10ನೇ ತರಗತಿ ಛಲಮೆನೆ ಮೆಱೆವೆಂ ಕನ್ನಡ ನೋಟ್ಸ್ ಪ್ರಶ್ನೊತ್ತರಗಳು, 10th Standard Kannada Chalamane Merevem Notes Question Answer Mcq Pdf Download 2024 Kseeb Solutions For Class 10 Kannada Poem 6 Notes 10th Kannada 6th Poem Notes in Kannada Medium Karnataka State Syllabus Chalamane Merevem Laghu Guru SSLC Kannada 6th Poem Notes Summary Pdf Chalamane Merevem Kannada Padya Question Answer 10th Kannada Padya Question Answer
Chalamane Merevem Question Answer
ಕವಿ ಪರಿಚಯ : –
ರನ್ನ
ರನ್ನ ಕ್ರಿ ಶ . ಸುಮಾರು ೯೪೯ ರಲ್ಲಿ ( ಹತ್ತನೆಯ ಶತಮಾನದಲ್ಲಿ ಬಾಗಲಕೋಟೆ ಜಿಲ್ಲೆಯ ಮುದುವೊಳಲು ( ಈಗಿನ ಮುಧೋಳ ) ಎಂಬ
ಗ್ರಾಮದಲ್ಲಿ ಜನಿಸಿದನು , ಇವನ ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ . ಈತನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು .
ಇವನು ‘ ಸಾಹಸ ಭೀಮ ವಿಜಯಂ ( ಗದಾಯುದ್ಧ ) ‘ , ‘ ಅಜಿತತೀರ್ಥಂಕರ ಪುರಾಣತಿಲಕಂ ‘ , ‘ ಪರಶುರಾಮಚರಿತಂ ‘ ,
‘ ಚಕ್ರೇಶ್ವರಚರಿತಂ ‘ ಎಂಬ ಕಾವ್ಯಗಳನ್ನು ಬರೆದಿದ್ದಾನೆ . ರನ್ನಕಂದ ‘ ಎಂಬ ನಿಘಂಟನ್ನು ಬರೆದಿರುವುದಾಗಿ ತಿಳಿದುಬರುತ್ತದೆ .
ಇವನಿಗೆ ತೈಲಪನು ‘ ಕವಿಚಕ್ರವರ್ತಿ ‘ ಎಂಬ ಬಿರುದನ್ನು ಕೊಟ್ಟನು . ಈತನು ಕನ್ನಡದ ರತ್ನತ್ರಯರಲ್ಲಿ ಒಬ್ಬನು .
‘ ಛಲಮನೆ ಮೆಜಂ ‘ ಎಂಬ ಪದ್ಯಭಾಗವನ್ನು ಪ್ರೊ . ಹಂಪ ನಾಗರಾಜಯ್ಯ ಅವರು ಸಂಪಾದಿಸಿರುವ ‘ ರನ್ನ
ಸಂಪುಟ’ದ ಮಹಾಕವಿ ರನ್ನನ ‘ ಸಾಹಸ ಭೀಮ ವಿಜಯಂ ‘ ಎಂಬ ಮಹಾಕಾವ್ಯಭಾಗದ ಐದನೆಯ ಆಶ್ವಾಸದಿಂದ ಆರಿಸಿಕೊಳ್ಳಲಾಗಿದೆ .
Chalamane Merevem Kannada Notes
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .
೧. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಯಾರಿಗೆ ಹೇಳುವನು ?
ಉ : ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಭೀಷ್ಮಾಚಾರ್ಯರಿಗೆ ಹೇಳುವನು .
೨. ದಿನಪಸುತ ಎಂದರೆ ಯಾರು ?
ಉ : ದಿನಪಸುತ ಎಂದರೆ ಕರ್ಣ .
೩. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ ?
ಉ : ಅರ್ಜುನ ಮತ್ತು ಭೀಮ ಇಬ್ಬರನ್ನೂ ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ
೪. ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ಯಾರು ?
ಉ : ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ದುರ್ಯೋಧನ
೫. ಅಂತಕಾತ್ಮಜ ಎಂದರೆ ಯಾರು ?
ಉ : ಅಂತಕಾತ್ಮಜ ಎಂದರೆ ಧರ್ಮರಾಯ .
Chalamane Merevem Notes Pdf
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
೧. ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ ?
ಉ : ದುರ್ಯೋಧನನನನು ಭೀಷ್ಮಾಚಾರ್ಯರಿಗೆ “ ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಆದರೆ ನನ್ನ ಛಲಕ್ಕಾಗಿ
ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು ಭೂಮಿಗೆ ಸಮ . ನನ್ನ ಒಡ ಹುಟ್ಟಿದ ನೂರುಮಂದಿ
ಸಹೋದರರು ಯುದ್ಧದಲ್ಲಿ ಹೋರಾಡಿ ಸತ್ತರು . ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ ? ಆದ್ದರಿಂದ
ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮರೆಯುತ್ತೇನೆ ” ಎಂದು ಹೇಳುತ್ತಾನೆ .
೨. ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳುವುದೇಕೆ ?
ಉ : ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿ ಮಾಡಿಕೊ ಎಂದು ಸಲಹೆ ಮಾಡಿದಾಗ ದುರ್ಯೋಧನನನು
ಅದಕ್ಕೆ ಒಪ್ಪುವುದಿಲ್ಲ . ಅವನು “ ನಾನು ಭೂಮಿಗಾಗಿ ಹೋರಾಡುತ್ತಿಲ್ಲ . ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿಗೆ ಸಮ . ಪ್ರಿಯ ಗೆಳೆಯನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವುದಿಲ್ಲ ” ಎನ್ನುತ್ತಾನೆ .
೩. ಪಾರ್ಥ – ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು ?
ಉ : “ ನನ್ನ ಪ್ರೀತಿಯ ಗೆಳೆಯ ಕರ್ಣನನ್ನು ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನನ್ನು ಕೊಂದ ಅರ್ಜುನ – ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೆ : ನಾನು ಸಂಧಿಮಾಡಿಕೊಳ್ಳಲು ಒಪ್ಪುವುದಿಲ್ಲ . ಮೊದಲು ಆ ಇಬ್ಬರನ್ನೂ ಕೊಲ್ಲುವೆನು . ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ ”ಎಂಬುದು ಪಾರ್ಥ – ಭಿಮರ ಬಗೆಗೆ ದುರ್ಯೋಧನನ ಅಭಿಪ್ರಾಯವಾಗಿದೆ .
Chalamane Merevem Kannada Padya Saramsha in Kannada
ಇ . ಕೊಟ್ಟಿರುವ ಪ್ರಶ್ನೆಗಳ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
೧. ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ .
ಉ : ಮಹಾಭಾರತ ಯುದ್ಧದಲ್ಲಿ ತನ್ನೆಲ್ಲ ಸಹೋದರರನ್ನೂ ಆಪ್ತಮಿತ್ರನಾದ ಕರ್ಣನನ್ನೂ ಕಳೆದುಕೊಂಡ ದುರ್ಯೋಧನನು ತನ್ನ ತಂದೆ ತಾಯಿಯರ ಅಪೇಕ್ಷೆಯಂತೆ ರಣರಂಗದಲ್ಲಿ ಶರಶಯ್ಕೆಯಲ್ಲಿ ಮಲಗಿದ್ದ ತಾತ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆ . ಭೀಷ್ಮರು ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕೊಳ್ಳುವುದು ಸೂಕ್ತವೆಂದು ದುರ್ಯೋಧನನಿಗೆ ಸಲಹೆ ನೀಡುತ್ತಾರೆ .
ಭೀಷರು ದುರ್ಯೋಧನನಿಗೆ “ ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಹಿಂದಿನಂತೆ ನಡೆಯುವ ಹಾಗೆ ಮಾಡುವೆನು ” ಎಂದು ಹೇಳುತ್ತಾರೆ . ಅವರಿಗೆ ದುರ್ಯೋಧನನು ಛಲಗಾರ ಎಂಬುದು ತಿಳಿದಿದ್ದರೂ ಹಿರಿಯರಾಗಿ ಅವನನ್ನು ಸಂಧಿಗಾಗಿ ಒಪ್ಪಿಸುವ ಒಂದು ಪ್ರಯತ್ನ ಇಲ್ಲಿ ಕಂಡುಬರುತ್ತದೆ . ಹಾಗೆಯೇ “ ಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆ . ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕು ” ಎಂದು ಹೇಳುವ ಭೀಷರ ಮಾತುಗಳಲ್ಲಿ ಅವರಿಗೆ ಪಾಂಡವರ ಮೇಲಿದ್ದ ನಂಬಿಕೆ – ವಿಶ್ವಾಸವೂ ವ್ಯಕ್ತವಾಗಿದೆ. “ ಅಜ್ಜಾ , ನಾನು ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದಿಲ್ಲ. ನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ ? ಆದರೆ ನಾನು ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು ಭೂಮಿ ” ಎಂದು ಹೇಳುವಲ್ಲಿ ಅವನ ದಿಟ್ಟ ನಿರ್ಧಾರ ಸ್ಪಷ್ಟವಾಗಿ ಗೋಚರಿಸುತ್ತದೆ . ಅಲ್ಲದೆ “ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಬಾಳಲಾದೀತೆ ? ನನ್ನ ಪ್ರೀತಿಯ ಗೆಳೆಯನನ್ನು ನನ್ನ ಪ್ರೀತಿಯ ತಮ್ಮನನ್ನು ಕೊಂದ ಅರ್ಜುನ – ಭೀಮರು ಬದುಕಿರುವವರೆಗೆ , ನನ್ನ ದೇಹದಲ್ಲಿ ಪ್ರಾಣ ಇರುವವರೆಗೆ ನಾನು ಸಂಧಿಯನ್ನು ಒಪ್ಪುವುದಿಲ್ಲ . ಮೊದಲು ಆ ಇಬ್ಬರನ್ನೂ ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ ” ಎಂದು ಹೇಳುವಲ್ಲಿ ಆತನಿಗೆ ಕರ್ಣ ಮತ್ತು ದುಶ್ಯಾಸನನ ಮೇಲಿದ್ದ ಪ್ರೀತಿಯೂ ಭೀಮಾರ್ಜುನರ ಬಗೆಗಿದ್ದ ಕೋಪದ ತೀವ್ರತೆಯೂ ವ್ಯಕ್ತವಾಗಿದೆ . ಪ್ರಾಣ ಹೋದರೂ ಅಭಿಮಾನ ಬಿಡುವುದಿಲ್ಲ ಎಂಬ ದುರ್ಯೋಧನನ ಮಾತುಗಳು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿವೆ .
೨. ದುರ್ಯೋಧನನ ಛಲದ ಗುಣ ಅವನ ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ
ಉ : ಭೀಷ್ಮಾಚಾರ್ಯರು ತಮ್ಮ ಬಳಿಗೆ ಬಂದ ದುರ್ಯೋಧನನಿಗೆ ಪಾಂಡವರೊಡನೆ ಸಂಧಿಮಾಡಿಕೊಳ್ಳುವ ಸಲಹೆ
ನೀಡುತ್ತಾರೆ . ಆದರೆ ಅಭಿಮಾನಧನನಾದ ದುರ್ಯೋಧನನು ಅದಕ್ಕೆ ಒಪ್ಪುವುದಿಲ್ಲ . ಆಗ ಅವನಾಡುವ ಮಾತುಗಳಲ್ಲಿ ಆತನ ಛಲದ ಗುಣ ವ್ಯಕ್ತವಾಗಿರುವುದನ್ನು ಕಾಣಬಹುದು . ದುರ್ಯೋಧನನು ಭೀಷ್ಮರನ್ನು ಕುರಿತು “ ಅಜ್ಜ , ನಿಮಗೆ ನಮಸ್ಕರಿಸಿ ಹೋಗಲೆಂದು ಬಂದನೇ ಹೊರತು ಶತುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆ ? ನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ ? ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು ಭೂಮಿ , ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವೆನೆ ? ” “ ನನ್ನ ಪ್ರೀತಿಯ ಗೆಳೆಯನನ್ನೂ ಪ್ರೀತಿಯ ತಮ್ಮನನ್ನೂ ಕೊಂದ ಅರ್ಜುನ – ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಅಜ್ಜಾ , ನಾನು
ಸಂಧಿಯನ್ನು ಒಪ್ಪುವುದಿಲ್ಲ . ಆ ಇಬ್ಬರನ್ನೂ ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ . ನನ್ನ ಒಡಹುಟ್ಟಿದ ನೂರುಮಂದಿ ಸಹೋದರರು ಯುದ್ಧದಲ್ಲಿ ಹೋರಾಡಿ ಸತ್ತರು . ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ ? ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ . ನಾನು ಹೋರಾಡದೆ ಬಿಡುವುದಿಲ್ಲ . ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ; ಇಲ್ಲವೆ ನಾನು ಉಳಿಯಬೇಕು . ಹಾಗೆಯೇ ಈ ಭೂಮಿ ಪಾಂಡವರದಾಗಬೇಕು ; ಇಲ್ಲವೇ ಕೌರವನದಾಗಬೇಕು ” ಎಂದು ದುರ್ಯೋಧನನು ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳುವ ಮಾತುಗಳಲ್ಲಿ ಆತನ ಛಲ , ದೃಢನಿರ್ಧಾರ ಮತ್ತು ಸ್ವಾಭಿಮಾನವನ್ನು
ಕಾಣಬಹುದಾಗಿದೆ .
ಈ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
೧. “ ನೆಲಕಿಟೆವೆನೆಂದು ಬಗೆದಿರೆ ಚಲಕಿಚೆವೆಂ ”
ಉ : ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ
ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭೀಷ್ಮಾಚಾರ್ಯರು ಪಾಂಡವರನ್ನು ಒಪ್ಪಿಸುತ್ತೇನೆ . ಸಂಧಿಮಾಡಿಕೋ ‘ ಎಂದು ಹೇಳಿದಾಗ ದುರ್ಯೋಧನನು “ ಅಜ್ಜಾ , ನಾನು ಈ ಭೂಮಿಗಾಗಿ ಯುದ್ಧ ಮಾಡುವೆನೆಂದು ಭಾವಿಸಿರುವಿರಾ ? ನಾನು ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳುಬಿದ್ದ ನೆಲಕ್ಕೆ ಸಮ ” ಎನ್ನುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ದುರ್ಯೋಧನನ ಈ ಮಾತಿನಲ್ಲಿ ನಶ್ವರವಾದ ಅರಸುತನಕ್ಕಿಂತ ಛಲದಿಂದ ಬಾಳುವುದೇ ನಿಜವಾದ ಕ್ಷತ್ರಿಯನ ಗುಣ . ಸಂಧಿಮಾಡಿಕೊಳ್ಳುವುದು ಹೇಡಿತನದ ಲಕ್ಷಣ ಎಂಬ ಧ್ವನಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .
೨. “ ಸಮರದೊಳೆನಗಜ್ಜ ಪೇಟೆಮಾವುದು ಕಜ್ಜಂ . ”
ಉ : ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭೀಷ್ಮಾಚಾರ್ಯರು ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಮೊದಲಿದ್ದಂತೆ
ನಡೆಯುವ ಹಾಗೆ ಮಾಡುವೆನು . ಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆ . ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕು ಎಂದು ಭೀಷರು ಹೇಳಿದಾಗ ದುರ್ಯೋಧನನು ಮುಗುಳು ನಗೆ ನಕ್ಕು “ ಅಜ್ಜಾ , ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆ ? ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : “ ಸಮರದೊಳೆನಗಜ್ಜ ಪೇಟೆಮಾವುದು ಕಜ್ಜಂ ” ಎಂದು ಹೇಳುವ ದುರ್ಯೋಧನನ ಮಾತಿನಲ್ಲಿ ‘ ಸಂಧಿ ಮಾಡಿಕೊಳ್ಳುವ ಮಾತೊಂದನ್ನು ಬಿಟ್ಟು . ಯುದ್ಧದಲ್ಲಿ ನಾನೇನು ಮಾಡಬಹುದೆಂಬುದನ್ನು ಹೇಳಿ ” ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ . ಏಕೆಂದರೆ ದುರ್ಯೋಧನನಿಗೆ ಇಷ್ಟವಾಗದ ಒಂದು ಮಾತು “ ಸಂಧಿ ” .
೩. “ ಪಾಂಡವರೊಳಿದು ಛಲಮನೆ ಮೆರೆವೆಂ . ”
ಉ : ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ
ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : “ ನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು ಹೋರಾಡಿ ಸತ್ತರು . ಆದ್ದರಿಂದ ನನ್ನಲ್ಲಿ ಕೋಪ ಹುಟ್ಟಿ ಬೆಳೆಯಿತು . ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ ? ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ . ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ದುರ್ಯೋಧನನ ತನಗೆ ಕೋಪ ಹೆಚ್ಚಾಗಲು ಕಾರಣವನ್ನು ನೀಡಿರುವುದಲ್ಲದೆ
ತನ್ನ ಸಹೋದರರು ಸತ್ತಿಲ್ಲ . ಅವರು ಮತ್ತೆ ಹುಟ್ಟಿಬರುವರೆಂಬ ನಂಬಿಕೆಹೊಂದಿರುವುದು ಹಾಗೂ ಛಲಕ್ಕಾಗಿ ಹೋರಾಡುವ ಆತನ ನಿಲುವು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
೪. “ ಮೇಣಾಯ್ತು ಕೌರವಂಗವನಿತಳಂ . “
ಉ : ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ
ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಸಂಧಿಗೆ ಒಪ್ಪದ ದುರ್ಯೋಧನನು , “ ಅಜ್ಜ , ನಾನು ಹೋರಾಡದೆ ಬಿಡುವುದಿಲ್ಲ . ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು
ಇಲ್ಲವೆ ನಾನು ಉಳಿಯಬೇಕು . ಆದ್ದರಿಂದ ಈ ಭೂಮಿ ಪಾಂಡವರದಾಗಬೇಕು ಇಲ್ಲವೇ ಕೌರವನದಾಗಬೇಕು ಎಂದು
ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ತನ್ನ ಕೊನೆಯುಸಿರು ಇರುವ ವರೆಗೂ ಪಾಂಡವರ ವಿರುದ್ಧ ಹೋರಾಡುತ್ತೇನೆಂಬ ದುರ್ಯೋಧನನದಿಟ್ಟ ನಿರ್ಧಾರ , ಪಾಂಡವರ ಮೇಲಿನ ಕೋಪದ ತೀವ್ರತೆ ಈ ಸಂದರ್ಭದಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
ಭಾಷಾ ಚಟುವಟಿಕೆ
ಅ . ಕೊಟ್ಟಿರುವ ಪದ್ಯದ ಸಾಲುಗಳಿಗೆ ಪ್ರಸ್ತಾರ ಹಾಕಿ , ಗಣ ವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ .
ಆ . ಕೊಟ್ಟಿರುವ ಪದಗಳನ್ನು ವಿಗ್ರಹವಾಕ್ಯ ಮಾಡಿ ಸಮಾಸದ ಹೆಸರನ್ನು ತಿಳಿಸಿ .
ಪಾರ್ಥಭೀಮರು = ಪಾರ್ಥನೂ + ಭೀಮನೂ – ದ್ವಂದ್ವ ಸಮಾಸ
ಅಂತಕಾತ್ಮಜ = ಅಂತಕನ ಆತ್ಮಜನಾದವನು ದಿನಪಸುತ ಯಾರೋ ಅವನೇ ಅಂತಕಾತ್ಮಜ ( ಧರ್ಮರಾಜ) – ಬಹುವೀಹಿ
ಸಮಾಸ = ದಿನಪನ ಸುತನಾದವನು ಯಾರೋ ಅವನೇ ದಿನಪಸುತ ( ಕರ್ಣ ) = ಬಹುರ್ವೀಹಿ ಸಮಾಸ
FAQ :
ಉ : ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ದುರ್ಯೋಧನ
ಉ : ಅಂತಕಾತ್ಮಜ ಎಂದರೆ ಧರ್ಮರಾಯ .
ಉ : ಅರ್ಜುನ ಮತ್ತು ಭೀಮ ಇಬ್ಬರನ್ನೂ ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ
ಇತರೆ ವಿಷಯಗಳು :
10th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.