ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-4 ಭಾರತದಲ್ಲಿ ಕುಟುಂಬ ನೋಟ್ಸ್‌ | 2nd Puc Sociology Chapter 4 Notes in Kannada

ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-4 ಭಾರತದಲ್ಲಿ ಕುಟುಂಬ ನೋಟ್ಸ್‌, 2nd Puc Sociology Chapter 4 Notes in Kannada Question Answer Mcq Pdf Download Kseeb Solution For Class 12 Sociology Chapter 4 Notes in Kannada Medium family in india sociology notes in Kannada bharathadalli kutumba notes in kannada 2024

ಅಧ್ಯಾಯ-4 ಭಾರತದಲ್ಲಿ ಕುಟುಂಬ

Sociology Chapter 4

2nd Puc Sociology Notes in Kannada Chapter 4

I. ಒಂದು ಅಂಕದ ಪ್ರಶ್ನೆಗಳು :

1 . ಅವಿಭಕ್ತ ಕುಟುಂಬ ಎಂದರೇನು ?

ಅವಿಭಕ್ತ ಕುಟುಂಬ ಎಂದರೆ ಒಂದು ಜನರ ಸಮೂಹವಾಗಿದ್ದು , ಸಾಮಾನ್ಯವಾಗಿ ಒಂದೇ ಮನೆಯಲ್ಲಿ ಜೀವಿಸುತ್ತಾ , ಒಂದೇ ಅಡಿಗೆಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುತ್ತಾ , ಆಸ್ತಿಯ ಮೇಲೆ ಸಾಮೂಹಿಕ ಆಸ್ತಿಯ ಒಡೆತನ ಹೊಂದಿದ್ದು , ಧಾರ್ಮಿಕ ಪೂಜಾವಿಧಾನದಲ್ಲಿ ಭಾಗವಹಿಸುತ್ತಾ ಪ್ರತಿಯೊಬ್ಬರೂ ಪರಸ್ಪರ ರಕ್ತ ಸಂಬಂಧಗಳಿಂದ ಗುರ್ತಿಸಿ ಕೊಳ್ಳುವ ಜನರ ಸಂಕಲನ .

2. ಅವಿಭಕ್ತ ಕುಟುಂಬದ ಒಂದು ಗುಣಲಕ್ಷಣವನ್ನು ಹೆಸರಿಸಿ .

ಅವಿಭಕ್ತ ಕುಟುಂಬದ ಅನೇಕ ಗುಣಲಕ್ಷಣಗಳಲ್ಲಿ ಒಂದಾದ ‘ ಪೀಳಿಗೆಗಳ ಸಮಾವೇಶ ‘ Depth of Generation ಅವಿಭಕ್ತ ಕುಟುಂಬದಲ್ಲಿ ಕನಿಷ್ಟ ಮೂರು ಅಥವಾ ಹೆಚ್ಚು ಪೀಳಿಗೆಗಳ ಸಮಾವೇಶಗಳನ್ನು ಒಳಗೊಂಡಿದೆ . ತಂದೆ – ತಾಯಿ , ಮಕ್ಕಳು ಹಾಗೂ ಮೊಮ್ಮಕ್ಕಳು ಹಾಗೂ ಕೆಲವೊಮ್ಮೆ ಚಿಕ್ಕಮ್ಮ – ಚಿಕ್ಕಪ್ಪ ಮತ್ತು ಅವರ ಸಂತತಿ , ದಾಯಾದಿಗಳು , ಆಳು ಕಾಳುಗಳು ಇತ್ಯಾದಿ ರಕ್ತ ಸಂಬಂಧಿಗಳ ಸಮೂಹವಾಗಿರುತ್ತದೆ .

3. ಭಾರತದ ಅವಿಭಕ್ತ ಕುಟುಂಬವನ್ನು “ ಮಹಾಮನೆ ಅಥವಾ ಬೃಹತ್ ಮನೆ ” ಎಂದು ಕರೆದವರು ಯಾರು?

ಶ್ರೀಯುತ ಹೆನ್ರಿಮೇನ್‌ರವರು ಭಾರತದ ಅವಿಭಕ್ತ ಕುಟುಂಬವನ್ನು ‘ ಮಹಾಮನೆ ಅಥವಾ ಬೃಹತ್ ಮನೆ ‘ ಎಂದು ಕರೆದಿದ್ದಾರೆ .

4. ಅವಿಭಕ್ತ ಕುಟುಂಬದ ಯಜಮಾನ ಯಾರು ?

ಅವಿಭಕ್ತ ಕುಟುಂಬದ ಯಜಮಾನ ಆ ಕುಟುಂಬದ ಅತ್ಯಂತ ಹಿರಿಯ ಸದಸ್ಯ ಅಥವಾ ತಂದೆ . ಪಿತೃ ವಂಶೀಯ ಅವಿಭಕ್ತ ಕುಟುಂಬದಲ್ಲಿ ತಂದೆ ಅಥವಾ ಪುರುಷ ಹಿರಿಯ , ಮಾತೃವಂಶೀಯ ಅವಿಭಕ್ತ ಕುಟುಂಬದಲ್ಲಿ ಅತ್ಯಂತ ಹಿರಿಯ ಮಹಿಳೆ ಅಥವಾ ತಾಯಿ ಯಜಮಾನರಾಗಿರುತ್ತಾರೆ .

5. ಕರ್ತಾ ಎಂದರೆ ಯಾರು ?

ಹಿಂದೂ ಅವಿಭಕ್ತ ಕುಟುಂಬದ ಹಿರಿಯ ಸದಸ್ಯನನ್ನು ‘ ಕರ್ತಾ ‘ ಎನ್ನುವರು . ಈತನು ಕೌಟುಂಬಿಕ ಹೊಣೆಗಾರಿಕೆ ಯನ್ನು ಹೊಂದಿರುತ್ತಾರೆ ಕುಟುಂಬದ ಉಳಿದೆಲ್ಲ ಸದಸ್ಯರಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ .

6. ಅವಿಭಕ್ತ ಕುಟುಂಬದ ಒಂದು ಅನುಕೂಲತೆಯನ್ನು ಹೆಸರಿಸಿ .

ಅವಿಭಕ್ತ ಕುಟುಂಬದಲ್ಲಿ ಅನೇಕ ಅನುಕೂಲತೆಗಳಿವೆ . ಅವುಗಳಲ್ಲಿ ಒಂದು

1 ) ಆರ್ಥಿಕ ಅನುಕೂಲತೆ ( Economic Advantage ) ಅವಿಭಕ್ತ ಕುಟುಂಬದ ಆಸ್ತಿಯು ಒಟ್ಟಾಗಿರುವುದರಿಂದ ಪ್ರತಿಯೊಬ್ಬರ ದುಡಿಮೆ ಮತ್ತು ಸಹಕಾರ ಮನೋ ಭಾವನೆಯು ಬೆಂಬಲ ನೀಡುತ್ತದೆ . ವ್ಯಕ್ತಿಯ ಜೀವನದ ಸರ್ವಾಂಗೀಯ ಬೆಳವಣಿಗೆಗೆ ಉಪಯುಕ್ತವಾಗಿರುತ್ತದೆ .

7. ಅವಿಭಕ್ತ ಕುಟುಂಬದ ಒಂದು ಅನಾನುಕೂಲತೆಯನ್ನು ಹೆಸರಿಸಿ .

ಅವಿಭಕ್ತ ಕುಟುಂಬದ ನಾನಾ ಅನಾನುಕೂಲತೆಗಳಲ್ಲಿ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಆಡಚಣೆ ( Hindrance in the development of personality ) ಸಹಾ ಒಂದು . ಇಲ್ಲಿ ವ್ಯಕ್ತಿತ್ವದ ಬೆಳವಣಿಗೆ ಮತ್ತು ಸ್ವಾವಲಂಬನೆಗೆ ಅವಕಾಶಗಳು ಕಡಿಮೆ . ಸದಸ್ಯರು ಯಾವಾಗಲೂ ಹಿರಿಯರ ಬೆಂಬಲ ಮತ್ತು ನೆರವಿನಲ್ಲಿ ಬೆಳೆಯಬೇಕಾಗುತ್ತದೆ . ಬಾಹ್ಯ ಪ್ರಪಂಚದಲ್ಲಿ ಒಬ್ಬಂಟಿಯಾಗಿ ಜೀವನ ಎದುರಿಸುವ ಸಾಮರ್ಥ್ಯ ಇರುವುದಿಲ್ಲ .

8. ಇಲ್ಲಾಂ ಎಂದರೇನು ?

ಕೇರಳದ ನಂಬೂದರಿ ಅವಿಭಕ್ತ ಕುಟುಂಬ ಪಿತೃ ವಂಶೀಯವಾಗಿದ್ದು , ಅವರ ವಾಸಸ್ಥಳವನ್ನು ಇಲ್ಲಾಂ ‘ ಎಂದು ಕರೆಯುತ್ತಾರೆ .

9. ತರವಾಡು ಎಂದರೇನು ?

ತರವಾಡಗಳು ಮಾತೃವಂಶೀಯ ಮತ್ತು ಮಾತೃಪ್ರಧಾನ ಕುಟುಂಬವಾಗಿದೆ . ಕುಟುಂಬದ ಹಿರಿಯ ಸ್ತ್ರೀ ಸದಸ್ಯೆ ಅಥವಾ ತಾಯಿ ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ .

10. ಕರ್ಣನ್ ಎಂದರೆ ಯಾರು ?

ಮಾತೃವಂಶೀಯ ಕುಟುಂಬಗಳಲ್ಲಿ ತಾಯಿಯ ಸಹೋದರ ಕುಟುಂಬದ ಹೊಣೆಗಾರಿಕೆಯ ಜವಾಬ್ದಾರಿ ಹೊಂದಿರುವ ವ್ಯಕ್ತಿಯನ್ನು “ ಕರ್ಣವನ್ ‘ ಎಂದು ಕರೆಯುತ್ತಾರೆ .

11 . ಪಿತೃಪ್ರಧಾನ ಅಥವಾ ಪಿತೃವಂಶೀಯ ಕುಟುಂಬ ಎಂದರೇನು ?

ಪಿತೃವಂಶೀಯ ಅವಿಭಕ್ತ ಕುಟುಂಬವನ್ನು ತಂದೆ ಅಥವಾ ಹಿರಿಯ ಮಗ ಎಂದರೆ ಪುರುಷರೇ ಪ್ರಧಾನವಾಗಿ ಕುಟುಂಬದ ಎಲ್ಲಾ ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ .

12. ಮಾತೃ ಪ್ರಧಾನ ಕುಟುಂಬ ಎಂದರೇನು ?

ಅವಿಭಕ್ತ ಕುಟುಂಬವನ್ನು ತಾಯಿ ಅಥವಾ ಕುಟುಂಬದ ಹಿರಿಯ ಸ್ತ್ರೀ ಸದಸ್ಯೆಯು ನೋಡಿಕೊಳ್ಳುತ್ತಾಳೆ ಮತ್ತು ಕುಟುಂಬದ ಹೊಣೆಗಾರಿಕೆಯನ್ನು ಅವರೇ ನಿಭಾಯಿಸುತ್ತಾರೆ ಇಂತಹ ಕುಟುಂಬವನ್ನು ಮಾತೃಪ್ರಧಾನ ಕುಟುಂಬ ಎನ್ನುತ್ತಾರೆ .

13. ತರವಾಡಿನ ಒಂದು ಪರಿವರ್ತನೆ ಅಂಶವನ್ನು ತಿಳಿಸಿರಿ ?

ತರವಾಡಿನಲ್ಲಿ ಆಂತರಿಕ ಪರಿವರ್ತನೆಗಳು ವ್ಯಾಪಕವಾಗಿ ಉಂಟಾಗಿದೆ . ಅಂತಹ ಪರಿವರ್ತನೆಗಳಲ್ಲೊಂದು ಹೀಗಿದೆ . ಇತ್ತೀಚಿನ ದಿನಗಳಲ್ಲಿ ತರವಾಡಿನ ‘ ಆಸ್ತಿಗಳು ಕುಟುಂಬದ ಸದಸ್ಯರಲ್ಲಿ ವಿಭಜನೆಗೊಳ್ಳುತ್ತಿದೆ .

14. ಪಿತೃಪ್ರಧಾನ ಮತ್ತು ಮಾತೃಪ್ರಧಾನ ಕುಟುಂಬದ ಒಂದು ವ್ಯತ್ಯಾಸ ನೀಡಿ .

ಪಿತೃವಂಶೀಯ ಅವಿಭಕ್ತ ಕುಟುಂಬದ ವಾಸಸ್ಥಳವನ್ನು ಇಲ್ಲಾಂ ಎಂದು ಕರೆದರೆ ಮಾತೃವಂಶೀಯ ಅವಿಭಕ್ತಿ ಕುಟುಂಬದ ವಾಸಸ್ಥಳವನ್ನು ತರವಾಡಗಳೆಂದು ಕರೆಯುತ್ತಾರೆ .

15. ಅಳಿಯ ಸಂತಾನ ವಾಸಸ್ಥಳ ಎಂದರೇನು ?

ಮಾತೃವಂಶೀಯ ಕುಟುಂಬದ ನಾಗವಂಶೀಯ ಕನೈಯರು ವಿವಾಹದ ನಂತರ ಗಂಡನ ಮನೆಗೆ ಹೋಗುವುದಿಲ್ಲ . ಅದರ ಬದಲಿಗೆ ಗಂಡನೇ ಹೆಂಡತಿಯ ಮನೆಯಲ್ಲಿ ನೆಲೆಸುತ್ತಾನೆ . ಇಂತಹ ವಿಧಾನವನ್ನು ಅಳಿಯ ಸಂತತಿ ‘ ಅಥವಾ ಅಳಿಯನ ವಂಶಪರಂಪರೆ Son – in Laws Lineage ಎಂದು ಕರೆಯುತ್ತಾರೆ ಮತ್ತು ಇಂತಹ ಪ್ರವೃತ್ತಿಯನ್ನು ಅಳಿಯ ಸಂತತಿ ವಾಸಸ್ಥಳ ಎನ್ನುವರು .

16. ಅವಿಭಕ್ತ ಕುಟುಂಬದ ಯಾವುದಾದರೂ ಒಂದು ಪರಿವರ್ತನೆ ಅಂಶವನ್ನು ಹೆಸರಿಸಿ ,

ಅವಿಭಕ್ತ ಕುಟುಂಬದ ಒಂದು ಪರಿವರ್ತನೆಯ ಅಂಶ ಎಂದರೆ ಗಾತ್ರದಲ್ಲಿ ಪರಿವರ್ತನೆ ಇಂದು ಅವಿಭಕ್ತ ಕುಟುಂಬಗಳ ಗಾತ್ರ ಕಡಿಮೆಯಾಗುತ್ತಿದ್ದು ಕುಟುಂಬದಲ್ಲಿ ಎರಡು ಅಥವಾ ಮೂರು ತಲೆಮಾರಿನ 8-10 ಜನ ಸದಸ್ಯರಿರುತ್ತಾರೆ .

17. ಭಾರತದಲ್ಲಿ “ ರಕ್ತ ಸಂಬಂಧಿಗಳ ಸಂಘಟನೆ ” ಎಂಬ ಗ್ರಂಥದ ಕೃರ್ತ ಯಾರು ?

ಭಾರತದಲ್ಲಿ ರಕ್ತ ಸಂಬಂಧಿಗಳ ಸಂಘಟನೆ Kinship Organization in India ಈ ಗ್ರಂಥದ ಕರ್ತೃ ಐರಾವತಿ ಕಾರ್ವೆ.

18. ಭಾರತದಲ್ಲಿ ವಿವಾಹ ಮತ್ತು ಕುಟುಂಬ ಎಂಬ ಗ್ರಂಥದ ಕೃರ್ತ ಯಾರು ?

ಭಾರತದಲ್ಲಿ ವಿವಾಹ ಮತ್ತು ಕುಟುಂಬ ಎಂಬ ಗ್ರಂಥದ ಕರ್ತೃ .

19. ಒಕ್ಕ ಎಂದರೇನು ?

` ಓಕ್ಕ – ಕೊಡವರ ಪಿತೃವಂಶೀಯ ಮತ್ತು ಪಿತೃ ಪ್ರಧಾನ ಕುಟುಂಬ . ಈ ಅವಿಭಕ್ತ ಕುಟುಂಬದಲ್ಲಿ ಜನನ ಮೂಲಕವೇ ಸದಸ್ಯತ್ವ ಪಡೆದುಕೊಳ್ಳುವರು . ಪ್ರತಿಯೊಬ್ಬ ಸದಸ್ಯರು ತಮ್ಮ ಓಕ್ಕದೊಂದಿಗೆ ಗುರ್ತಿಸಿಕೊಳ್ಳಲು ಬಯಸುತ್ತಾರೆ .

2nd Puc Sociology Chapter 4 Notes in Kannada

II . ಎರಡು ಅಂಕದ ಪ್ರಶ್ನೆಗಳು :

20. ಅವಿಭಕ್ತ ಕುಟುಂಬವನ್ನು ವ್ಯಾಖ್ಯಾನಿಸಿ .

ಐ.ಪಿ. ದೇಸಾಯಿಯವರ ಪ್ರಕಾರ ಅವಿಭಕ್ತ ಕುಟುಂಬದ ವ್ಯಾಖ್ಯೆ ಹೀಗಿದೆ .

ಆಸ್ತಿ , ಆದಾಯ ಮತ್ತು ಹಕ್ಕು ಬಾಧ್ಯತೆಗಳ ಮೂಲಕ ಪರಸ್ಪರ ಸಂಬಂಧಿತರಾದ ಮೂರು – ನಾಲ್ಕು ತಲೆಮಾರು ಗಳಿಗೆ ಸೇರಿದ ಜನಸಮುದಾಯವನ್ನು ಅವಿಭಕ್ತ ಕುಟುಂಬ ಎನ್ನುತ್ತಾರೆ .

21. ಅವಿಭಕ್ತ ಕುಟುಂಬದ ಎರಡು ಗುಣಲಕ್ಷಣಗಳನ್ನು ಹೆಸರಿಸಿ .

ಅವಿಭಕ್ತ ಕುಟುಂಬದ ಗುಣಲಕ್ಷಣಗಳು ಹಲವಾರು . ಅವುಗಳಲ್ಲಿ ಎರಡು ಗುಣಲಕ್ಷಣಗಳು ಇಂತಿವೆ .

i ) ಸಾಮಾನ್ಯ ಅಡಿಗೆ ಮನೆ ಅಥವಾ ಒಲೆ

ii )ಸಾಮಾನ್ಯ ಧಾರ್ಮಿಕ ಕ್ರಿಯಾವಿಧಿ

i) ಸಾಮಾನ್ಯ ಅಡಿಗೆ ಮನೆ ( Common Kitchen ) ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರು ಒಂದೇ ಅಡಿಗೆ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಯನ್ನು ಮಾಡುತ್ತಾರೆ . ಇದು ಅವಿಭಕ್ತ ಕುಟುಂಬದ ವಿಶಿಷ್ಟವಾದ ಗುಣಲಕ್ಷಣವಾಗಿದೆ . ಹಿರಿಯ ಸ್ತ್ರೀ ಸದಸ್ಯೆ ( ಕರ್ತನ ಹೆಂಡತಿ )ಅಡಿಗೆ ಮನೆಯ ಮೇಲ್ವಿಚಾರಣೆಯ ಹೊಣೆಗಾರಿಕೆ ಹೊಂದಿರುತ್ತಾರೆ .

ii ) ಸಾಮಾನ್ಯ ಧಾರ್ಮಿಕ ಕ್ರಿಯಾವಿಧಿ ( Common Worship ) ಪ್ರತಿಯೊಂದು ಅವಿಭಕ್ತ ಕುಟುಂಬಗಳೂ ತಮ್ಮದೇ ಆದ ಕುಲದೇವತೆಯನ್ನು ಹೊಂದಿರುತ್ತಾರೆ . ಕುಟುಂಬದ ಸದಸ್ಯರೆಲ್ಲರೂ ಪೂಜಾವಿಧಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ .

22. ಅವಿಭಕ್ತ ಕುಟುಂಬದ ಎರಡು ಅನುಕೂಲತೆಗಳನ್ನು ಹೆಸರಿಸಿ .

ಅವಿಭಕ್ತ ಕುಟುಂಬದ ಎರಡು ಅನುಕೂಲತೆಗಳು ( Advantages ) ಹೀಗಿವೆ .

i ) ಸದಸ್ಯರ ಸಂರಕ್ಷಣೆ ( Protection to Members ) ಅವಿಭಕ್ತ ಕುಟುಂಬವು ತನ್ನೆಲ್ಲಾ ಸದಸ್ಯರಿಗೆ , ಎಲ್ಲಾ ಹಂತದಲ್ಲೂ ರಕ್ಷಣೆಯನ್ನು ನೀಡಿ ಪೋಷಿಸುತ್ತದೆ . ಸಂಕಷ್ಟದಲ್ಲಿ ನೆರವನ್ನು ನೀಡುತ್ತದೆ .

ii ) ಮನೋರಂಜನೆ ಕಲ್ಪಿಸುತ್ತದೆ ( Provides Recreation ) ಅವಿಭಕ್ತ ಕುಟುಂಬವು ತನ್ನ ಸದಸ್ಯರಿಗೆಲ್ಲ ಆಂತರಿಕವಾಗಿ ಮನೋರಂಜನೆ ನೀಡುತ್ತದೆ . ಇಂತಹ ಕುಟುಂಬದಲ್ಲಿ ಎಲ್ಲಾ ಮಕ್ಕಳೂ ಒಟ್ಟಿಗೆ ಆಟ – ಪಾಠಗಳಲ್ಲಿ ಭಾಗವಹಿಸುತ್ತಾರೆ . ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ ಆಂತರಿಕ ಐಕ್ಯತೆ ಬೆಳೆಯುತ್ತದೆ .

23. ಕರ್ತನ ಎರಡು ಅಧಿಕಾರವನ್ನು ಹೆಸರಿಸಿ .

ಕರ್ತನ ಎರಡು ಅಧಿಕಾರಗಳು

i ) ಕರ್ತನು ಪರಮಾಧಿಕಾರವನ್ನು ಹೊಂದಿರುತ್ತಾನೆ . ಇವನ ಅಧಿಕಾರ ಮತ್ತು ಇತರ ಸದಸ್ಯರ ವಿಧೇಯ ಭಾವನೆಗಳು ಅವಿಭಕ್ತ ಕುಟುಂಬದ ಆಧಾರ ಸ್ತಂಭಗಳು ಎನಿಸಿದೆ .

ii ) ಕರ್ತನ ಆಜ್ಞೆಯನ್ನು ಹೆಚ್ಚು – ಕಮ್ಮಿ ಸದಸ್ಯರೆಲ್ಲರೂ ಪಾಲಿಸುತ್ತಾರೆ . ಪ್ರತಿಯೊಬ್ಬ ಸದಸ್ಯರಿಂದ ಪ್ರೀತಿ ಮತ್ತು ವಿಶ್ವಾಸ ಪಡೆದುಕೊಳ್ಳುವ ಅರ್ಹತೆಯನ್ನು ಹೊಂದಿರುತ್ತಾರೆ

24. ಅವಿಭಕ್ತ ಕುಟುಂಬದ ಎರಡು ಅನಾನುಕೂಲತೆಗಳನ್ನು ಹೆಸರಿಸಿ .

ಅವಿಭಕ್ತ ಕುಟುಂಬದ ಎರಡು ಅನಾನುಕೂಲತೆಗಳು

i ) ಸೋಮಾರಿತನವನ್ನು ಪ್ರೋತ್ಸಾಹಿಸುತ್ತದೆ ( Promotes Idleness ) ಅವಿಭಕ್ತ ಕುಟುಂಬಗಳು ಸೋಮಾರಿತನದ ತವರೂರು . ಇಂತಹ ಪ್ರವೃತ್ತಿಯ ವ್ಯಕ್ತಿಗಳು ಉದ್ದೇಶ ಪೂರ್ವಕವಾಗಿ ಕಾರ್ಯ ನಿರ್ವಹಿಸದೆ ಎಲ್ಲಾ ರೀತಿಯ ಸೌಕರ್ಯಗಳನ್ನು ಅನುಭವಿಸುತ್ತಾರೆ . ದುಡಿಯುವ ಕೈಗಳು ಸದಾ ಶ್ರಮವಹಿಸಿ ದುಡಿಯುತ್ತಿದ್ದರೆ ಕೆಲವು ಮಂದಿ ಸದಸ್ಯರು ಸೋಮಾರಿಗಳಾಗಿ ಜೀವನವನ್ನು ನಡೆಸುತ್ತಾರೆ .

ii ) ಅತಿ ಸಂತಾನಕ್ಕೆ ಪ್ರೋತ್ಸಾಹ ( More Reproduction ) ಅತಿ ಸಂತಾನವನ್ನು ಆರ್ಥಿಕ ಹೊರೆಯೆಂದು ಪರಿಗಣಿಸದೆ ಭವಿಷ್ಯದ ನಿಧಿಗಳೆಂದು ಪರಿಗಣಿಸುತ್ತಾರೆ . ಮಕ್ಕಳ ಲಾಲನೆ , ಪಾಲನೆ , ಆರೈಕೆಯ ಸಮಸ್ಯೆಯಿರುವುದಿಲ್ಲ ಆದ್ದರಿಂದ ಸದಸ್ಯರಿಗೆ ಮಕ್ಕಳು ಜಾಸ್ತಿಯಾಗುತ್ತಾರೆ .

25. ಅವಿಭಕ್ತ ಕುಟುಂಬದ ಎರಡು ಪ್ರಕಾರಗಳನ್ನು ಹೆಸರಿಸಿ

ಅವಿಭಕ್ತ ಕುಟುಂಬದ ಎರಡು ಪ್ರಕಾರಗಳು ಪಿತೃವಂಶೀಯ ಅಥವಾ ಪಿತೃ ಪ್ರಧಾನ ಕುಟುಂಬ ಮತ್ತು ಮಾತೃವಂಶೀಯ ಅಥವಾ ಮಾತೃಪ್ರಧಾನ ಕುಟುಂಬಗಳು . ಹೆಸರೇ ಸೂಚಿಸುವಂತೆ ಪಿತೃವಂಶೀಯ ಅವಿಭಕ್ತ ಕುಟುಂಬ ` ಗಳಲ್ಲಿ ತಂದೆಯೇ ಪ್ರಧಾನ ಎಂದರೆ ಪುರುಷ ಪ್ರಧಾನ ಕುಟುಂಬ ಅಂತೆಯೇ ಮಾತೃವಂಶೀಯ ಕುಟುಂಬದಲ್ಲಿ ಮಾತೆ ( ತಾಯಿ ) ಅಥವಾ ಮಹಿಳಾ ಪ್ರಧಾನ ಕುಟುಂಬ ವಾಗಿರುತ್ತದೆ .

26. ತಾರವಾಡನ ಎರಡು ಪರಿವರ್ತನೆಗಳ ಅಂಶಗಳನ್ನು ಹೆಸರಿಸಿ .

ತರವಾಡುನಲ್ಲಿನ ಎರಡು ಪರಿವರ್ತನೆಗಳು ( Changes in Tarawad )

i) ಕರ್ಣವನ್ ಇಂದಿಗೆ ನಿರಂಕುಶ ಪ್ರಭುವಾಗಿ ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ ಮತ್ತು ಆತನ ಅಧಿಕಾರ ಮತ್ತು ಇನ್ನಿತರ ಸದಸ್ಯರ ಮೇಲಿನ ನಿಯಂತ್ರಣ ಮೊಟಕುಗೊಳ್ಳುತ್ತಿದೆ .

ii ) ನಾಯರ್ ವಿವಾಹ ಹೆಚ್ಚು ಶಾಶ್ವತ ಸ್ವರೂಪ ಪಡೆದು ಕೊಂಡಿದೆ ಹಾಗೂ ಪತಿಪತ್ನಿಯೊಂದಿಗೆ ಅನ್ನೋನ್ಯ ಸಂಬಂಧಗಳಿಗೆ ಮಹತ್ವ ಕಲ್ಪಿಸಲಾಗಿದೆ .

27. ಅವಿಭಕ್ತ ಕುಟುಂಬಗಳಲ್ಲಿ ಸಂಭವಿಸಿರುವ ಎರಡು ಪ್ರಭಾವಗಳನ್ನು ತಿಳಿಸಿ .

ಈಗಾಗಲೇ ಸಂಭವಿಸಿರುವ ಎರಡು ಪ್ರಭಾವಗಳು ಎಂದು ಬೆರಳೆತ್ತಿ ತೋರಿಸುವಂತಿಲ್ಲ . ಅನೇಕ ಪ್ರಭಾವಗಳು ಅವಿಭಕ್ತ ಕುಟುಂಬದ ಮೇಲಾಗಿದೆ . ಅದರಲ್ಲಿ ಕೆಲವು ಇಂತಿವೆ .

i ) ಇಂದಿನ ಯುವ ಜನತೆ ಅವಿಭಕ್ತ ಕುಟುಂಬಗಳನ್ನು ತ್ಯಜಿಸಿ , ಹಳ್ಳಿಯಿಂದ ನಗರಕ್ಕೆ ಬಂದು ವಾಸಿಸತೊಡಗಿ ದ್ದಾರೆ . ಆದ್ದರಿಂದ ಕುಟುಂಬದ ಹಿರಿಯರ ಹಿಡಿತದಿಂದ ಹೊರಗುಳಿದಿದ್ದಾರೆ . ಅವರ ರೀತಿ ನೀತಿಗಳು ಬದಲಾಗುತ್ತಿದೆ .

ii ) ಅವಿಭಕ್ತ ಕುಟುಂಬಗಳು ಒಡೆದು , ಚಿಕ್ಕ ಚಿಕ್ಕ ಸಂಸಾರಗಳಾಗಿ ದೂರವಾಗುತ್ತಿದ್ದಾರೆ . ಅವಿಭಕ್ತ ಕುಟುಂಬದ ಜನಸಂಖ್ಯೆ ಸದಸ್ಯರ ಸಂಖ್ಯೆ ಇಳಿಮುಖ ವಾಗುತ್ತಿದೆ . ಆಸ್ತಿಗಳೂ ಸಹ ಹಂಚಿಹೋಗುತ್ತಿದೆ .

28. ಅವಿಭಕ್ತ ಕುಟುಂಬಗಳ ಮೇಲೆ ಕೈಗಾರೀಕರಣದ ಎರಡು ಪ್ರಭಾವಗಳನ್ನು ತಿಳಿಸಿ .

ಅವಿಭಕ್ತ ಕುಟುಂಬಗಳ ಮೇಲೆ ಕೈಗಾರೀಕರಣದ ಪ್ರಭಾವಗಳು ಹೀಗಿವೆ .

i) ದೇಶದ ಎಲ್ಲಾ ಕಡೆಯೂ ಹೊಸ ಮಾದರಿಯ ಕಾರ್ಖಾನೆಗಳು ಸ್ಥಾಪನೆಗೊಂಡಿರುವುದರಿಂದ ಕೃಷಿ ಮತ್ತು ಸಾಂಪ್ರದಾಯಿಕ ಗೃಹ ಕೈಗಾರಿಕೆ ಮೂಲೆ ಗುಂಪಾಗಿದೆ .

ii ) ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಸ್ವಗ್ರಾಮಗಳನ್ನು ತೊರೆದು ಹೊಸ ಕೈಗಾರಿಕಾ ಪ್ರದೇಶಗಳಿಗೆ ವಲಸೆ ಹೋದರು . ದೇಶೀಯ ಕುಶಲ ಕರ್ಮಿಗಳ ಉತ್ಪಾದಕ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ , ಅವರು ಬಡತನ , ಹಸಿವು, ಸಾಲದ ಹೊರೆ ಮುಂತಾದ ಸಂಕಷ್ಟಗಳನ್ನು ಎದುರಿಸಬೇಕಾಯಿತು .

29. ಅವಿಭಕ್ತ ಕುಟುಂಬಗಳ ಮೇಲೆ ಸ್ತ್ರೀಸಬಲೀಕರಣದ ಎರಡು ಪ್ರಭಾವಗಳನ್ನು ತಿಳಿಸಿ .

ಅವಿಭಕ್ತ ಕುಟುಂಬಗಳ ಮೇಲೆ ಸ್ತ್ರೀ ಸಬಲೀಕರಣಗಳ ಪ್ರಭಾವಗಳು :

i ) ಸಮಾಜಿಕ ಸುಧಾರಣೆ ಆಂದೋಲನಗಳಿಂದ ಸ್ತ್ರೀಯರಿಗೆ ತಮ್ಮ ಅಂತಸ್ತು ಮತ್ತು ಸ್ಥಾನಮಾನದ ಬಗ್ಗೆ ಅರಿವು ಮೂಡಿದೆ . ಇದರ ಪ್ರಭಾವದಿಂದ ಪಿತೃಪ್ರಧಾನ ಕುಟುಂಬದ ಹಿಡಿತ ಕಡಿಮೆಯಾಗುತ್ತಿದೆ .

ii ) ಇಂದಿನ ಸ್ತ್ರೀಯರು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಹೊರಗೆ ಬಂದು ಎಲ್ಲಾ ಕ್ಷೇತ್ರಗಳಲ್ಲೂ ಪಾಲುಗೊಳ್ಳುತ್ತಿರುವುದರಿಂದ ಪಿತೃಪ್ರಧಾನ ಅಧಿಕಾರಕ್ಕೆ ಕಡಿವಾಣ ಬಿದ್ದಿದೆ ಹಾಗೂ ಅವಿಭಕ್ತ ಕುಟುಂಬಗಳು ವಿಘಟನೆಗೊಳ್ಳತೊಡಗಿದೆ .

30. ಅವಿಭಕ್ತ ಕುಟುಂಬಗಳ ಮೇಲೆ ಸಾಮಾಜಿಕ ಶಾಸನಗಳ ಎರಡು ಪ್ರಭಾವಗಳನ್ನು ತಿಳಿಸಿ.

ಅವಿಭಕ್ತ ಕುಟುಂಬಗಳ ಮೇಲೆ ಸಾಮಾಜಿಕ ಶಾಸನಗಳ ಪ್ರಭಾವಗಳು :

i ) ಬ್ರಿಟಿಷರ ಆಳ್ವಿಕೆಯಲ್ಲಿ ಅನುಷ್ಠಾನಗೊಂಡ ಹಲವಾರು ಶಾಸನಗಳು ಸ್ತ್ರೀ ಮತ್ತು ಪುರುಷರಿಗೆ ವಿವಾಹಕ್ಕೆ ಸಂಬಂಧಿಸಿದಂತೆ ಸಂಗಾತಿಯ ಆಯ್ಕೆ , ವಿವಾಹ

ವಿಚ್ಚೇದನೆ , ವಯೋಮಾನ ಇತ್ಯಾದಿಗಳ ಸ್ಪಷ್ಟವಾದ ನೀತಿ ನಿಯಮಗಳನ್ನು ರೂಪಿಸಿತು . ಆದ್ದರಿಂದ ಸ್ತ್ರೀ ಪುರುಷರಿಬ್ಬರಿಗೂ ಸಮಾನವಾದ ಹಕ್ಕು ಬಾಧ್ಯತೆ ದೊರೆತವು .

ii ) ಅವಿಭಕ್ತ ಕುಟುಂಬದಿಂದ ಆಸ್ತಿಯಲ್ಲಿ ಭಾಗವನ್ನು ಪಡೆದು ಕೊಳ್ಳಲು ಅವಕಾಶವನ್ನು ಕಲ್ಪಿಸಿದೆ . ಸರ್ಕಾರದ ಹಲವಾರು ಸೌಕರ್ಯಗಳು ಅವಿಭಕ್ತ ಕುಟುಂಬದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ . ಅವುಗಳಲ್ಲಿ ವೃದ್ಧಾಪ್ಯವೇತನ , ವಿಧವೆಯರ ವೇತನ ಮುಂತಾದವುಗಳು ; ಹೀಗಾಗಿ ಅವಿಭಕ್ತ ಕುಟುಂಬಗಳು ಕ್ಷೀಣಿಸುತ್ತಿವೆ .

31. ಅವಿಭಕ್ತ ಕುಟುಂಬಗಳ ಮೇಲೆ ಆಧುನಿಕ ಶಿಕ್ಷಣ ಎರಡು ಪ್ರಭಾವಗಳನ್ನು ತಿಳಿಸಿ .

ಅವಿಭಕ್ತ ಕುಟುಂಬಗಳ ಮೇಲೆ ಆಧುನಿಕ ಶಿಕ್ಷಣದ ಪ್ರಭಾವಗಳು :

i ) ಆಧುನಿಕ ಶಿಕ್ಷಣವು ಜನರ ಸಾಂಪ್ರದಾಯಿಕ ದೃಷ್ಟಿ ಕೋನವನ್ನು ಬದಲಾಯಿಸಿದೆ , ಇಂದಿನ ಶಿಕ್ಷಣವು ವೃತ್ತಿ ಚಲನೆಗೆ ( Occupational Mobility ) ಅವಕಾಶ ನೀಡಿ ಜನರ ದೃಷ್ಟಿಕೋನ , ನಂಬಿಕೆ , ಸಾಮಾಜಿಕ ಮೌಲ್ಯ , ತತ್ವಾದರ್ಶಗಳಲ್ಲಿ ಬದಲಾವಣೆಯಾಗಿದೆ .

ii ) ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ . ಹೊಸ ಹೊಸ ವೃತ್ತಿಗಳು , ಆರ್ಥಿಕ ಸ್ವಾವಲಂಬನೆ , ವೈಯಕ್ತಿಕ ಮತ್ತು ಸ್ವತಂತ್ರ ಜೀವನಕ್ಕೆ ಪ್ರೇರಣೆ ನೀಡುತ್ತಿದೆ . ಹೀಗಾಗಿ ಅವಿಭಕ್ತ ಕುಟುಂಬಗಳ ಪ್ರಧಾನ ಲಕ್ಷಣಗಳೂ ದಿನೇ ದಿನೇ ಮಾಯವಾಗುತ್ತಿದೆ .

32. ಅಳಿಯ ಸಂತತಿ ವಂಶಾವಳಿ ಎಂದರೇನು ?

ಮಾತೃವಂಶೀಯ ಕುಟುಂಬದ ನಾಗವಂಶೀಯ ಕನೈಯರು ವಿವಾಹದ ನಂತರ ಗಂಡನ ಮನೆಗೆ ಹೋಗುವುದಿಲ್ಲ . ಅದರ ಬದಲಿಗೆ ಗಂಡನೇ ಹೆಂಡತಿಯ ಮನೆಯಲ್ಲಿ ನೆಲೆಸುತ್ತಾನೆ . ಇಂತಹ ವಿಧಾನವನ್ನು ‘ ಅಳಿಯ ಸಂತತಿ ‘ ಅಥವಾ ಅಳಿಯನ ವಂಶಪರಂಪರೆ Son – in Laws Lineage ಎಂದು ಕರೆಯುತ್ತಾರೆ ಮತ್ತು ಇಂತಹ ಪ್ರವೃತ್ತಿಯನ್ನು ಅಳಿಯ ಸಂತತಿ ವಾಸಸ್ಥಳ ಎನ್ನುವರು .

33. ಅವಿಭಕ್ತ ಕುಟುಂಬಗಳ ಮೇಲೆ ನಗರೀಕರಣದ ಎರಡು ಪ್ರಭಾವಗಳನ್ನು ತಿಳಿಸಿ .

ಅವಿಭಕ್ತ ಕುಟುಂಬಗಳ ಮೇಲೆ ನಗರೀಕರಣದ ಪ್ರಭಾವಗಳು :

i) ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಜನ ವಿವಿಧ ಉದ್ಯೋಗಾವಕಾಶಗಳಿಗಾಗಿ ವಲಸೆ ಹೋಗುತ್ತಿದ್ದಾರೆ . ಅವಿಭಕ್ತ ಕುಟುಂಬದ ಸದಸ್ಯರು ಹೊರ ಹೋಗುತ್ತಿರುವುದರಿಂದ ಅವಿಭಕ್ತ ಕಟುಂಬದ ಪ್ರಾಬಲ್ಯ ಕುಸಿಯುತ್ತಿದೆ .

ii ) ತೃತೀಯ ವಲಯದ ಉದ್ಯೋಗಗಳು ದಿನೇ ದಿನೇ ಹೆಚ್ಚುತ್ತಿವೆ . ನಗರಗಳಿಂದ ಆಕರ್ಷಿತರಾದ ಗ್ರಾಮೀಣ ಜನರು ಅಪರಿಮಿತ ಸಂಖ್ಯೆಯಲ್ಲಿ ನಗರದೆಡೆ ಧಾವಿಸಿ ಬರುತ್ತಿದ್ದಾರೆ . ನಗರದ ಉದ್ಯೋಗಗಳು ವಿಭಕ್ತ ಕುಟುಂಬಕ್ಕೆ ಅನಿವಾರ್ಯವಾಯಿತು . ಆಗ ಅವಿಭಕ್ತ ಕುಟುಂಬಗಳು ಕುಸಿಯತೊಡಗಿದವು .

2nd Puc Sociology 4th Chapter Notes Kannada Medium

III . ಐದು ಅಂಕಗಳ ಪ್ರಶ್ನೆಗಳು :

34. ಅವಿಭಕ್ತ ಕುಟುಂಬದ ಐದು ಗುಣಲಕ್ಷಣಗಳನ್ನು ವಿವರಿಸಿ .

ಅವಿಭಕ್ತ ಕುಟುಂಬದ ಐದು ಗುಣಲಕ್ಷಣಗಳು ಹೀಗಿವೆ .

i ) ಸಾಮಾನ್ಯ ಮನೆ ಅಥವಾ ವಾಸಸ್ಥಳ ( Common Roof ) ಇದು ಅವಿಭಕ್ತ ಕುಟುಂಬದ ಪ್ರಮುಖ ಲಕ್ಷಣವಾಗಿದೆ . ಕುಟುಂಬದ ಸದಸ್ಯರೆಲ್ಲರೂ ಒಂದೇ ಮನೆಯಲ್ಲಿ ವಾಸಿಸುವುದು ಮತ್ತು ಇದು ವಂಶಪರಂಪರೆಯ ಗೌರವ ಘನತೆಗಳನ್ನು ಎತ್ತಿ ಹಿಡಿಯುವ ಅಂಶವಾಗಿದೆ . ಇಂತಹ ಸಾಮಾನ್ಯ ಮನೆ ಸಾಮಾಜಿಕ ಜೀವನದ ಎಲ್ಲಾ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ . ಆರ್ಥಿಕ , ಧಾರ್ಮಿಕ , ಮನರಂಜನೆ , ವೈವಾಹಿಕ , ಸಾಮಾಜಿಕ ಜೀವನದ ಕೇಂದ್ರ ಬಿಂದುವಾಗಿದೆ .

ii ) ಸಾಮಾನ್ಯ ಆಸ್ತಿಯ ಹಕ್ಕು ಬಾಧ್ಯತೆಗಳು ( Common Property ) ಅವಿಭಕ್ತ ಕುಟುಂಬದ ಸದಸ್ಯರೆಲ್ಲರಿಗೂ ಆಸ್ತಿಯ ಮೇಲೆ ಸಮನಾದ ಹಕ್ಕು ಬಾಧ್ಯತೆಯನ್ನು ಹೊಂದಿರುತ್ತಾರೆ . ಓ ಮಾಲೆ ( O ‘ Malley ) ರವರು ತಿಳಿಸಿರುವಂತೆ ‘ ಅವಿಭಕ್ತ ಕುಟುಂಬಗಳು ಕೂಡು ಬಂಡವಾಳ ಮತ್ತು ಸಹಕಾರಿ ಸಂ ವಾಗಿ ಕಾರ್ಯ ನಿರ್ವಹಿಸುತ್ತದೆ . ಕುಟುಂಬದ ಎಲ್ಲಾ ಮೂಲಗಳ ಒಟ್ಟು ಆದಾಯವನ್ನು ಒಂದುಗೂಡಿಸಿ ಸದಸ್ಯರೆಲ್ಲರ ಮೂಲಭೂತ ಅಗತ್ಯಗಳನ್ನು ಈಡೇರಿಸಲು ವಿನಿಯೋಗಿಸಿಕೊಳ್ಳುತ್ತಾರೆ .

iii ) ಪೂರ್ವ ಯೋಜಿತ ವಿವಾಹಗಳು ( Arranged Marriages ) ಕುಟುಂಬದ ಹಿರಿಯ ಸದಸ್ಯರು ತಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ವಿವಾಹ ಸಂಬಂಧಗಳನ್ನು ಏರ್ಪಡಿಸು ವುದರಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದರು ವೈಯಕ್ತಿಕ ಆಯ್ಕೆಯ ಮೇಲೆ ಕಡಿವಾಣ ಹಾಕುತ್ತಿದ್ದರು . ವಿವಾಹಗಳಿಂದ ಕೌಟುಂಬಿಕ ಪರಂಪರೆಯ ಗೌರವ ಘನತೆ ಕಾಪಾಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದರಿಂದ ಇದನ್ನು ಯಾರೂ ನಿರಾಕರಿಸುವಂತಿರಲಿಲ್ಲ .

iv ) ಕುಟುಂಬದೊಂದಿಗೆ ಸದಸ್ಯರ ಪರಸ್ಪರ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ( Mutual Rights and Obligation ) ಪ್ರತಿಯೊಬ್ಬ ಸದಸ್ಯರಿಗೂ ತಮ್ಮ ಕುಟುಂಬದ ಉಳಿದ ಸದಸ್ಯರೊಂದಿಗೆ ಹಕ್ಕುಗಳು ಹಾಗೂ ಕರ್ತವ್ಯಗಳಿದ್ದವು . ಅದರ ಅರಿವನ್ನು ಅವರು ಹೊಂದಿರಬೇಕಾಗಿತ್ತು . ಕುಟುಂಬದ ಐಕ್ಯತೆ ಮತ್ತು ಪರಸ್ಪರ ಅವಲಂಬನೆಯನ್ನು ಇದು ಮತ್ತಷ್ಟು ಭದ್ರಗೊಳಿಸುತ್ತದೆ . ಕುಟುಂಬದ ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಿರುತ್ತಾರೆ .

v ) ಸ್ವಯಂ ಪರಿಪೂರ್ಣತೆ : ಅವಿಭಕ್ತ ಕುಟುಂಬಗಳು ಸಾಪೇಕ್ಷವಾಗಿ ಸ್ವಯಂ ಪರಿಪೂರ್ಣವಾಗಿರುತ್ತದೆ . ಬಾಹ್ಯಪ್ರಪಂಚವನ್ನು ಹೆಚ್ಚಾಗಿ ಅವಲಂಬಿಸದೆ ತಮಗೆ ಬೇಕಾದ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿತ್ತು . ಗ್ರಾಮೀಣ ಸಮುದಾಯಕ್ಕೆ ಅವಿಭಕ್ತ ಕುಟುಂಬ ಪೂರಕವಾಗಿದ್ದು ಸ್ವಾವಲಂಬನೆ ಅಂಶವನ್ನು ಎತ್ತಿ ಹಿಡಿಯುತ್ತದೆ . ಇವೆಲ್ಲಾ ಅವಿಭಕ್ತ ಕುಟುಂಬಗಳ ಗುಣಲಕ್ಷಣಗಳು

34 , ಅವಿಭಕ್ತ ಕುಟುಂಬದ ಅನುಕೂಲತೆಗಳನ್ನು ವಿವರಿಸಿ .

i) ಆರ್ಥಿಕ ಅನುಕೂಲತೆಗಳು ( Economic Advantage ) ಅವಿಭಕ್ತ ಕುಟುಂಬಗಳು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ . ವ್ಯಕ್ತಿಯ ಜೀವನದ ಸರ್ವಾಂಗೀಯ ಬೆಳವಣಿಗೆಗೆ ಉಪಯುಕ್ತವಾಗಿದೆ .

ii ) ಸದಸ್ಯರ ಸಂರಕ್ಷಣೆ : ಅವಿಭಕ್ತ ಕುಟುಂಬ ತನ್ನ ಸದಸ್ಯರಿಗೆ ಪ್ರತಿಯೊಂದು ಹಂತದಲ್ಲೂ ರಕ್ಷಣೆ ನೀಡುತ್ತದೆ . ಸಂಕಷ್ಟದಲ್ಲಿ ನೆರವನ್ನು ನೀಡುತ್ತದೆ .

iii ) ಮನೋರಂಜನೆಯನ್ನು ಕಲ್ಪಿಸುತ್ತದೆ ( Provide Recreation ) : ತನ್ನ ಸದಸ್ಯರಿಗೆ ಆಂತರಿಕವಾಗಿ ಮನೋರಂಜನೆ ನೀಡುತ್ತದೆ . ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಆಂತರಿಕ ಐಕ್ಯತೆ ಬೆಳೆಯುತ್ತದೆ .

iv ) ವ್ಯಕ್ತಿತ್ವ ವಿಕಾಸ ( Development of Personality ) ಅವಿಭಕ್ತ ಕುಟುಂಬವು ತನ್ನ ಸದಸ್ಯರು ಕುಟುಂಬದ ಸಾಂಸ್ಕೃತಿಕ ಚೌಕಟ್ಟಿನಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ . ಕುಟುಂಬದ ಸದಸ್ಯರು ಶಿಸ್ತು – ಸಂಯಮ ವನ್ನು ಬೆಳೆಸಿಕೊಳ್ಳುತ್ತಾರೆ . ಕುಟುಂಬದ ಜನರಲ್ಲಿ ತಾಳ್ಮೆ – ಸಹನೆ , ಸಹಕಾರ ಮನೋಭಾವನೆ , ಸೇವಾ – ಮನೋಭಾವನೆ ಮತ್ತು ವಿಧೇಯತೆ ತ್ಯಾಗ ಮನೋಭಾವನೆ ಬೆಳೆಯುತ್ತದೆ . ಸ್ವಾರ್ಥದ ಬದಲಿಗೆ ಪ್ರೀತಿಯು ಹೆಚ್ಚುತ್ತದೆ .

v ) ಸಂಪತ್ತಿಗೆ ಸಂಬಂಧಿಸಿದಂತೆ ಸಮಾಜವಾದದ ಪರಿಕಲ್ಪನೆ ( Socialism in Wealth ) ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರೂ ತಮ್ಮ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕಾರ್ಯ ನಿರ್ವಹಿಸುವುದರಿಂದ ಸಂಪತ್ತನ್ನು ಕ್ರೋಢೀಕರಿಸುತ್ತಾರೆ . ಇವರುಗಳೆಲ್ಲಾ ಸಹಕಾರಿ ಸಂಘದಂತೆ ಕೆಲಸ ಮಾಡುವುದರಿಂದ ಸಮಾಜವಾದ ತತ್ವವನ್ನು ಪರೋಕ್ಷವಾಗಿ ಎತ್ತಿ ಹಿಡಿಯುತ್ತದೆ . ಆಹಾರ ಸೇವನೆಯಿಂದ ಹಿಡಿದು ಎಲ್ಲಾ ಕೆಲಸಗಳೂ ಸಹಜವಾಗಿ ಪರಸ್ಪರ ಹೊಂದಾಣಿಕೆ ತತ್ವದ ಆಧಾರವಾಗಿದೆ . ಕುಟುಂಬದ ಆಂತರಿಕ ಸಂಬಂಧಗಳು ಮತ್ತು ವ್ಯಕ್ತಿಗಳ ಧಾರಾಳತನ ಇವೆಲ್ಲಾ ಉಳಿದವರಿಗೆ ಅದೇ ಪ್ರವೃತ್ತಿಯನ್ನು ಮುಂದುವರಿಸಲು ಪ್ರೇರಣೆ ನೀಡುತ್ತದೆ . ಸಂಕುಚಿತ ಮನೋಭಾವ ಸ್ವಾರ್ಥದ ಬದಲು ವಿಶಾಲ ಮನೋಭಾವ ಬೆಳೆಯುತ್ತದೆ .

36. ಅವಿಭಕ್ತ ಕುಟುಂಬದ ಐದು ಅನಾನುಕೂಲತೆಗಳನ್ನು ವಿವರಿಸಿ .

ಅವಿಭಕ್ತ ಕುಟುಂಬದ ಅನಾನುಕೂಲತೆಗಳು ಭಾರತದಲ್ಲಿ ಅವಿಭಕ್ತ ಕುಟುಂಬಗಳು ಹಲವಾರು ಅನುಕೂಲತೆಗಳನ್ನು ಹೊಂದಿರುವಂತೆ ಅನೇಕ ದೋಷ ಅಥವಾ ಅನಾನೂಕೂಲತೆಗಳನ್ನು ಸಹ ಹೊಂದಿದೆ . ಅವುಗಳು

i ) ಸೋಮಾರಿತನವನ್ನು ಪ್ರೋತ್ಸಾಹಿಸುತ್ತದೆ ( Promotes Idleness ) ಅವಿಭಕ್ತ ಕುಟುಂಬದಲ್ಲಿ ಎಲ್ಲಾ ಜವಾಬ್ದಾರಿ ಹಿರಿಯವರಾದ್ದರಿಂದ ಇತರ ಸದಸ್ಯರಿಗೆ ಜವಾಬ್ದಾರಿ ಕಡಿಮೆ . ಇಂತಹ ಪ್ರವೃತ್ತಿಯ ವ್ಯಕ್ತಿಗಳು ಕರ್ತವ್ಯಕ್ಕೆ ಬದ್ಧರಾಗಿರುವುದಿಲ್ಲ ದುಡಿಯುವ ಕೈಗಳು ಸದಾ ದುಡಿಯುತ್ತಲೇ ಇದ್ದರೆ , ಉಳಿದವರು ಸೋಮಾರಿಗಳಾಗಿ ಜೀವಿಸುತ್ತಾರೆ .

ii ) ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಅಡಚಣೆ ( Hindrance in the Development of Personality ) ಅವಿಭಕ್ತ ಕುಟುಂಬದ ಸದಸ್ಯರಲ್ಲಿ ವೈಯಕ್ತಿಕ ವ್ಯಕ್ತಿತ್ವದ ಬೆಳವಣಿಗೆ , ಸ್ವಾವಲಂಬನೆಗಳು ಕಡಿಮೆಯಾಗಲೂ ಹಿರಿಯರ ಮೇಲೆ ಜವಾಬ್ದಾರಿ ಹಾಕಿ , ಅವರ ಬೆಂಬಲ ಮತ್ತು ನೆರವಿನಲ್ಲಿ ಬೆಳೆಯುತ್ತಾರೆ . ವೈಯಕ್ತಿಕ ಸಾಮರ್ಥ್ಯ ಅಷ್ಟಾಗಿ ಬೆಳೆಯುವುದಿಲ್ಲ .

iii ) ಸ್ವಜನ ಪಕ್ಷಪಾತ , ಆಂತರಿಕ ಘರ್ಷಣೆ ಮತ್ತು ದಾವೆಗಳಿಗೆ ಪ್ರೋತ್ಸಾಹ ನೀಡುತ್ತದೆ . ( Encourages Litigation and Nepotism ) ಅವಿಭಕ್ತ ಕುಟುಂಬಗಳಲ್ಲಿ ಆಸ್ತಿ , ವಿವಾಹ ಮತ್ತು ಸದಸ್ಯರ ಭಿನ್ನಾಭಿಪ್ರಾಯಗಳು ಹೆಚ್ಚಾಗಿ , ಆಂತರಿಕ ಘರ್ಷಣೆ ಮತ್ತು ದಾವೆಗಳು ಕಂಡು ಬರುತ್ತವೆ . ಸ್ವಜನ ಪಕ್ಷಪಾತ ಮತ್ತು ಕರ್ತನ ದೌರ್ಜನ್ಯಗಳನ್ನು ಪೋಷಿಸುವ ವ್ಯವಸ್ಥೆಯಾಗುತ್ತದೆ . ಸದಸ್ಯರು ಹೆಚ್ಚಿದಂತೆ ಭಿನ್ನಾಭಿಪ್ರಾಯಗಳೂ , ಮನಸ್ತಾಪಗಳೂ ಹೆಚ್ಚಿ ಕುಟುಂಬದ ಶಾಂತಿ – ಸುವ್ಯವಸ್ಥೆ ಹಾಳಾಗುತ್ತದೆ .

iv ) ಗಲಬೆ ಮತ್ತು ಘರ್ಷಣೆಗಳ ಮೂಲವಾಗಿವೆ ( Leads to quarrels ) ಅವಿಭಕ್ತ ಕುಟುಂಬದ ಸದಸ್ಯರಲ್ಲಿ ಸಹನೆ , ಸಹಕಾರ ಮನೋಭಾವನೆ ಮತ್ತು ತಾಳ್ಮೆಯಿಂದ ಶಾಂತಿ , ಸುವ್ಯವಸ್ಥೆಗಳು ಕಂಡುಬರುತ್ತದೆ . ಆದರೆ ಪೀಳಿಗೆಗಳ ಅಂತರ , ಬಾಹ್ಯ ಸಂಪರ್ಕ , ಭಿನ್ನಾಭಿಪ್ರಾಯ , ಅಸಹನೆ ಗೋಚರವಾದರೆ ಗಲಭೆ ಮತ್ತು ಘರ್ಷಣೆಗಳು ರೂಪುಗೊಳ್ಳುತ್ತವೆ . ದಾಯಾದಿಗಳ ನಡುವೆ ಘರ್ಷಣೆ ಮತ್ತು ಒಳಜಗಳಗಳು ಕಂಡುಬರುತ್ತದೆ . ಪೀಳಿಗೆಗಳ ಅಂತರ ಹೆಚ್ಚಾದಂತೆ ಜಗಳ ಮತ್ತು ಘರ್ಷಣೆಗಳು ಸಾಮಾನ್ಯ ಸಂಗತಿಯಾಗುತ್ತದೆ .

v ) ಉಳಿತಾಯ ಮತ್ತು ಆರ್ಥಿಕ ಹೂಡಿಕೆಗೆ ಅಹಿತಕರ ವಾಗಿರುತ್ತದೆ . ( Unfovourable for Savings and Investments ) : ಬಂಡವಾಳ ಶೇಖರಣೆಗೆ ಯೋಗ್ಯವಾದ ವಾತಾವರಣವಲ್ಲ . ದುಂದುವೆಚ್ಚ , ಭವಿಷ್ಯದ ಬಗ್ಗೆ ಅಸಡ್ಡೆ , ಧಾರ್ಮಿಕ ಚಟುವಟಿಕೆಗಳಲ್ಲಿ ಹಣದ ಖರ್ಚುಗಳು ಇದರಿಂದ ಉಳಿತಾಯ ಕಷ್ಟ ಸಾಧ್ಯವಾಗಿದೆ . ಭೂಮಿಯನ್ನು ವಿಭಜನೆ ಮಾಡುವುದರಿಂದ ಅದರ ಯೋಗ್ಯ ಬಳಕೆಯಾಗುವುದಿಲ್ಲ .

vi ) ಅತಿ ಸಂತಾನಕ್ಕೆ ಪ್ರೋತ್ಸಾಹ ( More Reproduction ) ಮಕ್ಕಳ ಲಾಲನೆ – ಪಾಲನೆ , ಪೋಷಣೆ ಆರೈಕೆಯ ಸಮಸ್ಯೆಯಿರುವುದಿಲ್ಲ . ಜವಾಬ್ದಾರಿಯನ್ನು ಕುಟುಂಬದ ಸ್ತ್ರೀ ಸದಸ್ಯರು ವ್ಯವಸ್ಥಿತವಾಗಿ ನಿಭಾಯಿಸುತ್ತಾರೆ . ಅತಿಯಾದ ಸಂತಾನ ಆರ್ಥಿಕ ಹೊರೆ ಎಂದು ಭಾವಿಸದೆ ಭವಿಷ್ಯದ ನಿಧಿ ಎಂದು ಪರಿಗಣಿಸುತ್ತಾರೆ .

vii ) ಸಾಮಾಜಿಕ ಚಲನೆಗೆ ಮಾರಕವಾಗಿದೆ ಮತ್ತು ಸ್ತ್ರೀ ಸ್ಥಾನಮಾನ ಕೆಳ ಅಂತಸ್ತಿಗೆ ಕಾರಣವಾಗಿದೆ . ( Hinders Social Mobility and Low status of Women ) ಅವಿಭಕ್ತ ಕುಟುಂಬದಲ್ಲಿ ವ್ಯಕ್ತಿಯ ಸ್ವಂತ ಅಭಿಪ್ರಾಯಗಳು ಪ್ರತಿಭೆ ಸಾಮರ್ಥ್ಯಗಳು ಬೆಳೆಯಲು ಅವಕಾಶವಿರುವುದಿಲ್ಲ . ವೈಯಕ್ತಿಕ ಬೆಳವಣಿಗೆಗೆ ಸೂಕ್ತ ವೇದಿಕೆ ನಿರ್ಮಿಸುವುದಿಲ್ಲ ಯುವಕ ಯುವತಿಯರ ಸಾಹಸ ಪ್ರವೃತ್ತಿ ಅಥವಾ ಉದ್ಯಮ ಶೀಲತೆಗೆ ಕುಟುಂಬದ ಹಿರಿಯರು ತಿರಸ್ಕಾರವನ್ನು ವ್ಯಕ್ತ ಪಡಿಸುತ್ತಾರೆ . ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಬುದ್ಧಿವಂತಿಕೆಗೆ ಸ್ವಾತಂತ್ರ್ಯಕ್ಕೆ , ಪ್ರಗತಿಗೆ ಅಡ್ಡಗೋಡೆಯಾಗಿ ರುತ್ತದೆ . ಅನೇಕ ಕಟ್ಟಳೆಗಳಿಂದ ಅವರ ಬೆಳವಣಿಗೆಗೆ ಮಾರಕವಾಗುತ್ತಾರೆ . ಈ ರೀತಿಯ ಅನಾನುಕೂಲತೆಗಳನ್ನು ಅವಿಭಕ್ತ ಕುಟುಂಬದಲ್ಲಿ ನೋಡಬಹುದು .

37. ಪಿತೃ ಪ್ರಧಾನ ಅವಿಭಕ್ತ ಕುಟುಂಬದ ಬಗ್ಗೆ ಟಿಪ್ಪಣಿ ಬರೆಯಿರಿ .

ಪಿತೃ ಪ್ರಧಾನ ಅವಿಭಕ್ತ ಕುಟುಂಬಗಳು ಅವಿಭಕ್ತ ಕುಟುಂಬಗಳಲ್ಲಿ ಎರಡು ಪ್ರಕಾರಗಳು ಮಾತೃವಂಶೀಯ ಮತ್ತು ಪಿತೃಪ್ರಧಾನ ಅವಿಭಕ್ತ ಕುಟುಂಬಗಳು

i ) ಪಿತೃವಂಶೀಯ ಅಥವಾ ಪಿತೃಪ್ರಧಾನ ಅವಿಭಕ್ತ ಕುಟುಂಬಗಳು . ( Patriarchal Joint Familly ) : ಅವಿಭಕ್ತ ಕುಟುಂಬಗಳಲ್ಲಿ ಕುಟುಂಬದ ಹಿರಿಯ ಎಂದರೆ ತಂದೆ ಅಥವಾ ಪುರುಷರು ಯಜಮಾನರಾಗಿರುವ ಕುಟುಂಬಗಳನ್ನು ಪಿತೃ ಪ್ರಧಾನ ಕುಟುಂಬಗಳು ಎನ್ನುತ್ತಾರೆ . ಏಕೆಂದರೆ ಇಂತಹ ಅವಿಭಕ್ತ ಕುಟುಂಬದ ಸಂಪೂರ್ಣ ಹೊಣೆಗಾರಿಕೆಯನ್ನು ಪುರುಷರೇ ನಿಭಾಯಿಸುತ್ತಾರೆ . ಉದಾ : ಕೇರಳದ ನಂಬೂದರಿ , ಛೋಟನಾಗಪುರದ ಮುಂಡಾರು , ಅಸ್ಸಾಂನ ಅಂಗಾಮಿ ನಾಗರು ಮುಂತಾದವರು .

ನಂಬೂದರಿ ಅವಿಭಕ್ತ ಕುಟುಂಬದ ವಾಸಸ್ಥಳ ‘ ಇಲ್ಲಾಂ ‘ . ನಂಬೂದರಿ ಪಿತೃವಂಶೀಯ ಕುಟುಂಬವಾಗಿದ್ದು , ಎಲ್ಲಾ ಸದಸ್ಯರು ತಂದೆಯ ವಂಶಾವಳಿಯಿಂದ ಗುರ್ತಿಸಿಕೊಳ್ಳುತ್ತಾರೆ ನಂಬೂದರಿ ಬ್ರಾಹ್ಮಣರು ಭೂ ಮಾಲಿಕರಾಗಿದ್ದು , ವಿಸ್ತಾರವಾದ ಭೂಮಿಯ ಒಡೆತನದ ಹಕ್ಕುಗಳನ್ನು ಹೊಂದಿದ್ದರು . ಯಾವುದೇ ಕಾರಣಕ್ಕೂ ಭೂಮಿಯ ವಿಘಟನೆಯನ್ನು ಮಾಡದಂತೆ ನಿರ್ಬಂಧನೆ ಹೇರಲಾಗಿತ್ತು . ಇಲ್ಲಾಂಗಳಲ್ಲಿ ಪುರುಷ , ಆತನ ಪತ್ನಿ , ತಾಯಿ ಹಾಗೂ ಮಕ್ಕಳು , ಕಿರಿಯ ಸಹೋದರರು , ಅವಿವಾಹಿತ ಸಹೋದರಿಯರು ಮುಂತಾದವರು ಇರುತ್ತಿದ್ದರು . ನಂಬೂದರಿಗಳು ಭೂಮಿಯ ಒಡೆತನ ತಮ್ಮಲ್ಲಿಯೇ ಸಂರಕ್ಷಿಸಿಕೊಳ್ಳುವ ಪದ್ಧತಿಯನ್ನು ಅನುಸರಿಸಿದರು , ನಂಬೂದರಿಯ ಹಿರಿಯ ಮಗ ಮಾತ್ರ ತನ್ನ ಜಾತಿ ಸಮೂಹದಲ್ಲಿ , ನಂಬೂದರಿ ಕನೈಯನ್ನೇ ವಿವಾಹವಾಗುತ್ತಿದ್ದನು .

ಹಿರಿಯ ಮಗನಿಗೆ ಸಂತಾನ ಪ್ರಾಪ್ತಿಯಾಗದೆ ಇದ್ದಾಗ ದ್ವಿತೀಯ ಹಾಗೂ ತೃತೀಯ ಗಂಡು ಮಗನಿಗೆ ನಂಬೂದರಿ ಕನೈಯನ್ನು ಸಂಪ್ರದಾಯಿಕವಾಗಿ ವಿವಾಹವಾಗಲು ಅವಕಾಶವಿತ್ತು . ಕುಟುಂಬದ ಹಿರಿಯ ಸದಸ್ಯ ಇಲ್ಲಾಂನ ಸಮಗ್ರ ಆಸ್ತಿಯ ಮೇಲೆ ನಿಯಂತ್ರಣ ಹೊಂದಿದ್ದರು . ಆದರೆ ಅವರಿಗೆ ಆಸ್ತಿಯನ್ನು ಪರಭಾರೆ ಮಾಡುವ ಅಧಿಕಾರವಿರಲಿಲ್ಲ ಈ ರೀತಿ ವಹಿವಾಟು ಮಾಡುವಾಗ ಕುಟುಂಬದ ಎಲ್ಲಾ ಸದಸ್ಯರ ಅನುಮತಿ ಪಡೆಯಬೇಕಾಗಿತ್ತು ಮತ್ತು ಸ್ತ್ರೀ ಸದಸ್ಯರ ಅನುಮತಿಯನ್ನು ಸಹ ಪಡೆಯಲೇಬೇಕೆಂಬ ಕಡ್ಡಾಯ ನಿಯಮವಿತ್ತು .

38. ತಾರವಾಡ ಬಗ್ಗೆ ಟಿಪ್ಪಣಿ ಬರೆಯಿರಿ .

ತರವಾಡಗಳು ಮಾತೃವಂಶೀಯ ಮತ್ತು ಮಾತೃಪ್ರಧಾನ ಕುಟುಂಬವಾಗಿದೆ . ಕುಟುಂಬದ ಹಿರಿಯ ಸ್ತ್ರೀ ಸದಸ್ಯೆ ಅಥವಾ ತಾಯಿ ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ .ತರವಾಡಿನಲ್ಲಿ ಆಂತರಿಕ ಪರಿವರ್ತನೆಗಳು ವ್ಯಾಪಕವಾಗಿ ಉಂಟಾಗಿದೆ . ಅಂತಹ ಪರಿವರ್ತನೆಗಳಲ್ಲೊಂದು ಹೀಗಿದೆ . ಇತ್ತೀಚಿನ ದಿನಗಳಲ್ಲಿ ತರವಾಡಿನ ಆಸ್ತಿಗಳು ಕುಟುಂಬದ ಸದಸ್ಯರಲ್ಲಿ ವಿಭಜನೆಗೊಳ್ಳುತ್ತಿದೆ .

ತರವಾಡುನಲ್ಲಿನ ಎರಡು ಪರಿವರ್ತನೆಗಳು ( Changes in Tarawad )

i) ಕರ್ಣವನ್ ಇಂದಿಗೆ ನಿರಂಕುಶ ಪ್ರಭುವಾಗಿ ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ ಮತ್ತು ಆತನ ಅಧಿಕಾರ ಮತ್ತು ಇನ್ನಿತರ ಸದಸ್ಯರ ಮೇಲಿನ ನಿಯಂತ್ರಣ ಮೊಟಕುಗೊಳ್ಳುತ್ತಿದೆ .

ii ) ನಾಯರ್‌ ವಿವಾಹ ಹೆಚ್ಚು ಶಾಶ್ವತ ಸ್ವರೂಪ ಪಡೆದು ಕೊಂಡಿದೆ ಹಾಗೂ ಪತಿಪತ್ನಿಯೊಂದಿಗೆ ಅನ್ನೋನ್ಯ ಸಂಬಂಧಗಳಿಗೆ ಮಹತ್ವ ಕಲ್ಪಿಸಲಾಗಿದೆ .

ತಾರವಾಡನಲ್ಲಿ ಸಂಭವಿಸಿರುವ ಪರಿವರ್ತನೆಗಳು ಮಾತೃವಂಶೀಯ ಅಥವಾ ಮಾತೃಪ್ರಧಾನವಾದ ಅವಿಭಕ್ತ ಕುಟುಂಬವು ವಾಸಿಸುವ ಸ್ಥಳವನ್ನು ತರವಾಡ ‘ ಗಳೆಂದು ಕರೆಯುತ್ತಾರೆ .

ii ) ಇತ್ತೀಚಿನ ದಿನಗಳಲ್ಲಿ ತರವಾಡಿನ ಆಸ್ತಿಗಳು ಕುಟುಂಬದ ಸದಸ್ಯರಲ್ಲಿ ವಿಭಜನೆಗೊಳ್ಳುತ್ತಿದೆ . ಇಂದು ಕರ್ಣವನ್ ನಿರಂಕುಶ ಪ್ರಭುವಾಗಿ ಪಾತ್ರ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಆತನ ಅಧಿಕಾರ ಮತ್ತು ಉಳಿದ ಸದಸ್ಯರ ಮೇಲಿನ ನಿಯಂತ್ರಣ ಕಡಿಮೆಯಾಗುತ್ತಿದೆ .

iii ) ತರವಾಡಿನ ಸದಸ್ಯರು ತರವಾಡದ ಹೊರಗೆ ಜೀವಿಸುತ್ತಿದ್ದರೂ ತಮ್ಮ ಕುಟುಂಬದ ಆಸ್ತಿಯಿಂದ ಜೀವನೋಪಾಯಕ್ಕೆ ಧನ ಸಹಾಯ ಪಡೆಯಲು ಅರ್ಹತೆ ಹೊಂದಿದ್ದಾರೆ .

iv ) ನಾಯರ್ ವಿವಾಹ ಹೆಚ್ಚು ಶಾಶ್ವತ ಸ್ವರೂಪ ಪಡೆದುಕೊಂಡಿದೆ ಹಾಗೂ ಪತಿಪತ್ನಿಯೊಂದಿಗೆ ಅನ್ನೋನ್ಯ ಸಂಬಂಧಗಳಿಗೆ ಮಹತ್ವವನ್ನು ಕಲ್ಪಿಸಲಾಗಿದೆ .

v ) ಸದಸ್ಯರ ಸಂಪಾದನೆಯು ಕುಟುಂಬದ ಆಸ್ತಿಯೊಂದಿಗೆ ಸೇರ್ಪಡೆಯಾಗುತ್ತಿತ್ತು . ವಿಧವೆಯರು ಹಾಗೂ ಆ ಮಕ್ಕಳಿಗೆ ಆಸ್ತಿಯಲ್ಲಿ ಭಾಗವಿರಲಿಲ್ಲ ಆದರೆ ಇತ್ತೀಚಿನ ಶಾಸನದ ಪ್ರಕಾರ ವಿಧವೆಯರಿಗೆ ಮತ್ತು ಮಕ್ಕಳಿಗೆ ಆಸ್ತಿ ಪಡೆಯಲು ಹಕ್ಕನ್ನು ಕೊಟ್ಟಿದ್ದಾರೆ

39. ತಾರವಾಡನಲ್ಲಿ ಸಂಭವಿಸಿರುವ ಪರಿವರ್ತನೆಗಳನ್ನು ತಿಳಿಸಿರಿ .

ತಾರವಾಡನಲ್ಲಿ ಸಂಭವಿಸಿರುವ ಪರಿವರ್ತನೆಗಳು ಮಾತೃವಂಶೀಯ ಅಥವಾ ಮಾತೃಪ್ರಧಾನವಾದ ಅವಿಭಕ್ತ ಕುಟುಂಬವು ವಾಸಿಸುವ ಸ್ಥಳವನ್ನು ‘ ತರವಾಡ ‘ ಗಳೆಂದು ಕರೆಯುತ್ತಾರೆ .

i ) ಇತ್ತೀಚಿನ ದಿನಗಳಲ್ಲಿ ತರವಾಡಿನ ಆಸ್ತಿಗಳು ಕುಟುಂಬದ ಸದಸ್ಯರಲ್ಲಿ ವಿಭಜನೆಗೊಳ್ಳುತ್ತಿದೆ .

ii ) ಇಂದು ಕರ್ಣವನ್ ನಿರಂಕುಶ ಪ್ರಭುವಾಗಿ ಪಾತ್ರ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಆತನ ಅಧಿಕಾರ ಮತ್ತು ಉಳಿದ ಸದಸ್ಯರ ಮೇಲಿನ ನಿಯಂತ್ರಣ ಕಡಿಮೆಯಾಗುತ್ತಿದೆ .

ii ) ತರವಾಡಿನ ಸದಸ್ಯರು ತರವಾಡದ ಹೊರಗೆ ಜೀವಿಸುತ್ತಿದ್ದರೂ ತಮ್ಮ ಕುಟುಂಬದ ಆಸ್ತಿಯಿಂದ ಜೀವನೋಪಾಯಕ್ಕೆ ಧನ ಸಹಾಯ ಪಡೆಯಲು ಅರ್ಹತೆ ಹೊಂದಿದ್ದಾರೆ .

iv ) ನಾಯರ್ ವಿವಾಹ ಹೆಚ್ಚು ಶಾಶ್ವತ ಸ್ವರೂಪ ಪಡೆದುಕೊಂಡಿದೆ ಹಾಗೂ ಪತಿಪತ್ನಿಯೊಂದಿಗೆ ಅನ್ನೋನ್ಯ ಸಂಬಂಧಗಳಿಗೆ ಮಹತ್ವವನ್ನು ಕಲ್ಪಿಸಲಾಗಿದೆ .

v ) ಸದಸ್ಯರ ಸಂಪಾದನೆಯು ಕುಟುಂಬದ ಆಸ್ತಿಯೊಂದಿಗೆ ಸೇರ್ಪಡೆಯಾಗುತ್ತಿತ್ತು . ವಿಧವೆಯರು ಹಾಗೂ ಆಕೆಯ ಮಕ್ಕಳಿಗೆ ಆಸ್ತಿಯಲ್ಲಿ ಭಾಗವಿರಲಿಲ್ಲ ಆದರೆ ಇತ್ತೀಚಿನ ಶಾಸನದ ಪ್ರಕಾರ ವಿಧವೆಯರಿಗೆ ಮತ್ತು ಮಕ್ಕಳಿಗೆ ಆಸ್ತಿ ಪಡೆಯಲು ಹಕ್ಕನ್ನು ಕೊಟ್ಟಿದ್ದಾರೆ .

40. ಅವಿಭಕ್ತ ಕುಟುಂಬದ ಪರಿವರ್ತನೆಗೆ ಐದು ಕಾರಣ ಅಂಶಗಳನ್ನು ವಿವರಿಸಿರಿ ,

ಸಂರಚನಾತ್ಮ ಮತ್ತು ಕಾರ್ಯಾತ್ಮಕ ಪರಿವರ್ತನೆಗಳೆಂದು ವರ್ಗೀಕರಿಸಲಾಗಿದೆ .

i ) ಸಂರಚನಾತ್ಮಕ ಪರಿವರ್ತನೆಗಳು Changes in the Structure

ಅ ) ಇಂದು ಅವಿಭಕ್ತ ಕುಟುಂಬಗಳಲ್ಲಿ ಸದಸ್ಯರ ಸಂಖ್ಯೆ ಎಳಿಮುಖವಾಗಿದೆ . 8-10 ಜನ ಸದಸ್ಯರಿರುತ್ತಾರೆ .

ಆ ) ಆಸ್ತಿಯ ಒಡೆತನದಲ್ಲಿ ಪರಿವರ್ತನೆಯಾಗಿ , ಸ್ತ್ರೀಯರಿಗೂ ಆಸ್ತಿಯ ಹಕ್ಕಿದೆ .

ಇ ) ಕುಟುಂಬದ ಹಿರಿಯ ಏಕ ವ್ಯಕ್ತಿಯ ಅಧಿಕಾರ ಕ್ಷೀಣಿಸುತ್ತಿದೆ . ಕರ್ತ ಅಥವಾ ಪಿತೃ ಪ್ರಧಾನದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ .

ಈ ) ಸ್ತ್ರೀಯರಿಗೆ ಗೌರವ – ಘನತೆ , ಸ್ಥಾನಮಾನ ದೊರಕಿದೆ . ಸರಿಸಮಾನವಾದ ಅಂತಸ್ತು ಸಿಗದಿದ್ದರೂ , ಅಲ್ಪಮಟ್ಟಿನ ಸುಧಾರಣೆ ಕಂಡುಬರುತ್ತಿದೆ .

ಉ ) ಹಿರಿಯ ಸದಸ್ಯರ ಪ್ರಮುಖ ಪಾತ್ರ ಜೀವನ ಸಂಗಾತಿಗಳ ಆಯ್ಕೆಯಲ್ಲಿ ಕಡಿಮೆಯಾಗುತ್ತಿದೆ . ಇಂದಿನ ದಿನಗಳಲ್ಲಿ ಹಿರಿಯರೂ ಕಿರಿಯರೂ ಒಟ್ಟಿಗೆ ಚರ್ಚೆ ಮಾಡಿ ನಿರ್ಣಯಕ್ಕೆ ಬರುತ್ತಾರೆ .

ಊ ) ಅತ್ತೆ – ಸೊಸೆಯರ ಸಂಬಂಧಗಳಲ್ಲಿ ಪರಿವರ್ತನೆ ಯಾಗಿದೆ . ಅನೇಕ ಮಾರ್ಪಾಡುಗಳೂ ಸಹ ಆಗಿವೆ .

ಋ ) ವ್ಯಕ್ತಿವಾದ , ವೈಚಾರಿಕತೆ , ಸಮಾನತೆ ಮತ್ತು ಪ್ರಜಾಪ್ರಭುತ್ವವು ಅವಿಭಕ್ತ ಕುಟುಂಬಗಳ ನಿಯಮಗಳನ್ನು ಪರಿವರ್ತಿಸಿದೆ .

ಎ ) ಅವಲಂಬಿತ ಅಣು ಕುಟುಂಬಗಳಿಗೆ ಜನಪ್ರಿಯತೆ ದೊರೆಯುತ್ತಿದೆ . ಆಧುನಿಕ ಶಿಕ್ಷಣ , ಉದ್ಯೋಗ , ಆರ್ಥಿಕ ವ್ಯವಸ್ಥೆ ಇವೆಲ್ಲವುಗಳಿಂದ ಅವಿಭಕ್ತ ಕುಟುಂಬದಿಂದ ಹೊರಗೆ ಜೀವಿಸುತ್ತಿದ್ದರೂ ಕುಟುಂಬದ ನೆರವು ಮತ್ತು ಬೆಂಬಲವನ್ನು ಪಡೆಯುತ್ತಾರೆ .

ಅವಿಭಕ್ತ ಕುಟುಂಬಗಳ ಕಾರ್ಯಾತ್ಮಕ ಪರಿವರ್ತನೆಗಳು

i ) ಸಾಮಾನ್ಯ ವಾಸಸ್ಥಳದ ಪರಿವರ್ತನೆ : ಸ್ಥಳದ ಅಭಾವ , ಉದ್ಯೋಗಾವಕಾಶಗಳಿಂದ ಕುಟುಂಬಗಳ ಹೊರಗೆ ಜೀವಿಸಲೇಬೇಕಾದ ಅನಿವಾರತೆಯಿದೆ .

ii ) ಧಾರ್ಮಿಕ ಸಂದರ್ಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ , ವಿವಾಹ ಸಮಾರಂಭಗಳಲ್ಲಿ ಒಟ್ಟಿಗೆ ಸೇರುತ್ತಾರೆ . ಇತ್ತೀಚೆಗೆ ಧಾರ್ಮಿಕ ಕಾರ್ಯದ ಪ್ರಾಮುಖ್ಯತೆ ನಶಿಸುತ್ತಿದೆ .

ii ) ನವಜಾತ ಶಿಶುವಿನ ಸಂರಕ್ಷಣೆ ಮತ್ತು ಸಾಮಾಜಿಕರಣದ ಪಾತ್ರಗಳಲ್ಲಿ ಪರಿವರ್ತನೆಗಳು : ಶಾಲೆ , ಕಾಲೇಜುಗಳು , ಶಿಶುವಿಹಾರಗಳು , ಅಬಲಾಶ್ರಮಗಳು ಇತ್ಯಾದಿ ಸಂಸ್ಥೆಗಳು ಅವಿಭಕ್ತ ಕುಟುಂಬಗಳ ಸಂರಕ್ಷಣೆ ಮತ್ತು ಸಾಮಾಜೀಕರಣ ಕಾರ್ಯಗಳನ್ನು ಕಿತ್ತುಕೊಂಡಿದೆ . ಹಿರಿಯರ ಪಾತ್ರ ಗಣನೀಯವಾಗಿ ಪ್ರಾಮುಖ್ಯತೆ ಕಳೆದುಕೊಂಡಿದೆ .

iv ) ಆರ್ಥಿಕ ಕಾರ್ಯಗಳಲ್ಲಿ ಪರಿವರ್ತನೆಗಳು ಇಂದಿನ ಜನತೆ ಅವಿಭಕ್ತ ಕುಟುಂಬಗಳಿಂದ ದೂರಾಗಿ ನಗರವನ್ನು ಸೇರಿ ತಮ್ಮ ಜೀವನವನ್ನು ರೂಪಿಸಿ ಕೊಳ್ಳುತ್ತಿದ್ದಾರೆ . ಇದರಿಂದ ಅವಿಭಕ್ತ ಕುಟುಂಬಗಳು ಆರ್ಥಿಕ ಹಿಡಿತವನ್ನು ತನ್ನ ಸದಸ್ಯರ ಮೇಲೆ ಸಾಧಿಸಲು ಆಗದೆ , ಅವರ ಕಾರ್ಯ ಕಡಿಮೆಯಾಗತೊಡಗಿದೆ .

v ) ಮನೋರಂಜನೆಯ ಕಾರ್ಯಗಳಲ್ಲಿ ಸಾಕಷ್ಟು ಪರಿವರ್ತನೆಗಳಾಗಿವೆ . ಇಂದಿನ ಯುವ ಪೀಳಿಗೆಗಳು ಟಿ.ವಿ. ( ದೂರದರ್ಶನ ) ಕಂಪ್ಯೂಟರ್ ಮುಂತಾದ ವುಗಳ ಮೇಲೆ ಅವಲಂಬಿತರಾಗಿರುವುದರಿಂದ ಕುಟುಂಬದ ಮನೋರಂಜನೆಯ ಪಾತ್ರ ಕ್ಷೀಣಿಸುತ್ತಿದೆ . ಮುಖ್ಯವಾಗಿ ಈ ಪರಿವರ್ತನೆಗೆ ಕಾರಣಗಳು

ಅ ) ಔದ್ಯೋಗೀಕರಣ

ಆ ) ನಗರೀಕರಣ

ಇ ) ಜನಸಂಖ್ಯಾ ಬೆಳವಣಿಗೆ

ಈ ) ಆಧುನಿಕ ಶಿಕ್ಷಣ

ಉ ) ಸ್ತ್ರೀ ಸಬಲೀಕರಣ

ಊ ) ಸಾಮಾಜಿಕ ಶಾಸನಗಳ ಪ್ರಭಾವ ಮತ್ತು ಜನರಲ್ಲಿ ಮೂಡಿರುವ ವಿಚಾರಧಾರೆ ಇತ್ಯಾದಿ .

41. ಅವಿಭಕ್ತ ಕುಟುಂಬದ ವಿಘಟನೆಗೆ ಬಗ್ಗೆ ಕೆ.ಎಂ. ಕಪಾಡಿಯ ಮತ್ತು ಮಿಲ್ಟನ್ ಸಿಂಗರ್‌ ದೃಷ್ಟಿ ಕೋನಗಳನ್ನು ವಿವರಿಸಿರಿ .

ಅವಿಭಕ್ತ ಕುಟುಂಬಗಳ ವಿಘಟನೆಗೆ ಏನು ಕಾರಣವೆಂಬುದರ ಬಗ್ಗೆ ಕೆ.ಎಂ. ಕಪಾಡಿಯರವರು ಹೀಗೆ ಅಭಿಪ್ರಾಯ ಪಡುತ್ತಾರೆ . ಅವಿಭಕ್ತ ಕುಟುಂಬಗಳಲ್ಲಿ ಇತ್ತೀಚಿನ ಒಲವುಗಳ ಬಗ್ಗೆ ಮೌಲ್ಯಮಾಪನ ಮಾಡಿದ್ದಾರೆ . ಸಾಮಾಜಿಕ ಶಾಸನಗಳು ಪ್ರತಿಯೊಬ್ಬ ಸದಸ್ಯರಿಗೆ ಆಸ್ತಿಯ ವಿಷಯದಲ್ಲಿ ಸಮನಾದ ಹಕ್ಕು ಅನುಕೂಲತೆಯನ್ನು ನೀಡಿತ್ತು . ಇದರ ಪ್ರಭಾವದಿಂದ ಅವಿಭಕ್ತ ಕುಟುಂಬದ ಅವಲಂಬನೆ ಹೇಗೆ ಕಡಿಮೆಯಾಗಿದೆ ? ಎಂಬುದರ ಬಗ್ಗೆ ವಿಶ್ಲೇಷಿಸುತ್ತಾರೆ . ಕಪಾಡಿಯಾರವರ ಪ್ರಕಾರ ಅವಿಭಕ್ತ ಕುಟುಂಬದಲ್ಲಿ ಸ್ವಲ್ಪ ಮಟ್ಟಿಗೆ ವಿಘಟನೆಯ ಪ್ರಭಾವ ಕಂಡು ಬಂದಿದೆ ಎಂದು ತಿಳಿಸಿದ್ದಾರೆ . ಅವರ ಪ್ರಕಾರ ಅವಿಭಕ್ತ ಕುಟುಂಬದ ರಚನೆಯಲ್ಲಿ ಪರಿವರ್ತನೆ ಸಂಭವಿಸಿದೆ . ಎಂದು ಒಪ್ಪಿದ್ದಾರೆ ಆದರೆ ಕುಟುಂಬದ ಕಾರ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿದಿದೆ . ಭಾರತದ ಸಂಸ್ಕೃತಿ ಅವಲಂಬನೆ , ಆದರ್ಶವಾದ ಮತ್ತು ರಕ್ಷಣೆ ನೀಡುವುದು ಎಂಬ ಮನೋಭಾವನೆಯಿಂದ ಅವಿಭಕ್ತ ಕುಟುಂಬ ಇಂದಿಗೂ ಮುಂದುವರಿದಿದೆ . ಮಿಲ್ಟನ್‌ಸಿಂಗರ್‌ರವರು ಅಭಿಪ್ರಾಯಗಳು ಇವರು ಅವಿಭಕ್ತ ಕುಟುಂಬಗಳ ವಿಘಟನೆಯ ಬಗ್ಗೆ ಅಭಿಪ್ರಾಯ ಪಡುವುದಕ್ಕೆ ಮುಂಚಿತವಾಗಿ ಮದ್ರಾಸ್‌ನ ಹತ್ತೊಂಬತ್ತು ಪ್ರಮುಖ ಕೈಗಾರಿಕೋದ್ಯಮಿ ಕುಟುಂಬಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ ಇವರ ಪ್ರಕಾರ

1 . ಆ ಕುಟುಂಬಗಳಲ್ಲಿ ಮಹತ್ತರ ಪರಿವರ್ತನೆಗಳಾಗಿವೆ . ಮೊದಲನೆಯದಾಗಿ ಕುಟುಂಬದ ಗಾತ್ರ 509

2. ಸ್ತ್ರೀಯರ ಸ್ಥಾನಸಮಾನದಲ್ಲಿ ಸುಧಾರಣೆ ಮತ್ತು ಗೃಹ ಕಾರ್ಯ ಮುಂತಾದ ಅ೦ಶಗಳಲ್ಲಿ ಪರಿವರ್ತನೆಗಳಾಗಿವೆ.

4 . ಇವೆಲ್ಲಾ ಕುಟುಂಬಗಳೂ ಅಣು ಕುಟುಂಬಗಳು ತಮ್ಮ ಅವಿಭಕ್ತ ಕುಟುಂಬಗಳ ಧಾರ್ಮಿಕ ಕಾರ್ಯ ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ .

5. ಮೂಲ ಕುಟುಂಬದ ಸದಸ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು .

6. ಹಲವಾರು ಸಂದರ್ಭಗಳಲ್ಲಿ ಅವಿಭಕ್ತ ಕುಟುಂಬದ ನಿಯಮಗಳನ್ನು ಪರಿಪಾಲಿಸುತ್ತಾರೆ .

2nd Puc Sociology Chapter 4 Question Answer

IV . ಹತ್ತು ಅಂಕಗಳ ಪ್ರಶ್ನೆಗಳು :

42. ಅವಿಭಕ್ತ ಕುಟುಂಬ ವ್ಯಾಖ್ಯನಿಸಿ ಮತ್ತು ಅದರ ಗುಣಲಕ್ಷಣಗಳನ್ನು ವಿವರಿಸಿರಿ .

ಐ.ಪಿ. ದೇಸಾಯಿಯವರ ಪ್ರಕಾರ ಅವಿಭಕ್ತ ಕುಟುಂಬದ ವ್ಯಾಖ್ಯೆ ಹೀಗಿದೆ . ಆಸ್ತಿ , ಆದಾಯ ಮತ್ತು ಹಕ್ಕು ಬಾಧ್ಯತೆಗಳ ಮೂಲಕ ಪರಸ್ಪರ ಸಂಬಂಧಿತರಾದ ಮೂರು – ನಾಲ್ಕು ತಲೆಮಾರು ಗಳಿಗೆ ಸೇರಿದ ಜನಸಮುದಾಯವನ್ನು ಅವಿಭಕ್ತ ಕುಟುಂಬ ಎನ್ನುತ್ತಾರೆ .

ಅವಿಭಕ್ತ ಕುಟುಂಬದ ಗುಣಲಕ್ಷಣಗಳು ಹಲವಾರು ಅವುಗಳಲ್ಲಿ ಎರಡು ಗುಣಲಕ್ಷಣಗಳು ಇಂತಿವೆ .

i) ಸಾಮಾನ್ಯ ಅಡಿಗೆ ಮನೆ ಅಥವಾ ಒಲೆ

ii ) ಸಾಮಾನ್ಯ ಧಾರ್ಮಿಕ ಕ್ರಿಯಾವಿಧಿ

i ) ಸಾಮಾನ್ಯ ಅಡಿಗೆ ಮನೆ Common Kitchen ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರು ಒಂದೇ ಅಡಿಗೆ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಯನ್ನು ಮಾಡುತ್ತಾರೆ . ಇದು ಅವಿಭಕ್ತ ಕುಟುಂಬದ ವಿಶಿಷ್ಟವಾದ ಗುಣಲಕ್ಷಣವಾಗಿದೆ . ಹಿರಿಯ ಸ್ತ್ರೀ ಸದಸ್ಯೆ ( ಕರ್ತನ ಹೆಂಡತಿ ) ಅಡಿಗೆ ಮನೆಯ ಮೇಲ್ವಿಚಾರಣೆಯ ಹೊಣೆಗಾರಿಕೆ ಹೊಂದಿರುತ್ತಾರೆ .

i ) ಸಾಮಾನ್ಯ ಧಾರ್ಮಿಕ ಕ್ರಿಯಾವಿಧಿ ( Common Worship ) ಪ್ರತಿಯೊಂದು ಅವಿಭಕ್ತ ಕುಟುಂಬಗಳೂ ತಮ್ಮದೇ ಆದ ಕುಲದೇವತೆಯನ್ನು ಹೊಂದಿರುತ್ತಾರೆ . ಕುಟುಂಬದ ಸದಸ್ಯರೆಲ್ಲರೂ ಪೂಜಾವಿಧಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ .

ಅವಿಭಕ್ತ ಕುಟುಂಬದ ಐದು ಗುಣಲಕ್ಷಣಗಳು ಹೀಗಿವೆ .

1 ) ಸಾಮಾನ್ಯ ಮನೆ ಅಥವಾ ವಾಸಸ್ಥಳ ( Common Roof ) ಇದು ಅವಿಭಕ್ತ ಕುಟುಂಬದ ಪ್ರಮುಖ ಲಕ್ಷಣವಾಗಿದೆ . ಕುಟುಂಬದ ಸದಸ್ಯರೆಲ್ಲರೂ ಒಂದೇ ಮನೆಯಲ್ಲಿ ವಾಸಿಸುವುದು ಮತ್ತು ಇದು ವಂಶಪರಂಪರೆಯ ಗೌರವ ಘನತೆಗಳನ್ನು ಎತ್ತಿ ಹಿಡಿಯುವ ಅಂಶವಾಗಿದೆ . ಇಂತಹ ಸಾಮಾನ್ಯ ಮನೆ ಸಾಮಾಜಿಕ ಜೀವನದ ಎಲ್ಲಾ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ . ಆರ್ಥಿಕ , ಧಾರ್ಮಿಕ , ಮನರಂಜನೆ , ವೈವಾಹಿಕ , ಸಾಮಾಜಿಕ ಜೀವನದ ಕೇಂದ್ರ ಬಿಂದುವಾಗಿದೆ .

ii ) ಸಾಮಾನ್ಯ ಆಸ್ತಿಯ ಹಕ್ಕು ಬಾಧ್ಯತೆಗಳು ( Common Property ) ಅವಿಭಕ್ತ ಕುಟುಂಬದ ಸದಸ್ಯರೆಲ್ಲರಿಗೂ ಆಸ್ತಿಯ ಮೇಲೆ ಸಮನಾದ ಹಕ್ಕು ಬಾಧ್ಯತೆಯನ್ನು ಹೊಂದಿರುತ್ತಾರೆ . ಓ ಮಾಲೆ ( O ‘ Malley ) ರವರು ತಿಳಿಸಿರುವಂತೆ “ ಅವಿಭಕ್ತ ಕುಟುಂಬಗಳು ಕೂಡು ಬಂಡವಾಳ ಮತ್ತು ಸಹಕಾರಿ ಸಂಘವಾಗಿ ಕಾರ್ಯ ನಿರ್ವಹಿಸುತ್ತದೆ . ಕುಟುಂಬದ ಎಲ್ಲಾ ಮೂಲಗಳ ಒಟ್ಟು ಆದಾಯವನ್ನು ಒಂದುಗೂಡಿಸಿ ಸದಸ್ಯರೆಲ್ಲರ ಮೂಲಭೂತ ಅಗತ್ಯಗಳನ್ನು ಈಡೇರಿಸಲು ವಿನಿಯೋಗಿಸಿಕೊಳ್ಳುತ್ತಾರೆ .

iii ) ಪೂರ್ವ ಯೋಜಿತ ವಿವಾಹಗಳು ( Arranged Marriages ) ಕುಟುಂಬದ ಹಿರಿಯ ಸದಸ್ಯರು ತಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ವಿವಾಹ ಸಂಬಂಧಗಳನ್ನು ಏರ್ಪಡಿಸು ವುದರಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದರು ; ವೈಯಕ್ತಿಕ ಆಯ್ಕೆಯ ಮೇಲೆ ಕಡಿವಾಣ ಹಾಕುತ್ತಿದ್ದರು . ವಿವಾಹಗಳಿಂದ ಕೌಟುಂಬಿಕ ಪರಂಪರೆಯ ಗೌರವ ಘನತೆ ಕಾಪಾಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದರಿಂದ ಇದನ್ನು ಯಾರೂ ನಿರಾಕರಿಸುವಂತಿರಲಿಲ್ಲ .

iv ) ಕುಟುಂಬದೊಂದಿಗೆ ಸದಸ್ಯರ ಪರಸ್ಪರ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ( Mutual Rights and Obligation ) ಪ್ರತಿಯೊಬ್ಬ ಸದಸ್ಯರಿಗೂ ತಮ್ಮ ಕುಟುಂಬದ ಉಳಿದ ಸದಸ್ಯರೊಂದಿಗೆ ಹಕ್ಕುಗಳು ಹಾಗೂ ಕರ್ತವ್ಯಗಳಿದ್ದವು . ಅದರ ಅರಿವನ್ನು ಅವರು ಹೊಂದಿರಬೇಕಾಗಿತ್ತು . ಕುಟುಂಬದ ಐಕ್ಯತೆ ಮತ್ತು ಪರಸ್ಪರ ಅವಲಂಬನೆಯನ್ನು ಇದು ಮತ್ತಷ್ಟು ಭದ್ರಗೊಳಿಸುತ್ತದೆ . ಕುಟುಂಬದ ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಿರುತ್ತಾರೆ .

v ) ಸ್ವಯಂ ಪರಿಪೂರ್ಣತೆ : ( Self Sufficiency ) ಅವಿಭಕ್ತ ಕುಟುಂಬಗಳು ಸಾಪೇಕ್ಷವಾಗಿ ಸ್ವಯಂ ಪರಿಪೂರ್ಣವಾಗಿರುತ್ತದೆ . ಬಾಹ್ಯಪ್ರಪಂಚವನ್ನು ಹೆಚ್ಚಾಗಿ ಅವಲಂಬಿಸದೆ ತಮಗೆ ಬೇಕಾದ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿತ್ತು . ಗ್ರಾಮೀಣ ಸಮುದಾಯಕ್ಕೆ ಅವಿಭಕ್ತ ಕುಟುಂಬ ಪೂರಕವಾಗಿದ್ದು ಸ್ವಾವಲಂಬನೆ ಅಂಶವನ್ನು ಎತ್ತಿ ಹಿಡಿಯುತ್ತದೆ .

ಅವಿಭಕ್ತ ಕುಟುಂಬಗಳ ಗುಣಲಕ್ಷಣಗಳು

i) ಪೀಳಿಗೆಗಳ ಸಮಾವೇಶ

ii ) ಸಾಮಾನ್ಯ ವಾಸಸ್ಥಳ

iii ) ಸಾಮಾನ್ಯ ಒಲೆ ಅಥವಾ ಅಡಿಗೆ ಮನೆ

IV ) ಸಾಮೂಹಿಕ ಧಾರ್ಮಿಕ ಪೂಜೆ ವಿಧಾನ

v ) ಸಾಮೂಹಿಕ ಅಥವಾ ಸಾಮಾನ್ಯ

vi )ಆಸ್ತಿ ಅಧಿಕಾರದ ಚಲಾವಣೆ

vii ) ಪೂರ್ವ ಯೋಜಿತ ವಿವಾಹ ಪದ್ಧತಿ

viii ) ಅತಿ ಸಂತಾನದ ಬಯಕೆಗಳು

ix ) ಪರಸ್ಪರ ಹಕ್ಕು – ಬಾಧ್ಯತೆಗಳ ಬಗ್ಗೆ ಕುಟುಂಬದ ಸದಸ್ಯರ ಅರಿವು .

x ) ಸ್ವಯಂ ಪರಿಪೂರ್ಣತೆ

xi ) ಜೀವನ ಸಂಗಾತಿ ಆಯ್ಕೆ ಮತ್ತು ದಾಂಪತ್ಯ ಸಂಯೋಗ ಸಂಬಂಧಗಳಲ್ಲಿ ಪರಿವರ್ತನೆಗಳು

xii ) ವೈವಾಹಿಕ ಸಂಬಂಧಗಳಾದ ಅತ್ತೆ , ಸೊಸೆ ಮತ್ತು ಮಾವ ಮುಂತಾದವುಗಳಲ್ಲಿ ಪರಿವರ್ತನೆಗಳು ,

xiii ) ಕೌಟುಂಬಿಕ ನೀತಿ ನಿಯಮಗಳಲ್ಲಿ ದುರ್ಬಲತೆ

xiv ) ಸ್ವಾವಲಂಬನೆ ಪ್ರತೀಕವಾದ ಅಣು ಕುಟುಂಬಗಳು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವುದು .

43. ವಿಭಕ್ತ ಕುಟುಂಬದ ಅನುಕೂಲತೆ ಮತ್ತು ಅನಾನು ಕೂಲತೆಗಳನ್ನು ವಿವರಿಸಿರಿ ,

ಅವಿಭಕ್ತ ಕುಟುಂಬದ ಎರಡು ಅನುಕೂಲತೆಗಳು ( Advantages ) ಹೀಗಿವೆ .

i ) ಸದಸ್ಯರ ಸಂರಕ್ಷಣೆ ( Protection to Members ) ಅವಿಭಕ್ತ ಕುಟುಂಬವು ತನ್ನೆಲ್ಲಾ ಸದಸ್ಯರಿಗೆ , ಎಲ್ಲಾ ಹಂತದಲ್ಲೂ ರಕ್ಷಣೆಯನ್ನು ನೀಡಿ ಪೋಷಿಸುತ್ತದೆ . ಸಂಕಷ್ಟದಲ್ಲಿ ನೆರವನ್ನು ನೀಡುತ್ತದೆ .

ii ) ಮನೋರಂಜನೆ ಕಲ್ಪಿಸುತ್ತದೆ ( Provides Recreation ) ಅವಿಭಕ್ತ ಕುಟುಂಬವು ತನ್ನ ಸದಸ್ಯರಿಗೆಲ್ಲ ಆಂತರಿಕವಾಗಿ ಮನೋರಂಜನೆ ನೀಡುತ್ತದೆ . ಇಂತಹ ಕುಟುಂಬದಲ್ಲಿ ಎಲ್ಲಾ ಮಕ್ಕಳೂ ಒಟ್ಟಿಗೆ ಆಟ – ಪಾಠಗಳಲ್ಲಿ ಭಾಗವಹಿಸುತ್ತಾರೆ . ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ ಆಂತರಿಕ ಐಕ್ಯತೆ ಬೆಳೆಯುತ್ತದೆ .

ಅವಿಭಕ್ತ ಕುಟುಂಬದ ಎರಡು ಅನಾನುಕೂಲತೆಗಳು

i ) ಸೋಮಾರಿತನವನ್ನು ಪ್ರೋತ್ಸಾಹಿಸುತ್ತದೆ ( Promotes Idleness ) ಅವಿಭಕ್ತ ಕುಟುಂಬಗಳು ಸೋಮಾರಿತನದ ತವರೂರು . ಇಂತಹ ಪ್ರವೃತ್ತಿಯ ವ್ಯಕ್ತಿಗಳು ಉದ್ದೇಶ ಪೂರ್ವಕವಾಗಿ ಕಾರ್ಯ ನಿರ್ವಹಿಸದೆ ಎಲ್ಲಾ ರೀತಿಯ ಸೌಕರ್ಯಗಳನ್ನು ಅನುಭವಿಸುತ್ತಾರೆ . ದುಡಿಯುವ ಕೈಗಳು ಸದಾ ಶ್ರಮವಹಿಸಿ ದುಡಿಯುತ್ತಿದ್ದರೆ ಕೆಲವು ಮಂದಿ ಸದಸ್ಯರು ಸೋಮಾರಿಗಳಾಗಿ ಜೀವನವನ್ನು ನಡೆಸುತ್ತಾರೆ .

ii ) ಅತಿ ಸಂತಾನಕ್ಕೆ ಪ್ರೋತ್ಸಾಹ ( More Reproduction ) ಅತಿ ಸಂತಾನವನ್ನು ಆರ್ಥಿಕ ಹೊರೆಯೆಂದು ಪರಿಗಣಿಸದೆ ಭವಿಷ್ಯದ ನಿಧಿಗಳೆಂದು ಪರಿಗಣಿಸುತ್ತಾರೆ . ಮಕ್ಕಳ ಲಾಲನೆ , ಪಾಲನೆ , ಆರೈಕೆಯ ಸಮಸ್ಯೆಯಿರುವುದಿಲ್ಲ . ಆದ್ದರಿಂದ ಸದಸ್ಯರಿಗೆ ಮಕ್ಕಳು ಜಾಸ್ತಿಯಾಗುತ್ತಾರೆ .

44. ಇಲ್ಲಾಂ ಮತ್ತು ತಾರವಾಡ ಬಗ್ಗೆ ಟಿಪ್ಪಣಿ ಬರೆಯಿರಿ

‘ ಇಲ್ಲಾಂ ‘ ಎಂದರೆ ಪಿತೃವಂಶೀಯ ಅವಿಭಕ್ತ ಕುಟುಂಬಗಳು ವಾಸಿಸುವ ಸ್ಥಳ , ಪಿತೃವಂಶೀಯ ಅವಿಭಕ್ತ ಕುಟುಂಬ ಎಂದರೆ ಕೇರಳದ ನಂಬೂದರಿಯವರು . ಈ ಕೇರಳದ ನಂಬೂದರಿಯವರ ವಾಸಸ್ಥಳ ತಾಣವನ್ನು ‘ ಇಲ್ಲಾಂ ‘ ಎಂದು ಕರೆಯಲಾಗುತ್ತಿತ್ತು .

ತರವಾಡಗಳು ಮಾತೃವಂಶೀಯ ಮತ್ತು ಮಾತೃಪ್ರಧಾನ ಕುಟುಂಬವಾಗಿದೆ . ಕುಟುಂಬದ ಹಿರಿಯ ಸ್ತ್ರೀ ಸದಸ್ಯೆ ಅಥವಾ ತಾಯಿ ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ .

ತರವಾಡುನಲ್ಲಿನ ಎರಡು ಪರಿವರ್ತನೆಗಳು ( Changes in Tarawad )

i ) ಕರ್ಣವನ್ ಇಂದಿಗೆ ನಿರಂಕುಶ ಪ್ರಭುವಾಗಿ ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ ಮತ್ತು ಆತನ ಅಧಿಕಾರ ಮತ್ತು ಇನ್ನಿತರ ಸದಸ್ಯರ ಮೇಲಿನ ನಿಯಂತ್ರಣ ಮೊಟಕುಗೊಳ್ಳುತ್ತಿದೆ .

ii) ನಾಯರ್ ವಿವಾಹ ಹೆಚ್ಚು ಶಾಶ್ವತ ಸ್ವರೂಪ ಪಡೆದು ಕೊಂಡಿದೆ ಹಾಗೂ ಪತಿಪತ್ನಿಯೊಂದಿಗೆ ಅನ್ನೋನ್ಯ ಸಂಬಂಧಗಳಿಗೆ ಮಹತ್ವ ಕಲ್ಪಿಸಲಾಗಿದೆ . ಪಿತೃ ಪ್ರಧಾನ ಅವಿಭಕ್ತ ಕುಟುಂಬಗಳು ಅವಿಭಕ್ತ ಕುಟುಂಬಗಳಲ್ಲಿ ಎರಡು ಪ್ರಕಾರಗಳು ಮಾತೃವಂಶೀಯ ಮತ್ತು ಪಿತೃಪ್ರಧಾನ ಅವಿಭಕ್ತ ಕುಟುಂಬಗಳು

i ) ಪಿತೃವಂಶೀಯ ಅಥವಾ ಪಿತೃಪ್ರಧಾನ ಅವಿಭಕ್ತ own . ( Patriarchal Joint Familly ) : ಅವಿಭಕ್ತ ಕುಟುಂಬಗಳಲ್ಲಿ ಕುಟುಂಬದ ಹಿರಿಯ ಎಂದರೆ ತಂದೆ ಅಥವಾ ಪುರುಷರು ಯಜಮಾನರಾಗಿರುವ ಕುಟುಂಬಗಳನ್ನು ಪಿತೃ ಪ್ರಧಾನ ಕುಟುಂಬಗಳು ಎನ್ನುತ್ತಾರೆ . ಏಕೆಂದರೆ ಇಂತಹ ಅವಿಭಕ್ತ ಕುಟುಂಬದ ಸಂಪೂರ್ಣ ಹೊಣೆಗಾರಿಕೆಯನ್ನು ಪುರುಷರೇ ನಿಭಾಯಿಸುತ್ತಾರೆ . ಉದಾ : ಕೇರಳದ ನಂಬೂದರಿ , ಛೋಟನಾಗಪುರದ ಮುಂಡಾರು , ಅಸ್ಸಾಂನ ಅಂಗಾಮಿ ನಾಗರು ಮುಂತಾದವರು . ನಂಬೂದರಿ ಅವಿಭಕ್ತ ಕುಟುಂಬದ ವಾಸಸ್ಥಳ ‘ ಇಲ್ಲಾಂ ‘ .

ನಂಬೂದರಿ ಪಿತೃವಂಶೀಯ ಕುಟುಂಬವಾಗಿದ್ದು , ಎಲ್ಲಾ ಸದಸ್ಯರು ತಂದೆಯ ವಂಶಾವಳಿಯಿಂದ ಗುರ್ತಿಸಿಕೊಳ್ಳುತ್ತಾರೆ . ನಂಬೂದರಿ ಬ್ರಾಹ್ಮಣರು ಭೂ ಮಾಲಿಕರಾಗಿದ್ದು , ವಿಸ್ತಾರವಾದ ಭೂಮಿಯ ಒಡೆತನದ ಹಕ್ಕುಗಳನ್ನು ಹೊಂದಿದ್ದರು . ಯಾವುದೇ ಕಾರಣಕ್ಕೂ ಭೂಮಿಯ ವಿಘಟನೆಯನ್ನು ಮಾಡದಂತೆ ನಿರ್ಬಂಧನೆ ಹೇರಲಾಗಿತ್ತು .

ಇಲ್ಲಾಂಗಳಲ್ಲಿ ಪುರುಷ , ಆತನ ಪತ್ನಿ , ತಾಯಿ ಹಾಗೂ ಮಕ್ಕಳು , ಕಿರಿಯ ಸಹೋದರರು , ಅವಿವಾಹಿತ ಸಹೋದರಿಯರು ಮುಂತಾದವರು ಇರುತ್ತಿದ್ದರು . ನಂಬೂದರಿಗಳು ಭೂಮಿಯ ಒಡೆತನ ತಮ್ಮಲ್ಲಿಯೇ ಸಂರಕ್ಷಿಸಿಕೊಳ್ಳುವ ಪದ್ಧತಿಯನ್ನು ಅನುಸರಿಸಿದರು , ನಂಬೂದರಿಯ ಹಿರಿಯ ಮಗ ಮಾತ್ರ ತನ್ನ ಜಾತಿ ಸಮೂಹದಲ್ಲಿ , ನಂಬೂದರಿ ಕನೈಯನ್ನೇ ವಿವಾಹವಾಗುತ್ತಿದ್ದನು . ಹಿರಿಯ ಮಗನಿಗೆ ಸಂತಾನ ಪ್ರಾಪ್ತಿಯಾಗದೆ ಇದ್ದಾಗ ದ್ವಿತೀಯ ಹಾಗೂ ತೃತೀಯ ಗಂಡು ಮಗನಿಗೆ ನಂಬೂದರಿ ಕನೈಯನ್ನು ಸಂಪ್ರದಾಯಿಕವಾಗಿ ವಿವಾಹವಾಗಲು ಅವಕಾಶವಿತ್ತು .

ಕುಟುಂಬದ ಹಿರಿಯ ಸದಸ್ಯ ಇಲ್ಲಾಂನ ಸಮಗ್ರ ಆಸ್ತಿಯ ಮೇಲೆ ನಿಯಂತ್ರಣ ಹೊಂದಿದ್ದರು . ಆದರೆ ಅವರಿಗೆ ಆಸ್ತಿಯನ್ನು ಪರಭಾರೆ ಮಾಡುವ ಅಧಿಕಾರವಿರಲಿಲ್ಲ ಈ ರೀತಿ ವಹಿವಾಟು ಮಾಡುವಾಗ ಕುಟುಂಬದ ಎಲ್ಲಾ ಸದಸ್ಯರ ಅನುಮತಿ ಪಡೆಯಬೇಕಾಗಿತ್ತು ಮತ್ತು ಸ್ತ್ರೀ ಸದಸ್ಯರ ಅನುಮತಿಯನ್ನು ಸಹ ಪಡೆಯಲೇಬೇಕೆಂಬ ಕಡ್ಡಾಯ ನಿಯಮವಿತ್ತು .

ತಾರವಾಡನಲ್ಲಿ ಸಂಭವಿಸಿರುವ ಪರಿವರ್ತನೆಗಳು

ಮಾತೃವಂಶೀಯ ಅಥವಾ ಮಾತೃಪ್ರಧಾನವಾದ ಅವಿಭಕ್ತ ಕುಟುಂಬವು ವಾಸಿಸುವ ಸ್ಥಳವನ್ನು ತರವಾಡ ‘ ಗಳೆಂದು ಕರೆಯುತ್ತಾರೆ .

i ) ಇತ್ತೀಚಿನ ದಿನಗಳಲ್ಲಿ ತರವಾಡಿನ ಆಸ್ತಿಗಳು ಕುಟುಂಬದ ಸದಸ್ಯರಲ್ಲಿ ವಿಭಜನೆಗೊಳ್ಳುತ್ತಿದೆ . ಇಂದು ಕರ್ಣವನ್ ನಿರಂಕುಶ ಪ್ರಭುವಾಗಿ ಪಾತ್ರ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಆತನ ಅಧಿಕಾರ ಮತ್ತು ಉಳಿದ ಸದಸ್ಯರ ಮೇಲಿನ ನಿಯಂತ್ರಣ ಕಡಿಮೆಯಾಗುತ್ತಿದೆ .

ii ) ತರವಾಡಿನ ಸದಸ್ಯರು ತರವಾಡದ ಹೊರಗೆ ಜೀವಿಸುತ್ತಿದ್ದರೂ ತಮ್ಮ ಕುಟುಂಬದ ಆಸ್ತಿಯಿಂದ ಜೀವನೋಪಾಯಕ್ಕೆ ಧನ ಸಹಾಯ ಪಡೆಯಲು ಅರ್ಹತೆ ಹೊಂದಿದ್ದಾರೆ .

iv) ನಾಯರ್‌ ವಿವಾಹ ಹೆಚ್ಚು ಶಾಶ್ವತ ಸ್ವರೂಪ ಪಡೆದುಕೊಂಡಿದೆ ಹಾಗೂ ಪತಿಪತ್ನಿಯೊಂದಿಗೆ ಅನ್ನೋನ್ಯ ಸಂಬಂಧಗಳಿಗೆ ಮಹತ್ವವನ್ನು ಕಲ್ಪಿಸಲಾಗಿದೆ .

v ) ಸದಸ್ಯರ ಸಂಪಾದನೆಯು ಕುಟುಂಬದ ಆಸ್ತಿಯೊಂದಿಗೆ ಸೇರ್ಪಡೆಯಾಗುತ್ತಿತ್ತು . ವಿಧವೆಯರು ಹಾಗೂ ಆಕೆಯ ಮಕ್ಕಳಿಗೆ ಆಸ್ತಿಯಲ್ಲಿ ಭಾಗವಿರಲಿಲ್ಲ ಆದರೆ ಇತ್ತೀಚಿನ ಶಾಸನದ ಪ್ರಕಾರ ವಿಧವೆಯರಿಗೆ ಮತ್ತು ಮಕ್ಕಳಿಗೆ ಆಸ್ತಿ ಪಡೆಯಲು ಹಕ್ಕನ್ನು ಕೊಟ್ಟಿದ್ದಾರೆ .

45. ಅವಿಭಕ್ತ ಕುಟುಂಬದ ಬಗ್ಗೆ ಐ.ಪಿ.ದೇಸಾಯಿ ದೃಷ್ಟಿ ಕೋನವನ್ನು ವಿವರಿಸಿ .

ಐ.ಡಿ. ದೇಸಾಯಿಯವರು ಶ್ರೇಷ್ಠ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರು . ಅವಿಭಕ್ತ ಕುಟುಂಬದ ಬಗ್ಗೆ ಅವರ ದೃಷ್ಟಿಕೋನವನ್ನು ತಿಳಿಯುವಾ . ಮೊಟ್ಟ ಮೊದಲು ಐ.ಪಿ. ದೇಸಾಯಿಯವರು ಗುಜರಾತ್‌ನ ಚಿಕ್ಕಪಟ್ಟಣವಾದ ಮಹುವಾ Mahuva ಕೌಟುಂಬಿಕ ವ್ಯವಸ್ಥೆಯ ಬಗ್ಗೆ 1960 ರ ಆರಂಭದಲ್ಲಿ ಅಧ್ಯಯನ ಮಾಡಿದ್ದಾರೆ . ಆಗ ಅವರು ತಯಾರಿಸಿದ ಮಾಹಿತಿಯಲ್ಲಿ ಸದಸ್ಯರ ನಡುವೆಯಿರುವ ಜಂಟಿತನದ ಅಂಶಗಳನ್ನು ಎತ್ತಿ ಹಿಡಿದಿದ್ದಾರೆ . ಈ ರೀತಿ ಜಂಟಿತನ ಕೌಟುಂಬಿಕ ಐಕ್ಯತೆ ಅಂಶಗಳು , ಧರ್ಮ , ವೃತ್ತಿಯ ಸಂಬಂಧಗಳು , ಆಸ್ತಿ , ಶಿಕ್ಷಣ , ನಗರೀಕರಣ , ರಕ್ತ ಸಂಬಂಧಗಳು , ಕರ್ತವ್ಯಗಳು ಮತ್ತು ಮನೆತನ ಸಂಯೋಜನೆ ( House hold Composition ) ಮುಂತಾದವುಗಳ ಹಿನ್ನೆಲೆಯಲ್ಲಿ ಅವಿಭಕ್ತ ಸಂಬಂಧಗಳನ್ನು ಗುರ್ತಿಸಿದ್ದಾರೆ . ಕುಟುಂಬದ ಸಂರಚನೆಯ ಅಂಶಗಳನ್ನು ವಿಶ್ಲೇಷಿಸುತ್ತಾ ಸದಸ್ಯರುಗಳು ನಿರ್ವಹಿಸುವ ಕಾರ್ಯಗಳು ಮತ್ತು ಹಕ್ಕು ಬಾದ್ಯತೆಗಳನ್ನು ಆಧಾರವಾಗಿಟ್ಟುಕೊಂಡು ಅವಿಭಕ್ತತೆಯ ಪ್ರಮಾಣ , ತೀವ್ರತೆ ಮತ್ತು ಉದ್ದೇಶಿತ ಗುರಿಗಳನ್ನು ವಿವರಿಸಲು ಪ್ರಯತ್ನಿಸಿದ್ದಾರೆ . ದೇಸಾಯಿಯವರ ಪ್ರಕಾರ ಅವಿಭಕ್ತ ಕುಟುಂಬಗಳನ್ನು ಐದು ಪ್ರಕಾರಗಳಾಗಿ ವಿಂಗಡಿಸಿದ್ದಾರೆ .

ಎ ) ಶೂನ್ಯ ಅಥವಾ ನಗಣ್ಯ ಅವಿಭಕ್ತ ಕುಟುಂಬ ( Household with Zero degree of Jointness )

ಬಿ ) ಕಡಿಮೆ ಪ್ರಮಾಣದ ಅವಿಭಕ್ತ ಕುಟುಂಬ ( Household with low degree of Jointness ) ಪರಸ್ಪರ ಹಕ್ಕು ಬಾಧ್ಯತೆ ಪೂರೈಸುವ ಅವಿಭಕ್ತ ಸಂಬಂಧಗಳು .

ಸಿ ) ಉನ್ನತ ಮಟ್ಟದ ಅವಿಭಕ್ತ ಕುಟುಂಬಗಳು ( Household with High degree of Jointness ) ಆಸ್ತಿಯ ಮೇಲೆ ಸಾಮೂಹಿಕವಾದ ಹಕ್ಕು ಬಾದ್ಯತೆಗಳು .

ಡಿ ) ಅತಿ ಉನ್ನತ ಮಟ್ಟದ ಅವಿಭಕ್ತತೆ ಹೊಂದಿರುವ ಮನೆತನ ( Household with higher degree of Jointness )

ಇ ) ಅತ್ಯುನ್ನತ ಮಟ್ಟದ ಅವಿಭಕ್ತತೆ ಹೊಂದಿರುವ ಮನೆತನ ( Houschold with highest degree of Jointness ) ಸಾಂಪ್ರದಾಯಿಕ ಅವಿಭಕ್ತ ಕುಟುಂಬಗಳು .

ಐ.ಪಿ. ದೇಸಾಯಿಯವರ ಪ್ರಕಾರ ಇಂದಿನ ಕುಟುಂಬಗಳು ಸಂರಚನಾತ್ಮಕವಾಗಿ ಅಣು ಕುಟುಂಬವಾದರೂ ಕಾರ್ಯಾತ್ಮಕವಾಗಿ ಅವಿಭಕ್ತ ಸ್ವರೂಪವನ್ನು ಹೊಂದಿದೆ . ನಿಸ್ಸಂದೇಹವಾಗಿ ಸದಸ್ಯರು ಅವಿಭಕ್ತ ಕುಟುಂಬಗಳನ್ನುಅವಲಂಬಿಸುತ್ತಾರೆ . ತಂದೆ – ತಾಯಿಗಳು ಮತ್ತು ಸಹೋದರರಿಂದ ಪ್ರತ್ಯೇಕವಾಗಿ ವಾಸಿಸುತ್ತಾರೆ.

ಆದರೆ ಇದು ಸಂರಚನಾತ್ಮಕ ಪ್ರತ್ಯೇಕತೆಯಲ್ಲ ಇಂದಿನ ಪ್ರಚಲಿತ ಸಾಮಾಜಿಕ ವ್ಯವಸ್ಥೆಯಲ್ಲಿ ಅವಿಭಕ್ತ ಕುಟುಂಬಗಳಿಂದ ಹಲವಾರು ವಿಭಕ್ತ ಕುಟುಂಬಗಳು ಸೃಷ್ಟಿಯಾಗುತ್ತಿದೆ ಮತ್ತು ನಂತರದ ದಿನಗಳಲ್ಲಿ ಅವಿಭಕ್ತ ಕುಟುಂಬಗಳಾಗಿ ರೂಪಾಂತರವಾಗುತ್ತದೆ . ಭಾರತದಲ್ಲಿ ಕುಟುಂಬಗಳು ಅವಿಭಕ್ತತೆಯಿಂದ ವಿಭಕ್ತತೆಯ ಕುಟುಂಬಗಳಾಗಿ ಹಾಗೆಯೇ ವಿಭಕ್ತ ಕುಟುಂಬಗಳು ಅವಿಭಕ್ತ ಕುಟುಂಬಗಳ ನಡುವೆ ಸಾಗುತ್ತಾ ಬಂದು , ಒಂದು ರೀತಿ ಚಕ್ರೀಯ ಮಾದರಿಯಾಗಿದೆ . ಇದು ಐ.ಪಿ. ದೇಸಾಯಿಯವರ ಅವಿಭಕ್ತ ಕುಟುಂಬಗಳ ಬಗ್ಗೆ ಇರುವ ದೃಷ್ಟಿಕೋನ .

FAQ

1. ಕರ್ತಾ ಎಂದರೆ ಯಾರು ?

ಹಿಂದೂ ಅವಿಭಕ್ತ ಕುಟುಂಬದ ಹಿರಿಯ ಸದಸ್ಯನನ್ನು ‘ ಕರ್ತಾ ‘ ಎನ್ನುವರು .

2. ಇಲ್ಲಾಂ ಎಂದರೇನು ?

ಕೇರಳದ ನಂಬೂದರಿ ಅವಿಭಕ್ತ ಕುಟುಂಬ ಪಿತೃ ವಂಶೀಯವಾಗಿದ್ದು , ಅವರ ವಾಸಸ್ಥಳವನ್ನು ಇಲ್ಲಾಂ ‘ ಎಂದು ಕರೆಯುತ್ತಾರೆ .

ಇತರೆ ವಿಷಯಗಳು :

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್‌

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

Leave a Reply

Your email address will not be published. Required fields are marked *

rtgh