ಪ್ರಥಮ ಪಿ.ಯು.ಸಿ ಅಧ್ಯಾಯ-7 ಕಾರ್ಯಾಂಗ ನೋಟ್ಸ್ ಪ್ರಶ್ನೋತ್ತರಗಳು, 1st Puc Political Science Chapter 7 Karyanga Notes Question Answer in Kannada Pdf 1 Puc Political Science Notes in Kannada Chapter 7 Kseeb Solution For Class 11 Chapter 7 Notes Executive Notes Class 11 Pdf Karyanga Notes in Kannada
ಪ್ರಥಮ ಪಿ.ಯು.ಸಿ ಅಧ್ಯಾಯ-7 ಕಾರ್ಯಾಂಗ ನೋಟ್ಸ್
1st Puc Karyanga Notes in Kannada
1 ) ಕಾರ್ಯಾಂಗ ಎಂದರೇನು ?
ಕಾನೂನುಗಳನ್ನು ಅನುಷ್ಠಾನಗೊಳಿಸುವ ಸರ್ಕಾರದ ಎರಡನೆಯ ಅಂಗವೇ ಕಾರ್ಯಾಂಗ ,
2 ) ಭಾರತದ ರಾಷ್ಟ್ರಪತಿಗಳ ಅಧಿಕಾರವಧಿ ಎಷ್ಟು ?
5 ವರ್ಷಗಳು
3 ) ಭಾರತದಲ್ಲಿ ಪ್ರಧಾನಿಯನ್ನು ಯಾರು ನೇಮಿಸುತ್ತಾರೆ ?
ರಾಷ್ಟ್ರಾಧ್ಯಕ್ಷರು
4 ) ರಾಜ್ಯಸಭೆಯ ಪದ ನಿಮಿತ್ತ ಅಧ್ಯಕ್ಷರು ಯಾರು ?
ಉಪರಾಷ್ಟ್ರಪತಿ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ,
5) ರಾಜ್ಯಪಾಲರ ಅಧಿಕಾರವಧಿ ಎಷ್ಟು ?
5 ವರ್ಷಗಳು
6 ) ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಯಾರು ನೇಮಿಸುತ್ತಾರೆ ?
ರಾಜ್ಯಪಾಲರು ನೇಮಿಸುತ್ತಾರೆ .
7 ) ರಾಜ್ಯದ ರಾಜ್ಯಪಾಲರನ್ನ ಯಾರು ನೇಮಿಸುತ್ತಾರೆ ?
ರಾಷ್ಟ್ರಾಧ್ಯಾಕ್ಷರು ನೇಮಿಸುತ್ತಾರೆ .
8 ) ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಾದೀಶರನ್ನು ಯಾರು ನೇಮಿಸುತ್ತಾರೆ ?
ರಾಷ್ಟ್ರಾಧ್ಯಕ್ಷರು ನೇಮಿಸುತ್ತಾರೆ .
9 ) ಭಾರತದ ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ?
5 ವರ್ಷಗಳು
10 ) ಭಾರತದಲ್ಲಿ ಸೇನಾಪಡೆಯ ಮುಖ್ಯಸ್ಥರನ್ನು ಯಾರು ನೇಮಿಸುತ್ತಾರೆ ?
ರಾಷ್ಟ್ರಾಧ್ಯಕ್ಷರು ನೇಮಿಸುತ್ತಾರೆ .
1 Puc Political Science Notes in Kannada Chapter 7 Notes
1 ) ಕಾರ್ಯಾಂಗದ ಅರ್ಥವನ್ನು ಬರೆಯಿರಿ .
ಕಾನೂನುಗಳನ್ನು ಕಾವ್ಯರೂಪಕ್ಕೆ ತರುವ ಸರ್ಕಾರದ ಎರಡನೇ ಅಂಗವೇ ಕಾರಂಗ ಇದು ರಾಷ್ಟ್ರದ ಸಮಸ್ತ ಆಡಳಿತವನ್ನು ನಿರ್ವಹಿಸುತ್ತದೆ .
2 ) ಭಾರತದ ರಾಷ್ಟ್ರಪತಿಗಳಿಗೆ ಇರಬೇಕಾದ ಅರ್ಹತೆಗಳಾವುವು ?
1. ಭಾರತದ ಪ್ರಜೆಯಾಗಿರಬೇಕು .
2. 35 ವರ್ಷ ವಯಸ್ಸಾಗಿರಬೇಕು .
3. ಲೋಕ ಸಭೆಯ ಸದಸ್ಯರಾಗಲು ಇರಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು .
3 ) ಭಾರತದಲ್ಲಿ ಉಪರಾಷ್ಟ್ರಪತಿಯನ್ನು ಯಾರು ಆಯ್ಕೆ ಮಾಡುತ್ತಾರೆ ?
ಸಂಸತ್ತಿನ ಉಭಯಸದನಗಳ ಎಲ್ಲಾ ಸದಸ್ಯರು ಚುನಾಯಿಸುತ್ತಾರೆ .
4 ) ರಾಜ್ಯಪಾಲರಿಗೆ ಇರಬೇಕಾದ ಅರ್ಹತೆಗಳಾವುವು ?
1. ಭಾರತದ ಪ್ರಜೆಯಾಗಿರಬೇಕು .
2. 35 ವರ್ಷ ವಯಸ್ಸಾಗಿರಬೇಕು .
3. ಯಾವುದೇ ಲಾಭದಾಯಕ ಹುದ್ದೆ ಹೊಂದಿರಬಾರದು .
5 ) ರಾಷ್ಟ್ರಾಧ್ಯಕ್ಷರು ಚಲಾಯಿಸುವ 3 ತುರ್ತುಪರಿಸ್ಥಿತಿಯ ಅಧಿಕಾರಗಳಾವುವು ?
1. ರಾಷ್ಟ್ರೀಯ ತುರ್ತುಪರಿಸ್ಥಿತಿ ( 352 ನೇ ವಿಧಿ
2. ರಾಜ್ಯ ತುರ್ತುಪರಿಸ್ಥಿತಿ ( 356 ನೇ ವಿಧಿ )
3 , ಆರ್ಥಿಕ ತುರ್ತುಪರಿಸ್ಥಿತಿ ( 360 ನೇ ವಿಧಿ )
6 ) ಉಪರಾಷ್ಟ್ರಪತಿಗೆ ಬೇಕಾದ ಅರ್ಹತೆಗಳಾವುವು ?
1. ಭಾರತದ ಪ್ರಜೆಯಾಗಿರಬೇಕು
2. 35 ವರ್ಷ ವಯಸ್ಸಾಗಿರಬೇಕು .
3. ಯಾವುದೇ ಲಾಭದಾಯಕ ಹುದ್ದೆ ಹೊಂದಿರಬೇಕು .
7 ) ಭಾರತದ ರಾಷ್ಟ್ರಪತಿಯನ್ನು ಚುನಾಯಿಸುವಲ್ಲಿ ಯಾರು ಭಾಗವಹಿಸುತ್ತಾರೆ ?
ಸಂಸತ್ತಿನ ಉಭಯಸದನಗಳ ಚುನಾಯಿತ ಸದಸ್ಯರು ಮತ್ತು ಎಲ್ಲಾ ರಾಜ್ಯಗಳ ವಿಧಾನ ಸಭೆಯ ಚುನಾಯಿತ ಸದಸ್ಯರು .
8 ) ಲೋಕ ಸಭೆಯಲ್ಲಿ ಮಂತ್ರಿಮಂಡಲದ ಗಾತ್ರ ಎಷ್ಟಿರಬೇಕು ?
ಮಂತ್ರಿ ಮಂಡಲದ ಸದಸ್ಯರ ಸಂಖ್ಯೆ ಲೋಕಸಭೆಯ ಒಟ್ಟು ಸದಸ್ಯರಲ್ಲಿ ಶೇಕಡ 15 ರಷ್ಟಿರಬೇಕು .
9 ) ರಾಜ್ಯ ವಿಧಾನ ಸಭೆಯಲ್ಲಿ ಮಂತ್ರಿಮಂಡಲದ ಗಾತ್ರ ಎಷ್ಟಿರಬೇಕು ?
ಗರಿಷ್ಟ 500 ಕ್ಕಿಂತ ಹೆಚ್ಚು ಇರದೇ 60 ಕ್ಕಿಂತ ಕಡಿಮೆ ಸದಸ್ಯರನ್ನು ವಿಧಾನಸಭೆಯು ಹೊಂದಿರಬಹುದು .
10 ) ರಾಜ್ಯಪಾಲರ ಹಣಕಾಸಿನ ಅಧಿಕಾರಗಳಾವುವು ?
ಹಣಕಾಸು ಮಸೂದೆಯನ್ನು ಸದನದಲ್ಲಿ ಮಂಡಿಸಲು ಅನುದಾನ ಬೇಡಿಕೆ ಸಲ್ಲಿಸಲು ಮತ್ತು ರಾಜ್ಯದ ಸಂಚಿತ ನಿಧಿಯನ್ನು ಅನಿರೀಕ್ಷಿತ ಖರ್ಚನ್ನು ಭರಿಸಲು ರಾಜ್ಯಪಾಲರ ಅನುಮತಿ ಬೇಕು . ಹಾಗೆಯೇ ರಾಜ್ಯದಲ್ಲಿ ಶಾಸಕಾಂಗವು ಸರಿಯಾದ ಸಮಯಕ್ಕೆ ಆಯವ್ಯಯ ಪತ್ರವನ್ನು ಮಂಡಿಸಲು ವ್ಯವಸ್ಥೆ ಮಾಡುತ್ತಾರೆ .
1 ) ಕಾರ್ಯಾಂಗದ ಪ್ರಾಮುಖ್ಯತೆಯನ್ನು ವಿವರಿಸಿ . ?
ಕಾನೂನುಗಳನ್ನು ಕಾರ್ಯಗತ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರದ 2 ನೇ ಅಂಗವೇ ಕಾರ್ಯಾಂಗ , ಸರ್ಕಾರದ ತ್ರಿಕರ್ಣಾಂಗಗಳಲ್ಲಿ ಕಾರ್ಯಾಂಗವು ರಾಜ್ಯದ ಧೈಯೊದ್ದೇಶಗಳನ್ನು ಈಡೇರಿಸುವ ಅಂಗಗಳಲ್ಲಿ ಒಂದಾಗಿದೆ . ಇದರ ಪ್ರಾಮುಖ್ಯತೆ ಕೆಳಗಿನ ರೀತಿಯಲ್ಲಿ ಆಧುನಿಕ ಕಾಲದಲ್ಲಿ ಹೆಚ್ಚಾಗುತ್ತಿದೆ .
1 ) ಕಾನೂನಿವ ಅನುಷ್ಠಾನ : ಸರ್ಕಾರದ ನೀತಿಯನ್ನು ಕಾರ್ಯಗತಗೊಳಿಸುವ ಮತ್ತು ಶಾಸಕಾಂಗ ರಚಿಸಿದ ಕಾನೂನನ್ನು ಜಾರಿಗೊಳಿಸುವ ಮುಖ್ಯ ಕಾರ್ಯವನ್ನು ಕಾರ್ಯಾಂಗ ನಿರ್ವಹಿಸುತ್ತದೆ .
2) ಆಧುನಿಕ ರಾಜ್ಯದಲ್ಲಿ ಕಾರ್ಯಾಂಗದ ಶಾಸ್ತ್ರ : ಸುಖೀರಾಜ್ಯ ಮತ್ತು ಉದಾರವಾದಿ ಪ್ರಜಾಪ್ರಭುತ್ವದ ಪರಿಕಲ್ಪನೆಗಳು ಕಾರ್ಯಾಂಗದ ಪಾತ್ರ ಮತ್ತು ಜವಾಬ್ದಾರಿಯನ್ನ ಹೆಚ್ಚಿಸಿವೆ .
3) ನಾಯಕತ್ವ : ಕಾರ್ಯಾಂಗ ರಾಷ್ಟ್ರಕ್ಕೆ ನಾಯಕತ್ವವನ್ನು ನೀಡುತ್ತದೆ .
2 ) ಭಾರತದಲ್ಲಿ ಕಾರ್ಯಾಂಗ : ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿರುವ ಭಾರತದಲ್ಲಿ ರಾಷ್ಟ್ರದ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರು ಕಾರಾಂಗೀಯ ಅಧಿಕಾರವನ್ನು ಹೊಂದಿರುತ್ತಾರೆ .
2 ) ಭಾರತದ ರಾಷ್ಟ್ರಪತಿಗಳನ್ನ ಚುನಾಯಿಸುವ ವಿಧಾನವನ್ನು ವಿವರಿಸಿ .
ರಾಷ್ಟ್ರಪತಿಯ ಚುನಾವಣಾ ವಿಧಾನವನ್ನು ಸಂವಿಧಾನದ 54 & 55 ನೇ ವಿಧಿಗಳಲ್ಲಿ ವಿವರಿಸಲಾಗದೆ ಇವರನ್ನು ನಿರ್ವಾಚನಾ ಮಂಡಳಿಯ ‘ ಮೂಲಕ ಪರೋಕ್ಷವಾಗಿ ಚುನಾಯಿಸಲಾಗುತ್ತದೆ . ಈ ನಿರ್ವಾಚನಾ ಮಂಡಳಿಯು ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು ಹಾಗೂ ರಾಜ್ಯ ವಿಧಾನ ಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡಿರುತ್ತದೆ . ಇವರ ಚುನಾವಣೆಯು ಏಕಮತ ಪರಿವರ್ತಿತ ಪ್ರಮಾಣಾನುಗುಣ ಪದ್ಧತಿಗನುಗುಣವಾಗಿ ರಹಸ್ಯ ಮತದಾನದ ಮೂಲಕ ನಡೆಯುತ್ತದೆ . ರಾಜ್ಯದ ಒಟ್ಟು ಜನಸಂಖ್ಯೆಯನ್ನು ಆ ರಾಜ್ಯದ ಚುನಾಯಿತ ವಿಧಾನ ಸಭೆಯ ಸದಸ್ಯರ ಸಂಖ್ಯೆಯಿಂದ ಭಾಗಿಸಿದಾಗ ಬರುವ ಭಾಗಲಬ್ಧವನ್ನ 1000 ದಿಂದ ಭಾಗಿಸಿದಾಗ ಬರುವ ಮೌಲ್ಯವನ್ನು ಆ ರಾಜ್ಯ ಶಾಸಕರ ಮತದ ಮೌಲ್ಯವೆಂದು ಪರಿಗಣಿಸಲಾಗುತ್ತದೆ .
ಎಲ್ಲಾ ರಾಜ್ಯಗಳ ವಿಧಾನ ಸಭೆಗಳ ಸದಸ್ಯರ ಒಟ್ಟು ಚುನಾಯಿತ ಸದಸ್ಯರುಗಳ ಸಂಖ್ಯೆಯಿಂದ ಭಾಗಿಸಿದರೆ , ಬರುವ ಭಾಗಲಬ್ಧವೇ ಸಂಸತ್ ಸದಸ್ಯರು ಚಲಾಯಿಸುವ ಮತದ ಮೌಲ್ಯ . ಸಂಸದರು ಚಲಾಯಿಸುವ ಮತಗಳ ಮೌಲ್ಯ 142 ರಾಜ್ಯಗಳ ಚುನಾಯಿತ ವಿಧಾನ ಸಭೆಯ ಸದಸ್ಯರುಗಳಿಗೆ ನಿಗಧಿಯಾಗಿರುವ ಒಟ್ಟು ಮತಗಳ ಸಂಖ್ಯೆ ಸಂಸತ್ತಿನ ಚುನಾಯಿತ ಸದಸ್ಯರುಗಳ ಸಂಖ್ಯೆ ಚಲಾಯಿಸಲಾದ ಒಟ್ಟು ಮತಗಳ ಸಂಖ್ಯೆಯನ್ನು ಆಯ್ಕೆಯಾಗಬೇಕಿರುವ ಅಭ್ಯರ್ಥಿಗಳ ಸಂಖ್ಯೆ +1 ರಿಂದ ಭಾಗಿಸಿದಾಗ ಬರುವ ಮೊತ್ತಕ್ಕೆ 1 ನ್ನು ಸೇರಿಸಿದರೆ ಬರುವ ಕೋಟಾದ ಮೊತ್ತದ ಮತವನ್ನು ಪಡೆದವರು ಆಯ್ಕೆಯಾಗುವರು .
3 ) ರಾಷ್ಟ್ರಗಳ ಶಾಸನೀಯ ಅಧಿಕಾರಗಳನ್ನು ವಿವರಿಸಿ .
ಸಂವಿಧಾನಾತ್ಮಕವಾಗಿ ಶಾಸನೀಯ ಕಾರಗಳು ಸಂಸತ್ತಿಗೆ ಸೇರಿದೆ . ರಾಷ್ಟ್ರಪತಿಗಳು ಅದರ ಪ್ರಮುಖ ಭಾಗವಾಗಿ ಕಾರನಿರ್ವಹಿಸುತ್ತಾರೆ . ಅವರ ಶಾಸನೀಯ ಕಾರಗಳೆಂದರೆ ,
1. ಸಂಸತ್‌ನ ಅಧಿವೇಶನ ಕರೆಯುವ , ಮುಂದೂಡುವ ಮತ್ತು ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ .
2. ನೂತನ ಪಾರ್ಲಿಮೆಂಟಿನ ಪ್ರಥಮ ಅಧಿವೇಶನ ಹಾಗೂ ಪ್ರತೀ ವರ್ಷದ ಮೊದಲ ಅಧಿವೇಶನಗದಲ್ಲಿ ಪಾರ್ಲಿಮೆಂಟ್‌ನ್ನು ಉದ್ದೇಶಿಸಿ ಭಾಷಣ ಮಾಡುವ ಅಧಿಕಾರ .
3. ಸಾಹಿತ್ಯ , ಕಲೆ , ವಿಜ್ಞಾನ ಮತ್ತು ಸಮಾಜಸೇವೆಗಳಲ್ಲಿ ವಿಶೇಷ ಜ್ಞಾನವನ್ನು ಹೊಂದಿರುವ 12 ಮಂದಿಯನ್ನು ರಾಜ್ಯಸಭೆಗೆ ನಾಮಕರಣ ಮಾಡುವ ಅಧಿಕಾರ ,
4. ಲೋಕಸಭೆಯಲ್ಲಿ ಆಂಗ್ಲೋ – ಇಂಡಿಯನ್ ಜನಾಂಗಕ್ಕೆ ಸಾಕಷ್ಟು ಪ್ರಾತಿನಿಧ್ಯ ದೊರಕದಿದ್ದಾಗ ಇಬ್ಬರು ಆಂಗ್ಲೋ – ಇಂಡಿಯನ್ ಪ್ರತಿನಿಧಿಗಳನ್ನು ನಾಮಕರಣ ಮಾಡುವ ಅಧಿಕಾರ
5 . ನಿರ್ದಿಷ್ಟ ಮಸೂದೆಗೆ ಸಂಬಂಧಿಸಿದಂತೆ ಉಭಯ ಸದನಗಳ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ ಜಂಟಿ ಅಧಿವೇಶನ ಕರೆಯುವ ಅಧಿಕಾರ ,
6. ಸಂಸತ್‌ನಲ್ಲಿ ಅಂಗೀಕಾರವಾದ ಮಸೂದೆಗಳು ಜಾರಿಗೆ ಬರಲು ರಾಷ್ಟ್ರಪತಿ ಒಪ್ಪಿಗೆ ಬೇಕು .
7. ಶಾಸಕಾಂಗವು ಅಧಿವೇಶನದಲ್ಲಿ ಇಲ್ಲದಿದ್ದಾಗ ತುರ್ತುಪರಿಸ್ಥಿತಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ .
8. ಕೆಲವು ವಿಷಯಗಳ ಬಗ್ಗೆ ಕಾನೂನು ಮಾಡಲು ರಾಷ್ಟ್ರಪತಿ ಪೂರ್ವಸಮ್ಮತಿ / ಶಿಫಾರಸ್ಸು ಅಗತ್ಯ .
4 ) ರಾಷ್ಟ್ರಪತಿಗಳ ಕಾರ್ಯಾಂಗೀಯ ಅಧಿಕಾರಗಳನ್ನು ವಿವರಿಸಿ ,
ರಾಷ್ಟ್ರಪತಿ ರಾಷ್ಟ್ರದ ಆಡಳಿತದ ಮುಖ್ಯಸ್ಥನಾಗದ್ದು , ರಾಷ್ಟ್ರದ ಆಡಳಿತವು ಇವರ ಹೆಸರಿನಲ್ಲಲಿ ನಡೆಯುತ್ತದೆ , ಸಂವಿಧಾನದ 53 ನೇ ವಿಧಿಯ ಪ್ರಕಾರ ಕೆಳಗಿನ ಕ ಅಧಿಕಾರ ರಾಷ್ಟ್ರಪತಿಗಳಲ್ಲಿರುತ್ತದೆ .
1. ಪ್ರಧಾನಿ ಮತ್ತು ಅವರ ಸಲಹೆ ಮೇರೆಗೆ ಮಂತ್ರಿಗಳನ್ನು ಆಯ್ಕೆ ಮಾಡುತ್ತಾರೆ .
2 . ಇವರು ರಾಷ್ಟ್ರದ ಮುಖ್ಯ ಕಾರ್ಯ ನಿರ್ವಾಹಕರಾಗಿರುವುದರಿಂದ ಪ್ರತಿಯೊಂದುಸರ್ಕಾರ ಪ್ರಕಟಣೆಯೂ ಅವರ ನಾಮಾಂಕಿತದಲ್ಲಿ ಪ್ರಕಟವಾಗುತ್ತದೆ
3. ರಾಜ್ಯದ ರಾಜ್ಯಪಾಲರು , ಅಟಾರ್ನಿಜನರಲ್ , ಕಂಟ್ರೋಲರ್ ಮತ್ತು ಆಡಿಟರ್‌ಜನರಲ್ , ಮುಖ್ಯ ಚುನಾವಣಾ ಆಯುಕ್ತರು ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಇತರ ಸದಸ್ಯರು , ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಆಯೋಗದ ಸದಸ್ಯರು ವಿವಿಧ ರಾಷ್ಟ್ರಗಳಿಗೆ ರಾಯಭಾರಿಗಳನ್ನ ನೇಮಕ ಮಾಡುತ್ತಾರೆ .
4. ಸರ್ಕಾರದ ಉನ್ನತ ಅಧಿಕಾರಿಗಳನ್ನು ಅಧಿಕಾರದಿಂದ ತೆಗೆಯುವ ಅಧಿಕಾರ ,
5. ವಿದೇಶಿ ರಾಯಬಾರಿಗಳ ಸ್ವಾಗತ , ಸಮರ ಘೋಷಣೆ , ಶಾಂತಿ & ಸಂಧಾನಗಳ ಕಾರ ಈ ಎಲ್ಲಾ ಅಧಿಕಾರಗಳೆಲ್ಲವನ್ನು ರಾಷ್ಟ್ರಪತಿಗಳು ಚಲಾಯಿಸುವುದು ಮಂತ್ರಿಮಂಡಲದ ಸಲಹೆ ಮೇರೆಗೆ .
5 ) ರಾಷ್ಟ್ರಪತಿಯವರ ತುರ್ತುಪರಿಸ್ಥಿತಿಯ ಅಧಿಕಾರಗಳು ತಿಳಿಸಿ .
ನಮ್ಮ ಸಂವಿಧಾನದ 18 ನೇ ಭಾಗದಲ್ಲಿರುವ 9 ವಿಧಿಗಳು ( 352 ರಿಂದ 360 ) ರಾಷ್ಟ್ರಪತಿ ಘೋಷಿಸಬಹುದಾದ 3 ಬಗೆಯ ತುರ್ತುಪರಿಸ್ಥಿತಿಯ ಅಧಿಕಾರಗಳ ವಿವರಣೆಯನ್ನು ಒಳಗೊಂಡಿದೆ . ಅಂತಹ ಅಧಿಕಾರಗಳೆಂದರೆ ,
1 ) ರಾಷ್ಟ್ರೀಯ ತುರ್ತು ಪರಿಸ್ಥಿತಿ ( 352 ನೇ ವಿಧಿ) : ರಾಷ್ಟ್ರಪತಿಯವರ ಅಭಿಪ್ರಾಯದಲ್ಲಿ ಭಾರತದ ರಕ್ಷಣೆಗೆ ಅಥವಾ ಭಾರತದ ಯಾವುದೇ ಭಾಗಕ್ಕೆ ಯುದ್ಧ / ವಿದೇಶಿ ಆಕ್ರಮಣದ ಬೀತಿ ಇದೆ ಎಂದು ಅನಿಸಿದರೆ , ಈ ತುರ್ತುಪರಿಸ್ಥಿತಿ ಘೋಷಿಸಬಹುದು .
2 ) ರಾಜ್ಯ ತುರ್ತುಪರಿಸ್ಥಿತಿ ( 356 ನೆ ವಿಧಿ ) : ಯಾವುದಾದರೂ ರಾಜ್ಯವು ಸಂವಿಧಾನಬದ್ದವಾಗಿ ಆಳ್ವಿಕೆ ನಡೆಸದಿದ್ದಾಗ ಅಂತಹ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಘೋಷಿಸುವ ಅಧಿಕಾರ ಇವರಿಗಿದೆ .
3 ) ಆರ್ಥಿಕ ತುರ್ತು ಪರಿಸ್ಥಿತಿ : ರಾಷ್ಟ್ರದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ರಾಷ್ಟ್ರಪತಿಗೆ ಮನವರಿಕೆಯಾದರೆ ಈ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು .
6 ) ಭಾರತದ ಉಪರಾಷ್ಟ್ರಪತಿಗಳ ಕಾರ್ಯಗಳಾವುವು ? ತಿಳಿಸಿ .
ಭಾರತ ಸಂವಿಧಾನವು ರಾಷ್ಟ್ರಪತಿಯ ಸ್ಥಾನವು ತೆರವಾದರೆ , ಕೂಡಲೇ ತುಂಬುವ ಉದ್ದೇಶದಿಂದ ಉಪರಾಷ್ಟ್ರಪತಿಯ ಸ್ಥಾನಕ್ಕೂ ಅವಕಾಶ ಕಲ್ಪಿಸಿದೆ . ಇವರ ಕಾರಗಳು ಕೆಳಗಿನಂತಿವೆ
1 ) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ : ಭಾರತದ ಉಪರಾಷ್ಟ್ರಗಳು ರಾಜ್ಯಸಭೆಯ ಪದವಿಮಿತ್ರ ಅಧ್ಯಕ್ಷರಾಗಿ ಕಾರನಿರ್ವಹಿಸುತ್ತಾರೆ . ರಾಜ್ಯಸಭೆಯ ಕಾರಕಲಾಪಗಳನ್ನು ನಿಯಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವ & ಅದರ ಘನತೆಯನ್ನ ಕಾಪಾಡುವ ಹೊಣೆ ಅವರದಾಗಿರುತ್ತದೆ . ರಾಜ್ಯ ಸಭೆಯ ಕಲಾಪವನ್ನು ಮುಂದೂಡುವ , ಸದಸ್ಯರ ಹಾಜರಾತಿ ಕೊರತೆ ಇದ್ದಾಗ ಸಭೆಯ ಕಲಾಪವನ್ನ ರದ್ದುಗೊಳಿಸುವ ಅಧಿಕಾರ ಅವರಿಗಿದೆ ಸಭೆಯ ಸದಸ್ಯರ ಹಕ್ಕು ಬಾದ್ಯತೆಗಳನ್ನ ರಕ್ಷಿಸುವ ಹೊಣೆಗಾರಿಕೆ ಉಪರಾಷ್ಟ್ರಪತಿಗಳಿವೆ .
2 ) ಹಂಗಾಮಿ ರಾಷ್ಟ್ರಪತಿಗಳಾ ಕಾರ‍್ಯ ನಿರ್ವಹಣೆ : ಸಂವಿಧಾನದ 65 ನೇ ವಿಧಿಯು ರಾಷ್ಟ್ರಪತಿಗಳ ಸ್ಥಾನ ಮರಣ , ರಾಜಿನಾಮೆ ಬೇರೆ ಯಾವುದೇ ಕಾರಣದಿಂದ ತೆರವಾದಾಗ ಉಪರಾಷ್ಟ್ರಪತಿಗಳು ಹಂಗಾಮಿಯಾಗಿ ಕಾವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ . ಹೊಸ ರಾಷ್ಟ್ರಪತಿಗಳು ಆಯ್ಕೆಯಾಗುವವರೆಗೆ ಅವರು ಕಾರನಿರ್ವಹಿಸುತ್ತಾರೆ .
7 ) ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ .
ಪ್ರಧಾನಿಯು ಸರ್ಕಾರದ ಮುಖ್ಯಸ್ಥರು , ರಾಷ್ಟ್ರಪತಿಗಳ ಸಲಹೆಗಾರರು , ಮಂತ್ರಿಮಂಡಲದ ಮುಖ್ಯಸ್ಥರು ಹಾಗೂ ಸಂಸತ್ತಿನಲ್ಲಿ ತಮ್ಮ ಪಕ್ಷದ ನಾಯಕರಾಗಿರುವುದರ ಮೂಲಕ ಭಾರತ ಸರ್ಕಾರದ ಕಾರಾಂಗೀಯ ಕಾರ‍್ಯಗಳನ್ನು ವಾಸ್ತವವಾಗಿ ಅವರು ನಿರ್ವಹಿಸುತ್ತಾರೆ . ಸರ್ಕಾರದ ರಜನೆ : ಇದು ಪ್ರಧಾನಿಯ ಮೊದಲ ಕಾರ‍್ಯ , ಮಂತ್ರಿಮಂಡಲ ರಚನೆಯಲ್ಲಿ ಪ್ರಧಾನಿಗೆ ವಿಶೇಷ ಅಧಿಕಾರವಿದೆ . ವಿವಿಧ ರಾಜ್ಯ , ಜನಾಂಗಗಳಿಗೆ ಪ್ರಾತಿನಿಧ್ಯ ನೀಡುವುದರ ಮೂಲಕ ಮಂತ್ರಿ ವರ್ಗದ ಸದಸ್ಯರನ್ನ ಆಯ್ಕೆಮಾಡಿ ಒಂದು ಪಟ್ಟಿ ತಯಾರಿಸಿ ರಾಷ್ಟ್ರಪತಿಗೆ ಸಲ್ಲಿಸುತ್ತಾರೆ . ರಾಷ್ಟ್ರಪತಿಗಳು ಅದರಂತೆ ನೇಮಕ ಮಾಡುತ್ತಾರೆ .
2 ) ಖಾತೆಗಳ ಹಂಚಿಕೆ : ತಮ್ಮ ಮಂತ್ರಿಮಂಡಲದ ಸದಸ್ಯರಿಗೆ ಖಾತೆಗಳನ್ನು ಹಂಚುವ ಮತ್ತು ಮರುಹಂಚುವ ಕಾರ‍್ಯ ನಿರ್ವಹಿಸುತ್ತಾರೆ .
3 ) ಮಂತ್ರಿಮಂಡಲ ರಚಿಸುವ ಸಭೆ ಕರೆಯುವ ಸಭೆ ಮುಂದೂಡುವ ಹಾಗೆ , ಸಭೆಯ ಅಧ್ಯಕ್ಷತೆವಹಿಸುವ ಕಾರ‍್ಯ ನಿರ್ವಹಿಸುತ್ತಾರೆ .
4 ) ಲೋಕಭೆಯ ನಾಯಕ : ಪ್ರಧಾನಿ ಬಹುಮತ ಪಡೆದ ಸಂಸದೀಯ ಪಕ್ಷದ ನಾಯಕರಾಗುವುದರಿಂದ ಇವರು ಲೋಕಸಭಾ ನಾಯಕರೂ ಆಗುತ್ತಾರೆ . ಆದ್ದರಿಂದ ಸಂಸತ್ತಿನ ವ್ಯವಹಾರಗಳಲ್ಲಿ ಇವರ ಪಾತ್ರ ಮಹತ್ತರವಾದುದು .
5 ) ರಾಷ್ಟ್ರದ ನಾಯಕ : ಪ್ರಧಾನ ಮಂತ್ರಿಗಳು ರಾಷ್ಟ್ರದ ನಾಯಕರಾಗಿ ಅಂತರಾಷ್ಟ್ರೀಯ ಸಭೆಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ನಿಯೋಗಗಳ ಮುಖ್ಯಸ್ಥರಾಗಿರುತ್ತಾರೆ .
6 ) ರಾಷ್ಟ್ರಪತಿ & ಕ್ಯಾಬಿನೆಟ್ ನಡುವೆ ಸೇತುವೆ : ಪ್ರಧಾನಿ ಸರ್ಕಾರ & ರಾಷ್ಟ್ರಪತಿಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ‍್ಯನಿರ್ವಹಿಸುತ್ತಾರೆ . ದೇಶದ ಸಮಸ್ಯೆಗಳ ಬಗ್ಗೆ ರಾಷ್ಟ್ರಪತಿಗಳೊಡನೆ ಸಮಾಲೋಚನೆ ನಡೆಸುವುದು , ರಾಷ್ಟ್ರಪತಿಗೆ ಮಂತ್ರಿಮಂಡಲದ ನಿರ್ಣಯಗಳನ್ನು ತಿಳಿಸುವುದು ಹಾಗೆಯೇ ರಾಷ್ಟ್ರಪತಿಗಳ ಅಭಿಪ್ರಾಯಗಳನ್ನು ತನ್ನ ಸಹೋದ್ಯೋಗಿಗಳಿಗೆ ತಿಳಿಸುವ ಕಾರ‍್ಯವನ್ನು ನಿರ್ವಹಿಸುತ್ತಾರೆ .
7 ) ನೇಮಕಾತಿ ಅಧಿಕಾರಗಳು : ಕೆಲವು ಪ್ರಮುಖ ಹುದ್ದೆಗಳಿಗೆ ನೇಮಕಾತಿ ಮಾಡುವ ಅಧಿಕಾರ ಪ್ರಧಾನಿಗಿದೆ .
8 ) ಭಾರತದ ಪ್ರಧಾನ ಮಂತ್ರಿಗಳ ಪಾತ್ರವನ್ನು ವಿವರಿಸಿ.
“ ಪ್ರಧಾನಿ ಕ್ಯಾಬಿನೆಟ್ ವ್ಯವಸ್ಥೆಯ ಕೇಂದ್ರ ಬಿಂದು . ಭಾರತದ ಸಂಸದೀಯ ವ್ಯವಸ್ಥೆಯು ಪ್ರಧಾನ ಮಂತ್ರಿಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸುತ್ತದೆ . ಸರ್ಕಾರದ ಸ್ಥಿರತೆ , ಸರ್ಕಾರದ ನೀತಿಗಳ ಮುಂದುವರಿಕೆಗೆ ಪ್ರಧಾನ ಮಂತ್ರಿಗಳೇ ಕಾರಣರಾಗಿರುತ್ತಾರೆ . ಕೇಂದ್ರ ಮಂತ್ರಿಮಂಡಲದಲ್ಲಿ ಪ್ರಧಾನ ಮಂತ್ರಿಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ . ಹೆರಾಲ್ಡ್ ಲಾಸ್ಕಿ ಅಭಿಪ್ರಾಯದಲ್ಲಿ ಪ್ರಧಾನ ಮಂತ್ರಿಗಳೇ ಮಂತ್ರಿಮಂಡಲದ ಜೀವಾಳ , ಅವರ ಕಾರ್ಯ ಕ್ಷಮತೆಯ ಮೇಲೆ ಇಡೀ ಮಂತ್ರಿಮಂಡಲದ ಕಾರ್ಯ ನಿರ್ವಹಣೆ ಅವಲಂಬಿಸಿರುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನೀತಿಯನ್ನು ನಿರ್ಧರಿಸುವ ಅಧಿಕಾರ ಪ್ರಧಾನ ಮಂತ್ರಿಗಳಿಗೆ ಸೇರಿರುತ್ತದೆ . ಅವರ ವ್ಯಕ್ತಿತ್ವ ಸರ್ಕಾರದ ಕಾರ್ಯ ನಿರ್ವಹಣೆಯಲ್ಲಿ ಪರಿಣಾಮ ಬೀರುತ್ತದೆ . ಮಂತ್ರಿ ಮಂಡಲವು ಒಂದು ತಂಡದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಅವರು ಎಚ್ಚರವಹಿಸಬೇಕು . ಎಲ್ಲಿಯವರೆಗೆ ಮಂತ್ರಿಗಳ ಮೇಲೆ ಅವರಿಗೆ ನಿಯಂತ್ರಣವಿರುತ್ತದೆಯೋ ಅಲ್ಲಿಯವರೆಗೆ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಬಲ್ಲರು .
9 ) ಕೇಂದ್ರ ಸಚಿವ ಸಂಪುಟದ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ .
ರಾಷ್ಟ್ರಪತಿಗಳಿಗೆ ನೆರವು ಮತ್ತು ಸಲಹೆ ನೀಡಲು ಪ್ರಧಾನಿ ನಾಯಕತ್ವದ ಒಂದು ಮಂತ್ರಿಮಂಡಲವಿರುತ್ತದೆ . ರಾಷ್ಟ್ರಪತಿಯು ಈ ಮಂತ್ರಿಮಂಡಲದ ಸಲಹೆಗನುಗುಣವಾಗಿ ಕಾರನಿರ್ವಹಿಸುತ್ತಾರೆ . ಈ ಮಂತ್ರಿಮಂಡಲದ ಕಾರಗಳು ಇಂತಿವೆ .
1 ) ಆಡಳಿತಾತ್ಮಕ ಕಾರ‍್ಯಗಳು : ಭಾರತದಲ್ಲಿ ಮಂತ್ರಿಮಂಡಲ ನೈಜ ಕಾರಾಂಗವಾಗಿ ಕಾರ‍್ಯ ನಿರ್ವಹಿಸುತ್ತದೆ . ರಾಷ್ಟ್ರದ ಆಡಳಿತ ನಿರ್ವಹಣೆಯ ಜವಾಬ್ದಾರಿ ಕ್ಯಾಬಿನೆಟ್‌ದಾಗಿರುತ್ತದೆ . ಇದಕ್ಕಾಗಿ ಕ್ಯಾಬಿನೆಟ್ ಉನ್ನತ ನೇಮಕಾತಿಗಳನ್ನು ಮಾಡುವಲ್ಲಿ ರಾಷ್ಟ್ರಪತಿಗಳಿಗೆ ಸಲಹೆ ನೀಡುತ್ತದೆ .
2 ) ಸಾಣಲೀಯ ಕಾರ‍್ಯಗಳು : ಸಂಸತ್ತಿನ ವೇಳಾ ಪಟ್ಟಿಯನ್ನು ಕ್ಯಾಬಿನೆಟ್ ನಿರ್ಧರಿಸುತ್ತದೆ . ಯಾವ ಮಸೂದೆಯನ್ನು ಮಂಡಿಸಬೇಕು ಮತ್ತು ಚರ್ಚಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಕ್ಯಾಬಿನೆಟ್‌ಗಿದೆ .
3 ) ಸಾಮೂಹಿಕ ಹೊಣೆಗಾರಿಕೆ : ಸಂಸದೀಯ ವ್ಯವಸ್ಥೆಯ ಮೂಲ ತತ್ವವೇ ಸಾಮೂಹಿಕ ಹೊಣೆಗಾರಿಕೆ ಮಂತ್ರಿಮಂಡಲವು ಲೋಕಸಭೆಗೆ ಸಾಮೂಹಿಕ ಜವಾಬ್ದಾರಿಯಾಗಿರುತ್ತದೆ .
2 ) ವೈಯಕ್ತಿಕ ಹೊಣೆಗಾರಿಕೆ : ಪ್ರತಿಯೊಬ್ಬ ಮಂತ್ರಿಯು ತನ್ನ ಇಲಾಖೆಯ ಕಾರ‍್ಯ ನಿರ್ವಹಣೆಗೆ ಸಂಬಂಧಿಸಿದಂತೆ ಶಾಸಕಾಂಗಕ್ಕೆ ಹೊಣೆಯಾಗಿರುತ್ತಾರೆ .
10 ) ರಾಜ್ಯಪಾಲರ ವಿವೇಚನಾ ಅಧಿಕಾರಗಳನ್ನ ವಿವರಿಸಿ .
ನಮ್ಮ ಸಂವಿಧಾನದ 163 ನೇ ವಿಧಿ ಇವರಿಗೆ ವಿವೇಚನಾಧಿಕಾರವನ್ನು ನೀಡಿದೆ . ಮಂತ್ರಿಮಂಡಲದ ಸಲಹೆ ಇಲ್ಲಿದೆ ಚಲಾಯಿಸುವ ಅಧಿಕಾರವೇ ವಿವೇಚನಾಧಿಕಾರ .ಅಂಥಹ ಅಧಿಕಾರಗಳೆಂದರೆ ,
1. ಚುನಾವಣೆಯಲ್ಲಿ ಯಾವುದೇ ನಿರ್ಧಿಷ್ಟ ಪಕ್ಷಕ್ಕೆ ಬಹುಮತ ಸಿಗದಿದ್ದಾಗ ಇವರು ವಿವೇಚಾಧಿಕಾರ ಉಪಯೋಗಿಸಿ ಮುಖ್ಯಮಂತ್ರಿಗಳನ್ನು ನೇಮಿಸುತ್ತಾರೆ .
2. ರಾಜ್ಯ ಸರ್ಕಾರವು ಸಂವಿಧಾನಾತ್ಮಕವಾಗಿ ಕಾರ‍್ಯನಿರ್ವಹಿಸಲು ವಿಫಲವಾಗಿದೆ ಎಂದು ರಾಷ್ಟ್ರಾಧ್ಯಕ್ಷರಿಗೆ ವರದಿ ನೀಡುವ ವಿಷಯದಲ್ಲಿ ವಿವೇಚನಾಧಿಕಾರ ಬಳಸುತ್ತಾರೆ .
3. ರಾಜ್ಯಶಾಸಕಾಂಗ ಅಂಗೀಕರಿಸಿದ ಮಸೂದೆಗೆ ಒಪ್ಪಿಗೆ ಕೊಡುವುದು ರಾಷ್ಟಾಧ್ಯಕ್ಷರ ತೀರ್ಮಾನಕ್ಕೆ ಕಾಯ್ದಿರಿಸುವುದು
4. ವಿಧಾನ ಸಭೆ ವಿಸರ್ಜನೆ ಮಾಡುವಾಗ
5. ರಾಜ್ಯದ ಆಡಳಿತ ಮತ್ತು ಶಾಸನೀಯ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆಯುವ ಅಧಿಕಾರ.
11) ಮುಖ್ಯಮಂತ್ರಿಗಳ ಅಧಿಕಾರ ಮತ್ತು ಪಾತ್ರಗಳನ್ನು ವಿವರಿಸಿ ,
ಜಟ ಮುಖ್ಯಮಂತ್ರಿಗಳು ರಾಜ್ಯದ ಕಾರ್ಯಾಂಗೀಯ ಅಧಿಕಾರದ ಕೇಂದ್ರಬಿಂದು ರಾಜ್ಯಸರ್ಕಾರದ ನೈಜ ಕಾರ‍್ಯನಿರ್ವಹಣಾಧಿಕಾರಿಯಾಗಿರುತ್ತಾರೆ . ಪ್ರಮುಖ ಕಾರಗಳೆಂದರೆ ,
1 ) ಮಂತ್ರಿ ಮಂಡಲ ರಚನೆ : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ , ಅವರು ತಮ್ಮ ಮಂತ್ರಿಮಂಡಲದ ರಚನೆ ಮಾಡುತ್ತಾರೆ . ತಮ್ಮ ಅಗತ್ಯಕ್ಕನುಸಾರವಾಗಿ ಮಂತ್ರಿಗಳಿಗೆ ಖಾತೆಗಳನ್ನು ಹಂಚುವ ಮತ್ತು ಮರು ಹಂಚಿಕೆ ಮಾಡುವ ನಿರ್ವಹಿಸುತ್ತಾರೆ .
2 ) ಮಂತ್ರಿಮಂಡಲದ ಮೇಲೆ ನಿಯಂತ್ರಣ : ಮಂತ್ರಿಮಂಡಲದ ಎಲ್ಲಾ ಸದಸ್ಯರ ಕಾರನಿರ್ವಹಣೆಯನ್ನು ನಿಯಂತ್ರಿಸುವ , ಮೇಲ್ವಿಚಾರಣೆ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗಿದೆ . ತಮ್ಮ ಇಲಾಖೆಯ ಕಾರವಿಧಾನದ ಬಗ್ಗೆ ಮುಖ್ಯ ಮಂತ್ರಿಗಳಿಗೆ ಮಂತ್ರಿಗಳು ಮಾಹಿತಿ ನೀಡಬೇಕಾಗುತ್ತದೆ .
3 ) ಮಂತ್ರಿಮಂಡಲ ಮತ್ತು ರಾಜ್ಯಪಾಲರ ನಡುವೆ ಸೇತುವೆ : ಮಂತ್ರಿಮಂಡಲದ ನಿರ್ಣಯಗಳನ್ನು ಆಗಿಂದಾಗ್ಗೆ ರಾಜ್ಯಪಾಲರಿಗೆ ತಿಳಿಸುವುದು ಹಾಗೂ ರಾಜ್ಯಾಡಳಿತಕ್ಕೆ ಸಂಬಂಧಿಸುವಂತೆ ಮಾಹಿತಿಗಳನ್ನು ಒದಗಿಸುವುದು ಮುಖ್ಯಮಂತ್ರಿ ಕಾರ‍್ಯವಾಗಿದೆ .
4 ) ಮಂತ್ರಿ ಮಂಡಲದ ನಾಯಕ : ಮುಖ್ಯಮಂತ್ರಿಗಳು ಕ್ಯಾಬಿನೆಟ್ ನಾಯಕನಾಗಿ , ಕ್ಯಾಬಿನೆಟ್‌ನ ಎಲ್ಲಾ ಸಭೆಗಳು ಅವರ ನೇತೃತ್ವದಲ್ಲಿ ನಡೆಯುತ್ತದೆ .
5 ) ನೇಮಕಾತಿ ಅಧಿಕಾರ : ರಾಜ್ಯದ ಉನ್ನತ ಹುದ್ದೆಗೆ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ರಾಜ್ಯಪಾಲರು ನೇಮಿಸುತ್ತಾರೆ .
6 ) ಸದನದ ನಾಯಕ : ಮುಖ್ಯಮಂತ್ರಿಗಳು ಸದನದ ನಾಯಕರಾಗಿರುತ್ತಾರೆ .
12 ) ರಾಜ್ಯ ಸಚಿವ ಸಂಪುಟದ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ .
ಸಂವಿಧಾನದ 163 ನೇ ವಿಧಿಯನ್ವಯ ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಮುಖ್ಯಮಂತ್ರಿಯ ನೇತೃತ್ವದ ಮಂತ್ರಿಮಂಡಲವಿರಬೇಕು . ಈ ಮಂತ್ರಿಮಂಡಲ ರಾಜ್ಯ ಸರ್ಕಾರದ ಆಡಳಿತ ಯಂತ್ರದ ಅತಿ ಪ್ರಮುಖ ಮತ್ತು ಅಧಿಕಾರಯುತ ಬಾಗವಾಗಿ ಕಾರನಿರ್ವಹಿಸುತ್ತದೆ . ಅದರ ಕಾರ‍್ಯಗಳೆಂದರೆ ,
1 ) ಆಡಳಿತಾತ್ಮರ ಕಾರ‍್ಯಗಳು : ರಾಜ್ಯಾಡಳಿತ ನಿರ್ವಹಣೆ ಮಂತ್ರಿಮಂಡಲದ ಜವಾಬ್ದಾರಿ . ರಾಜ್ಯಾಡಳಿತಕ್ಕೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳುವ ಅಂತಿಮ ಅಧಿಕಾರ ಮಂತ್ರಿಮಂಡಲಕ್ಕಿದೆ .
2 ) ಶಾಸನೀಯ ಕಾರ‍್ಯಗಳು : ಮಂತ್ರಿಮಂಡಲದ ಸದಸ್ಯರು ಶಾಸನ ರಚಿಸುವ , ಚರ್ಚಿಸುವ ಮತ್ತು ಅದನ್ನ ಅಂಗೀಕಾರಮಾಡುವ ಎಲ್ಲಾ ಕಾವ್ಯಗಳಲ್ಲೂ ಭಾಗವಹಿಸುತ್ತಾರೆ .
3 ) ಹಣಕಾಣು ಕಾರ್ಯ : ರಾಜ್ಯದ ವಾರ್ಷಿಕ ಮುಂಗಡ ಪತ್ರವನ್ನ ತಯಾರಿಸುವ , ಮಂಡಿಸುವ ಮತ್ತು ಅದಕ್ಕೆ ಅಂಗೀಕಾರ ಪಡೆಯುವ ಅಧಿಕಾರ ಮಂತ್ರಿಮಂಡಲಕ್ಕಿದೆ .
4 ) ಜವಾಬ್ದಾರಿ : ಮಂತ್ರಿಮಂಡಲವು ಸಾಮೂಹಿಕ ಮತ್ತು ವೈಯಕ್ತಿಕ ಹೊಣೆಗಾರಿಕೆಯನ್ನು ಹೊಂದಿದೆ .
5 ) ಸಮನ್ವಯತೆ : ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ತರುವುದು ಕ್ಯಾಬಿನಿಟ್‌ನ ಜವಾಬ್ದಾರಿಯಾಗಿರುತ್ತದೆ.
6 ) ಗೌಪ್ಯತೆ : ಮಂತ್ರಿಮಂಡಲದ ಸ್ವಾತಂತ್ರ ಕಾರನಿರ್ವಹಣೆಗೆ ಗೌಪ್ಯತೆ ಅವಶ್ಯಕ ಕ್ಯಾಬಿನೆಟ್‌ನ ಕಾರಗಳು ಸದಾ ಗೌಪ್ಯತೆಯಿಂದ ಕೂಡಿರಬೇಕು .
IV . ಹತ್ತು ಅಂಕದ ಪ್ರಶ್ನೆಗಳು :
1 ) ಕಾರ‍್ಯಾಂಗ ಎಂದರೇನು ? ಅದರ ಪ್ರಾಮುಖ್ಯತೆಯನ್ನು ವಿವರಿಸಿ .
ಕಾನೂನುಗಳನ್ನು ಅನುಷ್ಟಾನಗೊಳಿಸುವ ಸರ್ಕಾರದ ಎರಡನೆಯ ಹಂತವೇ ಕಾರ್ಯಾಂಗ , ಇದು ರಾಷ್ಟ್ರದ ಸಮಸ್ತ ಆಡಳಿತವನ್ನ ನಿರ್ವಹಿಸುತ್ತದೆ . ಕಾರ‍್ಯಾಂಗ ಎರಡು ರೀತಿಯಲ್ಲಿ ಅರ್ಥೈಸಲಾಗುತ್ತದೆ . ವಿಶಾಲ ಅರ್ಥದಲ್ಲಿ ಕಾರ‍್ಯಾಂಗ ರಾಷ್ಟ್ರದ ಪ್ರಮುಖರು , ಅವರ ಸಲಹೆಗಾರರು ಹಾಗು ಉನ್ನತ ಮತ್ತು ಕೆಳಹಂತದ ಅಧಿಕಾರಿಗಳ ಸಮೂಹವನ್ನು ಒಳಗೊಂಡಿರುತ್ತದೆ . ಸಂಕುಚಿತ ಅರ್ಥದಲ್ಲಿ ರಾಷ್ಟ್ರದ ಮುಖ್ಯಸ್ಥರು ಮತ್ತು ಅವರ ಸಲಹೆಗಾರರನ್ನ ಮಾತ್ರ ಒಳಗೊಂಡಿರುವುದನ್ನು ಕಾರ‍್ಯಾಂಗ ಎನ್ನುತ್ತೇವೆ .
ಕಾರ‍್ಯಾಂಗದ ಪ್ರಾಮುಖ್ಯತೆಯು ಕೆಳಗಿನಂತಿದೆ .
1. ಕಾನೂನಿನ ಅನುಷ್ಠಾನ : ಸರ್ಕಾರದ ನೀತಿಯನ್ನ ಸಾರಗತಗೊಳಿಸುವ , ಶಾಸಕಾಂಗ ರಚಿಸಿದ ಕಾನೂನನ್ನು ಜಾರಿಗೊಳಿಸುವ ಮುಖ್ಯ ಕಾವ್ಯವನ್ನು ಕಾರಾಂಗ ನಿರ್ವಹಿಸುತ್ತದೆ . ಆಡಳಿತದಲ್ಲಿ ದಕ್ಷತೆ ತರಬೇಕಾದರೆ ಸರ್ಕಾರದ ಸಮರ್ಪಕ ಅನುಷ್ಠಾನಕ್ಕೆ ಕಾರ್ಯನಿರ್ವಹಣೆ ಅಗತ್ಯ ಸರ್ಕಾರದ ನೀತಿಯನ್ನು ಪ್ರಾಮಾಣಿಕವಾಗಿ ತಂದಾಗ ಮಾತ್ರ ಪ್ರಜೆಗಳಿಗೆ ಅವುಗಳು ತಲುಪಲು ಸಾಧ್ಯ .
2 ) ಆಧುನಿಕ ರಾಜ್ಯದಲ್ಲಿ ಕಾರ್ಯಾಂಗದ ಶಾಸ್ತ್ರ : ಸುಖೀರಾಜ್ಯ ಮತ್ತು ಉದಾರವಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಗಳು ಕಾರ್ಯಾಂಗದ ಪಾತ್ರ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿವೆ .
3 ) ನಾಯಕತ್ವ : ಕಾರ‍್ಯಾಂಗವು ರಾಷ್ಟ್ರಕ್ಕೆ ನಾಯಕತ್ವವನ್ನು ನೀಡುತ್ತದೆ . ಪ್ರಜೆಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕಾರ‍್ಯಾಂಗದ ಮೊರೆ ಹೋಗುತ್ತಾರೆ ದೂರದೃಷ್ಠಿಯುಳ್ಳ , ಸಂಪನ್ನ ಮತ್ತು ಚೈತನ್ಯ ಶೀಲ ಕಾರ‍್ಯಾಂಗ ರಾಷ್ಟ್ರವನ್ನ ಸಮಸ್ಯೆಗಳಿಂದ ಮುಕ್ತಗೊಳಿಸಿ ಪ್ರಗತಿ ಸಾಧಿಸಲು ನೆರವು ನೀಡುತ್ತದೆ .
4 ) ಭಾರತದಲ್ಲಿ ಕಾರ‍್ಯಾಂಗ : ಭಾರತವು ಸಂಸದೀಯ ಸರ್ಕಾರವನ್ನ ಹೊಂದಿದೆ ಈ ಪದ್ಧತಿಯಲ್ಲಿ ರಾಷ್ಟ್ರದ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರು ಕಾರಾಂಗೀಯ ಅಧಿಕಾರವನ್ನು ಹೊಂದಿರುತ್ತಾರೆ . ರಾಷ್ಟ್ರದ ಮುಖ್ಯಸ್ಥರಾದ ರಾಷ್ಟ್ರಪತಿಗಳು ನಾಮ ಮಾತ್ರ ಅಧಿಕಾರವನ್ನು ಹೊಂದಿದ್ದು ಸರ್ಕಾರದ ಮುಖ್ಯಸ್ಥರಾದ ಪ್ರಧಾನಿ ಮತ್ತು ಅವರ ಮಂತ್ರಿಂಡಲವು ನೈಜ ಅಧಿಕಾರವನ ಹೊಂದಿರುತ್ತದೆ . ರಾಜ್ಯಗಳಲ್ಲಿ ರಾಜ್ಯಪಾಲರು ನಾಮಮಾತ್ರ ಕಾರಾಂಗದ ಮುಖ್ಯಸ್ಥರಾಗಿದ್ದು ಮುಖ್ಯಮಂತ್ರಿ & ಅವರ ಮಂತ್ರಿಮಂಡಲವು ನೈಜ ಕಾರಾಂಗವಾಗಿ ಕಾರ ನಿರ್ವಹಿಸುತ್ತದೆ .
2 ) ಭಾರತದ ರಾಷ್ಟ್ರಪತಿಗಳ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ .
ಭಾರತದ ಸಂಸದೀಯ ಕಾರಾಂಗ ವ್ಯವಸ್ಥೆಯಲ್ಲಿ ರಾಷ್ಟ್ರಪತಿಯ ಸ್ಥಾನವು ರಾಷ್ಟ್ರದ ಗೌರವ , ಘನತೆ ಹಾಗೂ ಗಾಂಭೀರವನ್ನ ಪ್ರತಿನಿಧಿಸುವ ಸ್ಥಾನವಾಗಿದೆ . ಸಂವಿಧಾನದ 100 ಕ್ಕೂ ಹೆಚ್ಚು . ವಿಧಿಗಳಲ್ಲಿ ಹಾಗೂ 3 ಅನುಸೂಚಿಗಳಲ್ಲಿ ಪೂರ್ಣವಾಗಿ / ಭಾಗಶಃ ರಾಷ್ಟ್ರಪತಿಯ ಅಧಿಕಾರ ಮತ್ತು ಕಾರಗಳಿಗೆ ಸಂಬಂಧಿಸಿದ ಉಲ್ಲೇಖವಿದೆ . ಇವರ ಅಧಿಕಾರಗಳನ್ನು ಕೆಳಗಿನಂತೆ ಕಾಣಬಹುದು .
1 ) ಶಾಸನೀಯ ಅಧಿಕಾರ : ರಾಷ್ಟ್ರಪತಿ ಸಂಸತ್ತಿನ ಸದಸ್ಯರಲ್ಲದಿದ್ದರೂ ಇವರು ಸಂಸತ್‌ನ ಒಂದು ಭಾಗವೆಂದು ಪರಿಗಣಿಸಲಾಗಿದೆ .
ಅ). ಸಂಸತ್‌ನ ಅಧಿವೇಶನ ಕರೆಯುವ , ಮುಂದೂಡುವ ಮತ್ತು ಲೋಕಸಭೆಯನ್ನ ವಿಸರ್ಜಿಸುವ ಅಧಿಕಾರ .
ಆ). ನೂತನ ಪಾರ್ಲಿಮೆಂಟಿನ ಪ್ರಥಮ ಅಧಿವೇಶನ ಮತ್ತು ಪ್ರತೀ ವರ್ಷ ಮೊದಲ ಅಧಿವೇಶನದಲ್ಲಿ ಪಾರ್ಲಿಮೆಂಟನ್ನು ಉದ್ದೇಶಿಸಿ ಭಾಷಣ ಮಾಡುವ ಅಧಿಕಾರ ,
ಇ) ಸಾಹಿತ್ಯ , ಕಲೆ , ವಿಜ್ಞಾನ ಮತ್ತು ಸಮಾಜಸೇವೆಗಳಲ್ಲಿ ವಿಶೇಷ ಜ್ಞಾನ ಹೊಂದಿರುವ 12 ಮಂದಿಯನ್ನ ರಾಜ್ಯಸಭೆಗೆ ನಾಮಕರಣ ಮಾಡುವ ಅಧಿಕಾರ .
ಈ ) ಲೋಕ ಸಭೆಯಲ್ಲಿ ಆಂಗ್ಲೋ – ಇಂಡಿಯನ್ ಜನಾಂಗಕ್ಕೆ ಸಾಕಷ್ಟು ಪ್ರಾತಿನಿಧ್ಯ ದೊರಕದಿದ್ದಾಗ ಇಬ್ಬರು ಆಂಗ್ಲೋ – ಇಂಡಿಯನನ್ನ ನಾಮಕರಣ ಮಾಡುವ ಅಧಿಕಾರ .
ಉ ) ನಿರ್ಧಿಷ್ಟ ಮಸೂದೆಗೆ ಸಂಬಂಧಿಸಿದಂತೆ ಉಭಯ ಸದನಗಳ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ ಜಂಟಿ ಅಧಿವೇಶನ ಕರೆಯುವ ಅಧಿಕಾರ .
ಊ ) ಸಂಸತ್‌ನಲ್ಲಿ ಅಂಗೀಕಾರವಾದ ಮಸೂದೆಗಳು ಜಾರಿಗೆ ಬರಲು ರಾಷ್ಟ್ರಪತಿ ಒಪ್ಪಿಗೆ ಬೇಕು .
ಋ ) ಶಾಸಕಾಂಗವು ಅಧಿವೇಶನದಲ್ಲಿ ಇಲ್ಲದಿದ್ದಾಗ ತುರ್ತುಪರಿಸ್ಥಿತಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ .
ಎ ) ಕೆಲವು ವಿಷಯಗಳ ಬಗ್ಗೆ ಕಾನೂನು ಮಾಡಲು ರಾಷ್ಟ್ರಾಧ್ಯಕ್ಷರ ಪೂರ್ವ ಸಮ್ಮತಿ ಅಗತ್ಯ .
2 ) ಕಾರ್ಯಾಂಗೀಯ ಅಧಿಕಾರ : ರಾಷ್ಟ್ರಪತಿ ರಾಷ್ಟ್ರದ ಆಡಳಿತದ ಮುಖ್ಯಸ್ಥನಾಗಿದ್ದು ರಾಷ್ಟ್ರದ ಆಡಳಿತವು ಈತನ ಹೆಸರಿನಲ್ಲಿ ನಡೆಯುತ್ತದೆ .
ಅ ) ಪ್ರಧಾನಿ ಮತ್ತು ಆತನ ಸಲಹೆ ಮೇರೆಗೆ ಮಂತ್ರಿಗಳನ್ನು ನೇಮಿಸುವುದು .
ಆ ) ಇವರು ಮುಖ್ಯ ಕಾರ ನಿರ್ವಾಹಕರಾಗಿರುವುದರಿಂದ ಪ್ರತಿಯೊಂದು ಸರ್ಕಾರದ ಪ್ರಕಟಣಿಯ ಅವರ ನಾಮಾಂಕಿತದಲ್ಲಿ ಪ್ರಕಟವಾಗುತ್ತವೆ .
ಇ ) ರಾಜ್ಯದ ಉನ್ನತಾಧಿಕಾರಿಗಳನ್ನು ನೇಮಿಸುತ್ತಾರೆ .
ಈ ) ಸರ್ಕಾರದ ಉನ್ನತಾಧಿಕಾರಿಗಳನ್ನು ಅಧಿಕಾರದಿಂದಲೂ ತೆಗೆಯುತ್ತಾರೆ .
ಉ ) ಪರ ರಾಷ್ಟ್ರಗಳಿಗೆ ರಾಜಬಾರಿನೇಮಕ , ವಿದೇಶಿ ರಾಯಬಾರಿಗಳಿಗೆ ಸ್ವಾಗತ , ಸಮರಘೋಷಣೆ , ಶಾಂತಿ ಸಂಧಾನಗಳ ಕಾರ‍್ಯ
ಋ ) ಕಾರಾಂಗದ ಆಜ್ಞೆಗಳೆಲ್ಲವೂ ಇವರ ಹೆಸರಿನಲ್ಲೇ ಹೊರಬೀಳುತ್ತವೆ . ಮೇರೆಗೆ ಚಲಾಯಿಸುತ್ತಾರೆ . ಈ ಎಲ್ಲಾ ಅಧಿಕಾರಗಳೆಲ್ಲವನ್ನೂ ರಾಷ್ಟ್ರಾಧ್ಯಕ್ಷರು ಮಂತ್ರಿಮಂಡಲದ ಸಲಹೆ
3) ಹಣಕಾಸು ಅಧಿಕಾರ :
ಅ ) ವಾರ್ಷಿಕ ಅಯವ್ಯಯದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಸಂಸತ್ತಿನ ಮುಂದೆ ಮಂಡಿಸುವಂತೆ ವ್ಯವಸ್ಥೆ ಮಾಡುತ್ತಾರೆ .
ಆ ) ರಾಷ್ಟ್ರಪತಿಗಳ ಒಪ್ಪಿಗೆ ಇಲ್ಲದೆ ಹಣಕಾಸಿನ ಬೇಡಿಕೆಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲ .
ಇ ) ಕಂಟ್ರೋಲರ್ ಮತ್ತು ಆಡಿಟರ್‌ಜನರಲ್ ಸಿದ್ದಪಡಿಸಿದ ಲೆಕ್ಕಪತ್ರದ ವರದಿ , ರಾಷ್ಟ್ರದ ಆರ್ಥಿಕ ಸ್ಥಿತಿಗಳ ವಾರ್ಷಿಕ ವರದಿ , ಹಣಕಾಸು ಆಯೋಗದ – ವರದಿ ಕೇಂದ್ರ ಲೋಕಸೇವಾ ಆಯೋಗದ ವರದಿ ಇವುಗಳನ್ನು ರಾಷ್ಟ್ರಪತಿಯ ಶಿಫಾರಸ್ಸಿನ ಮೇರೆಗೆ ಸಂಸತ್ತಿನಲ್ಲಿ ಮಂಡಿಸಲಾಗುವುದು .
ಈ ) ಭಾರತದ ಸಂಚಿತ ನಿಧಿ ಇವರ ಅಧೀನದಲ್ಲಿರುತ್ತದೆ .
4 ) ನ್ಯಾಯಿಕ ಅವಿಕಾರಗಳು : –
ಅ ) ನ್ಯಾಯಾಲಯಗಳು ಅಪರಾಧಿಗಳಿಗೆ ಕೊಟ್ಟಿರುವ ಶಿಕ್ಷೆಯನ್ನ ಪಡೆಯುವ ಮುಂದೂಡುವ , ಕಡಿಮೆ ಮಾಡುವ ಬದಲಾಯಿಸುವ ಇಲ್ಲವೆ ಅಪರಾಧಿಗೆ ಸಂಪೂರ್ಣವಾಗಿ ಕ್ಷಮಾಧಾನ ಮಾಡುವ ಅಧಿಕಾರ .
ಆ ) ಸರ್ವೋಚ್ಛನ್ಯಾಯಾಲಯದ ಮುಖ್ಯನ್ಯಾಯಾಧೀಶ ಮತ್ತು ಇತರ ನ್ಯಾಯಾಧೀಶರು ಹಾಗೂ ಉಚ್ಛನ್ಯಾಯಾಲಯಗಳ ಮುಖ್ಯನ್ಯಾಯಾಧೀಶ ಮತ್ತು ಇತರ ನ್ಯಾಯಾಧೀಶರನ್ನು ನೇಮಕ ಮಾಡುವುದು .
ಇ ) ಕಾಯ್ದೆಯ ಸಲಹೆಗಾಗಿ ಅಟಾರ್ನಿಜನರಲ್‌ರವರನ್ನ ನೇಮಿಸುವುದು .
ಈ ) ಸಾರ್ವಜನಿಕ ಮಹತ್ವದ ವಿಷಯದಲ್ಲಿ ಕಾನೂನಿನ ಪ್ರಶ್ನೆ ಉದ್ಭವಿಸಿದರೆ , ಸರ್ವೋಚ್ಛನ್ಯಾಯಾಲಯದ ಸಲಹೆ ಪಡೆಯುವುದು .
5 ) ಮಿಲಿಟಲಿ ಅಧಿಕಾರ :
ಅ ) ಸಂವಿಧಾನದ 53 ( 2 ) ನೇ ವಿಧಿ ಅನ್ವಯ ರಾಷ್ಟ್ರಪತಿ ಭಾರತದ ರಕ್ಷಣಾ ಪಡೆಗಳ ಮಹಾದಂಡನಾಯಕರಾಗಿ ಕಾರನಿರ್ವಹಿಸುತ್ತಾರೆ .
ಆ ) ಭೂಸೇನೆ , ನೌಕಾಸೇನೆ ಮತ್ತು ವಾಯುಸೇನೆಗಳ ದಂಡನಾಯಕರನ್ನು – ನೇಮಿಸುತ್ತಾರೆ .
ಇ ) ಸಮರ ಘೋಷಿಸುವ , ಶಾಂತಿ ಕರೆ ನೀಡುವ ಅಧಿಕಾರ .
6 ) ತುರ್ತುಪರಿಸ್ಥಿತಿ ಅಧಿಕಾರಿಗಳು :
ನಮ್ಮ ಸಂವಿಧಾನದ 18 ನೇ ಭಾಗದಲ್ಲಿನ 352 ರಿಂದ 360 ರ ವರೆಗಿನ 9 ವಿಧಿಗಳು ರಾಷ್ಟ್ರಪತಿ ಘೋಷಿಸಬಹುದಾದ 3 ಬಗೆಯ : ತುರ್ತುಪರಿಸ್ಥಿ ಅಧಿಕಾರವನ್ನು ತಿಳಿಸುತ್ತದೆ . ಅವುಗಳೆಂದರೆ
ಎ ) ರಾಷ್ಟ್ರೀಯ ತುರ್ತುಪರಿಸ್ಥಿತಿ ( 352 ನೇ ವಿಧಿ )
ಬಿ ) ರಾಜ್ಯ ತುರ್ತುಪರಿಸ್ಥಿತಿ ( 346 ನೇ ವಿಧಿ )
ಸಿ ) ಆರ್ಥಿಕ ತುರ್ತುಪರಿಸ್ಥಿತಿ ( 360 ನೇ ವಿಧಿ )
3 ) ಭಾರತದ ಉಪರಾಷ್ಟ್ರಪತಿಗಳ ಬಗ್ಗೆ ಟಿಪ್ಪಣಿ ಬರೆಯಿರಿ .
ಸಂವಿಧಾನದ 63 ನೇ ವಿಧಿ ಉಪರಾಷ್ಟ್ರಪತಿ ಹುದ್ದೆಗೆ ಅವಕಾಶ ನೀಡಿದೆ . ಇವರು ವಾಸ್ತವವಾಗಿ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ಕಾರ‍್ಯನಿರ್ವಹಿಸುತ್ತಾರೆ .
ಅರ್ಹತೆಗಳು :
1. ಭಾರತದ ಪೌರರಾಗಿರಬೇಕು .
2. 35 ವರ್ಷ ವಯಸ್ಸಾಗಿರಬೇಕು .
3. ಯಾವುದೇ ಲಾಭದಾಯಕ ಹುದ್ದೆಹೊಂದಿರಬಾರದು .
4. ರಾಜ್ಯಸಭೆಗೆ ಆಯ್ಕೆಯಾಗಲು ಬೇಕಾದ ಇತರೆ ಅರ್ಹತೆಗಳನ್ನ ಹೊಂದಿರಬೇಕು .
ಅಧಿಕಾರವಧಿ :
ಸಂವಿಧಾನದ 67 ನೇ ವಿಧಿ ಅನ್ವಯ ಇವರ ಅಧಿಕಾರವಧಿ 5 ವರ್ಷಗಳು ಅವಧಿ ಮುಗಿದ ನಂತರ ಪುನಃ ಸ್ಪರ್ಧಿಸಲು ಅವಕಾಶವಿದೆ .
ಪದಚ್ಯುತಿ :
ಸಂವಿಧಾನದ ಉಲ್ಲಂಘನೆಗಾಗಿ ಮಹಾಭಿಯೋಗ ‘ ವಿಧಾನದ ಮೂಲಕ ಇವರನ್ನು ಪದಚ್ಯುತಿಗೊಳಿಸಬಹುದು . ರಾಜ್ಯಸಭೆ ಈ ನಿರ್ಣಯವನ್ನು ಮಂಡಿಸಿ 14 ದಿನಗಳ ಮುಂಚಿತವಾಗಿ ನೋಟೀಸ್ ನೀಡಿದ ನಂತರ ಬಹುಮತದ ಮೂಲಕ ಅಂಗೀಕರಿಸಿ ನಂತರ ಲೋಕಸಭೆಗೆ ಕಳುಹಿಸಲಾಗುತ್ತದೆ . ಲೋಕಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಅವರನ್ನ ಪದಚ್ಯುತಿಗೊಳಿಸಬಹುದು . ಭಾರತದಲ್ಲೂ ಈವರೆಗೆ ಯಾವ ಉಪರಾಷ್ಟ್ರಪತಿಯವರನ್ನೂ ಪದಚ್ಯುತಿಗೊಳಿಸಿಲ್ಲ .
ವೇತನ :
ಇವರು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ತಿಂಗಳಿಗೆ ರೂ 1,25000 / ವೇತನ ಪಡೆಯುತ್ತಾರೆ . ರಾಷ್ಟ್ರಾಧ್ಯಕ್ಷರ ಗೈರು ಹಾಜರಿಯಲ್ಲಿ ಹಂಗಾಮಿ ರಾಷ್ಟ್ರಾಧ್ಯಕ್ಷರಾಗಿ ಕಾರನಿರ್ವಹಿಸುವಾಗ ರಾಷ್ಟ್ರಪತಿಗಳಿಗಿರುವ ಸಂಬಳ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಾರೆ .
ಅಧಿಕಾರ ಮತ್ತು ಕಾರ್ಯಗಳು :
ಭಾರತ ಸಂವಿಧಾನವು ರಾಷ್ಟ್ರಪತಿಯ ಸ್ಥಾನವು ತೆರವಾದರೆ , ಕೂಡಲೇ ತುಂಬುವ ಉದ್ದೇಶದಿಂದ ಉಪರಾಷ್ಟ್ರಪತಿಯ ಸ್ಥಾನಕ್ಕೂ ಅವಕಾಶ ಕಲ್ಪಿಸಿದೆ . ಇವರ ಕಾವ್ಯಗಳು ಕೆಳಗಿನಂತಿವೆ .
1 ) ರಾಜ್ಯಸಭೆಯ ಪದಧಿಮಿತ್ತ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ : ಭಾರತದ ಉಪರಾಷ್ಟ್ರಗಳು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ಕಾರನಿರ್ವಹಿಸುತ್ತಾರೆ , ರಾಜ್ಯಸಭೆಯ ಕಾರಕಲಾಪಗಳನ್ನು ನಿಯಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವ ಮತ್ತು ಅದರ ಘನತೆಯನ್ನು ಕಾಪಾಡುವ ಹೊಣೆ ಅವರದಾಗಿರುತ್ತದೆ . ರಾಜ್ಯ ಸಭೆಯ ಕಲಾಪವನ್ನು ಮುಂದೂಡುವ , ಸದಸ್ಯರ ಹಾಜರಾತಿ ಕೊರತೆ ಇದ್ದಾಗ ಸಭೆಯ ಕಲಾಪವನ್ನು ರದ್ದುಗೊಳಿಸುವ ಅಧಿಕಾರ ಅವರಿಗಿದೆ ಸಭೆಯ ಸದಸ್ಯರ ಹಕ್ಕು ಬಾದ್ಯತೆಗಳನ್ನು ರಕ್ಷಿಸುವ ಹೊಣೆಗಾರಿಕೆ ಉಪರಾಷ್ಟ್ರಪತಿಗಳಿವೆ .
2 ) ಹಂಗಾಮಿ ರಾಷ್ಟ್ರಪತಿಗಳಾ ಕಾರ‍್ಯನಿರ್ವಹಣೆ : ಸಂವಿಧಾನದ 65 ನೇ ವಿಧಿಯು ರಾಷ್ಟ್ರಪತಿಗಳ ಸ್ಥಾನ ಮರಣ , ರಾಜಿನಾಮೆ ಬೇರೆ ಯಾವುದೇ ಕಾರಣದಿಂದ ತೆರವಾದಾಗ ಉಪರಾಷ್ಟ್ರಪತಿಗಳು ಹಂಗಾಮಿಯಾಗಿ ಕಾವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ . ಹೊಸ ರಾಷ್ಟ್ರಪತಿಗಳು ಆಯ್ಕೆಯಾಗುವವರೆಗೆ ಅವರು ಕಾರನಿರ್ವಹಿಸುತ್ತಾರೆ .
4 ) ಭಾರತದ ಪ್ರಧಾನ ಮಂತ್ರಿಯ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ .
ಪ್ರಧಾನಿಯು ಸರ್ಕಾರದ ಮುಖ್ಯಸ್ಥರು , ರಾಷ್ಟ್ರಪತಿಗಳ ಸಲಹೆಗಾರರು , ಮಂತ್ರಿಮಂಡಲದ ಮುಖ್ಯಸ್ಥರು ಹಾಗೂ ಸಂಸತ್ತಿನಲ್ಲಿ ತಮ್ಮ ಪಕ್ಷದ ನಾಯಕರಾಗಿರುವುದರ ಮೂಲಕ ಭಾರತ ಸರ್ಕಾರದ ಕಾರಾಂಗೀಯ ಕಾವ್ಯಗಳನ್ನು ವಾಸ್ತವವಾಗಿ ಅವರು ನಿರ್ವಹಿಸುತ್ತಾರೆ .
1 ) ಮಂತ್ರಿ ಮಂಡಲದ ರಚನೆ : ಪ್ರಧಾನಿ ಅಧಿಕಾರ ವಹಿಸಿಕೊಂಡ ನಂತರ ಮಾಡಬೇಕಾದ ಮೊದಲ ಕೆಲಸ ಮಂತ್ರಿಮಂಡಲದ ರಚನೆ ಮಂತ್ರಿಮಂಡಲವನ್ನು ರಚಿಸುವಾಗ ವಿವಿಧ ಧರ್ಮಗಳಿಗೆ , ರಾಜ್ಯಗಳಿಗೆ ಮತ್ತು ವರ್ಗಗಳಿಗೆ ತಮ್ಮ ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯ ನೀಡಬೇಕಾಗುತ್ತದೆ . ಹಾಗೆಯೇ ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳ ಚಾರಿತ್ರ್ಯ , ಆಡಳಿತಾನುಭವ ಸಾಮರ್ಥ್ಯ ಹಾಗೂ ಹಿನ್ನಲೆಗಳನ್ನು ಪರಿಗಣಿಸಬೇಕಾಗುತ್ತದೆ .
2 ) ಮಂತ್ರಿಮಂಡಲದ ಮೇಲೆ ನಿಯಂತ್ರಣ : ಪ್ರಧಾನ ಮಂತ್ರಿಗಳು ತಮ್ಮ ಮಂತ್ರಿಮಂಡಲದ ಸದಸ್ಯರಿಗೆ ಖಾತೆಗಳನ್ನ ಹಂಚುವ , ಮರುಹಂಚುವ ಕಾರಗಳನ್ನು ಅಸಮರ್ಥರೆನಿಸಿದರೆ ಅಥವಾ ಅವರ ಕಾರ ತೃಪ್ತಿಕರವಾಗಿಲ್ಲ ಎಂದೆನಿಸಿದರೆ ನಿರ್ವಹಿಸುತ್ತಾರೆ . ಯಾವುದೇ ಒಬ್ಬ ಮಂತ್ರಿ ತಮ್ಮ ಕಾವ್ಯವನ್ನು ನಿರ್ವಹಿಸಲು ರಾಜೆನಾಮೆ ಕೇಳಿ ಪಡೆಯುವ ಅಧಿಕಾರ ಪ್ರಧಾನಿಗಿದೆ .
3 ) ಮಂತ್ರಿಮಂಡಲದ ನಾಯಕ : ಪ್ರಧಾನ ಮಂತ್ರಿಗಳು ಮಂತ್ರಿಮಂಡಲದ ನಾಯಕರಾಗಿ ಕಾರನಿರ್ವಹಿಸುತ್ತಾರೆ . ಕ್ಯಾಬಿನೆಟ್‌ನ ಸಭೆಯನ್ನು ಕರೆಯುವ ಅಧಿಕಾರ ಹಾಗು ಮಂತ್ರಿಮಂಡಲದ ಎಲ್ಲಾ ಮಂತ್ರಾಲಯಗಳ ಕಾವ್ಯಗಳನ್ನು ಸಮನ್ವಯಗೊಳಿಸುವ ಹೊಣೆಗಾರಿಕೆ ಅವರದ್ದು ಕ್ಯಾಬಿನೆಟ್‌ನ ಎಲ್ಲಾ ನಿರ್ಣಯಗಳನ್ನು ಪ್ರಧಾನಿಯ ಅಧ್ಯಕ್ಷತೆಯಲ್ಲೇ ತೆಗೆದುಕೊಳ್ಳಲಾಗುತ್ತದೆ . ಮಂತ್ರಿಮಂಡಲದಲ್ಲಿನ ಭಿನ್ನಭಿಪ್ರಾಯಗಳನ್ನು ತೊಡೆದು ಹಾಕಿ ಒಂದು ತಂಡದಂತೆ ಕಾರನಿರ್ವಹಿಸಲು ಪ್ರೇರಣೆ ನೀಡುವ ಜವಾಬ್ದಾರಿ ಅವರದಾಗಿರುತ್ತದೆ . ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಬೇಕಾದ ವಿಷಯಗಳ ಪಟ್ಟಿ ತಯಾರಿಸುವ ಮತ್ತು ಅದರಂತೆ ಕಾವ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ನಿಯಂತ್ರಣಾಧಿಕಾರ ಅವರದಾಗಿರುತ್ತದೆ .
4 ) ರಾಷ್ಟ್ರಪತಿ ಮತ್ತು ಕ್ಯಾಬಿನೆಟ್ ನಡುವೆ ಸೇತುವೆ : ರಾಷ್ಟ್ರಪತಿ ಮತ್ತು ಕ್ಯಾಬಿನೆಟ್‌ನ ನಡುವೆ ಸಂಬಂಧ ಜೋಡಿಸುವ ಪ್ರಮುಖ ಸಂಪರ್ಕ ಸೇತುವೆಯಾಗಿ ಪ್ರಧಾನಿ ಕಾವ್ಯ ನಿರ್ವಹಿಸುತ್ತಾರೆ . ದೇಶದ ಸಮಸ್ಯೆಗಳ ಬಗ್ಗೆ ರಾಷ್ಟ್ರಪತಿಯೊಡನೆ ಸಮಾಲೋಚನೆ ನಡೆಸುವವರೂ ಪ್ರಧಾನಿಯೇ ರಾಷ್ಟ್ರಪತಿಗೆ ಕ್ಯಾಬಿನೆಟ್‌ನ ನಿರ್ಣಯಗಳನ್ನು ಪ್ರಧಾನಿ ತಿಳಿಸುತ್ತಾರೆ . ರಾಷ್ಟ್ರಾಧ್ಯಕ್ಷರ ಅಭಿಪ್ರಾಯಗಳನ್ನ ತನ್ನ ಸಹದ್ಯೋಗಿಗಳಿಗೆ ತಿಳಿಸುತ್ತಾರೆ .
5 ) ಸಂಸತ್ತಿನ ನಾಯಕ : ಸಾಮಾನ್ಯವಾಗಿ ಪ್ರಧಾನಮಂತ್ರಿಗಳು ಯಾವ ಸದನದ ಸದಸ್ಯರಾಗಿರುತ್ತಾರೋ ಅವರ ನಾಯಕರಾಗಿ ಕಾರನಿರ್ವಹಿಸುತ್ತಾರೆ . ಸರ್ಕಾರದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನೀತಿಯನ್ನು ಸಂಸತ್ತಿನಲ್ಲಿ ಪ್ರಕಟಿಸಿ ಚರ್ಚೆಗೆ ಅವಕಾಶ ಕಲ್ಪಿಸುತ್ತಾರೆ . ತುರ್ತು ಮತ್ತು ಪ್ರಮುಖ ವಿಷಯಗಳನ್ನು ವಿರೋಧ ಪಕ್ಷಗಳೊಂದಿಗೆ ಚರ್ಚಿಸಿ ಅಂತಹ ವಿಷಯಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸುವಲ್ಲಿ ಅವರ ಸಹಕಾರವನ್ನು ಅಪೇಕ್ಷಿಸುತ್ತಾರೆ . ಸದನದಲ್ಲಿ ಉದ್ದೇಶಿಸುವ ಪ್ರಶ್ನೆಗಳಿಗೆ ಮಂತ್ರಿಗಳು ಸಮರ್ಪಕವಾಗಿ ಉತ್ತರಿಸದಿದ್ದಾಗ , ಅವುಗಳಿಗೆ ಸೂಕ್ತ ಉತ್ತರವನ್ನು ನೀಡುವ ಜವಾಬ್ದಾರಿ ಅವರದಾಗಿರುತ್ತದೆ .
6 ) ರಾಷ್ಟ್ರದ ನಾಯಕ : ಪ್ರಧಾನ ಮಂತ್ರಿಯು ಸರ್ಕಾರದ ನಾಯಕರಷ್ಟೇ ಅಲ್ಲದೆ ರಾಷ್ಟ್ರದ ನಾಯಕರೂ ಹೌದು . ಇವರು ರಾಷ್ಟ್ರದ ನಾಯಕರಾಗಿ ಅಂತರರಾಷ್ಟ್ರೀಯ ಸಭೆಗಳಲ್ಲಿ ರಾಷ್ಟ್ರವನ್ನೂ ಪ್ರತಿನಿಧಿಸುವ ನಿಯೋಗಗಳ ಮುಖ್ಯಸ್ಥರಾಗಿರುತ್ತಾರೆ .
7 ) ನೇಮಕಾಧಿಕಾರ : ಕೆಲವು ಪ್ರಮುಖ ಹುದ್ದೆಗಳ ನೇಮಕಾತಿಯಲ್ಲಿ ಪ್ರಧಾನಿಯವರ ಪಾತ್ರ ಮಹತ್ವದಾಗಿದೆ ಎಲ್ಲಾ ನೇಮಕಾತಿಗಳನ್ನು ರಾಷ್ಟ್ರಪತಿಗಳೇ ಮಾಡಿದರೂ ಅವು ವಾಸ್ತವವಾಗಿ ಪ್ರಧಾನಿಯವರಿಂದ ಅನುಮೋಧಿಸಲ್ಪಟ್ಟಿರುತ್ತದೆ . ಸರ್ವೋಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಇತರೆ ನ್ಯಾಯಾಧೀಶರುಗಳು , ಭಾರತದ ಅಟಾರ್ನಿಜನರಲ್ , ರಕ್ಷಣಾ ಪಡೆಗಳ ಮೂರು ವಿಭಾಗದ ದಂಡನಾಯಕರುಗಳು , ರಾಜ್ಯಪಾಲರುಗಳು , ರಾಯಭಾರಿ ವರ್ಗದವರು , ವಿವಿಧ ಆಯೋಗಗಳ ಮುಖ್ಯಸ್ಥರು ಮತ್ತು ಸದಸ್ಯರನ್ನು ಪ್ರಧಾನಿಯ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗುತ್ತದೆ .
8 ) ಇತರೆ ಅಧಿಕಾರಗಳು :
ಎ ) ವಿದೇಶಾಂಗ ವ್ಯವಹಾರ , ರಾಷ್ಟ್ರದ ರಕ್ಷಣೆ , ಹಣಕಾಸು ಗೃಹ ಮತ್ತು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿಶೇಷ ಅಧಿಕಾರ ಹೊಂದಿದ್ದಾರೆ .
ಬಿ ) ಯೋಜನಾ ಆಯೋಗ , ರಾಷ್ಟ್ರೀಯ ಅಭಿವೃದ್ಧಿ ಮಂಡಳಿ , ರಾಷ್ಟ್ರೀಯ ಭಾವೈಕ್ಯತಾ ಸಮಿತಿ ಮತ್ತು ಅಂತರರಾಷ್ಟ್ರೀಯ ಸಮಿತಿಗಳಿಗೆ ಪ್ರಧಾನಿಯವರೇ ಅಧ್ಯಕ್ಷರಾಗಿರುತ್ತಾರೆ .
ಸಿ ) ಎಲ್ಲಾ ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ಇವರು ಸರ್ಕಾರದ ಮುಖ್ಯ ವಕ್ತಾರರಾಗಿರುತ್ತಾರೆ . ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದ ಅತಿಮುಖ್ಯ ನಿರ್ಧಾರಗಳನ್ನ ಕೈಗೊಳ್ಳುವ ಅಧಿಕಾರ ಇವರಿಗಿದೆ . ಯುದ್ಧ , ವಿದೇಶಿ ಆಕ್ರಮಣ ಅಥವಾ ಸಶಸ್ತ್ರ ದಂಗೆ ಇಂತಹ ಪರಿಸ್ಥಿತಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬಹುದು .
5 ) ಕೇಂದ್ರ ಮಂತ್ರಿಮಂಡಲದ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ .
ಸಂವಿಧಾನದ 74 ನೇ ವಿಧಿ ಅನ್ವಯ ರಾಷ್ಟ್ರಪತಿಗಳಿಗೆ ನೆರವು ಮತ್ತು ಸಲಹೆ ನೀಡಲು ಪ್ರಧಾನ ಮಂತ್ರಿಯ ನೇತೃತ್ವದ ಒಂದು ಮಂತ್ರಿಮಂಡಲವಿರುತ್ತದೆ . ರಾಷ್ಟ್ರಾಧ್ಯಕ್ಷರು ಈ ಮಂತ್ರಿಮಂಡಲದ ಸಲಹೆ ಮೇರೆಗೆ ಕಾರನಿರ್ವಹಿಸುತ್ತಾರೆ . ಈ ಮಂತ್ರಿ ಮಂಡಲದ ಅಧಿಕಾರ & ಕಾರ‍್ಯಗಳು ಕೆಳಗಿನಂತಿವೆ .
1 ) ಆಡಳಿತಾತ್ಮಕ ಕಾರ‍್ಯಗಳು : ಮಂತ್ರಿಮಂಡಲವು ನೈಜಕಾರಾಂಗವಾಗಿ ಕಾರ‍್ಯನಿರ್ವಹಿಸುತ್ತದೆ . ರಾಷ್ಟ್ರದ ಆಡಳಿತ ನಿರ್ವಹಣೆಯ ಜವಾಬ್ದಾರಿ ಕ್ಯಾಬಿನೆಟ್‌ದಾಗಿರುತ್ತದೆ . ಇದಕ್ಕಾಗಿ ಕ್ಯಾಬಿನೆಟ್ ಉನ್ನತ ನೇಮಕಾತಿಗಳನ್ನ ಮಾಡುವಲ್ಲಿ ರಾಷ್ಟ್ರಾಧ್ಯಕ್ಷರಿಗೆ ಸಲಹೆ ನೀಡುತ್ತದೆ . ಇದು ರಾಷ್ಟ್ರೀಯ & ಅಂತರರಾಷ್ಟ್ರೀಯ ಸಮಸ್ಯೆಗಳನ್ನೂ ಚರ್ಚಿಸಿ ಅದಕ್ಕನುಗುಣವಾಗಿ ನೀತಿಯನ್ನು ರೂಪಿಸುತ್ತದೆ . ಸರ್ಕಾರದ ಎಲ್ಲಾ ಮಂತ್ರಾಲಯಗಳ ಕಾರ್ಯವನ್ನು ಮೇಲ್ವಿಚಾರಣೆ ನಿರ್ದೇಶಿಸುವ ಕಾರ್ಯವನ್ನು ನಿರ್ವಹಿಸುತ್ತದೆ . ಶಾಸಕಾಂಗದಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳು ಹಾಗೂ ಸಮಸ್ಯೆಗಳನ್ನು ಕುರಿತು ನಿರ್ಣಯಗಳನ್ನು ಮಂತ್ರಿಮಂಡಲವು ತೆಗೆದುಕೊಳ್ಳುತ್ತದೆ .
2 ) ಶಾಸನೀಯ ಕಾರ‍್ಯಗಳು : ಸಂಸತ್ತಿನ ವೇಳಾಪಟ್ಟಿಯನ್ನು ಕ್ಯಾಬಿನೆಟ್ ನಿರ್ಧರಿಸುತ್ತದೆ ಸಭೆಯನ್ನು ಕರೆಯುವ , ಮುಂದೂಡುವ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷರಿಗೆ ಸಲಹೆ ನೀಡುತ್ತದೆ . ಪ್ರತಿ ಅಧಿವೇಶನದ ಮುಂಚೆ ಶಾಸನೀಯ ಕಾಠ್ಯಕ್ರಮಗಳ ಕಾರಸೂಚಿಯನ್ನು ಇದು ಸಿದ್ಧಪಡಿಸುತ್ತದೆ . ಸರ್ಕಾರಿ ಮಸೂದೆಗಳನ್ನ ಮಂಡಿಸುವ ಮತ್ತು ಅದಕ್ಕೆ ಅಂಗೀಕಾರ ಪಡೆಯುವ ಕಾರ‍್ಯ ನಿರ್ವಹಿಸುತ್ತದೆ . ಯಾವ ಮಸೂದೆಯನ್ನು ಮಂಡಿಸಬೇಕು ಮತ್ತು ಚರ್ಚಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಕ್ಯಾಬಿನೆಟ್‌ಗೆ ಇದೆ . ನಿಯೋಜಿತ ಶಾಸನಾಧಿಕಾರವು ಕ್ಯಾಬಿನೆಟ್‌ನ ಶಾಸನೀಯ ಕಾರಗಳನ್ನು ಗುರುತರವಾಗಿ ಹೆಚ್ಚಿಸಿದೆ .
3 ) ಸಾಮೂಹಿಕ ಹೊಣೆಗಾರಿಕೆ : ಸಂಸದೀಯ ವ್ಯವಸ್ಥೆಯ ಮೂಲತತ್ವವೇ ಸಾಮೂಹಿಕ ಹೊಣೆಗಾರಿಕೆ ಮಂತ್ರಿಮಂಡಲವು ಲೋಕಸಭೆಗೆ ಸಾಮೂಹಿಕವಾಗಿ ಜವಾಬ್ದಾರಿಯಾಗಿರುತ್ತದೆ . ಸರ್ಕಾರದ ಸಫಲತೆ ಮತ್ತು ವಿಫಲತೆಗೆ ಮಂತ್ರಿಮಂಡಲದ ಸದಸ್ಯರು ನೇರವಾಗಿ ಹೊಣೆಯಾಗಿರುತ್ತದೆ . ಕ್ಯಾಬಿನೆಟ್‌ನ ತೀರ್ಮಾನಗಳನ್ನು ಪ್ರತಿಯೊಬ್ಬ ಸಚಿವರೂ ಬೆಂಬಲಿಸಬೇಕು ಮತ್ತು ಶಾಸಕಾಂಗದಲ್ಲಿ ಅದನ್ನ ಸಮರ್ಥಿಸಿಕೊಳ್ಳಬೇಕಾಗುತ್ತದೆ . ಲೋಕಸಭೆಯಲ್ಲಿ ಮಂತ್ರಿಮಂಡಲದ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯವು ಅಂಗೀಕಾರವಾದಲ್ಲಿ ಮಂತ್ರಿಮಂಡಲ ರಾಜಿನಾಮೆ ನೀಡಬೇಕಾಗುತ್ತದೆ .
4 ) ವೈಯಕ್ತಿಕ ಹೊಣೆಗಾರಿಕೆ : ಪ್ರತಿಯೊಬ್ಬ ಸಚಿವರು ತನ್ನ ಇಲಾಖೆಯ ಕಾರ‍್ಯ ನಿರ್ವಹಣೆಗೆ ಸಂಬಂಧಿಸಿದಂತೆ ಶಾಸಕಾಂಗಕ್ಕೆ ಹೊಣೆಯಾಗಿರುತ್ತಾರೆ . ಕೆಲವೊಮ್ಮೆ ನಿರ್ಧಿಷ್ಟ ಇಲಾಖೆಯ ಸಚಿವರ ಕಾರ‍್ಯವೈಕರಿ ಸಮರ್ಪಕವಾಗಿಲ್ಲದಿದ್ದಲ್ಲಿ ಆ ಸಚಿವರ ರಾಜೀನಾಮೆಯನ್ನು ಕೇಳಿ ಪಡೆಯಬಹುದು ಅಥವಾ ಆ ಮಂತ್ರಿಯನ್ನ ವಜಾ ಮಾಡುವಂತೆ ರಾಷ್ಟ್ರಾಧ್ಯಕ್ಷರಿಗೆ ಸಲಹೆ ನೀಡಬಹುದು .
5 ) ಹಣಕಾಸು ಕಾರ‍್ಯಗಳು : ರಾಷ್ಟ್ರದ ಆರ್ಥಿಕ ನೀತಿಗನುಗುಣವಾಗಿ , ಪ್ರತಿವರ್ಷ ವಾರ್ಷಿಕ ಮುಂಗಡ ಪತ್ರ ಅಥವಾ ಬಜೆಟ್ಟನ್ನು ರಚಿಸಿ ಲೋಕಸಭೆಯಲ್ಲಿ ಮಂಡಿಸುವ ಜವಾಬ್ದಾರಿ ಕ್ಯಾಬಿನೆಟ್‌ನದಾಗಿರುತ್ತದೆ . 6 ) ಹೊಂದಾಣಿಕೆ : ವಿವಿಧ ಇಲಾಖೆಗಳ ನಡುವೆ ಹೊಂದಾಣಿಕೆ ತರುವುದು ಕ್ಯಾಬಿನೆಟ್‌ನ ಜವಾಬ್ದಾರಿಯಾಗಿರುತ್ತದೆ . ಆಡಳಿತದಲ್ಲಿ ಸಮನ್ವಯತೆಯನ್ನು ತರಲು ಇಲಾಖೆಗಳ ನಡುವೆ ಹೊಂದಾಣಿಕೆ ಅಗತ್ಯ ಸರ್ಕಾರದ ಎಲ್ಲಾ ಜನಪರ ಕಾವ್ಯಗಳನ್ನ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳ ನಡುವೆ ಹೊಂದಾಣಿಕೆ ತರುವ ಹೊಣೆಗಾರಿಕೆ ಕ್ಯಾಬಿನೆಟ್‌ನದ್ದಾಗಿರುತ್ತದೆ .
7 ) ಗೌಪ್ಯತೆ : ಕ್ಯಾಬಿನೆಟ್‌ನ ನಿರ್ಣಯಗಳ ಗೌಪ್ಯತೆಯನ್ನ ಕಾಪಾಡುವ ಹೊಣೆಗಾರಿಕೆ ಎಲ್ಲಾ ಉದ್ದೆಗಳಿಗೆ ಸೇರಿದೆ . ಸಾಮೂಹಿಕ ಹೊಣೆಗಾರಿಕೆ ಪರಿಣಾಮಕಾರಿಯಾಗ ಬೇಕಾದರೆ ಕ್ಯಾಬಿನೆಟ್ ಕಾವ್ಯಗಳನ್ನ ಗೌಪ್ಯವಾಗಿ ಇಡಬೇಕಾಗುತ್ತದೆ .
6 ) ರಾಜ್ಯಗಳಲ್ಲಿ ರಾಜ್ಯ ಪಾಲರ ಅಧಿಕಾರ & ಕಾರ‍್ಯಗಳನ್ನ ವಿವರಿಸಿ .
ಸಂವಿಧಾನದ 154 ನೇ ವಿಧಿ ಅನ್ವಯ ರಾಜ್ಯಸರ್ಕಾರದ ಕಾರ‍್ಯಂಗಾಧಿಕಾರವು ರಾಜ್ಯಪಾಲರಿಗೆ ಸೇರಿದೆ . ಕೇಂದ್ರದ ನಾಯಕರಾಗಿ ರಾಷ್ಟ್ರಪತಿಯವರು ನಿರ್ವಹಿಸುವಂತೆ ರಾಜ್ಯಪಾಲರು ರಾಜ್ಯನಾಯಕರಾಗಿ ಕಾರನಿರ್ವಹಿಸುತ್ತಾರೆ . ಅವರ ಕಾರ‍್ಯಗಳು ಕೆಳಗಿನಂತಿವೆ .
1 ) ಶಾಸನೀಯ ಅಧಿಕಾರಗಳು : ರಾಜ್ಯಪಾಲರು ಶಾಸಕಾಂಗದ ಸದಸ್ಯರಲ್ಲಿದಿದ್ದರೂ , ರಾಜ್ಯಶಾಸಕಾಂಗದ ಅವಿಭಾಜ್ಯ ಅಂಗವಾಗಿ ಅನೇಕ ಶಾಸನೀಯ ಕಾರ‍್ಯಗಳನ್ನ ನಿರ್ವಹಿಸುತ್ತಾರೆ .
ಎ ) ರಾಜ್ಯ ಶಾಸಕಾಂಗದ ಅಧಿವೇಶನ ಕರೆಯುವ , ಮುಂದೂಡುವ , ಮತ್ತು ವಿಧಾನ ಸಭೆಯನ್ನು ವಿಸರ್ಜಿಸು ಅಧಿಕಾರ ಪಡೆದಿದ್ದಾರೆ .
ಬಿ ) ನೂತನ ವಿಧಾನ ಸಭೆಯ ಪ್ರಥಮ ಅಧಿವೇಶನ ಹಾಗೂ ಪ್ರತೀವರ್ಷದ ಪ್ರಥಮ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಅಧಿಕಾರ .
ಸಿ ) ಉಭಯ ಸದನಗಳ ಜಂಟಿ ಅಧಿವೇಶನದ ಅಧ್ಯಕ್ಷತೆ ವಹಿಸುವುದು .
ಡಿ ) ಮಸೂದೆಗಳನ್ನು ಬಗ್ಗೆ ಉಭಯ ಸದನಗಳಿಗೆ ಸಂದೇಶ ಕಳುಹಿಸುವ ಅಧಿಕಾರ .
ಇ ) ವಿಜ್ಞಾನ , ಕಲೆ , ಸಾಹಿತ್ಯ , ಸಮಾಜಸೇವೆ , ಸಹಕಾರ ಚಳುವಳಿ ಇತ್ಯಾದಿ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದಿರುವ 1/6 ರಷ್ಟು ಸದಸ್ಯರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡುವ ಅಧಿಕಾರ .
ಎಫ್ ) ಯಾವುದೇ ಮಸೂದೆಯು ರಾಜ್ಯಪಾಲರ ಸಹಿ ಇಲ್ಲದೆ ಕಾನೂನಾಗಲು ಸಾಧ್ಯವಿಲ್ಲ . ಮಸೂದೆಗಳಿಗೆ ಒಪ್ಪಿಗೆ ನೀಡುವ / ತಡೆಹಿಡಿಯುವ ಅಧಿಕಾರವಿದೆ . ಹಣಕಾಸೇತರ ಮಸೂದೆಯು 2 ನೇ ಬಾರಿಗೆ ತಮ್ಮ ಅನುಮೊದನೆಗೆ ಬಂದಾಗ ಒಪ್ಪಿಗೆ ನೀಡಬೇಕಾಗುತ್ತದೆ .
ಜಿ ) ಮಸೂದೆಗಳನ್ನ ರಾಷ್ಟ್ರಾಧ್ಯಕ್ಷರ ಅನುಮೋದನೆಗಾಗಿ ಕಾಯ್ದಿರಿಸುವ ಅಧಿಕಾರ ( 200 ನೇ ವಿಧಿ )
ಎಚ್ ) ಒಬ್ಬ ಆಂಗ್ಲೋ – ಇಂಡಿಯನ್ ಸದಸ್ಯವನ್ನ ವಿಧಾನಸಭೆಗೆ ನಾಮಕರಣ ಮಾಡುವ ಅಧಿಕಾರ ,
ಐ ) ಸುಗ್ರೀವಾಜ್ಞೆಗಳನ್ನ ಹೊರಡಿಸುವ ಅಧಿಕಾರ ( 213 ನೇ ವಿಧಿ )
ಜೆ ) ವಿಧಾನ ಸಭೆ / ವಿಧಾನ ಪರಿಷತ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳು ತೆರವಾದಾಗ ಸದನದ ಕಾರ ಕಲಾಪಗಳ ಅಧ್ಯಕ್ಷತೆಯನ್ನ ತಾತ್ಕಾಲಿಕವಾಗಿ ನಿರ್ವಹಿಸಲು ಆಯಾ ಸದನದ ಯಾವುದೇ ಸದಸ್ಯರನ್ನ ನೇಮಿಸುವ ಅಧಿಕಾರ .
ಕೆ ) ರಾಜ್ಯ ಲೋಕಸೇವಾ ಆಯೋಗ , ರಾಜ್ಯಹಣಕಾಸು ಆಯೋಗ ಮುಂತಾದ ಆಯೋಗಗಳು ರಾಜ್ಯಪಾಲರಿಗೆ ನೀಡುವ ವರದಿಯನ್ನು ಶಾಸಕಾಂಗದ ಮುಂದಿಡಬೇಕು .
ಎಲ್ ) ಚುನಾವಣಾ ಆಯೋಗದ ಸಲಹೆಯ ಮೇರೆಗೆ ರಾಜ್ಯಶಾಸಕಾಂಗದ ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ಧರಿಸುವ ಅಧಿಕಾರ .
2 ) ಕಾರ್ಯಾಂಗಾಧಿಕಾರ : ಸಂವಿಧಾನದ 154 ನೇ ವಿಧಿ ಅನ್ವಯ ರಾಜ್ಯದ ಕಾರಾಂಗಾಧಿಕಾರ ರಾಜ್ಯ ಪಾಲರಿಗೆ ಸೇರಿದೆ . ಈ ಅಧಿಕಾರ ಮುಖ್ಯಮಂತ್ರಿ & ಮಂತ್ರಿಮಂಡಲದ ಸದಸ್ಯರು ರಾಜ್ಯಪಾಲರ ಹೆಸರಿನಲ್ಲಿ ಚಲಾಯಿಸುತ್ತಾರೆ.
ಎ ) ಮುಖ್ಯ ಮಂತ್ರಿ & ಆತನ ಸಲಹೆ ಮೇರೆಗೆ ಸಚಿವ ಸಂಪುಟದ ಸಚಿವರನ್ನ – ನೇಮಕ ಮಾಡುತ್ತಾರೆ .
ಬಿ ) ಮಂತ್ರಿಮಂಡಲಕ್ಕೆ ಸಲಹೆ ನೀಡುತ್ತಾರೆ .
ಸಿ ) ಮುಖ್ಯಮಂತ್ರಿಯ ಸಲಹೆ ಮೇರೆಗೆ ಮಂತ್ರಿಗಳನ್ನು ವಜಾ ಮಾಡುವ ಅಧಿಕಾರ ,
ಡಿ ) ಅಡ್ವಕೇಟ್ ಜನರಲ್ , ರಾಜ್ಯಲೋಕಸೇವಾ ಆಯೋಗದ ಅಧ್ಯಕ್ಷರು & ಸದಸ್ಯರು , ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು , ರಾಜ್ಯಯೋಜನಾ ಮಂಡಳಿಯ ಉಪಾಧ್ಯಕ್ಷರು & ಸದಸ್ಯರು , ಮಹಿಳಾ ಆಯೋಗ , ಅಲ್ಪಸಂಖ್ಯಾತ ಆಯೋಗ , ಹಿಂದುಳಿದ ವರ್ಗಗಳ ಆಯೋಗಗಳ ಅಧ್ಯಕ್ಷ & ಸದಸ್ಯರುಗಳನ್ನ ಸಚಿವ ಸಂಪುಟದ ಸಲಹೆ ಮೇರೆಗೆ ನೇಮಿಸುತ್ತಾರೆ .
ಇ ) ಉಚ್ಚನ್ಯಾಯಾಲಯಕ್ಕೆ ರಾಷ್ಟ್ರಪತಿಗಳು ನ್ಯಾಯಾದೀಶರನ್ನ ನೇಮಕ ಮಾಡುವಾಗ ರಾಜ್ಯಪಾಲರ ಸಲಹೆ ಪಡೆಯುತ್ತಾರೆ .
ಎಫ್ ) ರಾಜ್ಯದಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಹೇರುವಂತೆ ರಾಷ್ಟ್ರಾಧ್ಯಕ್ಷರಿಗೆ ಶಿಫಾರಸ್ಸು ಮಾಡುವ ಅಧಿಕಾರ ಅಂತಹ ಸಂದರ್ಭದಲ್ಲಿ ಕೇಂದ್ರದ ಪ್ರತಿನಿಧಿಯಾಗಿ ರಾಜ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ .
3 ) ಹಣಕಾಸು ಅಧಿಕಾರಗಳು :
ಎ ) ರಾಜ್ಯಪಾಲರ ಪೂರ್ವಸಮ್ಮತಿ ಇಲ್ಲದೆ ಹಣಕಾಸು ಮಸೂದೆಯನ್ನ ವಿಧಾನಸಭೆಯಲ್ಲಿ ಮಂಡಿಸುವಂತಿಲ್ಲ ಹಾಗೂ ಹಣಕಾಸು ಮಸೂದೆಯನ್ನು ತಿದ್ದುಪಡಿಮಾಡಲು ಕೂಡ ಅವರ ಪೂರ್ವ ಸಮ್ಮತಿ ಅಗತ್ಯ
ಬಿ ) ಮುಂಗಡ ಪತ್ರವನ್ನು ರಾಜ್ಯಶಾಸಕಾಂಗದ ಮುಂದೆ ಮಂಡಿಸುವಂತೆ ವ್ಯವಸ್ಥೆ ಮಾಡುವುದು .
ಸಿ ) ರಾಜ್ಯ ತುರ್ತುನಿಧಿ ರಾಜ್ಯಪಾಲರ ವಶದಲ್ಲಿರುತ್ತದೆ .
4 ) ನ್ಯಾಯಿಕ ಅಧಿಕಾರಗಳು :
ಎ ) ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರನ್ನು ಮತ್ತು ಇತ ನ್ಯಾಯಾಧೀಶರನ್ನು ರಾಷ್ಟ್ರಾಧ್ಯಕ್ಷರು ನೇಮಿಸುವಾಗ ರಾಜ್ಯಪಾಲರ ಸಲಹೆ ಪಡೆಯುತ್ತಾರೆ .
ಬಿ ) ರಾಜ್ಯದಲ್ಲಿನ ಇತರ ನ್ಯಾಯಾಲಯಗಳ ನ್ಯಾಯಾದೀಶರನ್ನು ರಾಜ್ಯಪಾಲರು ನೇಮಿಸುತ್ತಾರೆ .
ಸಿ ) ಉಚ್ಛನ್ಯಾಯಾಲಯ ಒಬ್ಬ ಅಪರಾಧಿಗೆ ನೀಡಿದ ಶಿಕ್ಷೆಯನ್ನು ಕ್ಷಮಿಸುವ , ಕಡಿಮೆ ಮಾಡುವ ಮತ್ತು ಬದಲಿಸುವ ಅಧಿಕಾರ ಹೊಂದಿದ್ದಾರೆ .
ಡಿ ) ರಾಜ್ಯ ಸರ್ಕಾರದ ಕಾನೂನು ಸಲಹೆಗಾರರಾದ ಅಡ್ವಕೆಟ್ ಜನರಲ್‌ರವರನ್ನು ಸಚಿವಸಂಪುಟದ ಸಲಹೆ ಮೇರೆಗೆ ನೇಮಿಸುತ್ತಾರೆ .
ಇ ) ಇವರು ಕಾನೂನಿಗೆ ಸಂಬಂಧಿಸಿದ ಹಾಗೂ ಸಾರ್ವಜನಿಕ ಮಹತ್ವ ಪಡೆದ ವಿಷಯಗಳ ಬಗೆಗೆ ಉಚ್ಛನ್ಯಾಯಾಲಯದ ಸಲಹೆ ಕೇಳಬಹುದು .
5 ) ವಿವೇಚನಾಧಿಕಾರ : ಮಂತ್ರಿಮಂಡಲದ ಸಲಹೆ ಇಲ್ಲದೆ ಚಲಾಯಿಸುವ ಅಧಿಕಾರ ಇದಾಗಿದೆ .
ಎ ) ಮುಖ್ಯಮಂತ್ರಿಯನ್ನು ನೇಮಿಸುವುದು
ಬಿ ) ರಾಜ್ಯಮಂತ್ರಿಮಂಡಲವನ್ನು ರದ್ದುಪಡಿಸುವುದು
ಸಿ ) ವಿಧಾನ ಸಭೆಯ ವಿಸರ್ಜನೆ
ಡಿ ) ರಾಜ್ಯಶಾಸಕಾಂಗ ಅಂಗೀಕರಿಸಿದ ಮಸೂದೆಗೆ ಒಪ್ಪಿಗೆ ನೀಡುವುದು | ರಾಷ್ಟ್ರಾಧ್ಯಕ್ಷರ ತೀರ್ಮಾನಕ್ಕೆ ಕಾಯ್ದಿರಿಸುವುದು .
7 ) ರಾಜ್ಯದ ಮುಖ್ಯಮಂತ್ರಿಯ ಅಧಿಕಾರ ಮತ್ತುಕಾರ‍್ಯಗಳನ್ನು ವಿವರಿಸಿ .
ಮುಖ್ಯಮಂತ್ರಿಗಳು ರಾಜ್ಯದ ಕಾರಾಂಗೀಯ ಅಧಿಕಾರದ ಕೇಂದ್ರಬಿಂದು , ರಾಜ್ಯ ಸರ್ಕಾರದ ವಾಸ್ತವ ಕಾರನಿರ್ವಹಣಾಧಿಕಾರಿಯಾಗಿರುತ್ತಾರೆ . ಅವರ ಪ್ರಮುಖ ಕಾರ‍್ಯಗಳೆಂದರೆ ,
1 ) ಮಂತ್ರಿಮಂಡಲ ರಚನೆ : ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿಯ ಪ್ರಥಮಕಾರ ಮಂತ್ರಿಮಂಡಲದ ರಚನೆ , ಸಾಮಾನ್ಯವಾಗಿ ಸರ್ಕಾರದ ಏಕರೂಪತೆಯನ್ನ ಕಾಪಾಡಲು ಸಚಿವರನ್ನು ಒಂದೇ ಪಕ್ಷದಿಂದ ಆರಿಸಿಕೊಳ್ಳಲಾಗುತ್ತದೆ . ಕೇಂದ್ರದಲ್ಲಿರುವಂತೆ ರಾಜ್ಯದಲ್ಲಿ ಮುಖ್ಯಮಂತ್ರಿಯ ಸಲಹೆ ಮೇರೆಗೆ ಮಂತ್ರಿಗಳನ್ನು ರಾಜ್ಯಪಾಲರು ನೇಮಿಸುತ್ತಾರೆ . ಸಚಿವರನ್ನ ಅವರಿಗೆ ಪಕ್ಷದಲ್ಲಿರುವ ಬೆಂಬಲ , ರಾಜಕೀಯ ಮತ್ತು ಆಡಳಿತ ಅನುಭವ , ಮುಖ್ಯಮಂತ್ರಿಯೊಡನೆ ಹೊಂದಿರುವ ಸಂಬಂಧ , ಜಾತಿ , ಧರ್ಮ ಮತ್ತು ಜಿಲ್ಲೆಗಳನ್ನು ಗಣನೆಗೆ ತೆಗೆದುಕೊಂಡು ನೇಮಿಸಲಾಗುವುದು .
2 ) ಮಂತ್ರಿಮಂಡಲದ ಮೇಲೆ ನಿಯಂತ್ರಣ : ಮಂತ್ರಿಮಂಡಲದ ಎಲ್ಲಾ ಸದಸ್ಯರ ಕಾರ‍್ಯನಿರ್ವಹಣೆಯನ್ನು ನಿಯಂತ್ರಿಸುವ ಮೇಲ್ವಿಚಾರಣೆ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗಿದೆ . ತಮ್ಮ ಇಲಾಖೆಯ ಕಾರ‍್ಯ ವಿಧಾನದ ಬಗ್ಗೆ ಪ್ರತೀ ಮಂತ್ರಿಗಳು ಮುಖ್ಯ ಮಂತ್ರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ . ಮಂತ್ರಿಯೊಬ್ಬರ ಕಾರ‍್ಯ ತೃಪ್ತಿಕರವಾಗಿಲ್ಲ ಎನಿಸಿದರೆ ಮುಖ್ಯಮಂತ್ರಿಗಳು ಅವರಿಂದ ರಾಜೀನಾಮೆ ಕೇಳಿಪಡೆಯಬಹುದು ಅಥವಾ ರಾಜ್ಯಪಾಲರಿಗೆ ಅವರನ್ನ ವಜಾ ಮಾಡುವಂತೆ ಸಲಹೆ ನೀಡಬಹುದು .
3 ) ಮಂತ್ರಿಮಂಡಲ & ರಾಜ್ಯಪಾಲರ ನಡುವೆ ಸೇತುವೆ : ರಾಜ್ಯದ ಸಮಸ್ಯೆಗಳ ಬಗ್ಗೆ ರಾಜ್ಯಪಾಲರೊಡನೆ ಸಮಾಲೋಚನೆ ನಡೆಸುವುದು , ರಾಜ್ಯಪಾಲರಿಗೆ ಮಂತ್ರಿ ಮಂಡಲದ ನಿರ್ಣಯಗಳನ್ನು ತಿಳಿಸುವುದು ಹಾಗೂ ರಾಜ್ಯಪಾಲರ ಅಭಿಪ್ರಾಯಗಳನ್ನು ತನ್ನ ಸಹೋದ್ಯೋಗಿಗಳಿಗೆ ತಿಳಿಸುವುದು ಹೀಗೆ ಮುಖ್ಯಮಂತ್ರಿಯು ರಾಜ್ಯಪಾಲ & ಮಂತ್ರಿಮಂಡಲದ ನಡುವಣ ಸೇತುವೆಯಾಗಿ ಕಾರನಿರ್ವಹಿಸುತ್ತಾರೆ .
4) ಮಂತ್ರಿಮಂಡಲದ ನಾಯಕ : ಮುಖ್ಯಮಂತ್ರಿಗಳು ಮಂತ್ರಿಮಂಡಲದ ನಾಯಕನಾಗಿ , ಕ್ಯಾಬಿನೆಟ್‌ನ ಎಲ್ಲಾ ಸಭೆಗಳು ಅವರ ನೇತೃತ್ವದಲ್ಲಿ ನಡೆಯುತ್ತವೆ ಕ್ಯಾಬಿನೆಟ್‌ನ ಕಾರಸೂಚಿಯನ್ನು ತಯಾರಿಸುವ , ನಿಯಂತ್ರಿಸುವ ಕಾರ ಮುಖ್ಯಮಂತ್ರಿಗಳದು ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳು ಮುಖ್ಯಮಂತ್ರಿಗಳ ನೇತೃತ್ವದಲ್ಲೇ ತೆಗೆದುಕೊಳ್ಳಲಾಗುತ್ತದೆ .
5 ) ನೇಮಕಾಧಿಕಾರ : ರಾಜ್ಯದ ಮುಖ್ಯನೇಮಕಾತಿಗಳನ್ನು ರಾಜ್ಯಪಾಲರೇ ಮಾಡಿದರೂ ವಾಸ್ತವವಾಗಿ ಎಲ್ಲಾ ನೇಮಕಾತಿಗಳನ್ನ ಮುಖ್ಯಮಂತ್ರಿಗಳೇ ಅನುಮೋದಿಸಬೇಕು ರಾಜ್ಯದ ಅಡ್ವಕೇಟ್‌ಜನರಲ್ ರಾಜ್ಯಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಮುಂತಾದ ಎಲ್ಲಾ ಪ್ರಮುಖ ನೇಮಕಾತಿಗಳನ್ನು ಮುಖ್ಯ ಮಂತ್ರಿಗಳ ಶಿಫಾರಸಸ್ಸಿನ ಮೇಲೆ ಮಾಡಲಾಗುತ್ತದೆ .
6 ) ಸದನದ ನಾಯಕ : ಮುಖ್ಯಮಂತ್ರಿಗಳು ಸದನದ ನಾಯಕರಾಗಿರುತ್ತಾರೆ . ಕ್ಯಾಬಿನೆಟ್‌ನಲ್ಲಿ ಕೈಗೊಂಡ ಎಲ್ಲಾ ಪ್ರಮುಖ ನಿರ್ಣಯಗಳನ್ನು ಶಾಸಕಾಂಗದಲ್ಲಿ ಮುಖ್ಯ ಮಂತ್ರಿಗಳೇ ಘೋಷಿಸುತ್ತಾರೆ . ಸರ್ಕಾರದ ಕಾರ ವಿಧಾನದ ಬಗ್ಗೆ ಶಾಸಕಾಂಗದಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರವನ್ನು ನೀಡುವ ಮೂಲಕ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಜವಾಬ್ದಾರಿ ಮುಖ್ಯಮಂತ್ರಿಗಳದ್ದಾಗಿದೆ .
8 ) ರಾಜ್ಯ ಮಂತ್ರಿ ಮಂಡಲದ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ .
ರಾಜ್ಯ ಸರ್ಕಾರದ ಆಡಳಿತ ಯಂತ್ರದ ಅತಿ ಪ್ರಮುಖ ಮತ್ತು ಅಧಿಕಾರಯುತ ಭಾಗವಾಗಿ ಮಂತ್ರಿ ಮಂಡಲ ಕಾರ್ಯ ನಿರ್ವಹಿಸುತ್ತದೆ . ಅದರ ಕಾರ್ಯಗಳೆಂದರೆ :
1. ಆಡಳಿತ ಕಾರ್ಯಗಳು :
ರಾಜ್ಯಾಡಳಿತ ನಿರ್ವಹಣೆ ಮಂತ್ರಿ ಮಂಡಲದ ಜವಾಬ್ದಾರಿ . ಸರ್ಕಾರದ ನೀತಿಯನ್ನು ರೂಪಿಸಿ ಅದನ್ನು ಅನುಷ್ಟಾನಗೊಳಿಸುವ ಕಾರ್ಯ ನಿರ್ವಹಿಸುತ್ತಾರೆ . ರಾಜ್ಯದಲ್ಲಿ ಶಾಂತಿ ಮತ್ತು ಕ್ರಮ ಕಾಪಾಡುವ ಹೊಣೆಗಾರಿಕೆ ಅವರಿಗೆ ಸೇರಿದೆ . ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳುವ ಅಂತಿಮ ಅಧಿಕಾರ ಮಂತ್ರಿ ಮಂಡಲಕ್ಕೆ ಸೇರಿದೆ .
2. ಶಾಸನೀಯ ಕಾರ್ಯಗಳು :
ಮಂತ್ರಿ ಮಂಡಲದ ಸದಸ್ಯರು ಶಾಸನ ರಚಿಸುವ , ಚರ್ಚಿಸುವ ಮತ್ತು ಅದನ್ನು ಅಂಗೀಕಾರ ಮಾಡುವ ಎಲ್ಲಾ ಕಾರ್ಯಗಳಲ್ಲೂ ಭಾಗವಹಿಸುತ್ತಾರೆ . ಕ್ಯಾಬಿನೆಟ್‌ನ ಸಲಹೆಯ ಮೇರಿಗೆ ಶಾಸಕಾಂಗದ ಅಧಿವೇಶನವನ್ನು ಕರೆಯಲಾಗುತ್ತದೆ . ಕ್ಯಾಬಿನೆಟ್‌ನ ಇಚ್ಛೆಗನುಗುಣವಾಗಿ ಮಸೂದೆಗಳನ್ನು ಅಂಗೀಕರಿಸಲಾಗುವುದು ಅಥವಾ ತಿರಸ್ಕರಿಸಲಾಗುವುದು .
3. ಹಣಕಾಸು ಕಾರ್ಯಗಳು :
ರಾಜ್ಯದ ವಾರ್ಷಿಕ ಮುಂಗಡ ಪತ್ರವನ್ನು ತಯಾರಿಸುವ , ಮಂಡಿಸುವ ಮತ್ತು ಅದಕ್ಕೆ ಅಂಗೀಕಾರ ಪಡೆಯುವ ಅಧಿಕಾರ ಮಂತ್ರಿ ಮಂಡಲಕ್ಕೆ ಸೇರಿದೆ . ಅವರ ಅನುಮತಿ ಇಲ್ಲದೆ ರಾಜ್ಯದಲ್ಲಿ ಯಾವುದೇ ತೆರಿಗೆಯನ್ನು ಹೇರುವಂತಿಲ್ಲ .
4. ಜವಾಬ್ದಾರಿ : ಸಂಸದೀಯ ಸರ್ಕಾರದ ವಿಶಿಷ್ಟವಾದ ಗುಣ ನೈಜ ಕಾರ್ಯಾಂಗದ ಹೊಣೆಗಾರಿಕೆ . ಮಂತ್ರಿ ಮಂಡಲವು ಎರಡು ರೀತಿಯ ಹೊಣೆಗಾರಿಕೆಯನ್ನು ಹೊಂದಿದೆ . ಸಾಮೂಹಿಕ ಮತ್ತು ವೈಯಕ್ತಿಕ .ಮಂತ್ರಿ ಮಂಡಲದ ಸದಸ್ಯರು ತಮ್ಮ ಇಲಾಖಾ ಕಾರ್ಯಗಳಿಗೆ ಸಂಬಂಧಿಸಿದಂತೆ ಶಾಸಕಾಂಗಕ್ಕೆ ಹೊಣೆಯಾಗಿರುತ್ತಾರೆ ಹಾಗೂ ತಾವು ನಿರ್ವಹಿಸುವ ಇಡೀ ಮಂತ್ರಿಮಂಡಲವು ರಾಜ್ಯಕ್ಕೆ ಜವಾಬ್ದಾರಿಯಾಗಿರುತ್ತದೆ . ಎಲ್ಲಾ ಕಾರ್ಯಗಳಿಗೆ ಮಂತ್ರಿ ಮಂಡಲದ ಪ್ರತಿಯೊಬ್ಬ ಸದಸ್ಯರು ತಮ್ಮ ಖಾತೆಗೆ ಸಂಬಂಧಿಸಿದ ಕಾರ್ಯಗಳಿಗೆ ವೈಯಕ್ತಿಕವಾಗಿ ಜವಾಬ್ದಾರಿಯಾಗಿರುತ್ತಾರೆ . ಇಲಾಖೆಯ ಸಫಲತೆಗೆ ಮತ್ತು ವಿಫಲತೆಗೆ ನೇರವಾಗಿ ಅವರು ಹೊಣೆಯಾಗಿರುತ್ತಾರೆ . ಅದಕ್ಷತೆಯ ಕಾರಣವಾಗಿ ಅವರಿಂದ ಮುಖ್ಯಮಂತ್ರಿಗಳು ರಾಜೀನಾಮೆ ಕೇಳಿ ಪಡೆಯಬಹುದು . ಇಡೀ ಮಂತ್ರಿ ಮಂಡಲ ಅಧಿಕಾರದಲ್ಲಿ ಮುಂದುವರೆಯುವುದು ಶಾಸಕಾಂಗದ ವಿಶ್ವಾಸವನ್ನು ಅವಲಂಬಿಸಿದೆ . ಸರ್ಕಾರವು ಶಾಸಕಾಂಗದ ವಿಶ್ವಾಸ ಕಳೆದುಕೊಂಡಾಗ , ಶಾಸಕಾಂಗವು ಅವಿಶ್ವಾಸ ಗೊತ್ತುವಳಿ ನಿರ್ಣಯ ಅಂಗೀಕರಿಸಿ ಅಧಿಕಾರದಿಂದ ತೆಗೆಯಬಹುದು .
5. ಸಮನ್ವಯತೆ: ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ತರುವುದು ಕ್ಯಾಬಿನೆಟ್ಟಿನ ಜವಾಬ್ದಾರಿಯಾಗಿರುತ್ತದೆ . ಸರ್ಕಾರದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಸಮಂಜಸವಾಗಿ ಕಾರ್ಯಗತಗೊಳಿಸಲು ಇಲಾಖೆಗಳ ನಡುವೆ ಹೊಂದಾಣಿಕೆ ಅಗತ್ಯ ಎಲ್ಲಾ ಇಲಾಖೆಗಳ ನಡುವೆ ಸಮನ್ವಯತೆ ತರುವುದರ ಮೂಲಕ ಹೊಂದಾಣಿಕೆಯನ್ನು ಉಂಟುಮಾಡುವುದು ಹೊಣೆಗಾರಿಕೆ . ಕ್ಯಾಬಿನೆಟ್ಟಿನ
6. ಗೌಪ್ಯತೆ: ಕ್ಯಾಬಿನೆಟ್ ಪದ್ಧತಿಯ ಮತ್ತೊಂದು ಪ್ರಮುಖ ಲಕ್ಷಣ ಗೌಪ್ಯತೆ , ಕ್ಯಾಬಿನೆಟ್‌ನ ಕಾರ್ಯಗಳು ಸದಾ ಗೌಪ್ಯತೆಯಿಂದ ಕೂಡಿರಬೇಕು ಮಂತ್ರಿ ಮಂಡಲದ ಸ್ವತಂತ್ರ ಕಾರ್ಯ ನಿರ್ವಹಣೆಗೆ ಗೌಪ್ಯತೆ ಅವಶ್ಯಕ .
Executive Chapter Class 11 Extra Questions
ಹೆಚ್ಚುವರಿ ಪ್ರಶೋತ್ತರಗಳು :
1 ) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು ?
ಉಪರಾಷ್ಟ್ರಪತಿಯು ರಾಜ್ಯಸಭೆಯ ಪದ ನಿಮಿತ್ತ ಅಧ್ಯಕ್ಷರು .
2 ) ಭಾರತದಲ್ಲಿ ರಕ್ಷಣಾ ಬಲಗಳ ಮಹಾದಂಡನಾಯಕ ಯಾರು ?
ರಾಷ್ಟ್ರಾಧ್ಯಕ್ಷರು .
3 ) ರಾಷ್ಟ್ರದ ‘ ಪ್ರಥಮ ಪ್ರಜೆ ‘ ಎಂದು ಯಾರನ್ನ ಕರೆಯುತ್ತಾರೆ ?
ರಾಷ್ಟ್ರಾಧ್ಯಕ್ಷರು .
4 ) ರಾಜ್ಯ ಪಾಲರನ್ನ ಅಧಿಕಾರದಿಂದ ಯಾರು ವಜಾ ಮಾಡಬಹುದು ?
ರಾಷ್ಟ್ರಾಧ್ಯಕ್ಷರು .
5 ) ರಾಷ್ಟ್ರಾಧ್ಯಕ್ಷರು ಎಷ್ಟು ಜನ ಸದಸ್ಯರನ್ನ ರಾಜ್ಯಸಭಗೆ ನಾಮಕರಣ ಮಾಡುತ್ತಾರೆ ?
12 ಜನ ಸದಸ್ಯರು
6 ) ರಾಷ್ಟ್ರಾಧ್ಯಕ್ಷರು ಎಷ್ಟು ಜನ ಸದಸ್ಯರನ್ನ ಲೋಕಸಭೆಗೆ ನಾಮಕರಣ ಮಾಡುತ್ತಾರೆ ?
ಇಬ್ಬರು ಆಂಗ್ಲೋ – ಇಂಡಿಯನ್ನರನ್ನ .
7 ) ರಾಜ್ಯಪಾಲರು ಎಷ್ಟುಜನ ಆಂಗ್ಲೋ – ಇಂಡಿಯನ್‌ರನ್ನ ವಿಧಾನ ಸಭೆಗೆ ನಾಮಕರಣ ಮಾಡುತ್ತಾರೆ ?
ಒಬ್ಬ ಸದಸ್ಯನನ್ನ .
FAQ
ಕಾನೂನುಗಳನ್ನು ಅನುಷ್ಠಾನಗೊಳಿಸುವ ಸರ್ಕಾರದ ಎರಡನೆಯ ಅಂಗವೇ ಕಾರ್ಯಾಂಗ ,
ರಾಷ್ಟ್ರಾಧ್ಯಕ್ಷರು
ಇತರೆ ವಿಷಯಗಳು :
First Puc Political Science Notes
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf