ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-3 ಒಳಗೊಳ್ಳುವಿಕೆಯ ಕಾರ್ಯತಂತ್ರಗಳು ನೋಟ್ಸ್‌ | 2nd Puc Sociology 3rd Chapter Notes‌

ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-3 ಒಳಗೊಳ್ಳುವಿಕೆಯ ಕಾರ್ಯತಂತ್ರಗಳು ನೋಟ್ಸ್‌, 2nd Puc Sociology 3rd Chapter Notes Question Answer in Kannada Mcq Inclusive Strategies in Kannada Notes Kseeb Solution For Class 12 Sociology Chapter 3 Notes olagolluvike karya tantragalu notes in kannada

2nd Puc Sociology 3rd Chapter Notes in Kannada

2nd puc sociology chapter 3 question answer in kannada

I. ಒಂದು ಅಂಕದ ಪ್ರಶ್ನೆಗಳು :

1. ಸಂವಿಧಾನದ ಯಾವ ಕಲಮು ಅಸ್ಪೃಶ್ಯತೆಯನ್ನು ರದ್ದುಪಡಿಸಿದೆ ?

ಅಸ್ಪೃಶ್ಯತೆಯ ನಿಷೇಧ ಮತ್ತು ಯಾವುದೇ ರೂಪದಲ್ಲಿ ಅಸ್ಪೃಶ್ಯತೆಯ ಆಚರಣೆಯ ನಿಷೇದ ಮತ್ತು ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹವೆಂದು ಸಂವಿಧಾನದ 17 ನೇ ಕಲಮು ತಿಳಿಸುತ್ತದೆ .

2. ಅಸ್ಪೃಶ್ಯತೆ ( ಅಪರಾಧಗಳು ) ಕಾಯಿದೆಯನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು ?

ಅಸ್ಪೃಶ್ಯತೆ ( ಅಪರಾಧಗಳು ) ಕಾಯಿದೆಯನ್ನು 1955 ರಲ್ಲಿ ಜಾರಿಗೊಳಿಸಲಾಯಿತು .

3. ಕರ್ನಾಟಕದಲ್ಲಿ ಸೋಲಿಗರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಟನೆ ಯಾವುದು ?

ಡಾ || ಸುದರ್ಶನ ಅವರ ನೇತೃತ್ವದ ವಿವೇಕಾನಂದ ಗಿರಿಜನ ಕೇಂದ್ರವು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಸೋಲಿಗ ಬುಡಕಟ್ಟಿನ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ .

4. ಸ್ತ್ರೀಶಕ್ತಿ ಯೋಜನೆಯನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು ?

ಸ್ತ್ರೀಶಕ್ತಿ ಯೋಜನೆಯ ಕಾರ್ಯಕ್ರಮವನ್ನು 2000 01 ರ ಸಾಲಿನಲ್ಲಿ ಗ್ರಾಮೀಣ ಮಹಿಳೆಯರನ್ನು ಸಬಲೀಕರಣ ಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯಾದ್ಯಂತ ಚಾಲನೆಗೊಳಿಸಲಾಯಿತು .

5 , ಬಾಂಗ್ಲಾದೇಶದಲ್ಲಿ ಸೂಕ್ಷ್ಮ ಸಾಲ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

ಬಾಂಗ್ಲಾದೇಶದಲ್ಲಿ ಸೂಕ್ಷ್ಮ ಸಾಲ ಪರಿಕಲ್ಪನೆಯನ್ನು 1970 ರಲ್ಲಿ ಮಹಮದ್ ಯೂನೇಸ್‌ರವರು ಪರಿಚಯಿಸಿದರು.

6. ಲಿಜ್ಜತ್‌ ಕೇಂದ್ರ ಕಚೇರಿಯು ಎಲ್ಲಿದೆ ?

ಲಿಜ್ಜತ್‌ನ ಕೇಂದ್ರ ಕಚೇರಿಯ 1959 ರಲ್ಲಿ ಮುಂಬಯಿಯಲ್ಲಿ ಸ್ಥಾಪಿತವಾಯಿತು .

2nd Puc Sociology 3rd Chapter Question Answer

II . ಎರಡು ಅಂಕದ ಪ್ರಶ್ನೆಗಳು :

7. ನಿಶ್ಚಯಾತ್ಮಕ ಕ್ರಿಯೆಯ ಅರ್ಥವನ್ನು ತಿಳಿಸಿ .

ನಿಶ್ಚಯಾತ್ಮಕ ಕ್ರಿಯೆಯು ‘ ಜಾತಿ ಮತ , ಧರ್ಮ ಮತ್ತು ಲಿಂಗಗಳನ್ನು ಪರಿಗಣಿಸಿ ಉದ್ಯೋಗ , ಶಿಕ್ಷಣ ಮತ್ತು ವ್ಯಾಪಾರಗಳ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿಧ್ಯವಿರದ ಸಮೂಹಕ್ಕೆ ಲಾಭವಾಗುವಂತೆ ರೂಪಿಸಲಾಗುವ ನೀತಿಗಳನ್ನು ಸೂಚಿಸುತ್ತದೆ . ನಿಶ್ಚಯಾತ್ಮಕ ಕ್ರಿಯೆ ( Affirmative Action ) ಎಂಬ ಪದವನ್ನು ಮೊದಲ ಬಾರಿಗೆ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡಲು ಅಮೇರಿಕೆಯ ಅಧ್ಯಕ್ಷರಾಗಿದ್ದ ಜಾನ್ . ಎಫ್ . ಕೆನಡಿಯವರು ಹೊರಡಿಸಿದ ಆಜ್ಞೆಯಲ್ಲಿ ಬಳಸಲಾಗಿತ್ತು . ಉನ್ನತ ವರ್ಗದಿಂದ ತಾರತಮ್ಯ ಮತ್ತು ಅನ್ಯಾಯಕ್ಕೊಳಗಾದ ಅಥವಾ ಶೋಷಣೆಗೊಳ ಗಾದವರಿಗೆ ಪರಿಹಾರ ಒದಗಿಸುವುದೇ ನಿಶ್ಚಯಾತ್ಮಕ ಕ್ರಿಯೆಯಾಗಿದೆ . ಭಾರತದಲ್ಲಿ ಕೆಲವು ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯು ಜಾತಿಯ ಕಾರಣದಿಂದ ಹಿಂದುಳಿದ ಅಥವಾ ಸೂಕ್ತ ಪ್ರಾತಿನಿದ್ಯ ಪಡೆಯದವರ ಪರಿಸ್ಥಿತಿಗಳ ಸುಧಾರಣೆಗಾಗಿ ಕೈಗೊಳ್ಳಲಾದ ಕ್ರಮವು ನಿಶ್ಚಯಾತ್ಮಕ ಕ್ರಿಯೆಯ ಒಂದು ರೂಪವಾಗಿದೆ.

8. ಮಹಿಳಾ ಸಬಲೀಕರಣ ಎಂದರೇನು ?

ನಿಘಂಟಿನ ಅರ್ಥದ ಪ್ರಕಾರ ಅಧಿಕಾರ ನೀಡುವುದು ಕೊಡುವುದು ‘ ಎಂಬುದು ಸಬಲೀಕರಣದ ವಿವರಣೆಯಾಗಿದೆ . ಆದ್ದರಿಂದ ಸಬಲೀಕರಣವು ಮಹಿಳೆಯರಿಗೆ ಅಧಿಕಾರ ನೀಡಿ , ಅವರನ್ನು ಸಬಲರನ್ನಾಗಿಸುವುದನ್ನು ಸೂಚಿಸುತ್ತದೆ . ಸಬಲೀಕರಣದ ಅರ್ಥವು ವಿವಿಧ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ವಿವಿಧ ಅರ್ಥಗಳನ್ನು ಸೂಚಿಸುತ್ತದೆ . ಸಬಲೀಕರಣದ ಕಲ್ಪನೆಯನ್ನು ಬಡವರು ಮತ್ತು ಹಿಂದುಳಿದ ವರ್ಗಗಳ ಸ್ಥಿತಿಯಲ್ಲಿ ಏನು ಬದಲಾವಣೆಯಾಗಬೇಕು ಎಂಬುದನ್ನು ಅರಿಯುವ ಸಾಧನವಾಗಿ ಬಳಸಲಾಗುತ್ತದೆ .

9. NABARD ನ್ನು ವಿಸ್ತರಿಸಿ .

NABARD ಎಂದರೆ National Bank for Agriculture and Rural Development ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕ್ ಈ ಕಲ್ಪನೆಯನ್ನು ಭಾರತದಲ್ಲಿ ಸೂಕ್ಷ್ಮ ಹಣಕಾಸು ಯೋಜನೆಯನ್ನು ಪ್ರಾರಂಭಿಸಿತು . ಸ್ವಸಹಾಯ ಸಂಘಗಳು , ಸರ್ಕಾರೇತರ ಸಂಘಟನೆಗಳು ಮತ್ತು ಬ್ಯಾಂಕುಗಳ ನಡುವೆ ಸಂಪರ್ಕ ಕಲ್ಪಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ . ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು ಸ್ವಸಹಾಯ ಸಂಘಗಳನ್ನು ರಚಿಸಿ , ಘೋಷಿಸುತ್ತದೆ ಮತ್ತು ಆಂತರಿಕ ಮಿತವ್ಯಯ ಮತ್ತು ಸಾಲ ನಿರ್ವಹಣೆಗೆ ಸಂಬಂಧಿಸಿದಂತೆ ಒಂದು ಮಟ್ಟ ತಲುಪಿದ ನಂತರವೇ ಅವು ಬ್ಯಾಂಕುಗಳಿಂದ ಸಾಲ ಪಡೆಯಲು ಅರ್ಹವಾಗುತ್ತವೆ .

10. ಸ್ವಸಹಾಯ ಸಂಘಗಳು ಎಂದರೇನು ?

ಸಮಾನ ಸಾಮಾಜಿಕ ಮತ್ತು ಆರ್ಥಿಕ ಹಿನ್ನಲೆ ಹೊಂದಿದ , ನಿಯಮಿತವಾಗಿ , ತುರ್ತುಸ್ಥಿತಿಗಳಿಗಾಗಿ ನಿಗದಿತ ಮೊತ್ತವನ್ನು ಉಳಿಸಲು ಸಹಮತ ಹೊಂದಿದ ಮತ್ತು ಪರಸ್ಪರ ನೆರವಿನಿಂದ ತಮ್ಮ ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳುವ ಸಣ್ಣ ಉದ್ದಿಮೆದಾರರ ಸಮೂಹವೇ ಸ್ವಸಹಾಯ ಸಂಘವಾಗಿದೆ . ತಮ್ಮ ಸಂಪನ್ಮೂಲಗಳನ್ನು ತಾವೇ ಆರ್ಥಿಕವಾಗಿ ಸಬಲರಾಗಲು ಬಳಸಿಕೊಳ್ಳುತ್ತಾರೆ . ಅವರೇ ಉಳಿಸಿದ ಹಣವು ಅವರ ಅಗತ್ಯಗಳನ್ನು ಪೂರೈಸುತ್ತದೆ . ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಬಳಸಲು ಮತ್ತು ಸಕಾಲಕ್ಕೆ ಪಾವತಿಸಲು ಸಮರ್ಪಕವಾಗಿ ಬಳಸಲು ಮತ್ತು ಸಕಾಲಕ್ಕೆ ಪಾವತಿಸಲು ಅವರು ತಮ್ಮ ಸಮೂಹದ ನಿಯಮಗಳಿಗೆ ಬದ್ಧರಾಗಿರುತ್ತಾರೆ . ಸಾಲಕ್ಕೆ ಭದ್ರತೆ ನೀಡ ಬೇಕಾದ ಅಗತ್ಯವೂ ಇರುವುದಿಲ್ಲ .

11. ಸೂಕ್ಷ್ಮ ಹಣಕಾಸು ಎಂದರೇನು ?

ಬಡ ಮತ್ತು ಕಡಿಮೆ ಆದಾಯವುಳ್ಳ ಕುಟುಂಬಗಳಿಗೆ ಉಳಿತಾಯ ಖಾತೆಗಳು , ಜೀವವಿಮಾ ನಿಧಿ ಮತ್ತು ಸಾಲ ಮುಂತಾದ ಆರ್ಥಿಕ ಸೇವೆಗಳನ್ನು ಒದಗಿಸುವುದು ಮತ್ತು ತನ್ಮೂಲಕ ಅವರ ಆದಾಯವನ್ನು ಹೆಚ್ಚಿಸಿ , ಅವರ ಜೀವನ ಮಟ್ಟವನ್ನು ಸುಧಾರಿಸಲು ನೆರವಾಗುವುದೇ ಸೂಕ್ತ ಹಣಕಾಸಿನ ಅರ್ಥವಾಗಿದೆ . ಬ್ಯಾಂಕ್ ಅಥವಾ ಸಂಬಂಧಿತ ಸೇವೆಗಳ ಲಭ್ಯತೆ ಇಲ್ಲದಿರುವ ಸಣ್ಣ ಉದ್ದಿಮೆದಾರರು ಮತ್ತು ವ್ಯಾಪಾರಸ್ಥರಿಗೆ ಸೂಕ್ಷ್ಮ ಹಣಕಾಸು ಅನುಕೂಲವಾದ ಹಣಕಾಸು ಸೇವೆಯಾಗಿದೆ . ಈ ಸೂಕ್ಷ್ಮ ಹಣಕಾಸು ಬಡವರಿಗೆ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಒಂದು ಸಣ್ಣ ಪ್ರಯತ್ನವಾಗಿದೆ .

12. ಸ್ತ್ರೀಶಕ್ತಿ ಎಂದರೇನು ?

2000-2001ರಲ್ಲಿ ಚಾಲನೆಗೊಂಡು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ಸ್ವಾವಲಂಬನೆಗೊಳಿಸುವ ಉದ್ದೇಶದಿಂದ ಪ್ರಾರಂಭಗೊಂಡ ಸಂಘ ಇದು ಕರ್ನಾಟಕದಾದ್ಯಂತ ಚಾಲನೆಗೊಂಡಿತು . ಗ್ರಾಮಗಳ ಮಟ್ಟದಲ್ಲಿ ರಚಿಸಲಾದ ಈ ಸ್ತ್ರೀಶಕ್ತಿ ಗುಂಪು ಸದಸ್ಯರಲ್ಲಿ ಉಳಿತಾಯ ಮಾಡುವ ಅಭ್ಯಾಸವನ್ನು ಪ್ರೇರೇಪಿಸಿ , ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶವನ್ನು ಹೊಂದಿದೆ . ಅಂಗನವಾಡಿ ಕಾರ್ಯಕರ್ತೆಯರು ಮತ್ತು ತಾಲೂಕು ಒಕ್ಕೂಟಗಳ ಮಾರ್ಗದರ್ಶನದ ಮೂಲಕ ಸ್ತ್ರೀಶಕ್ತಿ ಸಮೂಹಗಳನ್ನು ಸ್ಥಾಪಿಸಲಾಗುತ್ತದೆ .

13. ಸ್ತ್ರೀಶಕ್ತಿಯ ಎರಡು ಉದ್ದೇಶಗಳನ್ನು ತಿಳಿಸಿ .

ಸ್ತ್ರೀಶಕ್ತಿಯ ಪ್ರಮುಖ ಉದ್ದೇಶಗಳು

i ) ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯನ್ನು ಬಲಪಡಿಸುವುದು ಮತ್ತು ಸಾಮಾಜಿಕ ಬದಲಾವಣೆಗೆ ಅಗತ್ಯ ವಾತಾವರಣ ನಿರ್ಮಿಸುವುದು .

ii ) ಮಹಿಳೆಯರು ಸ್ವಾವಲಂಬಿಗಳಾಗುವಂತೆ ಮಾಡುವ ಸಾಲ ನೀಡುವ ತತ್ವಗಳಾಧಾರದ ಮೇಲೆ ಸ್ವಸಹಾಯ ಸಂಘಗಳನ್ನು ರಚಿಸುವುದು .

iii ) ಆದಾಯ ತರಬಲ್ಲ ಚಟುವಟಿಕೆಗಳಲ್ಲಿ ತೊಡಗಿಸಿ ಆರ್ಥಿಕ ಭದ್ರತೆ ನೀಡುವ ಮೂಲಕ ಗ್ರಾಮೀಣ ಮಹಿಳೆಯರ ಆದಾಯ ಮಟ್ಟವನ್ನು ಹೆಚ್ಚಿಸುವುದು .

iv ) ಸಂಘದ ಸದಸ್ಯರಿಗೆ ವಿವಿಧ ಇಲಾಖೆಗಳ ಯೋಜನೆಗಳು ಲಭಿಸುವಂತೆ ಮತ್ತು ಸಾಲ ಲಭಿಸುವಂತೆ ಅವಕಾಶ ಗಳನ್ನು ಕಲ್ಪಿಸುವುದು .

14 , ಮಹಿಳಾ ಸಬಲೀಕರಣವನ್ನು ವ್ಯಾಖ್ಯಿಸಿ .

ಸಬಲೀಕರಣ ಎಂಬುದಕ್ಕೆ ‘ ಅಧಿಕಾರ ಕೊಡುವುದು ‘ ಎಂಬ ಅರ್ಥವಿರುವುದರಿಂದ ಮಹಿಳಾ ಸಬಲೀಕರಣ ಎಂದರೆ ಮಹಿಳೆಯರಿಗೆ ಅಧಿಕಾರ ಕೊಡುವುದು ನೀಡುವುದು . ಸಬಲೀಕರಣದಿಂದ ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಲು ಮತ್ತು ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತದೆ . ಮಹಿಳೆಯರಿಗೆ ನಿರಾಕರಿಸಲಾದ ಹಕ್ಕುಗಳು , ಸಮಾನ ಅವಕಾಶಗಳು , ಸೌಲಭ್ಯಗಳು ಮತ್ತು ಸ್ವಾತಂತ್ರ್ಯಗಳನ್ನು ಪಡೆಯಲು ಮಹಿಳಾ ಸಬಲೀಕರಣ ನೆರವಾಗುತ್ತದೆ .

2nd Puc Sociology Chapter 3 Question Answer in Kannada

III . ಐದು ಅಂಕದ ಪ್ರಶ್ನೆಗಳು :

15. 1955 ರ ಅಸ್ಪೃಶ್ಯತಾ ಕಾನೂನಿನ ಮುಖ್ಯಾಂಶಗಳು ಯಾವವು ?

ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಕೈಗೊಂಡ ಕೆಲವು ಶಾಸನಾತ್ಮಕ ಕ್ರಮಗಳಲ್ಲಿ ಮೊದಲನೆಯದಾಗಿ ಅಸ್ಪೃಶ್ಯತೆಯ ( ಅಪರಾಧ ) ಕಾನೂನು 1955 ರಲ್ಲಿ ಜಾರಿಗೆ ಬಂದಿತು . ಈ ಕಾನೂನಿನ ಪ್ರಕಾರ ಕೆಳಕಂಡ ಅಪರಾಧಗಳು ಶಿಕ್ಷಾರ್ಹವಾಗಿವೆ .

i ) ಅಸ್ಪೃಶ್ಯತೆಯ ಕಾರಣದಿಂದ ವ್ಯಕ್ತಿಗಳಿಗೆ ಸಾರ್ವಜನಿಕ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವುದು ಮತ್ತುಅಲ್ಲಿ ಪೂಜೆ ಸಲ್ಲಿಸುವುದಕ್ಕೆ ಅಡ್ಡಿಪಡಿಸುವುದು , ಕೆರೆ , ಬಾವಿ , ಚಿಲುಮೆಗಳಿಂದ ನೀರು ಪಡೆಯದಂತೆ ನಿರ್ಬಂಧಿಸುವುದು.

i ) ಅಂಗಡಿ , ಸಾರ್ವಜನಿಕ ಉಪಾಹಾರಗೃಹಗಳು , ಸಾರ್ವಜನಿಕ ಆಸ್ಪತ್ರೆ , ಶೈಕ್ಷಣಿಕ ಸಂಸ್ಥೆಗಳು , ಸಾರ್ವಜನಿಕ ಮನರಂಜನಾ ಗೃಹಗಳಿಗೆ ಪ್ರವೇಶ ನಿರ್ಬಂಧಿಸುವುದು ಮತ್ತು ರಸ್ತೆಗಳು , ನದಿ , ಬಾವಿ , ಕೆರೆ , ನಲ್ಲಿ , ಸ್ಮಶಾನ , ಧರ್ಮಶಾಲೆಗಳು ಮುಂತಾದವುಗಳ ಬಳಕೆಗೆ ಮತ್ತು ಪ್ರವೇಶಕ್ಕೆ ಅಡ್ಡಿಪಡಿಸುವುದು .

iii ) ಉದ್ಯೋಗ , ವೃತ್ತಿ ಅಥವಾ ವ್ಯಾಪಾರಗಳಿಗೆ ಸಂಬಂಧಿಸಿದಂತೆ ನಿರ್ಬಂಧಗಳನ್ನೊಡ್ಡುವುದು ಅಥವಾ ಯಾವುದೇ ಸ್ಥಳದಲ್ಲಿ ಗೃಹ ನಿರ್ಮಾಣಕ್ಕೆ ತಡೆಯೊಡ್ಡು ವುದು ಅಥವಾ ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವುದು .

iv ) ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟವರಿಗೆ ವಸ್ತುಗಳನ್ನು ಮಾರಲು ಅಥವಾ ಸೇವೆಗಳನ್ನು ಒದಗಿಸಲು ನಿರಾಕರಿಸುವುದು . ಮೇಲ್ಕಂಡ ಅಪರಾದಕ್ಕೆ ಆರು ತಿಂಗಳ ಸೆರೆವಾಸ ಅಥವಾ 500 ರೂಗಳ ದಂಡವನ್ನು ಅಥವಾ ಈ ಎರಡೂ ಶಿಕ್ಷೆಗಳನ್ನು ಕೊಡಬಹುದಾಗಿದೆ . ಇವು ಅಸ್ಪೃಶ್ಯತಾ ಕಾನೂನಿನ ಮುಖ್ಯಾಂಶಗಳು . ಈ ಕಾಯಿದೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ವ್ಯಾಪ್ತಿ ಯನ್ನು ವಿಸ್ತರಿಸಲು ಇದರಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ‘ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯಿದೆ ‘ ಯನ್ನು 1976 ರಲ್ಲಿ ಜಾರಿಗೊಳಿಸಲಾಯಿತು .

16. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಕಲ್ಯಾಣದಲ್ಲಿ ಸ್ವಯಂಸೇವಾ ಸಂಘಟನೆಗಳ ಪಾತ್ರವನ್ನು ವಿವರಿಸಿ.

ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಕಲ್ಯಾಣದಲ್ಲಿ ಸ್ವಯಂಸೇವಾ ಸಂಘಟನೆಗಳ ಪಾತ್ರ ( Role of Non Governmental Organization in this upliftment of scheduled castes and tribes ) oc ಸಂಸ್ಥೆಗಳು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರವನ್ನು ವಹಿಸಿವೆ . ಇಂತಹ ಸ್ವಯಂ ಸೇವಕ ಸಂಘಗಳು ಹಲವಾರಿವೆ . ಅವುಗಳಲ್ಲಿ ಮುಖ್ಯವಾದವುಗಳು ಹರಿಜನ ಸೇವಕ ಸಂಘ , ಭಾರತೀಯ ದಮನಿತ ವರ್ಗಗಳ ಸಂಘ , ಹಿಂದಿ ಜಾಡಮಾಲಿಗಳ ಸಂಘ , ಈಶ್ವರ ಶರಣ ಆಶ್ರಮ , ಅಖಿಲ ಭಾರತ ಹಿಂದುಳಿದ ವರ್ಗಗಳ ಒಕ್ಕೂಟ , ಭಾರತೀಯ ಅದಿಮಜಾತಿ ಸೇವಕ ಸಂಘ , ವನರಾಶಿ ಕಲ್ಯಾಣ ಸಭಾ , ಶ್ರೀ ರಾಮಕೃಷ್ಣ ಮಿಶನ್ ಮುಂತಾದ ಸಂಘಟನೆಗಳು ಅಸ್ಪೃಶ್ಯತೆಯನ್ನು ನಿವಾರಿಸಲು ಸಾಕಷ್ಟು ಶ್ರಮಿಸಿವೆ . ಸುಲಭ ಶೌಚಾಲಯ ಎಂಬ ಒಂದು ಭಾರತೀಯ ಮೂಲದ ಸಮಾಜ ಸೇವಾ ಸಂಘಟನೆಯನ್ನು ಸ್ಥಾಪಿಸಿದ್ದಾರೆ . ಇದು ಮಾನವ ಹಕ್ಕುಗಳು , ನೈರ್ಮಲ್ಯ , ಅಸಾಂಪ್ರದಾಯಿಕ ಇಂಧನ , ತ್ಯಾಜ್ಯ ನಿರ್ವಹಣೆ ಮತ್ತು ಶಿಕ್ಷಣದ ಮೂಲಕ ಸಮಾಜ ಸುಧಾರಣೆಯನ್ನು ಪ್ರವರ್ತಿಸುವ ಉದ್ದೇಶವನ್ನು ಹೊಂದಿದೆ .

ಈ ಸಂಘಟನೆಯಲ್ಲಿ 50,000 ಸ್ವಯಂ ಸೇವಕರಿದ್ದಾರೆ . ಸುಲಭ್ ಇಂಟರ್‌ನ್ಯಾಷನಲ್ ಒಂದು ಲಾಭೋದ್ದೇಶವಿಲ್ಲದ ಬೃಹತ್ ಸಂಘಟನೆಯಾಗಿದೆ . ಡಾ . ಬಿಂದೇಶ್ವರ್ ಪಾಠಕ್‌ರವರು 1970 ರಲ್ಲಿ ಸುಲಭ್ ಸಂಸ್ಥೆಯನ್ನು ಸ್ಥಾಪಿಸಿದರು . ನಿರ್ವಹಣೆಯ ಅಗತ್ಯವಿಲ್ಲದ ಎರಡು ಶೌಚಾಲಯ ಗುಂಡಿಗಳನ್ನೊಳಗೊಂಡ ಫ್ಲಶ್ ಮಾದರಿಯ ಸುಲಭ ಶೌಚಾಲಯ ನಿರ್ಮಾಣ , ಸುರಕ್ಷಿತವಾದ ಹಾಗೂ ನೈರ್ಮಲ್ಯಯುತವಾದ ಮಾನವ ತ್ಯಾಜ್ಯದ ನಿರ್ವಹಣೆಯ ತಂತ್ರಜ್ಞಾನ , ಹಣ ನೀಡಿ ಬಳಸಬಹುದಾದ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ , ಶೌಚ , ಸ್ನಾನ ಮತ್ತು ಬಟ್ಟೆ ತೊಳೆಯಲು ಅವಕಾಶವಿರುವ ಶೌಚಾಲಯಗಳ ನಿರ್ಮಾಣ ಮುಂತಾದವು ಈ ಸಂಸ್ಥೆಯ ವಿನೂತನ ಯೋಜನೆಗಳಾಗಿದ್ದು , ಈ ಸೌಲಭ್ಯಗಳನ್ನು ದಿನನಿತ್ಯ ಸುಮಾರು ಹತ್ತು ಮಿಲಿಯನ್ ಜನರು ಬಳಸುತ್ತಿದ್ದಾರೆ . ಶೌಚಾಲಯಗಳಲ್ಲಿ ಸಂಗ್ರಹವಾಗುವ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಮತ್ತು ಜೈವಿಕ ಗೊಬ್ಬರ ತಯಾರಿಸಲಾಗುತ್ತಿದೆ . ತ್ಯಾಜ್ಯ ನೀರಿನ ಸಂಸ್ಕರಣ ಘಟಕಗಳನ್ನು ಕೂಡ ನಿರ್ಮಿಸಲಾಗಿದೆ .

ಈ ಸಂಸ್ಥೆಯ ಇತರ ಜನಪರ ಕಾರ್ಯಗಳೆಂದರೆ

i ) ದೆಹಲಿಯಲ್ಲಿ ನಿಮ್ಮ ವರ್ಗಗಳಿಗಾಗಿ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪನೆ .

ii ) ಜಾಡಮಾಲಿಗಳು ಮತ್ತು ಇತರ ಬಡ ಕುಟುಂಬಗಳ ಯುವಕ ಯುವತಿಯರಿಗೆ ವೃತ್ತಿ ತರಬೇತಿ ನೀಡಲು ತರಬೇತಿ ಕೇಂದ್ರಗಳ ಜಾಲದ ಸ್ಥಾಪನೆ ಇತ್ಯಾದಿ . ಸುಲಭ್ ಪ್ರಾರಂಭಿಸಿದ ನೈರ್ಮಲ್ಯ ವ್ಯವಸ್ಥೆಯು | ವಿಶ್ವದಲ್ಲೇ ಅತ್ಯುತ್ತಮವಾದ ‘ ನಗರದ ಉತ್ತಮ ಆಚರಣೆ ‘ ಮೆಚ್ಚುಗೆಯನ್ನು ( Urban Best Practice )
‘ ವಿಶ್ವಸಂಸ್ಥೆಯ ಮಾನವ ನೆಲೆಗಳ ಕೇಂದ್ರವು ‘ ( United Nations Centre for Human Settlement ) 1996 ಜೂನ್‌ನಲ್ಲಿ ಇಸ್ತಾನ್‌ಬೂಲ್‌ನಲ್ಲಿ ನಡೆದ ಎರಡನೇ ನಿವಾಸ ( II Habitate Conferance ) ಸಮ್ಮೇಳನದಲ್ಲಿ ವ್ಯಕ್ತ ಪಡಿಸಿದೆ .

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಸುಲಭ ಕಾರ್ಯಗಳನ್ನು ಪ್ರಶಂಸಿಸಿ , ಅದಕ್ಕೆ ವಿಶೇಷ ಸ್ಥಾನಮಾನ ನೀಡಿದೆ . ಸುಲಭ ಹಮ್ಮಿಕೊಂಡ ಈ ಯೋಜನೆಯಿಂದ ಸುಮಾರು 35,000 ಜನರಿಗೆ ನೇರವಾಗಿ ಉದ್ಯೋಗ ದೊರೆತಿದೆ . ಒಂದು ಕೋಟಿಯಷ್ಟು ಮಾನವ ದಿನಗಳ ನಿರ್ಮಾಣವಾಗಿದೆ ಮತ್ತು 240 ಪಟ್ಟಣಗಳು ಭಂಗಿ ಕಾರ್ಯಮುಕ್ತಾಗಿವೆ ಎನ್ನಲಾಗಿದೆ . ಸುಲಭ್ ಸಂಸ್ಥೆಯು ಬ್ರಿಟಿಷ್ ಕೌನ್ಸಿಲ್ , ಜರ್ಮನಿಯ ಬೊರ್ಡಾ ಸಂಸ್ಥೆ , ಯುರೋಪಿಯನ್ ಒಕ್ಕೂಟ ಮುಂತಾದವುಗಳೂ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಭಾಗತ್ವವನ್ನು ಹೊಂದಿದೆ .

ಬಡವರಿಗಾಗಿ ನೈರ್ಮಲ್ಯವನ್ನು ರೂಪಿಸಿದ್ದ ಕಾರಣಕ್ಕಾಗಿ ಸುಲಭ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ . ಸುಲಭ್ ಸಂಸ್ಥೆಯು 2007 ರ ಅಕ್ಟೋಬರ್‌ನಲ್ಲಿ ಮಾನವ ತ್ಯಾಜ್ಯವನ್ನು ಜೈವಿಕ ಅನಿಲ ಮತ್ತು ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸುವ ಅಗ್ಗದ ಶೌಚಾಲಯದ ವಿನ್ಯಾಸವನ್ನು ರೂಪಿಸಿದೆ . ಬಿಂದೇಶ್ವರ ಪಾಠಕ್ ಅವರಿಗೆ 2009 ರ ಸ್ಟಾಕ್ ಹೋಂ ವಾಟರ್ ಪ್ರಶಸ್ತಿಯನ್ನು ನೀಡಲಾಗಿದೆ . ದೆಹಲಿಯ ಸುಲಭ್ ಅಂತರ್‌ರಾಷ್ಟ್ರೀಯ ಕಚೇರಿಯಲ್ಲಿ ಶೌಚಾಲಯ ಮತ್ತು ನೈರ್ಮಲ್ಯದ ಇತಿಹಾಸಕ್ಕೆ ಸಮರ್ಪಿತವಾದ ವಸ್ತು ಸಂಗ್ರಹಾಲಯವನ್ನು ತೆರೆಯಲಾಗಿದೆ . ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಕಲ್ಯಾಣದಲ್ಲಿ ಅನೇಕ ಸ್ವಯಂ ಸೇವಾ ಸಂಘಟನೆಗಳ ಪಾತ್ರವಿದ್ದರೂ ‘ ಸುಲಭ ಶೌಚಾಲಯ ‘ ದ ಪಾತ್ರ ಬಹಳ ಹಿರಿದಾಗಿದೆ .

17. ಮಹಿಳಾ ಸಬಲೀಕರಣದ ಕಾರ್ಯತಂತ್ರಗಳನ್ನು ಪಟ್ಟಿ ಮಾಡಿ .

ಮಹಿಳೆಯರನ್ನು ಸಬಲಗೊಳಿಸಲು ಕೊಡುವ ಅಧಿಕಾರವೇ ಮಹಿಳಾ ಸಬಲೀಕರಣ ಇದರಿಂದ ಮಹಿಳೆಯರು ತಮ್ಮ ಹಕ್ಕುಗಳು , ಸಮಾನ ಅವಕಾಶಗಳು , ಸೌಲಭ್ಯಗಳು ಮತ್ತು ಸ್ವಾತಂತ್ರ್ಯಗಳನ್ನು ಪಡೆಯಬಹುದು .ಇವುಗಳನ್ನು ಈಡೇರಿಸಲು ಮಹಿಳಾ ಸಬಲೀಕರಣದ ಕಾರ್ಯತಂತ್ರಗಳನ್ನು ಕಾನೂನಾತ್ಮಕ , ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಡಿಯಲ್ಲಿ ವರ್ಗೀಕರಿಸಲಾಗಿದೆ .

1. ಕಾನೂನಾತ್ಮಕ ತಂತ್ರಗಳು ( Legal Strategies ) ಭಾರತವು ಸ್ವಾತಂತ್ರ್ಯ ಪಡೆದ ನಂತರ ಮಹಿಳೆಯರಿಗೆ ಪುರುಷರಿಗೆ ಸಮಾನ ಸ್ಥಾನ ನೀಡುವ ಉದ್ದೇಶದಿಂದ ಹಲವಾರು ಶಾಸನಗಳನ್ನು ರೂಪಿಸಲಾಯಿತು . ಹಾಗೆಯೇ ಕೆಲವು ಸಲಹೆ ಸೂಚನೆಗಳನ್ನೂ ಸಹ ನೀಡಲಾಯಿತು . ಅವುಗಳು

ಎ ) ನ್ಯಾಯಾಂಗ ವ್ಯವಸ್ಥೆಯು ಸ್ತ್ರೀ ಶೋಷಣೆಯನ್ನು ಕೇವಲ ಕಾನೂನಿನ ದೃಷ್ಟಿಯಿಂದ ನೋಡದೆ ಸಮಾಜ ಶಾಸ್ತ್ರೀಯ ಹಿನ್ನೆಲೆಯಿಂದ ನೋಡಬೇಕು .

ಬಿ ) ಮಹಿಳೆಯರಿಗೆ ಕಾನೂನಿನ ನೆರವು ಅತ್ಯಗತ್ಯವಾಗಿದೆ .

ಸಿ ) ಮಹಿಳಾ ಸಂಘಟನೆಗಳು ಅಥವಾ ಸ್ವಯಂ ಸೇವಾ ಸಂಘಟನೆಗಳು ರಕ್ಷಣೆ ಬಯಸುವ ಸ್ತ್ರೀಯರಿಗೆ ಕಾನೂನಾತ್ಮಕ ಕ್ರಮಗಳ ಮೂಲಕ ನೆರವು ನೀಡಬೇಕು .

2. ಸಾಮಾಜಿಕ ತಂತ್ರಗಳು ( Social Strategies )

ಎ ) ಮಹಿಳಾ ಕಲ್ಯಾಣ ಕಾರ್ಯಕ್ರಮಗಳ ಜಾರಿ ,

ಬಿ ) ಸಮೂಹ ಮಾಧ್ಯಮಗಳ ಮೂಲಕ ಮಹಿಳೆಯರಲ್ಲಿ ಕಾನೂನು ಜಾಗೃತಿ .

ಸಿ ) ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರೆಹೊರೆಯವರ ನೆರವು ಪಡೆದು ಸಹಾಯ ನೀಡಬಲ್ಲ . ಸಂಸ್ಥೆಗಳಿಗೆ ಕರೆದೊಯ್ಯುವುದು .

ಡಿ ) ಸಾರ್ವಜನಿಕ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಡುವ ಬಲ ಸೃಷ್ಟಿಸುವುದು .

ಇ ) ಬದಲಾದ ಸನ್ನಿವೇಶದಲ್ಲಿ ತಮ್ಮ ಪಾತ್ರಗಳೂ ಬದಲಾಗುತ್ತಿರುವ ಕುರಿತು ಪುರುಷರಲ್ಲಿ ಅರಿವು ಮೂಡಿಸುವುದು ಹಾಗೂ ಕುಟುಂಬ ಜೀವನದಲ್ಲಿ ಅವರ ಕೊಡುಗೆಯೂ ಇದೆ ಎಂಬುದನ್ನು ಮನದಟ್ಟು ಮಾಡಿಸುವುದು .

3. ಆರ್ಥಿಕ ತಂತ್ರಗಳು ( Economic Strategies ) ಮಹಿಳಾ ಸಬಲೀಕರಣದ ಆರ್ಥಿಕ ತಂತ್ರಗಳು ಎ ) ಆರ್ಥಿಕವಾಗಿ ಸ್ವತಂತ್ರರಾಗಲು ಮತ್ತು ಉದ್ಯೋಗಾ ವಕಾಶಗಳನ್ನು ಪಡೆಯಲು ಸಮರ್ಥರಾಗುವಂತೆ ಶೈಕ್ಷಣಿಕ ಮತ್ತು ವೃತ್ತಿ ತರಬೇತಿ ನೀಡುವುದು .

ಬಿ ) ದೈಹಿಕ ಶ್ರಮ ಕಡಿಮೆ ಮಾಡುವ ತಂತ್ರಜ್ಞಾನದ ಬಳಕೆ ಯಿಂದ ದಿನನಿತ್ಯದ ಕೆಲಸದ ಶ್ರಮ ಕಡಿಮೆ ಮಾಡುವುದು .

ಸಿ) ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ನೀಡುವುದು

ಡಿ ) ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ನೀಡುವುದು .

ಇ ) ವಿವಿಧ ಹಂತಗಳ ಪ್ರಮುಖ ಹುದ್ದೆಗಳಿಗೆ ಮಹಿಳೆಯರಿಗೆ ಅವಕಾಶ ನೀಡಲು ಯೋಜನೆ .

ಭಾರತ ಸರ್ಕಾರವು 2001 ನೇ ಇಸವಿಯನ್ನು ‘ ಮಹಿಳಾ ಸಬಲೀಕರಣದ ವರ್ಷ ‘ ಎಂದು ಘೋಷಿಸಿತು . ಇದಕ್ಕೆ ಮೂರು ಉದ್ದೇಶಗಳಿದ್ದವು ; ಅವುಗಳು

ಎ ) ಮಹಿಳೆಯರ ಸಮಸ್ಯೆಗಳು ಮತ್ತು ಅವರಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತಂತೆ ರಾಷ್ಟ್ರಮಟ್ಟದ ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಅವರ ಪಾತ್ರ ಕುರಿತಂತೆ ಅರಿವು ಮೂಡಿಸುವುದು .

ಬಿ ) ಸಂಪನ್ಮೂಲಗಳ ಪಡೆಯುವಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅವರ ಸ್ಥಿತಿಯ ಸುಧಾರಣೆಗೆ ಅವಕಾಶ .

ಸಿ ) ದೇಶದ ಸಾಮಾಜಿಕ , ರಾಜಕೀಯ ಮತ್ತು ಆರ್ಥಿಕ ಜೀವನದ ಪ್ರಮುಖವಾಹಿನಿಯಲ್ಲಿ ಮಹಿಳೆಯರು ತಮ್ಮ ನ್ಯಾಯಯುತ ಸ್ಥಾನವನ್ನು ಪಡೆಯುವಂತೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸಿ ಅವರಿಗೆ ಸ್ವಾಯತ್ತತೆಯ ವಾತಾವರಣವನ್ನು ಕಲ್ಪಿಸುವುದು .

4. ರಾಷ್ಟ್ರೀಯ ಮಹಿಳಾ ಆಯೋಗ ( The National Commission for Women ) ಮಹಿಳೆಯರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸಲಾಗಿದೆ . ಮಹಿಳೆಯರ ವಿರುದ್ಧದ ಹಿಂಸೆಯನ್ನು ತಡೆಗಟ್ಟಲು ಮತ್ತು ಮಹಿಳೆಯರಿಗೆ ಸಾಮಾಜಿಕ , ಕಾನೂನಾತ್ಮಕ ಮತ್ತು ಆರ್ಥಿಕ ಸಮಾನತೆ ಕಲ್ಪಿಸಲು ಭಾರತ ಸರ್ಕಾರವು 1992 ರಲ್ಲಿ ಆಯೋಗವನ್ನು ಸ್ಥಾಪಿಸಿದರು . ಈ ಆಯೋಗವು ಅಧ್ಯಕ್ಷರು , ಐವರು ಸದಸ್ಯರು ಮತ್ತು ಕೇಂದ್ರ ಸರ್ಕಾರದಿಂದ ನೇಮಿತವಾದ ಕಾರ್ಯದರ್ಶಿಯನ್ನು ಒಳಗೊಂಡಿರುತ್ತದೆ . ಮಹಿಳೆಯರಿಗೆ ದೌರ್ಜನ್ಯ , ಹಿತಾಸಕ್ತಿಗಳ ರಕ್ಷಣೆ ಇತ್ಯಾದಿಗಳಲ್ಲಿ ತ್ವರಿತಗತಿಯ ನ್ಯಾಯ ಒದಗಿಸುವುದುಆಯೋಗದ ಆದ್ಯತೆಯಾಗಿದೆ . ಇಷ್ಟೇ ಅಲ್ಲದೆ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ . ಅವುಗಳಲ್ಲಿ ಪ್ರಮುಖವಾದವುಗಳು ರಾಷ್ಟ್ರೀಯ ತರಬೇತಿ ಸಂಸ್ಥೆಗಳು , ದುಡಿಯುವ ಮಹಿಳೆಯರಿಗಾಗಿ ವಸತಿಗೃಹಗಳು , ಉತ್ಪಾದನಾ ಕೇಂದ್ರಗಳು , ರಾಷ್ಟ್ರೀಯ ಮಹಿಳಾಕೋಶ , ಮಹಿಳಾ ಯೋಜನೆ ಇತ್ಯಾದಿ .

18. ಸೂಕ್ಷ್ಮ ಹಣಕಾಸಿನ ಪ್ರಮುಖ ಲಕ್ಷಣಗಳನ್ನು ವಿವರಿಸಿ .

ಸೂಕ್ಷ್ಮ ಹಣಕಾಸಿನ ಪ್ರಮುಖ ಲಕ್ಷಣಗಳು ( Characterestics of Microfinance )

1. ಭದ್ರತೆ ಇಲ್ಲದ ಸಾಲ

2. ಬಡತನದ ರೇಖೆಯ ಕೆಳಗಿರುವವರಿಗೆ ಸಾಲ ನೀಡಿಕೆ

3. ಸ್ವಸಹಾಯ ಸಂಘಗಳ ಸದಸ್ಯರೂ ಕೂಡ ಸೂಕ್ಷ್ಮ ಹಣಕಾಸಿನ ಲಾಭ ಪಡೆಯಬಹುದು .

4 . ಸೂಕ್ಷ್ಮ ಹಣಕಾಸಿನಲ್ಲಿ ಪಡೆಯುವ ಗರಿಷ್ಠ ಸಾಲದ ಮೊತ್ತವು ಕಡಿಮೆ ಪ್ರಮಾಣದ್ದಾಗಿರುತ್ತದೆ .

5. ಬಡವರಿಗೆ ಸೂಕ್ಷ್ಮ ಹಣಕಾಸಿನಲ್ಲಿ ನೀಡುವ ಸಾಲವನ್ನು ಸ್ವಸಹಾಯ ಸಂಘವು ನಿರ್ಧರಿಸುತ್ತವೆ .

ಸೂಕ್ಷ್ಮ ಹಣಕಾಸು ಬ್ಯಾಂಕು ಅಥವಾ ಸಂಬಂಧಿತ ಸೇವೆಗಳ ಲಭ್ಯತೆ ಇಲ್ಲದಿರುವ ಸಣ್ಣ ಉದ್ದಿಮೆದಾರರು ಮತ್ತು ವ್ಯಾಪಾರಸ್ಥರಿಗೆ ಸೂಕ್ಷ್ಮ ಹಣಕಾಸು ಅನುಕೂಲ ಕರವಾದ ಹಣಕಾಸು ಸೇವೆಯಾಗಿದೆ . ಅಂಥವರಿಗೆ ಲಭ್ಯವಿರುವ ಹಣಕಾಸು ಸೇವೆಗಳ ಎರಡು ಪ್ರಮುಖ ವಿಧಾನಗಳೆಂದರೆ

i ) ಖಾಸಗಿ ಉದ್ದಿಮೆದಾರರು ಮತ್ತು ವ್ಯಾಪಾರಸ್ಥರಿಗೆ ಸಂಬಂಧ ಆಧಾರಿತ ಬ್ಯಾಂಕಿಂಗ್ ವ್ಯವಸ್ಥೆ ಮತ್ತು

ii ) ಹಲವಾರು ಉದ್ದಿಮೆದಾರರು ಸಾಮೂಹಿಕವಾಗಿ ಸಾಲ ಪಡೆಯುವ ಅಥವಾ ಇತರ ಆರ್ಥಿಕ ಸೇವೆಗಳನ್ನು ಪಡೆಯುವ ಗುಂಪು ಆಧಾರಿತ ಮಾದರಿ . ಕೆಲವರ ಪ್ರಕಾರ , ಕಿರುಸಾಲವು ಒಂದು ಚಳುವಳಿಯಾಗಿದ್ದು , ಬಡವರಿಗೆ ಕೇವಲ ಸಾಲ ನೀಡುವಿಕೆ ಮಾತ್ರವಲ್ಲದೆ , ಉಳಿತಾಯ , ವಿಮೆ , ಹಣಕಾಸು ವರ್ಗಾವಣೆ ಮುಂತಾದ ಉನ್ನತ ಮಟ್ಟದ ಆರ್ಥಿಕ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ . ಕಿರುಸಾಲದ ಪ್ರವರ್ತಕರು , ಬಡವರು ಬಡತನದಿಂದ ಪಾರಾಗಲು ಅವರಿಗೆ ಕಿರುಸಾಲವು ಪರಿಹಾರ ಮಾರ್ಗವಾಗಿದೆ ಎಂದು ನಂಬಿದ್ದಾರೆ .ಇನ್ನು ಕೆಲವರ ಪ್ರಕಾರ ಕಿರುಸಾಲವು ಸಣ್ಣ ಉದ್ದಿಮೆದಾರರು ಮತ್ತು ಸಣ್ಣ ವ್ಯಾಪಾರಸ್ಥರ ಮೂಲಕ ಆರ್ಥಿಕ ಅಭಿವೃದ್ಧಿ , ಉದ್ಯೋಗ ಮತ್ತು ಬೆಳವಣಿಗೆಯನ್ನು ಸಾಧಿಸುವ ಮಾರ್ಗವಾಗಿದೆ .

2nd Puc Sociology Chapter 3 Question Answer in Kannada

IV . ಹತ್ತು ಅಂಕದ ಪ್ರಶ್ನೆಗಳು :

19. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಕಲ್ಯಾಣಕ್ಕಾಗಿ ಕೈಗೊಳ್ಳಲಾದ ಹಕ್ಕು ಸಂವಿಧಾನಿಕ ಅವಕಾಶಗಳನ್ನು ತಿಳಿಸಿ .

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಕಲ್ಯಾಣಕ್ಕಾಗಿ ಕೈಗೊಂಡ ಸಾಂವಿಧಾನಿಕ ಕ್ರಮಗಳು Constitutional Safeguards for the upliftment of scheduled castes and scheduled tribes ) ಭಾರತದ ಸಂವಿಧಾನವು ಪರಿಶಿಷ್ಟ ಜಾತಿಗಳು , ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ದೌರ್ಬಲ್ಯಗಳನ್ನು ನಿವಾರಿಸಿ , ಅದರ ಶೈಕ್ಷಣಿಕ , ರಾಜಕೀಯ ಮತ್ತು ಸಾಮಾಜಿಕ ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕಾನೂನಾತ್ಮಕ ಬೆಂಬಲ ನೀಡುವ ಉದ್ದೇಶದಿಂದ , ಅವರ ಸಾಮಾನ್ಯ ಹಕ್ಕುಗಳನ್ನು ಗೌರವಿಸುವ ಮತ್ತು ಅವರಿಗೆ ನಿರ್ದಿಷ್ಟ ಹಕ್ಕುಗಳನ್ನು ನೀಡುವ ಉದ್ದೇಶದಿಂದ ಹಲವು ಸಂರಕ್ಷಣಾತ್ಮಕ ಅಂಶಗಳನ್ನು ಸೇರ್ಪಡೆ ಮಾಡಿದೆ . ಕೆಳಗಿನಗ ಸಂವಿಧಾನಾತ್ಮಕ ಸಂರಕ್ಷಣಾ ಕ್ರಮಗಳು ಹೀಗಿವೆ .

1. 15 ನೇ ಕಲಮು : ಭಾರತದ ಯಾವುದೇ ನಾಗರಿಕನನ್ನೂ ಧರ್ಮ , ಜನಾಂಗ , ಜಾತಿ , ಲಿಂಗ , ಜನ್ಮಸ್ಥಳ ಮುಂತಾದ ಆಧಾರಗಳ ಮೇಲೆ ತಾರತಮ್ಯವನ್ನು ಮಾಡುವಂತಿಲ್ಲ . ಸರ್ಕಾರದ ಸಂಪೂರ್ಣವಾದ ಅಥವಾ ಭಾಗಶಃ ಆರ್ಥಿಕ ನೆರವಿನಿಂದ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಬಾವಿಗಳು , ಕೆರೆಗಳು , ರಸ್ತೆಗಳು , ಮನರಂಜನಾ ಗೃಹಗಳು ಮುಂತಾದವುಗಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ .

2. 16 ನೇ ಕಲಮು : ಸರ್ಕಾರದ ಉದ್ಯೋಗ ನೇಮಕಾತಿ ಗಳಲ್ಲಿ ಎಲ್ಲಾ ನಾಗರಿಕರಿಗೂ ಸಮಾನವಾದ ಅವಕಾಶ .

3. 17 ನೇ ಕಲಮು : ಅಸ್ಪೃಶ್ಯತೆಯ ನಿಷೇಧ ಮತ್ತು ಯಾವುದೇ ರೂಪದಲ್ಲಿ ಅಸ್ಪೃಶ್ಯತೆಯ ಆಚರಣೆಯ ನಿಷೇಧ ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ .

4. 23 ನೇ ಕಲಮು : ಮಾನವ ಸಾಗಾಣಿಕೆ ಮತ್ತು ಬಲವಂತದ ದುಡಿಮೆ ಕಾನೂನುಬಾಹಿರ

5. 25 ಬಿ ಕಲಮು : ಸಾರ್ವಜನಿಕವಾದ ಯಾವುದೇ ಹಿಂದೂ ಧಾರ್ಮಿಕ ಸಂಘಟನೆಗಳು ಎಲ್ಲಾ ಹಿಂದೂಗಳಿಗೂ ಮುಕ್ತ .

6. 29 ನೇ ಕಲಮು : ಸಾಂಸ್ಕೃತಿಕ ಮತ್ತು ಭಾಷಾ ಅಲ್ಪ ಸಂಖ್ಯಾತ ಸಮೂಹಗಳಿಗೆ ಅವರ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಹಕ್ಕು . ಈ ಕಲಮು ಪರಿಶಿಷ್ಟ ಬುಡಕಟ್ಟು ಸಮೂಹಗಳಿಗೆ ಅವರ ಭಾಷೆಗಳು , ಆಡು ನುಡಿಗಳು ಮತ್ತು ಸಂಸ್ಕೃತಿಗಳನ್ನು ಸಂರಕ್ಷಿಸುವ ಅವಕಾಶ ಒದಗಿಸಿವೆ . ರಾಜ್ಯವು ಅವರ ಮೇಲೆ ಅನ್ಯ ಸಂಸ್ಕೃತಿ ಅಥವಾ ಭಾಷೆಯನ್ನು ಹೇರುವಂತಿಲ್ಲ .

7. 46 ನೇ ಕಲಮು : ದುರ್ಬಲ ವರ್ಗಗಳ ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಪ್ರವರ್ತಿಸಲು ಸರ್ಕಾರವು ವಿಶೇಷ ಕಾಳಜಿ ವಹಿಸಬೇಕು . ಎಲ್ಲಾ ಪ್ರಕಾರದ ಸಾಮಾಜಿಕ ಅನ್ಯಾಯ ಮತ್ತು ಶೋಷಣೆಗಳಿಂದ ಅವರನ್ನು ರಕ್ಷಿಸಬೇಕು .

8. 325 ನೇ ಕಲಮು : ಎಲ್ಲಾ ಭಾರತೀಯರಿಗೂ ಮತದಾನದ ಹಕ್ಕು .

9. 341 ನೇ ಕಲಮು : ನಿರ್ದಿಷ್ಟ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶಿಷ್ಟರೆಂಬ ಪಟ್ಟಿಯಲ್ಲಿ ಸೇರಬಹುದಾದ ಜಾತಿಗಳು , ಜನಾಂಗಗಳು ಅಥವಾ ಬುಡ ಕಟ್ಟುಗಳನ್ನು ಗುರ್ತಿಸಲು ರಾಷ್ಟ್ರಪತಿಗಳಿಗೆ ವಿಶೇಷ ಅಧಿಕಾರವಿದೆ .

10. 164 ನೇ ಕಲಮು : ಪರಿಶಿಷ್ಟ ಜಾತಿಗಳು , ಬುಡಕಟ್ಟುಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯಕ್ಕೆ ಅವಕಾಶ . ಇಷ್ಟಲ್ಲದೆ ಇನ್ನೂ ಹಲವಾರು ಅವಕಾಶಗಳನ್ನು ನಮ್ಮ ಸರ್ಕಾರ ಮಾಡಿಕೊಟ್ಟಿದೆ .

20. ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಕೈಗೊಳ್ಳಲಾದ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ವಿವರಿಸಿ .

ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಕೈಗೊಂಡ ಅಭಿವೃದ್ಧಿ ಕ್ರಮಗಳು

1. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ಆಯೋಗದ ನೇಮಕ : ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಆಯೋಗವನ್ನು ರಚಿಸಿದೆ . ಈ ಆಯೋಗವು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಮತ್ತು ನೀತಿಗಳನ್ನು ಕುರಿತಂತೆ ಸರ್ಕಾರಕ್ಕೆ ಸಲಹೆ ನೀಡುತ್ತದೆ .

2. ಶೈಕ್ಷಣಿಕ ಅವಕಾಶಗಳು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಶೈಕ್ಷಣಿಕ ಅವಕಾಶಗಳಿಗೆ ವಿಶೇಷ ಮಹತ್ವ ನೀಡಿದ್ದು , ಅದಕ್ಕಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ . ಅವರಿಗಾಗಿ ಉಚಿತ ಶಿಕ್ಷಣ , ಪುಸ್ತಕಗಳು , ಲೇಖನ ಸಾಮಾಗ್ರಿಗಳು , ಸಮವಸ್ತ್ರ ಮುಂತಾದವುಗಳನ್ನು ಒದಗಿಸಲಾಗುತ್ತದೆಯಲ್ಲದೆ , ವಿದ್ಯಾರ್ಥಿ ವೇತನ , ಶೈಕ್ಷಣಿಕ ಸಾಲ ಸೌಲಭ್ಯ , ಮಧ್ಯಾಹ್ನದ ಉಪಾಹಾರ , ಉಚಿತ ಆಹಾರ ಮತ್ತು ವಸತಿ , ಸರ್ಕಾರಿ ಮತ್ತು ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ ಮುಂತಾದ ಕ್ರಮಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ .

3. ಆರ್ಥಿಕ ಅವಕಾಶಗಳ ವಿಸ್ತರಣೆ ಆರ್ಥಿಕ ಅವಕಾಶಗಳ ವಿಸ್ತರಣೆಯಡಿಯಲ್ಲಿ ಭೂರಹಿತ ಪರಿಶಿಷ್ಟ ಜಾತಿಗಳಿಗೆ ಉಚಿತ ಭೂಮಿ ನೀಡಲಾಗುತ್ತದೆ . ಭೂ ಸುಧಾರಣಾ ಕ್ರಮಗಳ ಮೂಲಕ ಭೂ ಮಾಲಿಕತ್ವದ ಅವಕಾಶ ನೀಡಲಾಗಿದೆ . ಪರಿಶಿಷ್ಟ ಜಾತಿಯ ಬಡರೈತರಿಗೆ ಉಚಿತವಾಗಿ ಬಿತ್ತನೆ ಬೀಜ , ಕೃಷಿ ಉಪಕರಣಗಳು , ಗೊಬ್ಬರ , ಕೀಟ ನಾಶಕಗಳು , ಬಡ್ಡಿರಹಿತ ಸಾಲಗಳು , ಉಳುಮೆ ಕಾರ್ಯಕ್ಕಾಗಿ ಎತ್ತುಗಳು , ಹೈನುಗಾರಿಕೆ , ಕೋಳಿ ಸಾಕಾಣಿಕೆ , ಹಂದಿ ಸಾಕಾಣಿಕೆ , ಪಶುಸಂಗೋಪನೆ , ಕುಶಲ ಕಲೆಗಳು , ನೇಕಾರಿಕೆ ಮುಂತಾದವುಗಳಿಗೆ ಸಹಾಯಧನ ನೀಡಲಾಗುತ್ತಿದೆ .

4. ಉದ್ಯೋಗಾವಕಾಶಗಳ ವಿಸ್ತರಣೆ ಮತ್ತು ಮೀಸಲಾತಿ ಇವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಸಂವಿಧಾನವು ಮೀಸಲಾತಿಗೆ ಅವಕಾಶವನ್ನು ಕಲ್ಪಿಸಿದೆ . ಪರಿಶಿಷ್ಟ ಜಾತಿಗಳಿಗೆ ಶೇ .15 ರಷ್ಟು ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಶೇ . 7.5 ರಷ್ಟು ಮೀಸಲಾತಿ ನೀಡಲಾಗಿದೆ . ಇವರಿಗೆ ಉನ್ನತ ಸ್ಥಾನಗಳಿಗೆ ಬಡ್ತಿಯಲ್ಲೂ ಮೀಸಲಾತಿಯ ಅವಕಾಶ ಕಲ್ಪಿಸಲಾಗಿದೆ . ವಯೋಮಿತಿಯ ಸಡಿಲಿಕೆ , ಅರ್ಹತಾ ಮಾನದಂಡಗಳಲ್ಲಿ ವಿನಾಯಿತಿ , ಅನುಭವದ ಮಿತಿಯ ಸಡಿಲಿಕೆ ಮುಂತಾದ ರಿಯಾಯಿತಿಗಳನ್ನು ನೀಡಲಾಗಿದೆ .

5. ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿಗಳ ಕಲ್ಯಾಣ : ಪಂಚವಾರ್ಷಿಕ ಯೋಜನೆಗಳಲ್ಲಿ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ . ಆರನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಮೂರು ಸಮಗ್ರ ಯೋಜನೆಗಳನ್ನು ಪ್ರಾಯೋಜಿಸಿತು .

i ) ವಿಶೇಷ ಘಟಕ ಯೋಜನೆ SCP

ii )ವಿಶೇಷ ಕೇಂದ್ರ ನೆರವು SCA

iii ) ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮ SCDC

i) ವಿಶೇಷ ಘಟಕ ಯೋಜನೆ Special Component Plan SCP ಪರಿಶಿಷ್ಟ ಜಾತಿಗಳಿಗೆ ಸೇರಿದ ಕುಟುಂಬಗಳ ಆದಾಯವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಅಗತ್ಯ ನೆರವು ನೀಡುವುದು ಇದರ ಉದ್ದೇಶ . ಅವಶ್ಯಕವಾದ ಅಭಿವೃದ್ಧಿ ಯೋಜನೆಗಳನ್ನು ಗುರ್ತಿಸುವುದು , ಅಗತ್ಯ ಧನಸಹಾಯದ ಕ್ರೋಢಿಕರಣ ಮಾಡುವುದು ಇದರ ಪ್ರಮುಖ ಧೈಯವಾಗಿದೆ .

ii ) ವಿಶೇಷ ಕೇಂದ್ರ ನೆರವು Special Central Assistance SCA ಬಡತನದ ರೇಖೆಯ ಕೆಳಗಿರುವ ಗರಿಷ್ಠ ಸಂಖ್ಯೆಯ ಕುಟುಂಬಗಳ ಪ್ರಗತಿಗೆ ನೆರವಾಗಲು ರಾಜ್ಯಗಳಿಗೆ ಕೇಂದ್ರದಿಂದ ವಿಶೇಷ ಧನಸಹಾಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ .

iii ) ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮ Scheduled Caste Development Corporation : ಈ ಕುಟುಂಬಗಳಿಗೆ ಹಣಕಾಸು ಸಂಸ್ಥೆಗಳಿಂದ ಅಗತ್ಯ ಆರ್ಥಿಕ ನೆರವನ್ನು ಒದಗಿಸುವ ಕಾರ್ಯ ಮಾಡುತ್ತವೆ . ಇವರಿಗೂ ಆರ್ಥಿಕ ಸಂಸ್ಥೆಗಳಿಗೂ ನಡುವೆ ಸಂಪರ್ಕದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತವೆ . ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಈ ನಿಗಮಕ್ಕೆ ಧನಸಹಾಯ ಮಾಡುತ್ತವೆ .

21. ಅಸ್ಪೃಶ್ಯರ ಏಳಿಗೆಯಲ್ಲಿ ಗಾಂಧೀಜಿ ಮತ್ತು ಡಾ . ಅಂಬೇಡ್ಕರ್‌ ಅವರ ಪಾತ್ರವನ್ನು ವಿವರಿಸಿ .

ಅಸ್ಪೃಶ್ಯರ ಏಳಿಗೆಯಲ್ಲಿ ಗಾಂಧೀಜಿಯವರ ಪಾತ್ರ ಸ್ವಾತಂತ್ರ್ಯ ಹೋರಾಟ ಮತ್ತು ಅಸ್ಪೃಶ್ಯತಾ ನಿವಾರಣೆ ಗಳೆರಡೂ ಗಾಂಧೀಜಿಯವರ ಆದ್ಯತೆಗಳಾಗಿದ್ದವು . ಗಾಂಧೀಜಿಯವರು ಅಸ್ಪೃಶ್ಯತಾ ವಿರೋಧಿಯಾಗಿದ್ದರು . ಅವರೊಡನೆಯೇ ವಾಸಿಸಿ , ಅವರ ಕಷ್ಟಗಳನ್ನು ಕಂಡಂತ ವರಾಗಿದ್ದರು . ಪ್ರಾರ್ಥನೆ , ಪೂಜೆ , ಕೀರ್ತನೆಗಳಲ್ಲಿ ಅವರನ್ನೂ ಭಾಗಿಗಳಾಗುವಂತೆ ಮಾಡುತ್ತಿದ್ದರು . ಇವರ ಸ್ಥಿತಿಗತಿಗಳ ಬಗ್ಗೆ ‘ ಹರಿಜನ ‘ ಮತ್ತು ‘ ಯಂಗ್ ಇಂಡಿಯಾ ‘ ಪತ್ರಿಕೆಗಳಲ್ಲಿ ಸಾಕಷ್ಟು ಲೇಖನಗಳನ್ನು ಬರೆದು ಜಾಗೃತಿ ಮೂಡಿಸಿದ್ದರು . ಅವರಿಗಾಗಿರುವ ಅನ್ಯಾಯದ ವಿರುದ್ಧ ಕಾನೂನಾತ್ಮಕ ಕ್ರಮಗಳಿಗೆ ಸಲಹೆ ನೀಡಿದ್ದರು . ತಮ್ಮ ನಿಸ್ವಾರ್ಥವಾದ ಮತ್ತು ಪ್ರಾಮಾಣಿಕವಾದ ಸೇವೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ , ಪರಿಶಿಷ್ಟ ಜನರನ್ನು ಪ್ರೀತಿಯಿಂದ ‘ ಹರಿಜನ ‘ ಎಂದರೆ ದೇವರ ಮಕ್ಕಳು ಎಂಬ ಹೆಸರನ್ನು ಕೊಟ್ಟರು . ‘ ಹರಿಜನ ಸೇವಕ ಸಂಘ ‘ ವು ಹರಿಜನ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮತ್ತು ವಿದ್ಯಾರ್ಥಿ ವೇತನದ ಸೌಲಭ್ಯವನ್ನು ನೀಡಲಾರಂಭಿಸಿತು . ಸ್ತ್ರೀಶಿಕ್ಷಣಕ್ಕಾಗಿ ಕಸ್ತೂರ ಬಾ ಬಾಲಿಕಾಶ್ರಮ ಮತ್ತು ಸಾಬರಮತಿಯಲ್ಲಿ ಹರಿಜನ ಬಾಲಿಕಾ ಸಂಘವು ದೇಶದಾದ್ಯಂತ ಶಾಖೆಗಳನ್ನು ಹೊಂದಿದ್ದು , ಸುಮಾರು 120 ವಸತಿ ಶಾಲೆಗಳನ್ನು ನಿರ್ವಹಿಸುತ್ತಿದೆ .

ಅಸ್ಪೃಶ್ಯರ ಏಳಿಗೆಯಲ್ಲಿ ಡಾ.ಬಿ.ಆರ್ . ಅಂಬೇಡ್ಕರ್ ರವರ ಪಾತ್ರ ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿರುವ ಅಂಬೇಡ್ಕರ್‌ರವರು ಅಸ್ಪೃಶ್ಯರ ವಿಮುಕ್ತಿಗಾಗಿ ಶ್ರಮಿಸಿದರು . ಸಂವಿಧಾನದ ಪ್ರಧಾನ ಶಿಲ್ಪಿಗಳಾದ ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಹಲವಾರು ಕಲಮುಗಳ ಅಳವಡಿಕೆಯ ಮೂಲಕ ಅಸ್ಪೃಶ್ಯ ಕಲ್ಯಾಣ ಕಾರ್ಯಕ್ರಮಗಳಿಗೆ ಕಾನೂನಾತ್ಮಕ ಸ್ವರೂಪ ನೀಡಿದರು . ಭಾರತೀಯ ಸಂವಿಧಾನವು ಎಲ್ಲರ ಹಕ್ಕುಗಳು ಮತ್ತು ಆಸಕ್ತಿಗಳನ್ನು ಸಾರ್ವತ್ರಿಕವಾಗಿ ಸಂರಕ್ಷಿಸಿದ್ದರು . ಅಸ್ಪೃಶ್ಯರಿಗೆ ವಿಶೇಷ ಸಂರಕ್ಷಣೆಯನ್ನು ನೀಡಿದೆ . ಅಂಬೇಡ್ಕರ್‌ರವರು ಅಸ್ಪೃಶ್ಯ ವರ್ಗಗಳ ಹೃದಯದಲ್ಲಿ ಸ್ವಘನತೆ , ಸ್ವಗೌರವ ಮತ್ತು ಆತ್ಮವಿಶ್ವಾಸಗಳನ್ನು ಮೂಡಿಸಲು ಯತ್ನಿಸಿದರು , ಇದಕ್ಕಾಗಿ ಅವರು ‘ ಬಹಿಷ್ಕೃತ ಹಿತಕಾರಿಣಿ ಸಭಾ ‘ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು . ಅವರು ‘ ಸ್ವಗೌರವ ಆಂದೋಲನ ‘ ವನ್ನು ಚಾಲನೆಗೊಳಿಸಿದರು . ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆಯಲು ಸ್ವಸುಧಾರಣೆ , ಸ್ವಾವಲಂಬನೆ , ಸ್ವಗೌರವ , ಆತ್ಮವಿಶ್ವಾಸ ಮತ್ತು ಸ್ವಪ್ರಗತಿಗಳು ಎಂಬ ಐದು ಸೂತ್ರಗಳನ್ನು ಪಾಲಿಸಬೇಕೆಂಬ ಕರೆಯಿತ್ತರು . ಇವರು ‘ ಮೂಕ ನಾಯಕ ‘ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ , ದಮನಿತ ವರ್ಗಗಳ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದರು . 1942 ರಲ್ಲಿ ಎಲ್ಲಾ ಶೋಷಿತ ವರ್ಗದವರನ್ನು ನಾಗಾಪುರದಲ್ಲಿ ಅಖಿಲ ಭಾರತ ಶೋಷಿತ ವರ್ಗಗಳ ಸಮ್ಮೇಳನ ‘ ದಡಿಯಲ್ಲಿ ಒಗ್ಗೂಡಿಸಿದರು . ಅವರು ‘ ಶಿಕ್ಷಣ , ಹೋರಾಟ ಮತ್ತು ಸಂಘಟನೆ ‘ ಎಂಬ ಮೂರು ತತ್ವಗಳಡಿಯಲ್ಲಿ ದಲಿತ ಆಂದೋಲನವನ್ನು ಚಾಲನೆಗೊಳಿಸಿದರು . ಇಂದಿನ ಅಸ್ಪಶ್ಯರ ಅಭಿವೃದ್ಧಿಗೆ , ಏಳಿಗೆಗೆ ಮಹಾತ್ಮಾ ಗಾಂಧೀಜಿಯವರ ಮತ್ತು ದಲಿತ ನಾಯಕರಾದ ಡಾ || ಬಿ.ಆರ್ . ಅಂಬೇಡ್ಕರ್‌ರವರ ದುಡಿಮೆ ಅಪಾರ . ಯಾರೂ ಇವರಿಬ್ಬರ ಮಾನವೀಯತೆ ಮತ್ತು ಕಾಳಜಿಯನ್ನು ಮರೆಯುವಂತಿಲ್ಲ .

22. ಭಾರತದಲ್ಲಿ ಕೈಗೊಳ್ಳಲಾದ ಬುಡಕಟ್ಟು ಕಲ್ಯಾಣ ಕಾರ್ಯಕ್ರಮಗಳನ್ನು ವಿವರಿಸಿ .

ಬುಡಕಟ್ಟು ಕಲ್ಯಾಣ ಕಾರ್ಯಕ್ರಮಗಳು ( Tribal Welfare Programmer ) ಬುಡಕಟ್ಟು ಸಮೂಹಗಳ ಅಭಿವೃದ್ಧಿಗಾಗಿ ರಚಿಸಿರುವ ಕಲ್ಯಾಣ ಕಾರ್ಯಕ್ರಮಗಳು ಕ್ರಿಯಾ ಯೋಜನೆಗಳಾಗಿವೆ . ವಿವಿಧ ಸಮಿತಿಗಳ ಸಲಹೆಗಳು ಮತ್ತು ಶಿಫಾರಸ್ಸುಗಳ ಆಧಾರದ ಮೇಲೆ ಈ ಕೆಳಗಿನ ಕಾರ್ಯಕ್ರಮಗಳು ರೂಪಿತವಾಗಿವೆ .

1. ಆರ್ಥಿಕ ಕಾರ್ಯಕ್ರಮಗಳು ( Economic Programmes ) : ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ 1100 ಕೋಟಿ , ಆರನೆಯ ಯೋಜನೆಯಲ್ಲಿ 5535 ಕೋಟಿ ಮತ್ತು ಏಳನೆಯ ಯೋಜನೆಯಲ್ಲಿ 10,500 ಕೋಟಿಗಳಷ್ಟು ಮೊತ್ತವನ್ನು ಬುಡಕಟ್ಟು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಾಗಿರಿಸಿತ್ತು .

ಎ ) ಇಪ್ಪತ್ತು ಅಂಶಗಳ ಕಾರ್ಯಕ್ರಮ Twenty Point Programme : ಈ ಕಾರ್ಯಕ್ರಮದಲ್ಲಿ ಬುಡಕಟ್ಟುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು . ಬಡತನದ ರೇಖೆಯಿಂದ ಮೇಲೇರಲು ಅನುವಾಗುವಂತೆ ಬುಡಕಟ್ಟು ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು .

ಬಿ ) ಲ್ಯಾಂಪ್ಸ್ ( LAMPS ) ಮತ್ತು ಟೈಫೆಡ್ TRIFED ಸ್ಥಾಪನೆ: 1976 ರಲ್ಲಿ ಜೀತಪದ್ಧತಿಯ ರದ್ದತಿ ಕಾನೂನನ್ನು ಜಾರಿ ಗೊಳಿಸಲಾಯಿತು . ಖಾಸಗಿ ಲೇವಾದೇವಿಗಾರರು ಮತ್ತು ಮಧ್ಯವರ್ತಿಗಳ ಹಿಡಿತದಿಂದ ಬುಡಕಟ್ಟು ಸಮೂಹಗಳಿಗೆ ಮುಕ್ತಿ ನೀಡಲು ಸರ್ಕಾರವು “ ವಿಶಾಲ ಪ್ರದೇಶ ವಿವಿಧೋದ್ದೇಶ ಸಂಘ ‘ ಗಳನ್ನು Large Area Multipurpose Societies LAMPS ಸ್ಥಾಪಸಿತು . ಈ ಸಂಘಗಳು ಉತ್ಪಾದಕ ಉದ್ದೇಶಕ್ಕಾಗಿ ಸಾಲ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದ್ದವು . ಬುಡಕಟ್ಟು ಸಮೂಹಗಳು ತಮ್ಮ ಕೃಷಿ ಉತ್ಪನ್ನಗಳು ಮತ್ತು ಕೆಲವು ಅರಣೋತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಅವರಿಗೆ ಸುಧಾರಿತ ಬೀಜಗಳು , ಗೊಬ್ಬರ , ಕೀಟನಾಶಕಗಳು , ಕೃಷಿ ಉಪಕರಣಗಳು ಮುಂತಾದವುಗಳನ್ನು ಒದಗಿಸಲು ಈ ಸಹಕಾರಿ ಸಂಘಗಳು ನೆರವಾಗುತ್ತಿದ್ದವು . ಇವರ ಉತ್ಪನ್ನಗಳ ಮಾರಾಟಕ್ಕಾಗಿ ‘ ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ’ವನ್ನು Tribal Co – operative Marketing Development Federation TRIFED ಸ್ಥಾಪಿಸಲಾಯಿತು . ಈ ಒಕ್ಕೂಟವು ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವ ಕಾರ್ಯ ಮಾಡುತ್ತದೆ .

2 ) ಕೃಷಿ ಕಾರ್ಯಕ್ಕೆ ನೆರವು Assistance to Agriculture ಬುಡಕಟ್ಟು ಜನರಿಗೆ ಹಳೆಯ ಪಾಳು ಬೇಸಾಯ ಪದ್ಧತಿಯಿಂದ ಹೊರಬರುವಂತೆ ಮಾಡಿ , ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಉತ್ತೇಜನ ಕೊಡುತ್ತಿದೆ . ಅದಕ್ಕೆ ಪೂರಕವಾಗಿ ಕೃಷಿ ಉಪಕರಣಗಳು , ಗೊಬ್ಬರ , ಬೀಜಗಳು ಮತ್ತು ಸಾಲ ಸೌಲಭ್ಯಗಳನ್ನು ಕೂಡಾ ಒದಗಿಸಲಾಗುತ್ತಿದೆ .

2. ಶೈಕ್ಷಣಿಕ ಕಾರ್ಯಕ್ರಮಗಳು ( Educational Programmes ) : ಇವರಲ್ಲಿ ಶೇ .80 ಕ್ಕೂ ಹೆಚ್ಚಿನ ಬುಡಕಟ್ಟು ಜನರು ಅನಕ್ಷರಸ್ಥರಾಗಿದ್ದಾರೆ . ಸರ್ಕಾರವು ಇವರಿಗಾಗಿ ಉಚಿತ ಶಿಕ್ಷಣ , ಉಚಿತ ವಿದ್ಯಾರ್ಥಿನಿಲಯಗಳು , ವಿದ್ಯಾರ್ಥಿವೇತನಗಳು , ಮಧ್ಯಾಹ್ನದ ಉಪಾಹಾರ , ಪಠ್ಯಪುಸ್ತಕಗಳು ಮುಂತಾದ ಅನುಕೂಲಗಳನ್ನು ಕಲ್ಪಿಸಲಾಗಿದೆ . ಆಶ್ರಮ ಶಾಲೆಗಳನ್ನು ಮತ್ತು ತಾಂತ್ರಿಕ ತರಬೇತಿ , ಶಾಲೆಗಳನ್ನು ಸ್ಥಾಪಿಸಲಾಗಿದೆ . ಕೋಳಿ ಸಾಕಾಣಿಕೆ , ಅರಣ್ಯಗಳ ನಿರ್ವಹಣೆ , ಪಶು ಸಂಗೋಪನೆ , ಜೇನು ಸಾಕಾಣಿಕೆ ಮುಂತಾದ ವೃತ್ತಿ ಕೈಗೊಳ್ಳಲು ಅಗತ್ಯ ತರಬೇತಿ ನೀಡಲಾಗುತ್ತಿದೆ . ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುತ್ತಿದೆ . ಸಂಸ್ಥೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ NCERT ದೆಹಲಿ ಮತ್ತು ಭಾರತೀಯ ಕೇಂದ್ರೀಯ ಭಾಷಾ ಕೇಂದ್ರ , ಮೈಸೂರು Central Institute of Indian Languages ಈ ಎರಡು ಸಂಸ್ಥೆಗಳು ಸುಮಾರು 60 ಕ್ಕೂ ಹೆಚ್ಚು ಬುಡಕಟ್ಟು ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ , ಅವರಲ್ಲಿ ಕಲಿಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ .

3. ಸಂಶೋಧನಾ ಕಾರ್ಯಕ್ರಮಗಳು Research Programme : ಬುಡಕಟ್ಟುಸ ಸಮೂಹಗಳ ವೈಜ್ಞಾನಿಕ ಅಧ್ಯಯನಕ್ಕಾಗಿ 11 ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ , ಕಾರ್ಯ ನಿರ್ವಹಿಸುತ್ತಿದ್ದಾರೆ . ‘ ಕೇಂದ್ರೀಯ ಸಂಶೋಧನಾ ಸಲಹಾ ಸಮಿತಿ’ಯನ್ನು ರಚಿಸಲಾಗಿದೆ ಮತ್ತು ಇದು ಮಾರ್ಗದರ್ಶನ ನೀಡುತ್ತಿದೆ .

4. ಆರೋಗ್ಯ , ವಸತಿ ಮತ್ತಿತರ ಯೋಜನೆಗಳು Health Housing and other Schemes ಬುಡಕಟ್ಟು ಪ್ರದೇಶಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ . ಇನ್ನು ಕೆಲವೆಡೆ ಸಂಚಾರಿ ಚಿಕಿತ್ಸಾಲಯಗಳನ್ನು ಒದಗಿಸಲಾಗಿದೆ . ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅವರ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತಾರೆ . ಮಹಿಳೆಯರಿಗೆ ಪ್ರಸವಪೂರ್ವ ಮತ್ತು ಪ್ರಸವಾನಂತರದ ಸೇವೆಗಳನ್ನು ವಿಸ್ತರಿಸಲಾಗಿದೆ . ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಇವರಿಗೆ ಉಚಿತ ಮನೆಗಳನ್ನು ನೀಡಲಾಗಿದೆ . ಈ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಸರ್ಕಾರೇತರ ಸಂಸ್ಥೆಗಳಿಗೆ ಸರ್ಕಾರದಿಂದ ಧನಸಹಾಯ ನೀಡಲಾಗುತ್ತದೆ . ಇವರ ಅಭಿವೃದ್ಧಿಯು ರಾಷ್ಟ್ರದ ಅಭಿವೃದ್ಧಿಯನ್ನು ಅವಲಂಬಿಸಿದೆ . ಭೌಗೋಳಿಕ ಪ್ರತ್ಯೇಕತೆಯ ಆಡಚಣೆಗಳನ್ನು ನಿವಾರಿಸಲೆತ್ನಿಸಲಾಗಿದೆ . ಶಿಕ್ಷಣ , ಶೋಷಣಾ ಮುಕ್ತ ಸಮಾಜ , ಪ್ರಾಮಾಣಿಕವಾದ ಯೋಜನೆ , ಸಮರ್ಪಣಾ ಮನೋಭಾವದ ಕಾರ್ಯಕರ್ತರ ನೆರವಿನಿಂದ , ಅಡೆತಡೆಗಳನ್ನು ನಿವಾರಿಸಿ ಕೊಂಡು ಇವರು ದೇಶದ ಮುಖ್ಯವಾಹಿನಿಯನ್ನು ಸೇರಬಹುದು .

23. ಶ್ರೀ ಮಹಿಳಾ ಉದ್ಯೋಗ ಗೃಹ , ಲಿಜ್ಜತ್ ಮತ್ತು ಸೇವಾ ಸಂಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

ಶ್ರೀ ಮಹಿಳಾ ಉದ್ಯೋಗ ಗೃಹ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ಯೋಜನೆಯು SKDRDP ಒಂದು ಧರ್ಮದ ಸಂಸ್ಥೆಯಾಗಿದೆ . ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಇದರ ಪೇರಕಶಕ್ತಿಯಾಗಿದ್ದಾರೆ . ಮಹಿಳೆಯರನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಗ್ರಾಮೀಣ ಪ್ರದೇಶದ ಸ್ವಸಹಾಯ ಸಂಘಗಳಿಗೆ ಕಿರುಸಾಲ ನೀಡುತ್ತಿದ್ದಾರೆ . ಇವರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಕಾರ್ಯವನ್ನು ಮಾಡುತ್ತಿದ್ದಾರೆ . ಈ ಯೋಜನೆಯು ಕರ್ನಾಟಕ ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದೆ .

ಲಿಜ್ಜತ್ ಪಾಪಡ್ ( ಲಿಜ್ಜತ್ ಹಪ್ಪಳ ) ಶ್ರೀ ಮಹಿಳಾ ಉದ್ಯೋಗ್ ಲಿಜ್ಜತ್ ಪಾಪಡ್ ಎಂಬ ಮಹಿಳಾ ಸಹಕಾರಿ ಸಂಘಟನೆಯು ಲಿಜ್ಜತ್ ಎಂದೇ ಜನಪ್ರಿಯವಾಗಿದೆ . ಈ ಸಂಸ್ಥೆಯು ಮಹಿಳೆಯರಿಗೆ ಉದ್ಯೋಗ ನೀಡಿ ಅವರನ್ನು ಸಬಲಗೊಳಿಸುತ್ತಿದೆ . ಈ ಸಂಸ್ಥೆಯು 1959 ರಲ್ಲಿ ಕೇವಲ 80 ರೂಪಾಯಿಗಳ ಮೂಲ ಬಂಡವಾಳದಿಂದ ಪ್ರಾರಂಭವಾಗಿ 2010 ರಷ್ಟರಲ್ಲಿ 6.50 ಬಿಲಿಯನ್‌ನಷ್ಟು ವಾರ್ಷಿಕ ವಹಿವಾಟನ್ನು ನಡೆಸುತ್ತಿದೆ . 290 ಮಿಲಿಯನ್‌ನಷ್ಟು ರಫ್ತು ವಹಿವಾಟನ್ನು ಹೊಂದಿದೆ . ಸುಮಾರು 42,000 ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿದೆ . ಭಾರತದಾದ್ಯಂತ 67 ಶಾಖೆಗಳು ಮತ್ತು 35 ವಿಭಾಗಗಳನ್ನು ಹೊಂದಿದೆ . ಮೂಲವಾಗಿ ಇದು ಒಂದು ಗೃಹಕೈಗಾರಿಕೆ , ಮಹಿಳಾ ಉದ್ಯಮಶೀಲತೆಯ ಅತ್ಯುತ್ತಮ ಮಾದರಿಯಾಗಿ ಮಹಿಳಾ ಸಬಲೀಕರಣದ ಉತ್ತಮ ಉದಾಹರಣೆಯಾಗಿದೆ .

ಸ್ವ – ಉದ್ಯೋಗಿ ಮಹಿಳಾ ಸೇವಾ ಸಂಘಟನೆಗಳು SEWA Self Employed Women’s Association . ಸ್ವ – ಉದ್ಯೋಗಿ ಮಹಿಳಾ ಸಂಘವು ಮಹಿಳಾ ಸಬಲೀಕರಣಕ್ಕೆ ಮಹತ್ವಪೂರ್ಣವಾದ ಕೊಡುಗೆಯನ್ನು ನೀಡಿದೆ . ಹೋರಾಟ ಮತ್ತು ಅಭಿವೃದ್ಧಿ ಎಂಬ ದ್ವಿ- ಕಾರ್ಯ ತಂತ್ರಗಳ ಮೂಲಕ ಸ್ವ – ಉದ್ಯೋಗಿ ಬಡ ಮಹಿಳೆಯರನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದೆ .ಮಹಿಳೆಯರು ಬಡತನದಿಂದಾಗಿ ಸಮುದಾಯದ ಮೇಲೆ ಆರ್ಥಿಕವಾಗಿ ಹೊರೆಯಾಗುತ್ತಿದ್ದಾರೆ . ಅವರಿಗೆ ಆದಾಯ ತರಬಲ್ಲ ಅವಕಾಶಗಳನ್ನು ನಿರ್ಮಿಸಿಕೊಡಬೇಕಾಗಿದೆ . ಈ ನಿಟ್ಟಿನಲ್ಲಿ ಸ್ವ – ಉದ್ಯೋಗಿ ಮಹಿಳೆಯರು 1972 ರಲ್ಲಿ ಅಹಮದಾಬಾದಿನಲ್ಲಿ ‘ ಮಹಿಳೆಯರ ಸಂಘ’ವನ್ನು ಸ್ಥಾಪಿಸಿದರು . ಇದಕ್ಕೆ ಪ್ರೇರಣೆ ನೀಡಿದವರು ರಾಮನ್ ಮ್ಯಾಗ್ನೆಸ್ ಪ್ರಶಸ್ತಿ ವಿಜೇತೆ ಶ್ರೀಮತಿ ಇಳಾ ಆರ್.ಭಟ್ . ಈ ಸಂಸ್ಥೆಯು ಪ್ರತಿಯೊಬ್ಬ ಸದಸ್ಯರಿಗೂ ಆಹಾರ , ಆದಾಯ ಮತ್ತು ಸಾಮಾಜಿಕ ಭದ್ರತೆಗಳನ್ನು ಖಚಿತಪಡಿಸಲು ಉದ್ಯೋಗವೊಂದನ್ನು ನೀಡುವುದು ಇವರ ಪರಿಕಲ್ಪನೆಯಾಗಿದೆ . ಸ್ವ – ಉದ್ಯೋಗಿಗಳಿಗೆ ಕಿರು ಸಾಲ ಕೊಡುವ ಮೂಲಕ ಆರ್ಥಿಕ ಬೆಂಬಲ ನೀಡುತ್ತಿದೆ . 1974 ರಲ್ಲಿ ಶ್ರೀ ಮಹಿಳಾ ಸೇವಾ ಸಹಕಾರಿ ಬ್ಯಾಂಕನ್ನು ನೋಂದಣಿ ಮಾಡಲಾಯಿತು . ಸೇವಾ ಸಂಘಟನೆಯ ಯಶಸ್ಸು ಬಡವರು ಸಮಾಜಕ್ಕೆ ಹೊರೆಯಲ್ಲವೆಂಬುದನ್ನು ಸ್ಪಷ್ಟಪಡಿಸಿದೆ . ಬಡವರಿಗೆ ಪ್ರೇರೇಪಣೆ , ಮಾರ್ಗದರ್ಶನ ಮತ್ತು ಸಮರ್ಪಿತ ನಾಯಕತ್ವವನ್ನು ಒದಗಿಸಿದಲ್ಲಿ ಅವರು ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಅಧಿಕ ಉತ್ಪಾದನೆ ಮಾಡಬಲ್ಲರೆಂ ಬುದನ್ನು ಸಾಬೀತುಪಡಿಸಲಾಗಿದೆ.

24. ಜಾಡುಮಾಲಿಗಳ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸುಲಭ ಶೌಚಾಲಯ ಸಂಘಟನೆಯ ಪಾತ್ರವನ್ನು ವಿವರಿಸಿ.

ಜಾಡುಮಾಲಿಗಳ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ . ಅವುಗಳಲ್ಲಿ ಸುಲಭ್ ಇಂಟರ್‌ನ್ಯಾಷನಲ್‌ನ ಪಾತ್ರ ಹಿರಿದು . ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಕಲ್ಯಾಣದಲ್ಲಿ ಸ್ವಯಂಸೇವಾ ಸಂಘಟನೆಗಳ ಪಾತ್ರ ( Role of Non Governmental Organization in this upliftment of scheduled castes and tribes ) boiem ಸಂಸ್ಥೆಗಳು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರವನ್ನು ವಹಿಸಿವೆ . ಇಂತಹ ಸ್ವಯಂ ಸೇವಕ ಸಂಘಗಳು ಹಲವಾರಿವೆ . ಅವುಗಳಲ್ಲಿ ಮುಖ್ಯವಾದವುಗಳು ಹರಿಜನ ಸೇವಕ ಸಂಘ , ಭಾರತೀಯ ದಮನಿತ ವರ್ಗಗಳ ಸಂಘ , ಹಿಂದಿ ಜಾಡಮಾಲಿಗಳ ಸಂಘ , ಈಶ್ವರ ಶರಣ ಆಶ್ರಮ , ಅಖಿಲ ಭಾರತ ಹಿಂದುಳಿದ ವರ್ಗಗಳ ಒಕ್ಕೂಟ , ಭಾರತೀಯ ಅದಿಮಜಾತಿ ಸೇವಕ ಸಂಘ , ವನರಾಶಿ ಕಲ್ಯಾಣ ಸಭಾ , ಶ್ರೀ ರಾಮಕೃಷ್ಣ ಮಿಶನ್ ಮುಂತಾದ ಸಂಘಟನೆಗಳು ಅಸ್ಪೃಶ್ಯತೆಯನ್ನು ನಿವಾರಿಸಲು ಸಾಕಷ್ಟು ಶ್ರಮಿಸಿವೆ.

ಸುಲಭ ಶೌಚಾಲಯ ಎಂಬ ಒಂದು ಭಾರತೀಯ ಮೂಲದ ಸಮಾಜ ಸೇವಾ ಸಂಘಟನೆಯನ್ನು ಸ್ಥಾಪಿಸಿದ್ದಾರೆ . ಇದು ಮಾನವ ಹಕ್ಕುಗಳು , ನೈರ್ಮಲ್ಯ , ಅಸಾಂಪ್ರದಾಯಿಕ ಇಂಧನ , ತ್ಯಾಜ್ಯ ನಿರ್ವಹಣೆ ಮತ್ತು ಶಿಕ್ಷಣದ ಮೂಲಕ ಸಮಾಜ ಸುಧಾರಣೆಯನ್ನು ಪ್ರವರ್ತಿಸುವ ಉದ್ದೇಶವನ್ನು ಹೊಂದಿದೆ . ಈ ಸಂಘಟನೆಯಲ್ಲಿ 50,000 ಸ್ವಯಂ ಸೇವಕರಿದ್ದಾರೆ . ಸುಲಭ್ ಇಂಟರ್‌ನ್ಯಾಷನಲ್ ಒಂದು ಲಾಭೋದ್ದೇಶವಿಲ್ಲದ ಬೃಹತ್ ಸಂಘಟನೆಯಾಗಿದೆ . ಡಾ . ಬಿಂದೇಶ್ವರ್ ಪಾಠಕ್‌ರವರು 1970 ರಲ್ಲಿ ಸುಲಭ್ ಸಂಸ್ಥೆಯನ್ನು ಸ್ಥಾಪಿಸಿದರು . ನಿರ್ವಹಣೆಯ ಅಗತ್ಯವಿಲ್ಲದ ಎರಡು ಶೌಚಾಲಯ ಗುಂಡಿಗಳನ್ನೊಳಗೊಂಡ ಫ್ಲಶ್ ಮಾದರಿಯ ಸುಲಭ ಶೌಚಾಲಯ ನಿರ್ಮಾಣ , ಸುರಕ್ಷಿತವಾದ ಹಾಗೂ ನೈರ್ಮಲ್ಯಯುತವಾದ ಮಾನವ ತ್ಯಾಜ್ಯದ ನಿರ್ವಹಣೆಯ ತಂತ್ರಜ್ಞಾನ , ಹಣ ನೀಡಿ ಬಳಸಬಹುದಾದ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ , ಶೌಚ , ಸ್ನಾನ ಮತ್ತು ಬಟ್ಟೆ ತೊಳೆಯಲು ಅವಕಾಶವಿರುವ ಶೌಚಾಲಯಗಳ ನಿರ್ಮಾಣ ಮುಂತಾದವು ಈ ಸಂಸ್ಥೆಯ ವಿನೂತನ ಯೋಜನೆಗಳಾಗಿದ್ದು ,

ಈ ಸೌಲಭ್ಯಗಳನ್ನು ದಿನನಿತ್ಯ ಸುಮಾರು ಹತ್ತು ಮಿಲಿಯನ್ ಜನರು ಬಳಸುತ್ತಿದ್ದಾರೆ . ಶೌಚಾಲಯಗಳಲ್ಲಿ ಸಂಗ್ರಹವಾಗುವ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಮತ್ತು ಜೈವಿಕ ಗೊಬ್ಬರ ತಯಾರಿಸಲಾಗುತ್ತಿದೆ . ತ್ಯಾಜ್ಯ ನೀರಿನ ಸಂಸ್ಕರಣ ಘಟಕಗಳನ್ನು ಕೂಡ ನಿರ್ಮಿಸಲಾಗಿದೆ . ಈ ಸಂಸ್ಥೆಯ ಇತರ ಜನಪರ ಕಾರ್ಯಗಳೆಂದರೆ

i ) ದೆಹಲಿಯಲ್ಲಿ ನಿಮ್ಮ ವರ್ಗಗಳಿಗಾಗಿ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪನೆ .

ii) ಜಾಡಮಾಲಿಗಳು ಮತ್ತು ಇತರ ಬಡ ಕುಟುಂಬಗಳ ಯುವಕ ಯುವತಿಯರಿಗೆ ವೃತ್ತಿ ತರಬೇತಿ ನೀಡಲು ತರಬೇತಿ ಕೇಂದ್ರಗಳ ಜಾಲದ ಸ್ಥಾಪನೆ ಇತ್ಯಾದಿ .

ಸುಲಭ್ ಪ್ರಾರಂಭಿಸಿದ ನೈರ್ಮಲ್ಯ ವ್ಯವಸ್ಥೆಯು ವಿಶ್ವದಲ್ಲೇ ಅತ್ಯುತ್ತಮವಾದ “ ನಗರದ ಉತ್ತಮ ಆಚರಣೆ ( Urban Best Practice ) ಎಂಬ ಮೆಚ್ಚುಗೆಯನ್ನು ‘ ವಿಶ್ವಸಂಸ್ಥೆಯ ಮಾನವ ನೆಲೆಗಳ ಕೇಂದ್ರವು ‘ ( United Nations Centre for Human Settlement ) 19968 ಜೂನ್‌ನಲ್ಲಿ ಇಸ್ಲಾನ್ ಬೂಲ್‌ನಲ್ಲಿ ನಡೆದ ಎರಡನೇ ನಿವಾಸ ( II Habitate Conferance ) ಸಮ್ಮೇಳನದಲ್ಲಿ ವ್ಯಕ್ತ ಪಡಿಸಿದೆ . ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಸುಲಭನ ಕಾರ್ಯಗಳನ್ನು ಪ್ರಶಂಸಿಸಿ , ಅದಕ್ಕೆ ವಿಶೇಷ ಸ್ಥಾನಮಾನ ನೀಡಿದೆ . ಸುಲಭ್ ಹಮ್ಮಿಕೊಂಡ ಈ ಯೋಜನೆಯಿಂದ ಸುಮಾರು 35,000 ಜನರಿಗೆ ನೇರವಾಗಿ ಉದ್ಯೋಗ ದೊರೆತಿದೆ . ಒಂದು ಕೋಟಿಯಷ್ಟು ಮಾನವ ದಿನಗಳ ನಿರ್ಮಾಣವಾಗಿದೆ ಮತ್ತು 240 ಪಟ್ಟಣಗಳು ಭಂಗಿ ಕಾರ್ಯಮುಕ್ತಾಗಿವೆ ಎನ್ನಲಾಗಿದೆ . ಸುಲಭ್ ಸಂಸ್ಥೆಯು ಬ್ರಿಟಿಷ್ ಕೌನ್ಸಿಲ್ , ಜರ್ಮನಿಯ ಬೊರ್ಡಾ ಸಂಸ್ಥೆ , ಯುರೋಪಿಯನ್ ಒಕ್ಕೂಟ ಮುಂತಾದವುಗಳೂ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಭಾಗತ್ವವನ್ನು ಹೊಂದಿದೆ .

ಬಡವರಿಗಾಗಿ ನೈರ್ಮಲ್ಯವನನು ರೂಪಿಸಿದ್ದ ಕಾರಣಕ್ಕಾಗಿ ಸುಲಭ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ . ಸುಲಭ್ ಸಂಸ್ಥೆಯು 2007 ರ ಅಕ್ಟೋಬರ್‌ನಲ್ಲಿ ಮಾನವ ತ್ಯಾಜ್ಯವನ್ನು ಜೈವಿಕ ಅನಿಲ ಮತ್ತು ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸುವ ಅಗ್ಗದ ಶೌಚಾಲಯದ ವಿನ್ಯಾಸವನ್ನು ರೂಪಿಸಿದೆ . ಬಿಂದೇಶ್ವರ ಪಾಠಕ್ ಅವರಿಗೆ 2009 ರ ಸ್ಟಾಕ್ ಹೋಂ ವಾಟರ್ ಪ್ರಶಸ್ತಿಯನ್ನು ನೀಡಲಾಗಿದೆ . ದೆಹಲಿಯ ಸುಲಭವ ಅಂತರ್‌ರಾಷ್ಟ್ರೀಯ ಕಚೇರಿಯಲ್ಲಿ ಶೌಚಾಲಯ ಮತ್ತು ನೈರ್ಮಲ್ಯದ ಇತಿಹಾಸಕ್ಕೆ ಸಮರ್ಪಿತವಾದ ವಸ್ತು ಸಂಗ್ರಹಾಲಯವನ್ನು ತೆರೆಯಲಾಗಿದೆ . ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಕಲ್ಯಾಣದಲ್ಲಿ ಅನೇಕ ಸ್ವಯಂ ಸೇವಾ ಸಂಘಟನೆಗಳ ಪಾತ್ರವಿದ್ದರೂ ‘ ಸುಲಭ ಶೌಚಾಲಯ ‘ ದ ಪಾತ್ರ ಬಹಳ ಹಿರಿದಾಗಿದೆ .

FAQ

1. ಅಸ್ಪೃಶ್ಯತೆ ( ಅಪರಾಧಗಳು ) ಕಾಯಿದೆಯನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು ?

ಅಸ್ಪೃಶ್ಯತೆ ( ಅಪರಾಧಗಳು ) ಕಾಯಿದೆಯನ್ನು 1955 ರಲ್ಲಿ ಜಾರಿಗೊಳಿಸಲಾಯಿತು .

2. NABARD ನ್ನು ವಿಸ್ತರಿಸಿ .

NABARD ಎಂದರೆ National Bank for Agriculture and Rural Development

ಇತರೆ ವಿಷಯಗಳು :

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್‌

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

One thought on “ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-3 ಒಳಗೊಳ್ಳುವಿಕೆಯ ಕಾರ್ಯತಂತ್ರಗಳು ನೋಟ್ಸ್‌ | 2nd Puc Sociology 3rd Chapter Notes‌

Leave a Reply

Your email address will not be published. Required fields are marked *