ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-5 ಗ್ರಾಮಗಳ ಬದಲಾವಣೆ ಮತ್ತು ಅಭಿವೃದ್ಧಿ ನೋಟ್ಸ್‌ | 2nd Puc Sociology 5th Chapter Notes

ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-5 ಗ್ರಾಮಗಳ ಬದಲಾವಣೆ ಮತ್ತು ಅಭಿವೃದ್ಧಿ ನೋಟ್ಸ್‌, 2nd Puc Sociology 5th Chapter Notes Kannada Medium ಭಾರತದಲ್ಲಿ ನಾಗರೀಕರಣ Notes Change and Development of Villages and Urbanisation in India in Kannada Notes Kseeb Solution For Class 12 Sociology Chapter 5 Notes gramagala badalavane mattu abhivruddhi notes

ಅಧ್ಯಾಯ-5 ಗ್ರಾಮಗಳ ಬದಲಾವಣೆ ಮತ್ತು ಅಭಿವೃದ್ಧಿ

ಅಧ್ಯಾಯ-5 ಗ್ರಾಮಗಳ ಬದಲಾವಣೆ ಮತ್ತು ಅಭಿವೃದ್ಧಿ

2nd Puc Sociology Chapter 5 Notes in Kannada

I. ಒಂದು ಅಂಕದ ಪ್ರಶ್ನೆಗಳು :

1. ಗ್ರಾಮೀಣ ಸಮುದಾಯವನ್ನು ನಿರ್ಧರಿಸುವ ಒಂದು ಅಂಶವನ್ನು ತಿಳಿಸಿ .

ಗ್ರಾಮೀಣ ಸಮುದಾಯ ಎಂದು ನಿರ್ಧರಿಸಬೇಕಾದರೆ ಆ ಗ್ರಾಮದಲ್ಲಿ ಸರಿಸುಮಾರು ಐದು ಸಾವಿರ ಅಥವಾ ಅದಕ್ಕಿಂತ ಕಡಿಮೆ ಜನಸಂಖ್ಯೆಯಿದ್ದು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಅವಲಂಬಿತವಾಗಿ , ಶಾಶ್ವತವಾಗಿ ಒಂದು ಭೂಗೋಳಿಕ ಕ್ಷೇತ್ರದಲ್ಲಿ ವಾಸವಾಗಿರುವ ಸಮೂಹವೆಂದು ಹೇಳಬಹುದು .

2. ಗ್ರಾಮೀಣ ಸಮುದಾಯವನ್ನು ಒಂದು ಲಕ್ಷಣವನ್ನು ಬರೆಯಿರಿ .

ಗ್ರಾಮೀಣ ಸಮುದಾಯದ ಒಂದು ಲಕ್ಷಣವೆಂದರೆ ಭಾರತೀಯ ಗ್ರಾಮಗಳು ವಿಸ್ತೀರ್ಣದಲ್ಲಿ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿರುತ್ತದೆ ಮತ್ತು ಜನಸಾಂದ್ರತೆ ಕಡಿಮೆ ಇರುತ್ತದೆ .

3, ಗ್ರಾಮೀಣ ಯಾರು ?

ಗ್ರಾಮಗಳ ಮುಖ್ಯಸ್ಥನನ್ನು ಗ್ರಾಮಿಣಿ ಎಂದು ಕರೆಯುತ್ತಿದ್ದರು . ಗ್ರಾಮಿಣಿಯು ಗ್ರಾಮದ ಸಾಂಪ್ರದಾಯಿಕ ಕಟ್ಟುಪಾಡುಗಳಿಗನುಗುಣವಾಗಿ ಕಾರ್ಯ ನಿರ್ವಹಿಸಬೇಕಿತ್ತು .

4. ಗ್ರಾಮೀಣ ಅಧ್ಯಯನವನ್ನು ಕೈಗೊಂಡ ಇಬ್ಬರು ಸಮಾಜಶಾಸ್ತ್ರಜ್ಞರನ್ನು ತಿಳಿಸಿ,

ಗ್ರಾಮೀಣ ಅಧ್ಯಯನವನ್ನು ಕೈಗೊಂಡ ಇಬ್ಬರು ಸಮಾಜ ಶಾಸ್ತ್ರಜ್ಞರು ಎಂ.ಎನ್ . ಶ್ರೀನಿವಾಸ್ ಮತ್ತು ಎ.ಆರ್‌ . ದೇಸಾಯಿ .

5. ರೂರಲ್ ಸೋಶಿಯಾಲಜಿ ಇನ್ ಇಂಡಿಯಾ ಗ್ರಂಥದ ಕತೃ ಯಾರು ?

‘ ರೂರಲ್ ಸೋಶಿಯಾಲಜಿ ಇನ್ ಇಂಡಿಯಾ ಗ್ರಂಥದ ಕರ್ತೃ ಎ.ಆರ್ . ದೇಸಾಯಿ

6. ನಗರ ಸಮುದಾಯವನ್ನು ವ್ಯಾಖ್ಯಾನಿಸಿ ?

ನಗರ ಸಮುದಾಯವೆಂದರೆ ದೊಡ್ಡಗಾತ್ರದ , ಹೆಚ್ಚು ಜನಸಾಂದ್ರತೆಯುಳ್ಳ ಹಾಗೂ ಸಾಮಾಜಿಕವಾಗಿ ವೈವಿಧ್ಯತೆಯನ್ನು ಹೊಂದಿದ ಜನರ ಶಾಶ್ವತ ನೆಲೆಯಾಗಿದೆ .

7. ಪ್ರಾಚೀನ ಭಾರತದ ಎರಡು ನಗರಗಳನ್ನು ಹೆಸರಿಸಿ .

ಪ್ರಾಚೀನ ಭಾರತದ ಎರಡು ನಗರಗಳು ಹರಪ್ಪ ಮತ್ತು ಮೆಹಂಜೋದಾರೊ .

8. ಗ್ರಾಮೀಣ ಸಮುದಾಯದ ಯಾವುದಾದರೂ ಒಂದು ಸಮಸ್ಯೆಯನ್ನು ತಿಳಿಸಿ .

ಗ್ರಾಮೀಣ ಸಮುದಾಯ ಎದುರಿಸುತ್ತಿರುವ ಒಂದು ಮೂಲಭೂತ ಸಮಸ್ಯೆ ಎಂದರೆ ಅನಕ್ಷರತೆ ಮತ್ತು ಬಡತನ ,

9. ಭಾರತೀಯ ಗ್ರಾಮಗಳು ಪುಟ್ಟ ಗಣರಾಜ್ಯಗಳು ಎಂದವರು ಯಾರು ?

ಭಾರತೀಯ ಗ್ರಾಮಗಳನ್ನು ಪುಟ್ಟಗಣರಾಜ್ಯಗಳು ಎಂದವರು ಚಾರ್ಲ್ಸ್ ಮೆಟಕಾಫ್ ಎಂಬ ಬ್ರಿಟಿಷ್ ಅಧಿಕಾರಿ

2nd Puc Sociology 5th Chapter Notes in Kannada

II . ಎರಡು ಅಂಕದ ಪ್ರಶ್ನೆಗಳು

10. ಭಾರತೀಯ ಗ್ರಾಮಗಳ ಎರಡು ಲಕ್ಷಣಗಳನ್ನು ಬರೆಯಿರಿ

ಭಾರತೀಯ ಗ್ರಾಮಗಳ ಲಕ್ಷಣಗಳು

i ) ಪ್ರಾಥಮಿಕ ಸಂಬಂಧ ( Primary Relation ) ಭಾರತೀಯ ಗ್ರಾಮಗಳಲ್ಲಿ ಮುಖಾಮುಖ ಸಂಬಂಧಗಳ ಅನ್ನೋನ್ಯತೆಯನ್ನು ಕಾಣುತ್ತೇವೆ .

ii ) ಅನೌಪಚಾರಿಕ ಸಾಮಾಜಿಕ ನಿಯಂತ್ರಣ ( Informal Social Control ) ವ್ಯಕ್ತಿಗತ ವರ್ತನೆಯು ಕುಟುಂಬ , ಪರಂಪರೆ , ಸಂಪ್ರದಾಯ , ಧರ್ಮ ಮುಂತಾದವುಗಳಿಂದ ನಿಯಂತ್ರಣ ಕ್ಕೊಳಪಟ್ಟಿದೆ .

11. ಭಾರತೀಯ ನಗರಗಳ ಎರಡು ಸಮಸ್ಯೆಗಳನ್ನು ತಿಳಿಸಿ .

ಭಾರತೀಯ ನಗರಗಳ ಎರಡು ಸಮಸ್ಯೆಗಳು

ಎ ) ಸಾರಿಗೆ ಮತ್ತು ವಾಹನ ದಟ್ಟಣೆಯ ಸಮಸ್ಯೆ : ಭಾರತದ ಎಲ್ಲಾ ನಗರಗಳಲ್ಲಿಯೂ ಈ ಸಮಸ್ಯೆ ಉಲ್ಬಣಗೊಂಡಿದೆ . ಕಾರಣ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಪ್ರತಿದಿನ ಕೆಲಸಗಳಿಗಾಗಿ ಹೋಗಲೇಬೇಕಾದ ಸ್ಥಿತಿ.

ಬಿ ) ನೀರಿನ ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ : ಭಾರತದ ಯಾವುದೇ ದೊಡ್ಡ ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯನ್ನು ಪೂರೈಸಲಾಗುತ್ತಿಲ್ಲ . ಕುಡಿಯುವ ನೀರಿನ ಅಭಾವ ಮತ್ತು ಪೂರೈಕೆಯು ದುಬಾರಿಯದಾಗಿದೆ . ಸುಮಾರು 200 300 ಕಿ.ಮೀ.ಗಳ ದೂರದಿಂದ ನೀರನ್ನು ಪಂಪ್ ಮಾಡಿ ತರಬೇಕಾಗಿದೆ .

12. ಯಾವುದಾದರೂ ಎರಡು ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ತಿಳಿಸಿ .

i) ರಸಗೊಬ್ಬರಗಳಿಗೆ ಸಬ್ಸಿಡಿ ನೀಡುವುದು

ii ) ನೀರಾವರಿ ಒದಗಿಸುವುದು

iii ) ಗ್ರಾಮೀಣ ಉದ್ದಿಮೆಗಳನ್ನು ಗುರ್ತಿಸಿ , ಸಾಲವನ್ನು ನೀಡುವುದು .

iv ) ಭೂಸುಧಾರಣೆ , ಹಸಿರು ಕ್ರಾಂತಿ ಇತ್ಯಾದಿ .

13. NCWC ಯನ್ನು ವಿಸ್ತರಿಸಿ .

NCWC ಯನ್ನು ವಿಸ್ತರಿಸಿದಾಗ The National Social Watch Coalitation ಎಂದಾಗುತ್ತದೆ . ಅಂದರೆ ರಾಷ್ಟ್ರೀಯ ಸಾಮಾಜಿಕ ಕಾವಲು ಒಕ್ಕೂಟ , ರೈತರ ಆತ್ಮಹತ್ಯೆಯ ಪ್ರಕರಣಗಳು ರಾಜ್ಯವು ನೀರನ್ನು ನ್ಯಾಯ ಯುತವಾಗಿ ಹಂಚಿಕೆ ಮಾಡಿಲ್ಲವೆಂಬುದನ್ನು ಪ್ರತಿಫಲಿಸುತ್ತವೆ .

14. ಕೊಳಚೆ ಪ್ರದೇಶ ಎಂದರೇನು ?

ಕೊಳಚೆ ಪ್ರದೇಶವೆಂದರೆ ಶಿಥಿಲಕಟ್ಟಡಗಳು , ಜನದಟ್ಟಣೆಗೆ ಅಸಮರ್ಪಕ ಕಟ್ಟಡಗಳು , ಕಿರಿದಾದ ಓಣಿಗಳು , ಅಸಮರ್ಪಕ ನೆರಳು , ಶೌಚಾಲಯ ಮತ್ತು ಸ್ನಾನಗೃಹಗಳ ಅಭಾವ , ಸಮುದಾಯ ಸೌಕರ್ಯಗಳ ಕೊರತೆ ಅಥವಾ ಇವುಗಳ ಯಾವುದೇ ಒಂದು ಲಕ್ಷಣವನ್ನು ಹೊಂದಿರುವ ಪ್ರದೇಶಗಳು . ಕೊಳಚೆ ಪ್ರದೇಶಗಳನ್ನು ಕೆಳವರ್ಗದ ನೆರೆಹೊರೆ ಯೆಂದು , ಕಡಿಮೆ ಆದಾಯದ ಪ್ರದೇಶಗಳು , ಹಿಂದುಳಿದ ಪ್ರದೇಶಗಳು , ಅನಧಿಕೃತ ಪ್ರದೇಶ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತೇವೆ .

15. ಕೊಳಚೆ ಪ್ರದೇಶದ ಎರಡು ಲಕ್ಷಣಗಳನ್ನು ಬರೆಯಿರಿ .

ಕೊಳಚೆ ಪ್ರದೇಶದ ಎರಡು ಲಕ್ಷಣಗಳು

i ) ಮೂಲಭೂತ ಸೌಕಯ್ಯಗಳ ಕೊರತೆ ( Lack of Public Utilities and Facilities ) ಅಸಮರ್ಪಕ ಒಳಚರಂಡಿ ವ್ಯವಸ್ಥೆ , ಕುಡಿಯುವ ನೀರಿನ ಕೊರತೆ , ವಿದ್ಯುತ್ ಕೊರತೆ , ಆರೋಗ್ಯ ಕೇಂದ್ರಗಳು ಶೌಚಾಲಯಗಳು , ಮಕ್ಕಳ ಆಟದ ಮೈದಾನಗಳು ವಿರಳವಾಗಿ ಕಂಡುಬರುವುದು .

ii ) ಸಾಮಾಜಿಕ ಪ್ರತ್ಯೇಕತೆ ( Apathy and Social Isolation ) ಕೊಳಚೆ ಪ್ರದೇಶಗಳು ನಗರದ ಸಮೀಪದ ಭಾಗವೇ ಆಗಿದ್ದರೂ , ನಗರದ ಜನಸಂಖ್ಯೆಯಿಂದ ಪ್ರತ್ಯೇಕಿಸಲ್ಪಟ್ಟವ ರಾಗಿದ್ದಾರೆ . ಆದ್ದರಿಂದ ಕೊಳಚೆ ಪ್ರದೇಶದ ನಿವಾಸಿಗಳು ತಮ್ಮ ಸ್ಥಿತಿಗತಿಗಳನ್ನು ಉತ್ತಮ ಪಡಿಸಿಕೊಳ್ಳುವುದು ಅಸಾಧ್ಯವಾಗಿದೆ .

16. ಯಾವುದಾದರೂ ಎರಡು ಬಡತನ ನಿರ್ಮೂಲನ ಕಾರ್ಯಗಳನ್ನು ತಿಳಿಸಿ

ಭಾರತದಲ್ಲಿ ಬಡತನವನ್ನು ನಿರ್ಮೂಲನ ಮಾಡಲು ಸರ್ಕಾರವು ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡಿದೆ. ( Integrated Rural Development Programme )

i ) ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕಡುಬಡವರ ಸಾಮಾಜಿಕ ಮತ್ತು ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಲು ಹಾಗೂ ಜನರಲ್ಲಿ ಸ್ವಸಾಮರ್ಥ್ಯವನ್ನು ಬೆಳೆಸುವ ಉದ್ದೇಶವಾಗಿತ್ತು . ಅದಕ್ಕಾಗಿ

ಅ ) ಬಡತನದ ರೇಖೆಗಿಂತಲೂ ಕಡಿಮೆ ಅಥವಾ ಬಹಳ ಹೀನ ಸ್ಥಿತಿಯಲ್ಲಿರುವ ಕುಟುಂಬಗಳನ್ನು ಗುರ್ತಿಸಿ . ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುವುದು .

ಆ ) ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು . ಸ್ವ – ಉದ್ಯೋಗಗಳ ಬೆಳವಣಿಗೆಗೆ ಆದ್ಯತೆ ನೀಡುವುದು .

17. ವಿಶೇಷ ಆರ್ಥಿಕ ವಲಯ ವ್ಯಾಖ್ಯಾನಿಸಿ .

ವಿಶೇಷ ಆರ್ಥಿಕ ವಲಯ ( Special Economic Zone ) ವಿಶೇಷ ಆರ್ಥಿಕ ವಲಯವು ನಿರ್ದಿಷ್ಟವಾದ ಭೌಗೋಳಿಕ ಪ್ರದೇಶಕ್ಕೆ ಮೀಸಲಾಗಿದ್ದು , ರಫ್ತು ಉದ್ದೇಶಕ್ಕಾಗಿ ವಸ್ತುಗಳು ಮತ್ತು ಸೇವೆಗಳ ಉತ್ಪಾದನೆಗಳನ್ನು ಮಾಡುತ್ತಾ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಅನ್ವಯವಾಗುವ ಆರ್ಥಿಕ ಮತ್ತು ಇನ್ನಿತರ ನೀತಿ ನಿಯಮಗಳಿಗಿಂತಲೂ , ವಿಶಿಷ್ಟವಾದ ಪ್ರತ್ಯೇಕ ಆರ್ಥಿಕ ಧೋರಣೆಯನ್ನು ಹೊಂದಿರುವ ಪ್ರದೇಶವಾಗಿವೆ .

18. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತೀಯ ಗ್ರಾಮಗಳ ಎರಡು ಲಕ್ಷಣಗಳನ್ನು ಬರೆಯಿರಿ .

ಬ್ರಿಟಿಷರ ಕಾಲದಲ್ಲಿ ಗ್ರಾಮ ಸಮುದಾಯಗಳ ಲಕ್ಷಣಗಳು ( Village Community in British Period )

i ) ಗ್ರಾಮಗಳಲ್ಲಿ ಸಂಗ್ರಹಿಸುತ್ತಿದ್ದ ಕಂದಾಯದ ಒಂದು ಭಾಗವನ್ನು ಗ್ರಾಮನಿಧಿಗೆ ನೀಡಲಾಗುತ್ತಿದ್ದನ್ನು ಬ್ರಿಟಿಷರು ರದ್ದುಪಡಿಸಿದರು . ಇದರಿಂದಾಗಿ ಗ್ರಾಮ ಪಂಚಾಯ್ತಿ ಗಳು ಮಾಡುತ್ತಿದ್ದ ಗ್ರಾಮಾಭಿವೃದ್ಧಿ ಕಾರಗಳು ಸ್ಥಗಿತಗೊಂಡವು .

ii ) ನಾಗರೀಕ ಹಾಗೂ ಅಪರಾಧಿ ನ್ಯಾಯಾಲಯಗಳ ಸ್ಥಾಪನೆಯಿಂದಾಗಿ ಗ್ರಾಮ ವ್ಯಾಜ್ಯಗಳು ನಗರದಲ್ಲಿರುವ ನ್ಯಾಯಾಲಯಗಳಿಗೆ ವರ್ಗಾಯಿಸಲ್ಪಟ್ಟವು . ನ್ಯಾಯ ಪಂಚಾಯ್ತಿಗಳು ನ್ಯಾಯ ತೀರ್ಮಾನದ ಅಧಿಕಾರದಿಂದ ವಂಚಿತವಾದವು .

2nd Puc Bharathadalli Nagarikarana Notes in Kannada

III . ಐದು ಅಂಕದ ಪ್ರಶ್ನೆಗಳು

19. ಗ್ರಾಮದ ಲಕ್ಷಣಗಳನ್ನು ಪಟ್ಟಿಮಾಡಿರಿ.

i) ಚಿಕ್ಕಗಾತ್ರ : ( Small in Size ) ಭಾರತೀಯ ಗ್ರಾಮಗಳು ಚಿಕ್ಕಗಾತ್ರಗಳದ್ದಾಗಿದೆ . ವಿಸ್ತೀರ್ಣದಲ್ಲಿ ಮತ್ತು ಜನ ಸಂಖ್ಯೆಯಲ್ಲಿ ಚಿಕ್ಕದಾಗಿದೆ ಮತ್ತು ಜನಸಾಂದ್ರತೆಯೂ ಕಡಿಮೆ ಇರುತ್ತದೆ .

ii ) ಪ್ರಾಥಮಿಕ ಸಂಬಂಧ : ( Primary Relation ) ಭಾರತೀಯ ಗ್ರಾಮಗಳಲ್ಲಿ ಮುಖಾಮುಖಿ ಸಂಬಂಧಗಳ ಅನ್ನೋನ್ಯತೆಯನ್ನು ಕಾಣುತ್ತೇವೆ .

iii ) ಸಾಮಾಜಿಕ ಸಮೈಕ್ಯತೆ ( Social Homogenity ) ಗ್ರಾಮವು ಭಾಷೆ , ನಂಬಿಕೆ , ನೈತಿಕ ನಿಯಮ ಮತ್ತು ವರ್ತನಾ ಮಾದರಿಯಲ್ಲಿ ಹೆಚ್ಚು ಏಕರೂಪತೆಯನ್ನು ಹೊಂದಿದೆ . ಗ್ರಾಮಸ್ಥರಲ್ಲಿ ಪರಸ್ಪರ ಹೊಂದಾಣಿಕೆ ಯಿರುವುದರಿಂದಲೇ ಕಸಬುಗಳಲ್ಲಿ ಪರಸ್ಪರ ಸಹಭಾಗಿತ್ವವನ್ನು ಕಾಣುತ್ತೇವೆ ಮತ್ತು ಅವರಲ್ಲಿ ಸಾಮಾನ್ಯ ಆಸಕ್ತಿಯು ಕಂಡುಬರುತ್ತದೆ .

iv ) ಅನೌಪಚಾರಿಕ ಸಾಮಾಜಿಕ ನಿಯಂತ್ರಣ : ( Informal Social Control ) ವ್ಯಕ್ತಿಗತ ವರ್ತನೆಯು ಕುಟುಂಬ , ಪರಂಪರೆ , ಸಂಪ್ರದಾಯಿಕ ಧರ್ಮ ಮುಂತಾದವು ಗಳಿಂದ ನಿಯಂತ್ರಣಕ್ಕೊಳಪಟ್ಟಿದೆ .

v ) ಕೃಷಿ ಮತ್ತು ಕೃಷಿ ಸಂಬಂಧಿತ ವೃತ್ತಿಗಳು : ( Argiculture and its allied Occupation ) ಭಾರತವು ಕೃಷಿ ಪ್ರಧಾನ ದೇಶ ಬಹಳಷ್ಟು ಜನರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ . ಕೃಷಿಯೇ • ಮೂಲ ಉದ್ಯೋಗ ; ಕೃಷಿ ಸಂಬಂಧಿತ ಪಶು ಸಂಗೋಪನೆ , ಪುಷ್ಪ ಕೃಷಿ , ಇತ್ಯಾದಿ ಮತ್ತು ಮೀನುಗಾಗಿಕೆ , ಗಣಿಗಾರಿಕೆ , ಜೇನುಗಾರಿಕೆ ಹಾಗೂ ಗುಡಿಕೈಗಾರಿಕೆಗಳನ್ನು ಮಾಡುತ್ತಾರೆ .

vi ) ನೆರೆಹೊರೆ ಮತ್ತು ಸರಳ ಜೀವನ : ( Role of neighbourhood and Simplicity of life ) ಗ್ರಾಮದಲ್ಲಿ ಜನರು ಸರಳ ಜೀವನ ನಡೆಸುತ್ತಾರೆ . ಅವರ ಸಾಮಾಜಿಕ ಜೀವನದಲ್ಲಿ ನೆರೆಹೊರೆ ಸಂಬಂಧವು ಪ್ರಮುಖ ಪಾತ್ರ ವಹಿಸುತ್ತದೆ.

vii ) ಗ್ರಾಮ ಸ್ವಾಯತ್ತತೆ : ( Village Autonomy ) ಪ್ರತಿಯೊಂದು ಗ್ರಾಮವು ಸಾಪೇಕ್ಷವಾಗಿ ಸ್ವಯಂ ಪೂರ್ಣ ಮತ್ತು ಸ್ವತಂತ್ರವಾಗಿವೆ . ಗ್ರಾಮಗಳು ಇತರರಿಂದ ಪೂರ್ಣವಾಗಿ ಸ್ವತಂತ್ರವಾದ , ತಮಗೆ ಬೇಕಾದ ಎಲ್ಲವನ್ನೂ ಪಡೆದುಕೊಂಡಿರುವ ಗಣರಾಜ್ಯಗಳಾಗಿವೆ . ಆದರೆ ಇತ್ತೀಚಿನ ಅಧ್ಯಯನಗಳು ಈ ಅಭಿಪ್ರಾಯವನ್ನು ಅಲ್ಲಗಳೆದು ಗ್ರಾಮಗಳು ಎಂದೂ ಸ್ವಯಂ ಪೂರ್ಣವಾಗಿಲ್ಲ ಎಂಬ ಅಭಿಪ್ರಾಯ ತಳೆದಿದ್ದಾರೆ .

20. ಗ್ರಾಮ ಅಧ್ಯಯನದ ಮಹತ್ವವನ್ನು ವಿವರಿಸಿ .

ಗ್ರಾಮೀಣ ಅಧ್ಯಯನ ಮತ್ತು ಅವುಗಳ ಮಹತ್ವ : ( Village Studies and their importance ) ಭಾರತವು ಗ್ರಾಮಗಳ ದೇಶ . ಬಹು ಸಂಖ್ಯಾತ ಭಾರತೀಯರು ಗ್ರಾಮಗಳಲ್ಲಿಯೇ ವಾಸಿಸುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಥವಾ ಇಲ್ಲಿರುವ ಲೋಪ ದೋಷಗಳನ್ನು ತಿದ್ದಲು ಗ್ರಾಮ ಅಧ್ಯಯನದ ಅವಶ್ಯಕತೆಯಿದೆ . ಗ್ರಾಮೀಣ ಅಧ್ಯಯನದ ಮಹತ್ವವನ್ನು ಈ ಕೆಳಕಂಡಂತೆ ನಿರೂಪಿಸಬಹುದು .

1. ಕ್ಷೇತ್ರ ಕಾರ್ಯವು ಗ್ರಾಂಥಿಕ ದೃಷ್ಟಿಕೋನಕ್ಕೆ ಪರಿಹಾರವಾಗಿದೆ . ( Field work is an Antidote to Book View ) ಎಂ.ಎನ್ . ಶ್ರೀನಿವಾಸ್ ಮೈಸೂರಿನ ಹತ್ತಿರದ ರಾಮಾಪುರ ಗ್ರಾಮಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಅವರು ಭಾರತೀಯ ರೈತರ ಕೃಷಿ ಚಟುವಟಿಕೆಗಳನ್ನು ತಂತ್ರಜ್ಞಾನ , ಜ್ಞಾನಮಟ್ಟ , ನ್ಯಾಯಿಕ ಮತ್ತು ಸಾಮಾಜಿಕ ಸಂಸ್ಥೆಗಳು ಧರ್ಮ ಜೀವನ ಮಾರ್ಗದ ಹಿನ್ನೆಲೆಯಲ್ಲಿ ಎತ್ತಿತೋರಿಸಿದ್ದಾರೆ ಅವರು ತಮ್ಮ ಅನುಭವವನ್ನು ‘ The Remembered Village ನೆನಪಿಸಿಕೊಂಡ ಗ್ರಾಮ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ . ಅವರ ಪ್ರಕಾರ ಗ್ರಾಮಾಧ್ಯಯನವು ದೇಶದ ಭವಿಷ್ಯವನ್ನು ರೂಪಿಸುವ ಯೋಜನೆಕಾರರು ಗಳಿಗೆ ಉಪಯುಕ್ತವಾಗುತ್ತದೆ . ಹಾಗೂ ಆಡಳಿತಾಧಿಕಾರಿ ಈ ರೀತಿಯ ಅಧ್ಯಯನ ದಿಂದ ಬಂದ ಮಾಹಿತಿಯು ಕ್ಷೇತ್ರಕಾರದ ಅನುಭವದಿಂದ ಸಮಾಜಶಾಸ್ತ್ರಜ್ಞರು ನೀಡಿದ್ದಾಗಿರುವುದರಿಂದ ಶ್ರೇಷ್ಠವಾಗಿರುತ್ತದೆ ಇದು ಯಾವ ಗ್ರಂಥಜ್ಞಾನಕ್ಕೂ ಸರಿಸಾಟಿಯಾಗುವುದಿಲ್ಲ .

2. ಬದಲಾವಣೆಗೆ ಉದ್ದೇಶಪೂರ್ವಕ ಪ್ರತಿರೋಧ ( Calculated opposition to Change )

3. ಸಾಹಿತಿಕ ಪೂರ್ವಗ್ರಹ Literary Bias

4. ಅನಂತರದ ಮೌಲ್ಯಮಾಪನವನ್ನು ದಾಖಲಿಸುವುದು Recording For Later Evalutaion

5 . ವಿಶ್ಲೇಷಣಾತ್ಮಕ ವಿಭಾಗಗಳ ಬೆಳವಣಿಗೆ Development of Analytical Categories

6. ಗ್ರಾಮ ಅಧ್ಯಯನಗಳು ಸಾಮಾಜಿಕ ಸುಧಾರಣೆಗೆ ಸಹಕಾರಿಯಾಗಿದೆ . Village Studies are Important for Social Reformation .

ಯೋಜಿತ ಮತ್ತು ಯೋಜನೇತರ ಬದಲಾವಣೆಗಳ ಪ್ರಭಾವದಿಂದ ಗ್ರಾಮಗಳು ಬದಲಾವಣೆಗೊಳ್ಳುತ್ತಿವೆ . ಹೀಗೆ ಭಾರತದಲ್ಲಿ ಗ್ರಾಮ / ಗ್ರಾಮೀಣ ಸಮುದಾಯಗಳ ಅಧ್ಯಯನದ ಅವಶ್ಯಕತೆಯಿದೆ ಮತ್ತು ಇದು ಮಹತ್ವಪೂರ್ಣದ್ದಾಗಿದೆ .

21. ಭಾರತೀಯ ಗ್ರಾಮಗಳ ಸಾಮಾಜಿಕ ಸಮಸ್ಯೆಗಳನ್ನು ಪಟ್ಟಿಮಾಡಿರಿ .

ಭಾರತೀಯ ಗ್ರಾಮಗಳ ಸಾಮಾಜಿಕ ಸಮಸ್ಯೆಗಳು ( Social Problems of Villages ) ಭಾರತೀಯ ಗ್ರಾಮಗಳ ಹಲವಾರು ಸಮಸ್ಯೆಗಳನ್ನು ಮೂರು ಭಾಗವಾಗಿ ವರ್ಗೀಕರಿಸಿದ್ದಾರೆ . ಅವುಗಳು ಸಾಮಾಜಿಕ , ಆರ್ಥಿಕ ಮತ್ತು ಕೃಷಿ ಸಮಸ್ಯೆಗಳು : ಸಾಮಾಜಿಕ ಸಮಸ್ಯೆಗಳನ್ನು ಪುನಃ ಮೂರು ಭಾಗವಾಗಿ ವಿಂಗಡಿಸಿದ್ದಾರೆ . ಅವು ಬಡತನ , ಅನಕ್ಷರತೆ ಮತ್ತು ಅನಾರೋಗ್ಯ .

ಎ ) ಅನಕ್ಷರತೆ ( Illiteracy ) ಎಲ್ಲಾ ಸಮಸ್ಯೆಗಳಿಗೂ ಮೂಲ ಈ ಅನಕ್ಷರತೆ . ಇದಕ್ಕೆ ಕಾರಣಗಳು ಹಲವಾರು ; ಮೊದಲನೆಯದಾಗಿ ಶೈಕ್ಷಣಿಕ ಸಂಸ್ಥೆಗಳ ಕೊರತೆ , ಗುಣಮಟ್ಟವಿಲ್ಲದ ಶಿಕ್ಷಣ ,ಮಧ್ಯದಲ್ಲೇ ಶಾಲೆ ಬಿಡುವುದು ಇತ್ಯಾದಿ . ಬಹುತೇಕ ಶಾಲೆಗಳು ಸಮರ್ಪಕ ಕಟ್ಟಡ , ಗ್ರಂಥಾಲಯ , ಶಿಕ್ಷಕರು , ಕ್ರೀಡಾಮೈದಾನಗಳಿಲ್ಲದೆ ನರಳುತ್ತಿವೆ . ಭಾರತೀಯ ಸಮಾಜದಲ್ಲಿ ಗ್ರಾಮ ಮತ್ತು ನಗರಗಳಲ್ಲಿ ಅಸಮಾನತೆಯನ್ನು ಕಾಣಬಹುದು . ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು , ನೈರ್ಮಲ್ಯದ ಸೌಲಭ್ಯ , ಸಾರಿಗೆ ಸಂಪರ್ಕಗಳ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಲಭ್ಯವಿಲ್ಲ .

ಬಿ ) ಗ್ರಾಮೀಣ ಬಡತನ ( Rural Poverty ) 1996 ರಲ್ಲಿ ಜಾಗತಿಕ ಬ್ಯಾಂಕ್ ರಾಜಾಸ್ಥಾನದ ಏಳು ಜಿಲ್ಲೆಗಳಲ್ಲಿ ಕ್ಷೇತ್ರಾಧ್ಯಯನ ನಡೆಸಿ ಬಡತನಕ್ಕೆ ಕಾರಣಗಳನ್ನು ಗುರ್ತಿಸಿದೆ . ಅವು ಹೀಗಿವೆ .

1. ಬಡತನ ನಿರ್ಮೂಲನೆ ಕಾರಕ್ರಮಗಳ ಅಸಮರ್ಪಕ ಮತ್ತು ನಿಷ್ಪರಿಣಾಮಕಾರಿ ಅನುಷ್ಠಾನ

2. ಕೃಷಿಯೇತರ ಕಸುಬುಗಳಲ್ಲಿ ಕೆಲವೇ ಜನರ ಪಾಲ್ಗೊಳ್ಳುವಿಕೆ .

3. ನೀರಾವರಿ ಸೌಲಭ್ಯಗಳ ಅಲಭ್ಯತೆ ಮತ್ತು ಅನಿಯತ ಮಳೆ

4. ಪಾರಂಪರಿಕ ವ್ಯವಸಾಯದ ಮೇಲಿನ ಅವಲಂಬನೆ ಮತ್ತು ಅಸಮರ್ಪಕ ಆಧುನಿಕ ಕೌಶಲ್ಯ

5. ಕೃಷಿ ಮಾಡಲು ವಿದ್ಯುಚ್ಛಕ್ತಿಯ ಅಲಭ್ಯತೆ

6. ಗುಣಮಟ್ಟವಲ್ಲದ ಜಾನುವಾರುಗಳು

7. ಅಪೂರ್ಣ ಮತ್ತು ಶೋಷಿತ ಸಾಲದ ಮಾರುಕಟ್ಟೆ ಸಂವಹನ ಸೌಲಭ್ಯಗಳು ಮತ್ತು ಮಾರುಕಟ್ಟೆಗಳು

8. ಉತ್ತಮ ಮಟ್ಟದ ಶಿಕ್ಷಣದ ಕೊರತೆ

9. ಸಮುದಾಯ ನಾಯಕತ್ವದ ಕೊರತೆ

10. ಅಭಿವೃದ್ಧಿ ಚಟುವಟಿಕೆಯಲ್ಲಿ ಮಹಿಳಾ ಸಹಕಾರದ ಕೊರತೆ ಮತ್ತು ಯೋಜಿತ ಕಾಠ್ಯಕ್ರಮದಲ್ಲಿ ಅವರ ಅಸಹಭಾಗಿತ್ವ .

11 . ಅಂತರ್ ಜಾತಿ ಸಂಘರ್ಷಗಳು ಮತ್ತು ಪ್ರತಿಸ್ಪರ್ಧೆ

12. ವಿವಾಹ , ತಿಥಿ , ಮುಂಜಿ , ಹಬ್ಬ ಹರಿದಿನ ಮುಂತಾದ ಅನುತ್ಪಾದಕ ಕಾರ್ಯಗಳ ಮೇಲೆ ಹಣ ಖರ್ಚು ಮಾಡುವುದು .

ಸಿ ) ಆರೋಗ್ಯ ಸಮಸ್ಯೆಗಳು ( Health Problems ) ಭಾರತದ ಗ್ರಾಮಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ ಗ್ರಾಮಗಳಲ್ಲಿ ಜನನ ಮರಣ ದರ ಹೆಚ್ಚಾಗಿದೆ . ಅಪೌಷ್ಟಿಕತೆ ಯಿಂದ ಸಾಂಕ್ರಾಮಿಕ ರೋಗಗಳಾದ ಕಾಲರಾ , ಮಲೇರಿಯಾ , ಡೆಂಗ್ಯೂ , ಅಂಟುರೋಗಗಳ ಹಾವಳಿ ಹೆಚ್ಚು ಅನೈರ್ಮಲ್ಯತೆ ಮದ್ಯಪಾನ ತಂಬಾಕಿನ ಉತ್ಪನ್ನಗಳ ಸೇವನೆಯಿಂದ ಇನ್ನಷ್ಟು ಸಮಸ್ಯೆಗಳಿವೆ ಇತ್ತೀಚೆಗೆ ಎಂಡೋಸಲ್ಫಾನ್ ಎಂಬ ಕೀಟ ನಾಶಕದಿಂದ ಮತ್ತು ರಾಸಾಯನಿಕಗಳಿಂದ ಗ್ರಾಮೀಣ ಜನರ ಆರೋಗ್ಯ ಹಾಳಾಗುತ್ತಿದೆ . ಇವೆಲ್ಲಾ ಗ್ರಾಮಗಳ ಸಾಮಾಜಿಕ ಸಮಸ್ಯೆಗಳು

22. ಭಾರತೀಯ ಗ್ರಾಮಗಳ ಕೃಷಿ ಮತ್ತು ಆರ್ಥಿಕ ಸಮಸ್ಯೆ ಗಳನ್ನು ಪಟ್ಟಿಮಾಡಿರಿ .

ಭಾರತೀಯ ಗ್ರಾಮಗಳ ಆರ್ಥಿಕ ಮತ್ತು ಕೃಷಿ ಸಮಸ್ಯೆಗಳು ( Economic and Agricultural Problems ) ಆಧುನಿಕ ಭಾರತದಲ್ಲಿ ಗ್ರಾಮಗಳ ಆರ್ಥಿಕ ಸಮಸ್ಯೆಗಳು ಹೆಚ್ಚುತ್ತಿವೆ ಕಾರಣ ಆರ್ಥಿಕ ಬೆಳವಣಿಗೆಯು ಪ್ರದೇಶ ಮತ್ತು ವರ್ಗದ ಅಸಮಾನತೆಯನ್ನು ಹೆಚ್ಚಿಸುತ್ತಿದೆ . ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞನಾದ ಅಮರ್ಥ್ಯಸೇನ್‌ರವರ ಪ್ರಕಾರ ‘ ಭಾರತದಲ್ಲಿ ಇದೇ ರೀತಿ ಅಸಮಾನತೆ ಹೆಚ್ಚುತ್ತಿದ್ದರೆ ಭಾರತದ ಅರ್ಥಭಾಗ ಕ್ಯಾಲಿಫೋರ್ನಿಯವಾಗುತ್ತದೆ ‘ , ಇನ್ನರ್ಧ ಭಾಗ ಆಫ್ರಿಕಾದ ಉಪ ಸಹರಾ ಆಗುತ್ತದೆ . ದೇಶದ ಸಂಪತ್ತು ಬರಿದಾಗಿ ದುಃಖ ಹೆಚ್ಚುತ್ತದೆ ಮಾನವನನ್ನು ತುಚ್ಛವಾಗಿ ಕಾಣುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದಿದ್ದಾರೆ ನಮ್ಮ ದೇಶದ ಪ್ರಮುಖ ಆರ್ಥಿಕ ಮತ್ತು ಕೃಷಿ ಸಮಸ್ಯೆಗಳು ಇಂತಿವೆ .

i ) ತಾರತಮ್ಯದ ಕಾರ್ಯ ನೀತಿಗಳು ( Discriminatory Policies . ) ಸರ್ಕಾರದ ಕೃಷಿ ನೀತಿಗಳಿಂದ ರೈತರು ಪ್ರತಿಕೂಲವಾದ ಸ್ಥಿತಿಗೆ ತಲುಪಿದ್ದಾರೆ . ಏಕೆಂದರೆ ರೈತ ಸಮೂಹದ ವಿರುದ್ಧ ತಾರತಮ್ಯ ಕಾರ್ಯನೀತಿಯನ್ನು ಅನುಸರಿಸಿದೆ . ರೈತರ ಮತ್ತು ಕೃಷಿ – ಕಾರ್ಮಿಕರ ನಿವ್ವಳ ಆದಾಯದ ನಡುವಿನ ಅಂತರ ಸಾಕಷ್ಟು ಹೆಚ್ಚಿವೆ . ಹಾಗೆಯೇ ಕೃಷಿ ಮತ್ತು ಇತರ ವೃತ್ತಿಗಳ ನಡುವಿನ ಅಂತರವೂ ಹೆಚ್ಚಿದೆ . 1990 ರ ದಶಕದಲ್ಲಿ ರೈತರ ಸ್ಥಿತಿ ಉಲ್ಬಣಗೊಂಡಿತು . ಎಡೆಬಿಡದ ಬರಗಾಲದಿಂದ ಸಂಕಷ್ಟಕ್ಕೆ ಗುರಿಯಾದರು ಕಡಿಮೆ ಉತ್ಪಾದನೆ ಆದಾಗಲೂ , ಉತ್ತಮ ಬೆಲೆಯನ್ನು ನಿಗದಿಪಡಿಸದೆ ಕೃಷಿಕ್ಷೇತ್ರವನ್ನು ಉಪೇಕ್ಷಿಸಿದವು .

ii ) ಕೃಷಿ ಕ್ಷೇತ್ರದ ಸಂದಿಗ್ಧ ಸ್ಥಿತಿ ( Vulnerability of the Agriculture ) ಕೃಷಿ , ವಿದ್ಯುಚ್ಛಕ್ತಿ , ನೀರು , ರಸಗೊಬ್ಬರ , ಕೀಟನಾಶಕ ಮತ್ತು ಕನಿಷ್ಟ ಕೂಲಿಗೆ ಬೇಕಾದ ಉತ್ಪಾದನಾಂಶಗಳ ಬೆಲೆಯನ್ನು ರಾಜ್ಯದ ಕಾರ್ಯನೀತಿಯು ವಿಧಿಸುತ್ತದೆ . ಸುಲಭವಾಗಿ ಬ್ಯಾಂಕ್‌ನಿಂದ ಸಾಲ ಪಡೆಯಲಾಗದೆ ಲೇವಾದೇವಿದಾರರನ್ನು ಸಂಪರ್ಕಿಸಬೇಕಾಗುತ್ತದೆ. ಬೆಲೆಯ ಅನಿಶ್ಚಿತತೆಯಿಂದ ಮತ್ತು ಅಪರಿಪೂರ್ಣ ಮಾರುಕಟ್ಟೆ ವ್ಯವಸ್ಥೆಯಿಂದ ರೈತರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .

iii ) ವ್ಯವಸಾಯಕ್ಕೆ ತಗಲುವ ಖರ್ಚಿನ ಹೆಚ್ಚಳ ಮತ್ತು ಪರಿಸರ ( Increase in Cost in Cultivation ) ಒಂದು ಕಡೆ ಬೆಲೆ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚಳ ವುಂಟಾದ್ದರಿಂದ ರೈತರು ವ್ಯವಸಾಯ ಮಾಡಲು ಹೆಚ್ಚಿನ ಬೆಲೆ ತೆರಬೇಕಾಗುವುದು ಸಣ್ಣ ರೈತರು ದುಬಾರಿ ಕೃಷಿ ಖರ್ಚನ್ನು ಎದುರಿಸಬೇಕಾಗುತ್ತದೆ . ಮಳೆ ಆಧಾರಿತ ಕೃಷಿ ಭೂಮಿಯಲ್ಲಿ ಮಟ್ಟ ಕ್ಷೀಣಿಸಿ , ಬೆಳೆಗೆ ತಗಲುವ ಹಾನಿಕಾರಕ ರೋಗಗಳ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ .

iv ) ರಾಜ್ಯದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಉದ್ದೇಶ ಪೂರ್ವಕವಾಗಿ ಹಿಂಪಡೆಯುವಿಕೆ : ( Deliberate withdrawal of Welfare Programmes from State. ) ರೈತರಿಗೆ ಕೊಟ್ಟ ಅನುದಾನವನ್ನು ಭಾಗಶಃ ನಿಲ್ಲಿಸುವುದು , ಕೃಷಿಗೆ ಕೊಟ್ಟ ವಿದ್ಯುಚ್ಛಕ್ತಿ ಸೌಲಭ್ಯವನ್ನು ವಾಪಸ್ ಪಡೆಯುವುದು ಮತ್ತು ವಿದ್ಯುಚ್ಛಕ್ತಿ ತೆರಿಗೆಯನ್ನು ಹೆಚ್ಚು ಮಾಡುವುದು – ಈ ರೀತಿಯ ಕಾರ್ಯಕ್ರಮಗಳಿಂದ ರೈತರು ಕೃಷಿಯ ಬಗ್ಗೆ ನಿರಾಸಕ್ತಿ ತಳೆದು , ಸಂಕಟಪಡುತ್ತಾರೆ . ಇದರಿಂದ ಕೃಷಿ ಬಿಕ್ಕಟ್ಟು ತಲೆದೋರಿ ಉತ್ಪನ್ನದ ಅವನತಿ ಆಗುವುದುಂಟು .

v ) ಜಾಗತೀಕರಣದ ಸ್ಪರ್ಧೆ ಮತ್ತು ದೊಡ್ಡ ಬಂಡವಾಳ ಶಾಹಿಗಳಿಂದ ಆಗುವ ಶೋಷಣೆ ( Globalization resultant Competition and Exploitation by Big Capitalists ) ರೈತರ ಆತ್ಮಹತ್ಯೆಗೆ ಕಾರಣಗಳು ಜಾಗತಿಕ ವಾಣಿಜ್ಯ ಸಂಘಟನೆ , ತಳಿವಿಜ್ಞಾನ ವೈವಿಧ್ಯತೆ , ರೈತ ಬೆಳೆದ ಬೆಳೆಗೆ ಬೆಲೆ ಕುಸಿತ , ಖೋಟಾ ಬೀಜಗಳು ಬೆಳೆನಷ್ಟ ಇತ್ಯಾದಿ . ವಿಶ್ವ ವಾಣಿಜ್ಯ ಸಂಘಟನೆ ಆಧಾರಿತ ಮಾದರಿ ಕೃಷಿ ಪದ್ಧತಿ ಅಥವಾ ಮಿಕಿನ್‌ ಮಾದರಿ ಅಭಿವೃದ್ಧಿಯು ಉದ್ಯಮ ಆಧಾರಿ ಕೃಷಿ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿರುವುದು ಕೃಷಿ ಬಿಕ್ಕಟ್ಟಿಗೆ ಕಂಟಕವಾಗಿದೆ . ಇದು ಪರಿಸರ ಮತ್ತು ಲಕ್ಷಾಂತರ ರೈತರಿಗೆ ಮಾರಕವಾಗಿದೆ . ವ್ಯವಸಾಯದ ಖರ್ಚು ಹೆಚ್ಚಾಗಿ ರೈತ ಕಂಗಲಾಗುತ್ತಾನೆ . ಇಷ್ಟಲ್ಲದೆ ಕೊಳವೆ ಬಾವಿಗಾಗಿ , ಪಂಪ್‌ಸೆಟ್‌ಗಾಗಿ ಸಾಲ ಮಾಡುವ ಅನಿವಾರತೆಯುಂಟಾಗಿ ರೈತನು ಇನ್ನಷ್ಟು ಸಾಲಗಾರನಾಗಿ ಉಳಿಯುವಂತಾಯಿತು .

vi ) ವೈಚಿತ್ರ್ಯ ಬ್ಯಾಂಕಿಂಗ್ ನಿಯಮಗಳು ಮತ್ತು ಸಾಂಸ್ಥಿಕ ಮೂಲಗಳಿಂದ ಸಾಲದ ಅಲಭ್ಯತೆ ‘ ( Peculiar Banking Practices and Non availability of Loans from Institutional Sources ) ಸಾಮಾನ್ಯವಾಗಿ ರೈತರಿಗೆ ವಾಣಿಜ್ಯ ಬ್ಯಾಂಕ್‌ಗಳಿಂದ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಸಾಲ ಪಡೆಯ ಬಹುದಾಗಿದೆ . ಆದರೆ ಸಾಲ ನೀಡುವಾಗ ಬ್ಯಾಂಕ್ ಕೇಳುವ ಎಲ್ಲಾ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೆ ರೈತ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ . ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕ್‌ ಸಹ ರೈತರಿಗೆ ಸಾಲ ನೀಡುವಲ್ಲಿ ಹಿಂದೆ ಬಿದ್ದಿದೆ . ಆದ್ದರಿಂದ ಹೆಚ್ಚಿನ ಬಡ್ಡಿಗೆ ಲೇವಾದೇವಿಗಾರರಿಂದ ಸಾಲ ಪಡೆಯುವ ರೈತ ಕಂಗಾಲಾಗುತ್ತಾನೆ .

vii ) ಸಹಕಾರಿ ವಲಯದ ವೈಫಲ್ಯತೆ ( The Failure of Co – operation Sector ) ಸರ್ಕಾರದ ಪ್ರೋತ್ಸಾಹವಿಲ್ಲದೆ ಸಹಕಾರಿ ಬ್ಯಾಂಕುಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಲಾಗದೆ ಸೋತು ಹೋಗಿವೆ . ರೈತರನ್ನು ಬಡ್ಡಿ ವ್ಯಾಪಾರಿಗಳಿಂದ ರಕ್ಷಿಸಲು ಸಹಕಾರಿ ವಲಯದ ಬ್ಯಾಂಕ್‌ಗಳು ಸಹಾಯ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿದ್ದರೂ ಪ್ರಯೋಜನಕಾರಿಯಾಗಿಲ್ಲ .

viii ) ನೀರಾವರಿಗೆ ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆ ( Dependency on ground water for Irrigation ) ಕೃಷಿಗೆ ನೀರಾವರಿಯು ಅತ್ಯವಶ್ಯಕ . 1990 ರಿಂದ ಕೆರೆ ಕಟ್ಟೆಗಳು ಒಣಗಿ ಹೋಗುತ್ತಿರುವುದರಿಂದ ರೈತರು ಬಾವಿ ಹಾಗೂ ಕೊಳವೆ ಬಾವಿಗಳನ್ನು ಆಶ್ರಯಿಸ ಬೇಕಾಯಿತು . ಆದರೆ ಸಾಕಷ್ಟು ಮಳೆ ಬೀಳದೆ ಅಂತರ್ಜಲ ಕಡಿಮೆಯಾಗುತ್ತಿರುವುದು ನಿಜಕ್ಕೂ ಸಮಸ್ಯೆಯಾಗಿದೆ .

23. ಸಮುದಾಯ ಅಭಿವೃದ್ಧಿ ಯೋಜನೆಯನ್ನು ವಿವರಿಸಿ .

ಸಮುದಾಯ ಅಭಿವೃದ್ಧಿ ಯೋಜನೆಗಳು Community Development Programme ಸಮುದಾಯ ಅಭಿವೃದ್ಧಿ ಕಾರ್ಯಕ್ರಮವು 1952 , ಅಕ್ಟೋಬರ್ 2 ರಂದು ಉದ್ಘಾಟಿಸಲಾಯಿತು . ಈ ಯೋಜನೆಗಳನ್ನು ಗ್ರಾಮಸ್ಥರು ತಮ್ಮದೇ ಸ್ವ – ಸಹಾಯ ಪದ್ಧತಿಯ ನೆರವಿನಿಂದ ಪ್ರಗತಿ ಸಾಧಿಸಲು ಅನುಷ್ಠಾನ ಗೊಳಿಸಿರುವ ಕಾರ್ಯಕ್ರಮವಾಗಿದೆ . ಈ ಯೋಜನೆಗಳಿಗೆ ಸರ್ಕಾರ ಕೇವಲ ತಾಂತ್ರಿಕ ಮಾರ್ಗದರ್ಶನ ಮತ್ತು ಧನ ಸಹಾಯವನ್ನು ನೀಡುತ್ತದೆ . ಯೋಜನಾ ಆಯೋಗವು ತಮ್ಮ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಸಮುದಾಯಿಕ ಅಭಿವೃದ್ಧಿ ಗ್ರಾಮೀಣ ಸಾಮಾಜಿಕ ಮತ್ತು ಆರ್ಥಿಕ ಜೀವನ ಕ್ರಮಗಳನ್ನು ಮಾರ್ಪಡಿಸುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಿದೆ .

ಸಮುದಾಯಿಕ ಅಭಿವೃದ್ಧಿ ಕಾರ್ಯಕ್ರಮಗಳ even Objectives of Community Develop ment Programmes ಕೃಷಿ ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಗರಿಷ್ಠ ಪ್ರಮಾಣದ ಉತ್ಪಾದನೆ . ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ದೀರ್ಘಾವಧಿಯ ಉದ್ದೇಶವು ಎಲ್ಲಾ ಗ್ರಾಮಗಳಲ್ಲಿ ಸಂಪೂರ್ಣವಾದ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು , ಮಾನವ ಸಂಪನ್ಮೂಲಗಳ ಸದ್ಬಳಕೆ , ಗ್ರಾಮಗಳ ನಾಗರೀಕರಿಗೆ ಯಾವುದೇ ಸೌಲಭ್ಯಗಳ ಕೊರತೆಯಿಲ್ಲದಂತೆ ಮಾಡುವುದು . ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಮುದಾಯದ ಅಭಿವೃದ್ಧಿ ಮಾಡುವುದರಿಂದ ತಮ್ಮ ರಾಜ್ಯವನ್ನು ಕಲ್ಯಾಣಾಭಿವೃದ್ಧಿಗಳಿಂದ ಆದರ್ಶ ರಾಜ್ಯವೆಂದು ಗುರ್ತಿಸಿಕೊಳ್ಳುವುದು .

ಪ್ರತಿಯೊಬ್ಬರಿಗೂ ಅಗತ್ಯವಾದಷ್ಟು ಆಹಾರವನ್ನು ಪಡೆದುಕೊಳ್ಳುವ ಮತ್ತು ಪ್ರತಿಯೊಬ್ಬರೂ ಸಾಮಾಜಿಕ , ನೈತಿಕ ಹಾಗೂ ಆರ್ಥಿಕವಾಗಿ ಪ್ರಗತಿ ಹೊಂದುವ ಉದ್ದೇಶವಾಗಿದೆ . 1952 ರಲ್ಲಿ ಪ್ರಾರಂಭವಾದ ಈ ಸಮುದಾಯ ಅಭಿವೃದ್ಧಿ ಯೋಜನೆಯೂ ಪೂರ್ಣವಾಗಿ ಯಶಸ್ವಿಯಾಗದಿದ್ದರೂ , ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಯಿತು . ಸ್ವತಂತ್ರ ಭಾರತದ ಪ್ರಪ್ರಥಮ ಸಮಗ್ರ ಅಭಿವೃದ್ಧಿ ಯೋಜನೆ ಎಂದು ಪ್ರಸಿದ್ಧಿ ಪಡೆಯಿತು . ಇದು ಇಡೀ ರಾಷ್ಟ್ರಕ್ಕೆ ಅನ್ವಯವಾಗುವಂತೆ ಕೈಗೊಂಡ ಯೋಜನೆಯಾಗಿತ್ತು . ಅಭಿವೃದ್ಧಿ ಕಾರ್ಯಗಳಲ್ಲಿ ಜನರೇ ಕೇಂದ್ರ ಬಿಂದುಗಳಾ ಗಿರುತ್ತಾರೆಂಬುದನ್ನು ಮತ್ತು ಅದರ ಸಹಭಾಗತ್ವವನ್ನು ಪಡೆಯಬೇಕೆಂದು ಯೋಜಿಸಲಾಗಿತ್ತು . ಗ್ರಾಮಸೇವಕರಂತಹ ವಿವಿಧೋದ್ದೇಶ ಕಾರ್ಯಕರ್ತರನ್ನು ಸೃಷ್ಟಿಸಿತು . ತರಬೇತಿ ಪಡೆದ ಕಾರ್ಯಕರ್ತರು ಪ್ರಾಮಾಣಿಕವಾಗಿ ಸ್ಪಂದಿಸಿದರೆ ಯೋಜನೆಯು ಕಾರ್ಯಗತವಾಗುತ್ತದೆ ಎಂಬುದು ಅರಿವಾಯಿತು . ಕೃಷಿ ವಿಧಾನದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಅಗತ್ಯ ಎಂಬುದು ಗೊತ್ತಾಯಿತು . ಈ ಅಭಿವೃದ್ಧಿ ಯೋಜನೆಯಿಂದ ಶಾಲೆ , ಆಸ್ಪತ್ರೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣಕೇಂದ್ರ ಕೃಷಿ ಸಾಲಸಂಘಗಳು ಮತ್ತು ಇತರ ಸಹಕಾರಿ ಸಂಘಗಳ ಸ್ಥಾಪನೆಗೆ ಅವಕಾಶವಾಯಿತು .

24. ವಿಶೇಷ ಆರ್ಥಿಕ ವಲಯದ ಬಗ್ಗೆ ಟಿಪ್ಪಣಿ ಬರೆಯಿರಿ .

Special Economic Zone ವಿಶೇಷ ಆರ್ಥಿಕ ವಲಯ SEZ ವು ಜಾಗತೀಕರಣ ಕೊಟ್ಟಿರುವ ಅವಕಾಶಗಳಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರದೇಶವೊಂದನ್ನು ಅಭಿವೃದ್ಧಿಯ ಜಾಡಿನಲ್ಲಿ ಮುಂದುವರೆಸುವ ಒಂದು ಯೋಜನೆಯಾಗಿದೆ . ದೇಶದ ಹಲವು ಭಾಗಗಳಲ್ಲಿ ಇದು ಪ್ರಾರಂಭವಾಯಿತು . 2003 ರಲ್ಲಿ ಕರ್ನಾಟಕದಲ್ಲಿಯೂ ಪ್ರಾರಂಭವಾಗಿದೆ . ಈ ವಿಶೇಷ ಆರ್ಥಿಕ ವಲಯವು ನಿರ್ದಿಷ್ಟವಾದ ಭೌಗೋಳೀಕ ಪ್ರದೇಶಕ್ಕೆ ಮೀಸಲಾಗಿದೆ ಇಲ್ಲಿ ರಫ್ತು ಮಾಡುವ ಉದ್ದೇಶಕ್ಕಾಗಿ ವಸ್ತುಗಳು ಮತ್ತು ಸೇವೆಗಳ ಉತ್ಪಾದನೆಯನ್ನು ಮಾಡುತ್ತಾರೆ . ಇದು ದೇಶದ ವಿವಿಧ ಭಾಗಗಳಲ್ಲಿ ಇದು ಪ್ರಾರಂಭವಾಯಿತು . 2003 ರಲ್ಲಿ ಕರ್ನಾಟಕದಲ್ಲಿಯೂ ಪ್ರಾರಂಭವಾಗಿದೆ .

ಈ ವಿಶೇಷ ಆರ್ಥಿಕ ವಲಯವು ನಿರ್ದಿಷ್ಟವಾದ ಭೌಗೋಳಿಕ ಪ್ರದೇಶಕ್ಕೆ ಮೀಸಲಾಗಿದೆ . ಇಲ್ಲಿ ರಫ್ತು ಮಾಡುವ ಉದ್ದೇಶಕ್ಕಾಗಿ ವಸ್ತುಗಳು ಮತ್ತು ಸೇವೆಗಳ ಉತ್ಪಾದನೆಯನ್ನು ಮಾಡುತ್ತಾರೆ . ಇದು ದೇಶದ ವಿವಿಧ ಭಾಗಗಳಲ್ಲಿ ಅನ್ವಯ ವಾಗುವ ಆರ್ಥಿಕ ಮತ್ತು ಇನ್ನಿತರ ನೀತಿ ನಿಯಮಗಳಿಗಿಂತಲೂ ವಿಶಿಷ್ಟವಾದ ಪ್ರತ್ಯೇಕ ಆರ್ಥಿಕ ಧೋರಣೆಯನ್ನು ಹೊಂದಿರುವ ಪ್ರದೇಶವಾಗಿದೆ . ವಿಶೇಷ ಆರ್ಥಿಕ ವಲಯಗಳಲ್ಲಿ ವಿವಿಧ ಉತ್ಪಾದನಾ ಸಂಸ್ಥೆಗಳು ಕಾರ್ಯವನ್ನು ನಿರ್ವಹಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ . ಸರ್ಕಾರವು ಇಂತಹ ಸಂಸ್ಥೆಗಳಿಗೆ ಅನೇಕ ರಿಯಾಯಿತಿಯನ್ನು ನೀಡುತ್ತಾರೆ . ಉದಾ : ತೆರಿಗೆ ವಿನಾಯಿತಿ , ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಒದಗಿಸುವುದು , ನೆಲ – ಜಲಗಳ ಸಮರ್ಪಕವಾದ ಬಳಕೆ ಕೆಲವು ಕಾನೂನು ನಿಯಮಗಳನ್ನು ಸಡಿಲಗೊಳಿಸುವುದು ಇತ್ಯಾದಿ ವಿಶೇಷ ಆರ್ಥಿಕ ವಲಯಗಳನ್ನು ಎರಡು ಪ್ರಕಾರವಾಗಿ ಗುರ್ತಿಸಬಹುದು . ಅವು ಸಾರ್ವಜನಿಕ ವಲಯ , ಖಾಸಗಿ ವಲಯ ಅಥವಾ ಜಂಟಿ ಸಹಭಾಗಿತ್ವದಲ್ಲಿ ಸರ್ಕಾರದ ಜೊತೆ ಸ್ಥಾಪಿಸುವುದು .

ವಿಶೇಷ ಆರ್ಥಿಕ ವಲಯಗಳ ಮೂಲ ಉದ್ದೇಶ ಕೈಗಾರಿಕೆಗಳಿಗೆ ಕೃಷಿ Agrobased Industries ಉತ್ತೇಜನ ನೀಡಿ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವುದು . ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ . ಈ ವಿಶೇಷ ಆರ್ಥಿಕ ವಲಯವು ಆದಾಯದ ವ್ಯತ್ಯಾಸಗಳಿಗೆ ಹೆಚ್ಚು ಅವಕಾಶ ನೀಡಿದೆ . ಶ್ರೀಮಂತರು ಭಾರೀ ಶ್ರೀಮಂತರಾಗುತ್ತಾರೆ . ಕಾರ್ಮಿಕರ ಶೋಷಣೆ ಯಾಗುತ್ತಿದೆ . ಕೃಷಿ ಆರ್ಥಿಕತೆಯಿಂದ ಜೀವನೋಪಾಯವನ್ನು ಪಡೆಯಲು ಜನ ವಲಸೆ ಹೋಗುತ್ತಾರೆ . ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ನೀತಿಯ ಧೋರಣೆಗಳು ರೈತ ವಿರೋಧಿಯಾಗಿವೆ . ರಾಜ್ಯ ಸರ್ಕಾರ ಭೂಒತ್ತುವರಿ ಕಾಯ್ದೆಯನ್ನು ಬಳಸಿಕೊಂಡು ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಉದ್ದೇಶಗಳಿಗೆ ಭೂಮಿಯನ್ನು ಸ್ವಾದೀನ ಮಾಡಿಕೊಳ್ಳುತ್ತಿದೆ . ಇದರಿಂದ ರೈತರು ಭೂ ಹೀನರಾಗುತ್ತಿದ್ದಾರೆ . ದೇಶದಾದ್ಯಂತ ಎಲ್ಲಾ ರೈತರು , ಕೃಷಿ ಕಾರ್ಮಿಕರು ತೀವ್ರ ಆಕ್ರೋಶ ಹಾಗೂ ಪ್ರತಿಭಟನೆ ನಡೆಸಿದರೂ ಸರ್ಕಾರ ಭೂಮಿಯ ಸ್ವಾಧೀನವನ್ನು ಕೈಬಿಟ್ಟಿಲ್ಲ .

25. ಭಾರತೀಯ ಗ್ರಾಮಗಳ ಮೇಲೆ ಬ್ರಿಟೀಷ್ ಆಳ್ವಿಕೆಯ ಪ್ರಭಾವವನ್ನು ವಿವರಿಸಿ

ಭಾರತೀಯ ಗ್ರಾಮಗಳ ಮೇಲೆ ಬ್ರಿಟೀಷ್ ಆಳ್ವಿಕೆಯ ಪ್ರಭಾವಗಳು ( The influence of British rule on Indian Villages ) ಗ್ರಾಮಗಳು ತಮ್ಮ ಮೂಲ ಸ್ವರೂಪಗಳನ್ನು ಕಳೆದುಕೊಳ್ಳಲು ಬ್ರಿಟಿಷರು ಪರಿಚಯಿಸಿದ ಕಾಠ್ಯಕ್ರಮಗಳು ಹಾಗ ಧೋರಣೆಗಳು ಕಾರಣವಾಯಿತು . ಗ್ರಾಮ ಪಂಚಾಯ್ತಿಗಳು ನಿರ್ವಹಿಸುತ್ತಿದ್ದ ಹಲವಾರು ಕಾರಗಳು ಕೇಂದ್ರ ಸರ್ಕಾರ ಮತ್ತು ಅದರ ಅಧೀನ ಇಲಾಖೆಗಳಿಗೆ ಹಸ್ತಾಂತರಿಸಲ್ಪಟ್ಟವು . ಇದರಿಂದ ಗ್ರಾಮಾಡಳಿತ ವ್ಯವಸ್ಥೆಯು ನಶಿಸಲಾರಂಭಿಸಿತು . ಇದಕ್ಕೆ ಕಾರಣಗಳು .

1. ಗ್ರಾಮಗಳಲ್ಲಿ ಸಂಗ್ರಹಿಸುತ್ತಿದ್ದ ಕಂದಾಯದ ಒಂದು ಭಾಗವನ್ನು ಗ್ರಾಮನಿಧಿಗೆ ನೀಡಲಾಗುತ್ತಿದ್ದುದನ್ನು ಬ್ರಿಟಿಷರು ರದ್ದುಪಡಿಸಿ ಇದರಿಂದಾಗಿ ಗ್ರಾಮ ಪಂಚಾಯ್ತಿಗಳು ಮಾಡುತ್ತಿದ್ದ ಗ್ರಾಮಾಭಿವೃದ್ಧಿ ಕಾರಗಳು ಸ್ಥಗಿತಗೊಂಡವು .

2. ನಾಗರೀಕ ಹಾಗೂ ಅಪರಾಧಿ ನ್ಯಾಯಾಲಗಳ ಸ್ಥಾಪನೆಯಾಗಿ ಸ್ಥಳೀಯ ಗ್ರಾಮಗಳ ಹಿರಿಯರು ಗ್ರಾಮಕ್ಕೆ ಸಂಬಂಧಿಸಿದ ಆತಂಕ ನ್ಯಾಯ ತೀರ್ಮಾನದ ಅಧಿಕಾರದಿಂದ ವಂಚಿತರಾದರು . ನಗರದಲ್ಲಿನ ನ್ಯಾಯಾಲಯಗಳಿಗೆ ಗ್ರಾಮಗಳ ವ್ಯಾಜ್ಯಗಳು ವರ್ಗಾಯಿಸಲ್ಪಟ್ಟವು .

3. ಗ್ರಾಮ – ನಗರ ವಲಸೆಯು ಸಹ ಸ್ವಲ್ಪ ಪ್ರಮಾಣದಲ್ಲಿ ಗ್ರಾಮ ಪಂಚಾಯ್ತಿ ವಿನಾಶಕ್ಕೆ ಕಾರಣವಾಯಿತು . ಗ್ರಾಮಗಳಲ್ಲಿ ಅವಕಾಶಗಳು ಕಡಿಮೆ ಎಂದು ಜನರು ನಗರಕ್ಕೆ ವಲಸೆ ಬಂದಿದ್ದರಿಂದ ಗ್ರಾಮಗಳ ಮಹತ್ವ ಮತ್ತು ಪ್ರಾಬಲ್ಯ ಕಡಿಮೆಯಾಯಿತು .

4. ಬ್ರಿಟಿಷರು ನೂತನ ಕಂದಾಯ ಸಂಗ್ರಹಣೆ ಮತ್ತು ಭೂ ಹಿಡುವಳಿ ಪದ್ಧತಿಯನ್ನು ಜಾರಿಗೆ ತಂದರು . ಗ್ರಾಮಗಳಲ್ಲಿ ಜಮೀನ್ದಾರಿ ಪದ್ಧತಿಯು ಅಸಮಾನತೆಯನ್ನು ಸೃಷ್ಟಿಸಿತು . ಗ್ರಾಮೀಣ ಸಮುದಾಯದ ವರ್ಗಗಳ ನಡುವಿನ ಸಂಬಂಧವನ್ನು ಹದಗೆಡುವಂತೆ ಮಾಡಿತು .

5. ಬ್ರಿಟಿಷರು ಭಾರತೀಯ ಗ್ರಾಮೀಣ ಕೃಷಿಯನ್ನು ರಾಷ್ಟ್ರೀಯ ಕೃಷಿ ಉತ್ಪಾದನೆಯನ್ನು ಜಾಗತಿಕ ಮಾರುಕಟ್ಟೆಗೆ ತರಲಾಯಿತು . ಕೃಷಿಯನ್ನು ಭಾರತೀಯ ಅರ್ಥ ವ್ಯವಸ್ಥೆಯ ಪ್ರಮುಖ ಕೇಂದ್ರ ಬಿಂದುವಾಗಿ ಮಾಡಲಾಯಿತು .

6. ಬ್ರಿಟಿಷ್ ಆಳ್ವಿಕೆಯಲ್ಲಿ ಕೈಗಾರಿಕೀಕರಣ ಮತ್ತು ಆಧುನಿಕ ತಾಂತ್ರಿಕತೆಯ ಲಾಭದಿಂದ ಗ್ರಾಮಗಳ ಪ್ರಗತಿ ಕಡಿಮೆಯಾಗತೊಡಗಿತು .

2nd Puc Sociology Notes in Kannada Chapter 5

IV . ಹತ್ತು ಅಂಕದ ಪ್ರಶ್ನೆಗಳು

26. ಯುಗಾಂತರದಲ್ಲಿ ಭಾರತೀಯ ಗ್ರಾಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ .

ಯುಗಾಂತರದಲ್ಲಿ ಭಾರತೀಯ ಗ್ರಾಮಗಳು Indian Villages through the ages . ಗ್ರಾಮಗಳು ಯಾವಾಗ ಅಸ್ತಿತ್ವಕ್ಕೆ ಬಂದಿತು ಎಂದು ಹೇಳಲು ಸಾಧ್ಯವಾಗದಿದ್ದರೂ ಕೃಷಿಯ ಅರ್ಥ ವ್ಯವಸ್ಥೆಯಿಂದ ಗ್ರಾಮಗಳು ಯಾವಾಗ ಉದಯವಾಯಿತೆಂಬುದನ್ನು ಅಂದಾಜಿನಿಂದ ಗುರ್ತಿಸಲಾಗಿದೆ .

1 . ವೇದಗಳ ಕಾಲದಲ್ಲಿ ಗ್ರಾಮಗಳು ( Village in Vedic Times ) ಗ್ರಾಮಗಳು ವೇದಗಳ ಪೂರ್ವ ಕಾಲದಿಂದಲೂ ಅಸ್ತಿತ್ವದಲ್ಲಿತ್ತು . ವೇದ ಪೂರ್ವ ಕಾಲದಲ್ಲಿ ಬುಡಕಟ್ಟು ಸಮುದಾಯವು ತನ್ನ ಮುಖ್ಯಸ್ಥನ ನೇತೃತ್ವದಲ್ಲಿ ಸರ್ಂಟನೆ ಗೊಂಡಿತ್ತು . ಋಗೈದದ ಪ್ರಕಾರ ಗ್ರಾಮ ಸಮಾಜವು ವಿವಿಧ ಚಲನಾತ್ಮಕ ಸ್ತರೀಕೃತ ಸಮೂಹಗಳನ್ನು ಹೊಂದಿತ್ತು . ಕುಟುಂಬವು ಸಮಾಜದ ಅತ್ಯಂತ ಚಿಕ್ಕ ಘಟಕವಾಗಿತ್ತು . ಅನೇಕ ಕುಟುಂಬಗಳು ಸೇರಿ ಗ್ರಾಮ ಉಂಟಾಗುತ್ತಿತ್ತು . ಗ್ರಾಮದ ಮುಖ್ಯಸ್ಥನನ್ನು ಗ್ರಾಮೀಣ ‘ ಎಂದು ಕರೆಯುತ್ತಿದ್ದರು . ಗ್ರಾಮದ ಆಡಳಿತವನ್ನು ನೋಡಿಕೊಳ್ಳಲು ‘ ಸಭಾ ‘ ಮತ್ತು “ ಸಮಿತಿ’ಗಳು ಇದ್ದವು .

2. ರಾಮಾಯಣದಲ್ಲಿ ಗ್ರಾಮದ ವಿವರಣೆ ( Description of Village in Ramayana ) ರಾಮಾಯಣದಲ್ಲಿ ಎರಡು ಪ್ರಕಾರದ ಗ್ರಾಮಗಳನ್ನು ಗುರ್ತಿಸಿದ್ದಾರೆ . ‘ ಘೋಷ್ ‘ ಮತ್ತು ‘ ಗ್ರಾಮ ‘ ಘೋಷ್‌ನ ಮುಖ್ಯಸ್ಥ ಘೋಷ್ ಮಹತ್ತಾರ್ ಮತ್ತು ಗ್ರಾಮದ ಮುಖ್ಯಸ್ಥ ‘ ಗ್ರಾಮ ಮಹತ್ತಾರ್‌ ‘ ಘೋಷ್‌ಕ್ಕಿಂತ ಚಿಕ್ಕದು , ‘ ಗ್ರಾಮಿಣಿ ‘ ಎಂಬ ಮತ್ತೊಬ್ಬ ಗ್ರಾಮೀಣ ಸಂಪ್ರದಾಯಿಕ ಕಟ್ಟುಪಾಡುಗಳಿಗನುಸಾರವಾಗಿ ಕಾರ್ಯ ನಿರ್ವಹಿಸಬೇಕಿತ್ತು . ಗ್ರಾಮಿಣಿಯನ್ನು ರಾಜನು ನೇಮಿಸುತ್ತಿದ್ದನು .

ಗ್ರಾಮಿಣಿಯ ಕರ್ತವ್ಯಗಳು :

1. ಗ್ರಾಮದ ರಕ್ಷಣೆ Village defence

2. ಕಂದಾಯ ವಸೂಲಾತಿ Revenue Collection

3. ನ್ಯಾಯ ತೀರ್ಮಾನ Judicial Functions

3. ಮಹಾಭಾರತದಲ್ಲಿ ಗ್ರಾಮದ ವಿವರಣೆ ( Description of Village in Mahabharath ) ಸ್ಥಳೀಯ ಸಮೂಹಗಳ ರಕ್ಷಣೆಯ ಉದ್ದೇಶದಿಂದ ಕಟ್ಟಲಾದ ಕೋಟೆಗಳಿವೆ . ಕೋಟೆಯ ವ್ಯಾಪ್ತಿಯ ಜನ ಸಮೂಹವನ್ನು ಗ್ರಾಮ ಎನ್ನುತ್ತಿದ್ದರು . ಗ್ರಾಮಗಳನ್ನು ವಿವಿಧ ಸಮೂಹಗಳಾಗಿ ವರ್ಗೀಕರಿಸಲಾಗಿದೆ . ಹತ್ತು ಗ್ರಾಮಗಳ ಸಮೂಹಕ್ಕೆ ‘ ದಶಗ್ರಾಮ ‘ ಮತ್ತು ಇದರ ಮುಖ್ಯಸ್ಥನನ್ನು ‘ ದಶಗ್ರಾಮಿಣಿ ‘ ಎಂದು ಕರೆಯಲಾಗಿತ್ತು .

4. ಸ್ಮೃತಿಯಲ್ಲಿ ಗ್ರಾಮದ ವಿವರಣೆ ( Description of Villages in Smrithis ) ಮನುಸ್ಮೃತಿಯಲ್ಲಿ ಗ್ರಾಮ ಮತ್ತು ಅಂತರ್‌ಗ್ರಾಮ ಸಂಘಟನೆಯ ಬಗ್ಗೆ ವಿವರಣೆಯನ್ನು ನೋಡುತ್ತೇವೆ . ‘ ಗ್ರಾಮಿಕ್ ‘ ಗ್ರಾಮದ ಮುಖ್ಯಸ್ಥ ಗ್ರಾಮಿಕ್ ಗ್ರಾಮಾಡಳಿತದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿತ್ತು . ಹತ್ತು ಗ್ರಾಮಗಳ ಮುಖ್ಯಸ್ಥ ದಶಗ್ರಾಮಾಧಿಪತಿ ಇಪತ್ತು ಗ್ರಾಮಗಳ ಅಧಿಪತಿ ವಿಶಾಂತಿ ಹಾಗೆಯೇ 100 ಗ್ರಾಮಗಳ ಮುಖ್ಯಸ್ಥ ಶತಗ್ರಾಮಾಧಿಪತಿ 1000 ಗ್ರಾಮಗಳ ಮುಖ್ಯಸ್ಥ ‘ ಸಹಸ್ರ ಗ್ರಾಮಾಧಿ ಪತಿ ಹೀಗೆ ವಿವಿಧ ಹಂತಗಳಲ್ಲಿ ವರ್ಗೀಕರಿಸಲಾಗಿತ್ತು .

ಕೌಟಿಲ್ಯನ ಅರ್ಥಶಾಸ್ತ್ರವು ಗ್ರಾಮದ ಎಲ್ಲೆಗಳನ್ನು ನದಿಗಳು , ಬೆಟ್ಟ , ಕಾಡು , ಕೆರೆಕುಂಟೆ , ಮರಗಳು ಮುಂತಾದವುಗಳಿಂದ ಗೊತ್ತು ಮಾಡುತ್ತದೆ . 400 ಗ್ರಾಮಗಳನ್ನು ದೋಣಮುಖ ‘ ಎಂದೂ , 800 ಗ್ರಾಮಗಳನ್ನು ‘ ಮಹಾಗ್ರಾಮ ‘ ಹತ್ತು ಗ್ರಾಮಗಳ ಸಮೂಹವನ್ನು ಸಂಗ್ರಹಣ ‘ 200 ಗ್ರಾಮಗಳನ್ನು ‘ ಕರ್ವಟಿಕಾ ‘ ಎಂದು ಕರೆಯಲಾಗುತ್ತಿತ್ತು . ‘ ಸ್ತುತ್ನಜ ‘ ಎಂಬ ಗ್ರಾಮ ವ್ಯಾಪಾರಕ್ಕೆ ಮತ್ತು ನೆರೆಹೊರೆ ಗ್ರಾಮಗಳ ಸಂತೆಗಳ ಕೇಂದ್ರವಾಗಿತ್ತು. ಜನಸಂಖ್ಯೆಯ ಗಾತ್ರದ ಆಧಾರದ ಮೇಲೆ 1. ಜೇಷ್ಟಗ್ರಾಮ 2. ಮಧ್ಯಮಗ್ರಾಮ

3. ಕನಿಷ್ಠಗ್ರಾಮ ಎಂಬ ಮೂರು ವಿಭಾಗಗಳಿದ್ದವು . ಕಂದಾಯಕ್ಕನುಸಾರವಾಗಿ ನಾಲ್ಕು ವಿಭಾಗಗಳ ಗ್ರಾಮಗಳನ್ನು ಕೌಟಿಲ್ಯನು ವರ್ಗೀಕರಿಸಿದ್ದನು .

1. ಗ್ರಾಮ ಗ್ರಾಸ : ಕಂದಾಯವನ್ನು ನೀಡುವ ಸಾಮಾನ್ಯ ಗ್ರಾಮ .

2 . ಪರಿಹಾರಕ್ ಗ್ರಾಮಗಳು : ಅರ್ಚಕರು ಮತ್ತು ಶಿಕ್ಷಕರ ಸೇವೆಗೆ ಪ್ರತಿಯಾಗಿ ಸಂಬಳದ ರೂಪದಲ್ಲಿ ನೀಡಲಾದ ಕಂದಾಯ ಮುಕ್ತ ಹಳ್ಳಿಗಳು .

3. ಆಯುಧಜ ಗ್ರಾಮಗಳು : ಸನ್ನದ್ಧ ಯೋಧರನ್ನು ಪೂರೈಸುವ ಕಂದಾಯ ಮುಕ್ತ ಗ್ರಾಮಗಳು .

4. ಕಂದಾಯ ಕಟ್ಟುವ ಗ್ರಾಮ : ತೆರಿಗೆಯನ್ನು ವಸ್ತು ಅಥವಾ ಹಣದ ರೂಪದಲ್ಲಿ ಕೊಡುವ ಗ್ರಾಮಗಳು . ಗ್ರಾಮದ ಆಡಳಿತಾತ್ಮಕ ಸಿಬ್ಬಂದಿಗಳಿಗೆ ಕಂದಾಯ ಮುಕ್ತ ಭೂಮಿಯನ್ನು ನೀಡಲಾಗಿತ್ತು . ಅದನ್ನು ಬೇರೆಯವರಿಗೆ ಮಾರುವಂತಿಲ್ಲ .

5. ಮಧ್ಯಕಾಲದಲ್ಲಿ ಗ್ರಾಮಗಳ ವಿವರಣೆ ( Description of Villages in Medieval period ) ಈಗಿನ ಕಾಲದಲ್ಲಿ ಗ್ರಾಮವು ಒಂದು ರಾಜಕೀಯ ಘಟಕವಾಗಿತ್ತು ನಗರ , ಪರಗಣ ಮತ್ತು ಪ್ರಾಂತ್ಯಗಳೊಂದಿಗೆ ಬೆಸೆಯಲ್ಪಟ್ಟಿತ್ತು . ಪ್ರತಿ ಗ್ರಾಮದಲ್ಲೂ ಚೌಕಿದಾರ್ ‘ ಇರುತ್ತಿದ್ದನು . ರಾಜ್ಯದ ಅಧಿಕಾರಿಗಳು ಗ್ರಾಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಲೆ ಹಾಕುತ್ತಿರಲಿಲ್ಲ . ಗ್ರಾಮ ಪಂಚಾಯಿತಿ ಭದ್ರತೆ , ನೈರ್ಮಲ್ಯ , ಶಿಕ್ಷಣ ಮುಂತಾದ ಕಾರ್ಯಗಳನ್ನು ತಾವೇ ನಿರ್ವಹಿಸುತ್ತಿದ್ದವು .

6. ಬ್ರಿಟಿಷ್ ಪೂರ್ವ ಕಾಲದಲ್ಲಿ ಗ್ರಾಮ ಸಮುದಾಯಗಳ ಲಕ್ಷಣಗಳು ( Characteristics of village Communities in Pre British Period )

i ) ಕೃಷಿ ಮತ್ತು ಕರಕುಶಲತೆ ( Agriculture and Handicrafts ) ಕೃಷಿ ಮತ್ತು ಕರಕುಶಲಕಲೆ ಆಧಾರಿತ ಸ್ವಯಂ ಪೂರ್ಣ ಗ್ರಾಮವು ಬ್ರಿಟಿಷ್ ಪೂರ್ವಕಾಲದ ಪ್ರಮುಖ ಲಕ್ಷಣವಾಗಿದೆ . ಸ್ವಯಂ ಪೂರ್ಣ ಗ್ರಾಮವು ಪ್ರಮುಖ ಆರ್ಥಿಕ ಘಟಕವಾಗಿದ್ದು ಭಾರತದಲ್ಲಿ ಬಹುಕಾಲದವರೆಗೂ ಅಸ್ತಿತ್ವದಲ್ಲಿತ್ತು .

ii ) ಗ್ರಾಮಗಳು ಪುಟ್ಟ ಗಣರಾಜ್ಯಗಳಾಗಿದ್ದವು ಸ್ವಯಂ ಪರಿಪೂರ್ಣ ಭಾರತೀಯ ಗ್ರಾಮಗಳು ಒಂದೇ ರೀತಿಯಲ್ಲಿ ಮುಂದುವರಿಯುತ್ತಿವೆ .

iii ) ಸಾಮಾನ್ಯ ಭೂ ಹಿಡುವಳಿ ( Common holdings ) ರೈತ ಕುಟುಂಬವು ಅನುವಂಶೀಯ ಭೂ ಹಿಡುವಳಿ ಪಡೆಯುವ ಮತ್ತು ಕೃಷಿ ಮಾಡುವ ಹಕ್ಕನ್ನು ಅನುಭವಿಸಿ ಕೊಂಡು ಬರುತ್ತಿದ್ದರು . ಯಾವುದೇ ಅಡಚಣೆಯಿಲ್ಲದೆ ನಿರಾತಂಕವಾಗಿ ಶತಶತಮಾನದವರೆಗೂ ಮುನ್ನಡೆಯುತ್ತಿತ್ತು .

iv ) ಸ್ವಾವಲಂಬನೆ ( Self – Sufficiency ) ಗ್ರಾಮವು ಆರ್ಥಿಕವಾಗಿ ಸ್ವಾವಲಂಬಿಯಾಗಿ ಸ್ಥಳೀಯ ಶ್ರಮಿಕರಿಂದ ಉತ್ಪಾದನೆಯಾಗುತ್ತಿತ್ತು . ಸಂಪನ್ಮೂಲಗಳನ್ನು ಸ್ಥಳೀಯರೇ ಬಳಕೆ ಮಾಡುತ್ತಿದ್ದರು . ಪ್ರತಿ ಗ್ರಾಮದವರೂ ತಮಗೆ ಬೇಕಾದುದನ್ನು ತಾವೇ ಉತ್ಪಾದಿಸಿ ಬಳಸಿಕೊಳ್ಳುತ್ತಿದ್ದರು . ಸ್ವತಂತ್ರವಾಗಿ ಉತ್ಪಾದನೆ ಮಾಡಿ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವ ‘ ವಸ್ತು ವಿನಿಮಯ ಪದ್ಧತಿಯು ಭಾರತೀಯ ಸಮಾಜದಲ್ಲಿತ್ತು .

v ) ಗ್ರಾಮಗಳ ಮುಖ್ಯ ನಿವಾಸಿಗರು ( Chief inhafitants of villages ) ಗ್ರಾಮಗಳಲ್ಲಿ ಎಲ್ಲಾ ವಿಧದ ವಿವಿಧ ವರ್ಗದ ನಿವಾಸಿಗರು ವಾಸಿಸುತ್ತಿದ್ದರು . ಗ್ರಾಮಲೆಕ್ಕಿಗರು , ಪೋಲೀಸ್ , ತೆರಿಗೆ ಸಂಗ್ರಹಕಾರರು ಧಾರ್ಮಿಕ ಕಾರ್ಯ ಮಾಡುವವರು , ಕುಂಬಾರ , ಕಮ್ಮಾರ , ಚಿನಿವಾರ , ಕ್ಷೌರಿಕ , ದೋಬಿ ಇತ್ಯಾದಿ .

vi ) ಸರಳತೆ ಮತ್ತು ಜಡತೆ ( Simplicity and Unchange bleness ) ಸ್ವಾವಲಂಬಿ ಸಮುದಾಯಗಳಲ್ಲಿ ಉತ್ಪಾದನ ಸಂಘಟನೆಯು ಸರಳತೆಯಿಂದ ಕೂಡಿತ್ತು . ಸಮುದಾಯಗಳು ನಿರಂತರವಾಗಿ ವಸ್ತುಗಳನ್ನು ಮನರುತ್ಪಾದಿಸುತ್ತದೆ , ಮತ್ತು ಅನಿರೀಕ್ಷಿತವಾಗಿ ತೊಡಕು ಉಂಟಾದರೂ ಪನಃ ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ . ಭಾರತೀಯ ಗ್ರಾಮಗಳು ಚಲನಶೀಲ , ಅಂತರ್‌ ಅವಲಂಬಿತ ಮತ್ತು ವಿಶಾಲ ಜಗತ್ತಿನ ಒಂದು ಭಾಗವಾಗಿದೆ .

27. ಭಾರತೀಯ ಗ್ರಾಮಗಳ ಲಕ್ಷಣಗಳನ್ನು ವಿವರಿಸಿ .

1 ) ಪ್ರಾಥಮಿಕ ಸಂಬಂಧ ( Primary Relation ) ಭಾರತೀಯ ಗ್ರಾಮಗಳಲ್ಲಿ ಮುಖಾಮುಖಿ ಸಂಬಂಧಗಳ ಅನ್ನೋನ್ಯತೆಯನ್ನು ಕಾಣುತ್ತೇವೆ .

ii ) ಅನೌಪಚಾರಿಕ ಸಾಮಾಜಿಕ ನಿಯಂತ್ರಣ ( Informal Social Control ) ವ್ಯಕ್ತಿಗತ ವರ್ತನೆಯು ಕುಟುಂಬ , ಪರಂಪರೆ , ಸಂಪ್ರದಾಯ , ಧರ್ಮ ಮುಂತಾದವುಗಳಿಂದ ನಿಯಂತ್ರಣ ಕ್ಕೊಳಪಟ್ಟಿದೆ .

ಗ್ರಾಮದ ಲಕ್ಷಣಗಳು

i ) ಚಿಕ್ಕಗಾತ್ರ : ( Small in Size ) ಭಾರತೀಯ ಗ್ರಾಮಗಳು ಚಿಕ್ಕಗಾತಗಳದ್ದಾಗಿದೆ . ವಿಸ್ತೀರ್ಣದಲ್ಲಿ ಮತ್ತು ಜನಸ೦ಖ್ಯೆಯಲ್ಲಿ ಚಿಕ್ಕದಾಗಿದೆ ಮತ್ತು ಜನಸಾಂದ್ರತೆಯೂ ಕಡಿಮೆ ಇರುತ್ತದೆ .

ii ) ಪ್ರಾಥಮಿಕ ಸಂಬಂಧ : ( Primary Relation ) ಭಾರತೀಯ ಗ್ರಾಮಗಳಲ್ಲಿ ಮುಖಾಮುಖಿ ಸಂಬಂಧಗಳ ಅನ್ನೋನ್ಯತೆಯನ್ನು ಕಾಣುತ್ತೇವೆ .

iii ) ಸಾಮಾಜಿಕ ಸಮೈಕ್ಯತೆ : ( Social Homogenaity ) ಗಾಮವು ಭಾಷೆ , ನಂಬಿಕೆ , ನೈತಿಕ ನಿಯಮ ಮತ್ತು ವರ್ತನಾ ಮಾದರಿಯಲ್ಲಿ ಹೆಚ್ಚು ಏಕರೂಪತೆಯನ್ನು ಹೊಂದಿದೆ . ಗ್ರಾಮಸ್ಥರಲ್ಲಿ ಪರಸ್ಪರ ಹೊಂದಾಣಿಕೆ ಯಿರುವುದರಿಂದಲೇ ಕಸಬುಗಳಲ್ಲಿ ಪರಸ್ಪರ ಸಹಭಾಗಿತ್ವವನ್ನು ಕಾಣುತ್ತೇವೆ ಮತ್ತು ಅವರಲ್ಲಿ ಸಾಮಾನ್ಯ ಆಸಕ್ತಿಯು ಕಂಡು ಬರುತ್ತದೆ .

iv ) ಅನೌಪಚಾರಿಕ ಸಮಾಜಿಕ ನಿಯಂತ್ರಣ : ( Informal Social Control ) ವ್ಯಕ್ತಿಗತ ವರ್ತನೆಯು ಕುಟುಂಬ , ಪರಂಪರೆ , ಸಂಪ್ರದಾಯಿಕ ಧರ್ಮ ಮುಂತಾದವು ಗಳಿಂದ ನಿಯಂತ್ರಣಕ್ಕೊಳಪಟ್ಟಿದೆ .

v ) ಕೃಷಿ ಮತ್ತು ಕೃಷಿ ಸಂಬಂಧಿತ ವೃತ್ತಿಗಳು : ( Argiculture and its allied Occupation ) ಭಾರತವು ಕೃಷಿ ಪ್ರಧಾನ ದೇಶ . ಬಹಳಷ್ಟು ಜನರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ . ಕೃಷಿಯೇ ಮೂಲ ಉದ್ಯೋಗ ಕೃಷಿ ಸಂಬಂಧಿತ ಪಶು ಸಂಗೋಪನೆ , ಪುಷ್ಪ ಕೃಷಿ , ಇತ್ಯಾದಿ ಮತ್ತು ಮೀನುಗಾಗಿಕೆ , ಗಣಿಗಾರಿಕೆ , ಜೇನುಗಾರಿಕೆ ಹಾಗೂ ಗುಡಿಕೈಗಾರಿಕೆಗಳನ್ನು ಮಾಡುತ್ತಾರೆ .

vi ) ನೆರೆಹೊರೆ ಮತ್ತು ಸರಳ ಜೀವನ : ( Role of neighbourhood and Simplicity of life ) ಗ್ರಾಮದಲ್ಲಿ ಜನರು ಸರಳ ಜೀವನ ನಡೆಸುತ್ತಾರೆ . ಅವರ ಸಾಮಾಜಿಕ ಜೀವನದಲ್ಲಿ ನೆರೆಹೊರೆ ಸಂಬಂಧವು ಪ್ರಮುಖ ಪಾತ್ರ ವಹಿಸುತ್ತದೆ

vi ) ಗ್ರಾಮ ಸ್ವಾಯತ್ತತೆ : ( Village Autonomy ) ಪ್ರತಿಯೊಂದು ಗ್ರಾಮವು ಸಾಪೇಕ್ಷವಾಗಿ ಸ್ವಯಂ ಪೂರ್ಣ ಮತ್ತು ಸ್ವತಂತ್ರವಾಗಿವೆ . ಗ್ರಾಮಗಳು ಇತರರಿಂದ ಪೂರ್ಣವಾಗಿ ಸ್ವತಂತ್ರವಾದ , ತಮಗೆ ಬೇಕಾದ ಎಲ್ಲವನ್ನೂ ಪಡೆದುಕೊಂಡಿರುವ ಗಣರಾಜ್ಯಗಳಾಗಿವೆ . ಆದರೆ ಇತ್ತೀಚಿನ ಅಧ್ಯಯನಗಳು ಈ ಅಭಿಪ್ರಾಯವನ್ನು ಅಲ್ಲಗಳೆದು ಗ್ರಾಮಗಳು ಎಂದೂ ಸ್ವಯಂ ಪೂರ್ಣವಾಗಿಲ್ಲ ಎಂಬ ಅಭಿಪ್ರಾಯ ತಳೆದಿದ್ದಾರೆ .

ಯುಗಾಂತರದಲ್ಲಿ ಭಾರತೀಯ ಗ್ರಾಮಗಳು ( Indian Villages through the ages ) ಗ್ರಾಮಗಳು ಯಾವಾಗ ಅಸ್ತಿತ್ವಕ್ಕೆ ಬಂದಿತು ಎಂದು ಹೇಳಲು ಸಾಧ್ಯವಾಗದಿದ್ದರೂ ಕೃಷಿಯ ಅರ್ಥ ವ್ಯವಸ್ಥೆಯಿಂದ ಗ್ರಾಮಗಳು ಯಾವಾಗ ಉದಯವಾಯಿತೆಂಬುದನ್ನು ಅಂದಾಜಿನಿಂದ ಗುರ್ತಿಸಲಾಗಿದೆ .

1. ವೇದಗಳ ಕಾಲದಲ್ಲಿ ಗ್ರಾಮಗಳು ( Villagein Vedic Times ) ಗ್ರಾಮಗಳು ವೇದಗಳ ಪೂರ್ವ ಕಾಲದಿಂದಲೂ ಅಸ್ತಿತ್ವದಲ್ಲಿತ್ತು . ವೇದ ಪೂರ್ವ ಕಾಲದಲ್ಲಿ ಬುಡಕಟ್ಟು ಸಮುದಾಯವು ತನ್ನ ಮುಖ್ಯಸ್ಥನ ನೇತೃತ್ವದಲ್ಲಿ ಸರ್ಂಟನೆ ಗೊಂಡಿತ್ತು . ಋಗೈದದ ಪ್ರಕಾರ ಗ್ರಾಮ ಸಮಾಜವು ವಿವಿಧ ಚಲನಾತ್ಮಕ ಸ್ತರೀಕೃತ ಸಮೂಹಗಳನ್ನು ಹೊಂದಿತ್ತು . ಕುಟುಂಬವು ಸಮಾಜದ ಅತ್ಯಂತ ಚಿಕ್ಕ ಘಟಕವಾಗಿತ್ತು . ಅನೇಕ ಕುಟುಂಬಗಳು ಸೇರಿ ಗ್ರಾಮ ಉಂಟಾಗುತ್ತಿತ್ತು . ಗ್ರಾಮದ ಮುಖ್ಯಸ್ಥನನ್ನು ಗ್ರಾಮಿಣಿ ‘ ಎಂದು ಕರೆಯುತ್ತಿದ್ದರು ಗ್ರಾಮದ ಆಡಳಿತವನ್ನು ನೋಡಿಕೊಳ್ಳಲು ಸಭಾ ‘ ಮತ್ತು “ ಸಮಿತಿಗಳು ಇದ್ದವು .

2. ರಾಮಾಯಣದಲ್ಲಿ ಗ್ರಾಮದ ವಿವರಣೆ ( Description of Village in Ramayana ) ರಾಮಾಯಣದಲ್ಲಿ ಎರಡು ಪ್ರಕಾರದ ಗ್ರಾಮಗಳನ್ನು ಗುರ್ತಿಸಿದ್ದಾರೆ . ‘ ಘೋಷ್ ‘ ಮತ್ತು ‘ ಗ್ರಾಮ ‘ , ಘೋಷ್‌ನ ಮುಖ್ಯಸ್ಥ ಘೋಷ್ ಮಹತ್ತಾರ್ ಮತ್ತು ಗ್ರಾಮದ ಮುಖ್ಯಸ್ಥ ‘ ಗ್ರಾಮ ಮಹತ್ತಾರ್ ‘ ಘೋಷ್‌ಕ್ಕಿಂತ ಚಿಕ್ಕದು . “ ಗ್ರಾಮಿಣಿ ‘ ಎಂಬ ಮತ್ತೊಬ್ಬ ಗ್ರಾಮೀಣ ಸಂಪ್ರದಾಯಿಕ ಕಟ್ಟುಪಾಡುಗಳಿಗನುಸಾರವಾಗಿ ಕಾರ್ಯ ನಿರ್ವಹಿಸಬೇಕಿತ್ತು . ಗ್ರಾಮಿಣಿಯನ್ನು ರಾಜನು ನೇಮಿಸುತ್ತಿದ್ದನು .

ಗ್ರಾಮಿಣಿಯ ಕರ್ತವ್ಯಗಳು : Functions

1. ಗ್ರಾಮದ ರಕ್ಷಣೆ Village defence

2 . ಕಂದಾಯ ವಸೂಲಾತಿ Revenue Collection

3. ನ್ಯಾಯ ತೀರ್ಮಾನ Judicial Functions

3. ಮಹಾಭಾರತದಲ್ಲಿ ಗ್ರಾಮದ ವಿವರಣೆ Description of Village in Mahabharath ಸ್ಥಳೀಯ ಸಮೂಹಗಳ ರಕ್ಷಣೆಯ ಉದ್ದೇಶದಿಂದ ಕಟ್ಟಲಾದ ಕೋಟೆಗಳಿವೆ . ಕೋಟೆಯ ವ್ಯಾಪ್ತಿಯ ಜನ ಸಮೂಹವನ್ನು ಗ್ರಾಮ ಎನ್ನುತ್ತಿದ್ದರು . ಗ್ರಾಮಗಳನ್ನು ವಿವಿಧ ಸಮೂಹಗಳಾಗಿ ವರ್ಗೀಕರಿಸಲಾಗಿದೆ . ಹತ್ತು ಗ್ರಾಮಗಳ ಸಮೂಹಕ್ಕೆ ‘ ದಶಗ್ರಾಮ ‘ ಮತ್ತು ಇದರ ಮುಖ್ಯಸ್ಥನನ್ನು ‘ ದಶಗ್ರಾಮಿಣಿ ‘ ಎಂದು ಕರೆಯಲಾಗಿತ್ತು .

4. ಕೃತಿಯಲ್ಲಿ ಗ್ರಾಮದ ವಿವರಣೆ ( Description of Villages in Smrithis ) ಮನುಸ್ಮೃತಿಯಲ್ಲಿ ಗ್ರಾಮ ಮತ್ತು ಅಂತರ್‌ಗ್ರಾಮ ಸಂಘಟನೆಯ ಬಗ್ಗೆ ವಿವರಣೆಯನ್ನು ನೋಡುತ್ತೇವೆ . ‘ ಗ್ರಾಮಿಕ್ ‘ ಗ್ರಾಮದ ಮುಖ್ಯಸ್ಥ ಗ್ರಾಮಿಕ್ ಗ್ರಾಮಾಡಳಿತದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿತ್ತು . ಹತ್ತು ಗ್ರಾಮಗಳ ಮುಖ್ಯಸ್ಥ ದಶಗ್ರಾಮಾಧಿಪತಿ ಇಪ್ಪತ್ತು ಗ್ರಾಮಗಳ ಅಧಿಪತಿ ವಿಶಾಂತಿ ಹಾಗೆಯೇ 100 ಗ್ರಾಮಗಳ ಮುಖ್ಯಸ್ಥ ಶತಗ್ರಾಮಾಧಿಪತಿ , 1000 ಗ್ರಾಮಗಳ ಮುಖ್ಯಸ್ಥ ‘ ಸಹಸ್ರ ಗ್ರಾಮಾಧಿಪತಿ ‘ ಹೀಗೆ ವಿವಿಧ ಹಂತಗಳಲ್ಲಿ ವರ್ಗೀಕರಿಸಲಾಗಿತ್ತು .

ಕೌಟಿಲ್ಯನ ಅರ್ಥಶಾಸ್ತ್ರವು ಗ್ರಾಮದ ಎಲ್ಲೆಗಳನ್ನು ನದಿಗಳು , ಬೆಟ್ಟ , ಕಾಡು , ಕೆರೆಕುಂಟೆ , ಮರಗಳು ಮುಂತಾದವುಗಳಿಂದ ಗೊತ್ತು ಮಾಡುತ್ತದೆ . 400 ಗ್ರಾಮಗಳನ್ನು ‘ ದ್ರೋಣಮುಖ ‘ ಎಂದೂ , 800 ಗ್ರಾಮಗಳನ್ನು ‘ ಮಹಾಗ್ರಾಮ ‘ ಹತ್ತು ಗ್ರಾಮಗಳ ಸಮೂಹವನ್ನು ಸಂಗ್ರಹಣ 200 ಗ್ರಾಮಗಳನ್ನು ‘ ಕರ್ವಟಿಕಾ ‘ ಎಂದು ಕರೆಯಲಾಗುತ್ತಿತ್ತು . ‘ ಸ್ತುತ್ನಜ ‘ ಎಂಬ ಗ್ರಾಮ ವ್ಯಾಪಾರಕ್ಕೆ ಮತ್ತು ನೆರೆಹೊರೆ ಗ್ರಾಮಗಳ ಸಂತೆಗಳ ಕೇಂದ್ರವಾಗಿತ್ತು . ಜನಸಂಖ್ಯೆಯ ಗಾತ್ರದ

ಆಧಾರದ ಮೇಲೆ 1. ಜೇಷ್ಟಗ್ರಾಮ 2. ಮಧ್ಯಮಗ್ರಾಮ 3. ಕನಿಷ್ಠಗ್ರಾಮ ಎಂಬ ಮೂರು ವಿಭಾಗಗಳಿದ್ದವು . ಕಂದಾಯಕ್ಕನುಸಾರವಾಗಿ ನಾಲ್ಕು ವಿಭಾಗಗಳ ಗ್ರಾಮಗಳನ್ನು ಕೌಟಿಲ್ಯನು ವರ್ಗೀಕರಿಸಿದ್ದನು .

1. ಗ್ರಾಮ ಗ್ರಾಸ : ಕಂದಾಯವನ್ನು ನೀಡುವ ಸಾಮಾನ್ಯ ಗ್ರಾಮ .

2. ಪರಿಹಾರಕ್ ಗ್ರಾಮಗಳು : ಅರ್ಚಕರು ಮತ್ತು ಶಿಕ್ಷಕರ ಸೇವೆಗೆ ಪ್ರತಿಯಾಗಿ ಸಂಬಳದ ರೂಪದಲ್ಲಿ ನೀಡಲಾದ ಕಂದಾಯ ಮುಕ್ತ ಹಳ್ಳಿಗಳು .

3. ಆಯುಧಜ ಗ್ರಾಮಗಳು : ಸನ್ನದ್ಧ ಯೋಧರನ್ನು ಪೂರೈಸುವ ಕಂದಾಯ ಮುಕ್ತ ಗ್ರಾಮಗಳು .

4. ಕಂದಾಯ ಕಟ್ಟುವ ಗ್ರಾಮ : ತೆರಿಗೆಯನ್ನು ವಸ್ತು ಅಥವಾ ಹಣದ ರೂಪದಲ್ಲಿ ಕೊಡುವ ಗ್ರಾಮಗಳು . ಗ್ರಾಮದ ಆಡಳಿತಾತ್ಮಕ ಸಿಬ್ಬಂದಿಗಳಿಗೆ ಕಂದಾಯ ಮುಕ್ತ ಭೂಮಿಯನ್ನು ನೀಡಲಾಗಿತ್ತು . ಅದನ್ನು ಬೇರೆಯವರಿಗೆ ಮಾರುವಂತಿಲ್ಲ .

5. ಮಧ್ಯಕಾಲದಲ್ಲಿ ಗ್ರಾಮಗಳ ವಿವರಣೆ Description of Villages in Medieval period . ಆಗಿನ ಕಾಲದಲ್ಲಿ ಗ್ರಾಮವು ಒಂದು ರಾಜಕೀಯ ಘಟಕವಾಗಿತ್ತು ನಗರ , ಪರಗಣ ಮತ್ತು ಪ್ರಾಂತ್ಯಗಳೊಂದಿಗೆ ಬೆಸೆಯಲ್ಪಟ್ಟಿತ್ತು . ಪ್ರತಿ ಗ್ರಾಮದಲ್ಲೂ ‘ ಚೌಕಿದಾರ್ ‘ ಇರುತ್ತಿದ್ದನು . ರಾಜ್ಯದ ಅಧಿಕಾರಿಗಳು , ಗ್ರಾಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಲೆ ಹಾಕುತ್ತಿರಲಿಲ್ಲ . ಗ್ರಾಮ ಪಂಚಾಯಿತಿ ಭದ್ರತೆ , ನೈರ್ಮಲ್ಯ , ಶಿಕ್ಷಣ ಮುಂತಾದ ಕಾರ್ಯಗಳನ್ನು ತಾವೇ ನಿರ್ವಹಿಸುತ್ತಿದ್ದವು .

6. ಬ್ರಿಟಿಷ್ ಪೂರ್ವ ಕಾಲದಲ್ಲಿ ಗ್ರಾಮ ಸಮುದಾಯಗಳ ಲಕ್ಷಣಗಳು ( Characteristics of village Communities in Pre British Period ) ಕೃಷಿ ಮತ್ತು ಕರಕುಶಲತೆ Agriculture and Handicrafts . ಕೃಷಿ ಮತ್ತು ಕರಕುಶಲಕಲೆ ಆಧಾರಿತ ಸ್ವಯಂ ಪೂರ್ಣ ಗ್ರಾಮವು ಬ್ರಿಟಿಷ್ ಪೂರ್ವಕಾಲದ ಪ್ರಮುಖ ಲಕ್ಷಣವಾಗಿದೆ . ಸ್ವಯಂ ಪೂರ್ಣ ಗ್ರಾಮವು ಪ್ರಮುಖ ಆರ್ಥಿಕ ಘಟಕವಾಗಿದ್ದು ಭಾರತದಲ್ಲಿ ಬಹುಕಾಲದವರೆಗೂ ಅಸ್ತಿತ್ವದಲ್ಲಿತ್ತು .

ii ) ಗ್ರಾಮಗಳು ಪುಟ್ಟ ಗಣರಾಜ್ಯಗಳಾಗಿದ್ದವು

ಸ್ವಯಂ ಪರಿಪೂರ್ಣ ಭಾರತೀಯ ಗ್ರಾಮಗಳು ಒಂದೇ ರೀತಿಯಲ್ಲಿ ಮುಂದುವರಿಯುತ್ತಿವೆ .

iii ) ಸಾಮಾನ್ಯ ಭೂ ಹಿಡುವಳಿ Common holdings

ರೈತ ಕುಟುಂಬವು ಅನುವಂಶೀಯ ಭೂ ಹಿಡುವಳಿ ಪಡೆಯುವ ಮತ್ತು ಕೃಷಿ ಮಾಡುವ ಹಕ್ಕನ್ನು ಅನುಭವಿಸಿ ಕೊಂಡು ಬರುತ್ತಿದ್ದರು . ಯಾವುದೇ ಅಡಚಣೆಯಿಲ್ಲದೆ ನಿರಾತಂಕವಾಗಿ ಶತಶತಮಾನದವರೆಗೂ ಮುನ್ನಡೆಯುತ್ತಿತ್ತು .

iv ) ಸ್ವಾವಲಂಬನೆ Self – Sufficiency ಗ್ರಾಮವು ಆರ್ಥಿಕವಾಗಿ ಸ್ವಾವಲಂಬಿಯಾಗಿ ಸ್ಥಳೀಯ ಶ್ರಮಿಕರಿಂದ ಉತ್ಪಾದನೆಯಾಗುತ್ತಿತ್ತು . ಸಂಪನ್ಮೂಲಗಳನ್ನು ಸ್ಥಳೀಯರೇ ಬಳಕೆ ಮಾಡುತ್ತಿದ್ದರು . ಪ್ರತಿ ಗ್ರಾಮದವರೂ ತಮಗೆ ಬೇಕಾದುದನ್ನು ತಾವೇ ಉತ್ಪಾದಿಸಿ ಬಳಸಿಕೊಳ್ಳುತ್ತಿದ್ದರು . ಸ್ವತಂತ್ರವಾಗಿ ಉತ್ಪಾದನೆ ಮಾಡಿ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವ ‘ ವಸ್ತು ವಿನಿಮಯ ಪದ್ಧತಿಯು ಭಾರತೀಯ ಸಮಾಜದಲ್ಲಿತ್ತು .

v ) ಗ್ರಾಮಗಳ ಮುಖ್ಯ ನಿವಾಸಿಗರು Chiefinhaitants of villages ಗ್ರಾಮಗಳಲ್ಲಿ ಎಲ್ಲಾ ವಿಧದ ವಿವಿಧ ವರ್ಗದ ನಿವಾಸಿಗರು ವಾಸಿಸುತ್ತಿದ್ದರು . ಗ್ರಾಮಲೆಕ್ಕಿಗರು , ಪೋಲೀಸ್ , ತೆರಿಗೆ ಸಂಗ್ರಹಕಾರರು ಧಾರ್ಮಿಕ ಕಾರ್ಯ ಮಾಡುವವರು , ಕುಂಬಾರ , ಕಮ್ಮಾರ , ಚಿನಿವಾರ , ಕ್ಷೌರಿಕ , ದೋಬಿ ಇತ್ಯಾದಿ .

vi ) ಸರಳತೆ ಮತ್ತು ಜಡತೆ Simplicity and Unchangebleness ಸ್ವಾವಲಂಬಿ ಸಮುದಾಯಗಳಲ್ಲಿ ಉತ್ಪಾದನಾ ಸಂಘಟನೆಯು ಸರಳತೆಯಿಂದ ಕೂಡಿತ್ತು . ಸಮುದಾಯಗಳು ನಿರಂತರವಾಗಿ ವಸ್ತುಗಳನ್ನು ಪುನರುತ್ಪಾದಿಸುತ್ತದೆ . ಮತ್ತು ಅನಿರೀಕ್ಷಿತವಾಗಿ ತೊಡಕು ಉಂಟಾದರೂ ಮನಃ ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ . ಭಾರತೀಯ ಗ್ರಾಮಗಳು ಚಲನಶೀಲ , ಅಂತರ್‌ ಅವಲಂಬಿತ ಮತ್ತು ವಿಶಾಲ ಜಗತ್ತಿನ ಒಂದು ಭಾಗವಾಗಿದೆ .

28. ಕೃಷಿಯ ಸಂದಿಗ್ಧತೆ ಮತ್ತು ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳನ್ನು ವಿವರಿಸಿ .

ಕೃಷಿ ಕ್ಷೇತ್ರದಲ್ಲಿ ಸಂದಿಗ್ಧ ಪರಿಸ್ಥಿತಿಗಳು ಅನೇಕ ಕಾರಣಗಳಿಂದ ಉಂಟಾಗುತ್ತವೆ . ಅವುಗಳು

1. ಸರ್ಕಾರದ ಧೋರಣೆ

2 . ಸಾಲ

3. ಲೇವಾದೇವಿದಾರರು

4. ಆರೋಗ್ಯ ಮತ್ತು ಇತರ ಅಗತ್ಯಗಳು

5. ವಸ್ತುಗಳ ಬೆಲೆಯ ಅನಿಶ್ಚಿತತೆ

6. ಒಂದು ಸಂಸ್ಥೆಯಾಗಿ ಗ್ರಾಮ

7. ಕೊಂಡುಕೊಂಡ ತಂತ್ರಜ್ಞಾನ ಮತ್ತು ಮಾಹಿತಿ

8. ಕಾರ್ಮಿಕ

9 . ನೀರು

10. ಹವಾಮಾನ

11 . ಪರಿಕರಗಳ ಬೆಲೆ

ಈ ಮೇಲಿನ ಎಲ್ಲಾ ಕಾರಣಗಳಿಂದ ರೈತನು ಸಂಕಷ್ಟಕ್ಕೆ ಒಳಗಾಗುತ್ತಾನೆ . ಕೃಷಿ ವಲಯದಲ್ಲಿ ವಾಣಿಜ್ಯದ ಪ್ರಾಮುಖ್ಯತೆ ಮತ್ತು ವ್ಯಾಪಾರೀಕರಣದ ಫಲವಾಗಿ ಜಾಗತೀಕರಣದ ಪ್ರಕ್ರಿಯೆಯು ರೈತರ ಸಮಸ್ಯೆಗಳನ್ನು ತೀವ್ರಗೊಳಿಸಿವೆ .

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳು

ಕರ್ನಾಟಕ ಕೃಷಿ ವಲಯವು ಎರಡು ದಶಕಗಳ ಹಿಂದೆಯೇ ಬದಲಾವಣೆಗೆ ಒಳಗಾಗಿದೆ . ಕರ್ನಾಟಕದ ಕೃಷಿಯನ್ನು ಬೃಹತ್ ಅಸಮಾನ ಏಕ ರೀತಿಯಲ್ಲದ ಬಂಡವಾಳಶಾಹಿ ಬೆಳವಣಿಗೆಯ ಚೌಕಟ್ಟಿನಲ್ಲಿದೆ . ಆರ್ . ಎಸ್ . ದೇಶಪಾಂಡೆ ಮತ್ತು ಸರೋಜ ಅರೋರ ಅವರ ಕೃತಿಯಾದ ‘ ಕೃಷಿಯ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆಗಳು Agarian Crisis and Farmer Suicides ಆಧಾರಿತ ಅಧ್ಯಯನವಾಗಿದೆ . 2007 ರಲ್ಲಿ ಮೂಸೂರಿಯ ಗ್ರಾಮೀಣ ಅಧ್ಯಯನ ಕೇಂದ್ರವಾದ ಲಾಲ್ ಬಹದ್ದೂರ್‌ಶಾಸ್ತ್ರೀ ಆಡಳಿತಾತ್ಮಕ ಅಕ್ಯಾಡೆಮಿಯು ಈ ಅಧ್ಯಯನವನ್ನು ಕೈಗೊಂಡಿದೆ . 1993 ರಿಂದ 2003 ರವರೆಗೆ ಭಾರತದಲ್ಲಿ 1,00,248 ರೈತರ ಆತ್ಮಹತ್ಯೆಗಳು ನಡೆದಿವೆ . ಉತ್ತರ ಪ್ರದೇಶದ ಕಬ್ಬು ಬೆಳೆಗಾರರು , ಆಂಧ್ರಪ್ರದೇಶದ ಹತ್ತಿ ಬೆಳೆಗಾರರು , ಕೇರಳದ ಸಾಂಬಾರು ಪದಾರ್ಥದ ಬೆಳೆಗಾರರು , ಕರ್ನಾಟಕದ ಕಾಫಿ ಬೆಳೆಗಾರರಲ್ಲಿ ಆತ್ಮ ಹತ್ಯೆ ಪ್ರಕರಣಗಳು ವರದಿಯಾಗಿವೆ .

ತೀವ್ರತರದ ಕೃಷಿ ಬಿಕ್ಕಟ್ಟಿನ ಸಂದರ್ಭದಲ್ಲಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ವರದಿಯಾಗಿಲ್ಲ . ಆದರೆ ಅವರು ತಮಗೆ ಆದ ಕೃಷಿ ನಷ್ಟಕ್ಕಾಗಿ ತಾವು ಬೆಳೆದ ವಸ್ತುಗಳನ್ನು ಬೆಂಕಿಗೆ ಹಾಕಿ , ರಸ್ತೆಯಲ್ಲಿ ಚೆಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ . ಕರ್ನಾಟಕದಲ್ಲಿ 2003-2007ರ ಅವಧಿಯಲ್ಲಿ ಒಟ್ಟು 1193 ರೈತರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ .

ಕರ್ನಾಟಕದ ಅಪರಾಧ ಇಲಾಖೆಯು 1998 ರಿಂದ 2002 ರವರೆಗೆ ಸುಮಾರು 15,804 ರೈತರ ಆತ್ಮಹತ್ಯೆಗಳನ್ನು ವರದಿ ಮಾಡಿದ್ದಾರೆ . ರಾಷ್ಟ್ರೀಯ ಸಾಮಾಜಿಕ ಕಾವಲು ಒಕ್ಕೂಟವು ಕಡೆಯ ಪಕ್ಷ 11,387 ರೈತರು 2001 ರಿಂದ 2006 ರ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಹೇಳಿಕೆ ವರದಿಯಾಗಿದೆ . ಹಳೆಯ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನದಾಗಿದ್ದರೆ , ನಂತರದ ಸ್ಥಾನ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರಾಂತ್ಯಗಳು ನಂತರದ ಸ್ಥಾನದಲ್ಲಿವೆ .

ಹಳೆಯ ಮದ್ರಾಸ್ ಪ್ರಾಂತ್ಯ ಮತ್ತು ಕೊಡಗಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವರದಿಯಾಗಿದೆ . ರಾಜ್ಯ ಸರ್ಕಾರವು ನೀರನ್ನು ನ್ಯಾಯ ಯುತವಾಗಿ ಹಂಚಿಕೆ ಮಾಡಿಲ್ಲವೆಂಬುದು ತಿಳಿದು ಬರುತ್ತದೆ . 1998 ರಲ್ಲಿ ಬೀದರ್‌ನ ತೊಗರಿ ಬೆಳೆಯುವ ರೈತರ ಆತ್ಮಹತ್ಯೆಯೊಂದಿಗೆ ಈ ಪ್ರಕರಣ ಪ್ರಾರಂಭವಾಯಿತೆನ್ನಬಹುದು . ಎರಡು ವರ್ಷಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಉತ್ತರ ಕರ್ನಾಟಕದ ಬರ ಆರ್ಥಿಕವಾಗಿ ಗುಲ್ಬರ್ಗಾ , ಬೀದರ್ ಪೀಡಿತ ಮತ್ತು ಇತರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿತ್ತು . ಆದರೆ 2008 ರ ನಂತರ ಮಂಡ್ಯ , ಹಾಸನ , ಶಿವಮೊಗ್ಗ , ದಾವಣಗೆರೆ , ಕೊಪ್ಪಳ , ಚಿಕ್ಕಮಗಳೂರು ಮತ್ತು ಕೊಡಗಿಗೆ ವಿಸ್ತರಿಸಿತು . ಇವು ಕರ್ನಾಟಕದ ರೈತರ ಆತ್ಮಹತ್ಯೆಯ ಪ್ರಕರಣಗಳು .

29. ಗ್ರಾಮ ಅಧ್ಯಯನದ ಮಹತ್ವವನ್ನು ವಿವರಿಸಿ .

ಗ್ರಾಮೀಣ ಅಧ್ಯಯನ ಮತ್ತು ಅವುಗಳ ಮಹತ್ವ : ( Village Studies and their importance ) ಭಾರತವು ಗ್ರಾಮಗಳ ದೇಶ . ಬಹು ಸಂಖ್ಯಾತ ಭಾರತೀಯರು ಗ್ರಾಮಗಳಲ್ಲಿಯೇ ವಾಸಿಸುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಥವಾ ಇಲ್ಲಿರುವ ಲೋಪ ದೋಷಗಳನ್ನು ತಿದ್ದಲು ಗ್ರಾಮ ಅಧ್ಯಯನದದ ಅವಶ್ಯಕತೆಯಿದೆ . ಗ್ರಾಮೀಣ ಅಧ್ಯಯನದ ಮಹತ್ವವನ್ನು ಈ ಕೆಳಕಂಡಂತೆ ನಿರೂಪಿಸಬಹುದು .

1. ಕ್ಷೇತ್ರ ಕಾರ್ಯವು ಗ್ರಾಂಥಿಕ ದೃಷ್ಟಿಕೋನಕ್ಕೆ ಪರಿಹಾರವಾಗಿದೆ . ( Field work is an Antidote to Book View ) ಎಂ.ಎನ್ . ಶ್ರೀನಿವಾಸ್ ಮೈಸೂರಿನ ಹತ್ತಿರದ ರಾಮಾಪುರ ಗ್ರಾಮಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಅವರು ಭಾರತೀಯ ರೈತರ ಕೃಷಿ ಚಟುವಟಿಕೆಗಳನ್ನು ತಂತ್ರಜ್ಞಾನ , ಜ್ಞಾನಮಟ್ಟ , ನ್ಯಾಯಿಕ ಮತ್ತು ಸಾಮಾಜಿಕ ಸಂಸ್ಥೆಗಳು ಧರ್ಮ ಜೀವನ ಮಾರ್ಗದ ಹಿನ್ನೆಲೆಯಲ್ಲಿ ಎತ್ತಿತೋರಿಸಿದ್ದಾರೆ ಅವರು ತಮ್ಮ ಅನುಭವವನ್ನು “ The Remembered Village ನೆನಪಿಸಿಕೊಂಡ ಗ್ರಾಮ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಅವರ ಪ್ರಕಾರ ಗ್ರಾಮಾಧ್ಯಯನವು ದೇಶದ ಭವಿಷ್ಯವನ್ನು ರೂಪಿಸುವ ಯೋಜನೆಕಾರರು ಹಾಗೂ ಆಡಳಿತಾಧಿಕಾರಿ ಗಳಿಗೆ ಉಪಯುಕ್ತವಾಗುತ್ತದೆ . ಈ ರೀತಿಯ ಅಧ್ಯಯನ ದಿಂದ ಬಂದ ಮಾಹಿತಿಯು ಕ್ಷೇತ್ರಕಾರದ ಅನುಭವದಿಂದ ಸಮಾಜಶಾಸ್ತ್ರಜ್ಞರು ನೀಡಿದ್ದಾಗಿರುವುದರಿಂದ ಶ್ರೇಷ್ಠವಾಗಿ ಇದು ಯಾವ ಗ್ರಂಥಜ್ಞಾನಕ್ಕೂ ಸರಿಸಾಟಿಯಾಗುವುದಿಲ್ಲ.

2. ಬದಲಾವಣೆಗೆ ಉದ್ದೇಶಪೂರ್ವಕ ಪ್ರತಿರೋಧ ( Calculated opposition to Change )

3. ಸಾಹಿತಿಕ ಪೂರ್ವ ಗ್ರಹ Literary Bias

4. ಅನಂತರದ ಮೌಲ್ಯಮಾಪನವನ್ನು ದಾಖಲಿಸುವುದು Recording For Later Evalutaion

5. ವಿಶ್ಲೇಷಣಾತ್ಮಕ ವಿಭಾಗಗಳ ಬೆಳವಣಿಗೆ Development of Analytical Categories

6. ಗ್ರಾಮ ಅಧ್ಯಯನಗಳು ಸಾಮಾಜಿಕ ಸುಧಾರಣೆಗೆ ಸಹಕಾರಿಯಾಗಿದೆ. . Village Studies are Important for Social Reformation .

ಯೋಜಿತ ಮತ್ತು ಯೋಜನೇತರ ಬದಲಾವಣೆಗಳ ಪ್ರಭಾವದಿಂದ ಗ್ರಾಮಗಳು ಬದಲಾವಣೆಗೊಳ್ಳುತ್ತಿವೆ . ಹೀಗೆ ಭಾರತದಲ್ಲಿ ಗ್ರಾಮ / ಗ್ರಾಮೀಣ ಸಮುದಾಯಗಳ ಅಧ್ಯಯನದ ಅವಶ್ಯಕತೆಯಿದೆ ಮತ್ತು ಇದು ಮಹತ್ವಪೂರ್ಣದ್ದಾಗಿದೆ .

i) ಬದಲಾವಣೆಗೆ ಉದ್ದೇಶ ಪೂರ್ವಕ ಪ್ರತಿರೋಧ ( Calculated Opposition to Change ) ರೈತನನ್ನು ಮಿತಿಮೀರಿದ ಸಂಪ್ರದಾಯವಾದಿ , ಹಠಮಾರಿ , ಅಜ್ಞಾನಿ , ಮತ್ತು ಅಂದ ಶ್ರದ್ಧೆಯವ ಎಂದು ಕರೆಯಲಾಗಿದೆ . ಆದರೆ ಉತ್ತರ ಪ್ರದೇಶದಲ್ಲಿ ಮೆಕ್ಕಿಂ ಮೆರಿಯಟ್ ಕಿಶನ್‌ಗಾರ್ಡಿ ಗ್ರಾಮಾಧ್ಯಯನ ಹೇಳುವುದೇ ನೆಂದರೆ ಭಾರತೀಯ ರೈತರು ನೂತನ ಬೆಳೆಗಳನ್ನು , ಬೇಸಾಯ ತಂತ್ರಗಳನ್ನು ಒಪ್ಪಿ , ಸ್ವೀಕರಿಸುತ್ತಾರೆ . ಆದರೆ ಕೆಲವು ಬದಲಾವಣೆಗಳನ್ನು ಮಾತ್ರ ವಿರೋಧಿಸುತ್ತಾರೆ . ರಾಮಾಪುರ ಗ್ರಾಮದ ಮುಖ್ಯಸ್ಥನು ಬುಲ್‌ಡೋಜರ್‌ ಮತ್ತು ವಿದ್ಯುಚ್ಛಕ್ತಿ ಯನ್ನು ಇಷ್ಟಪಡುತ್ತಾನೆ ಆದರೆ ಶಾಲೆಯನ್ನಲ್ಲ . ಶಿಕ್ಷಣದಿಂದ ಕೃಷಿಕಾರ್ಮಿಕರು ದುಬಾರಿಯಾಗುತ್ತಾರೆ ಮತ್ತು ಬಡವರು ಶ್ರೀಮಂತರಿಗೆ ಗೌರವ ನೀಡುವುದಿಲ್ಲ . ಪ್ರತಿಯೊಂದು ಗ್ರಾಮದಲ್ಲೂ ಕೆಲವು ಪ್ರಮುಖ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಮುಗ್ಧರನ್ನು ಶೋಷಣೆ ಮಾಡುತ್ತಾರೆ . ಗ್ರಾಮ ಸಮುದಾಯದ ಕ್ಷೇತ್ರಾಧ್ಯಯನವು ಇಂತಹ ವಿಷಯವನ್ನು ಹೊರಹಾಕುತ್ತವೆ .

ii ) ಸಾಹಿತಿಕ ಪೂರ್ವಾಗ್ರಹ ( Literary Bias ) ಸಾಹಿತ್ಯವು ಜಾತಿ ಚಲನೆ ರಹಿತವಾದುದು ಎಂದು ತಿಳಿಸುತ್ತದೆ ಆದರೆ ಇದು ಸತ್ಯಕ್ಕೆ ದೂರವಾದ ಮಾತು ಸಂಸ್ಕೃತಾನುಕರಣ ಪ್ರಕ್ರಿಯೆಯ ಮೂಲಕ ಜಾತಿಗಳು ಮೇಲ್ ಸ್ತರಕ್ಕೆ ಚಲಿಸಿರುವುದನ್ನು ಕಾಣಬಹುದು . ಹಾಗೆಯೇ ಮಹಿಳೆಯೂ ಕೂಡ ತನ್ನ ಅಂತಸ್ತನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ . ಕ್ಷೇತ್ರಾಧ್ಯಯನಗಳು ಧಾರ್ಮಿಕ ಗ್ರಂಥಗಳು ಹೇಳುವುದಕ್ಕಿಂತ ತೀರ ಭಿನ್ನವಾಗಿವೆ . ಗ್ರಂಥದೃಷ್ಟಿ ಮತ್ತು ಮೇಲ್ದಾತಿ ದೃಷ್ಟಿಕೋನಗಳು ಪೂರ್ವಾಗ್ರಹ ಪೀಡಿತ ಮತ್ತು ಪಕ್ಷಪಾತಿಯಾದವು , ಅವು ವಾಸ್ತವಾಂಶವನ್ನು ತಿಳಿಸುವುದಿಲ್ಲ . ಕ್ಷೇತ್ರ ಸಂಶೋಧನೆಯಿಂದ ಮಾತ್ರ ಸಾಹಿತಿಕ ಪೂರ್ವಾ ಗ್ರಹವನ್ನು ತೊಲಗಿಸಿ ಗ್ರಾಮ ಸಮುದಾಯಗಳ ಬಗ್ಗೆ ವಾಸ್ತವಿಕ ಅಂಶಗಳನ್ನು ತಿಳಿಸುತ್ತದೆ .

iii ) ಅನಂತರ ಮೌಲ್ಯಮಾಪನವನ್ನು ದಾಖಲಿಸುವುದು ( Recording for Later Evaluation ) ವರ್ತಮಾನದ ಬೇರುಗಳು ಭೂತಕಾಲದಲ್ಲಿರುತ್ತವೆ . ಮತ್ತು ವರ್ತಮಾನದ ವಿಶ್ಲೇಷಣೆಯು ಭವಿಷ್ಯವನ್ನು ನಿರ್ದೇಶಿಸುತ್ತದೆ . ಆದ್ದರಿಂದ ಯೋಜಿತ ಬದಲಾವಣೆಯ ಪರಿಣಾಮದ ಬಗೆಗಿನ ತೌಲನಿಕ ಮತ್ತು ಮೌಲ್ಯಮಾಪನವು ಅವಶ್ಯವಾಗಿ ವರ್ತಮಾನವನ್ನು ದಾಖಲಿಸುವಂತೆ ಮಾಡುತ್ತದೆ . ಪ್ರೊ . ಯೋಗೇಶ್ ಅಟಲ್‌ರವರು ಎಂದು ಹೇಳುತ್ತಾರೆ .

iv ) ವಿಶ್ಲೇಷಣಾತ್ಮಕ ವಿಭಾಗಗಳ ಬೆಳವಣಿಗೆ ( Development of Analytical Cotegories ) ಭಾರತೀಯ ಗ್ರಾಮೀಣ ಸಮುದಾಯದ ಅಧ್ಯಯನವು ಕೆಲವು ವಿಶ್ಲೇಷಣಾತ್ಮಕ ಪರಿಕಲ್ಪನೆಗಳನ್ನು ಅಭಿವೃದ್ಧಿ ಪಡಿಸಲು ಅನುಕೂಲವಾಗುತ್ತದೆ . ಉದಾಹರಣೆಗೆ ಎಂ.ಎನ್ . ಶ್ರೀನಿವಾಸ ರ ಸಂಸ್ಕೃತಾನುಕರಣ ಮತ್ತು ಪಾಶ್ಚಿಮಾತೀಕರಣ , ಎನ್ . ಪ್ರಸಾದರ ತುಲನೀಕರಣ , ಮಜುಂದಾರ್‌ರವರ ಅಪಸಂಸ್ಕೃ ತಾನುಕರಣ , ಮೇಕ್ಕಿಂ ಮರಿಯೇಟ್‌ರವರ ಸರ್ವಾತ್ರೀಕರಣ ಮತ್ತು ಪ್ರಾಂತೀಕರಣ , ರಾಬರ್ ರೆಡ್ ಫೀಲ್ಡ್‌ರವರ ವಿಸ್ಕೃತ ಪರಂಪರೆ ಮತ್ತು ಕಿರುಪರಂಪರೆ ಇತ್ಯಾದಿ . ಈ ಪರಿಕಲ್ಪನೆಗಳು ಸಮಾಜದಲ್ಲಿರುವ ಪರಿವರ್ತನಾ ವಿಶ್ಲೇಷಣೆ ಮಾಡುವಲ್ಲಿ ಸಹಕಾರಿಯಾಗಿವೆ . ಇದರಿಂದ ಗ್ರಾಮೀಣ ಸಮುದಾಯಗಳು ಹೇಗೆ ಬದಲಾಗುತ್ತದೆ ಎಂಬುದನ್ನು ಅರಿಯಬಹುದು . ಎ.ಆರ್ . ದೇಸಾಯಿಯವರ ‘ ದಿ ರೂರಲ್ ಸೋಶಿಯಾಲಜಿ ಇನ್ ಇಂಡಿಯಾ ‘ ಎಂಬ ಕೃತಿಯು ಗ್ರಾಮೀಣ ಅಧ್ಯಯನದಲ್ಲಿ ಅತ್ಯುತ್ತಮ ಕೃತಿಯಾಗಿದೆ .

v ) ಗ್ರಾಮ ಅಧ್ಯಯನಗಳು ಸಾಮಾಜಿಕ ಸುಧಾರಣೆಗೆ ಸಹಕಾರಿಯಾಗಿವೆ . ( Village Studies are important for Social Reformation ) ಗ್ರಾಮವು ಇಂದು ಎಲ್ಲಾ ಚರ್ಚೆಗಳು , ಯೋಜನೆ , ಬಜೆಟ್ , ಆಡಳಿತಾತ್ಮಕ ಕಾರತಂತ್ರಗಳ ಕೇಂದ್ರಬಿಂದುವಾಗಿದೆ . ಗ್ರಾಮಾಧಾರಿತ ಸಮಾಜಶಾಸ್ತ್ರಜ್ಞರು , ಸಮಾಜ ಸುಧಾರಕರು , ಮತ್ತು ಇತರರು ಗ್ರಾಮಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ . ಇವುಗಳು ಯೋಜಿತ ಮತ್ತು ಯೋಜನೇತರ ಬದಲಾವಣೆಗಳಾಗಲು ಪೂರಕವಾಗಿವೆ . ಆದ್ದರಿಂದ ಗ್ರಾಮಗಳಲ್ಲಿ ಸುಧಾರಣೆ ಅಥವಾ ಬದಲಾವಣೆ ಉಂಟಾಗುತ್ತಿದೆ . ಈ ಕಾರಣಗಳಿಂದ ಗ್ರಾಮ ಅಧ್ಯಯನವು ಮಹತ್ವ ಪೂರ್ಣವಾಗಿದೆ .

30. ಭಾರತೀಯ ಗ್ರಾಮಗಳ ಕೃಷಿ ಮತ್ತು ಆರ್ಥಿಕ ಸಮಸ್ಯೆಗಳನ್ನು ವಿವರಿಸಿ .

ಭಾರತೀಯ ಗ್ರಾಮಗಳ ಆರ್ಥಿಕ ಮತ್ತು ಕೃಷಿ ಸಮಸ್ಯೆಗಳು ( Economic and Agricultural Problems ) ಆಧುನಿಕ ಭಾರತದಲ್ಲಿ ಗ್ರಾಮಗಳ ಆರ್ಥಿಕ ಸಮಸ್ಯೆಗಳು ಹೆಚ್ಚುತ್ತಿವೆ ಕಾರಣ ಆರ್ಥಿಕ ಬೆಳವಣಿಗೆಯು ಪ್ರದೇಶ ಮತ್ತು ವರ್ಗದ ಅಸಮಾನತೆಯನ್ನು ಹೆಚ್ಚಿಸುತ್ತಿದೆ . ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞನಾದ ಅಮರ್ಥ್ಯಸೇನ್‌ರವರ ಪ್ರಕಾರ ‘ ಭಾರತದಲ್ಲಿ ಇದೇ ರೀತಿ ಅಸಮಾನತೆ ಹೆಚ್ಚುತ್ತಿದ್ದರೆ ಭಾರತದ ಅರ್ಥಭಾಗ ಕ್ಯಾಲಿಫೋರ್ನಿಯವಾಗುತ್ತದೆ ‘ , ಇನ್ನರ್ಧ ಭಾಗ ಆಫ್ರಿಕಾದ ಉಪ ಸಹರಾ ಆಗುತ್ತದೆ . ದೇಶದ ಸಂಪತ್ತು ಬರಿದಾಗಿ ದುಃಖ ಹೆಚ್ಚುತ್ತದೆ ಮಾನವನನ್ನು ತುಚ್ಛವಾಗಿ ಕಾಣುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದಿದ್ದಾರೆ ನಮ್ಮ ದೇಶದ ಪ್ರಮುಖ ಆರ್ಥಿಕ ಮತ್ತು ಕೃಷಿ ಸಮಸ್ಯೆಗಳು ಇಂತಿವೆ .

i ) ತಾರತಮ್ಯದ ಕಾರ್ಯ ನೀತಿಗಳು ( Discriminatory Policies . ) ಸರ್ಕಾರದ ಕೃಷಿ ನೀತಿಗಳಿಂದ ರೈತರು ಪ್ರತಿಕೂಲವಾದ ಸ್ಥಿತಿಗೆ ತಲುಪಿದ್ದಾರೆ . ಏಕೆಂದರೆ ರೈತ ಸಮೂಹದ ವಿರುದ್ಧ ತಾರತಮ್ಯ ಕಾರ್ಯನೀತಿಯನ್ನು ಅನುಸರಿಸಿದೆ . ರೈತರ ಮತ್ತು ಕೃಷಿ – ಕಾರ್ಮಿಕರ ನಿವ್ವಳ ಆದಾಯದ ನಡುವಿನ ಅಂತರ ಸಾಕಷ್ಟು ಹೆಚ್ಚಿವೆ . ಹಾಗೆಯೇ ಕೃಷಿ ಮತ್ತು ಇತರ ವೃತ್ತಿಗಳ ನಡುವಿನ ಅಂತರವೂ ಹೆಚ್ಚಿದೆ . 1990 ರ ದಶಕದಲ್ಲಿ ರೈತರ ಸ್ಥಿತಿ ಉಲ್ಬಣಗೊಂಡಿತು . ಎಡೆಬಿಡದ ಬರಗಾಲದಿಂದ ಸಂಕಷ್ಟಕ್ಕೆ ಗುರಿಯಾದರು ಕಡಿಮೆ ಉತ್ಪಾದನೆ ಆದಾಗಲೂ , ಉತ್ತಮ ಬೆಲೆಯನ್ನು ನಿಗದಿಪಡಿಸದೆ ಕೃಷಿಕ್ಷೇತ್ರವನ್ನು ಉಪೇಕ್ಷಿಸಿದವು .

ii ) ಕೃಷಿ ಕ್ಷೇತ್ರದ ಸಂದಿಗ್ಧ ಸ್ಥಿತಿ ( Vulnerability of the Agriculture ) ಕೃಷಿ , ವಿದ್ಯುಚ್ಛಕ್ತಿ , ನೀರು , ರಸಗೊಬ್ಬರ , ಕೀಟನಾಶಕ ಮತ್ತು ಕನಿಷ್ಟ ಕೂಲಿಗೆ ಬೇಕಾದ ಉತ್ಪಾದನಾಂಶಗಳ -ಬೆಲೆಯನ್ನು ರಾಜ್ಯದ ಕಾರ್ಯನೀತಿಯು ವಿಧಿಸುತ್ತದೆ . ಸುಲಭವಾಗಿ ಬ್ಯಾಂಕ್‌ನಿಂದ ಸಾಲ ಪಡೆಯಲಾಗದೆ ಲೇವಾದೇವಿದಾರರನ್ನು ಸಂಪರ್ಕಿಸಬೇಕಾಗುತ್ತದೆ . ಬೆಲೆಯ ಅನಿಶ್ಚಿತತೆಯಿಂದ ಮತ್ತು ಅಪರಿಪೂರ್ಣ ಮಾರುಕಟ್ಟೆ ವ್ಯವಸ್ಥೆಯಿಂದ ರೈತರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .

iii ) ವ್ಯವಸಾಯಕ್ಕೆ ತಗಲುವ ಖರ್ಚಿನ ಹೆಚ್ಚಳ ಮತ್ತು ಪರಿಸರ ( Increase in Cost in Cultivation ) ಒಂದು ಕಡೆ ಬೆಲೆ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚಳವುಂಟಾದ್ದರಿಂದ ರೈತರು ವ್ಯವಸಾಯ ಮಾಡಲು ಹೆಚ್ಚಿನ ಬೆಲೆ ತೆರಬೇಕಾಗುವುದು ಸಣ್ಣ ರೈತರು ದುಬಾರಿ ಕೃಷಿ ಖರ್ಚನ್ನು ಎದುರಿಸಬೇಕಾಗುತ್ತದೆ . ಮಳೆ ಆಧಾರಿತ ಕೃಷಿ , ಭೂಮಿಯಲ್ಲಿ ಮಟ್ಟ ಕ್ಷೀಣಿಸಿ , ಬೆಳೆಗೆ ತಗಲುವ ಹಾನಿಕಾರಕ ರೋಗಗಳ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ .

iv ) ರಾಜ್ಯದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಉದ್ದೇಶ ಪೂರ್ವಕವಾಗಿ ಹಿಂಪಡೆಯುವಿಕೆ : ( Deliberate withdrawal of Welfare Programmes from State. ) ರೈತರಿಗೆ ಕೊಟ್ಟ ಅನುದಾನವನ್ನು ಭಾಗಶಃ ನಿಲ್ಲಿಸುವುದು , ಕೃಷಿಗೆ ಕೊಟ್ಟ ವಿದ್ಯುಚ್ಛಕ್ತಿ ಸೌಲಭ್ಯವನ್ನು ವಾಪಸ್ ಪಡೆಯುವುದು ಮತ್ತು ವಿದ್ಯುಚ್ಛಕ್ತಿ ತೆರಿಗೆಯನ್ನು ಹೆಚ್ಚು ಮಾಡುವುದು – ಈ ರೀತಿಯ ಕಾರ್ಯಕ್ರಮಗಳಿಂದ ರೈತರು ಕೃಷಿಯ ಬಗ್ಗೆ ನಿರಾಸಕ್ತಿ ತಳೆದು , ಸಂಕಟಪಡುತ್ತಾರೆ . ಇದರಿಂದ ಕೃಷಿ ಬಿಕ್ಕಟ್ಟು ತಲೆದೋರಿ ಉತ್ಪನ್ನದ ಅವನತಿ ಆಗುವುದುಂಟು .

v ) ಜಾಗತೀಕರಣದ ಸ್ಪರ್ಧೆ ಮತ್ತು ದೊಡ್ಡ ಬಂಡವಾಳ ಶಾಹಿಗಳಿಂದ ಆಗುವ ಶೋಷಣೆ ( Globalization resultant Competition and Exploitation by Big Capitalists ) ರೈತರ ಆತ್ಮಹತ್ಯೆಗೆ ಕಾರಣಗಳು ಜಾಗತಿಕ ವಾಣಿಜ್ಯ ಸಂಘಟನೆ , ತಳಿವಿಜ್ಞಾನ ವೈವಿಧ್ಯತೆ , ರೈತ ಬೆಳೆದ ಬೆಳೆಗೆ ಬೆಲೆ ಕುಸಿತ , ಖೋಟಾ ಬೀಜಗಳು ಬೆಳೆನಷ್ಟ ಇತ್ಯಾದಿ . – ವಿಶ್ವ ವಾಣಿಜ್ಯ ಸಂಘಟನೆ ಆಧಾರಿತ ಮಾದರಿ ಕೃಷಿ ಪದ್ಧತಿ ಅಥವಾ ಮಿಕಿನ್‌ ಮಾದರಿ ಅಭಿವೃದ್ಧಿಯು ಉದ್ಯಮ ಆಧಾರಿ ಕೃಷಿ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿರುವುದು ಕೃಷಿ ಬಿಕ್ಕಟ್ಟಿಗೆ ಕಂಟಕವಾಗಿದೆ . ಇದು ಪರಿಸರ ಮತ್ತು ಲಕ್ಷಾಂತರ ರೈತರಿಗೆ ಮಾರಕವಾಗಿದೆ . ವ್ಯವಸಾಯದ ಖರ್ಚು ಹೆಚ್ಚಾಗಿ ರೈತ ಕಂಗಲಾಗುತ್ತಾನೆ . ಇಷ್ಟಲ್ಲದೆ ಕೊಳವೆ ಬಾವಿಗಾಗಿ , ಪಂಪ್‌ಸೆಟ್‌ಗಾಗಿ ಸಾಲ ಮಾಡುವ ಅನಿವಾರತೆಯುಂಟಾಗಿ ರೈತನು ಇನ್ನಷ್ಟು ಸಾಲಗಾರನಾಗಿ ಉಳಿಯುವಂತಾಯಿತು .

vi ) ವೈಚಿತ್ರ್ಯ ಬ್ಯಾಂಕಿಂಗ್ ನಿಯಮಗಳು ಮತ್ತು ಸಾಂಸ್ಥಿಕ ಮೂಲಗಳಿಂದ ಸಾಲದ ಅಲಭ್ಯತೆ ( Peculiar Banking Practices and Non availability of Loans from Institutional Sources ) ಸಾಮಾನ್ಯವಾಗಿ ರೈತರಿಗೆ ವಾಣಿಜ್ಯ ಬ್ಯಾಂಕ್‌ಗಳಿಂದ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಸಾಲ ಪಡೆಯ ಬಹುದಾಗಿದೆ . ಆದರೆ ಸಾಲ ನೀಡುವಾಗ ಬ್ಯಾಂಕ್ ಕೇಳುವ ಎಲ್ಲಾ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೆ ರೈತ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ . ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕ್ ಸಹ ರೈತರಿಗೆ ಸಾಲ ನೀಡುವಲ್ಲಿ ಹಿಂದೆ ಬಿದ್ದಿದೆ . ಆದ್ದರಿಂದ ಹೆಚ್ಚಿನ ಬಡ್ಡಿಗೆ ಲೇವಾದೇವಿಗಾರರಿಂದ ಸಾಲ ಪಡೆಯುವ ರೈತ ಕಂಗಾಲಾಗುತ್ತಾನೆ .

vii ) ಸಹಕಾರಿ ವಲಯದ ವೈಫಲ್ಯತೆ ( The Failure of Co – operation Sector ) ಸರ್ಕಾರದ ಪ್ರೋತ್ಸಾಹವಿಲ್ಲದೆ ಸಹಕಾರಿ ಬ್ಯಾಂಕುಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಲಾಗದೆ ಸೋತು ಹೋಗಿವೆ . ರೈತರನ್ನು ಬಡ್ಡಿ ವ್ಯಾಪಾರಿಗಳಿಂದ ರಕ್ಷಿಸಲು ಸಹಕಾರಿ ವಲಯದ ಬ್ಯಾಂಕ್‌ಗಳು ಸಹಾಯ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿದ್ದರೂ ಪ್ರಯೋಜನಕಾರಿಯಾಗಿಲ್ಲ .

vii ) ನೀರಾವರಿಗೆ ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆ ( Dependency on ground water for Irrigation ) ಕೃಷಿಗೆ ನೀರಾವರಿಯು ಅತ್ಯವಶ್ಯಕ . 1990 ರಿಂದ ಕೆರೆ ಕಟ್ಟೆಗಳು ಒಣಗಿ ಹೋಗುತ್ತಿರುವುದರಿಂದ ರೈತರು ಬಾವಿ ಹಾಗೂ ಕೊಳವೆ ಬಾವಿಗಳನ್ನು ಆಶ್ರಯಿಸ ಬೇಕಾಯಿತು . ಆದರೆ ಸಾಕಷ್ಟು ಮಳೆ ಬೀಳದೆ ಅಂತರ್ಜಲ ಕಡಿಮೆಯಾಗುತ್ತಿರುವುದು ನಿಜಕ್ಕೂ ಸಮಸ್ಯೆಯಾಗಿದೆ .

31. ರೈತರ ಆತ್ಮಹತ್ಯೆಯನ್ನು ವಿಶ್ಲೇಷಣಾತ್ಮಕವಾಗಿ ವಿವರಿಸಿ .

ರೈತರ ಆತ್ಮಹತ್ಯೆಯ ವಿಶ್ಲೇಷಣಾತ್ಮಕ ವಿವರಣೆ ರೈತರ ಆತ್ಮಹತ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ರೈತರ ಆತ್ಮಹತ್ಯೆಗಳನ್ನು ವ್ಯವಸ್ಥಿತವಾಗಿ ವಿಶ್ಲೇಷಿಸಲು ನಾಲ್ಕು ಕಾರಣಗಳನ್ನು ಅರಿಯುವುದು ಅಗತ್ಯವೆಂದು ಆರ್.ಎಸ್ . ದೇಶಪಾಂಡೆಯವರು ಅಭಿಪ್ರಾಯ ಪಡುತ್ತಾರೆ . ಅವುಗಳು

1. ಘಟನೆಗಳು

2. ಒತ್ತಡ ಕಾರಕಗಳು

3. ಕಾರಣಕರ್ತರು

4. ಪ್ರಚೋದಕಗಳು

1. ಘಟನೆಗಳು ( Events )

ರೈತನಿಗಾಗುವ ಬೆಳೆಯ ನಷ್ಟ , ಕೊಳವೆ ಬಾವಿಯ ವೈಫಲ್ಯತೆ , ಬೆಲೆಕುಸಿತ , ಮಗಳ ವಿವಾಹ , ಕೌಟುಂಬಿಕ ಸಮಸ್ಯೆಗಳು ಮತ್ತು ಆಸ್ತಿ ವಿವಾದಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು . ಇವೆಲ್ಲಾ ಘಟನೆಗಳು ರೈತನ ಆತ್ಮಹತ್ಯೆಗೆ ಮುಖ್ಯ ಕಾರಣಗಳಾಗುತ್ತವೆ .

2. ಒತ್ತಡಕಾರಕಗಳು ( Stressors )

ಮೇಲಿನ ಘಟನೆಗಳು ಒಟ್ಟಿಗೆ ಎರಡು ಅಥವಾ ಮೂರು ಸೇರಿದಾಗ ಒತ್ತಡ ಹೆಚ್ಚಾಗುತ್ತದೆ . ಅವುಗಳ ಪರಿಹಾರಕ್ಕೆ ದಾರಿ ಸಿಗದಿದ್ದಾಗ ಒತ್ತಡ ಇನ್ನೂ ಹೆಚ್ಚಾಗುತ್ತದೆ . ಕುಟುಂಬದ ಸದಸ್ಯರ ಅನಾರೋಗ್ಯ , ಭಾರಿ ಪ್ರಮಾಣದ ಸಾಲ , ಕೌಟುಂಬಿಕ ಕಲಹಗಳು- ಹೀಗೆ ಹಲವಾರು ಸಮಸ್ಯೆಗಳು ಒಟ್ಟಿಗೇ ಸೇರಿ ಒತ್ತಡವನ್ನು ಉಂಟುಮಾಡುತ್ತದೆ . ಇವು ಘಟನೆಗಳೊಂದಿಗೆ ಸೇರಿಕೊಂಡು ಮಾರಣಾಂತಿಕ ವಾಗುತ್ತದೆ . ಕಾರಣಕರ್ತರಿಂದ ಪ್ರಚೋದನೆ .

3. ಕಾರಣಕರ್ತರು ( Actors ) ಕಾರಣಕರ್ತರು ಸಂಭವನೀಯ ಬಲಿಪಶುವಿನಲ್ಲಿ ಅಸುರಕ್ಷತೆ ಅಥವಾ ಅಪಮಾನದ ಭಾವನೆಗಳನ್ನು ಮೂಡಿಸುತ್ತಾ ಲೇವಾದೇವಿಗಾರರು , ಬ್ಯಾಂಕರ್‌ಗಳು , ಜೀವನಸಂಗಾತಿ , ಸಂಬಂಧಿಕರು ಮತ್ತು ಆಪ್ತಮಿತ್ರರು ಕಾರಣಕರ್ತರಾಗಿರುತ್ತಾರೆ .

4. ಪ್ರಚೋದಕಗಳು ( Triggers ) ಆತ್ಮಹತ್ಯೆಯು ಸಂಕೀರ್ಣ ಸ್ವರೂಪದ್ದಾಗಿರುವುದರಿಂದ ಅದಕ್ಕೆ ಏಕೈಕ ಕಾರಣವನ್ನು ನೀಡುವುದು ಕಷ್ಟವೆನಿಸುವುದು . ಘಟನೆಗಳು ಮತ್ತು ಒತ್ತಡಕಾರಕಗಳ ಹಿನ್ನೆಲೆಯಲ್ಲಿ ಕಾರಣಕರ್ತರು ಪ್ರಚೋದಕ ಸಂದರ್ಭವನ್ನು ಸೃಷ್ಟಿಸಬಹುದಾಗಿದೆ . ‘ ಎಮಿಲಿ ಡರ್ಖ್ಯೆಂ ‘ ರವರ ಕೃತಿ ‘ ಆತ್ಮಹತ್ಯೆ ‘ ಯಲ್ಲಿ ವಿಶ್ಲೇಷಿಸಿರುವಂತೆ ವ್ಯಕ್ತಿಯು ತನ್ನ ಕುಟುಂಬ ಸಮಾಜ ಮತ್ತು ಧರ್ಮದಿಂದ ವಿಮುಖನಾಗುವಿಕೆಯ ಪ್ರಮಾಣದ ಹೆಚ್ಚಳವು ಆತ್ಮಹತ್ಯೆಗೆ ಕಾರಣವಾಗುತ್ತದೆ .

ಇದು ಸಾಮಾಜಿಕ ವಿಘಟನೆಯ ಸೂಚಕವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ . ಆರ್ಥಿಕ ಸುಧಾರಣೆಗಳು , ಬೆಳವಣಿಗೆಯ ಅಸಮತೆ ಮತ್ತು ಕೃಷಿ ಸಂಕಷ್ಟದ ನಡುವಿನ ಸಂಬಂಧಗಳು ಆತ್ಮಹತ್ಯೆಯ ಕಾರಣಗಳನ್ನು ಅನ್ವೇಷಿಸಿದ ವಿವಿಧ ಅಧ್ಯಯನಗಳು ಸಾಲಬಾಧೆಯೂ ಸಹ ಒಂದು ಕಾರಣ , ಆದರೆ ಕೇವಲ ಅದೊಂದೇ ಅಪಾಯಕಾರಿ ಕಾರಣವಲ್ಲ ಎಂದು ವಿಶ್ಲೇಷಿಸಿದ್ದಾರೆ . ಹವಾಮಾನದ ಅನಿಶ್ಚಿತತೆ , ಮಾರುಕಟ್ಟೆ , ತಂತ್ರಜ್ಞಾನ , ಕಲಬೆರಕೆ ಕಚ್ಚಾವಸ್ತುಗಳು , ಸಾಲ ಸಂಬಂಧದ ಅನಿಶ್ಚಿತತೆಗಳೂ ಸಹ ರೈತನನ್ನು ಬಾಧಿಸುತ್ತವೆ .

ರೈತನ ಅಪಾಯಗಳನ್ನು ದುರ್ಬಲಗೊಳಿಸುವ ತಂತ್ರಗಳ ಅಲಭ್ಯತೆಯಿಂದಾಗಿ ರೈತನು ಬಾಧಿತನಾಗುತ್ತಾನೆ . ಅದರಲ್ಲಿ ಕೆಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ . ರೈತರ ಆತ್ಮಹತ್ಯೆಯ ಪ್ರಕರಣಗಳು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಕಂಡುಬರುತ್ತಿದ್ದು , ಹಿಂದುಳಿದ ರಾಜ್ಯಗಳಲ್ಲಿ ಕಂಡುಬಂದಿಲ್ಲವೆಂಬ ವಿಶಿಷ್ಟ ಸಂಗತಿಯನ್ನು ವಿವಿಧ ಅಧ್ಯಯನಗಳು ಸ್ಪಷ್ಟಪಡಿಸಿದೆ . ಮಧ್ಯಮ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯಗಳ ಹಿಂದುಳಿದ ಪ್ರದೇಶಗಳಲ್ಲಿ ಸಾರ್ವಜನಿಕ ನೀತಿಯ ಬೆಂಬಲರಹಿತವಾದ ಉನ್ನತ ಅಪೇಕ್ಷೆಗಳು High Aspirations ಆತ್ಮಹತ್ಯೆಯ ಪ್ರಮುಖ ಕಾರಣವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ .

32. ಕೃಷಿಯ ಸಂದಿಗ್ಧತೆ ವಿವರಿಸಲು ನಕ್ಷೆ ಬರೆದು ವಿವರಿಸಿ .

ಭಾರತವು ಗ್ರಾಮಗಳ ದೇಶ , ಭಾರತದ ಬಹುಪಾಲು ಜನಸಂಖ್ಯೆ ಹಳ್ಳಿಗಳಲ್ಲೇ ವಾಸಿಸುತ್ತಿದೆ . ಗ್ರಾಮಗಳ ಪ್ರಮುಖ ಉದ್ಯೋಗ ಕೃಷಿ ಈ ಕೃಷಿಯನ್ನು ಮಾಡುವ ರೈತ ಮತ್ತು ಅವನ ಕೃಷಿ ಸಂದಿಗ್ಧತೆಯ ಪರಿಸ್ಥಿತಿಯಲ್ಲಿದೆ . ಅದಕ್ಕೆ ಕಾರಣಗಳು ಹಲವು . ಅವು

1 ) ಸರ್ಕಾರದ ಧೋರಣೆಗಳು : ಕೃಷಿಯನ್ನು ಅಭಿವೃದ್ಧಿ ಗೊಳಿಸಲು ಸರ್ಕಾರ ಹಲವಾರು ವರ್ಷಗಳಿಂದ ಹಲವು ಯೋಜನೆಗಳನ್ನು ಕೈಗೊಂಡಿದೆ . ಸರ್ಕಾರದಿಂದ ಸಿಗುವ ಸವಲತ್ತುಗಳು ಎಷ್ಟರ ಮಟ್ಟಿಗೆ ರೈತನನ್ನು ತಲುಪುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು . ಕೃಷಿ ದೇಶದ ಬೆನ್ನೆಲುಬು . ಎಲ್ಲಾ ಜನರ ಮೂಲಭೂತ ಅವಶ್ಯಕತೆ ಆಹಾರ ವಾಗಿರುವುದರಿಂದ ಇದನ್ನು ಅಭಿವೃದ್ಧಿಪಡಿಸಲೇಬೇಕಾದ ಅನಿವಾರ್ಯತೆ ಇದೆ . ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ , ಕೈಗೊಂಡ ಯೋಜನೆಗಳು ಶೇ .100 ರಷ್ಟು ಅನ್ವಯ ಯಾಗುವಂತೆ ನೋಡಿಕೊಳ್ಳಬೇಕು .

ii ) ಸಾಲ : ಭಾರತೀಯ ರೈತ ಸಾಲದಲ್ಲಿಯೇ ಹುಟ್ಟಿ , ಸಾಲದಲ್ಲಿಯೇ ಜೀವಿಸಿ , ಸಾಲಗಾರನಾಗಿಯೇ ಸಾಯುತ್ತಾನೆ ಎಂಬ ನಾಣ್ಣುಡಿ ಇದೆ . ಇದರ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಯಬೇಕು . ಇದರ ವಿಶ್ಲೇಷಣೆ ಅಗತ್ಯ ಮತ್ತು ರೈತನನ್ನು ಈ ಸಾಲದ ಸುಳಿಯಿಂದ ಹೊರತರಬೇಕು .

iii ) ಲೇವಾದೇವಿದಾರರು : ರೈತ ಹಣವಿಲ್ಲವೆಂದು ಬೇಸಾಯ ಮಾಡದೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ . ಅವನ ಹತ್ತಿರ ಹಣವಿಲ್ಲ , ಸರ್ಕಾರದ ಸಹಾಯವಿಲ್ಲ . ಎಂದಾದಾಗ ಅವನು ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿಗೆ ಹಣವನ್ನು ಸಾಲ ಮಾಡುತ್ತಾನೆ . ಇದರಿಂದ ರೈತನಿಗೆ ವಿಮೋಚನೆಯೇ ಇಲ್ಲ ಎಂಬ ಪರಿಸ್ಥಿತಿಯಿಂದ ಹೊರತರಬೇಕು .

iv ) ಆರೋಗ್ಯ ಮತ್ತು ಇತರ ಅಗತ್ಯಗಳು : ರೈತ ತಾನೇ ಸ್ವತಃ ಬೆಳೆದರೂ ಪೌಷ್ಠಿಕ ಆಹಾರ ಸೇವನೆ ಮಾಡುವುದಿಲ್ಲ . ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ತೆಗೆದುಕೊಳ್ಳುವುದಿಲ್ಲ . ಅಜ್ಞಾನದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾನೆ . ಅನಾರೋಗಿಯಾದ ರೈತ ಏನನ್ನು ತಾನೇ ಮಾಡಲು ಸಾಧ್ಯ ಅವನು ಆರೋಗ್ಯವಂತನಾಗಿರುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯಿದೆ .

v ) ವಸ್ತುಗಳ ಬೆಲೆಯ ಅನಿಶ್ಚಿತತೆ : ರೈತ ಅವಿದ್ಯಾವಂತ ಮತ್ತು ಮುಂದಾಗುವುದನ್ನು ಊಹಿಸಲು ಅಸಮರ್ಥವಾ ದುದರಿಂದ ಕಷ್ಟಪಡಬೇಕಾಗುತ್ತದೆ . ಅವನು ಕಷ್ಟ ಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದಾಗ ಅವನ ಖರ್ಚು ವೆಚ್ಚಗಳೂ ಸಹ ಬರದ ಪರಿಸ್ಥಿತಿಯಲ್ಲಿ ತೊಳಲಾಡ ಬೇಕಾಗುತ್ತದೆ . ವಸ್ತುಗಳ ಬೆಲೆಯ ನಿಶ್ಚಿತತೆ ಇರುವುದಿಲ್ಲ ವಾದ್ದರಿಂದ ನಷ್ಟಕ್ಕೆ ಒಳಗಾಗುತ್ತಾನೆ .

vi ) ಕೊಂಡುಕೊಂಡ ತಂತ್ರಜ್ಞಾನ ಮತ್ತು ಮಾಹಿತಿ : ರೈತನಿಗೆ ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸುವುದು ಅನಿವಾರ್ಯ ವಾಗಿದೆ . ಹಿಂದಿನ ಕಾಲದ ಬೇಸಾಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದರೆ ಇಳುವರಿ ಹೆಚ್ಚಿಗೆ ಬರುವುದಿಲ್ಲ . ಆದ್ದರಿಂದ ಈಗ ವೈಜ್ಞಾನಿಕ ಮಾದರಿಯ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು . ಈ ನಿಟ್ಟಿನಲ್ಲಿ ಬರುವ ತೊಂದರೆಗಳನ್ನು ನಿವಾರಿಸಿ ರೈತನಿಗೆ ಸಹಾಯ ಮಾಡುವುದು ಅತ್ಯಗತ್ಯ .

vii ) ನೀರು : ಭಾರತೀಯ ಕೃಷಿ ಮಾನ್ಸೂನ್ ಮಳೆಯ ಮೇಲೆ ಅವಲಂಬಿತವಾಗಿದೆ . ಮಳೆ ಬಂದರೆ ಅತಿವೃಷ್ಟಿ ಅಥವಾ ಅನಾವೃಷ್ಟಿ ಆದ್ದರಿಂದ ಕೃಷಿಗೆ ನೀರಿನ ಪೂರೈಕೆ ಅಥವಾ ನೀರಾವರಿ ಯೋಜನೆಗಳ ಅಗತ್ಯವಿದೆ . ನೀರಿನ ಸೌಕರ್ಯವಿಲ್ಲದಿದ್ದರೆ ರೈತ ಬೆಳೆ ಬೆಳೆಯಲಾಗದೆ ಕಷ್ಟ ಪಡಬೇಕಾಗುತ್ತದೆ .

viii ) ಹವಾಮಾನ ಮತ್ತು ಕಾರ್ಮಿಕರು : ಇತ್ತೀಚೆಗೆ ಕೃಷಿ ಕಾರ್ಮಿಕರ ಅಲಭ್ಯತೆಯಿಂದಾಗಿ ಹೆಚ್ಚಿನ ಸಮಸ್ಯೆಗಳಾಗಿವೆ . ಹವಾಮಾನದ ಪ್ರತಿಕೂಲತೆಯಿಂದಾಗಿ ಇಳುವರಿ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ . ಇದಕ್ಕೆ ಪರ್ಯಾಯವಾಗಿ ಏನನ್ನಾದರೂ ಪರಿಹಾರ ಕಂಡು ಹಿಡಿಯಬೇಕಿದೆ .

iv ) ಪರಿಕರಗಳ ಬೆಲೆ : ರೈತನಿಗೆ ಬೆಳೆ ಬೆಳೆಯಲು ಬೇಕಾದ ಕಚ್ಚಾವಸ್ತುಗಳು , ಕೃಷಿ ಉಪಕರಣಗಳು ಹಾಗೂ ಇತರ ತಂತ್ರಜ್ಞಾನದ ಉಪಕರಣಗಳು ಬಹಳ ದುಬಾರಿಯಾಗಿವೆ . ಇವುಗಳನ್ನು ಕೊಂಡಕೊಳ್ಳಲು ರೈತನು ಅಸಮರ್ಥನಾಗಿದ್ದಾನೆ . ಈ ಪರಿಸ್ಥಿತಿಯನ್ನು ಸುಧಾರಿಸಬೇಕಾಗಿದೆ . ರೈತನು ಅಥವಾ ಕೃಷಿಯ ಇಷ್ಟೆಲ್ಲಾ ಸಂದಿಗ್ಧತೆಯ ಹೊಂದಿದ್ದಾನೆ . ಇಂತಹ ಪರಿಸ್ಥಿತಿಯ ಸುಧಾರಣೆ ಅತ್ಯಗತ್ಯ ವಾಗಿದೆ . ಈ ಪರಿಸ್ಥಿತಿಯನ್ನು ಹೋಗಲಾಡಿಸಿ , ಅಭಿವೃದ್ಧಿಯನ್ನು ಮಾಡಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ .

33. ಗ್ರಾಮೀಣಾಭಿವೃದ್ಧಿಯಲ್ಲಿ ಇತ್ತೀಚಿನ ದೋರಣೆಗಳನ್ನು ಬರೆಯಿರಿ .

ಗ್ರಾಮೀಣಾಭಿವೃದ್ಧಿಯಲ್ಲಿ ಇತ್ತೀಚಿನ ಧೋರಣೆಗಳು ಗ್ರಾಮೀಣ ಅಭಿವೃದ್ಧಿಯು ಗ್ರಾಮೀಣ ಬಡವರ ಆರ್ಥಿಕ ಮತ್ತು ಸಾಮಾಜಿಕ ಒಳಿತಿನ ಸಾಧನೆಯನ್ನು ಸೂಚಿಸುತ್ತದೆ . ಗ್ರಾಮೀಣಾಭಿವೃದ್ಧಿಯು ಗ್ರಾಮಗಳ ಸಮಗ್ರ ಅಭಿವೃದ್ಧಿಯನ್ನು ಒಳಗೊಂಡಿದೆ . ಗ್ರಾಮೀಣ ಜನತೆಯ ಜೀವನ ಮಟ್ಟದ ಸುಧಾರಣೆಯು ಇದರ ಮೂಲ ಉದ್ದೇಶವಾಗಿದೆ . ಈ ಅಭಿವೃದ್ಧಿ ಯೋಜನೆಯು ವಿಶೇಷವಾಗಿ ಬಡವರ ಜೀವನದ ಗುಣಮಟ್ಟದಲ್ಲಿ ಸುಧಾರಣೆ ತರುವ ಪ್ರತಿಕ್ರಿಯೆ ಯಾಗಿದೆ . ಗ್ರಾಮೀಣ ಅಭಿವೃದ್ಧಿಯನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು . ಅವು

1 ) ಉತ್ಪಾದನಾ ಆಧಾರಿತ ಚಟುವಟಿಕೆಗಳು ( Production Oriented Activities ) ಇದರ ಉದ್ದೇಶ ಉತ್ಪಾದನೆ ಹಾಗೂ ಸೇವೆ . ಉದಾಹರಣೆಗೆ ರಸಗೊಬ್ಬರಗಳಿಗೆ ಸಬ್ಸಿಡಿ ನೀಡುವುದು , ನೀರಾವರಿ ಪೂರೈಕೆ , ಸಾಲ ನೀಡುವುದು , ಗ್ರಾಮೀಣ ಉದ್ದಿಮೆಗಳನ್ನು ಗುರ್ತಿಸುವುದು ಇತ್ಯಾದಿ ಇದಕ್ಕಾಗಿ ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು , ಭೂ ಸುಧಾರಣಾ ಕ್ರಮಗಳು , ಪಂಚಾಯತ್‌ರಾಜ್ , ಬಡತನ ನಿರ್ಮೂಲನಾ ಕಾರ್ಯಕ್ರಮಗಳು ಕೆಲವು ಉದಾಹರಣೆಗಳಾಗಿವೆ .

2 ) ಉತ್ಪಾದನೇತರ ಚಟುವಟಿಕೆಗಳು ( Non – Production Oriented Activities ) ಈ ಯೋಜನೆಗಳು ಜನರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನಿಟ್ಟುಕೊಂಡಿದೆ . ಇದಕ್ಕಾಗಿ ಹಲವಾರು ಯೋಜನೆಗಳು ಪ್ರಾರಂಭವಾಗಿವೆ . ಅವುಗಳಲ್ಲಿ ಕೆಲವು

1 ) ಬುಡಕಟ್ಟು ಅಭಿವೃದ್ಧಿ ಯೋಜನೆ – 1959

2 ) ಮರುಭೂಮಿ ಅಭಿವೃದ್ಧಿ ಯೋಜನೆ – 1977

i ) ಕೂಲಿಗಾಗಿ ಕಾಳು ಯೋಜನೆ 1977

iv ) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ -1980 ಮುಂತಾದವುಗಳು . ಕೆಲವು ಯೋಜನೆಗಳು ಆಸ್ತಿ ಹೆಚ್ಚಳದ ಮೂಲಕ ಜನರಲ್ಲಿ ಆರ್ಥಿಕ ಸುಧಾರಣೆ ತರಲು ಯತ್ನಿಸಿದವು . ಜನರ ಸಮಾಜ ಕಲ್ಯಾಣಕ್ಕೆ ಆದ್ಯತೆ ನೀಡಿದವು . ಬಡತನ ನಿರ್ಮೂಲನೆ , ಸ್ವ – ಉದ್ಯೋಗ , ಇಪ್ಪತ್ತು ಅಂಶಗಳ ಕಾರ್ಯಕ್ರಮ ಇತ್ಯಾದಿ ಸಮುದಾಯದಲ್ಲಿ ಭಾಗವಹಿಸುವಿಕೆ , ಸಾಮಾಜಿಕ ಅನಿಷ್ಟಗಳ ನಿವಾರಣೆ ಮತ್ತು ಜೀವನಮಟ್ಟದ ಸುಧಾರಣೆಗಳು ಇವೆಲ್ಲಾ ಕಾರ್ಯಕ್ರಮಗಳ ಮೂಲ ಉದ್ದೇಶವಾಗಿವೆ .

ಇತ್ತೀಚೆಗೆ ಭೂಸುಧಾರಣೆ , ಹಸಿರುಕ್ರಾಂತಿ , ಪಂಚಾಯತ್ ರಾಜ್ , ಸಮುದಾಯ ಅಭಿವೃದ್ಧಿ ಕಾರ್ಯಕ್ರಮ , ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳನ್ನು ಹೆಸರಿಸಿ , ವಿಶ್ಲೇಷಿಸಬಹುದು . ಭಾರತ ಸರ್ಕಾರವು ಸಮಗ್ರ ಗ್ರಾಮೀಣ ಅಭಿವೃದ್ಧಿ ( Integrated Rural Development Programme ) ಜಾರಿಗೆ ತಂದಿದ್ದಾರೆ . ಈ ಯೋಜನೆಯು ಗ್ರಾಮೀಣ ಪ್ರದೇಶದ ಕಡು ಬಡವರ ಸಾಮಾಜಿಕ ಮತ್ತು ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಿ , ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ವಸಾಮರ್ಥ್ಯವನ್ನು ಬೆಳೆಸುವ ಉದ್ದೇಶವಿದೆ . ಹಾಗೆಯೇ ಅವರನ್ನು ಬಡತನ ರೇಖೆಯಿಂದ ಹೊರ ಬರುವಂತೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ . ಅವುಗಳಲ್ಲಿ ಕೆಲವು

i ) ಕೃಷಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ನೀಡಿ ಕೃಷಿಯ ಪ್ರಗತಿ ಮತ್ತು ಉತ್ಪಾದಕತೆಯ ಹೆಚ್ಚಳವನ್ನುಂಟು ಮಾಡುವುದು .

ii ) ಮಾಧ್ಯಮಿಕ ಮತ್ತು ತೃತೀಯ ರಂಗದ ಆರ್ಥಿಕ ವಲಯಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಭೂಹೀನ ಕೃಷಿ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವುದು .

iii ) ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಗಳನ್ನು ಕಲ್ಪಿಸುವುದು ಮತ್ತು ತಮ್ಮ ಸಾಮರ್ಥ್ಯದಿಂದಲೇ ಸಂಪೂರ್ಣ ಅಭಿವೃದ್ಧಿ ಹೊಂದಲು ನೆರವು ನೀಡುವುದು .

iv ) ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಕ್ಕಾಗಿ ಉತ್ಪಾದಕತೆ , ಕೌಶಲ್ಯತೆಗಳು , ಸಂಪತ್ತು ಮತ್ತು ಸಾಲದ ಸೌಲಭ್ಯಗಳನ್ನು ಬಡವರಿಗೆ ನೀಡುವುದು ಇತ್ಯಾದಿ . ಹೀಗೆ ಹತ್ತು ಹಲವಾರು ಯೋಜನೆಗಳನ್ನು ಪ್ರಾರಂಭಿಸಿ , ಗ್ರಾಮೀಣಾಭಿವೃದ್ಧಿಯನ್ನು ಮಾಡುತ್ತಿದೆ . ಇದು ಇತ್ತೀಚಿನ ಧೋರಣೆಯಾಗಿದೆ .

FAQ

1. ರೂರಲ್ ಸೋಶಿಯಾಲಜಿ ಇನ್ ಇಂಡಿಯಾ ಗ್ರಂಥದ ಕತೃ ಯಾರು ?

ರೂರಲ್ ಸೋಶಿಯಾಲಜಿ ಇನ್ ಇಂಡಿಯಾ ಗ್ರಂಥದ ಕರ್ತೃ ಎ.ಆರ್ . ದೇಸಾಯಿ

2. ಭಾರತೀಯ ಗ್ರಾಮಗಳು ಪುಟ್ಟ ಗಣರಾಜ್ಯಗಳು ಎಂದವರು ಯಾರು ?

ಭಾರತೀಯ ಗ್ರಾಮಗಳನ್ನು ಪುಟ್ಟಗಣರಾಜ್ಯಗಳು ಎಂದವರು ಚಾರ್ಲ್ಸ್ ಮೆಟಕಾಫ್ ಎಂಬ ಬ್ರಿಟಿಷ್ ಅಧಿಕಾರಿ

3. ಗ್ರಾಮೀಣ ಅಧ್ಯಯನವನ್ನು ಕೈಗೊಂಡ ಇಬ್ಬರು ಸಮಾಜಶಾಸ್ತ್ರಜ್ಞರನ್ನು ತಿಳಿಸಿ,

ಎಂ.ಎನ್ . ಶ್ರೀನಿವಾಸ್ ಮತ್ತು ಎ.ಆರ್‌ . ದೇಸಾಯಿ .

ಇತರೆ ವಿಷಯಗಳು :

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್‌

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

Leave a Reply

Your email address will not be published. Required fields are marked *

rtgh