ಪ್ರಥಮ ಪಿ.ಯು.ಸಿ ಅಧ್ಯಾಯ-5 ಭಾರತದ ಸಂವಿಧಾನ ರಾಜ್ಯಶಾಸ್ತ್ರ ನೋಟ್ಸ್, 1st PUC Political Science Chapter 5th Bharatada Samvidhana Notes in Kannada Question Answer Pdf 2024 Kseeb Solution For Class 11 Chapter 5 Notes First Puc Political Science Constitution of India in Kannada Notes 2024
ಭಾರತದ ಸಂವಿಧಾನ ರಾಜ್ಯಶಾಸ್ತ್ರ ನೋಟ್ಸ್
1st Puc Political Science Chapter 5 Question Answer in Kannada
1 ) ಸಂವಿಧಾನ ಕರಡು ರಚನಾ ಸಮಿತಿ ಸಂವಿಧಾನದ ಕರಡನ್ನು ಸಂವಿಧಾನ ರಚನಾ ಸಭೆಯ ಮುಂದೆ ಯಾವಾಗ ಮಂಡಿಸಿತು ?
1. ಅಕ್ಟೋಬರ್ 1948 ರಲ್ಲಿ
2 ) ಸಂವಿಧಾನ ರಚನಾ ಸಭೆಯು ಸಂವಿಧಾನದ ಕರಡನ್ನು ಅಂಗೀಕರಿಸಿದ ದಿನಾಂಕ ತಿಳಿಸಿ .
ನವಂಬರ್ 26 , 1948 ರಂದು .
3 ) ಭಾರತೀಯ ಸಂವಿಧಾನ ಜಾರಿಗೆ ಬಂದಾಗ ಇದ್ದ ವಿಧಿಗಳ ಸಂಖ್ಯೆ ಎಷ್ಟು ?
ಭಾರತೀಯ ಸಂವಿಧಾನ ಜಾರಿಗೆ ಬಂದಾಗ ಇದ್ದ ವಿಧಿಗಳ ಸಂಖ್ಯೆ 395 .
4 ) ಭಾರತದ ಸಂವಿಧಾನ ಯಾವಾಗ ಜಾರಿಗೆ ಬಂದಿತು ?
ಜನವರಿ 26 , 1950 ರಂದು ಜಾರಿಗೆ ಬಂದಿತು .
5 ) ಭಾರತದ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರು ಯಾರು ?
ಭಾರತದ ಪ್ರಪ್ರಥಮ ರಾಷ್ಟ್ರಾಧ್ಯಕ್ಷರಾಗಿದ್ದ ಡಾ.ಬಾಬುರಾಜೇಂದ್ರ ಪ್ರಸಾದ್‌ರವರು ಅಧ್ಯಕ್ಷರಾಗಿದ್ದರು .
6 ) ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು ?
ಡಾ.ಬಾಬುರಾಜೇಂದ್ರ ಪ್ರಸಾದ್‌ರವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರು .
7) ಸಂವಿಧಾನ ರಚನಾ ಸಭೆಯ ಯಾವುದಾದರೂ ಇಬ್ಬರು ಸದಸ್ಯರನ್ನು ಹೆಸರಿಸಿ ?
1 ) ಪಂಡಿತ್ ಜವಹರಲಾಲ್ ನೆಹರು
2 ) ಸರ್ದಾರ್ ವಲ್ಲಭಬಾಯಿ ಪಟೇಲ್
8 ) ಸಂವಿಧಾನದ ರಚನಾ ಸಭೆಯ ಸದಸ್ಯರ ಸಂಖ್ಯೆ ಎಷ್ಟು ?
ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆ – 389 .
9 ) ಪ್ರಸ್ತುತ ಭಾರತೀಯ ಸಂವಿಧಾನದಲ್ಲಿರುವ ವಿಧಿಗಳ ಸಂಖ್ಯೆ ಎಷ್ಟು ?
ಪ್ರಸ್ತುತ 463 ವಿಧಿಗಳಿವೆ .
10 ) ವಿಶ್ವದ ಅತ್ಯಂತ ದೊಡ್ಡ ಸಂವಿಧಾನ ಯಾವುದು ?
ಭಾರತದ ಸಂವಿಧಾನ ವಿಶ್ವದ ಅತ್ಯಂತ ದೊಡ್ಡ ಸಂವಿಧಾನ .
11 ) ವಿಶ್ವದ ಅತ್ಯಂತ ಚಿಕ್ಕ ಸಂವಿಧಾನ ಯಾವುದು ?
ವಿಶ್ವದ ಅತ್ಯಂತ ಚಿಕ್ಕ ಸಂವಿಧಾನ ಅಮೇರಿಕಾ ಸಂವಿಧಾನ .
12 ) ಭಾರತೀಯ ಸಂವಿಧಾನ ರಚನೆಗೆ ಸಂವಿಧಾನ ರಚನಾ ಸಭೆ ತೆಗೆದುಕೊಂಡ ಕಾಲವೆಷ್ಟು ?
2 ವರ್ಷ 11 ತಿಂಗಳು , 18 ದಿವಸಗಳು
13 ) ಪ್ರಸ್ತಾವನೆಯನ್ನು ಸಂವಿಧಾನದ ‘ ರಾಜಕೀಯ ಜಾತಕ ‘ ಎಂದವರು ಯಾರು ?
ಕೆ.ಎಂ. ಮುನ್ಸಿರವರು .
14 ) 42 ನೇ ತಿದ್ದುಪಡಿ ಮೂಲಕ ಪ್ರಸ್ತಾವನೆಗೆ ಹೊಸದಾಗಿ ಅಳವಡಿಸಿದ ಶಬ್ದಗಳಾವುವು ?
ಸಮಾಜವಾದ , ಜಾತ್ಯತೀತತೆ ಮತ್ತು ಸಮಗ್ರತೆ .
15 ) ಅಧಿಕಾರ ವಿಭಜನೆಯ 3 ವಿಧಿಗಳನ್ನು ತಿಳಿಸಿ
1 ) ಕೇಂದ್ರ ಪಟ್ಟಿ
2 ) ರಾಜ್ಯ ಪಟ್ಟಿ
3 ) ಸಮವರ್ತಿಪಟ್ಟಿ
16 ) ಸಂವಿಧಾನದ ಯಾವ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳ ಪಟ್ಟಿಯನ್ನು ಕಾಣುತ್ತೇವೆ ?
ಸಂವಿಧಾನದ 4 ನೇ ಭಾಗದ 36 ರಿಂದ 51 ನೇ ವಿಧಿಗಳಲ್ಲಿ ಕಾಣುತ್ತೇವೆ .
17 ) ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳ ಪಟ್ಟಿಯನ್ನು ಕಾಣುತ್ತೇವೆ ?
ಸಂವಿಧಾನದ 3 ನೇ ಭಾಗದಲ್ಲಿನ 12 ರಿಂದ 35 ರ ವರೆಗಿನ ವಿಧಿಗಳಲ್ಲಿ ಕಾಣುತ್ತೇವೆ .
18 ) ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆಯಲಾಯಿತು ?
44 ನೇ ತಿದ್ದುಪಡಿ ( 1978 )
19 ) ಸಂವಿಧಾನಾತ್ಮಕ ಪರಿಹಾರ ಹಕ್ಕಿನ ಬಗ್ಗೆ ವಿವರಣೆ ನೀಡುವ ನಿಧಿ ಯಾವುದು ?
32 ನೇ ವಿಧಿ .
20 ) ಭಾರತೀಯ ಪೌರರಿಗೆ ಲಭ್ಯವಿರುವ ಮೂಲಭೂತ ಕರ್ತವ್ಯಗಳ ಸಂಖ್ಯೆ ಎಷ್ಟು ?
11 ಮೂಲಭೂತ ಕರ್ತವ್ಯಗಳು .
1 ) ಪ್ರಸ್ತಾವನೆ ಎಂದರೇನು ?
ಸಂವಿಧಾನದ ಮೂಲತತ್ವಗಳು ಮತ್ತು ಪ್ರಜೆಗಳ ಧೈಯೋದ್ದೇಶಗಳನ್ನು ಪ್ರತಿಬಿಂಬಿಸುವ ಭಾಗವೇ ಪ್ರಸ್ತಾವನೆ . ಇದನ್ನು ಸಂವಿಧಾನದ ಮುನ್ನುಡಿ , ಕನ್ನಡಿ ಎಂದೂ ಕರೆಯಲಾಗುತ್ತದೆ .
2 ) ಪರಮಾಧಿಕಾರದ ಎರಡು ಸ್ವರೂಪಗಳನ್ನು ತಿಳಿಸಿ .
1 ) ಬಾಹ್ಯ ಸ್ವರೂಪ
2 ) ಆಂತರಿಕ ಸ್ವರೂಪ
3 ) ಸಮಾಜವಾದಿ ರಾಷ್ಟ್ರ ಎಂದರೇನು ?
ಎಲ್ಲರಿಗೂ ಸಮಾನ ಅವಕಾಶ ಮತ್ತು ಸಂಪತ್ತಿನಲ್ಲಿ ಸಮಾನ ಭಾಗವನ್ನು ಹಂಚುವ ಮೂಲಕ ಜನರ ಜೀವನವನ್ನು ಉತ್ತಮಪಡಿಸುವ ರಾಜ್ಯವೇ ಸಮಾಜವಾದಿ ರಾಷ್ಟ್ರ
4 ) ಜಾತ್ಯಾತೀತ ರಾಷ್ಟ್ರ ಎಂದರೇನು ?
ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ರಾಷ್ಟ್ರೀಯ ಧರ್ಮವೆಂದು ಘೋಷಿಸದೆ ಎಲ್ಲಾ ಧರ್ಮಗಳಿಗೂ ಸಮಾನ ಆದ್ಯತೆಯನ್ನು ನೀತಿ ಧಾರ್ಮಿಕ ವಿಚಾರದಲ್ಲಿ ತಟಸ್ಥವಾಗಿರುವುದೇ ಜಾತ್ಯಾತೀತ ರಾಷ್ಟ್ರ .
5 ) ಗಣರಾಜ್ಯ ಎಂದರೇನು ?
ರಾಷ್ಟ್ರದ ಮುಖ್ಯಸ್ಥರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿಸುವ ವ್ಯವಸ್ಥೆಯೇ ಗಣರಾಜ್ಯ .
6 ) ಸಂಸಧೀಯ ಮಾದರಿ ಸರ್ಕಾರ ಎಂದರೇನು ?
ಭಾರತೀಯ ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳಲ್ಲಿ ಕ್ರಮವಾಗಿ ರಾಷ್ಟ್ರಪತಿ ಮತ್ತು ರಾಜ್ಯಪಾಲರನ್ನು ಸಂವಿಧಾನಿಕ ಮುಖ್ಯಸ್ಥರನ್ನಾಗಿರುವ ವ್ಯವಸ್ಥೆಗೆ ಅವಕಾಶ ಕಲ್ಪಿಸಿದೆ . ಹಾಗೆಯೇ ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳಲ್ಲಿ ಕಾರ್ಯಾಂಗ , ಶಾಸಕಾಂಗದಿಂದ ಸೃಷ್ಠಿಯಾಗಿ ಅದಕ್ಕೆ ಜವಾಬ್ದಾರಿಯನ್ನು ನೀಡಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ .
7 ) ಮೂಲಭೂತ ಹಕ್ಕುಗಳು ಎಂದರೇನು ?
ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಅಗತ್ಯವಾದ ಸಾಮಾಜಿಕ ಸ್ಥಿತಿಗಳನ್ನು ಮೂಲಭೂತ ಹಕ್ಕುಗಳು ಎನ್ನುವರು . ಇವು ನ್ಯಾಯಾಂಗ ರಕ್ಷಿತ ಹಕ್ಕುಗಳಾಗಿದ್ದು , ಪ್ರಜೆಗಳೆಲ್ಲರಿಗೂ ಸಂವಿಧಾನಾತ್ಮಕವಾಗಿ ಲಭ್ಯವಾಗಿರುತ್ತವೆ .
8 ) ರಾಜ್ಯ ನಿರ್ದೇಶಕ ತತ್ವಗಳು ಎಂದರೇನು ?
ಸಂವಿಧಾನವು ಕೆಲವು ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುತ್ತದೆ . ಇವುಗಳನ್ನು ರಾಜ್ಯ ನಿರ್ದೇಶಕ ತತ್ವ ಎನ್ನುವರು . ಇವು ಆಡಳಿತದ ಮೂಲಭೂತ ನಿಯಮಗಳಾಗಿವೆ .
9 ) ಏಕ ಪೌರತ್ವದ ಅರ್ಥ ನೀಡಿ ?
ಒಬ್ಬ ವ್ಯಕ್ತಿಯು ರಾಜ್ಯದ ಪೌರತ್ವವನ್ನು ಹೊಂದಿರದೆ ಕೇವಲ ರಾಷ್ಟ್ರೀಯ ಪೌರತ್ವವನ್ನು ಮಾತ್ರ ಹೊಂದಿದ್ದರೆ ಅದನ್ನು ಏಕಪೌರತ್ವ ಎನ್ನುವರು . ಏಕಪೌರತ್ವವನ್ನು ಏಕಾತ್ಮಕ ಸರ್ಕಾರ ವ್ಯವಸ್ಥೆಯಲ್ಲಿ ಕಾಣಬಹುದು .
10 ) ಭಾರತದ ರಾಷ್ಟ್ರಪತಿಯವರ ತುರ್ತು ಪರಿಸ್ಥಿತಿಯ ಅಧಿಕಾರಗಳನ್ನು ತಿಳಿಸಿ ?
1 ) ರಾಷ್ಟ್ರೀಯ ತುರ್ತು ಪರಿಸ್ಥಿತಿ ( 352 ನೇ ವಿಧಿ )
2 ) ರಾಜ್ಯ ತುರ್ತು ಪರಿಸ್ಥಿತಿ ( 356 ನೇ ವಿಧಿ )
3 ) ಆರ್ಥಿಕ ತುರ್ತು ಪರಿಸ್ಥಿತಿ ( 360 ನೇ ವಿಧಿ ) 97
11 ) ಮೂಲಭೂತ ಹಕ್ಕುಗಳನ್ನು ಪಟ್ಟಿ ಮಾಡಿ .
ಸಂವಿಧಾನ ಜಾರಿಗೆ ಬಂದಾಗ ಭಾರತೀಯ ಪೌರರಿಗೆ 7 ಮೂಲಭೂತ ಹಕ್ಕುಗಳು ಲಭ್ಯವಾಗಿದ್ದವು . ಅವುಗಳೆಂದರೆ
1 ) ಸಮಾನತೆಯ ಹಕ್ಕು ( 14 ರಿಂದ 18 ನೇ ವಿಧಿ )
2 ) ಸ್ವಾತಂತ್ರ್ಯದ ಹಕ್ಕು ( 19 ರಿಂದ 22 ನೇ ವಿಧಿ )
3 ) ಶೋಷಣೆಯ ವಿರುದ್ಧದ ಹಕ್ಕು ( 23 ರಿಂದ 24 ನೇ ವಿಧಿ )
4 ) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ( 25 ರಿಂದ 28 ನೇ ವಿಧಿ )
5 ) ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ( 29 ರಿಂದ 30 ನೇ ವಿಧಿ
6 ) ಆಸ್ತಿಯ ಹಕ್ಕು ( 31 ನೇ ವಿಧಿ )
7 ) ಸಂವಿಧಾನಾತ್ಮಕ ಪರಿಹಾರ ಹಕ್ಕು ( 32 ನೇ ವಿಧಿ )
12 ) ನ್ಯಾಯಾಂಗ ಹೊರಡಿಸುವ ವಿವಿಧ ಬಗೆಯ ರಿಟ್‌ಗಳಾವುವು ?
1 ) ಹೇಬಿಯಸ್ ಕಾರ್ಪಸ್
2 ) ಮ್ಯಾಂಡಮಸ್
3 ) ಪ್ರೊಹಿಬಿಷನ್ ಈ
4 ) ಷರ್ಷಿಯೋರರಿ
5 ) ಕೋವಾರೆಂಟೋ 1
13 ) ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು ?
ಒಂದು ನಿರ್ದಿಷ್ಟ ವಯೋಮಾನವನ್ನು ಹೊಂದಿರುವ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡುವುದೇ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದು ಕರೆಯುತ್ತಾರೆ .
14 ) ಭಾರತೀಯ ಸಂವಿಧಾನದ 19 ನೇ ವಿಧಿಯಡಿಯಲ್ಲಿ ಲಭ್ಯವಾಗಿರುವ ವಿವಿಧ ಬಗೆಯ ಸ್ವಾತಂತ್ರ್ಯಗಳಾವುವು ?
1 ) ಮಾತನಾಡುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
2 ) ಶಸ್ತ್ರರಹಿತರಾಗಿ ಸಭೆ ಸೇರುವ ಸ್ವಾತಂತ್ರ್ಯ
3 ) ಸಂಘ ಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ
4 ) ಭಾರತದಾದ್ಯಂತ ಸಂಚರಿಸುವ ಸ್ವಾತಂತ್ರ್ಯ
5 ) ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಸ್ವಾತಂತ್ರ್ಯ
6 ) ಕಾನೂನು ಮಾನ್ಯ ಮಾಡಿರುವ ಯಾವುದೇ ವ್ಯಾಪಾರ ಮತ್ತು ಉದ್ಯೋಗ ನಿರ್ವಹಿಸುವ ಸ್ವಾತಂತ್ರ್ಯ
1st Puc Bharatada samvidhana Notes
1 ) ಭಾರತೀಯ ಸಂವಿಧಾನದ ಪರಿಚಯಾತ್ಮಕ ಟಿಪ್ಪಣಿ ಬರೆಯಿರಿ .
‘ ಪ್ರಸ್ತಾವನೆ ‘ ಎಂಬ ಪದ ಸಂವಿಧಾನದ ಪರಿಚಯಕ್ಕೆ ಸಂಬಂಧಿಸಿದ್ದಾಗಿದೆ . ಅದು ಸಂವಿಧಾನದ ಪರವಾಗಿದ್ದು ಸಂವಿಧಾನವನ್ನು ಅರ್ಥಮಾಡಿಸುವ ಸ್ಪೂರ್ತಿಯ ಕೀಲಿಕೈ ಆಗಿದೆ . ಆದ್ದರಿಂದ ಕೆ.ಎಂ. ಮುನ್ಸಿಯವರು ಪ್ರಸ್ತಾವನೆಯ ಭಾರತೀಯ ಸಂವಿಧಾನದ ‘ ರಾಜಕೀಯ ಜಾತಕ ‘ ಎಂದು ಬಣ್ಣಿಸಿದ್ದಾರೆ . ಸಂವಿಧಾನದ ಆತ್ಮವೆಂದೇ ಪರಿಗಣಿಸಲ್ಪಟ್ಟಿರುವ ಪ್ರಸ್ತಾವನೆಯು ಸಂವಿಧಾನದ ಲಕ್ಷಣಗಳು ಮತ್ತು ತತ್ವಗಳನ್ನು ಪರಿಚಯಿಸುವ ಟಿಪ್ಪಣಿಯಾಗಿದೆ . ಪ್ರಸ್ತಾವನೆಯನ್ನು ಹೊಂದಿದ ಮೊದಲ ಸಂವಿಧಾನ ಎಂಬ ಖ್ಯಾತಿಗೆ ಅಮೇರಿಕಾ ಸಂವಿಧಾನ ಪಾತ್ರವಾಗಿದ್ದು ನಂತರ ಭಾರತ ಮತ್ತು ಇತರ ರಾಷ್ಟ್ರಗಳೂ ಕೂಡ ಅದನ್ನೇ ಅನುಕರಿಸಿ ತಮ್ಮ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಸೇರಿಸಿಕೊಂಡವು . ಸಂವಿಧಾನ ರಚನಾ ಸಭೆಯು ಅಂಗೀಕರಿಸಿದ ಪ್ರಸ್ತಾವನೆಯು ಪಂಡಿತ್ ಜವಹರಲಾಲ್ ನೆಹರೂ ಮಂಡಿಸಿದ ಧೈಯಗಳ ನಿರ್ಣಯವನ್ನಾದರಿಸಿದ್ದಾಗಿದೆ . ಪ್ರಸ್ತಾವನೆಗೆ 1976 ರಲ್ಲಿ ತಂದ 42 ನೇ ತಿದ್ದುಪಡಿಯ ಮೂಲಕ ಸಮಾಜವಾದ , ಜಾತ್ಯಾತೀತ ಮತ್ತು ಸಮಗ್ರತೆ ಎಂಬ ಪದಗಳನ್ನು ಸೇರಿಸಲಾಯಿತು .
ಪ್ರಸ್ತಾವನೆಯ ಪಠ್ಯ : ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ , ಸಮಾಜವಾದಿ , ಜಾತ್ಯಾತೀತ , ಪ್ರಜಾಸತ್ತಾತ್ಮಕ , ಗಣರಾಜ್ಯವನ್ನಾಗಿ ಪರಿವರ್ತಿಸಲು ಮತ್ತು ಎಲ್ಲಾ ಪೌರರಿಗೂ
ನ್ಯಾಯ : ಸಾಮಾಜಿಕ , ಆರ್ಥಿಕ , ರಾಜಕೀಯ
ಸ್ವಾತಂತ್ರ್ಯ : ವಿಚಾರ , ಅಭಿವ್ಯಕ್ತಿ , ನಂಬಿಕೆ ಮತ್ತು ಆರಾಧನೆ ಸಮಾನತೆ : ಸ್ಥಾನಮಾನ ಮತ್ತು ಅವಕಾಶ ಇವುಗಳನ್ನು ದೊರಕಿಸಲು
ಭ್ರಾತೃತ್ವ : ವ್ಯಕ್ತಿಗೌರವ ಹಾಗೂ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿ ಭ್ರಾತೃತ್ವ ಮನೋಭಾವನೆಯನ್ನು ಮೂಡಿಸಲು ದೃಢಸಂಕಲ್ಪ ಮಾಡಿ ನಮ್ಮ ಸಂವಿಧಾನವನ್ನು ನವೆಂಬರ್ 26 , 1949 ರಂದು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ . ಪ್ರಸ್ತಾವನೆಯು ನಮ್ಮ ಸಂವಿಧಾನವು ತನ್ಮೂಲಕ ವೃದ್ಧಿಸಲು ಬದ್ಧವಾಗಿರುವ ರಾಜಕೀಯ ನೀತಿ , ಆರ್ಥಿಕ , ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಅಭಿವ್ಯಕ್ತಗೊಳಿಸುತ್ತದೆ . ಅದು ಅಧಿಕಾರದ ಮೂಲಕ ಸರ್ಕಾರಿ ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಯ ಉದ್ದೇಶಗಳನ್ನು ನಿರ್ಧಿಷ್ಠಪಡಿಸಿ ಎತ್ತಿಹಿಡಿಯುತ್ತದೆ . ಅದು ಭಾರತದ ರಾಷ್ಟ್ರೀಯ ಚಳುವಳಿಗೆ ಬದ್ಧವಾಗಿದ್ದ ತತ್ವ ಆದರ್ಶಗಳು ಹಾಗೂ ಆಕಾಂಕ್ಷೆಗಳ ಪ್ರತೀಕದಂತಿದೆ
ಭಾರತ ಸಂವಿಧಾನದ ತತ್ವಗಳು
1 ) ಭಾರತದ ಪ್ರಜೆಗಳು
2 ) ಸಾರ್ವಭೌಮ ರಾಷ್ಟ್ರ
3 ) ಸಮಾಜವಾದಿ ರಾಷ್ಟ್ರ
4 ) ಜಾತ್ಯಾತೀತತೆ
5 ) ಪ್ರಜಾಸತ್ತಾತ್ಮಕ ರಾಷ್ಟ್ರ
6 ) ಗಣರಾಜ್ಯ
7 ) ನ್ಯಾಯ
8 ) ಸ್ವಾತಂತ್ರ್ಯ
9 ) ಸಮಾನತೆ
10 ) ಭ್ರಾತೃತ್ವ
ಭಾರತ ಸಂವಿಧಾನದ ಲಕ್ಷಣಗಳು
1 ) ಲಿಖಿತ ಮತ್ತು ಬೃಹತ್ ಸಂವಿಧಾನ
2 ) ಪ್ರಸ್ತಾವನೆ ಅಥವಾ ಪೂರ್ವಪೀಠಿಕೆ
3 ) ಮೂಲಭೂತ ಹಕ್ಕುಗಳು
4 ) ಮೂಲಭೂತ ಕರ್ತವ್ಯಗಳು
5 ) ಸಂಸದೀಯ ಮಾದರಿ ಸರ್ಕಾರ
6 ) ಸ್ವತಂತ್ರ ನ್ಯಾಯಾಂಗ
7 ) ಏಕ ಪೌರತ್ವ
8) ಸಂಯುಕ್ತ ಮತ್ತು ಏಕಾತ್ಮಕ ವ್ಯವಸ್ಥೆಗಳ ಸಂಯೋಜನೆ
9) ರಾಜ್ಯ ನಿರ್ದೇಶಕ ತತ್ವಗಳು
10 ) ತುರ್ತು ಪರಿಸ್ಥಿತಿಯ ಅಧಿಕಾರಗಳು
11 ) ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ
12 ) ಪಂಚಾಯತ್ ರಾಜ್ ವ್ಯವಸ್ಥೆ
13 ) ತಿದ್ದುಪಡಿ ವಿಧಾನಗಳು
14 ) ಅಖಿಲ ಭಾರತ ಸೇವೆಗಳು
15 ) ಅಧಿಕಾರ ವಿಭಜನೆ
2 ) ಸಂವಿಧಾನ ರಚನಾ ಸಭೆಯ ಬಗ್ಗೆ ಬರೆಯಿರಿ .
ಸಂವಿಧಾನ ರಚನಾ ಸಮಿತಿಯನ್ನು 1946 ರ ತ್ರಿಸದಸ್ಯ ಕ್ಯಾಬಿನೆಟ್ ಆಯೋಗದ ಯೋಜನೆಯಂತೆ 1946 ರ ಜುಲೈನಲ್ಲಿ ರಚಿಸಲಾಯಿತು . ಈ ಸಮಿತಿ 389 ಸದಸ್ಯರನ್ನೊಳಗೊಂಡಿತ್ತು . ಇದರಲ್ಲಿ 296 ಸದಸ್ಯರು ( ಕಾಂಗ್ರೆಸ್ -208 , ಮುಸ್ಲಿಂಲೀಗ್ 273 , ವಿವಿಧ ಪಕ್ಷಗಳಿಂದ -15 ) ಬ್ರಿಟೀಷ್ ಇಂಡಿಯಾದಿಂದ ಆಯ್ಕೆಯಾದರು ಉಳಿದ 93 ಸದಸ್ಯರು ದೇಶೀಯ ಸಂಸ್ಥಾನಗಳಿಂದ ನಾಮಕರಣಗೊಂಡರು .
ಭಾರತದ ವಿಭಜನೆಯಿಂದ ಸಂವಿಧಾನ ರಚನಾ ಸಮಿತಿಯ ಸದಸ್ಯರ ಸಂಖ್ಯೆ 299 ಕ್ಕೆ ಇಳಿಯಿತು . ಪಕ್ರಿಯೆಯಲ್ಲಾಗುವ ವಿಳಂಬವನ್ನು ತಪ್ಪಿಸಲು ಕ್ಯಾಬಿನೆಟ್ ಆಯೋಗವು ಪರೋಕ್ಷ ಚುನಾವಣೆಯನ್ನು ಶಿಫಾರಸ್ಸು ಮಾಡಿದ್ದರಿಂದ ಸಂವಿಧಾನ ರಚನಾ ಸಮಿತಿಯು ಭಾಗಶಃ ಆಯ್ಕೆಯಾದ ಹಾಗೂ ಭಾಗಶಃ ನಾಮಕರಣಗೊಂಡ ಸದಸ್ಯರನ್ನೊಳಗೊಂಡಿತ್ತು . ಇದು ಭಾರತೀಯ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಗಳು ಮತ್ತು ಪ್ರಮುಖ ವ್ಯಕ್ತಿಗಳನ್ನೊಳಗೊಂಡಿತ್ತು . ಸಂವಿಧಾನ ರಚನಾ ಸಮಿತಿಯು 1946 ಡಿಸೆಂಬರ್ 9 ರಂದು ತನ್ನ ಮೊದಲ ಸಭೆ ನಡೆಸಿ ಡಾ ಸಚ್ಚಿದಾನಂದ ಸಿನ್ಹಾರವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿಕೊಂಡಿತು .
ನಂತರ ಡಿಸೆಂಬರ್ 11 , 1946 ರಂದು ಡಾ ಬಾಬುರಾಜೇಂದ್ರ ಪ್ರಸಾದ್‌ರವರನ್ನು ಶಾಶ್ವತ ಅಧ್ಯಕ್ಷರನ್ನಾಗಿ ಹಾಗೂ ಎಚ್.ಸಿ.ಮುಖರ್ಜಿಯವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು . ಇವರಲ್ಲಿ 15 ಜನ ಮಹಿಳಾ ಸದಸ್ಯರನ್ನೂ ಆರಿಸಲಾಯಿತು . ಹೀಗೆ ರಚನೆಯಾದ ಸಮಿತಿ 2 ವರ್ಷ 11 ತಿಂಗಳು 18 ದಿವಸಗಳಲ್ಲಿ 22 ಸಮಿತಿಗಳ ನೆರವಿನೊಂದಿಗೆ 11 ಅಧಿವೇಶನಗಳನ್ನು ನಡೆಸಿ ಸಂವಿಧಾನ ರಚನಾ ಕಾರವನ್ನು ಪೂರ್ಣಗೊಳಿಸಿತು .
3 ) ಸಂವಿಧಾನ ಕರಡು ರಚನಾ ಸಮಿತಿಯನ್ನು ಕುರಿತು ಬರೆಯಿರಿ .
ಸಂವಿಧಾನದ ರಚನೆಗೆ ರಚಿಸಲಾಗಿದ್ದ 22 ಸಮಿತಿಗಳಲ್ಲಿ ಕರಡು ಸಮಿತಿ ಬಹುಮುಖ್ಯ ಸಮಿತಿಯಾಗಿದೆ . ಈ ಸಮಿತಿ ಡಾ | ಬಿ.ಆರ್ ಅಂಬೇಡ್ಕರ್‌ರವರ ಅಧ್ಯಕ್ಷತೆಯಲ್ಲಿ ಇವರನ್ನೊಳಗೊಂಡಂತೆ 7 ಜನ ಸದಸ್ಯರನ್ನೊಳಗೊಂಡು ಆಗಸ್ಟ್ 29 , 1947 ರಂದು ಅಸ್ತಿತ್ವಕ್ಕೆ ಬಂದಿತು . ಈ ಕರಡು ಸಮಿತಿಗೆ ಬಿ.ಎನ್.ರಾವ್‌ರವರನ್ನು ಕಾನೂನು ಸಲಹೆಗಾರರನ್ನಾಗಿ ನೇಮಿಸಲಾಗಿತ್ತು . ಈ ಸಮಿತಿ 141 ದಿನಗಳಲ್ಲಿ ತನ್ನ ಕಾವ್ಯವನ್ನು ಮುಗಿಸಿತು .
ಕರಡು ಸಮಿತಿಯ 7 ಸದಸ್ಯರು ಈ ಕೆಳಗಿನಂತಿದ್ದರು .
1 ) ಡಾ || ಬಿ.ಆರ್ . ಅಂಬೇಡ್ಕರ್ ( ಅಧ್ಯಕ್ಷರು )
2 ) ಎನ್ . ಗೋಪಾಲಸ್ವಾಮಿ ಅಯ್ಯರ್
3 ) ‘ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್
4 ) ಎನ್ . ಮಾಧವರಾವ್
5 ) ಕೆ.ಎಂ.ಮುನ್ಸಿ
6) ಟಿ.ಟಿ.ಕೃಷ್ಣಮಂಚಾರಿ
7 ) . ಸೈಯದ್ ಮಹಮ್ಮದ್ ಸಾದುಲ್ಲಾ
4 ) ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಬರೆಯಿರಿ .
ಸಂವಿಧಾನದ ಗುರಿ ಮತ್ತು ಆದರ್ಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಭಾಗವೇ ಪೂರ್ವ ಪೀಠಿಕೆ / ಪ್ರಸ್ತಾವನೆ . ಈ ಪ್ರಸ್ತಾವನೆಯನ್ನು ಅಮೇರಿಕಾದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ . ಜವಾಹರ್‌ಲಾಲ್ ನೆಹರುರವರು ಮಂಡಿಸಿದ ಧೈಯಗಳ ನಿರ್ಣಯವನ್ನು ಸಂವಿಧಾನ ರಚನಾ ಸಭೆ ಅಂಗೀಕರಿಸಿದ್ದು , ಈ ನಿರ್ಣಯದ ಆಧಾರದ ಮೇಲೆ ಈ ಪೂರ್ವಪೀಠಿಕೆ ರಚಿತವಾಗಿದೆ . ಹಾಗಾಗಿ ಇದರ ಶಿಲ್ಪಿ ಪಂಡಿತ್ ಜವಾಹರ್‌ಲಾಲ್ ನೆಹರು ಎನ್ನಲಾಗಿದೆ . ಇದನ್ನು ಕೆಲವರು ‘ ಸಂವಿಧಾನದ ಒಡವೆ ‘ ಎಂದರೆ ಕೆ.ಎಂ. ಮುನ್ಸಿರವರು ‘ ರಾಜಕೀಯ ಜಾತಕ ‘ ಎಂದಿದ್ದಾರೆ . ಹಾಗೆಯೇ ಪಂಡಿತ್ ದಾಸ್ ‘ ಪ್ರಸ್ತಾವನೆಯು ಸಂವಿಧಾನದ ಸತ್ವ , ಸಂವಿಧಾನದ ಯೋಗ್ಯತೆಯನ್ನು ಇರುವ ಒಂದು ಅಳತೆಗೋಲು ‘ ಎಂದಿದ್ದಾರೆ . ಈ ಪ್ರಸ್ತಾವನೆಗೆ 1976 ರಲ್ಲಿ ತಂದ 42 ನೇ ತಿದ್ದುಪಡಿ ಮೂಲಕ ಸಮಾಜವಾದ , ಜಾತ್ಯಾತೀತತೆ ಮತ್ತು ಸಮಗ್ರತೆ ಎಂಬ ಪದಗಳನ್ನು ಸೇರಿಸಲಾಯಿತು . ಈ ಪ್ರಸ್ತಾವನೆಯ ಉಲ್ಲಂಘನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ .
5 ) ಪೂರ್ವಪೀಠಿಕೆಯ ಮೂಲಭೂತ ತತ್ವಗಳನ್ನು ವಿವರಿಸಿ .
ಸಂವಿಧಾನದ ಗುರಿ ಮತ್ತು ಆದರ್ಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಭಾಗವೇ ಪೂರ್ವಪೀಠಿಕೆಯಾಗಿದ್ದು ಇದರ ಮೂಲ ತತ್ವಗಳು ಈ ಕೆಳಗಿನಂತಿವೆ .
1 ) ಭಾರತದ ಪ್ರಜೆಗಳು – ಪರಮಾಧಿಕಾರವಿರುವುದು ಭಾರತೀಯರಲ್ಲಿ ಎಂಬುದನ್ನು ಪ್ರತಿಫಲಿಸುತ್ತೆ .
2 ) ಸಾರ್ವಭೌಮತ್ವ – ಭಾರತ ಸರ್ವಸ್ವಾತಂತ್ರ್ಯ ರಾಷ್ಟ್ರವಾಗಿದೆ .
3 ) ಜಾತ್ಯಾತೀತತೆ – ಎಲ್ಲಾ ಧರ್ಮಗಳನ್ನು ಒಂದೇ ದೃಷ್ಟಿಕೋನದಿಂದ ಕಾಣುವುದು .
4 ) ಪ್ರಜಾಪ್ರಭುತ್ವ – ಪ್ರಜೆಗಳೇ ಪ್ರಭುಗಳಾಗಿರುವ ವ್ಯವಸ್ಥೆ –
5 ) ಗಣರಾಜ್ಯ – ರಾಷ್ಟ್ರದ ಪ್ರಮುಖ ಜನರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಆರಿಸಲ್ಪಡುವುದು .
6 ) ಸ್ವಾತಂತ್ರ್ಯ – ಸಕಲ ಜನರಿಗೆ ಎಲ್ಲಾ ಕ್ಷೇತ್ರದಲ್ಲಿ ಸ್ವಾತಂತ್ರ್ಯ
7 ) ಸಮಾನತೆ – ಎಲ್ಲಾ ಜನಾಂಗದವರಿಗೆ ಸಮಾನ ಅವಕಾಶ
8 ) ಭ್ರಾತೃತ್ವ – ಸಹೋದರತ್ವ ಭಾವನೆ
9 ) ನ್ಯಾಯ – ಎಲ್ಲ ಜನರಿಗೂ ಸಾಮಾಜಿಕ , ರಾಜಕೀಯ , ಮತ್ತು ಆರ್ಥಿಕ ನ್ಯಾಯ ಒದಗಿಸುವುದು .
10 ) ಸಮಾಜವಾದಿ ತತ್ವ – ಸಾಮಾಜಿಕ ತಾರತಮ್ಯ ಇಲ್ಲದಿರುವುದು .
6 ) ಭಾರತೀಯ ಪೌರರ ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಿ .
ರಷ್ಯಾದ ಸಂವಿಧಾನದಿಂದ ಎರವಲಾಗಿ ಪಡೆದ ಮೂಲಭೂತ ಕರ್ತವ್ಯಗಳ ಪಟ್ಟಿಯನ್ನು ನಮ್ಮ ಮೂಲ ಸಂವಿಧಾನ ಹೊಂದಿರಲಿಲ್ಲ . ಸ್ವರ್ಣಸಿಂಗ್ ಸಮಿತಿಯ ಶಿಫಾರಸ್ಸಿಗನುಗುಣವಾಗಿ 1976 ರಲ್ಲಿ ಸಂವಿಧಾನದ 42 ನೇ ತಿದ್ದುಪಡಿ ಅನ್ವಯ ಸಂವಿಧಾನಕ್ಕೆ 4A ಭಾಗ ಮತ್ತು 51 A ವಿಧಿಯನ್ನು ಸೇರಿಸುವುದರ ಮೂಲಕ 10 ಮೂಲಭೂತ ಕರ್ತವ್ಯಗಳನ್ನು ಅಳವಡಿಸಲಾಯಿತು . 2002 ರಲ್ಲಿ ಸಂವಿಧಾನದ 86 ನೇ ತಿದ್ದುಪಡಿ ಅನ್ವಯ ಮತ್ತೊಂದು ಕರ್ತವ್ಯವನ್ನು ಸೇರಿಸಲಾಗಿ ,
ಇಂದು ಒಟ್ಟು 11 ಮೂಲಭೂತ ಕರ್ತವ್ಯಗಳನ್ನು ಕಾಣುತ್ತೇವೆ . ಅವುಗಳೆಂದರೆ :
1 ) ಸಂವಿಧಾನ , ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು .
2 ) ಸ್ವಾತಂತ್ರ್ಯ ಸಂಗ್ರಾಮದ ಆದರ್ಶಗಳನ್ನು ಅನುಸರಿಸುವುದು .
3 ) ಭಾರತದ ಸಾರ್ವಭೌಮತೆ , ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು .
4 ) ದೇಶಸೇವೆ ಹಾಗೂ ರಾಷ್ಟ್ರ ರಕ್ಷಣೆಗೆ ಬದ್ಧರಾಗುವುದು .
5 ) ಸಾಮರಸ್ಯ ಮತ್ತು ಭಾತೃತ್ವ ಭಾವನೆಯನ್ನು ಬೆಳೆಸಿಕೊಳ್ಳುವುದು ಹಾಗೂ ಮಹಿಳೆಯರನ್ನು ಗೌರವಿಸುವುದು .
6 ) ದೇಶದ ಸಂಸ್ಕೃತಿಯನ್ನು ಕಾಪಾಡುವುದು .
7 ) ಅರಣ್ಯ , ಸರೋವರ , ನದಿಗಳು ಹಾಗೂ ವನ್ಯ ಜೀವಿಗಳನ್ನೊಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸಿ ಅಭಿವೃದ್ಧಿಪಡಿಸುವುದು .
8 ) ವೈಜ್ಞಾನಿಕ ಮತ್ತು ಮಾನವೀಯ ಗುಣಗಳನ್ನು ಹಾಗೂ ಸುಧಾರಣಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು .
9 ) ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು .
10 ) ರಾಷ್ಟ್ರದ ಉನ್ನತಿಗಾಗಿ ಎಲ್ಲಾ ಕ್ಷೇತ್ರದಲ್ಲೂ ವೈಯಕ್ತಿಕ ಮತ್ತು ಸಾಮೂಹಿಕವಾಗಿ ಪ್ರಾವೀನ್ಯತೆ ಪ್ರದರ್ಶಿಸುವುದು .
11 ) ತಂದೆ ಅಥವಾ ಪೋಷಕರು 6 ವರ್ಷದಿಂದ 14 ವರ್ಷದೊಳಗಿನ ತಮ್ಮ ಮಗುವಿನ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದು .
7 ) ನ್ಯಾಯಾಂಗ ಹೊರಡಿಸುವ ವಿವಿಧ ಬಗೆಯ ರಿಟ್‌ಗಳನ್ನು ವಿವರಿಸಿ .
ಒಬ್ಬ ವ್ಯಕ್ತಿಗೆ ರಾಜ್ಯ ಅಥವಾ ಬೇರೆ ವ್ಯಕ್ತಿಗಳಿಂದ ತನ್ನ ಮೂಲಭೂತ ಹಕ್ಕುಗಳಿಗೆ ದಕ್ಕೆಯಾದಗ ನ್ಯಾಯಾಲಯದ ಮೊರೆ ಹೋಗಿ ರೀಟ್ ಮೂಲಕ ರಕ್ಷಣೆ ಪಡೆದುಕೊಳ್ಳಬಹುದಾಗಿದೆ . ಆ ರಿಟ್‌ಗಳೆಂದರೆ :
1 ) ಹೇಬಿಯಸ್ ಕಾರ್ಪಸ್ – ಯಾರಾದರೊಬ್ಬರನ್ನು ಪೊಲಿಷ್ ಅಥವಾ ಇತರರು ಬಂಧನದಲ್ಲಿಟ್ಟಾಗ ಆ ವ್ಯಕ್ತಿಯನ್ನು ಬಿಡಿಸಲು ಹೊರಡಿಸುವ ಆಜ್ಞೆ
2) ಮ್ಯಾಂಡಮಸ್ – ತನ್ನ ಕರ್ತವ್ಯ ನಿರ್ವಹಿಸಲು ವಿಫಲನಾದ / ನಿರಾಕರಿಸಿದ ಸಾರ್ವಜನಿಕ ಅಧಿಕಾರಿ / ಪ್ರಾಧಿಕಾರಕ್ಕೆ ಅದನ್ನು ನಿರ್ವಹಿಸುವಂತೆ ಹೊರಡಿಸುವ
3 ) ಪ್ರೋಹಿಬಿಷೆನ್ – ಕೆಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಥವಾ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ತೀರ್ಪು ನೀಡದಂತೆ ತಡೆಯಲು ಉಚ್ಚನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯ ಹೊರಡಿಸುವ ರಿಟ್
4 ) ಪೆರ್ಷಿಯೋರರಿ : ಅಧೀನ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಮೇಲಿನ ನ್ಯಾಯಾಲಯಕ್ಕೆ ವರ್ಗಾಯಿಸುವ ಕ್ರಮ .
5 ) ಕೋವಾರೆಂಟೋ : ಅಕ್ರಮವಾಗಿ ಪಡೆದ ಸಾರ್ವಜನಿಕ ಹುದ್ದೆಯನ್ನು ತೆರೆವುಗೊಳಿಸಲು ಹೊರಡಿಸುವ ರಿಟ್ ಆಜ್ಞೆ
8 ) ರಾಷ್ಟ್ರೀಯ ಶಿಕ್ಷಣ ಕಾಯ್ದೆ ಬಗ್ಗೆ ಕಿರು ಟಿಪ್ಪಣಿ ಬರೆಯಿರಿ .
ರಾಜ್ಯ ನಿರ್ದೇಶಕ ತತ್ವದಲ್ಲಿ ಬರುವ 6 ವರ್ಷದಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಬೇಕೆಂಬ ಆಶಯವನ್ನು ಕಾರರೂಪಕ್ಕೆ ತರುವ ಸಲುವಾಗಿ ಸಂವಿಧಾನದ 86 ನೇ ತಿದ್ದುಪಡಿ ಕಾಯ್ದೆ – 2002 ರ ಅನ್ವಯ 21 – A ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲಾಗಿದ್ದು , 6 – 14 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ನೀಡಲಾಗಿದೆ . ಪರಿಣಾಮವಾಗಿ ‘ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು 2009 ಕಾಯ್ದೆಯು ಸಂಸತ್ತಿನ ಅನುಮೋದನೆ ಪಡೆಯಿತು . ಕೇಂದ್ರ ಕಾಯಿದೆಯ ಅನುಗುಣವಾಗಿ ಕರ್ನಾಟಕ ರಾಜ್ಯವೂ ಸಹ ನಿಯಮಗಳನ್ನು ರೂಪಿಸಿ , ರಾಜ್ಯ ಪತ್ರದಲ್ಲಿ ಪ್ರಕಟಗೊಂಡು ದಿನಾಂಕ 28 ಏಪ್ರಿಲ್ 2012 ರಿಂದ ಈ ನಿಯಮಗಳು ಜಾರಿಗೆ ಬಂದಿವೆ .
ಈ ಕಾಯ್ದೆಯ ಪ್ರಕಾರ ಸರ್ಕಾರದ ಕಾರ್ಯಗಳೆಂದರೆ :
1 ) ಎಲ್ಲಾ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣದಲ್ಲಿ ದಾಖಲಾತಿ , ಹಾಜರಾತಿ ಹಾಗೂ ಪೂರೈಕೆಯ ಭರವಸೆ ಒದಗಿಸುವುದು .
2 ) ಸಮೀಪದಲ್ಲಿ ಶಾಲೆಗಳ ಲಭ್ಯತೆ ಬಗ್ಗೆ ಖಚಿತ ಪಡಿಸಿಕೊಳ್ಳುವುದು .
3 ) ದುರ್ಬಲ ವರ್ಗದ ಮಕ್ಕಳು ತಾರತಮ್ಯವಿಲ್ಲದೆ , ನಿರಂತರವಾಗಿ ಪ್ರಾಥಮಿಕ ಶಿಕ್ಷಣವನ್ನು ಮುಂದುವರಿಸಿ ಪೂರೈಸಲು ಭರವಸೆ ನೀಡುವುದು .
4) ಈ ಕಾಯ್ದೆ ಜಾರಿಗೊಳಿಸಲು ಅವಶ್ಯಕ ನಿಧಿಯನ್ನು ಒದಗಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ – ಜವಾಬ್ದಾರಿಯನ್ನು ವಹಿಸಿರುತ್ತವೆ . ಈ ಕಾಯ್ದೆಯು ಸಮೀಪದಲ್ಲಿರುವ ಪ್ರಾಥಮಿಕ ಶಾಲೆಗೆ ಮಗುವನ್ನು ದಾಖಲಾತಿಗೊಳಿಸುವುದು ಪ್ರತಿಯೊಬ್ಬ ಪಾಲಕ / ಪೋಷಕನ ಕರ್ತವ್ಯವೆಂದು ಪರಿಗಣಿಸಿದೆ .
IV . ಹತ್ತು ಅಂಕದ ಪ್ರಶ್ನೆಗಳು :
1 ) ಭಾರತ ಸಂವಿಧಾನದ ಪ್ರಧಾನ ಲಕ್ಷಣಗಳನ್ನು ವಿವರಿಸಿ .
26 ಜನವರಿ 1950 ರಂದು ಅಸ್ತಿತ್ವಕ್ಕೆ ಬಂದ ನಮ್ಮ ಭಾರತದ ಸಂವಿಧಾನವು ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.
1. ಅಖಿತ ಮತ್ತು ಬೃಹತ್ ಸಂವಿಧಾನ : ಇಡೀ ವಿಶ್ವದಲ್ಲೇ ಅತ್ಯಂತ ಬೃಹತ್ ಗಾತ್ರದ ಸಂವಿಧಾನ ಇದಾಗಿದೆ . ಮೂಲ ಸಂವಿಧಾನವು 395 ವಿಧಿ , 8 ಪರಿಶಿಷ್ಟ 22 ಭಾಗಗಳಿಂದ ಕೂಡಿತ್ತು ಪ್ರಸ್ತುತ ಸಂವಿಧಾನ 463 ವಿಧಿ , 12 ಪರಿಶಿಷ್ಟ ಹಾಗೂ 25 ಭಾಗಗಳನ್ನು ಹೊಂದಿದೆ .
2. ಪ್ರಸ್ತಾವನೆ | ಪೂರ್ವ ಪೀಠಿಕೆ : ಸಂವಿಧಾನದ ಗುರಿ ಮತ್ತು ಆದರ್ಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಭಾಗವೇ ಇದಾಗಿದ್ದು , ಇದನ್ನು ಅಮೇರಿಕಾ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ .
3 ಮೂಲಭೂತ ಹಕ್ಕುಗಳು : ಇದನ್ನು ಅಮೇರಿಕಾ ಸಂವಿಧಾನದಿಂದ ಎರವಲಾಗಿ ಪಡೆಯಲಾರದ್ದು ಸಂವಿಧಾನದ 3 ನೇ ಭಾಗದಲ್ಲಿ 6 ಮೂಲಭೂತ ಹಕ್ಕುಗಳನ್ನು 12 ನೇ ವಿಧಿಯಿಂದ 35 ನೇ ವಿಧಿಯವರಿಗೆ ವಿವರಿಸಲಾಗಿದೆ .
4. ಮೂಲಭೂತ ಕರ್ತವ್ಯಗಳು : ಮೂಲ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳ ಬಗ್ಗೆ ಯಾವುದೇ ಪ್ರಸ್ತಾಪವಿರಲಿಲ್ಲ . 1976 ರಲ್ಲಿ ಸಂವಿಧಾನಕ್ಕೆ 42 ನೇ ತಿದ್ದುಪಡಿತರುವುದರ ಮೂಲಕ ಸಂವಿಧಾನದ 4A ಭಾಗದಲ್ಲಿ 5IA ವಿಧಿಯಲ್ಲಿ Il ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ . ಇದನ್ನು ರಷ್ಯಾ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ .
5 . ರಾಜ್ಯ ನಿರ್ದೇಶಕ ತತ್ವಗಳು : ಇಂಗ್ಲೆಂಡಿನ ಸಂವಿಧಾನದಿಂದ ಎರವಲಾಗ ಪಡೆದಿದ್ದು ಇದು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಯನ್ನು ವೃದ್ಧಿಸುವ ದೃಷ್ಟಿಯಿಂದ ಸಂವಿದಾನದ 4 ನೇ ಭಾಗದಲ್ಲಿ 36 ರಿಂದ 51 ನೇ ವಿಧಿಗಳಲ್ಲಿ ವಿವರಿಸಲಾಗಿದೆ .
6. ಸಂಸದೀಯ ಮಾದರಿ ಸರ್ಕಾರ : ಇಂಗ್ಲೆಂಡಿನ ಸಂವಿಧಾನದಿಂದ ಎರವಲಾ ಪಡೆದಿದ್ದು , ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳಲ್ಲಿ ಕಾರಾಂಗ , ಶಾಸಕಾಂಗದಿಂದ ಸೃಷ್ಟಿಯಾಗಿ , ಅದಕ್ಕೆ ಜವಾಬ್ದಾರಿಯನ್ನು ನೀಡಿ ಕಾರನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ .
7 . ಸಂಯುಕ್ತ ಮತ್ತು ಏಕಾತ್ಮಕ ವ್ಯವಸ್ಥೆಗಳ ಸಂಯೋಜನೆ : ಸಂಯುಕ್ತ ಮತ್ತು ಏಕಾತ್ಮಕ ಸರ್ಕಾರಗಳೆರ ಪರ ಲಕ್ಷಣವನ್ನು ಹೊಂದಿರುವ ಅರೆ ಸಂಯುಕ್ತ ಮಾದರಿಯ ಸರ್ಕಾರ ಇದಾಗಿದೆ .
8 ಸ್ವತಂತ್ರ ನ್ಯಾಯಾಂಗ : ಶಾಸಕಾಂಗ ಮತ್ತು ಕಾರಾಂಗಗಳ ನಿಯಂತ್ರಣದಿಂದ ಮುಕ್ತವಾಗಿ ಅಂದರೆ ಸ್ವತಂತ್ರವಾಗಿ ಕಾರನಿರ್ವಹಿಸುವಂತೆ ಸ್ವತಂತ್ರನ್ಯಾಯಾಂಗಕ್ಕೆ ನಮ್ಮ ಸಂವಿಧಾನ ವ್ಯವಸ್ಥೆ ಮಾಡಿದೆ .
9 . ಏಕ ಪೌರತ್ವ : ಭಾರತ ಹಲವು ರಾಜ್ಯಗಳ ಒಕ್ಕೂಟವೆನಿಸಿಕೊಂಡಿದ್ದರೂ ಅಮೇರಿಕಾದಂತೆ ಇಲ್ಲಿನ ಪ್ರಜೆಗಳಿಗೆ ಆಯಾ ರಾಜ್ಯಗಳ ಪ್ರತ್ಯೇಕ ಪೌರತ್ವವನ್ನು ನೀಡದೆ , ಒಂದೇ ಪೌರತ್ವವಾದ ರಾಷ್ಟ್ರೀಯ ಪೌರತ್ವವನ್ನು ನೀಡಲಾಗಿದೆ
10. ಏಕರಾಷ್ಟ್ರ ಭಾಷೆ : ಭಾರತೀಯರಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಮುಡಿಸುವ ಸಲುವಾಗಿ ನಮ್ಮ ಸಂವಿಧಾನ ಹಿಂದಿ ಭಾಷೆಯನ್ನು ಏಕರಾಷ್ಟ್ರ ಭಾಷೆಯಾಗಿ ಮಾಡಿದೆ .
11 . ಏಕ ಸಂವಿಧಾನ : ಸಂಯುಕ್ತ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿರುವಂತೆ ಪ್ರಾಂತ್ಯಗಳಿಗೆ ಪ್ರತ್ಯೇಕ ಸಂವಿಧಾನವಿರದೆ ಇಡೀ ರಾಷ್ಟ್ರಕ್ಕೆಲ್ಲಾ ಒಂದೇ ಸಂವಿಧಾನವಿದೆ .
12. ದ್ವಿತದ ಶಾಸಕಾಂಗ ವ್ಯವಸ್ಥೆ : ಬ್ರಿಟನ್‌ನಲ್ಲಿರುವಂತೆ ನಮ್ಮಲ್ಲೂ ದ್ವಿಸದನಶಾಸಕಾಂಗ ಪದ್ಧತಿಗೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ . ರಾಜ್ಯಗಳು ಇಷ್ಟಪಟ್ಟಲ್ಲಿ ಏಕಸದನ ವ್ಯವಸ್ಥೆಯನ್ನು ಹೊಂದ ಬಹುದಾಗಿದೆ .
13. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ : ನಮ್ಮ ಸಂವಿಧಾನವು ನಿರ್ದಿಷ್ಟ ವಯೋಮಾನವನ್ನು ತಲುಪಿದೆ ಅಂದರೆ 18 ವರ್ಷ ವಯಸ್ಸಾದ ಸ್ತ್ರೀ ಮರುಷರೆಲ್ಲರಿಗೂ ಸಮಾನವಾಗಿ ಮತ ಚಲಾಯಿಸುವ ಅಧಿಕಾರವನ್ನು ನೀಡಿದೆ .
14 , ಭಾಗಶಃ ನಮ್ಯ ಮತ್ತು ಭಾಗಶಃ ಅನಮ್ಯ ಸಂವಿಧಾನ : ಭಾರತ ಸಂವಿಧಾನವು ಅಗತ್ಯವಿದ್ದಾಗ ನಮ್ಮ ಸಂವಿಧಾನದಂತೆಯೂ , ಉಳಿದ ಸಂದರ್ಭಗಳಲ್ಲಿ ಅನಮ್ಯವಾಗಿಯೂ ಇರುವಂತೆ ರೂಪುಗೊಂಡಿದೆ .
15. ಶಾರ್ವಭೌಮ ಪ್ರಜಾಪ್ರಭುತ್ವ , ಶಮಾಜವಾದಿ ಮತ್ತು ಜಾತ್ಯಾತೀತ ಗಣರಾಜ್ಯ : ಭಾರತ ಸಂವಿಧಾನದಲ್ಲಿ ಭಾರತವನ್ನು ಒಂದು ಸಾರ್ವಭೌಮ , ಪ್ರಜಾಸತ್ತಾತ್ಮಕ ಸಮಾಜವಾದಿ , ಜಾತ್ಯಾತೀತ ಗಣರಾಜ್ಯವನ್ನಾಗಿಸುವ ಉದ್ದೇಶವಿದೆ
16. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಕ್ರಮ : ಭಾರತದಲ್ಲಿ ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದ ಅಸ್ಪೃಶ್ಯತೆಯನ್ನು ತೊರೆದು ಹಾಕಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಅಧಿಕಾರ ನೀಡಿದೆ .
17. ಅಖಿಲ ಭಾರತ ಸೇವೆಗಳು : ಭಾರತ ಸಂಯುಕ್ತ ಮಾದರಿ ಸರ್ಕಾರ ಹೊಂದಿದ್ದು ಕೇಂದ್ರ ಮತ್ತು ರಾಜ್ಯಗಳಿಗೆ ಪ್ರತ್ಯೇಕ ಆಡಳಿತ ಸೇವೆಗಳನ್ನು ಹೊಮದಿದ್ದಾಗ್ಯೂ ಕೆಲವು ಅಖಿಲ ಭಾರತ ಸೇವೆಗಳಾದ IAS , IPS , IFS ಮುಂತಾದ ಸೇವೆಗಳಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ .
18. ತುರ್ತು ಪರಿಸ್ಥಿತಿಯ ಅಧಿಕಾರಗಳು : ದೇಶದಲ್ಲಿ ಉದ್ಭವಿಸಬಹುದಾದ ಯಾವುದೇ ಬಗೆಯಾದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಂವಿಧಾನದ 18 ನೇ ಭಾಗದ 352-1360ರ ವರೆಗಿನ ವಿಧಿಗಳಲ್ಲಿ ರಾಷ್ಟ್ರಾಧ್ಯಕ್ಷರಿಗೆ 3 ರೀತಿಯ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರ ನೀಡಿದೆ .
19. ನ್ಯಾಯಕ ವಿಮರ್ಶಾಧಿಕಾರ : ಸಂವಿಧಾನದ ಸಂರಕ್ಷಕನಾದ ನ್ಯಾಯಾಂಗವು ಸಂವಿಧಾನಕ್ಕೆ ವಿರುದ್ಧವಾದ ಶಾಸನಗಳನ್ನು , ಸರ್ಕಾರಿ ಆಜ್ಞೆಗಳನ್ನು ರದ್ದುಪಡಿಸುವಂತೆ ಮಾಡುವ ಅಧಿಕಾರವೇ ಇದಾಗಿದೆ .
20. ಪಂಚಾಯತ್‌ರಾಜ್ ವ್ಯವಸ್ಥೆ : 1993 ರ ಸಂವಿಧಾನ ತಿದ್ದುಪಡಿ ವಿಧೇಯಕದ ಮೂಲಕ ತಂದ 73 ಮತ್ತು 74 ನೇ ತಿದ್ದುಪಡಿಯನ್ವಯ 3 ಹಂತದ ಸ್ಥಳೀಯ ಸರ್ಕಾರಿ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ .
21. ತಿದ್ದುಪಡಿ ವಿಧಾನಗಳು : ಸಂವಿಧಾನದ 20 ನೇ ಭಾಗದ 368 ನೇ ವಿಧಿಯಲ್ಲಿ ಸಂವಿಧಾನದ 3 ತಿದ್ದುಪಡಿ ವಿಧಾನವನ್ನು ವಿವರಿಸಲಾಗಿದೆ . ಹಂಚಲಾಗಿದೆ .
22. ಅಧಿಕಾರ ವಿಭಜನೆ : ಶಾಸನೀಯ ಅಧಿಕಾರಗಳನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ 3 ಪಟ್ಟಿಗಳ ಮೂಲಕ ಸಂವಿಧಾನಾತ್ಮಕವಾಗಿ ಹಂಚಲಾಗಿದೆ
1 ) ಕೇಂದ್ರ ಪಟ್ಟಿ – 97 ವಿಷಯಗಳು
2 ) ರಾಜ್ಯಪಟ್ಟಿ – 66 ವಿಷಯಗಳು
3 ) ಸಮವರ್ತಪಟ್ಟಿ – 47 ವಿಷಯಗಳು
2 ) ಭಾರತೀಯ ಪೌರರ ಮೂಲಭೂತ ಹಕ್ಕುಗಳನ್ನು ವಿವರಿಸಿ .
ನಮ್ಮ ಸಂವಿಧಾನದ 3 ನೇ ಭಾಗದ 12 ರಿಂದ 35 ರವರೆಗಿನ ವಿಧಿಗಳಲ್ಲಿ ಮೂಲಭೂತ ಹಕ್ಕುಗಳನ್ನು ಕುರಿತು ವಿವರಿಸಲಾಗಿದೆ . ಮೂಲ ಸಂವಿಧಾನದಲ್ಲಿ 7 ಮೂಲಭೂತ ಹಕ್ಕುಗಳಿದ್ದವು . ಆದರೆ 1978 ರಲ್ಲಿ ಸಂವಿಧಾನದ 44 ನೇ ತಿದ್ದುಪಡಿ ಅನ್ವಯ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆಯಲಾಗಿದೆ .
1. ಸಮಾನತೆಯ ಹಕ್ಕು ( 14 ರಿಂದ 18 ನೇ ವಿಧಿ ) : ಕಾನೂನಿನ ಮುಂದೆ ಎಲ್ಲರು ಸಮಾನರು . ಇಲ್ಲಿ ಲಿಂಗಭೇದ , ಜಾತಿಭೇದ ಯಾವುದೂ ಪರಿಗಣನೆಗೆ ಬರುವುದಿಲ್ಲ .
2. ಸ್ವಾತಂತ್ರ್ಯ ಹಕ್ಕು ( 19 ರಿಂದ ೭೭ ನೇ ವಿಧಿ ) : ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಈ ಸ್ವಾತಂತ್ರ್ಯದ ಹಕ್ಕು ಅವಶ್ಯಕ . ಈ ಸ್ವಾತಂತ್ರ್ಯದ ಹಕ್ಕುಗಳಲ್ಲಿ 7 ಹಕ್ಕುಗಳನ್ನು ಕಾಣಬಹುದು .
1 ) ಮಾತನಾಡುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
2 ) ಶಸ್ತ್ರ ರಹಿತವಾಗಿ ಸಭೆ ಸೇರುವ ಸ್ವಾತಂತ್ರ್ಯ
3 ) ಸಂಘ – ಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ
4) ದೇಶದಾದ್ಯಂತ ಸಂಚರಿಸುವ ಸ್ವಾತಂತ್ರ್ಯ
5 ) ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಸ್ವಾತಂತ್ರ್ಯ
6 ) ಯಾವುದೇ ಉದ್ಯೋಗ ಮತ್ತು ವ್ಯವಹಾರ ಮಾಡುವ ಸ್ವಾತಂತ್ರ್ಯ
3. ಶೋಷಣೆಯ ವಿರುದ್ಧ ಹಕ್ಕು ( 23 ರಿಂದ 24 ನೇ ವಿಧಿ ) : ಬಲವಂತದ ದುಡುಮೆ , ಗುಲಾಮಗಿರಿ , ಹಾಗೂ ಮಹಿಳೆಯರ ಮತ್ತು ಮಕ್ಕಳನ್ನು ಅನೈತಿಕ ವ್ಯವಹಾರಕ್ಕೆ ಬೆಳೆಸುವುದನ್ನು ನಿಷೇದಿಸಿದೆ . 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ & ಕಷ್ಟಕರವಾದ ದುಡಿಮೆಗಳಲ್ಲಿ ತೊಡಗಿಸುವುದನ್ನು ನಿಷೇಧಿಸಿದೆ .
4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ( 25 ರಿಂದ 28 ನೇ ವಿಧಿ ) : ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು , ಎಲ್ಲಾ ಧರ್ಮಗಳಿಗೂ ಸಮಾನ ಪ್ರಾಶಸ್ತ್ರ ನೀಡಿದೆ . ಈ ಹಕ್ಕು ವ್ಯಕ್ತಿಗೆ ಯಾವುದೇ ಧರ್ಮವನ್ನು ಅನುಸರಿಸುವ , ಪ್ರಚಾರ ಮಾಡುವ ಧರ್ಮಸಂಸ್ಥೆಗಳ ಸ್ಥಾಪನೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿದೆ .
5 , ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ( 29 ರಿಂದ 30 ನೇ ವಿಧಿ) : ನಮ್ಮ ಸಂಸ್ಕೃತಿಯನ್ನು ಉಳಿಸಿ , ಬೆಳಸಿಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡುವುದೇ ಸಾಂಸ್ಕೃತಿಕ ಹಕ್ಕಾಗಿದೆ . ಅಲ್ಪಸಂಖ್ಯಾತ ವರ್ಗಗಳು ತಮ್ಮ ಭಾಷೆ , ಸಂಸ್ಕೃತಿ ಇತ್ಯಾದಿಗಳನ್ನು ಉಳಿಸಿಕೊಂಡು ಬರುವುದಕ್ಕಾಗಿ ಸ್ಥಾಪಿಸುವಂತಹ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರವು ಧನ ಸಹಾಯವನ್ನೊದಗಿಸುವಾಗ ಯಾವ ರೀತಿಯ ತಾರತಮ್ಯವನ್ನುಂಟು ಮಾಡುವಂತಿಲ್ಲ .
6. ಆಸ್ತಿಯ ಹಕ್ಕು ( 31 ನೇ ವಿಧಿ ) : 1977 ಕ್ಕಿಂತ ಮೊದಲು ಇದು ಮೂಲಭೂತ ಹಕ್ಕಾಗಿತ್ತು . ಸಂವಿಧಾನದ 44 ನೇ ತಿದ್ದುಪಡಿ ಅನ್ವಯ ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ . ಇಂದು ಈ ಹಕ್ಕು ಕೇವಲ ಕಾಯ್ದೆಯ ಹಕ್ಕಾಗಿದೆ .
7. ಸಂವಿಧಾನಾತ್ಮಕ ಪರಿಹಾರ ಹಕ್ಕು ( 32 ನೇ ವಿಧಿ ) : ಮೂಲಭೂತ ಹಕ್ಕುಗಳಿಗೆ ರಕ್ಷಣೆ ಇಲ್ಲದಿದ್ದರೆ , ಅವುಗಳಿಗೆ ಮೌಲ್ಯವಿರುವುದಿಲ್ಲ . ಹಾಗಾಗಿ ಈ ಹಕ್ಕುಗಳು ಉಲ್ಲಂಘಿಸಲ್ಪಟ್ಟಾಗ ಸರ್ವೋಚ್ಛನ್ಯಾಯಾಲಯ ಮತ್ತು ಉಚ್ಚನ್ಯಾಯಾಲಗಳು ಹೇಬಿಯಸ್ ಕಾರ್ಪಸ್ , ಮ್ಯಾಂಡಮಸ್ , ಪ್ರೊಹಿಬಿಷನ್ , ಕೋವಾರೆಂಟೋ ಮತ್ತು ಷರ್ಷಿಯೋರರಿ ಎಂಬ ರಿಟ್‌ಗಳ ಮೂಲಕ ಕಾಪಾಡುತ್ತವೆ .
ಹೆಚ್ಚುವರಿ ಪ್ರಶೋತ್ತರಗಳು
1 ) ಭಾರತದ ಸಂವಿಧಾನ ಯಾವಾಗ ಅಂಗೀಕರಿಸಲ್ಪಟ್ಟಿತು ?
ಜನವರಿ 26 , 1950 ರಂದು ಜಾರಿಗೆ ಬಂದಿತು .
2 ) ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷರು ಯಾರು ?
ಡಾ || ಸಚ್ಚಿದಾನಂದ ಸಿನ್ಹಾ .
3 ) ಭಾರತ ಸಂವಿಧಾನ ಯಾವ ಯಾವ ಭಾಷೆಯಲ್ಲಿ ರಚಿತವಾಗಿದೆ ?
ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ರಚಿತವಾಗಿದೆ .
4 ) ಸಂವಿಧಾನ ಕರಡು ಸಮಿತಿ ಎಷ್ಟು ಜನ ಸದಸ್ಯರನ್ನು ಹೊಂದಿತ್ತು ?
7 ಜನ ಸದಸ್ಯರನ್ನು ಹೊಂದಿತ್ತು .
5 ) ಪ್ರಸ್ತಾವನೆಯನ್ನು ಹೊಂದಿದ ಮೊದಲ ಸಂವಿಧಾನ ಎಂಬ ಖ್ಯಾತಿಗೆ ಯಾವ ರಾಷ್ಟ್ರದ ಸಂವಿಧಾನ ಪಾತ್ರವಾಗಿದೆ?
ಅಮೇರಿಕಾದ ಸಂವಿಧಾನ .
6 ) ಮೂಲಭೂತ ಹಕ್ಕುಗಳನ್ನು ಯಾವ ರಾಷ್ಟ್ರದ ಸಂವಿಧಾನದ ಆಧಾರದ ಮೇಲೆ ಅಳವಡಿಸಿಕೊಳ್ಳಲಾಗಿದೆ ?
ಅಮೇರಿಕಾ ಸಂವಿಧಾನ ಆಧಾರದ ಮೇಲೆ .
7 ) ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲು ಆಧಾರವಾದ ಸಂವಿಧಾನ ಯಾವುದು ?
ಅಮೇರಿಕಾ ಸಂವಿಧಾನ
8 ) ಪ್ರಸ್ತಾವನೆಯನ್ನು ಅಳವಡಿಸಲು ಆಧಾರವಾದ ಸಂವಿಧಾನ ಯಾವುದು ?
ಐಸ್ಲಂಡಿನ ಸಂವಿಧಾನ .
9 ) ಭಾರತದ ಮೂಲ ಸಂವಿಧಾನದ ವಿಧಿ , ಪರಿಶಿಷ್ಟ ಮತ್ತು ಭಾಗಗಳೆಷ್ಟು ?
395 ವಿಧಿಗಳು ,
8 ಪರಿಶಿಷ್ಯಗಳು ಮತ್ತು
22 ಭಾಗಗಳು .
10 ) ಪ್ರಸ್ತುತ ಭಾರತೀಯ ಸಂವಿಧಾನದ ವಿಧಿ , ಪರಿಶಿಷ್ಟ ಮತ್ತು ಭಾಗಗಳೆಷ್ಟು ?
463 ವಿಧಿಗಳು ,
12 ಪರಿಶಿಷ್ಠಗಳು ಮತ್ತು
25 ಭಾಗಗಳು .
FAQ
ಜನವರಿ 26 , 1950 ರಂದು ಜಾರಿಗೆ ಬಂದಿತು .
ಭಾರತದ ಸಂವಿಧಾನ ವಿಶ್ವದ ಅತ್ಯಂತ ದೊಡ್ಡ ಸಂವಿಧಾನ .
ಇತರೆ ವಿಷಯಗಳು :
First Puc Political Science Notes
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf