ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-6 ಸಾಮಾಜಿಕ ಪರಿವರ್ತನೆ ನೋಟ್ಸ್‌ | 1st Puc Sociology Chapter 6 Question Answer

ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-6 ಸಾಮಾಜಿಕ ಪರಿವರ್ತನೆ ನೋಟ್ಸ್‌, 1st Puc Sociology Chapter 6 Question Answer Notes Mcq Pdf in Kannada Medium, Kseeb Solution For Class 11 Sociology Chapter 6 Notes Samajika Parivartane Sociology Notes Pdf Social Change in Kannada Notes Pdf

 

ಸಮಾಜಶಾಸ್ತ್ರ ಅಧ್ಯಾಯ-6 ಸಾಮಾಜಿಕ ಪರಿವರ್ತನೆ

1st puc sociology 6th chapter notes kannada medium

1st Puc Sociology 6th Chapter Notes Kannada Medium

I. ಒಂದು ಅಂಕದ ಪ್ರಶ್ನೆಗಳು : ( ಒಂದು ವಾಕ್ಯದಲ್ಲಿ ಉತ್ತರಿಸಿ )

1 ಪರಿವರ್ತನೆ ಎಂದರೇನು ?

‘ ಪರಿವರ್ತನೆ ‘ ಎಂದರೆ ಒಂದು ಸಂಗತಿ ಇನ್ನೊಂದು ರೂಪ ಪಡೆಯುವುದು . ಅಥವಾ ಮತ್ತೊಂದು ವಿಧದಲ್ಲಿ ರೂಪಗೊಳ್ಳುವುದು ಅಥವಾ ಒಂದು ವ್ಯವಸ್ಥೆ ಅಥವಾ ಸಂಗತಿಯಿಂದ ಇನ್ನೊಂದೆಡೆಗೆ ಸಾಗುವುದು ಎಂದರ್ಥ .

2. ಸಾಮಾಜಿಕ ಪರಿವರ್ತನೆ ಎಂದರೇನು ?

ಸಮಾಜದ ರಚನೆ ಮತ್ತು ಸಾಮಾಜಿಕ ಸಂಘಟನೆಯಲ್ಲಿ ಆಗುವ ಬದಲಾವಣೆಗೆ ಸಾಮಾಜಿಕ ಪರಿವರ್ತನೆ ಎನ್ನುವರು.

3. ವಿಕಾಸ ಎಂದರೇನು ?

ಏಕತೆಯಿಂದ ವೈವಿಧ್ಯತೆಯ ಕಡೆಗೆ ಸಮಾಜದ ವರ್ಗಾವಣೆಗೆ “ ವಿಕಾಸ ” ಎನ್ನುತ್ತಾರೆ .

4. ವಿಕಾಸ ಪರಿಕಲ್ಪನೆಯ ಅರ್ಥ ನೀಡಿರಿ .

‘ ವಿಕಾಸ ‘ ಎಂಬ ಪರಿಕಲ್ಪನೆಗೆ ತತ್ಸಮಾನವಾದ ಆಂಗ್ಲತರ ಎವೂಲ್ಯೂಷನ್ ಎಂಬುದು ಲ್ಯಾಟೀನ್ ಭಾಷೆಯ ಇವೋಲ್ವೇರ್ ಪದದಿಂದ ಬಂದಿದೆ . ಇವೋಲ್ವೇರ್ ಎಂದರೆ ಬೆಳವಣಿಗೆ ಹೊಂದು ಅಥವಾ ಪದರಗಳನ್ನು ಬಿಚ್ಚಿಕೊಳ್ಳು ಎಂದರ್ಥ ಇದೊಂದು ಸ್ವಯಂಚಾಲಿತ ಪ್ರಕ್ರಿಯೆ , ಇದು ಆಂತರಿಕ ಪರಿವರ್ತನೆಯನ್ನು ಸಂಕೇತಿಸುತ್ತದೆ . ವಿಕಾಸವು ಆಂತರಿಕವಾಗಿ ತನ್ನಷ್ಟಕ್ಕೆ ತಾನೆ ಸಹಜವಾಗಿ ನಡೆಯುವ ಪ್ರಕ್ರಿಯೆ .

5. ಪ್ರಗತಿ ಎಂದರೇನು ?

ಸಮಾಜವನ್ನು ಮಾನವನು ತನ್ನಿಚ್ಚೆಯ ಮೇರೆಗೆ ಸುಧಾರಿಸುವ ಕ್ರಮವನ್ನು ‘ ಪ್ರಗತಿ ‘ ಎನ್ನುವರು .

6. ವಿಕಾಸ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

ವಿಕಾಸ ಪರಿಕಲ್ಪನೆಯನ್ನು ಪರಿಚಯಿಸಿದವರು “ ಚಾರ್ಲ್ಸ್ ಡಾರ್ವಿನ್ ” ,

7. ವಿಶ್ವಗ್ರಾಮ ಎಂದರೇನು ?

ಸಂಪರ್ಕ ಸಾಧನಗಳಲ್ಲಾದ ಕ್ರಾಂತಿಕಾರಕ ಬೆಳವಣಿಗೆಯಿಂದ ಜಗತ್ತಿನ ಗಾತ್ರ ಕಿರಿದಾಗಿರುವಂತೆ ಭಾಸವಾಗಿ ಜಗತ್ತೆ ಒಂದು ಗ್ರಾಮವಾಗಿ ಇರುವ ಕಲ್ಪನೆಗೆ ವಿಶ್ವಗ್ರಾಮ ಎನ್ನುವರು .

8 . ವಲಸೆ ಎಂದರೇನು ?

ಜನರು ಹಲವಾರು ಕಾರಣಗಳಿಂದ ( ಆಹಾರ , ವಸತಿ , ಇತ್ಯಾದಿ ) ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದಕ್ಕೆ ‘ ವಲಸೆ ‘ ಎನ್ನುವರು .

9. ಜೀವ ಸಂಕುಲಗಳ ಉಗಮ ಎಂಬ ಕೃತಿಯ ಕರ್ತೃ ಯಾರು ?

ಜೀವ ಸಂಕುಲಗಳ ಉಗಮ ಎಂಬ ಕೃತಿಯ ಕತೃ ‘ ಚಾರ್ಲ್ಸ್ ಡಾರ್ವಿನ್ ‘ .

II . ಎರಡು ಅಂಕದ ಪ್ರಶ್ನೆಗಳು ( 2-3 ವಾಕ್ಯಗಳಲ್ಲಿ ಉತ್ತರಿಸಿ )

1. ಸಾಮಾಜಿಕ ಪರಿವರ್ತನೆಯ ಒಂದು ವ್ಯಾಖ್ಯೆ ಕೊಡಿ .

“ ಹಾರ್ಟನ್ ಮತ್ತು ಹಂಟ್ ” ರವರು ಸಮಾಜದ ರಚನೆ ಮತ್ತು ಸಾಮಾಜಿಕ ಸಂಘಟನೆಯಲ್ಲಿ ಆಗುವ ಬದಲಾವಣೆಯನ್ನು ಸಾಮಾಜಿಕ ಪರಿವರ್ತನೆ ಎಂದು ಕರೆದಿದ್ದಾರೆ .

2. ಸಾಮಾಜಿಕ ಪರಿವರ್ತನೆಯ ಎರಡು ಲಕ್ಷಣಗಳನ್ನು ಕೊಡಿರಿ .

ಸಾಮಾಜಿಕ ಪರಿವರ್ತನೆಯ ಎರಡು ಲಕ್ಷಣಗಳೆಂದರೆ

1 ) ಸಾಮಾಜಿಕ ಪರಿವರ್ತನೆಯು ಸಾರ್ವತ್ರಿಕವಾದುದು .

2 ) ಸಾಮಾಜಿಕ ಪರಿವರ್ತನೆಯು ಸಾಮುದಾಯಿಕ ಪರಿವರ್ತನೆಯಾಗಿದೆ .

3. ಭೌಗೋಳಿಕ ಪರಿವರ್ತನೆಗೆ ಎರಡು ಉದಾಹರಣೆ ಕೊಡಿ .

ಭೌಗೋಳಿಕ ಪರಿವರ್ತನೆಗೆ ಎರಡು ಉದಾಹರಣೆ ಎಂದರೆ

1) ತಮಿಳುನಾಡಿನಲ್ಲಿ ಉಂಟಾದ ಸುನಾಮಿ ,

2 ) ಉತ್ತರ ಭಾರತದ ಬ್ರಹ್ಮಪುತ್ರ ನದಿಗೆ ಬರುವ ಪದೇ ಪದೇ ನೆರೆಹಾವಳಿಯಿಂದ ಉತ್ತರ ಈಶಾನ್ಯ ಭಾರತೀಯರ ಸಾಮಾಜಿಕ ಜೀವನಕ್ಕೆ ಆತಂಕ ತಂದಿದೆ .

4. ಜೈವಿಕ ಪರಿವರ್ತನೆಗೆ ಎರಡು ಉದಾಹರಣೆ ಕೊಡಿ .

ಜೈವಿಕ ಪರಿವರ್ತನೆಗೆ ಎರಡು ಉದಾಹರಣೆಗಳೆಂದರೆ

1 ) : ಜನಸಂಖ್ಯಾ: ಗಾತ್ರ ಸಮಾಜದಲ್ಲಿ ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಅಧಿಕವಾದರೆ ಅಂತಹ ಸಮಾಜದಲ್ಲಿಬಹುಪತ್ನಿತ್ವ ಪದ್ಧತಿ ಜಾರಿಗೆ ಬರುವುದು ಅಥವಾ ಸ್ತ್ರೀಯರಿಗಿಂತ ಪುರುಷರ ಸಂಖ್ಯೆ ಅಧಿಕವಾಗಿದ್ದರೆ ಬಹುಪತಿತ್ವ ಪದ್ಧತಿ ಬರಬಹುದು .

2 ) ಜನನ ಮರಣಗಳ ಪ್ರಮಾಣ : ಜನನದ ಪ್ರಮಾಣ ಹೆಚ್ಚಾದಾಗ ಬಡತನ , ನಿರುದ್ಯೋಗಕ್ಕೆ ಕಾರಣ .

5 , ಸಾಂಸ್ಕೃತಿಕ , ಪರಿವರ್ತನೆ ಎರಡು ಉದಾಹರಣೆ ಕೊಡಿ .

ಸಾಂಸ್ಕೃತಿಕ , ಪರಿವರ್ತನೆ ಎರಡು ಉದಾಹರಣೆ ಎಂದರೆ

1 ) ಸಾಂಸ್ಕೃತಿಕ , ಪರಿವರ್ತನೆಯಿಂದ ಉಂಟಾದ ಪರಿವರ್ತನೆಯಿಂದ ಪರಿಶೋಧನೆಗೆ ಕಾರಣವಾಗಿದೆ . ವಾಸ್ಕೋಡಿಗಾಮನು ಸಮುದ್ರದ ಮೂಲಕ ಭಾರತವನ್ನು ಕಂಡುಹಿಡಿದನು .

2 ) ಪ್ರಸರಣದಿಂದಾಗಿ ಬೌದ್ಧ ಧರ್ಮ ಭಾರತ ದೇಶದಿಂದ ಜಪಾನ್ , ಶ್ರೀಲಂಕಾ , ಚೀನಾ ದೇಶಗಳಿಗೆ ಪ್ರಸಾರವಾಯಿತು .

6 , ತಾಂತ್ರಿಕ ಬದಲಾವಣೆಗೆ ಎರಡು ಉದಾಹರಣೆ ಕೊಡಿ .

ತಾಂತ್ರಿಕ ಬದಲಾವಣೆಗೆ ಉದಾಹರಣೆ

1 ) ಸಾರಿಗೆ ಮತ್ತು ಸಂರ್ಕದಿಂದಾಗಿ ವಿಶ್ವಗ್ರಾಮದ ಪರಿಕಲ್ಪನೆ .

2 ) ನಗರೀಕರಣ ಕೈಗಾರಿಕರಣಗಳ ಉದ್ಯಮ ಪ್ರಧಾನ ಅರ್ಥ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿರುವುದು .

7. ಭಾರತದಲ್ಲಿ ಬದಲಾವಣೆ ತಂದ ಎರಡು ಶಾಸನಗಳನ್ನು ಹೆಸರಿಸಿ .

ಭಾರತದಲ್ಲಿ ಬದಲಾವಣೆ ತಂದ ಎರಡು ಶಾಸನಗಳೆಂದರೆ

1 ) ಹಿಂದೂ ವಿವಾಹ ಕಾಯ್ದೆ .

2 ) ಬಾಲಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆ .

8. ಪ್ರಗತಿ ಮತ್ತು ವಿಕಾಸ ನಡುವಿರುವ ಎರಡು ವ್ಯತ್ಯಾಸಗಳನ್ನು ಬರೆಯಿರಿ .

ಪ್ರಗತಿ ಮತ್ತು ವಿಕಾಸ ನಡುವಿರುವ ಎರಡು ವ್ಯತ್ಯಾಸಗಳೆಂದರೆ

ಪ್ರಗತಿ

1 ) ಪ್ರಗತಿ ಎಂಬುದು ಅಪೇಕ್ಷಣೀಯ ಗುರಿಯ ಕಡೆಗೆ ಸಂಭವಿಸುವ ಪರಿವರ್ತನೆ .

2 ) ಪ್ರಗತಿ ವಿಷಯಾಧಾರಿತ ಮತ್ತು ಮೌಲ್ಯ ಆಧಾರಿತವಾದುದಾಗಿದೆ .

ವಿಕಾಸ

1) ವಿಕಾಸ ನಿಶ್ಚಿತ ಕಲ್ಪನೆಯಾಗಿದ್ದು ಪರಿವರ್ತನೆಯಲ್ಲಿ ನಿಶ್ಚಿತ ಲಕ್ಷಣಗಳನ್ನು ವಿವರಿಸುತ್ತದೆ .

2) ವಿಕಾಸ ನಿಧಾನವಾಗಿ ಹಂತ ಹಂತವಾಗಿ ನಡೆಯುವ ಪ್ರಕ್ರಿಯೆಯಾಗಿದೆ .

9. ಅಭಿವೃದ್ಧಿಯನ್ನು ವ್ಯಾಖ್ಯಾನಿಸಿ .

‘ ಅಭಿವೃದ್ಧಿ ‘ ಎಂಬ ಕನ್ನಡ ಪದದ ತತ್ಸಮಾನ ಇಂಗ್ಲಿಷ್ ಪದ Development ಆಗಿದೆ . ಈ ಪದಕ್ಕೆ ‘ ಬೆಳವಣಿಗೆ ‘ , ‘ ವೃದ್ಧಿಕ್ರಮ ‘ , ‘ ವಿಕಸನ ‘ ಎಂಬುದಾಗಿ ಕೂಡ ಅರ್ಥೈಸಲಾಗಿದೆ .

1st Puc Sociology 6th Chapter Notes in Kannada

II . ಐದು ಅಂಕದ ಪ್ರಶ್ನೆಗಳು : ( 10-15 ವಾಕ್ಯಗಳಲ್ಲಿ ಉತ್ತರಿಸಿ )

1. ಸಾಮಾಜಿಕ ಪರಿವರ್ತನೆಯಲ್ಲಿ ಭೌಗೋಳಿಕ ಅಂಶಗಳ ಪಾತ್ರ ವಿವರಿಸಿ .

ನಿಸರ್ಗದತ್ತ ತರುವ ಪರಿವರ್ತನೆಗಳನ್ನು ಭೌಗೋಳಿಕ ಅಂಶಗಳೆಂದು ಹೇಳಬಹುದು . ಇವು ನಿಸರ್ಗದ ಪರಿಸ್ಥಿತಿಯನ್ನು ಒಳಗೊಳ್ಳುತ್ತದೆ . ಭೂಮಿ , ನೀರು , ಅರಣ್ಯ , ಸರೋವರ , ಬೆಟ್ಟ ಎಲ್ಲ ನೈಸರ್ಗಿಕ ಸಂಪನ್ಮೂಲಗಳೆಲ್ಲವು ಭೌಗೋಳಿಕ ಅಂಶಗಳೆಂದು ಹೇಳಬಹುದು . ಇವು ಮಾನವ ಜೀವನದ ಮೇಲೂ ಪ್ರಭಾವ ಬೀರುತ್ತವೆ . ಚಳಿ ಮಾನವನ ಜೀವನಕ್ಕೆ ಬಹಳಷ್ಟು ಸಹಕಾರಿಯಾಗಿದೆ . ಸಾಮಾಜಿಕ ಪರಿವರ್ತನೆಯಲ್ಲಿ ಈ ಕೆಳಕಂಡಂತೆ ಮೂರು ರೀತಿಯಲ್ಲಿ ಭೌಗೋಳಿಕವಾಗಿ ಪ್ರಭಾವ ಬೀರುತ್ತವೆ . ಅವುಗಳೆಂದರೆ

1 ) ನೈಸರ್ಗಿಕ ವಿಕೋಪದಿಂದಾಗುವ ಪರಿವರ್ತನೆಗಳು : ಅತಿವೃಷ್ಟಿ , ಭೂಕಂಪ , ಚಂಡಮಾರುತ , ಬಿರುಗಾಳಿ , ಇವೆಲ್ಲಾ ಮಾನವನ ನಿಯಂತ್ರಣ ಮೀರಿದ್ದಾಗಿದೆ . ಇವುಗಳಿಂದ ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಕ ಗಂಭೀರ ಪರಿಣಾಮ ಬೀರುತ್ತವೆ . ಉದಾ : – 1923 ರಲ್ಲಿ ಜಪಾನದ ಯುಕೋಹ್ಯಾಮದಲ್ಲಿ ಸಂಭವಿಸಿದ ಜ್ವಾಲಾಮುಖಿಯ ಸಿಡಿತದಿಂದಾಗಿ ಉಂಟಾದ ನಷ್ಟ ಅಪಾರ , ಆದರೂ ಜಪಾನಿನಲ್ಲಿ ಕೆಲವೇ ವರ್ಷಗಳಲ್ಲಿ ಹೊಸ ಶೈಲಿಯ ವಾಸ್ತುಶಿಲ್ಪ ಸೃಷ್ಟಿಯಾಯಿತು . ಲಂಡನ್ ನಗರ ಬೆಂಕಿಗೆ ಅನಾಹುತವಾಯಿತು . ಆದರೂ ಕೆಲಕಾಲದ ನಂತರ ಹೊಸ ನಗರ ನಿರ್ಮಾಣವಾಯಿತು .

2 ) ಮಾನವನ ಚಟುವಟಿಕೆಯಿಂದ ಭೌಗೋಳಕ ಅಂಶದಲ್ಲಾಗುವ ಪರಿವರ್ತನೆಗಳು : ಹಂಟಿಂಗ್‌ಟನ್‌ ಹೇಳಿಕೆಯಂತೆ- ಮಾನವನ ಚಟುವಟಿಕೆಗಳಿಗೂ ಮತ್ತು ಭೌಗೋಳಿಕ ಪರಿಸರಕ್ಕೂ ನೇರ ಸಂಬಂಧವಿದೆ . ತಂತ್ರಜ್ಞಾನದ ಬಳಕೆಯಿಂದ ಮಾನವನೇ ಸಾಮಾಜಿಕ ಪರಿವರ್ತನೆಗಳಿಗೆ ಕಾರಣನಾಗಿದ್ದಾನೆ . ಮಾನವನ ಚಟುವಟಿಕೆಯಿಂದಾಗಿಯೇ ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವಾಗಿ ಸಮಾಜದಲ್ಲಿ ವಾಯುಮಾಲಿನ್ಯ ಜಲಮಾಲಿನ್ಯ , ಅರಣ್ಯನಾಶಕ್ಕೆ ಕಾರಣವಾಗಿದೆ .

3 ) ನಾಗರೀಕತೆಯ ಬೆಳವಣಿಗೆ : ಮಾಂಟೆಸ್ಕೊ , ಹಂಟಿಂಗ್‌ಟನ್ ಮುಂತಾದವರು ಅಭಿಪ್ರಾಯಪಡುವಂತೆ ಸಮಾಜದ ನೀಲೆ ಭೌಗೋಳಿಕ ಅಂಶಗಳ ಪ್ರಭಾವವನ್ನು ಅಧ್ಯಯನ ಮಾಡುತ್ತ ಸಮಾಜದಲ್ಲಿಯ ಜನಸಾಂದ್ರತೆಯನ್ನು ತಿಳಿದುಕೊಳ್ಳುವಲ್ಲಿ ಭೌತಿಕ ಅಂಶಗಳು ಸಹಕಾರಿಯಾಗಿವೆ . ದಾ : – ಮರುಭೂಮಿ ಪ್ರದೇಶದಲ್ಲಿ ಜನಸಂಖ್ಯೆ ಕಡಿಮೆ ಇರುತ್ತದೆ . ಅದೇ ನದಿ ಕಂಡೆ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ . ಊಟೋಪಚಾರಗಳು ಉಡುಗೆ ತೊಡುಗೆ , ವಸತಿ ಎಲ್ಲವೂ ಹವಾಮಾನ ಸ್ಥಿತಿಯನ್ನು ಅವಲಂಭಿಸಿರುತ್ತದೆ . ಅಷ್ಟೇ ಅಲ್ಲದೆ ಕೃಷಿ , ಗಣಿ , ಮೀನುಗಾರಿಕೆ ಮುಂತಾದ ಉದ್ಯೋಗಗಳು ಭೌಗೋಳಿಕ ಸ್ಥಿತಿಯನ್ನು ಅವಲಂಭಿಸಿರುತ್ತದೆ .

2. ಸಾಮಾಜಿಕ ಪರಿವರ್ತನೆಯಲ್ಲಿ ಜೈವಿಕ ಅಂಶಗಳ ಪಾತ್ರ ವಿವರಿಸಿ .

ಸಾಮಾಜಿಕ ಪರಿವರ್ತನೆಯಲ್ಲಿ ಪ್ರಮುಖವಾಗಿ ನಾಲ್ಕು ಪ್ರಕಾರಗಳಲ್ಲಿ ಜೈವಿಕ ಅಂಶಗಳನ್ನು ಪಟ್ಟಿಮಾಡಬಹುದಾಗಿದೆ . ಅವುಗಳೆಂದರೆ

1 ) ಜನಸಂಖ್ಯಾ ಗಾತ್ರ

2 ) ಜನನ ಪ್ರಮಾಣ ಮತ್ತು ಮರಣ ಪ್ರಮಾಣ .

3 ) ವಲಸೆ .

4 ) ವಯೋಮಾನ ಮತ್ತು ಲಿಂಗಾನುಪಾತ .

1 ) ಜನಸಂಖ್ಯಾ : ಗಾತ್ರ ಜನಸಂಖ್ಯಾ ಗಾತ್ರ ಸಮಾಜದ ಸಮತೋಲನವನ್ನು ಕಾಯುತ್ತದೆ . ಹೆಚ್ಚಿನ ಜನಸಂಖ್ಯೆ ಬಡತನಕ್ಕೆ ಕಾರಣವಾಗುತ್ತದೆ , ಜನಸಂಖ್ಯಾ ಗಾತ್ರ ಸಮಾಜದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ . ಉದಾ : – ಸಮಾಜವೊಂದರಲ್ಲಿ ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಅಧಿಕವಾದರೆ ಅಂತಹ ಸಮಾಜದಲ್ಲಿ ಬಹುಪತ್ನಿತ್ವ ಪದ್ಧತಿ ಜಾರಿಗೆ ಬರುತ್ತದೆ . ಒಂದು ವೇಳೆ ಪುರುಷರ ಸಂಖ್ಯೆ ಅಧಿಕವಾಗಿದ್ದರೆ ಬಹುಪತಿತ್ವ ಪದ್ಧತಿ ಬರಬಹುದು .

2 ) ಜನನ ಮತ್ತು ಮರಣ ಪ್ರಮಾಣ : ಜನನ ಪ್ರಮಾಣ ಹೆಚ್ಚಾಗಿ , ಮರಣ ಪ್ರಮಾಣ ಕಡಿಮೆಯಾದಾಗ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಇದು ಬಡತನ , ನಿರುದ್ಯೋಗ , ವಸತಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ . ಒಂದು ವೇಳೆ ಮರಣ ಪ್ರಮಾಣ ಹೆಚ್ಚಾದರೆ ಮಾನವ ಸಂಪನ್ಮೂಲದ ಕೊರತೆ ಉಂಟಾಗಿ ಸಾಮರ್ಥ್ಯ ಇಳಿಮುಖವಾಗುತ್ತದೆ . ಸಮಾಜ ಕಲ್ಯಾಣ ಸಾಧಿಸಬೇಕಾದರೆ ಜನನ ನಿಯಂತ್ರಣದಿಂದ ಮಾತ್ರ ಸಾಧ್ಯ . – ಉದಾ : – ಕುಟುಂಬ ಯೋಜನೆ ಭಾರತದಲ್ಲಿ ಕುಟುಂಬ ಯೋಜನೆ ಜಾರಿಗೆ ತರುವುದರಿಂದ ಸಾಮಾಜಿಕ ಮೌಲ್ಯಗಳು , ವಿಚಾರಗಳು , ವೈವಾಹಿಕ ಸಂಬಂಧಗಳು ಪರಿವರ್ತನೆಗೊಳ್ಳುತ್ತದೆ .

3 ) ವಲಸೆ: ಜನರು ವಲಸೆ ಹೋಗುವುದರಿಂದ ಸಮಾಜದಲ್ಲಿ ಪರಿವರ್ತನೆ ತರಬಹುದು . ವಲಸೆ ಎಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದು ಎಂಬ ಅರ್ಥ ಬರುವುದು . ಇದರಲ್ಲಿ ಎರಡು ಪ್ರಕಾರಗಳಿವೆ :

1 ) ನಗರ ಗ್ರಾಮೀಣ ವಲಸೆ .

2 ) ಗ್ರಾಮೀಣ ನಗರ ವಲಸೆ .

1 ) ನಗರ ಗ್ರಾಮೀಣ ವಲಸೆ ಎಂದರೆ ಜನರು ನಗರದಿಂದ ಪ್ರದೇಶಗಳಿಗೆ ವಲಸೆ ಹೋಗುವುದು .

2 ) ಗ್ರಾಮೀಣ ನಗರ ವಲಸೆಯಲ್ಲಿ ಜನರು ಗ್ರಾಮದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದು . ಜನರ ಮನೋಭಾವನೆ , ಜೀವನಶೈಲಿ ಮೌಲ್ಯಗಳಲ್ಲಿ ವಲಸೆ ಪರಿವರ್ತನೆ ತರುತ್ತದೆ .

4 ) ವಯೋಮಾನ ಮತ್ತು ಅಂಗಾನುಪಾತ : ಸಮಾಜದಲ್ಲಿ ಜನಸಂಖ್ಯೆಯನ್ನು ಮೂರು ವಿಧದಲ್ಲಿ ಕಾಣುತ್ತೇವೆ . ಅವರುಗಳೆಂದರೆ ಮಕ್ಕಳು , ಯುವಕರು , ಹಾಗೂ ವಯೋವೃದ್ದರು . ಒಂದು ವೇಳೆ ಯುವಕರ ಸಂಖ್ಯೆಯಲ್ಲಿ ಇಳಿಮುಖವಾದರೆ ಕಾರ್ಯ ಸಮರ್ಥತೆ ಕಡಿಮೆಯಾಗುತ್ತದೆ . ಆರ್ಥಿಕಾಭಿವೃದ್ಧಿಯಲ್ಲಿ ಕುಂಠಿತವಾಗುತ್ತದೆ . ವಯೋವೃದ್ಧರ ಸಂಖ್ಯೆ ಹೆಚ್ಚಾದರೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ .

3. ಸಾಮಾಜಿಕ ಪರಿವರ್ತನೆಯಲ್ಲಿ ಸಾಂಸ್ಕೃತಿಕ ಅಂಶಗಳ ಪಾತ್ರ ವಿವರಿಸಿ .

ಮಾನವ ಸಮಾಜ ಜೀವಿ , ಅಷ್ಟೇ ಅಲ್ಲ ಸಾಂಸ್ಕೃತಿಕ ಜೀವಿ , ಸಮಾಜ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ , ಸಂಸ್ಕೃತಿಯಲ್ಲಾದ ಪರಿವರ್ತನೆ ಸಮಾಜ ಪರಿವರ್ತನೆಗೆ ಕಾರಣವಾಗುತ್ತದೆ . ಧರ್ಮ ಕಲೆ , ಭಾಷೆ , ಸಾಹಿತ್ಯ , ಲೋಕರೂಢಿಗಳು , ನೈತಿಕ ನಿಯಮಗಳು ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ . ಸಾಂಸ್ಕೃತಿಕ ಪರಿವರ್ತನೆ ತರುವಲ್ಲಿ ಮುಖ್ಯವಾಗಿ ಮೂರು ಪ್ರಕ್ರಿಯೆಗಳನ್ನು ಗಮನಿಸಬಹುದು .

1 ) ಪರಿಶೋಧನೆ 2 ) ಅವಿಷ್ಕಾರ , 3 ) ಪ್ರಸರಣ

1 ) ಪರಿಶೋಧನೆ : ಪರಿಶೋಧನೆ ಎಂಬ ಕಲ್ಪನೆ ಈಗಾಗಲೇ ಅಸ್ತಿತ್ವದಲ್ಲಿ ಇರುವ ನಮಗೆ ಗೋಚರಿಸದೇ ಇರುವ ಸಂಗತಿಗಳನ್ನು ಕಂಡುಕೊಳ್ಳುವುದಾಗಿದೆ . ಉದಾಹರಣೆಗೆ- ವಾಸ್ಕೊ – ಡಿ – ಗಾಮ ಸಮುದ್ರದ ಮೂಲಕ ಭಾರತ ಕಂಡು ಹಿಡಿದನು .

2 ) ಅವಿಷ್ಠಾರ : ಪರಿವಾ ಅವಿಷ್ಕಾರ ಸಾಮಾಜಿಕ ಬದಲಾವಣೆಯ ಪ್ರಮುಖ ಮೂಲ ಈ ಮೊದಲು ಆಸ್ತಿತ್ವದಲ್ಲಿ ಇರದ ಯಾವುದನ್ನಾದರೂ ರೂಪಿಸುವುದಕ್ಕೆ ಅವಿಷ್ಕಾರ ಎನ್ನಲಾಗುತ್ತದೆ . ವಿದ್ಯುತ್ , ಅಣುಶಕ್ತಿ , ಮೊಬೈಲ್ , ಇತ್ಯಾದಿ ಭೌತ ಮತ್ತು ಅಭೌತ ಜಗತ್ತಿನಲ್ಲಿ ಉಂಟಾಗುವ ಅವಿಷ್ಕಾರ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ .

3 ) ಪ್ರಕರಣ : ಸಾಂಸ್ಕೃತಿಕ ಅಂಶಗಳು ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಗೆ ಹರಡುವಿಕೆಯನ್ನು ‘ ಪ್ರಸರಣ ‘ ಎನ್ನುವರು . ಉದಾ : – ಭಾರತದಲ್ಲಿ ಉದಯವಾದ ಬೌದ್ಧಧರ್ಮ ಹಾಗೂ ಅದರ ಸಂಸ್ಕೃತಿ ಚೀನಾ ಮತ್ತು ಶ್ರೀಲಂಕಾ ದೇಶಗಳಿಗೆ ಪ್ರಸಾರವಾಯಿತು .

4. ಸ್ಥಿರ ಸಮಾಜದ ಬಯಕೆ ಪರಿವರ್ತನೆ ಪ್ರತಿರೋಧಿಸುತ್ತದೆ ಹೇಗೆ ? ವಿವರಿಸಿ .

ಪರಿವರ್ತನೆಯು ಸಹಜವಾದುದು . ಯಾರು ಇದನ್ನು ತಡೆಗಟ್ಟಲಾರರು ಪರಿವರ್ತನೆಯ ಪ್ರಕಿಯೆ ಆರಂಭಗೊಂಡಾಗ ಮಾನವ ಮತ್ತು ಅವನ ಸಮಾಜ ಪ್ರತಿರೋಧ ಮಾಡುತ್ತದೆ . ಪರಿವರ್ತನೆ ತಕ್ಷಣ ಸಂಭವಿಸುವುದಿಲ್ಲ ಇದು ವಿರೋದಾತ್ಮಕ ಅಂಶಗಳಿಂದ ಕೂಡಿದೆ . ಅಗಬರ್ನ್ ಮತ್ತು ನಿಮ್‌ರಾಫ್‌ರವರು ಪರಿವರ್ತನೆಯ ಪ್ರತಿರೋಧದ ಕಾರಣಗಳನ್ನು ಈ ಕೆಳಗಿನಂತೆ ತಿಳಿಸಿದ್ದಾರೆ .

1 ) ಅಸಮರ್ಪಕ ಆವಿಷ್ಠಾರಗಳು : ಆವಿಷ್ಕಾರಗಳು ಎಲ್ಲವೂ ಸರಿಯಾಗಿವೆ ಎಂದು ಹೇಳಲಾಗುವುದಿಲ್ಲ , ದೋಷಪೂರಿತ ಆವಿಷ್ಕಾರಗಳಿಂದ ಜನರು ಆಸಕ್ತಿ ತೋರುವುದಿಲ್ಲ . ಇದರ ವಿಫಲತೆಯಿಂದಾಗಿ ಆವಿಷ್ಕಾರಗಳು ಸಾಮುದಾಯಿಕ ಜೀವನದ ಮೇಲೆ ಪ್ರಭಾವ ಬೀರಲಾರವು . ಅಣುಶಕ್ತಿ , ಅಣುಬಾಂಬುಗಳ ತಯಾರಿಕೆಯ ಸಂದರ್ಭದಲ್ಲಿ ಪ್ರತಿರೋಧ ಕಂಡುಬರುತ್ತದೆ .

2 ) ಭಯ : ಹೊಸದು ಪರಿಚಯವಾದಾಗ ಜನರು ಅದರ ಬಗ್ಗೆ ಭಯ ಹೊಂದುತ್ತಾರೆ . ಏಕೆಂದರೆ ಅವು ಹೊಸ ಸಮಸ್ಯೆಗಳು ಹುಟ್ಟಬಹುದು ಎಂಬ ಆತಂಕವನ್ನು ಹೊಂದಿರುತ್ತಾರೆ . ಉದಾ : – ಥಾಮಸ್ ಎಡಿಸನ್ ವಿದ್ಯುತ್ ಬಲ್ಬನ್ ಸಂಶೋಧನೆ ಮಾಡಿ ಆ ವಿದ್ಯುತ್ ಬಲ್ಪ್ ಹೇಗೆ ಬೆಳಕನ್ನು ನೀಡುತ್ತದೆ ಎಂದು ಪ್ರದರ್ಶಿಸಿದ ತಕ್ಷಣ ಬೆಳಕು ನೀಡಿದ ಬಲ್ಪ್ ನೋಡಿ ಜನ ಭಯಗೊಂಡು ಓಡಿಹೋದರು . ‌

3 ) ಅಜ್ಞಾನ: ಮನುಷ್ಯನು ಅಜ್ಞಾನವು ಪರಿವರ್ತನೆಗೆ ಪ್ರತಿರೋಧಕ್ಕೆ ಮೂಲಕಾರಣ ಶಿಕ್ಷಣ ತರಬೇತಿ ಮನುಷ್ಯನನ್ನು ಬುದ್ದಿವಂತನನ್ನಾಗಿ ಮಾಡಿದ್ದರು . ಹೊಸದರ ಬಗ್ಗೆ ಅಜ್ಞಾನಿಯಾಗಿದ್ದಾನೆ . ಅವನಿಗೆ ಸರಿಯಾದ ಜ್ಞಾನ ಸಿಗುವವರೆಗೂ ವಿರೋಧಿ ವ್ಯಕ್ತ ಪಡಿಸುತ್ತಾನೆ .

4 ) ಅಭ್ಯಾಸ : ಹಿರಿಯ ನಾಗರೀಕರು ಸಮಾಜದ ಹೊಸನೀತಿನಿಯಮಗಳನ್ನು ಸ್ವೀಕರಿಸಲು ತಿರಸ್ಕರಿಸುತ್ತಾರೆ ಹೊಸ ಅಭ್ಯಾಸಗಳು ಹಳೆಯ ಸಮಾಜಕ್ಕೆ ವಿಚಿತ್ರವೆನೆಸುತ್ತದೆ . ಆದ್ದರಿಂದ ಅವರು ಹೊಸ ಅಭ್ಯಾಸಗಳನ್ನು ಬೆಳಸಿಕೊಳ್ಳದೆ ತಿರಸ್ಕರಿಸುತ್ತಾರೆ .

5 ) ಪಟಭದ್ರ ಹಿತಾಸಕ್ತಿಗಳು : ಮಾನವ ಸಮಾಜದಲ್ಲಿ ಸ್ವಾರ್ಥಪರನಾಗಿಯೇ ವಾಸಿಸುತ್ತಾನೆ , ಇರುವ ಪದ್ಧತಿಗಳನ್ನು ವ್ಯವಸ್ಥೆಗಳಲ್ಲಿಯೇ ಸಂತೋಷ ತೃಪ್ತಿ ಕಂಡುಕೊಳ್ಳುತ್ತಾನೆ . ಇದೇ ವ್ಯವಸ್ಥೆಯಲ್ಲಿಯೇ ಹೆಚ್ಚಿನ ಅವಕಾಶ ಪಡೆಯಲಿಚ್ಚಿಸುವನು . ಉದಾ : – ಭಾರತದಲ್ಲಿ ಭೂ ಸುಧಾರಣ ಕಾಯಿದೆ ಬದಲಾವಣೆ ತಂದಿತು . ಇದು “ ಉಳುವವನೆ ಭೂಮಿಗೊಡೆಯ ” ಎಂಬ ತತ್ವಧಾರವಾಗಿತ್ತು . ಈ ರೀತಿ ಪರಿವರ್ತನೆ ಹಾಗೂ ಶಾಸನದಲ್ಲಾದ ಸುಧಾರಣೆಯನ್ನು ಶ್ರೀಮಂತ ಭೂ ಮಾಲಿಕರು ಸ್ವಾರ್ಥಿಗಳಾಗಿ ವಿರೋಧಿಸಿದರು .

6 ) ಆರ್ಥಿಕ ಅಸಮತೆ : ಹಣ ಮತ್ತು ಸಂಪತ್ತು ಪರಿವರ್ತನೆ ಸ್ವೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ . ಉದಾಹರಣೆಗೆ- ಭಾರತ ಸರ್ಕಾರ ಪಂಚವಾರ್ಷಿಕ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ , ಇಂತಹ ಯೋಜನೆಗಳನ್ನು ಅನುಷ್ಟಾನಕ್ಕೆ ತರುವಾಗ ಹಣಕಾಸಿನ ವೆಚ್ಚದಲ್ಲಿ ಬದಲಾವಣೆ ಆಗಿ ಆರ್ಥಿಕ ತೊಂದರೆ ಬದಲಾವಣೆಗೆ ವಿರೋಧವಾಗಿದೆ .

7 ) ಸಂಯೋಜನೆಯ ಕೊರತೆ : ಸಮಾಜವು ಧರ್ಮ , ಶಿಕ್ಷಣ , ಸರಕಾರಗಳಿಂದ ನಿರ್ಮಾಣವಾಗಿದೆ , ಸಮಾಜವನ್ನು ಇಡಿಯಾಗಿ ಪರಿವರ್ತನೆ ತರಲಿಚ್ಚಿಸಿದಾಗ ಅದಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳಲ್ಲಿ ಪರಿವರ್ತನೆಯಾಗ ಬೇಕಾಗುತ್ತದೆ . ಉದಾ : – ಸತಿಸಹಗಮನ ಪದ್ಧತಿಯು ಶಾಸನಾತ್ಮಕ ಕ್ರಮಗಳಿಂದ ಶಿಕ್ಷಣ , ದರ್ಮದ ಸಹಕಾರದಿಂದ ನಿರ್ಮೂಲನವಾಯಿತು ಇದೆ ರೀತಿ ಬಾಲ್ಯ ವಿವಾಹ ಪದ್ಧತಿ ಬಾಲ ಕಾರ್ಮಿಕ ಪದ್ಧತಿ ಮುಂತಾದವು .

8 ) ತಾಂತ್ರಿಕ ತೊಂದರೆ : ಹೊಸ ತಾಂತ್ರಿಕ ಆವಿಷ್ಕಾರಗಳಾದಾಗ ಅದನ್ನು ಸಮಾಜ ತನ್ನ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತದೆ , ಒಮ್ಮೊಮ್ಮೆ ತಾಂತ್ರಿಕ ಯೋಜನೆಗಳು ಮನ ರಚನೆಯಾಗಬೇಕಾಗುತ್ತದೆ . ಕಾರಣ ಇದು ಸ್ವೀಕೃತಿಯಲ್ಲಿ ಹಿನ್ನಡೆ ಇರುತ್ತದೆ . ಉದಾ : – ಸ್ಕೂಟರ್ ಸವಾರರು ಹೆಲೆಟನ್ನು ಧರಿಸುವುದಿಲ್ಲ . ದೂರವಾಣಿಗಳಿಗಿಂತ ಮೊಬೈಲ್‌ಗಳು ಹೆಚ್ಚು ಜನಪ್ರಿಯವಾಗಿದೆ .

9 ) ಬೌದ್ದಿಕ ಆಲಸ್ಯ : ಹೊಸತರ ಮಹತ್ವವನ್ನು ಕುರಿತು ತಿಳಿದುಕೊಳ್ಳಲು ಆಸಕ್ತಿ ತೋರಿಸಬೇಕಾಗುತ್ತದೆ , ಆಸಕ್ತಿ ಇರದಿದ್ದರೆ ಹೆಚ್ಚಿನ ಗಮನ ಕೊಡದೆ ಹೋದರೆ ವ್ಯಕ್ತಿ ತನ್ನನ್ನು ತಾನು ಪರಿವರ್ತನೆಗೆ ಒಳಪಡಿಸಿಕೊಳ್ಳಲು ಕಷ್ಟದಾಯಕವಾಗುತ್ತದೆ . ಆಲಸ್ಯದ ಕಾರಣ ಬುದ್ದಿಮಾಂದ್ಯ ಕೊರತೆಯಿಂದ ಪರಿವರ್ತನೆ ಕಾಣಲಾಗುವುದಿಲ್ಲ .

10 ) ಸ್ಥಿರತೆಯ ಬಯಕೆ : ಮಾನವನು ಸ್ಥಿರ ಸಮಾಜದಲ್ಲಿ ಸುರಕ್ಷಿತವಾಗಿ ಇರುತ್ತೇನೆಂದು ಭಾವಿಸುತ್ತಾನೆ . ಬದಲಾವಣೆ ವರ್ತಮಾನದ ಸಮಾಜದಲ್ಲಿ ಅಡೆತಡೆ ಸೃಷ್ಟಿಸಿ ಅಸುರಕ್ಷತೆಗೆ ಕಾರಣವಾಗಬಹುದು , ವ್ಯಕ್ತಿಯಲ್ಲಿ ಕಳೆದುಕೊಳ್ಳುವ ಭಯ , ಅಸ್ಥಿರತೆ ಮತ್ತು ಸ್ಥಿರತೆ ಬಯಕೆಯ ಪ್ರತಿರೋಧಕವನ್ನು ಹೆಚ್ಚು ಮಾಡುತ್ತದೆ .

5. ಸಾಮಾಜಿಕ ಪರಿವರ್ತನೆಯಿಂದ ಉಂಟಾಗುವ ಪರಿಣಾಮಗಳನ್ನು ವಿವರಿಸಿ .

ಸಾಮಾಜಿಕ ಪರಿವರ್ತನೆಯಿಂದ ಉಂಟಾಗುವ ಪರಿಣಾಮಗಳೆಂದರೆ ಸಾಮಾಜಿಕ ಪರಿವರ್ತನೆ ಎರಡು ರೀತಿಯ ಪರಿಣಾಮವನ್ನು ನೀಡುತ್ತದೆ .1 ) ಧನಾತ್ಮಕ ಬದಲಾವಣೆ . 2 ) ಋಣಾತ್ಮಕ ಬದಲಾವಣೆ ,

  • ಧನಾತ್ಮಕ ಬದಲಾವಣೆಗಳು , ಸಾಮಾಜಿಕ ಬೆಳವಣಿಗೆ , ಸಾಮಾಜಿಕ ಪ್ರಗತಿ , ಸಾಮಾಜಿಕ ಸುಧಾರಣೆ ದಾರಿ ಮಾಡಿಕೊಟ್ಟಿದೆ .
  • ಋಣಾತ್ಮಕ ಬದಲಾವಣೆಗಳಲ್ಲಿ , ನೈಸರ್ಗಿಕ ವಿಕೋಪ , ಪರಿಸರನಾಶ , ಪರಿಸರ ಅಸಮತೋಲನ , ಬರ , ಯುದ್ಧ , ರೋಗಗಳು ಇದಕ್ಕೆ ಸಾಕ್ಷಿ ಆಗಿವೆ . ಹೀಗೆ ಎರಡು ರಾಶಿಯಲ್ಲಿಯೂ ಸಾಮಾಜಿಕ ಬದಲಾವಣೆಗಳ ಪರಿಣಾಮ ಬೀರುವುದು .

ಸಮಾಜದ ಒಂದು ಭಾಗದಲ್ಲಾದ ಬದಲಾವಣೆ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ , ಪ್ರತ್ಯಕ್ಷ ಪರಿಣಾಮವನ್ನು ತಕ್ಷಣ ಗ್ರಹಿಸಬಹುದು . ಅಪ್ರತ್ಯಕ್ಷ ಪರಿಣಾಮವನ್ನು ಕ್ರಮೇಣ ಭವಿಷ್ಯತ್ತಿನಲ್ಲಿ ಗುರುತಿಸಲಾಗುವುದು . ಜನಸಂಖ್ಯಾ ಪರಿವರ್ತನೆ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಗೆ ದಾರಿ ಮಾಡಿಕೊಟ್ಟಿದೆ , ಲಿಂಗಾನುಪಾತ , ಶಿಶಿರಮರಣ , ಅನಾರೋಗ್ಯ ಮತ್ತು ಕುಟುಂಬ ವ್ಯವಸ್ಥೆ , ವಿವಾಹ ಪದ್ಧತಿಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ .

ತಂತ್ರಜ್ಞಾನದಿಂದ ಬದಲಾವಣೆ ಕಂಡುಬಂದಾಗ ಔದ್ಯೋಗಿಕರಣ , ನಗರೀಕರಣ ಹಾಗೂ ಆಧುನಿಕ ಅರಣ್ಯಗಳು ಸಮಾಜದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತದೆ . ಇಂತಹ ಹೊಸತನ ಕೊಳಚೆ ಪ್ರದೇಶ , ವಸತಿ ಹಾಗೂ ಗ್ರಾಮ – ನಗರ ವ್ಯವಸ್ಥೆಗಳಂತಹ ಸಮಸ್ಯೆಗಳು ಪರಿವರ್ತನೆಯ ಪರಿಣಾಮಗಳೆನಿಸಿವೆ ಇಂತಹ ಪರಿಣಾಮ ಭಾರತದಲ್ಲಿಯೂ ಕಂಡು ಬರುತ್ತಿದೆ . 1947 ರ ನಂತರ ಭಾರತದಲ್ಲಿ ಅನೇಕ ರಾಜಕೀಯ ಬದಲಾವಣೆಗಳು ಉಂಟಾದವು ಇವು ಸಾಮಾಜಿಕ ಬದಲಾವಣೆಗೆ ಕಾರಣವೆನಿಸಿವೆ . ಭಾರತ ದೇಶದಲ್ಲಿ ಆಗುತ್ತಿರುವ ಸಾಮಾಜಿಕ ಪರಿವರ್ತನೆಯಿಂದಾಗಿ ಇಂದು ದೇಶವು ಪ್ರಗತಿ ಹೊಂದಿದ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ , ಇಂದು ಭಾರತ ದೇಶವು ಜಗತ್ತಿನ ಇತರ ದೇಶಗಳ ಮೇಲೆ ಪ್ರಭಾವ ಬೀರುತ್ತಿವೆ .

6. ಪ್ರಗತಿ ಮತ್ತು ವಿಕಾಸದ ನಡುವಿನ ವ್ಯತ್ಯಾಸಗಳನ್ನು ತಿಳಿಸಿ .

ಪ್ರಗತಿ ಮತ್ತು ವಿಕಾಸದ ನಡುವಿನ ವ್ಯತ್ಯಾಸ ಹೀಗಿದೆ .

ಪ್ರಗತಿ

1. ಪ್ರಗತಿ ಎಂಬುದು ಅಪೇಕ್ಷಣೀಯ ಗುರಿಯ ಕಡೆಗೆ ಸಂಭವಿಸುವ ಪರಿವರ್ತನೆ .

2. ‘ ಪ್ರಗತಿ ವಿಷಯಾಧಾರಿತ ಮತ್ತು ಮೌಲ್ಯ ಆಧಾರಿತವಾದುದಾಗಿದೆ .

3 . ಪ್ರಗತಿಯು ಉತ್ತಮತೆಯನ್ನು ಹೀನಸ್ಥಾನದಿಂದ ಉಚ್ಚಸ್ಥಾನಕ್ಕೆ ಸಾಗುವ ಚಲನೆಯನ್ನು ಸೂಚಿಸುವುದು

4. ಪ್ರಗತಿಯು ನಿರ್ಧಿಷ್ಟ ಗುರಿಯ ಕಡೆಗಿನ ಪರಿವರ್ತನೆಯನ್ನು ಸೂಚಿಸುವುದು ಮಾನವ ಸಂತೃಪ್ತಿಯ ಅಂಶ ಇದರೊಂದಿಗೆ ಅವಶ್ಯವಾಗಿ ಸೇರಿಕೊಂಡಿರುವುದು .

ವಿಕಾಸ:

1. ವಿಕಾಸ ನಿಶ್ಚಿತ ಕಲ್ಪನೆಯಾಗಿದ್ದು ಪರಿವರ್ತನೆಯಲ್ಲಿ ನಿಶ್ಚಿತ ಲಕ್ಷಣಗಳನ್ನು ವಿವರಿಸುತ್ತದೆ .

2. ವಿಕಾಸ ನಿಧಾನವಾಗಿ ಹಂತ ಹಂತವಾಗಿ ನಡೆಯುವ ಪ್ರಕ್ರಿಯೆಯಾಗಿದೆ .

3. ವಿಕಾಸವು ಏಕಮುಖವಾಗಿದೆ . ಏಕತೆಯಿಂದ ವೈವಿಧ್ಯತೆಯ ಕಡೆಗೆ ಸಾಗುತ್ತದೆ .

4. ವಿಕಾಸವು ನಿರಂತರವಾಗಿ ನಡೆಯುವ ಪ್ರಕ್ರಿಯೆ , ಇದು ಆಂತರಿಕವಾಗಿದ್ದು ರಚನಾತ್ಮಕವಾಗಿರುತ್ತದೆ .

7. ಅಭಿವೃದ್ಧಿ ಯ ಬಗ್ಗೆ ಟಿಪ್ಪಣಿ ಬರೆಯಿರಿ .

‘ ಅಭಿವೃದ್ಧಿ ‘ ಎಂಬ ಪರಿಕಲ್ಪನೆಯನ್ನು ಸಮಾಜ ವಿಜ್ಞಾನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ . ಆಂಗ್ಲಭಾಷೆಯಲ್ಲಿ Development ಎಂಬ ಪದಕ್ಕೆ ಬೆಳವಣಿಗೆ , ವೃದ್ಧಿ , ವಿಕಸನ , ಎಂದು ಅರ್ಥೈಸಿದ್ದಾರೆ .

ಅಭಿವೃದ್ಧಿಯು ನಿಧಾನವಾಗಿ ಅವ್ಯಕ್ತವಾದ ಸ್ಥಿತಿಯಿಂದ ವ್ಯಕ್ತವಾದ ಸ್ಥಿತಿಗೆ ಹೊರಹೊಮ್ಮುವ ಪರಿಸ್ಥಿತಿಯನ್ನು ಸೂಚಿಸುತ್ತದೆ . ಅಭಿವೃದ್ಧಿಯನ್ನು ಮುನ್ನಡೆ , ಪರಪಕ್ಷತೆ , ಎಂಬರ್ಥದಲ್ಲೂ ಬಳಸುವುದಿದೆ . ಸಾಮಾಜಿಕ ಅಭಿವೃದ್ಧಿ ಆರ್ಥಿಕ ಬೆಳವಣಿಗೆ , ಆಧಾಯ ಮತ್ತು ಸಂಪತ್ತುಗಳ ಸಮಾನ ವಿತರಣೆ , ವ್ಯಕ್ತಿ ಸ್ವಾತಂತ್ರ್ಯದ ಹೆಚ್ಚಳ , ನೈತಿಕ ಬೆಳವಣಿಗೆ , ಎಂಬುದಾಗಿ ಅರ್ಥೈಸಲಾಗಿದೆ . ಆರ್ಥಿಕತೆ ಮತ್ತು ತಾಂತ್ರಿಕತೆಯು ಪರಿಣಾಮವಾಗಿ ಸಾಮಾಜಿಕ ಸಂರಚನೆ ಮತ್ತು ಸಂಘಟನೆಗಳಲ್ಲಿ ಆಗುವ ಬದಲಾವಣೆಯೇ ಸಾಮಾಜಿಕ ಅಭಿವೃದ್ಧಿಯಾಗಿದೆ .

ಆರ್ಥಿಕ ಉತ್ಪಾದನೆ , ಸಂಪತ್ತಿನ ಹೆಚ್ಚಳ , ಸಾಮಾಜಿಕ ಸಂರಚನೆ ಮತ್ತು ಸಂಘಟನೆಗಳಲ್ಲಿನ ಸಂಕೀರ್ಣತೆಗಳು ಸಾಮಾಜಿಕ ಅಭಿವೃದ್ಧಿಯ ಮುಖ್ಯ ಲಕ್ಷಣಗಳಾಗಿವೆ . ಅಭಿವೃದ್ಧಿಯು ಮಾನವನ ಸಮಾಜದಲ್ಲಿ ಕಂಡುಬರುವ ಜ್ಞಾನದ ಹೆಚ್ಚಳ ಮತ್ತು ಪರಿಸರದ ಮೇಲೆ ಮಾನವನ ಪ್ರಭುತ್ವದಲ್ಲಾದ ಹೆಚ್ಚಳವನ್ನು ಮತ್ತು ಪರಿಮಾಣಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ .

1 Puc Sociology Notes in Kannada 6 Chapter

IV . ಹತ್ತು ಅಂಕದ ಪ್ರಶ್ನೆಗಳು ( 30-40 ವಾಕ್ಯಗಳಲ್ಲಿ ಉತ್ತರಿಸಿ )

1. ಸಾಮಾಜಿಕ ಪರಿವರ್ತನೆಗೆ ವ್ಯಾಖ್ಯೆ ನೀಡಿ , ಅದರ ಲಕ್ಷಣಗಳನ್ನು ವಿವರಿಸಿ .

ಮೆಕ್ಕವರ್ ಮತ್ತು ಪೇಜ್ ರವರ ಪ್ರಕಾರ- “ ಸಾಮಾಜಿಕ ಸಂಬಂಧಗಳಲ್ಲಾಗುವ ಪರಿವರ್ತನೆ ” ಯನ್ನು ಸಾಮಾಜಿಕ ಪರಿವರ್ತನೆ ಎಂಬುದಾಗಿದೆ . ಸಾಮಾಜಿಕ ಪರಿವರ್ತನೆಯ ಪ್ರಮುಖ ಲಕ್ಷಣಗಳೆಂದರೆ

1 ) ಸಾಮಾಜಿಕ ಪರಿವರ್ತನೆಯು ಸಾರ್ವತ್ರಿಕವಾದುದು : ಸಾಮಾಜಿಕ ಪರವರ್ತನೆಯು ಜಗತ್ತಿನ ಎಲ್ಲಾ ಸಮಾಜಗಳಲ್ಲಿಯೂ ಸಂಭವಿಸುತ್ತಲೇ ಇರುತ್ತದೆ . ಗ್ರಾಮೀಣ ಸಮಾಜದಲ್ಲಿ ಸ್ವಲ್ಪ ನಿಧಾನವಾಗಿ ನಗರ ಸಮಾಜಗಳಲ್ಲಿ ವೇಗವಾಗಿ ಪರಿವರ್ತನೆ ಉಂಟಾಗುತ್ತದೆ .

2 ) ಸಾಮಾಜಿಕ ಪರಿವರ್ತನೆಯು ಸಂಕೀರ್ಣವಾದುದು : ದಿಕ್ಕು ಸಮಾಜವು ಸಂಕೀರ್ಣವಾದುದ್ದು , ಅದರಂತೆ ಸಾಮಾಜಿಕ ಪರಿವರ್ತನೆಯ ಪ್ರಮಾಣ ಮತ್ತು ವೇಗದಲ್ಲಿ ವಿವಿಧತೆ ಹೊಂದಿದ್ದರಿಂದ ಸಂಕೀರ್ಣವಾದುದಾಗಿದೆ .

3 ) ಸಾಮಾಜಿಕ ಪರಿವರ್ತನೆ ಸಾಮುದಾಯಿಕ ಪರಿವರ್ತನೆ : ಸಾಮಾಜಿಕ ಪರಿವರ್ತನೆಯು ವೈಯಕ್ತಿಕವಾದುದಲ್ಲ ಅದು ಸಾಮಾಜಿಕವಾದುದು . ಭಾರತ ಸ್ವಾತಂತ್ರ್ಯ ಪಡೆದ ಮೇಲೆ ಭಾರತೀಯ ಸಮುದಾಯಗಳು ಪರಿವರ್ತನೆಗೊಂಡವು . ಈಗ ಭಾರತವನ್ನು ಆಧುನಿಕ ಭಾರತ ಎನ್ನುವುದಾದರೆ ಅದಕ್ಕೆ ಸಾಮಾಜಿಕ ಪರಿವರ್ತನೆಯೇ ಕಾರಣವಾಗಿದೆ .

4 ) ಸಾಮಾಜಿಕ ಪರಿವರ್ತನೆಯು ನಿರಂತರವಾದುದು ಹಾಗೂ ಸಾಮೂಹಿಕವಾದುದು . ಸಾಮಾಜಿಕ ಪರಿವರ್ತನೆಯು ನಿರಂತರವಾಗಿ ಪರಿವರ್ತನೆ ಆಗುತ್ತಲೇ ಇರುತ್ತದೆ . ಇದಕ್ಕೆ ಕೊನೆ ಎಂಬುದೇ ಇಲ್ಲ . ಪರಿವರ್ತನೆಗೆ ಸಾಕಷ್ಟು ಸಮಯ ಹಿಡಿಯುವುದು ಇದನ್ನು ಸಾಮಾಜಿಕ ಎನ್ನುವರು .

5 ) ಸಾಮಾಜಿಕ ಪರಿವರ್ತನೆಯ ವೇಗ ಮತ್ತು ಪರಿಣಾಮ : ನಿರ್ಧಿಷ್ಟ ಅವಧಿಯಲ್ಲಿ ಆಗುವ ಸಾಮಾಜಿಕ ಪರಿವರ್ತನೆಯ ವೇಗ ಮತ್ತು ಪರಿಣಾಮ ಮತ್ತೊಂದು ಅವಧಿಯಲ್ಲಿ ಭಿನ್ನವಾಗಿ ಕಂಡುಬರುತ್ತದೆ . ಯಾವುದಾದರೂ ಒಂದು ಅಂಶ ಪರಿವರ್ತನೆಗೆ ವೇಗವಾಗುವಂತೆ ಮಾಡಿದರೆ ಇನ್ನೊಂದು ಅಂಶ ನಿಧಾನವಾಗಿ ಸಾಗುವಂತೆ ಮಾಡುತ್ತದೆ . ಈ ಮಟ್ಟದಲ್ಲಿ ಸಾಮಾಜಿಕ ಪರಿವರ್ತನೆ ವೇಗ ಮತ್ತು ಪರಿಣಾಮವನ್ನು ಕಾಣಬಹುದು .

6 ) ಸಾಮಾಜಿಕ ಪರಿವರ್ತನೆ ಅಥವಾರ್ಯವಾದುದಾಗಿದೆ : ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳು ಅಗಾಧವಾದಾಗ ಪರಿವರ್ತನೆಯೊಂದಿಗೆ ವೇಗವನ್ನು ಹೆಚ್ಚಿಸುತ್ತದೆ . ಒಮ್ಮೆ ಆರಂಭವಾದ ಪ್ರಕ್ರಿಯೆ ನಿಲ್ಲಿಸಲಾಗುವುದಿಲ್ಲ . ಆದ್ದರಿಂದ ಸಾಮಾಜಿಕ ಪರಿವರ್ತನೆ ಅನಿವಾರ್ಯವಾಗಿರುತ್ತದೆ .

7 ) ಸಾಮಾಜಿಕ ಪ್ರಕ್ರಿಯೆ ಹೊಂದಾಣಿಕೆಯ ಪ್ರಕ್ರಿಯೆಯಾಗಿದೆ : ಸಾಮಾಜಿಕ ಪರಿವರ್ತನೆಯಿಂದ ಹಳೆಯದು ತಕ್ಷಣ ನಾಶವಾಗಿ ಹೊಸದು ಬಂದು ಆ ಸ್ಥಳವನ್ನು ಆಕ್ರಮಿಸಲಾರದು . ಹೊಸತು ಬಂದಾಗ ಹಳೆಯ ಸಂಗತಿಯಿಂದಲೇ ಈ ಪ್ರಕ್ರಿಯೆ ಮುಂದುವರೆಯುತ್ತದೆ . ಸಾಮಾಜಿಕ ಪರಿವರ್ತನೆ ಹಳೆಬೇರು – ಹೊಸ ಚಿಗುರಿನಿಂದ ಕೂಡಿರುತ್ತದೆ .

8 ) ಸಾಮಾಜಿಕ ಪರಿವರ್ತನೆ ಪ್ರತಿಕ್ರಿಯೆಗಳ ಸರಮಾಲೆ : ಒಂದು ಪರಿವರ್ತನೆ ಸಮಾಜ ಹಲವಾರು ಕ್ಷೇತ್ರಗಳಲ್ಲಿನ ಪರಿವರ್ತನೆಗೆ ಕಾರಣವಾಗಬಹುದು . ಉಹಾ ಕೈಗಾರಿಕಾ ಜೀವನ ವಿಧಾನ ಗೃಹ ಉತ್ಪಾದನಾ ವ್ಯವಸ್ಥೆಯನ್ನು ನಾಶಮಾಡಿ ಸ್ತ್ರೀಯರನ್ನು ಮನೆಯಿಂದ ಕಾರ್ಖಾನೆಯವರೆಗೆ ತಲುಪಿಸಿತು .

9 ) ಸಾಮಾಜಿಕ ಪರಿವರ್ತನೆ ಮೌಲ್ಯ ನಿರ್ಧಾರಿತವಾದುದಲ್ಲ ಸಾಮಾಜಿಕ ಪರಿವರ್ತನೆ ಎಂಬುದೊಂದು ಪ್ರಕ್ರಿಯೆ , ಇವು ಕೆಲವೊಮ್ಮೆ ಧನಾತ್ಮಕ ಹಾಗೂ ಋಣಾತ್ಮಕವಾಗಿರುತ್ತದೆ . ಇದು ನಿಖರವಾದ ಪರಿಶುದ್ಧವಾದ ಪ್ರಕ್ರಿಯೆಯಾಗಿದ್ದು ಆ ವಸ್ತು ನಿಷ್ಟೆ ಅಧ್ಯಯನವಾಗಿದೆ .

10 ) ಸಾಮಾಜಿಕ ಪರಿವರ್ತನೆ ನಿಯೋಜಿತ ಮತ್ತು ಅಭಿಯೋಜಿತವಾಗಿದೆ : ಸಾಮಾಜಿಕ ಪರಿವರ್ತನೆಗೆ ನಿಸರ್ಗದ ಜೊತೆಗೆ ಮಾನವನು ಕಾರಣನಾಗಿದ್ದಾನೆ . ಮನುಷ್ಯನ ಆಯ್ಕೆಯಂತೆ ನಿಯೋಜಿತಗೊಂಡಿದ್ದರೆ , ಅದು ನಿಯೋಜಿತ ಸಾಮಾಜಿಕ ಪರಿವರ್ತನೆ . ಉದಾ : – ಸ್ವಾತಂತ್ರ್ಯ ಆಂದೋಲನ ಆರಂಭಿಸಿ ಸ್ವಾತಂತ್ರ್ಯ ಪಡೆದದ್ದು ನಿಯೋಜಿತವಾಗಿದೆ . ಮಾನವನ ವತಿಯಿಂದ ನಿಯೋಜಿತವಾಗಿಲ್ಲದೆ ಏರ್ಪಡುವ ಪ್ರಕ್ರಿಯೆಗಳು ಸಾಮಾಜಿಕ ಪರಿವರ್ತನೆಯಲ್ಲಿ ಕಂಡುಬರುತ್ತದೆ . ಉದಾ : – ಭೂ ಕಂಪ , ಸುನಾಮಿ , ಅತವೃಷ್ಟಿ , ಅನಾವೃಷ್ಟಿ , ಜ್ವಾಲಾಮುಖಿ ಮುಂತಾದವು .

2. ಸಾಮಾಜಿಕ ಪರಿವರ್ತನೆ ತರುವಲ್ಲಿ ತಂತ್ರಜ್ಞಾನದ ಪಾತ್ರವನ್ನು ವಿವರಿಸಿ .

ಸಾಮಾಜಿಕ ಪರಿವರ್ತನೆಯ ತರುವಲ್ಲಿ ತಂತ್ರಜ್ಞಾನದ ಪಾತ್ರ ಬಹಳವಾಗಿದೆ . ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬಳಕೆ ತೀರಾ ಸಾಮಾನ್ಯವಾಗಿದೆ . ಈ ದಿಸೆಯಲ್ಲಿ ತಂತ್ರಜ್ಞಾನದ ಸಾಧನೆ ಸುಲಭ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ .

1 ) ಸಾರಿಗೆ ಸಂಪರ್ಕಗಳು : ಔದ್ಯೋಗಿಕರಣದಿಂದಾಗಿ 18 ನೇ ಶತಮಾನದ ನಂತರ ನಾವು ಸಾರಿಗೆ ಸಂಪರ್ಕದಲ್ಲಿ ಪರಿವರ್ತನೆ ಕಾಣುತ್ತಿದ್ದೇವೆ . ಈ ಪ್ರಗತಿ ತಂತ್ರಜ್ಞಾನದಿಂದ ಸಾಧ್ಯವಾಗಿದೆ . ಇದರ ವ್ಯಾಪಾರ ವಾಣಿಜ್ಯ ತ್ವರಿತವಾಗಿ ಬೆಳೆದಿದೆ . ಇಂದು ಜಗತ್ತೆ ಗ್ರಾಮವಾಗಿ ಇಡೀ ವಿಶ್ವವೇ ‘ ವಿಶ್ವಗ್ರಾಮ’ವಾಗಿದೆ .

2 ) ಹೊಸ ವರ್ಗಗಳ ಉದಯ : ನಗರೀಕರಣ ಕೈಗಾರೀಕರಣದ ಫಲ . ‘ ಕೃಷಿ ಪ್ರಧಾನ ‘ ಅರ್ಥ ವ್ಯವಸ್ಥೆಯ ಉದ್ಯಮ ಪ್ರಧಾನ ‘ ಇದರಿಂದ ಹೊಸ ಉದ್ಯೋಗ ಅವಕಾಶಗಳ ಸಾಧ್ಯತೆ ಹೆಚ್ಚಿದೆ . ಬಂಡವಾಳ ವರ್ಗ ಹಾಗೂ ಶ್ರಮಿಕರ ವರ್ಗಗಳ ಜೊತೆಗೆ ಮಾಧ್ಯಮ ವರ್ಗವು ಪ್ರಾರಂಭವಾಯಿತು .

3 ) ತಂತ್ರಜ್ಞಾನ ಮತ್ತು ಕೃಷಿ : ಇಂದು ಕೃಷಿ ಕಾರ್ಯದಲ್ಲಿ ಉಳುಮೆಯಿಂದ ಹಿಡಿದು ಬೆಳೆ ಕಟ್ಟಾವು ಮಾಡಿ , ಧಾನ್ಯಗಳು ಮನೆ ಸೇರುವವರೆಗೂ ತಂತ್ರಜ್ಞಾನ ಬಳಕೆಯಾಗುತ್ತಿದೆ . ಇದರಿಂದ ಇಳುವರಿ ಗಣನೀಯ ಹೆಚ್ಚಾಗಿದೆ . ಇದರಿಂದ ಗ್ರಾಮೀಣ ಜನರ ಜೀವನವು ಬಹಳಷ್ಟು ಸುಧಾರಣೆಯಾಗಿದೆ .

FAQ

1. ಸಾಮಾಜಿಕ ಪರಿವರ್ತನೆ ಎಂದರೇನು ?

ಸಮಾಜದ ರಚನೆ ಮತ್ತು ಸಾಮಾಜಿಕ ಸಂಘಟನೆಯಲ್ಲಿ ಆಗುವ ಬದಲಾವಣೆಗೆ ಸಾಮಾಜಿಕ ಪರಿವರ್ತನೆ ಎನ್ನುವರು.

2 . ವಲಸೆ ಎಂದರೇನು ?

ಜನರು ಹಲವಾರು ಕಾರಣಗಳಿಂದ ( ಆಹಾರ , ವಸತಿ , ಇತ್ಯಾದಿ ) ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದಕ್ಕೆ ‘ ವಲಸೆ ‘ ಎನ್ನುವರು .

3. ವಿಕಾಸ ಎಂದರೇನು ?

ಏಕತೆಯಿಂದ ವೈವಿಧ್ಯತೆಯ ಕಡೆಗೆ ಸಮಾಜದ ವರ್ಗಾವಣೆಗೆ “ ವಿಕಾಸ ” ಎನ್ನುತ್ತಾರೆ .

ಇತರೆ ವಿಷಯಗಳು :

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

All Subjects Notes

All Notes App

Leave a Reply

Your email address will not be published. Required fields are marked *

rtgh