10th Kannada Hasuru Poem Notes | 10ನೇ ತರಗತಿ ಹಸುರು ಕನ್ನಡ ನೋಟ್ಸ್ 

10th Kannada Hasuru Notes | 10ನೇ ತರಗತಿ ಹಸುರು ಕನ್ನಡ ನೋಟ್ಸ್ 

10ನೇ ತರಗತಿ ಹಸುರು ನೋಟ್ಸ್ ಪ್ರಶ್ನೆ ಉತ್ತರ ಪದ್ಯ kannada deevige 10th Hasuru Kannada Poem Notes Question Answer pdf text book summary in kannada

10th Hasuru Kannada Poem Notes Kannada

ಪದ್ಯ -೫ .  ಹಸುರು 

ಕವಿ ಪರಿಚಯ : ಕುವೆಂಪು 

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು . ಜನನ ೧೯೦೪ ಡಿಸೆಂಬರ್ ೨೯ , 

ಇವರು ಬರೆದಿರುವ ಪ್ರಮುಖ ಕೃತಿಗಳು : ಕೊಳಲು , ಪಾಂಚಜನ್ಯ , ಪ್ರೇಮಕಾಶ್ಮೀರ , ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು , ನನ್ನ ದೇವರು ಮತ್ತು ಇತರ ಕಥೆಗಳು , ಸಂನ್ಯಾಸಿ ಮತ್ತು ಇತರ ಕಥೆಗಳು -ಕಥಾಸಂಕಲನಗಳು , ಕಾನೂರು ಹೆಗ್ಗಡತಿ , ಮಲೆಗಳಲ್ಲಿ ಮದುಮಗಳು – ಕಾದಂಬರಿಗಳು . ರಸೋವೈಸಃ , ತಪೋನಂದನ – ವಿಮರ್ಶಾ ಸಂಕಲನಗಳು , ಅಮಲನ ಕಥೆ , ಮೋಡಣ್ಣನ ತಮ್ಮ , ಬೊಮ್ಮನಹಳ್ಳಿಯ ಕಿಂದರಿಜೋಗಿ – ಮಕ್ಕಳ ಪುಸ್ತಕಗಳು , ಜಲಗಾರ , ಯಮನ ಸೋಲು , ಬೆರಳೆ ಕೊರಳ್ – ನಾಟಕಗಳು , ನೆನಪಿನ ದೋಣಿಯಲ್ಲಿ – ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ . ಶ್ರೀಯುತರಿಗೆ ‘ ಶ್ರೀರಾಮಾಯಣ ದರ್ಶನಂ ‘ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೬೮ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ . ಧಾರವಾಡದಲ್ಲಿ ನಡೆದ ೧೯೫೭ ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು . ಇವರಿಗೆ ೧೯೬೪ ರಲ್ಲಿ ರಾಷ್ಟ್ರಕವಿ , ೧೯೮೮ ರಲ್ಲಿ ಪಂಪ ಪ್ರಶಸ್ತಿ , ೧೯೯೧ ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ . ಅಲ್ಲದೆ ಮೈಸೂರು , ಕರ್ನಾಟಕ , ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ . ೧೯೯೨ ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ . ಪ್ರಸ್ತುತ ಪದ್ಯಭಾಗವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ .

ಆ)ಕೊಟ್ಟಿರುವ ಪ್ರಶ್ನೆಗಳಿಗೆ  ಒಂದು ವಾಕ್ಯದಲ್ಲಿ ಉತ್ತರಿಸಿ . 

ಆಶ್ವಯುಜ೦ದ ಬತ್ತದ ಗದ್ದೆಯ ಬಣ್ಣಯಾವ ಹಸುರಿನಂತಿದೆ? 

: ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಗಿಳಿಯ ಹಸುರಿನಂತಿದೆ . 

೨. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?

 ಉ : ಕವಿಯು ನೋಡಿದ ಅಡಕೆಯ ತೋಟ ವನದಂಚಿನಲ್ಲಿದೆ . 

೩. ‘ ಹಸುರು ‘ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ? 

: ‘ ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ . 

೪. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ? 

ಉ : ಕವಿಗೆ ಹುಲ್ಲಿನ ಹಾಸು ಮಕಮಲ್ಲಿನ ಹೊಸಪಚ್ಚೆಯ ಜಮಖಾನೆಯ ರೀತಿ ಕಂಡಿದೆ . 

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ . 

೧ ) ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ ? 
ಉ : ಕವಿಗೆ ನವರಾತ್ರಿಯಲ್ಲಿ , ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ , ನೀಲ ಸಮುದ್ರದಲ್ಲಿ
ಹಸುರಾದ ಕವಿಯ ಹೃದಯಕ್ಕೆ ಆಗಸ ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು
ಕಾಡಂಚಿನ ಅಡಕೆಯ ತೋಟ , ಹೂವಿನ ಕಂಪಿನಲ್ಲಿ , ಎಲರಿನ ತಂಪಿನಲ್ಲಿ ಹಕ್ಕಿಯ ಕೊರಲಿನಲ್ಲಿ ,
ಹೀಗೆ ಆಗಸದಿಂದ ಬಿಸಿಲವರೆಗೂ ಕವಿಗೆ ಹಸುರು ಕಾಣುತ್ತಿದೆ . 

೨ ) ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ ?

ಉ : ಹಸುರಾದ ಭೂಮಿ , ಆಗಸ , ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು ಕಾಡಂಚಿನ
ಅಡಕೆಯ ತೋಟ ಇವೆಲ್ಲಾ ಕಣ್ಣಿಗೆ ಗೋಚರವಾದರೆ , ಹೂವಿನ ಕಂಪಿನ ಹಸುರು ಮೂಗಿಗೆ , ಎಲರಿನ ತಂಪಿನ ಸ್ಪರ್ಷ
ಚರ್ಮಕ್ಕೆ , ಹಕ್ಕಿಯ ಕೊರಲಿನ ಚಿಲಿಪಿಲಿ ಗಾನ ಕಿವಿಗೆ , ಶ್ಯಾಮಲ ಸಮುದ್ರದ ಹಸುರು ಕವಿಯಾತ್ಮಕ್ಕೆ ರಸಪಾನ ಮಾಡಿದಂತಾದುದು
ನಾಲಗೆಗೆ ಹೀಗೆ ಪ್ರಕೃತಿಯ ಹಸುರು ಸಕಲ ಇಂದ್ರಿಯಗಳನ್ನೂ ವ್ಯಾಪಿಸಿದೆ ಎಂಬುದನ್ನು ಕವಿ ಕುವೆಂಪು ಅವರು
ಅಭೂತಪೂರ್ಣವಾಗಿ ವರ್ಣಿಸಿದ್ದಾರೆ .

 ೩ ) ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳೇನು ?

 ಉ : ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯಲ್ಲಿ ವಿಶಾಲವಾದ ಶಾಮಲ ಕಡಲು ,
ಹಸುರಾಗಸ ; ಹಸುರು ಮುಗಿಲು ; ಹಸುರು ಗದ್ದೆಯ ಬಯಲು , ಹಸುರಿನ ಮಲೆ ; ಹಸುರು ಕಣಿವೆ : ಸಂಜೆಯ
ಬಿಸಿಲು , ಅಶ್ವಜದ ಶಾಲಿವನದ ಗಿಳಿಯ ಹಸುರು ಬಣ್ಣದ ನೋಟ ; ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ ;
ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಪಸರಿಸಿದಂತೆ ಭೂಮಿಯು ಹಸುರುಟ್ಟಿದ್ದು ಹೊಸ ಹೂವಿನ ಕಂಪು ;
ತಂಗಾಳಿಯ ತಂಪು : ಹಕ್ಕಿಯ ಇಂಪಾದ ಗಾನ ; ಎತ್ತೆತ್ತ ನೋಡಿದರೂ ಹಸುರು ಹಸುರು . ಹಸರು .. ಈ ಇವೆಲ್ಲಾ
ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳಾದವು . 

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . 

೧. ‘ ಹಸುರು ‘ ಕವನದ ರೀತ್ಯ ಎಲ್ಲೆಲ್ಲಿ ಹಸುರು ವ್ಯಾಪಿಸಿದೆ ಎಂಬುದನ್ನು ವಿವರಿಸಿ . 
ಉ : ‘ ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ
ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ . ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ
ಕುಪ್ಪಳ್ಳಿಯ ‘ ಕವಿಶೈಲದಲ್ಲಿ ಅವರಿಗುಂಟಾದ ಸೌಂದರ್ಯಾನುಭವ ಪ್ರಕೃತಿ , ಅಲ್ಲಿಯ ಹಸುರುಗಳೊಂದಿಗೆ
ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ . ವಿಶಾಲವಾದ ಕವಿಯಾತವು ಹಸುರುಗಟ್ಟಲು
ಆಶ್ವಯುಜ ಮಾಸದ ನವರಾತ್ರಿಯ ದಿನದಲ್ಲಿ ಹೊಸ ಚಿಗುರಿನಿಂದ ಕೂಡಿದ ಭೂಮಿಯಲ್ಲಿ ಕಡಲು ಹಸುರಾಗಿರುವುದನ್ನು
ನೋಡಿ ಕವಿಯ ಆತ್ಮವನ್ನು ರಸಪಾನದಲ್ಲಿ ಮಿಂದಿತು . ಆಗಸದಲ್ಲಿ ಮುಗಿಲಿನಲ್ಲಿ 
ಗದ್ದೆಯ ಬಯಲಿನಲ್ಲಿ : ಬೆಟ್ಟಗುಡ್ಡಗಳಲ್ಲಿ : ಕಣಿವೆಯಲ್ಲಿ : ಸಂಜೆಯ ಬಿಸಿಲಿನಲ್ಲಿ ಹಸುರು ಹರಡಿತ್ತು .
ಹಾಗೆಯೇ ಅಶ್ವಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ , ಅದರ ಪಕ್ಕದಲ್ಲೇ
ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ
ಭೂಮಿಯು ಹಸುರಿನಿಂದ ಮೈ ಮುಚ್ಚಿರಲು ಕವಿಗೆ ಬೇರೆ ಬಣ್ಣಗಳೇ ಕಾಣದಾದವು . ಹೊಸ ಹೂವಿನ ಕಂಪು ;
ತಂಗಾಳಿಯ ತಂಪು ; ಹಕ್ಕಿಯ ಇಂಪಾದ ಗಾನ ; ಅತ್ತ – ಇತ್ತ – ಎತ್ತ ನೋಡಿದರೂ ಹಸುರು . ಹಸುರು .. ಹಸರು ..
ಇದನ್ನು ನೋಡಿದ ಕವಿಯಾತ್ಮವು ಹಸುರುಗಟ್ಟಿತು . ಕವಿಯ ದೇಹದಲ್ಲೂ ಹಸುರು ರಕ್ತವೇ ಹರಿದಾಡಿತು . ಎಂದು
ಹಸುರು ವ್ಯಾಪಿಸಿದ ಬಗೆಯನ್ನು ಕವಿ ವರ್ಣಿಸಿದ್ದಾರೆ . 

೨. ಪ್ರಕೃತಿಯ ‘ ಹಸುರು ‘ ಜೀವ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ .

 ( ಮಕ್ಕಳ ಸೃಜನಶೀಲತೆಗಾಗಿ ಬಿಡಲಾಗಿದೆ ) 

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ , 

೧. “ ಹಸುರಾದುದು ಕವಿಯಾತ್ಮಂ ‘ 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘ ತೆಗೆದುಕೊಳ್ಳಲಾಗಿದೆ . 
ಸಂದರ್ಭ : ನವರಾತ್ರಿಯ ನವರಾತ್ರಿಯ ಈ ಶ್ಯಾಮಲ ವರ್ಣದ ಕಡಲಿನಲ್ಲೂ ಕವಿಯ ಆತ್ಮ ಹಸುರಾಯಿತು ,
ರಸಪಾನದಲ್ಲಿ ಮಿಂದಿತು ಎಂದು ಪ್ರಕೃತಿಯಲ್ಲಿ ವ್ಯಾಪಿಸಿರುವ ಹಸುರಿನ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಕವಿ
ಈ ಮಾತನ್ನು ಹೇಳಿದ್ದಾರೆ . ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ ಕವಿಶೈಲ’ದಲ್ಲಿ
ಅವರಿಗುಂಟಾದ ಸೌಂದರ್ಯಾನುಭವ , ಪ್ರಕೃತಿ , ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ
ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ . 
ಸ್ವಾರಸ್ಯ : ನವರಾತ್ರಿಯ ಕಪ್ಪು ಕಡಲಿನಲ್ಲೂ ಹಸುರನ್ನು ಕಾಣುವ ಕುವೆಂಪು ಅವರ ಕವಿಯಾತ್ಮದ
ಪ್ರಕೃತಿಯ ರಸಾಸ್ವಾದನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ . 

೨” ಬೇರೆ ಬಣ್ಣವನೆ ಕಾಣೆ ” 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು
ಎಂಬ ಪದ್ಯದಿಂದ ತೆಗೆದುಕೊಳ್ಳಲಾಗಿದೆ . 
ಸಂದರ್ಭ : ಅಶ್ವಿಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ ; ಅದರ ಪಕ್ಕದಲ್ಲೇ
ಕಾಡಂಚಿನಲ್ಲಿ ಫಲಭರಿತ ಆಡಕೆಯ ತೋಟ ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ
ಭೂಮಿಯು ಹಸುರಿನಿಂದ ಮೈ ಮುಚ್ಚಿರುವ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಭೂಮಿಯ ಮೇಲೆ ಎಲ್ಲೆಂದರಲ್ಲಿ ವಿವಿಧ ರೂಪದಲ್ಲಿ ಹಸುರು ಪಸರಿಸಿರುವುದನ್ನು ನೋಡಿ
ರಸಾನಂದ ಹೊಂದಿದ ಕವಿ ‘ ಬೇರೆ ಬಣ್ಣಗಳೇ ಕಾಣದಾದವು ‘ ಎಂದು ಹೇಳಿರುವಲ್ಲಿ ಅವರ ರಸಾಸ್ವಾದನೆಯ
ಔನ್ನತ್ಯವನ್ನು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ . 

೩. “ ಹಸುರು ಹಸುರಿಳೆಯುಸಿರೂ ” ಹಳತ 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ
ಎಂಬ ಪದ್ಯದಿಂದ ತೆಗೆದುಕೊಳ್ಳಲಾಗಿದೆ . 
ಸಂದರ್ಭ : ಹೊಸ ಹೂವಿನ ಕಂಪು , ಬೀಸುವ ಗಾಳಿಯ ತಂಪು , ಹಕ್ಕಿಯ ಕೊರಲಿನಿಂದ ಹೊರಟ ಗಾನದ
ಇಂಪು , ಅಲ್ಲದೆ ಇಡೀ ಭೂಮಿಯ ಶ್ವಾಸವೆಲ್ಲಾ ಹಸುರುಮಯವಾಗಿದೆ ಎಂದು ವರ್ಣಿಸುವ ಸಂದರ್ಭದಲ್ಲಿ
ಕವಿ ಈ ಮಾತನ್ನು ಹೇಳಿದ್ದಾರೆ . ಇಲ್ಲಿ ಹೂವು – ಗಾಳಿ ಹಕ್ಕಿಯ ಗಾನಗಳಲ್ಲಿ ಬೇರೆ ಬೇರೆ ಅನುಭವವಿದ್ದರೂ ಕವಿಯ
ಏಕತಾ ದೃಷ್ಟಿಯಲ್ಲಿ ಎಲ್ಲದರಲ್ಲೂ ಹಸುರೇ ಕಾಣುತ್ತದೆ . 
ಸ್ವಾರಸ್ಯ : ಹಸುರು ಸರ್ವೇಂದ್ರಿಯಗಳನ್ನೂ ವ್ಯಾಪಿಸಿದೆ ಎಂದು ವರ್ಣಿಸಿರುವ ಕವಿಯ ಕಲ್ಪನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ . 

೪. ” ಹಸುರತ್ತಲ್ , ಹಸುರಿತ್ತಲ್ , ಹಸುರೆತ್ತಲ್ ” 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘ ಎಂಬ
ಪದ್ಯದಿಂದ ತೆಗೆದುಕೊಳ್ಳಲಾಗಿದೆ . 
ಸಂದರ್ಭ : ಅತ್ತ – ಇತ್ತ – ಎತ್ತಲೂ ಹಸುರೇ ಆವರಿಸಿರುವುದನ್ನು ಕವಿದೃಷ್ಟಿಯಿಂದ ನೋಡಿದ ಕುವೆಂಪು ಅವರು ‘ ಕಡಲಿನಲ್ಲಿ
ಎಲ್ಲೆಲ್ಲೂ ಹಸುರೇ ಹಸುರು . ಕವಿಯ ಆತ್ಮ ಹಸುರು ನೆತ್ತರಿನಿಂದ ಹಸುರುಗಟ್ಟಿತು ‘ ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು
ಹೇಳಿದ್ದಾರೆ . ಎಲ್ಲೆಲ್ಲೂ ಹಸುರನ್ನು ಕಂಡ ಕವಿಯಾತ್ಮವು ಹಸುರುಗಟ್ಟಿತಲ್ಲದೆ ಅವರ ದೇಹದಲ್ಲಿನ ರಕ್ತವೂ ಹಸುರೇ ! ಎಂದು ವರ್ಣಿಸಿದ್ದಾರೆ .
ಸ್ವಾರಸ್ಯ : ಹಸುರು ಕೇವಲ ಸಸ್ಯವರ್ಗಕ್ಕೆ ಮಾತ್ರ ಸೀಮಿತವಲ್ಲ ಇಡೀ ಪ್ರಕೃತಿಯ ಚೈತನ್ಯಕ್ಕೆ ಅದೇ ಕಾರಣ . ಪ್ರಕೃತಿಗಷ್ಟೇ ಅಲ್ಲದೆ
‘ ರಕ್ತದಲ್ಲೂ ಹಸುರು ವ್ಯಾಪಿಸಿದೆ ‘ ಎಂದು ಸ್ವಾರಸ್ಯಪೂರ್ಣವಾಗಿದೆ . 

10th class Kannada Hasuru Poem  Notes question  answer, pdf summary lesson , class 10text book Pdf download, 10ನೇ ತರಗತಿ ಹಸುರು ಕನ್ನಡ ನೋಟ್ಸ್

10th Kannada Deevige 10th Notes Lesson question answer pdf textbook Hasuru Poem summary in Kannada deevige 10ನೇ ತರಗತಿ ಹಸುರುಪ್ರಶ್ನೆ ಉತ್ತರ

10th kannada Hasuru Poem Notes 10ನೇ ತರಗತಿ ಹಸುರು ನೋಟ್ಸ್  ಪ್ರಶ್ನೆ ಉತ್ತರ Kannada Deevige 10th Notes Hasuru Poem padya Notes question answer text book pdf download

ಆತ್ಮೀಯರೇ..

ನಮ್ಮ ಕನ್ನಡ ದೀವಿಗೆ.ಇನ್   ವೆಬ್ಸೈಟ್ ಮತ್ತು ಆಪ್  ನಲ್ಲಿ 1ನೇ ತರಗತಿಯಿಂದ 1೦ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh