯಕರಾಗಿ ಮಂತ್ರಿಗಳ ಆಯ್ಕೆ , ಖಾತೆಗಳ ಹಂಚಿಕೆ , ಖಾತೆಗಳ ಪುನರ್‌ಹಂಚಿಕೆ , ಮಂತ್ರಿ ಮಂಡಲದ ಮನರ್‌ರಚನೆ ಮಂತ್ರಿಗಳ ಮೇಲೆ ನಿಯಂತ್ರಣ ಮುಂತಾದ ಅಧಿಕಾರವನ್ನು ಹೊಂದಿದ್ದಾರೆ . ಮಂತ್ರಿಮಂಡಲದ ಎಲ್ಲಾ ಕಾರ್ಯಗಳು ಪ್ರಧಾನಿಯ ಅಧ್ಯಕ್ಷತೆಯಲ್ಲಿಯೇ ನಡೆಯುತ್ತದೆ .
7 . ರಾಜಕೀಯ ಸಾಮರಸ್ಯ – ಇಲ್ಲಿ ಎಲ್ಲಾ ಮಂತ್ರಿಗಳು ಬಹುಮತ ಒಂದೇ ಪಕ್ಷಕ್ಕೆ ಸೇರಿದವರಾಗಿರುತ್ತಾರೆ . ಇದರಿಂದ ಸಚಿವ ಸಂಪುಟದ ಕಾರ್ಯಕ್ರಮ , ನೀತಿ ಹಾಗೂ ನಿರ್ಧಾರಗಳಿಗೆ ಸಹಮತ ವ್ಯಕ್ತಪಡಿಸುತ್ತಾರೆ .
8. ರಚನಾತ್ಮಕ ವಿರೋಧಿ ಪಕ್ಷ : ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರವನ್ನು ರಚಿಸಲು ವಿಫಲವಾದ ರಾಜಕೀಯ ಪಕ್ಷವು ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುತ್ತದೆ . ಇದು ಸರ್ಕಾರದ ಜನವಿರೋಧಿ ನೀತಿಗಳನ್ನು ಮತ್ತು ದೋಷಪೂರಿತ ಆಡಳಿತಶೈಲಿಯನ್ನು ತೀವ್ರವಾಗಿ ವಿರೋಧಿಸುವ ಮೂಲಕ ಜನ ಜಾಗೃತಿ ಮೂಡಿಸಿ , ಸರ್ಕಾರವನ್ನು ಸದಾ ಜಾಗೃತವಸ್ತೆಯಲ್ಲಿ ಇಡುತ್ತದೆ .
9. ಶಾಸಕಾಂಗ ಮತ್ತು ಕಾರ್ಯಾಂಗದ ಸಾಮರಸ್ಯ : ಕಾರ್ಯಾಂಗದ ಸದಸ್ಯರು ಶಾಸಕರೇ ಆಗಿರುವುದರಿಂದ ಹಾಗೂ ಬಹುಪಾಲು ಸಂದರ್ಭದಲ್ಲಿ ಇವರೆಲ್ಲ ಬಹುಮತ ಪಡೆದ ಏಕೈಕ ರಾಜಕೀಯ ಪಕ್ಷದ ಸದಸ್ಯರೇ ಆಗಿರುವುದರಿಂದ ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ ಸಾಮರಸ್ಯವಿರುತ್ತದೆ .
10. ಕಾರ್ಯಾಂಗ ಶಾಸಕಾಂಗಕ್ಕೆ ಅಧೀನ : ಇಲ್ಲಿ ಕಾರ್ಯಾಂಗವು ಶಾಸಕಾಂಗದ ಹತೋಟಿಯಲ್ಲಿರುತ್ತದೆ . ಮಂತ್ರಿಗಳು ಶಾಸಕಾಂಗದ ಬೆಂಬಲವಿರುವವರೆಗೆ ಅಧಿಕಾರದಲ್ಲಿರುತ್ತಾರೆ . ಬೆಂಬಲ ಕಳೆದುಕೊಂಡರೆ ಒಂದೇ ಕ್ಷಣದಲ್ಲಿ ಕಾರ್ಯಾಂಗವಾದ ಮಂತ್ರಿಮಂಡಲ ರಾಜಿನಾಮೆ ನೀಡಬೇಕಾಗುತ್ತದೆ .
11. ಕೆಳಮನೆಯ ವಿಸರ್ಜನೆ : ಇಲ್ಲಿ ಪ್ರಧಾನಿಯ ಸಲಹೆ ಮೇರೆಗೆ ರಾಷ್ಟ್ರದ ಮುಖ್ಯಸ್ಥರು ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಬಹುದು .
7. ಅಧ್ಯಕ್ಷೀಯ ಸರ್ಕಾರದ ಲಕ್ಷಣಗಳನ್ನು ವಿವರಿಸಿ .
ಪ್ರಜೆಗಳಿಂದ ಪ್ರತ್ಯಕ್ಷವಾಗಿ / ಪರೋಕ್ಷವಾಗಿ ನಿರ್ಧಿಷ್ಟ ಅವಧಿಗೆ ಚುನಾಯಿತರಾದ ಅಧ್ಯಕ್ಷರು ಆಡಳಿತ ನಡೆಸುವ ಸರ್ಕಾರ ಪದ್ಧತಿಯೇ ಅಧ್ಯಕ್ಷೀಯ ಸರ್ಕಾರವಾಗಿದೆ . ಇದರ ಲಕ್ಷಣಗಳು ಕೆಳಗಿನಂತಿವೆ .
1. ರಾಷ್ಟ್ರದ ಮುಖ್ಯಸ್ಥ ನೈಜ ಕಾರ್ಯಾಂಗ : ಇಲ್ಲಿ ನಾಮ ಮಾತ್ರ ಕಾರ್ಯಾಂಗ ಮತ್ತು ನೈಜ ಕಾರ್ಯಾಂಗಗಳ ನಡುವೆ ರಾಜ್ಯದಾದ್ಯ ಅಧ್ಯಕ್ಷರ ಹೆಸರಿನಲ್ಲಿಯೇ ಇದ್ದು ವಾಸ್ತವವಾಗಿ ಮತ್ತು ಪ್ರಾಯೋಗಿಕವಾಗಿ ಅವರೇ ವ್ಯತ್ಯಾಸವಿರುವುದಿಲ್ಲ . ಕಾರ್ಯಾಂಗದ ಎಲ್ಲಾ ಅಧಿಕಾರಗಳು ರಾಷ್ಟ್ರದ ಮುಖ್ಯಸ್ಥರಾದ ಚಲಾಯಿಸುತ್ತಾರೆ . ಅಧ್ಯಕ್ಷರು ಸಂವಿಧಾನದ ಮುಖ್ಯಸ್ತರಾಗಿ , ಸರ್ಕಾರದ ಪ್ರಮುಖರಾಗಿ ಮತ್ತು ಅವರೇ ನೈಜ ಕಾರ್ಯನಿರ್ವಹಣಾಧಿಕಾರಿಯಾಗಿರುತ್ತಾರೆ .
2. ಚುನಾಯಿತ ಪ್ರತಿನಿಧಿ : – ಇಲ್ಲಿ ರಾಷ್ಟಾಧ್ಯಕ್ಷರು ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಯಾಗಿರುತ್ತಾರೆ . ರಾಷ್ಟ್ರಾಧ್ಯಕ್ಷರನ್ನು ಪ್ರಜೆಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಚುನಾಯಿಸುತ್ತಾರೆ .
3. ನಿರ್ಧಿಷ್ಟ ಅಧಿಕಾರವಧಿ : – ಇಲ್ಲಿ ಅಧ್ಯಕ್ಷರು ಜನರಿಂದ ನೇರವಾಗಿ ಚುನಾವಣೆಯ ಮೂಲಕ ಒಂದು ನಿರ್ಧಿಷ್ಟ ಅವಧಿಗೆ ಆಯ್ಕೆಯಾಗಿರುತ್ತಾರೆ . ಮತ್ತು ಅವರ ಅಧಿಕಾರವಧಿ ಶಾಸಕಾಂಗದ ಇಚ್ಚೆಯ ಮೇಲೆ ಅವಲಂಬನೆಯಾಗಿರುವುದಿಲ್ಲ . ಇವರ ಅಧಿಕಾರವಧಿಯನ್ನು ಸಂವಿಧಾನವೇ ಗೊತ್ತುಪಡಿಸಿರುತ್ತದೆ .
4 . ಕಾರ್ಯಾಂಗ ಶಾಸಕಾಂಗದ ಸೃಷ್ಟಿಯಲ್ಲಿ : – ಇಲ್ಲಿ ಶಾಸಕಾಂಗದ ಸದಸ್ಯರನ್ನು ರಾಷ್ಟ್ರಾಧ್ಯಕ್ಷರು ಮಂತ್ರಿಗಳನ್ನಾಗಿ ನೇಮಕ ಮಾಡುವುದರ ಮೂಲಕ ಕಾರ್ಯಾಂಗವನ್ನ ರಚಿಸುವುದಿಲ್ಲ . ಸಂಸದೀಯ ಪದ್ಧತಿಯಲ್ಲಿರುವಂತೆ ಕಾರ್ಯಾಂಗದ ಸದಸ್ಯರು ಶಾಸಕಾಂಗದ ಸದಸ್ಯರಾಗಿರಬೇಕೆಂಬ ನಿಯಮವಿಲ್ಲ .
5. ಕಾರ್ಯಾಂಗ ಶಾಸಕಾಂಗದಿಂದ ಸ್ವಾತಂತ್ರ್ಯ- ಸಂಸದೀಯ ಪದ್ಧತಿಯಲ್ಲಿರುವಂತೆ ಇಲ್ಲಿನ ಕಾರ್ಯಾಂಗ ಶಾಸಕಾಂಗಕ್ಕೆ ಹೊಣೆಯಾಗಿರದೆ , ಸಂಪೂರ್ಣವಾಗಿ ಸ್ವಾತಂತ್ರ್ಯವಾಗಿರುತ್ತದೆ .
6. ಅಧಿಕಾರ ವಿಭಜನೆ : – ಅಧ್ಯಕ್ಷೀಯ ಸರ್ಕಾರವು ಮಾಂಟೆಸ್ಕೋ ರವರ ಅಧಿಕಾರ ವಿಭಜನಾ ಸಿದ್ಧಾಂತದ ಆಧಾರದ ಮೇಲೆ ರಚಿತವಾಗಿದೆ . ಇಲ್ಲಿ ಶಾಸನೀಯ , ಕಾರ್ಯಾಂಗೀಯ ಮತ್ತು ನ್ಯಾಯಾಂಗ ಅಧಿಕಾರಗಳು ಯಾವುದೇ ಒಂದು ಅಂಗದಲ್ಲಿ ಕೇಂದ್ರೀಕೃತವಾಗಿರದೆ ಸರ್ಕಾರದ 3 ಅಂಗಗಳಲ್ಲಿ ನೆಲೆಸಿರುತ್ತದೆ .
7. ಶಾಸಕಾಂಗದ ನಿಯಂತ್ರಣವಿಲ್ಲ : – ಇಲ್ಲಿ ಕಾರ್ಯಾಂಗವು ಶಾಸಕಾಂಗದ ನಿಯಂತ್ರಣದಲ್ಲಿರುವುದಿಲ್ಲ ಹಾಗಾಗಿ ಶಾಸಕಾಂಗ ಅವಿಶ್ವಾಸ ನಿರ್ಣಯದ ಮೂಲಕ ಕಾರ್ಯಾಂಗವನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ .
8. ಮಂತ್ರಿಗಳು ಅಧ್ಯಕ್ಷರಿಗೆ ಅಧೀನರಾಗಿರುತ್ತಾರೆ : – ಇಲ್ಲಿ ರಾಷ್ಟ್ರಾಧ್ಯಕ್ಷರ ಸಹೋದ್ಯೋಗಿಗಳನ್ನು ಕಾರ್ಯದರ್ಶಿಗಳು ಎನ್ನುವರು . ಶಾಸಕಾಂಗದ ಸದಸ್ಯರಲ್ಲಿ ಇವರನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ . ಆದ್ದರಿಂದ ಕಾರ್ಯದರ್ಶಿಗಳು ಶಾಸಕಾಂಗಕ್ಕೆ ಅಧೀನರಾಗಿರದೆ ರಾಷ್ಟ್ರಾಧ್ಯಕ್ಷರಿಗೆ ಹೊಣೆಗಾರರು ಮತ್ತು ಅಧೀನರಾಗಿರುತ್ತಾರೆ .
9. ತಡೆ ಮತ್ತು ಸಮತೋಲನ ವ್ಯವಸ್ಥೆ : – ಇಲ್ಲಿ ಅಧಿಕಾರ ಪ್ರತ್ಯೇಕ ಸಿದ್ಧಾಂತದ ಸಂಪೂರ್ಣ ಆಚರಣೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲದ್ದರಿಂದ ತಡೆ ಮತ್ತು ಸಮತೋಲನ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ . ಸರ್ಕಾರದ 3 ಅಂಗಗಳು ಪರಸ್ಪರ ಒಂದನ್ನೊಂದು ನಿಯಂತ್ರಿಸುವುದರ ಮೂಲಕ ಅಧಿಕಾರ ಸಮತೋಲನವನ್ನು ಕಾಪಾಡಿಕೊಂಡು ಬರುವ ವ್ಯವಸ್ಥೆಗೆ “ ತಡೆ ಮತ್ತು ಸಮತೋಲನದ ವ್ಯವಸ್ಥೆ ” ಎನ್ನುವರು .
8. ಪ್ರಜಾಸತಾತ್ಮಕ ಮತ್ತು ನಿರಂಕುಶತ್ವ ಸರ್ಕಾರದ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ .
ಪ್ರಜೆಗಳ ಕೈಯಲ್ಲಿ ರಾಜ್ಯಾಧಿಕಾರವಿರುವ ರಾಜಕೀಯ ವ್ಯವಸ್ಥೆಯು ಪ್ರಜಾಸತಾತ್ಮಕ ಸರ್ಕಾರವಾಗಿದ್ದರೆ , ರಾಷ್ಟ್ರದ ಸಮಸ್ತ ಅಧಿಕಾರ ಏಕೈಕ ಬಲಿಷ್ಟ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾಗಿರುವ ವ್ಯವಸ್ಥೆಯು ನಿರಂಕುಶತ್ವವಾಗದೆ ಇವೆರೆಡರ ನಡುವಣ ವ್ಯತ್ಯಾಸ ಕೆಳಗಿನಂತಿದೆ .
ಪ್ರಜಾಸತಾತ್ಮಕ ಸರ್ಕಾರ :
1.ಪ್ರಜೆಗಳ ಆಳ್ವಿಕೆ .
2. ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ಭಾವನೆ ಇರುತ್ತದೆ .
3 . ಜನತಾ ಪರಮಾಧಿಕಾರ .
4 . ಕಾನೂನಿನ ಆಡಳಿತ .
5. ಜನತೆಯ ಬೆಂಬಲದ ಆಧಾರದ ಮೇಲೆ ಆಳ್ವಿಕೆ .
6. ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವ ತಪ್ಪುಗಳು ಪ್ರಜಾಸತಾತ್ಮಕ ಸರ್ಕಾರದ ಅಡಿಗಲ್ಲು .
7. ಪ್ರಜೆಗಳಿಗೆ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಲಾಗುತ್ತದೆ .
8. ಸರ್ಕಾರದ ಶಾಂತಿಯುತ ಬದಲಾವಣೆ .
9. ಚುನಾವಣೆಗಳ ಮೂಲಕ ಸರ್ಕಾರದ ರಚನೆ .
10. ರಾಜಕೀಯ ಸಾಮರಸ್ಯವಿರುತ್ತದೆ .
11 . ಇಲ್ಲಿ ಎಲ್ಲರ ಹಿತಾಸಕ್ತಿ ರಕ್ಷಣೆ ಸಾಧ್ಯವಿದೆ .
12. ಇದು ಸಂವಿಧಾನಾತ್ಮಕ ಸರ್ಕಾರವಾಗಿರುತ್ತದೆ .
13. ವಿರೋಧ ಪಕ್ಷಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ .
14. ಇಲ್ಲಿ ಅಧಿಕಾರದ ಪ್ರತ್ಯೇಕತೆ ಇರುತ್ತದೆ . 85 n d
ನಿರಂಕುಶತ್ವ ಸರ್ಕಾರ :
1. ಬಲಿಷ್ಟ ವ್ಯಕ್ತಿಯ ಆಳ್ವಿಕೆ .
2. ಇಲ್ಲಿ ವ್ಯಕ್ತಿಗಳಿಗೆ ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವ ಭಾವನೆಗಳಿರುವುದಿಲ್ಲ
3. ನಿರಂಕುಶಾಧಿಕಾರಿ ಪರಮಾಧಿಕಾರಿ
4. ಕಾನೂನುಗಳಿಗೆ ಬೆಲೆಯಿಲ್ಲ .
5. ಜನತೆಯ ಬೆಂಬಲವಿರುವುದಿಲ್ಲ .
6. ದಬ್ಬಾಳಿಕೆಯೇ ಇದರ ಅಡಿಗಲ್ಲು .
7 . ಪ್ರಜೆಗೆ ಯಾವುದೇ ರೀತಿಯ ಹಕ್ಕುಗಳನ್ನು ನೀಡಲಾಗಿರುವುದಿಲ್ಲ .
8 . ಕ್ರಾಂತಿಯ ಮೂಲಕ ಸರ್ಕಾರದ ಬದಲಾವಣೆ . 9. ಚುನಾವಣೆಗೆ ಅರ್ಥವೇ ಇಲ್ಲ .
10. ರಾಜಕೀಯ ಅಸ್ಥರತೆ ಇರುತ್ತದೆ .
II . ಇಲ್ಲಿ ಅಧಿಕಾರಸ್ಥ ಸಮೂಹದ ಹಿತಾಸಕ್ತಿ ರಕ್ಷಣೆ ಮಾತ್ರ
12. ಇಲ್ಲಿ ಸಂವಿಧಾನವೇ ಇರುವುದಿಲ್ಲ .
13. ವಿರೋಧಿಗಳನ್ನು ಹತ್ತಿಕ್ಕಲಾಗುತ್ತದೆ .
14. ಇಲ್ಲಿ ಅಧಿಕಾರ ಸಂಪೂರ್ಣವಾಗಿ ನಿರಂಕುಶ ಪ್ರಭುವಿನಲ್ಲಿ ಕೇಂದ್ರೀಕೃತವಾಗಿರುತ್ತದೆ .
9. ಸಂಸದೀಯ ಮತ್ತು ಅಧ್ಯಕ್ಷೀಯ ಸರ್ಕಾರದ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ .
ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವಿನ ಸಂಭದದ ಆಧಾರದ ಮೇಲೆ ಕಾರ್ಯಾಂಗವನ್ನು ಸಂಸದೀಯ ಕಾರ್ಯಾಂಗ ಮತ್ತು ಅಧ್ಯಕ್ಷೀಯ ಕಾರ್ಯಾಂಗವೆಂದು ವರ್ಗೀಕರಿಸಲಾಗಿದೆ . ಕಾರ್ಯಾಂಗ ಶಾಸಕಾಂಗದಿಂದ ಸೃಷ್ಟಿಯಾಗಿದ್ದು , ಕಾರ್ಯಾಂಗದ ಅಸ್ತಿತ್ವ ಶಾಸಕಾಂಗದ ಇಚ್ಛೆಗೆ ಒಳಪಟ್ಟಿದ್ದರೆ ಅಂತಹ ಸರ್ಕಾರವನ್ನು ಸಂಸದೀಯ ಸರ್ಕಾರ ಎನ್ನುವರು . ಆದರೆ ಕಾರ್ಯಾಂಗದ ಮುಖ್ಯಸ್ಥನಾಗಿರುವ ಅಧ್ಯಕ್ಷನು ಪ್ರಜೆಗಳಿಂದ ಪ್ರತ್ಯಕ್ಷನಾಗಿ ಇಲ್ಲವೇ ಪರೋಕ್ಷವಾಗಿ ನಿರ್ಧಿಷ್ಟ ಅವಧಿಗೆ ಚುನಾಯಿತನಾಗಿದ್ದರೆ ಅಂತಹ ಸರ್ಕಾರವನ್ನು ಅಧ್ಯಕ್ಷೀಯ ಸರ್ಕಾರ ಎನ್ನುವರು . ಇವೆರೆಡರ ನಡುವಿನ ವ್ಯತ್ಯಾಸ ಕೆಳಗಿನಂತಿದೆ .
ಸಂಸದೀಯ ಕಾರ್ಯಾಂಗ
1. ನಾಮಮಾತ್ರ ಮತ್ತು ನೈಜಕಾರ್ಯಾಂಗಗಳೆಂಬ ಎರಡು ರೀತಿಯ ಕಾರ್ಯಾಂಗವಿರುತ್ತದೆ .
2. ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ ಸುಮಧುರ ಸಂಭಂದವಿರುತ್ತದೆ .
3. ‘ ಇಲ್ಲಿ ಕಾರ್ಯಾಂಗದ ಅಧಿಕಾರವಧಿ ನಿಶ್ಚಿತವಲ್ಲ ಅದು ಶಾಸಕಾಂಗದ ಇಚ್ಚೆಯನ್ನು ಅವಲಂಭಿಸಿರುತ್ತದೆ .
4. ಕಾರ್ಯಾಂಗವು ಶಾಸಕಾಂಗಕ್ಕೆ ಅಧೀನವಾಗಿರುತ್ತದೆ .
5. ಮಂತ್ರಿಗಳನ್ನು ಶಾಸಕಾಂಗದಿಂದ ಆರಿಸಲಾಗಿದ್ದು ಅವರು ತಮ್ಮ ಕಾರ್ಯಗಳಿಗೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಶಾಸಕಾಂಗಕ್ಕೆ ಜವಾಬ್ದಾರರಾಗಿರುತ್ತಾರೆ .
6. ಹೆಚ್ಚಿನ ಸ್ಥಿತಿಸ್ಥಾಪಕತೆ ಹೊಂದಿದೆ .
7. ಪಕ್ಷದ ವತಿಯಿಂದ ಸರ್ಕಾರದ ರಚನೆಯಾಗಿರುತ್ತದೆ .
8. ಸರ್ಕಾರದ ಸರ್ವಾಧಿಕಾರವನ್ನು ಸ್ವಲ್ಪಮಟ್ಟಿಗೆ ತಡೆಗಟ್ಟಬಹುದು .
ಅಧ್ಯಕ್ಷೀಯ ಕಾರ್ಯಾಂಗ :
1. ನಾಮಮಾತ್ರ ಮತ್ತು ನೈಜಕಾರ್ಯಾಂಗಗಳೆರಡೂ ಒಂದೇ ಆಗಿರುತ್ತದೆ .
2. ಶಾಸಕಾಂಗ ಮತ್ತು ಕಾರ್ಯಾಂಗಗಳು ಭಿನ್ನವಾಗಿರುತ್ತದೆ .
3. ಅಧಿಕಾರವಧಿ ನಿಶ್ಚಿತವಾಗಿರುತ್ತದೆ .
4. ಶಾಸಕಾಂಗ ಮತ್ತು ಕಾರ್ಯಾಂಗಗಳು ಸ್ವತಂತ್ರವಾಗಿರುತ್ತದೆ .
5. ಅಧ್ಯಕ್ಷರಿಂದ ನೇಮಕಗೊಂಡಿದ್ದು ಅವರಿಗೆ ಮಾತ್ರ ಜವಾಬ್ದಾರರಾಗಿರುತ್ತಾರೆ .
6. ಅನಮ್ಯತೆಯಿಂದ ಕೂಡಿದೆ .
7. ಆಡಳಿತದಲ್ಲಿ ಅನುಭವವಿರುವವರಿಗೆ ಪಕ್ಷಾತೀತವಾಗಿ ಆದ್ಯತೆ ನೀಡಿರುತ್ತದೆ .
8. ಅಧ್ಯಕ್ಷರು ಯಾರಿಗೂ ಅಧೀನವಾಗಿರುವುದಿಲ್ಲವಾದ್ದರಿಂದ ಸರ್ವಾಧಿಕಾರಿಯಾಗುವ ಸಂಭವ ಹೆಚ್ಚು .
10. ಸಂಯುಕ್ತ ಮತ್ತು ಏಕಾತ್ಮಕ ಸರ್ಕಾರದ ನಡುವಿನ ವ್ಯತ್ಯಾಸಗಳನ್ನು ತಿಳಿಸಿ .
ಕೇಂದ್ರ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರಗಳ ನಡುವಿನ ಅಧಿಕಾರ ಕೇಂದ್ರೀಕರಣ ಮತ್ತು ವಿಕೇಂದ್ರೀಕರಣದ ಆಧಾರದ ಮೇಲೆ ಸರ್ಕಾರಗಳನ್ನು ಏಕಾತ್ಮಕ ಸರ್ಕಾರ ಮತ್ತು ಸಂಯುಕ್ತ ಸರ್ಕಾರಗಳೆಂದು ವಿಂಗಡಿಸಲಾಗಿದೆ . ರಾಷ್ಟ್ರದ ಸಮಸ್ತ ಅಧಿಕಾರವು ಒಂದೇ ಕೇಂದ್ರ ಸರ್ಕಾರದಲ್ಲಿ ಕೇಂದ್ರೀಕೃತವಾಗಿ ಪ್ರಾಂತ್ಯ ಮತ್ತು ಸ್ಥಳೀಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಅಧೀನವಾಗಿಯೂ ಮತ್ತು ಜವಾಬ್ದಾರಿಯಾಗಿಯೂ ಕಾರ್ಯ ನಿರ್ವಹಿಸುವ ಸರ್ಕಾರ ಏಕಾತ್ಮಕ ಸರ್ಕಾರವಾಗಿದ್ದರೆ ರಾಷ್ಟ್ರದ ಸಮಸ್ತ ಅಧಿಕಾರಗಳನ್ನು ಸಂವಿಧಾನದ ಮೂಲಕ ಒಂದು ಕೇಂದ್ರ ಸರ್ಕಾರ ಮತ್ತು ಹಲವು ಪ್ರಾಂತ್ಯ ಸರ್ಕಾರಗಳ ನಡುವೆ ವಿಕೇಂದ್ರಿಕರಿಸಿ , ದ್ವಿಸರ್ಕಾರಿ ವ್ಯವಸ್ಥೆಯ ಮೂಲಕ ಪ್ರಥಮ ಪಿ.ಯು.ಸಿ. ರಾಜ್ಯಶಾಸ್ತ್ರ – ಆಡಳಿತ ನಡೆಸುವ ಸರ್ಕಾರ ಸಂಯುಕ್ತ ಸರ್ಕಾರವಾಗಿದೆ . ಇವುಗಳ ನಡುವಿನ ವ್ಯತ್ಯಾಸ ಕೆಳಗಿನಂತಿದೆ .
ಏಕಾತ್ಮಕ ಸರ್ಕಾರ
1. ಒಂದೇ ಸರ್ಕಾರವಿರುತ್ತದೆ . ( ಕೇಂದ್ರ ಸರ್ಕಾರ )
2. ರಾಷ್ಟ್ರದ ಸಮಸ್ತ ಅಧಿಕಾರ ಕೇಂದ್ರದಲ್ಲೇ ಕೇಂದ್ರೀಕೃತವಾಗಿರುತ್ತದೆ .
3. ಪ್ರಾಂತ್ಯಗಳ ಅಧಿಕಾರ ಕೇಂದ್ರದತ್ತವಾದುದು .
4. ರಾಜ್ಯ ಘಟಕಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ .
5. ಇದು ಲಿಖಿತ / ಅಲಿಖಿತ ಸಂವಿಧಾನವನ್ನು ಹೊಂದಿರಬಹುದು .
6. ಇಲ್ಲಿ ಸಂಸತ್ತಿನ ಪರಮಾಧಿಕಾರವಿರುತ್ತದೆ .
7. ಏಕಸದನ / ದ್ವಿಸದನ ಶಾಸಕಾಂಗ ಪದ್ಧತಿ ಇರಬಹುದು .
8. ಸರಳ ಸರ್ಕಾರ ವ್ಯವಸ್ಥೆ .
9. ಏಕೈಕ ಸರ್ಕಾರ ವಿರುವುದರಿಂದ ಆಡಳಿತ ವೆಚ್ಚ ಕಡಿಮೆ .
10. ಏಕ ಪೌರತ್ವವಾದ ರಾಷ್ಟ್ರೀಯ ಪೌರತ್ವವೊಂದೇ ಇರುತ್ತದೆ .
11. ಕೇಂದ್ರ ಸರ್ಕಾರವೇ ರಾಜ್ಯಸರ್ಕಾರಗಳನ್ನು ನಿಯಂತ್ರಿಸುವುದರಿಂದ ಅವುಗಳ ನಡುವೆ ವಿವಾದ ಕಂಡುಬರುವುದಿಲ್ಲ ಹಾಗಾಗಿ ವಿಶೇಷ ನ್ಯಾಯಾಂಗದ ಅವಶ್ಯಕತೆ ಇರುವುದಿಲ್ಲ .
ಸಂಯುಕ್ತ ಸರ್ಕಾರ
1. ಎರಡು ಸರ್ಕಾರಗಳಿರುತ್ತವೆ . ( ಕೇಂದ್ರ ಮತ್ತು ರಾಜ್ಯ ಸರ್ಕಾರಗಳು )
2. ರಾಷ್ಟ್ರದ ಸಮಸ್ತ ಅಧಿಕಾರ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಲ್ಪಟ್ಟಿರುತ್ತದೆ .
3. ಪ್ರಾಂತ್ಯಗಳ ಅಧಿಕಾರ ಸಂವಿಧಾನ ದತ್ತವಾದುದು .
4. ರಾಜ್ಯ ಘಟಕಗಳು ಕೇಂದ್ರ ಸರ್ಕಾರದ ಜೊತೆ ಸಮಾನ ಸ್ಥಾನ – ಮಾನ ಹೊಂದಿರುತ್ತದೆ .
5. ಲಿಖಿತ ಮತ್ತು ಕಠಿಣ ಸಂವಿಧಾನವನ್ನು ಹೊಂದಿರುವುದು ಅತ್ಯಗತ್ಯವಾಗಿದೆ .
6. ಇಲ್ಲಿ ಸಂವಿಧಾನದ ಪರಮಾಧಿಕಾರವಿರುತ್ತದೆ .
7. ದ್ವಿಸದನ ಶಾಸಕಾಂಗ ಪದ್ಧತಿ ಅತ್ಯವಶ್ಯಕ .
8. ಸಂಕೀರ್ಣ ಸರ್ಕಾರ ವ್ಯವಸ್ಥೆ .
9. ದ್ವಿಸರ್ಕಾರವಿರುವುದರಿಂದ ಆಡಳಿತ ವೆಚ್ಚ ಹೆಚ್ಚಾಗಿರುತ್ತದೆ .
10. ದ್ವಿಪೌರತ್ವ ರಾಷ್ಟ್ರೀಯ ಮತ್ತು ಪ್ರಾಂತೀಯ ಪೌರತ್ವ ,
11. ಇಲ್ಲಿ ಅಧಿಕಾರದ ವಿಭಜನೆಯಿರುವುದರಿಂದ ಅಧಿಕಾರದ ವಿಭಜನೆಗೆ ಸಂಬಂಧಿಸಿದಂತೆ ಉಂಟಾಗುವ ಘರ್ಷಣೆಗಳನ್ನು ತೀರ್ಮಾನಿಸಲು ನ್ಯಾಯಿಕ ವಿಮರ್ಶಾಧಿಕಾರವನ್ನು ಹೊಂದಿರುವ ವಿಶೇಷ ನ್ಯಾಯಾಂಗದ ಇರುವಿಕೆ ಅತ್ಯಗತ್ಯವಾಗಿದೆ .
ಹೆಚ್ಚುವರಿ ಪ್ರಶೋತ್ತರಗಳು :
1. ಆಧುನಿಕ ನಿರಂಕುಶತ್ವಕ್ಕೆ ಒಂದು ಉದಾಹರಣೆ ಕೊಡಿ .
ಆಧುನಿಕ ನಿರಂಕುಶತ್ವಕ್ಕೆ ಉದಾಹರಣೆ ಇಟಲಿಯ ಮುಸಲೋನಿ .
2. “ ಪ್ಯೂಡಸ್ ” ಪದದ ಅರ್ಥವೇನು ?
“ ಪ್ಯೂಡಸ್ ” ಎಂದರೆ ಒಪ್ಪಂದ ಅಥವಾ ಕರಾರು ಅಥವಾ ಒಡಂಬಡಿಕೆ ಎಂದರ್ಥ .
3. ‘ ಕಾನ್ಸ್ಟಿಟ್ಯೂಟ್ ‘ ಪದದ ಅರ್ಥವೇನು ?
‘ ಕಾನ್‌ಸ್ಟಿಟ್ಯೂಟ್ ‘ ಎಂದರೆ ಯೋಜಿಸು , ನಿಯೋಜಿಸು , ಸಂಯೋಜಿಸು , ರಚಿಸು , ಸ್ಥಾಪಿಸು ಎಂದರ್ಥ .
4 . ವಿಶ್ವದಲ್ಲೇ ಪ್ರಥಮ ಲಿಖಿತ ಸಂವಿಧಾನ ಯಾವುದು ?
ಅಮೆರಿಕಾದ ಸಂವಿಧಾನವೆ ವಿಶ್ವದಲ್ಲೇ ಪ್ರಥಮ ಲಿಖಿತ ಸಂವಿಧಾನವಾಗಿದೆ .
5. ಸಂವಿಧಾನ ಎಂಬ ಪದವನ್ನು ಮೊದಲು ಯಾರು ಪ್ರಯೋಗಿಸಿದರು ?
ಸಂವಿಧಾನ ಎಂಬ ಪದವನ್ನು ಮೊದಲು ಬಳಸಿದವರು 2 ನೇ ಹೆನ್ರಿ
6. ಒಂದೇ ದಾಖಲೆಯಲ್ಲಿರುವ ಲಿಖಿತ ಸಂವಿಧಾನಗಳಾವುವು ?
ಭಾರತ ಮತ್ತು ಅಮೇರಿಕಾದ ಸಂವಿಧಾನಗಳು ಒಂದೇ ದಾಖಲೆಯಲ್ಲಿರುವ ಲಿಖಿತ ಸಂವಿಧಾನಗಳಾಗಿವೆ .
7. ಹಲವು ದಾಖಲೆಯಲ್ಲಿರುವ ಲಿಖಿತ ಸಂವಿಧಾನಗಳಾವುವು ?
ಫ್ರಾನ್ಸ್ ಮತ್ತು ಸ್ವೀಡನ್ ನ ಸಂವಿಧಾನಗಳು ಹಲವು ದಾಖಲೆಯಲ್ಲಿರುವ ಲಿಖಿತ ಸಂವಿಧಾನಗಳಾಗಿವೆ .
8. ಅಲಿಖಿತ ಸಂವಿಧಾನವನ್ನು ಯಾವ ಹೆಸರಿನಿಂದ ಕರೆಯುತ್ತಾರೆ ?
ಅಲಿಖಿತ ಸಂವಿಧಾನವನ್ನು ಆಕಸ್ಮಿಕ ಶಿಶು ” ಕರೆಯುತ್ತಾರೆ .
9. ನಮ್ಯ ಮತ್ತು ಅನಮ್ಯ ಸಂವಿಧಾನ ಎಂಬ ಪದಗಳನ್ನು ಮೊದಲು ಬಳಸಿದವರು ಯಾರು ?
ಲಾರ್ಡ್‌ಬ್ರೈಸ್ .
10. ‘ ಡೆಮೋಸ್ ಮತ್ತು ಕ್ರಾಟಿಯಾ ‘ ಪದಗಳ ಅರ್ಥವೇನು ?
ಡೆಮೋಸ್ ಎಂದರೆ ಜನತೆ ಮತ್ತು ಕ್ರಾಟಿಯಾ ಎಂದರೆ ಆಳ್ವಿಕೆ / ಅಧಿಕಾರ ಎಂದರ್ಥ .
11. ಪ್ರಜಾಪ್ರಭುತ್ವ ಕಲ್ಪನೆಯನ್ನು ಹುಟ್ಟು ಹಾಕಿದ ದೇಶ ಯಾವುದು ?
ಪ್ರಾಚೀನ ಗ್ರೀಕರು ಮೊದಲು ಪ್ರಜಾಪ್ರಭುತ್ವ ಕಲ್ಪನೆಯನ್ನು ಹುಟ್ಟು ಹಾಕಿದರು .
12. ಆಧುನಿಕ ಕಾಲದಲ್ಲಿ ಪ್ರಜಾಪ್ರಭುತ್ವವನ್ನು ಸಂಸ್ಥಾಪಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ ?
ಆಧುನಿಕ ಕಾಲದಲ್ಲಿ ಪ್ರಜಾಪ್ರಭುತ್ವವನ್ನು ಪ್ರಥಮ ಬಾರಿಗೆ ಸಂಸ್ಥಾಪಿಸಿದ ಕೀರ್ತಿ ಇಂಗ್ಲೆಂಡಿಗೆ ಸಲ್ಲುತ್ತದೆ .
13. ಪ್ರಜಾಪ್ರಭುತ್ವ ಎಂಬ ಪದವನ್ನು ಮೊಟ್ಟಮೊದಲು ಬಳಸಿದವರು ಯಾರು ?
ಥ್ಯೂಸಿಡೈಸ್ ರವರು ಪ್ರಜಾಪ್ರಭುತ್ವ ಎಂಬ ಪದವನ್ನು ಮೊಟ್ಟಮೊದಲು ಬಳಸಿದರು .
14. ಸಂಸದೀಯ ಸರ್ಕಾರ ಮೊದಲು ಎಲ್ಲಿ ಅಸ್ತಿತ್ವಕ್ಕೆ ಬಂತು ?
ಸಂಸದೀಯ ಸರ್ಕಾರ ಮೊದಲು ಬ್ರಿಟನ್ನಿನಲ್ಲಿ ಅಸ್ತಿತ್ವಕ್ಕೆ ಬಂತು .
15. ಅಧ್ಯಕ್ಷೀಯ ಸರ್ಕಾರ ಮೊದಲು ಎಲ್ಲಿ ಅಸ್ತಿತ್ವಕ್ಕೆ ಬಂತು ?
ಅಧ್ಯಕ್ಷೀಯ ಸರ್ಕಾರ ಮೊದಲು ಅಮೇರಿಕಾದಲ್ಲಿ ಅಸ್ತಿತ್ವಕ್ಕೆ ಬಂತು
FAQ
ಗ್ರೀಕ್ ಭಾಷೆಯ ‘ ಕಾನ್‌ಸ್ಟಿಟ್ಯೂಟ್ ‘ ಪದವು ಸಂವಿಧಾನದ ಮೂಲ ಪದ .
ರಾಷ್ಟ್ರದ ಮೂಲಭೂತ ಶಾಸನವೇ ಸಂವಿಧಾನ .
ಇತರೆ ವಿಷಯಗಳು :
First Puc Political Science Notes
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
PDF download please sir help