‌ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-8 ಭಾರತದಲ್ಲಿ ಸಾಮಾಜಿಕ ಪರಿವರ್ತನೆ ನೋಟ್ಸ್‌ | 2nd Puc Sociology Chapter 8 Notes

‌ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-8 ಭಾರತದಲ್ಲಿ ಸಾಮಾಜಿಕ ಪರಿವರ್ತನೆ ನೋಟ್ಸ್‌, 2nd Puc Sociology Chapter 8 Notes Question Answer in Kannada Pdf Kseeb Solution For Class 12 Sociology Chapter 8 Notes 2nd Puc Social Change in India Sociology Notes in Kannada Bharatadalli Samajik Parivartan Sociology Notes

ಅಧ್ಯಾಯ-8 ಭಾರತದಲ್ಲಿ ಸಾಮಾಜಿಕ ಪರಿವರ್ತನೆ

2nd Puc Sociology Chapter 8 Notes
2nd Puc Sociology Chapter 8 Notes

2nd Puc Sociology Chapter 8 Question Answer in Kannada

ಒಂದು ಅಂಕದ ಪ್ರಶ್ನೆಗಳು :

1. “ ಸಂಸ್ಕೃತಾನುಕರಣ ” ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

“ ಸಂಸ್ಕೃತಾನುಕರಣ ” ಎಂ.ಎನ್.ಶ್ರೀನಿವಾಸ್‌ರವರು ಎಂಬ ಪರಿಕಲ್ಪನೆಯನ್ನು ತಮ್ಮ ಅಧ್ಯಯನ “ ದಕ್ಷಿಣ ಭಾರತದ ಕೊಡವರಲ್ಲಿ ಧರ್ಮ ಮತ್ತು ಸಮಾಜ ” ದಲ್ಲಿ ಮೊದಲ ಬಾರಿಗೆ ಪರಿಚಯಿಸಿದರು .

2. “ ರಿಲಿಜನ್ ಅಂಡ್ ಸೊಸೈಟಿ ಅಮಾಂಗ್ ದ ಕೂರ್ಗ್ ಆಫ್ ಸೌತ್ ಇಂಡಿಯಾ ” ಗ್ರಂಥದ ಕರ್ತೃ ಯಾರು ?

“ ರಿಲಿಜನ್ ಆಂಡ್ ಸೊಸೈಟಿ ಅಮಾಂಗ್ ದ ಕೂರ್ಗ್ ಆಫ್ ಸೌತ್ ಇಂಡಿಯಾ ” ಎಂಬ ಗ್ರಂಥದ ಕರ್ತೃ ಎಂ.ಎನ್.ಶ್ರೀನಿವಾಸ್ .

3. ಸಂಸ್ಕೃತಾನುಕರಣ ಎಂದರೇನು ?

ಜಾತಿಯ ಏಣಿ ಶ್ರೇಣಿಯಲ್ಲಿ ತನ್ನ ಅಂತಸ್ತನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೆಳಜಾತಿಯ ಜನರು ಸಸ್ಯಾಹಾರಿಗಳಾಗಿ ಮದ್ಯಪಾನವನ್ನು ತ್ಯಜಿಸಿ ಒಂದೆರಡು ತಲೆಮಾರುಗಳಲ್ಲಿ ತನ್ನ ಜಾತಿಯ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ಮೇಲ್ ಜಾತಿಯನ್ನು ಅನುಕರಣೆ ಮಾಡುವ ಸ್ಥಿತಿ ಎಂದು ಹೇಳಬಹುದು .

4. ದ್ವಿಜ ಎಂದರೆ ಯಾರು ?

ದ್ವಿಜ ಎಂದರೆ ಎರಡು ಸಲ ಹುಟ್ಟಿದವರು ಎಂಬರ್ಥ . ದ್ವಿ – ಎರಡು , ಜ – ಹುಟ್ಟು ಎಂಬುದಾಗಿ ವಿವರಿಸುತ್ತಾರೆ . ದ್ವಿಜ ಎಂದರೆ ಬ್ರಾಹ್ಮಣರು . ಅವರಲ್ಲಿ ‘ ಉಪನಯನ ಸಂಸ್ಕಾರ ದಿಂದ ಜನಿವಾರ ಧರಿಸಿ , ಮರುಹುಟ್ಟು ಪಡೆಯುತ್ತಾರೆ .

5. “ ಸೋಶೀಯಲ್ ಚೇಂಜ್ ಇನ್ ಮಾಡರ್ನ್ ಇಂಡಿಯಾ ” ಗ್ರಂಥದ ಕರ್ತೃ ಯಾರು ?

“ ಸೋಶೀಯಲ್ ಚೇಂಜ್ ಇನ್ ಮಾಡರ್ನ್ ಇಂಡಿಯಾ ” ಗ್ರಂಥದ ಕರ್ತೃ ಎಂ.ಎನ್.ಶ್ರೀನಿವಾಸ್ .

6. ಪಾಶ್ಚಿಮಾತೀಕರಣ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

ಭಾರತದ ಸಮಾಜ ಶಾಸ್ತ್ರದಲ್ಲಿ ಪಾಶ್ಚಿಮಾತೀಕರಣ ಎಂಬ ಪರಿಕಲ್ಪನೆಯನ್ನು ಎಂ.ಎನ್.ಶ್ರೀನಿವಾಸ್‌ರವರು ಪರಿಚಯಿಸಿದರು .

7. ಪಾಶ್ಚಿಮಾತ್ಯೀಕರಣ ಎಂದರೇನು ?

ಪಾಶ್ಚಿಮಾತ್ಯೀಕರಣ ಎಂಬುದು ಸಾಮಾಜಿಕ ಪರಿವರ್ತನೆಯ ಮತ್ತೊಂದು ಪ್ರಮುಖವಾದ ಸಾಂಸ್ಕೃತಿಕ ಪ್ರಕ್ರಿಯೆಯಾಗಿದೆ . ಭಾರತದ ಸಮಾಜದಲ್ಲಿ ಮತ್ತು ಸಂಸ್ಕೃತಿಯಲ್ಲಿ ಬ್ರಿಟಿಷರ ಆಳ್ವಿಕೆಯ ಪ್ರಭಾವದಿಂದ ಉಂಟಾದ ಪರಿಯಿದು .

8 . ಆಧುನೀಕರಣ ಎಂಬ ಪರಿಕಲ್ಪನೆಯನ್ನು ಪರಿಚಯಿಸಿ ದವರು ಯಾರು ?

‘ ಆಧುನೀಕರಣ ‘ ಎಂಬ ಪರಿಕಲ್ಪನೆಯನ್ನು ಡೇನಿಯಲ್ ಲರ್ನರ್ ಮೊದಲ ಬಾರಿಗೆ ಪರಿಚಯಿಸಿದರು .

9. ಆಧುನೀಕರಣ ಒಂದು ಗುಣಲಕ್ಷಣಗಳನ್ನು ಹೆಸರಿಸಿ .

ಆಧುನೀಕರಣವೆಂಬ ಪರಿಕಲ್ಪನೆ ಧನಾತ್ಮಕ ಮತ್ತು ಅಭಿಲಾಷೆಯುಕ್ತವಾದ ಮೌಲ್ಯಗಳೊಂದಿಗೆ ನಿಕಟ ಸಂಪರ್ಕ ವನ್ನು ಹೊಂದಿದೆ . ಇದು ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಯಾಗಿದ್ದು , ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳ ಸಾಮಾನ್ಯ ಗುಣಲಕ್ಷಣಗಳನ್ನು ಸ್ವೀಕರಿಸುವ ಪ್ರಕ್ರಿಯೆಯಾಗಿದೆ .

10. “ ಜಾಗತೀಕರಣ ” ಎಂಬ ಪರಿಕಲ್ಪನೆಯನ್ನು ಪರಿಚಯಿಸಿ ದವರು ಯಾರು ?

“ ಜಾಗತೀಕರಣ ” ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಹಾರ್ವಡ್ ವಾಣಿಜ್ಯ ಶಾಲೆಯ ನಿವೃತ್ತ ಪ್ರಾಧ್ಯಾಪಕರಾದ ತಿಯೆಡೋರ್ ಲಿವಿಟ್ Theodore Levitt ಪರಿಚಯಿಸಿದರು .

2nd Puc Sociology Chapter 8 Notes

ಎರಡು ಅಂಕದ ಪ್ರಶ್ನೆಗಳು :

11. ಸಂಸ್ಕೃತಾನುಕರಣವನ್ನು ವ್ಯಾಖ್ಯಾನಿಸಿ .

‘ ಸಂಸ್ಕೃತಾನುಕರಣ ‘ ಎಂದರೆ ಕೆಳ ಹಿಂದೂ ಜಾತಿ ಅಥವಾ ಬುಡಕಟ್ಟು ಅಥವಾ ಇತರೆ ಸಮೂಹ ತನ್ನ ಪದ್ಧತಿ , ಸಂಸ್ಕಾರ , ಭಾವನೆ ಮತ್ತು ಜೀವನ ವಿಧಾನವನ್ನು ಉನ್ನತ ಜಾತಿ ಅಥವಾ ದ್ವಿಜರ ರೀತಿ – ನೀತಿಗಳಿಗೆ ಅನುಸಾರವಾಗಿ ಮಾರ್ಪಾಡಾಗುವ ಪ್ರಕ್ರಿಯೆ . ಸಂಸ್ಕೃತಾನುಕರಣವು ಸಾಂಸ್ಕೃತಿಕ ಚಲನೆಯನ್ನು ತಿಳಿಸುತ್ತದೆ .

ಇವು ಕೇವಲ ಹೊಸ ಮೌಲ್ಯಗಳು ಮತ್ತು ಹವ್ಯಾಸಗಳ ಅನುಕರಣೆ ಮಾತ್ರವಲ್ಲದೆ ಧಾರ್ಮಿಕ ಮತ್ತು ಲೌಕಿಕ ಸಾಹಿತ್ಯದಲ್ಲಿ ಕಂಡುಬರುವ ಮೌಲ್ಯಗಳನ್ನು ವ್ಯಕ್ತಪಡಿಸುವುದು . ಇದು ಒಂದು ಗುಂಪು ಅಥವಾ ಸಮೂಹದವರು ಉನ್ನತ ಸ್ಥಾನ ಪಡೆಯಲು ಮಾಡುವ ನಿರೀಕ್ಷಣ ಸಮಾಜೀಕರಣವಾಗಿದೆ .

12. ಪಾಶ್ಚಿಮಾತ್ಯೀಕರಣವನ್ನು ವ್ಯಾಖ್ಯಾನಿಸಿ .

ಪಾಶ್ಚಾತೀಕರಣ ಅಥವಾ ಪಾಶ್ಚಿಮಾತೀಕರಣವು ( Westernisation ) ಸಾಮಾಜಿಕ ಪರಿವರ್ತನೆಯ ಪ್ರಮುಖವಾದ ಸಾಂಸ್ಕೃತಿಕ ಪ್ರಕ್ರಿಯೆಯಾಗಿದೆ . ಪಾಶ್ಚಾತೀಕರಣವು ಸುಮಾರು 150 ವರ್ಷಗಳ ಬ್ರಿಟಿಷ್ ಆಳ್ವಿಕೆಯ ಪ್ರಭಾವದಿಂದ ಭಾರತದ ಸಾಮಾಜಿಕ ಸಂರಚನೆಯಲ್ಲಿ ಉಂಟಾದ ಬದಲಾವಣೆಗಳನ್ನು ಸೂಚಿಸುತ್ತದೆ . ಈ ಬದಲಾವಣೆಗಳು ತಂತ್ರಜ್ಞಾನ , ಸಾಮಾಜಿಕ ಸಂಸ್ಥೆಗಳು ಮತ್ತು ಸಾಮಾಜಿಕ ಮೌಲ್ಯಗಳಲ್ಲಿ ಕಂಡುಬಂದಿವೆ .

13. ಆಧುನೀಕರಣವನ್ನು ವ್ಯಾಖ್ಯಾನಿಸಿ .

ಆಧುನೀಕರಣವು ಧನಾತ್ಮಕ ಮತ್ತು ಅಭಿಲಾಷಾ ಯುಕ್ತವಾದ ಮೌಲ್ಯಗಳ ಜೊತೆಗೆ ಸಂಪರ್ಕವನ್ನು ಹೊಂದಿದೆ . W.W.Rustow ಮತ್ತು L.F.Ward ರವರ ಪ್ರಕಾರ ಆಧುನೀ ಕರಣ ಎಂದರೆ ಮಾನವನ ಚಟುವಟಿಕೆಗಳಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲ ಪ್ರಕ್ರಿಯೆ , ಜೇಮ್ಸ್.ಓ.ಕೊನಾಲ್ ರವರ ಪ್ರಕಾರ ಆಧುನೀಕರಣ ವೆಂದರೆ ಹೊಸ ದೃಷ್ಟಿಕೋನ ವಿಧಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ .

14. ಜಾಗತೀಕರಣವನ್ನು ವ್ಯಾಖ್ಯಾನಿಸಿ .

ಜಾಗತೀಕರಣವೆಂದರೆ ಜಗತ್ತಿನ ಎಲ್ಲಾ ಸಮಾಜಗಳಲ್ಲಿ ಪರಸ್ಪರ ಅವಲಂಬನೆಯನ್ನು ಸೂಚಿಸುತ್ತದೆ . ಪ್ರತಿಯೊಂದು ಸಮಾಜಗಳು ಒಂದು ಕೇಂದ್ರೀಕೃತ ಆರ್ಥಿಕ ವಾಣಿಜ್ಯ ಪ್ರಪಂಚದೊಂದಿಗೆ ನಿರಂತರ ಸಂಪರ್ಕ ಮತ್ತು ಅಂತರ್ ಅವಲಂಬನೆಯನ್ನು ಸೂಚಿಸುತ್ತದೆ . ಜಗತ್ತಿನಾದ್ಯಂತ ಏಕ ರೀತಿಯ ಸಂಸ್ಕೃತಿ ಮತ್ತು ಆರ್ಥಿಕ ಹಿತಾಸಕ್ತಿ ಹರಡುವಿಕೆಯ ಸಂಕೇತವಾಗಿದೆ . ಜಾಗತೀಕರಣವು ಎಲ್ಲಾ ದೇಶಗಳ ರಾಜಕೀಯ , ಸಾಮಾಜಿಕ , ಆರ್ಥಿಕ , ಸಾಂಸ್ಕೃತಿಕ ಮತ್ತು ಇನ್ನಿತರ ಅಂಶಗಳನ್ನು ಒಂದುಗೂಡಿಸುವ ಪ್ರಕ್ರಿಯೆಯಾಗಿದೆ .

15. ಪಾಶ್ಚಿಮಾತ್ಯೀಕರಣದ ಯಾವುದಾದರೂ ಎರಡು ಕ್ಷೇತ್ರಗಳನ್ನು ಹೆಸರಿಸಿ .

ಪಾಶ್ಚಿಮಾತ್ಯೀಕರಣವು ಭಾರತ ಸಮಾಜದ ಎಲ್ಲಾ ಸಾಮಾಜಿಕ – ಸಾಂಸ್ಕೃತಿಕ ಜೀವನ ಶೈಲಿಯಲ್ಲಿ ಸಾಕಷ್ಟು ಪರಿವರ್ತನೆಗಳನ್ನು ತಂದಿತ್ತು .

ಅವುಗಳಲ್ಲಿ ಪ್ರಮುಖವಾದ ಮೂರು ಕ್ಷೇತ್ರಗಳು :

I ) ತಂತ್ರಜ್ಞಾನ ಕ್ಷೇತ್ರ 2 ) ಸಾಮಾಜಿಕ ಸಂಸ್ಥೆಗಳು 3 ) ತತ್ವಾದರ್ಶನಗಳು ಮತ್ತು ಮೌಲ್ಯಗಳು

16. ಆಧುನೀಕರಣದ ಯಾವುದಾದರೂ ಎರಡು ಗುಣಲಕ್ಷಣ ಗಳನ್ನು ಹೆಸರಿಸಿ .

ಆಧುನೀಕರಣದ ಗುಣಲಕ್ಷಣಗಳು ಹೀಗಿವೆ :

1 ) ಸಂಶೋಧನೆಯ ದೃಷ್ಟಿಕೋನವನ್ನು ಹೊಂದಿದೆ .

2 ) ಹೊಸ ಹೊಸ ಅವಿಷ್ಕಾರಗಳ ಬಳಕೆ

3 ) ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು

4 ) ಜಾತ್ಯಾತೀತತೆ

5 ) ವೈಚಾರಿಕ ಪ್ರಜ್ಞೆ

6 ) ಮಾನವ ಸಂಪನ್ಮೂಲಗಳ ಮೇಲೆ ಬಂಡವಾಳ ಹೂಡಿಕೆ .

ಐದು ಅಂಕಗಳ ಪ್ರಶ್ನೆಗಳು :

17. ಸಂಸ್ಕೃತಾನುಕರಣೆ ಐದು ಪ್ರಮುಖವಾದ ಅಂಶಗಳನ್ನು ಪಟ್ಟಿ ಮಾಡಿ .

ಸಂಸ್ಕೃತಾನುಕರಣದಲ್ಲಿ ಕೆಳ ಜಾತಿಯವರು ಉನ್ನತ ಜಾತಿಗಳ ಅಥವಾ ದ್ವಿಜರ ಸಂಪ್ರದಾಯ ಮತ್ತು ಜೀವನ ವಿಧಾನಗಳನ್ನು ಅನುಕರಿಸುವ ಪ್ರಕ್ರಿಯೆ , ಸಂಸ್ಕೃತಾನುಕರಣದ ಪ್ರಮುಖವಾದ ಅಂಶಗಳು ಈ ರೀತಿ ಇವೆ .

1 ) ಕ್ರಿಯಾವಿಧಿಗಳು ( Ritnals ) : ತಾತ್ವಿಕವಾಗಿ ಅಸ್ತಿತ್ವವಿದ್ದ ಹಲವಾರು ನಿಬಂಧನೆಗಳಿದ್ದರೂ ಕೆಳಜಾತಿ ಯವರು ಅಥವಾ ಇನ್ನಿತರ ಸಮೂಹಗಳು ದ್ವಿಜ ಜಾತಿ ಸಮೂಹಗಳ ಸಂಪ್ರದಾಯ ಮತ್ತು ಕ್ರಿಯಾವಿಧಿಗಳನ್ನು ಅನುಸರಿಸುವುದರಲ್ಲಿ ಯಶಸ್ವಿಯಾದರು . ಉದಾ : ಧಾರ್ಮಿಕ ಪೂಜಾಕ್ರಮಗಳು , ಮಂತ್ರಗಳ ಘೋಷಣೆ , ತೀರ್ಥಯಾತ್ರೆ ಮುಂತಾದವುಗಳು . ಒಟ್ಟಾರೆ ಜಾತಿಯ ಏಣಿಶ್ರೇಣಿಯಲ್ಲಿ ಉನ್ನತ ಸ್ಥಾನಮಾನ ಪಡೆದುಕೊಳ್ಳುವ ಒಂದು ಮಾರ್ಗವಾಗಿದೆ .

2 ) ವಿವಾಹ ( Marriage ) : ಬ್ರಾಹ್ಮಣರ ಪ್ರಕಾರ ಹೆಣ್ಣು ಮಕ್ಕಳು ಪ್ರಾಯಕ್ಕೆ ಬರುವ ಹೊತ್ತಿಗೆ ವಿವಾಹ ಕಾರ್ಯ ಮಾಡಬೇಕಿತ್ತು . ಮತ್ತು ವಿವಾಹವೆಂಬುದು ಶಾಶ್ವತ ಸಂಬಂಧವಾಗಿತ್ತು . ಆದರೆ ಕೆಳಜಾತಿಯವರಲ್ಲಿ ವಯಸ್ಕ ವಿವಾಹ ಆಚರಣೆಯಲ್ಲಿತ್ತು . ಕೆಳಜಾತಿಯವರೂ ಸಹ ಬ್ರಾಹ್ಮಣರಂತೆ ಹೆಣ್ಣುಮಕ್ಕಳಿಗೆ ವಯಸ್ಕರಾಗುವ ಮೊದಲೇ ಮಾಡುವುದಲ್ಲದೆ ವಿವಾಹವನ್ನು ಶಾಶ್ವತ ವೈವಾಹಿಕ ಸಂಬಂಧವೆಂದು ಪರಿಗಣಿಸಿದ್ದಾರೆ . ಅವರಲ್ಲಿರುವ ವಿವಾಹ , ವಿಚ್ಛೇದನೆಗೂ ಅವಕಾಶ ಕೊಡುತ್ತಿಲ್ಲ .

3 ) ವಿಧವೆಯರನ್ನು ನೋಡಿಕೊಳ್ಳುವ ವಿಧಾನ ( Treatment of Widows ) : ಬ್ರಾಹ್ಮಣರಲ್ಲಿ ವಿಧವೆ ಯರಿಗೆ ಪುನರ್ ವಿವಾಹಕ್ಕೆ ಅವಕಾಶವಿರಲಿಲ್ಲ . ಹಾಗೂ ಶೋಚನೀಯವಾದ ಸ್ಥಿತಿಯಲ್ಲಿ ಬದುಕಬೇಕಿತ್ತು . ಕೇಶ ಮುಂಡನ ಮಾಡಿಸಿಕೊಂಡು , ಆಭರಣ ಧರಿಸುವಂತಿರಲಿಲ್ಲ . ಯಾವುದೇ ಶುಭ ಕಾರ್ಯಗಳಲ್ಲಿ ಭಾಗವಹಿಸುವಂತಿರಲಿಲ್ಲ . ಸಂಸ್ಕೃತಾನುಕರಣದಿಂದ ಕೆಳಜಾತಿಗಳಲ್ಲಿ ವಿಧವಾ ಪುನರ್ ವಿವಾಹದ ಮೇಲೆ ನಿಷೇಧ ಹೇರಲಾಯಿತು . ಮತ್ತು ಉನ್ನತ ಜಾತಿಯರ ವಿಧವೆಯರನ್ನು ನೋಡಿಕೊಳ್ಳುವ ರೀತಿಯನ್ನೇ ಕ್ರಮಬದ್ಧವಾಗಿ ರೂಢಿಸಿಕೊಂಡರು .

4 ) ನಾಮಕರಣ ಸಂಸ್ಕೃತಿ Nomenclature ( Naming Ceremony ) : ಕೆಳಜಾತಿಯವರು ತಮ್ಮ ಮಕ್ಕಳಿಗೆ ಇಡುತ್ತಿದ್ದ ಕೆಂಪಮ್ಮ , ಕರಿಯ , ಕಾಳ , ಹೊನ್ನಿ , ತಿಮ್ಮ ಈ ಹೆಸರುಗಳ ಬದಲಾಗಿ ಉನ್ನತ ಜಾತಿಯವರು ಇಡುತ್ತಿದ್ದ ಹೆಸರುಗಳನ್ನೇ ಅನುಕರಿಸತೊಡಗಿದರು . ನವಜಾತ ಶಿಶುಗಳಿಗೆ ದೇವರ , ಪುರಾಣ ಪುರುಷರ ಹೆಸರುಗಳನ್ನು ಇಡುವ ಅಭ್ಯಾಸ ಬೆಳೆಸಿಕೊಂಡರು . ಉದಾ : ರಾಮ , ಕೃಷ್ಣ , ಗೌರಿ , ಗೌತಮ , ಪಾರ್ವತಿ , ಶೋಭ , ರಾಧ ಇತ್ಯಾದಿ .

5 ) ತತ್ವಾದರ್ಶಗಳು ( Ideology ) : ಸಂಸ್ಕೃತಾನುಕರಣ ಪ್ರಕ್ರಿಯೆಯು ಹೊಸ ತತ್ವಾದರ್ಶಗಳು , ಚಿಂತನೆ ಮತ್ತು ಮೌಲ್ಯಗಳನ್ನು ನಿರಂತರವಾಗಿ ಬಳಸುತ್ತಾರೆ . ಇವೆಲ್ಲಾ ತತ್ವಾದರ್ಶಗಳು ಸಂಸ್ಕೃತ ಸಾಹಿತ್ಯದಲ್ಲಿ ಸದಾ ಬಳಸುವ ಪರಿಕಲ್ಪನೆಗಳಾಗಿವೆ . ಉದಾ : ಕರ್ಮ , ಧರ್ಮ , ಪಾಪ ಪುಣ್ಯ , ಮಾಯಾ , ಸಂಸ್ಕಾರ , ಮೋಕ್ಷ ಇತ್ಯಾದಿ . ಬ್ರಾಹ್ಮಣರು ತಮ್ಮ ದೈನಂದಿನ ಸಂವಾದದಲ್ಲಿ ನಿರಂತರವಾಗಿ ಬಳಸುವ ತತ್ವಾದರ್ಶದ ಚಿಂತನೆ ಮತ್ತು ಮೌಲ್ಯಗಳನ್ನು ಕೆಳಜಾತಿಯವರೂ ತಮ್ಮ ಜೀವನದಲ್ಲಿ ವ್ಯಾಪಕವಾಗಿ ಬಳಸಿಕೊಂಡಿದ್ದಾರೆ . ಈ ರೀತಿ ಕೆಳಜಾತಿಯವರು ದ್ವಿಜ ಸಂಪ್ರದಾಯ , ರೂಢಿ ಇವುಗಳನ್ನು ಆಚರಿಸುತ್ತಾ ಸಂಸ್ಕೃತಾನುಕರಣಕ್ಕೆ ಕಾರಣವಾಗಿದ್ದಾರೆ .

18 , ಆಧುನೀಕರಣಕ್ಕೆ ಐದು ಕಾರಣಗಳನ್ನು ಪಟ್ಟಿಮಾಡಿ .

ಆಧುನೀಕರಣದ ಕಾರಣಗಳು : ಮೈರನ್‌ ವೀನರ್‌ ( Myron Weiner ) ಭಾರತದಲ್ಲಿ ಆಧುನೀಕರಣಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದ್ದಾರೆ . ಅವು ಹೀಗಿವೆ .

1 ) ಶಿಕ್ಷಣ ( Education ) : ಶಿಕ್ಷಣವು ರಾಷ್ಟ್ರೀಯ ಪ್ರಜ್ಞೆಯ , ತಾಂತ್ರಿಕ ಆವಿಷ್ಕಾರಕ್ಕಾಗಿ ಅಗತ್ಯವಾದ ಕೌಶಲ್ಯ ಮತ್ತು ಮನೋಭಾವನೆಯನ್ನು ಸೃಷ್ಟಿಸುತ್ತದೆ .

2 ) ಸಂವಹನ ( Communication ) : ಸಂವಹನ ಕ್ಷೇತ್ರದಲ್ಲಿ ಸಾಮೂಹಿಕ ಮಾಧ್ಯಮಗಳಾದ ದೂರವಾಣಿ , ದೂರದರ್ಶನ , ರೇಡಿಯೋ , ಚಲನಚಿತ್ರ ಮುಂತಾದವುಗಳ ತೀವ್ರವಾದ ಪ್ರಗತಿಯನ್ನು ಹೊಂದಿದೆ . ಸಾಮೂಹಿಕ ಮಾಧ್ಯಮಗಳ ವ್ಯಾಪಕವಾದ ಬೆಳವಣಿಗೆಯಿಂದಾಗಿ ಆಧುನಿಕ ಚಿಂತನೆ ವೇಗವಾಗಿ ಬೆಳೆಯುತ್ತಿದೆ .

3 ) ರಾಷ್ಟ್ರೀಯತೆಗೆ ಆಧಾರವಾದ ಆದರ್ಶಗಳು ( Ideology Based on Nationalism ) : ರಾಷ್ಟ್ರೀಯತೆ ಆದರ್ಶಗಳು ಮತ್ತು ಚಿಂತನೆಗಳ ಪ್ರಭಾವದಿಂದ ಬಹುರೂಪ ( ವೈವಿಧ್ಯತೆ ) ಸಮಾಜವು ಪರಸ್ಪರ ಒಂದುಗೂಡಿಸುತ್ತಾ ಐಕ್ಯತೆಯ ಭಾವನೆ ಮೂಡಿಸುತ್ತದೆ . ಈ ಚಿಂತನೆಯಿಂದಾಗಿ ರಾಜಕೀಯ ನೇತಾರರು ಜನರ ಮನೋಭಾವನೆಯನ್ನು ಬದಲಾಯಿಸುತ್ತ ದೇಶಾಭಿಮಾನ ಬೆಳೆಸಿಕೊಳ್ಳುವಂತೆ ಒತ್ತಡ ಬೀರುತ್ತಾರೆ .

4 ) ಜನಾಕಾರ್ಷಕವಾದ ನಾಯಕತ್ವ ( Charismatic Leadership ) : ಕೆಲವು ವ್ಯಕ್ತಿಗಳು ವಿಶಿಷ್ಟವಾದ ಗುಣಗಳಿಂದ ಅಪಾರ ಸಂಖ್ಯೆ ಜನರ ಮನಸ್ಸನ್ನು ಗೆದ್ದ ಇಂತಹ ವ್ಯಕ್ತಿಗಳು ಉತ್ತಮ ಅಂತಸ್ತುಗಳಿಸಿ ಜನರ ನಂಬಿಕೆಗಳು , ಆಚರಣೆಗಳು ಮತ್ತು ವರ್ತನೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಾರೆ . ಸಾಮಾನ್ಯ ಜನರ ಗೌರವ – ಅಭಿಮಾನ ಮತ್ತು ನಿಷ್ಠೆಯನ್ನು ಪಡೆದುಕೊಂಡಿರುತ್ತಾರೆ .

5 ) ಪ್ರಬಲ ಸರ್ಕಾರ ( Coercive Government Authority ) : ಸರ್ಕಾರದ ವ್ಯವಸ್ಥೆಯು ಪ್ರಬಲವಾಗಿದ್ದರೆ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯಶಸ್ವಿಯಾಗುತ್ತದೆ . ಇಂತಹ ಸರ್ಕಾರ ಜನಸಾಮಾನ್ಯರು ಆಧುನಿಕ ಮನೋಭಾವನೆ ಮತ್ತು ವರ್ತನೆ ಸ್ವೀಕರಿಸುವಂತೆ ಒತ್ತಡ ಬೀರುತ್ತದೆ ಮತ್ತು ಅಭಿವೃದ್ಧಿಯ ಕಡೆಗೆ ಕೇಂದ್ರೀಕರಿಸುತ್ತದೆ . ಮೇಲಿನ ಎಲ್ಲಾ ಅಂಶಗಳ ಜೊತೆ ಹೊಸಹೊಸ ವೈಜ್ಞಾನಿಕ ಅವಿಷ್ಕಾರಗಳು , ಕೈಗಾರಿಕಾ ಉತ್ಪಾದನೆಗಳು ಸಾರ್ವತ್ರಿಕ ಕಾನೂನು ವ್ಯವಸ್ಥೆಯೂ ಸಹ ಆಧುನೀಕರಣಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು .

19. ಭಾರತದಲ್ಲಿ ಆಧುನೀಕರಣ ಪ್ರಕ್ರಿಯೆಯನ್ನು ವಿವರಿಸಿ .

ಭಾರತದಲ್ಲಿ ಆಧುನೀಕರಣದ ಪ್ರಕ್ರಿಯೆಗಳು ( Process of Modernization in India ) : ನಮ್ಮ ದೇಶವು ಹೇಗೆ ಸಂಪ್ರದಾಯ ಮತ್ತು ಆಧುನೀಕರಣ ಎರಡನ್ನೂ ಒಟ್ಟಾಗಿ ಹೇಗೆ ನಿರ್ವಹಿಸುತ್ತಿದೆ ಎಂದು ವಿವರಿಸುವಾಗ ಆಧುನೀಕರಣವನ್ನು ಗುಣಾತ್ಮಕವಾಗಿ ಚರ್ಚಿಸಲು ಯತ್ನಿಸಲಾಗಿದೆ . ಅವುಗಳನ್ನು ಈ ರೀತಿಯಾಗಿ ವಿಂಗಡಿಸಬಹುದು .

1 ) ಆರ್ಥಿಕವಾಗಿ ( Economically ) : ಹಳೆಯ ಪರಂಪರೆ ಮತ್ತು ಕೌಟುಂಬಿಕ ಆರ್ಥಿಕ ವ್ಯವಸ್ಥೆಯ ಬದಲಾಗಿ ತಾಂತ್ರಿಕ , ಕೈಗಾರಿಕಾ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಹೆಚ್ಚು ಅವಕಾಶ ದೊರೆಯಿತು . ಈ ಕಾರಣದಿಂದ ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯಾದ ಯಜಮಾನೀ ವ್ಯವಸ್ಥೆಯು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು .

2 ) ರಾಜಕೀಯ ( Politically ) : ಹೊಸ ಮಾದರಿಯ ಎಂದರೆ ಪ್ರಜಾಪ್ರಭುತ್ವ ಸರ್ಕಾರದ ಆಡಳಿತದಿಂದಾಗಿ ಪಾಳೆಗಾರಿಕೆ ಆಡಳಿತಾತ್ಮಕ ಪದ್ಧತಿ ವಿನಾಶಗೊಂಡಿತು . ಗತಕಾಲದ ರಾಜ ಪರಂಪರೆಯು ಮೂಲೆಗುಂಪಾಗುತ್ತ ಅದರ ಬದಲಾಗಿ ವೈಚಾರಿಕತೆ ಆಧಾರಿತ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿತಗೊಂಡಿದೆ .

3 ) ಸಾಂಸ್ಕೃತಿಕವಾಗಿ ( Culturally ) : ಸಾಂಪ್ರದಾಯಿಕ ಸ್ವರೂಪದ ಸಾಮಾಜಿಕ ಮೌಲ್ಯಗಳು ಮಾರ್ಪಾಡು ಗೊಳ್ಳುತ್ತಿದ್ದು , ಅದರ ಬದಲಾಗಿ ಜಾತ್ಯಾತೀತ ಸಾಮಾಜಿಕ ಮೌಲ್ಯಗಳು ಸ್ಥಾಪನೆಗೊಂಡಿತ್ತು .

4 ) ಸಾಮಾಜಿಕ ಸಂರಚನಾತ್ಮಕ ಹಂತದಲ್ಲಿ ( At Social Constructive stage ) : ಸಾಂಪ್ರದಾಯಿಕ ಆಧಾರಿತ ವಾದ ಆರೋಪಿತ ಅಂತಸ್ತು ಮತ್ತು ಸ್ಥಾನಮಾನದ ಪ್ರಾಮುಖ್ಯತೆ ಕ್ಷೀಣಿಸಿತ್ತು . ಅದರ ಬದಲಾಗಿ ಗಳಿಸಿದ ಅಂತಸ್ತು ಮತ್ತು ಪಾತ್ರಗಳಿಗೆ ಹೆಚ್ಚು ಮಹತ್ವ ದೊರೆಯುತ್ತಿದೆ . ಯೋಗೇಂದ್ರ ಸಿಂಗ್ ತಮ್ಮ ಕೃತಿಯಾದ “ ಭಾರತದ ಸಂಪ್ರದಾಯದ ಆಧುನೀಕರಣ ” Modernization of Indian tradition ಎಂಬ ಗ್ರಂಥದಲ್ಲಿ ಭಾರತದ ಆಧುನೀಕರಣ ಪ್ರಕ್ರಿಯೆಯಲ್ಲಿ ವಿಶಿಷ್ಟವಾದ ಗುಣಲಕ್ಷಣಗಳನ್ನು ಹೊಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ . ಭಾರತದಲ್ಲಿ ಆಧುನೀಕರಣ ಸಂಪ್ರದಾಯಿಕ ಸಂರಚನೆ ಚೌಕಟ್ಟಿನಲ್ಲಿಯೇ ಹೊಂದಿಕೊಂಡು ಮಾರ್ಪಾಡುಗಳು ಸಂಭವಿಸಿದೆ ವಿನಃ ಸಾಂಪ್ರದಾಯಿಕ ಪರಂಪರೆಯ ಸಂರಚನೆಯಿಂದ ಬೇರೆಯಾಗಿಲ್ಲ ಅಥವಾ ಸಂಪೂರ್ಣವಾಗಿ ಭಿನ್ನವಾಗಿಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ . ಭಾರತ ದೇಶವು ಆಧುನೀಕರಣವಾಗುವುದಕ್ಕೆ ಬ್ರಿಟಿಷರ ಆಳ್ವಿಕೆಯೂ ಕಾರಣವಾಗಿದೆ . ಆಧುನೀಕರಣದ ಜೊತೆಯಲ್ಲಿ ಸಾಂಪ್ರದಾಯಿಕ ಸಂಸ್ಥೆಗಳೂ ಪುನರ್‌ ಪುಷ್ಟಿಕರಣ ಗೊಂಡಿದೆ ಎನ್ನಬಹುದು . ಮೇಲಿನ ಅಂಶಗಳೆಲ್ಲಾ ಭಾರತದಲ್ಲಿ ನಡೆದ ಆಧುನೀಕರಣದ ಪ್ರಕ್ರಿಯೆಗಳು .

20. ಜಾಗತೀಕರಣಕ್ಕೆ ಸಹಾಯಕವಾದ ಐದು ಪ್ರಮುಖ ಅಂಶಗಳನ್ನು ವಿವರಿಸಿ .

ಜಾಗತೀಕರಣಕ್ಕೆ ಸಹಾಯಕವಾದ ಪ್ರಮುಖ ಅಂಶಗಳು ( Factors Contributing to Globalization ) : ಭಾರತದಲ್ಲಿ ಜಾಗತೀಕರಣಕ್ಕೆ ಸಹಾಯಕವಾದ ಅಂಶಗಳ ಬಗ್ಗೆ ಆಂತೋಣಿ ಗಿಡ್ಡಿಸ್ ತಮ್ಮ ಕೃತಿ ಸೋಶಿಯಾಲಜಿಯಲ್ಲಿ ಈ ರೀತಿ ಪ್ರಸ್ತುತಪಡಿಸಿದ್ದಾರೆ .

1 ) ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪ್ರಗತಿ ( Rise of Information and Communication Technology ) : ಜಾಗತೀಕರಣದ ಹಲವಾರು ಅಂಶಗಳು , ಅದರಲ್ಲೂ ಪ್ರಮುಖವಾದದ್ದು ಸಂವಹನ ತಂತ್ರಜ್ಞಾನದ ಮೂಲ ಸೌಕರ್ಯಗಳ ಬೆಳವಣಿಗೆಯು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿದೆ . ಪ್ರಸ್ತುತ ಪ್ರಪಂಚದಾದ್ಯಂತ 200 ಕ್ಕೂ ಅಧಿಕ ಉಪಗ್ರಹಗಳು ಬಾಹ್ಯಾಕಾಶದಿಂದ ಮಾಹಿತಿಗಳನ್ನು ರವಾನಿಸುತ್ತಿದೆ . ಈ ರೀತಿಯ ಸಂವಹನ ವ್ಯವಸ್ಥೆಯ ಪ್ರಭಾವದಿಂದ ಮನೆ ಮತ್ತು ಕಚೇರಿಗಳಿಂದಲೇ ಹೊರಜಗತ್ತಿನ ಅಸಂಖ್ಯಾತರೊಂದಿಗೆ ಸಂಪರ್ಕವನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ . ಅಂತರಜಾಲದ ಬಳಕೆಯು ಹೆಚ್ಚಾಗಿದೆ . ಇದರಲ್ಲಿ ದೂರವಾಣಿ ಡಿಜಿಟಲ್ ಉಪಗ್ರಹ ಮತ್ತು ಕೇಬಲ್ ಟಿ.ವಿ. , ಇ – ಮೇಲ್ ಮತ್ತು ಅಂತರ್ಜಾಲ , ಇತ್ತೀಚಿನ ವರದಿಯ ಪ್ರಕಾರ 2013 ರಲ್ಲಿ 2.4 ಬಿಲಿಯನ್ ಜನರು ಅಂತರ್ಜಾಲ ವನ್ನು ಬಳಸುತ್ತಿದ್ದಾರೆ .

ಅಂತರ್ಜಾಲಗಳು , ದೂರವಾಣಿಗಳು , ಕಂಪ್ಯೂಟರ್ , ದೂರದರ್ಶನ ಮುಂತಾದವುಗಳ ಬಳಕೆಯಿಂದ ಸೃಷ್ಟಿಯಾಗಿರುವ ಸಂಪರ್ಕವನ್ನು ಮಾಹಿತಿ ತಂತ್ರಜ್ಞಾನ ಎಂದು ಕರೆಯುತ್ತಾರೆ . ಈ ತಂತ್ರಜ್ಞಾನವು ಕಾಲ – ಪ್ರದೇಶದ ಅಂತರವನ್ನು ಕಡಿಮೆಗೊಳಿಸಿದೆ . ಆನ್‌ಲೈನ್‌ನಲ್ಲಿ ಚರ್ಚೆ ಅಥವಾ ಹರಟೆ ಮಾಡುವ ಮೂಲಕ ಸಾವಿರಾರು ಮೈಲಿ ದೂರದಲ್ಲಿರುವ ಗೆಳೆಯರು ಅಥವಾ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಳ್ಳಬಹುದು . ಅಮೆರಿಕಾದಲ್ಲಿನ ಯಾವುದೇ ಕಂಪನಿಯೊಂದಿಗೆ ಭಾರತದ ಅಥವಾ ಸ್ವದೇಶದಲ್ಲಿದ್ದುಕೊಂಡು ಕಾರ್ಯನಿರ್ವಹಿಸಲು ಸಾಧ್ಯವಾಗಿದೆ . ಅಂತರ್‌ರಾಷ್ಟ್ರೀಯ ದೂರವಾಣಿ ದರದಲ್ಲಿನ ಕಡಿತದಿಂದ ದೊಡ್ಡ ಕಾರ್ಪೋರೇಶನ್‌ಗಳು ಭಾರತವನ್ನು ತಮ್ಮ ವ್ಯಾಪಾರಿ ಹೊರಗುತ್ತಿಗೆಯ ( Business Process Outsoursing ) ಪ್ರಮುಖ ಕೇಂದ್ರವಾಗಿ ರೂಪಿಸಿಕೊಂಡಿವೆ . ಇದರ ಪ್ರಭಾವದಿಂದ ಭಾರತದಲ್ಲಿ ಕಾಲ್‌ಸೆಂಟರ್ ಮತ್ತು ಮಾಹಿತಿ ಪರಿಷ್ಕರಣೆ ( Data Processing Centres ) ಅಸ್ತಿತ್ವಕ್ಕೆ ಬಂದಿವೆ . ಜಗತ್ತಿನ ಘಟನಾವಳಿಗಳಲ್ಲಿ ನಾವು ನೇರವಾಗಿ ಭಾಗವಹಿಸದಿದ್ದ ಜಾಗತಿಕ ಸಮುದಾಯದ ಸಕ್ರಿಯ ಪ್ರೇಕ್ಷಕರಾಗಿದ್ದೇವೆ .

ಇವುಗಳ ಜೊತೆ ಇನ್ನೂ 5 ಅಂಶಗಳು ನೆರವಾಗಿದೆ . ಅವುಗಳು :

1 ) ಮಾಹಿತಿಗಳ ನಿರಂತರವಾದ ಪ್ರವಾಹ ( Information Flows )

2 ) ಆರ್ಥಿಕ ಅಂಶಗಳು ( Economic Factors )

3 ) ಬಹುರಾಷ್ಟ್ರೀಯ ಕಂಪನಿಗಳು ( Transnational Corporations or Multinational Companies MNC )

4 ) ವಿದ್ಯುನ್ಮಾನ ಆರ್ಥಿಕತೆ ( The Electronic Economics )

5 ) ರಾಜಕೀಯ ಪರಿವರ್ತನೆಗಳು ( Political Changes )

2nd Puc Sociology 8th Chapter Notes Kannada Medium

ಹತ್ತು ಅಂಕದ ಪ್ರಶ್ನೆಗಳು :

21. ಸಂಸ್ಕೃತಾನುಕರಣದ ಅಂಶಗಳನ್ನು ವಿವರಿಸಿರಿ .

ಸಂಸ್ಕೃತಾನುಕರಣದಲ್ಲಿ ಕೆಳ ಜಾತಿಯವರು ಉನ್ನತ ಜಾತಿಗಳ ಅಥವಾ ದ್ವಿಜರ ಸಂಪ್ರದಾಯ ಮತ್ತು ಜೀವನ ವಿಧಾನಗಳನ್ನು ಅನುಕರಿಸುವ ಪ್ರಕ್ರಿಯೆ . ಸಂಸ್ಕೃತಾನುಕರಣದ ಪ್ರಮುಖವಾದ ಅಂಶಗಳು ಈ ರೀತಿ ಇವೆ .

1 ) ಕ್ರಿಯಾವಿಧಿಗಳು ( Ritnals ) : ತಾತ್ವಿಕವಾಗಿ ಅಸ್ತಿತ್ವವಿದ್ದ ಹಲವಾರು ನಿಬಂಧನೆಗಳಿದ್ದರೂ ಕೆಳಜಾತಿ ಯವರು ಅಥವಾ ಇನ್ನಿತರ ಸಮೂಹಗಳು ದ್ವಿಜ ಜಾತಿ ಸಮೂಹಗಳ ಸಂಪ್ರದಾಯ ಮತ್ತು ಕ್ರಿಯಾವಿಧಿಗಳನ್ನು ಅನುಸರಿಸುವುದರಲ್ಲಿ ಯಶಸ್ವಿಯಾದರು . ಉದಾ : ಧಾರ್ಮಿಕ ಪೂಜಾಕ್ರಮಗಳು , ಮಂತ್ರಗಳ ಘೋಷಣೆ , ತೀರ್ಥಯಾತ್ರೆ ಮುಂತಾದವುಗಳು . ಒಟ್ಟಾರೆ ಜಾತಿಯ ಏಣಿಶ್ರೇಣಿಯಲ್ಲಿ ಉನ್ನತ ಸ್ಥಾನಮಾನ ಪಡೆದುಕೊಳ್ಳುವ ಒಂದು ಮಾರ್ಗವಾಗಿದೆ .

2 ) ವಿವಾಹ ( Marriage ) : ಬ್ರಾಹ್ಮಣರ ಪ್ರಕಾರ ಹೆಣ್ಣು ಮಕ್ಕಳು ಪ್ರಾಯಕ್ಕೆ ಬರುವ ಹೊತ್ತಿಗೆ ವಿವಾಹ ಕಾರ್ಯ ಮಾಡಬೇಕಿತ್ತು . ಮತ್ತು ವಿವಾಹವೆಂಬುದು ಶಾಶ್ವತ ಸಂಬಂಧವಾಗಿತ್ತು . ಆದರೆ ಕೆಳಜಾತಿಯವರಲ್ಲಿ ವಯಸ್ಕ ವಿವಾಹ ಆಚರಣೆಯಲ್ಲಿತ್ತು . ಕೆಳಜಾತಿಯವರೂ ಸಹ ಬ್ರಾಹ್ಮಣರಂತೆ ಹೆಣ್ಣುಮಕ್ಕಳಿಗೆ ವಯಸ್ಕರಾಗುವ ಮೊದಲೇ ಮಾಡುವುದಲ್ಲದೆ ವಿವಾಹವನ್ನು ಶಾಶ್ವತ ವೈವಾಹಿಕ ಸಂಬಂಧವೆಂದು ಪರಿಗಣಿಸಿದ್ದಾರೆ . ಅವರಲ್ಲಿರುವ ವಿವಾಹ , ವಿಚ್ಛೇದನೆಗೂ ಅವಕಾಶ ಕೊಡುತ್ತಿಲ್ಲ .

3 ) ವಿಧವೆಯರನ್ನು ನೋಡಿಕೊಳ್ಳುವ ವಿಧಾನ ( Treatment of Widows ) : ಬ್ರಾಹ್ಮಣರಲ್ಲಿ ವಿಧವೆ ಯರಿಗೆ ಪುನರ್ ವಿವಾಹಕ್ಕೆ ಅವಕಾಶವಿರಲಿಲ್ಲ . ಹಾಗೂ ಶೋಚನೀಯವಾದ ಸ್ಥಿತಿಯಲ್ಲಿ ಬದುಕಬೇಕಿತ್ತು . ಕೇಶ ಮುಂಡನ ಮಾಡಿಸಿಕೊಂಡು , ಆಭರಣ ಧರಿಸುವಂತಿರಲಿಲ್ಲ . ಯಾವುದೇ ಶುಭ ಕಾರ್ಯಗಳಲ್ಲಿ ಭಾಗವಹಿಸುವಂತಿರಲಿಲ್ಲ . ಸಂಸ್ಕೃತಾನುಕರಣದಿಂದ ಕೆಳಜಾತಿಗಳಲ್ಲಿ ವಿಧವಾ ಪುನರ್ ವಿವಾಹದ ಮೇಲೆ ನಿಷೇಧ ಹೇರಲಾಯಿತು . ಮತ್ತು ಉನ್ನತ ಜಾತಿಯರ ವಿಧವೆಯರನ್ನು ನೋಡಿಕೊಳ್ಳುವ ರೀತಿಯನ್ನೇ ಕ್ರಮಬದ್ಧವಾಗಿ ರೂಢಿಸಿಕೊಂಡರು .

4 ) ನಾಮಕರಣ ಸಂಸ್ಕೃತಿ Nomenclature ( Naming Ceremony ) : ಕೆಳಜಾತಿಯವರು ತಮ್ಮ ಮಕ್ಕಳಿಗೆ ಇಡುತ್ತಿದ್ದ ಕೆಂಪಮ್ಮ , ಕರಿಯ , ಕಾಳ , ಹೊನ್ನಿ , ತಿಮ್ಮ ಈ ಹೆಸರುಗಳ ಬದಲಾಗಿ ಉನ್ನತ ಜಾತಿಯವರು ಇಡುತ್ತಿದ್ದ ಹೆಸರುಗಳನ್ನೇ ಅನುಕರಿಸತೊಡಗಿದರು . ನವಜಾತ ಶಿಶುಗಳಿಗೆ ದೇವರ , ಪುರಾಣ ಪುರುಷರ ಹೆಸರುಗಳನ್ನು ಇಡುವ ಅಭ್ಯಾಸ ಬೆಳೆಸಿಕೊಂಡರು . ಉದಾ : ರಾಮ , ಕೃಷ್ಣ , ಗೌರಿ , ಗೌತಮ , ಪಾರ್ವತಿ , ಶೋಭ , ರಾಧ ಇತ್ಯಾದಿ .

5 ) ತತ್ವಾದರ್ಶಗಳು ( Ideology ) : ಸಂಸ್ಕೃತಾನುಕರಣ ಪ್ರಕ್ರಿಯೆಯು ಹೊಸ ತತ್ವಾದರ್ಶಗಳು , ಚಿಂತನೆ ಮತ್ತು ಮೌಲ್ಯಗಳನ್ನು ನಿರಂತರವಾಗಿ ಬಳಸುತ್ತಾರೆ . ಇವೆಲ್ಲಾ ತತ್ವಾದರ್ಶಗಳು ಸಂಸ್ಕೃತ ಸಾಹಿತ್ಯದಲ್ಲಿ ಸದಾ ಬಳಸುವ ಪರಿಕಲ್ಪನೆಗಳಾಗಿವೆ . ಉದಾ : ಕರ್ಮ , ಧರ್ಮ , ಪಾಪ ಪುಣ್ಯ , ಮಾಯಾ , ಸಂಸ್ಕಾರ , ಮೋಕ್ಷ ಇತ್ಯಾದಿ . ಬ್ರಾಹ್ಮಣರು ತಮ್ಮ ದೈನಂದಿನ ಸಂವಾದದಲ್ಲಿ ನಿರಂತರವಾಗಿ ಬಳಸುವ ತತ್ವಾದರ್ಶದ ಚಿಂತನೆ ಮತ್ತು ಮೌಲ್ಯಗಳನ್ನು ಕೆಳಜಾತಿಯವರೂ ತಮ್ಮ ಜೀವನದಲ್ಲಿ ವ್ಯಾಪಕವಾಗಿ ಬಳಸಿಕೊಂಡಿದ್ದಾರೆ . ಈ ರೀತಿ ಕೆಳಜಾತಿಯವರು ದ್ವಿಜ ಸಂಪ್ರದಾಯ , ರೂಢಿ ಇವುಗಳನ್ನು ಆಚರಿಸುತ್ತಾ ಸಂಸ್ಕೃತಾನುಕರಣಕ್ಕೆ ಕಾರಣವಾಗಿದ್ದಾರೆ .

ಭಾರತದಲ್ಲಿ ಸಂಸ್ಕೃತಾನುಕರಣಕ್ಕೆ ಕಾರಣವಾದ ಅಂಶಗಳು

1 ) ಸ್ತ್ರೀಯರನ್ನು ನೋಡಿಕೊಳ್ಳುವ ಕ್ರಮ ( Treatment of Women ) : ಮೇಲ್ ಜಾತಿಯವರು ಸ್ತ್ರೀಯರನ್ನು ಕೀಳಾಗಿ ನೋಡುತ್ತಿದ್ದರು . ಸ್ತ್ರೀ ಮತ್ತು ಕನೈಯರಲ್ಲಿ ಪರಿಶುದ್ಧತೆ ಕಾಪಾಡಿಕೊಳ್ಳಬೇಕು . ಪತ್ನಿಯರು ತಮ್ಮ ಪತಿಯನ್ನು ‘ ಪರದೈವ’ವೆಂದು ಕಾಣಬೇಕು . ಹಲವಾರು ವ್ರತ ಹಾಗೂ ಧಾರ್ಮಿಕ ಆಚರಣೆಯನ್ನು ಮಾಡಿ , ತಮ್ಮ ಪತಿಯ ದೀರ್ಘಾಯುಷ್ಯ ವನ್ನು ಬಯಸಬೇಕಾಗಿತ್ತು . ಶಿಶುವಿನ ಜನನ , ಋತುಚಕ್ರ ( Menstruation ) ಮುಂತಾದ ಸಂದರ್ಭಗಳಲ್ಲಿ ಕಳಂಕ ಮತ್ತು ಅಸ್ಪೃಶ್ಯರ ರೀತಿ ನೋಡಿಕೊಳ್ಳುತ್ತಿದ್ದರು . ಆದರೆ ಕೆಳಜಾತಿ ಸ್ತ್ರೀಯರಲ್ಲಿ ಈ ಎಲ್ಲಾ ಆಚಾರಗಳಿಲ್ಲದೆ ಗೌರವ ಸ್ಥಾನ ಪಡೆದಿದ್ದರು . ಆದರೆ ಸಂಸ್ಕೃತಾನುಕರಣದ ಪ್ರಭಾವದಿಂದ ಕೆಳಜಾತಿ ಸ್ತ್ರೀಯರನ್ನು ಉನ್ನತ ಜಾತಿಯ ಸ್ತ್ರೀಯರಂತೆ ನೋಡಿಕೊಳ್ಳಲು ಪ್ರಾರಂಭಿಸಿ ಕೀಳು ಸ್ಥಾನವನ್ನು ನೀಡಿದರು .

2 ) ರಕ್ತಸಂಬಂಧಗಳು ( Kinship ) : ಎಂ.ಎನ್ . ಶ್ರೀನಿವಾಸ್ ಪ್ರಕಾರ ಮೇಲ್ಪಾತಿಗಳಲ್ಲಿ ಪುತ್ರ ಸಂತಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು . ಸಂಸ್ಕೃತದಲ್ಲಿ ‘ ಸತ್ ‘ ಎಂಬ ನರಕದಿಂದ ಪಾರು ಮಾಡುವನೇ ಪುತ್ರ ಎಂದರೆ ಮಗ . ಹೆಣ್ಣು ಸಂತಾನಕ್ಕಿಂತ ಗಂಡು ಸಂತಾನಕ್ಕೆ ಹೆಚ್ಚಿನ ಬಯಕೆಯಿತ್ತು . ಆದರೆ ಕೀಳು ಜಾತಿಗಳಲ್ಲಿ ಹೆಣ್ಣು ಶಿಶುವಿಗೂ ಸಮಾನವಾದ ಸ್ಥಾನವಿತ್ತು . ಆದರೆ ಇತ್ತೀಚಿನ ದಿನಗಳಲ್ಲಿ ಕೆಳಜಾತಿಗಳಲ್ಲಿ ಸಹ ಗಂಡು ಶಿಶುವಿಗೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ .

3 ) ಆಹಾರ ಪದ್ಧತಿ ( Food Habits ) : ಭಾರತದಲ್ಲಿ ಉನ್ನತ ಜಾತಿಯವರು ಕಟ್ಟಾ ಸಸ್ಯಾಹಾರಿಗಳಾಗಿದ್ದರು . ಕೆಳ ಜಾತಿಗಳು ಸಾಮಾನ್ಯವಾಗಿ ಮಾಂಸಾಹಾರಿಗಳು . ಸಂಸ್ಕೃತಾನುಕರಣ ಪ್ರಕ್ರಿಯೆಯ ಪ್ರಭಾವದಿಂದ ಕೆಳಜಾತಿಗಳ ಜನ ಕಟ್ಟು ನಿಟ್ಟಾದ ಸಸ್ಯಾಹಾರಿಗಳಾಗುತ್ತ ಮದ್ಯಪಾನ ಸೇವನೆಯನ್ನು ವರ್ಜಿಸಿ , ಜಾತಿಯ ಏಣಿ ಶ್ರೇಣಿಯಲ್ಲಿ ಉನ್ನತ ಅಂತಸ್ತು ಪಡೆಯುವ ಉದ್ದೇಶವನ್ನು ಹೊಂದಿದ್ದಾರೆ .

4 ) ಉಡುಗೆ – ತೊಡುಗೆ ( Dress Habits ) : ದ್ವಿಜರು ಮತ್ತು ಮೇಲ್ದಾತಿಯವರು ತಮ್ಮ ಉಪನಯನ ಸಂಸ್ಕಾರ ಕ್ರಿಯಾವಿಧಿಗಳಿಂದ ‘ ಜನಿವಾರ ‘ ಧರಿಸಲು ಅರ್ಹತೆ ಹೊಂದಿದ್ದಾರೆ . ಶೂದ್ರರಿಗೆ ಇಂತಹ ಕ್ರಿಯಾವಿಧಿಯಿರಲಿಲ್ಲ . ಆದರೂ ಕೆಳಜಾತಿಗಳ ಜನರು ಈಗ ‘ ಜನಿವಾರ ಧರಿಸಲು ಪ್ರಾರಂಭಿಸಿದ್ದಾರೆ ಮತ್ತು ವಸ್ತ್ರ ವಿನ್ಯಾಸದಲ್ಲಿ ಧೋತಿ , ಶಾಲು ಪೇಟ , ಕಚ್ಚೆ , ಪಂಚೆ ಮುಂತಾದವನ್ನು ಕೆಳಜಾತಿಯವರೂ ಧರಿಸುವ ಮೂಲಕ ತಮ್ಮ ಉಡುಗೆ – ತೊಡುಗೆಗಳಲ್ಲಿ ಉನ್ನತ ಜಾತಿಯವರನ್ನು ಅನುಕರಿಸುತ್ತಿದ್ದಾರೆ . ಈ ರೀತಿಯ ಹಲವಾರು ಪ್ರಮುಖ ಅಂಶಗಳು ಸಂಸ್ಕೃತಾನುಕರಣಕ್ಕೆ ಸಹಾಯಕವಾಗಿದೆ .

22. ಜಾಗತೀಕರಣವನ್ನು ವ್ಯಾಖ್ಯಾನಿಸಿ ಮತ್ತು ಅದಕ್ಕೆ ಸಹಾಯವಾದ ಅಂಶಗಳನ್ನು ವಿವರಿಸಿರಿ .

ಜಾಗತೀಕರಣವೆಂದರೆ ಜಗತ್ತಿನ ಎಲ್ಲಾ ಸಮಾಜಗಳಲ್ಲಿ ಪರಸ್ಪರ ಅವಲಂಬನೆಯನ್ನು ಸೂಚಿಸುತ್ತದೆ . ಪ್ರತಿಯೊಂದ ಸಮಾಜಗಳು ಒಂದು ಕೇಂದ್ರೀಕೃತ ಆರ್ಥಿಕ ವಾಣಿ ಪ್ರಪಂಚದೊಂದಿಗೆ ನಿರಂತರ ಸಂಪರ್ಕ ಮತ್ತು ಅಂತರ್ ಅವಲಂಬನೆಯನ್ನು ಸೂಚಿಸುತ್ತದೆ . ಜಗತ್ತಿನಾದ್ಯಂತ ಏಕ ರೀತಿಯ ಸಂಸ್ಕೃತಿ ಮತ್ತು ಆರ್ಥಿಕ ಹಿತಾಸಕ್ತಿ ಹರಡುವಿಕೆಯ ಸಂಕೇತವಾಗಿದೆ . ಜಾಗತೀಕರಣವು ಎಲ್ಲಾ ದೇಶಗಳ ರಾಜಕೀಯ , ಸಾಮಾಜಿಕ , ಆರ್ಥಿಕ , ಸಾಂಸ್ಕೃತಿಕ ಮತ್ತು ಇನ್ನಿತರ ಅಂಶಗಳನ್ನು ಒಂದುಗೂಡಿಸುವ ಪ್ರಕ್ರಿಯೆಯಾಗಿದೆ .

ಜಾಗತೀಕರಣಕ್ಕೆ ಸಹಾಯಕವಾದ ಪ್ರಮುಖ ಅಂಶಗಳು ( Factors Contributing to Globalization ) : ಭಾರತದಲ್ಲಿ ಜಾಗತೀಕರಣಕ್ಕೆ ಸಹಾಯಕವಾದ ಅಂಶಗಳ ಬಗ್ಗೆ ಆಂತೋಣಿ ಗಿಡ್ಡಿಸ್ ತಮ್ಮ ಕೃತಿ ಸೋಶಿಯಾಲಜಿಯಲ್ಲಿ ಈ ರೀತಿ ಪ್ರಸ್ತುತಪಡಿಸಿದ್ದಾರೆ .

1 ) ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪ್ರಗತಿ ( Rise of Information and Communication Technology ) : ಜಾಗತೀಕರಣದ ಹಲವಾರು ಅಂಶಗಳು , ಅದರಲ್ಲೂ ಪ್ರಮುಖವಾದದ್ದು ಸಂವಹನ ತಂತ್ರಜ್ಞಾನದ ಮೂಲ ಸೌಕರ್ಯಗಳ ಬೆಳವಣಿಗೆಯು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿದೆ . ಪ್ರಸ್ತುತ ಪ್ರಪಂಚದಾದ್ಯಂತ 200 ಕ್ಕೂ ಅಧಿಕ ಉಪಗ್ರಹಗಳು ಬಾಹ್ಯಾಕಾಶದಿಂದ ಮಾಹಿತಿಗಳನ್ನು ರವಾನಿಸುತ್ತಿದೆ . ಈ ರೀತಿಯ ಸಂವಹನ ವ್ಯವಸ್ಥೆಯ ಪ್ರಭಾವದಿಂದ ಮನೆ ಮತ್ತು ಕಚೇರಿಗಳಿಂದಲೇ ಹೊರಜಗತ್ತಿನ ಅಸಂಖ್ಯಾತರೊಂದಿಗೆ ಸಂಪರ್ಕವನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ . ಅಂತರಜಾಲದ ಬಳಕೆಯು ಹೆಚ್ಚಾಗಿದೆ . ಇದರಲ್ಲಿ ದೂರವಾಣಿ ಡಿಜಿಟಲ್ ಉಪಗ್ರಹ ಮತ್ತು ಕೇಬಲ್ ಟಿ.ವಿ. , ಇ – ಮೇಲ್ ಮತ್ತು ಅಂತರ್ಜಾಲ . ಇತ್ತೀಚಿನ ವರದಿಯ ಪ್ರಕಾರ 2013 ರಲ್ಲಿ 2.4 ಬಿಲಿಯನ್ ಜನರು ಅಂತರ್ಜಾಲ ವನ್ನು ಬಳಸುತ್ತಿದ್ದಾರೆ . ಅಂತರ್ಜಾಲಗಳು , ದೂರವಾಣಿಗಳು , ಕಂಪ್ಯೂಟರ್ , ದೂರದರ್ಶನ ಮುಂತಾದವುಗಳ ಬಳಕೆಯಿಂದ ಸೃಷ್ಟಿಯಾಗಿರುವ ಸಂಪರ್ಕವನ್ನು ಮಾಹಿತಿ ತಂತ್ರಜ್ಞಾನ ಎಂದು ಕರೆಯುತ್ತಾರೆ . ಈ ತಂತ್ರಜ್ಞಾನವು ಕಾಲ – ಪ್ರದೇಶದ ಅಂತರವನ್ನು ಕಡಿಮೆಗೊಳಿಸಿದೆ . ಆನ್‌ಲೈನ್‌ನಲ್ಲಿ ಚರ್ಚೆ ಅಥವಾ ಹರಟೆ ಮಾಡುವ ಮೂಲಕ ಸಾವಿರಾರು ಮೈಲಿ ದೂರದಲ್ಲಿರುವ ಗೆಳೆಯರು ಅಥವಾ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಳ್ಳಬಹುದು .

ಅಮೆರಿಕಾದಲ್ಲಿನ ಯಾವುದೇ ಕಂಪನಿಯೊಂದಿಗೆ ಭಾರತದಅಥವಾ ಸ್ವದೇಶದಲ್ಲಿದ್ದುಕೊಂಡು ಕಾರ್ಯನಿರ್ವಹಿಸಲು ಸಾಧ್ಯವಾಗಿದೆ . ಅಂತರ್‌ರಾಷ್ಟ್ರೀಯ ದೂರವಾಣಿ ದರದಲ್ಲಿನ ಕಡಿತದಿಂದ ದೊಡ್ಡ ಕಾರ್ಪೋರೇಶನ್‌ಗಳು ಭಾರತವನ್ನು ತಮ್ಮ ವ್ಯಾಪಾರಿ ಹೊರಗುತ್ತಿಗೆಯ ( Business Process Outsoursing ) ಪ್ರಮುಖ ಕೇಂದ್ರವಾಗಿ ರೂಪಿಸಿಕೊಂಡಿವೆ . ಇದರ ಪ್ರಭಾವದಿಂದ ಭಾರತದಲ್ಲಿ ಕಾಲ್‌ಸೆಂಟರ್‌ ಮತ್ತು ಮಾಹಿತಿ ಪರಿಷ್ಕರಣೆ ( Data Processing Centres ) ಅಸ್ತಿತ್ವಕ್ಕೆ ಬಂದಿವೆ . ಜಗತ್ತಿನ ಘಟನಾವಳಿಗಳಲ್ಲಿ ನಾವು ನೇರವಾಗಿ ಭಾಗವಹಿಸದಿದ್ದ ಜಾಗತಿಕ ಸಮುದಾಯದ ಸಕ್ರಿಯ ಪ್ರೇಕ್ಷಕರಾಗಿದ್ದೇವೆ .

ಇವುಗಳ ಜೊತೆ ಇನ್ನೂ 5 ಅಂಶಗಳು ನೆರವಾಗಿದೆ . ಅವುಗಳು :

1) ಮಾಹಿತಿಗಳ ನಿರಂತರವಾದ ಪ್ರವಾಹ ( Information Flows )

2 ) ಆರ್ಥಿಕ ಅಂಶಗಳು ( Economic Factors )

3 ) ಬಹುರಾಷ್ಟ್ರೀಯ ಕಂಪನಿಗಳು ( Transnational Corporations or Multinational Companies MNC )

4 ) ವಿದ್ಯುನ್ಮಾನ ಆರ್ಥಿಕತೆ ( The Electronic Economics )

5 ) ರಾಜಕೀಯ ಪರಿವರ್ತನೆಗಳು ( Political Changes )

ಜಾಗತೀಕರಣಕ್ಕೆ ಸಹಾಯಕವಾಗುವ ಅಂಶಗಳು :

1 ) ಮಾಹಿತಿಗಳ ನಿರಂತರವಾದ ಪ್ರವಾಹ : ಜಗತ್ತಿನ ಜನ ಸಮೂಹ ಮತ್ತು ವಿವಿಧ ಪ್ರದೇಶಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳು ನಿರಂತರವಾಗಿ ಹರಿದಾಡುತ್ತಿದೆ . ಬಾಹ್ಯ ಪ್ರಪಂಚದೊಂದಿಗೆ ನೇರವಾಗಿ ಮತ್ತು ನಿರಂತರವಾದ ಸಂಪರ್ಕ ಏರ್ಪಟ್ಟಿದೆ . ಜಗತ್ತಿನಲ್ಲಿ ನಡೆಯುತ್ತಿರುವ ಪ್ರಮುಖವಾದ ಘಟನಾವಳಿಗಳೊಂದಿಗೆ ಸಾವಿರಾರು ಮಾಹಿತಿಗಳು ಜನರಿಗೆ ಸುಲಭವಾಗಿ ತಲುಪುತ್ತದೆ . ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಮಾನವೀಯ ಪರಿಹಾರ ಕಾರ್ಯಗಳು ಮತ್ತು ತಾಂತ್ರಿಕ ನೆರವು ಸಿಗುವುದನ್ನು ಮನೆಯಲ್ಲೇ ಕುಳಿತು ನೋಡಬಹುದು , ಕೇಳಬಹುದು . ಅರ್ಮೆನಿಯಾದಲ್ಲಿ ಮತ್ತು ಬಾಂಗ್ಲಾದೇಶದಲ್ಲಿ ಪ್ರವಾಹ , ಆಫ್ರಿಕಾದಲ್ಲಿ ಬರಗಾಲ ಮತ್ತು ಮಧ್ಯ ಅಮೆರಿಕಾದಲ್ಲಿ ಚಂಡಮಾರುತಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ನೆರವನ್ನು ಪಡೆಯಲು ಈ ಮೂಲಕ ಸಹಾಯವಾಯಿತು .

2 ) ಆರ್ಥಿಕ ಅಂಶಗಳು : ಕೃಷಿ ಮತ್ತು ಕೈಗಾರಿಕೆ ಆಧಾರವಾಗಿದ್ದ ಜಗತ್ತಿನ ಆರ್ಥಿಕತೆ , ಸಂಘಟಿತವಾಗುತ್ತಾ ಜಾಗತೀಕರಣದಿಂದ ಎಲ್ಲಾ ಸಮಾಜಗಳನ್ನು ಜಾಗತೀಕರಣ ವ್ಯವಸ್ಥೆಗೆ ಸೇರ್ಪಡೆಯಾಗುವಂತೆ ಮಾಡುತ್ತಿದೆ . ಜಾಗತೀಕರಣ ಭಾರ ರಹಿತ ( Weightless ) ಚಟುವಟಿಕೆಯಿಂದ ಕೂಡಿದೆ . ಜ್ಞಾನ ಸಮಾಜದ ( Knowledge ) ಉಗಮದಿಂದ ಹೊಸ ಜನ ಸಮೂಹದೊಳಗೆ ಸಂಪರ್ಕವನ್ನು ಸೃಷ್ಟಿಸಿದೆ . ಜಾಗತಿಕ ಆರ್ಥಿಕ ವ್ಯವಸ್ಥೆ ಎಲ್ಲಾ ಆವಿಷ್ಕಾರಗಳು ಮಾಹಿತಿ ತಂತ್ರಜ್ಞಾನ ಯುಗದ ಕೊಡುಗೆಯಾಗಿದೆ . ಜಾಗತಿಕ ಪರಿಸ್ಥಿತಿಯಲ್ಲಿ ಸ್ಪರ್ಧಾತ್ಮಕವಾಗಿರಲು ವ್ಯಾಪಾರಿ ಸಂಘಟನೆಗಳು ಮತ್ತು ವಾಣಿಜ್ಯ ಚಟುವಟಿಕೆಗಳು ಉದಾರಿಕರಣಗೊಂಡಿವೆ .

3 ) ಬಹುರಾಷ್ಟ್ರೀಯ ಕಂಪನಿಗಳು : ಜಾಗತೀಕರಣದಲ್ಲಿ ಮಹತ್ವವನ್ನು ಪಡೆದುಕೊಂಡ ಕಂಪನಿಗಳು ಎರಡು ಅಥವಾ ಹೆಚ್ಚು ದೇಶಗಳಿಗೆ ಸರಕು ಮತ್ತು ಸೇವೆಗಳನ್ನು ಮಾರುವ ವ್ಯವಸ್ಥೆಯಾಗಿದೆ . ಜಗತ್ತಿನಾದ್ಯಂತ ಹಲವಾರು ಬಹು ರಾಷ್ಟ್ರೀಯ ಕಂಪನಿಗಳು ಕಂಡುಬರುತ್ತವೆ . ಉದಾ : ಕೋಕೊ ಕೊಲಾ , ಪೆಪ್ಪಿ , ಜಾನ್ಸನ್ ಆಂಡ್ ಜಾನ್ಸನ್ , ಫೋರ್ಡ್ ಕಂಪನಿ , ಜನರಲ್ ಮೋಟಾರ್ ಇತ್ಯಾದಿ . ವಿಪ್ರೋ ಮುಂತಾದವರು ಜಾಗತಿಕವಾಗಿ ಅಸ್ತಿತ್ವ ಹೊಂದಿದರು . ಇವುಗಳೆಲ್ಲ ಜಾಗತಿಕ ಮಾರುಕಟ್ಟೆ ಮತ್ತು ಜಾಗತಿಕ ಲಾಭದ ಕಡೆಗೆ ಗಮನ ಹರಿಸಿದೆ .

4 ) ವಿದ್ಯುನ್ಮಾನ ಆರ್ಥಿಕತೆ : ವಿದ್ಯುನ್ಮಾನ ಆರ್ಥಿಕತೆಯ ಮತ್ತೊಂದು ಪ್ರಮುಖವಾದ ಅಂಶವೇ ಬ್ಯಾಂಕ್ , ಕಾರ್ಪೋರೇಷನ್ , ಹಣಕಾಸಿನ ನಿರ್ವಹಣೆ , ವೈಯಕ್ತಿಕ ಬಂಡವಾಳ ಹೂಡಿಕೆದಾರರು ಮುಂತಾದವರು ಕಂಪ್ಯೂಟರ್ ಮೌಸನ್ನು ಕ್ಲಿಕ್ ಮಾಡುವ ಮೂಲಕ ರಾಷ್ಟ್ರ – ಅಂತರಾಷ್ಟ್ರದ ವಲಯಗಳಲ್ಲಿ ಹಣವನ್ನು ಕ್ಷಣದಲ್ಲಿ ರವಾನಿಸಬಹುದಾಗಿದೆ . ಜಾಗತಿಕ ಆರ್ಥಿಕ ವ್ಯವಸ್ಥೆ ಪರಸ್ಪರ ಅಂತರ್‌ ಅವಲಂಬಿತ ವಾಗಿರುತ್ತದೆ . ಜಗತ್ತಿನ ಒಂದು ಹಿನ್ನಡೆಯಿಂದ ಆರ್ಥಿಕ ಇನ್ನಿತರ ಭಾಗಗಳಲ್ಲಿಯೂ ಆರ್ಥಿಕ ಹಿನ್ನಡೆಯಾಗುತ್ತದೆ .

5 ) ರಾಜಕೀಯ ಪರಿವರ್ತನೆಗಳು : ಪ್ರಸ್ತುತ ಸಾಮಾಜಿಕ ವ್ಯವಸ್ಥೆ ಜಾಗತೀಕರಣಕ್ಕೆ ಶಕ್ತಿಶಾಲಿ ಅಂಶವೇ – ರಾಜಕೀಯ ಪರಿವರ್ತನೆ . ಸಮಾಜವಾದಿ ತತ್ವದ ಪತನ ಜಾಗತೀಕರಣದ ವೇಗವನ್ನು ಹೆಚ್ಚಿಸಿದೆ . ಹಾಗೆಯೇ ಇಂತಹ ರಾಜಕೀಯ ಪರಿವರ್ತನೆಗಳು ಜಾಗತೀಕರಣದ ಪ್ರಭಾವ ವ್ಯಾಪಕ ಗೊಳಿಸಿವೆ . ಅಂತರ್‌ರಾಷ್ಟ್ರೀಯ ಮತ್ತು ಪ್ರಾದೇಶಿಕ ಸರ್ಕಾರಗಳ ಬೆಳವಣಿಗೆ ಅಂಶವೂ ಜಾಗತೀಕರಣ ಹರಡಲು ಕಾರಣವಾಗಿದೆ . ಜಾಗತೀಕರಣ ಅಂತರಾಷ್ಟ್ರೀಯ ಸರ್ಕಾರಿ ಸಂಘಟನೆಗಳು ( IGO ) ಮತ್ತು ಅಂತರಾಷ್ಟ್ರೀಯ ಸರ್ಕಾರೇತರ ಸಂಘಟನೆಗಳು ( INGO’S ) ನಿರ್ದಿಷ್ಟ ಕ್ಷೇತ್ರದ ಚಟುವಟಿಕೆಗಳಿಗಾಗಿ ಸ್ಥಾಪಿತವಾಗಿವೆ . ಮೇಲಿನ ಅಂಶಗಳೆಲ್ಲ ಜಾಗತೀಕರಣಕ್ಕೆ ಸಹಾಯಕ ವಾಗುವ ಅಂಶಗಳು .

23. ಪಾಶ್ಚಿಮಾತ್ಯೀಕರಣ ಮತ್ತು ಅದರ ಪ್ರಮುಖವಾದ ಅಂಶಗಳನ್ನು ವಿವರಿಸಿರಿ .

ಪಾಶ್ಚಿಮಾತ್ಯೀಕರಣ ಮತ್ತು ಅದರ ಪ್ರಮುಖವಾದ ಅಂಶಗಳು : ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಪ್ರಭಾವವಾಗಿ ಎಂದರೆ ಬಾಹ್ಯ ಮೂಲದ ಪ್ರಭಾವದಿಂದ ಉಂಟಾದ ಸಾಮಾಜಿಕ ಪರಿವರ್ತನೆಯನ್ನು ಪಾಶ್ಚಿಮಾತ್ಮೀಕರಣ ಎನ್ನುವರು . ಪಾಶ್ಚಿಮಾತ್ಮೀಕರಣವನ್ನು ಆಧುನೀಕರಣವೆಂದು ಕರೆಯುವುದು ಸೂಕ್ತವೆಂದು ಯೋಗೇಂದ್ರಸಿಂಗ್ ಹೇಳಿದ್ದಾರೆ . ಪಾಶ್ಚಾತೀಕರಣವು ಬ್ರಿಟಿಷರ ಆಳ್ವಿಕೆಯ ಪ್ರಭಾವದಿಂದ ಭಾರತದ ಸಾಮಾಜಿಕ – ಸಾಂಸ್ಕೃತಿಕ ಜೀವನ ವಿಧಾನ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಉಂಟಾದ ಬದಲಾವಣೆಯನ್ನು ಸೂಚಿಸುತ್ತದೆ . ಪಾಶ್ಚಾತ್ವಿಕರಣ ಪ್ರಕ್ರಿಯೆಯಲ್ಲಿ ಬಹುತೇಕ ಭಾರತೀಯರು ಪಾಶ್ಚಿಮಾತ್ಯರ ಜೀವನ – ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ . ಈ ಪ್ರಕ್ರಿಯೆಯು ಭಾರತ ಸಮಾಜದ ಎಲ್ಲಾ ಸಾಮಾಜಿಕ – ಸಾಂಸ್ಕೃತಿಕ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ .

ಹೊಸ ತಂತ್ರಜ್ಞಾನ , ಬೃಹತ್ ಪ್ರಮಾಣದ ಕಾರ್ಖಾನೆಗಳ ಪ್ರಾರಂಭಕ್ಕೆ ಕಾರಣವಾಯಿತು . ಗ್ರಾಮೀಣ ಪ್ರದೇಶದ ಜನರು ನಗರ ಮತ್ತು ಪಟ್ಟಣಗಳ ಕಡೆ ಹೆಚ್ಚು ಆಕರ್ಷಿತರಾದರು . ನಗರ ಪ್ರದೇಶಗಳಲ್ಲಿ ಪಶ್ಚಿಮ ಅಥವಾ ಪಾಶ್ಚಾತ್ಯ ಸಂಸ್ಕೃತಿ ವ್ಯಾಪಕವಾಗಿ ಹರಡಲು ಸಹಾಯಕವಾಯಿತು . ತಾಂತ್ರಿಕತೆಯ ಪ್ರಗತಿಯಿಂದ ಪಾಶ್ಚಿಮಾತ್ಯ ಜೀವನ ಶೈಲಿ ಹರಡಲು ಅನುಕೂಲವಾಯಿತು . ಅದೇ ರೀತಿ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಬದಲಾವಣೆ ಗಳಾದವು . ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಬದಲಾಗಿ ಪಶ್ಚಿಮಮಾದರಿಯ ಔಪಚಾರಿಕ ಶಿಕ್ಷಣ ಸಂಸ್ಥೆಗಳು , ಸಂಶೋಧನೆ ಕೇಂದ್ರಗಳು , ವಿಶ್ವವಿದ್ಯಾಲಯ ಮುಂತಾದವುಗಳಲ್ಲಿ ಆಂಗ್ಲಭಾಷೆಯ ಶಿಕ್ಷಣ ಮಾಧ್ಯಮ ಅನುಷ್ಠಾನಗೊಂಡಿತ್ತು . ಮತ್ತು ಪಾಶ್ಚಾತ್ಯ ಸಂಸ್ಕೃತಿ ಹರಡಲು ಪ್ರೇರಣೆ ನೀಡಿತ್ತು . ಸಾಂಪ್ರದಾಯಿಕ ಜಾತಿ ಪಂಚಾಯಿತಿಗಳ ಬದಲಾಗಿ ಆಧುನಿಕ ಕಾನೂನು , ನ್ಯಾಯಾಲಯ , ಪೊಲೀಸ್ ಮುಂತಾದ ಶಾಸನ ಸಮ್ಮತವಾದ ಸಂಸ್ಥೆಗಳು ಸ್ಥಾಪನೆಗೊಂಡವು . ಆಧುನಿಕ ಬಂಡವಾಳ ವ್ಯವಸ್ಥೆ ಸಾಂಪ್ರದಾಯಿಕ ವ್ಯವಸ್ಥೆಗೆ ಪೆಟ್ಟು ಕೊಟ್ಟಿತ್ತು .

ಹೊಸ ವಾಣಿಜ್ಯ – ವ್ಯಾಪಾರಿ ಕೇಂದ್ರಗಳು ಬ್ಯಾಂಕ್ , ವಿಮೆ , ಹೊಸ ಲೆಕ್ಕಾಚಾರ ವ್ಯವಸ್ಥೆಗಳು ಸ್ಥಾಪನೆಗೊಂಡವು . ಹೊಸ ಸಾಂಸ್ಕೃತಿಕ ವ್ಯವಸ್ಥೆಗಳಾದ ಸಮಾಜ ಕಲ್ಯಾಣ ಯೋಜನೆ , ಜೀವವಿಮೆ , ಸಾಮಾಜಿಕ ಸಂರಕ್ಷಣೆ ಯೋಜನೆ , ಆಸ್ಪತ್ರೆಗಳು ಜನರಿಗೆ ವಿವಿಧ ರೀತಿಯ ಸೇವೆ ನೀಡುತ್ತಿದ್ದವು . ಪಾಶ್ಚಾತೀಕರಣವು ಹಲವಾರು ಸಾಮಾಜಿಕ ಮೌಲ್ಯಗಳನ್ನು ಹೊಂದಿವೆ . ಮಾನವತಾವಾದ , ವೈಚಾರಿಕತೆ , ಸಮಾನತೆ , ಜಾತ್ಯಾತೀತತೆ , ವ್ಯಕ್ತಿವಾದ ಮುಂತಾದವುಗಳು . ಪಾಶ್ಚಾತೀಕರಣವು ಹಲವಾರು ಸಾಮಾಜಿಕ ಸುಧಾರಣಾ ಆಂದೋಲನಗಳಿಗೆ ಸ್ಫೂರ್ತಿಯಾಯಿತು . ಅವುಗಳಲ್ಲಿ ಪ್ರಮುಖವಾದವು ರಾಮಕೃಷ್ಣ ಮಿಷನ್ , ಆರ ಸಮಾಜ , ಬ್ರಹ್ಮ ಸಮಾಜ ಇತ್ಯಾದಿ .

ಪಾಶ್ಚಿಮಾತ್ಯೀಕರಣ ಪ್ರಕ್ರಿಯೆಯು ಈ ಕೆಳಗಿನ ಅಂಶಗಳನ್ನು ಹೊಂದಿದೆ ಎಂದು ಬಿ.ಕುಪ್ಪಸ್ವಾಮಿಯವರು ಅಭಿಪ್ರಾಯ ಪಡುತ್ತಾರೆ .

1 ) ಆಹಾರ ಸೇವನೆ , ವಿದೇಶಿ ಮದ್ಯಪಾನಗಳು , ಉಡುಗೆ – ತೊಡುಗೆ , ಆಚಾರ , ವಿಚಾರ , ನೃತ್ಯ , ಸಂಗೀತ ಇತ್ಯಾದಿ.

2 ) ಜ್ಞಾನದ ಅಂಶಗಳಾದ ಸಾಹಿತ್ಯ , ವಿಜ್ಞಾನ ಇತ್ಯಾದಿ .

3 ) ಮೌಲ್ಯಗಳಾದ – ಮಾನವತಾವಾದ , ಸಮಾನತೆ , ವೈಚಾರಿಕತೆ , ವ್ಯಕ್ತಿವಾದ ಮತ್ತು ಜಾತ್ಯಾತೀತತೆ ,

ಈ ಮೇಲಿನ ವಿಷಯಗಳಲ್ಲಿ ಪಶ್ಚಿಮ ದೇಶಗಳ ಪ್ರಭಾವ ಎದ್ದು ಕಾಣುವಂತಾಯಿತು . ಜನರು ಮೇಲಿನ ವಿಚಾರಗಳಲ್ಲಿ ಪಾಶ್ಚಾತ್ಯರನ್ನು ಅನುಕರಿಸತೊಡಗಿದರು . ಹೀಗಾಗಿ ಜನಜೀವನದಲ್ಲಿ ಪಾಶ್ಚಾತೀಕರಣ ಎದ್ದು ಕಾಣತೊಡಗಿತು .

24. ಸಂಸ್ಕೃತಾನುಕರಣೆ ಮತ್ತು ಪಾಶ್ಚಿಮಾತ್ಯೀಕರಣ ಪ್ರಕ್ರಿಯೆಯನ್ನು ವಿಮರ್ಶಿಸಿರಿ .

ಸಂಸ್ಕೃತಾನುಕರಣೆಯ ಬಗ್ಗೆ ವಿಮರ್ಶೆಗಳು : ಎಂ.ಎನ್ . ಸಂಸ್ಕೃತಾನುಕರಣವು ವಾಸ್ತವಿಕವಾಗಿ ಉನ್ನತ ಜಾತಿ ಸಮೂಹಗಳ ಸಂಕೇತಗಳನ್ನು ಕೆಳಜಾತಿಗಳು ಪರಿಚಯಿಸಿ ಕೊಳ್ಳುತ್ತ ಬಳಸುವ ಪ್ರಯತ್ನವಾಗಿದೆ . ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಲನೆಯ ಪ್ರಕ್ರಿಯೆಯಾಗಿದೆ . ಇದು ಆಂತರಿಕ ಸಾಮಾಜಿಕ ಪರಿವರ್ತನೆ ಯೋಗೇಂದ್ರ ಸಿಂಗ್ ಪ್ರಕಾರ ‘ ಮುಂದಿನ ಭವಿಷ್ಯದಲ್ಲಿ ಉನ್ನತ ಸ್ತರದ ಜಾತಿಯ ಅಂತಸ್ತು , ಸ್ಥಾನಮಾನ ‘ ಹೊಂದುವ ಹಂಬಲದಲ್ಲಿ ಕೆಳಜಾತಿಗಳು ನಿರೀಕ್ಷಣಾತ್ಮ ಸಾಮಾಜಿಕರಣ ‘ ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ . ಪಾಶ್ಚಾತೀಕರಣದ ವಿಮರ್ಶೆಗಳು : ಸಮಾಜ ಶಾಸ್ತ್ರಜ್ಞರು ಪಾಶ್ಚಾತೀಕರಣದ ವಿಶ್ಲೇಷಣೆ ಕುರಿತು ಕೆಲವು ಇತಿಮಿತಿ ಗಳನ್ನು ಗುರ್ತಿಸಿದ್ದಾರೆ.

ಅವುಗಳಲ್ಲಿ ಮುಖ್ಯವಾದವುಗಳು ಹೀಗಿವೆ :

1 ) ಯೋಗೇಂದ್ರಸಿಂಗ್ ಪ್ರಕಾರ ಪಾಶ್ಚಾತೀಕರಣ ಪರಿಕಲ್ಪನೆ ಪ್ರಾಥಮಿಕವಾಗಿ ಸಾಂಸ್ಕೃತಿಕ ಬದಲಾವಣೆಗೆ ಮಾನ್ಯತೆ ನೀಡಿದೆ . ಆದರೆ ಸಾಮಾಜಿಕ ಸಂರಚನೆಯಲ್ಲಿ ಸಂಭವಿಸಿದ ಪರಿವರ್ತನೆಗಳು ವ್ಯವಸ್ಥಿತವಾಗಿ ವಿಶ್ಲೇಷಿಸಲು ಮಹತ್ವವನ್ನು ನೀಡಿಲ್ಲ .

2 ) ಪಾಶ್ಚಾತೀಕರಣ ಭಾರತ ಸಮಾಜದ ಮೇಲೆ ಬ್ರಿಟಿಷ್ ಆಳ್ವಿಕೆಯ ಪ್ರಭಾವವನ್ನು ಸೂಚಿಸುತ್ತದೆ . ಈ ದೃಷ್ಟಿಕೋನ ತೀರಾ ಸಂಕುಚಿತವಾಗಿದ್ದು , ಸ್ವಾತಂತ್ರ್ಯ ಪೂರ್ವ ಕಾಲಾವಧಿಗೆ ಮಾತ್ರ ಸೀಮಿತವಾಗಿದೆ . ಹಾಗೆಯೇ ರಷ್ಯಾ ಮತ್ತು ಅಮೆರಿಕಾದ ಪ್ರಭಾವ ಕೂಡಾ ಅಷ್ಟೇ ಗಣನೀಯವಾದ ಪ್ರಭಾವ ಬೀರಿದೆ .

3 ) ಹೊರಾಲ್ಡ್ ಗೌಡ , ಮಿಲ್ಟನ್ ಸಿಂಗರ್ ಮತ್ತು ಯೋಗೇಂದ್ರ ಸಿಂಗ್ ಪಾಶ್ಚಾತೀಕರಣಕ್ಕೆ ಬದಲಾಗಿ“ ಆಧುನೀಕರಣ ‘ ಎಂಬ ಪದಕ್ಕೆ ಹೆಚ್ಚು ಮಹತ್ವ ನೀಡಿದರು . ಆದರೆ ಎಂ.ಎನ್.ಶ್ರೀನಿವಾಸ್ ಆಧುನೀಕರಣ ಪದವು ವ್ಯಕ್ತಿನಿಷ್ಠವಾಗಿದೆ ಆದರೆ ಪಾಶ್ಚಾತೀಕರಣ ಹೆಚ್ಚು ವಸ್ತು ನಿಷ್ಠತೆ ಹೊಂದಿದೆ ಎಂದು ಅಭಿಪ್ರಾಯಪಡುತ್ತಾರೆ .

4 ) ಪೀಟರ್‌ಬರ್ಗ್ ಪ್ರಕಾರ ಎಂಬುದು ತಾತ್ವಿಕವಾಗಿ ಸಡಿಲವಾದ ಪರಿಕಲ್ಪನೆ . ಇದರಲ್ಲಿ ಯಾವುದೇ ನಿರ್ದಿಷ್ಟ ಸಿದ್ಧಾಂತವಿಲ್ಲ ಮತ್ತು ಯಾವುದೇ ಪರಿಕಲ್ಪನೆಗಳೂ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ . ಪಾಶ್ಚಾತೀಕರಣ

5 ) ರಾಮ ಅಹುಜಾ ಪ್ರಕಾರ ಭಾರತದಲ್ಲಿ ಪಾಶ್ಚಾತೀಕರಣ ಪ್ರಕ್ರಿಯೆ ಸಮರೂಪತೆಯನ್ನು ಹೊಂದಿಲ್ಲ . ಇದರ ವೇಗ ಮತ್ತು ಪ್ರಕಾರಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ . ಕೆಲವರು ಪಾಶ್ಚಿಮಾತ್ಯ ರೀತಿಯನ್ನೇ ಮೈಗೂಡಿಸಿಕೊಂಡರೆ , ಇನ್ನು ಕೆಲವರು ಪಾಶ್ಚಿಮಾತ್ಯ ರೀತಿಯನ್ನು ಸ್ವೀಕರಿಸಿದರೂ , ದೇಶೀಯ ಸಂಸ್ಕೃತಿಯನ್ನು ಕಾಪಾಡಿಕೊಂಡರು . ಉದಾ : ಇಂಗ್ಲೀಷರ ಶಿಕ್ಷಣ , ಉಡುಗೆ ತೊಡುಗೆ ಮುಂತಾದವುಗಳನ್ನು ಅನುಕರಿಸಿದರೂ ಅವರ ಆಹಾರ ಪದ್ಧತಿ , ನೃತ್ಯ , ಭೇಟಿ ಮುಂತಾದವುಗಳನ್ನು ಸ್ವೀಕರಿಸಲಿಲ್ಲ . ಇಂತಹ ವೈವಿಧ್ಯತೆಗಳು ವ್ಯಕ್ತಿನಿಷ್ಠ ಸಂಬಂಧಿತ ಪ್ರಾಮುಖ್ಯತೆಯನ್ನು ಹೊಂದಿದೆ .

6 ) ಡೇನಿಯಲ್ ಲರ್ನರ್ ಪ್ರಕಾರ ಪಾಶ್ಚಾತೀಕರಣದ ಪರಿಕಲ್ಪನೆ ಸೂಕ್ತವಲ್ಲ . ಕೆಲವು ಪ್ರಮುಖವಾದ ಪಾಶ್ಚಿಮಾತ್ಯ ಸಾಧನಗಳು ಎನಿಸಿರುವ ಸಿಡಿಮದ್ದು , ಯಂತ್ರಗಳು ಮತ್ತು ಪೇಪರ್‌ಗಳನ್ನು ಚೀನಾ ದೇಶದವರು ಪರಿಚಯಿಸಿದ್ದಾರೆ . ಈ ರೀತಿ ಸಂಸ್ಕೃತಾನುಕರಣೆ ಮತ್ತು ಪಾಶ್ಚಾತೀಕರಣವು ಹಲವಾರು ಧನಾತ್ಮಕ ಮತ್ತು ಋಣಾತ್ಮಕ ವಿಮರ್ಶೆಗಳನ್ನು ಹೊಂದಿದೆ .

FAQ

1 . ಆಧುನೀಕರಣ ಎಂಬ ಪರಿಕಲ್ಪನೆಯನ್ನು ಪರಿಚಯಿಸಿ ದವರು ಯಾರು ?

‘ ಆಧುನೀಕರಣ ‘ ಎಂಬ ಪರಿಕಲ್ಪನೆಯನ್ನು ಡೇನಿಯಲ್ ಲರ್ನರ್ ಮೊದಲ ಬಾರಿಗೆ ಪರಿಚಯಿಸಿದರು .

2. “ ಜಾಗತೀಕರಣ ” ಎಂಬ ಪರಿಕಲ್ಪನೆಯನ್ನು ಪರಿಚಯಿಸಿ ದವರು ಯಾರು ?

ಹಾರ್ವಡ್ ವಾಣಿಜ್ಯ ಶಾಲೆಯ ನಿವೃತ್ತ ಪ್ರಾಧ್ಯಾಪಕರಾದ ತಿಯೆಡೋರ್ ಲಿವಿಟ್ Theodore Levitt ಪರಿಚಯಿಸಿದರು .

ಇತರೆ ವಿಷಯಗಳು :

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್‌

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

Leave a Reply

Your email address will not be published. Required fields are marked *

rtgh