ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-2 ಸಾಮಾಜಿಕ ಅಸಮಾನತೆ ಹೊರಗುಳಿಸುವಿಕೆ ಮತ್ತು ಒಳಗೊಳ್ಳುವಿಕೆ ನೋಟ್ಸ್‌

ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-2 ಸಾಮಾಜಿಕ ಅಸಮಾನತೆ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ, 2nd Puc Sociology Chapter 2 Notes in Kannada Pdf 2024 Kseeb Solution For Class 12 Sociology Chapter 2 Notes 2nd Puc Social Inequality, Exclusion and Inclusion in Kannada Notes Pdf

nd Puc Sociology Chapter 2 Notes in Kannada

2nd Puc Sociology 2nd Chapter Notes in Kannada

I. ಒಂದು ಅಂಕದ ಪ್ರಶ್ನೆಗಳು

1 . ಜಾತಿ ಎಂಬ ಪದವು ಹೇಗೆ ಉತ್ಪತ್ತಿಯಾಗಿದೆ ?

ಜಾತಿ ಎಂಬ ಪದವನ್ನು ಸ್ಪಾನಿಷ್ / ಪೋರ್ಚುಗೀಸ್ ಭಾಷೆಗಳ ‘ ಕಾಸ್ಟಾ ‘ ( Casta ) ಎಂಬ ಪದದಿಂದ ಪಡೆಯಲಾಗಿದ್ದು , ಕಾಸ್ಟಾ ಎಂಬ ಪದವು ತಳಿ , ಜನಾಂಗ ಅಥವಾ ಅನುವಂಶೀಯ ಗುಣಗಳನ್ನು ಸೂಚಿಸುತ್ತದೆ . ಪೋರ್ಚುಗೀಸರು ಈ ಪದವನ್ನು ಭಾರತದ ಜಾತಿಯನ್ನು ಸೂಚಿಸಲು ಬಳಸಿದರು . ಜಾತಿ ಎಂಬ ಪದದ ಆಂಗ್ಲ ಭಾಷೆಯ ಸಮಾನಾರ್ಥಕ ಪದವಾಗಿರುವ ಕಾಸ್ಟ್ ಎಂಬ ಪದವು ಕಾಸ್ಟಾ ಎಂಬ ಮೂಲ ಪದದ ಪರಿಷ್ಕರಣೆಯಾಗಿದೆ.

2. ಪಕ್ಕಾ ಆಹಾರ ಎಂದರೇನು ?

ಆಹಾರವನ್ನು ಸ್ಥೂಲವಾಗಿ ಕಚ್ಚಾ ಮತ್ತು ಪಕ್ಕಾ ಎಂಬುದಾಗಿ ವರ್ಗಿಕರಿಸಲಾಗಿತ್ತು . ನೀರನ್ನು ಬಳಸದೆ ಹಾಲು ಮತ್ತು ತುಪ್ಪಗಳನ್ನು ಬಳಸಿ ತಯಾರಿಸಿದ ಆಹಾರವು ಪಕ್ಕಾ ಆಹಾರ ಎಂಬುದಾಗಿ ಪರಿಗಣಿತವಾಗಿತ್ತು .

3. ಕಚ್ಚಾ ಆಹಾರ ಎಂದರೇನು ?

ನೀರನ್ನು ಬಳಸಿ ತಯಾರಿಸಿದ ಆಹಾರವನ್ನು ಕಚ್ಚಾ ಆಹಾರವೆಂದು ಪರಿಗಣಿಸಲಾಗುತ್ತಿತ್ತು .

4. ನಾಲ್ಕು ವರ್ಣಗಳನ್ನು ಹೆಸರಿಸಿ .

ನಾಲ್ಕು ವರ್ಣಗಳು ಬ್ರಾಹ್ಮಣ , ಕ್ಷತ್ರಿಯ , ವೈಶ್ಯ ಮತ್ತು ಶೂದ್ರ .

5. ಕರ್ನಾಟಕದ ಎರಡು ಪ್ರಬಲ ಜಾತಿಗಳನ್ನು ಹೆಸರಿಸಿ ,

ಕರ್ನಾಟಕದ ಎರಡು ಪ್ರಬಲ ಜಾತಿಗಳು ಲಿಂಗಾಯಿತ ಮತ್ತು ಒಕ್ಕಲಿಗರು .

6 . ಪರಿಶಿಷ್ಟ ಜಾತಿ ಎಂಬ ಪದವನ್ನು ಪರಿಚಯಿಸಿದವರು ಯಾರು ?

ಅಸ್ಪೃಶ್ಯ ವರ್ಗವನ್ನು ಸೂಚಿಸಲು ಸೈಮನ್ ಆಯೋಗವು 1928 ರಲ್ಲಿ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿ ಎಂಬ ಪದವನ್ನು ಪರಿಚಯಿಸಿತು .

7 . ಹರಿಜನ ಎಂಬ ಪದವನ್ನು ಪರಿಚಯಿಸಿದವರು ಯಾರು ?

ದೇವರ ಮಹಾತ್ಮ ಗಾಂಧೀಜಿಯವರು ಪರಿಶಿಷ್ಟ ಜಾತಿಯವರನ್ನು ಮಕ್ಕಳು ಎಂಬ ಅರ್ಥದಲ್ಲಿ ಹರಿಜನ ಎಂದು ಕರೆದು , ಈ ಪದವನ್ನು ಪರಿಚಯಿಸಿದರು .

8. ದಕ್ಷಿಣ ವಲಯದ ಯಾವುದಾದರೂ ಎರಡು ಬುಡಕಟ್ಟುಗಳನ್ನು ಹೆಸರಿಸಿ .

ದಕ್ಷಿಣ ವಲಯದ ಬುಡಕಟ್ಟಿನವರು ಭಾರತದ ಮೂಲ ನಿವಾಸಿಗಳಾಗಿದ್ದು , ದ್ರಾವಿಡಿಯನ್ ಭಾಷೆಗಳನ್ನಾಡುತ್ತಾರೆ . ಅನೇಕ ಬುಡಕಟ್ಟುಗಳಿವೆ . ಅವುಗಳಲ್ಲಿ ಪ್ರಮುಖವಾದವು ಕಾಡು ಕುರುಬ , ಜೇನು ಕುರುಬ , ಹಕ್ಕಿಪಿಕ್ಕಿ , ಸೋಲಿಗ ಇತ್ಯಾದಿ .

9. ಪ್ರತ್ಯೇಕತೆಯ ನೀತಿಯನ್ನು ಪ್ರತಿಪಾದಿಸಿದವರು ಯಾರು ?

ಪ್ರತ್ಯೇಕತೆಯ ನೀತಿಯನ್ನು ಪ್ರತಿಪಾದಿಸಿದವರು ಜೆ.ಎಚ್ . ಹಟನ್ ಮತ್ತು ವೆರಿಯರ್ ಎಲ್ಟಿನ್ .

10. ಪಂಚಶೀಲ ತತ್ವದ ಪ್ರತಿಪಾದಕರು ಯಾರು ?

ಪಂಚಶೀಲ ತತ್ವದ ಪ್ರತಿಪಾದಕರು ಜವಾಹರಲಾಲ್ ನೆಹರು .

11. ಭಾರತ ಸರ್ಕಾರವು ನೇಮಿಸಿದ ಹಿಂದುಳಿದ ವರ್ಗಗಳ ಆಯೋಗಗಳಲ್ಲಿ ಒಂದನ್ನು ಹೆಸರಿಸಿ .

ಭಾರತ ಸರ್ಕಾರವು ನೇಮಿಸಿದ ಹಿಂದುಳಿದ ವರ್ಗಗಳ ಆಯೋಗಗಳು ಕಾಲೇಲ್ಕರ್ ಮತ್ತು ಮಂಡಲ್ ಆಯೋಗಗಳು.

12. ಪ್ರಬಲಜಾತಿಯ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು ?

ಪ್ರಬಲ ಜಾತಿಯ ಪರಿಕಲ್ಪನೆಯನ್ನು ಪರಿಚಯಿಸಿದವರು ಎಂ.ಎನ್ . ಶ್ರೀನಿವಾಸ್ .

13. ಬುಡಕಟ್ಟನ್ನು ವ್ಯಾಖ್ಯಿಸಿ .

ಮಾನವಶಾಸ್ತ್ರದ ನಿಘಂಟಿನಲ್ಲಿ ವ್ಯಾಖ್ಯಿಸಲಾಗಿರುವಂತೆ ‘ ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ , ನಿರ್ದಿಷ್ಟ ಭಾಷೆಯನ್ನಾಡುವ , ಸಾಂಸ್ಕೃತಿಕ ಸಾಮ್ಯತೆಯನ್ನು ಹೊಂದಿದ ಮತ್ತು ಏಕೀಕೃತವಾದ ಸಾಮಾಜಿಕ ಸಂಘಟನೆಯನ್ನು ಹೊಂದಿದ ಸಾಮಾಜಿಕ ಸಮೂಹವೇ ಬುಡಕಟ್ಟು .

14. ಭಾರತದ ಹಿಂದುಳಿದ ವರ್ಗಗಳಲ್ಲಿ ಒಂದನ್ನು ಹೆಸರಿಸಿ .

ಭಾರತದ ಹಿಂದುಳಿದ ವರ್ಗಗಳು

( i ) ಪರಿಶಿಷ್ಟ ಜಾತಿಗಳು

( ii ) ಪರಿಶಿಷ್ಟ ಪಂಗಡಗಳು ಅಥವಾ ಬುಡಕಟ್ಟುಗಳು

( iii ) ಇತರ ಹಿಂದುಳಿದ ವರ್ಗಗಳು

15 , ಲಿಂಗತ್ವ ಎಂದರೇನು ?

ಲಿಂಗತ್ವವು ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ನಿರ್ಧಾರಿತವಾಗುವಂಥದು . ಲಿಂಗತ್ವವು ಪುರುಷತ್ವ ಮತ್ತು ಸ್ತ್ರೀತ್ವದ ಲಕ್ಷಣಗಳು ಮತ್ತು ಪಾತ್ರಗಳನ್ನು ಕುರಿತಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಗ್ರಹಿಕೆಗಳನ್ನು ಆಧರಿಸಿದೆ .

II . ಎರಡು ಅಂಕಗಳ ಪ್ರಶ್ನೆಗಳು :

16. ಸಾಮಾಜಿಕ ಅಸಮಾನತೆಯ ಅರ್ಥವನ್ನು ತಿಳಿಸಿ .

ಸಾಮಾಜಿಕ ಸಂಪನ್ಮೂಲಗಳನ್ನು ಪಡೆಯಬಹುದಾದ ಮಾರ್ಗಗಳ ಅಸಮಾನ ಹಂಚಿಕೆಯನ್ನು ಸಾಮಾನ್ಯವಾಗಿ ಸಾಮಾಜಿಕ ಅಸಮಾನತೆ ಎನ್ನುತ್ತಾರೆ . ಪ್ರತಿಯೊಂದು ಸಮಾಜದಲ್ಲೂ ಎಲ್ಲರೂ ಪ್ರಮುಖ ಸಂಪನ್ಮೂಲಗಳಾದ ಹಣ , ಆಸ್ತಿ , ಶಿಕ್ಷಣ , ಆರೋಗ್ಯ ಮತ್ತು ಅಧಿಕಾರವನ್ನು ಸಮಾನವಾಗಿ ಹೊಂದಿರುವುದಿಲ್ಲ . ಸಮಾಜದಲ್ಲಿರುವ ಈ ವ್ಯತ್ಯಾಸವನ್ನು ( ಅಂದರೆ ಕೆಲವರು ಅತಿ ಹೆಚ್ಚಿನ ಅವಕಾಶಗಳನ್ನು ಪಡೆದಿದ್ದರೆ ಇನ್ನು ಕೆಲವರು ಕಡಿಮೆ ಅವಕಾಶವನ್ನು ಪಡೆದಿರುತ್ತಾರೆ ) ಸಾಮಾಜಿಕ ಅಸಮಾನತೆ ಎನ್ನುತ್ತಾರೆ .

17. ಜಾತಿಯ ಒಂದು ವ್ಯಾಖ್ಯೆಯನ್ನು ತಿಳಿಸಿ .

‘ ಜಾತಿ’ಯನ್ನು ಅನೇಕರು ಅನೇಕ ರೀತಿಯಲ್ಲಿ ವ್ಯಾಖಿಸಿದ್ದಾರೆ . ಅವರಲ್ಲಿ ಪ್ರಮುಖರು ಹರ್ಬಟ್್ರ ರಿಸ್ತೇ , ಎಸ್.ವಿ. ಕೇತ್ಕರ್ , ಎಸ್.ಸಿ.ದುಬೆ ಮತ್ತು ಎಂ.ಎನ್ . ಶ್ರೀನಿವಾಸ್ , ಹರ್ಬಟ್್ರ ರಿಸ್ತೇಯವರ ಪ್ರಕಾರ ಜಾತಿ ಎಂಬುದು ಸಾಮಾನ್ಯ ಹೆಸರು , ಪುರಾಣ ಪುರುಷನೊಬ್ಬನ ಮೂಲವುಳ್ಳ ವಂಶಾವಳಿಯ ಆಧಾರ , ಒಂದೇ ವೃತ್ತಿಯನ್ನು ಕೈಗೊಳ್ಳುವ ಏಕರೂಪಿ ಸಮುದಾಯ ‘ ಎಂದಿದ್ದಾರೆ .

18. ಅಸ್ಪೃಶ್ಯತೆ ಯಾವುದಾದರೂ ಎರಡು ದೌರ್ಬಲ್ಯಗಳನ್ನು ತಿಳಿಸಿ .

ಪರಿಶಿಷ್ಟ ಜಾತಿಯವರ ದೌರ್ಬಲ್ಯಗಳನ್ನು ಪ್ರಮುಖವಾಗಿ ಮೂರು ಭಾಗವಾಗಿ ವರ್ಗಿಕರಿಸಿದ್ದಾರೆ . ಅವುಗಳು

( i ) ಸಾಮಾಜಿಕ ದೌರ್ಬಲ್ಯಗಳು ( Social disabilities )

( ii ) ಆರ್ಥಿಕ ದೌರ್ಬಲ್ಯಗಳು ( Economic disabilities ) ( iii ) ಧಾರ್ಮಿಕ ದೌರ್ಬಲ್ಯಗಳು ( Religious disabilities )

1 ) ಸಾರ್ವಜನಿಕ ಸೌಲಭ್ಯಗಳಾದ ಬಾವಿಗಳು , ಶಾಲೆಗಳು ಮತ್ತು ರಸ್ತೆಗಳಿಗೆ ಪ್ರವೇಶ ನಿರಾಕರಣೆ ಅಥವಾ ಸೀಮಿತ ಅವಕಾಶಗಳು .

2 ) ಉನ್ನತ ಜಾತಿಯವರ ಮನೆಗಳ ಹತ್ತಿರದ ರಸ್ತೆಗಳಲ್ಲಿ ಅವರಿಗೆ ಸಂಚಾರ ನಿಷಿದ್ಧವಾಗಿತ್ತು .

19 , ಸ್ಟಾಂಗೀಕರಣದ ನೀತಿಯ ಅರ್ಥವೇನು ?

ಠಕ್ಕರ್ ಬಾಪಾ , ಜಿ.ಎಸ್.ಘುರ್ಯೆ , ಕೆಲವು ಸ್ವಯಂ ಸೇವಾ ಸಂಘಟನೆಗಳು ಮತ್ತು ಕ್ರಿಶ್ಚಿಯನ್ ಮಿಶನರಿಗಳು ಸ್ವಾಂಗೀಕರಣ ನೀತಿಯ ಪ್ರತಿಪಾದಕರಾಗಿದ್ದಾರೆ . ಬುಡಕಟ್ಟು ಸಮೂಹಗಳು ಕ್ರೈಸ್ತ ಅಥವಾ ಹಿಂದೂ ಧರ್ಮದೊಂದಿಗೆ ಸ್ವಾಂಗೀಕರಣಗೊಳ್ಳಬೇಕೆನ್ನುವುದು ಈ ನೀತಿಯ ಪ್ರಮುಖ ಅಂಶವಾಗಿದೆ . ಠಕ್ಕರ್ ಬಾಪಾರವರ ಪ್ರಕಾರ ಹೆಚ್ಚು ಮುಂದುವರಿದ ಜನರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಮಾತ್ರ ಬುಡಕಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದಾಗಿದೆ . ಬುಡಕಟ್ಟು ಸಮೂಹದವರು ಮುಂದುವರಿದ ಸಮುದಾಯಗಳ ಭಾಗವಾಗುವುದು ಹಾಗೂ ಅವರಿಗೆ ದೊರೆತ ಸೌಲಭ್ಯಗಳ ಸಮಾನ ಪಾಲು ಪಡೆದು ಸಾಮಾಜಿಕ , ರಾಜಕೀಯ ಜೀವನದಲ್ಲೂ ಸಮಾನತೆ ಸಾಧಿಸಬಹುದು ಎಂಬುದು ಅವರ ಅಭಿಪ್ರಾಯವಾಗಿದೆ .

20. ಜಾತಿ ವ್ಯವಸ್ಥೆಯಲ್ಲಾದ ಎರಡು ಬದಲಾವಣೆಗಳನ್ನು ತಿಳಿಸಿ .

ಜಾತಿ ವ್ಯವಸ್ಥೆಯಲ್ಲಾದ ಎರಡು ಬದಲಾವಣೆಗಳು ಯಾವುವೆಂದರೆ ಸ್ವಾತಂತ್ರ್ಯಪೂರ್ವದಲ್ಲಿ ಉಂಟಾದ ಬದಲಾವಣೆಗಳು , ಆಗ ಬ್ರಿಟಿಷರ ಆಳ್ವಿಕೆಯಿಂದ ಜಾತಿ ವ್ಯವಸ್ಥೆಯಲ್ಲಿ ಕೂಡ ಬದಲಾವಣೆಯಾಯಿತು . ಅವುಗಳು .

i ) ಸಾರ್ವತ್ರಿಕ ಕಾನೂನು ವ್ಯವಸ್ಥೆಯ ಪರಿಚಯ .

ii ) ಸಮಾಜ ಸುಧಾರಣಾ ಚಳುವಳಿಗಳ ಪ್ರಭಾವ ಇತ್ಯಾದಿಗಳು .

21. ಯಾವುದಾದರೂ ಎರಡು ಸಮಾಜ ಸುಧಾರಣಾ ಆಂದೋಲನಗಳನ್ನು ತಿಳಿಸಿ .

ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಸಮಾಜ ಸುಧಾರಣಾ ಚಳುವಳಿಗಳು ಜಾತಿ ವ್ಯವಸ್ಥೆಯಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ತಂದವು . ವರ್ಗರಹಿತವಾದ ಮತ್ತು ಜಾತಿಮುಕ್ತವಾದ ಸಮಾಜವನ್ನು ಸ್ಥಾಪಿಸುವ ಗುರಿಯನ್ನು ಹೊ ೦ ದಿತ್ತು . ಅವುಗಳಲ್ಲಿ ಪ್ರಮುಖವಾದ ಆಂದೋಲನಗಳೆಂದರೆ

ಎ ) ಬ್ರಹ್ಮ ಸಮಾಜ ಚಳುವಳಿ

ಬಿ ) ಪ್ರಾರ್ಥನಾ ಸಮಾಜ

ಸಿ ) ಆರ್ಯ ಸಮಾಜ

ಡಿ ) ರಾಮಕೃಷ್ಣ ಮಿಷನ್

ಇ ) ಅನಿಬೆಸೆಂಟರ ಥಿಯಾಸಫಿಕಲ್ ಸೊಸೈಟಿ

ಎಫ್ ) ಮಹರ್ಷಿ ಅರವಿಂದ ಘೋಷರ ಡಿವೈನ್‌ ಲೈಫ್ ಸೊಸೈಟಿ ಇತ್ಯಾದಿಗಳು .

22. ಸಾಮಾಜಿಕ ಪ್ರತ್ಯೇಕತೆ ( ಹೊರಗುಳಿಯುವಿಕೆ ) ಎಂದರೇನು ?

ವ್ಯಕ್ತಿಗಳು ಸಮಾಜದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿಕೆಯನ್ನು ನಿರ್ಬಂಧಿಸುವ ರೀತಿಯನ್ನು ಸಾಮಾಜಿಕವಾಗಿ ಹೊರಗುಳಿಯುವಿಕೆ ಅಥವ ಸಾಮಾಜಿಕ ಪ್ರತ್ಯೇಕತೆ ಎನ್ನುತ್ತಾರೆ . ಕೆಲವು ವ್ಯಕ್ತಿಗಳಿಗೆ ಅಥವಾ ಸಮೂಹಗಳಿಗೆ , ಬಹು ಸಂಖ್ಯಾತರಿಗೆ ದೊರೆಯುವಂತಹ ಕೆಲವು ಅವಕಾಶಗಳನ್ನು ಲಭಿಸದಂತೆ ಮಾಡುವುದು . ಉದಾಹರಣೆಗೆ ಮೇಲ್ದಾತಿಯ ಹಿಂದೂಗಳು ದಲಿತರಿಗೆ ದೇವಾಲಯಗಳ ಪ್ರವೇಶವನ್ನು ನಿರ್ಬಂಧಿಸಿದ್ದರು . ಅದೇ ರೀತಿ ಕೆಲಸ ದೊರಕಿಸಿಕೊಳ್ಳುವಲ್ಲಿ ವಿಫಲತೆ , ಹಲವು ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಮಾಡುವುದು ಇವೆಲ್ಲಾ ಸಾಮಾಜಿಕ ಹೊರಗುಳಿಸುವಿಕೆಯ ಫಲಿತಾಂಶ . ಇದನ್ನು ಸಾಮಾಜಿಕ ಪ್ರತ್ಯೇಕತೆ ಎನ್ನುತ್ತಾರೆ .

23. ಸಾಮಾಜಿಕ ಒಳಗೊಳ್ಳುವಿಕೆ ಎಂದರೇನು ?

ಸಾಮಾಜಿಕ ಒಳಗೊಳ್ಳುವಿಕೆ ಎಂದರೆ ಎಲ್ಲರೂ ಸಾಮಾಜಿಕ ಸೌಲಭ್ಯಗಳನ್ನು ಅನುಭವಿಸುವುದು . ಎಲ್ಲಾ ಹಕ್ಕುಗಳು ಮತ್ತು ಕರ್ತವ್ಯಗಳಲ್ಲಿ ಸಹಭಾಗಿತ್ವ . ಶಿಕ್ಷಣ ಮತ್ತು ಕೆಲಸಗಳಿಗೆ ಮುಕ್ತ ಅವಕಾಶ , ಯಾವ ನಿರ್ಬಂಧವೂ ಇಲ್ಲದಿರುವುದು ಮತ್ತು ಸಾಮಾಜಿಕ ಹೊರಗುಳಿಯುವಿಕೆ ತದ್ವಿರುದ್ಧವಾದುದು ಎಂಬುದಾಗಿ ಅನ್ವಯಿಸಿ , ಅರ್ಥೈಸ ಬಹುದಾಗಿದೆ . ಇನ್ನೊಂದು ವಿಧದಲ್ಲಿ ಹೇಳುವುದಾದರೆ ಅಸಮಾನತೆಯಿಲ್ಲದೆ ಸಮಾನವಾಗಿರುವುದು .

24. ಜಾತಿ ವ್ಯವಸ್ಥೆಯ ಬದಲಾವಣೆಗೆ ಕಾರಣವಾದ ಎರಡು ಅಂಶಗಳನ್ನು ತಿಳಿಸಿ .

ಜಾತಿ ವ್ಯವಸ್ಥೆಯ ಬದಲಾವಣೆಗೆ ಅನೇಕ ಅಂಶಗಳು ಕಾರಣವಾಗಿವೆ . ಅವುಗಳಲ್ಲಿ ಪ್ರಮುಖವಾದ ಎರಡು ಅಂಶಗಳು ಹೀಗಿವೆ :

( i ) ಸಾರ್ವತ್ರಿಕ ಕಾನೂನು ವ್ಯವಸ್ಥೆಯ ಪರಿಚಯ : ಏಕರೂಪದ ನಾಗರಿಕ ಕಾನೂನುಗಳ ಜಾರಿಯಿಂದಾಗಿ ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂಬ ನೀತಿಯನ್ನು ಅಳವಡಿಸಿಕೊಂಡಿತು .

( ii ) ಸಮಾಜ ಸುಧಾರಣಾ ಚಳುವಳಿಗಳ ಪ್ರಭಾವ : ಸಮಾಜ ಸುಧಾರಕರು ಜಾತಿ ಮುಕ್ತವಾದ ಹಾಗೂ ವರ್ಗರಹಿತವಾದ ಸಮಾಜವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದರಿಂದ ಅಸಮಾನತೆಗಳನ್ನು ವಿರೋಧಿಸುತ್ತಿತ್ತು .

25. ಪ್ರಬಲ ಜಾತಿಯ ಎರಡು ನಿರ್ಧಾರಕ ಅಂಶಗಳನ್ನು ತಿಳಿಸಿ .

ಪ್ರಬಲ ಜಾತಿಯ ಎರಡು ನಿರ್ಧಾರಕ ಅಂಶಗಳು ಎಂ.ಎಸ್ . ಶ್ರೀನಿವಾಸರು ಹೇಳುವಂತೆ ಇವರು ಇತರ ಜಾತಿಗಳಿಗಿಂತ ಸಂಖ್ಯಾತ್ಮಕ ಬಲ ಹೊಂದಿರುವ , ಆರ್ಥಿಕ ಹಾಗೂ ರಾಜಕೀಯ ಅಧಿಕಾರ ಹೊಂದಿರುವ ಮತ್ತು ಸ್ಥಳೀಯ ಜಾತಿ ಏಣಿ ಶ್ರೇಣಿಯಲ್ಲಿ ಉನ್ನತ ಧಾರ್ಮಿಕ ಅಂತಸ್ತನ್ನು ಹೊಂದಿರುವ ಪ್ರಬಲ ಜಾತಿಯಾಗಿದೆ .

26. ಪರಿಶಿಷ್ಟ ಜಾತಿಯವರ ಎರಡು ಸಮಸ್ಯೆಗಳನ್ನು ತಿಳಿಸಿ .

ಪರಿಶಿಷ್ಟ ಜಾತಿಯವರ ಸಮಸ್ಯೆಗಳು ಹಲವಾರು . ಅವುಗಳಲ್ಲಿ

( i ) ಸಾಮಾಜಿಕ ಸಮಸ್ಯೆಗಳು

( ii ) ಆರ್ಥಿಕ ಸಮಸ್ಯೆಗಳು

( ii ) ಧಾರ್ಮಿಕ ಸಮಸ್ಯೆಗಳು

ಅ ) ಸಾರ್ವಜನಿಕ ಸೌಲಭ್ಯಗಳಾದ ಬಾವಿಗಳು , ಶಾಲೆಗಳು ಮತ್ತು ರಸ್ತೆಗಳಿಗೆ ಪ್ರವೇಶ ನಿರಾಕರಣೆ ಅಥವಾ ಸೀಮಿತ ಅವಕಾಶಗಳು .

ಆ ) ಪರಿಶಿಷ್ಟ ಜಾತಿಯವರನ್ನು ಅಸ್ಪೃಶ್ಯರೆಂದು ಪರಿಗಣಿಸಿ , ಅವರಿಗೆ ವೇದಗಳ ಕಲಿಕೆಯನ್ನು ನಿಷಿದ್ಧಗೊಳಿಸಿತ್ತು ಹಾಗೂ ಅವರು ಸನ್ಯಾಸತ್ವವನ್ನು ಸ್ವೀಕರಿಸುವಂತಿರಲಿಲ್ಲ .

27. ಬುಡಕಟ್ಟು ಜನರ ಮೂರು ವಲಯಗಳನ್ನು ತಿಳಿಸಿ .

ಬುಡಕಟ್ಟು ಜನಾಂಗದವರು ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ . ಭಾರತದ ಉದ್ದಗಲಕ್ಕೂ ಪಸರಿಸಿದ್ದಾರೆ . ಭಾರತೀಯ ಬುಡಕಟ್ಟು ಸಮೂಹವನ್ನು ಮೂರು ಕ್ಷೇತ್ರೀಯ ವಲಯಗಳಲ್ಲಿ ವರ್ಗಿಕರಿಸಿದ್ದಾರೆ . ಅವುಗಳು –

( i ) ಉತ್ತರ ಹಾಗೂ ಈಶಾನ್ಯ ವಲಯ

( ii ) ಮಧ್ಯ ವಲಯ

( iii ) ದಕ್ಷಿಣ ವಲಯ

28. ಭಾರತೀಯ ಬುಡಕಟ್ಟು ಜನರ ಯಾವುದಾದರೂ ಎರಡು ಸಮಸ್ಯೆಗಳನ್ನು ತಿಳಿಸಿ .

ಭಾರತದ ಬುಡಕಟ್ಟು ಸಮೂಹಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಎರಡು ಸಮಸ್ಯೆಗಳು ಹೀಗಿವೆ .

(i) ಪ್ರಮುಖ ವಾಹಿನಿಯಿಂದ ಪ್ರತ್ಯೇಕವಾಗಿದ್ದುದರಿಂದ ಅವರಿಗೆ ಪ್ರಗತಿಯ ಅವಕಾಶಗಳು ದೊರೆಯದೆ ಸಮಸ್ಯೆಯಾಯಿತು .

( ii ) ಬುಡಕಟ್ಟು ಜನರ ಭೂಮಿ ಅನ್ಯರಿಗೆ ಹಸ್ತಾಂತರವಾದ ಸಮಸ್ಯೆ . ಇತ್ಯಾದಿ .

29 , ಬುಡಕಟ್ಟು ಕಲ್ಯಾಣದ ಮೂರು ದೃಷ್ಟಿಕೋನಗಳನ್ನು ತಿಳಿಸಿ.

ಬುಡಕಟ್ಟು ಜನರ ಸಮಸ್ಯೆಗಳನ್ನು ಮೂರು ದೃಷ್ಟಿಕೋನಗಳ ಅನ್ವಯಿಕೆಯ ಮೂಲಕ ಬಗೆಹರಿಸುವ ಯತ್ನವನ್ನು ಮಾಡಲಾಗಿದೆ . ಆ ಮೂರು ದೃಷ್ಟಿಕೋನಗಳು

( i ) ಪ್ರತ್ಯೇಕತೆಯ ನೀತಿ

( ii ) ಸ್ವಾಂಗೀಕರಣ ನೀತಿ ಮತ್ತು

( iii ) ಐಕ್ಯತೆಯ ನೀತಿ

30. ಹಿಂದುಳಿದಿರುವಿಕೆಯನ್ನು ನಿರ್ಧರಿಸುವ ಎರಡು ಮಾನದಂಡಗಳನ್ನು ತಿಳಿಸಿ .

ಹಿಂದುಳಿದಿರುವಿಕೆಯನ್ನು ಗುರ್ತಿಸಲು ಹಿಂದುಳಿದ ವರ್ಗಗಳ ಆಯೋಗವು ಕೆಳಕಂಡ ಮಾನದಂಡವನ್ನು ಬಳಸಿತ್ತು ಅವು –

( i ) ಹಿಂದೂ ಸಮಾಜದ ಸಾಂಪ್ರದಾಯಿಕ ಜಾತಿ ಏಣಿಶ್ರೇಣಿಯಲ್ಲಿ ಕೆಳಮಟ್ಟದ ಸ್ಥಾನಮಾನ ಮತ್ತು

( ii ) ಸರ್ಕಾರಿ ಸೇವೆಗಳಲ್ಲಿ ಪ್ರಾತಿನಿಧ್ಯವಿಲ್ಲದಿರುವಿಕೆ ಅಥವಾ ಕಡಿಮೆ ಪ್ರಾತಿನಿಧ್ಯ .

31. ಲಿಂಗ ಮತ್ತು ಲಿಂಗತ್ವವನ್ನು ವ್ಯಾಖ್ಯಿಸಿ .

ಲಿಂಗವು ಜೈವಿಕವಾದುದು ಆದರೆ ಲಿಂಗತ್ವವು ಸಾಮಾಜಿಕವಾಗಿ ಹಾಗೂ ವಾನ ಸಿಕವಾಗಿ ಜೈವಿಕವಾದ ಮತ್ತು ನಿರ್ಧರಿತವಾಗುವಂಥದು . ಶಾರೀರಿಕವಾದ ಸ್ಥಿತಿಗಳು ಸ್ತ್ರೀ ಅಥವಾ ಪುರುಷ ಲಿಂಗವನ್ನು ನಿರ್ಧರಿಸುತ್ತವೆ .

ಲಿಂಗತ್ವವು ಪುರುಷತ್ವ ಮತ್ತು ಸ್ತ್ರೀತ್ವದ ಲಕ್ಷಣಗಳು ಮತ್ತು ಪಾತ್ರಗಳನ್ನು ಕುರಿತಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಗ್ರಹಿಕೆಗಳನ್ನು ಆಧರಿಸಿದೆ .

32. ಟೈಫೆಡ್ ( TRIFED ) ನ್ನು ವಿಸ್ತರಿಸಿ .

TRIFED ಎಂದರೆ The Tribal Co – operative Marketing development Federation of India Ltd. ( Limited ) , ಬುಡಕಟ್ಟು ಸಮೂಹಗಳ ಉತ್ಪನ್ನಗಳ ಮಾರಾಟಕ್ಕಾಗಿ ‘ ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ’ವನ್ನು ಸ್ಥಾಪಿಸಲಾಯಿತು .

III . ಐದು ಅಂಕಗಳ ಪ್ರಶ್ನೆಗಳು :

33. ಸಾಮಾಜಿಕ ಅಸಮಾನತೆ ಮತ್ತು ಸಾಮಾಜಿಕ ಪ್ರತ್ಯೇಕತೆಯನ್ನು ( ಹೊರಗುಳಿಯುವಿಕೆ ) ವಿವರಿಸಿ .

ಸಾಮಾಜಿಕ ಸಂಪನ್ಮೂಲಗಳನ್ನು ಪಡೆಯಬಹುದಾದ ಮಾರ್ಗಗಳ ಅಸಮಾನ ಹಂಚಿಕೆಯನ್ನು ಸಾಮಾನ್ಯವಾಗಿ ಸಾಮಾಜಿಕ ಅಸಮಾನತೆ ಎನ್ನುತ್ತಾರೆ . ಪ್ರತಿಯೊಂದು ಸಮಾಜದಲ್ಲೂ ಎಲ್ಲರೂ ಪ್ರಮುಖ ಸಂಪನ್ಮೂಲಗಳಾದ ಹಣ , ಆಸ್ತಿ , ಶಿಕ್ಷಣ , ಆರೋಗ್ಯ ಮತ್ತು ಅಧಿಕಾರವನ್ನು ಸಮಾನವಾಗಿ ಹೊಂದಿರುವುದಿಲ್ಲ . ಸಮಾಜದಲ್ಲಿರುವ ಈ ವ್ಯತ್ಯಾಸವನ್ನು ( ಅಂದರೆ ಕೆಲವರು ಅತಿ ಹೆಚ್ಚಿನ ಅವಕಾಶಗಳನ್ನು ಪಡೆದಿದ್ದರೆ ಇನ್ನು ಕೆಲವರು ಕಡಿಮೆ ಅವಕಾಶವನ್ನು ಪಡೆದಿರುತ್ತಾರೆ ) ಸಾಮಾಜಿಕ ಅಸಮಾನತೆ ಎನ್ನುತ್ತಾರೆ . ವ್ಯಕ್ತಿಗಳು ಸಮಾಜದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿಕೆಯನ್ನು ನಿರ್ಬಂಧಿಸುವ ರೀತಿಯನ್ನು ಸಾಮಾಜಿಕವಾಗಿ ಹೊರಗುಳಿಯುವಿಕೆ ಅಥವ ಸಾಮಾಜಿಕ ಪ್ರತ್ಯೇಕತೆ ಎನ್ನುತ್ತಾರೆ . ಕೆಲವು ವ್ಯಕ್ತಿಗಳಿಗೆ ಅಥವಾ ಸಮೂಹಗಳಿಗೆ , ಬಹು ಸಂಖ್ಯಾತರಿಗೆ ದೊರೆಯುವಂತಹ ಕೆಲವು ಅವಕಾಶಗಳನ್ನು ಲಭಿಸದಂತೆ ಮಾಡುವುದು .

ಉದಾಹರಣೆಗೆ ಮೇಲ್ದಾತಿಯ ಹಿಂದೂಗಳು ದಲಿತರಿಗೆ ದೇವಾಲಯಗಳ ಪ್ರವೇಶವನ್ನು ನಿರ್ಬಂಧಿಸಿದ್ದರು . ಅದೇ ರೀತಿ ಕೆಲಸ ದೊರಕಿಸಿಕೊಳ್ಳುವಲ್ಲಿ ವಿಫಲತೆ , ಹಲವು ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಮಾಡುವುದು ಇವೆಲ್ಲಾ ಸಾಮಾಜಿಕ ಹೊರಗುಳಿಸುವಿಕೆಯ ಫಲಿತಾಂಶ . ಇದನ್ನು ಸಾಮಾಜಿಕ ಪ್ರತ್ಯೇಕತೆ ಎನ್ನುತ್ತಾರೆ .

ಸಾಮಾಜಿಕ ಅಸಮಾನತೆಯು ವ್ಯಕ್ತಿಗಳ ಆಂತರಿಕ ವ್ಯತ್ಯಾಸಗಳನ್ನು ಪ್ರತಿನಿಧಿಸುತ್ತದೆ . ಉದಾಹರಣೆಗೆ ವ್ಯಕ್ತಿಗಳ ವಿಭಿನ್ನ ಸಾಮರ್ಥ್ಯಗಳು ಮತ್ತು ಪ್ರಯತ್ನಗಳು . ಕೆಲವರು ಅಸಾಮಾನ್ಯ ಬುದ್ಧಿಮತ್ತೆ ಅಥವಾ ಪ್ರತಿಭೆ ಹೊಂದಿದವರಾಗಿರ ಬಹುದು ಅಥವಾ ತಮ್ಮ ಸಂಪತ್ತು ಮತ್ತು ಅಂತಸ್ತುಗಳನ್ನು ಕಠಿಣ ಪರಿಶ್ರಮದಿಂದ ಪಡೆದಿರಬಹುದು . ಸಾಮಾಜಿಕ ಅಸಮಾನತೆಯು ಆಂತರಿಕವಾದ ಅಥವಾ ನೈಸರ್ಗಿಕವಾದ ವ್ಯತ್ಯಾಸಗಳಿಂದ ಉಂಟಾಗುವಂಥದ್ದಲ್ಲ ಅದನ್ನು ಸಮಾಜವೇ ನಿರ್ಮಿಸುತ್ತದೆ . ಲಿಂಗ , ಧರ್ಮ , ಜನಾಂಗ , ಭಾಷೆ , ಜಾತಿ ಮತ್ತು ದೌರ್ಬಲ್ಯಗಳ ಆಧಾರದ ಮೇಲೆ ಸಾಮಾನ್ಯವಾಗಿ ಜನರು ತಾರತಮ್ಯವನ್ನು ಮತ್ತು ಹೊರಗುಳಿಯುವಿಕೆಯನ್ನು ಎದುರಿಸುತ್ತಾರೆ . ಸಾಮಾಜಿಕ ಹೊರಗುಳಿಯುವಿಕೆಯು ಅನೈಚ್ಛಿಕವಾದುದಾಗಿದೆ . ಅಂದರೆ ಹೊರಗೂಳಿಯಲ್ಪಟ್ಟವರ ಇಚ್ಛೆಗಳನ್ನು ಪರಿಗಣಿಸದೆ ಅವರನ್ನು ಹೊರಗುಳಿಸಲಾಗುತ್ತದೆ . ಅವರಿಗುಂಟಾದ ಸಾಮಾಜಿಕ ತಾರತಮ್ಯದ ಅನುಭವಗಳು ಮತ್ತು ಅವಮಾನಕರ ವರ್ತನೆಗಳು ಅವರನ್ನು ಒಳಗೊಳ್ಳುವ ಪ್ರಯತ್ನ ಮಾಡದಂತೆ ಮಾಡುತ್ತವೆ .

ಸಾಮಾಜಿಕ ಹೊರಗಿಡುವಿಕೆಯಿಂದ ಅಂತಹವರು ಅವಕಾಶಗಳಿಂದ ವಂಚಿತರಾಗುತ್ತಾರೆ . ಮೂಲಭೂತ ಅವಶ್ಯಕತೆಗಳಾದ ಮತ್ತು ಸಾಮಾಜಿಕ ಬದುಕಿಗೆ ತೀರಾ ಅಗತ್ಯವಾಗಿರುವ ಶಿಕ್ಷಣ , ಆರೋಗ್ಯ , ಸಂಪರ್ಕ ಸಾರಿಗೆ , ಭದ್ರತೆ , ಕಾನೂನಿನ ರಕ್ಷಣೆ ಮುಂತಾದವುಗಳೂ ಸಹ ಸಮರ್ಪಕವಾಗಿ ದೊರೆಯುವುದಿಲ್ಲ . ಈ ಕ್ರಿಯೆ ಅನುದ್ದೇಶದಿಂದ ಮತ್ತು ಆಕಸ್ಮಿಕವಾಗಿ ಆಗಿರುವುದಲ್ಲ . ಕೆಲವು ಗುಂಪು ಅಥವಾ ಸಮೂಹಗಳಿಗೆ ಅವರ ಸಾಮಾಜಿಕ ಹಕ್ಕನ್ನು ನಿರಾಕರಿಸುವುದಕ್ಕಾಗಿ ಎಂಬಂತೆ ಅದು ಅಂತನಿರ್ಮಿತ ವ್ಯವಸ್ಥೆಯಾಗಿ ಮಾರ್ಪಟ್ಟಿದೆ . ಅವರ ಇಷ್ಟಕ್ಕೆ ವಿರುದ್ಧವಾಗಿ ಹಲವಾರು ಬಗೆಯ ಅನರ್ಹತೆಗಳನ್ನು ಅವರ ಮೇಲೆ ಹೊರಿಸಲಾಗಿದೆ . ಸಾಮಾಜಿಕ ಸಮಾನತೆಯ ನಿರಾಕರಣೆ ಅಥವಾ ಅಸಮಾನತೆಯು ಕೆಲವು ಗುಂಪುಗಳನ್ನು ಸಾಮಾಜಿಕವಾಗಿ ಹೊರಗುಳಿಸುತ್ತಾರೆ . ಈ ರೀತಿಯ ಕ್ರಮ

ಕೆಲವು ವ್ಯಕ್ತಿಗಳಿಗೆ ಅಥವಾ ಸಮೂಹಕ್ಕೆ ಒಂದಲ್ಲ ಒಂದು ಹೆಸರಿನಲ್ಲಿ ಸಾಮಾಜಿಕ ಹಕ್ಕುಗಳ ನಿರಾಕರಣೆ ಮಾಡಿ ಅವರನ್ನು ಸಮಾಜದಿಂದ ಹೊರಗುಳಿಸುವ ಪರಿಪಾಠ ನಡೆದು ಬಂದಿದೆ . ಇದು ಭಾರತದಲ್ಲಿ ಮಾತ್ರವಲ್ಲದೆ ಅನೇಕ ಪಾಶ್ಚಾತ್ಯ ಮತ್ತು ಪೌರ್ವಾತ್ಯ ನಾಗರಿಕತೆಗಳಲ್ಲಿ ನೋಡಬಹುದು .

34. ಬ್ರಿಟಿಷರ ಅವಧಿಯಲ್ಲಿ ಜಾತಿವ್ಯವಸ್ಥೆಯಲ್ಲಿ ಉಂಟಾದ ಪರಿವರ್ತನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

ಬ್ರಿಟಿಷರ ಅವಧಿಯಲ್ಲಿ ಜಾತಿ ವ್ಯವಸ್ಥೆಯಲ್ಲಿ ಉಂಟಾದ ಪರಿವರ್ತನೆಗಳು ಹೀಗಿವೆ . ಬ್ರಿಟಿಷರು ಭಾರತಕ್ಕೆ ತಮ್ಮೊಂದಿಗೆ ತಮ್ಮದೇ ಆದ ಸಾಂಪ್ರದಾಯಿಕ ನಮೂನೆ ಮತ್ತು ಸಂಸ್ಕೃತಿಯನ್ನು ತಂದರು . ಅವರು ಪರಿಚಯಿಸಿದ ವಿವಿಧ ನೀತಿಗಳಿಂದಾಗಿ ವ್ಯವಸ್ಥೆಯಲ್ಲಿ ಅನೇಕ ರೀತಿಯ ಬದಲಾವಣೆ ಕಂಡುಬಂದಿತು . ಅದನ್ನು ಹೀಗೆ ವಿಶ್ಲೇಷಿಸಬಹುದಾಗಿದೆ .

1. ಸಾರ್ವತ್ರಿಕ ಕಾನೂನು ವ್ಯವಸ್ಥೆಯ ಪರಿಚಯ .

2. ಸಮಾಜ ಸುಧಾರಣಾ ಚಳುವಳಿಗಳ ಪ್ರಭಾವ .

3. ಆಂಗ್ಲ ಶಿಕ್ಷಣದ ಪ್ರಭಾವ .

4. ಹೊಸ ಸಾಮಾಜಿಕ ಸಂಘಟನೆಗಳ ಪ್ರಭಾವ

5 . ಸ್ವಾತಂತ್ರ್ಯ ಚಳುವಳಿಯ ಪ್ರಭಾವ .

6. ಔದ್ಯೋಗೀಕರಣದ ಮತ್ತು ನಗರೀಕರಣದ ಪ್ರಭಾವ .

1. ಸಾರ್ವತ್ರಿಕ ಕಾನೂನು ವ್ಯವಸ್ಥೆಯ ಪರಿಚಯ . ಏಕರೂಪದ ನಾಗರಿಕ ಕಾನೂನುಗಳ ಜಾರಿಯಿಂದಾಗಿ ಜಾತಿ ಪಂಚಾಯಿತಿಗಳ ಪ್ರಾಬಲ್ಯವು ದುರ್ಬಲಗೊಳ್ಳತೊಡಗಿತು . ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬ ನೀತಿ ಜಾರಿಗೆ ಬಂದಿತು . ಬ್ರಿಟಿಷ್ ನ್ಯಾಯಾಲಯಗಳು ಜಾತಿ ಪಂಚಾಯಿತಿಯ ಅಧಿಕಾರವನ್ನು ಪ್ರಶ್ನಿಸತೊಡಗಿತು . ಇದರಿಂದ ಜಾತಿ ಪಂಚಾಯಿತಿಗಳು ತಮ್ಮ ಮೊದಲಿನ ಸ್ವರೂಪವನ್ನು ಕಳೆದುಕೊಳ್ಳತೊಡಗಿದವು . ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಕೆಲವು ಪ್ರಮುಖ ಕಾನೂನುಗಳೆಂದರೆ

ಎ ) ಜಾತಿ ದೌರ್ಬಲ್ಯಗಳ ನಿವಾರಣಾ ಕಾನೂನು 1850 : ಈ ಕಾನೂನು ಅಸ್ಪೃಶ್ಯತೆಯೂ ಸೇರಿದಂತೆ ಜಾತಿಗೆ ಸಂಬಂಧಿಸಿದ ಕೆಲ ಅನಿಷ್ಠ ಆಚರಣೆಗಳನ್ನು ಮತ್ತು ಕೆಲವು ನಾಗರಿಕ ನಿರ್ಬಂಧಗಳನ್ನು ತೆಗೆದುಹಾಕಿತು .

ಬಿ ) ಹಿಂದೂ ವಿಧವಾ ಪುನರ್‌ವಿವಾಹ ಕಾಯಿದೆ -1856 : ಈ ಕಾನೂನು ವಿಧವೆಯರಿಗೆ ಸಂಬಂಧಿಸಿದಂತೆ ಇದ್ದ ಕೆಲವು ನಿರ್ಬಂಧಗಳನ್ನು ತೆಗೆದು ಹಾಕಿತು ಮತ್ತು ವಿಧವೆಯರು ಮನರ್ ವಿವಾಹವಾಗುವ ಅವಕಾಶವನ್ನು ಕಲ್ಪಿಸಿತು .

ಸಿ ) 1972 ರ ವಿಶೇಷ ವಿವಾಹ ಕಾಯಿದೆ : ವಿವಾಹವನ್ನು ಒಂದು ನಾಗರಿಕ ಕರಾರು ಎಂದು ಪರಿಗಣಿಸಿ , ಅಂತರ್ಜಾತಿ ಮತ್ತು ಅಂತರ್ಧಮೀ್ರಯ ವಿವಾಹವನ್ನು ಕಾನೂನು ಬದ್ಧಗೊಳಿಸಿತು .

ಡಿ ) ಇತರ ಶಾಸನಗಳು ಮತ್ತು ಆಡಳಿತಾತ್ಮಕ ಕ್ರಮಗಳು : ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಮುಕ್ತ ಅವಕಾಶವನ್ನು ನೀಡಬೇಕು . ಯಾವುದೇ ಮಕ್ಕಳಿಗೆ ಪ್ರವೇಶ ನೀಡದಿದ್ದಲ್ಲಿ ಅನುದಾನವನ್ನು ನಿಲ್ಲಿಸಲಾಗುತ್ತದೆ ಎಂದು ಘೋಷಿಸಲಾಯಿತು . ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಲು ಮಾಂಟೆಗೋ – ಚಿಲ್ಡ್ ಫೋರ್ಡ್ ಸುಧಾರಣಾ ಸಮಿತಿಯು ಶೋಷಿತ ವರ್ಗಗಳಿಗೆ ಸ್ಥಳೀಯ ಹಾಗೂ ಶಾಸನಾತ್ಮಕ ಅಂಗಗಳಲ್ಲಿ ವಿಶೇಷ ಪ್ರಾತಿನಿಧ್ಯ ನೀಡುವ ಅವಕಾಶಗಳನ್ನು ಒದಗಿಸಿತು .

2. ಎಲ್ಲಾ ಸಮಾಜ ಸುಧಾರಣಾ ಸಂಘಟನೆಗಳು ಜಾತಿ ನಿರ್ಮೂಲನೆ ಮತ್ತು ಭಾರತೀಯ ಸಮಾಜದ ಪುನರ್ ರಚನೆಯ ಹೊಂದಿದ್ದವು .

3. ಆಂಗ್ಲ ಶಿಕ್ಷಣದ ಪರಿಣಾಮವಾಗಿ ಕೆಳಜಾತಿಯವರು ತಮ್ಮಗೆ ಒದಗಿದ ಹೊಸ ಬಗೆಯ ಉದ್ಯೋಗಾವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಮುಖ್ಯವಾಹಿನಿಗೆ ಬರತೊಡಗಿದರು .

4. ಹೊಸ ಸಾಮಾಜಿಕ ಸಂಘಟನೆಗಳ ಪ್ರಭಾವದಿಂದ ಎಲ್ಲಾ ವರ್ಗದ ಜನರು ಹೊಸ ಬಗೆಯ ಐಕ್ಯತೆಯನ್ನು ಬೆಳೆಸಿಕೊಂಡರು . ಇದರಿಂದ ಜಾತಿಯ ಸ್ಥಾನವು ದುರ್ಬಲಗೊಳ್ಳತೊಡಗಿತು .

5. ಸ್ವಾತಂತ್ರ್ಯ ಚಳುವಳಿಯ ಪ್ರಭಾವದಿಂದ ಜನರಲ್ಲಿ ರಾಷ್ಟ್ರಪ್ರಜ್ಞೆಯ ಭಾವ ಆಳವಾಗಿ ಬೇರೂರಿ ಸಂಘಟಿತರಾಗ ತೊಡಗಿದರು . ಆಗ ಅವರಿಗೆ ಜಾತಿಬೇಧ ಅಡ್ಡವಾಗಲಿಲ್ಲ . ಇದರಿಂದ ಜಾತಿ ಪ್ರಜ್ಞೆ ಕ್ರಮೇಣ ದುರ್ಬಲವಾಗತೊಡಗಿತು .

6. ಔದ್ಯೋಗಿಕರಣ ಮತ್ತು ನಗರೀಕರಣದ ಪ್ರಕ್ರಿಯೆಯಿಂದ ವಿವಿಧ ಜಾತಿಗಳ ಜನರು ಒಟ್ಟಿಗೆ ವಾಸಿಸುವ ಅನಿವಾರ್ಯತೆ ಉಂಟಾಯಿತು . ಸಹಭೋಜನದ ಮೇಲಿದ್ದ ನಿರ್ಬಂಧಗಳು ಕಡಿಮೆಯಾಗತೊಡಗಿದವು . ಕಿಂಗ್‌ ಡೇವಿಸ್‌ರವರ ಅಭಿಪ್ರಾಯದಂತೆ ನಗರಗಳಲ್ಲಿ ಜಾತಿಯ ಆಚರಣೆ ಅಸಾಧ್ಯವಾಗಿ , ಎಲ್ಲರೂ ಒಂದೇ ಎಂಬ ಭಾವನೆ ಮೂಡಲು ಪ್ರಾರಂಭಿಸಿತು . ಈ ರೀತಿ ಬ್ರಿಟಿಷರ ಅವಧಿಯಲ್ಲಿ ಜಾತಿ ವ್ಯವಸ್ಥೆಯಲ್ಲಿ ಪರಿವರ್ತನೆಗಳಾಯಿತು .

35. ಪ್ರಬಲ ಜಾತಿಯ ನಿರ್ಧಾರಕ ಅಂಶಗಳನ್ನು ವಿವರಿಸಿ .

ಎಂ.ಎನ್ . ಶ್ರೀನಿವಾಸ್‌ರವರು ಪರಿಚಯಿಸಿರುವ ‘ ಪ್ರಬಲ ಜಾತಿ’ಯ ಪರಿಕಲ್ಪನೆ ಭಾರತೀಯ ಸಮಾಜದಲ್ಲಿ ಕಂಡುಬರುವ ಜಾತೀಯ ಸಂಬಂಧಗಳಿಗೆ ಅತ್ಯಂತ ಸೂಕ್ತವಾಗಿದೆ . ಭಾರತದ ಸಾಮಾಜಿಕ ವ್ಯವಸ್ಥೆಯ ಚೌಕಟ್ಟಿನಲ್ಲಿ ಕಂಡು ಬರುವ ಎಲ್ಲಾ ಜಾತಿಗಳ ಪಾತ್ರ ಮತ್ತು ಬಲಗಳು ಏಕಪ್ರಕಾರವಾಗಿಲ್ಲ . ಕೆಲವು ಜಾತಿಗಳು ಸಂಘಟಿತವಾಗಿದ್ದರೆ , ಇನ್ನು ಕೆಲವು ಜಾತಿಗಳು ಅಸಂಘಟಿತವಾಗಿವೆ . ಸಂಖ್ಯಾತ್ಮಕ ಬಲ ಹೊಂದಿರುವ , ಆರ್ಥಿಕ ಹಾಗೂ ರಾಜಕೀಯ ಅಧಿಕಾರ ಹೊಂದಿರುವ ಮತ್ತು ಸ್ಥಳೀಯ ಜಾತಿ ಏಣಿಶ್ರೇಣಿಯಲ್ಲಿ ಉನ್ನತ ಧಾರ್ಮಿಕ ಅಂತಸ್ತನ್ನು ಹೊಂದಿರುವ ಜಾತಿಯು ‘ ಪ್ರಬಲ ಜಾತಿ ‘ ಯಾಗಿದೆ .

ಪ್ರಬಲ ಜಾತಿಯ ನಿರ್ಧಾರಕ ಅಂಶಗಳು :

ಎ ) ಸಾಮಾನ್ಯವಾಗಿ ಸಾಕಷ್ಟು ಪ್ರಮಾಣದ ಜಮೀನಿನ ಒಡೆತನ , ಆರ್ಥಿಕ ಮತ್ತು ರಾಜಕೀಯ ಅಧಿಕಾರ ಹೊಂದಿದ ಜಾತಿಯು ಪ್ರಬಲ ಜಾತಿ ಎಂದು ಗುರ್ತಿಸಲ್ಪಡುತ್ತದೆ . ಇಷ್ಟೇ ಅಲ್ಲದೆ ಜಾತಿಯೊಂದರಲ್ಲಿ ಕಂಡುಬರುವ ಸುಶಿಕ್ಷಿತರ ಸಂಖ್ಯೆ , ಉನ್ನತ ಉದ್ಯೋಗಗಳನ್ನು ಹೊಂದಿರುವವರ ಸಂಖ್ಯೆಗಳೂ ಕೂಡ ಜಾತಿಯೊಂದಕ್ಕೆ ಪ್ರಬಲಜಾತಿಯ ಅಂತಸ್ತನ್ನು ನಿರ್ಧರಿಸುವ ಅಂಶಗಳಾಗುತ್ತವೆ . ಗ್ರಾಮವೊಂದರಲ್ಲಿ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಪ್ರಬಲ ಜಾತಿಗಳಿರಬಹುದು ಅಥವಾ ಕಾಲಾನುಕ್ರಮದಲ್ಲಿ ಒಂದು ಪ್ರಬಲ ಜಾತಿಯು ಇನ್ನೊಂದು ಪ್ರಬಲ ಜಾತಿಗೆ ದಾರಿ ಮಾಡಿಕೊಡಬಹುದು .

ಬಿ ) ಪ್ರಾಬಲ್ಯದ ಹಂಚಿಕೆ Distribution of Dominance : ಗ್ರಾಮವೊಂದರಲ್ಲಿ ಪ್ರಾಬಲದ ವಿವಿಧ ಮೂಲಾಂಶಗಳು ವಿವಿಧ ಜಾತಿಯವರಲ್ಲಿ ವಿಭಿನ್ನವಾಗಿ ಹಂಚಿ ಹೋಗಿರಬಹುದು . ಉದಾಹರಣೆಗೆ ಒಂದು ಜಾತಿಯು ಸಂಖ್ಯಾತ್ಮಕ ಪ್ರಾಬಲ್ಯ ಹೊಂದಿದ್ದರೂ ಇನ್ನುಳಿದ ರಾಜಕೀಯ ಅಥವಾ ಆರ್ಥಿಕ ಬಲ ಹೊಂದಿಲ್ಲದಿರಬಹುದು . ಅದೇ ರೀತಿ ಧಾರ್ಮಿಕ ಉನ್ನತ ಅಂತಸ್ತನ್ನು ಹೊಂದಿದ ಜಾತಿಗೆ ಆರ್ಥಿಕ ಸಿರಿತನವಿಲ್ಲದಿರಬಹುದು . ಹಾಗೆಯೇ ಪ್ರಾಬಲ್ಯದ ಒಂದು ಅಂಶವನ್ನು ಹೊಂದಿದ ಜಾತಿಯು ಪ್ರಾಬಲ್ಯದ ಇನ್ನೊಂದು ಅಂಶವನ್ನು ಪಡೆದುಕೊಳ್ಳಲೂ ಕೂಡಾ ಸಮರ್ಥವಾಗಬಹುದು .

ಸಿ ) ಪ್ರಾಬಲ್ಯವು ಸಂಪೂರ್ಣವಾಗಿ ಸ್ಥಳೀಯವಲ್ಲ ( Dominance is not purely a local Phenomenon ) ಎಂ.ಎನ್ . ಶ್ರೀನಿವಾಸರ ಪ್ರಕಾರ ಗ್ರಾಮೀಣ ಭಾರತದ ಪ್ರಾಬಲ್ಯವು ಸಂಪೂರ್ಣವಾಗಿ ಸ್ಥಳೀಯವಲ್ಲ . ನಿರ್ದಿಷ್ಟ ಗ್ರಾಮದಲ್ಲಿ ಜಾತಿಯೊಂದಕ್ಕೆ ಸೇರಿದ ಎರಡು ಅಥವಾ ಮೂರು ಕುಟುಂಬಗಳು ಮಾತ್ರ ಇರಬಹುದಾದರೂ ವಿಶಾಲ ವ್ಯಾಪ್ತಿಯಲ್ಲಿ ಆ ಜಾತಿಯು ನಿರ್ಧಾರಕ ಪ್ರಾಬಲ್ಯ ಹೊಂದಿರಬಹುದು . ಈ ಕುಟುಂಬಗಳ ಸದಸ್ಯರು ವಿಶಾಲ ವ್ಯಾಪ್ತಿಯ ತಮ್ಮ ಜಾತಿಯ ಸದಸ್ಯರೊಂದಿಗೆ ಸಂಪರ್ಕಜಾಲ ಹೊಂದಿರಬಹುದು .

ಡಿ ) ಜಾತಿಯ ಪ್ರಾಬಲ್ಯವನ್ನು ಪ್ರಭಾವಿಸುತ್ತಿರುವ ಹೊಸ ಅಂಶಗಳು ( New Factors affecting Dominance of Caste ) ಎಂ.ಎನ್ . ಶ್ರೀನಿವಾಸರ ಪ್ರಕಾರ ಪಾಶ್ಚಾತ್ಯ ಶಿಕ್ಷಣ , ಆಡಳಿತ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ನಗರ ಮೂಲದ ಆದಾಯಗಳೂ ಕೂಡ ಗ್ರಾಮಗಳ ನಿರ್ದಿಷ್ಟ ಜಾತಿ ಸಮೂಹಗಳ ಘನತೆ ಮತ್ತು ಅಧಿಕಾರಗಳ ಮೇಲೆ ಪ್ರಭಾವ ಬೀರುತ್ತವೆ . ಇವೆಲ್ಲಾ ಪ್ರಬಲ ಜಾತಿಯನ್ನು ನಿರ್ಧರಿಸಲು ಇರುವ ನಿರ್ಧಾರಕ ಅಂಶಗಳು ,

36 , ಬುಡಕಟ್ಟಿನ ಬದಲಾಗುತ್ತಿರುವ ಪರಿಕಲ್ಪನೆಗಳನ್ನು ವಿವರಿಸಿ .

ಬುಡಕಟ್ಟಿನ ಬದಲಾಗುತ್ತಿರುವ ಪರಿಕಲ್ಪನೆಗಳು ( Changing Concert ofTribe ) ಈ ಕೆಳಗಿನ ಅಂಶಗಳು ಬುಡಕಟ್ಟಿನ ಬದಲಾಗುತ್ತಿರುವ ಪರಿಕಲ್ಪನೆಯನ್ನು ನೀಡುತ್ತದೆ .

ಎ ) ಸಮರೂಪಿ , ಸ್ವಾವಲಂಬಿ ಘಟಕವಾಗಿ ಬುಡಕಟ್ಟು ( Tribes as a Homogeneous and Self contained Unit ) ಬುಡಕಟ್ಟು ಜನಾಂಗದವರನ್ನು ದೇಶದ ಮೂಲನಿವಾಸಿಗಳೆಂದು ನಂಬಲಾಗಿದೆ . ಆದ್ದರಿಂದಲೇ ಇವರನ್ನು ‘ ಆದಿವಾಸಿಗಳು ‘ ಎಂದು ಕರೆಯಲಾಗಿದೆ . ವೇದಕಾಲೀನ ಸಾಹಿತ್ಯದಲ್ಲಿ ಭರತ , ಭಿಲ್ , ಕೊಲ್ಲ , ಕಿರಾತ , ಮತ್ತ್ವ , ಕಿನ್ನರ , ನಿಷಾಧ ಎಂಬ ಬುಡಕಟ್ಟುಗಳ ಪ್ರಸ್ತಾಪವಿದೆ . ಬುಡಕಟ್ಟುಗಳು ಸಮರೂಪಿಯಾದ ಮತ್ತು ಸ್ವಾವಲಂಬಿಯಾದ ಘಟಕಗಳಾಗಿದ್ದವು . ಅವುಗಳಲ್ಲಿ ಯಾವುದೇ ತಾರತಮ್ಯಗಳಿರಲಿಲ್ಲ . ಬುಡಕಟ್ಟುಗಳು ದೊಡ್ಡ ಸಾಮ್ರಾಜ್ಯಗಳು , ಗಣರಾಜ್ಯಗಳು ಮತ್ತು ಅರಸೊತ್ತಿಗೆಗಳೊಂದಿಗೆ ಬಾಂಧವ್ಯ ಹೊಂದಿರುತ್ತಿದ್ದರು . ಪ್ರತಿಯೊಂದು ಬುಡಕಟ್ಟೂ ತನ್ನದೇ ಆದ ಆಡಳಿತ ವ್ಯವಸ್ಥೆಯನ್ನು ಹೊಂದಿರುತ್ತಿತ್ತು . ಬುಡಕಟ್ಟು ಸಮಿತಿಗಳು ಶಾಸನಾತ್ಮಕ , ನ್ಯಾಯಸಂಬಂಧಿತ ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು ಹೊಂದಿರುತ್ತಿದ್ದವು .

ಬಿ ) ರಾಜಕೀಯ ವಿಭಾಗವಾಗಿ ಬುಡಕಟ್ಟು ( Tribe as a Political Unit ) ರೋಮನ್ನರಲ್ಲಿ ಬುಡಕಟ್ಟು ಒಂದು ರಾಜಕೀಯ ವಿಭಾಗವಾಗಿತ್ತು . ಹಲವಾರು ಕುಲಗಳನ್ನೊಳಗೊಂಡ ಜಿಲ್ಲೆಗಳು ಸೇರಿದ ಒಂದು ಅತ್ಯುನ್ನತ ರಾಜಕೀಯ ಘಟಕವಾಗಿತ್ತು . ತನ್ನ ಜನರ ಮೇಲೆ ನಿಯಂತ್ರಣ ಹೊಂದಿದ ಕ್ಷೇತ್ರೀಯ ಸಂಘಟನೆಯಾಗಿತ್ತು . ನಿರ್ದಿಷ್ಟ ಬುಡಕಟ್ಟಿನ ಆಡಳಿತವಿರುವ ಬುಡಕಟ್ಟನ್ನು ಆ ಬುಡಕಟ್ಟಿನ ಹೆಸರಿನಿಂದಲೇ ಕರೆಯಲಾಗುತ್ತಿತ್ತು . ಉದಾಹರಣೆಗೆ ಭಾರತ ಎಂಬ ಹೆಸರು ‘ ಭರತ ‘ ಬುಡಕಟ್ಟಿನ ಹೆಸರಿನಿಂದ ಬಂದಿರಬಹುದೆನ್ನಲಾಗಿದೆ . ಅಂತೆಯೇ ಮಿಝೇರಾಂ , ನಾಗಾಲ್ಯಾಂಡ್ , ತ್ರಿಪುರಾ ರಾಜ್ಯಗಳು ಮಿರೊ , ನಾಗಾ ಮತ್ತು ತ್ರಿಪುರಿ ಬುಡಕಟ್ಟುಗಳ ಹೆಸರುಗಳನ್ನು ಅನುಕ್ರಮವಾಗಿ ಪಡೆದಿವೆ .

ಸಿ ) ಒಂದು ಜನಾಂಗವಾಗಿ ಬುಡಕಟ್ಟು ( Tribe as a Race ) : ನಿರ್ದಿಷ್ಟ ಶಾರೀರಕ ಲಕ್ಷಣಗಳುಳ್ಳ ಹಾಗೂ ಒಂದು ಮೂಲದ ಜನರನ್ನು ಜನಾಂಗ ಎಂದು ಕರೆಯಲಾಗುತ್ತದೆ . ಭಾರತದ ಜನರು ಸಾಮಾನ್ಯವಾಗಿ ಮೂರು ಪ್ರಮುಖ ಜನಾಂಗೀಯ ವರ್ಗಕ್ಕೆ ಸೇರುತ್ತಾರೆ . ನಿಗ್ರಿಟೊ , ಮಂಗೋಲಾಯ್ಡ್ ಮತ್ತು ಮೆಡಿಟರೇನಿಯನ್ . ನಿಗ್ರಿಟೋಗಳು ಭಾರತದ ಪ್ರಾರಂಭಿಕ ನಿವಾಸಿಗಳು ಇವರು ಅಂಡಮಾನ್ ನಿಕೋಬಾರ್ ಪ್ರದೇಶದಲ್ಲಿ ಕಂಡು ಬರುತ್ತಾರೆ . ಉಪ ಹಿಮಾಲಯ ಪ್ರಾಂತದಲ್ಲಿ ಮಂಗೋಲಾಯ್ಡ್ ಜನಾಂಗೀಯ ಲಕ್ಷಣದ ಬುಡಕಟ್ಟಿನ ಜನರಿದ್ದಾರೆ . ಭಾರತದ ಬಹುಭಾಗ ಬುಡಕಟ್ಟು ಸಮೂಹಗಳು ಮೆಡಿಟರೇನಿಯನ್ ಜನಾಂಗದ ಲಕ್ಷಣಗಳನ್ನು ಹೊಂದಿವೆ . ಇವರನ್ನು ಸಾಮಾನ್ಯವಾಗಿ ‘ ದ್ರಾವಿಡರು ‘ ಎಂದು ಕರೆಯಲಾಗುತ್ತದೆ .

ಡಿ ) ಬುಡಕಟ್ಟು ಮತ್ತು ಪರಿಶಿಷ್ಟ ಬುಡಕಟ್ಟುಗಳು ( Tribe and Scheduled Tribe ) : ಬುಡಕಟ್ಟುಗಳನ್ನು ಒಳಗೊಂಡಂತೆ ವರ್ಗಿಕೃತ ಮಾಹಿತಿಯನ್ನು ಹೊಂದುವ ಉದ್ದೇಶದಿಂದ ಬ್ರಿಟಿಷರು ಜನಗಣತಿ ಕಾರ್ಯವನ್ನು ಕೈಗೊಂಡರು . 1891 , 1901 , 1911 , 1921 , 1931 ಮತ್ತು 1941 ರಲ್ಲಿ ಜನಗಣತಿ ಮಾಡಿ ಬುಡಕಟ್ಟುಗಳನ್ನು ವಿವಿಧ ಹೆಸರುಗಳಿಂದ ವರ್ಗಿಕರಿಸಿದರು . ಭಾರತವು ಸ್ವಾತಂತ್ರ್ಯ ಪಡೆದ ನಂತರ ಬುಡಕಟ್ಟಿನ ಪರಿಕಲ್ಪನೆಯು ಇನ್ನಷ್ಟು ಬದಲಾಯಿತು . ಡಾ.ಬಿ.ಆರ್ . ಅಂಬೇಡ್ಕರ್‌ರವರು ಆದಿವಾಸಿಗಳು ‘ ಎಂಬುದರ ಬದಲಾಗಿ ‘ ಪರಿಶಿಷ್ಟ ಬುಡಕಟ್ಟುಗಳು ‘ ಎಂಬುದನ್ನು ಬಳಸಬಯಸಿದರು . ಭಾರತದ ಸಂವಿಧಾನದಲ್ಲಿ ಕೆಲವು ಬುಡಕಟ್ಟುಗಳಿಗೆ ಪರಿಶಿಷ್ಟ ಬುಡಕಟ್ಟುಗಳು ಎಂದು ಕರೆಯಲಾಗಿದೆ . ‘ ಒಟ್ಟುಗೂಡಿಸಿದ ‘ ಎಂಬರ್ಥದಲ್ಲಿ ಪರಿಶಿಷ್ಟ ಎಂಬ ಪದವನ್ನು ಬಳಸಲಾಗಿದೆ . 3242 ನೇ ವಿಧಿಯು ಸಾರ್ವಜನಿಕ ಸೂಚನೆಯ ಮೂಲಕ ಪರಿಶಿಷ್ಟ ಬುಡಕಟ್ಟುಗಳನ್ನು ಗುರ್ತಿಸುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ನೀಡಿದೆ . ಬುಡಕಟ್ಟು ಸಮೂಹದ ಪರಿಕಲ್ಪನೆಯು ಕಾಲದಿಂದ ಕಾಲಕ್ಕೆ ಬದಲಾಗಿರುವುದನ್ನು ಮೇಲ್ಕಂಡ ಅಂಶಗಳು ಸ್ಪಷ್ಟಪಡಿಸುತ್ತವೆ . ಮೊದಲು ರಾಜಕೀಯ ಘಟಕಗಳಾಗಿದ್ದ ಬುಡಕಟ್ಟುಗಳು ಕಾಲಾನಂತರದಲ್ಲಿ ಬಡತನ ಮತ್ತು ಹಿಂದುಳಿದಿರುವಿಕೆಯ ಕಾರಣದಿ೦ದ ಗುರ್ತಿಸಲ್ಪಟ್ಟವು . ಸಂವಿಧಾನಾತ್ಮಕವಾಗಿ ಅವರನ್ನು ಒಗ್ಗೂಡಿಸಲಾಗಿರುವುದರಿಂದ ಅವರು ವಿಶಿಷ್ಟ ಜನಾಂಗೀಯ , ಭಾಷಾ ಮತ್ತು ಸಾಂಸ್ಕೃತಿಕವಾಗಿ ಐಕ್ಯತೆ ಹೊಂದಿದ ಸಮೂಹವಾಗಿ ತಮ್ಮ ಸ್ಥಾನವನ್ನು ಗುರ್ತಿಸಿಕೊಳ್ಳಲು ಸಾಧ್ಯವಾಗಿದೆ .

37. ಭಾರತೀಯ ಬುಡಕಟ್ಟುಗಳ ಭೌಗೋಳಿಕ ಹಂಚಿಕೆಯನ್ನು ವಿವರಿಸಿ .

ಭಾರತದಾದ್ಯಂತ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ . ಅವರು ವಾಸಿಸುವ ಸ್ಥಳಗಳಿಗನುಗುಣವಾಗಿ ಮೂರು ಕ್ಷೇತ್ರೀಯ ವಲಯಗಳಲ್ಲಿ ವರ್ಗಿಕರಿಸಿರುವುದನ್ನು ಬುಡಕಟ್ಟುಗಳ ಭೌಗೋಳಿಕ ಹಂಚಿಕೆ ಎನ್ನುತ್ತಾರೆ . ಆ ಮೂರು ವಲಯಗಳು

1 .ಉತ್ತರ ಹಾಗೂ ಈಶಾನ್ಯ ವಲಯ

2. ಮಧ್ಯ ವಲಯ

3. ದಕ್ಷಿಣ ವಲಯ

1. ಉತ್ತರ ಹಾಗೂ ಈಶಾನ್ಯ ವಲಯ ( North and North Eastern Zone ) : ಉಪ ಹಿಮಾಲಯ ಪ್ರಾಂತ , ಭಾರತದ ಈಶಾನ್ಯ ಗಡಿ ತಿಸ್ತಾ ಕಣಿವೆ , ಜಮುನಾಪದ್ಮ ಹಾಗೂ ಬ್ರಹ್ಮಪುತ್ರದ ಕೆಲ ಭಾಗವನ್ನು ಈ ವಲಯ ಒಳಗೊಂಡಿದೆ . ಇಲ್ಲಿನ ಬುಡಕಟ್ಟುಗಳು ಮಂಗೋಲಾ ಜನಾಂಗಕ್ಕೆ ಸೇರಿದವರಾಗಿದ್ದು ಆಸ್ಟಿಕ್ ಕುಟುಂಬಕ್ಕೆ ಸೇರಿದ ಭಾಷೆಗಳನ್ನಾಡುತ್ತಾರೆ . ಇನ್ನೂ ಹಲವಾರು ಬುಡಕಟ್ಟು ಜನಾಂಗ ಈ ವಲಯಕ್ಕೆ ಸೇರಿದವರಾಗಿದ್ದಾರೆ . ನೂಲು ತೆಗೆಯುವುದು , ನೇಯ್ದೆ ಮತ್ತು ಕೃಷಿಗಳು ಈ ವಲಯದ ಪ್ರಮುಖ ವೃತ್ತಿಗಳಾಗಿವೆ . ನಾಗಾ ಬುಡಕಟ್ಟಿನವರು ಪಿತೃ ಪ್ರಧಾನ ಕುಟುಂಬ ಪ್ರಕಾರವನ್ನು ಹೊಂದಿದ್ದಾರೆ . ಖಾಸಿ ಮತ್ತು ಗಾರೋಗಳಲ್ಲಿ ಮಾತೃಪ್ರಧಾನ ಕುಟುಂಬಗಳಿವೆ . ಹೆಚ್ಚಾಗಿ ಏಕಪತ್ನಿತ್ವ ಮತ್ತು ಕೆಲ ಬುಡಕಟ್ಟುಗಳಲ್ಲಿ ಬಹಯಪತ್ನಿತ್ವದ ಆಚರಣೆಯಿದೆ .

2. ಮಧ್ಯ ವಲಯ ( Central Tribal Zone ) : ಉತ್ತರ ಭಾಗದ ಗಂಗಾನದಿ ತಟದ ಪ್ರಸ್ಥಭೂಮಿ ಮತ್ತು ದಕ್ಷಿಣದ ಕೃಷ್ಣಾ ನದಿಯ ಮಧ್ಯದ ಪ್ರಸ್ಥಭೂಮಿ ಹಾಗೂ ಪರ್ವತಶ್ರೇಣಿಯ ಭಾಗವನ್ನು ಒಳಗೊಂಡಿದೆ . ಪಶ್ಚಿಮ ಬಂಗಾಳ , ಒಡಿಶಾ , ಬಿಹಾರ್ , ಉತ್ತರ ಪ್ರದೇಶದ ದಕ್ಷಿಣಭಾಗ , ರಾಜಾಸ್ಥಾನ್ , ಗುಜರಾತ್ , ಮಧ್ಯಪ್ರದೇಶ ಈ ವಲಯದ ವ್ಯಾಪ್ತಿಗೆ ಸೇರುತ್ತವೆ . ಮಧ್ಯ ಪ್ರದೇಶವು ಅತಿ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಸಮೂಹವನ್ನು ಹೊಂದಿದೆ . (23.27 % ) ಈ ವಲಯದ ಸಂತಾಲರು ಮುಂದುವರಿದ ಬುಡಕಟ್ಟು ಸಮುದಾಯವಾಗಿದ್ದಾರೆ . ಕೆಲವರು ಸಣ್ಣ ಪ್ರಮಾಣದ ಗೃಹ ಕೈಗಾರಿಕೆಗಳಲ್ಲಿ ಮತ್ತು ಕೃಷಿಯಲ್ಲಿ ನಿರತರಾಗಿದ್ದಾರೆ . ಇನ್ನು ಕೆಲವರು ದಟ್ಟವಾದ ಹಾಗೂ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಾರೆ .

2. ದಕ್ಷಿಣ ವಲಯ ( Southern Zone ) : ದಕ್ಷಿಣ ಭಾರತದ ಬುಡಕಟ್ಟುಗಳು ಈ ವಲಯಕ್ಕೆ ಸೇರುತ್ತವೆ . ಈ ವಲಯದ ಬುಡಕಟ್ಟಿನವರು ಭಾರತದ ಮೂಲನಿವಾಸಿಗಳಾಗಿದ್ದು , ದ್ರಾವಿಡಿಯನ್ ಭಾಷೆಗಳನ್ನಾಡುತ್ತಾರೆ . ಚೆಂಚು , ಕೋಟಾ , ಕುರುಂಬಾ , ಬಡಗ ಇತ್ಯಾದಿ ಬುಡಕಟ್ಟಿನವರು ಈ ವಲಯದಲ್ಲಿ ಕಂಡುಬರುತ್ತಾರೆ . ನೀಲಗಿರಿಯ ತೋಡರಲ್ಲಿ ಭ್ರಾತೃತ್ವ ಬಹುಪತ್ನಿತ್ವದ ಆಚರಣೆಯಿದೆ . ಕೆಲವು ಬುಡಕಟ್ಟುಗಳು ಮಾತೃಪ್ರಧಾನ ಪ್ರಕಾರದ ಸಾಮಾಜಿಕ ಸಂಘಟನೆ ಮತ್ತು ಮಾತೃವಂಶೀಯ ಪ್ರಕಾರದ ಕುಟುಂಬಗಳನ್ನು ಹೊಂದಿವೆ . ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆರು ಬುಡಕಟ್ಟುಗಳಿವೆ . ನಿಕೋಬಾರಿಸ್ ಮತ್ತು ಶಾಂಪೆನ್ ಮಂಗೋಲಿಯನ್ ಜನಾಂಗೀಯ ಗುಂಪಿಗೆ ಸೇರುತ್ತಾರೆ . ನಿಕೋಬಾರ್ ದ್ವೀಪಗಳಲ್ಲಿ ವಾಸಿಸುವ ನಿಕೋಬಾರಿಸ್ ಸ್ವಲ್ಪ ಪ್ರಗತಿ ಹೊಂದಿರುವ ಸಮೂಹ . ಇತರ ಸಮೂಹಗಳು ತೀರ ಹಿಂದುಳಿದ ಬುಡಕಟ್ಟುಗಳಾಗಿದ್ದಾರೆ ( Primitive Tribes ) . ಈ ರೀತಿ ಭಾರತದಲ್ಲಿ ಬುಡಕಟ್ಟುಗಳು ಭೌಗೋಳಿಕ ಹಂಚಿಕೆಯಾಗಿದೆ .

38 , ಬುಡಕಟ್ಟು ಕಲ್ಯಾಣದ ಮೂರು ದೃಷ್ಟಿಕೋನಗಳನ್ನು ಚರ್ಚಿಸಿ .

ಬುಡಕಟ್ಟು ಕಲ್ಯಾಣದ ಮೂರು ದೃಷ್ಟಿಕೋನಗಳು ( Three views of Tribal Welfare ) 2000 HO JONO ಸಮಸ್ಯೆಗಳನ್ನು ಬಗೆಹರಿಸಲು ಮೂರು ದೃಷ್ಟಿಕೋನಗಳ ಅನ್ವಯಿಕೆಯ ಮೂಲಕ ಯತ್ನಿಸಲಾಗಿದೆ . ಅವುಗಳೆಂದರೆ 1. ಪ್ರತ್ಯೇಕತೆಯ ನೀತಿ ( Policy of Isolation ) : ಈ ದೃಷ್ಟಿಕೋನವು ಬುಡಕಟ್ಟು ಜನರನ್ನು ಪ್ರಮುಖ ವಾಹಿನಿಯಿಂದ ಪ್ರತ್ಯೇಕವಾಗಿರಸಬೇಕೆಂದು ಪ್ರತಿಪಾದಿಸುತ್ತದೆ . 1931 ರ ಜನಗಣತಿಯ ಆಯುಕ್ತರಾಗಿದ್ದ ಜೆ.ಎಚ್.ಹಟನ್ ಬುಡಕಟ್ಟು ಸಮೂಹವು ಅನಿಯಂತ್ರಿತವಾಗಿ ಅನ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗುವುದನ್ನು ತಪ್ಪಿಸಲು ಅವರಿಗಾಗಿ ಸ್ವಯಂ ಆಡಳಿತದ ಪ್ರದೇಶಗಳನ್ನು ನಿರ್ಮಿಸಬೇಕೆಂಬ ಸಲಹೆಯಿತ್ತರು . ವೆರಿಯರ್ ಎಲ್ವಿನ್ ಕೂಡಾ ಇವರಿಗಾಗಿ ‘ ರಾಷ್ಟ್ರೀಯ ಉದ್ಯಾನವನಗಳನ್ನು ‘ ನಿರ್ಮಿಸಬೇಕೆಂಬ ಸಲಹೆಯನ್ನು ಕೊಟ್ಟಿದ್ದರು . ಇವರಿಬ್ಬರನ್ನೂ ಕಟುವಾಗಿ ಟೀಕಿಸಲಾಯಿತು . ಬುಡಕಟ್ಟು ಜನರೂ ಸಹ ಮುಖ್ಯವಾಹಿನಿವಂತೆ ಆಧುನಿಕ ಜ್ಞಾನದ ಸವಲತ್ತುಗಳ ಸದ್ಬಳಕೆಯಿಂದ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ನೆರವಾಗುವ ಬದಲಿಗೆ ಅವರನ್ನು ಸಮಾಜದ ಮುಖ್ಯವಾಹಿನಿಯಿಂದ ಬೇರ್ಪಡಿಸುವುದು ಸರಿಯಲ್ಲ ಎಂಬುದಾಗಿ ಟೀಕಿಸಿದರು .

2. ಸ್ವಾಂಗೀಕರಣದ ನೀತಿ ( Policy of Assimilation ) : ಠಕ್ಕರ್ ಬಾಪಾ , ಜಿ.ಎಸ್.ಘುರ್ಯೆ , ಕೆಲವು ಸ್ವಯಂ ಸೇವಾ ಸಂಘಟನೆಗಳು ಮತ್ತು ಕ್ರಿಶ್ಚಿಯನ್ ಮಿಶನರಿಗಳು ಈ ದೃಷ್ಟಿಕೋನದ ಪ್ರತಿಪಾದಕರಾಗಿದ್ದಾರೆ . ಬುಡಕಟ್ಟು ಸಮೂಹಗಳು ಕ್ರೈಸ್ತ ಅಥವಾ ಹಿಂದೂಧರ್ಮದೊಂದಿಗೆ ಸ್ವಾಂಗೀಕರಣಗೊಳ್ಳಬೇಕೆನ್ನುವುದು ಈ ನೀತಿಯ ಪ್ರಮುಖ ಅಂಶ . ಠಕ್ಕರ್ ಬಾಪಾರವರ ಪ್ರಕಾರ ಹೆಚ್ಚು ಮುಂದುವರಿದ ಜನರೊಂದಿಗೆ ಸಂಪರ್ಕ ಸಾಧಿಸುವ ಮೂಲಕ , ಅವರಿಗೆ ದೊರೆತ ಸೌಲಭ್ಯಗಳ ಸಮಾನ ಪಾಲು ಪಡೆದು , ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲೂ ಸಮಾನತೆ ಸಾಧಿಸಬಹುದು ಎಂಬ ಕಾರಣಕ್ಕಾಗಿ , ಇವರು ಬುಡಕಟ್ಟು ಜನರನ್ನು ಹಿಂದುಳಿದ ಹಿಂದೂ ‘ ಎಂದು ಕರೆದಿದ್ದಾರೆ.

3. ಐಕ್ಯತೆಯ ನೀತಿ ( Policy of Integration ) : ಪ್ರತ್ಯೇಕತೆಯ ನೀತಿ ಸಾಧ್ಯವೂ ಅಲ್ಲ ; ಸಾಧುವೂ ಅಲ್ಲ . ಇದುವರೆಗೂ ಅದು ಸಾಧ್ಯವಾಗಿಲ್ಲ ಮತ್ತು ಅಪೇಕ್ಷಾರ್ಹವೂ ಅಲ್ಲ . ಸ್ವಾಂಗೀಕರಣದ ನೀತಿಯನ್ನು ಕೆಲವರು ಬುಡಕಟ್ಟು ಜನರ ಮೇಲಿನ ಹೇರಿಕೆ ಎಂದು ಟೀಕಿಸಿದರು . ಇದರಿಂದಾಗಿ ಆಧುನಿಕ ಮುಂದುವರಿದ ಸಮಾಜದ ಲಾಭವನ್ನು ಪಡೆದುಕೊಂಡು ತಮ್ಮ ಪ್ರತ್ಯೇಕ ಅನನ್ಯತೆಯನ್ನು ಉಳಿಸಿಕೊಳ್ಳುವುದು ಐಕ್ಯತೆಯ ನೀತಿಯಾಗಿದೆ . ಈ ನೀತಿಯು ಭಾರತದ ಬುಡಕಟ್ಟು ಸಮೂಹಗಳು ಮತ್ತು ಬುಡಕಟೇತರ ಸಮೂಹಗಳ ನಡುವೆ ರಚನಾತ್ಮಕ ಹೊಂದಾಣಿಕೆಯನ್ನು ತರುವ ಉದ್ದೇಶವನ್ನು ಹೊಂದಿದೆ . ಪಂಡಿತ ಜವಾಹರಲಾಲ್ ನೆಹರು , ಎಂ.ಎನ್ . ಶ್ರೀನಿವಾಸ್ ಮತ್ತು ಡಿ.ಎನ್ . ಮಜುಂದಾರ್‌ರವರು ಈ ನೀತಿಯ ಪ್ರತಿಪಾದಕರಾಗಿದ್ದಾರೆ . ಈ ಮೂರು ದೃಷ್ಟಿಕೋನಗಳಿಂದ ಬುಡಕಟ್ಟು ಜನರ ಕಲ್ಯಾಣವನ್ನು ಸಾಧಿಸುವುದು ಇದರ ಗುರಿಯಾಗಿದೆ .

39 , ಬುಡಕಟ್ಟು ಪಂಚಶೀಲವನ್ನು ವಿವರಿಸಿ .

ಬುಡಕಟ್ಟು ಪಂಚಶೀಲ ( Tribal Panchaeela ) : ಜವಾಹರಲಾಲ್ ನೆಹರು ಅವರು ವೆರಿಯರ್ ಎಲ್ವಿನ್ ಅವರ ‘ ದಿ ಫಿಲಾಸಫಿ ಆಪ್ ನೇಫಾ ‘ The Philosophy of NEFA ( North East Frontiegrs of Assam ) ow ಬರೆದ ಮುನ್ನುಡಿಯಲ್ಲಿ ಐಕ್ಯತೆಯ ನೀತಿಯ ಪರಿಪಾಲನೆಯ ಐದು ಮೂಲ ತತ್ವಗಳನ್ನು ಸೂಚಿಸಿದ್ದು , ಅವು ಈ ಕೆಳಕಂಡಂತಿವೆ .

1. ಬುಡಕಟ್ಟು ಸಮೂಹಗಳು ತಮ್ಮದೇ ಆದ ಬುದ್ಧಿಮತ್ತೆಯಲ್ಲಿ ಅಭಿವೃದ್ಧಿ ಹೊಂದಲು ಅವಕಾಶ ಕಲ್ಪಿಸಬೇಕು. ಅವರ ಮೇಲೆ ಬಲವಂತವಾಗಿ ಏನನ್ನೂ ಹೇರಬಾರದು . ಅವರ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಎಲ್ಲಾ ವಿಧದಲ್ಲೂ ಪ್ರೋತ್ಸಾಹಿಸಬೇಕು .

2. ಭೂಮಿ ಮತ್ತು ಅರಣ್ಯಗಳ ವಿಚಾರದಲ್ಲಿ ಬುಡಕಟ್ಟುಗಳ ಹಕ್ಕುಗಳನ್ನು ಗೌರವಿಸಬೇಕು .

3 . ಅವರ ಆಡಳಿತ , ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ಅವರಿಗೆ ತರಬೇತಿ ನೀಡಿ , ಅವರದೇ ತಂಡವನ್ನು ಕಟ್ಟಬೇಕು . ಪ್ರಾರಂಭಿಕ ಹಂತದಲ್ಲಿ ಹೊರಗಿನ ತಂತ್ರಜ್ಞಾನ ಹಾಗೂ ತಂತ್ರಜ್ಞರ ನೆರವು ಅಗತ್ಯವಾಗಬಹುದು . ಆದರೆ ಬುಡಕಟ್ಟು ಕ್ಷೇತ್ರಗಳಲ್ಲಿ ಹೊರಗಿನವರ ಪ್ರವೇಶವನ್ನು ಸಾಧ್ಯವಾದಷ್ಟು ತಪ್ಪಿಸಬೇಕು .

4. ಬುಡಕಟ್ಟು ಪ್ರದೇಶಗಳಲ್ಲಿ ಅತಿಯಾದ ಆಡಳಿತ ಅಥವಾ ಹಲವಾರು ಯೋಜನೆಗಳನ್ನು ಕೈಗೊಳ್ಳಬಾರದು . ಅವರಿಗೆ ಪೂರಕವಾಗಿ ಕೆಲಸ ಮಾಡಬೇಕಲ್ಲದೆ , ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ವಿರುದ್ಧವಾಗಿ ಕೆಲಸ ಮಾಡಬಾರದು .

5 . ಅವರ ಪರವಾದ ಕಾರ್ಯಕ್ರಮಗಳ ಫಲಿತಾಂಶಗಳನ್ನು ಕೇವಲ ಅಂಕಿಸಂಖ್ಯೆಗಳಿಂದ ಅಥವಾ ಖರ್ಚು ಮಾಡಿದ ಹಣದಿಂದ ಅಳೆಯದೆ , ಗುಣಮಟ್ಟದಿಂದ ಅಳೆಯಬೇಕು . ಬುಡಕಟ್ಟು ಪಂಚಶೀಲವು ಏಕೀಕರಣ ನೀತಿಗೆ ಸಂಬಂಧಿಸಿದೆ . ಇವು ನೇರವಾಗಿ ಬುಡಕಟ್ಟುಗಳ ಪುನರ್ವಸತೀಕರಣಕ್ಕೆ ಅಥವಾ ಸಮರಸತೆಗೆ ಸಂಬಂಧಿಸಿದೆ .

40. ಇತರ ಹಿಂದುಳಿದ ವರ್ಗಗಳನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ .

ದೃಷ್ಟಿಕೋನಗಳನ್ನು ಚರ್ಚಿಸಿ . ಇತರ ಹಿಂದುಳಿದ ವರ್ಗಗಳು ( After backward Classes or Castes ) : ಇತರ ಹಿಂದುಳಿದ ವರ್ಗಗಳು ಎಂದರೆ ಅಸ್ಪಶ್ಯರ ಪಟ್ಟಿಗೆ ಸೇರದ , ಸಾಂಪ್ರದಾಯಿಕವಾಗಿ ಕೃಷಿ , ಪಶು ಸಂಗೋಪನೆ , ಕರಕುಶಲಕಲೆ ಮುಂತಾದ ವೃತ್ತಿಗಳನ್ನು ಕೈಗೊಳ್ಳುತ್ತಿದ್ದ ಕೆಳ ಹಾಗೂ ಮಧ್ಯಮ ಶ್ರೇಣಿಯ ಜಾತಿಗಳು ಸೇರುತ್ತವೆ . ಹಿಂದುಳಿದ ವರ್ಗಗಳು ಹಲವಾರು ಸಮುದಾಯಗಳನ್ನೊಳಗೊಂಡ ಸಮೂಹಗಳಾಗಿವೆ . ಇತರ ಹಿಂದುಳಿದ ವರ್ಗಗಳು ದೇಶದ ಒಟ್ಟು ಜನಸಂಖ್ಯೆಯ ಶೇ .51 ರಷ್ಟಿವೆ . ಇತರ ಹಿಂದುಳಿದ ವರ್ಗಗಳು ಬಹಳ ದೀರ್ಘಕಾಲದಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಲಿವೆ . ಈ ಸಮಸ್ಯೆಗಳನ್ನು ಹಲವಾರು ದೃಷ್ಟಿಕೋನಗಳಿಂದ ಪರಿಹರಿಸಲು ಕ್ರಮಗಳನ್ನು ಕೈಗೊಳ್ಳುತ್ತಾರೆ . ಇಲ್ಲಿ ಕೆಲವು ಸಾಮಾನ್ಯ ಸಮಸ್ಯೆಗಳನ್ನು ಇಲ್ಲಿ ವಿಶ್ಲೇಶಿಸಲಾಗಿದೆ .

1 . ಹಿ೦ದುಳಿದ ವರ್ಗಗಳು ಅನಿಶ್ಚಿತವಾದ , ಅಮೂರ್ತವಾದ ಮತ್ತು ಅಸಂಘಟಿತವಾದ ಸಮೂಹಗಳಾಗಿವೆ . ಹಿಂದುಳಿದ ವರ್ಗಗಳ ಆಯೋಗವನ್ನು ಕಾಕಾ ಸಾಹೇಬ್ ಕಾಲೇಲ್ಕರ್ ಅವರ ಅಧ್ಯಕ್ಷತೆಯಲ್ಲಿ 1953 ರಲ್ಲಿ ರಚಿಸಲಾಯಿತು . ಆಯೋಗದ ವರದಿಯಂತೆ 2399 ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಪಟ್ಟಿ ಮಾಡಲಾಗಿತ್ತು . ಮುಂದೆ 1979 ರಲ್ಲಿ ಮಂಡಲ್ ಆಯೋಗವು 3743 ಜಾತಿಗಳು ಹಾಗೂ ಸಮುದಾಯಗಳನ್ನು ಹಿಂದುಳಿದ ವರ್ಗಗಳೆಂದು ಪಟ್ಟಿ ಮಾಡಿದೆ . ಬಹಳಷ್ಟು ಹಿಂದುಳಿದ ವರ್ಗಗಳು ಪರಸ್ಪರ ಅಪರಿಚಿತವಾಗಿವೆ . ಇವರಿಗೆ ಅಖಿಲಭಾರತ ಮಟ್ಟದ ಏಕೈಕ ಸಂಘಟನೆಯಿಲ್ಲ .

2. ಆರ್ಥಿಕವಾಗಿ ಹಿಂದುಳಿದಿರುವಿಕೆ : ಹಿಂದುಳಿದ ವರ್ಗಗಳ ಬಹುಸಂಖ್ಯಾತರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ . ಬಡವರು , ನಿರುದ್ಯೋಗಿಗಳು ಮತ್ತು ಅಲ್ಪ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿದೆ . ಬಹಳಷ್ಟು ಜನರು ಅತಿ ಕಡಿಮೆ ವೇತನಕ್ಕೆ ದುಡಿಯುತ್ತಾರೆ .

3. ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿಯುವಿಕೆ : ಈ ವರ್ಗದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ . ಉನ್ನತ ಶಿಕ್ಷಣದ ಮಟ್ಟವೂ ಅತ್ಯಂತ ಕಡಿಮೆ . ಇವರು ನೇರವಾಗಿ ಅಸ್ಪಶ್ಯತೆಗೆ ಬಲಿಯಾಗಿಲ್ಲವಾದರೂ ಸಾಮಾಜಿಕ ಅಂತರವಿದೆ .

4. ರಾಜಕೀಯ ಅಸಂಘಟಿತರು : ಇವರು ಒಂದೇ ಜಾತಿಗೆ ಸೇರಿದವರಲ್ಲವಾದ್ದರಿಂದ ಸಾಪೇಕ್ಷವಾಗಿ ಅಸಂಘಟಿತ ಸಮೂಹವಾಗಿದ್ದಾರೆ . ನಮ್ಮ ದೇಶಾದಾದ್ಯಂತ ಇವರು ನೆಲೆಸಿದ್ದಾರೆ . ಯಾವ ಹಿಂದುಳಿದ ಜಾತಿಯೂ ಒಂದೇ ಪ್ರದೇಶದಲ್ಲಿ ಸಂಖ್ಯಾತ್ಮಕ ಪ್ರಾಬಲ್ಯ ಹೊಂದಿಲ್ಲ . ಅಖಿಲ ಭಾರತ ಮಟ್ಟದಲ್ಲಿ ಒತ್ತಡ ಸಮೂಹವಾಗಿ ‘ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ . ಈ ವರ್ಗಕ್ಕೆ ಸೇರುವ ಜಾತಿಗಳು ಮತ್ತು ಸಮುದಾಯಗಳು ಸತತವಾಗಿ ಏರುತ್ತಲೇ ಇದೆ.

41. ಮಂಡಲ್ ಆಯೋಗದ ಪ್ರಕಾರ ಹಿಂದುಳಿದಿರುವಿಕೆಯ ಆಧಾರಾಂಶಗಳನ್ನು ತಿಳಿಸಿ .

ಭಾರತದ ಎರಡನೆಯ ಹಿಂದುಳಿದ ವರ್ಗಗಳ ಆಯೋಗವನ್ನು ಬಿ.ಪಿ.ಮಂಡಲ್ ಅವರ ಅಧ್ಯಕ್ಷತೆಯಲ್ಲಿ 1979 ರಲ್ಲಿ ರಚಿಸಲಾಯಿತು . ಮಂಡಲ್ ಆಯೋಗವು ತನ್ನ ವರದಿಯಲ್ಲಿ 3743 ಜಾತಿಗಳು ಮತ್ತು ಸಮುದಾಯಗಳನ್ನು ಹಿಂದುಳಿದ ಜಾತಿಗಳೆಂದು ಪಟ್ಟಿ ಮಾಡಿತ್ತು . ಆಯೋಗವು ಇತರ ಹಿಂದುಳಿದ ವರ್ಗಗಳಿಗೆ 27 % ರಷ್ಟು ಮೀಸಲಾತಿಯನ್ನು ಶಿಫಾರಸ್ಸು ಮಾಡಿತ್ತು . ಹಿಂದುಳಿದ ಜನರನ್ನು ನಿರ್ಧರಿಸುವುದು ಮಂಡಲ್ ಆಯೋಗದ ಪ್ರಾಥಮಿಕ ಉದ್ದೇಶಗಳಲ್ಲೊಂದಾಗಿತ್ತು . ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ನಿರ್ಧರಿಸಲು ಮಾನದಂಡಗಳನ್ನು ಯೋಜಿಸಿದರು . ಅಂತಹ 11 ಮಾನದಂಡಗಳನ್ನು ಗುರ್ತಿಸಿದ್ದಾರೆ . ಈ ಮಾನದಂಡಗಳು ಮೂರು ಪ್ರವರ್ಗಗಳಡಿಯಲ್ಲಿ ಪಟ್ಟಿ ಮಾಡಬಹುದು .

ಎ . ಸಾಮಾಜಿಕ ಮಾನದಂಡ ( Social Criteria ) :

1. ಇತರರು ಪರಿಗಣಿಸುವಂತೆ ಸಾಮಾಜಿಕವಾಗಿ ಹಿಂದುಳಿಯುವಿಕೆ ,

2. ಜೀವನೋಪಾಯಕ್ಕೆ ದೈಹಿಕ ಶ್ರಮವನ್ನು ಹೆಚ್ಚಾಗಿ ಅವಲಂಬಿಸಿರುವುದು .

3. ಗ್ರಾಮೀಣ ಪ್ರದೇಶಗಳಲ್ಲಿ 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ .25 ರಷ್ಟು ಬಾಲಕಿಯರು ಹಾಗೂ ಶೇ .10 ರಷ್ಟು ಬಾಲಕರ ಮತ್ತು ನಗರ ಪ್ರದೇಶಗಳಲ್ಲಿ ಶೇ .10 ರಷ್ಟು ಬಾಲಕಿಯರು ಮತ್ತು ಶೇ .5 ರಷ್ಟು ಬಾಲಕರು ವಿವಾಹವಾಗಿರುವುದು .

ಬಿ . ಶೈಕ್ಷಣಿಕ ಮಾನದಂಡ ( Educational Criteria ) :

1. 5 ರಿಂದ 15 ರ ವಯೋಮಾನದ , ರಾಜ್ಯದ ಸರಾಸರಿಗಿಂತ ಶೇ .25 ಕ್ಕೂ ಹೆಚ್ಚು ಸಂಖ್ಯೆಯ ಮಕ್ಕಳು ಶಾಲೆಗೆ ಹೋಗದಿರುವುದು .

2 . ರಾಜ್ಯದ ಸರಾಸರಿಗಿಂತ ಶೇ .25 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರತರಾಗಿರುವುದು . ರಾಜ್ಯದ ಸರಾಸರಿಗಿಂತ ಶೇ .25 ಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ಅರ್ಧದಲ್ಲೇ ಶಾಲೆ ತ್ಯಜಿಸುವುದು .

3. ಮೆಟ್ರಿಕ್ ಶಿಕ್ಷಣ ಪಡೆದವರ ಸಂಖ್ಯೆಯು ರಾಜ್ಯದ ಸರಾಸರಿಗಿಂತ ಶೇ .25 ಕ್ಕಿಂತ ಕಡಿಮೆ ಇರುವುದು .

ಸಿ . ಆರ್ಥಿಕ ಮಾನದಂಡ ( Economic Criteria ) :

1. ಕುಟುಂಬದ ಆಸ್ತಿ ಮೌಲ್ಯವು ರಾಜ್ಯದ ಸರಾಸರಿಗಿಂತ ಶೇ .25 ಕ್ಕೂ ಕಡಿಮೆ ಇರುವುದು .

2. ಕಚ್ಚಾ ಮನೆಗಳಲ್ಲಿ ವಾಸಿಸುವರ ಪ್ರಮಾಣವು ರಾಜ್ಯದ ಸರಾಸರಿಗಿಂತ ಶೇ .25 ಕ್ಕೂ ಹೆಚ್ಚಿಗೆ ಇರುವುದು .

3. ಶೇ .50 ಕ್ಕೂ ಹೆಚ್ಚಿನ ಮನೆಗಳಿಗೆ ಕುಡಿಯುವ ನೀರಿನ ಮೂಲಗಳು 500 ಮೀಟರ್‌ಗಿಂತ ದೂರವಿರುವುದು .

4. ರಾಜ್ಯದ ಸರಾಸರಿ ಪ್ರಮಾಣಕ್ಕಿಂತ 25 % ಕ್ಕೂ ಹೆಚ್ಚಿನ ಕುಟುಂಬಗಳು ಸಾಲ ಪಡೆದಿರುವುದು .

ಈ ಮಾನದಂಡಗಳನ್ನು ಪ್ರತ್ಯೇಕವಾಗಿ ಅಳತೆ ಮಾಡಲಾಗಿತ್ತು . ಸಾಮಾಜಿಕ ಮಾನದಂಡದ ಪ್ರತಿ ಅಂಶಕ್ಕೆ ಮೂರು ಸೂಚ್ಯಾಂಕಗಳನ್ನು ಶೈಕ್ಷಣಿಕ ಮಾನದಂಡದ ಪ್ರತಿ ಅಂಶಕ್ಕೆ ಎರಡು ಸೂಚ್ಯಾಂಕಗಳನ್ನು ಮತ್ತು ಆರ್ಥಿಕ ಮಾನದಂಡದ ಪ್ರತಿ ಅಂಶಕ್ಕೆ ಒಂದು ಸೂಚ್ಯಾಂಕವನ್ನು ನೀಡಿ ಒಟ್ಟು 22 ಸೂಚ್ಯಾಂಕಗಳನ್ನು ಗರಿಷ್ಠ ಸೂಚ್ಯಾಂಕವೆಂದು ಪರಿಗಣಿಸಿತ್ತು . 11 ಕ್ಕಿಂತ ಹೆಚ್ಚು ಸೂಚ್ಯಾಂಕಗಳನ್ನು ಪಡೆದ ಯಾವುದೇ ಜಾತಿ ಅಥವಾ ಸಮುದಾಯವನ್ನು ಹಿಂದುಳಿದ ವರ್ಗವಾಗಿ ಪರಿಗಣಿಸಲಾಗುತ್ತಿತ್ತು .

ಮಂಡಲ್ ಆಯೋಗವು ಶಿಫಾರಸ್ಸುಮಾಡಿದ ಹಿಂದುಳಿದಿರುವಿಕೆಯ ಮಾನದಂಡವನ್ನು ಸಮುದಾಯವೊಂದರ ಸಾಪೇಕ್ಷ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಇಂದು ದೇಶದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತಿದೆ .

2nd puc sociology 2nd chapter Mcq in Kannada

IV . ಹತ್ತು ಅಂಕಗಳ ಪ್ರಶ್ನೆಗಳು :

42. ಜಾತಿಯ ಪ್ರಮುಖ ಸಾಂಪ್ರದಾಯಿಕ ಲಕ್ಷಣಗಳನ್ನು ವಿವರಿಸಿ .

‘ ಜಾತಿ ‘ ಯು ಒಂದು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯಾಗಿದೆ . ಹುಟ್ಟಿನಿಂದ ಜಾತಿಯನ್ನು ನಿರ್ಧರಿಸುತ್ತಾರೆ ಸಾಮಾಜಿಕ ನಿಯಮಗಳಿಂದ ಬಂಧಿತರಾಗಿರುತ್ತಾರೆ . ಜಾತಿಯು ಅನುವಂಶೀಯವಾಗಿರುತ್ತದೆ . ಭಾರತದ ಪ್ರಸಿದ್ಧ ಸಮಾಜಶಾಸ್ತ್ರಜ್ಞರಾದ ಡಾ || ಜಿ.ಎಸ್ . ಘುರ್ಯೆರವರು ಜಾತಿಯ ಪ್ರಮುಖ ಸಾಂಪ್ರದಾಯಿಕ ಲಕ್ಷಣಗಳನ್ನು ತಿಳಿಸಿದ್ದಾರೆ . ಅವು ಈ ಕೆಳಕಂಡಂತಿದೆ .

1 . ಜಾತಿಯು ಸಮಾಜದ ಹೋಳು – ಹೋಳಾದ ಭಾಗವಾಗಿದೆ : ಭಾರತೀಯ ಸಮಾಜದಲ್ಲಿ ಸಾವಿರಾರು ವಿವಿಧ ಜಾತಿಗಳು ವಿಭಜಿತವಾಗಿದ್ದು , ಪ್ರತಿಯೊಂದು ಜಾತಿಯೂ ತನ್ನದೇ ಆದ ಜೀವನವಿಧಾನವನ್ನು ಹೊಂದಿದೆ . ಜಾತಿಯಿಂದ ಒದಗುವ ಅಂತಸ್ತೂ ಕೂಡ ಅನುವಂಶೀಯವಾಗಿದ್ದು , ಈ ಸಾಮಾಜಿಕ ಅಂತಸ್ತನ್ನು ಕೂಡ ಅನುವಂಶೀಯವಾಗಿದ್ದು , ಈ ಸಾಮಾಜಿಕ ಅಂತಸ್ತನ್ನು ಹುಟ್ಟಿನಿಂದಲೇ ಪಡೆಯುತ್ತಾನೆ . ಪ್ರತಿಯೊಂದು ಜಾತಿಯೂ ತನ್ನದೇ ಆದ ಜಾತಿ ಪ ೦ ಚಾಯಿತಿಯನ್ನು ಹೊಂದಿರುತ್ತದೆ . ಜಾತಿ ಪಂಚಾಯಿತಿಗಳು ಜಾತಿಯ ಹಿರಿಯರನ್ನು ಸದಸ್ಯರನ್ನಾಗಿ ಹೊಂದಿರುತ್ತಿದ್ದವು . ವಿವಾಹ , ಸಹಭೋಜನ ಮತ್ತು ವೃತ್ತಿಗೆ ಸಂಬಂಧಿಸಿದಂತೆ ನಿರ್ಬಂಧಗಳಿದ್ದವು . ಜಾತಿ ನಿರ್ಬಂಧಗಳ ಉಲ್ಲಂಘನೆಗೆ ಜಾತಿ ಪಂಚಾಯಿತಿಗಳು ಶಿಕ್ಷೆ ವಿಧಿಸುತ್ತಿದ್ದವು .. ಸಾಮಾನ್ಯವಾಗಿ ವಿಧಿಸುತ್ತಿದ್ದ ಶಿಕ್ಷೆಗಳೆಂದರೆ –

1 ) ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಜಾತಿಯಿಂದ ಹೊರಹಾಕುವುದು .

2 ) ದಂಡ ವಿಧಿಸುವುದು .

3 ) ಜಾತಿಯ ಸದಸ್ಯರಿಗೆ ಊಟ ಹಾಕುವುದು .

4 ) ದೈಹಿಕ ದಂಡನೆ .

ಹಲವು ಜಾತಿಗಳು ತಮ್ಮದೇ ಆದ ಆರಾಧ್ಯ ದೈವವನ್ನು ಹೊಂದಿರುತ್ತಿದ್ದವು . ವಿವಾಹ , ಸಾವು ಮುಂತಾದ ಸಂದರ್ಭಗಳಲ್ಲಿ ಆಚರಿಸಲಾಗುತ್ತಿದ್ದ ಪದ್ಧತಿಗಳು ವಿಭಿನ್ನವಾಗಿದ್ದವು .

2. ಏಣಿಶ್ರೇಣಿಯುತವಾದುದು : ಇಡೀ ಸಮಾಜವು ಮೇಲು ಮತ್ತು ಕೀಳು ಎಂಬ ಆಧಾರದ ಮೇಲೆ ವಿವಿಧ ಜಾತಿಗಳನ್ನು ಶ್ರೇಣೀಕರಿಸಿದ ವ್ಯವಸ್ಥೆಯಾಗಿ ವಿಭಜಿತಗೊಂಡಿತ್ತು . ಈ ಏಣಿಶ್ರೇಣಿಯಲ್ಲಿ ಬ್ರಾಹ್ಮಣರು ಮೇಲಿನ ಸ್ತರದಲ್ಲಿದ್ದರೆ , ಅಸ್ಪೃಶ್ಯರು ಕೆಳಗಿನ ಸ್ತರದಲ್ಲಿದ್ದರು , ಅಸ್ಪೃಶ್ಯರಿಗೆ ಹಲವಾರು ನಿರ್ಬಂಧಗಳಿತ್ತು .

3 , ಆಹಾರ ಮತ್ತು ಸಾಮಾಜಿಕ ಸಂಸರ್ಗಗಳಿಗೆ ಸಂಬಂಧಿಸಿದ ನಿರ್ಬಂಧಗಳು : ಘುರ್ಯೆಯವರ ಪ್ರಕಾರ ನಿರ್ಬಂಧಗಳು ಜಾತಿಗಳನ್ನು ಪ್ರತ್ಯೇಕಿಸುತ್ತಿತ್ತು . ಸಹಭೋಜನ ಮತ್ತು ಸಾಮಾಜಿಕ ಸಂಸರ್ಗಗಳಿಗೆ ಸಂಬಂಧಿಸಿದ ನಿರ್ಬಂಧಗಳಿಂದ ಸದಸ್ಯರನ್ನು ದೈಹಿಕವಾಗಿ ಬೇರ್ಪಡಿಸುತ್ತಿತ್ತು . ಆಹಾರ ಸಂಬಂಧಿತ ನಿರ್ಬಂಧಗಳಿಂದ ಯಾರು ಯಾವ ಜಾತಿಯವರಿಂದ ಯಾವ ಬಗೆಯ ಆಹಾರವನ್ನು ಸ್ವೀಕರಿಸಬಹುದು ಎಂಬುದು ನಿರ್ಧಾರವಾಗಿತ್ತು . ಆಹಾರವನ್ನು ಎರಡು ಬಗೆಯಾಗಿ ವಿಂಗಡಿಸಿತ್ತು . ಕಚ್ಚಾ ಆಹಾರ ಮತ್ತು ಪಕ್ಕಾ ಆಹಾರ . ಸ್ವಜಾತಿಯವರಲ್ಲಿ ಕಚ್ಚಾ ಮತ್ತು ಪಕ್ಕಾ ಆಹಾರಗಳೆರಡನ್ನೂ ಸೇವಿಸಬಹುದಾಗಿತ್ತು . ತಮಗಿಂತ ಕೆಳಜಾತಿಯವರಿಂದ ಕಚ್ಚಾ ಆಹಾರವನ್ನು ಸ್ವೀಕರಿಸುವಂತಿರಲಿಲ್ಲ . ಬ್ರಾಹ್ಮಣರು ಅಥವಾ ಮೇಲು ಜಾತಿಯವರು ತಯಾರಿಸಿದ ಕಚ್ಚಾ ಮತ್ತು ಪಕ್ಕಾ ಆಹಾರಗಳೆರಡನ್ನೂ ಇತರರು ಸ್ವೀಕರಿಸಬಹುದಾಗಿತ್ತು .

4. ನಾಗರಿಕ ಮತ್ತು ಧಾರ್ಮಿಕ ಅನರ್ಹತೆಗಳು ಮತ್ತು ವಿವಿಧ ವರ್ಗದವರಿಗಿದ್ದ ಸೌಲಭ್ಯಗಳು : ಹಳ್ಳಿಗಳಲ್ಲಿ ವಿವಿಧ ಜಾತಿ ಸಮೂಹಗಳಿದ್ದು ಅವುಗಳನ್ನು ಪ್ರತ್ಯೇಕಿಸುವ ನಿಯಮಗಳಿತ್ತು . ಕೆಲವು ಜಾತಿ ಸಮೂಹಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುವ ಹಾಗೂ ಇನ್ನು ಕೆಲವು ಜಾತಿ ಸಮೂಹಗಳ ಮೇಲೆ ಲವು ನಾಗರಿಕ ಮತ್ತು ಧಾರ್ಮಿಕ ಅನರ್ಹತೆಗಳನ್ನು ವಿಧಿಸುವುದು ಸಾಮಾನ್ಯವಾಗಿ ಆಚರಣೆಯಲ್ಲಿತ್ತು . ಅಸ್ಪೃಶ್ಯರು ಊರ ಹೊರಗೆ ವಾಸಿಸಬೇಕಿತ್ತು . ಊರಿನ ಕೆಲವು ಭಾಗಗಳ ಸಾರ್ವಜನಿಕ ರಸ್ತೆ , ಸಾರ್ವಜನಿಕ ಶೌಚಾಲಯ , ನೀರಿನ ಘಟ್ಟಗಳು , ತೆರೆದ ಬಾವಿಗಳು , ದೇವಾಲಯಗಳು ಇತ್ಯಾದಿಗಳನ್ನು ಮುಕ್ತವಾಗಿ ಬಳಸದಂತೆ ನಿರ್ಬಂಧವನ್ನು ಹೇರಿತ್ತು . ಇವರು ವಿವಾಹ ಸಂದರ್ಭಗಳಲ್ಲಿ ಒಡವೆ , ಬಣ್ಣದ ವಸ್ತ್ರ , ಆಭರಣಗಳನ್ನು ಧರಿಸುವಂತಿರಲಿಲ್ಲ . ಶಿಕ್ಷಣವನ್ನು ಕಲಿಯುವಂತಿರಲಿಲ್ಲ . ಛತ್ರ – ಚಾಮರಗಳನ್ನು ಹಿಡಿಯುವಂತಿರಲಿಲ್ಲ .

5. ವೃತ್ತಿ ಸಂಬಂಧಿತ ನಿರ್ಬಂಧಗಳು : ಡಾ || ಜಿ.ಎಸ್ . ಘುರ್ಯೆಯವರ ಪ್ರಕಾರ ಪ್ರತಿಯೊಂದು ಜಾತಿಯೂ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿತ್ತು . ವೃತ್ತಿಗಳ ತಾಂತ್ರಿಕ ಕೌಶಲ್ಯಗಳು ಅನುವಂಶೀಯವಾಗಿ ಹರಿದು ಬರುತ್ತಿದ್ದವು . ಈ ವೃತ್ತಿಗಳಲ್ಲಿ ಶುದ್ಧ ಅಶುದ್ಧ ಅಥವಾ ಮೇಲುಕೀಳು ಎಂಬ ಭಾವನೆಗಳ ಆಧಾರದ ಮೇಲೆ ಸಾಮಾಜಿಕ ಗೌರವಕ್ಕೆ ಪಾತ್ರವಾಗುತ್ತಿದ್ದವು . ಪೌರೋಹಿತ್ಯ ಮತ್ತು ಬೋಧನೆಯ ಕೆಲಸಗಳನ್ನು ಪವಿತ್ರವೆಂದು ಭಾವಿಸಿ , ಸಾಮಾಜಿಕ ಮನ್ನಣೆ ಸಿಗುತ್ತಿತ್ತು . ಇಂದೂ ಕೂಡಾ ಈ ಕೆಲಸವನ್ನು ಸಾಮಾನ್ಯವಾಗಿ ಬ್ರಾಹ್ಮಣರೇ ಮಾಡುತ್ತಾರೆ . ವೃತ್ತಿಯು ವಂಶಪಾರಂಪರ್ಯವಾಗಿದ್ದ ಜಾತಿ ವ್ಯವಸ್ಥೆಯಲ್ಲಿ ವೈಯಕ್ತಿಕ ಪ್ರತಿಭೆ , ಒಲವು , ಆಸಕ್ತಿಗಳು , ಸಾಧನೆಗಳು ಮುಂತಾದವುಗಳನ್ನು ಪರಿಗಣಿಸಲಾಗುತ್ತಿರಲಿಲ್ಲ . ಆದರೆ ಕೃಷಿ , ವ್ಯಾಪಾರ ಮತ್ತು ಕೃಷಿ ಕಾರ್ಮಿಕ ವೃತ್ತಿಗಳು ಎಲ್ಲಾ ಜಾತಿಗೂ ಮುಕ್ತವಾಗಿದ್ದವು . ಯಾವ ಜಾತಿಯೂ ತನ್ನ ಸದಸ್ಯರು ತಮ್ಮ ಜಾತಿಯ ಅಂತಸ್ತಿಗೆ ಕೀಳೆಂದು ಭಾವಿಸಲ್ಪಟ್ಟ ವೃತ್ತಿಯನ್ನು ಕೈಗೊಳ್ಳಲು ಅವಕಾಶ ನೀಡುತ್ತಿರಲಿಲ್ಲ . ತಮ್ಮ ಆಸಕ್ತಿ , ಪ್ರತಿಭೆಗಳಿಗನುಗುಣವಾಗಿ ತಾವು ಇಷ್ಟಪಡುವಂತಹ ಕೆಲಸ ಮಾಡುವ ಅವಕಾಶವಿರಲಿಲ್ಲ .

6. ವೈವಾಹಿಕ ನಿರ್ಬಂಧಗಳು ( ಒಳಬಾಂಧವ್ಯ ) : ಅಂತರಜಾತೀಯ ವಿವಾಹಗಳು ನಿಷಿದ್ಧವಾಗಿದ್ದವು . ಸ್ವಜಾತಿಯವರನ್ನೇ ವಿವಾಹವಾಗಬೇಕೆನ್ನುವ ಒಳಬಾಂಧವ್ಯದ ನಿಯಮವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿತ್ತು . ಜಾತಿಯು ಒಳಬಾಂಧವ್ಯ ಸಮೂಹವಾಗಿದೆ . ಒಳಬಾಂಧವ್ಯ ಜಾತಿಯ ಮೂಲಸಾರವಾಗಿದೆ . ಪ್ರತಿಯೊಂದು ಜಾತಿಯೂ ಕೆಲ ಉಪಜಾತಿಗಳನ್ನು ಹೊಂದಿದ್ದು , ಒಳಬಾಂಧವ್ಯದ ನಿಯಮವನ್ನು ಪಾಲಿಸುತ್ತಿದ್ದವು . ಇವೆಲ್ಲಾ ಜಾತಿಯ ಪ್ರಮುಖ ಸಾಂಪ್ರದಾಯಿಕ ಲಕ್ಷಣಗಳು .

43. ಸ್ವಾತಂತ್ರ್ಯಾನಂತರ ಭಾರತದಲ್ಲಿ ಜಾತಿಯಲ್ಲಾದ ಬದಲಾವಣೆಗಳನ್ನು ತಿಳಿಸಿ ,

ಭಾರತವು ಸ್ವಾತಂತ್ರ್ಯ ಪಡೆದ ನಂತರದ ಅವಧಿಯಲ್ಲಿ ಜಾತಿ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾದವು . ಅವುಗಳನ್ನು ಎರಡು ನೆಲೆಗಳಲ್ಲಿ ವಿಶ್ಲೇಷಿಸಬಹುದಾಗಿದೆ . ಅವುಗಳು

1 ) ಕಾರ್ಯಾತ್ಮಕ ಬದಲಾವಣೆಗಳು ಹಾಗೂ

2 ) ಜಾತಿ ವ್ಯವಸ್ಥೆಯ ಪಾತ್ರದಲ್ಲಾದ ಬದಲಾವಣೆಗಳು

ಎ ) ಜಾತಿ ವ್ಯವಸ್ಥೆಯಲ್ಲಾದ ಕಾರ್ಯಾತ್ಮಕ ಬದಲಾವಣೆಗಳು ( Functional Changes in Caste System ) : ಸಮಕಾಲೀನ ಭಾರತದಲ್ಲಿ ಜಾತಿ ವ್ಯವಸ್ಥೆಯು ವಿಘಟಿತವೂ ಆಗದೆ ಕಣ್ಮರೆಯೂ ಆಗಿಲ್ಲ . ಆದರೆ ಗಮನಾರ್ಹವಾದ ಬದಲಾವಣೆಗಳುಂಟಾಗಿವೆ . ಜಾತಿಯ ಪ್ರಧಾನ ಲಕ್ಷಣವಾದ

1 ) ಜನ್ಮದತ್ತವಾದ ಸದಸ್ಯತ್ವ ಮತ್ತು

2 ) ಏಣಿಶ್ರೇಣಿಯ ಸ್ವರೂಪ . ಇವುಗಳಲ್ಲಿ ಬದಲಾವಣೆ ಗಳಾಗಿಲ್ಲ . ಆದರೆ ಕಾರ್ಯಾತ್ಮಕ ಬದಲಾವಣೆಗಳನ್ನು ಕೆಳಕಂಡಂತೆ ಗುರ್ತಿಸಬಹುದಾಗಿದೆ . –

ಅ ) ವೃತ್ತಿಯ ಆಯ್ಕೆಗಳು ಮುಕ್ತವಾಗಿವೆ . –

ಆ ) ಜಾತಿ ಪಂಚಾಯತಿಗಳು ನಶಿಸಿವೆ ಅಥವಾ ಕಣ್ಮರೆಯಾಗಿವೆ .

ಇ ) ಸಹಭೋಜನದ ನಿರ್ಬಂಧಗಳು ಸಡಿಲಗೊಂಡಿವೆ .

ಈ ) ಜಾತಿಯು ದೈವಸೃಷ್ಟಿ ಎಂಬ ನಂಬಿಕೆ ಬದಲಾಗಿದ್ದು ಜಾತಿ ಸಂಬಂಧಿತ ನಿರ್ಬಂಧಗಳು ಕಡಿಮೆಯಾಗಿವೆ .

ಉ ) ವ್ಯಕ್ತಿ ಸ್ವಾತಂತ್ರ್ಯಕ್ಕೆ ದೊರೆತ ಪ್ರಾಧಾನ್ಯತೆಯಿಂದಾಗಿ ಜಾತಿಯು ವ್ಯಕ್ತಿಯ ಮೇಲೆ ಹೊಂದಿದ್ದ ವೃತ್ತಿ ನಿರ್ಬಂಧಗಳು ಕಡಿಮೆಯಾಗಿವೆ . ಆದರೆ ಕೆಲವು ಹಂತದಲ್ಲಿ ಜಾತಿ ಆಧಾರಿತ ಸಾಮಾಜಿಕ ಅಂತಸ್ತು ಇನ್ನೂ ಕೂಡ ಅಸ್ತಿತ್ವದಲ್ಲಿದೆ .

( 2 ) ಜಾತಿ ವ್ಯವಸ್ಥೆಯ ಪಾತ್ರದಲ್ಲಾದ ಪ್ರಮುಖ ಬದಲಾವಣೆಗಳು :

1 ) ಚುನಾವಣೆಗಳಲ್ಲಿ ಜಾತಿ ( Caste Based Election ) : ಇಂದು ಭಾರತದಲ್ಲಿ ಜಾತಿ ಪದ್ಧತಿ ಮತ್ತು ಪ್ರಜಾಪ್ರಭುತ್ವಗಳು ಒಟ್ಟಿಗೆ ಅಸ್ತಿತ್ವದಲ್ಲಿವೆ ಎನ್ನಬಹುದಾಗಿದೆ . ಜಾತಿಯು ಚುನಾವಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ . ಮತ ಸೆಳೆಯುವ ಮಾಧ್ಯಮವಾಗಿ ಜಾತಿಗಿರುವ ಬಲವನ್ನು ಎಲ್ಲಾ ರಾಜಕೀಯ ಪಕ್ಷಗಳು ಅರಿತಿವೆ . ಎಂ.ಎನ್ . ಶ್ರೀನಿವಾಸರು ಹೇಳುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒದಗಿಸಿದ ಸಾಂವಿಧಾನಿಕ ಸಂರಕ್ಷಣಾ ಕ್ರಮಗಳು ಜಾತಿಗೆ ಹೊಸ ಜೀವ ನೀಡಿದೆ .

2 ) ಹೆಚ್ಚುತ್ತಿರುವ ಜಾತಿ ಪ್ರಜ್ಞೆ ಮತ್ತು ಜಾತಿ ಸಂಘಟನೆಗಳು ( Increase in Caste Consciousness and Organizations ) : ಇಂದು ಜಾತಿ ಪ್ರಜ್ಞೆ ಹೆಚ್ಚುತ್ತಿದ್ದು , ಅದಕ್ಕನುಗುಣವಾಗಿ ಜಾತಿ ಸಂಘಟನೆಗಳು ಹೆಚ್ಚುತ್ತಿವೆ . ಜಾತಿ ಆಧಾರಿತ ಶೈಕ್ಷಣಿಕ ಸಂಸ್ಥೆಗಳು , ಬ್ಯಾಂಕುಗಳು , ವಿದ್ಯಾರ್ಥಿ ನಿಲಯಗಳು , ಸಹಕಾರ ಸಂಘಗಳು , ಕಲ್ಯಾಣ ಮಂಟಪಗಳು , ಸಮ್ಮೇಳನಗಳು ಮತ್ತು ಪತ್ರಿಕೆಗಳು ಜಾತಿ ಪ್ರಜ್ಞೆ ಹೆಚ್ಚುತ್ತಿರುವುದರ ಸೂಚಕಗಳಾಗಿವೆ . ಜಾತಿ ಸಂಘಟನೆಯನ್ನು ಬಲಪಡಿಸುವುದು ಕರ್ತವ್ಯವೆಂದು ಭಾವಿಸುತ್ತಾರೆ . ಈ ರೀತಿ ಜಾತಿ ವರ್ತುಲವೊಂದು ನಿರ್ಮಿತವಾಗುತ್ತಿದೆ . ಹಾಗೆಯೇ ಜಾತಿ ಐಕ್ಯತೆಯ ಭಾವನೆಯು ಬೆಳೆದು , ಬಲವಾಗಿ ಜಾತಿ ಪ್ರೇಮ ಹೆಚ್ಚುತ್ತಿದೆ .

3 ) ಆಧುನಿಕ ಸಂಪರ್ಕ ಹಾಗೂ ಸಂವಹನ ಮಾಧ್ಯಮಗಳ ಪ್ರಭಾವ ( Impact of Modern Means of Transport and Communication ) : ಎಂ.ಎನ್.ಶ್ರೀನಿವಾಸರ ಪ್ರಕಾರ “ ಭಾರತದಾದ್ಯಂತ ರಸ್ತೆ , ರೈಲುಗಳ ನಿರ್ಮಾಣ , ಅಂಚೆ , ಅಗ್ಗದಲ್ಲಿ ದೊರೆಯುವ ಕಾಗದ ಮತ್ತು ಪ್ರಾಂತೀಯ ಭಾಷೆಗಳಲ್ಲೂ ಲಭ್ಯವಾದ ಮುದ್ರಣ ತಂತ್ರಜ್ಞಾನಗಳು ” ಮೊದಲಾದ ಸೌಕರ್ಯಗಳು ಹಿಂದಿಗಿಂತಲೂ ಹೆಚ್ಚಾಗಿ ಜಾತಿ ಪದ್ಧತಿ ಸಂಘಟಿಸಲು ಅನುಕೂಲ ಮಾಡಿಕೊಟ್ಟಿದೆ . ಅಂಚೆ ಕಾರ್ಡೊಂದರಲ್ಲಿ ಜಾತಿ ಸಭೆಯ ಮಾಹಿತಿಯನ್ನು ತಲುಪಿಸಬಹುದು . ರೈಲು ಸಾರಿಗೆಯು ಸದಸ್ಯರು ಎಷ್ಟೇ ದೂರವಿದ್ದರೂ ಸಭೆಗೆ ಹಾಜರಾಗಬಹುದಾದ ಅವಕಾಶವನ್ನು ಕಲ್ಪಿಸಿದೆ . ಅಗ್ಗದ ದರದಲ್ಲಿ ಮುದ್ರಣ ಕಾಗದದ ಲಭ್ಯತೆಯಿಂದಾಗಿ ಜಾತಿ ಸದಸ್ಯರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶವುಳ್ಳ ನಿಯತಕಾಲಿಕಗಳನ್ನು ಮುದ್ರಿಸಲು ಸಾಧ್ಯವಾಗಿದೆ .

4 ) ಆಧುನಿಕ ಶಿಕ್ಷಣದ ಪ್ರಭಾವ ( Impact of Modern Education ) : ಆಧುನಿಕ ಕಾಲವಾದ ಇಂದು ನಮ್ಮ ದೇಶದಲ್ಲಿ ಶಿಕ್ಷಣ ನೀತಿಯು ಉದಾರ ಸ್ವರೂಪವನ್ನು ಹೊಂದಿದೆ . ಶಿಕ್ಷಣದಿಂದ ಸಮಾನತೆ , ಮುಕ್ತತೆ , ಭ್ರಾತೃತ್ವ ವೈಜ್ಞಾನಿಕ ದೃಷ್ಟಿಕೋನ , ಧರ್ಮನಿರಪೇಕ್ಷತೆ ಮುಂತಾದವು ಗಳಿಂದ ಜಾತಿ ಧೋರಣೆಗಳು ಬದಲಾಗಿದೆ . ಜಾತಿಗಳು ನಿರ್ಮೂಲನವಾಗುವುದರ ಬದಲು , ಜಾತಿ ಐಕ್ಯತೆ ಹೆಚ್ಚುತ್ತಿದೆ . ಸುಶಿಕ್ಷಿತ ನಾಯಕರು ಜಾತಿ ಪತ್ರಿಕೆಗಳನ್ನು ಪ್ರಕಟ ಪಡಿಸುತ್ತಿದ್ದಾರೆ ಹಾಗೂ ಸಮ್ಮೇಳನಗಳನ್ನು ನಡೆಸುತ್ತಾರೆ . ಸ್ವಜಾತಿಯ ಬಡವರಿಗೆ ನೆರವು ನೀಡುತ್ತಾರೆ ಹಾಗೂ ಅವರಿಗಾಗಿ ಹಣ ಸಂಗ್ರಹಣೆಯನ್ನು ಮಾಡುತ್ತಾರೆ . ಹೀಗಾಗಿ ಮೊದಲಿಗಿಂತ ಹೆಚ್ಚಾಗಿ ಜಾತಿಗಳು ಸಂಘಟಿತಗೊಂಡಿದೆ ಆದರೆ ವಿವಿಧ ಜಾತಿಗಳ ನಡುವೆ ಮೊದಲಿದ್ದ ಅಂತರ ಮತ್ತು ಅವಲಂಬನೆ ಕಡಿಮೆಯಾಗಿದೆ . ಈ ರೀತಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಜಾತಿ ಪದ್ಧತಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ .

44. ಪರಿಶಿಷ್ಟ ಜಾತಿಗಳ ಸಮಸ್ಯೆಗಳನ್ನು ತಿಳಿಸಿ .

ಪರಿಶಿಷ್ಟ ಜಾತಿಯವರ ಸಮಸ್ಯೆಗಳು : ಭಾರತದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಅಸ್ಪಶ್ಯರು ಅಥವಾ ಪರಿಶಿಷ್ಟ ಜಾತಿಯವರು ಮೊದಲಿನಿಂದಲೂ ಅವಕಾಶ ವಂಚಿತರಾಗಿ ಬಾಳುತ್ತಿದ್ದರು . ಸಮಾಜದಲ್ಲಿ ಅವರ ಸ್ಥಿತಿ ತುಂಬಾ ಹೀನಾಯ ಮಾನವಾಗಿತ್ತು . ಕ್ರಮೇಣ ಅವರ ಸ್ಥಿತಿಯಲ್ಲಿ ಅನೇಕ ಬದಲಾವಣೆಗಳಾದವು . ಮೊದಲಿನ ಪರಿಸ್ಥಿತಿ ಈಗಿಲ್ಲದಿದ್ದರೂ , ಅವರ ಸಮಸ್ಯೆಗಳು ಅಥವಾ ದೌರ್ಬಲ್ಯಗಳು ಏನಿತ್ತೆಂದು ತಿಳಿಯಬಹುದು . ಅವರಿಗೆ ಸಾಮಾಜಿಕವಾಗಿ ಹಲವಾರು ನಿರ್ಬಂಧಗಳನ್ನು ಹೇರಿದ್ದರು . ಈ ನಿರ್ಬಂಧಗಳನ್ನು ಮೂರು ರೀತಿಯಾಗಿ ವರ್ಗೀಕರಿಸಬಹುದು . ಅವುಗಳು

1 ) ಸಾಮಾಜಿಕ ದೌರ್ಬಲ್ಯಗಳು

2 ) ಆರ್ಥಿಕ ದೌರ್ಬಲ್ಯಗಳು

3 ) ಧಾರ್ಮಿಕ ದೌರ್ಬಲ್ಯಗಳು

1 ) ಸಾಮಾಜಿಕ ದೌರ್ಬಲ್ಯಗಳು ( Social disabilities ) :

ಅ ) ಸಾರ್ವಜನಿಕ ಸೌಲಭ್ಯಗಳಾದ ಬಾವಿಗಳು , ಶಾಲೆಗಳು ಮತ್ತು ರಸ್ತೆಗಳಿಗೆ ಪ್ರವೇಶ ನಿರಾಕರಣೆ ಅಥವಾ ಸೀಮಿತ ಅವಕಾಶ ,

ಆ ) ದೇವಸ್ಥಾನಗಳಿಗೆ ಪ್ರವೇಶ ನಿಷೇಧ . ಇದಲ್ಲದೆ ದೇವಸ್ಥಾನಗಳಿಗೆ ಸೇರಿದ ಛತ್ರಗಳು , ಕೊಳಗಳಿಗೂ ಪ್ರವೇಶ ನಿಷಿದ್ಧವಾಗಿತ್ತು . ವೇದಗಳ ಕಲಿಕೆ ನಿಷಿದ್ಧವಾಗಿತ್ತು . ಇವರು ಸನ್ಯಾಸತ್ವವನ್ನು ಸ್ವೀಕರಿಸುವಂತಿರಲಿಲ್ಲ .

ಇ ) ಉನ್ನತ ಜಾತಿಯವರ ಮನೆಗಳ ಹತ್ತಿರದ ರಸ್ತೆಗಳಲ್ಲಿ ಇವರಿಗೆ ಸಂಚಾರ ನಿಷಿದ್ಧವಾಗಿತ್ತು .

2 ) ಆರ್ಥಿಕ ದೌರ್ಬಲ್ಯಗಳು ( Economic Disabilities ) :

ಅ ) ಪರಿಶಿಷ್ಟ ಜಾತಿಯವರನ್ನು ಸಾಮಾಜಿಕ ಘನತೆ ಹೊಂದಿದ ಮತ್ತು ಲಾಭದಾಯಕ ವೃತ್ತಿಯಿಂದ ಹೊರಗಿಟ್ಟಿದ್ದರು . ಕೊಳಕು ಎಂದು ಭಾವಿಸುವ ಮತ್ತು ದೈಹಿಕ ಶ್ರಮಗಳ ಕೆಲಸಗಳಿಗೆ ಸೀಮಿತಗೊಳಿಸಿದ್ದರು .

ಆ ) ಉನ್ನತ ಜಾತಿಯವರ ಮನೆಗಳಲ್ಲಿ ಅತಿ ಕಡಿಮೆ ಅಥವಾ ಉಚಿತವಾಗಿ ಸೇವೆ ಮಾಡುವಂತೆ ನಿರ್ಬಂಧವನ್ನು ಹೇರಿದ್ದರು . ಅವರಿಗಾಗಿ ಎಲ್ಲಾ ಬಗೆಯ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಕಾಗಿತ್ತು .

ಇ ) ವೃತ್ತಿಯು ವಂಶಪಾರಂಪರ್ಯವಾಗಿದ್ದುದರಿಂದ ವ್ಯಕ್ತಿಯ ಆರ್ಥಿಕ ಅವಕಾಶಗಳು ಸೀಮಿತವಾಗಿರುತ್ತಿದ್ದವು . ಪ್ರತಿಭೆ ಇದ್ದರೂ ಕೂಡ , ಪ್ರತಿಯೊಬ್ಬನೂ ಆತನ ಪ್ರತಿಭೆಗೆ ಸಂಬಂಧಿಸದ ವೃತ್ತಿಯನ್ನೇ ಕೈಗೊಳ್ಳಬೇಕಿತ್ತು .

3 ) ಧಾರ್ಮಿಕ ದೌರ್ಬಲ್ಯಗಳು ( Religious Disabilities ) :

ಅ ) ಪರಿಶಿಷ್ಟ ಜಾತಿಯವರಿಗೆ ಹಲವಾರು ಧಾರ್ಮಿಕ ನಿರ್ಬಂಧಗಳಿತ್ತು . ದೇವಾಲಯಗಳಿಗೆ ಪ್ರವೇಶವಿರಲಿಲ್ಲ . ಪವಿತ್ರ ಸ್ಥಳಗಳು ಅಪವಿತ್ರಗೊಳ್ಳುವುದೆಂಬ ಕಾರಣದಿಂದ ಅವರನ್ನು ದೂರವಿಟ್ಟಿದ್ದರು . ಹಾಗೆಯೇ ಪವಿತ್ರ ಗ್ರಂಥಗಳ ಪಠಣ ನಿಷಿದ್ಧವಾಗಿತ್ತು .

ಆ ) ಡಿ.ಎನ್.ಮಜುಂದಾರ್‌ರವರು ಅಭಿಪ್ರಾಯಪಟ್ಟಂತೆ ಪರಿಶಿಷ್ಟ ಜಾತಿಯವರ ಸ್ಥಾನಮಾನಗಳು ದೇಶದಾದ್ಯಂತ ಒಂದೇ ಆಗಿರಲಿಲ್ಲ . ಒಂದು ಪ್ರದೇಶದಲ್ಲಿ ಅಸ್ಪೃಶ್ಯವಾಗಿದ್ದ ಜಾತಿ ಇನ್ನೊಂದು ಪ್ರದೇಶದಲ್ಲಿ ಅಸ್ಪಶ್ಯವಾಗಿರಲಿಲ್ಲ . ದಮನಿತ ಜಾತಿಗಳು ಸಂಖ್ಯಾತ್ಮಕವಾಗಿ ಅಲ್ಪವಾಗಿದ್ದಾಗ ಅವರ ಮೇಲಿನ ನಿರ್ಬಂಧಗಳು ಕಠಿಣವಾಗಿರುತ್ತಿದ್ದವು . ಸಂಖ್ಯಾತ್ಮಕವಾಗಿ ಪ್ರಬಲವಾದ ಜಾತಿಗಳಿರುವೆಡೆಗಳಲ್ಲಿ ಅಥವಾ ಪ್ರದೇಶವೊಂದರ ಎಲ್ಲಾ ಜಾತಿಗಳೂ ಒಂದೇ ಜನಾಂಗಕ್ಕೆ ಸೇರಿದೆಡೆಗಳಲ್ಲಿ ಹೀನವೆಂದು ಭಾವಿಸಲ್ಪಟ್ಟ ಕೆಲಸ ಮಾಡುವ ಜಾತಿಗಳ ಮೇಲೆ ಮಾತ್ರ ನಿರ್ಬಂಧಗಳನ್ನು ಹೇರಲಾಗುತ್ತಿತ್ತು . ಉನ್ನತ ಜಾತಿಯವರ ಸಂಖ್ಯೆ ಕಡಿಮೆ ಇದ್ದು , ಕೆಳಜಾತಿಗಳು ಸಂಖ್ಯಾತ್ಮಕ ಪ್ರಾಬಲ್ಯ ಹೊಂದಿದ್ದ ಪ್ರದೇಶಗಳಲ್ಲಿ ಮಡಿ ಮೈಲಿಗೆಗಳ ಭಾವನೆಯ ಪ್ರಮಾಣವು ಅತ್ಯಲ್ಪವಾಗಿರುತ್ತಿತ್ತು . ಪರಿಶಿಷ್ಟ ಅಥವಾ ದಮನಿತ ಜಾತಿಯವರು ಸಿರಿವಂತಿಕೆ ಗಳಿಸಿ , ಜೀವನದಲ್ಲಿ ಯಶಸ್ವಿಯಾದವರು ಮತ್ತು ಆಸ್ತಿ ಪಾಸ್ತಿ ಹೊಂದಿದವರು ಉನ್ನತ ಸಾಮಾಜಿಕ ಅಂತಸ್ತನ್ನು ಪಡೆಯುತ್ತಿದ್ದರು . ಹೀಗೆ ಪರಿಶಿಷ್ಟ ಜಾತಿಗಳ ಸಮಸ್ಯೆ ದಿನ ಕ್ರಮೇಣ ಬದಲಾಗುತ್ತಿದೆ .

45. ಭಾರತೀಯ ಬುಡಕಟ್ಟುಗಳ ಸಮಸ್ಯೆಗಳನ್ನು ವಿವರಿಸಿ .

ಭಾರತೀಯ ಬುಡಕಟ್ಟುಗಳ ಸಮಸ್ಯೆಗಳು ( Problems of Indian Tribes ) : ಬುಡಕಟ್ಟು ಸಮೂಹಗಳು ಸಾಮಾಜಿಕವಾಗಿ , ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಹಳ ಹಿಂದುಳಿದಿವೆ . ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ . ಅವುಗಳಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿದ್ದರೆ ಇನ್ನು ಕೆಲವು ಎಲ್ಲಾ ಪ್ರದೇಶಗಳ ಬುಡಕಟ್ಟು ಸಮೂಹಗಳಿಗೆ ಅನ್ವಯವಾಗುತ್ತವೆ . ಬುಡಕಟ್ಟು ಸಮೂಹವು ಎದುರಿಸುತ್ತಿರುವ ಸಮಸ್ಯೆಗಳನ್ನು ಕೆಳಕಂಡಂತೆ ವರ್ಗೀಕರಿಸಬಹುದು .

1 ) ಭೌಗೋಳಿಕ ಪ್ರತ್ಯೇಕತೆ ( Geographical Isolation ) : ಬುಡಕಟ್ಟು ಜನಾಂಗದವರು ಗುಡ್ಡಗಾಡು ಗಳಲ್ಲಿ , ದುರ್ಗಮ ಅರಣ್ಯಗಳಲ್ಲಿ ವಾಸಿಸುತ್ತಿದ್ದರು . ಇವು ಅವರ ಸಾಂಪ್ರದಾಯಿಕ ನೆಲೆಗಳಾಗಿತ್ತು . ನೂರಾರು ವರ್ಷಗಳು ಪ್ರಮುಖ ವಾಹಿನಿಯಿಂದ ಪ್ರತ್ಯೇಕವಾಗಿದ್ದುದರಿಂದ , ಇವರಿಗೆ ಪ್ರಗತಿಯ ಅವಕಾಶಗಳು ದೊರೆಯದೆ ಸಮಸ್ಯೆಗಳಿಗೆ ಕಾರಣವಾಯಿತು .

2 ) ಸಾಂಸ್ಕೃತಿಕ ಸಮಸ್ಯೆಗಳು ( Cultural Problems ) : ಬುಡಕಟ್ಟು ಜನರ ಸಾಂಸ್ಕೃತಿಕ ವೈಶಿಷ್ಟ್ಯಗಳಾದ ನೃತ್ಯ , ಸಂಗೀತ ಮತ್ತು ಕುಶಲ ಕಲೆಗಳು ನಶಿಸುತ್ತಿವೆ . ಅನ್ಯ ಸಂಸ್ಕೃತಿ ತಿಯ ಪ್ರಭಾವದಿಂದಾಗಿ , ತಮ್ಮ ಸಂಸ್ಕೃತಿಯಿಂದ ವಿಮುಖ ರಾಗುತ್ತಿದ್ದಾರೆ . ಅವರ ಜೀವನ ಶೈಲಿ ಬದಲಾಗುತ್ತಿದೆ . ಧರ್ಮದ ಆಧಾರದ ಮೇಲೆ ಉಪಪಂಗಡಗಳಾಗಿ , ಈಗ ಅವರಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ .

3 ) ಸಾಮಾಜಿಕ ಸಮಸ್ಯೆಗಳು ( Social Problems ) : ಬಾಹ್ಯ ಜಗತ್ತಿನ ಸಂಪರ್ಕದಿಂದಾಗಿ , ಇವರಲ್ಲಿ ಸಾಮಾಜಿಕ ಅನಿಷ್ಟ ಪದ್ಧತಿಗಳಾದ ವರದಕ್ಷಿಣೆ , ಬಾಲ್ಯವಿವಾಹ , ಶಿಶುಹತ್ಯೆ , ಅಸ್ಪೃಶ್ಯತೆಯ ಆಚರಣೆ ಇತ್ಯಾದಿಗಳು ಸಾಮಾನ್ಯವಾಗುತ್ತಿವೆ . ಹೊರಗಿನವರೊಂದಿಗಿನ ಸಂಪರ್ಕದಿಂದಾಗಿ ಸಾಮಾಜಿಕ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತಿವೆ .

4 ) ಆರ್ಥಿಕ ಸಮಸ್ಯೆಗಳು ( Economic Problems ) : ಬುಡಕಟ್ಟು ಜನರು ಆರ್ಥಿಕವಾಗಿ ಹಿಂದುಳಿದಿದ್ದಾರೆ . ಇವರು ತಂತ್ರಜ್ಞಾನದ ಬಳಕೆಯಿಲ್ಲದ ಕೃಷಿಯನ್ನು ಅವಲಂಬಿಸಿದ್ದರು . ಇವರು ಎದುರಿಸುತ್ತಿರುವ ಪ್ರಮುಖ ಆರ್ಥಿಕ ಸಮಸ್ಯೆಗಳು ಕೆಳಕಂಡಂತಿವೆ .

ಎ ) ಬುಡಕಟ್ಟು ಜನರ ಭೂಮಿ ಅನ್ಯರಿಗೆ ಹಸ್ತಾಂತರವಾದ ಸಮಸ್ಯೆ ( Alienation of Tribal Land to the Non – tribals ) : ಬುಡಕಟ್ಟು ಜನರ ಸುಮಾರು ಶೇ .80 ರಷ್ಟು ಜಮೀನು ಇತರರಿಗೆ ಹಸ್ತಾಂತರವಾಗಿದ್ದರಿಂದ ಅತಂತ್ರರಾಗಿದ್ದಾರೆ . ಬುಡಕಟ್ಟು ನೆಲೆಗಳಲ್ಲಿ ಸರ್ಕಾರವು ಕೈಗೊಳ್ಳುವ ಅಭಿವೃದ್ಧಿ ಪರ ಕಾರ್ಯಕ್ರಮಗಳಾದ ನೀರಾವರಿ , ವಿದ್ಯುಚ್ಛಕ್ತಿ ಯೋಜನೆಗಳು ಅವರನ್ನು ನಿರ್ವಸಿತರನ್ನಾಗಿ ಮಾಡುತ್ತಿದೆ . ಇವರು ಅನಕ್ಷರಸ್ಥರು ಹಾಗೂ ಬಡವರು ಆಗಿರುವುದರಿಂದ ಕಾನೂನಿನ ನೆರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ . ಅಷ್ಟೇ ಅಲ್ಲದೆ ಜಮೀನುದಾರರಿಂದಾಗುವ ಶೋಷಣೆ , ಗುತ್ತಿಗೆದಾರರ ಕಿರುಕುಳಗಳು , ಮಧ್ಯವರ್ತಿಗಳ ಹಾವಳಿ ಹೀಗೆ ಹತ್ತು ಹಲವಾರು ಸಮಸ್ಯೆಗಳು ಇವರ ಅಶಾಂತಿಗೆ ಕಾರಣವಾಗಿವೆ .

ಬಿ ) ಸಾಲಭಾದೆ ( Problem of Indebtness ) : ತಮ್ಮ ಅಗತ್ಯಗಳಿಗಾಗಿ ಜಮೀನನ್ನು ಅಡವಿಟ್ಟು ಮಾಡಿದ ಸಾಲವನ್ನು ತೀರಿಸಲಾಗದೆ ಜಮೀನನ್ನು ಕಳೆದುಕೊಳ್ಳುತ್ತಿದ್ದಾರೆ . ಸರ್ಕಾರ ಇವರ ಜಮೀನಿಗೆ ಕೊಡಬೇಕಾದ ಪರಿಹಾರ ಮೊತ್ತವು ಮಧ್ಯವರ್ತಿಗಳ ಹಾವಳಿಯಿಂದಾಗಿ ಇವರಿಗೆ ತಲುಪದೆ , ಇವರು ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗಿದೆ .

ಸಿ ) ಅರಣ್ಯ ಕಾರ್ಯಾಚರಣೆಯಲ್ಲಿ ಬುಡಕಟ್ಟು ಜನರ Boca ( Exploitation in Forestry Operations ) : ಒಂದು ಕಾಲದಲ್ಲಿ ಬುಡಕಟ್ಟು ಜನರು ಅರಣ್ಯಗಳಲ್ಲಿ ರಾಜರಂತಿದ್ದರು . ಅರಣ್ಯಗಳ ಉತ್ಪತ್ತಿಯಾದ ಉರುವಲು , ಗೃಹ ನಿರ್ಮಾಣ ಸಾಮಾಗಿ , ಔಷಧಗಳು , ಪಶು ಆಹಾರ ಮತ್ತು ಕೃಷಿ ಉಪಕರಣಗಳ ತಯಾರಿಕೆ ಹೀಗೆ ಅವರಿಗೆ ಪೂರ್ಣ ಸ್ವಾತಂತ್ರ್ಯವಿತ್ತು ಹಾಗೂ ಅರಣ್ಯ ರಕ್ಷಕರಾಗಿದ್ದರು . 1952 ರಲ್ಲಿ ಹಾಗೂ 1988 ರಲ್ಲಿ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಿದ್ದರಿಂದ ಇವರ ಹಕ್ಕುಗಳು ಮಾಯವಾಯಿತು . ಇವರಿಗೆ ಒಡೆತನದ ಹಕ್ಕುಗಳಿಲ್ಲ ಮತ್ತು ಪಾರಂಪರಿಕ ವೃತ್ತಿಯಾದ ಅರಣ್ಯ ಉತ್ಪನ್ನಗಳ ಸಂಗ್ರಹಣಕ್ಕೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ , ಮೇಲಾಗಿ ಇವರು ಅರಣ್ಯಗಳ ವಿನಾಶಕರು ಎಂಬ ಆರೋಪ , ಅಭಿವೃದ್ಧಿ ಯೋಜನೆಯ ಫಲ ದೊರೆತಿಲ್ಲ . ಹೀಗೆ ಅವರ ಶೋಷಣೆ ಮುಂದುವರಿಯುತ್ತಲೇ ಇದೆ .

ಡಿ ) ಹಿಂದುಳಿದ ಬೇಸಾಯ ಪದ್ಧತಿಗಳು ( Primitive Method of Cultivation ) : ಬುಡಕಟ್ಟು ಜನರು ಪಾಳು ಬೇಸಾಯ ಪದ್ಧತಿಯನ್ನು ಅನುಸರಿಸುತ್ತಿದ್ದುದರಿಂದ ಇಳುವರಿ ಸರಿಯಾಗಿ ಬರದೆ ಜೀವನೋಪಾಯಕ್ಕೆ ಸಾಕಾಗುತ್ತಿರಲಿಲ್ಲ . ಇವರ ಹಿಡಿತದಲ್ಲಿದ್ದ ಜಮೀನಿನ ಪ್ರಮಾಣ ಕಡಿಮೆ ಆದ್ದರಿಂದ ಸಾಲದ ಬಾಧೆಯಲ್ಲಿಯೇ ಇರಬೇಕಾಗಿತ್ತು ಮತ್ತು ಇವರಿಗೆ ಇತರ ವೃತ್ತಿಗಳ ಜ್ಞಾನವೂ ಇರಲಿಲ್ಲ .

5 ) ಶೈಕ್ಷಣಿಕ ಸಮಸ್ಯೆಗಳು ( Educational Problems ) : ಇವರಿಗೆ ಶಿಕ್ಷಣವು ಅತ್ಯಗತ್ಯವಾಗಿ ಬೇಕಾಗಿದೆ . ಶಿಕ್ಷಣದ ಕೊರತೆಯಿಂದಾಗಿ ಅವಕಾಶಗಳ ಲಾಭ ಪಡೆಯಲಾಗುತ್ತಿಲ್ಲ . 2011 ರ ಜನಗಣತಿಯ ಪ್ರಕಾರ ಸಾಕ್ಷರತಾ ಪ್ರಮಾಣವು ಕೇವಲ ಶೇ .29.6 ; ಇದಕ್ಕೆ ಪ್ರಮುಖ ಕಾರಣಗಳು ಬಡತನ , ಶೈಕ್ಷಣಿಕ ಸಂಸ್ಥೆಗಳ ಅಭಾವ , ಪೂರಕ ಸೇವೆಗಳ ಕೊರತೆ , ಗೈರು ಹಾಜರಿ , ಶಿಕ್ಷಣ ಮಾಧ್ಯಮ , ಶೈಕ್ಷಣಿಕ ನೀತಿಯ ಅಲಭ್ಯತೆ ಇತ್ಯಾದಿ .

6 ) ಲೇವಾದೇವಿಗಾರರಿಂದ ಶೋಷಣೆ ( Exploitation of Tribals by Money Lenders ) : 20 ಜನರ ಪ್ರಮುಖ ಸಮಸ್ಯೆಗಳಲ್ಲಿ ಇದೂ ಒಂದಾಗಿದೆ . ಹಣದ ರೂಪದ ಅರ್ಥ ವ್ಯವಸ್ಥೆಯು ವಸ್ತು ವಿನಿಮಯ ಪದ್ಧತಿಯನ್ನು ಬದಲಾಯಿಸಿತು . ಇವರ ನೆಲೆಗಳಿಗೆ ನುಸುಳಿದ ಲೇವಾದೇವಿಗಾರರು ಸಮಸ್ಯೆಗೆ ಕಾರಣವಾಗಿದ್ದಾರೆ . ಇವರ ಸಾಲಬಾಧೆಗೆ ಕಾರಣಗಳು ಇಂತಿವೆ .

1 ) ಬಡತನ

2 ) ಹಣಸಾಲ ನೀಡುವ ಪದ್ಧತಿಯಲ್ಲಿರುವ ದೋಷಗಳು , ಸಾಂಸ್ಥಿಕ ಹಣಕಾಸು ಸಂಸ್ಥೆಗಳನ್ನು ಕುರಿತು ಮತ್ತು ಕಾನೂನಾತ್ಮಕ ಸಂರಕ್ಷಣೆಗಳ ಅಸ್ತಿತ್ವ ಕುರಿತಾದ ಅಜ್ಞಾನ .

3 ) ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆಯಲು ಅನುಸರಿಸಬೇಕಾದ ಸಂಕೀರ್ಣ ವಿಧಿ ವಿಧಾನಗಳ ಅರಿವಿಲ್ಲದಿರುವಿಕೆ ಅಥವಾ ಅಜ್ಞಾನ ,

4 ) ಸರ್ಕಾರದ ಮತ್ತು ಬ್ಯಾಂಕ್ ಅಧಿಕಾರಿಗಳ ಅಸಡ್ಡೆ .

5 ) ಖಾಸಗಿ ಲೇವಾದೇವಿಗಾರರಿಗೆ ಸಾಲ ಕೊಡುವ ಅತ್ಯುತ್ಸಾಹ .

6 ) ಬುಡಕಟ್ಟು ಜನರಿಗೆ ಸಾಲವು ತಮ್ಮ ಅಸ್ತಿತ್ವಕ್ಕೆ ಅನಿವಾರ್ಯವೆಂಬ ಮನೋಭಾವನೆ .

7 ) ಉದ್ಯೋಗಾವಕಾಶಗಳ ಕೊರತೆ

6 ) ಆರೋಗ್ಯ ಸಮಸ್ಯೆಗಳು ( Health Problems ) :

1 ) ಶುದ್ಧ ಕುಡಿಯುವ ನೀರಿನ ಕೊರತೆ

2 ) ಪೌಷ್ಠಿಕ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ .

3 ) ಸಾಂಕ್ರಾಮಿಕ ರೋಗಗಳು ಈ ರೀತಿ ಭಾರತದಲ್ಲಿ ಬುಡಕಟ್ಟು ಜನರು ಹತ್ತು ಹಲವಾರು ಸಮಸ್ಯೆಗಳಲ್ಲಿ ಒದ್ದಾಡುತ್ತಿದ್ದಾರೆ .

46. ಜಾತಿ ವ್ಯವಸ್ಥೆಯಲ್ಲಾದ ಬದಲಾವಣೆಗಳ ಪ್ರಮುಖ ಕಾರಣಗಳನ್ನು ವಿವರಿಸಿ .

ಬ್ರಿಟಿಷರ ಅವಧಿಯಲ್ಲಿ ಜಾತಿ ವ್ಯವಸ್ಥೆಯಲ್ಲಿ ಉಂಟಾದ ಪರಿವರ್ತನೆಗಳು ಹೀಗಿವೆ . ಬ್ರಿಟಿಷರು ಭಾರತಕ್ಕೆ ತಮ್ಮೊಂದಿಗೆ ತಮ್ಮದೇ ಆದ ಸಾಂಪ್ರದಾಯಿಕ ನಮೂನೆ ಮತ್ತು ಸಂಸ್ಕೃತಿಯನ್ನು ತಂದರು . ಅವರು ಪರಿಚಯಿಸಿದ ವಿವಿಧ ನೀತಿಗಳಿಂದಾಗಿ ವ್ಯವಸ್ಥೆಯಲ್ಲಿ ಅನೇಕ ರೀತಿಯ ಬದಲಾವಣೆ ಕಂಡುಬಂದಿತು . ಅದನ್ನು ಹೀಗೆ ವಿಶ್ಲೇಷಿಸಬಹುದಾಗಿದೆ .

1. ಸಾರ್ವತ್ರಿಕ ಕಾನೂನು ವ್ಯವಸ್ಥೆಯ ಪರಿಚಯ .

2. ಸಮಾಜ ಸುಧಾರಣಾ ಚಳುವಳಿಗಳ ಪ್ರಭಾವ .

3. ಆಂಗ್ಲ ಶಿಕ್ಷಣದ ಪ್ರಭಾವ .

4 . ಹೊಸ ಸಾಮಾಜಿಕ ಸಂಘಟನೆಗಳ ಪ್ರಭಾವ .

5. ಸ್ವಾತಂತ್ರ್ಯ ಚಳುವಳಿಯ ಪ್ರಭಾವ.

6 .ಔದ್ಯೋಗೀಕರಣದ ಮತ್ತು ನಗರೀಕರಣದ ಪ್ರಭಾವ

1. ಸಾರ್ವತ್ರಿಕ ಕಾನೂನು ವ್ಯವಸ್ಥೆಯ ಪರಿಚಯ : ಏಕರೂಪದ ನಾಗರಿಕ ಕಾನೂನುಗಳ ಜಾರಿಯಿಂದಾಗಿ ಜಾತಿ ಪಂಚಾಯಿತಿಗಳ ಪ್ರಾಬಲ್ಯವು ದುರ್ಬಲಗೊಳ್ಳತೊಡಗಿತು . ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬ ನೀತಿ ಜಾರಿಗೆ ಬಂದಿತು . ಬ್ರಿಟಿಷ್ ನ್ಯಾಯಾಲಯಗಳು ಜಾತಿ ಪಂಚಾಯಿತಿಯ ಅಧಿಕಾರವನ್ನು ಪ್ರಶ್ನಿಸತೊಡಗಿತು . ಇದರಿಂದ ಜಾತಿ ಪಂಚಾಯಿತಿಗಳು ತಮ್ಮ ಮೊದಲಿನ ಸ್ವರೂಪವನ್ನು ಕಳೆದುಕೊಳ್ಳತೊಡಗಿದವು . ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಕೆಲವು ಪ್ರಮುಖ ಕಾನೂನುಗಳೆಂದರೆ

ಎ ) ಜಾತಿ ದೌರ್ಬಲ್ಯಗಳ ನಿವಾರಣಾ ಕಾನೂನು 1850 : ಈ ಕಾನೂನು ಅಸ್ಪೃಶ್ಯತೆಯೂ ಸೇರಿದಂತೆ ಜಾತಿಗೆ ಸಂಬಂಧಿಸಿದ ಕೆಲ ಅನಿಷ್ಠ ಆಚರಣೆಗಳನ್ನು ಮತ್ತು ಕೆಲವು ನಾಗರಿಕ ನಿರ್ಬಂಧಗಳನ್ನು ತೆಗೆದುಹಾಕಿತು .

ಬಿ ) ಹಿಂದೂ ವಿಧವಾ ಪುನರ್ ವಿವಾಹ ಕಾಯಿದೆ -1856 : ಈ ಕಾನೂನು ವಿಧವೆಯರಿಗೆ ಸಂಬಂಧಿಸಿದಂತೆ ಇದ್ದ ಕೆಲವು ನಿರ್ಬಂಧಗಳನ್ನು ತೆಗೆದು ಹಾಕಿತು ಮತ್ತು ವಿಧವೆಯರು ಪುನರ್ ವಿವಾಹವಾಗುವ ಅವಕಾಶವನ್ನು ಕಲ್ಪಿಸಿತು .

ಸಿ ) 1972 ರ ವಿಶೇಷ ವಿವಾಹ ಕಾಯಿದೆ : ವಿವಾಹವನ್ನು ಒಂದು ನಾಗರಿಕ ಕರಾರು ಎಂದು ಪರಿಗಣಿಸಿ , ಅಂತರ್ಜಾತಿ ಮತ್ತು ಅಂತರ್ಧಮೀ್ರಯ ವಿವಾಹವನ್ನು ಕಾನೂನು ಬದ್ಧಗೊಳಿಸಿತು .

ಡಿ ) ಇತರ ಶಾಸನಗಳು ಮತ್ತು ಆಡಳಿತಾತ್ಮಕ ಕ್ರಮಗಳು : ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಮುಕ್ತ ಅವಕಾಶವನ್ನು ನೀಡಬೇಕು . ಯಾವುದೇ ಮಕ್ಕಳಿಗೆ ಪ್ರವೇಶ ನೀಡದಿದ್ದಲ್ಲಿ ಅನುದಾನವನ್ನು ನಿಲ್ಲಿಸಲಾಗುತ್ತದೆ ಎಂದು ಘೋಷಿಸಲಾಯಿತು .

1.ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಲು ಮಾಂಟೆಗೋ – ಚಿಲ್ಡ್‌ಫೋರ್ಡ್ ಸುಧಾರಣಾ ಸಮಿತಿಯು ಶೋಷಿತ ವರ್ಗಗಳಿಗೆ ಸ್ಥಳೀಯ ಹಾಗೂ ಶಾಸನಾತ್ಮಕ ಅಂಗಗಳಲ್ಲಿ ವಿಶೇಷ ಪ್ರಾತಿನಿಧ್ಯ ನೀಡುವ ಅವಕಾಶಗಳನ್ನು ಒದಗಿಸಿತು .

2. ಎಲ್ಲಾ ಸಮಾಜ ಸುಧಾರಣಾ ಸಂಘಟನೆಗಳು ಜಾತಿ ನಿರ್ಮೂಲನೆ ಮತ್ತು ಭಾರತೀಯ ಸಮಾಜದ ಪುನರ್‌ ರಚನೆಯ ಹೊಂದಿದ್ದವು

3. ಆಂಗ್ಲ ಶಿಕ್ಷಣದ ಪರಿಣಾಮವಾಗಿ ಕೆಳಜಾತಿಯವರು ತಮ್ಮಗೆ ಒದಗಿದ ಹೊಸ ಬಗೆಯ ಉದ್ಯೋಗಾವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಮುಖ್ಯವಾಹಿನಿಗೆ ಬರತೊಡಗಿದರು .

4. ಹೊಸ ಸಾಮಾಜಿಕ ಸಂಘಟನೆಗಳ ಪ್ರಭಾವದಿಂದ ಎಲ್ಲಾ ವರ್ಗದ ಜನರು ಹೊಸ ಬಗೆಯ ಐಕ್ಯತೆಯನ್ನು ಬೆಳೆಸಿಕೊಂಡರು . ಇದರಿಂದ ಜಾತಿಯ ಸ್ಥಾನವು ದುರ್ಬಲಗೊಳ್ಳತೊಡಗಿತು .

5. ಸ್ವಾತಂತ್ರ್ಯ ಚಳುವಳಿಯ ಪ್ರಭಾವದಿಂದ ಜನರಲ್ಲಿ ರಾಷ್ಟ್ರಪ್ರಜ್ಞೆಯ ಭಾವ ಆಳವಾಗಿ ಬೇರೂರಿ ಸಂಘಟಿತರಾಗ ತೊಡಗಿದರು . ಆಗ ಅವರಿಗೆ ಜಾತಿಬೇಧ ಅಡ್ಡವಾಗಲಿಲ್ಲ ಇದರಿಂದ ಜಾತಿ ಪ್ರಜ್ಞೆ ಕ್ರಮೇಣ ದುರ್ಬಲವಾಗತೊಡಗಿತು .

6. ಔದ್ಯೋಗಿಕರಣ ಮತ್ತು ನಗರೀಕರಣದ ಪ್ರಕ್ರಿಯೆಯಿಂದ ವಿವಿಧ ಜಾತಿಗಳ ಜನರು ಒಟ್ಟಿಗೆ ವಾಸಿಸುವ ಅನಿವಾರ್ಯತೆ ಉಂಟಾಯಿತು . ಸಹಭೋಜನದ ಮೇಲಿದ್ದ ನಿರ್ಬಂಧಗಳು ಕಡಿಮೆಯಾಗತೊಡಗಿದವು . ಕಿಂಗ್‌ ಡೇವಿಸ್‌ರವರ ಅಭಿಪ್ರಾಯದಂತೆ ನಗರಗಳಲ್ಲಿ ಜಾತಿಯ ಆಚರಣೆ ಅಸಾಧ್ಯವಾಗಿ , ಎಲ್ಲರೂ ಒಂದೇ ಎಂಬ ಭಾವನೆ ಮೂಡಲು ಪ್ರಾರಂಭಿಸಿತು .

ಈ ರೀತಿ ಬ್ರಿಟಿಷರ ಅವಧಿಯಲ್ಲಿ ಜಾತಿ ವ್ಯವಸ್ಥೆಯಲ್ಲಿ ಪರಿವರ್ತನೆಗಳಾಯಿತು . ಭಾರತವು ಸ್ವಾತಂತ್ರ್ಯ ಪಡೆದ ನಂತರದ ಅವಧಿಯಲ್ಲಿ ಜಾತಿವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾದವು . ಅವುಗಳನ್ನು ಎರಡು ನೆಲೆಗಳಲ್ಲಿ ವಿಶ್ಲೇಷಿಸಬಹುದಾಗಿದೆ . ಅವುಗಳು

1 ) ಕಾರ್ಯಾತ್ಮಕ ಬದಲಾವಣೆಗಳು ಹಾಗೂ

2 ) ಜಾತಿ ವ್ಯವಸ್ಥೆಯ ಪಾತ್ರದಲ್ಲಾದ ಬದಲಾವಣೆಗಳು

ಎ ) ಜಾತಿ ವ್ಯವಸ್ಥೆಯಲ್ಲಾದ ಕಾರ್ಯಾತ್ಮಕ ಬದಲಾವಣೆಗಳು ( Functional Changes in Caste System ) : ಸಮಕಾಲೀನ ಭಾರತದಲ್ಲಿ ಜಾತಿ ವ್ಯವಸ್ಥೆಯು ವಿಘಟಿತವೂ ಆಗದೆ ಕಣ್ಮರೆಯೂ ಆಗಿಲ್ಲ . ಆದರೆ ಗಮನಾರ್ಹವಾದ ಬದಲಾವಣೆಗಳುಂಟಾಗಿವೆ . ಜಾತಿಯ ಪ್ರಧಾನ ಲಕ್ಷಣವಾದ

1 ) ಜನ್ಮದತ್ತವಾದ ಸದಸ್ಯತ್ವ ಮತ್ತು

2 ) ಏಣಿಶ್ರೇಣಿಯ ಸ್ವರೂಪ . ಇವುಗಳಲ್ಲಿ ಬದಲಾವಣೆಗಳಾಗಿಲ್ಲ . ಆದರೆ ಕಾರ್ಯಾತ್ಮಕ ಬದಲಾವಣೆಗಳನ್ನು ಕೆಳಕಂಡಂತೆ ಗುರ್ತಿಸಬಹುದಾಗಿದೆ .

ಅ ) ವೃತ್ತಿಯ ಆಯ್ಕೆಗಳು ಮುಕ್ತವಾಗಿವೆ .

ಆ ) ಜಾತಿ ಪಂಚಾಯತಿಗಳು ನಶಿಸಿವೆ ಅಥವಾ ಕಣ್ಮರೆಯಾಗಿವೆ .

ಇ ) ಸಹಭೋಜನದ ನಿರ್ಬಂಧಗಳು ಸಡಿಲಗೊಂಡಿವೆ .

ಈ ) ಜಾತಿಯು ದೈವಸೃಷ್ಟಿ ಎಂಬ ನಂಬಿಕೆ ಬದಲಾಗಿದ್ದು ಜಾತಿ ಸಂಬಂಧಿತ ನಿರ್ಬಂಧಗಳು ಕಡಿಮೆಯಾಗಿವೆ .

ಉ ) ವ್ಯಕ್ತಿ ಸ್ವಾತಂತ್ರ್ಯಕ್ಕೆ ದೊರೆತ ಪ್ರಾಧಾನ್ಯತೆಯಿಂದಾಗಿ ಜಾತಿಯು ವ್ಯಕ್ತಿಯ ಮೇಲೆ ಹೊಂದಿದ್ದ ವೃತ್ತಿ ನಿರ್ಬಂಧಗಳು ಕಡಿಮೆಯಾಗಿವೆ . ಆದರೆ ಕೆಲವು ಹಂತದಲ್ಲಿ ಜಾತಿ ಆಧಾರಿತ ಸಾಮಾಜಿಕ ಅಂತಸ್ತು ಇನ್ನೂ ಕೂಡ ಅಸ್ತಿತ್ವದಲ್ಲಿದೆ .

2 ) ಜಾತಿ ವ್ಯವಸ್ಥೆಯ ಪಾತ್ರದಲ್ಲಾದ ಪ್ರಮುಖ ಬದಲಾವಣೆಗಳು :

1 ) ಚುನಾವಣೆಗಳಲ್ಲಿ ಜಾತಿ ( Caste Based Election ) : ಇಂದು ಭಾರತದಲ್ಲಿ ಜಾತಿ ಪದ್ಧತಿ ಮತ್ತು ಪ್ರಜಾಪ್ರಭುತ್ವಗಳು ಒಟ್ಟಿಗೆ ಅಸ್ತಿತ್ವದಲ್ಲಿವೆ ಎನ್ನಬಹುದಾಗಿದೆ . ಜಾತಿಯು ಚುನಾವಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ . ಮತ ಸೆಳೆಯುವ ಮಾಧ್ಯಮವಾಗಿ ಜಾತಿಗಿರುವ ಬಲವನ್ನು ಎಲ್ಲಾ ರಾಜಕೀಯ ಪಕ್ಷಗಳು ಅರಿತಿವೆ . ಎಂ.ಎನ್ . ಶ್ರೀನಿವಾಸರು ಹೇಳುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒದಗಿಸಿದ ಸಾಂವಿಧಾನಿಕ ಸಂರಕ್ಷಣಾ ಕ್ರಮಗಳು ಜಾತಿಗೆ ಹೊಸ ಜೀವ ನೀಡಿದೆ .

2 ) ಹೆಚ್ಚುತ್ತಿರುವ ಜಾತಿ ಪ್ರಜ್ಞೆ ಮತ್ತು ಜಾತಿ ಸಂಘಟನೆಗಳು ( Increase in Caste Consciousness and Organizations ) : ಇಂದು ಜಾತಿ ಪ್ರಜ್ಞೆ ಹೆಚ್ಚುತ್ತಿದ್ದು , ಅದಕ್ಕನುಗುಣವಾಗಿ ಜಾತಿ ಸಂಘಟನೆಗಳು ಹೆಚ್ಚುತ್ತಿವೆ . ಜಾತಿ ಆಧಾರಿತ ಶೈಕ್ಷಣಿಕ ಸಂಸ್ಥೆಗಳು , ಬ್ಯಾಂಕುಗಳು , ವಿದ್ಯಾರ್ಥಿ ನಿಲಯಗಳು , ಸಹಕಾರ ಸಂಘಗಳು , ಕಲ್ಯಾಣ ಮಂಟಪಗಳು , ಸಮ್ಮೇಳನಗಳು ಮತ್ತು ಪತ್ರಿಕೆಗಳು ಜಾತಿಪ್ರಜ್ಞೆ ಹೆಚ್ಚುತ್ತಿರುವುದರ ಸೂಚಕಗಳಾಗಿವೆ . ಜಾತಿ ಸಂಘಟನೆಯನ್ನು ಬಲಪಡಿಸುವುದು ಕರ್ತವ್ಯವೆಂದು ಭಾವಿಸುತ್ತಾರೆ . ಈ ರೀತಿ ಜಾತಿ ವರ್ತುಲವೊಂದು ನಿರ್ಮಿತವಾಗುತ್ತಿದೆ . ಹಾಗೆಯೇ ಜಾತಿ ಐಕ್ಯತೆಯ ಭಾವನೆಯು ಬೆಳೆದು , ಬಲವಾಗಿ ಜಾತಿ ಪ್ರೇಮ ಹೆಚ್ಚುತ್ತಿದೆ .

3 ) ಆಧುನಿಕ ಸಂಪರ್ಕ ಹಾಗೂ ಸಂವಹನ ಮಾಧ್ಯಮಗಳ ಪ್ರಭಾವ ( Impact of Modern Means of Transport and Communication ) : ಎಂ.ಎನ್.ಶ್ರೀನಿವಾಸರ ಪ್ರಕಾರ “ ಭಾರತದಾದ್ಯಂತ ರಸ್ತೆ , ರೈಲುಗಳ ನಿರ್ಮಾಣ , ಅಂಚೆ , ಅಗ್ಗದಲ್ಲಿ ದೊರೆಯುವ ಕಾಗದ ಮತ್ತು ಪ್ರಾಂತೀಯ ಭಾಷೆಗಳಲ್ಲೂ ಲಭ್ಯವಾದ ಮುದ್ರಣ ತಂತ್ರಜ್ಞಾನಗಳು ” ಮೊದಲಾದ ಸೌಕರ್ಯಗಳು ಹಿಂದಿಗಿಂತಲೂ ಹೆಚ್ಚಾಗಿ ಜಾತಿಪದ್ಧತಿ ಸಂಘಟಿಸಲು ಅನುಕೂಲ ಮಾಡಿ ಕೊಟ್ಟಿದೆ . ಅಂಚೆ ಕಾರ್ಡೊಂದರಲ್ಲಿ ಜಾತಿ ಸಭೆಯ ಮಾಹಿತಿಯನ್ನು ತಲುಪಿಸಬಹುದು . ರೈಲು ಸಾರಿಗೆಯು ಸದಸ್ಯರು ಎಷ್ಟೇ ದೂರವಿದ್ದರೂ ಸಭೆಗೆ ಹಾಜರಾಗಬಹುದಾದ ಅವಕಾಶವನ್ನು ಕಲ್ಪಿಸಿದೆ . ಅಗ್ಗದ ದರದಲ್ಲಿ ಮುದ್ರಣ ಕಾಗದದ ಲಭ್ಯತೆಯಿಂದಾಗಿ ಜಾತಿ ಸದಸ್ಯರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶವುಳ್ಳ ನಿಯತಕಾಲಿಕಗಳನ್ನು ಮುದ್ರಿಸಲು ಸಾಧ್ಯವಾಗಿದೆ .

4 ) ಆಧುನಿಕ ಶಿಕ್ಷಣದ ಪ್ರಭಾವ ( Impact of Modern Education ) : ಆಧುನಿಕ ಕಾಲವಾದ ಇಂದು ನಮ್ಮ ದೇಶದಲ್ಲಿ ಶಿಕ್ಷಣ ನೀತಿಯು ಉದಾರ ಸ್ವರೂಪವನ್ನು ಹೊಂದಿದೆ . ಶಿಕ್ಷಣದಿಂದ ಸಮಾನತೆ , ಮುಕ್ತತೆ , ಭಾತೃತ್ವ , ವೈಜ್ಞಾನಿಕ ದೃಷ್ಟಿಕೋನ , ಧರ್ಮನಿರಪೇಕ್ಷತೆ ಮುಂತಾದವು ಗಳಿಂದ ಜಾತಿ ಧೋರಣೆಗಳು ಬದಲಾಗಿದೆ . ಜಾತಿಗಳು ನಿರ್ಮೂಲನವಾಗುವುದರ ಬದಲು , ಜಾತಿ ಐಕ್ಯತೆ ಹೆಚ್ಚುತ್ತಿದೆ . ಸುಶಿಕ್ಷಿತ ನಾಯಕರು ಜಾತಿ ಪತ್ರಿಕೆಗಳನ್ನು ಪ್ರಕಟ ಪಡಿಸುತ್ತಿದ್ದಾರೆ ಹಾಗೂ ಸಮ್ಮೇಳನಗಳನ್ನು ನಡೆಸುತ್ತಾರೆ . ಸ್ವಜಾತಿಯ ಬಡವರಿಗೆ ನೆರವು ನೀಡುತ್ತಾರೆ ಹಾಗೂ ಅವರಿಗಾಗಿ ಹಣ ಸಂಗ್ರಹಣೆಯನ್ನು ಮಾಡುತ್ತಾರೆ . ಹೀಗಾಗಿ ಮೊದಲಿಗಿಂತ ಹೆಚ್ಚಾಗಿ ಜಾತಿಗಳು ಸಂಘಟಿತಗೊಂಡಿದೆ ಆದರೆ ವಿವಿಧ ಜಾತಿಗಳ ನಡುವೆ ಮೊದಲಿದ್ದ ಅಂತರ ಮತ್ತು ಅವಲಂಬನೆ ಕಡಿಮೆಯಾಗಿದೆ . ಈ ರೀತಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಜಾತಿ ಪದ್ಧತಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ . ಜಾತಿ ವ್ಯವಸ್ಥೆಯಲ್ಲಿ ಉಂಟಾದ ಬದಲಾವಣೆಗೆ ಪ್ರಮುಖ ಕಾರಣಗಳು ಇಂತಿವೆ .

1 ) ಸಾರ್ವತ್ರಿಕವಾದ ಕಾನೂನು ವ್ಯವಸ್ಥೆ : ಭಾರತವು ಪ್ರಜಾಪ್ರಭುತ್ವವನ್ನು ಹೊಂದಿರುವ ಅತಿ ದೊಡ್ಡ ದೇಶ . ಪ್ರಜಾಪ್ರಭುತ್ವದಂತೆ ಎಲ್ಲರೂ ಸಮಾನರು ಎಂಬ ಭಾವನೆ ದೃಢಗೊಳ್ಳತೊಡಗಿತು . ಸಂವಿಧಾನದ ಪ್ರಕಾರ ಎಲ್ಲರಿಗೂ ಸಮಾನ ಅವಕಾಶ ಎಂದರೆ ಶಿಕ್ಷಣದಲ್ಲಿ ಮತ್ತು ಉದ್ಯೋಗ ಗಳಲ್ಲಿ ಮತ್ತು ಸಾರ್ವತ್ರಿಕ ಪ್ರೌಢ ಮತದಾನ ಪದ್ಧತಿ ಸಾಮಾಜಿಕ ಶಾಸನಗಳು – ಇವುಗಳಿಂದ ಜಾತಿಯ ಹಿಡಿತ ಕಡಿಮೆಯಾಗತೊಡಗಿತು .

2 ) ಆಧುನಿಕ ಮತ್ತು ಆಂಗ್ಲ ಶಿಕ್ಷಣದ ಪ್ರಭಾವ : ಸಾರ್ವತ್ರಿಕ ಮತ್ತು ಒಂದೇ ರೂಪದ ಶಿಕ್ಷಣವು ಜನರನ್ನು ಜಾಗೃತ ಗೊಳಿಸತೊಡಗಿತು . ಆಗ ಜಾತಿಯ ಕಟ್ಟು ಪಾಡುಗಳು ಕಂದಾಚಾರದ ನಂಬಿಕೆಗಳು , ಆಚರಣೆಗಳು ತಮ್ಮ ಅರ್ಥವನ್ನು ಕಳೆದುಕೊಳ್ಳತೊಡಗಿತು . ಎಲ್ಲಾ ಜಾತಿಯವರಿಗೂ ಮುಕ್ತ ಕ್ಷಣದ ಅವಕಾಶವಿರುವುದರಿಂದ ಅವರ ತಿಳುವಳಿಕೆಯಲ್ಲಿ ಅಸಾಧಾರಣ ಕ್ರಾಂತಿಯುಂಟಾಯಿತು . ಜಾತಿ ನಿರ್ಬಂಧಗಳು ಕ್ರಮೇಣ ಮಾಯವಾಗ ತೊಡಗಿದವು . ಹೊಸ ಹೊಸ ಉದ್ಯೋಗಗಳ ಸೃಷ್ಟಿ ಮತ್ತು ಅವಕಾಶ ಎಲ್ಲಾ ಜಾತಿಯವರಿಗೂ ದೊರೆಯುವಂತಾಯಿತು .

3 ) ಆಧುನಿಕ ತಂತ್ರಜ್ಞಾನ , ನಗರೀಕರಣ ಮತ್ತು ಕೈಗಾರಿಕೀಕರಣ : ತಂತ್ರಜ್ಞಾನದ ಅಳವಡಿಕೆಯಿಂದ ದೈಹಿಕ ಶ್ರಮದ ಕೆಲಸಗಳನ್ನು ಯಂತ್ರಗಳು ಮಾಡಲಾರಂಭಿಸಿದ್ದರಿಂದ ಅನೇಕ ಬದಲಾವಣೆಗಳಾದವು . ಹಿಂದುಳಿದ ಜನ ಅಥವಾ ಪರಿಶಿಷ್ಟ ಜಾತಿಯವರೇ ಮಾಡುತ್ತಿದ್ದ ಕೆಲಸದ ಬದಲಾವಣೆಯಾಯಿತು . ನಗರಗಳ ಬೆಳವಣಿಗೆಯಿಂದ ಜಾತಿಯ ಬಂಧನಗಳು ಕಳಚಿ ಬೀಳತೊಡಗಿದವು . ಕೈಗಾರಿಕೆಗಳು ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದ್ದುದರಿಂದ ಜಾತಿಯ ವ್ಯವಸ್ಥೆಯಲ್ಲಿ ಅನೇಕ ಮಾರ್ಪಾಟುಗಳಾಗಲು ಕಾರಣವಾಯಿತು . ಹಳ್ಳಿಯಿಂದ ನಗರಗಳಿಗೆ ವಲಸೆ ಬಂದ ಜನ ಒಟ್ಟಿಗೆ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಜಾತೀಯತೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ . ಜಾತಿ ನಿಯಮಗಳ ಕಾಠಿಣ್ಯತೆ ಕ್ರಮೇಣ ಕುಗ್ಗತೊಡಗಿತು .

4 ) ವೈಜ್ಞಾನೀಕರಣ : ವಿಜ್ಞಾನವು ಜನರ ಜೀವನದ ಮೇಲೆ ಪ್ರಭಾವ ಬೀರಲಾರಂಭಿಸಿತು . ಜನರ ವೈಚಾರಿಕತೆ ಹೆಚ್ಚತೊಡಗಿತು . ಜನರು ಯೋಚಿಸುವ ದಿಕ್ಕು ಬದಲಾಯಿತು .ಆಗ ‘ ಜಾತಿ ‘ ಪದ್ಧತಿ ಅರ್ಥ ಕಳೆದುಕೊಳ್ಳ ತೊಡಗಿತು . ಜಾತಿ ಪದ್ಧತಿಗಿಂತ ಮಾನವೀಯ ಮೌಲ್ಯಗಳನ್ನು ಕುರಿತು ಚಿಂತಿಸುವುದು ಪ್ರಾರಂಭವಾಯಿತು . ಈ ರೀತಿ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಲು ಪ್ರಾರಂಭ ವಾಯಿತು .

5 ) ಆಧುನಿಕ ಸಾರಿಗೆ ಸಂಪರ್ಕ ಮತ್ತು ಸಂವಹನಗಳು ಸುದ್ದಿ ಮಾಧ್ಯಮಗಳು : ಸಾರಿಗೆ ಸಂಪರ್ಕಗಳಾದ ಬಸ್ , ರೈಲು , ವಿಮಾನ ಇವೆಲ್ಲವುಗಳಲ್ಲಿ ಒಟ್ಟಾಗಿ ಪ್ರಯಾಣ ಮಾಡುವುದು ಅನಿವಾರ್ಯವಾದಾಗ ಜಾತಿ ನಿಯಮಗಳನ್ನು ಅನುಸರಿಸುವುದು ಕಷ್ಟವಾಯಿತು . ಸಂವಹನ ಮತ್ತು ಸುದ್ದಿ ಮಾದ್ಯಮಗಳಿಂದ ಜನರ ಸಂಕುಚಿತ ಮನೋಭಾವನೆಯು ದಿನಕ್ರಮೇಣಗಳಲ್ಲಿ ಬದಲಾವಣೆಗೊಂಡು ವಿಕಸಿತಗೊಳ್ಳ ತೊಡಗಿತು . ಅವರು ಆಚರಿಸುತ್ತಿದ್ದ ಪದ್ಧತಿಗಳು ಅರ್ಥ ಹೀನವೆನಿಸಿ ಅದನ್ನು ಕೈ ಬಿಡತೊಡಗಿದರು . ಜಾತಿಪದ್ಧತಿಯಲ್ಲಿ ಬದಲಾವಣೆ ಆಗಲೇಬೇಕಾದ ಸಂಕ್ರಮಣ ಕಾಲ ಉದಯವಾಗಿ ಜಾತಿ ಪದ್ಧತಿಯು ಬದಲಾವಣೆಗೊಳ್ಳ ತೊಡಗಿತು . ಇಷ್ಟೇ ಅಲ್ಲದೆ ಅರ್ಥವ್ಯವಸ್ಥೆಯಲ್ಲಿ ಉಂಟಾದ ಬದಲಾವಣೆ , ಶಿಕ್ಷಣ , ಮಾನವೀಯ ಮೌಲ್ಯಗಳು , ಜಾಗೃತಿ ಹೊಂದಿದ ಮನಸ್ಸುಗಳು , ದೇಶದ ಸಮಾನತೆಯ ಅವಕಾಶಗಳು ಹಾಗೂ ಕಾನೂನುಗಳು ಇತ್ಯಾದಿಗಳು ಭಾರತದಲ್ಲಿ ಜಾತಿವ್ಯವಸ್ಥೆಯಲ್ಲಿ ಉಂಟಾದ ಬದಲಾವಣೆಗಳಿಗೆ ಪ್ರಮುಖ ಕಾರಣಗಳಾಗಿವೆ .

47. ಸಮಾನತೆಯತ್ತ ವರದಿ 1974 ರ ಬಗ್ಗೆ ಟಿಪ್ಪಣಿ ಬರೆಯಿರಿ .

ಭಾರತದ ಸಮಾಜದಲ್ಲಿ ಲಿಂಗ ತಾರತಮ್ಯವು ಒಂದು ಪ್ರಮುಖವಾದ ಅಂಶ . ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಅಸ್ತಿತ್ವದ ಬಗ್ಗೆ ಮತ್ತು ಕಾರ್ಯದ ಬಗ್ಗೆ ಸಿಗುವ ಮಾಹಿತಿಗಳು ಹೀಗಿವೆ . ವೇತನರಹಿತವಾದ , ಮೇಲ್ನೋಟಕ್ಕೆ ಎದ್ದು ಕಾಣದ ಗೃಹ ಕೃತ್ಯವನ್ನು ಮನೆಯಿಂದ ಹೊರಗೆ ದುಡಿವ ಪುರುಷರು ನಿರ್ವಹಿಸುವ ಕಾರ್ಯಕ್ಕಿಂತ ಕಡಿಮೆ ಎಂದು ಭಾವಿಸಲಾಗುತ್ತದೆ . ಆದ್ದರಿಂದ ಈ ತಾರತಮ್ಯ ಉಂಟಾಗುವುದು . ಭಾರತೀಯ ಮಹಿಳೆಯರ ಅಂತಸ್ತು ಮತ್ತು ಸಮಸ್ಯೆ ಗಳನ್ನು ಪರಿಶೀಲಿಸಲು ರಾಷ್ಟ್ರೀಯ ಆಯೋಗವೊಂದನ್ನು ರಚಿಸಲಾಯಿತು . ಈ ಆಯೋಗದ ವರದಿಯನ್ನು ‘ ಸಮಾನತೆಯತ್ತ ವರದಿ ‘ ( Towards Equality report1947 ) ಎನ್ನಲಾಯಿತು . ಈ ವರದಿಯು ಮಹಿಳೆಯರ ಸಾಮಾಜಿಕ ದುಸ್ಥಿತಿಯ ಚಿತ್ರಣ ನೀಡಿದೆ ಮತ್ತು ಮಹಿಳಾ ಅಧ್ಯಯನ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ .

ಈ ವರದಿಯ ಉದ್ದೇಶಗಳು ( Objectives of the Report )

1 ) ಮಹಿಳೆಯರ ಸಾಮಾಜಿಕ ಅಂತಸ್ತು , ಶಿಕ್ಷಣ ಮತ್ತು ಉದ್ಯೋಗಗಳ ಮೇಲೆ ಪ್ರಭಾವ ಬೀರುವ ಸಂವಿಧಾನಾತ್ಮಕ , ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಅವಕಾಶಗಳ ಪರಿಶೀಲನೆ

2 ) ಕಳೆದೆರಡು ದಶಕಗಳಲ್ಲಿ ಈ ಸೌಲಭ್ಯಗಳು ದೇಶದ ಮಹಿಳೆಯರ ಅದರಲ್ಲೂ ವಿಶೇಷವಾಗಿ ಗ್ರಾಮೀಣ ವಿಭಾಗದವರ ಅಂತಸ್ತಿನ ಮೇಲೆ ಬೀರಿದ ಪ್ರಭಾವವನ್ನು ಮೌಲ್ಯಮಾಪನ ಮಾಡುವುದು ಹಾಗೂ ಇನ್ನೂ ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಕುರಿತು ಸಲಹೆ ನೀಡುವುದು .

3 ) ಮಹಿಳೆಯರ ಶಿಕ್ಷಣದ ಅಭಿವೃದ್ಧಿ ಕುರಿತು ಅಭ್ಯಸಿಸುವುದು ಮತ್ತು ಕೆಲ ಕ್ಷೇತ್ರಗಳಲ್ಲಿ ನಿಧಾನ ಪ್ರಗತಿಯ ಕಾರಣಗಳನ್ನು ಗುರ್ತಿಸಿ ಸೂಕ್ತ ಪರಿಹಾರಾತ್ಮಕ ಸಲಹೆಗಳನ್ನು ನೀಡುವುದು .

4 ) ಉದ್ಯೋಗ ಮತ್ತು ವೇತನದಲ್ಲಿ ತಾರತಮ್ಯವೂ ಸೇರಿದಂತೆ ದುಡಿಯುವ ಮಹಿಳೆಯರ ಸಮಸ್ಯೆಗಳನ್ನು ಸಮೀಕ್ಷೆ ಮಾಡುವುದು .

5 ) ಬದಲಾದ ಸಾಮಾಜಿಕ ಮಾದರಿಗಳಲ್ಲಿ ಪತ್ನಿಯರಾಗಿ ಹಾಗೂ ತಾಯಿಯರಾಗಿ ಮಹಿಳೆಯರ ಅಂತಸ್ತನ್ನು ಪರಿಶೀಲಿಸುವುದು ಮತ್ತು ಉನ್ನತ ಶಿಕ್ಷಣ ಹಾಗೂ ಉದ್ಯೋಗಗಳ ಕ್ಷೇತ್ರಗಳಲ್ಲಿ ಅವರ ಸಮಸ್ಯೆಗಳನ್ನು ಗುರ್ತಿಸುವುದು .

6 ) ಜನಸಂಖ್ಯಾ ನೀತಿಗಳು ಮತ್ತು ಕುಟುಂಬ ಯೋಜನಾ ಕಾರ್ಯಕ್ರಮಗಳು ಮಹಿಳೆಯರ ಅಂತಸ್ತಿನ ಮೇಲೆ ಬೀರಿದ ಪ್ರಭಾವ ಕುರಿತಂತೆ ಪ್ರಕರಣಗಳ ಸಮೀಕ್ಷೆ ಮಾಡುವುದು .

7 ) ದೇಶ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರು ಪೂರ್ಣ ಪ್ರಮಾಣದ ಪಾತ್ರ ನಿರ್ವಹಿಸಲು ಸಾಧ್ಯವಾಗುವಂತೆ ಮಾಡುವ ಇತರ ಯಾವುದೇ ಕ್ರಮಗಳನ್ನು ಸೂಚಿಸುವುದು .

ವರದಿಯ ಮಹತ್ವ ( Importance of theReport )

ಈ ವರದಿಯು ಮಹಿಳೆಯರ ಬಗ್ಗೆ ಕೊಟ್ಟ ಮಾಹಿತಿಯ ಪ್ರಕಾರ ತಿಳಿದುಬರುವ ಅಂಶಗಳೆಂದರೆ :

1 ) ಇಳಿಮುಖವಾಗುತ್ತಿರುವ ಲಿಂಗಾನುಪಾತ

2 ) ಉತ್ಪಾದಕ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸು ವಿಕೆಯ ಪ್ರಮಾಣ

3 ) ಆಯುಪ್ರಮಾಣ

ಅಧ್ಯಯನದ ಮೂಲಕ ವ್ಯಕ್ತವಾದ ಧೋರಣೆಗಳು ಅತ್ಯಾಶ್ಚರ್ಯಕರವಾಗಿದ್ದವು . ಮಹಿಳೆಯರು ಅಲ್ಪ ಪ್ರಮಾಣದ ಯಶಸ್ಸನ್ನು ಸಾಧಿಸಿದ್ದರು . ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಪಾತ್ರ ಅತ್ಯಲ್ಪವಾಗಿತ್ತು . ಹಲವು ಮಹಿಳೆಯರು ಅತ್ಯಲ್ಪ ಸಂಬಳಕ್ಕೆ ದುಡಿಯುತ್ತಿದ್ದರು . ಎಲ್ಲಾ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಚಟುವಟಿಕೆಗಳಲ್ಲಿ ಯಾವುದೇ ಆರ್ಥಿಕ ಲಾಭವಿಲ್ಲದೆ ದುಡಿಯುತ್ತಿದ್ದರು . ಮಕ್ಕಳ ಹಾಗೂ ವಯಸ್ಸಾದವರ ಆರೈಕೆಯ ಜವಾಬ್ದಾರಿ ಹೊತ್ತಿದ್ದರು . ಸಂವಿಧಾನದಲ್ಲಿ ಸಮಾನತೆಯ ತತ್ವವನ್ನು ಅಳವಡಿಸಿಕೊಂಡಿದ್ದರಿಂದಾಗಿ ಮಹಿಳೆಯರಿಗೆ ಸಮಾನ ಹಕ್ಕು ದೊರೆಯುವಂತಾಗಿದೆ . ಸಮಾನವಾದ ಅಂತಸ್ತನ್ನು ಪಡೆದಿದ್ದಾರೆ . ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ವಲ್ಪ ಮಟ್ಟಿನ ಪ್ರಗತಿ ಸಾಧಿಸಿದ್ದಾರೆ . ಆದರೆ ಬಹುಸಂಖ್ಯೆಯ ಮಹಿಳೆಯರು ಇಂದು ಕೂಡಾ ಹಿಂಸೆ , ವರದಕ್ಷಿಣೆ , ಲಿಂಗ ತಾರತಮ್ಯ ಮುಂತಾದವುಗಳಿಗೆ ಬಲಿಪಶುಗಳಾಗುತ್ತಿದ್ದಾರೆ . ಆಯೋಗದ ವರದಿ ಈ ಕಟುಸತ್ಯದ ದರ್ಶನ ಮಾಡಿಸಿತು . ಮಹಿಳೆಯರ ಕಡಿಮೆ ಆಯುಪ್ರಮಾಣ , ಕುಸಿಯುತ್ತಿರುವ ಲಿಂಗಾನುಪಾತ , ಹೆಚ್ಚುತ್ತಿರುವ ಮರಣ ಪ್ರಮಾಣ , ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕುರಿತಂತೆ ಕಡಿಮೆ ಪ್ರಮಾಣ ಕುರಿತು ಬಹಳಷ್ಟು ಆತಂಕ ವ್ಯಕ್ತಪಡಿಸಿತು . ಇದು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ . ಹತ್ತೊಂಬತ್ತನೆಯ ಶತಮಾನದಲ್ಲಿ ಮಹಿಳೆಯರನ್ನು ಕೆಲ ಸಾಮಾಜಿಕ ಅನಿಷ್ಟಗಳೆಂದು ಭಾವಿಸಲಾಗಿತ್ತು . ಸ್ವಾತಂತ್ರ್ಯಾನಂತರ ಅಭಿವೃದ್ಧಿ ಯೋಜನೆಯ ಫಲಾನುಭವಿಗಳು ಎಂದು ಭಾವಿಸಲಾಗುತ್ತಿತ್ತು ಆದರೆ ಅವರೇ ಅಭಿವೃದ್ಧಿ ಯೋಜನೆಗಳ ಸಕ್ರಿಯ ಭಾಗಿಗಳೆಂದು ಭಾವಿಸಲಾಗಿರಲಿಲ್ಲ . ರಾಷ್ಟ್ರೀಯ ಆಂದೋಲನ , ಕಾರ್ಮಿಕ ಚಳುವಳಿಗಳು ಮತ್ತು ರೈತ ಚಳುವಳಿಗಳಲ್ಲಿ ಅವರ ಪಾತ್ರವನ್ನು ನಿರ್ಲಕ್ಷಿಸಲಾಗಿದೆ . ನವಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ರಾಜಕೀಯ ಪಕ್ಷಗಳು ಒಲ್ಲದ ಮನಸ್ಸಿನಿಂದ ಸ್ವೀಕರಿಸಿವೆ . ಆಯೋಗದ ವರದಿಯು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಾಗ ಸರ್ಕಾರದ ನೀತಿಗಳನ್ನು ಪ್ರಭಾವಿಸಿದೆ . ಮಹಿಳೆಯರ ಅಂತಸ್ತು ಹಾಗೂ ಪಾತ್ರಗಳನ್ನು ಕುರಿತಾದ ಕೆಲವು ತಪ್ಪು ಕಲ್ಪನೆಗಳನ್ನು ಆಯೋಗದ ವರದಿಯು ಗುರ್ತಿಸಿದೆ . ಮಹಿಳೆಯರ ಅಧ್ಯಯನ ಕುರಿತಂತೆ ಇನ್ನಷ್ಟು ಅಧ್ಯಯನಗಳಿಗೆ ಇದು ಪ್ರಾರಂಭಿಕ ವೇದಿಕೆ ಒದಗಿಸಿದೆ .

FAQ

1. ಪಕ್ಕಾ ಆಹಾರ ಎಂದರೇನು ?

ಆಹಾರವನ್ನು ಸ್ಥೂಲವಾಗಿ ಕಚ್ಚಾ ಮತ್ತು ಪಕ್ಕಾ ಎಂಬುದಾಗಿ ವರ್ಗಿಕರಿಸಲಾಗಿತ್ತು . ನೀರನ್ನು ಬಳಸದೆ ಹಾಲು ಮತ್ತು ತುಪ್ಪಗಳನ್ನು ಬಳಸಿ ತಯಾರಿಸಿದ ಆಹಾರವು ಪಕ್ಕಾ ಆಹಾರ ಎಂಬುದಾಗಿ ಪರಿಗಣಿತವಾಗಿತ್ತು .

2. ಪಂಚಶೀಲ ತತ್ವದ ಪ್ರತಿಪಾದಕರು ಯಾರು ?

ಪಂಚಶೀಲ ತತ್ವದ ಪ್ರತಿಪಾದಕರು ಜವಾಹರಲಾಲ್ ನೆಹರು .

3. ಪ್ರತ್ಯೇಕತೆಯ ನೀತಿಯನ್ನು ಪ್ರತಿಪಾದಿಸಿದವರು ಯಾರು ?

ಪ್ರತ್ಯೇಕತೆಯ ನೀತಿಯನ್ನು ಪ್ರತಿಪಾದಿಸಿದವರು ಜೆ.ಎಚ್ . ಹಟನ್ ಮತ್ತು ವೆರಿಯರ್ ಎಲ್ಟಿನ್ .

ಇತರೆ ವಿಷಯಗಳು :

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್‌

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

Leave a Reply

Your email address will not be published. Required fields are marked *

rtgh