7ನೇ ತರಗತಿ ಕನ್ನಡ ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 7th Standard Samajika Kalakaliya Modala Shikshaki Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Puraka Pata Samajika Kalakaliya Modala Shikshaki Notes
ತರಗತಿ : 7ನೇ ತರಗತಿ
ವಿಷಯ : ಕನ್ನಡ
ಪಾಠದ ಹೆಸರು : ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ
ಕೃತಿಕಾರರ ಹೆಸರು : ಕಾರ್ಕಳ ರಮಾನಂದ ಆಚಾರ್ಯರು
7th Class Samajika Kalakaliya Modala Shikshaki Kannada Notes
ಕೃತಿಕಾರರ ಪರಿಚಯ:
ಕಾರ್ಕಳ ರಮಾನಂದ ಆಚಾರ್ಯರು : ಕನ್ನಡದ ಹಿರಿಯ ಲೇಖಕರು , ಬಹುಭಾಷಾ ವಿದ್ವಾಂಸರು , ಪತ್ರಕರ್ತರು ಮತ್ತು ಚಿಂತಕರು , ಇವರು ಕಳೆದ ಮೂರ್ನಾಲ್ಕು ದಶಕಗಳಿಂದ ಕನ್ನಡದ ಹಲವು ಪತ್ರಿಕೆಗಳಲ್ಲಿ ವೈಚಾರಿಕ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ . ಮದ್ರಾಸ್ ವಿಶ್ವವಿದ್ಯಾಲಯದಿಂದ ೧೯೫೬ ರಲ್ಲಿ ಬಿ.ಎಸ್ಸಿ . ಪದವಿಯನ್ನು ಪಡೆದರು . ೫೮ ವರ್ಷಗಳಷ್ಟು ದೀರ್ಘಕಾಲ ವಿಕ್ರಮ ವಾರಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ . ವಿವಿಧ ಭಾಷೆಗಳಿಂದ ಇದುವರೆಗೆ ೨೦೦೦ ಕ್ಕೂ ಹೆಚ್ಚು ಲೇಖನಗಳನ್ನು ಅನುವಾದಿಸಿದ್ದಾರೆ .
(ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಪುಸ್ತಕದ ಹಾಳೆಗಳನ್ನು ತಿರುವಿಹಾಕುತ್ತಿದ್ದ ಸಾವಿತ್ರಿಬಾಯಿಗೆ ತಂದೆ ಏನು ಹೇಳಿದರು?
ಪುಸ್ತಕವನ್ನು ಕಿತ್ತು ಮನೆಯಿಂದಾಚೆ ಎಸೆದು ಶಿಕ್ಷಣದ ಆಕಾರವು ಕೇವಲ ಉಚ್ಚಜಾತಿಯ ಪುರುಷರಿಗಷ್ಟೆ ಇದೆ. ದಲಿತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದು ಪಾಪವಾಗಿದೆ ಎಂದರು.
೨. ಸಾವಿತ್ರಿಯ ಪ್ರಥಮ ಶಿಕ್ಷಣ ಎಲ್ಲಿ ನಡೆಯಿತು?
ಸಾವಿತ್ರಿಯ ಪ್ರಥಮ ಶಿಕ್ಷಣ ಅವರದೇ ಹೊಲದ ಒಂದು ಮಾವಿನ ಮರದ ಕೆಳಗೆ ನಡೆಯಿತು.
೩. ಜ್ಯೋತಿಬಾ, ಸಾವಿತ್ರಿಗೆ ಏನೇನು ವಿಷಯಗಳನ್ನು ಕಲಿಸಿದರು?
ಜ್ಯೋತಿಬಾ, ಸಾವಿತ್ರಿಗೆ ಜಾನಪದ ಪ್ರಸಂಗಗಳನ್ನು ಹೇಳಿ ಭಾಷೆ, ಗಣಿತ ಮತ್ತು ಸಾಮಾನ್ಯ ಜ್ಞಾನ ವಿಷಯಗಳನ್ನು ಕಲಿಸಿದರು.
೪. ಸಾವಿತ್ರಿಬಾಯಿಯವರು ಉಪೇಕ್ಷಿತ ವರ್ಗದ ಮಕ್ಕಳನ್ನು ಶಾಲೆಗೆ ಸೇರುವಂತೆ ಹೇಗೆ ಪ್ರೋತ್ಸಾಹಿಸಿದರು?
ಉಪೇಕ್ಷಿತ ವರ್ಗಗಳ ಮಕ್ಕಳಿಗೆ ತಮ್ಮ ವಿದ್ಯಾಲಯಗಳಲ್ಲಿ ಶಿಕ್ಷಣ ನೀಡಿ ವಿಧವೆಯರ ಮಕ್ಕಳಿಗೆ ಪೋಷಣೆ ಒದಗಿಸುದುದೇ ಸಾವಿತ್ರಿಭಾಯಿಯವರು ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿಯಾಗಿದೆ.
೫. ಸಾವಿತ್ರಿಬಾಯಿಯವರು ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಯಾವುದು?
ವಿಧವೆ ಕಾಶಿಭಾಯಿಯ ಆತ್ಮಹತ್ಯೆ ತಡೆದು ಅವಳ ಹೆರಿಗೆ ವ್ಯವಸ್ಥೆ ಮಾಡಿ ಅವಳ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡಿದುದೇ ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ
(ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರ್ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ಸಾವಿತ್ರಿಬಾಯಿಯ ಸಮಾಜದಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗಿತ್ತು?
ಸಾವಿತ್ರಿಬಾಯಿಯ ಸಮಾಜದಲ್ಲಿ ಮಹಿಳೆಯರ ಶಿಕ್ಷಣ ಪಡೆಯುವುದು ಪಾಪ ಎಂದು ತಿಳಿಯಲಾಗುತ್ತಿತ್ತು. ಆಗ ಶಿಕ್ಷಣವಿಲ್ಲದೆ ಬದುಕು ಮಹಿಳೆಯರಿಗೆ ಸತಿ ಪದ್ದತಿ, ಬಾಲ್ಯವಿವಾಹ ಮತ್ತು ವಿಧವೆಯರ ದುರವ್ಯವಸ್ಥೆ ಹೀಗೆ ಹತ್ತು ಹಲವು ವ್ಯವಸ್ಥೆಗಳು ಮಹಿಳೆಯರನ್ನು ಶೋಷಿಸುತ್ತಿದ್ದವು.
೨. ಸಮಾಜದ ಹಟವಾದಿಗಳು ಸಾವಿತ್ರಿಬಾಯಿಯನ್ನು ಹೇಗೆ ವಿರೋಧಿಸಿದರು?
ಸುಧಾರಣೆಗೆ ಹೆಜ್ಜೆಯನ್ನಿಡುತ್ತಿದ್ದ ಸಾವಿತ್ರಿಬಾಯಿಯ ಕಾರ್ಯಗಳಿಂದ ಸಮಾಜದ ಹಠವಾದಿಗಳನ್ನು ವಿರೋಧಿಸತೊಡಗಿದರು. ಆಕೆಯ ಬಗ್ಗೆ ವ್ಯಂಗ್ಯ, ಚುಚ್ಚುಮಾತುಗಳನ್ನು ಆಡುತ್ತಾ, ಅವಳ ಕಡೆ ಕಲ್ಲು, ಸಗಣಿ ಎಸೆದರು. ಸಾವಿತ್ರಿಯವರ ತಂದೆಯ ಕಿವಿಯೂದಿದ ಪರಿಣಾಮವಾಗಿ ಅವರ ತಂದೆಯವರು ಜ್ಯೋತಿಬಾ ಮತ್ತು ಸಾವಿತ್ರಿಬಾಯಿಯನ್ನು ಮನೆಯಿಂದ ಹೊರಹಾಕಿದರು.
೩. ಸಮಾಜದ ಕೆಳವರ್ಗಗಳ ಮಕ್ಕಳನ್ನು ಶಾಲೆಗೆ ಸೇರಿಸಲು ಸಾವಿತ್ರಿಬಾಯಿಯವರು ಹೇಗೆ ಶ್ರಮಿಸಿದರು?
ಪುಣೆಯ ಸಮೀಪ 18 ವಿದ್ಯಾಲಯಗಳನ್ನು ಪುಲೆ ದಂಪತಿಗಳು ನಡೆಸತೊಡಗಿದರು. ಉಪೇಕ್ಷಿತ ವರ್ಗದವರ ವಸತಿಕ್ಷೇತ್ರಗಳಿಗೆ ಭೇಡಿನೀಡುತ್ತಾ ಅವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ತನ್ನ ಭಾಷಣಗಳಿಂದ ಪ್ರೇರೇಪಿಸಿದಳು. ವಿಧವೆಯರ ಆತ್ಮಹತ್ಯೆ ತಡೆದು, ಅವರ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಶಿಕ್ಷಣ ನೀಡಿದರು. ವಿಧವೆ ಕಾಶೀಭಾಯಿಯ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಪೋಷಿಸಿ ತೊಡಗಿದರು. ಅವರು ಸ್ಥಾಪಿಸಿದ ಸತ್ಯಶೋದನ ಸಮಾಜದ ವಿದ್ಯಾರ್ಥಿನಿಲಯದಲ್ಲಿ ಸಹಸ್ರಾರು ಮಕ್ಕಳಿಗೆ ಆಶ್ರಯ ನೀಡಲಾಯಿತು.
೪. ವಿಧವೆಯರ ಪರವಾಗಿ ಸಾವಿತ್ರಿಬಾಯಿಯವರು ಹೋರಾಡಿದ ಬಗೆಯನ್ನು ವಿವರಿಸಿ.
1873 ರಲ್ಲಿ ಪುಲೆ ದಂಪತಿಗಳು ಸತ್ಯಶೋದನ ಸಮಾಜವನ್ನು ಸ್ಥಾಪಿಸಿ, ಅದರ ಮೂಲಕ ವಿಧವಾ ವಿವಾಹದ ಪರಂಪರೆಯನ್ನು ಆರಂಭಿಸಿದರು. ಈ ಸಂಸ್ಥೆಯಿಂದ ಮೊದಲ ವಿಧವಾ ಪುನರ್ವಿವಾಹವನ್ನು 5 ಡಿಸೆಂಬರ್ 1873 ರಂದು ಮಾಡಲಾಯಿತು. ಸಾವಿತ್ರಿಬಾಯಿ ವಿಧವೆಯರ ಕೇಶಮುಂಡನೆ ಮಾಡದಂತೆ ಕ್ಷೌರಿಕರ ಮನವೊಲಿಸಿದಳು. ಹೀಗೆ ವಿಧವೆಯರ ಬಾಳಿಗೊಂದು ಬೆಳಕಾದಳು.
FAQ :
ಸಾವಿತ್ರಿಯ ಪ್ರಥಮ ಶಿಕ್ಷಣ ಅವರದೇ ಹೊಲದ ಒಂದು ಮಾವಿನ ಮರದ ಕೆಳಗೆ ನಡೆಯಿತು.
ಪುಸ್ತಕವನ್ನು ಕಿತ್ತು ಮನೆಯಿಂದಾಚೆ ಎಸೆದು ಶಿಕ್ಷಣದ ಆಕಾರವು ಕೇವಲ ಉಚ್ಚಜಾತಿಯ ಪುರುಷರಿಗಷ್ಟೆ ಇದೆ. ದಲಿತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದು ಪಾಪವಾಗಿದೆ ಎಂದರು.
ವಿಧವೆ ಕಾಶಿಭಾಯಿಯ ಆತ್ಮಹತ್ಯೆ ತಡೆದು ಅವಳ ಹೆರಿಗೆ ವ್ಯವಸ್ಥೆ ಮಾಡಿ ಅವಳ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡಿದುದೇ ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.