ಪ್ರಥಮ ಪಿ.ಯು.ಸಿ ಅಧ್ಯಾಯ-9 ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ರಾಜ್ಯಶಾಸ್ತ್ರ ನೋಟ್ಸ್‌ | 1st Puc Political Science Chapter 9 Notes in Kannada

ಪ್ರಥಮ ಪಿ.ಯು.ಸಿ ಅಧ್ಯಾಯ-9 ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ರಾಜ್ಯಶಾಸ್ತ್ರ ನೋಟ್ಸ್‌,1st Puc Political Science Chapter 9 Notes Question Answer in Kannada Kseeb Solution For Class 11 Political Science chapter 9 Notes. 1st Puc Political Science Democratic Decentralisation in Kannada Notes prajasattatmaka vikendrikarana Notes

 

ಅಧ್ಯಾಯ-9 ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ

ಅಧ್ಯಾಯ-9 ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ

1st Puc Political Science Notes in Kannada Pdf Chapter 9

I. ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1) ಜಿಲ್ಲಾ ಪಂಚಾಯ್ತಿಯ ಅಧಿಕಾರವಧಿ ಎಷ್ಟು ?

5 ವರ್ಷಗಳು .

2 ) ಜಿಲ್ಲಾಪಂಚಾಯ್ತಿಯ ಅಧ್ಯಕ್ಷರ ಅಧಿಕಾರವಧಿ ಎಷ್ಟು ?

30 ತಿಂಗಳು .

3 ) ಜಿಲ್ಲಾ ಪಂಚಾಯ್ತಿಯ ಆಡಳಿತಾತ್ಮಕ ಮುಖ್ಯಸ್ಥರು ಯಾರು ?

ಸಿ.ಇ.ಒ ( ಮುಖ್ಯ ಕಾರ‍್ಯ ನಿರ್ವಹಣಾ ಅಧಿಕಾರಿ ) .

4 ) ಬಿ.ಬಿ.ಎಂ.ಪಿ.ಯನ್ನು ವಿಸ್ತರಿಸಿ ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

5 ) ಮೇಯರ್‌ರವರ ಅಧಿಕಾರವಧಿ ಎಷ್ಟು ?

1 ವರ್ಷ .

6) ಭಾರತದಲ್ಲಿ ಸ್ಥಳೀಯ ಸರ್ಕಾರ ಪಿತಾಮಹರೆಂದು ಯಾರನ್ನು ಕರೆಯಲಾಗಿದೆ ?

ಲಾರ್ಡ್‌ರಿಪ್ಪನ್‌ರವರನ್ನು ಸ್ಥಳೀಯ ಸರ್ಕಾರದ ಪಿತಾಮಹ ಎನ್ನುವರು .

7 ) ಭಾರತದಲ್ಲಿ ಸ್ಥಳೀಯ ಸರ್ಕಾರವನ್ನು ಜಾರಿಗೊಳಿಸಿದ ಪ್ರಥಮ ರಾಜ್ಯ ಯಾವುದು ?

ರಾಜಸ್ತಾನ .

8 ) ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಯಾವುದು ?

73 ನೇ ಸಂವಿಧಾನ ತಿದ್ದುಪಡಿ

9 ) ನಗರ ಸಂಸ್ಥೆಗಳಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಯಾವುದು ?

74 ನೇ ಸಂವಿಧಾನ ತಿದ್ದುಪಡಿ

10 ) ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ಅಧಿಕಾರವಧಿ ಎಷ್ಟು ?

30 ತಿಂಗಳು .

11 ) ಪಿ.ಡಿ.ಓ. ಅನ್ನು ವಿಸ್ತರಿಸಿ .

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ,

12) ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷರ ಅಧಿಕಾರವಧಿ ಎಷ್ಟು ?

20 ತಿಂಗಳು .

13 ) ಮಹಾನಗರ ಪಾಲಿಕೆಯ ಆಡಳಿತಾತ್ಮಕ ಮುಖ್ಯಸ್ಥರು ಯಾರು ?

ಆಯುಕ್ತರು ( ಹಿರಿಯ ಐ.ಎ.ಎಸ್ ಅಧಿಕಾರಿ )

14 ) ಮಹಾನಗರ ಪಾಲಿಕೆಗೆ ಎಷ್ಟು ಸದಸ್ಯರನ್ನು ನಾಮಕರಣ ಮಾಡಲಾಗುತ್ತದೆ ?

5 ಜನ ಸದಸ್ಯರನ್ನು .

15 ) ಕರ್ನಾಟಕದಲ್ಲಿ ಎಷ್ಟು ಮಹಾನಗರ ಪಾಲಿಕೆಗಳಿವೆ ?

7 ಮಹಾನಗರ ಪಾಲಿಕೆಗಳಿವೆ .

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ಗ್ರಾಮೀಣ ಸ್ಥಳೀಯ ಸರ್ಕಾರದ ಮೂರು ಹಂತಗಳಾವುವು ?

1 ) ಜಿಲ್ಲಾ ಪಂಚಾಯತ್

2 ) ತಾಲ್ಲೂಕು ಪಂಚಾಯತ್

3 ) ಗ್ರಾಮ ಪಂಚಾಯತ್

2 ) ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಯಾರು ಆಯ್ಕೆ ಮಾಡುತ್ತಾರೆ ?

ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು .

3 ) ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಯಾರು ಆಯ್ಕೆ ಮಾಡುತ್ತಾರೆ ?

ತಾಲ್ಲೂಕು ಪಂಚಾಯಿತಿಯ ಚುನಾಯಿತ ಸದಸ್ಯರು .

4 ) ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರನ್ನು ಯಾರು ಆಯ್ಕೆ ಮಾಡುತ್ತಾರೆ ?

ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರು .

5 ) ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಎಂದರೇನು ?

ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಮೂರು ಹಂತದ ಆಡಳಿತಾತ್ಮಕ ರಚನೆಯಾಗದ್ದು , ರಾಷ್ಟ್ರೀಯ ಅಥವಾ ಸಂಯುಕ್ತ ರಾಜ್ಯ ಅಥವಾ ಪ್ರಾದೇಶಿಕ ಮತ್ತು ಸ್ಥಳೀಯ ಅಥವಾ ತಳಹಂತದ ವ್ಯವಸ್ಥೆ ಹೊಂದಿದೆ . ಈ ವ್ಯವಸ್ಥೆಯನ್ನೇ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಎನ್ನುವರು .

6 ) ಬಲವಂತರಾಯ್ ಮೆಹತಾ ವರದಿಯ ಪ್ರಕಾರ ಸ್ಥಳೀಯ ಸರ್ಕಾರದ ಮೂರು ಹಂತಗಳನ್ನು ಹೆಸರಿಸಿ .

1 ) ಗ್ರಾಮ ಮಟ್ಟದಲ್ಲಿ ಗ್ರಾಮ ಸಭಾ

2 ) ಬ್ಲಾಕ್ ಮಟ್ಟದಲ್ಲಿ ಪಂಚಾಯತ್ ಸಮಿತಿ

3 ) ಜಿಲ್ಲಾ ಮಟ್ಟದಲ್ಲಿ ಜಿಲ್ಲಾಪಂಚಾಯತ್

7 ) ಪಂಚಾಯತ್ ರಾಜ್ ವ್ಯವಸ್ಥೆ ಪ್ರಪ್ರಥಮವಾಗಿ ಎಲ್ಲಿ ಮತ್ತು ಯಾವಾಗ ಜಾರಿಗೆ ಬಂತು ?

1959 ಅಕ್ಟೋಬರ್ 2 ರಂದು ಪ್ರಪ್ರಥಮ ಬಾರಿಗೆ ರಾಜಸ್ತಾನ ರಾಜ್ಯದ ನಾಗೋರ್‌ನಲ್ಲಿ .

8 ) 73 ಮತ್ತು 74 ನೇ ಸಂವಿಧಾನ ತಿದ್ದುಪಡಿಗಳ ಮಹತ್ವವೇನು ?

ಗ್ರಾಮೀಣ ಸ್ಥಳೀಯ ಮತ್ತು ನಗರ ಸ್ಥಳೀಯ ಸರ್ಕಾರಗಳಿಗೆ ಸಂವಿಧಾನಾತ್ಮಕ ಸ್ಥಾನವನ್ನು ದೊರಕಿಸಿಕೊಡುವುದರೊಂದಿಗೆ ಹೆಚ್ಚು ಅಧಿಕಾರ , ಜವಾಬ್ದಾರಿ , ಕಾರ್ಯಾತ್ಮಕ ಮತ್ತು ಹಣಕಾಸಿನ ಸ್ವಾಯತ್ತತೆ ನಿಗಧಿತ ಸಮಯದಲ್ಲಿ ಚುನಾವಣೆಗಳು ಹಾಗೆಯೇ ಪ್ರಬಲ ಸಾಂಸ್ಥಿಕ ಸ್ಥಾನವನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು.

9 ) ಸ್ಥಳೀಯ ಸರ್ಕಾರ ಎಂದರೇನು ?

ಸ್ಥಳೀಯ ಸಮಸ್ಯೆಯನ್ನು ಸ್ಥಳೀಯ ಮಟ್ಟದಲ್ಲಿ , ಸ್ಥಳೀಯ ಜನರಿಂದಲೇ ಶೀಘ್ರವಾಗಿ ಪರಿಹರಿಸಿಕೊಳ್ಳಲು ಶಾಸನ ಬದ್ಧ ವಿಧಿಯಿಂದ ರಚಿಸಲ್ಪಟ್ಟ ಆಡಳಿತಾತ್ಮಕ ಸಂಸ್ಥೆಗಳೇ ಸ್ಥಳೀಯ ಸರ್ಕಾರಗಳು .

10 ) ಜಿಲ್ಲಾ ಪಂಚಾಯಿತಿಯ ಯಾವುದಾದರು ಎರಡು ಸ್ಥಾಯಿ ಸಮಿತಿಗಳನ್ನು ಹೆಸರಿಸಿ .

1 ) ಸಾಮಾನ್ಯ ಸಮಿತಿ

2 ) ಸಾಮಾಜಿಕ ನ್ಯಾಯ ಸಮಿತಿ

11 ) ಯಾವುದಾದರೂ ಎರಡು ಮಹಾನಗರ ಪಾಲಿಕೆಗಳನ್ನು ಹೆಸರಿಸಿ .

1 ) ಮೈಸೂರು

2 ) ಹುಬ್ಬಳ್ಳಿ – ಧಾರವಾಡ

3 ) ಮಂಗಳೂರು

4 ) ಬೆಳಗಾವಿ

5 ) ಗುಲ್ಬರ್ಗಾ

6 ) ದಾವಣೆಗೆರೆ

7 ) ಬಳ್ಳಾರಿ

12 ) ಮೇಯರ್‌ರವರನ್ನು ಯಾರು ಆಯ್ಕೆ ಮಾಡುತ್ತಾರೆ ?

ಮಹಾನಗರ ಪಾಲಿಕೆಯ ಸದಸ್ಯರು ಆಯ್ಕೆ ಮಾಡುತ್ತಾರೆ .

III . ಐದು ಅಂಕದ ಪ್ರಶ್ನೆಗಳು :

1 ) ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ವ್ಯವಸ್ಥೆಯ ಅರ್ಥ ಮತ್ತು ಪ್ರಾಮುಖ್ಯತೆಗಳನ್ನು ತಿಳಿಸಿ .

ಪ್ರಜಾಪ್ರಭುತ್ವ ವ್ಯವಸ್ಥೆಯು 3 ಹಂತದ ಆಡಳಿತಾತ್ಮಕ ರಚನೆಯಾಗಿದ್ದು , ರಾಷ್ಟ್ರೀಯ ಅಥವಾ ಸಂಯುಕ್ತ ರಾಜ್ಯ ಅಥವಾ ಪ್ರಾದೇಶಿಕ ಮತ್ತು ಸ್ಥಳೀಯ ಅಥವಾ ತಳಹಂತದ ವ್ಯವಸ್ಥೆಹೊಂದಿದೆ . ಈ ವ್ಯವಸ್ಥೆಯನ್ನೇ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಎನ್ನುವರು . ಇದರ ಪ್ರಾಮುಖ್ಯತೆ ಕೆಳಗಿನಂತಿದೆ .

1. , ಆಡಳಿತದ ಅನುಕೂಲಕ್ಕಾಗಿ

2. ಅಧಿಕಾರ ಕೇಂದ್ರೀಕರಣದ ನಿಯಂತ್ರಣ

3. ಆಡಳಿತದಲ್ಲಿ ದಕ್ಷತೆ ಸಾಧ್ಯ

4. ಸ್ಥಳೀಯ ಹಿತಾಸಕ್ತಿಗಳ ರಕ್ಷಣೆ ಸಾಧ್ಯ

5. ಆಡಳಿತ ವೆಚ್ಚದಲ್ಲಿ ಮಿತವ್ಯಯ ಸಾಧ್ಯ

6. ಪ್ರಜಾಪ್ರಭುತ್ವದ ಸಂವರ್ಧನೆ ಸಹಕಾರಿ

7. ಪ್ರಜೆಗಳ ರಾಜಕೀಯ ಶಿಕ್ಷಣ ನೀಡುತ್ತದೆ

2) 73 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ವಿವರಿಸಿ .

ಗ್ರಾಮೀಣ ಸ್ಥಳೀಯ ಸರ್ಕಾರಗಳನ್ನು ಬಲಪಡಿಸಲು ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಿದ್ಧಪಡಿಸಿದ್ದರು . ಆದರೆ ಇದಕ್ಕೆ ರಾಜ್ಯ ಸಭೆಯಲ್ಲಿ ಬೆಂಬಲ ದೊರೆಯಲಿಲ್ಲ . ಇವರ ಕನಸನ್ನು ನನಸು ಮಾಡಲು ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿಟ್ಟ ಕ್ರಮವನ್ನು ಕೈಗೊಂಡಿತು . ಪರಿಣಾಮವಾಗಿ ಸಂವಿಧಾನದ 73 ನೇ ತಿದ್ದುಪಡಿಗೆ ಸಂಸತ್ತಿನ ಅಂಗೀಕಾರ 1992 ದೊರೆತು ಏಪ್ರಿಲ್ 22 , 1993 ರಿಂದ ಜಾರಿಗೆ ಬಂದಿದೆ . ‘ ದಿ ಪಂಚಾಯತ್ ‘ ಶೀರ್ಷಿಕೆಯನ್ನೊಳಗೊಂಡ IX ನೇ ಭಾಗವನ್ನು ಸಂವಿಧಾನದಲ್ಲಿ ಸೇರಿಸಿ , 243 ರಿಂದ 243 – ಓ ವರೆಗೆ 16 ಹೊಸ ವಿಧಿಗಳನ್ನು ಅಳವಡಿಸಲಾಗಿದೆ . ಈ ವಿಧಿಗಳಲ್ಲಿ ಅಡಕವಾಗಿರುವ ಮುಖ್ಯಾಂಶಗಳೆಂದರೆ :

ಈ 3 ಹಂತಗಳಲ್ಲಿಸೂಕ್ತ ಮೀಸಲಾತಿಗೂ ಅವಕಾಶ ಕಲ್ಪಿಸಿದೆ .

1 ) ಮೂರು ಹಂತದ ಪಂಚಾಯತ್‌ಗಳನ್ನು ರಚಿಸುವುದು .

2 ) ಪಂಚಾಯಿತಿಗಳಿಗೆ ಸ್ಥಳೀಯ ಯೋಜನೆಗಳನ್ನು ರೂಪಿಸುವ ಮತ್ತು ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಯಿತು .

3 ) ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಸಂಸ್ಥೆಗಳಲ್ಲಿ ಇವುಗಳ ವ್ಯಾಪ್ತಿಗೊಳಪಟ್ಟಿ ಸಂಸದರು ಮತ್ತು ಶಾಸಕರು ಮತಚಲಾಯಿಸುವ ಹಕ್ಕಿನೊಂದಿಗೆ ಪದ ನಿಮಿತ್ತ ಸದಸ್ಯತ್ವ ಹೊಂದಿರಲು ಅವಕಾಶ .

4 ) ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಸದಸ್ಯರನ್ನು ಮತದಾರರು ನೇರವಾಗಿ ಆಯ್ಕೆ ಮಾಡುವ ಅವಕಾಶ .

5 ) ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ 1 ರಷ್ಟು ಮೀಸಲಾತಿ

6 ) ಪಂಚಾಯ್ತಿ ಸಂಸ್ಥೆಯ ಅವಧಿ ಮುಗಿದ ತಕ್ಷಣ 6 ತಿಂಗಳೊಳಗೆ ಚುನಾವಣೆಗಳನ್ನು ನಡೆಸುವ ಅಧಿಕಾರ ,

7 ) ರಾಜ್ಯ ಶಾಸಕಾಂಗಗಳಿಗೆ ಪಂಚಾಯ್ತಿ ಸಮಿತಿಗಳಿಗೆ ಸಂಬಂಧಿಸಿದ ಜಿಲ್ಲಾ ಸಮಿತಿಗಳನ್ನು ರಚಿಸುವ ಅಧಿಕಾರ ನೀಡಲಾಯಿತು ಇತ್ಯಾದಿ .

3 ) 74 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ವಿವರಿಸಿ

ನಗರ ಸ್ಥಳೀಯ ಸರ್ಕಾರಗಳ ಬಲವರ್ಧನೆ ಹಾಗೂ ಸಮರ್ಪಕ ಕಾವ್ಯ ನಿರ್ವಹಣೆಗೆ ಕೇಂದ್ರ ಸರ್ಕಾರ 1992 ರಲ್ಲಿ 74 ನೇ ಸಂವಿಧಾನ ತಿದ್ದುಪಡಿಯನ್ನು ಅಂಗೀಕರಿಸಿತು . ಇದು ‘ ನಗರಪಾಲಿಕೆ ಕಾಯ್ದೆ ‘ ಎಂದು ಹೆಸರು ಪಡೆದು 20 ನೇ ಏಪ್ರಿಲ್ 1993 ರಂದು ಜಾರಿಗೆ ಬಂದಿದೆ . ಇದರ ಮೂಲಕ ಹೊಸದಾಗಿ IX A ಭಾಗ ಹಾಗೂ 12 ನೇ ಅನುಸೂಚಿಯನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ . ಈ ಭಾಗದಲ್ಲಿ 243 – P ಯಿಂದ 243 – ZG ವರೆಗಿನ 18 ಹೊಸವಿಧಿಗಳನ್ನು ಸೇರಿಸಲಾಗಿದೆ . ಈ ವಿಧಿಗಳಲ್ಲಿ ಅಡಕವಾಗಿರುವ ಮುಖ್ಯಾಂಶಗಳೆಂದರೆ –

1 ) ತೆರಿಗೆಯ ಅಧಿಕಾರ ಮತ್ತು ಆಧಾಯದ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಡುವೆ ಸಂಬಂಧವನ್ನು ಸ್ಥಾಪಿಸುತ್ತದೆ .

2 ) ನಿಗಧಿತ ಸಮಯದಲ್ಲಿ ಚುನಾವಣೆಗಳನ್ನು ರಾಜ್ಯ ಸರ್ಕಾರಗಳು ನಡೆಸುವಂತೆ ಖಚಿತ ಪಡಿಸಿದೆ .

3 ) SC , ST , OBC ಮತ್ತು ಮಹಿಳೆಯರಿಗೆ ಸೂಕ್ತ ಮೀಸಲಾತಿ ಕಲ್ಪಿಸಿದೆ .

4 ) ಮೀಸಲಾತಿ ಸ್ಥಾನಗಳನ್ನು ನಿಗಧಿಪಡಿಸಲು ರಾಜ್ಯ ಶಾಸಕಾಂಗಕ್ಕೆ ಅಧಿಕಾರ ನೀಡಿದೆ .

5 ) ಇದರ ಸದಸ್ಯರು 5 ವರ್ಷದ ಅವಧಿಗೆ ವಿವಿಧ ವಾರ್ಡ್‌ಗಳಿಂದ ನೇರವಾಗಿ ಆಯ್ಕೆಯಾಗುತ್ತಾರೆ .

6 ) ಸ್ಥಳೀಯ ಸಂಸ್ಥೆ ವಿಸರ್ಜನೆಗೊಂಡ 6 ತಿಂಗಳೊಳಗೆ ಚುನಾವಣೆ ನಡೆಸಲಾಗುತ್ತದೆ .

7 ) ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂಸದರು , ಶಾಸಕರು ಮತ ಚಲಾಯಿಸುವ ಹಕ್ಕಿನೊಂದಿಗೆ ಪದನಿಮಿತ್ತ ಸದಸ್ಯತ್ವ ಹೊಂದಿರುತ್ತಾರೆ ಇತ್ಯಾದಿ .

4 ) ಗ್ರಾಮ ಪಂಚಾಯಿತಿಯ ರಚನೆಯನ್ನು ವಿವರಿಸಿ .

1993 ರ ಪಂಚಾಯತ್‌ರಾಜ್ ಕಾಯ್ದೆ ಪ್ರಕಾರ ಗ್ರಾಮ ಪಂಚಾಯಿತಿಯು ಗ್ರಾಮೀಣ ಸ್ಥಳೀಯ ಸರ್ಕಾರ ವ್ಯವಸ್ಥೆಯ ಪ್ರಥಮ ಹಂತವಾಗಿದೆ . ಈ ಕಾಯ್ದೆಯ ಪ್ರಕಾರ 5000 ರಿಂದ 7000 ಜನಸಂಖ್ಯೆಯನ್ನೊಳಗೊಂಡ ಒಂದು ಗ್ರಾಮ / ಗ್ರಾಮಗಳ ಸಮೂಹವನ್ನು ಒಂದು ಗ್ರಾಮಪಂಚಾಯ್ತಿ ಎಂದು ಪರಿಗಣಿಸಲಾಗುತ್ತದೆ . ಈ ನಿಯಮಕ್ಕನುಸಾರವಾಗಿ ಒಂದು ಪ್ರದೇಶವನ್ನು ಗ್ರಾಮ ಪಂಚಾಯಿತಿ ಎಂದು ಘೋಷಿಸುವ ಅಧಿಕಾರ ಸಹಾಯಕ ಆಯುಕ್ತರಿಗಿದೆ . ಉತ್ತರ ಕನ್ನಡ , ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಮಲೆನಾಡು ಪ್ರದೇಶಗಳಲ್ಲಿ 2000 ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯಿತಿಯ ರಚನೆಗೆ ಅವಕಾಶವಿದೆ . ಪ್ರತೀ 400 ಜನಕ್ಕೆ ಒಬ್ಬ ಪ್ರತಿನಿಧಿಯೆಂದು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರನ್ನು ನೇರವಾಗಿ ಚುನಾಯಿಸಲಾಗುತ್ತದೆ . ಈ ಆಯ್ಕೆ ಮೀಸಲಾತಿಗನುಗುಣವಾಗಿರುತ್ತದೆ . ಚುನಾಯಿತ ಸದಸ್ಯರು ತಮ್ಮಲ್ಲಿಯೇ ಒಬ್ಬ ಅಧ್ಯಕ್ಷ ಮತ್ತು ಒಬ್ಬ ಉಪಾಧ್ಯಕ್ಷರನ್ನು 30 ತಿಂಗಳ ಅವಧಿಗೆ ಆಯ್ಕೆಮಾಡಿಕೊಳ್ಳುತ್ತಾರೆ . ಗ್ರಾಮ ಪಂಚಾಯಿತಿಯ ಅಧಿಕಾರವಧಿ 5 ವರ್ಷಗಳು , ಗ್ರಾಮಪಂಚಾಯಿತಿ ಕನಿಷ್ಟ 2 ತಿಂಗಳಿಗೊಮ್ಮೆ ಸಭೆ ಸೇರಬೇಕು . ಸ್ಥಳೀಯ ಸಮಸ್ಯೆಗಳ ಮತ್ತು ಅಗತ್ಯಗಳ ಬಗೆಗೆ ಚರ್ಚಿಸಿ ಸೂಕ್ತ ನಿರ್ಣಯವನ್ನು ಕೈಗೊಳ್ಳಲು ಗ್ರಾಮಸಭೆಯನ್ನು ರಚಿಸಲಾಗುತ್ತದೆ .

5 ) ತಾಲ್ಲೂಕು ಪಂಚಾಯಿತಿಯ ರಚನೆಯನ್ನು ವಿವರಿಸಿ .

1993 ರ ಪಂಚಾಯತ್‌ರಾಜ್ ಕಾಯ್ದೆಯ ಅನ್ವಯ ತಾಲ್ಲೂಕು ಪಂಚಾಯಿತಿ ಗ್ರಾಮೀಣ ಸ್ಥಳೀಯ ಸರ್ಕಾರದ ಮಾಧ್ಯಮಿಕ ಹಂತವಾಗಿದೆ . ಈ ಕಾಯ್ದೆಯ ಅನ್ವಯ ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯಿತಿಯನ್ನು ಸ್ಥಾಪಿಸಲು ಅವಕಾಶವಿದೆ . ತಾಲ್ಲೂಕಿನ ಜನಸಂಖ್ಯೆಯ ಆಧಾರದ ಮೇಲೆ ಪ್ರತೀ 10,000 ಜನರಿಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ . ಒಂದು ಲಕ್ಷ ಜನಸಂಖ್ಯೆಯನ್ನು ಮೀರದ ಮೀಸಲಾತಿ ನಿಯಮಕ್ಕನುಗುಣವಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಸಾರ್ವತ್ರಿಕ ತಾಲ್ಲೂಕು ಪಂಚಾಯಿತಿಗಳು ಕನಿಷ್ಟ 11 ಮಂದಿ ಸದಸ್ಯರನ್ನು ಹೊಂದಿರತಕ್ಕದ್ದು ವಯಸ್ಕ ಮತದಾನದ ಮೂಲಕ ಚುನಾಯಿಸಲಾಗುತ್ತದೆ . ಮೀಸಲಾತಿ ನಿಯಮಕ್ಕನುಸಾರವಾಗಿ 20 ತಿಂಗಳ ಅವಧಿಗೆ ಒಬ್ಬ ಅಧ್ಯಕ್ಷ ಮತ್ತು ಒಬ್ಬ ಉಪಾಧ್ಯಕ್ಷರನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಲ್ಲೇ ಆರಿಸಲಾಗುತ್ತದೆ ತಾಲ್ಲೂಕು ಪಂಚಾಯಿತಿಯ ಅಧಿಕಾರವಧಿ 5 ವರ್ಷಗಳು , ಇದು ಕೆಳಗಿನ ಸದಸ್ಯರನ್ನು ಹೊಂದಿರುತ್ತದೆ .

1 ) ಚುನಾಯಿತ ಸದಸ್ಯರು

2 ) ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ , ರಾಜ್ಯಸಭಾ , ವಿಧಾನ ಸಭಾ ಮತ್ತು ವಿಧಾನ ಪರಿಷತ್‌ನ ಸದಸ್ಯರು

3 ) ತಾಲ್ಲೂಕು ಪಂಚಯಿತಿ ವ್ಯಾಪ್ತಿಯಲ್ಲಿ ಬರುವ / ರಷ್ಟು ಗ್ರಾಮಪಂಚಾಯಿತಿಗಳ ಅಧ್ಯಕ್ಷರು .

6 ) ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳನ್ನು ವಿವರಿಸಿ ,

1993 ರ ಪಂಚಾಯತ್‌ರಾಜ್ ಕಾಯ್ದೆ ಪ್ರಕಾರ ಜಿಲ್ಲಾ ಪಂಚಾಯತ್ ಗ್ರಾಮೀಣ ಸ್ಥಳೀಯ ಸರ್ಕಾರದ ಕೊನೆಯ ಹಂತವಾಗಿದೆ . ಪ್ರತಿಯೊಂದು ಜಿಲ್ಲಾ ಪಂಚಾಯ್ತಿಯು 5 ಸ್ಥಾಯಿ ಸಮಿತಿಗಳ ಮೂಲಕ ಕಾವ್ಯ ನಿರ್ವಹಿಸುತ್ತದೆ . ಆ ಸ್ಥಾಯಿ ಸಮಿತಿಗಳೆಂದರೆ

1 . ಸಾಮಾನ್ಯ ಸ್ಥಾಯಿ ಸಮಿತಿ : ಈ ಸಮಿತಿ ಒಬ್ಬ ಅಧ್ಯಕ್ಷ ಮತ್ತು 4 ಜನ ಸದಸ್ಯರನ್ನು ಹೊಂದಿದ್ದು , ಜಿಲ್ಲೆಯಲ್ಲಿನ ಸಂಪರ್ಕ , ಕಟ್ಟಡ , ಗ್ರಾಮೀಣ ವಸತಿ ಗ್ರಾಮಗಳ ಅಭಿವೃದ್ಧಿ ಯೋಜನೆಗಳು ಮುಂತಾದ ವಿಷಯಗಳನ್ನು ನೋಡಿಕೊಳ್ಳುತ್ತದೆ .

2. ಹಣಕಾಲು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ : ಇದು ಒಬ್ಬ ಅಧ್ಯಕ್ಷ ಮತ್ತು 4 ಜನ ಸದಸ್ಯರನ್ನೊಳಗೊಂಡಿದ್ದು ಜಿಲ್ಲಾ ಪಂಚಾಯ್ತಿಯ ವಾರ್ಷಿಕ ಆಯ – ವ್ಯಯವನ್ನು ರೂಪಿಸುತ್ತದೆ .

3. ಸಾಮಾಜಿಕ ನ್ಯಾಯ ಸಮಿತಿ : ಇದು ಒಬ್ಬರು ಅಧ್ಯಕ್ಷ ಮತ್ತು 4 ಜನ ಸದಸ್ಯರನ್ನೊಳಗೊಂಡಿದ್ದು SC , ST , OBC ಯವರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸುತ್ತದೆ .

4. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ : ಇದು ಒಬ್ಬ ಅಧ್ಯಕ್ಷ ಮತ್ತು 4 ಜನ ಸದಸ್ಯರನ್ನೊಳಗೊಂಡಿದ್ದು , ಜಿಲ್ಲೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ ಹಾಗೂ ಆರೋಗ್ಯ ಸೇವೆಗಳ ಕಾರ ಮಾಡುತ್ತದೆ . ನಿರ್ವಹಣೆ 194

5. ಕೃಷಿ ಮತ್ತು ಕೈಗಾರಿಕಾ ಸಮಿತಿ : ಇದು ಕೃಷಿ ಮತ್ತು ಕೈಗಾರಿಕಾಭಿವೃದ್ಧಿಗೆ ಕ್ರಮಿಸುತ್ತದೆ .

7 ) ಮಹಾನಗರ ಪಾಲಿಕೆಯ ರಚನೆಯನ್ನು ವಿವರಿಸಿ .

1976 ರ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆಯ ಪ್ರಕಾರ ಮಹಾನಗರ ಪಾಲಿಕೆ ರಚನೆಯಾಗಿದೆ . 3 ಲಕ್ಷ ಮೀರಿದ ಜನಸಂಖ್ಯೆಯುಳ್ಳ ನಗರವನ್ನು ಮಹಾ ನಗರ ಪಾಲಿಕೆ ‘ ಎನ್ನುವರು . ಇದು ಮೀಸಲಾತಿಗನುಗುಣವಾಗಿ ಚುನಾಯಿತ ಮತ್ತು ನಾಮಕರಣಗೊಂಡ ಸದಸ್ಯರನ್ನೊಳಗೊಂಡಿದೆ . ಇದರ ಸದಸ್ಯರನ್ನು ಕಾರ್ಪೋರೇಟರ್ ” ಎನ್ನುವರು . ಇವರ ಅಧಿಕಾರವಧಿ 5 ವರ್ಷಗಳು , ಚುನಾಯಿತ ಸದಸ್ಯರಲ್ಲೇ ಒಬ್ಬರನ್ನು ಮಹಾಪೌರ ಮತ್ತೊಬ್ಬ ಉಪಮಹಾಪೌರರನ್ನಾಗಿ ಮೀಸಲಾತಿ ನಿಯಮಕ್ಕನುಗುಣವಾಗಿ ಒಂದು ವರ್ಷದ ಅವಧಿಗೆ ಆರಿಸಲಾಗುತ್ತದೆ . ರಾಜ್ಯ ಸರ್ಕಾರವು ಸಮಾಜಸೇವೆ , ಶಿಕ್ಷಣ , ಆಡಳಿತ ಕ್ಷೇತ್ರದಲ್ಲಿ ಹೆಸರಾಂತ ವ್ಯಕ್ತಿಗಳಲ್ಲಿ 5 ಜನರನ್ನು ನಾಮಕರಣ ಮಾಡುತ್ತದೆ . ಸರ್ಕಾರವು ಪಾಲಿಕೆಯ ಆಡಳಿತಾತ್ಮಕ ಮುಖ್ಯಸ್ಥರನ್ನಾಗಿ ಹಿರಿಯ IAS ಅಧಿಕಾರಿಯವರನ್ನು ಆಯುಕ್ತರನ್ನಾಗಿ ನೇಮಕ ಮಾಡುತ್ತದೆ . ಪಾಲಿಕೆಯು ವಿವಿಧ ಸ್ಥಾಯಿ ಸಮಿತಿಗಳ ಮೂಲಕ ಪರಿಣಾಮಕಾರಿಯಾಗಿ ಕಾವ್ಯ ನಿರ್ವಹಿಸುತ್ತದೆ .

8 ) ಪುರಸಭೆಯ ಸ್ಥಾಯಿ ಸಮಿತಿಗಳು ಮತ್ತು ಹಣಕಾಸಿನ ಮೂಲಗಳನ್ನು ವಿವರಿಸಿ .

ಪುರಸಭೆಯು 4 ಸ್ಥಾಯಿ ಸಮಿತಿಗಳ ಮೂಲಕ ಕಾರನಿರ್ವಹಿಸುತ್ತದೆ . ಈ ಸ್ಥಾಯಿ ಸಮಿತಿಗಳು 12 ಕ್ಕಿಂತ ಕಡಿಮೆ ಹಾಗೂ 15 ಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದುವಂತಿಲ್ಲ . ಇವುಗಳ ಅಧಿಕಾರವಧಿ 1 ವರ್ಷ ಆ ಸಮಿತಿಗಳೆಂದರೆ –

1 ) ತೆರಿಗೆ , ಹಣಕಾಸು ಮತ್ತು ಅಪೀಲು ಸಮಿತಿ

2 ) ಸಾರ್ವಜನಿಕ ಆರೋಗ್ಯ , ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ

3 ) ನಗರ ಯೋಜನೆ ಮತ್ತು ಅಭಿವೃದ್ಧಿ ಸಮಿತಿ

4 ) ಲೆಕ್ಕ ಪತ್ರ ಸಮಿತಿ ಪುರಸಭೆಯ ಹಣಕಾಸಿನ ಮೂಲಗಳು ಕೆಳಗಿನಂತಿವೆ .

1 ) ಆಸ್ತಿ , ನೀರು , ವ್ಯಾಪಾರ , ವೃತ್ತಿ ಮತ್ತು ಜಾಹಿರಾತುಗಳ ಮೇಲಿನ ತೆರಿಗೆಗಳು

2 ) ಮಾರುಕಟ್ಟೆಗಳು , ವ್ಯಾಪಾರಿ ಮಳಿಗೆಗಳು ಮತ್ತು ಇತರ ಆಸ್ತಿಗಳಿಂದ ಬರುವ ತೆರಿಗೆಗಳು .

3 ) ರಾಜ್ಯ ಸರ್ಕಾರ ನೀಡುವ ಅನುದಾನ

4 ) ಸರ್ಕಾರದ ಅನುಮತಿಯೊಂದಿಗೆ ಸಾರ್ವಜನಿಕರಿಂದ ಎತ್ತುವ ಸಾಲ

5 ) ಪುರಸಭೆಯಿಂದ ವಿಧಿಸಲ್ಪಟ್ಟ ಶುಲ್ಕ ಮತ್ತು ಜುಲ್ಮಾನೆ

IV . ಹತ್ತು ಅಂಕದ ಪ್ರಶ್ನೆಗಳು :

1 ) ಗ್ರಾಮ ಪಂಚಾಯ್ತಿಯ ಕಾರ‍್ಯಗಳನ್ನು ವಿವರಿಸಿ .

ಪಂಚಾಯತ್ ರಾಜ್ ವ್ಯವಸ್ಥೆಯ ಪ್ರತಮ ಹಂತವಾದ ಗ್ರಾಮ ಪಂಚಾಯ್ತಿಯ ಕಾರ‍್ಯಗಳೆಂದರೆ –

1. ಸಾಮಾನ್ಯ ಕಾರ‍್ಯಗಳು :

* ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಹಳ್ಳಿಗಳ ಅಭಿವೃದ್ಧಿಗಾಗಿ ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸುವುದು.

* ಗ್ರಾಮ ಪಂಚಾಯ್ತಿಯ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಸಿದ್ಧಪಡಿಸುವುದು .

* ನೈಸರ್ಗಿಕ ವಿಕೋಪಗಳಿಗೆ ತುತ್ತಾದವರಿಗೆ ಸೂಕ್ತ ಪರಿಹಾರ ನೀಡುವುದು .

2. ಐಚ್ಛಿಕ ಕಾರ‍್ಯಗಳು :

* ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಹಳ್ಳಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಕ್ರೂಢೀಕರಣ

* ಕೃಷಿಯನ್ನು ಪ್ರೋತ್ಸಾಹಿಸುವುದು .

* ಪಶುಸಂಗೋಪನೆ , ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸುವುದು .

* ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು .

* ಗ್ರಾಮೀಣ ಮತ್ತು ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದು .

* ಇತರೆ ಸಂಪರ್ಕ ಮಾರ್ಗಗಳ ನಿರ್ಮಾಣ ಮತ್ತು ನಿರ್ವಹಣೆ

* ಗ್ರಾಮೀಣ ವಿದ್ಯುದ್ದೀಕರಣ ಮತ್ತು ವಿದ್ಯುತ್ ಪೂರೈಕೆ

* ಅಸಂಪ್ರದಾಯಿಕ ಶಕ್ತಿ ಮೂಲಗಳನ್ನು ಅಭಿವೃದ್ಧಿಪಡಿಸುವುದು

* ವಯಸ್ಕರ ಶಿಕ್ಷಣ , ಮತ್ತು ಅನೌಪಚಾರಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು .

*ಗ್ರಂಥಾಲಯ ಮತ್ತು ವಾಚನಾಲಯಗಳ ನಿರ್ಮಾಣ ಮತ್ತು ನಿರ್ವಹಣೆ

* ಬಡತನ ನಿರ್ಮೂಲನೆ , ಜನರಲ್ಲಿ ಅರಿವು ಮೂಡಿಸುವುದು ಮತ್ತು ಕಾರ‍್ಯಕ್ರಮ ರೂಪಿಸುವುದು .

* ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಬಗೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು .

* ದನಗಳ ಜಾತ್ರೆ ಮತ್ತು ಹಬ್ಬ ಹರಿದಿನಗಳ ನಿರ್ವಹಣೆ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಯೋಜನೆಗಳನ್ನು ಕಾರಗತಗೊಳಿಸುವುದು

*ಅಂಗವಿಕಲರು ಮತ್ತು ಮಾನಸಿಕ ಅಸ್ವಸ್ಥರ ಯೋಗಕ್ಷೇಮ ನೋಡಿಕೊಳ್ಳುವುದು

* ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಾಠ್ಯಕ್ರಮಗಳು

* ಸಾರ್ವಜನಿಕ ಉದ್ಯಾನವನಗಳು ಮತ್ತು ಆಟದ ಮೈದಾನಗಳ ಸಂರಕ್ಷಣೆ ಮತ್ತು ನಿರ್ವಹಣೆ

* ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲ್ವಿಚಾರಣೆ ಮಾಡುವುದು .

2 ) ತಾಲ್ಲೂಕು ಪಂಚಾಯ್ತಿಯ ಕಾರ‍್ಯಗಳನ್ನು ವಿವರಿಸಿ .

1993 ನೇ ಪಂಚಾಯತ್‌ರಾಜ್ ಅಧಿನಿಯಮ ಸೂಚಿಸಿರುವ 3 ಹಂತಗಳಲ್ಲಿ ತಾಲ್ಲೂಕು ಪಂಚಾಯ್ತಿಯು ಮಾಧ್ಯಮಿಕ ಹಂತವಾಗಿದೆ . ಇದರ ಕಾರ‍್ಯಗಳೆಂದರೆ :

1. ಸಾಮಾನ್ಯ ಕಾರ‍್ಯಗಳು :

* ರಾಜ್ಯ ಸರ್ಕಾರ | ಜಿಲ್ಲಾ ಪಂಚಾಯಿತಿಯಿಂದ ವಹಿಸಲ್ಪಟ್ಟ ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸಿ ಜಿಲ್ಲಾ ಯೋಜನೆಯೊಂದಿಗೆ ಹೊಂದಿಸುವುದು . ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮ ಪಂಚಾಯ್ತಿಗಳ ವಾರ್ಷಿಕ ಯೋಜನೆಗಳನ್ನು ಕ್ರೂಡೀಕರಿಸಿ ಜಿಲ್ಲಾಪಂಚಾಯ್ತಿಗೆ ಸಲ್ಲಿಸುವುದು

* ತಾಲ್ಲೂಕು ಪಂಚಾಯ್ತಿಯ ವಾರ್ಷಿಕ ಮುಂಗಡ ಪತ್ರವನ್ನು ಸಿದ್ಧಪಡಿಸಿ ಜಿಲ್ಲಾ ಪಂಚಾಯ್ತಿಗೆ ಸಲ್ಲಿಸುವುದು .

* ನೈಸರ್ಗಿಕ ವಿಕೋಪಗಳಿಗೆ ತುತ್ತಾದವರಿಗೆ ಪರಿಹಾರ ನೀಡುವುದು .

* ತಾಲ್ಲೂಕು ಮಟ್ಟದಲ್ಲಿ ನಡೆಯುವ ಎಲ್ಲಾ ಅಭಿವೃದ್ಧಿ ಕಾರಗಳ ಮೇಲ್ವಿಚಾರಣೆ , ಸಮನ್ವಯತೆ ಮತ್ತು ನಿರ್ದೇಶನ

* ತಾಲ್ಲೂಕು ಅಭಿವೃದ್ಧಿಗಾಗಿ ಯೋಜನೆ ರೂಪಿಸುವುದು .

2 ಐಚ್ಛಿಕ ಕಾರ‍್ಯಗಳು :

* ಕೃಷಿ ಹಾಗೂ ತೋಟಗಾರಿಕೆಯನ್ನು ಪ್ರೋತ್ಸಾಹಿಸುವುದು .

* ಭೂ ಅಭಿವೃದ್ಧಿ , ಮಣ್ಣಿನ ಸಂರಕ್ಷಣೆಗೆ ಪೂರಕ ಯೋಜನೆಗಳ ಅನುಷ್ಠಾನ

* ಸಣ್ಣ ನೀರಾವರಿ ಯೋಜನೆಗಳ ಅನುಷ್ಟಾನ

* ಪಶುಸಂಗೋಪನೆ , ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಗೆ ಪ್ರೋತ್ಸಾಹ

* ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವುದು ,

* ಗ್ರಾಮೀಣ ಮತ್ತು ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ಗ್ರಾಮೀಣ ವಸತಿ ಯೋಜನೆಗಳ ಅನುಷ್ಠಾನ

* ತಾಲ್ಲೂಕಿನ ರಸ್ತೆ , ಸೇತುವೆ ಇತರ ಸಂಪರ್ಕ ಸೌಲಭ್ಯಗಳ ನಿರ್ಮಾಣ

* ಅಸಂಪ್ರದಾಯಿಕ ಶಕ್ತಿ ಮೂಲಗಳ ಅಭಿವೃದ್ಧಿ

* ಬಡತನ ನಿರ್ಮೂಲನಾ ಕಾವ್ಯಗಳ ಅನುಷ್ಟಾನ ಮತ್ತು ಮೇಲ್ವಿಚಾರಣೆ

* ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಸ್ಥಾಪಿಸಿ ತಾಲ್ಲೂಕು ಮಟ್ಟದ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ

* ಗ್ರಾಮೀಣ ಕರಕುಶಲ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ವೃತ್ತಿಶಿಕ್ಷಣ ತರಬೇತಿ ಕೇಂದ್ರಗಳನ್ನು ತೆರೆಯುವುದು .

* ವಯಸ್ಕರ ಶಿಕ್ಷಣ ಮತ್ತು ಅನೌಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದ ಕಾರಕ್ರಮಗಳ ಅನುಷ್ಟಾನ

* ತಾಲ್ಲೂಕಿನ ಜಾತ್ರೆ , ಹಬ್ಬ ಹರಿದಿನ , ಸಂತೆ , ಮಾರುಕಟ್ಟೆಗಳ ನಿರ್ವಹಣೆ ಗ್ರಾಮೀಣ ಪ್ರದೇಶದ ವಿದ್ಯುದೀಕರಣ

* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಟಾನ

* ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಕಾಠ್ಯಕ್ರಮಗಳ ಅನುಷ್ಟಾನ 4 ಅಂಗವಿಕಲರು , ಬುದ್ಧಿಮಾಂದ್ಯರು ಮತ್ತು ನಿರಾಶ್ರಿತರ ಕ್ಷೇಮಾಭಿವೃದ್ಧಿ ಕಾರಕ್ರಮಗಳ ಪ್ರೋತ್ಸಾಹ

* SC , ST , OBC ಗಳ ಶೈಕ್ಷಣಿಕ , ಆರ್ಥಿಕ ಮತ್ತು ಸಾಮಾಜಿಕ ಹಿತಾಸಕ್ತಿ ರಕ್ಷಣೆ

* ಸಾಮುದಾಯಿಕ ಆಸ್ತಿಗಳ ಸಂರಕ್ಷಣೆ

* ಸಹಕಾರ ಕ್ಷೇತ್ರದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು

* ತಾಲ್ಲೂಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಟಾನ . ಗ್ರಂಥಾಲಯಗಳ ಸ್ಥಾಪನೆ ಮತ್ತು ನಿರ್ವಹಣೆ ಕುಡಿಯುವ ನೀರಿನ ಪೂರೈಕೆ ಮತ್ತು ಗ್ರಾಮೀಣ ನೈರ್ಮಲೀಕರಣ

*ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ

* ರಾಜ್ಯ ಸರ್ಕಾರದ ಆದೇಶದ ಮೇರೆಗೆ ಇತರೆ ಕಾರಗಳನ್ನು ನಿರ್ವಹಿಸುವುದು .

3 ) ಜಿಲ್ಲಾ ಪಂಚಾಯ್ತಿಯ ರಚನೆ ಮತ್ತು ಕಾರ‍್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

1993 ರ ಕರ್ನಾಟಕ ರಾಜ್ಯ ಪಂಚಾಯತ್‌ರಾಜ್ ಅಧಿನಿಯಮದ ಪ್ರಕಾರ ಜಿಲ್ಲಾ ಪಂಚಾಯತ್‌ರಾಜ್ ವ್ಯವಸ್ಥೆಯ ಕೊನೆಯ ಹಂತವಾಗದೆ . ಇದರ ಸದಸ್ಯರ ಸಂಖ್ಯೆಯನ್ನು ಜಿಲ್ಲೆಯ ಜನಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ . 40,000 ಜನರಿಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ . ಆದರೆ , ಉತ್ತರ ಕನ್ನಡ ಜಿಲ್ಲೆಯಲ್ಲಿ 30,000 ಜನರಿಗೆ ಕೊಡಗು ಮತ್ತು ಚಿಕ್ಕಮಗಳಿಗರು ಜಿಲ್ಲೆಯಲ್ಲಿ 18,000 ಜನರಿಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ . ಮೀಸಲಾತಿ ನಿಯಮಕ್ಕನುಗುಣವಾಗಿ ಇದರ ಸದಸ್ಯರನ್ನು 5 ವರ್ಷಗಳ ಅವಧಿಗೆ ಜನರು ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಆರಿಸುತ್ತಾರೆ . ಹಾಗೆಯೇ 30 ತಿಂಗಳ ಅವಧಿಗೆ ತಮ್ಮಲ್ಲಿಯೇ ಒಬ್ಬ ಅಧ್ಯಕ್ಷ ಮತ್ತು ಒಬ್ಬ ಉಪಾಧ್ಯಕ್ಷನನ್ನು ಮೀಸಲಾತಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ . ಇದು ಜಿಲ್ಲೆಯಲ್ಲಿನ ಎಲ್ಲಾ ತಾಲ್ಲೂಕು ಪಂಚಾಯ್ತಿಗಳ ಅಧ್ಯಕ್ಷರು ಶಾಸಕರು ಮತ್ತು ಸಂಸದರು ಜಿಲ್ಲಾ ಪಂಚಾಯ್ತಿಯ ಸದಸ್ಯರಾಗಿದ್ದು , ಇವರು ಸಭೆಯಲ್ಲಿ ಭಾಗವಹಿಸುವ ಮತ್ತು ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ . ಜಿಲ್ಲಾ ಪಂಚಾಯ್ತಿಯ ಆಡಳಿತ ನಿರ್ವಹಿಸಲು ಜಿಲ್ಲಾಧಿಕಾರಿಗಳಿಗೆ ಸಮನಾದ ಸ್ಥಾನಮಾನವುಳ್ಳ ಐ.ಎ.ಎಸ್ . ಅಧಿಕಾರಿಯನ್ನು ಮುಖ್ಯ ಕಾರ ನಿರ್ವಹಣಾಧಿಕಾರಿ ( ಸಿ.ಇ.ಒ ) ಯನ್ನಾಗಿ ಸರ್ಕಾರಿ ನೇಮಕ ಮಾಡುತ್ತಾರೆ . ಲೆಕ್ಕಾಧಿಕಾರಿ ಉಪಕಾರದರ್ಶಿ ಮತ್ತು ಇತರೆ ಸಿಬ್ಬಂದಿಯನ್ನು ಆಡಳಿತವು ಒಳಗೊಂಡಿರುತ್ತದೆ . ಇದರ ಕಾರ‍್ಯಗಳು ಕೆಳಗಿನಂತಿವೆ .

1. ಸಾಮಾನ್ಯ ಕಾರ‍್ಯಗಳು :

* ರಾಜ್ಯ ಸರ್ಕಾರದ ಯೋಜನೆಗಳ ಅನ್ವಯ ಜಿಲ್ಲಾ ಪಂಚಾಯ್ತಿಯು ವಾರ್ಷಿಕ ಯೋಜನೆಗಳನ್ನು ರೂಪಿಸುವುದು . ಜಿಲ್ಲಾ ಪಂಚಾಯ್ತಿಯ ವಾರ್ಷಿಕ ಆಯವ್ಯದ ವರದಿಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸುವುದು .

* ನೈಸರ್ಗಿಕ ವಿಪತ್ತುಗೊಳಗಾದವರಿಗೆ ಪರಿಹಾರ ಕಾರ ಕೈಗೊಳ್ಳುವುದು . ಜಿಲ್ಲಾ ಮಟ್ಟದಲ್ಲಿ ನಡೆಯುವ ಎಲ್ಲಾ ಅಭಿವೃದ್ಧಿ ಕಾರಗಳ ಮೇಲ್ವಿಚಾರಣೆ , ಸಮನ್ವಯತೆ ಮತ್ತು ನಿರ್ದೇಶನ

* ಜಿಲ್ಲೆಯ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು .

2. ಐಚ್ಛಿಕ ಕಾರಗಳು :

* ಕೃಷಿ ಮತ್ತು ತೋಟಗಾರಿಕೆಯನ್ನು ಪ್ರೋತ್ಸಾಹಿಸುವುದು ಭೂ ಅಭಿವೃದ್ಧಿ , ಮಣ್ಣಿನ ಸಂರಕ್ಷಣೆಗೆ ಪೂರಕ ಯೋಜನೆಗಳ ಅನುಷ್ಟಾನ

* ಸಣ್ಣ ನೀರಾವರಿ ಯೋಜನೆಗಳ ಅನುಷ್ಟಾನ

* ಪಶುಸಂಗೋಪನೆ , ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಗೆ ಪ್ರೋತ್ಸಾಹ ಮೀನುಗಾರಿಕೆಯನ್ನು ಪ್ರೋತ್ಸಹಿಸುವುದು ಗ್ರಾಮೀಣ ಮತ್ತು ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ

* ಗ್ರಾಮಿಣ ವಸತಿ ಯೋಜನೆಗಳ ಅನುಷ್ಟಾನ

* ತಾಲ್ಲೂಕಿನ ರಸ್ತೆ , ಸೇತುವೆ , ಇತರೆ ಸಂಪರ್ಕ ಸೌಲಭ್ಯಗಳ ನಿರ್ಮಾಣ

* ಅಸಂಪ್ರದಾಯಿಕ ಶಕ್ತಿಮೂಲಗಳ ಅಭಿವೃದ್ಧಿ

* ಬಡತನ ನಿರ್ಮೂಲನಾ ಕಾಠ್ಯಕ್ರಮಗಳ ಅನುಷ್ಟಾನ ಮತ್ತು ಮೇಲ್ವಿಚಾರಣೆ

* ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಸ್ಥಾಪಿಸಿ ತಾಲ್ಲೂಕು ಮಟ್ಟದ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ

* ಗ್ರಾಮೀಣ ಕರಕುಶಲ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ವೃತ್ತಿ ಶಿಕ್ಷಣ ತರಬೇತಿ ಕೇಂದ್ರಗಳನ್ನು ತೆರೆಯುವುದು .

* ವಯಸ್ಕರ ಶಿಕ್ಷಣ , ಅನೌಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದ ಕಾರಕ್ರಮಗಳ ಅನುಷ್ಟಾನ ಜಿಲ್ಲೆಯಲ್ಲಿ ಪ್ರಮುಖವಾದ ಜಾತ್ರೆ , ಹಬ್ಬ ಹರಿದಿನ , ಸಂತೆ , ಮಾರುಕಟ್ಟೆಗಳ ನಿರ್ವಹಣೆ ಆಸ್ತಿಗಳ ಸಂರಕ್ಷಣೆ

* ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ

* ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು .

* ಸಹಕಾರ ಕ್ಷೇತ್ರದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು

* ಗ್ರಂಥಾಲಯಗಳ ಸ್ಥಾಪನೆ ಮತ್ತು ನಿರ್ವಹಣೆ

* ಕುಡಿಯುವ ನೀರಿನ ಪೂರೈಕೆ ಹಾಗೂ ಗ್ರಾಮೀಣ ನೈರ್ಮಲೀಕರಣ

* ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ

* ರಾಜ್ಯ ಸರ್ಕಾರದ ಆದೇಶದ ಮೇರೆಗೆ ಇತರೆ ಕಾವ್ಯಗಳನ್ನು ನಿರ್ವಹಿಸುವುದು .

4 ) ಮಹಾನಗರ ಪಾಲಿಕೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ವಿವರಿಸಿ .

ಮಹಾನಗರ ಪಾಲಿಕೆಯು ನಗರ ಸ್ಥಳೀಯ ಸರ್ಕಾರದ ಒಂದು ವಿಧವಾಗಿದ್ದು , ಸಂವಿಧಾನದ 243 P ಯಿಂದ 243 ZG ವರೆಗಿನ ವಿಧಿಗಳು ನಗರ ಪಾಲಿಕೆಗಳ ರಚನೆ , ಅಧಿಕಾರ ಮತ್ತು ಕಾರಗಳಿಗೆ ಸಂಬಂಧಿಸಿದಂತೆ ಚರ್ಚಿಸುತ್ತದೆ . ಅಂತಹ ಅಧಿಕಾರ ಮತ್ತು ಕರ್ತವ್ಯಗಳು ಕೆಳಗಿನಂತಿವೆ .

ಸಾಮಾನ್ಯ ಕಾರ‍್ಯಗಳು :

* ನಗರದ ಪೌರಾಡಳಿತ ಸಮಗ್ರ ನಿರ್ವಹಣೆ

* ಪಾಲಿಕೆಯ ಮುಂಗಡಪತ್ರ ರಚನೆ ಮತ್ತು ಮುಂಗಡ ಪತ್ರಕ್ಕೆ ಅನುಮೋದನೆ ಪಡೆಯುವುದು .

2. ಕಡ್ಡಾಯ ಕಾರ‍್ಯಗಳು :

* ರಸ್ತೆಗಳು , ಸೇತುವೆಗಳು , ಮಾರುಕಟ್ಟೆಗಳು ಮತ್ತು ಆಸ್ಪತ್ರೆಗಳ ನಿರ್ಮಾಣ ಹಾಗೂ ನಿರ್ವಹಣೆ

* ಕುಡಿಯುವ ಹಾಗೂ ಇತರೆ ಉದ್ದೇಶಗಳಿಗೆ ನೀರನ್ನು ಪೂರೈಸುವುದು .

* ರಸ್ತೆಗಳಿಗೆ ನಾಮಕರಣ ಮತ್ತು ಮನೆಗಳಿಗೆ ಸಂಖ್ಯೆಗಳನ್ನು ನೀಡುವುದು . ತನ್ನ ಕಟ್ಟಡಗಳು , ಸಂಕೀರ್ಣಗಳು , ಮಳಿಗೆಗಳು ಹಾಗೂ ಮಾರುಕಟ್ಟೆಗಳ ನಿರ್ವಹಣೆ .

* ರಸ್ತೆಗಳು ಹಾಗೂ ಮಾರುಕಟ್ಟೆಗಳಿಗೆ ವಿದ್ಯುತ್ ಪೂರೈಕೆ

* ಅಪಾಯಕಾರಿ ಪ್ರಾಣಿಗಳು , ಪಕ್ಷಿಗಳು ಮತ್ತು ಬೀದಿನಾಯಿಗಳನ್ನು ನಿಯಂತ್ರಿಸುವುದು .

* ಸಾರ್ವಜನಿಕ ಆರೋಗ್ಯ ಸಂರಕ್ಷಣೆ ಹಾಗೂ ಲಸಿಕೆ ಹಾಕಿಸುವುದು . ಆಹಾರ ಪದಾರ್ಥ , ಔಷಧ ಹಾಲು ಮಾರಾಟದ ನಿರ್ವಹಣೆ ಮತ್ತು ಕಲಬೆರಿಕೆಯನ್ನು

* ಪಡೆಯುವುದು .

* ಜನನ ಮತ್ತು ಮರಣಗಳ ನೋಂದಣಿ ಹಾಗೂ ಶವಗಳನ್ನು ಸಾಗಿಸುವುದು .

* ಕಟ್ಟಡ ನಿರ್ಮಾಣ ನಿಯಂತ್ರಣ ಹಾಗೂ ಅನುಮತಿ ನೀಡುವುದು . ಸಾರ್ವಜನಿಕ ಸ್ಮಾರಕಗಳಾದ ಕೊಟೆ ಕೊತ್ತಲಗಳನ್ನು ರಕ್ಷಿಸುವುದು * ರುದ್ರಭೂಮಿಗಳ ನಿರ್ಮಾಣ ಮತ್ತು ನಿರ್ವಹಣೆ

* ಸಾರ್ವಜನಿಕ ಉದ್ಯಾನವನಗಳ ಮತ್ತು ಕ್ರೀಡಾಂಗಣಗಳ ನಿರ್ಮಾಣ ಮತ್ತು ನಿರ್ವಹಣೆ

* ಸಸಿಗಳನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದು .

* ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ

* ನಗರ ನೈರ್ಮಲೀಕರಣ ಮತ್ತು ಒಳಚರಂಡಿ ವ್ಯವಸ್ಥೆ

* ಪ್ರಾಥಮಿಕ ಶಾಲೆಗಳ ನಿರ್ಮಾಣ ಮತ್ತು ಸಂರಕ್ಷಣೆ

* ಗ್ರಂಥಾಲಯ ಮತ್ತು ವಾಚನಾಲಯಗಳ ನಿರ್ಮಾಣ ಮತ್ತು ನಿರ್ವಹಣೆ

3. ಐಚ್ಛಿಕ ಕಾರ್ಯಗಳು :

* ವಸ್ತು ಸಂಗ್ರಹಾಲಯ ಹಾಗೂ ವಿಶ್ರಾಂತಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ

* ಜನಗಣತಿಯನ್ನು ನಡೆಸುವುದು

* ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುವುದು

* ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದು

* ಅಶಕ್ತರು , ಅಂಗವಿಕಲರು ಹಾಗೂ ರೋಗಗಳ ಯೋಗಕ್ಷೇಮಕ್ಕಾಗಿ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸುವುದು .

* ಗರ್ಭಿಣಿಯರ ಶುಶ್ರೂಷ ಗೃಹ ಹಾಗೂ ಶಿಶು ಕಲ್ಯಾಣ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ

* ಪಶು ವೈದ್ಯಕೀಯ ಆಸ್ಪತ್ರೆ ಸ್ಥಾಪನೆ ಮತ್ತು ನಿರ್ವಹಣೆ 202

* ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಪರಿಹಾರ ನೀಡಲು ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳುವುದು .

* ಪ್ರಾಣಿಗಳಿಗೆ ಕುಡಿಯುವ ನೀರನ ತೊಟ್ಟಿಗಳ ನಿರ್ಮಾಣಕ್ಕೆ ನಿರ್ವಹಣೆ

5 ) ನಗರ ಸಭೆಯ ರಚನೆ ಮತ್ತು ಕಾರ‍್ಯಗಳನ್ನು ವಿವರಿಸಿ .

ನಗರ ಸಭೆಯು ನಗರ ಸ್ಥಳೀಯ ಸರ್ಕಾರವಾಗಿದ್ದು , ನಗರದ ಜನಸಂಖ್ಯೆಯನ್ನಾಧಿರಿಸಿ ನಗರಸಭೆ ಮತ್ತು ಪಟ್ಟಣ ಪುರಸಭೆಗಳನ್ನು ರಚಿಸಲಾಗುತ್ತದೆ . 1964 ರ ಕರ್ನಾಟಕ ಮುನ್ಸಿಪಲ್ ಕಾಯ್ದೆಗೆ ಅಗತ್ಯ ತಿದ್ದುಪಡಿಯನ್ನು ತಂದು ನಗರದ ಜನಸಂಖ್ಯೆ 50 ಸಾವಿರಕ್ಕಿಂತ ಹೆಚ್ಚಿಗೆ ಮತ್ತು 3 ಲಕ್ಷಕ್ಕಿಂತ ಕಡಿಮೆ ಇದ್ದರೆ ಅದನ್ನು ನಗರಸಭೆ ಎಂದು ಪರಿಗಣಿಸಲಾಗುತ್ತದೆ . ಸಾಮಾನ್ಯವಾಗಿ ನಗರಸಭೆಗೆ 31 ರಿಂದ 37 ಸದಸ್ಯರಿರುತ್ತಾರೆ . ಇವರನ್ನು ಮೀಸಲಾತಿಗನುಗುಣವಾಗಿ 5 ವರ್ಷದ ಅವಧಿಗೆ , ವಿವಿಧ ವಾರ್ಡ್‌ಗಳಿಂದ ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಜನರು ನೇರವಾಗಿ ಚುನಾಯಿಸುತ್ತಾರೆ . 5 ಮಂದಿ ನಾಮ ನಿರ್ದೇಶಿತ ಸದಸ್ಯರನ್ನು ಸರ್ಕಾರ ನೇಮಿ ಇವರಿಗೆ ಸಭೆಗೆ ಹಾಜರಾಗಲು ಅವಕಾಶವಿದೆಯೇ ಹೊರತು ಮತದಾನಕ್ಕೆ ಅವಕಾಶವಿಲ್ಲ . ನಗರ ಸಭೆಯ ವ್ಯಾಪ್ತಿಯ ವಿಧಾನಸಭೆ , ವಿಧಾನ ಪರಿಷತ್ , ಲೋಕಸಭೆ , ರಾಜ್ಯಸಭೆಗಳ ಸದಸ್ಯರುಗಳು ಇದರ ಸದಸ್ಯತ್ವವನ್ನು ಹೊಂದಿದ್ದು , ಸಭೆಗಳಲ್ಲಿ ಭಾಗವಹಿಸಿ ಮತಚಲಾಯಿಸುವ ಅಧಿಕಾರ ಹೊಂದಿರುತ್ತಾರೆ . ನಗರಸಭೆಯ ಸದಸ್ಯರು ಮೀಸಲಾತಿಗನುಗುಣವಾಗಿ ತಮ್ಮಲ್ಲಿಯೇ ಒಬ್ಬರನ್ನು ಅಧ್ಯಕ್ಷ ಮತ್ತು ಮತ್ತೊಬ್ಬರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ . ನಗರಸಭೆಗೆ ಆಯುಕ್ತರನ್ನು ಆಡಳಿತಾಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಿಸುತ್ತದೆ . ರಾಜ್ಯಸಭೆಯ ಕಾರಗಳು ಕೆಳಗಿನಂತಿವೆ .

1. ಸಾಮಾನ್ಯ ಕಾರ‍್ಯ ಗಳು :

* ನಗರ ಸಭೆಯ ಪೌರಾಡಳಿತ ಸಮಗ್ರ ನಿರ್ವಹಣೆ

* ನಗರ ಸಭೆಯ ಮುಂಗಡಪತ್ರ ರಚನೆ ಮತ್ತು ಮುಂಗಡ ಪತ್ರಕ್ಕೆ ಅನುಮೋದನೆ ಪಡೆಯುವುದು .

2 . ಕಡ್ಡಾಯ ಕಾರ‍್ಯಗಳು :

*ರಸ್ತೆಗಳು , ಸೇತುವೆಗಳು , ಮಾರುಕಟ್ಟೆಗಳು ಮತ್ತು ಆಸ್ಪತ್ರೆಗಳ ನಿರ್ಮಾಣ ಹಾಗೂ ನಿರ್ವಹಣೆ

* ಕುಡಿಯುವ ಹಾಗೂ ಇತರೆ ಉದ್ದೇಶಗಳಿಗೆ ನೀರನ್ನು ಪೂರೈಸುವುದು . 203

* ರಸ್ತೆಗಳಿಗೆ ನಾಮಕರಣ ಮತ್ತು ಮನೆಗಳಿಗೆ ಸಂಖ್ಯೆಗಳನ್ನು ನೀಡುವುದು .

* ತನ್ನ ಕಟ್ಟಡಗಳು , ಸಂಕೀರ್ಣಗಳು , ಮಳಿಗೆಗಳು ಹಾಗೂ ಮಾರುಕಟ್ಟೆಗಳ ನಿರ್ವಹಣೆ . ರಸ್ತೆಗಳು ಹಾಗೂ ಮಾರುಕಟ್ಟೆಗಳಿಗೆ ವಿದ್ಯುತ್ ಪೂರೈಕೆ

* ಅಪಾಯಕಾರಿ ಪ್ರಾಣಿಗಳು , ಪಕ್ಷಿಗಳು ಮತ್ತು ಬೀದಿನಾಯಿಗಳನ್ನು ನಿಯಂತ್ರಿಸುವುದು .

* ಸಾರ್ವಜನಿಕ ಆರೋಗ್ಯ ಸಂರಕ್ಷಣೆ ಹಾಗೂ ಲಸಿಕೆ ಹಾಕಿಸುವುದು .

* ಆಹಾರ ಪದಾರ್ಥ , ಔಷಧಹಾಲು ಮಾರಾಟದ ನಿರ್ವಹಣೆ ಮತ್ತು ಕಲಬೆರಿಕೆಯನ್ನು ಪಡೆಯುವುದು .

* ಜನನ ಮತ್ತು ಮರಣಗಳ ನೋಂದಣಿ ಹಾಗೂ ಶವಗಳನ್ನು ಸಾಗಿಸುವುದು .

* ಕಟ್ಟಡ ನಿರ್ಮಾಣ ನಿಯಂತ್ರಣ ಹಾಗೂ ಅನುಮತಿ ನೀಡುವುದು . ಸಾರ್ವಜನಿಕ ಸ್ಮಾರಕಗಳಾದ ಕೋಟೆ ಕೊತ್ತಲಗಳನ್ನು ರಕ್ಷಿಸುವುದು

* ರುದ್ರಭೂಮಿಗಳ ನಿರ್ಮಾಣ ಮತ್ತು ನಿರ್ವಹಣೆ

* ಸಾರ್ವಜನಿಕ ಉದ್ಯಾನವನಗಳ ಮತ್ತು ಕ್ರೀಡಾಂಗಣಗಳ ನಿರ್ಮಾಣ ಮತ್ತು ನಿರ್ವಹಣೆ

* ಸಸಿಗಳನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದು .

* ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ

* ನಗರ ನೈರ್ಮಲೀಕರಣ ಮತ್ತು ಒಳಚರಂಡಿ ವ್ಯವಸ್ಥೆ

* ಪ್ರಾಥಮಿಕ ಶಾಲೆಗಳ ನಿರ್ಮಾಣ ಮತ್ತು ಸಂರಕ್ಷಣೆ

* ಗ್ರಂಥಾಲಯ ಮತ್ತು ವಾಚನಾಲಯಗಳ ನಿರ್ಮಾಣ ಮತ್ತು ನಿರ್ವಹಣೆ

3. ಐಚ್ಛಿಕ ಕಾರ್ಯಗಳು :

* ವಸ್ತು ಸಂಗ್ರಹಾಲಯ ಹಾಗೂ ವಿಶ್ರಾಂತಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ

* ಜನಗಣತಿಯನ್ನು ನಡೆಸುವುದು

* ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುವುದು

* ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದು

* ಅಶಕ್ತರು , ಅಂಗವಿಕಲರು ಹಾಗೂ ರೋಗಗಳ ಯೋಗಕ್ಷೇಮಕ್ಕಾಗಿ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸುವುದು .

* ಗರ್ಭಿಣಿಯರ ಶುಶೂಷಾ ಗೃಹ ಹಾಗೂ ಶಿಶು ಕಲ್ಯಾಣ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ

* ಪಶು ವೈದ್ಯಕೀಯ ಆಸ್ಪತ್ರೆ ಸ್ಥಾಪನೆ ಮತ್ತು ನಿರ್ವಹಣೆ

ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಪರಿಹಾರ ನೀಡಲು ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳುವುದು .

* ಪ್ರಾಣಿಗಳಿಗೆ ಕುಡಿಯುವ ನೀರನ ತೊಟ್ಟಿಗಳ ನಿರ್ಮಾಣಕ್ಕೆ ನಿರ್ವಹಣೆ

ಹೆಚ್ಚುವರಿ ಪ್ರಶೋತ್ತರಗಳು

I ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1 ) ಮಹಾನಗರ ಪಾಲಿಕೆಯ ಮುಖ್ಯಸ್ಥರು ಯಾರು ?

ಮಹಾಪೌರರು | ಮೇಯರ್

2 ) ಬಲವಂತರಾಯ್ ಮೆಹತಾ ಎಷ್ಟು ಹಂತದ ಸ್ಥಳೀಯರ ಸರ್ಕಾರಗಳನ್ನು ಪ್ರತಿಪಾದಿಸಿದರು ?

3 ಹಂತಗಳ ಸ್ಥಳೀಯ ಸರ್ಕಾರ

3) ಅಶೋಕ್‌ಮೆಹತಾ ಎಷ್ಟು ಹಂತದ ಸ್ಥಳೀಯ ಸರ್ಕಾರಗಳನ್ನು ಪ್ರತಿಪಾದಿಸಿದರು ?

2 ಹಂತಗಳ ಸ್ಥಳೀಯ ಸರ್ಕಾರ

4 ) ಕರ್ನಾಟಕದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂತು ?

1955 ರಲ್ಲಿ ಅಸ್ತಿತ್ವಕ್ಕೆ ಬಂತು .

5) ತಾಲ್ಲೂಕು ಪಂಚಾಯ್ತಿಯ ಆಡಳಿತ ಅಧಿಕಾರಿ ಯಾರು ?

ಕಾರ್ಯನಿರ್ವಾಹಕ ಅಧಿಕಾರಿ

6 ) ಗ್ರಾಮಪಂಚಾಯ್ತಿಯ ಆಡಳಿತ ಅಧಿಕಾರಿ ಯಾರು ?

ಕಾರ್ಯದರ್ಶಿ

7 ) 73 ನೇ ಸಂವಿಧಾನ ತಿದ್ದುಪಡಿ ಯಾವಾಗ ಜಾರಿಯಾಯಿತು ?

22 ಏಪ್ರಿಲ್ 1993 ರಂದು

8) 74 ನೇ ಸಂವಿಧಾನ ತಿದ್ದುಪಡಿ ಯಾವಾಗ ಜಾರಿಗೆ ಬಂತು ?

20 ಏಪ್ರಿಲ್ 1993 ರಂದು

9) ಕರ್ನಾಟಕದಲ್ಲಿ ಪ್ರಸ್ತುತ ಎಷ್ಟು ಗ್ರಾಮ ಪಂಚಾಯ್ತಿಗಳಿವೆ ?

5659 ಗ್ರಾಮ ಪಂಚಾಯ್ತಿಗಳಿವೆ .

10) ಗ್ರಾಮ ಸಭೆಯು ಕನಿಷ್ಟ ಎಷ್ಟು ತಿಂಗಳಿಗೊಮ್ಮೆ ಸಭೆ ಸೇರುತ್ತದೆ?

ಕನಿಷ್ಟ 6 ತಿಂಗಳಿಗೊಮ್ಮೆ

11) ಕರ್ನಾಟಕದಲ್ಲಿ ಪ್ರಸ್ತುತ ಎಷ್ಟು ತಾಲ್ಲೂಕು ಪಂಚಾಯ್ತಿಗಳಿವೆ .

176 ತಾಲ್ಲೂಕು ಪಂಚಾಯ್ತಿಗಳಿವೆ .

12 ) ಜಿಲ್ಲಾಪಂಚಾಯ್ತಿ ಎಷ್ಟು ತಿಂಗಳಿಗೊಮ್ಮೆ ಸಭೆ ಸೇರುತ್ತದೆ ?

ಕನಿಷ್ಟ 2 ತಿಂಗಳಿಗೊಮ್ಮೆ ಸಭೆ ಸೇರುತ್ತೆ .

13 ) ಪ್ರಸ್ತುತ ಕರ್ನಾಟಕದಲ್ಲಿ ಎಷ್ಟು ಜಿಲ್ಲಾ ಪಂಚಾಯ್ತಿಗಳಿವೆ ?

30 , ಜಿಲ್ಲಾ ಪಂಚಾಯ್ತಿಗಳು

14 ) ಮಹಾನಗರ ಪಾಲಿಕೆಯ ಅವಧಿಯನ್ನು ವಿಶೇಷ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಎಷ್ಟು ವರ್ಷದ ಅವಧಿಗೆ ವಿಸ್ತರಿಸಬಹುದು?

ಒಂದು ವರ್ಷದ ಅವಧಿಗೆ ವಿಸ್ತರಿಸಬಹುದು .

FAQ

1 ) ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ಅಧಿಕಾರವಧಿ ಎಷ್ಟು ?

30 ತಿಂಗಳು .

2 ) ಮಹಾನಗರ ಪಾಲಿಕೆಯ ಆಡಳಿತಾತ್ಮಕ ಮುಖ್ಯಸ್ಥರು ಯಾರು ?

ಆಯುಕ್ತರು ( ಹಿರಿಯ ಐ.ಎ.ಎಸ್ ಅಧಿಕಾರಿ )

3 ) ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರನ್ನು ಯಾರು ಆಯ್ಕೆ ಮಾಡುತ್ತಾರೆ ?

ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರು .

ಇತರೆ ವಿಷಯಗಳು :

First PUC All Textbooks Pdf

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

All Notes App

Leave a Reply

Your email address will not be published. Required fields are marked *

rtgh