rtgh

4th Standard Veera Abhimanyu Kannada Notes | 4ನೇ ತರಗತಿ ವೀರ ಅಭಿಮನ್ಯು ಪಾಠ ಕನ್ನಡ ನೋಟ್ಸ್

4ನೇ ತರಗತಿ ವೀರ ಅಭಿಮನ್ಯು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು Pdf, 4th Standard Veera Abhimanyu Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 4 Kannada Chapter 11 Notes 4th Class Kannada 11th Lesson Notes Pdf Veera Abhimanyu Kannada Nataka

4th Veera Abhimanyu Lesson Question and Answer

Contents hide

ಅಭ್ಯಾಸ

ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

1. ಚಕ್ರವ್ಯೂಹವನ್ನು ರಚಿಸಿದವರು ಯಾರು ? 

ಉತ್ತರ : ಚಕ್ರವ್ಯೂಹವನ್ನು ರಚಿಸಿದವರು ದ್ರೋಣಾಚಾರ್ಯರು .

2. ಕೌರವರು – ಪಾಂಡವರು ಯಾರಿಂದ ಬಿಲ್ವಿದ್ಯೆ ಕಲಿತರು ? 

ಉತ್ತರ : ಕೌರವರು – ಪಾಂಡವರು ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ಕಲಿತರು . 

3. ಅಭಿಮನ್ಯುವಿನ ತಂದೆಯ ಹೆಸರೇನು ?

 ಉತ್ತರ : ಅಭಿಮನ್ಯುವಿನ ತಂದೆಯ ಹೆಸರು ಅರ್ಜುನ .

4. ಕೌರವರಿಗೂ – ಪಾಂಡವರಿಗೂ ಯುದ್ಧ ಎಲ್ಲಿ ನಡೆಯಿತು ? 

ಉತ್ತರ : ಕೌರವರಿಗೂ – ಪಾಂಡವರಿಗೂ ಕುರುಕ್ಷೇತ್ರದಲ್ಲಿ ಯುದ್ಧ ನೆಡೆಯಿತು . 

Veera Abhimanyu Kannada Notes Pdf

ಆ ) ಕೊಟ್ಟಿರುವ  ಮಾತುಗಳನ್ನು ಯಾರು ? ಯಾರಿಗೆ ? ಹೇಳಿದರು ?

1.” ದೊಡ್ಡಪ್ಪ ನೀವೇಕೆ ಇಂದು ಬಹಳ ಚಿಂತಾಕ್ರಾಂತರಾಗಿರುವಿರಿ .

ಯಾರು ? : ಅಭಿಮನ್ನು 

ಯಾರಿಗೆ ? : ಧರ್ಮರಾಯನಿಗೆ .

2.“ ನಿನ್ನನ್ನು ಪಡೆದ ನಾವೇ ಧನ್ಯರು . ” 

ಯಾರು ? : ಧರ್ಮರಾಯ

ಯಾರಿಗೆ ? : ಅಭಿಮನ್ಯುವಿಗೆ 

3. ಏನು ಕಂದಾ ! ನೀನು ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ

 ಉತ್ತರ : ಯಾರು ? : ಸುಭದ್ರೆ 

ಯಾರಿಗೆ ? : ಅಭಿಮನ್ಯುವಿಗೆ 

ಇ ) ಹೊಂದಿಸಿ ಬರೆಯಿರಿ . 

ಅ                               ಬ                                       ಉತ್ತರಗಳು 

  1. ಸುಭದ್ರೆ                 ಅಭಿಮನ್ಯುವಿನ ಹೆಂಡತಿ      =  ಅಭಿಮನ್ಯುವಿನ ತಾಯಿ * 
  2. ಉತ್ತರೆ                   ಅಭಿಮನ್ಯುವಿನ ಗುರು           = ಅಭಿಮನ್ಯುವಿನ ಹೆಂಡತಿ 
  3. ಸುಮಿತ್ರ                ಅಭಿಮನ್ಯುವಿನ ದೊಡ್ಡಪ್ಪ  =  ಅಭಿಮನ್ಯುವಿನ ಸಾರಥಿ 
  4. ಧರ್ಮರಾಯ         ಅಭಿಮನ್ಯುವಿನ ತಾಯಿ       =  ಅಭಿಮನ್ಯುವಿನ ದೊಡ್ಡಪ್ಪ

ಈ ) ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ . 

ಧರ್ಮರಾಯ , ಜಯದ್ರಥ , ಭೀಮಸೇನ , ಅರ್ಜುನ 

ಉತ್ತರ : ಜಯದ್ರಥ

ವಿಖ್ಯಾತ , ಕುಖ್ಯಾತ , ಹೆಸರುವಾಸಿ , ಪ್ರಸಿದ್ಧಿ

ಉತ್ತರ : ಕುಖ್ಯಾತ 

ಸೂರ್ಯ , ರವಿ , ಆರ್ಯ , ದಿನಕರ 

ಉತ್ತರ : ಆರ್ಯ 

ಅಭಿಮನ್ಯು , ಉತ್ತರೆ , ಸುಭದ್ರೆ , ಶಕುನಿ 

ಉತ್ತರ : ಶಕುನಿ 

ಈ ) ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ. 

  1. ಸಂದೇಹ : ಧರ್ಮರಾಯನು ಅಭಿಮನ್ಯುವನ್ನು ಯುದ್ಧಕ್ಕೆ ಕಳುಹಿಸಲು ಸಂದೇಹಪಡುವನು . 
  2. ಜಯಶಾಲಿ : ಸುಭದ್ರ ಅಭಿಮನ್ಯುವಿಗೆ ಯುದ್ಧದಲ್ಲಿ ಜಯಶಾಲಿಯಾಗಿ ಬಾ ಎಂದು ಹರಸುವಳು . 
  3. ನಮಸ್ಕರಿಸು : ಅಭಿಮನ್ನು ಯುದ್ಧಕ್ಕೆ ಹೋಗುವ ಮುನ್ನ ತಾಯಿಗೆ ನಮಸ್ಕರಿಸುವನು . 
  4. ವೀರಾವೇಶ : ಅಭಿಮನ್ನು ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದನು . 

ಊ ) ಎರಡು / ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ .

1. ಧರ್ಮರಾಯನು ಚಿಂತಾಕ್ರಾಂತನಾಗಲು ಕಾರಣವೇನು ? 

ಉತ್ತರ : ಕುರುಕ್ಷೇತ್ರದಲ್ಲಿ ಹನ್ನೆರಡನೇ ದಿನ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಿದರು. ಕೃಷ್ಮ , ಬಲರಾಮ ಮತ್ತು ಅರ್ಜುನನನ್ನು ಬಿಟ್ಟರೆ ಚಕ್ರವ್ಯೂಹವನ್ನು ಭೇದಿಸುವ ವಿದ್ಯೆ ಉಳಿದ ಪಾಂಡವರಾರಿಗೂ ಗೊತ್ತಿರಲಿಲ್ಲ . ಆದ್ದರಿಂದ ಧರ್ಮರಾಯನು ಚಿಂತಾಕ್ರಾಂತನಾಗಿದ್ದನು .

2.ಸುಭದ್ರ ಅಭಿಮನ್ಯುವನ್ನು ಏನೆಂದು ಹರಸಿದಳು ?

ಉತ್ತರ :  ” ಶ್ರೀಕೃಷ್ಮ ಪರಮಾತ್ಮನ ಕೃಪೆ , ತಂದೆಯ ಶೌರ್ಯ ನಿನ್ನಲ್ಲಿರುವಾಗ ಸಂದೇಹದ ಮಾತೇ ಇಲ್ಲ . ಜಯಶಾಲಿಯಾಗಿ ಬಾ ಮಗನೇ , ಹೋಗಿ ಬಾ ನಿನಗೆ ಮಂಗಳವಾಗಲಿ ‘ ಎಂದು ಅಭಿಮನ್ಯುವನ್ನು ಹರಸಿದಳು .

3. ಅಭಿಮನ್ಯು ಉತ್ತರೆಯನ್ನು ಹೇಗೆ ಸಮಾಧಾನಪಡಿಸಿದನು ? 

ಉತ್ತರ : ” ಚಿಂತಿಸಬೇಡ ಉತ್ತರೆ , ನಾನು ಈ ಯುದ್ಧದಲ್ಲಿ ಜಯಶಾಲಿಯಾಗಿ ಹಿಂದಿರುಗುತ್ತೇನೆ . ಧೈರ್ಯಗೆಡದೇ ನಗುಮುಖದಿಂದ ನನ್ನನ್ನು ಕಳಿಸಿಕೊಡು ” ಎಂದು ಅಭಿಮನ್ನು ಉತ್ತರೆಯನ್ನು ‘ ಸಮಾಧಾನಪಡಿಸಿದನು . 

4. ಅಭಿಮನ್ಯು ಸಾರಥಿಯನ್ನು ಕುರಿತು ಏನು ಹೇಳಿದನು ?

ಉತ್ತರ : ‘ ಸುಮಿತ್ರ , ‘ ಆದಷ್ಟು ಬೇಗ ನನ್ನನ್ನು ದ್ರೋಣಾಚಾರ್ಯರು ರಚಿಸಿರುವ ಚಕ್ರವ್ಯೂಹದ ಕಡೆ ಕರೆದುಕೊಂಡು ಹೋಗು ” ಎಂದು ಅಭಿಮನ್ನು ತನ್ನ ಸಾರಥಿಯನ್ನು ಕುರಿತು

ಅ ) ಕೊಟ್ಟಿರುವ ವಿವರಣೆಯನ್ನು ಓದಿ , ಸೂಕ್ತ ಸ್ಥಳದಲ್ಲಿ ಲೇಖನ ಚಿಹ್ನೆ ಹಾಕಿ .

1. ಹೂದೋಟದಲ್ಲಿ ಎಷ್ಟೊಂದು ಹೂಗಳು ಅರಳಿವೆ ಕೆಂಪು ಗುಲಾಬಿ ಕಣ್ಮನ ಸೆಳೆಯುತ್ತಿದೆ . ಏನಿದು ಶಬ್ಧ ಓಹೋ ಸಂಪಿಗೆಯ ಕಂಪಿಗೆ ದುಂಬಿಗಳು ಝೇಂಕರಿಸುತ್ತಿವೆ ಮಲ್ಲಿಗೆ ಜಾಜಿ ಸುಗಂಧರಾಜ ಸೂರ್ಯಕಾಂತಿ ಚೆಂಡು ಹೂ ಅಬ್ಬ ಬಗೆ ಬಗೆಯ ಹೂಗಳ ಲೋಕವೇ ಇಲ್ಲಿದೆ

 ಉತ್ತರ : ಹೂದೋಟದಲ್ಲಿ ಎಷ್ಟೊಂದು ಹೂಗಳು ಅರಳಿವೆ , ಕೆಂಪು ಗುಲಾಬಿ ಕಣ್ಮನ ಸೆಳೆಯುತ್ತಿದೆ . ಏನಿದು ಶಬ್ಧ , ಓಹೋ ! ಸಂಪಿಗೆಯ ಕಂಪಿಗೆ ದುಂಬಿಗಳು ಝೇಂಕರಿಸುತ್ತಿವೆ . ಮಲ್ಲಿಗೆ , ಜಾಜಿ , ಸುಗಂಧರಾಜ , . ಸೂರ್ಯಕಾಂತಿ , ಚೆಂಡು ಹೂ . ಅಬ್ಬ ! ಬಗೆ ಬಗೆಯ ಹೂಗಳ ಲೋಕವೇ ಇಲ್ಲಿದೆ .

ಆ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ

( ಮಾದರಿ : ನೀವು + ಏಕೆ = ನೀವೇಕೆ ) 

ಉತ್ತರ :

  1. ನಾವು + ಏಕೆ – ನಾವೇಕೆ 
  2. ಅವರು + ಏಕೆ = ಅವರೇಕೆ 
  3. ಅವಳು + ಏಕೆ – ಅವಳೇಕೆ 
  4. ಅದು + ಏಕೆ = ಅದೇಕೆ 

ಇ ) ಒಗಟು ಬಿಡಿಸಿ ಉತ್ತರ ಬರೆಯಿರಿ. 

ಚೋಟುದ್ದ ಹುಡುಗಿಗೆ , ಮಾರುದ್ದ ಜಡೆ . 

ಉತ್ತರ : ಮಲ್ಲಿಗೆ ಹೂವು 

ಚಿಕ್ಕ ಬೋರನಿಗೆ ಕತ್ತಿ . 

ಉತ್ತರ : ಬದನೆಕಾಯಿ 

ಒಂಟಿ ಕಾಲು ಕೊಕ್ಕರೆ ಒಂಭೈನೂರು ತತ್ತಿ ,

 ಉತ್ತರ : ಬೆಂಡೆಕಾಯಿ 

ಈ ) ಕೊಟ್ಟಿರುವ ಅಕ್ಷರ ಚೌಕದಲ್ಲಿ ಕೌರವ ಪಾಂಡವರ ಹೆಸರುಗಳಿವೆ . ಅವುಗಳನ್ನು ಕಂಡುಹಿಡಿದು ನಿನ್ನ ಅಭ್ಯಾಸ ಪುಸ್ತಕದಲ್ಲಿ ಪಟ್ಟಿ ಮಾಡು . 

4th Standard Veera Abhimanyu Kannada Notes | 4th ವೀರ ಅಭಿಮನ್ಯು ಪಾಠ
4th Standard Veera Abhimanyu Kannada Notes | 4th ವೀರ ಅಭಿಮನ್ಯು ಪಾಠ

ಪಾಂಡವರ ಪಟ್ಟಿ : ಧರ್ಮರಾಯ , ಭೀಮ , ಅರ್ಜುನ , ಅಭಿಮನ್ಯು , ಉತ್ತರೆ ,

ಕೌರವರ ಪಟ್ಟಿ : ದುರ್ಯೋಧನ , ಕರ್ಣ , ಶಕುನಿ , ಗಾಂಧಾರಿ , ಜಯದ್ರಥ .

ಬಳಕೆ ಚಟುವಟಿಕೆ

ಆ ) ಮಾದರಿಯಂತೆ ಪೌರಾಣಿಕ ವೀರ ಬಾಲಕರ ಪರಿಚಯವನ್ನು ಮಾಡಿ ಕೊಡಿ. 

ಮಾದರಿ : ಲವ – ಕುಶ : ರಾಮ – ಸೀತೆಯರ ಅವಳಿ ಮಕ್ಕಳು . ರಾಮ – ಲಕ್ಷ್ಮಣರನ್ನು ಸೋಲಿಸಿದ ವೀರ ಬಾಲಕರು. 

ಉತ್ತರ : 

  1. ಏಕಲವ್ಯ : ಕಾಡಿನ ಬೇಡರ ಕುಲದ ಹದಿಹರೆಯದ ತರುಣ . ದ್ರೋಣರ ಮಣ್ಣಿನ ಮೂರ್ತಿ ರಚಿಸಿ ಬಿಲ್ಲುವಿದ್ಯೆಯ ಕೌಶಲ್ಯ ಬೆಳೆಸಿಕೊಂಡ . ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ತನ್ನ ಬಲಗೈ ಹೆಬ್ಬೆರಳನೇ ಕಾಣಿಕೆಯಾಗಿ , ವೀರಬಾಲಕ .
  1. ಪ್ರಹ್ಲಾದ : ಹಿರಣ್ಯಕಶ್ಯಪುವಿನ ಮಗ , ಭಗವಾನ ನಾರಾಯಣನ ಭಕ್ತ . ತಂದೆಯೊಂದಿಗೆ ದೇವರ ಕುರಿತು ವಾದ ವಿವಾದ ಮಾಡಿದ ಹರಿಭಕ್ತ . 
  1. ಬಬ್ರುವಾಹನ : ಇವನು ಮಧ್ಯಮ ಪಾಂಡವ ಅರ್ಜುನನ ಮಗ , ಮಣಿಪುರದ ರಾಜಕುಮಾರಿ ಚಿತ್ರಾಂಗದೆಯ ಗರ್ಭಸಂಜಾತ , ಅರ್ಜುನ ಮತ್ತು ಚಿತ್ರಾಂಗದೆಯರು ಗಾಂಧರ್ವ ರೀತಿ ವಿವಾಹವಾಗಿದ್ದರು . ಮಹಾಭಾರತದ ಯುದ್ಧ ನಂತರ ಪಾಂಡವರ ಅಶ್ವಮೇಧ ಯಾಗದ ಕುದುರೆಯನ್ನು ಬಂಧಿಸಿ ಅರ್ಜುನನೊಂದಿಗೆ ಹೋರಾಡಿ ಸ್ವಂತ ತಂದೆಯ ವಿರುದ್ಧವೇ ಜಯ ಸಾಧಿಸಿದ ವೀರ ಬಬ್ರುವಾಹನ.

ಇ ) ಯೋಚಿಸಿ ಬರೆಯಿರಿ . 

1. ಈ ನಾಟಕದಲ್ಲಿ ನಿನಗೆ ಇಷ್ಟವಾದ ಪಾತ್ರ ಯಾವುದು ? ಏಕೆ ? 

ಉತ್ತರ : ಈ ನಾಟಕದಲ್ಲಿ ನನಗೆ ಇಷ್ಟವಾದ ಪಾತ್ರ ಘನಘೋರ ಸಂಗ್ರಾಮ ನಡೆಯುತ್ತಿದ್ದಾಗ , ಅಭಿಮನ್ಯುವಿನ ಪಾತ್ರ . ಏಕೆಂದರೆ ಕುರುಕೇತ .ಪಾಂಡವರಿಗೂ , ಕೌರವರಿಗೂ ಬಿಲ್ಲು ವಿದ್ಯೆ ಕಲಿಸಿದ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸಲು ಅರ್ಜುನನ ಮಗ ತಂದೆಯ ಅನುಪಸ್ಥಿತಿಯಲ್ಲಿ ತಾನೇ ಭೇದಿಸಿ ಹೋರಾಡುತ್ತೇನೆ ಎಂಬ ಭರವಸೆಯನ್ನು ಅಸಹಾಯಕರಾಗಿ ಕುಳಿತ ತನ್ನ ದೊಡ್ಡಪ್ಪ ಧರ್ಮರಾಯ ಹಾಗೂ ಭೀಮ ಇವರಿಗೆ ಹೇಳುತ್ತಾನೆ . ಅದರಂತೆ ಧೈರ್ಯಶಾಲಿಯಾಗಿ ವೀರಾವೇಶದಿಂದ ಆ ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕು ಶೌರ್ಯದಿಂದ ‘ ಹೋರಾಡುತ್ತಾನೆ . ಅವನ ವೀರಾವೇಶಕ್ಕೆ ಕೌರವರೇ ತತ್ತರಿಸಿ , ಮೊಸದ ತಂತ್ರ ಹೂಡಿ ಕೌರವರು ಅಭಿಮನ್ಯುವಿನ ಬೆನ್ನ ಹಿಂದಿನಿಂದ ದಾಳಿ ನಡೆಸಿ ಅವನ ಕೈಯನ್ನು ಕತ್ತರಿಸಿಬಿಡುತ್ತಾರೆ . ಆದರೂ ಧೃತಿಗೆಡದ ಅಭಿಮನ್ಯು ರಥದ ಚಕ್ರವನ್ನು ಕೈಯಲ್ಲಿ ತಿರುಗಿಸಿ ವೀರಾವೇಶದಿಂದ ಹೋರಾಡಿ ವೀರಮರಣ ಹೊಂದುತ್ತಾನೆ . 

2. ಅಭಿಮನ್ನು ಯುದ್ಧಕ್ಕೆ ಹೋಗುತ್ತೇನೆ ಎಂದಾಗ ನೀನು ಧರ್ಮರಾಯನಾಗಿದ್ದರೆ ಏನು ಮಾಡುತಿದ್ದೆ? 

ಉತ್ತರ :  ನಾನು ಧರ್ಮರಾಯನಾಗಿದ್ದರೆ , ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹದಲ್ಲಿ ಹೋರಾಡಲು ಅಭಿಮನ್ಯುವಿನನ್ನು ಸಂಶಪ್ತಕರೆಂಬ ರಾಕ್ಷಸರನ್ನು ಎದುರಿಸಲು ಹೋದ ಅರ್ಜುನ , ಶ್ರೀಕೃಷ್ಮ ಹಾಗೂ ಬಲರಾಮ ಇವರು ಮರಳಿ ಬರುವವರೆಗೆ ಕಾಯುತ್ತಿದ್ದೆ . ನಂತರ ಚಕ್ರವ್ಯೂಹ ಭೇದಿಸುವ ವಿಚಾರ ಮಾಡುತ್ತಿದ್ದೆ .

ಕಲಿಕೆಗೆ ದಾರಿ :

ಎಲ್ಲಿವೆ ? ಗುರುತಿಸಿ ಬರೆ . 

 ಹಂಪಿ 

ಶಿವಮೊಗ್ಗ

ವಿಜಯಪುರ 

ಮೈಸೂರು 

ಮೈಸೂರು

ಬೆಂಗಳೂರು

FAQ :

ಕೌರವರು – ಪಾಂಡವರು ಯಾರಿಂದ ಬಿಲ್ವಿದ್ಯೆ ಕಲಿತರು ? 

ಉತ್ತರ : ಕೌರವರು – ಪಾಂಡವರು ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ಕಲಿತರು . 

ಅಭಿಮನ್ಯುವಿನ ತಂದೆಯ ಹೆಸರೇನು ?

ಉತ್ತರ : ಅಭಿಮನ್ಯುವಿನ ತಂದೆಯ ಹೆಸರು ಅರ್ಜುನ .

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *