ಪ್ರಥಮ ಪಿ.ಯು.ಸಿ ಅಧ್ಯಾಯ-6 ಶಾಸಕಾಂಗ ನೋಟ್ಸ್ ಪ್ರಶ್ನೋತ್ತರಗಳು, 1st Puc Political Science 6th Chapter Shasakanga Notes in Kannada Pdf Download 2024 First Puc Shasakanga Notes Legislature Notes in Kannada Legislature Class 11 Notes Question Answer Kseeb Solution For Class 11 Chapter 6 Notes
ಪ್ರಥಮ ಪಿ.ಯು.ಸಿ ಶಾಸಕಾಂಗ ನೋಟ್ಸ್
1st Puc Political Science Notes in Kannada Pdf Chapter 6
1 ) ಬ್ರಿಟನ್‌ನ ಪಾರ್ಲಿಮೆಂಟಿನ ಎರಡು ಸದನಗಳನ್ನು ಹೆಸರಿಸಿ .
ಸಾಮಾನ್ಯಸಭೆ ಮತ್ತು ಶ್ರೀಮಂತ ಸಭೆ .
2 ) ಭಾರತದ ಸಂಸತ್ತಿನ ಅವಿಭಾಜ್ಯ ಅಂಗ ಯಾರು ?
ರಾಷ್ಟ್ರಾಧ್ಯಕ್ಷರು ಸಂಸತ್ತಿನ ಅವಿಭಾಜ್ಯ ಅಂಗ ,
3 ) ಭಾರತದಲ್ಲಿ ಸಂಸತ್ತಿನ ಅಧಿವೇಶನವನ್ನು ಯಾರು ಕರೆಯುವರು ?
ರಾಷ್ಟ್ರಾಧ್ಯಕ್ಷರು ಕರೆಯುತ್ತಾರೆ .
4 ) ಭಾರತದಲ್ಲಿ ಸುಗ್ರೀವಾಜ್ಞೆಯನ್ನು ಯಾರು ಹೊರಡಿಸುತ್ತಾರೆ ?
ರಾಷ್ಟ್ರಾಧ್ಯಕ್ಷರು ಹೊರಡಿಸುತ್ತಾರೆ .
5 ) ಶಾಸಕಾಂಗದ ಮೂಲ ಪದ ಯಾವುದು ?
ಶಾಸಕಾಂಗದ ಮೂಲಪದ ಫ್ರೆಂಚ್ ಭಾಷೆಯ ‘ ಪಾರ‍್ಲರ್ ‘ .
6 ) ಶಾಸಕಾಂಗದ ಪ್ರಾಥಮಿಕ ಕಾರ್ಯವನ್ನು ತಿಳಿಸಿ .
ಶಾಸನ ರಚನೆ ಮಾಡುವುದು ಶಾಸಕಾಂಗದ ಪ್ರಾಥಮಿಕ ಕಾರ್ಯ ,
7 ) ಭಾರತದ ಸಂಸತ್ತಿನ ಎರಡು ಸದನಗಳನ್ನು ಬರೆಯಿರಿ .
ಲೋಕಸಭೆ ಮತ್ತು ರಾಜ್ಯಸಭೆ ,
8 ) ಸಂಸತ್‌ನ ಎರಡು ಅಧಿವೇಶನಗಳ ನಡುವಣ ಕಾಲದ ಅಂತರ ಎಷ್ಟಿರಬೇಕು ?
6 ತಿಂಗಳು ,
9 ) ಭಾರತದ ಶಾಸಕಾಂಗ ಯಾವ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡುತ್ತಾರೆ ?
ಕೇಂದ್ರ ಪಟ್ಟಿ ಮತ್ತು ಸಮವರ್ಷ ಪಟ್ಟಿಗಳ ವಿಷಯಗಳ ಮೇಲೆ ಕಾನೂನು ಮಾಡುತ್ತಾರೆ .
10 ) ಸಂಸತ್‌ನ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುವರು ?
ಸ್ಪೀಕರ್ ವಹ
11 ) ಭಾರತದ ಸಂಸತ್ತಿನ ‘ ಚುನಾಯಿತ ಸದನ ‘ ಯಾವುದು ?
ಲೋಕಸಭೆ .
12 ) ಲೋಕಸಭೆಯ ಕಾವ್ಯಕಲಾಪಗಳ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ?
ಸ್ಪೀಕರ್ ವಹಿಸುತ್ತಾರೆ .
13 ) ಲೋಕ ಸಭೆಯ ಸಭಾಪತಿಯವರನ್ನು ಯಾರು ನೇಮಿಸುತ್ತಾರೆ ?
ಲೋಕಸಭೆಯ ಸದಸ್ಯರು
14 ) ಲೋಕಸಭೆಯ ಸದಸ್ಯರ ಸಂಖ್ಯೆ ಎಷ್ಟು ?
545 ಸದಸ್ಯರು .
15 ) ಲೋಕ ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳಿಗಾಗಿ ಮೀಸಲಿಟ್ಟ ಸದಸ್ಯರ ಸಂಖ್ಯೆ ಎಷ್ಟು ?
20 ಸದಸ್ಯರು
16 ) ಲೋಕ ಸಭೆಯನ್ನು ಪ್ರತಿನಿಧಿಸುವ ನಾಮ ನಿರ್ದೇಶಿತ ಸದಸ್ಯರ ಸಂಖ್ಯೆ ಎಷ್ಟು ?
ಇಬ್ಬರು ಸದಸ್ಯರು ( ಆಂಗ್ಲೋ ಇಂಡಿಯನ್ ಜನಾಂಗದವರು )
17 ) ಲೋಕಸಭೆಯ ಅಧಿಕಾರಾವಧಿ ಎಷ್ಟು ವರ್ಷ ?
5 ವರ್ಷ
18 ) ಲೋಕಸಭೆಯ ಅಧಿಕಾರಾವಧಿಯನ್ನು ಯಾವ ಸಂದರ್ಭದಲ್ಲಿ ವಿಸ್ತರಿಸಲಾಗುವುದು ?
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಒಂದು ವರ್ಷದ ವರೆಗೆ ವಿಸ್ತರಿಸಬಹುದು .
19 ) ಹಣಕಾಸಿನ ಮಸೂದೆಯನ್ನು ಯಾವ ಸದನದಲ್ಲಿ ಮೊದಲು ಮಂಡಿಸಲಾಗುವುದು ?
ಲೋಕಸಭೆ ( ಕೇಂದ್ರದಲ್ಲಿ ) ವಿಧಾನಸಭೆ ( ರಾಜ್ಯದಲ್ಲಿ ) ಗಳಲ್ಲಿ
20 ) ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?
250 ಸದಸ್ಯರು
21 ) ರಾಜ್ಯಸಭೆಗೆ ರಾಷ್ಟ್ರಪತಿಗಳಿಂದ ನಾಮಕರಣಗೊಳ್ಳುವ ಸದಸ್ಯರ ಸಂಖ್ಯೆ ಎಷ್ಟು ?
12 ಜನ ಸದಸ್ಯರು .
22 ) ರಾಜ್ಯಸಭೆಯ ಕಾವ್ಯಕಲಾಪಗಳ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ?
ಉಪರಾಷ್ಟ್ರಪತಿ .
23 ) ರಾಜ್ಯಸಭಾ ಸದಸ್ಯರ ಅಧಿಕಾರವಧಿ ಎಷ್ಟು ವರ್ಷ ?
6 ವರ್ಷ
24 ) ರಾಜ್ಯಸಭೆಯಲ್ಲಿ ಪ್ರತಿನಿಧಿ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು ?
ದೆಹಲಿ ಮತ್ತು ಪಾಂಡಿಚೇರಿ .
25 ) ಅಖಿಲ ಭಾರತ ಸೇವೆಗಳನ್ನು ಸೃಷ್ಟಿಸುವ ವಿಶೇಷ ಅಧಿಕಾರ ಹೊಂದಿರುವ ಭಾರತ ಸಂಸತ್‌ನ ಸದನ ಯಾವುದು ?
ಅಖಿಲ ಭಾರತ ಸೇವೆಗಳನ್ನು ಸೃಷ್ಟಿಸುವ ವಿಶೇಷ ಅಧಿಕಾರ ರಾಜ್ಯಸಭೆಗೆ ಇದೆ .
26 ) ಭಾರತದಲ್ಲಿ ಯಾವ ರಾಜ್ಯ ವಿಧಾನ ಸಭೆಯ ಅತಿ ಹೆಚ್ಚು ಸದಸ್ಯರನ್ನ ಹೊಂದಿದೆ ?
ಪಶ್ಚಿಮ ಬಂಗಾಳ
27 ) ರಾಜ್ಯ ವಿಧಾನ ಸಭಾ ಸದಸ್ಯರ ಅಧಿಕಾರವಧಿ ಎಷ್ಟು ?
5 ವರ್ಷಗಳು
28 ) ರಾಜ್ಯ ವಿಧಾನ ಪರಿಷತ್‌ನ ಸದಸ್ಯರ ಅಧಿಕಾರವಧಿ ಎಷ್ಟು ?
6 ವರ್ಷಗಳು
29 ) ಲೋಕ ಸಭೆಯನ್ನು ಯಾರು ವಿಸರ್ಜಿಸುತ್ತಾರೆ ?
ಪ್ರಧಾನಿ ನಾಯಕತ್ವದ ಮಂತ್ರಿಮಂಡಲದ ಶಿಫಾರಿಸ್ಸಿನ ಮೇರೆಗೆ ರಾಷ್ಟ್ರಧ್ಯಕ್ಷರು ವಿಸರ್ಜಿಸುತ್ತಾರೆ .
1st Puc Political Science Shasakanga Question Answer
1 ) ವಿಧಾನ ಸಭೆಯ ಆಯ್ಕೆಯ ಕಾರ್ಯ ಯಾವುವು ?
ರಾಷ್ಟ್ರಪತಿ ಆಯ್ಕೆಯಲ್ಲಿ ವಿಧಾನ ಸಭೆಯ ಸ್ಪೀಕರ್ & ಡೆಪ್ಯುಟಿ ಸ್ಪೀಕರ್ ಆಯ್ಕೆಯಲ್ಲಿ ರಾಜ್ಯ ಸಭಾ ಸದಸ್ಯರ ಆಯ್ಕೆಯಲ್ಲಿ ವಿಧಾನ ಪರಿಷತ್‌ನ ಸದಸ್ಯರ ಆಯ್ಕೆಯಲ್ಲಿ ಪಾತ್ರ
2 ) ರಾಜ್ಯಸಭಾ ಅಧ್ಯಕ್ಷರ ಅರ್ಹತೆಗಳನ್ನು ಬರೆಯಿರಿ .
ಭಾರತದ ಉಪರಷ್ಟ್ರಪತಿಯವರು ರಾಜ್ಯಸಭೆಯ ಪದ ನಿಮತ್ತ ಅಧ್ಯಕ್ಷರಾಗಿ ಕಾರನಿರ್ವಹಿಸುತ್ತಾರೆ ಇವರ ಅರ್ಹತೆಗಳೆಂದರೆ ,
1. ಭಾರತದ ಪ್ರಜೆಯಾಗಿರಬೇಕು .
2. 35 ವರ್ಷ ವಯಸ್ಸಾಗಿರಬೇಕು .
3. ರಾಜ್ಯಸಭೆಗೆ ಆಯ್ಕೆಯಾಗಲು ಬೇಕಾದ ಅರ್ಹತೆ
3 ) ಶಾಸಕಾಂಗ ಎಂದರೇನು ?
ಶಾಸಕಾಂಗ ಸರ್ಕಾರದ ಮೊದಲನೆಯ ಅಂಗವಾಗಿದ್ದೂ ರಾಜ್ಯಕ್ಕೆ ಅಗತ್ಯವಾದ ಶಾಸನಗಳನ್ನು ರಚಿಸುವ ಅಂಗವೇ ಶಾಸಕಾಂಗವಾಗಿದೆ .
4 ) ಅಮೇರಿಕಾ ಕಾಂಗ್ರೆಸ್‌ನ ಎರಡು ಸದನಗಳನ್ನು ಹೆಸರಿಸಿ .
ಸೆನೆಟ್ ಮತ್ತು ಪ್ರತಿನಿಧಿ ಸಭೆ .
5 ) ಭಾರತ ಸಂವಿಧಾನದ ಯಾವ ಭಾಗ ಸಂಸತ್‌ನ ಬಗೆಗೆ ತಿಳಿಸುತ್ತಾರೆ ?
ಸಂವಿಧಾನದ 5 ನೇ ಭಾಗ ಸಂಸತ್‌ನ ಬಗೆಗೆ ತಿಳುಸುತ್ತದೆ .
6 ) ಲೋಕಸಭಾ ಸದಸ್ಯರ ಅರ್ಹತೆಗಳನ್ನು ಕುರಿತು ಬರೆಯಿರಿ .
1. ಭಾರತ ಪ್ರಜೆಯಾಗಿರಬೇಕು
2. 25 ವರ್ಷ ವಯಸ್ಸಾಗಿರಬೇಕು
3. ಕೇಂದ್ರ / ರಾಜ್ಯ ಸರ್ಕಾರಿ ಹುದ್ದೆಯಲ್ಲಿರಬಾರದು .
7 ) ಲೋಕಸಭಾ ಸಭಾಪತಿಯವರ 2 ಮುಖ್ಯ ಕಾರ್ಯಗಳನ್ನು ತಿಳಿಸಿ .
1. ಲೋಕಸಭೆಯ ಕಾರ್ಯ ಕಲಾಪಗಳ ಅಧ್ಯಕ್ಷತೆ ವಹಿಸುತ್ತಾರೆ .
2. ಸಭೆಯನ್ನ , ಕರೆಯುವ , ಮುಂದೂಡುವ ಮತ್ತು ಸ್ಥಗಿತಗೊಳಿಸುವ ಅಧಿಕಾರ
3. ನಿರ್ಣಾಯಕ ಮತಚಲಾಯಿಸುತ್ತಾರೆ .
8 ) ವಿಧಾನ ಸಭೆ ಉಪಸಭಾಪತಿಯವರ ಕಾರ್ಯಗಳಾವುವು?
ಉಪಸಭಾಪತಿಯವರು ಸ್ಪೀಕರ್‌ರವರ ಅನುಪಸ್ಥಿತಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸುವ ಸಭೆಯ ಕಾರ್ಯ ಕಲಾಪಗಳನ್ನು ನಡೆಸುವ ಅಧಿಕಾರವನ್ನು ಚಲಾಯಿಸುತ್ತಾರೆ .
9 ) ‘ ಕೋರಂ ‘ ಎಂದರೇನು ?
ಶಾಸನಸಭೆಯ ಅಧಿವೇಶನ ನಡೆಸಲು ಬೇಕಾದ ಕನಿಷ್ಠ ಸದಸ್ಯರ ಹಾಜರಾತಿಯೇ ಕೋರಂ .
10 ) ರಾಜ್ಯಗಳ ಮೇಲ್ಮನೆಯನ್ನು ಸೃಷ್ಠಿಸುವ ಮತ್ತು ರದ್ದುಗೊಳಿಸುವ ಅಧಿಕಾರ ಯಾರಿಗಿದೆ ?
ರಾಜ್ಯ ವಿಧಾನಸಭೆಯ ಒಪ್ಪಿಗೆ ಮೇರೆಗೆ ಸಂಸತ್ ರಾಜ್ಯಗಳ ಮೇಲ್ಮನೆಯನ್ನು ಸೃಷ್ಠಿಸುವ ಮತ್ತು ರದ್ದುಗೊಳಿಸುವ ಅಧಿಕಾರ ಹೊಂದಿದೆ .
1 ) ಶಾಸಕಾಂಗದ ಅರ್ಥ ಮತ್ತು ಮಹತ್ವವನ್ನು ಬರೆಯಿರಿ .
ಶಾಸನಗಳನ್ನ ರೂಪಿಸುವ ಸರ್ಕಾರದ ಮೊದಲನೆಯ ಅಂಗವೇ ಶಾಸಕಾಂಗ , ಶಾಸಕಾಂಗವನ್ನು ಒಂದು ರಾಷ್ಟ್ರದ ಕಾನೂನು ಕಾರ್ಖಾನೆ ಎಂದು ಕರೆಯುತ್ತಾರೆ .
ಶಾಸಕಾಂಗವು ಹಳೆಯ ಮತ್ತು ಅನುಪಯೋಗಿ ಕಾನೂನುಗಳನ್ನು ರದ್ದುಪಡಿಸುವ , ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಮಾರ್ಪಾಡು ಮಾಡುವ ಹಾಗೂ ಹೊಸ ಕಾನೂನುಗಳನ್ನು ರೂಪಿಸುವ ಅಧಿಕಾರ ಹೊಂದಿರುತ್ತದೆ . ಈ ಶಾಸಕಾಂಗದ ಮಹತ್ವ ಇಂತಿದೆ .
1. ಕಾರಾಂಗ ಮತ್ತು ನ್ಯಾಯಾಂಗಗಳ ಕಾರಕ್ಕೆ ತಳಹದಿಯನ್ನು ಶಾಸಕಾಂಗ ಒದಗಿಸುತ್ತದೆ .
2. ಶಾಸಕಾಂಗ ಜನತೆಯ ಸರ್ವೋಚ್ಚ ಅಭಿಪ್ರಾಯಗಳನ್ನ ಶಾಸನರೂಪದಲ್ಲಿ ವ್ಯಕ್ತಪಡಿಸುತ್ತದೆ .
3. ಪ್ರಜೆಗಳ ಕುಂದು – ಕೊರತೆಗಳನ್ನ ಬಹಿರಂಗಪಡಿಸುವ ಮತ್ತು ಪರಿಹರಿಸುವ ವೇದಿಕೆಯಾಗಿ ಕಾವ್ಯ ನಿರ್ವಹಣೆ .
4 . ಸಂವಿಧಾನ ತಿದ್ದುಪಡಿ ಮಾಡುವ ಕಾವ್ಯದಲ್ಲಿ ಭಾಗ , 5. ರಾಷ್ಟ್ರಗಳ ಸಂಪನ್ಮೂಲಗಳ ಸಂಪೂರ್ಣ ಒಡೆತನವನ್ನು ಹೊಂದಿರುತ್ತದೆ .
2 ) ಭಾರತದ ಸಂಪತ್‌ನ ಬಗ್ಗೆ ಟಿಪ್ಪಣಿ ಬರೆಯಿರಿ .
ಭಾರತದ ಶಾಸಕಾಂಗವನ್ನು ಸಂಸತ್ತು ‘ ಎಂದು ಕರೆಯಲಾಗುತ್ತಿದೆ . ಸಂವಿಧಾನದ 5 ನೇ ಭಾಗ 2 ನೇ ಅಧ್ಯಾಯದಲ್ಲಿ ಸಂಸತ್‌ನ ಬಗ್ಗೆ ವಿವರಗಳನ್ನು ನೋಡಬಹುದು . ಸಂವಿಧಾನದ 79 ನೇ ವಿಧಿ ಅನ್ವಯ ರಾಷ್ಟ್ರಪತಿ ಲೋಕಸಭೆ ಮತ್ತು ರಾಜ್ಯಸಭೆಗಳನ್ನು ಸಂಸತ್ತು ಒಳಗೊಂಡಿದೆ . ಇಂಗ್ಲೆಂಡಿನಲ್ಲಿ ರಾಜ / ರಾಣಿ ಸಂಸತ್‌ನ ಒಂದು ಭಾಗವಾಗಿರುವಂತೆ ಭಾರತದಲ್ಲೂ ರಾಷ್ಟ್ರಪತಿ ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ ಇವರು ರಾಷ್ಟ್ರದ ಮುಖ್ಯಸ್ಥರಾಗುತ್ತಾರೆ .
ಈ ಸಂಸತ್ತು ದ್ವಿಸದನ ಶಾಸಕಾಂಗ ಪದ್ಧತಿಯ ಆಧಾರದ ಮೇಲೆ ರಚಿಸಲ್ಪಟ್ಟಿವೆ . ಆದ್ದರಿಂದ ನಮ್ಮ ಸಂಸತ್ತು 2 ಸದನಗಳನ್ನು ಒಳಗೊಂಡಿದೆ ರಾಜ್ಯಸಭೆಯನ್ನು ಮೇಲ್ಮನೆ , ಲೋಕಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ . ರಾಜ್ಯಸಭೆಯು ರಾಜ್ಯಗಳನ್ನು ಪ್ರತಿನಿಧಿಸಿದರೆ , ಲೋಕಸಭೆಯು ಪ್ರಜೆಗಳನ್ನು ಪ್ರತಿನಿಧಿಸುತ್ತವೆ . ಒಂದು ವರ್ಷದಲ್ಲಿ ಸಂಸತ್‌ನ ಅಧಿವೇಶನಗಳನ್ನು 3 ಭಾಗಗಳಾಗಿ ವಿಂಗಡಿಸಲಾಗದೆ . ಅಧಿವೇಶನ ಕರೆಯುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುತ್ತದೆ .
3 ) ಲೋಕಸಭೆಯ ರಚನೆಯ ಬಗ್ಗೆ ಸಂಕ್ಷಿಪ್ತವಾಗಿ ಬರೆಯಿರಿ .
ಲೋಕಸಭೆಯ ಸಂಸತ್ತಿನ ಕೆಳಮನೆಯಾಗದ್ದು ಇವರ ಸದಸ್ಯರು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯ ಮೂಲಕ ಪ್ರಜೆಗಳಿಂದ ನೇರವಾಗಿ ಚುನಾಯಿಸಲ್ಪಡುತ್ತಾರೆ . ಎನ್ನುವರು . ಹಾಗಾಗ ಈ ಸದನವನ್ನೂ ‘ ಪ್ರಜಾಪ್ರತಿನಿಧಿ ಸದನ ‘ ‘ ಜನತಾ ಸದನ ‘ ಸಂಸತ್ತಿನ ಸಾರ್ವಭೌಮಾಧಿಕಾರವು ಈ ಲೋಕಸಭೆಯಲ್ಲಿ ಕೇಂದ್ರೀಕೃತವಾಗಿದೆ . ಸಂವಿಧಾನವು ಲೋಕಸಭೆಯ ಸದಸ್ಯರ ಸಂಖ್ಯೆಯನ್ನು 550 ಕ್ಕಿಂತ ಹೆಚ್ಚು ಇರಬಾರದೆಂದು ತಿಳಿಸಿದೆ . ಹಾಗಾಗ ರಾಜ್ಯಗಳ ವಿವಿಧ ಕ್ಷೇತ್ರಗಳಿಂದ 530 ಕ್ಕಿಂತ ಹೆಚ್ಚು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 20 ಕ್ಕಿಂತ ಹೆಚ್ಚು ಸದಸ್ಯರನ್ನು ಚುನಾಯಿಸುವಂತಿಲ್ಲ . ಪ್ರಸ್ತುತ ಒಟ್ಟು 545 ಜನ ಸದಸ್ಯರಿದ್ದಾರೆ . ಲೋಕ ಸಭೆಯಲ್ಲಿ ಪ್ರಾತಿನಿಧ್ಯವಿಲ್ಲದ ಸಂದರ್ಭದಲ್ಲಿ ಆಂಗ್ಲೋ – ಇಂಡಿಯನ್ ಸಮುದಾಯಕ್ಕೆ ಸೇರಿದ ಇಬ್ಬರು ಸದಸ್ಯರನ್ನು ನಾಮಕರಣ ಮಾಡಲು ರಾಷ್ಟ್ರಪತಿಯವರಿಗೆ ಅಧಿಕಾರವಿದೆ .
4 ) ರಾಜ್ಯ ಸಭೆಯ ರಚನೆಯ ಬಗ್ಗೆ ಬರೆಯಿರಿ .
ರಾಜ್ಯ ಸಭೆಯು ಸಂಸತ್ತಿನ ಮೇಲ್ಮನೆಯಾಗಿದ್ದು ಇದು ಭಾರತದ ಸಂಯುಕ್ತ ವ್ಯವಸ್ಥೆಯ ಘಟಕಗಳಾದ ರಾಜ್ಯಗಳನ್ನು ಪ್ರತಿನಿಧಿಸುತ್ತದೆ . ಇದು ಪರೋಕ್ಷವಾಗಿ ಚುನಾಯಿತವಾದ ಸದನವಾಗದೆ . ಇದು ಇಂಗ್ಲೆಂಡಿನ ಮೇಲ್ಮನೆಯಾದ ಶ್ರೀಮಂತ ಸಭೆಯನ್ನು ಹೋಲುತ್ತದೆ . ಆದರೆ ಶ್ರೀಮಂತ ಸಭೆಯ ಸದಸ್ಯತ್ವವು ವಂಶ ಪಾರಪರವಾಗಿದ್ದರೆ , ರಾಜ್ಯ ಸಭೆಯ ಸದಸ್ಯತ್ವವು ವಂಶಪಾರಂಪರವಲ್ಲ , ಈ ಸದನವನ್ನ ‘ ಹಿರಿಯರ ಸದನ ‘ ‘ ಗಣ್ಯರ ಸದನ ‘ ‘ ರಾಜ್ಯಗಳ ಸಭಾ ‘ ಹಾಗೂ ‘ ಶಾಶ್ವತ ಸದನ ‘ ಎಂದು ಕರೆಯುತ್ತಾರೆ .
ಸಂವಿಧಾನದ 80 ನೇ ವಿಧಿ ಅನ್ವಯ ರಾಜ್ಯಸಭೆಯ 250 ಸದಸ್ಯರನ್ನು ಹೊಂದಿರತಕ್ಕದ್ದು ಇದರಲ್ಲಿ 238 ಜನರು ಪರೋಕ್ಷ ಚುನಾವಣೆ ಮೂಲಕ ಅಂದರೆ ರಾಜ್ಯವಿಧಾನಸಭಾ ಸದಸ್ಯರು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿವೇಚನಾ ಮಂಡಳಿಗಳ ಸದಸ್ಯರು ಚುನಾಯಿಸುತ್ತಾರೆ . ಉಳಿದ 12 ಜನ ಸದಸ್ಯರನ್ನು ರಾಷ್ಟ್ರಪತಿಯವರು ಕಲೆ , ಸಾಹಿತ್ಯ , ವಿಜ್ಞಾನ , ಸಮಾಜ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವ
5 ) ಲೋಕಸಭೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ವಿವರಿಸಿ .
ಲೋಕ ಸಭೆಯು ರಾಜ್ಯ ಸಭೆಗಿಂತ ಹೆಚ್ಚು ಶಕ್ತಿಶಾಲಿಯಾದ ಶಾಸನ ಸಭೆಯಾಗಿದ್ದು ಇದರ ಅಧಿಕಾರ ಮತ್ತು ಕರ್ತವ್ಯಗಳು ಕೆಳಗಿನಂತಿವೆ
1 . ಶಾಸನೀಯ ಕಾರ್ಯಗಳು : ಲೋಕ ಸಭೆಯು ಶಾಸನೀಯ ಕಾರ್ಯಗಳಲ್ಲಿ ಮುಖ್ಯವಾಗಿ ಶಾಸನ ರೂಪಿಸುವ ತಿದ್ದೊಪಡಿ ಮಾಡುವ ಅಥವಾ ರದ್ದುಪಡಿಸುವ ಪ್ರಮುಖ ಕಾರ್ಯಗಳು ನಿರ್ವಹಿಸುತ್ತವೆ . ಇದು ಕೇಂದ್ರಪಟ್ಟಿ ಮತ್ತು ಸಮವರ್ತಿ ಪಟ್ಟಿಗಳಲ್ಲಿ ಬರುವ ಎಲ್ಲಾ ವಿಷಯಗಳ ಮೇಲೆ ಕಾನೂನು ರಚಿಸುವ ಅಧಿಕಾರ ಹೊಂದಿದೆ . ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಲೋಕಸಭೆಯ ಅಧಿಕಾರ ರಾಜ್ಯಪಟ್ಟಿಗೂ ವಿಸ್ತರಿಸುತ್ತದೆ . ಲೋಕ ಸಭೆಯ ಸಮ್ಮತಿ ಇಲ್ಲದೆ ಯಾವುದೇ ಮಸೂದೆ ಕಾನೂನಾಗುವಂತಿಲ್ಲ .
2. ಹಣಕಾಸಿನ ಕಾರ್ಯಗಳು : ಹಣಕಾಸಿನ ಮಸೂದೆಯನ್ನು ಕೇವಲ ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು ` ಇಲ್ಲಿ ಹಣಕಾಸಿನ ಮಸೂದೆಯನ್ನು ಅಂಗೀಕರಿಸಿದ ನಂತರ ರಾಜ್ಯ ಸಭೆಗೆ ಕಳುಹಿಸಲಾಗುತ್ತದೆ . ಈ ಮಸೂದೆಯನ್ನ ರಾಜ್ಯಸಭೆಯು ತಿರಸ್ಕರಿಸುವಂತಿಲ್ಲ ಬದಲಾಗಿ 14 ದಿನಗಳವರೆಗೆ ತಡೆಹಿಡಿಯಬಹುದು . ನಂತರ ರಾಜ್ಯಸಭೆ ಈ ಮಸೂದೆಯನ್ನು ಲೋಕಸಭೆಗೆ ಕಳುಹಿಸದಿದ್ದರೂ ಸಹ ಈ ಮಸೂದೆಯು ಉಭಯ ಸದನಗಳಿಂದ ಅಂಗೀಕೃತವಾಗಿದೆ ಎಂದು ಪರಿಗಣಿಸಿ ನಂತರ ರಾಷ್ಟ್ರಾಧ್ಯಾಕ್ಷರ ಒಪ್ಪಿಗೆಗೆ ಮತ್ತು ಸಹಿಗೆ ಕಳುಹಿಸಲಾಗುತ್ತದೆ . – ಪ್ರತಿ ವರ್ಷ ಮುಂಗಡ ಪತ್ರವನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗುತ್ತದೆ . ಇಂತಹ ಹಣಕಾಸು ಮಸೂದೆಗೆ ಒಪ್ಪಿಗೆ ಸಿಗದಿದ್ದರೆ ಸರ್ಕಾರವೇ ರಾಜಿನಾಮೆ ಸಲ್ಲಿಸಬೇಕಾಗುತ್ತದೆ .
3. ಕಾರ್ಯಾಂಗದ ಮೇಲೆ ನಿಯಂತ್ರಣ : ನಮ್ಮದು ಸಂಸದೀಯ ಸರ್ಕಾರ ವ್ಯವಸ್ಥೆಯಾಗಿರುವುದರಿಂದ ಇಲ್ಲ ಕಾರಾಂಗವಾದ ಮಂತ್ರಿಮಂಡಲ ಲೋಕ ಸಭೆಗೆ ಜವಾಬ್ದಾರಿಯಾಗಿರುತ್ತದೆ . ಕಾರಾಂಗ ಜನತೆಯ ಹಿತಾಸಕ್ತಿಗೆ ಅನುಗುಣವಾಗಿ ನಡೆದು ಕೊಳ್ಳದಿದ್ದರೆ , ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿ ಆಡಳಿತ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಬಹುದು . ಲೋಕ ಸಭೆಯ ಸದಸ್ಯರು ಪ್ರಶ್ನೆಗಳನ್ನು ಆಡಳಿತದ ಬಗ್ಗೆ ಕೇಳುವುದು , ಸರ್ಕಾರದ ಖಂಡನಾ ನಿರ್ಣಯದ ಮೇಲೆ ಚರ್ಚೆ ಹಾಗೂ ವಾರ್ಷಿಕ ಮುಂಗ ಪತ್ರದಲ್ಲಿನ ಬೇಡಿಕೆಗಳ ಬಗ್ಗೆ ಕಡಿತದ ಸೂಚನೆಯನ್ನು ಲೋಕಸಭೆಯಲ್ಲಿ ಮಂಡಿಸುವುದರ ಮೂಲಕ ಸರ್ಕಾರವನ್ನು ನಿಯಂತ್ರಿಸುತ್ತವೆ .
4. ಸಂವಿಧಾನಾತ್ಮಕ ಕಾರ್ಯಗಳು : ಸಂವಿಧಾನದ ವಿಧಗಳನ್ನು ತಿದ್ದುಪಡಿ ಮಾಡುವ ಬದಲಾಯಿಸುವ , ರದ್ದುಗೊಳಿಸುವ ಹೊಸದನ್ನೂ ಸೇರಿಸುವ ಅಧಿಕಾರ ಇದಕ್ಕಾಗಿ ಸಂಸತ್ತಿನಲ್ಲಿ ಮಾತ್ರ ಸಂವಿಧಾನಿಕ ತಿದ್ದುಪಡಿ ಮುಸೂದೆಯನ್ನು ಮಂಡಿಸಬಹುದು . ಇದಕ್ಕೆ ಸಂಬಂಧಿಸಿದಂತೆ ಜಂಟ ಅಧಿವೇಶನಕ್ಕೆ ಅವಕಾಶವಿಲ್ಲ .
5 ಚುನಾವಣ ಕಾರ್ಯಗಳು : ಸಂವಿಧಾನದ ಅತ್ಯುನ್ನತ ಹುದ್ದೆಗಳಾದ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಚುನಾವಣೆಯಲ್ಲಿ ಭಾಗವಹಿಸಿ ಅವರನ್ನು ಆಯ್ಕೆ ಮಾಡುತ್ತಾರೆ . ಹಾಗೆಯೇ ತಮ್ಮ ಸದನದ ಸಭಾಪತಿ 4 ಉಪಸಭಾಪತಿಯವರನ್ನು ಚುನಾವಣೆ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ .
6 ನ್ಯಾಯಾಂಗದ ಕಾರ್ಯಗಳು : ರಾಷ್ಟ್ರಪತಿ , ಸರ್ವೋಚ್ಚನ್ಯಾಯಾಲಯ ಮತ್ತು ಶ್ರೇಷ್ಠ ನ್ಯಾಯಾಲಯದ ನ್ಯಾಯದೀಶರು , ಚುನವಣಾ ಮುಖ್ಯಸ್ಥರು ಮತ್ತು ಇತರ ಸಂವಿಧಾನಿಕ ಮುಖ್ಯಸ್ಥರನ್ನು ಮಹಾಭಿಯೋಗದ ಮೂಲಕ ಸದನದಲ್ಲಿ ಬಹುಮತದ ಆಧಾರದ ಮೇಲೆ ಅಧಿಕಾರದಿಂದ ಪದಚ್ಯುತಿಗೊಳಸಲಾಗುತ್ತದೆ .
7. ಸದನದಲ್ಲಿ ವರದಿ ಕುರಿತು ಚರ್ಚೆ : ಲೋಕಸಭೆಯಲ್ಲಿ ಸಿ.ಎ.ಜಿ , ಯು.ಪಿ.ಎಸ್.ಸಿ. ಚುನಾವಣೆ ಆಯೋಗ ಎಸ್.ಸಿ / ಎಸ್.ಟಿ , ಓ.ಬಿ.ಸಿ. ಆಯೋಗ ಇನ್ನು ಮೊದಲಾದ ಆಯೋಗದ ವರದಿಗಳನ್ನು ಲೋಕಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ / ತಿರಸ್ಕರಿಸುವ ಮರುವರದಿಗೆ ಹಿಂದಿರುಗಿಸುವ ಅಧಿಕಾರ ಇರುತ್ತದೆ .
6 ) ರಾಜ್ಯಸಭೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ವಿವರಿಸಿ .
ರಾಜ್ಯಸಭೆಯು ಲೋಕಸಬೆಗಿಂತ ಕಡಿಮೆ ಮಹತ್ವ ಹೊಂದಿದ ಶಾಸನ ಸಭೆಯಾದರೂ ಅದು ತಮ್ಮದೇ ಆದ ಕೆಳಗಿನ ಅಧಿಕಾರ ಮತ್ತು ಕಾವ್ಯವ್ಯಾಪ್ತಿಯನ್ನ ಹೊಂದಿದೆ .
1. ಶಾಸನೀಯ ಕಾರ್ಯಗಳು : ಸಾಮಾನ್ಯ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಬಹುದು . ಈ ವಿಷಯದಲ್ಲಿ ಲೋಕ ಸಭೆಗೆ ಇರುವಷ್ಟೇ ಅಧಿಕಾರ ರಾಜ್ಯಸಭೆಗಿದೆ . ರಾಜ್ಯಸಭೆಯು ಮಂಡಿಸಿದ ಮಸೂದೆಯನ್ನು ಅಂಗೀಕರಿಸಿ ನಂತರ ಲೋಕಸಭೆಗೆ ಕಳುಹಿಸುತ್ತದೆ . ಎರಡು ಸದನಗಳು ಒಪ್ಪಿದ ನಂತರ ರಾಷ್ಟ್ರಪತಿಯವರ ಒಪ್ಪಿಗೆ ಮತ್ತು ಸಹಿಗೆ ಕಳುಹಿಸಲಾಗುತ್ತದೆ . ಇದೇ ಲೋಕಸಭೆಯಲ್ಲಿ ಅಂಗೀಕರಿಸಿದ ಮಸೂದೆಯನ್ನ ರಾಜ್ಯಸಭೆಗೆ ಕಳುಹಿಸಲಾಗುತ್ತದೆ . ಇಂತಹ ಮಸೂದೆಗಳನ್ನು ತಿದ್ದುಪಡಿ ಮಾಡುವ / ತಿರಸ್ಕರಿಸುವ / ಆರು ತಿಂಗಳವರೆಗೆ ತಡೆಹಿಡಿಯುವ ಅಧಿಕಾರವನ್ನ ರಾಜ್ಯಸಭೆ ಹೊಂದಿದೆ .
2. ಹಣಕಾಸಿನ ಕಾರ್ಯಗಳು : ಹಣಕಾಸಿನ ಮಸೂದೆ ಅಥವಾ ವಾರ್ಷಿಕ ಆಯವ್ಯಯ ಪಟ್ಟಿಯನ್ನ ಮೊದಲು ಲೋಕಸಭೆಯಲ್ಲಿ ಮಂಡಿಸಿ ಚರ್ಚಿಸಬೇಕೆಂಬ ನಿಯಮವಿದೆ . ಅವು ಲೋಕ ಸಭೆಯಲ್ಲಿ ಪಾಸಾದ ನಂತರ ರಾಜ್ಯಸಭೆಯಲ್ಲಿ ಚರ್ಚಿಸಲ್ಪಟ್ಟು ಪಾಸಾಗುತ್ತದೆ . ರಾಜ್ಯಸಭೆಗೆ ಹಣಕಾಸಿನ ಮಸೂದೆಯನ್ನ ತಿರಸ್ಕರಿಸುವ ಅಧಿಕಾರವಿಲ್ಲ ಒಂದು ವೇಳೆ ಈ ಮಸೂದೆಯನ್ನ ಪಾಸು ಮಾಡದೆ ತಿರಸ್ಕರಿಸಿದರೆ 14 ದಿನಗಳ ಅವಕಾಶದ ನಂತರ ಹಣಕಾಸಿನ ಮಸೂದೆಯು ಎರಡೂ ಸದನಗಳಲ್ಲೂ ಪಾಸಾಗಿದೆ ಎಂದು ಪರಿಗಣಿಸಲಾಗುವುದು .
3 ಕಾರ್ಯಾಂಗದ ಅಧಿಕಾರಗಳು : ರಾಜ್ಯಸಭೆಗೆ ಈ ಅಧಿಕಾರ ಅಷ್ಟಾಗ ಇರುವುದಿಲ್ಲ . ಸರ್ಕಾರದ ವಿರುದ್ಧ ಅವಿಶ್ವಾಸ – ನಿರ್ಣಯವನ್ನು ಮಂಡಿಸುವ ಅಧಿಕಾರ ರಾಜ್ಯಸಭೆಗೆ ಇರುವುದಿಲ್ಲ . ಆದರೆ ಸರ್ಕಾರದ ಕಾರ ವೈಕರಿಯನ್ನು ನೀತಿ ನಿಯಮಗಳನ್ನ ಸದನದಲ್ಲಿ ಚರ್ಚಿಸುವ ಮತ್ತು ಟೀಕಿಸುವ ಅಧಿಕಾರವಿದೆ . ರಾಷ್ಟ್ರದ ಹಾಗೂ ರಾಜ್ಯದ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸದನದಲ್ಲಿ ಹಾಕಿ ಸಂಬಂಧಪಟ್ಟ ಸಚಿವರಿಂದ ವಿವರಣೆಯನ್ನು ಪಡೆಯಬಹುದು . ಈ ಸದನದ ಸದಸ್ಯರು ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯಲು ಅವಕಾಶವಿದೆ
4 , ನ್ಯಾಯಿಕ ಅಧಿಕಾರ : ಭಾರತದ ರಾಷ್ಟ್ರಪತಿ , ಉಪರಾಷ್ಟ್ರಪತಿ , ಸರ್ವೋನ್ನತ ನ್ಯಾಯಾಲಯ ಮತ್ತು ಶ್ರೇಷ್ಠ ನ್ಯಾಯಾಲಯದ ನ್ಯಾಯದೀಶರು , ಚುನಾವಣಾ ಆಯುಕ್ತರು ಮುಂತಾದವರಿಗೆ ಸಂಬಂಧಿಸಿದ ‘ ಮಹಾಭಿಯೋಗ ‘ ಪ್ರಕರಣಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ವಿಚಾರಣೆ ನಡೆಸುವ ಅಧಿಕಾರವಿದೆ .
5. ಚುನಾವಣ ಕಾರ್ಯಗಳು : ` ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಚುನಾವಣೆಯಲ್ಲಿ ಭಾಗವಹಿಸುತ್ತಾರೆ . ಹಾಗೆಯೇ ತಮ್ಮ ಸದನದ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸದಸ್ಯರು ಹೊಂದಿರುತ್ತಾರೆ .
6. ವಿಶೇಷ ಅಧಿಕಾರಗಳು :
ಎ ) ಸಂವಿಧಾನದ 249 ನೇ ವಿಧಿ ಅನ್ವಯ ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ರಾಜ್ಯಪಟ್ಟಿಯಲ್ಲಿರುವ ಯಾವುದಾದರು ವಿಷಯದ ಮೇಲೆ ಕಾನೂನು ಮಾಡುವಂತೆ ರಾಜ್ಯಸಭೆ ತನ್ನ 2 / 3 ರಷ್ಟು ಬಹುಮತದಿಂದ ಒಂದು ನಿರ್ಣಯ ಅಂಗೀಕರಿಸಿ , ಶಿಫಾರಸ್ಸು ಮಾಡಬಹುದು .
ಬಿ ) 312 ನೇ ವಿಧಿ ಅನ್ನಯ ಮೇಲಿನ ರೀತಿ ನಿರ್ಣಯ ಅಂಗೀಕರಿಸಿ ಹೊಸ ಅಖಿಲ ಭಾರತ ಸೇವೆಗಳನ್ನು ರಚಿಸುವಂತೆ ಸಂಸತ್ತಿಗೆ ಶಿಫಾರಸ್ಸು ಮಾಡಬಹುದು.
ಸಿ ) ಉಪರಾಷ್ಟ್ರಪತಿಯನ್ನು ಅಧಿಕಾರದಿಂದ ತೆಗೆಯಲು ರಾಜ್ಯಸಭೆ ಮೊದಲು ಕ್ರಮ ಕೈಗೊಳ್ಳಲು ಅಧಿಕಾರ .
ಡಿ ) ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿದ್ದ ಸಂಧರ್ಭದಲ್ಲಿ ಹಣಕಾಸಿನ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಒಪ್ಪನೆಯನ್ನು ಪಡೆಯಬಹುದಾಗಿದೆ .
7 ) ಸಂಸತ್‌ನ ಉಭಯ ಸದನಗಳ ಹಣಕಾಸಿನ ಅಧಿಕಾರಗಳನ್ನು ಚರ್ಚಿಸಿ ,
ಸಂವಿಧಾನದ 109 ನೇ ವಿಧಿಅನ್ವಯ ಹಣಕಾಸಿನ ಮಸೂದೆಯನ್ನ ಕೇವಲ ಲೋಕಸಭೆಯಲ್ಲೇ ಮಂಡಿಸಬೇಕು . ಲೋಕಸಭೆ ಅನುಮೋಧಿಸಿದ ನಂತರ ರಾಜ್ಯಸಭೆಗೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ ಆಗ ರಾಜ್ಯಸಭೆಯು 14 ದಿನಗಳೊಳಗೆ ತಿದ್ದುಪಡಿಯೊಂದಿಗೆ ತಿದ್ದುಪಡಿಯಿಲ್ಲದೆ ಲೋಕಸಭೆಗೆ ಹಿಂತಿರುಗಿಸಬೇಕು . ಲೋಕಸಭೆಯು ರಾಜ್ಯ ಸಭೆಯ ಸೂಚಿಸಿದ ತಿದ್ದುಪಡಿ ಒಪ್ಪಬಹುದು / ತಿರಸ್ಕರಿಸಬಹುದು ನಂತರ ಉಭಯ ಸದನಗಳು ಒಪ್ಪಿದವು ಎಂದು ಘೋಷಿಸಿ ಮಸೂದೆಯನ್ನ ರಾಷ್ಟ್ರಾಧ್ಯಕ್ಷರ ಸಹಿಗೆ ಕಳುಹಿಸಲಾಗುತ್ತದೆ .
ಒಂದು ವೇಳೆ ರಾಜ್ಯ ಸಭೆಯು 14 ದಿನಗಳೊಳಗಾಗಿ ತನ್ನ ಶಿಫಾರಸ್ಸಿನೊಂದಿಗೆ ಹಣಕಾಸು ಮಸೂದೆಯನ್ನು ಲೋಕಸಭೆಗೆ ಹಿಂತಿರುಗಿಸದಿದ್ದರೆ ಅದನ್ನು ಸಂಸತ್ತಿನಿಂದ ಸ್ವೀಕೃತವಾಯಿತೆಂದು ಘೋಷಿಸಿ ರಾಷ್ಟ್ರಾಧ್ಯಕ್ಷರ ಸಹಿಗಾಗಿ ಕಳುಹಿಸಲಾಗುತ್ತದೆ . ಲೋಕಸಭೆಯ ಅನುಮೋದನೆ ಇಲ್ಲದೆ ಸರ್ಕಾರವು ಹಣವನ್ನು ತೆರಿಗೆ ಮುಂತಾದ ಮೂಲಗಳಿಂದ ಸಂಗ್ರಹಿಸುವಂತೆಯೂ ಇಲ್ಲ , ಖರ್ಚುಮಾಡುವಂತೆಯೂ ಇಲ್ಲ . ಕಾರಾಂಗವು ಮಂಡಿಸುವ ಆಯವ್ಯಯ ಪಟ್ಟಿಯನ್ನು ಅನುಮೋದಿಸುವ ತಿರಸ್ಕರಿಸುವ ಅಧಿಕಾರವನ್ನೂ ಲೋಕಸಭೆ ಹೊಂದಿರುತ್ತದೆ .
ಒಂದು ವೇಳೆ ಲೋಕಸಭೆ ಆಯ – ವ್ಯಯ ಪಟ್ಟಿಯನ್ನು ತಿರಸ್ಕರಿದರೆ ಆಡಳಿತ ನಡೆಸಲು ಸರ್ಕಾರಕ್ಕೆ ಹಣ ಲೋಕ ಸಭೆಯು ರಾಷ್ಟ್ರದ ಹಣಕಾಸಿನ ಮೇಲೆ ಸಂಪೂರ್ಣ ನಿಯಂತ್ರಣಾಧಿಕಾರವನ್ನು ಹೊಂದಿದೆ ಹಾಗಾಗಿ ಲೋಕಸಭೆಯನ್ನು ರಾಷ್ಟ್ರದ ಶುಜಾನೆಯ ವ್ಯವಸ್ಥಾಪಕ ” ಎಂದು ಹೀಗೆ ಕರೆಯಲಾಗಿದೆ .
8 ) ವಿಧಾನ ಪರಿಷತ್‌ನ ರಚನೆಯ ಕುರಿತು ಸಂಕ್ಷಿಪ್ರವಾಗಿ ಟಿಪ್ಪಣಿ ಬರೆಯಿರಿ .
ಸಂವಿಧಾನದ 4 ನೇ ಭಾಗದ 3 ನೇ ಅಧ್ಯಾಯದಲ್ಲಿನ 168 ರಿಂದ 212 ನೇ ವಿಧಿಗಳಲ್ಲಿ ರಾಜ್ಯ ವಿಧಾನ ಮಂಡಲಗಳ ರಚನೆ , ಕಾರ್ಯಕಲಾಪ , ಅಧಿಕಾರಗಳನ್ನು ವಿವರಿಸಲಾಗಿದೆ . ರಾಜ್ಯಶಾಸಕಾಂಗ ಎಂದರೇ ರಾಜ್ಯಪಾಲರು , ವಿಧಾನಸಭೆ ಮತ್ತು ವಿಧಾನ ಪರಿಷತ್ ಒಳಗೊಂಡಿರುತ್ತದೆ . ಸಂವಿಧಾನದ 168 ನೇ ವಿಧಿಯನ್ವಯ ಪ್ರತಿಯೊಂದು ರಾಜ್ಯಕ್ಕೆ ವಿಧಾನಸಭೆ ಇರಬೇಕೆಂದೂ ಹಾಗೂ 169 ವಿಧಿಯ ಪ್ರಕಾರ ವಿಧಾನಸಭೆಯ ಒಪ್ಪಿಗೆ ಮೇರೆಗೆ ವಿಧಾನಪರಿಷತ್ ಅನ್ನು ಅಸ್ತಿತ್ವಕ್ಕೆ ತರುವ ಹಾಗೂ ರದ್ದುಗೊಳಿಸುವ ಅಧಿಕಾರ ಸಂಸತ್ತಿಗೆ ಇದೆ . ವಿಧಾನ ಪರಿಷತ್ ಅಸ್ತಿತ್ವದಲ್ಲಿರುವ ರಾಜ್ಯಗಳೆಂದರೆ ಆಂಧ್ರಪ್ರದೇಶ , ಬಿಹಾರ , ಮಹಾರಾಷ್ಟ್ರ , ಕರ್ನಾಟಕ , ಉತ್ತರಪ್ರದೇಶ , ಜಮ್ಮು ಮತ್ತು ಕಾಶ್ಮೀರ ಆರು ರಾಜ್ಯಗಳಲ್ಲಿ ಮೇಲ್ಮನೆ ಎಂದು ಹಾಗೂ ವಿಧಾನಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ . ಸಂವಿಧಾನದ 171 ನೇ ವಿಧಿಯು ವಿಧಾನ ಪರಿಷತ್ತಿನ ರಚನೆ ಬಗ್ಗೆ ವಿವರಿಸಿದೆ . ಇದರ ಪ್ರಕಾರ ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆಯು ವಿಧಾನಸಭೆಯ ಸದಸ್ಯತ್ವಕ್ಕಿಂತ ಹೆಚ್ಚಾಗಿರಬಾರದು ಮತ್ತು 40 ಸದಸ್ಯರಿಗಿಂತ ಕಡಿಮೆ ಇರಬಾರದು ಎಂದು ನಿಗದಿಪಡಿಸಿದೆ . ಒಂದು ರಾಜ್ಯದ ವಿಧಾನಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯಲ್ಲಿ
1 ) 1 / 3 ರಷ್ಟು ಅಂದರೆ 25 ಮಂದಿ ಸದಸ್ಯರು ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗುತ್ತಾರೆ .
2 ) 112 ರಷ್ಟು ಅಂದರೆ 7 ಮಂದಿ ಸದಸ್ಯರು ರಾಜ್ಯದಲ್ಲಿ ನೆಲೆಸಿರುವ ನೊಂದಾಯಿತ ಪದವೀದರರಿಂದ ಚುನಾಯಿತರಾಗುತ್ತಾರೆ .
3 ) 1/12 ರಷ್ಟು ಅಂದರೆ 7 ಮಂದಿ ಸದಸ್ಯರು ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗುತ್ತಾರೆ .
4 ) ಉಳಿದ 11 ಮಂದಿ ಅಂದರೆ 1 / 6 ರಷ್ಟು ಸದಸ್ಯರನ್ನು ರಾಜ್ಯಪಾಲರು 17 ( 5 ) ನೇ ವಿಧಿ ಅನ್ವಯ ಸಾಹಿತ್ಯ ವಿಜ್ಞಾನ , ಕಲೆ , ಸಹಕಾರ ಚಳವಳಿ ಮತ್ತು ಸಮಾಜ ಸೇವೆ ಇವುಗಳಲ್ಲಿ ವಿಶೇಷ ಜ್ಞಾನವನ್ನು ಅಥವಾ ವ್ಯಾವಹಾರಿಕ ಅನುಭವವನ್ನು ಹೊಂದಿರುವವರನ್ನು ಗುರುತಿಸಿ ನಾಮಕರಣ ಮಾಡುತ್ತಾರೆ . ವಿಧಾನ ಪರಿಷತ್ ಶಾಶ್ವತ ಸದನವಾಗಿದ್ದು ಅದನ್ನು ವಿಸರ್ಜಿಸುವಂತಿಲ್ಲ . ಆದರೆ ಅದರ ಸದಸ್ಯರಲ್ಲಿ 1/3 ಭಾಗದಷ್ಟು ಸದಸ್ಯರು ಪ್ರತಿ 2 ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ .
ಅರ್ಹತೆಗಳು
ವಿಧಾನ ಪರಿಷತ್‌ಗೆ ಆಯ್ಕೆಯಾಗಲು
1 . ಭಾರತದ ಪ್ರಜೆಯಾಗಿರಬೇಕು .
2 . ನಿರ್ದಿಷ್ಟ ವಯೋಮಿತಿ 30 ವರ್ಷ ತುಂಬಿರಬೇಕು .
3. ಲಾಭದಾಯಕ ಸರ್ಕಾರಿ ಹುದ್ದೆಯಲ್ಲಿರಬಾರದು .
4. ಬುದ್ದಿ ಮಾಂಧ್ಯನಾಗಿರಬಾರದು .
5. ಅಪರಾಧಿಯಾಗಿರಬಾರದು .
6. ಸಂಸತ್ತು ನಿಗದಿ ಪಡಿಸಿರುವ ಇತರ ಎಲ್ಲಾ ಅರ್ಹತೆಗಳನ್ನು ಪಡೆದಿರಬೇಕು .
ಸಭಾಪತಿ : ವಿಧಾನ ಪರಿಷತ್ತಿನ ಸದಸ್ಯರು ಸದನದ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಲು ತಮ್ಮಲ್ಲಿಯೇ ಒಬ್ಬರನ್ನು ಸಭಾಪತಿಯನ್ನಾಗಿ ಆಯ್ಕೆ ನಿಯಮಾನುಸಾರ ಮಾಡುತ್ತಾರೆ . ಇವರ ಗೈರು ಹಾಜರಿಯಲ್ಲಿ ಉಪಸಭಾಪತಿ ಸದನದ ಕಾರ್ಯಕಲಾಪವನ್ನು ನಡೆಸುತ್ತಾರೆ .
9 ) ವಿಧಾನ ಸಭೆಯ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ .
ವಿಧಾನ ಸಭೆಯ ಅಧಿಕಾರ ಮತ್ತು ಕಾರ್ಯಗಳು ಲೋಕಸಭೆಯ ಅಧಿಕಾರ ಮತ್ತು ಕಾರಗಳನ್ನ ಹೋಲುತ್ತವೆ . ಆ ಕಾರ್ಯಗಳೆಂದರೆ ,
1. ಶಾಸನೀಯ ಅಧಿಕಾರಗಳು : ವಿಧಾನ ಸಭೆಯು ರಾಜ್ಯಪಟ್ಟಿಗೆ ಸಮವರ್ತ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರಹೊಂದಿದೆ . ಸಮವರ್ತಿಪಟ್ಟಿಯಲ್ಲಿ ಬರುವ ಒಂದೇ ವಿಷಯದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಕಾನೂನು ರಚಿಸಿದಾಗ ಅಂತಿಮವಾಗಿ ಕೇಂದ್ರ ಸರ್ಕಾರ ಮಾಡಿದ ಕಾನೂನು ನಿಲ್ಲುತ್ತದೆ .
2. ಹಣಕಾಸಿನ ಅಧಿಕಾರಗಳು : ಹಣಕಾಸು ಮಸೂದೆ ಮತ್ತು ಆಯವ್ಯಯ ಪಟ್ಟಿಯನ್ನು ಮೊದಲು ವಿಧಾನಸಭೆಯಲ್ಲೇ ಮಂಡಿಸಬೇಕು . ನಂತರ ಅದನ್ನು ಚರ್ಚಿಸಿ ಅಂಗೀಕರಿಸಿ ವಿಧಾನಪರಿಷತ್‌ಗೆ ಕಳುಹಿಸಿದಾಗ ಅದು ತನ್ನ ಸಲಹೆಗಳೊಂದಿಗೆ ಕಳುಹಿಸಬೇಕು . ಇಲ್ಲದಿದ್ದಲ್ಲಿ 2 ಸದನಗಳಿಂದ ಅನುಮೋದನೆಗೊಂಡಿದೆ ಎಂದು 14 ದಿನಗಳೊಳಗೆ ವಿಧಾನ ಸಭಗೆ ವಾಪಸ್ಸು ಪರಿಗಣಿಸಿ ರಾಜ್ಯಪಾಲರ ಸಹಿಗೆ ಕಳುಹಿಸಲಾಗುವುದು . ರಾಜ್ಯಸರ್ಕಾರವು ಹೊಸತೆರಿಗೆ ವಿಧಿಸಲು ಹಣ ಖರ್ಚುಮಾಡಲು ವಿಧಾನ ಸಭೆಯ ಅನುಮೋಧನೆ ಅಗತ್ಯ ವಾರ್ಷಿಕ ಆಯವ್ಯಯ ಪಟ್ಟಿಗೆ ವಿಧಾನ ಸಭೆ ಅಂಗೀಕಾರ ನೀಡದಿದ್ದರೆ ರಾಜ್ಯಸರ್ಕಾರ ಅಧಿಕಾರ ತ್ಯಜಿಸಬೇಕು .
3. ಕಾರಾಂಗದ ಮೇಲೆ ಥಿಯಂತ್ರಣ : ವಿಧಾನ ಸಭೆಯ ಬೆಂಬಲ ಕಾರಾಂಗಕ್ಕೆ ಇರುವವರೆಗೆ ಸರ್ಕಾರ ಅಸ್ತಿತ್ವದಲ್ಲಿರುತ್ತದೆ .ಕಾರ್ಯಾಂಗವು ಸಮರ್ಪಕ ಆಡಳಿತ ನೀಡದಿದ್ದಾಗ , ರಾಜ್ಯದ ಜನತೆಯ ಹಿತಾಸಕ್ತಿಗೆ ವಿರುದ್ಧವಾಗಿದ್ದಾಗ , ವಿಧಾನ ಸಭೆಯ ಅವಿಶ್ವಾಸ ನಿರ್ಣಯವನ್ನು ಮಂಡಿಸಿ ಕಾರಾಂಗವನ್ನು ಅಧಿಕಾರದಿಂದ ಕೆಳಗಿಳಿಸುತ್ತದೆ . ಅಧಿವೇಶನ ಸಮಯದಲ್ಲಿ ವಿಧಾನ ಸಭಾ ಸದಸ್ಯರು , ಮಂತ್ರಗಳಿಗೆ ಪ್ರಶ್ನೆಗಳನ್ನೂ ಕೇಳುವ ಮೂಲಕ , ಗಮನ ಸೆಳೆಯುವ ಸೂಚನೆಗಳ ಮೂಲಕ ನಿಲುವಳಿ ಸೂಚನೆಗಳ ಮೂಲಕ ನಿಯಂತ್ರಣ ಹೊಂದುವರು .
4. ಚುನಾವಣಾ ಕಾರ್ಯ : ವಿಧಾನ ಸಭೆಯ ಚುನಾಯಿತ ಸದಸ್ಯರು ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸುತ್ತಾರೆ ವಿಧಾನ ಸಭೆಯ ಸದಸ್ಯರು ತಮ್ಮ ಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷರನ್ನು ತಾವೇ ಆಯ್ಕೆಮಾಡಿಕೊಳ್ಳುತ್ತಾರೆ . ಅಲ್ಲದೆ ವಿಧಾನ ಪರಿಷತ್‌ನ 1 / 3 ರಷ್ಟು ಸದಸ್ಯರನ್ನು ವಿಧಾನ ಸಭಾ ಸದಸ್ಯರೇ ಚುನಾಯಿಸುತ್ತಾರೆ .
5. ಸಂವಿಧಾನ ತಿದ್ದುಪಡಿ ಕಾರ್ಯ : ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ 2/3 ರಷ್ಟು ಬಹುಮತದೊಂದಿಗೆ ಸಂವಿಧಾನಕ್ಕೆ ತಿದ್ದುಪಡಿ ತರಬಹುದು . ಆದರೆ ಈ ತಿದ್ದುಪಡಿಗೆ 1 / 2 ಕ್ಕಿಂತ ಕಡಿಮೆ ಇಲ್ಲದಷ್ಟು ರಾಜ್ಯಶಾಸಕಾಂಗಗಳ ಅನುಮೋದನೆ ಅಗತ್ಯವಾಗಿರುತ್ತದೆ .
6 ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ : ವಿಧಾನ ಸಭೆಯು ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ . ಈ ಪ್ರತಿನಿಧಿಗಳು ನಮ್ಮ ಕ್ಷೇತ್ರದ ಜನರ ಕುಂದುಕೊರತೆಗಳನ್ನು ಚರ್ಚಿಸಿ ಅವುಗಳನ್ನು ನಿವಾರಿಸುವಂತೆ ಸರ್ಕಾರವನ್ನು ಅಗ್ರಹಿಸುತ್ತಾರೆ .
10 ) ವಿಧಾನ ಪರಿಷತ್‌ನ ಅಧಿಕಾರ ಮತ್ತು ಕರ್ತವ್ಯಗಳನ್ನು ವಿವರಿಸಿ
. ವಿಧಾನ ಪರಿಷತ್ ಅಧಿಕಾರ ಮತ್ತು ಕರ್ತವ್ಯಗಳು ಕೆಳಗಿನಂತಿವೆ .
1. ಶಾಸನೀಯ ಕಾರ್ಯಗಳು : ಹಣಕಾಸಿನ ಮಸೂದೆಯನ್ನು ಹೊರತುಪಡಿಸಿ ಇತರೆ ಮಸೂದೆಯನ್ನು ವಿಧಾನ ಪರಿಷತ್‌ನಲ್ಲಿ ಮಂಡಿಸಬಹುದು . ವಿಧಾನ ಸಭೆಯು ಅಂಗೀಕರಿಸಿದ ಮಸೂದೆಯು ವಿಧಾನ ಪರಿಷತ್‌ಗೆ ಕಳುಹಿಸಿದಾಗ ವಿಧಾನ ಪರಿಷತ್ ಮಸೂದೆಯನ್ನು ಒಪ್ಪಿಕೊಳ್ಳಬಹುದು / ತಿರಸ್ಕರಿಬಹುದು ಅದಕ್ಕೆ ಮತ್ತೊಮ್ಮೆ ಅದೇ ಮಸೂದೆಯನ್ನು ತಿದ್ದುಪಡಿಯೊಂದಿಗೆ ವಿಧಾನ ಪರಿಷತ್‌ಗೆ ಕಳುಹಿಸಿದಾಗ ಕೇವಲ ಒಂದು ತಿಂಗಳು ಮಾತ್ರ ಉಳಿಸಿಕೊಳ್ಳಬಹುದು . ಇಲ್ಲವಾದರೆ ದ್ವಿಸದನಗಳಿಂದ ಅಂಗೀಕಾರವಾಗಿದೆ ಎಂದು ತಿಳಿದು ರಾಜ್ಯಪಾಲರ ಸಹಿಗೆ ಕಳುಹಿಸಲಾಗುತ್ತದೆ .
2. ಹಾಣಕಾಸಿನ ಅಧಿಕಾರಗಳು : ಹಣಕಾಸಿನ ಮಸೂದೆಯನ್ನು ವಿಧಾನಪರಿಷತ್‌ನಲ್ಲಿ ಮಂಡಿಸದೆ ವಿಧಾನ ಸಭೆಯಲ್ಲಿ ಮಾತ್ರ ಮಂಡಿಸಬಹುದಾಗಿದೆ . ವಿಧಾನ ಸಭೆಯಿಂದ ಕಳುಹಿಸಿದ ಹಣಕಾಸಿನ ಮಸೂದೆಯನ್ನು ಕೇವಲ 14 ದಿವಸಗಳು ಮಾತ್ರ ಉಳಿಸಿಕೊಳ್ಳಬಹುದು . ನಂತರ ವಿಧಾನ ಸಭೆಗೆ ಕಳುಹಿಸದಿದ್ದರೂ ಸಹಾ ಅದು ಒಪ್ಪಿಗೆ ನೀಡಿದೆ ಎಂದು ಭಾವಿಸಿ ರಾಜ್ಯಪಾಲರ ಸಹಿಗೆ ಕಳಯಹಿಸಲಾಗುತ್ತದೆ .
3. ಆಡಳಿತ ಕಾರ್ಯಗಳು : ವಿಧಾನ ಪರಿಷತ್‌ಗೆ ಕಾರಾಂಗವಾದ ಸಚಿವ ಸಂಪುಟವನ್ನು ನಿಯಂತ್ರಿಸುವ ಅಧಿಕಾರವಿರುವುದಿಲ್ಲ . ಕೇವಲ ವಿಧಾನ ಸಭೆಗೆ ಮಾತ್ರ ಈ ಅಧಿಕಾರವಿರುತ್ತದೆ . ವಿಧಾನ ಮೂಲಕ ಮಾಹಿತಿಯನ್ನು ಪಡೆಯಬಹುದು ಅಷ್ಟೇ ಅಲ್ಲದೆ ಸಮರ್ಪಕ ಉತ್ತರವನ್ನು ಪರಿಷತ್‌ನ ಸದಸ್ಯರು ಮಂತ್ರಿಗಳಿಂದ ತನ್ನ ಖಾತೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳ ನೀಡುವಲ್ಲಿ ವಿಫಲವಾದ ಮಂತ್ರಿಗಳನ್ನು ರಾಜಿನಾಮೆ ನೀಡುವಂತೆ ಒತ್ತಾಯಿಸಬಹುದು . ಹಾಗೆಯೇ ಆಯವ್ಯಯ ಪಟ್ಟಿಯಲ್ಲಿನ ಚರ್ಚೆ ಇಲಾಖಾ ವರದಿಗಳ ಮೇಲಿನ ಚರ್ಚೆ ಹಾಗೂ ಖಂಡನಾ ನಿರ್ಣಯಗಳ ಮೇಲಿನ ಚರ್ಚೆಗಳ ಮೂಲಕ ಮಂತ್ರಿ ಮಂಡಲವನ್ನು ನಿಯಂತ್ರಿಸುತ್ತಾರೆ . ಸರ್ಕಾರದ ನೀತಿ ಹಾಗೂ ಕಾಠ್ಯಕ್ರಮಗಳನ್ನು ತೀವ್ರವಾಗಿ ಟೀಕಿಸುವುದರ ಮೂಲಕವೂ ಮಂತ್ರಿ ಮಂಡಲವನ್ನು ನಿಯಂತ್ರಿಸುತ್ತದೆ .
11 ) ಲೋಕಸಭಾ ಸ್ಪೀಕರ್ ರವರ ಅಧಿಕಾರ ಮತ್ತು ಕಾರ್ಯಗಳನ್ನು ಚರ್ಚಿಸಿ
1 ಲೋಕಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರ ಕಾರ್ಯ ಕಲಾಪಗಳನ್ನು ನಡೆಸಿಕೊಂಡು ಹೋಗುವುದು .
2 . ಸದನದಲ್ಲಿ ನಿರ್ಧಿಷ್ಟ ಹಾಜರಾತಿ ಇಲ್ಲದಿದ್ದಾಗ ಸಭೆಯನ್ನು ಮುಂದೂಡುವುದು .
3. ಲೋಕಸಭೆಯಲ್ಲಿ ಸದಸ್ಯರ ಹಕ್ಕುಭಾದ್ಯತೆಗಳನ್ನು ರಕ್ಷಿಸಿ ಅವರಿಗೆ ನ್ಯಾಯ ದೊರಕಿಸಿಕೊಡುವುದು .
4. ಆರ್ಥಿಕ ಮಸೂದೆ ಯಾವುದೆಂಬುದನ್ನು ನಿರ್ಧರಿಸುವುದು .
5. ಸದನದ ಸದಸ್ಯನ್ನು ಅಕಾಲಿಕ ಮರಣಕ್ಕೆ ತುತ್ತಾದರೆ / ರಾಜೀನಾಮೆ ಸಲ್ಲಿಸಿದರೆ , ಅಂತಹ ಸ್ಥಾನಗಳನ್ನು ಖಾಲಿ ಇದೆ ಎಂದು ಘೋಷಿಸುವುದು .
6. ಜಂಟಿ ಅಧಿವೇಶನದ ಅಧ್ಯಕ್ಷತೆವಹಿಸುವುದು .
7 . ನಿರ್ಣಾಯಕ ಮತ ಚಲಾಯಿಸುವುದು .
8. ಅಧಿವೇಶನದಲ್ಲಿ ಸದಸ್ಯರು ಮಾತನಾಡಬೇಕಾದ ಕ್ರಮಾಂಕವನ್ನು ನಿರ್ಧರಿಸುವುದು .
12 ) ರಾಜ್ಯಸಭೆಯ ಪದ ನಿಮಿತ್ತ ಅಧ್ಯಕ್ಷರ ಪಾತ್ರವನ್ನು ಚರ್ಚಿಸಿ .
ಭಾರತದ ಉಪರಾಷ್ಟ್ರಪತಿಯವರು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ . ಇವರು ಪ್ರಧಾನ ಸ್ಥಾನಮಾನ ಹೊಂದಿದ್ದಾರೆ . ಇವರ ಸ್ಥಾನ ಗೌರರಯುತವಾಗಿದ್ದು ಅದಿವೇಶನ ಕರೆಯುವ ಮತ್ತು ಮುಂದುಡೂವ ಅಧಿಕಾರವನ್ನು ಹೊಂದಿದ್ದಾರೆ . ಸದನದ ಘನತೆಯನ್ನು ಸದಸ್ಯರ ಹಕ್ಕು ಬಾಧ್ಯತೆಗಳನ್ನು ಕಾಪಾಡುವ ಜವಾಬ್ದಾರಿಯುತ ಅಧಿಕಾರವಿರುತ್ತದೆ . ಇವರ ಅಧ್ಯಕ್ಷತೆಯಲ್ಲೇ ರಾಜ್ಯಸಭೆಯ ಕಾವ್ಯಕಲಾಪಗಳು ನಡೆಯುತ್ತವೆ . ಸಭೆಯಲ್ಲಿ ಯಾರು ಮೊದಲು ಮಾತನಾಡಬೇಕು ಎಂಬುದನ್ನು ಇವರೇ ನಿರ್ಧಾರ ಮಾಡುತ್ತಾರೆ . ಸಭೆಯ ಶಿಸ್ತನ್ನು ಕಾಪಾಡುವ ಜವಾಬ್ದಾರಿ ಇವರದ್ದು . ಸದನದಲ್ಲಿ ಇವರು ನೀಡಿದ ತೀರ್ಪು ಅಂತಿಮವಾಗಿರುತ್ತರದೆ . ಇದನ್ನು ಯಾರು ಪ್ರಶ್ನಿಸುವಂತಿಲ್ಲ . ಯಾವುದೇ ಒಂದು ನಿರ್ಧಿಷ್ಠ ಮಸೂದೆಯ ಪರ ಮತ್ತು ವಿರೋಧವಾಗಿ ಸಮಾನ ಮತಗಳು ಬಂದಾಗ ತಮ್ಮ ನಿರ್ಣಾಯಕ ಮತವನ್ನು ಇವರು ಚಲಾಯಿಸುತ್ತಾರೆ .
13 ) ಕಾನೂನು ರಚನಾ ವಿಧಾನದ ಮೂರು ಹಂತಗಳಾವುವು ?
ಶಾಸಕಾಂಗದ ಪ್ರಧಾನಕಾರ ಕಾನೂನು ರಚನೆ , ಪ್ರತಿಯೊಂದು ಮಸೂದೆಯೂ ಈ ಕೆಳಕಂಡ ಹಂತಗಳನ್ನ ಕ್ರಮಿಸಿ ಕಾನೂನುಗಳಾಗುತ್ತವೆ .
1. ಪ್ರಥಮ ವಾಚನ : ಸಂಬಂಧ ಪಟ್ಟ ಮಂತ್ರಿ ಮಸೂದೆಯ ಶಿರೋನಾಮೆ , ಶೀರ್ಷಿಕೆಯನ್ನು ಸ್ಪಷ್ಟವಾಗಿ ಓದುವುದರ ಮೂಲಕ ಅದರ ಉದ್ದೇಶ , ಕಾರಣ ಮತ್ತು ವಿಚಾರಗಳನ್ನು ಸಭೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಾಚನಮಾಡುವುದು .
2. ದ್ವಿತೀಯ ವಾಚನ : ನಿಗದಿತ ದಿನಾಂಕದಂದು ಮಸೂದೆಯ ಬಗ್ಗೆ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ . ಮಸೂದೆಯ ಸಾಧಕ ಬಾಧಕಗಳನ್ನು ಸಂಪೂರ್ಣವಾಗಿ ಚರ್ಚಿಸಲು ಸಾಧ್ಯವಾಗದೇ ಇದ್ದಾಗ , ಮಸೂದೆಯನ್ನು ಸಮಿತಿಯ ಮಟ್ಟಕ್ಕೆ ಕಳುಹಿಸಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ . ಅಥವಾ ಜಂಟಿ ಸಮಿತಿಗಳಿಗೆ ಕಳುಹಿಸಿಕೊಡಬಹುದು . ನಂತರ ಸಭೆಯು ನಿರ್ಣಯದಂತೆ ಸಾರ್ವಜನಿಕರ ಗಮನಕ್ಕೆ ತರಲು ಅವರ ಅಭಿಪ್ರಾಯ ಸಂಗ್ರಹಿಸಲು ಸದಸ್ಯರಿಗೆ ಒಂದೊಂದು ಪ್ರತಿಯನ್ನ ಮುದ್ರಿಸಿ ನೀಡಲಾಗುತ್ತದೆ .
3. ತೃತೀಯ ಹಂತ : ಮಸೂದೆಯನ್ನು ಸದನದಲ್ಲಿ ಮಂಡಿಸಲಾಗುತ್ತದೆ . ವರದಿಯ ಹಂತ ಮುಗಿದ ಮೇಲೆ ಸಭೆಯು ಮಸೂದೆಯನ್ನು ಕುರಿತು ಹೆಚ್ಚಿನ ಚರ್ಚೆ ಮಾಡದಿದ್ದರೂ ಸಹಾ ರಾಜ್ಯಭಾರ ಕೆಲವು ಅಗತ್ಯ ಮಾರ್ಪಾಡು ಮಾಡಲು ಅವಕಾಶವಿದೆ . ಒಂದು ಸದನದಲ್ಲಿ ಹಾಜರಿದ್ದ ಸದಸ್ಯರು ಮಸೂದೆಗೆ ಬಹುಮತ ನೀಡುವ ಮೂಲಕ ಅಂಗೀಕರಿಸಿ ಮತ್ತೊಂದು ಸದನಕ್ಕೆ ಕಳುಹಿಸಲಾಗುತ್ತದೆ .
14 ) ಕಾನೂನುಗಳ ಅನುಮೋದನೆಯಲ್ಲಿ ರಾಷ್ಟ್ರಪತಿಗಳ ಅಧಿಕಾರದ ಬಗ್ಗೆ ಸಂಕ್ಷಿಪ್ತವಾಗಿ ಬರೆಯಿರಿ .
ಸಂಸತ್ತಿನಲ್ಲಿ ಅಂಗೀಕಾರವಾದ ಮಸೂದೆಗಳು ಜಾರಿಗೆ ಬರಲು ರಾಷ್ಟ್ರಾಧ್ಯಕ್ಷರ ಒಪ್ಪಿಗೆ ಬೇಕು . ತಮಗೆ ಸರಿಯಾಗಿಲ್ಲ ಎಂದು ಮನವರಿಕೆಯಾದರೆ ಅಂಥ ಮಸೂದೆಗೆ ತಮ್ಮ ಅನುಮತಿಯನ್ನು ನೀಡದೆ ಇರಬಹುದು / ಸಂಸತ್ತಿನ ಪುನರ್ ಪರಿಶೀಲನೆಗೆ ವಾಪಸ್ಸು ಕಳುಹಿಸಬಹುದು ಇದನ್ನೆ ‘ ಸಸ್ಪೆನ್ಸಿವ್ ವೀಟೋ ‘ ಎನ್ನುವರು .
ಆಗ ಸಂಸತ್ತು ರಾಷ್ಟ್ರಪತಿಯ ಸಲಹೆಯನ್ನು ಅಳವಡಿಸಬಹುದು / ಬಿಡಬಹುದು ಅದೇ ಮಸೂದೆಯನ್ನು ಸಂಸತ್ತು ಮತ್ತೆ ಅಂಗೀಕರಿಸಿ , ರಾಷ್ಟ್ರಪತಿಯ ಸಹಿಗೆ ಕಳುಹಿಸಿದಾಗ ಅವರು ತಮ್ಮ ಒಪ್ಪಿಗೆಯನ್ನು ಕೊಡಲೇಬೇಕು . ಸಂಸತ್ತು ಆತುರದಿಂದ ಅಂಗೀಕರಿಸಿದ ಮಸೂದೆಗೆ ಬ್ರೇಕ್ ಹಾಕಲು ಇವರಿಗೆ ಅಧಿಕಾರವಿದೆ . ಸಂಸತ್ತು ಅಂಗೀಕರಿಸಿದ ಮಸೂದೆಗೆ ರಾಷ್ಟ್ರಪತಿ ತಮ್ಮ ಒಪ್ಪಿಗೆ ನೀಡಲು ಕಾಲಮಿತಿ ಇಲ್ಲ . ಆದ್ದರಿಂದ ಮಸೂದೆ ಬಗ್ಗೆ ಇವರು ಗಮನಕೊಡದೆ ತಮ್ಮಲೇ ಇಟ್ಟುಕೊಳ್ಳುವುದನ್ನು ಪಾಕೆಟ್ ವೀಟೊ ಎನ್ನುವರು . ಇಷ್ಟೇ ಅಲ್ಲದೆ ರಾಜ್ಯಗಳ ರಾಜ್ಯಪಾಲರು ಕಾಯ್ದಿರಿಸಿ ರಾಷ್ಟ್ರಪತಿಯ ಒಪ್ಪಿಗೆಗೆ ಕಳುಹಿಸಿದ ರಾಜ್ಯಮಸೂದೆಗಳಿಗೆ ರಾಷ್ಟ್ರಪತಿ ತಮ್ಮ ಒಪ್ಪಿಗೆ ಕೊಡಬಹುದು ಅಥವಾ ತಿರಸ್ಕರಿಸಬಹುದು .
1st Puc Political Science 6th Chapter Notes in Kannada
IV . ಹತ್ತು ಅಂಕದ ಪ್ರಶ್ನೆಗಳು :
1 ) ವಿಧಾನ ಸಭೆಯ ರಚನೆ , ಅಧಿಕಾರ ಮತ್ತು ಕರ್ತವ್ಯಗಳನ್ನು ಬರೆಯಿರಿ .
ವಿಧಾನ ಸಭೆಯು ರಾಜ್ಯಶಾಸಕಾಂಗದ ಕೆಳಮನೆಯಾಗಿದೆ . ಇದು ಪ್ರಜೆಗಳಿಂದ ನೇರವಾಗಿ ಚುನಾಯಿತರಾದ ಪ್ರತಿನಿಧಿಗಳನ್ನು ಒಳಗೊಂಡಿರುವುದರಿಂದ ಈ ಸದನವನ್ನು ಜನತಾ ಸದನ ಎನ್ನುವರು .
ಈ ವಿಧಾನ ಸಭೆಯ ಸದಸ್ಯರ ಸಂಖ್ಯೆಯನ್ನ ರಾಜ್ಯದ ಜನಸಂಖ್ಯೆಗನುಗುಣವಾಗಿ ನಿಗಧಿಪಡಿಸಲಾಗುತ್ತದೆ . ಸಂವಿಧಾನದ 170 ( 1 ) ನೇ ವಿಧಿ ಅನ್ವಯ 500 ಕ್ಕಿಂತ ಹೆಚ್ಚಿನ ಸದಸ್ಯರನ್ನು ಹಾಗೂ 60 ಕ್ಕಿಂತ ಕಡಿಮೆ ಸದಸ್ಯರನ್ನ ಹೊಂದಿರುವಂತಿಲ್ಲ . ಪ್ರಜೆಗಳು ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ನಿಯತಕಾಲಿಕ ಚುನಾವಣೆಗಳಲ್ಲಿ ವಿಧಾನ ಸಭೆಯ ಸದಸ್ಯರನ್ನು ಮೀಸಲಾತಿ ನಿಯಮಗಳಿಗನುಗುಣವಾಗಿ ಚುನಾಯಿಸುತ್ತಾರೆ . ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸರಿಯಾದ ಪ್ರಾತಿನಿಧ್ಯ ಸಿಗದಿದ್ದರೆ , ರಾಜ್ಯಪಾಲರು ಒಬ್ಬರನ್ನ ನಾಮಕರಣ ಮಾಡುತ್ತಾರೆ . ವಿಧಾನ ಸಭಾ ಸದಸ್ಯರು ತಮ್ಮಲ್ಲಿಯೇ ಒಬ್ಬರನ್ನ ಅಧ್ಯಕ್ಷರನ್ನಾಗಿ ಮತ್ತು ಮತ್ತೊಬ್ಬರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ
2 ) ವಿಧಾನ ಪರಿಷತ್‌ನ ರಚನೆ , ಅಧಿಕಾರ & ಕರ್ತವ್ಯಗಳನ್ನ ಬರೆಯಿರಿ .
ವಿಧಾನ ಪರಿಷತ್ ರಾಜ್ಯಶಾಸಕಾಂಗದ ಮೇಲ್ಮನೆಯಾಗಿದ್ದು ಇದು ಎಲ್ಲಾ ರಾಜ್ಯಗಳಲ್ಲೂ ಅಸ್ತಿತ್ವದಲ್ಲಿರದೆ ಕೇವಲ ಕರ್ನಾಟಕ ಆಂಧ್ರಪ್ರದೇಶ , ಬಿಹಾರ , ಮಹಾರಾಷ್ಟ್ರ , ಉತ್ತರ ಪ್ರದೇಶ , ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ . ಸಂವಿಧಾನದ 171 ನೇ ವಿಧಿ ಇದರ ರಚನೆ ಬಗ್ಗೆ ತಿಳಿಸುತ್ತದೆ . ಇವರ ಪ್ರಕಾರ ಈ ಸದನದ ಸಂಖ್ಯೆಯು ವಿಧಾನ ಸಭೆಯ ಸದಸ್ಯತ್ವಕ್ಕಿಂತ ಹೆಚ್ಚಾಗಿರಬಾರದು ಮತ್ತು 40 ಸದಸ್ಯರಿಗಿಂತ ಕಡಿಮೆ ಇರಬಾರದು . ಒಂದು ರಾಜ್ಯದ ವಿಧಾನಪರಿಷತ್‌ನ ಸದಸ್ಯರನ್ನ ಈ ಕೆಳಗಿನ ವಿವಿಧ ಕ್ಷೇತ್ರಗಳಿಂದ ಚುನಾಯಿಸಲಾಗುತ್ತದೆ .
1. 1/3 ರಷ್ಟು ಸದಸ್ಯರನ್ನು ಸ್ಥಳೀಯ ಸಂಸ್ಥೆಗಳಿಂದ ಆರಿಸಲಾಗುತ್ತದೆ .
2. 1 / 3 ರಷ್ಟು ಸದಸ್ಯರನ್ನು ವಿಧಾನ ಸಭೆಯ ಸದಸ್ಯರಿಂದ ಆರಿಸಲಾಗುತ್ತದೆ .
3. 1/12 ರಷ್ಟು ಸದಸ್ಯರನ್ನು ಪದವೀಧರ ಕ್ಷೇತ್ರದಿಂದ ಆರಿಸಲಾಗುತ್ತದೆ . ಈ ಮತದಾರರು ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಕನಿಷ್ಠ 3 ವರ್ಷಗಳಾಗಿರಬೇಕು .
4. 1/12 ರಷ್ಟು ಸದಸ್ಯರನ್ನು ಶಿಕ್ಷಕರ ಕ್ಷೇತ್ರದಿಂದ ಆರಿಸಲಾಗುತ್ತದೆ .
5 . ಈ ಶಿಕ್ಷಕರು ಪ್ರೌಢಶಾಲೆಗಿಂತ ಕೆಳಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರಬಾರದು . ಉಳಿದ 1/6 ರಷ್ಟು ಸದಸ್ಯರನ್ನ ರಾಜ್ಯಪಾಲರು ಸಾಹಿತ್ಯ , ವಿಜ್ಞಾನ , ಕಲೆ , ಸಹಕಾರ ಚಳುವಳಿ & ಸಮಾಜಸೇವೆಗಳಲ್ಲಿ ವಿಶೇಷ ಜ್ಞಾನವನ್ನು ಪಡೆದವರನ್ನ ನಾಮಕರಣ ಮಾಡುತ್ತಾರೆ . ವಿಧಾನ ಪರಿಷತ್ ಶಾಶ್ವತ ಸದನವಾಗಿದ್ದು ಇದನ್ನು ವಿಸರ್ಜಿಸುವಂತಿಲ್ಲ . ಆದರೆ
ಇದರ ಸದಸ್ಯರಲ್ಲಿ 1 / 3 ರಷ್ಟು ಸದಸ್ಯರು ಪ್ರತಿ 2 ವರ್ಷಗಳಿಗೂಮ್ಮೆ ನಿವೃತ್ತರಾಗುತ್ತಾರೆ .
3 ) ಲೋಕಸಭೆಯ ಸಭಾಪತಿರವರ ಪಾತ್ರ ಅಧಿಕಾರ ಮತ್ತು ಕಾರ್ಯಗಳನ್ನು ತಿಳಿಸಿ
ಸಭಾಪತಿಯವರು ವಹಿಸುತ್ತಾರೆ . ಸಂವಿಧಾನದ 93 ನೇ ವಿಧಿ ಲೋಕ ಸಭೆಗೆ ಸ್ಪೀಕರ್ ಇರಬೇಕೆಂದು ತಿಳಿಸುತ್ತದೆ . ಸದನದ ಸದಸ್ಯರಿಂದಲೇ ಬಹುಮತದ ಆಧಾರದ ಮೇಲೆ ಸದಸ್ಯರೊಬ್ಬರನ್ನು ಸ್ವೀಕರ್ ಆಗಿ ಆಯ್ಕೆ ಮಾಡಲಾಗುತ್ತದೆ . ಸಭಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿ ಮೇಲೆ ಪಕ್ಷಾತೀತವಾಗಿ ನಡೆದುಕೊಳ್ಳಬೇಕಾಗುತ್ತದೆ . ಸ್ಪೀಕರ್ ಸದನದ ವಕ್ತಾರರಾಗಿ ಅದರ ಘನತೆ , ಗೌರವ , ಹಕ್ಕು ಬಾಧ್ಯತೆಗಳನ್ನ ರಕ್ಷಿಸುವ ಹೊಣೆಗಾರಿಕೆ ಹೊಂದಿರುತ್ತಾರೆ . ಇವರ ಅಧಿಕಾರ ಮತ್ತು ಕಾರ್ಯಗಳು ಕೆಳಗಿನಂತಿವೆ .
1 . ಲೋಕಸಭೆಯ ಅಧಿವೇಶನಗಳಲ್ಲಿ ಅಧ್ಯಕ್ಷತೆ ವಹಿಸಿ ಅದರ ಕಾರ್ಯ ಕಲಾಪಗಳನ್ನು ನಡೆಸಿಕೊಂಡು ಹೋಗುವುದು .
2. ಸದನದಲ್ಲಿ ನಿರ್ಧಿಷ್ಟ ಹಾಜರಾತಿ ಇಲ್ಲದಿದ್ದಲ್ಲಿ ಸಭೆಯನ್ನ ಮುಂದೂಡುವುದು .
3. ಲೋಕಸಭೆಯಲ್ಲಿ ಸದಸ್ಯರ ಹಕ್ಕು ಬಾಧ್ಯತೆಗಳನ್ನು ರಕ್ಷಿಸಿ ಅವರಿಗೆ ನ್ಯಾಯ ದೊರಕಿಸಿಕೊಡುವುದು .
4 .ಆರ್ಥಿಕ ಮಸೂದೆ ಯಾವುದೆಂಬುದನ್ನು ನಿರ್ಧರಿಸುವುದು .
5. ಸದನದ ಸದಸ್ಯ ಅಕಾಲಿಕ ಮರಣಕ್ಕೆ ತುತ್ತಾದರೆ , ರಾಜಿನಾಮೆ ನೀಡಿದರೆ ಅಂತಹ ಸ್ಥಾನಗಳನ್ನು ಖಾಲಿ ಎಂದು ಘೋಷಣೆ ಮಾಡುವ ಅಧಿಕಾರ .
6. ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸುವುದು .
7. ಮಸೂದೆಯ ಪರ ಮತ್ತು ವಿರುದ್ಧ ಸಮವಾದ ಮತಗಳು ಬಿದ್ದಾಗ ನಿರ್ಣಾಯಕ ಮತ ಚಲಾಯಿಸುವುದು .
8. ಅಧಿವೇಶನದಲ್ಲಿ ಸದಸ್ಯರು ಮಾತನಾಡಬೇಕಾದ ಕ್ರಮಾಂಕವನ್ನು ನಿರ್ಧರಿಸುವುದು .
4 ) ವಿಧಾನಸಭೆಯ ಸಭಾಪತಿಯವರ ಪಾತ್ರ , ಅಧಿಕಾರ ಮತ್ತು ಕರ್ತವ್ಯಗಳನ್ನು ಕುರಿತು ಬರೆಯಿರಿ .
ಲೋಕ ಸಭೆಯಲ್ಲಿರುವಂತೆ ರಾಜ್ಯದ ವಿಧಾನ ಸಭೆಯಲ್ಲೂ ಅಧ್ಯಕ್ಷತೆಯನ್ನು ವಹಿಸಲು ಸಭಾಧ್ಯಕ್ಷರು ಇರುತ್ತಾರೆ . ಸದನದ ಸದಸ್ಯರೊಬ್ಬರನ್ನು ಸ್ವೀಕರ್ ಆಗಿ ಆಯ್ಕೆಯಾದ ನಂತರ ಇವರು ಪಕ್ಷಾತೀತವಾಗಿ ಕಾರನಿರ್ವಹಿಸಬೇಕು . ಚುನಾಯಿಸಲಾಗುತ್ತದೆ . ಇವರ ಆಯ್ಕೆಯಲ್ಲಿ ಮುಖ್ಯಮಂತ್ರಿಯ ಪಾತ್ರ ವಿಶೇಷವಾಗಿರುತ್ತದೆ . ಈ ಸ್ಥಾನಕ್ಕೆ ವಿಧಾನಸಭೆ ವಿಸರ್ಜನೆಗೊಂಡರೂ ಇವರು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರುವವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆ . ಸಂವಿಧಾನದ ವಿಧಿ ವಿಧಾನಗಳಿಗೆ ವಿರುದ್ಧವಾಗಿ ಸಭಾಧ್ಯಕ್ಷರು ವರ್ತಿಸಿದಾಗ ವಿಧಾನ ಸಭೆಯ ಸದಸ್ಯರು ಇವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬಹುದು .
ಈ ಸಭಾಧ್ಯಕ್ಷರ ಪ್ರಮುಖ ಕಾರ್ಯಗಳೆಂದರೆ,
1 . ಸದನದ ಅಧ್ಯಕ್ಷತೆ ವಹಿಸಿ ಕಾರ್ಯ ಕಲಾಪಗಳನ್ನು ನಡೆಸುವುದು .
2 ಸದನಕ್ಕೆ ಅಗತ್ಯವಾದ ನೀತಿ ನಿಯಮಗಳನ್ನು ರೂಪಿಸುವುದು .
3. ಸದನದ ಘನತೆ ಮತ್ತು ಗೌರವ ಕಾಪಾಡುವುದು .
4. ಸಭೆಯಲ್ಲಿ ಶಿಸ್ತು – ಶಾಂತಿ ಕಾಪಾಡುವುದು .
5. ಸದನದ ಕಾನೂನಿನ ನಿಯಮಗಳನ್ನು ವಿಶ್ಲೇಷಣೆ ಮಾಡುವುದು .
6. ಸಭೆಯನ್ನು ಮುಂದೂಡುವುದು & ರದ್ದುಪಡಿಸುವುದು .
7. ಸಭಾಧ್ಯಕ್ಷರಿಗೆ ಅಥವಾ ಸಭೆಗೆ ಗೌರವ ಕೊಡದ ಸದಸ್ಯರ ವಿರುದ್ಧ ಕ್ರಮ ಜರುಗುವುದು .
8. ಹಣಕಾಸಿನ ಮಸೂದೆ ಅಥವಾ ಇತರೆ ಮಸೂದೆ ಎನ್ನುವುದನ್ನು ದೃಢೀಕರಿಸುವುದು .
9. ಇವರು ಸದನದಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸುವಂತಿಲ್ಲ ಆದರೆ ಸಮಯ ಬಂದಾಗ ನಿರ್ಣಾಯಕ ಮತಚಲಾಯಿಸುವ ಅಧಿಕಾರ ಹೊಂದಿದ್ದಾರೆ .
1st Puc Political Science 6th Chapter
ಹೆಚ್ಚುವರಿ ಪ್ರಶೋತ್ತರಗಳು :
1 ) ಫ್ರೆಂಚ್ ಭಾಷೆಯ ‘ ಪಾರ‍್ಲರ್ ‘ ಪದದ ಅರ್ಥವೇನು ?
ಪಾರ‍್ಲರ್ ಎಂದರೆ , ಸಭಾಂಗಣದಲ್ಲಿ ಮಾತನಾಡು / ಚರ್ಚಿಸು / ಸಮಾಲೋಚಿಸು / ನಿರ್ಣಯಿಸು ಎಂದರ್ಥ .
2 ) ರಾಜ್ಯಸಭೆಯ ಎಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ?
1 / 3 ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ .
3 ) ಹಣಕಾಸಿನ ಮಸೂದೆಯನ್ನು ರಾಜ್ಯಸಭೆ ಎಷ್ಟು ದಿವಸಗಳವರೆಗೆ ತಡೆಹಿಡಿಯಬಹುದು ?
ಕೇವಲ 14 ದಿವಸಗಳವರೆಗೆ ತಡೆಹಿಡಿಯಬಹುದು .
4 ) ಲೋಕ ಸಭೆಯ ಸದಸ್ಯರು ನಿರಂತರ ಎಷ್ಟು ದಿನಗಳ ಕಾಲ ಗೈರು ಹಾಜರಾದರೆ ಸದಸ್ಯತ್ವ ಕಳೆದುಕೊಳ್ಳುತ್ತಾರೆ?
60 ದಿನಗಳ ಕಾಲ ನಿರಂತರ ಗೈರು ಹಾಜರಾದರೆ ಸದಸ್ಯತ್ವ ಕಳೆದುಕೊಳ್ಳುತ್ತಾರೆ .
5 ) ರಾಜ್ಯಸಭೆಗೆ ಸ್ಪರ್ಧಿಸಲು ಕನಿಷ್ಟ ಎಷ್ಟು ವಯಸ್ಸಾಗಿರಬೇಕು ?
ರಾಜ್ಯಸಭೆಗೆ ಸ್ಪರ್ಧಿಸಲು 30 ವರ್ಷ ವಯಸ್ಸಾಗಿರಬೇಕು .
6) ಲೋಕ ಸಭೆಗೆ ಸ್ಪರ್ಧಿಸಲು ಇರುವ ವಯೋಮಿತಿ ಎಷ್ಟು ?
ಲೋಕಸಭೆಗೆ ಸ್ಪರ್ಧಿಸಲು 25 ವರ್ಷ ವಯಸ್ಸಾಗಿರಬೇಕು .
7) ಸಂಸತ್‌ನ ಜಂಟಿ ಅಧಿವೇಶನವನ್ನು ಯಾರು ಕರೆಯುತ್ತಾರೆ?
ರಾಷ್ಟ್ರಾಧ್ಯಕ್ಷರು ಕರೆಯುತ್ತಾರೆ .
8 ) ‘ ಶಾಶ್ವತ ಸದನ ‘ ಎಂದು ಸಂಸತ್‌ನ ಯಾವ ಸದನವನ್ನು ಕರೆಯುತ್ತಾರೆ ?
ರಾಜ್ಯ ಸಭೆಯನ್ನ “ ಶಾಶ್ವತ ಸದನ ” ಎನ್ನುವರು .
Shasakanga Notes in Kannada Pdf
1 ) ದ್ವಿಸದನ ಶಾಸಕಾಂಗ ಎಂದರೇನು?
ಶಾಸಕಾಂಗ ಎರಡು ಸದನಗಳನ್ನ ಹೊಂದಿದ್ದರೆ ಅಂತಹ ಶಾಸಕಾಂಗವನ್ನ ದ್ವಿಸದನ ಶಾಸಕಾಂಗ ಎನ್ನುವರು .
2 ) ರಾಜ್ಯಸಭೆ ಯಾವಾಗ ಅಸ್ತಿತ್ವಕ್ಕೆ ಬಂತು ?
3 ನೇ ಏಪ್ರಿಲ್ 1952 ರಲ್ಲಿ ಪ್ರಥಮ ಬಾರಿಗೆ ರಾಜ್ಯಸಭೆ ಅಸ್ತಿತ್ವಕ್ಕೆ ಬಂತು .
3) ವಿಧಾನ ಪರಿಷತ್ ಅಸ್ತಿತ್ವದಲ್ಲಿರುವ ರಾಜ್ಯಗಳಾವುವು ?
ಕರ್ನಾಟಕ , ಆಂಧ್ರಪ್ರದೇಶ , ಮಹಾರಾಷ್ಟ್ರ ಬಿಹಾರ , ಉತ್ತರ ಪ್ರದೇಶ ಜಮ್ಮು & ಕಾಶ್ಮೀರ .
FAQ
ಶಾಸಕಾಂಗದ ಮೂಲಪದ ಫ್ರೆಂಚ್ ಭಾಷೆಯ ‘ ಪಾರ‍್ಲರ್ ‘ .
ರಾಷ್ಟ್ರಾಧ್ಯಕ್ಷರು ಸಂಸತ್ತಿನ ಅವಿಭಾಜ್ಯ ಅಂಗ ,
ಇತರೆ ವಿಷಯಗಳು :
First Puc Political Science Notes
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf