4ನೇ ತರಗತಿ ಸರ್ವಜ್ಞನ ತ್ರಿಪದಿಗಳು ಕನ್ನಡ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 4th Standard Sarvagnana Tripadigalu Poem in Kannada Notes Question Answer Summary Mcq Pdf Download In Kannada Medium Karnataka State Syllabus 2024, Kseeb Solutions For Class 4 Kannada Chapter 10 Notes 4th Class Kannada Chapter 10 Notes Sarvagnana Tripadigalu Poem Notes in Kannada Pdf
4th Std Sarvagnana Tripadigalu in Kannada Notes
ಅಭ್ಯಾಸ
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಯಾರ ಮನೆಯ ಜ್ಯೋತಿಯು ಹೀನವಲ್ಲ ?
ಉತ್ತರ : ಜಾತಿಹೀನನ ಮನೆಯ ಜ್ಯೋತಿಯು ಹೀನವಲ್ಲ ,
2. ಪರರನ್ನು ಏನೆಂದು ಬಗೆಯಬೇಕು ?
ಉತ್ತರ : ಪರರನ್ನು ತನ್ನವರಂತೆ ಬಗೆಯಬೇಕು .
3. ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದು ಯಾರಿಗೆ ?
ಉತ್ತರ : ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು ಪರರಿಗೆ .
4. ಪಾಪದ ನೆಲಗಟ್ಟು ಯಾವುದು ?
ಉತ್ತರ : ಕೋಪವು ಪಾಪದ ನೆಲಗಟ್ಟು .
ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
1. ಕೈಲಾಸ ಯಾವಾಗ ಬಿನ್ನಾಣವಾಗುವುದು?
ಉತ್ತರ : ಇತರರಿಗೆ ಅನ್ನವನ್ನು ನೀಡಿದಾಗ , ನಿಜವನ್ನು ನುಡಿದಾಗ ಮತ್ತು ಇತರರನ್ನು ತನ್ನವರಂತೆ ಕಂಡಾಗ ಕೈಲಾಸ ಬಿನ್ನಾಣವಾಗುವುದು .
2. ಕುಲಗೋತ್ರಗಳ ನಡುವೆ ಭಿನ್ನತೆ ಏಕೆ ಇರಬಾರದು ?
ಉತ್ತರ : ನಾವು ನಡೆಯುವ ಭೂಮಿಯು ಒಂದೇ ಆಗಿದೆ , ನಾವು ಕುಡಿಯುವದು ಒಂದೇ ನೀರು ಮತ್ತು ಸುಡುವ ಬೆಂಕಿ ( ಅಗ್ನಿ ) ಯು ಒಂದೇ ಆಗಿರುವಾಗ ಜಾತಿ – ಮತ – ಪಂಥ ಎಂದೆನ್ನುತ ಕುಲಗೋತ್ರಗಳ ಮಧ್ಯೆ ಭಿನ್ನತೆ ಇರಬಾರದು .
ಭಾಷಾ ಚಟುವಟಿಕೆ
ಆ ) ಮಾದರಿಯಂತೆ ಪದಗಳನ್ನು ಬರೆ
( ಮಾದರಿ : ಟ್ಟು – ಕಟ್ಟು – ಅಟ್ಟು – ತಟ್ಟು – ಪೆಟ್ಟು )
ಉತ್ತರ :
1.ಡ್ಡ – ಅಡ್ಡ – ಗುಡ್ಡ – ದಡ್ಡ
- – ಅತ್ತ – ಇತ್ತ – ಸುತ್ತ – ಬೆತ್ತ
- – ಅಕ್ಕ – ಪಕ್ಕ – ತಕ್ಕ – ಲೆಕ್ಕ
ಇ ) ಮಾದರಿಯಂತೆ ಸೂಕ್ತ ಸ್ಥಳದಲ್ಲಿ ಸ , ಶ , ಷ ಸೇರಿಸಿ ಪದ ರಚಿಸು .
ಮಾದರಿ :ಸನ್ಯಾಸ ವಿನಾಶ ಪುರುಷ
ಉತ್ತರ : ಪ್ರಯಾಸ ಆಕಾಶ ದೋಷ
ಪ್ರವಾಸ ವಿವಶ ರೋಷ
ನೀರಸ ವಿದೇಶ ಹರುಷ
ವಿಶ್ವಾಸ ಹತಾಶ ವಿಶೇಷ
ವಿಲಾಸ ವಶ ನಿಮಿಷ
ಬಳಕೆ ಚಟುವಟಿಕೆ
ಅ ) ಈ ವಾಕ್ಯವನ್ನು ಸ್ಪುಟವಾಗಿ ನಕಲು ಮಾಡಿ .
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಉತ್ತರ : ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ
ಆ ) ಈ ಪದ್ಯದ ಮೊದಲ ಆರು ಸಾಲಗಳನ್ನು ಕಂಠಪಾಠ ಮಾಡಿ ನಿಮ್ಮದೇ ರಾಗದಲ್ಲಿ ಹಾಡಿ .
ಉತ್ತರ :
ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದ
ತನ್ನಂತೆ ಪರರ ಬಗೆದೊಡೆ ಕೈಲಾಸ |
ಬಿನ್ನಾಣವಕ್ಕು ಸರ್ವಜ್ಞ
ಕೊಟ್ಟಿದ್ದ ತನಗೆ ಬಚ್ಚಿಟ್ಟಿದ್ದು ಪರರಿಂಗೆ
ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದಕ್ಕೆ |
ಕಟ್ಟಿಹುದು ಬುತ್ತಿ ಸರ್ವಜ್ಞ
ಇ ) ರಾಷ್ಟ್ಯಗೀತೆಯನ್ನು ಇಲ್ಲಿ ಬರೆಯಿರಿ .
ಉತ್ತರ : ಜನಗಣ ಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತ ||
ಪಂಜಾಬ ಸಿಂಧು ಗುಜರಾತ ಮರಾಠಾ ।
ದ್ರಾವಿಡ ಉತ್ಕಲ ವಂಗಾ ||
ವಿಂಧ್ಯ ಹಿಮಾಚಲ ಯಮುನಾ ಗಂಗಾ ।
ಉಚ್ಛಲ ಜಲಧಿತರಂಗಾ ||
ತವ ಶುಭ ನಾಮೇ ಜಾಗೇ ತವ ಶುಭ ಆಶಿಸ ಮಾಗೇ ।
ಗಾಹೇ ತವ ಜಯ ಗಾಥಾ || ಜನಗಣ
ಮಂಗಲದಾಯಕ ಜಯ ಹೇ |
ಭಾರತ ಭಾಗ್ಯ ವಿಧಾತಾ || ಜಯ ಹೇ ,
ಜಯ ಹೇ , ಜಯ ಹೇ । ಜಯ ಜಯ ಜಯ ಜಯ ಹೇ ||
ಪದ್ಯದ ಸಾರಾಂಶ :
‘ ಕವಿ ಸರ್ವಜ್ಞನು ಈ ಲೋಕದ ಡೊಂಕನ್ನು ತಿದ್ದಿದವರು. ಅವರು ತಮ್ಮ ತ್ರಿಪದಿ ವಚನಗಳ ಮೂಲಕ – ಈ ಜಗತ್ತಿನಲ್ಲಿ ಮಾನವರು ನಡೆದುಕೊಳ್ಳುವ ಕೆಟ್ಟ ನಡವಳಿಕೆಗಳನ್ನು ತಿದ್ದಿ ಎಚ್ಚರಿಸಿದ್ದಾರೆ . ಈ ಲೋಕದಲ್ಲಿ ಅನ್ನವನ್ನು ನೀಡುವುದು , ನುಡಿಯುವುದು , ತನ್ನಂತೆಯೇ ಇತರರು ಎಂದು ಭಾವಿಸಿಕೊಂಡಾಗ ಮಾತ್ರ ಇಲ್ಲಿಯೇ ಕೈಲಾಸವನ್ನು ಕಾಣಬಹುದು ಎಂದು ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿತೆನ್ನಬೇಡ , ನೀನು ಯಾವುದನ್ನು ನನಗಾಗಿ ಎಂದು ನಿನ್ನಲ್ಲಿ ಬಚ್ಚಿಟ್ಟು ಕೊಂಡಿದ್ದಿಯೊ ಅದನ್ನು ಪರರ ಸೇವೆ ಅಥವಾ ದಾನಕ್ಕಾಗಿ ಮುಡುಪಾಗಿಡು , ಮುಂದೆ ಜೀವನದಲ್ಲಿ ನಿನಗೆ ಅದರ ಫಲಗಳು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ . ಜಾತಿಯಿಂದ ಹಿಂದೆ ಇರುವವನ ಮನೆಯ ಜ್ಯೋತಿಯು ಎಂದೂ ಹೀನವಲ್ಲ . ನಾವು ವಾಸಿಸುವ ಎಲ್ಲರ ಮನೆಯ ಜೋತಿಯು ಒಂದೇ ಆಗಿದೆ . ಇಲ್ಲಿ ನಾವು ಮಾಡುವ ಕೆಲಸಗಳು ಬೇರೆ ಬೇರೆ ಇರಬಹುದು . ನಮ್ಮ ಬಣ್ಣಗಳು ಬೇರೆ ಇರಬಹುದು . ಆದರೆ ನಾವು ಜಾತಿ ಎನ್ನದೆ ಎಲ್ಲರೂ ಒಗ್ಗಟ್ಟಾಗಿ ಬಾಳಬೇಕಿದೆ. ನಾವು ಬೆಳಗುವ ಜ್ಯೋತಿ ಒಂದೇ ಆಗಿದೆ ಎನ್ನುತ್ತಾನೆ .
FAQ :
ಉತ್ತರ : ಜಾತಿಹೀನನ ಮನೆಯ ಜ್ಯೋತಿಯು ಹೀನವಲ್ಲ ,
ಉತ್ತರ : ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು ಪರರಿಗೆ .
ಇತರೆ ವಿಷಯಗಳು :
4th Standard Kannada Textbook Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
nice😊👍
Google