ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-4.8 ರಾಷ್ಟ್ರಕೂಟರು ನೋಟ್ಸ್‌ | 2nd Puc History Rashtrakutaru Notes in Kannada

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-4.8 ರಾಷ್ಟ್ರಕೂಟರು ನೋಟ್ಸ್‌, 2nd Puc History Rashtrakutaru Notes Question Answer Mcq in Kannada Pdf Download 2023 Kseeb Solution For Class 12 History Chapter 4.8 Notes ರಾಷ್ಟ್ರಕೂಟರು Pdf 2nd Puc History Chapter 4.8 Question Answer in Kannada

ಅಧ್ಯಾಯ – 4.8 ರಾಷ್ಟ್ರಕೂಟರು

2nd Puc History Rashtrakutaru Notes in Kannada
2nd Puc History Rashtrakutaru Notes in Kannada

2nd Puc History Rashtrakutaru Notes in Kannada

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ 2 ವಾಕ್ಯದಲ್ಲಿ ಉತ್ತರಿಸಿ :

1.ರಾಷ್ಟ್ರಕೂಟರ ಪ್ರಸಿದ್ದ ದೊರೆ ಯಾರು ?

ಒಂದನೇ ಅಮೋಘವರ್ಷ .

2. ಅಮೋಘವರ್ಷನ ಆಸ್ಥಾನಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿ ಯಾರು ?

ಸುಲೇಮಾನ್ .

3. ಕನ್ನಡದ ಮೊದಲ ಸಾಹಿತ್ಯ ಕೃತಿ ಯಾವುದು ?

ಶ್ರೀ ವಿಜಯನ ಕವಿರಾಜಮಾರ್ಗ .

4 . ‘ ಉಭಯ ಕವಿ ಚಕ್ರವರ್ತಿ ‘ ಎಂದು ಯಾರನ್ನು ಕರೆಯಲಾಗಿತ್ತು ?

ಪೊನ್ನ .

5. ರಾಷ್ಟ್ರಕೂಟರ ರಾಜಲಾಂಛನ ಯಾವುದು ?

ಗರುಡ .

6. ರಾಷ್ಟ್ರಕೂಟರ ರಾಜಧಾನಿ ಯಾವುದು ?

ಮಾನ್ಯಖೇಟ [ ಮಾಳಖೇಡ ]

7. ರಾಷ್ಟ್ರಕೂಟರ ಮೊದಲ ದೊರೆ ಯಾರು ?

ದಂತಿದುರ್ಗ .

8. ಪೊನ್ನನಿಗೆ ಆಶ್ರಯ ನೀಡಿದವರು ಯಾರು ?

3 ನೇ ಕೃಷ್ಣ .

9. ಕನ್ನಡದ ಆದಿಕವಿ ಎಂದು ಯಾರನ್ನು ಕರೆಯುತ್ತಾರೆ ?

ಪಂಪ

10. ಪಂಪನಿಗೆ ಆಶ್ರಯ ನೀಡಿದವರು ಯಾರು ?

ರಾಷ್ಟ್ರಕೂಟರ ಸಾಮಂತನಾದ ಅರಿಕೇಸರಿ .

2nd Puc History Chapter 4 Question Answer in Kannada

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1. ಅಮೋಘವರ್ಷನ ಯಾವುದಾದರೂ ಎರಡು ಬಿರುದು ಗಳನ್ನು ಬರೆಯಿರಿ .

‘ ಅತಿಶಯದವಳ ‘ , ‘ ನೃಪತುಂಗ

2. ಪೊನ್ನನ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .

‘ ಶಾಂತಿಪುರಾಣ ‘ ಮತ್ತು ‘ ಭುವನೈಕ್ಯ ರಾಮಾಭ್ಯುದಯ ‘

3. ಪಂಪನ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .

‘ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ‘

4 . ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು ? ಎಲ್ಲಿ ನಿರ್ಮಿಸಿದರು ?

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರದಲ್ಲಿ ನೇ ಕೃಷ್ಣನು ನಿರ್ಮಿಸಿದನು .

5 , ಧ್ರುವನ ಯಾವುದಾದರೂ ಎರಡು ಬಿರುದುಗಳನ್ನು ಹೆಸರಿಸಿ .

ಧಾರಾವರ್ಷ , ಶ್ರೀ ವಲ್ಲಭ .

6. 3 ನೇ ಗೋವಿಂದನ ಯಾವುದಾದರೂ ಎರಡು ಬಿರುದು ಗಳನ್ನು ತಿಳಿಸಿ .

ಜಗತ್ತುಂಗ , ಪ್ರಭೂತವರ್ಷ .

III . ಈ ಕೆಳಗಿನ ಪ್ರಶ್ನೆಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :

1. 3 ನೇ ಗೋವಿಂದನ ಸಾಧನೆಗಳನ್ನು ವಿವರಿಸಿ .

3 ನೇ ಗೋವಿಂದನು ಧ್ರುವನ ಮಗನಾಗಿದ್ದು ಸಾ.ಶ. 793 ರಲ್ಲಿ ಅಧಿಕಾರಕ್ಕೆ ಬಂದನು .

ಇವನ ಸಹೋದರ ಸ್ತಂಭನು ಗಂಗರು ಮತ್ತು ಪಲ್ಲವರಿಗೆ ಸಹಾಯ ಮಾಡುತ್ತಿದ್ದುದನ್ನು ಗಮನಿಸಿ ಅವನನ್ನು ಸೆರೆಮನೆಯಲ್ಲಿಟ್ಟು ನಂತರ ಬಿಡುಗಡೆ ಮಾಡಿ ಗಂಗಾವಾಡಿಯ ಅಧಿಕಾರಿ ಯನ್ನಾಗಿ ಮಾಡಿದನು ,

ಗಂಗರ ದೊರೆ ಶಿವಕುಮಾರನನ್ನು ಸೆರೆಮನೆಯಲ್ಲಿಟ್ಟನು . ಉತ್ತರ ಭಾರತದಲ್ಲಿ ರಾಜಕೀಯ ಸಂಘರ್ಷಗಳು ಏರ್ಪಟ್ಟು ಪ್ರತಿಹಾರದ ನಾಗಭಟ ಬಂಗಾಳದ ಧರ್ಮಪಾಲ ಮತ್ತು ಕನೌಜದ ಚಕ್ರಾಯುಧನು ಸಾರ್ವಭೌಮತ್ವಕ್ಕಾಗಿ ಹೋರಾಡುತ್ತಿದ್ದಾಗ ಇವರನ್ನೆಲ್ಲಾ ಸೋಲಿಸಿದನು .

ಪಾಂಡ್ಯರು ಕೇರಳದ ಅರಸರನ್ನು ಒಗ್ಗೂಡಿಸಿಕೊಂಡು ಯುದ್ಧ ಸಾರಿದಾಗ ಇವರನ್ನೆಲ್ಲಾ ಸೋಲಿಸಿ ರಾಜ ಲಾಂಛನವನ್ನು ಕಿತ್ತುಕೊಂಡನು . ಪಲ್ಲವ ದೊರೆ ದಂತಿದುರ್ಗನನ್ನು ಸೋಲಿಸಿ ಕಪ್ಪಕಾಣಿಕೆಗಳನ್ನು ಸ್ವೀಕರಿಸಿದನು . ಈತನಿಗೆ ಜಗತ್ತುಂಗ ‘ ಪ್ರಭೂತವರ್ಷ ‘ ಶ್ರೀ ವಲ್ಲಭ ‘ , ‘ ತಿಭುವನದವಳ ‘ ಮೊದಲಾದ ಬಿರುದು ಗಳಿದ್ದವು .

2. ಅಮೋಘವರ್ಷನ ಸಾಧನೆಗಳನ್ನು ವಿವರಿಸಿ .

ಇವನು 3 ನೇ ಗೋವಿಂದನ ಮಗ . ಈತನಿಗೆ ಶರ್ವ ಎಂಬ ಹೆಸರು ಇತ್ತು .

ವೆಂಗಿಯ ಚಾಲುಕ್ಯರ ದೊರೆ 3 ನೇ ಗುಣಗ ವಿಜಯಾದಿತ್ಯನನ್ನು ಸೋಲಿಸಿದನು . ಅಮೋಘವರ್ಷನ ದಂಡನಾಯಕ ಬಂಕೇಶನು ಗಂಗ ದೊರೆ ರಾಜಮಲ್ಲನನ್ನು ಸೋಲಿಸಿದನು .

ರಾಚಮಲ್ಲನ ನಂತರ ಅಧಿಕಾರಕ್ಕೆ ಬಂದ ನೀತಿಮಾರ್ಗ ಎರೆಗಂಗನು ಅಮೋಘವರ್ಷನನ್ನು ಸೋಲಿಸಿದನು .

ನಂತರದಲ್ಲಿ ನೃಪತುಂಗನು ಗಂಗ ಮತ್ತು ಇತರ ಅರಸು ಮನೆತನದವರೊಡನೆ ಸಂಘರ್ಷ ಕೈಬಿಟ್ಟು ವೈವಾಹಿಕ ಸಂಬಂಧ ಮಾಡಿಕೊಂಡನು .

ತನ್ನ ಮಗಳಾದ ಚಂದ್ರಲಬ್ಬೆಯನ್ನು ಗಂಗದೊರೆ ಭೂತುಗನಿಗೆ , ಮತ್ತು ಮತ್ತೊಬ್ಬ ಮಗಳಾದ

ಶೀಲಮಹಾದೇವಿಯನ್ನು ವೆಂಗಿಯ ವಿಜಯಾದಿತ್ಯನ ಮಗ ವಿಷ್ಣವರ್ಧನನಿಗೆ ಮತ್ತು ಇನ್ನೊಬ್ಬ ಮಗಳಾದ ಸ ೦ ಖಾಳನ್ನು ಕಂಚಿಯ ಪಲ್ಲವ ದೊರೆ 3 ನೇ ನಂದಿವರ್ಮನಿಗೆ ಕೊಟ್ಟು ವಿವಾಹ ಮಾಡಿದನು .

ಅಮೋಘವರ್ಷನು ತನ್ನ ಕೊನೆಯ ದಿನಗಳಲ್ಲಿ ಯುವರಾಜನಾದ ಕೃಷ್ಣನ ದಂಗೆಯನ್ನು ಎದುರಿಸ ಬೇಕಾದರೂ ದಂಡನಾಯಕನಾದ ಬಂಕೇಶನು ಕೃಷ್ಣನ ಮನವೊಲಿಸುವಲ್ಲಿ ಯಶಸ್ವಿಯಾದನು .

ಇದರಿಂದಾಗಿ ಬಂಕೇಶನು ಬನವಾಸಿಯ ರಾಜ್ಯಪಾಲನಾದನು . ಅಮೋಘವರ್ಷನು ಧಾರ್ಮಿಕ ಸಹಿಷ್ಣುವಾಗಿದ್ದು ರಾಜ್ಯದ ಜನರನ್ನು ಕ್ಷಾಮದಿಂದ ಪಾರುಮಾಡಲು ಕೊಲ್ಲಾಪುರದ ಮಹಾಲಕ್ಷ್ಮಿಗೆ ಕೈ ಬೆರಳೊಂದನ್ನು ನೀಡಿದನೆಂದು ಸಂಜನ್ ಶಾಸನ ತಿಳಿಸುತ್ತದೆ . ಸ್ವತಃ ವಿದ್ವಾಂಸನಾಗಿದ್ದು , ಪ್ರಶ್ನೋತ್ತರ ರತ್ನಮಾಲಾ ಕೃತಿಯನ್ನು ರಚಿಸಿದನು ಮತ್ತು ಅನೇಕ ವಿದ್ವಾಂಸರು ಗಳಿಗೆ ಆಶ್ರಯದಾತನಾಗಿದ್ದನು .

IV . ಈ ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

2nd Puc History Rashtrakutas Notes Pdf in Kannada

1. ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳನ್ನು ವಿವರಿಸಿರಿ .

ರಾಷ್ಟ್ರಕೂಟ ಅರಸರು ಭಾರತೀಯ ಸಂಸ್ಕೃತಿಗೆ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ . ವೈದಿಕ ಮತಾವಲಂಭಿಗಳಾಗಿದ್ದು ಇವರು ಜೈನ ಮತ್ತು ಬೌದ್ಧ ಧರ್ಮಗಳಿಗೆ ರಾಜಾಶ್ರಯ ನೀಡಿದರು .

ಸಾಹಿತ್ಯ ಪೋಷಕರಾಗಿದ್ದರು . ಕನ್ನಡದ ಮೊದಲ ಕೃತಿಯಾದ ಕವಿರಾಜ ಮಾರ್ಗ ಶ್ರೀ ವಿಜಯನಿಂದ ರಚಿಸಲ್ಪಟ್ಟಿತು.

3 ನೇ ಕೃಷ್ಣನ ಆಸ್ತಾನದಲ್ಲಿದ್ದ ಸೊನ್ನನು ಶಾಂತಿಪುರಾಣ , ಭುವನೈಕ್ಯ ರಾಮಾಭ್ಯುದಯ ಗ್ರಂಥವನ್ನು ರಚಿಸಿದನು ಇವನಿಗೆ ‘ ಉಭಯ ಕವಿ ಚಕ್ರವರ್ತಿ ‘ ಎಂಬ ಬಿರುದಿತ್ತು . ರಾಷ್ಟ್ರಕೂಟರ ಸಾಮಂತ ಇಮ್ಮಡಿ ಅರಿಕೇಸರಿಯ ಆಸ್ಥಾನದಲ್ಲಿದ್ದ ಪಂಪನು ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣ ಗ್ರಂಥವನ್ನು ರಚಿಸಿದನು . ಈತನನ್ನು ಕನ್ನಡದ ಆದಿಕವಿ ‘ ಎಂದು ಕರೆಯಲಾಗಿದೆ .

ಶಿವಕೋಟಾಚಾರ್ಯರು ‘ ವಡ್ಡಾರಾಧನೆ ‘ ಎಂಬ ಕೃತಿಯನ್ನು ರಚಿಸಿದರು . ಇದು ‘ ಹಳೆಗನ್ನಡದ ಮೊದಲ ಗದ್ಯ ‘ ಕೃತಿಯಾಗಿದೆ .

ಸಂಸ್ಕೃತ ಸಾಹಿತ್ಯವು ವಿಫುಲವಾಗಿ ಬೆಳೆಯಿತು . ಅಮೋಘವರ್ಷನ ಪ್ರಶೋತ್ತರ ರತ್ನಮಾಲಾ , ಶಕ್ತಾಯನನ ಶಬ್ದಾನುಶಾಸನ , ಮಹಾವೀರಾಚಾರ್ಯನ ಗಣಿತಸಾರಸಂಗ್ರಹ , ಅಗಸನ ವರ್ಧಮಾನ ಪುರಾಣ ಮೊದಲಾದವು ಸಂಸ್ಕೃತಿ ಕೃತಿಗಳಾಗಿವೆ .

ಕಲೆ ಮತ್ತು ವಾಸ್ತುಶಿಲ್ಪ:

ರಾಷ್ಟ್ರಕೂಟ ಅರಸರು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ . ಇವರು ದೇವಾಲಯ , ಗುಹಾಂತರ ದೇವಾಲಯಗಳನ್ನು ಮತ್ತು ಬಸದಿಗಳನ್ನು ನಿರ್ಮಿಸಿದ್ದಾರೆ . ಎಲ್ಲೋರ , ಅಜಂತ ಮತ್ತು ಎಲಿಫೆಂಟಾ ಇವರ ಕಲೆಯ ಪ್ರಮುಖ ಕೇಂದ್ರಗಳಾಗಿವೆ .

ಎಲ್ಲೋರ ಕೈಲಾಸನಾಥ ದೇವಾಲಯ :

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿ 16 ಗುಹೆಗಳಿದ್ದು ಅವುಗಳಲ್ಲಿ 5 ಹಿಂದೂ ಧರ್ಮಕ್ಕೆ ಸೇರಿವೆ . ಇಲ್ಲಿನ ಕೈಲಾಸನಾಥ ಏಕಶಿಲಾ ದೇವಾಲಯವು ಜಗತ್ಪಸಿದ್ಧವಾಗಿದೆ . ಈ ದೇವಾಲಯವನ್ನು 1 ನೇ ಕೃಷ್ಣನು ಸಾ.ಶಿ. 770 ರಲ್ಲಿ ನಿರ್ಮಿಸಿದನು . ರಾವಣನು ಕೈಲಾಸ ಪರ್ವತವನ್ನು ಎತ್ತುತ್ತಿರುವ ದೃಶ್ಯವು ಅದ್ಭುತವಾಗಿ ಕಾಣುವುದರಿಂದ ಈ ದೇವಾಲಯಕ್ಕೆ ಕೈಲಾಸನಾಥ ದೇವಾಲಯ ಎಂದು ಕರೆಯಲಾಗಿದೆ .

ಎಲಿಫೆಂಟಾ :

ಮುಂಬೈಯಿಂದ ಆರು ಮೈಲಿ ದೂರದಲ್ಲಿರುವ ಒಂದು ದ್ವೀಪ ಪ್ರದೇಶವಾಗಿರುವ ಎಲಿಫೆಂಟಾದಲ್ಲಿ ಏಳು ಗುಹೆಗಳಿವೆ . ಈ ಎಲಿಫೆಂಟಾದ ಹಿಂದಿನ ಹೆಸರು ಗೊರವಪುರಿ , ಇಲ್ಲಿರುವ ಬೃಹತ್ ಆನೆಯನ್ನು ಪೋರ್ಚುಗೀಸರು ಎಲಿಫೆಂಟಾ ಎಂದು ಕರೆದ ನಂತರ ಈ ದ್ವೀಪಕ್ಕೆ ಎಲಿಫೆಂಟಾ ಎಂಬ ಹೆಸರು ಬಂದಿತು .

ಇಲ್ಲಿರುವ ಗುಹೆಗಳ ಮದ್ಯ ದಲ್ಲಿರುವ ಗುಹೆಯಲ್ಲಿನ ತ್ರಿಮೂರ್ತಿ ವಿಗ್ರಹ ದೇವರ ಮೂರು ಅವತಾರಗಳಿಗೆ [ ಸೃಷ್ಟಿ , ಸ್ಥಿತಿ , ಲಯ ] ಸಂಬಂಧಿಸಿದೆ . ಇವರು ಚಿತ್ರಕಲೆಗೂ ಪ್ರೋತ್ಸಾಹ ನೀಡಿದ್ದರೆಂಬುದಕ್ಕೆ ಎಲ್ಲೋರಾದ ಗುಹಾಂತರ ದೇವಾಲಯದಲ್ಲಿರುವ ಚಿತ್ರಕಲೆ ಸಾಕ್ಷಿಯಾಗಿದೆ .

ಹೆಚ್ಚುವರಿ ಪ್ರಶ್ನೋತ್ತರಗಳು

1. ಯಾವ ದೊರೆ ತನ್ನ ಮಗಳಾದ ಶೀಲಭಟ್ಟಾರಿಕೆಯನ್ನು ಧ್ರುವನಿಗೆ ಕೊಟ್ಟು ವಿವಾಹ ಮಾಡಿದನು ?

ವೆಂಗಿ ಅರಸ 4 ನೇ ವಿಷ್ಣುವರ್ಧನ .

2. 3 ನೇ ಗೋವಿಂದನ ಸಾಮ್ರಾಜ್ಯವು ಎಲ್ಲಿಯವರೆಗೆ ಹರಡಿತ್ತು ?

ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೆ ಮತ್ತು ಪಶ್ಚಿಮದಲ್ಲಿ ಸೌರಾಷ್ಟ್ರದಿಂದ ಪೂರ್ವದಲ್ಲಿ ಬಂಗಾಳದವರೆವಿಗೂ ಹರಡಿತ್ತು .

3.ರಾಷ್ಟ್ರಕೂಟರು ಭಾರತದಲ್ಲಿ ಎಷ್ಟು ವರ್ಷಗಳ ಕಾಲ ಆಳ್ವಿಕೆ ನಡೆಸಿದರು ?

ಸಾ.ಶ. 753 ರಿಂದ 978 ರ ವರೆಗೆ

4. ರಾಷ್ಟ್ರಕೂಟರು ಯಾವ ಪ್ರದೇಶಕ್ಕೆ ಸೇರಿದವರು ?

ಇವರು ಮಹಾರಾಷ್ಟ್ರದ ಲತ್ತಲೂರು ( ಲಾತೂರು ) ಪ್ರದೇಶಕ್ಕೆ ಸೇರಿದವರು .

5. 2 ನೇ ಗೋವಿಂದನನ್ನು ಪದಚ್ಯುತಿಗೊಳಿಸಿ ಅಧಿಕಾರಕ್ಕೆ ಬಂದ ಅರಸನಾರು ?

ದ್ರುವ

6. ಅಮೋಘವರ್ಷನನ್ನು ‘ ರಾಜರಾಮುಡು ‘ ಕದನದಲ್ಲಿ ಸೋಲಿಸಿದ ಗಂಗರ ದೊರೆ ಯಾರು ?

ನೀತಿಮಾರ್ಗ ಎರೆಗಂಗ .

FAQ

1. ರಾಷ್ಟ್ರಕೂಟರ ರಾಜಲಾಂಛನ ಯಾವುದು ?

ಗರುಡ

2. ಕನ್ನಡದ ಆದಿಕವಿ ಎಂದು ಯಾರನ್ನು ಕರೆಯುತ್ತಾರೆ ?

ಪಂಪ

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *

rtgh