ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಭಾರತೀಯ ಸಮಾಜದ ನಿರ್ಮಾಣ ನೋಟ್ಸ್‌ | 2nd Puc Sociology 1st Chapter Notes in Kannada

ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಭಾರತೀಯ ಸಮಾಜದ ನಿರ್ಮಾಣ ನೋಟ್ಸ್‌ ಪ್ರಶ್ನೋತ್ತರ, 2nd Puc Sociology 1st Chapter Notes Question Answer Mcq Pdf in Kannada 2nd puc sociology 1st chapter notes kannada medium Kseeb Solution For Class 12 Chapter 1 Notes in Kannada 2nd puc sociology chapter 1 notes Indian Society and Demography in Kannada Notes Bharatiya Samajada Nirmana Notes

ಭಾರತೀಯ ಸಮಾಜದ ನಿರ್ಮಾಣ

2nd puc sociology 1st chapter notes pdf

2nd Puc Sociology 1st Chapter Notes Kannada Medium

I. ಒಂದು ಅಂಕದ ಪ್ರಶ್ನೆಗಳು :

1 . ಡೆಮೊಗ್ರಫಿ ಎಂಬ ಪದವು ಹೇಗೆ ಉತ್ಪತ್ತಿಯಾಗಿದೆ ?

ಡೆಮೊಗ್ರಫಿ ಎಂಬ ಪದವು ಎರಡು ಗ್ರೀಕ್ ಪದಗಳ ಸಂಯೋಜನೆಯಿಂದ ಉತ್ಪತ್ತಿಯಾಗಿದೆ . ‘ ಡೆಮೊಸ್ ‘ ಎಂದರೆ ಜನರು ‘ ಗ್ರಾಫನ್ ‘ ಎಂದರೆ ಚಿತ್ರಣ ಎಂಬ ಅರ್ಥವನ್ನು ಕೊಡುತ್ತದೆ .

2. ಡೆಮೊಗ್ರಫಿ ಎಂದರೇನು ?

‘ ಡೆಮೊಗ್ರಫಿ ‘ ಎಂಬ ಆಂಗ್ಲ ಪದದ ಸಮಾನಾರ್ಥಕ ಪದ ಜನಸಂಖ್ಯಾಶಾಸ್ತ್ರ ಎಂದು ಅರ್ಥೈಸಬಹುದು . 1855 ರಲ್ಲಿ ಆಶಿಲ್ ಗಿಲಿಯಾರ್ಡ್ ಎಂಬುವರು ಈ ಪದವನ್ನು ಪರಿಚಯಿಸಿದ್ದಾರೆ .

3. ಜನಸಂಖ್ಯಾಶಾಸ್ತ್ರದ ಯಾವುದಾದರೂ ಒಂದು ಪ್ರಕಾರವನ್ನು ತಿಳಿಸಿ .

ಜನಸಂಖ್ಯಾಶಾಸ್ತ್ರದಲ್ಲಿ ವಿವಿಧ ಪ್ರಕಾರಗಳಿವೆ . ಅವುಗಳಲ್ಲಿ ಔಪಚಾರಿಕ ಜನಸಂಖ್ಯಾಶಾಸ್ತ್ರವೂ ಒಂದು ಪ್ರಕಾರ .

4 . ಭಾರತದ ಜನಸಂಖ್ಯಾಶಾಸ್ತ್ರೀಯ ಚಿತ್ರಣದ ಯಾವುದಾದರೂ ಒಂದು ಪ್ರಮುಖ ಲಕ್ಷಣವನ್ನು ತಿಳಿಸಿ .

ಭಾರತದ ಜನಸಂಖ್ಯಾಶಶಾಸ್ತ್ರೀಯ ಚಿತ್ರಣದ ಒಂದು ಪ್ರಮುಖ ಲಕ್ಷಣ ಭಾರತೀಯ ಜನಸಂಖ್ಯೆಯ ಗಾತ್ರ ಮತ್ತು ಬೆಳವಣಿಗೆ .

5. 2011 ರ ಜನಗಣತಿಯಲ್ಲಿ ದಾಖಲಾದ ಲಿಂಗಾನುಪಾತ ಪ್ರಮಾಣವನ್ನು ತಿಳಿಸಿ .

2011 ರ ಜನಗಣತಿಯಲ್ಲಿ ದಾಖಲಾದ ಲಿಂಗಾನುಪಾತ ಪ್ರಮಾಣವು 1000 ಪುರುಷರಿಗೆ 940 ರಷ್ಟು ಮಹಿಳೆಯರು ಅಂದರೆ 1000 : 940 .

6. ಲಿಂಗಾನುಪಾತದಲ್ಲಿ ಅಸಮತೋಲವಿರುವ ಕರ್ನಾಟಕದ ಯಾವುದಾದರೂ ಒಂದು ಜಿಲ್ಲೆಯನ್ನು ಹೆಸರಿಸಿ .

ಇತ್ತೀಚಿನ ಜನಗಣತಿಯ ಪ್ರಕಾರ ಲಿಂಗಾನುಪಾತದಲ್ಲಿ ಅಸಮತೋಲನವಿರುವ ಕರ್ನಾಟಕದ ಎರಡು ಜಿಲ್ಲೆಗಳು ಬೆಳಗಾವಿ ಮತ್ತು ಮಂಡ್ಯ ಜಿಲ್ಲೆ .

7. ಭಾರತವನ್ನು ಬಹುರೂಪಿ ಸಮಾಜ ಎಂದು ಏಕೆ ಕರೆಯಲಾಗುತ್ತದೆ ?

ಭಾರತ ದೇಶವು ವಿಭಿನ್ನ ಜನಾಂಗೀಯ ಮೂಲಗಳನ್ನು ,ವಿವಿಧ ಭಾಷೆ , ಧರ್ಮ ಹಾಗೂ ಅನೇಕ ರೀತಿಯ ವೈವಿಧ್ಯಗಳನ್ನು ಹೊಂದಿರುವುದರಿಂದ ಬಹುರೂಪಿ ಸಮಾಜ ‘ ಎಂದು ಕರೆಯಲಾಗುತ್ತದೆ .

8. ಭಾರತದ ಜನಾಂಗೀಯ ಸಮೂಹಗಳಲ್ಲಿ ಒಂದನ್ನು ಹೆಸರಿಸಿ .

ಡಾ . ಬಿ.ಎಸ್ . ಗುಹಾರವರ ವರ್ಗಿಕರಣದಂತೆ ಆರು ಪ್ರಮುಖ ಜನಾಂಗೀಯ ಸಮೂಹಗಳಿವೆ . ಅವುಗಳಲ್ಲಿ ನಿಗ್ರಿಟೊ ಕೂಡ ಒಂದು ಸಮೂಹ .

9. ಭಾರತದ ಜನಾಂಗೀಯ ಸಮೂಹಗಳಲ್ಲಿ ಒಂದನ್ನು ಹೆಸರಿಸಿ .

ಪಾಲಿಯೊ ಮಂಗೋಲಾಯ್ಡ್ ಮತ್ತು ಟಿಬೆಟೊ ಮಂಗೋಲಾಯ್ಡ್ ಎಂಬ ಎರಡು ಉಪ ವಿಭಾಗಗಳಿವೆ . ಹಿಮಾಲಯ ಪ್ರಾಂತ್ಯದ ಮತ್ತು ಭಾರತದ ಈಶಾನ್ಯ ಭಾಗದ ಬುಡಕಟ್ಟು ಸಮೂಹಗಳು ಸಹಾ ಈ ಗುಂಪಿಗೆ ಸೇರಿದೆ.

10. ಭಾರತಕ್ಕೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದವರು ಯಾರು ?

ಸಂತ ಥಾಮಸ್ ಮತ್ತು ಸಂತ ಬಾರ್ಥೊಲೊಮ್ಯು ಭಾರತಕ್ಕೆ ಕ್ರಿ.ಶ. 50 ರಲ್ಲಿ ಕ್ರೈಸ್ತಧರ್ಮವನ್ನು ಪರಿಚಯಿಸಿದರು . ಎನ್ನಲಾಗಿದೆ .

11. ಏಕತೆ ಎಂದರೇನು ?

ಏಕತೆ ಎಂದರೆ ಐಕ್ಯತೆ , ನಾವೆಲ್ಲಾ ಒಂದು ಭಾವನೆಯನ್ನು ಸೂಚಿಸುತ್ತದೆ . ವಿವಿಧತೆಯಲ್ಲೂ ನಾವೆಲ್ಲಾ ಒಂದೇ ಎಂಬ ಭಾವನೆಯೇ ಏಕತೆ .

12. ಭಾರತದಲ್ಲಿ ವೈವಿಧ್ಯತೆಯ ಯಾವುದಾದರೂ ಒಂದು ಆಧಾರವನ್ನು ಹೆಸರಿಸಿ .

ಭಾರತದಲ್ಲಿ ಪ್ರಾಂತೀಯ , ಭಾಷಾ , ಧಾರ್ಮಿಕ ಹಾಗೂ ಸಾಂಸ್ಕೃತಿಕ ಮತ್ತು ಜನಾಂಗೀಯ ವ್ಯತ್ಯಾಸಗಳು ವೈವಿಧ್ಯತೆಗೆ ಆಧಾರವಾಗಿದೆ .

13. ಭಾರತದಲ್ಲಿ ಏಕತೆಯ ಯಾವುದಾದರೂ ಒಂದು ಆಧಾರವನ್ನು ಹೆಸರಿಸಿ .

ಭಾರತದಲ್ಲಿರುವ ಎಲ್ಲಾ ನಿವಾಸಿಗಳಿಗೂ ನಾವೆಲ್ಲಾ ಒಂದೇ ಎಂಬ ಭಾವನೆ ಇರುವುದರ ಜೊತೆಗೆ ಭಾರತೀಯ ಸಂಸ್ಕೃತಿಯೂ ಸಹ ಈ ಮೂಲಭೂತ ಗುಣವನ್ನು ಉಳಿಸಿಕೊಂಡು ಬಂದಿದೆ .

14. ರಾಷ್ಟ್ರೀಯ ಭಾವೈಕ್ಯತೆ ಎಂದರೇನು ?

ರಾಷ್ಟ್ರೀಯ ಭಾವೈಕ್ಯತೆಯು ರಾಷ್ಟ್ರದ ಏಕತೆ ಮತ್ತು ಜನರಲ್ಲಿ ತಾವು ಈ ರಾಷ್ಟ್ರಕ್ಕೆ ಸೇರಿದವರೆಂಬ ಭಾವನೆಯನ್ನು ಸೂಚಿಸುತ್ತದೆ .

15. ರಾಷ್ಟ್ರೀಯ ಭಾವೈಕ್ಯತೆಯ ಸಾಧನೆಗೆ ಸವಾಲಾಗಿರುವ ಒಂದು ಅಂಶವನ್ನು ತಿಳಿಸಿ .

ರಾಷ್ಟ್ರೀಯ ಭಾವೈಕ್ಯತೆಗೆ ಪ್ರಾಂತೀಯವಾದ , ಕೋಮುವಾದ , ಭಾಷಾವಾದ ಮತ್ತು ಉಗ್ರವಾದ ಅಥವಾ ಆತಂಕವಾದ ಸವಾಲಗಿರುವ ಅಂಶಗಳಾಗಿವೆ .

16. ಭಾರತದ ಯಾವುದಾದರೂ ಒಂದು ಧಾರ್ಮಿಕ ಸಮುದಾಯವನ್ನು ಹೆಸರಿಸಿ .

ಭಾರತದಲ್ಲಿ ಒಟ್ಟು ಎಂಟು ಧಾರ್ಮಿಕ ಸಮುದಾಯಗಳಿವೆ . ಅವುಗಳಲ್ಲಿ ಹಿಂದೂಗಳು , ಮುಸ್ಲಿಮರು , ಕ್ರಿಶ್ಚಿಯನ್ನರು ಇತ್ಯಾದಿ .

17. ಭಾರತದ ಪ್ರಾಚೀನ ಹೆಸರುಗಳಲ್ಲಿ ಒಂದನ್ನು ಹೆಸರಿಸಿ .

ಭಾರತದ ಪ್ರಾಚೀನ ಹೆಸರುಗಳು ಭಾರತ ವರ್ಷ , ಭರತ ಖಂಡ , ಜಂಬೂದ್ವೀಪ ಇತ್ಯಾದಿ .

18 , ದೆಮಾರು ಎಂದರೇನು ?

ದೆಮಾರು ಎಂದರೆ ಇಂಗ್ಲೀಷ್ ಭಾಷೆಯ DUMARU ನಲ್ಲಿ ‘ ಡಿ ‘ ಎಂಬ ಅಕ್ಷರವು daughter- ಮಗಳು ಎಂಬ ಅರ್ಥ . ‘ ಇ ‘ ಎಂಬ ಅಕ್ಷರವು elimination- ನಿವಾರಿಸು ಅಥವಾ ಕೊಂದು ಹಾಕು ಎಂಬ ಅರ್ಥವನ್ನು ಸೂಚಿಸುತ್ತದೆ .

19. ಭಾರತವನ್ನು ಪ್ರವೇಶಿಸಿದ ಮೊದಲ ಯುರೋಪಿಯನ್ ವಸಾಹತು ಯಾವುದು ?

ಭಾರತವನ್ನು ಪ್ರವೇಶಿಸಿದ ಮೊದಲ ಯುರೋಪಿಯನ್ ವಸಾಹತು ಪೋರ್ಚುಗೀಸರು .

2nd Puc Sociology 1st Chapter Question Answer in Kannada

II . ಎರಡು ಅಂಕದ ಪ್ರಶ್ನೆಗಳು :

20. ಜನಸಂಖ್ಯಾಶಾಸ್ತ್ರವನ್ನು ವ್ಯಾಖ್ಯಾನಿಸಿ .

ಜನಸಂಖ್ಯಾಶಾಸ್ತ್ರವು ಜನಸಂಖ್ಯೆಯ ವ್ಯವಸ್ಥಿತ ಅಧ್ಯಯನವಾಗಿದೆ . ಇದು ಜನಸಂಖ್ಯೆಯ ಗಾತ್ರ ಜನನ , ಮರಣ ಮತ್ತು ವಲಸೆಯ ಪ್ರಕಾರಗಳು , ಸ್ತ್ರೀಪುರುಷರ ಸಾಪೇಕ್ಷ ಪ್ರಮಾಣವನ್ನೊಳಗೊಂಡಂತೆ ಮತ್ತು ವಿವಿಧ ವಯೋಮಾನಗಳಿಗೆ ಸಂಬಂಧಿಸಿದಂತೆ ಜನಸಮೂಹದ ರಚನೆ ಹಾಗೂ ಸಂಯೋಜನೆ ಮುಂತಾದ ಅಂಶಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಮತ್ತು ಒಲವುಗಳನ್ನು ಅಭ್ಯಸಿಸುತ್ತದೆ .

21. ಭಾರತದ ಜನಸಂಖ್ಯಾಶಾಸ್ತ್ರೀಯ ಚಿತ್ರಣದ ಎರಡು ಪ್ರಮುಖ ಲಕ್ಷಣಗಳನ್ನು ತಿಳಿಸಿ .

ಭಾರತದ ಜನಸಂಖ್ಯಾ ಚಿತ್ರಣದ ಎರಡು ಪ್ರಮುಖ ಲಕ್ಷಣಗಳು :

ಅ ) ಭಾರತೀಯ ಜನಸಂಖ್ಯೆಯ ವಯೋರಚನೆ

ಆ ) ಭಾರತೀಯ ಜನರಲ್ಲಿ ಏರುಮುಖವಾಗುತ್ತಿರುವ ಸಾಕ್ಷರತೆಯ ಪ್ರಮಾಣ .

22. ಲಿಂಗಾನುಪಾತ ಕುಸಿಯಲು ಕಾರಣವಾದ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿ .

ಒಂದು ದೇಶದಲ್ಲಿರುವ ಒಟ್ಟು ಜನರಲ್ಲಿ ಎಷ್ಟು ಜನ ಪುರುಷರು ಮತ್ತು ಎಷ್ಟು ಮಹಿಳೆಯರು ಎಂದು ಸೂಚಿಸುವ ಅನುಪಾತವೇ ಲಿಂಗಾನುಪಾತ . ಇದು ಲಿಂಗ ಸಮತೋಲನದ ಮಹತ್ವಪೂರ್ಣವಾದ ಸೂಚಕವಾಗಿದೆ . ಇದನ್ನು ಸಾಮಾನ್ಯವಾಗಿ 1000 ಪುರುಷರಿಗೆ ಮಹಿಳೆಯರ ಸಂಖ್ಯೆಯ ಪ್ರಮಾಣವನ್ನು ಹಾಕಿ ನಿರ್ಧರಿಸಲಾಗುತ್ತದೆ .

23. ಮಕ್ಕಳ ಲಿಂಗಾನುಪಾತವು ಕುಸಿಯಲು ಕಾರಣವಾದ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿ .

ಮಕ್ಕಳ ಲಿಂಗಾನುಪಾತವು ಕುಸಿಯಲು ಕಾರಣವಾದ ಮುಖ್ಯಾಂಶಗಳು :

ಅ ) ಹೆಣ್ಣು ಮಕ್ಕಳು ಹುಟ್ಟುವುದನ್ನೇ ತಡೆಗಟ್ಟುವ ಗರ್ಭಪಾತಗಳು ಹಾಗೂ ಹೆಣ್ಣು ಶಿಶು ಹತ್ಯೆ .

ಆ ) ಶೈಶವದಲ್ಲಿ ಹೆಣ್ಣುಮಕ್ಕಳ ಪೋಷಣೆಯನ್ನು ನಿರ್ಲಕ್ಷಿಸುವುದರಿಂದ ಹೆಣ್ಣು ಮಕ್ಕಳ ಮರಣ ಪ್ರಮಾಣವು ಗಮನಾರ್ಹವಾಗಿ ಏರುತ್ತದೆ .

ಇ ) ಪ್ರಸವಪೂರ್ವ ಲಿಂಗಪತ್ತೆಯ ತಂತ್ರಜ್ಞಾನದ ದುರ್ಬಳಕೆಯು ( ಸೊನೊಗ್ರಾಂ ) ಹೆಣ್ಣು ಭ್ರೂಣಹತ್ಯೆಗೆ ಕಾರಣವಾಗಿದೆ .

24. ಭಾರತದ ಜನಾಂಗೀಯ ಸಮೂಹಗಳಲ್ಲಿ ಯಾವುದಾದರೂ ಎರಡನ್ನು ತಿಳಿಸಿ .

ಡಾ . ಬಿ.ಎಸ್ . ಗುಹಾ ಅವರು ಭಾರತೀಯ ಜನಸಮೂಹದಲ್ಲಿ ಆರು ಪ್ರಮುಖ ಜನಾಂಗೀಯ

ಮೂಲಗಳನ್ನು ಗುರ್ತಿಸಿದೆ . ಅವುಗಳು ( 1 ) ನಿಗ್ರಿಟೊ ( ii ) ಪ್ರೊಟೊ – ಆಸ್ಟ್ರಲಾಯ್ಡ್ ( iii ) ಮಂಗೋಲಾಯ್ಡ್ ( iv ) ಮೆಡಿಟರೆನಿಯನ್ ( v ) ಪಶ್ಚಿಮ ಬ್ರಾಕಿಸೆಫಾಲರು ಮತ್ತು ( vi ) ನಾರ್ಡಿಕ್ . ‌

25. ಆರ್ಯನೀಕರಣದ ಪ್ರಕ್ರಿಯೆಯಲ್ಲಿ ಉಂಟಾದ ಪ್ರಮುಖ ಅಡಚಣೆಗಳು ಅಥವಾ ಅಂಶಗಳು :

ಕೆಲ ಬುಡಕಟ್ಟು ಸಮೂಹಗಳು ವಿಲೀನವಾಗಲು ನಿರಾಕರಿಸಿದವು .

( i ) ಕೆಲ ಬುಡಕಟ್ಟು ಸಮೂಹಗಳು ವಿಲೀನವಾಗಲು ನಿರಾಕರಿಸಿದವು .

( ii ) ಕೆಲವು ಪ್ರಬಲ ಜನಾಂಗೀಯ ಸಮೂಹಗಳು ಸ್ವಾಂಗೀಕರಣಕ್ಕೆ ಸಂಬಂಧಿಸಿದಂತೆ ಪ್ರತಿರೋಧವನ್ನು ಒಡ್ಡಿದವು.

26. ಬಿಮಾರು ಎಂಬುದು ಏನನ್ನು ಸೂಚಿಸುತ್ತದೆ ?

ಬಿಮಾರು BIMARU ಎಂದರೆ BI- ಬಿಹಾರ್ DIMARU – ಮಧ್ಯಪ್ರದೇಶ , R- ರಾಜಸ್ಥಾನ ಮತ್ತು ಉತ್ತರ ಪ್ರದೇಶವನ್ನು ಸೂಚಿಸುತ್ತದೆ . ಈ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ . ಇವು ಜನಸಂಖ್ಯಾತ್ಮಕ ಸಮಸ್ಯೆಗಳ ಮೂಲವನ್ನು ಹೊಂದಿದೆ . ದೇಶದ ಪ್ರಗತಿಗೆ ಸಂಬಂಧಿಸಿದಂತೆ ನೇತ್ಯಾತ್ಮಕ ಕೊಡುಗೆಯನ್ನು ಕೊಟ್ಟಿದೆ .

27. ಪ್ರಾಂತೀಯ ವೈವಿಧ್ಯತೆ ಎಂದರೇನು ?

ಭಾರತವು ಬಹುದೊಡ್ಡ ದೇಶವಾಗಿದೆ . ಆದರೆ ಭೌಗೋಳಿಕ ಲಕ್ಷಣಗಳಲ್ಲಿ ಸಾಕಷ್ಟು ವೈವಿಧ್ಯತೆಯಿದೆ . ವಿಶಾಲವಾದ ಪರ್ವತಶ್ರೇಣಿಗಳು , ದಟ್ಟವಾದ ಅರಣ್ಯಗಳು , ಅಸಂಖ್ಯಾತ ನದಿಗಳು , ಮರುಭೂಮಿ ಹೀಗೆ ಹತ್ತು ಹಲವಾರು ವೈವಿಧ್ಯತೆಗಳನ್ನೊಳಗೊಂಡಿದೆ . ಹೀಗೆ ವೈವಿಧ್ಯಮಯವಾದ ಪ್ರಾಂತ್ಯಗಳು , ವಿಭಿನ್ನ ಹವಾಮಾನ ಮತ್ತು ವಿವಿಧ ರೀತಿಯ ವಾತಾವರಣವನ್ನು ನೋಡಬಹುದಾಗಿದೆ . ಇದನ್ನು ಪ್ರಾಂತೀಯ ವೈವಿಧ್ಯತೆ ಎನ್ನುತ್ತಾರೆ .

28. ಭಾಷಾ ವೈವಿಧ್ಯತೆ ಎಂದರೇನು ?

ಭಾರತದಲ್ಲಿ ಅನೇಕ ಭಾಷೆಯ ಜನರಿದ್ದಾರೆ . ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 1652 ಭಾಷೆಗಳಿವೆ ಮತ್ತು ಸಾಕಷ್ಟು ಸಂಖ್ಯೆಯ ಉಪಭಾಷೆಗಳೂ ಇವೆ . ಭಾಷೆಯು ಸಾಂಘಿಕ ಅನನ್ಯತೆಗೆ ಮಾತ್ರವಲ್ಲದೆ ಸಂಘರ್ಷಕ್ಕೂ ಕಾರಣವಾಗುತ್ತದೆ . ಭಾರತದಲ್ಲಿ ಪ್ರಮುಖವಾಗಿ ನಾಲ್ಕು ಭಾಷಾ ಕುಟುಂಬಗಳಿವೆ . ಅವು ಇಂಡೋ – ಆರ್ಯನ್ ಭಾಷೆಗಳು , ದ್ರಾವಿಡಿಯನ್ , ಆಸ್ಟಿಕ್ ಮತ್ತು ಯುರೋಪಿಯನ್ ಭಾಷೆಗಳು , ಭಾಷಾ ವೈವಿಧ್ಯತೆಯು ಕೆಲವು ಆಡಳಿತಾತ್ಮಕವಾದ ಮತ್ತು ರಾಜಕೀಯವಾದ ಸಮಸ್ಯೆಗಳಿಗೂ ಕಾರಣವಾಗಿದೆ .

29. ಧಾರ್ಮಿಕ ವೈವಿಧ್ಯತೆ ಎಂದರೇನು ?

ಧಾರ್ಮಿಕ ವೈವಿಧ್ಯತೆಯೆಂದರೆ ಒಂದು ದೇಶದಲ್ಲಿ ಅನೇಕ ಧರ್ಮಗಳಿರುವುದು , ಭಾರತದಲ್ಲಿ ಎಂಟು ಪ್ರಮುಖ ಧಾರ್ಮಿಕ ಸಮುದಾಯಗಳಿವೆ . ಹಿಂದೂಗಳು , ಮುಸ್ಲಿಮರು , ಕ್ರಿಶ್ಚಿಯನ್ನರು , ಸಿಖ್ ಪಂಥೀಯರು , ಬೌದ್ಧರು , ಜೈನರು , ರೋರೋಸ್ಟಿಯನ್ನರು , ಜ್ಯೂಗಳು ಇತ್ಯಾದಿ . ಹಿಂದೂಗಳಲ್ಲಿ ಶೈವರು , ವೈಷ್ಣವರು , ಶಕ್ತಿ ದೇವತೆಯ ಶಾಕ್ತ ಪಂಥೀಯರು ಇರುವಂತೆ ಎಲ್ಲಾ ಧರ್ಮಿಯರಲ್ಲೂ ಉಪ ಧರ್ಮಗಳೂ ಹೆಚ್ಚಿವೆ . ಹೀಗಾಗಿ ಧಾರ್ಮಿಕ ವೈವಿಧ್ಯತೆ ಹೆಚ್ಚಾಗಿದೆ .

30. ಸಾಂಸ್ಕೃತಿಕ ವೈವಿಧ್ಯತೆ ಎಂದರೇನು ?

ಭಾರತದಲ್ಲಿ ಅನೇಕ ರೀತಿಯ ವೈವಿಧ್ಯತೆಗಳಿರುವಂತೆ ಸಾಂಸ್ಕೃತಿಕ ವೈವಿಧ್ಯತೆಯೂ ಇದೆ . ರಾಜ್ಯದಿಂದ ರಾಜ್ಯಕ್ಕೆ ಅನೇಕ ಸಾಂಸ್ಕೃತಿಕ ವ್ಯತ್ಯಾಸಗಳಿವೆ . ಜನರ ಜನಾಂಗೀಯ ಮೂಲಗಳು , ಸಂಸ್ಕೃತಿ , ಜೀವನ ವಿಧಾನಗಳು , ವರ್ತನಾ ಮಾದರಿಗಳು , ನಂಬಿಕೆಗಳು , ನೈತಿಕ ನಿಯಮಗಳು , ಆಹಾರಾಭ್ಯಾಸಗಳು , ಉಡುಪು ಮೌಲ್ಯಗಳು , ಸಾಮಾಜಿಕ ನಿಯಮಗಳು , ಸಾಮಾಜಿಕ ಧಾರ್ಮಿಕ ಪದ್ಧತಿಗಳು ಮತ್ತು ಮತಾಚರಣೆಯ ವ್ಯತ್ಯಾಸಗಳು ಹೀಗೆ ಭಾರತದಲ್ಲಿ ಸಾಂಸ್ಕೃತಿಕ ವೈವಿಧ್ಯತೆಯುಂಟಾಗಿದೆ .

31. ಪ್ರಾಂತೀಯ ಐಕ್ಯತೆ ಎಂದರೇನು ?

ಭಾರತವು ವೈವಿಧ್ಯಮಯವಾದ ಭೌಗೋಳಿಕ ಹಿನ್ನಲೆಯನ್ನು ಹೊಂದಿದ್ದರೂ ನೈಸರ್ಗಿಕ ಗಡಿಗಳು ಭೌಗೋಳಿಕ ಐಕ್ಯತೆಯನ್ನು ಒದಗಿಸುತ್ತವೆ . ಭಾರತ ದೇಶವು ಅನೇಕ ಹೆಸರುಗಳನ್ನು ಹೊಂದಿದ್ದರೂ ಐತಿಹಾಸಿಕ ಐಕ್ಯತೆಯನ್ನು ಹೊಂದಿದೆ . ಭಾರತ ವರ್ಷ ‘ ಎಂಬ ಹೆಸರು ಕವಿಗಳು , ರಾಜಕೀಯ ತತ್ವಶಾಸ್ತ್ರಜ್ಞರು ಮತ್ತು ಧಾರ್ಮಿಕ ಚಿಂತಕರ ಮನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ . ಇದನ್ನು ಪ್ರಾಂತೀಯ ಐಕ್ಯತೆ ಎನ್ನುತ್ತಾರೆ .

32. ಭಾಷಾ ಐಕ್ಯತೆ ಎಂದರೇನು ?

ಭಾರತದಲ್ಲಿ ಹಲವಾರು ಭಾಷೆಗಳಿದ್ದರೂ ಭಾಷಾ ಐಕ್ಯತೆ ಕಂಡು ಬರುತ್ತದೆ . ಭಾರತೀಯ ಭಾಷೆಗಳಿಗೆ ಸಂಸ್ಕೃತ ಭಾಷೆಯು ಆಧಾರವಾಗಿದ್ದು ಐಕ್ಯತೆಗೂ ಕೂಡಾ ಆಧಾರವಾಗಿದೆ . ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಭಾಷೆಗಳನ್ನಾಡುತ್ತಾರೆಯಾದರೂ ಇಂಗ್ಲೀಷ್ ಮತ್ತು ಹಿಂದಿ ಜನರ ಸಂಪರ್ಕ ಭಾಷೆಗಳಾಗಿವೆ . ಭಾರತದ ಭಾಷಾ ಪರಂಪರೆಯನ್ನು ಪುನರ್ ಸ್ಥಾಪಿಸಲು ಯತ್ನಿಸಲಾಗಿದೆ . ಈ ರೀತಿ ಭಾಷಾ ಐಕ್ಯತೆಯನ್ನು ಸಾಧಿಸಲಾಗಿದೆ .

33. ಸಾಂಸ್ಕೃತಿಕ ಐಕ್ಯತೆ ಎಂದರೇನು ?

ಕಲೆ , ವಾಸ್ತುಶಿಲ್ಪ , ಉಡುಪು , ಆಹಾರ ಪದ್ಧತಿ , ಸಾಹಿತ್ಯ , ಸಂಗೀತ , ನೃತ್ಯ , ಕ್ರೀಡೆ , ಚಲನಚಿತ್ರ , ವೈದ್ಯಕೀಯ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಎಲ್ಲರ ಸಂಯೋಜಿತ ಪ್ರಯತ್ನಗಳಿಂದಾಗಿ ಹೊಸ ಸಾಂಸ್ಕೃತಿಕ ನಮೂನೆಗಳು ಉದಯವಾದವು . ಇಷ್ಟೆಲ್ಲಾ ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದು ಈ ರೀತಿ ಸಾಂಸ್ಕೃತಿಕ ಐಕ್ಯತೆಯನ್ನು ಹೊಂದಿದೆ .

34. ರಾಷ್ಟ್ರೀಯ ಭಾವೈಕ್ಯತೆಯನ್ನು ವ್ಯಾಖ್ಯಿಸಿ .

ವಿಭಿನ್ನ ಸಂಸ್ಕೃತಿ ಹೊಂದಿದ ಜನರು ಅತ್ಯುಚ್ಛ ಮಟ್ಟದ ಸಹಕಾರ , ಪರಸ್ಪರ ತಿಳುವಳಿಕೆ , ಹಂಚಿಕೊಳ್ಳಲ್ಪಡುವ ಮೌಲ್ಯಗಳು , ಸಮಾನ ಅನನ್ಯತೆ ಮತ್ತು ರಾಷ್ಟ್ರಪ್ರಜ್ಞೆಗಳ ಮೂಲಕ ಒಗ್ಗೂಡುವುದೇ ಭಾವೈಕ್ಯತೆ , ರಾಷ್ಟ್ರದ ಏಕತೆ ಮತ್ತು ಜನರಲ್ಲಿ ತಾವು ಈ ರಾಷ್ಟ್ರಕ್ಕೆ ಸೇರಿದವರೆಂಬ ಭಾವನೆಯನ್ನು ( ಸೂಚಿಸುವುದುದೇ ) ಹೊಂದುವುದೇ ರಾಷ್ಟ್ರೀಯ ಭಾವೈಕ್ಯತೆ .

35. ಪ್ರಾಂತೀಯವಾದ ಎಂದರೇನು ?

ಒಂದು ಪ್ರಾಂತ್ಯದ ಜನರು ಇತರ ಪ್ರಾಂತ್ಯದ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತೆ ಕೇವಲ ತಮ್ಮ ಪ್ರಾಂತ್ಯದ ಹಿತಾಸಕ್ತಿಗಳಿಗೆ ಮಾತ್ರ ಆದ್ಯತೆ ಕೊಡುವುದನ್ನು ಪ್ರಾಂತೀಯವಾದ ಎನ್ನುತ್ತಾರೆ . ಪ್ರಾಂತೀಯವಾದವು ನಿರ್ದಿಷ್ಟ ಪ್ರಾಂತ್ಯವನ್ನು ಕುರಿತಂತೆ ಹೊಂದಿರುವ ಅತಿಯಾದ ನಿಷ್ಠೆ ಪ್ರಾಂತೀಯವಾದಕ್ಕೆಡೆ ಮಾಡಿಕೊಡುತ್ತಿವೆ .

36. ಕೋಮುವಾದ ಎಂದರೇನು ?

ಒಂದು ಕೋಮು ಅಥವಾ ಧರ್ಮಕ್ಕೆ ಸೇರಿದ ಜನರು ಇನ್ನೊಂದು ಕೋಮು ಅಥವಾ ಧರ್ಮಕ್ಕೆ ಸೇರಿದ ಜನರ ವಿರುದ್ಧ ಹೊಂದಿರುವ ದ್ವೇಷಪೂರಿತ ಭಾವನೆಗೇ ಕೋಮುವಾದ ಎನ್ನಬಹುದು . ಬಿಪಿನ್‌ಚಂದ್ರ ಅವರು ಹೇಳುವಂತೆ ಕೋಮುವಾದವು ನಿರ್ದಿಷ್ಟ ಸಮಾಜ , ಅರ್ಥವ್ಯವಸ್ಥೆ ಮತ್ತು ರಾಜ್ಯಾಡಳಿತದ ಉತ್ಪನ್ನವಾಗಿದ್ದು ಸಮಸ್ಯೆಗಳನ್ನು ಸೃಷ್ಟಿಸುತ್ತದೆ .

37. ಭಾಷಾವಾದ ಎಂದರೇನು ?

ಭಾಷಾವಾದವು ತಮ್ಮ ಭಾಷೆಯನ್ನು ಕುರಿತು ವಿಶೇಷ ಒಲವು , ಗೌರವಾಭಿಮಾನಗಳನ್ನು ಹೊಂದಿರುವುದು ಮತ್ತು ಇತರರ ಭಾಷೆಗಳನ್ನು ಕುರಿತು ಪೂರ್ವಾಗ್ರಹ ಮತ್ತು ದ್ವೇಷ ಭಾವನೆ ಹೊಂದಿರುವುದನ್ನು ಸೂಚಿಸುತ್ತದೆ . ಭಾಷಾ ವೈವಿಧ್ಯತೆಯು ಭಾಷಾವಾದಕ್ಕೂ ಕಾರಣವಾಗಿದೆ . ಭಾಷಾ ವಾದವು ಹಲವೊಮ್ಮೆ ಹಿಂಸಾತ್ಮಕ ಚಳುವಳಿಗೆ ಕಾರಣವಾಗಿದೆ .

38. ಉಗ್ರವಾದ ಎಂದರೇನು ?

ತಮ್ಮ ಗುರಿಗಳ ಈಡೇರಿಕೆಗಾಗಿ ವ್ಯಕ್ತಿ ಅಥವಾ ಸಮೂಹ ಪ್ರಜಾಸತ್ತೆಯ ವಿರೋಧಿಯಾದ ಹಿಂಸಾತ್ಮಕವಾದ ಮತ್ತು ಅಪಾಯಕಾರಿಯಾದ ಮಾರ್ಗಗಳನ್ನು ಬಳಸಿದರೆ ಅದನ್ನು ಉಗ್ರವಾದ ಎನ್ನುತ್ತಾರೆ . ಇತ್ತೀಚೆಗೆ ಭಾರತದಲ್ಲಿ ಈ ಉಗ್ರವಾದ ಅಥವಾ ಆತಂಕವಾದ ಹೆಚ್ಚುತ್ತಿದೆ . ಇದು ರಾಷ್ಟ್ರೀಯ ಐಕ್ಯತೆಗೆ ಸವಾಲನ್ನೊಡ್ಡುವ ಅಂಶವಾಗಿದೆ .

39. ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಬಲ್ಲ ಎರಡು ಕ್ರಮಗಳನ್ನು ತಿಳಿಸಿ .

ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಲು ಅನೇಕ ಕ್ರಮಗಳಿವೆ . ಅವುಗಳಲ್ಲಿ ಎರಡು ಪ್ರಮುಖವಾದ ಕ್ರಮಗಳು

( ii ) ಔಪಚಾರಿಕ ಶಿಕ್ಷಣದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯನ್ನು ಪ್ರೇರೇಪಿಸುವ ಪಠೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು .

( i ) ಪಠ್ಯಪುಸ್ತಕಗಳಲ್ಲಿ ಸುಧಾರಣೆಯನ್ನು ತರುವುದರಿಂದ ನಿಜವಾದ ರಾಷ್ಟ್ರೀಯ ದೃಷ್ಟಿಕೋನ ಬೆಳೆಯಲು ಸಹಾಯಕವಾಗುತ್ತದೆ . ಪ್ರತಿಯೊಬ್ಬರಲ್ಲೂ ರಾಷ್ಟ್ರಪ್ರೇಮ ಬೆಳೆಯುವಂತಹ ವಿಚಾರಕ್ಕೆ ಸರ್ಕಾರ ಮಾತ್ರವಲ್ಲದೆ ಎಲ್ಲಾ ನಾಗರಿಕರೂ ಪ್ರಯತ್ನಿಸಬೇಕು .

2nd Puc Sociology Chapter 1 Notes in Kannada

III . ಐದು ಅಂಕಗಳ ಪ್ರಶ್ನೆಗಳು :

40. ಭಾರತದ ಜನಸಂಖ್ಯಾಶಾಸ್ತ್ರೀಯ ಚಿತ್ರಣದ ನಾಲ್ಕು ಪ್ರಮುಖ ಲಕ್ಷಣಗಳನ್ನು ವಿವರಿಸಿ .

ಭಾರತದ ಜನಸಂಖ್ಯಾಶಾಸ್ತ್ರೀಯ ಚಿತ್ರಣದ ಪ್ರಮುಖ ಲಕ್ಷಣಗಳು :

( i ) ಭಾರತೀಯ ಜನಸಂಖ್ಯೆಯ ಗಾತ್ರ ಮತ್ತು ಬೆಳವಣಿಗೆ : ಪ್ರಪಂಚದಲ್ಲಿ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಚೀನಾ , ನಂತರದ ಸ್ಥಾನ ಭಾರತ . ಇದು ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಎರಡನೇ ರಾಷ್ಟ್ರವಾಗಿದೆ . 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ ಎಂದರೆ 1.21 ಬಿಲಿಯನ್ , ಸ್ವಾತಂತ್ರ್ಯಾನಂತರ ಭಾರತದ ಜನಸಂಖ್ಯೆಯು ಏರಿಕೆಯಾಗತೊಡಗಿದೆ . ಜನಸಂಖ್ಯೆಯ ವಿಷಯಕ್ಕೆ ಸಂಬಂಧಿಸದಂತೆ ಜಾಗತಿಕ ಮಟ್ಟದಲ್ಲಿ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಮಂಚೂಣಿಯಲ್ಲಿರುವ ರಾಷ್ಟ್ರಗಳಲ್ಲೊಂದಾಗಿದೆ . 1931 ಕ್ಕಿಂತ ಮೊದಲು ಜನನ ಮರಣ ಪ್ರಮಾಣವು ಹೆಚ್ಚಾಗಿಯೇ ಇದ್ದವು . ಮುಂದೆ ಮರಣ ಪ್ರಮಾಣವು ತೀವಕುಸಿತ ಕಂಡರೆ , ಜನನ ಪ್ರಮಾಣ ಅಲ್ಪ ಪ್ರಮಾಣದ ಕುಸಿತ ಕಂಡಿತು . 1921 ಕ್ಕಿಂತ ಮುಂಚೆ ಜನಸಮೂಹದ ಬೆಳವಣಿಗೆಯು ಪ್ರಮಾಣವು ಸ್ಥಿರವಾಗಿರಲಿಲ್ಲ . ಕೆಲವೊಮ್ಮೆ ಅದು ಹೆಚ್ಚಾಗಿರುತ್ತಿತ್ತು . ಮತ್ತೆ ಕೆಲವೊಮ್ಮೆ ಅದು ಕಡಿಮೆಯಾಗಿರುತ್ತಿತ್ತು . ಈ ಕಾರಣದಿಂದಾಗಿ 1921 ನ್ನು ‘ ಜನಸಂಖ್ಯಾಶಾಸ್ತ್ರೀಯ ವಿಭಜಕ ‘ ಎಂದು ಪರಿಗಣಿಸಲಾಗಿದೆ . 1921 ರ ನಂತರ ಜನಂಖ್ಯೆಯು ಸತತವಾಗಿ ಏರುತ್ತಲೇ ಇದೆ . ಕಡಿಮೆಯಾಗುತ್ತಿಲ್ಲವಾದ್ದರಿಂದ 1921 ನ್ನು ಜನಸಂಖ್ಯಾಶಾಸ್ತ್ರೀಯ ವಿಭಜಕ ಎನ್ನಲಾಗಿದೆ .

( ii ) ಭಾರತೀಯ ಜನಸಮೂಹದ ವಯೋರಚನೆ : ಭಾರತವು ಅತಿ ಕಿರಿಯ ವಯೋಮಾನದ ಜನಸಮೂಹವನ್ನು ಹೆಚ್ಚಾಗಿ ಹೊಂದಿದೆ . ಇತರ ದೇಶಗಳ ಜನಸಂಖ್ಯೆಗೆ ಹೋಲಿಸಿದಲ್ಲಿ ಭಾರತದಲ್ಲಿ ಕಿರಿಯರ ಸಂಖ್ಯೆ ಹೆಚ್ಚಾಗಿದೆ . ಕಳೆದ ದಶಕದಲ್ಲಿ ಪೌರ್ವಾತ್ಯ ಏಶಿಯನ್ ಅರ್ಥವ್ಯವಸ್ಥೆಗಳಲ್ಲಿ ಮತ್ತು ಇಂದಿನ ಐರ್ಲಂಡ್ ನಲ್ಲಾಗಿರುವಂತೆ , ಭಾರತವು ‘ ಜನಸಂಖ್ಯಾ ಲಾಭಾಂಶ’ದ ಲಾಭ ಪಡೆಯಲಿದೆ . ಭಾರತವು ‘ ಜನಸಂಖ್ಯಾ ಲಾಭಾಂಶ ದ ಲಾಭ ಪಡೆಯಲಿದೆ . ಇದನ್ನು ಕೆಲ ಸೂಕ್ತ ನೀತಿಗಳ ಪ್ರಜ್ಞಾಪೂರ್ವಕ ಬಳಕೆಯಿಂದ ಸಾಧಿಸಬಹುದಾಗಿದೆ . ಆ ನೀತಿಗಳು .

( ಎ ) ಭಾರತವು ಜಗತ್ತಿನ ಅತಿ ಕಿರಿಯರ ರಾಷ್ಟ್ರಗಳಲ್ಲಿ ಒಂದು ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ . ಇದರಿಂದ ಭಾರತಕ್ಕೆ ಪ್ರಾಪ್ತವಾಗುವ ಜನಸಂಖ್ಯಾ ಲಾಭ ಅಥವಾ ಅನುಕೂಲವನ್ನು ಲೆಕ್ಕ ಹಾಕಬಹುದಾಗಿದೆ . 2020 ರಲ್ಲಿ ಭಾರತೀಯರ ಸರಾಸರಿ ವಯಸ್ಸು ಅಮೆರಿಕೆಯ ಜನರ ಸರಾಸರಿ ವಯಸ್ಸು 37 ರಷ್ಟು ಇರುತ್ತದೆ . ಪಶ್ಚಿಮ ಯುರೋಪಿನ ಜನರ ಸರಾಸರಿ ವಯಸ್ಸು 45 ಮತ್ತು ಜಪಾನೀಯರ ವಯಸ್ಸು 48 ರಷ್ಟಿರುತ್ತದೆ . ಈ ಅಂಶವು ಬೃಹತ್ತಾದ ಮತ್ತು ಹೆಚ್ಚುತ್ತಿರುವ ಕಾರ್ಮಿಕ ಪಡೆಯ ಸೂಚಕವಾಗಿದ್ದು , ಬೆಳವಣಿಗೆ ಮತ್ತು ಸಮೃದ್ಧಿಯ ದೃಷ್ಟಿಯಿಂದ ಅನಿರೀಕ್ಷಿತ ಫಲಗಳನ್ನು ನೀಡಬಹುದಾಗಿದೆ .

( iii ) ಭಾರತದಲ್ಲಿ ಕುಸಿಯುತ್ತಿರುವ ಲಿಂಗಾನುಪಾತ : ಲಿಂಗಾನುಪಾತವು ಜನಸಮೂಹದ ಲಿಂಗ ಸಮತೋಲನದ ಮಹತ್ವಪೂರ್ಣವಾದ ಸೂಚಕವಾಗಿದೆ . ಲಿಂಗಾನುಪಾತವನ್ನು 1000 ಪುರುಷರಿಗೆ ಅನುಗುಣವಾಗಿ ಮಹಿಳೆಯರ ಸಂಖ್ಯೆಯ ಪ್ರಮಾಣವನ್ನು ಲೆಕ್ಕ ಹಾಕಿ ನಿರ್ಧರಿಸಲಾಗುತ್ತದೆ . ಭಾರತದಲ್ಲಿ ಶತಮಾನಕ್ಕೂ ಹೆಚ್ಚಿನ ಕಾಲ ಲಿಂಗಾನುಪಾತವು ಅಸಮರ್ಪಕವಾಗಿಯೇ ಇತ್ತು . ಇದಕ್ಕೆ ಹಲವಾರು ಕಾರಣಗಳಿವೆ . ಮುಖ್ಯವಾಗಿ ಗಂಡು ಸಂತತಿಯ ಬಯಕೆ . ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸ್ತ್ರೀಯರಿಗೆ ಉನ್ನತ ಸ್ಥಾನವನ್ನು ನೀಡಲಾಗಿದೆ . ಆದರೂ ಅನೇಕ ರಾಜ್ಯಗಳಲ್ಲಿ ಗಂಡು ಸಂತತಿಯ ಬಯಕೆ ಅಧಿಕ ಪ್ರಮಾಣದಲ್ಲಿದೆ . ಪುರುಷ ಪ್ರಧಾನ ಮೌಲ್ಯಗಳು , ಧರ್ಮ , ಪದ್ಧತಿಗಳು , ಸಂಪ್ರದಾಯಗಳು ಹಾಗೂ ಅಲ್ಪಾಸೌಂಡ್ ತಂತ್ರಜ್ಞಾನದಂಥ ಆಧುನಿಕ ತಂತ್ರಜ್ಞಾನದ ದುರ್ಬಳಕೆಗಳು ಹೆಣ್ಣು ಭ್ರೂಣ ಹತ್ಯೆಯ ಪ್ರಮುಖ ಕಾರಣಗಳಾಗಿವೆ .

( iv ) ಭಾರತೀಯ ಜನಸಮೂಹದಲ್ಲಿ ಹೆಚ್ಚುತ್ತಿರುವ ಸಾಕ್ಷರತಾ ಪ್ರಮಾಣ : ಲಿಂಗ , ಪ್ರಾಂತ್ಯ ಮತ್ತು ಸಾಮಾಜಿಕ ಸಮೂಹಗಳಿಗೆ ಸಂಬಂಧಿಸಿದಂತೆ ಸಾಕ್ಷರತಾ ಪ್ರಮಾಣದಲ್ಲಿ ವ್ಯತ್ಯಾಸವನ್ನು ಕಾಣಬಹುದು . ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣವು ಶೇ .22 ರಷ್ಟು ಕಡಿಮೆ ಇದೆ . ಮಹಿಳೆಯರ ಸಾಕ್ಷರತಾ ಪ್ರಮಾಣವು ಪುರುಷರ ಸಾಕ್ಷರತಾ ಪ್ರಮಾಣಕ್ಕಿಂತ ವೇಗವಾಗಿ ಹೆಚ್ಚುತ್ತಿದೆ . ಆದರೂ ಸಂಪೂರ್ಣ ಸಾಕ್ಷರತೆಯನ್ನು ಪಡೆಯಲಾಗಿಲ್ಲ . ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಕಡಿಮೆ ಪ್ರಮಾಣದಲ್ಲಿ ಸಾಕ್ಷರತೆಯನ್ನು ಹೊಂದಿದ್ದಾರೆ . ಅವರಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣವು ಇನ್ನೂ ಕಡಿಮೆಯಿದೆ .

41. ಡಾ.ಬಿ.ಎಸ್.ಗುಹಾ ಅವರು ವರ್ಗಿಕರಿಸಿದ ಜನಾಂಗೀಯ ಸಮೂಹಗಳನ್ನು ವಿವರಿಸಿ .

ಡಾ . ಬಿ.ಎಸ್ . ಗುಹಾ ಅವರು ಭಾರತೀಯ ಜನ ಸಮೂಹದಲ್ಲಿ ಆರು ಪ್ರಮುಖ ಜನಾಂಗೀಯ ಮೂಲಗಳನ್ನು ಗುರ್ತಿಸಿದ್ದು , ಅವರ ವರ್ಗಿಕರಣವನ್ನು ಅಧಿಕೃತವೆಂದು ಪರಿಗಣಿಸಲಾಗಿದೆ .

( i ) ನಿಗ್ರಿಟೋ , ಪ್ರೊಟೊ , ಆಸ್ಟ್ರೇಲಾಯ್ಡ್ ಮತ್ತು ಮಂಗೋಲಾಯ್ಡ್ : ಈ ಸಮೂಹಗಳು ಭಾರತದ ಪ್ರಾರಂಭಿಕ ನಿವಾಸಿಗಳು . ದಕ್ಷಿಣ ಭಾಗದ ಕಡರ್ , ಇರುಳಾ ಮತ್ತು ಪಣಿಯನ್ ಹಾಗೂ ಅಂಡಮಾನ್ ದ್ವೀಪಗಳ ಓಂಗೇ ಮತ್ತು ಅಂಡಮಾನ್ ಬುಡಕಟ್ಟಿನವರಲ್ಲಿ ಸ್ಪಷ್ಟವಾದ ನಿಗ್ರಿಟೊ ಲಕ್ಷಣಗಳಿವೆ . ಭಾರತದ ಕೊಂಕಣ ಪ್ರದೇಶದಲ್ಲಿ ನಿಗ್ರಿಟೊ ಲಕ್ಷಣಗಳನ್ನು ಹೊಂದಿದ ಕೆಲ ಸಮೂಹಗಳು ಕಂಡು ಬರುತ್ತಾವಾದರೂ ಅವರು ಭಾರತಕ್ಕೆ ಅರಬ್ ವ್ಯಾಪಾರಿಗಳೊಂದಿಗೆ ನಂತರ ಬಂದ ವಲಸಿಗರು ಆಗಿರಬಹುದೆಂದು ಊಹಿಸಲಾಗಿದೆ .

( ii ) ಪ್ರೊಟೊ ಆಸ್ಟ್ರಲಾಯ್ಡ್ : ಸಮೂಹವು ಸಂಖ್ಯಾತ್ಮಕವಾಗಿ ಹೆಚ್ಚು ಮಹತ್ವಪೂರ್ಣವಾದುದಾಗಿದೆ . ಮಧ್ಯ ಭಾರತದ ಬಹಳಷ್ಟು ಬುಡಕಟ್ಟುಗಳು ಈ ಸಮೂಹಕ್ಕೆ ಸೇರುತ್ತವೆ . ಇಂಡೋ ಆರ್ಯನ್ನರು ಆ ಜನಸಮೂಹವನ್ನು ದಾಸ , ದಸ್ಯು ಮತ್ತು ನಿಷಾಧ ಮುಂತಾದ ಅವಹೇಳನಕಾರಿ ಪದಗಳಿಂದ ಕರೆಯುತ್ತಿದ್ದರು . ‌

( iii ) ಮಂಗೋಲಾಯ್ಡ್ : ಸಮೂಹವು ಎರಡು ಉಪಶಾಖೆಗಳನ್ನು ಹೊಂದಿದೆ . ಅವು ಪಾಲಿಯೊ ಮಂಗೋಲಾಯ್ಡ್ ಮತ್ತು ಟಿಬೆಟೊ – ಮಂಗೋಲಾಯ್ಡ್ . ಹಿಮಾಲಯ ಪ್ರಾಂತ್ಯದ ಭಾರತದ ಈಶಾನ್ಯ ಭಾಗದ ಬುಡಕಟ್ಟು ಸಮೂಹಗಳು ಮಂಗೋಲಾಯ್ಡ್ ಪ್ರವರ್ಗಕ್ಕೆ ಸೇರುತ್ತವೆ . ಅಸ್ಸಾಂ ಪಶ್ಚಿಮ ಬಂಗಾಳ , ಮಣಿಪುರ ಮತ್ತು ತ್ರಿಪರ ರಾಜ್ಯಗಳ ಬುಡಕಟೇತರ ಸಮೂಹಗಳಲ್ಲೂ ಮಂಗೋಲಾಯ್ ಜನಾಂಗದ ಕೆಲ ಲಕ್ಷಣಗಳು ಕಂಡು ಬರುತ್ತವೆ .

( iv , v , vi ) ಮೆಡಿಟರೇನಿಯನ್ನರು , ಪಶ್ಚಿಮ ಬ್ರಾಕಿಸೆಫಾಲರು ನಾರ್ಡಿಕ್ ಮತ್ತು ಅಲ್ಪನಾಯ್ಡ್ , ದಿನಾರಿಕ್ ಮತ್ತು ಅರ್ಮೆನಾಯ್ಡ್ ಎಂಬ ಮೂರು ನಂತರದ ಕಾಲಾವಧಿಯಲ್ಲಿ ಆಗಮಿಸಿದ್ದಾರೆ ಎನ್ನಲಾಗಿದೆ . ಮೆಡಿಟರೇನಿಯನ್ನರು ದ್ರಾವಿಡ ಭಾಷೆಗಳು ಮತ್ತು ಸಂಸ್ಕೃತಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ . ಉತ್ತರ ಮತ್ತು ಪಶ್ಚಿಮ ಭಾರತದ ಕೆಲ ಸಮೂಹಗಳಲ್ಲಿ ಅಲ್ಪನಾಯ್ಡ್ ಮತ್ತು ದಿನಾರಿಕ್ ಲಕ್ಷಣಗಳು ಕಂಡು ಬರುತ್ತವೆ . ಪಾರ್ಸಿ ಜನಸಮೂಹವು ಅರ್ಮೆನಾಯ್ ಜನಾಂಗೀಯ ಲಕ್ಷಣಗಳನ್ನು ಹೊಂದಿದೆ . ನಾರ್ಡಿಕ್ ಜನಾಂಗದವರು ಭಾರತಕ್ಕೆ ಆಗಮಿಸಿದ ಪ್ರಮುಖ ಜನಾಂಗೀಯ ಸಮೂಹಗಳಲ್ಲಿ ಕೊನೆಯವರಾಗಿದ್ದು , ಭಾರತದ ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ . ಆದರೆ ಅವರು ಬರುವುದಕ್ಕಿಂತ ಮುಂಚೆಯೇ ಭಾರತದಲ್ಲಿ ಒಂದು ವಿಶಿಷ್ಟ ಸಂಸ್ಕೃತಿಯು ನಿಧಾನವಾಗಿ ಬೆಳೆದು ಬಂದಿತ್ತು . ಆ ಸಂಸ್ಕೃತಿಯನ್ನೇ ಸಿಂಧೂ ಕಣಿವೆಯ ನಾಗರಿಕತೆ ಎನ್ನಲಾಗುತ್ತದೆ .

42 , ಆರ್ಯನೀಕರಣದ ಪ್ರಕ್ರಿಯೆಯನ್ನು ಕುರಿತು ಟಿಪ್ಪಣಿ ಬರೆಯಿರಿ .

ಆರ್ಯನೀಕರಣದ ಪಕ್ರಿಯೆ : ಇಂಡೋ ಆರ್ಯನ್ನರು ನಂತರದ ಕಾಲಾವಧಿಯಲ್ಲಿ ಬಂದಿದ್ದು , ಈ ನಾಡಿನ ಮೂಲ ನಿವಾಸಿಗಳೊಡನೆ ಸುದೀರ್ಘವಾದ ಸಂಘರ್ಷ ನಡೆಯಿತು . ಇವರು ಮೂಲತಃ ಪಶುಗಾಹಿಗಳಾಗಿದ್ದು , ಕಾವ್ಯ ತತ್ವಶಾಸ್ತ್ರ ಮತ್ತು ತತ್ವಾಚರಣೆಗಳಲ್ಲಿ ಒಲವುಳ್ಳವರಾಗಿದ್ದರು . ಅವರು ತಮ್ಮನ್ನು ತಾವು ಶ್ರೇಷ್ಠರೆಂದು ಪರಿಗಣಿಸಿಕೊಂಡು ಇಲ್ಲಿನ ಮೂಲನಿವಾಸಿಗಳನ್ನು ಅತ್ಯಂತ ಹೀನಾಯವಾಗಿ ಕಂಡು ಅವಮಾನಿಸುತ್ತಿದ್ದರು . ಇವರಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ , ಮಡಿ – ಮೈಲಿಗೆಗಳ ನಂಬಿಕೆಗಳು ಆಚರಣೆಯಲ್ಲಿತ್ತು . ಇತರರೊಂದಿಗೆ , ಮೂಲನಿವಾಸಿಗಳೊಂದಿಗೆ ಸಹಭೋಜನ , ಭೌತಿಕ ಸಂಪರ್ಕಗಳನ್ನು ನಿಯಂತ್ರಿಸುತ್ತಿದ್ದರು . ಮುಂದೆ ಇದು ವರ್ಣ ಮತ್ತು ಜಾತಿಗಳ ಹುಟ್ಟಿಗೆ ಕಾರಣವಾಯಿತು .

ಇಂಡೋ ಆರ್ಯನ್ನರು ಮತ್ತು ಮೂಲ ನಿವಾಸಿಗಳ ನಡುವಿನ ಅಂತರಕ್ರಿಯೆಯ ವ್ಯಾಪ್ತಿಯು ವಿಶಾಲವಾದಂತೆ , ಭಾರತೀಯ ಸಮಾಜದ ತಾತ್ವಿಕ ಮತ್ತು ಸಾಮಾಜಿಕ ಚೌಕಟ್ಟು ರೂಪುಗೊಳ್ಳತೊಡಗಿತು . ಇಂಡೋ ಆರ್ಯನ್ನರಲ್ಲಿ ಮೂರು ಉಪಸಮೂಹಗಳಿದ್ದವು– ರಾಜನ್ಯರು ಎಂದರೆ ಯೋಧರು ಮತ್ತು ಕುಲೀನರು , ಬ್ರಾಹ್ಮಣರು ( ಪುರೋಹಿತರು ) ಮತ್ತು ವೈಶ್ಯರು ( ಕೃಷಿಕರು ) , ಈ ಸಮೂಹಗಳು ದ್ವಿಜ ಸಮೂಹಗಳಾಗಿದ್ದವು . ನೈಸರ್ಗಿಕ ಜನನದ ಮೂಲಕ ಒಮ್ಮೆ ಮತ್ತು ಉಪಯನದ ಮೂಲಕ ಮತ್ತೊಮ್ಮೆ ಹುಟ್ಟುತ್ತಾರೆಂಬ ಅರ್ಥದಲ್ಲಿ , ಇವರನ್ನು ‘ ದ್ವಿಜ ‘ ಎನ್ನಲಾಗುತ್ತಿತ್ತು . ಶೂದ್ರರು ನಾಲ್ಕನೆಯ ವರ್ಣದವರಾಗಿದ್ದರು . ಇವರು ಇಂಡೋ ಆರ್ಯನ್ ಸಮೂಹದ ಹೊರಗಿನವರಾಗಿದ್ದರಲ್ಲದೆ ,

ಇಂಡೋ ಆರ್ಯನ್ ಮತ್ತು ದಾಸರ ವಿವಾಹದ ಸಂತಾನವಾಗಿದ್ದಿರಬಹುದೆನ್ನಲಾಗಿದೆ . ಇವರಿಗೆ ದ್ವಿಜ ‘ ಅಂತಸ್ತನ್ನು ನಿರಾಕರಿಸಲಾಗಿತ್ತು . ನಾಲ್ಕು ಶ್ರೇಣಿಗಳ ಲಂಭಾಂತರ ವರ್ಣ ರಚನೆಯ ಹೊರಗೆ ಅವರ್ಣ ಅಥವಾ ಪಂಚಮ ಎಂಬ ಐದನೆಯ ಸಮೂಹವಿತ್ತು . ಇವರ ಜನಾಂಗೀಯ ಅಂತಸ್ತು ಅತ್ಯಂತ ಕೀಳಾಗಿತ್ತು . ಇವರ ವೃತ್ತಿಗಳನ್ನು ಕೀಳಾಗಿ ಕಾಣಲಾಗುತ್ತಿತ್ತು . ಪ್ರತಿಯೊಂದು ವರ್ಣವೂ ಜಾತಿಗಳ ಏಣಿಶ್ರೇಣಿಯನ್ನೊಳಗೊಂಡಿತ್ತು . ಕಾಲಕಾಲಕ್ಕೆ ಮುಂದೆ ಹಲವಾರು ಹೊಸ ಜಾತಿಗಳು ಈ ವ್ಯವಸ್ಥೆಗೆ ಸೇರ್ಪಡೆಯಾದವು .

ಉಪಖಂಡದ ಸಂಪ್ರದಾಯಗಳ ಆರ್ಯನೀಕರಣದ ಪ್ರಕ್ರಿಯೆಯು ಸರಳವೂ , ಸಂಪೂರ್ಣವೂ ಆಗಿರಲಿಲ್ಲ . ಪ್ರಾರಂಭಿಕ ಹಂತದಲ್ಲಿ ಗಣನೀಯವಾದ ಸಾಂಸ್ಕೃತಿಕ ಸಂಘರ್ಷ ಮತ್ತು ಯುದ್ಧ , ಕೆಲವೊಮ್ಮೆ ಹೊಂದಾಣಿಕೆ , ಒಪ್ಪಂದಗಳು ಕಂಡು ಬಂದವು . ಇಂಡೋ ಆರ್ಯನ್ನರು ಪಶುಪಾಲನೆಯ ವೃತ್ತಿಯಿಂದ ಕೃಷಿ ಅರ್ಥವ್ಯವಸ್ಥೆಗೆ ಬದಲಾಗ ತೊಡಗಿದರು . ಇದರಿಂದಾಗಿ ಅವರು ಸ್ಥಳೀಯರೊಂದಿಗೆ ಸಾಮರಸ್ಯ ಸಾಧಿಸಬೇಕಾದ ಅಗತ್ಯ ನಿರ್ಮಾಣವಾಯಿತು . ಇದರ ಪರಿಣಾಮವಾಗಿ , ಆರ್ಯೇತರರು ಇಂಡೋ ಆರ್ಯನ್ ತತ್ವಾಚಾರಣೆಗಳು , ಸಾಮಾಜಿಕ ಸಂಘಟನೆಯ ತತ್ವಕ್ಕೆ ಸಂಬಂಧಿಸಿದ ಕೆಲ ಮೂಲಾಂಶಗಳನ್ನು ಅಳವಡಿಸಿಕೊಂಡರಲ್ಲದೆ , ತಮ್ಮ ಜನಾಂಗೀಯ ಮತ್ತು ಪ್ರಾಂತೀಯ ಅನನ್ಯತೆಗಳನ್ನು ಹಾಗೆಯೇ ಉಳಿಸಿಕೊಂಡರು . ಈ ಹಂತದಲ್ಲಿ ಬಹುರೂಪತೆ ಬಲಗೊಳ್ಳತೊಡಗಿತಲ್ಲದೆ , ಸಾಂಸ್ಕೃತಿಕ ವೈವಿಧ್ಯತೆ ರೂಪುಗೊಳ್ಳತೊಡಗಿತು . ಈ ರೀತಿ ಆರ್ಯನೀಕರಣ ಪ್ರಕ್ರಿಯೆ ಉಂಟಾಯಿತು .

43. ಅರ್ಯನೀಕರಣದ ಪ್ರಕ್ರಿಯೆಯ ಪ್ರಮುಖ ತೊಡಕುಗಳನ್ನು ವಿವರಿಸಿ .

ಆರ್ಯನೀಕರಣ ಪ್ರಕ್ರಿಯೆಯ ಪ್ರಮುಖ ತೊಡಕುಗಳು ಹೀಗಿವೆ . ಆರ್ಯನ್ನರು ಹಾಗೂ ಇತರರು ತಮ್ಮ ತಮ್ಮ ನಡುವಿನ ಸಾಂಸ್ಕೃತಿಕ ವಿಲೀನ ಕ್ರಿಯೆಗೆ ಮುಖ್ಯವಾಗಿ ಮೂರು ತೊಡಕುಗಳು ಉಂಟಾದವು . ಅವುಗಳು

( i ) ಕೆಲವು ಬುಡಕಟ್ಟು ಸಮೂಹಗಳು ವಿಲೀನವಾಗಲು ನಿರಾಕರಿಸಿದವು . ಅಲ್ಲದೆ ದುರ್ಗಮ ಅರಣ್ಯಗಳು ಮತ್ತು ಪರ್ವತಗಳಲ್ಲಿ ನೆಲೆಗೊಳ್ಳಬಯಸಿದವು . ಅವರಲ್ಲಿ ಇನ್ನೂ ಹಲವು ಸಮೂಹಗಳು ತಮ್ಮ ಪ್ರತ್ಯೇಕ ಅನನ್ಯತೆಯನ್ನು ಉಳಿಸಿಕೊಂಡಿದೆ .

( ii ) ಕೆಲವು ಪ್ರಬಲ ಜನಾಂಗೀಯ ಸಮೂಹಗಳು ಸ್ವಾಂಗೀಕರಣಕ್ಕೆ ಸಂಬಂಧಿಸಿದಂತೆ ಪ್ರಬಲವಾಗಿ ಪ್ರತಿರೋಧವನ್ನು ಒಡ್ಡಿದವು . ಆಂಧ್ರಪ್ರದೇಶದ ರೆಡ್ಡಿಗಳು , ಕೇರಳದ ನಾಯರ್ ಸಮೂಹ , ತಮಿಳುನಾಡಿನ ಯರವಾ ಸಮೂಹ ಮತ್ತು ಮಹಾರಾಷ್ಟ್ರದ ಮರಾಠಾ ಸಮೂಹಗಳು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿದ್ದುದರಿಂದ ಶೂದ್ರ ಅಂತಸ್ತನ್ನೊಪ್ಪಿಕೊಳ್ಳಲಿಲ್ಲ . ಅವರನ್ನು ಔಪಚಾರಿಕವಾಗಿ ” ದ್ವಿಜರೆ ೦ ದು ಪರಿಗಣಿಸಲಿಲ್ಲವಾದರೂ , ಅವರು ಹೆಚ್ಚು ಕಡಿಮೆ ಕ್ಷತ್ರಿಯರಿಗೆ ಸಮನಾದ ಅಂತಸ್ತನ್ನು ಪಡೆದರು .

( iii ) ನಂತರದ ಕಾಲಾವಧಿಯಲ್ಲಿ ವಲಸೆ ಬಂದಂತಹವರು ಭಾರತಕ್ಕೆ ಆಕ್ರಮಣಕಾರರಾಗಿಯೇ ಪ್ರವೇಶಿಸಿದರು . ಇವರಲ್ಲಿ ಪ್ರಮುಖರು ಗ್ರೀಕರು , ಸೈಥಿಯನ್ನರು , ಪಾರ್ಥಿಯನ್ನರು , ಶಕರು , ಕುಶಾನರು ಮತ್ತು ಹೂಣರು . ಬಹು ಕಾಲಾವಧಿಯವರೆಗೆ ಭಾರತದಲ್ಲೇ ನೆಲೆಸಿ ಆಡಳಿತ ನಡೆಸಿದರು . ಆದರೆ ಇವರನ್ನು ಪರಕೀಯರು ಎಂದು ಪರಿಗಣಿಸಿದ್ದರಿಂದ , ಇವರು ಇಷ್ಟಪಟ್ಟರೂ ಇವರನ್ನು ವಿಲೀನಗೊಳಿಸಲು ಹಲವರ ವಿರೋಧವಿತ್ತು , ಕಾಲ ಕ್ರಮೇಣ ಇವರ ಅಧಿಕಾರ ಹಾಗೂ ಉತ್ತಮ ಸ್ಥಾನಮಾನಗಳಿಂದಾಗಿ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ವಿಲೀನಗೊಂಡರು . ಪ್ರಾರಂಭದಲ್ಲಿ ಮಾತ್ರ ಇವರ ವಿಲೀನೀಕರಣಕ್ಕೆ ಅಡಚಣೆಗಳಿತ್ತು .

44. ಭಾರತದ ವೈವಿಧ್ಯತೆಯ ಸ್ವರೂಪವನ್ನು ವಿವರಿಸಿ .

ಭಾರತದಲ್ಲಿ ವೈವಿಧ್ಯತೆಯು ಬೇರೆಲ್ಲಾ ದೇಶಕ್ಕಿಂತ , ವಿಶಿಷ್ಟವಾದುದಾಗಿದೆ . ಡಾ . ಇರಾವತಿ ಕರ್ವೆಯವರು ಹೇಳುವಂತೆ ಪ್ರಪಂಚದ ಇನ್ಯಾವುದೇ ದೇಶದಲ್ಲಿ ಇಷ್ಟೊಂದು ವೈವಿಧ್ಯತೆಯನ್ನು ಕಾಣಲಾಗುವುದಿಲ್ಲ . ಆದುದರಿಂದ ‘ ಭಾರತವನ್ನು ಜಗತ್ತಿನ ಸೂಕ್ಷ್ಮರೂಪ ‘ ಎಂದು ಕರೆಯಬಹುದು .

ಈ ವೈವಿಧ್ಯತೆಗಳನ್ನು ಪ್ರಾದೇಶಿಕವಾಗಿ ಎಂದರೆ ಭೌಗೋಳಿಕವಾಗಿ ನೋಡಿದರೆ ಸಾಕಷ್ಟು ರೀತಿಯ ವ್ಯತ್ಯಾಸಗಳನ್ನು ಗಮನಿಸಬಹುದು . ಭಾರತದಲ್ಲಿ ಒಂದೆಡೆ ಹಿಮದಿಂದ ಕೂಡಿದ ಪರ್ವತ ಶ್ರೇಣಿಗಳು , ದಟ್ಟವಾದ ಅರಣ್ಯಗಳು , ಅಸಂಖ್ಯಾತ ನದಿಗಳು , ಗಂಗಾನದಿಯ ಮುಖಜ ಭೂಮಿಯಂತರಹ ಫಲವತ್ತಾದ ಭೂಮಿ , ಏನೂ ಬೆಳೆಯದ ರಾಜಾಸ್ಥಾನದ ಮರುಭೂಮಿ , ಕರಾವಳಿ ತೀರಪ್ರದೇಶಗಳು , ದಖನ್ ಪ್ರಸ್ಥಭೂಮಿ ಹೀಗೆ ಹಲವಾರು ವೈವಿಧ್ಯತೆಗಳುಂಟು . ಹವಾಮಾನದಲ್ಲೂ ಅನೇಕ ರೀತಿಯ ವೈವಿಧ್ಯತೆಗಳಿವೆ . ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ , ಕಡಿಮೆ ಎಂದರೆ ಕನಿಷ್ಠ ಮಳೆ ಬೀಳುವ ಪ್ರದೇಶವನ್ನು ಹೊಂದಿದೆ . ಭೂಮಟ್ಟ , ಉಷ್ಣತೆ , ಸಸ್ಯ ಸಂಪತ್ತು ಮುಂತಾದ ಹಲವು ವಿಷಯಗಳಲ್ಲಿ ವೈವಿಧ್ಯತೆಯನ್ನು ಕಾಣಬಹುದು . ಭಾಷೆಯು ಭಾರತದ ವೈವಿಧ್ಯತೆಯ ಇನ್ನೊಂದು ಮೂಲವಾಗಿದೆ . ಭಾರತೀಯ ಸಂವಿಧಾನವು 22 ಭಾಷೆಗಳನ್ನು ಆಡಳಿತಾತ್ಮಕ ಉದ್ದೇಶಕ್ಕಾಗಿ ಅಧಿಕೃತವೆಂದು ಘೋಷಿಸಿದೆ . ಸುಮಾರು 1652 ಭಾಷೆಗಳು ಹಾಗೂ ಅನೇಕ ಉಪಭಾಷೆಗಳು ಅಸ್ತಿತ್ವದಲ್ಲಿದೆ . ಈ ಎಲ್ಲಾ ಭಾಷೆಗಳನ್ನು ಪ್ರಮುಖವಾಗಿ ನಾಲ್ಕು ( ಐದು ) ಭಾಷಾ ಕುಟುಂಬಗಳಾಗಿ ವರ್ಗಿಕರಿಸುತ್ತಾರೆ .

( i ) ಇಂಡೋ – ಆರ್ಯನ್ ಭಾಷೆಗಳು : ಸಂಸ್ಕೃತ , ಹಿಂದಿ , ಬೆಂಗಾಲಿ , ಮರಾಠಿ , ಗುಜರಾತಿ , ಒರಿಯಾ , ಪಂಜಾಬಿ , ಬಿಹಾರಿ , ರಾಜಾಸ್ಥಾನಿ , ಅಸ್ಸಾಮಿ , ಸಿಂಧಿ ಮತ್ತು ಕಾಶ್ಮೀರಿ ಭಾಷೆಗಳು . ನಮ್ಮ ದೇಶದಲ್ಲಿ 3/4 ರಷ್ಟು ಜನರು ಈ ಭಾಷೆಗಳನ್ನಾಡುತ್ತಾರೆ .

( ii ) ದ್ರಾವಿಡಿಯನ್ ಭಾಷೆಗಳು : ತಮಿಳು , ಕನ್ನಡ , ತೆಲುಗು ಮತ್ತು ಮಲಯಾಳಂ ಭಾಷೆ , ದಕ್ಷಿಣ ಭಾರತದಲ್ಲಿ ಈ · ಭಾಷೆಗಳನ್ನು ಆಡುವವರು ಹೇರಳವಾಗಿದ್ದಾರೆ .

( iii ) ಆಸ್ಟಿಕ್ ಭಾಷೆಗಳು : ಮುಂಡಾರಿ , ಸಂತಾಲಿ , ಮೈಥಿಲಿ , ಡೊಗ್ರಿ ಮುಂತಾದ ಭಾಷೆಗಳು ಈ ಗುಂಪಿಗೆ ಸೇರುತ್ತವೆ.

( iv ) ಟಿಬೆಟೋ – ಬರ್ಮನ್ : ಇವು ಬುಡಕಟ್ಟು ಭಾಷೆಗಳು ಮತ್ತು ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಭಾಷೆಗಳು ಈ ಸಮೂಹಕ್ಕೆ ಸೇರುತ್ತವೆ . ಉದಾ : ಮಣಿಪುರಿ , ಬೊಡೋ , ಲಡಾಕಿ , ಖುಕಿ ಇತ್ಯಾದಿ .

( v ) ಯುರೋಪಿಯನ್ ಭಾಷೆಗಳು : ಇಂಗ್ಲೀಷ್ , ಫ್ರೆಂಚ್ ಮತ್ತು ಪೋರ್ಚುಗೀಸ್ ಭಾಷೆಗಳು . ಭಾಷಾ ವೈವಿಧ್ಯತೆಯು ಕೆಲವು ಆಡಳಿತಾತ್ಮಕವಾದ ಮತ್ತು ರಾಜಕೀಯವಾದ ಸಮಸ್ಯೆಗಳಿಗೂ ಕಾರಣವಾಗಿದೆ . ಇವುಗಳ ಜೊತೆ ಧಾರ್ಮಿಕ ವೈವಿಧ್ಯತೆ ಹಾಗೂ ಸಾಂಸ್ಕೃತಿಕ ಮತ್ತು ಜನಾಂಗೀಯ ವೈವಿಧ್ಯತೆಗಳೂ ಇವೆ . ಭಾರತದಲ್ಲಿ ಪ್ರಮುಖವಾಗಿ ಎಂಟು ಧಾರ್ಮಿಕ ಸಮುದಾಯಗಳಿವೆ . ಪುನಃ ಇವುಗಳಲ್ಲಿ ಹಲವಾರು ಉಪವಿಭಾಗಗಳಿವೆ . ಸಾಂಸ್ಕೃತಿಕ ವೈವಿಧ್ಯತೆಯು ಭಾರತದ ವೈವಿಧ್ಯತೆಯ ಇನ್ನೊಂದು ಮೂಲವಾಗಿದೆ .

ಭಾರತೀಯರ ಸಾಮಾಜಿಕ ಅಭ್ಯಾಸಗಳಲ್ಲಿ ಸಾಕಷ್ಟು ವೈವಿಧ್ಯತೆಯಿದೆ . ರಾಜ್ಯದಿಂದ ರಾಜ್ಯಕ್ಕೆ ಹಲವಾರು ರೀತಿಯ ವ್ಯತ್ಯಾಸಗಳಿವೆ . ಜನಾಂಗೀಯ ಮೂಲಗಳು , ಸಂಸ್ಕೃತಿ , ಜೀವನ ವಿಧಾನ , ವರ್ತನಾ ಮಾದರಿಗಳು , ನಂಬಿಕೆಗಳು , ಆಹಾರ , ಉಡುಪು , ಮೌಲ್ಯಗಳು , ಸಾಮಾಜಿಕ ನಿಯಮಗಳು , ಸಾಮಾಜಿಕ – ಧಾರ್ಮಿಕ ಪದ್ಧತಿಗಳು ಹೀಗೆ ಹತ್ತು ಹಲವಾರು ವೈವಿಧ್ಯತೆಗಳನ್ನು ಹೊಂದಿರುವುದೇ ಭಾರತದ ವೈಶಿಷ್ಟ್ಯತೆ . ಈ ವೈವಿಧ್ಯತೆಗಳಿಂದಾಗಿ ಭಾರತವನ್ನು “ ಏಶಿಯಾದ ಉಪಖಂಡ ” ಎಂದು ಕರೆಯಲಾಗುತ್ತದೆ .

45. ಭಾರತದ ಏಕತೆಯ ಸ್ವರೂಪವನ್ನು ವಿವರಿಸಿ .

ಭಾರತದ ವೈಶಿಷ್ಟ್ಯತೆಯೇ ‘ ವೈವಿಧ್ಯತೆಯಲ್ಲಿ ಏಕತೆ ‘ ಭಾರತದಲ್ಲಿ ಎಷ್ಟೆಲ್ಲಾ ವೈವಿಧ್ಯತೆಗಳಿದ್ದರೂ , ಏಕತೆಯ ಅಂಶವೂ ಶಕ್ತಿಯುತವಾಗಿದೆ . ನಾವೆಲ್ಲಾ ಒಂದೇ , ಒಂದೇ ರಾಷ್ಟ್ರದ ಪ್ರಜೆಗಳು ಎಂಬ ಭಾವನೆ ಅನೇಕ ಕಾರಣಗಳಿಂದ ಏರ್ಪಡುವುದು . ಭಾರತದ ನೈಸರ್ಗಿಕ ಗಡಿಗಳು ಭೌಗೋಳಿಕ ಐಕ್ಯತೆಯನ್ನು ಒದಗಿಸುತ್ತವೆ . ನಮ್ಮ ದೇಶಕ್ಕೆ ಅನೇಕ ಹೆಸರುಗಳಿದ್ದರೂ ‘ ಭಾರತ ವರ್ಷ ‘ ಎಂಬುದು ಎಲ್ಲರ ಮನದಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ . ‘ ಭಾರತ ಮಾತೆ ಎಂಬ ಕಲ್ಪನೆಯೂ ಕೂಡ ಐಕ್ಯತೆಯ ಸಂಕೇತವಾಗಿದೆ .

ಹಲವಾರು ಭಾಷೆಗಳಿದ್ದರೂ ಭಾಷಾ ಐಕ್ಯತೆಯು ಕಂಡು ಬರುತ್ತದೆ . ಭಾರತೀಯ ಭಾಷೆಗಳಿಗೆ ಸಂಸ್ಕೃತ ಭಾಷೆಯು ಆಧಾರವಾಗಿದ್ದು , ಐಕ್ಯತೆಗೂ ಕೂಡಾ ಆಧಾರವಾಗಿದೆ . ಸಂಸ್ಕೃತ ಭಾಷೆಯು ಹಿಂದೂ ಸಂಸ್ಕೃತಿಯ ಭಾಷೆಯಾಯಿತಲ್ಲದೆ , ಹಲವಾರು ಹಿಂದೂ ಶಾಸ್ತ್ರಗ್ರಂಥಗಳು ಸಂಸ್ಕೃತ ಭಾಷೆಯಲ್ಲಿಯೇ ರಚಿಸಲ್ಪಟ್ಟವು . ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಭಾಷೆಗಳನ್ನಾಡಲಾಗುತ್ತದೆಯಾದರೂ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳೂ ಜನರ ಸಂಪರ್ಕ ಭಾಷೆಗಳಾಗಿವೆ .

ಧಾರ್ಮಿಕ ವೈವಿಧ್ಯತೆಗಳ ನಡುವೆಯೂ ಕೂಡಾ ಧಾರ್ಮಿಕ ಐಕ್ಯತೆಯನ್ನು ನೋಡಬಹುದು . ಪ್ರತಿಯೊಂದು ಧಾರ್ಮಿಕ ಸಮೂಹದ ನಂಬಿಕೆಗಳು ಒಂದೇ ಆಗಿದೆ . ಆತ್ಮ ಅವಿನಾಶಿ ಎಂಬ ನಂಬಿಕೆಯನ್ನು ಎಲ್ಲ ಧರ್ಮಗಳೂ ಹೊಂದಿವೆ . ಜಗತ್ತಿನ ನಶ್ವರತೆಯ ಕುರಿತ ನಂಬಿಕೆ , ಪುನರ್ಜನ್ಮ ಕುರಿತ ನಂಬಿಕೆ , ಮೋಕ್ಷದ ನಂಬಿಕೆ ಮುಂತಾದವು ಎಲ್ಲ ಧರ್ಮಗಳಿಗೂ ಸಮಾನವಾಗಿವೆ .

ಧಾರ್ಮಿಕ ಗ್ರಂಥಗಳು , ಪುರಾಣಗಳು , ಮಹಾಕಾವ್ಯಗಳು , ವೇದಗಳು ವಿಭಿನ್ನ ಸಮೂಹಗಳನ್ನು ಒಂದೇ ಧಾರ್ಮಿಕ ಸಮಾಜವಾಗಿ ಹತ್ತಿರಕ್ಕೆ ತರುತ್ತವೆ ಮತ್ತು ತಮ್ಮ ದೇಶವು ಪವಿತ್ರವೆಂಬ ಭಾವನೆಯನ್ನು ಮೂಡಿಸುತ್ತವೆ . ಕಲೆ , ವಾಸ್ತುಶಿಲ್ಪ , ಉಡುಪು , ಆಹಾರ ಪದ್ಧತಿ , ಸಾಹಿತ್ಯ , ಸಂಗೀತ , ನೃತ್ಯ , ಕ್ರೀಡೆ , ಚಲನಚಿತ್ರ , ವೈದ್ಯಕೀಯ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಶೈಲಿಗಳ ಸಮ್ಮಿಶ್ರಣವಿತ್ತಲ್ಲದೆ ಎಲ್ಲರ ಸಂಯೋಜಿತ ಪ್ರಯತ್ನಗಳಿಂದಾಗಿ ಹೊಸ ಸಾಂಸ್ಕೃತಿಕ ನಮೂನೆಗಳು ಉದಯವಾದವು . ಭೌಗೋಳಿಕ ಸ್ಥಿತಿಗಳು , ಐತಿಹಾಸಿಕ ಅನುಭವಗಳು , ಧಾರ್ಮಿಕ ಮೌಲ್ಯಗಳು ಹಾಗೂ ರಾಜಕೀಯ ತತ್ವಾದರ್ಶಗಳ ನೆರವನ್ನು ಪಡೆಯಿತು . ಈ ನೆರವಿನಿಂದ ಹುಟ್ಟು , ಜಾತಿ , ಭಾಷೆ , ಜನಾಂಗ ಮತ್ತು ಧಾರ್ಮಿಕ ಸಮೂಹಗಳನ್ನು ಮೀರಿ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದ ದೊಡ್ಡ ಸಮಾಜವಾಗಿ ಮತ್ತು ಅತ್ಯಂತ ದೊಡ್ಡ ರಾಷ್ಟ್ರವಾಗಿ ಬೆಳೆಯಿತು .

46. ರಾಷ್ಟ್ರೀಯ ಭಾವೈಕ್ಯತೆಯ ಸವಾಲುಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿ .

( i ) ಪ್ರಾಂತೀಯವಾದ : ಪ್ರಾಂತೀಯತೆಯು ನಿರ್ದಿಷ್ಟ ಪ್ರಾಂತ್ಯವನ್ನು ಕುರಿತಂತೆ ಅತಿಯಾದ ನಿಷ್ಠೆಯನ್ನು ಸೂಚಿಸುತ್ತದೆ . ಇಂತಹ ಭಾವನೆಗಳು ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗುತ್ತದೆ . ಭಾರತವು ಹಲವಾರು ಪ್ರಾಂತೀಯ ವ್ಯತ್ಯಾಸಗಳನ್ನೊಳಗೊಂಡ ದೇಶವಾಗಿದೆ . ಅಸಮತೋಲದ ಆರ್ಥಿಕ ಯೋಜನೆಗಳು ಕೂಡ ರಾಜ್ಯಗಳ ಮಧ್ಯೆ ಅಂತರವನ್ನು ಕಲ್ಪಿಸುತ್ತದೆ . ಔದ್ಯೋಗೀಕರಣದ ಫಲಗಳೂ ಕೂಡ ಅಸಮಾನವಾಗಿ ಹಂಚಿಕೆಯಾಗಿವೆ . ವ್ಯತ್ಯಾಸಗಳು ಹೆಚ್ಚಾದಷ್ಟು , ಪ್ರಾಂತೀಯವಾದವು ಹೆಚ್ಚುತ್ತದೆ . ಪ್ರಾಂತೀಯವಾದವು ನಾಲ್ಕು ರೂಪಗಳಲ್ಲಿ ಕಂಡು ಬರುತ್ತವೆ .

( ಅ ) ಭಾರತೀಯ ಒಕ್ಕೂಟದಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ : ಕೆಲವು ರಾಜ್ಯಗಳ ಜನರು ಭಾರತದ ಸಾರ್ವಭೌಮತ್ವದಿಂದ ಹೊರಬೀಳಬಯಸಿದ ಘಟನೆಗಳು ರಾಷ್ಟ್ರೀಯ ಭಾವೈಕ್ಯತೆಗೆ ಸವಾಲಾಗಿದೆ . ಮದ್ರಾಸ್ ರಾಜ್ಯದ ತಮಿಳು ಸಮುದಾಯ , ಪಂಜಾಬಿನ ಸಿಖ್ ಸಮುದಾಯ , ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ಸಮಸ್ಯೆ ಉಂಟಾಗಿತ್ತು .

( ಆ ) ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ : ಇತ್ತೀಚಿನ ಹಲವಾರು ವರ್ಷಗಳಿಂದ ಈ ಬೇಡಿಕೆಗಳು ಹೆಚ್ಚುತ್ತಿವೆ . ಇದು ಪ್ರಾಂತೀಯವಾದದ ಹೊಸ ರೂಪ , ಮಹಾರಾಷ್ಟ್ರದಲ್ಲಿ ವಿದರ್ಭ ರಾಜ್ಯಕ್ಕಾಗಿ , ಆಂಧ್ರಪ್ರದೇಶದಿಂದ ತೆಲಂಗಾಣಕ್ಕಾಗಿ , ( ಇತ್ತೀಚೆಗೆ ಇದು ಈಡೇರಿದೆ ) ಬುಂದೇಲ್‌ಖಂಡ್ , ವಿಂಧ್ಯ ಮುಂತಾದ ರಾಜ್ಯಗಳಿಗೆ ಬೇಡಿಕೆ ಇಡಲಾಗಿದೆ .

( ಇ ) ಪೂರ್ಣ ಪ್ರಮಾಣದ ರಾಜ್ಯಕ್ಕಾಗಿ : ಕೇಂದ್ರಾಡಳಿತ ಪ್ರದೇಶಗಳು ಯತ್ನಿಸುತ್ತಿರುವುದು ಪ್ರಾಂತೀಯವಾದದ ಇನ್ನೊಂದು ಅಭಿವ್ಯಕ್ತಿಯಾಗಿದೆ . ಉದಾ : ದೆಹಲಿ .

( ಈ ) ಅಂತರ – ರಾಜ್ಯ ವಿವಾದಗಳು : ಕರ್ನಾಟಕ – ಮಹಾರಾಷ್ಟ್ರ , ಪಂಜಾಬ್ – ಹರಿಯಾಣ ನಡುವೆ ಉಂಟಾದ ವಿವಾದಗಳು . ನದಿ ನೀರಿನ ಹಂಚಿಕೆಯಲ್ಲೂ ವಿವಾದಗಳಿವೆ . ಇವೆಲ್ಲಾ ರಾಷ್ಟ್ರೀಯ ಭಾವೈಕ್ಯತೆಗೆ ಒಂದು ಸವಾಲಾಗಿದೆ .

( ii ) ಕೋಮುವಾದವು : ಮೇಲ್ವರ್ಗದವರು ಜನರನ್ನು ವಿಭಜಿಸುವ ಮೂಲಕ ಅಧಿಕಾರವನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಳ್ಳಲು ಹೊಂದಿರುವ ಆಯುಧವಾಗಿದೆ . ಉನ್ನತವರ್ಗದವರು ಬದಲಾವಣೆಯನ್ನು ವಿರೋಧಿಸಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಜನರನ್ನು ಕೋಮು ಮತ್ತು ಧಾರ್ಮಿಕ ಆಧಾರದಲ್ಲಿ ವಿಭಜಿಸುತ್ತಾರೆ .

( ii ) ಭಾಷಾವಾದ : ಭಾಷಾ ವೈವಿಧ್ಯತೆಯು ಭಾಷಾವಾದಕ್ಕೂ ಕಾರಣವಾಗಿದೆ . ಇದು ಕೆಲವೊಮ್ಮೆ ಹಿಂಸಾತ್ಮಕ ಚಳುವಳಿಗೂ ಕಾರಣವಾಗಿ ಭಾವೈಕ್ಯತೆಗೆ ಮಾರಕವಾಗುತ್ತದೆ .

( iv ) ಉಗ್ರವಾದ ಮತ್ತು ಆತಂಕವಾದವೂ ಸಹ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಲು ಉಂಟಾಗುವ ತೊಡಕುಗಳು . ಇಷ್ಟೇ ಅಲ್ಲದೆ ಭ್ರಷ್ಟಾಚಾರ , ಬಡತನ , ನಿರುದ್ಯೋಗ , ಯುವ ಅಶಾಂತಿ , ಶ್ರೀಮಂತರು ಮತ್ತು ಬಡವರ ನಡುವಿನ ಅಂತರ – ಇವೆಲ್ಲಾ ನಿಜಕ್ಕೂ ರಾಷ್ಟ್ರೀಯ ಐಕ್ಯತೆಗೆ ಸವಾಲನೊಡ್ಡುತ್ತದೆ .

47. ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಲು ಸಂಪೂರ್ಣಾನಂದ ಸಮಿತಿಯು ನೀಡಿದ ಸಲಹೆಗಳನ್ನು ವಿವರಿಸಿ .

ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಲು , ಇದರ ಮಹತ್ವವನ್ನು ಅರಿತ ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತು . ಕೇಂದ್ರ ಶಿಕ್ಷಣ ಸಚಿವಾಲಯವು 1961 ರಲ್ಲಿ ಡಾ.ಸಂಪೂರ್ಣಾನಂದರ ಅಧ್ಯಕ್ಷತೆಯಲ್ಲಿ ‘ ರಾಷ್ಟ್ರೀಯ ಭಾವೈಕತಾ ಸಮಿತಿ’ಯನ್ನು ರಚಿಸಿತು . ಈ ಸಮಿತಿಯು ರಾಷ್ಟ್ರೀಯ ಭಾವೈಕ್ಯತೆಯನ್ನು ಪ್ರವರ್ತಿಸಲು ಮತ್ತು ಬಲಪಡಿಸಲು ಕೊಟ್ಟ ಸಲಹೆಗಳು ಇಂತಿವೆ :

( i ) ಪ್ರಾಥಮಿಕ , ಮಾಧ್ಯಮಿಕ , ಕಾಲೇಜು ಮತ್ತು ವಿಶ್ವವಿದ್ಯಾಲಯದ ಹಂತಗಳಲ್ಲಿ ಪಠ್ಯಕ್ರಮವನ್ನು ಧರ್ಮನಿರಪೇಕ್ಷಣವಾಗಿ ಪುನರ್ ರಚಿಸುವುದು .

( ii ) ಔಪಚಾರಿಕ ಶಿಕ್ಷಣದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯನ್ನು ಪ್ರೇರೇಪಿಸುವ ಪತ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು .

( iii ) ಪಠ್ಯಪುಸ್ತಕಗಳಲ್ಲಿ ಸುಧಾರಣೆಯನ್ನು ತರುವುದರಿಂದ ವಿದ್ಯಾರ್ಥಿಗಳಲ್ಲಿ ನಿಜವಾದ ರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸಲು ಸಹಾಯಕವಾಗುತ್ತದೆ . ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಅರಿಯಲು ಅವಕಾಶ ಕಲ್ಪಿಸಿದಾಗ ಅವರಲ್ಲಿ ಮಾಧ್ಯಮಗಳು ಜನರಲ್ಲಿ ಸಾಂಪ್ರದಾಯಿಕ ಮೌಲ್ಯಗಳನ್ನು ಕುರಿತಂತೆ ಜಾಗೃತಿ ಮೂಡಿಸಬೇಕು .

( vi ) ಕ್ರಿಯಾತ್ಮಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು .

( vii ) ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯನ್ನು ಪರಿಚಯಿಸಲು ಸಾಂಸ್ಕೃತಿಕ ವಿನಿಮಯವನ್ನು ಪ್ರೋತ್ಸಾಹಿಸಬೇಕು .

( viii ) ವಿವಿಧ ಆಸಕ್ತಿ ಹಿಂಸಾತ್ಮಕ ಚಟುವಟಿಕೆಗಳಿಗೆ ಸುಲಭ ತುತ್ತಾಗುವ ಆರ್ಥಿಕವಾಗಿ , ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸಮೂಹಗಳು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು . ಈ ರೀತಿ ಶಿಕ್ಷಣದಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಬಹುದಾಗಿದೆ .

49 ) ಉಗ್ರವಾದ ಮತ್ತು ಆತಂಕವಾದಗಳು ರಾಷ್ಟ್ರದ ಅಭದ್ರತೆಗೆ ಹೇಗೆ ಕಾರಣವಾಗಿದೆ ? ವಿವರಿಸಿ .

ಇತ್ತೀಚಿನ ವರ್ಷಗಳಲ್ಲಿ ಈ ಉಗ್ರವಾದ ಮತ್ತು ಆತಂಕವಾದವು ಜನರಲ್ಲಿ ಭಯವನ್ನು ಹುಟ್ಟಿಹಾಕುತ್ತಿದೆ . ತಮ್ಮ ಗುರಿಗಳ ಅಥವಾ ಬೇಡಿಕೆಗಳ ಈಡೇರಿಕೆಗಾಗಿ ವ್ಯಕ್ತಿ ಅಥವಾ ಸಮೂಹವು ಹಿಂಸಾಚಾರ ಮಾರ್ಗವನ್ನು ಅನುಸರಿಸುವುದೇ ಆತಂಕವಾದ . ಇದು ಪ್ರಜಾಸತ್ತೆಯ ವಿರೋಧಿಯಾಗಿದೆ . ಆದರೆ ಇಂತಹ ಆತಂಕವಾದಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ನಿರಪರಾಧಿಗಳನ್ನು ಹಿಂಸಾತ್ಮಕವಾಗಿ ಮತ್ತು ಅಪಾಯಕಾರಿ ಮಾರ್ಗಗಳ ಬಳಕೆಯಿಂದ ಶೋಷಿಸುತ್ತಾರೆ . ಇದು ರಾಷ್ಟ್ರದ ಅಭದ್ರತೆಗೆ ಕಾರಣವಾಗುತ್ತಿದೆ . ಜನರು ಸರ್ಕಾರದ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ .

ಭಾರತವು ಸ್ವಾತಂತ್ರೋತ್ತರ ಕಾಲದಿಂದಲೂ ಉಗ್ರವಾದದ ಸಮಸ್ಯೆಯನ್ನು ಎದುರಿಸುತ್ತಿದೆ . ನಾಗಾಲ್ಯಾಂಡ್ ( 1951 ) , ಮಿಝೇರಾಂ ( 1976 ) , ತ್ರಿಪುರಾ ( 1980 ) , ಪಶ್ಚಿಮ ಬಂಗಾಳದಲ್ಲಿ ಗೋರ್ಖಾಲ್ಯಾಂಡ್ ( 1986 ) ಇವೆಲ್ಲಾ ಭಾರತವು ಎದುರಿಸಿದ ಕೆಲ ಸಮಸ್ಯೆಗಳಾಗಿವೆ . ಭಾರತವು ಕಂಡು ಬರುವ ಉಗ್ರವಾದವು ರಾಜಕೀಯ ಪ್ರೇರಿತವಾದುದಾಗಿದೆ . ಪ್ರೊ . ರಾಮ್ ಅಹುಜಾ ಅವರ ಪ್ರಕಾರ ಭಾರತದಲ್ಲಿ ಕಂಡು ಬರುವ ಉಗ್ರವಾದವು ನಾಲ್ಕು ಪ್ರಕಾರದ್ದಾಗಿದೆ . ಅವುಗಳು ( 1 ) ಪಂಜಾಬಿನಲ್ಲಿ ಖಾಲಿಸ್ಥಾನ್ ಮೂಲದ ಉಗ್ರವಾದ ( i ) ಕಾಶ್ಮೀರದ ಉಗ್ರವಾದಿಗಳ ಆತಂಕವಾದ ( ii ) ಪಶ್ಚಿಮ ಬಂಗಾಳ , ಬಿಹಾರ್ , ಮಧ್ಯಪ್ರದೇಶ , ಒರಿಸ್ಸಾ , ಆಂಧ್ರಪ್ರದೇಶ ಮುಂತಾದೆಡೆಗಳಲ್ಲಿ ಕಂಡು ಬರುವ ನಕ್ಸಲ್ ಉಗ್ರವಾದ ( iv ) ಅಸ್ಸಾಮಿನಲ್ಲಿ ಕಂಡು ಬರುವ ಉಲ್ಟಾ ಉಗ್ರವಾದ . ಖಲಿಸ್ಥಾನ್ ಮೂಲದ ಸಿಖ್ ಉಗ್ರವಾದವು ಧಾರ್ಮಿಕ ಸ್ವರಾಷ್ಟ್ರದ ಕನಸನ್ನು ಆಧರಿಸಿತ್ತು .

ಕಾಶ್ಮೀರದ ಉಗ್ರವಾದಿಗಳು ತಮ್ಮದೇ ಆದ ಅನನ್ಯತೆಗಾಗಿ ಹೋರಾಟ ನಡೆಸಿದ್ದಾರೆ . ನಕ್ಸಲೈಟ್ ಉಗ್ರವಾದವು ವರ್ಗ ವೈರತ್ವವನ್ನು ಆಧರಿಸಿದೆ . ಈಶಾನ್ಯ ರಾಜ್ಯಗಳಲ್ಲಿ ಕಂಡುಬರುವ ಉಗ್ರವಾದವು ಅನನ್ಯತೆಯ ಸಮಸ್ಯೆ ಮತ್ತು ಅಸಮಾಧಾನಗಳ ಫಲಶ್ರುತಿಯಾಗಿದೆ . ಇಷ್ಟೇ ಅಲ್ಲದೆ ಭ್ರಷ್ಟಾಚಾರ , ಬಡತನ , ನಿರುದ್ಯೋಗ , ಯುವ ಅಶಾಂತಿ , ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಮುಂತಾದ ಅಂಶಗಳೂ ಕೂಡ ರಾಷ್ಟ್ರೀಯ ಐಕ್ಯತೆಗೆ ಸವಾಲನ್ನೊಡ್ಡುವ ಅಂಶಗಳಾಗಿವೆ . ಆತಂಕವಾದವು ಉಗ್ರವಾದದ ಇನ್ನೊಂದು ರೂಪ ಎನ್ನಬಹುದು . ಇತ್ತೀಚೆಗೆ ಇವು ಹೆಚ್ಚುತ್ತಾ ಬಂದಿದೆ . ಭಾರತದಲ್ಲಿ ಸುಮಾರು 13 ರಾಜ್ಯಗಳಿಗೆ ವ್ಯಾಪಿಸಿದೆ .

2004 ರಿಂದ ಕರ್ನಾಟಕಕ್ಕೂ ಕಾಲಿಟ್ಟಿದೆ . ಇದಕ್ಕೆ ಉದಾಹರಣೆ ತುಮಕೂರಿನ ಪಾವಗಡದ ಒಂದು ಹಳ್ಳಿಯ ಪೋಲೀಸ್ ಸ್ಟೇಷನ್ ಮೇಲೆ ಧಾಳಿ ನಡೆಸಿ ಪೋಲೀಸರನ್ನು ಕೊಂದು ಹಾಕಿದ ಘಟನೆಯನ್ನು ಹೆಸರಿಸಬಹುದು . ಮುಂಬಯಿಯ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ದಾಳಿ , ಹೀಗೆ ಹಲವಾರು ಕೃತ್ಯಗಳು ಜನರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತದೆ . ಜನರಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ಎಂದಾದರೆ ರಾಷ್ಟ್ರದ ಅಭಿವೃದ್ಧಿ ಹೇಗೆ ಸಾಧ್ಯ ? ಈ ರೀತಿ ಉಗ್ರವಾದ ಮತ್ತು ಭಯೋತ್ಪಾದಕರ ಹಾವಳಿಯಿಂದ ರಾಷ್ಟ್ರದಲ್ಲಿ ಅಭದ್ರತೆ ಉಂಟಾಗುತ್ತದೆ . ಇದನ್ನು ತಡೆಗಟ್ಟುವುದು ಹಾಗೂ ನಿರ್ಮೂಲನ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ .

2nd Puc Sociology 1st Chapter Notes Pdf

IV . ಹತ್ತು ಅಂಕಗಳ ಪ್ರಶ್ನೆಗಳು :

50. ಜನಸಂಖ್ಯಾಶಾಸ್ತ್ರವನ್ನು ವ್ಯಾಖ್ಯಾನಿಸಿ ,

ಭಾರತದ ಜನಸಂಖ್ಯಾಶಾಸ್ತ್ರೀಯ ಚಿತ್ರಣದ ಪ್ರಮುಖ ಲಕ್ಷಣಗಳನ್ನು ವಿವರಿಸಿ . ಜನಸಂಖ್ಯಾಶಾಸ್ತ್ರವು ಜನಸಂಖ್ಯೆಯ ವ್ಯವಸ್ಥಿತ ಅಧ್ಯಯನವಾಗಿದೆ .

ಇದು ಜನಸಂಖ್ಯೆಯ ಗಾತ್ರ ಜನನ , ಮರಣ ಮತ್ತು ವಲಸೆಯ ಪ್ರಕಾರಗಳು , ಸ್ತ್ರೀಪುರುಷರ ಸಾಪೇಕ್ಷ ಪ್ರಮಾಣವನ್ನೊಳಗೊಂಡಂತೆ ಮತ್ತು ವಿವಿಧ ವಯೋಮಾನಗಳಿಗೆ ಸಂಬಂಧಿಸಿದಂತೆ ಜನಸಮೂಹದ ರಚನೆ ಹಾಗೂ ಸಂಯೋಜನೆ ಮುಂತಾದ ಅಂಶಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಮತ್ತು ಒಲವುಗಳನ್ನು ಅಭ್ಯಸಿಸುತ್ತದೆ .

” ಭಾರತದ ಜನಸಂಖ್ಯಾ ಚಿತ್ರಣದ ಎರಡು ಪ್ರಮುಖ ಲಕ್ಷಣಗಳು :

ಅ ) ಭಾರತೀಯ ಜನಸಂಖ್ಯೆಯ ವಯೋರಚನೆ

ಆ ) ಭಾರತೀಯ ಜನರಲ್ಲಿ ಏರುಮುಖವಾಗುತ್ತಿರುವ ಸಾಕ್ಷರತೆಯ ಪ್ರಮಾಣ .

ಭಾರತದ ಜನಸಂಖ್ಯಾಶಾಸ್ತ್ರೀಯ ಚಿತ್ರಣದ ಪ್ರಮುಖ ಲಕ್ಷಣಗಳು :

( i ) ಭಾರತೀಯ ಜನಸಂಖ್ಯೆಯ ಗಾತ್ರ ಮತ್ತು ಬೆಳವಣಿಗೆ: ಪ್ರಪಂಚದಲ್ಲಿ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಚೀನಾ , ನಂತರದ ಸ್ಥಾನ ಭಾರತ . ಇದು ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಎರಡನೇ ರಾಷ್ಟ್ರವಾಗಿದೆ . 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ ಎಂದರೆ 1.21 ಬಿಲಿಯನ್ , ಸ್ವಾತಂತ್ರ್ಯಾನಂತರ ಭಾರತದ ಜನಸಂಖ್ಯೆಯು ಏರಿಕೆಯಾಗತೊಡಗಿದೆ . ಜನಸಂಖ್ಯೆಯ ವಿಷಯಕ್ಕೆ ಸಂಬಂಧಿಸದಂತೆ ಜಾಗತಿಕ ಮಟ್ಟದಲ್ಲಿ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಮಂಚೂಣಿಯಲ್ಲಿರುವ ರಾಷ್ಟ್ರಗಳಲ್ಲೊಂದಾಗಿದೆ . 1931 ಕ್ಕಿಂತ ಮೊದಲು ಜನನ ಮರಣ ಪ್ರಮಾಣವು ಹೆಚ್ಚಾಗಿಯೇ ಇದ್ದವು . ಮುಂದೆ ಮರಣ ಪ್ರಮಾಣವು ತೀವ್ರಕುಸಿತ ಕಂಡರೆ , ಜನನ ಪ್ರಮಾಣ ಅಲ್ಪ ಪ್ರಮಾಣದ ಕುಸಿತ ಕಂಡಿತು . 1921 ಕ್ಕಿಂತ ಮುಂಚೆ ಜನಸಮೂಹದ ಬೆಳವಣಿಗೆಯು ಪ್ರಮಾಣವು ಸ್ಥಿರವಾಗಿರಲಿಲ್ಲ . ಕೆಲವೊಮ್ಮೆ ಅದು ಹೆಚ್ಚಾಗಿರುತ್ತಿತ್ತು . ಮತ್ತೆ ಕೆಲವೊಮ್ಮೆ ಅದು ಕಡಿಮೆಯಾಗಿರುತ್ತಿತ್ತು . ಈ ಕಾರಣದಿಂದಾಗಿ 1921 ನ್ನು ‘ ಜನಸಂಖ್ಯಾಶಾಸ್ತ್ರೀಯ ವಿಭಜಕ ‘ ಎಂದು ಪರಿಗಣಿಸಲಾಗಿದೆ . 1921 ರ ನಂತರ ಜನಂಖ್ಯೆಯು ಸತತವಾಗಿ ಏರುತ್ತಲೇ ಇದೆ . ಕಡಿಮೆಯಾಗುತ್ತಿಲ್ಲವಾದ್ದರಿಂದ 1921 ನ್ನು ಜನಸಂಖ್ಯಾಶಾಸ್ತ್ರೀಯ ವಿಭಜಕ ಎನ್ನಲಾಗಿದೆ .

( ii ) ಭಾರತೀಯ ಜನಸಮೂಹದ ವಯೋರಚನೆ : ಭಾರತವು ಅತಿ ಕಿರಿಯ ವಯೋಮಾನದ ಜನಸಮೂಹವನ್ನು ಹೆಚ್ಚಾಗಿ ಹೊಂದಿದೆ . ಇತರ ದೇಶಗಳ ಜನಸಂಖ್ಯೆಗೆ ಹೋಲಿಸಿದಲ್ಲಿ ಭಾರತದಲ್ಲಿ ಕಿರಿಯರ ಸಂಖ್ಯೆ ಹೆಚ್ಚಾಗಿದೆ . ಕಳೆದ ದಶಕದಲ್ಲಿ ಪೌರ್ವಾತ್ಯ ಏಶಿಯನ್ ಅರ್ಥವ್ಯವಸ್ಥೆಗಳಲ್ಲಿ ಮತ್ತು ಇ೦ದಿನ ಐರ್ಲಂಡ್‌ನಲ್ಲಾಗಿರುವಂತೆ , ಭಾರತವು ‘ ಜನಸಂಖ್ಯಾ ಲಾಭಾಂಶ’ದ ಲಾಭ ಪಡೆಯಲಿದೆ . ಭಾರತವು ‘ ಜನಸಂಖ್ಯಾ ಲಾಭಾಂಶ ‘ ದ ಲಾಭ ಪಡೆಯಲಿದೆ . ಇದನ್ನು ಕೆಲ ಸೂಕ್ತ ನೀತಿಗಳ ಪ್ರಜ್ಞಾಪೂರ್ವಕ ಬಳಕೆಯಿಂದ ಸಾಧಿಸಬಹುದಾಗಿದೆ . ಆ ನೀತಿಗಳು .

( ಎ ) ಭಾರತವು ಜಗತ್ತಿನ ಅತಿ ಕಿರಿಯರ ರಾಷ್ಟ್ರಗಳಲ್ಲಿ ಒಂದು ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ . ಇದರಿಂದ ಭಾರತಕ್ಕೆ ಪ್ರಾಪ್ತವಾಗುವ ಜನಸಂಖ್ಯಾ ಲಾಭ ಅಥವಾ ಅನುಕೂಲವನ್ನು ಲೆಕ್ಕ ಹಾಕಬಹುದಾಗಿದೆ . 2020 ರಲ್ಲಿ ಭಾರತೀಯರ ಸರಾಸರಿ ವಯಸ್ಸು ಅಮೆರಿಕೆಯ ಜನರ ಸರಾಸರಿ ವಯಸ್ಸು 37 ರಷ್ಟು ಇರುತ್ತದೆ . ಪಶ್ಚಿಮ ಯುರೋಪಿನ ಜನರ ಸರಾಸರಿ ವಯಸ್ಸು 45 ಮತ್ತು ಜಪಾನೀಯರ ವಯಸ್ಸು 48 ರಷ್ಟಿರುತ್ತದೆ . ಈ ಅಂಶವು ಬೃಹತ್ತಾದ ಮತ್ತು ಹೆಚ್ಚುತ್ತಿರುವ ಕಾರ್ಮಿಕ ಪಡೆಯ ಸೂಚಕವಾಗಿದ್ದು , ಬೆಳವಣಿಗೆ ಮತ್ತು ಸಮೃದ್ಧಿಯ ದೃಷ್ಟಿಯಿಂದ ಅನಿರೀಕ್ಷಿತ ಫಲಗಳನ್ನು ನೀಡಬಹುದಾಗಿದೆ .

( iii ) ಭಾರತದಲ್ಲಿ ಕುಸಿಯುತ್ತಿರುವ ಲಿಂಗಾನುಪಾತ : ಲಿಂಗಾನುಪಾತವು ಜನಸಮೂಹದ ಲಿಂಗ ಸಮತೋಲನದ ಮಹತ್ವಪೂರ್ಣವಾದ ಸೂಚಕವಾಗಿದೆ . ಲಿಂಗಾನುಪಾತವನ್ನು 1000 ಪುರುಷರಿಗೆ ಅನುಗುಣವಾಗಿ ಮಹಿಳೆಯರ ಸಂಖ್ಯೆಯ ಪ್ರಮಾಣವನ್ನು ಲೆಕ್ಕ ಹಾಕಿ ನಿರ್ಧರಿಸಲಾಗುತ್ತದೆ . ಭಾರತದಲ್ಲಿ ಶತಮಾನಕ್ಕೂ ಹೆಚ್ಚಿನ ಕಾಲ ಲಿಂಗಾನುಪಾತವು ಅಸಮರ್ಪಕವಾಗಿಯೇ ಇತ್ತು . ಇದಕ್ಕೆ ಹಲವಾರು ಕಾರಣಗಳಿವೆ . ಮುಖ್ಯವಾಗಿ ಗಂಡು ಸಂತತಿಯ ಬಯಕೆ . ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸ್ತ್ರೀಯರಿಗೆ ಉನ್ನತ ಸ್ಥಾನವನ್ನು ನೀಡಲಾಗಿದೆ . ಆದರೂ ಅನೇಕ ರಾಜ್ಯಗಳಲ್ಲಿ ಗಂಡು ಸಂತತಿಯ ಬಯಕೆ ಅಧಿಕ ಪ್ರಮಾಣದಲ್ಲಿದೆ . ಪುರುಷ ಪ್ರಧಾನ ಮೌಲ್ಯಗಳು , ಧರ್ಮ , ಪದ್ಧತಿಗಳು , ಸಂಪ್ರದಾಯಗಳು ಹಾಗೂ ಅಲ್ಪಾಸೌಂಡ್ತಂತ್ರಜ್ಞಾನದಂಥ ಆಧುನಿಕ ತಂತ್ರಜ್ಞಾನದ ದುರ್ಬಳಕೆಗಳು ಹೆಣ್ಣು ಭ್ರೂಣ ಹತ್ಯೆಯ ಪ್ರಮುಖ ಕಾರಣಗಳಾಗಿವೆ .

( iv ) ಭಾರತೀಯ ಜನಸಮೂಹದಲ್ಲಿ ಹೆಚ್ಚುತ್ತಿರುವ ಸಾಕ್ಷರತಾ ಪ್ರಮಾಣ : ಲಿಂಗ , ಪ್ರಾಂತ್ಯ ಮತ್ತು ಸಾಮಾಜಿಕ ಸಮೂಹಗಳಿಗೆ ಸಂಬಂಧಿಸಿದಂತೆ ಸಾಕ್ಷರತಾ ಪ್ರಮಾಣದಲ್ಲಿ ವ್ಯತ್ಯಾಸವನ್ನು ಕಾಣಬಹುದು . ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣವು ಶೇ .22 ರಷ್ಟು ಕಡಿಮೆ ಇದೆ . ಮಹಿಳೆಯರ ಸಾಕ್ಷರತಾ ಪ್ರಮಾಣವು ಪುರುಷರ ಸಾಕ್ಷರತಾ ಪ್ರಮಾಣಕ್ಕಿಂತ ವೇಗವಾಗಿ ಹೆಚ್ಚುತ್ತಿದೆ . ಆದರೂ ಸಂಪೂರ್ಣ ಸಾಕ್ಷರತೆಯನ್ನು ಪಡೆಯಲಾಗಿಲ್ಲ . ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಕಡಿಮೆ ಪ್ರಮಾಣದಲ್ಲಿ ಸಾಕ್ಷರತೆಯನ್ನು ಹೊಂದಿದ್ದಾರೆ . ಅವರಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣವು ಇನ್ನೂ ಕಡಿಮೆಯಿದೆ . ಭಾರತದ ಜನಸಂಖ್ಯಾ ಚಿತ್ರಣದ ಪ್ರಮುಖ ಲಕ್ಷಣಗಳು ಆರು . ಭಾರತೀಯ ಜನಸಂಖ್ಯೆಯ ವಯೋರಚನೆ – ಭಾರತಕ್ಕೆ ಸಂಬಂಧಿಸಿದಂತೆ ಶಿಕ್ಷಣ ಮತ್ತು ಉದ್ಯೋಗಗಳ ಮಟ್ಟ ಹೆಚ್ಚಾದಾಗ ಮಾತ್ರ ಈ ಸಾಮರ್ಥ್ಯವನ್ನು ನಿಜವಾದ ಬೆಳವಣಿಗೆಗೆ ಪರಿವರ್ತಿಸಿಕೊಳ್ಳಬಹುದಾಗಿದೆ . ಕೇವಲ ವಯೋರಚನೆಯಲ್ಲಾಗುವ ಬದಲಾವಣೆಯು ಯೋಜಿತ ಅಭಿವೃದ್ಧಿಪರ ಕಾರ್ಯಕ್ರಮಗಳ ಅನುಪಸ್ಥಿತಿಯಲ್ಲಿ ಲಾಭ ತರಲಾರದು . ಜನಸಂಖ್ಯಾಶಾಸ್ತ್ರೀಯ ಲಾಭದಿಂದಾಗಿ ಭಾರತದಲ್ಲಿ ವಿಫುಲವಾದ ಅವಕಾಶಗಳು ನಿರ್ಮಾಣವಾಗಿವೆ . ಅವಲಂಬನಾತ್ಮಕ ಅನುಪಾತಕ್ಕೆ ಸಂಬಂಧಿಸಿದಂತೆ ವಯೋಮಾನ ಸಮೂಹಗಳ ಜನಸಂಖ್ಯಾಶಾಸ್ತ್ರೀಯ ಒಲವುಗಳು ಸ್ಪಷ್ಟವಾಗಿ ಗೋಚರವಾಗುತ್ತವೆ . ಯುವ ಕಾರ್ಮಿಕ ಪಡೆಯ ಲಾಭವನ್ನು ಸಮರ್ಥವಾಗಿ ಬಳಸಲಾಗುತ್ತಿಲ್ಲ . ಇಂದು ಭಾರತಕ್ಕಿರುವ ಜನಸಂಖ್ಯಾ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಕಾರ್ಯತಂತ್ರಗಳಿವೆ . ಅದನ್ನು ಸರಿಯಾಗಿ ಬಳಸಿಕೊಳ್ಳಲು ಒಂದು ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು . ಇಲ್ಲದಿದ್ದಲ್ಲಿ ನಮಗೆ ತಾತ್ಕಾಲಿಕವಾಗಿ ಒದಗಿಸಿದ ಲಾಭಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ವಿಫಲರಾಗುತ್ತೇವೆ .

( v ) ಹೆಚ್ಚುತ್ತಿರುವ ಗ್ರಾಮೀಣ – ನಗರ ವ್ಯತ್ಯಾಸಗಳು : ಇದೂ ಸಹ ಜನಸಂಖ್ಯಾ ಚಿತ್ರಣದ ಪ್ರಮುಖ ಲಕ್ಷಣಗಳಲ್ಲೊಂದು . ಬಹಳ ಹಿಂದಿನ ಕಾಲದಿಂದಲೂ ಭಾರತದ ಬಹುಭಾಗ ಜನರು ಗ್ರಾಮೀಣ ಪ್ರದೇಶಗಳ ನಿವಾಸಿಗಳಾಗಿದ್ದಾರೆ . ಇಂದು ಈ ಪ್ರವೃತ್ತಿ ಬದಲಾಗುತ್ತಿದೆ . 2011 ರ ಜನಗಣತಿಯ ಪ್ರಕಾರ ಪ್ರತಿಶತ 68.8 ರಷ್ಟು ಜನರು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ . ಆಧುನಿಕ ಅಭಿವೃದ್ಧಿಯ ಪ್ರಕ್ರಿಯೆಗಳಲ್ಲಿ ಔದ್ಯೋಗಿಕ ನಗರ ಜೀವನಕ್ಕೆ ಸಾಪೇಕ್ಷವಾಗಿ , ಗ್ರಾಮೀಣ ಕೃಷಿ ಆಧಾರಿತ ಜೀವನ ವಿಧಾನದ ಆರ್ಥಿಕ ಮತ್ತು ಸಾಮಾಜಿಕ ಮಹತ್ವವು ತಗ್ಗುವಂತೆ ಮಾಡಿದೆ . ಇದು ಜಾಗತಿಕ ಸತ್ಯವಾಗಿದ್ದು , ಭಾರತದ ವಿಷಯದಲ್ಲಿ ಕೂಡಾ ಅನ್ವಯವಾಗುತ್ತದೆ . ಜನಸಂಖ್ಯಾಶಾಸ್ತ್ರೀಯ ಚಿತ್ರಣದಿಂದ ಸರ್ಕಾರವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಾಗೂ ಇರುವ ಲೋಪದೋಷಗಳನ್ನು ನಿವಾರಿಸಿಕೊಳ್ಳಲು ಸಹಾಯವಾಗುತ್ತದೆ .

51. ಭಾರತದಲ್ಲಿ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ಬೆಳವಣಿಗೆಯನ್ನು ವಿವರಿಸಿ .

ಭಾರತದಲ್ಲಿ ಕ್ರೈಸ್ತಧರ್ಮ ಮತ್ತು ಇಸ್ಲಾಂ ಧರ್ಮ : ಭಾರತೀಯ ಸಮಾಜದ ಸ್ವರೂಪವನ್ನು ಅರಿಯಬೇಕಾದಲ್ಲಿ ನಾವು ಇಲ್ಲಿ ಬಹಳ ದೀರ್ಘಕಾಲದಿಂದ ನೆಲೆಯಾಗಿರುವ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳನ್ನು ಪರಿಗಣಿಸಬೇಕು . ಮೊದಲು ಕ್ರೈಸ್ತ ಧರ್ಮವು ಭಾರತಕ್ಕೆ ಬಂದಿತು . ನಂತರ ‘ ಬಂದ ಇಸ್ಲಾಂ ಧರ್ಮವು ಭಾರತೀಯ ಸಮಾಜದ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು . ಈ ಎರಡೂ ಧರ್ಮಗಳು ಶಾಂತಿಯುತ ಮಾರ್ಗಗಳಿಂದ ಪ್ರವೇಶಿಸಿದವು ಹಾಗೂ ಆಡಳಿತ ಶಕ್ತಿಗಳ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾದವು . ಇವೆರಡು ಧರ್ಮಗಳು ಈಗಾಗಲೇ ಅಸ್ತಿತ್ವದಲ್ಲಿದ್ದ ಸ್ಥಿತಿಗಳಿಂದ ಪ್ರಭಾವಿತವಾಗಿದ್ದಲ್ಲದೆ , ತಾವೂ ಸಹ ಸ್ವತಃ ಸಮಾಜದ ಮೇಲೆ ಪ್ರಭಾವ ಬೀರಿದವು .

ಕ್ರೈಸ್ತ ಧರ್ಮದ ಬೆಳವಣಿಗೆ : ಸಂತ ಥಾಮಸ್ ಮತ್ತು ಸಂತ ಬಾರ್ಥೊಲೊಮ್ಯು ಕ್ರಿ.ಶ. 50 ರಲ್ಲಿ ಭಾರತಕ್ಕೆ ಬಂದು , ಭಾರತೀಯರಿಗೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದರು . ಸಂತ ಥಾಮಸ್ ತನ್ನ ಗುರಿಯಲ್ಲಿ ಯಶಸ್ವಿಯಾದನು . ಪೋರ್ಚುಗೀಸರು ಭಾರತಕ್ಕೆ ಬಂದಾಗ ಕೇರಳದ ಹದಿನೇಳು ಸಂಸ್ಥಾನಗಳಲ್ಲಿ ಕ್ರೈಸ್ತ ಧರ್ಮವು ಪಸರಿಸಿತ್ತು . ಕೇರಳದಲ್ಲಿ ಕ್ರೈಸ್ತರು ಹಲವಾರು ಚರ್ಚುಗಳನ್ನು ಐವತ್ತು ವಾಸ್ತವ್ಯ ಪ್ರದೇಶಗಳನ್ನು ಹೊಂದಿದ್ದರು . ಅವರ ಸಂಖ್ಯೆಯು ಸುಮಾರು ಒಂದು ಲಕ್ಷದಷ್ಟಿತ್ತು . ಸಂತ ಥಾಮಸ್ ತನ್ನ ಗುರಿ ಸಾಧನೆಗಾಗಿ ಪಂಜಾಬಿಗೆ ಹೋದಾಗ ಸಂತ ಬಾರ್ಥೊಲೊಮ್ಯು ಪಶ್ಚಿಮ ಭಾರತದಲ್ಲಿ ಸಕ್ರಿಯನಾಗಿ ತನ್ನ ಗುರಿಯನ್ನು ಸಾಧಿಸುತ್ತಿದ್ದನು . ಆಗ ಮುಂಬಯಿಯ ಕಲ್ಯಾಣ್ ಪ್ರದೇಶವು ಕ್ರೈಸ್ತ ಧರ್ಮದ ಪ್ರಧಾನ ಕೇಂದ್ರವಾಗಿತ್ತು . ಸಂತ ಭಾರ್ಥೋಲೋಮ್ಯು ಜೊತೆಯಲ್ಲಿ ತತ್ವಜ್ಞಾನಿಯಾಗಿದ್ದ ಪಂಟೇನಸ್ ಕೂಡಾ ಕಲ್ಯಾಣ್ ಪ್ರದೇಶದಲ್ಲಿ ಬ್ರಾಹ್ಮಣರು ಮತ್ತು ತತ್ವಜ್ಞಾನಿಗಳಿಗೆ ಧರ್ಮಬೋಧನೆ ಮಾಡುತ್ತಿದ್ದರು .

ಪ್ರಾರಂಭಿಕ ಹಂತದಲ್ಲಿ ಬಂದ ಕ್ರೈಸ್ತರು ಹಿಂದೂಗಳ ಗೌರವಕ್ಕೆ ಪಾತ್ರರಾಗಿದ್ದರು . ಪೋರ್ಚುಗೀಸರು ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಬೆಳೆಸಲು ಅನೇಕ ಸವಲತ್ತುಗಳನ್ನು ಮಾಡಿಕೊಟ್ಟರು . 1542 ರಲ್ಲಿ ಸಂತ ಫ್ರಾನ್ಸಿಸ್ ಕ್ಸೆವಿಯರ್ ಗೋವಾಕ್ಕೆ ಬಂದಾಗ ಅಲ್ಲಿ ಹದಿನಾಲ್ಕು ಚರ್ಚುಗಳು , ನೂರು ಪಾದ್ರಿಗಳು ಇದ್ದ ಕ್ರೈಸ್ತ ನೆಲೆಯಾಗಿತ್ತು . ಇಟಾಲಿಯನ್ ಕ್ರೈಸ್ತ ಪಾದ್ರಿ ರಾಬರ್ಟೊ – ಡಿ – ನೊಬಿಲಿ ಮದ್ರಾಸಿನ ಮೈಲಾಪುರದಲ್ಲಿ ಜನರೊಂದಿಗೆ ತಮಿಳಿನಲ್ಲೇ ವ್ಯವಹರಿಸಬಲ್ಲವನಾಗಿದ್ದ . ಬ್ರಾಹ್ಮಣರೊಂದಿಗೆ ಸಂಸ್ಕೃತದಲ್ಲಿ ವ್ಯವಹರಿಸ ಬಲ್ಲವನಾಗಿದ್ದ . ಬ್ರಾಹ್ಮಣರೊಂದಿಗೆ ಸಂಸ್ಕೃತದಲ್ಲಿ ವ್ಯವಹರಿಸುತ್ತಿದ್ದ . ಕ್ರೈಸ್ತ ಧರ್ಮವು ಕ್ಷಿಪ್ರವಾಗ ಪ್ರಚಾರವಾಗಬೇಕೆಂಬ ಉದ್ದೇಶದಿಂದ ಹಿಂದೂ ಸಮಾಜದ ಮೇಲ್ ಸ್ತರದವನ್ನು ಮನವೊಲಿಸಿ ಮತಾಂತರ ಮಾಡಲು ಉದ್ದೇಶಿಸಿದನು . ಹದಿನೇಳನೇ ಶತಮಾನದ ಅಂತ್ಯದಲ್ಲಿ ಡಿ – ನೊಬಿಲಿ ಮತ್ತವನ ಸಂಗಡಿಗರು ಸುಮಾರು ಒಂದೂವರೆ ಲಕ್ಷದಷ್ಟು ಜನರನ್ನು ಮತಾಂತರಗೊಳಿಸಿದ್ದರು .

ಪೋರ್ಚುಗೀಸರು , ಡಚ್ಚರು , ಬ್ರಿಟಿಷರು ಮತ್ತು ಫ್ರೆಂಚರು ಭಾರತಕ್ಕೆ ಬಂದು ಇಲ್ಲಿ ವಸಾಹತುಗಳನ್ನು ಸ್ಥಾಪಿಸಿ , ಕ್ರೈಸ್ತ ಧರ್ಮವನ್ನು ಇನ್ನಷ್ಟು ಬೆಳೆಸಿದರು . ವಿಭಿನ್ನ ರಾಷ್ಟ್ರೀಯಗಳಿಗೆ ಸೇರಿದ ವಿವಿಧ ಕ್ರೈಸ್ತ ಮಿಶನರಿಗಳು ಸಾಕಷ್ಟು ಧಾರ್ಮಿಕ ಹಾಗೂ ಜನೋಪಕಾರಿ ಕಾರ್ಯಗಳನ್ನು ಮಾಡಿದರು . ಕೇರಳ , ತಮಿಳುನಾಡು ರಾಜ್ಯಗಳಲ್ಲದೆ ಬಹಳಷ್ಟು ರಾಜ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿ , ಕ್ರೈಸ್ತ ಧರ್ಮಿಯರಾಗಿದ್ದಾರೆ . ಈಶಾನ್ಯ ಭಾಗದ ಕನಿಷ್ಠ ಮೂರು ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆ ಸಾಕಷ್ಟು ಬೆಳೆಯಿತು . ಛೋಟಾ ನಾಗಪುರದ ಬುಡಕಟ್ಟು ಸಮೂಹಗಳಲ್ಲೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಕ್ರೈಸ್ತ ಧರ್ಮಿಯರಿದ್ದಾರೆ . ಈ ರೀತಿ ಭಾರತದಲ್ಲಿ ಕ್ರೈಸ್ತ ಧರ್ಮವು ಬೆಳೆದು ಪ್ರವರ್ಧಮಾನಕ್ಕೆ ಬಂದಿತು . ಇಂದು ಕ್ರೈಸ್ತ ಧರ್ಮಿಯರಿಲ್ಲದ ಊರೇ ಇಲ್ಲವೆನ್ನಬಹುದು .

ಇಸ್ಲಾಂ ಧರ್ಮ : ಹಿಂದೂ ದೊರೆಗಳ ಪ್ರೋತ್ಸಾಹದಿಂದ ಭಾರತದಲ್ಲಿ ಇಸ್ಲಾಂ ಧರ್ಮವು ಶಾಂತಿಯುತ ಮಾರ್ಗದಲ್ಲಿ ಆಗಮಿಸಿತು . ಪಶ್ಚಿಮ ಕರಾವಳಿಯ ಉತ್ತರ ಭಾಗದ ಬಲ್ದಾರ ವಂಶ ಮತ್ತು ಮಲಬಾರಿನ ಝಮೊರಿನ್ ಮುಸ್ಲಿಂ ವ್ಯಾಪಾರಿಗಳನ್ನು ಸ್ವಾಗತಿಸಿದರಲ್ಲದೆ , ಅವರಿಗೆ ಅನ್‌ಹಿಲ್‌ವಾರಾ , ಕಲ್ಲಿಕೋಟೆ , ಕ್ವಿಲಾನ್ ಮುಂತಾದ ಸ್ಥಳಗಳಲ್ಲಿ ನೆಲೆಯೂರಲು ಅವಕಾಶ ನೀಡಿದರು . ಮಸೀದಿಗಳನ್ನು ಕಟ್ಟಲು ಮತ್ತು ತಮ್ಮ ಧರ್ಮವನ್ನು ಆಚರಿಸಲು ಅವರಿಗೆ ಯಾವುದೇ ನಿರ್ಬಂಧಗಳಿರಲಿಲ್ಲ . ಹದಿಮೂರು ಮತ್ತು ಹದಿನಾಲ್ಕನೆಯ ಶತಮಾನಗಳಲ್ಲಿ ಪಂಜಾಬ್ , ಕಾಶ್ಮೀರ್ , ಡೆಕ್ಕನ್ ಮತ್ತು ಪೂರ್ವ ಪಶ್ಚಿಮ ಭಾರತದಲ್ಲಿ ಹಲವಾರು ಧರ್ಮ ಪ್ರಚಾರಕರು ಸಕ್ರಿಯರಾಗಿ ಕೆಲಸಮಾಡುತ್ತಿದ್ದರು . ದೊರೆಗಳ ಸಶಸ್ತ್ರ ಬೆಂಬಲವಿಲ್ಲದೆ ಮತ್ತು ಕೇವಲ ಪ್ರೀತಿಯ ಮಾರ್ಗದಿಂದ ಇಸ್ಲಾಮಿನ ಸಂದೇಶವನ್ನು ಇವರು ಪ್ರಸಾರ ಮಾಡಿದರು ಎಂಬುದು ಗಮನಿಸಬೇಕಾದ , ಸಂತರು ಮನವೊಲಿಕೆಯ ಮಾರ್ಗವನ್ನು ಬಳಸಿದ್ದರಿಂದ ಮುಸ್ಲಿಮೇತರರಲ್ಲೂ ಕೂಡಾ ನಿಷ್ಠರಾದ ಜನರಿದ್ದಾರೆ . ಭಾರತದ ಮುಸ್ಲಿಂ ದೊರೆಗಳು ಇಸ್ಲಾಂ ಮತ ಪ್ರಚಾರವಲ್ಲದೇ ಇತರ ಆಸಕ್ತಿಗಳನ್ನು ಹೊಂದಿದ್ದರು . ಕೆಲವು ಆಡಳಿತಗಾರರು ಇಸ್ಲಾಮೀಕರಣದ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಜಝಿಯಾ ಎಂಬ ತಲೆಗಂದಾಯವನ್ನು ವಿಧಿಸಲಾಯಿತು . ಆಸ್ತಿ ತೆರಿಗೆಯಾದ ಖರಾಜ್ ತೆರಿಗೆಯನ್ನು ಕೂಡ ವಿಧಿಸಲ್ಪಡುತ್ತಿತ್ತು . ಸೈದ್ಧಾಂತಿಕವಾಗಿ , ಇಸ್ಲಾಮಿಕ್ ತತ್ವಾದರ್ಶದ ಪ್ರಕಾರ ಇಸ್ಲಾಮಿ ಆಡಳಿತದಲ್ಲಿ ಮುಸ್ಲಿಮೇತರರ ಮುಂದೆ ಮೂರು ಆಯ್ಕೆಗಳಿದ್ದವು .

(i) ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮುಸ್ಲಿಂ ಆಡಳಿತವನ್ನು ಒಪ್ಪಿಕೊಳ್ಳುವುದು .

( ii ) ಜಜಿಯಾ ಮತ್ತು ಖರಾಜ್ ತೆರಿಗೆಯನ್ನು ನೀಡಿ ಧಿಮ್ಮಿಗಳಾಗುವುದು .

( iii ) ಹೋರಾಟ ಮಾಡುವುದು ಸುಧೀರ್ಘಾವಧಿಯ ಮುಸ್ಲಿಂ ಆಡಳಿತವಿದ್ದಾಗಲೂ ಕೂಡಾ ಸಾಕಷ್ಟು ಜನರು ಹಿಂದೂಗಳಾಗಿಯೇ ಮುಂದುವರಿದರು . ಆದರೆ ಮಿಕ್ಕವರು ಸುಲಭವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು . ಮೊಗಲರ ಕಾಲದಲ್ಲಿ ಕೆಲ ದೊರೆಗಳು ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು . ಮತಾಂತರದಿಂದ ಅವರ ಮೊದಲಿನ ಸ್ಥಾನಮಾನದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ . ಆದರೆ ಅವರಿಗೆ ತಾವು ಆಡಳಿತಗಾರರ ಧರ್ಮಕ್ಕೆ ಸೇರಿದವರು ಎಂಬ ಮಾನಸಿಕ ಸಂತೃಪ್ತಿ ಮಾತ್ರ ಸಿಕ್ಕಿತ್ತು . ಕೆಲವು ಮುಸ್ಲಿಂ ದೊರೆಗಳು ಕೋಮು ಸಾಮರಸ್ಯದ ಮೌಲ್ಯವನ್ನರಿತಿದ್ದರಲ್ಲದೆ , ಕೋಮು ಸಹಿಷ್ಣುತೆ ಮತ್ತು ಪರಸ್ಪರ ತಿಳುವಳಿಕೆಗಳ ಮಹತ್ವವನ್ನು ಸಹ ಅರಿತಿದ್ದರು . ಹೀಗೆ ನಿಧಾನವಾಗಿ ಇಸ್ಲಾಂ ಧರ್ಮವು ಭಾರತದಲ್ಲಿ ಬೇರೂರಿ , ಇಲ್ಲಿಯೇ ನೆಲೆ ಕಂಡಿತು . ಹೀಗೆ ಭಾರತದಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಧರ್ಮವು ಭಾರತದ ಧರ್ಮವೇ ಆಗಿ ನೆಲೆಗೊಂಡಿದೆ .

52. ವೈವಿಧ್ಯತೆಯನ್ನು ವ್ಯಾಖ್ಯಾಸಿ ಮತ್ತು ಭಾರತದಲ್ಲಿ ಕಾಣುವ ವೈವಿಧ್ಯತೆಯ ವಿಧಗಳನ್ನು ವಿವರಿಸಿ .

ವೈವಿಧ್ಯತೆ ಎಂದರೆ ವಿವಿಧತೆ , ವಿಧವಿಧವಾದ ರೀತಿಯನ್ನು ಎಂದರೆ ವ್ಯತ್ಯಾಸಗಳನ್ನು ಹೊಂದಿರುವುದು ಎಂಬುದಾಗಿ ವೈವಿಧ್ಯತೆಯನ್ನು ವ್ಯಾಖ್ಯಸಬಹುದು . ಭಾರತವು ಅನೇಕ ರೀತಿಯ ವೈವಿಧ್ಯತೆಗಳನ್ನು ಹೊಂದಿರುವ ಅತಿ ದೊಡ್ಡ ದೇಶ . ಭಾರತದಲ್ಲಿ ಕಂಡು ಬರುವ ವೈವಿಧ್ಯತೆಯನ್ನು ನಾಲ್ಕು ಪ್ರಕಾರಗಳಾಗಿ ವಿಂಗಡಿಸಲಾಗಿದೆ . ಅವುಗಳು ಹೀಗೆವೆ .

( i ) ಪ್ರಾಂತೀಯ ವೈವಿಧ್ಯತೆಗಳು

( ii ) ಭಾಷಾ ವೈವಿಧ್ಯತೆಗಳು

( iii ) ಧಾರ್ಮಿಕ ವೈವಿಧ್ಯತೆಗಳು

( iv ) ಸಾಂಸ್ಕೃತಿಕ ಮತ್ತು ಜನಾಂಗೀಯ ವ್ಯತ್ಯಾಸಗಳು ಭಾರತದಲ್ಲಿ ವೈವಿಧ್ಯತೆಯು ಬೇರೆಲ್ಲಾ ದೇಶಕ್ಕಿಂತ , ವಿಶಿಷ್ಟವಾದುದಾಗಿದೆ . ಡಾ . ಇರಾವತಿ ಕರ್ವೆಯವರು ಹೇಳುವಂತೆ ಪ್ರಪಂಚದ ಇನ್ಯಾವುದೇ ದೇಶದಲ್ಲಿ ಇಷ್ಟೊಂದು ವೈವಿಧ್ಯತೆಯನ್ನು ಕಾಣಲಾಗುವುದಿಲ್ಲ . ಆದುದರಿಂದ ‘ ಭಾರತವನ್ನು ಜಗತ್ತಿನ ಸೂಕ್ಷ್ಮರೂಪ ‘ ಎಂದು ಕರೆಯಬಹುದು . ಈ ವೈವಿಧ್ಯತೆಗಳನ್ನು ಪ್ರಾದೇಶಿಕವಾಗಿ ಎಂದರೆ ಭೌಗೋಳಿಕವಾಗಿ ನೋಡಿದರೆ ಸಾಕಷ್ಟು ರೀತಿಯ ವ್ಯತ್ಯಾಸಗಳನ್ನು ಗಮನಿಸಬಹುದು . ಭಾರತದಲ್ಲಿ ಒಂದೆಡೆ ಹಿಮದಿಂದ ಕೂಡಿದ ಪರ್ವತ ಶ್ರೇಣಿಗಳು , ದಟ್ಟವಾದ ಅರಣ್ಯಗಳು , ಅಸಂಖ್ಯಾತ ನದಿಗಳು , ಗಂಗಾನದಿಯ ಮುಖಜ ಭೂಮಿಯಂತರಹ ಫಲವತ್ತಾದ ಭೂಮಿ , ಏನೂ ಬೆಳೆಯದ ರಾಜಾಸ್ಥಾನದ ಮರುಭೂಮಿ , ಕರಾವಳಿ

ತೀರಪ್ರದೇಶಗಳು , ದಖನ್ ಪ್ರಸ್ಥಭೂಮಿ ಹೀಗೆ ಹಲವಾರು ವೈವಿಧ್ಯತೆಗಳುಂಟು . ಹವಾಮಾನದಲ್ಲೂ ಅನೇಕ ರೀತಿಯ ವೈವಿಧ್ಯತೆಗಳಿವೆ . ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ , ಕಡಿಮೆ ಎಂದರೆ ಕನಿಷ್ಠ ಮಳೆ ಬೀಳುವ ಪ್ರದೇಶವನ್ನು ಹೊಂದಿದೆ . ಭೂಮಟ್ಟ , ಉಷ್ಣತೆ , ಸಸ್ಯ ಸಂಪತ್ತು ಮುಂತಾದ ಹಲವು ವಿಷಯಗಳಲ್ಲಿ ವೈವಿಧ್ಯತೆಯನ್ನು ಕಾಣಬಹುದು . ಭಾಷೆಯು ಭಾರತದ ವೈವಿಧ್ಯತೆಯ ಇನ್ನೊಂದು ಮೂಲವಾಗಿದೆ . ಭಾರತೀಯ ಸಂವಿಧಾನವು 22 ಭಾಷೆಗಳನ್ನು ಆಡಳಿತಾತ್ಮಕ ಉದ್ದೇಶಕ್ಕಾಗಿ ಅಧಿಕೃತವೆಂದು ಘೋಷಿಸಿದೆ . ಸುಮಾರು 1652 ಭಾಷೆಗಳು ಹಾಗೂ ಅನೇಕ ಉಪಭಾಷೆಗಳು ಅಸ್ತಿತ್ವದಲ್ಲಿದೆ . ಈ ಎಲ್ಲಾ ಭಾಷೆಗಳನ್ನು ಪ್ರಮುಖವಾಗಿ ನಾಲ್ಕು (ಐದು) ಭಾಷಾ ಕುಟುಂಬಗಳಾಗಿ ವರ್ಗಿಕರಿಸುತ್ತಾರೆ .

( i ) ಪ್ರಾಂತೀಯ ವ್ಯತ್ಯಾಸಗಳು : ಭೂಮಟ್ಟ , ಉಷ್ಣತೆ , ಸಸ್ಯಸಂಪತ್ತು , ಹವಾಮಾನ ಮತ್ತು ಭೌಗೋಳಿಕ ರಚನೆಯಲ್ಲಿ ಅಜಗಜಾಂತರ ವ್ಯತ್ಯಾಸಗಳನ್ನು ಕಾಣಬಹುದು . ಅದೇ ರೀತಿ ಮಳೆಗೆ ಸಂಬಂಧಿಸಿದಂತೆ ವಾರ್ಷಿಕವಾಗಿ 12000 ಸೆಂ.ಮೀ.ನಿಂದ ಹಿಡಿದು ಕೇವಲ 7.5ಸೆಂ.ಮೀ. ಮಳೆ ಬೀಳುವ ಪ್ರದೇಶಗಳು ಇವೆ . ಭಾರತವು ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ಮಳೆ ಬೀಳುವ ಹಾಗೂ ಅತಿ ಒಣ ಪ್ರದೇಶಗಳೆರಡನ್ನೂ ಹೊಂದಿದ ದೇಶವಾಗಿದೆ . ಅದೇ ರೀತಿ ಮರುಭೂಮಿ , ಫಲವತ್ತಾದ ಪ್ರದೇಶಗಳು , ಪರ್ವತ ಪ್ರದೇಶ ಮತ್ತು ಬಯಲು ಭೂಮಿ ಹೀಗೆ ವೈರುದ್ಧಮಯ ಪ್ರದೇಶಗಳನ್ನು ಹೊಂದಿದೆ .

( ii ) ಭಾಷಾ ವೈವಿಧ್ಯತೆಗಳು : ( 1 ) ಇಂಡೋ – ಆರ್ಯನ್ ಭಾಷೆಗಳು : ಸಂಸ್ಕೃತ , ಹಿಂದಿ , ಬೆಂಗಾಲಿ , ಮರಾಠಿ , ಗುಜರಾತಿ , ಒರಿಯಾ , ಪಂಜಾಬಿ , ಬಿಹಾರಿ , ರಾಜಾಸ್ಥಾನಿ , ಅಸ್ಸಾಮಿ , ಸಿಂಧಿ ಮತ್ತು ಕಾಶ್ಮೀರಿ ಭಾಷೆಗಳು , ನಮ್ಮ ದೇಶದಲ್ಲಿ 3 ರಷ್ಟು ಜನರು ಈ ಭಾಷೆಗಳನ್ನಾಡುತ್ತಾರೆ . ( ii ) ದ್ರಾವಿಡಿಯನ್ ಭಾಷೆಗಳು : ತಮಿಳು , ಕನ್ನಡ , ತೆಲುಗು ಮತ್ತು ಮಲಯಾಳಂ ಭಾಷೆ , ದಕ್ಷಿಣ ಭಾರತದಲ್ಲಿ ಈ ಭಾಷೆಗಳನ್ನು ಆಡುವವರು ಹೇರಳವಾಗಿದ್ದಾರೆ .

( iii ) ಆಸ್ಟ್ರಿಕ್ ಭಾಷೆಗಳು : ಮುಂಡಾರಿ , ಸಂತಾಲಿ , ಮೈಥಿಲಿ ,ಡೊಗ್ರಿ ಮುಂತಾದ ಭಾಷೆಗಳು ಈ ಗುಂಪಿಗೆ ಸೇರುತ್ತವೆ.

( iv ) ಟಿಬೆಟೋ : ಬರ್ಮನ್ : ಇವು ಬುಡಕಟ್ಟು ಭಾಷೆಗಳು ಮತ್ತು ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಭಾಷೆಗಳು ಈ ಸಮೂಹಕ್ಕೆ ಸೇರುತ್ತವೆ . ಉದಾ : ಮಣಿಪುರಿ , ಬೊಡೋ , ಲಡಾಕಿ , ಖುಕ್ರಿ ಇತ್ಯಾದಿ . ‌

( v ) ಯುರೋಪಿಯನ್ ಭಾಷೆಗಳು : ಇಂಗ್ಲೀಷ್ , ಫ್ರೆಂಚ್ ಮತ್ತು ಪೋರ್ಚುಗೀಸ್ ಭಾಷೆಗಳು , ಭಾಷಾ ವೈವಿಧ್ಯತೆಯು ಕೆಲವು ಆಡಳಿತಾತ್ಮಕವಾದ ಮತ್ತು ರಾಜಕೀಯವಾದ ಸಮಸ್ಯೆಗಳಿಗೂ ಕಾರಣವಾಗಿದೆ . ಇವುಗಳ ಜೊತೆ ಧಾರ್ಮಿಕ ವೈವಿಧ್ಯತೆ ಹಾಗೂ ಸಾಂಸ್ಕೃತಿಕ ಮತ್ತು ಜನಾಂಗೀಯ ವೈವಿಧ್ಯತೆಗಳೂ ಇವೆ . ಭಾರತದಲ್ಲಿ ಪ್ರಮುಖವಾಗಿ ಎಂಟು ಧಾರ್ಮಿಕ ಸಮುದಾಯಗಳಿವೆ . ಪುನಃ ಇವುಗಳಲ್ಲಿ ಹಲವಾರು ಉಪವಿಭಾಗಗಳಿವೆ . ಸಾಂಸ್ಕೃತಿಕ ವೈವಿಧ್ಯತೆಯು ಭಾರತದ ವೈವಿಧ್ಯತೆಯ ಇನ್ನೊಂದು ಮೂಲವಾಗಿದೆ . ಭಾರತೀಯರ ಸಾಮಾಜಿಕ ಅಭ್ಯಾಸಗಳಲ್ಲಿ ಸಾಕಷ್ಟು ವೈವಿಧ್ಯತೆಯಿದೆ . ರಾಜ್ಯದಿಂದ ರಾಜ್ಯಕ್ಕೆ ಹಲವಾರು ರೀತಿಯ ವ್ಯತ್ಯಾಸಗಳಿವೆ . ಜನಾಂಗೀಯ ಮೂಲಗಳು , ಸಂಸ್ಕೃತಿ , ಜೀವನ ವಿಧಾನ , ವರ್ತನಾ ಮಾದರಿಗಳು , ನಂಬಿಕೆಗಳು , ಆಹಾರ , ಉಡುಪು , ಮೌಲ್ಯಗಳು , ಸಾಮಾಜಿಕ ನಿಯಮಗಳು , ಸಾಮಾಜಿಕ – ಧಾರ್ಮಿಕ ಪದ್ಧತಿಗಳು ಹೀಗೆ ಹತ್ತು ಹಲವಾರು ವೈವಿಧ್ಯತೆಗಳನ್ನು ಹೊಂದಿರುವುದೇ ಭಾರತದ ವೈಶಿಷ್ಟ್ಯತೆ , ಈ ವೈವಿಧ್ಯತೆಗಳಿಂದಾಗಿ ಭಾರತವನ್ನು “ ಏಶಿಯಾದ ಉಪಖಂಡ ” ಎಂದು ಕರೆಯಲಾಗುತ್ತದೆ .

( iii ) ಧಾರ್ಮಿಕ ವೈವಿಧ್ಯತೆಗಳು : ಭಾರತದಲ್ಲಿ ಎಂಟು ಪ್ರಮುಖ ಧಾರ್ಮಿಕ ಗ್ರಂಥಗಳು , ಪಂಥಗಳು ಮತ್ತು ವಿಭಾಗಗಳ ನೆಲೆಯಲ್ಲಿ ಮತ್ತೆ ಉಪವಿಭಾಗಗಳನ್ನು ಹೊಂದಿದೆ . ಹಿಂದೂಗಳಲ್ಲಿ ಶಿವನ ಆರಾಧಕರಾದ ಶೈವರು , ವಿಷ್ಣುವಿನ ಆರಾಧಕರಾದ ವೈಷ್ಣವರು ಮತ್ತು ಶಕ್ತಿ ದೇವತೆಯ ವಿವಿಧ ರೂಪಗಳ ಆರಾಧಕರಾದ ಶಾಕ್ತ ಪಂಥೀಯರಿದ್ದಾರೆ . ಈ ಮೂರು ಪಂಥೀಯರಲ್ಲಿ ತಮ್ಮದೇ ಆದ ಮತಾಚರಣೆಗಳಿವೆ . ಬೌದ್ಧ ಧರ್ಮದಲ್ಲಿ ಮಹಾಯಾನ ಮತ್ತು ಹೀನಯಾನ ಎಂಬೆರಡು ಉಪ ವಿಭಾಗಗಳಿದ್ದು ವ್ಯತ್ಯಾಸಗಳನ್ನು ಸೂಚಿಸುತ್ತದೆ . ಜೈನಧರ್ಮದಲ್ಲಿ ದಿಗಂಬರ ಮತ್ತು ಶ್ವೇತಾಂಬರ ಎಂಬೆರಡು ಉಪವಿಭಾಗಗಳಿವೆ . ಜೈನರಲ್ಲಿ ಒಳಬಾಂಧವ್ಯವುಳ್ಳ ಒಳ ಸಮೂಹಗಳಿದ್ದವು . ಮುಸ್ಲಿಮರಲ್ಲಿ ಸುನ್ನಿ ಮತ್ತು ಶಿಯಾ ಎಂಬ ಪಂಗಡಗಳಿವೆ . ಮುಸ್ಲಿಂ ಕಾನೂನಿನಲ್ಲಿ ನಾಲ್ಕು ವಿಚಾರ ಪಂಥಗಳಿವೆ . ಅವು ಹನಿಫಿ ಪಂಥ , ಶಫಿ ಪಂಥ , ಮಲಿಕಿ ಪಂಥ ಮತ್ತು ಹನ್‌ಬಲಿ ಪ ೦ ಥ , ಈ ಹನ್‌ ಬಲಿಯನ್ನು ಭಾರತದಲ್ಲಿ ಆಚರಿಸಲಾಗುವುದಿಲ್ಲ . ಇದಲ್ಲದೆ ಹದಿನಾಲ್ಕು ಧಾರ್ಮಿಕ ಪಂಥಗಳಿವೆ . ಕ್ರೈಸ್ತರಲ್ಲಿ ರೋಮನ್ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಎಂಬ ಎರಡು ಉಪವಿಭಾಗಗಳಿವೆ . ಇವರಲ್ಲದೆ ಸಿಖ್ ಧರ್ಮದವರು , ಪಾರ್ಸಿಗಳು ಹಾಗೂ ಜ್ಯೂಗಳೂ ಸಹ ಭಾರತದಲ್ಲಿ ವಾಸಿಸುತ್ತಿದ್ದಾರೆ . ಇವರಲ್ಲಿ ಕಪ್ಪು – ಬಿಳಿ ಎಂಬ ವರ್ಗಗಳಿವೆ . ಈ ರೀತಿ ಅತ್ಯಧಿಕ ಧಾರ್ಮಿಕ ವೈವಿಧ್ಯತೆಯಿರುವ ದೇಶವಾಗಿದೆ .

( ii ) ಸಾಂಸ್ಕೃತಿಕ ಮತ್ತು ಜನಾಂಗೀಯ ವೈವಿಧ್ಯತೆಗಳು : ಡಾ . ಆರ್.ಕೆ. ಮುಖರ್ಜಿಯವರು ಹೇಳಿರುವಂತೆ “ ಭಾರತವು ಪಂಥಗಳು ಮತ್ತು ಪದ್ಧತಿಗಳು , ಮತಗಳು ಮತ್ತು ಸಂಸ್ಕೃತಿ , ನಂಬಿಕೆಗಳು ಮತ್ತು ಭಾಷೆಗಳು , ಜನಾಂಗೀಯ ಪ್ರಕಾರಗಳು ಮತ್ತು ಸಾಮಾಜಿಕ ವ್ಯವಸ್ಥೆಗಳನ್ನೊಳಗೊಂಡ ವಸ್ತು ಸಂಗ್ರಹಾಲಯವಾಗಿದೆ . ಇಷ್ಟಲ್ಲದೆ ನಿರ್ದಿಷ್ಟ ಸಮುದಾಯಗಳು ಮತ್ತು ಪ್ರಾಂತಗಳೂ ಕೂಡ ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿದೆ . ಜನಾಂಗೀಯ ವೈವಿಧ್ಯತೆಯು ವಿಭಿನ್ನ ಜನಾಂಗ , ಸಾಂಸ್ಕೃತಿಕ ಮತ್ತು ಭಾಷಾವಾರು ವೈವಿಧ್ಯತೆಗಳನ್ನೊಳಗೊಂಡಿರುತ್ತದೆ . ಭಾರತದಲ್ಲಿ ಈ ರೀತಿ ಅನೇಕ ರೀತಿಯ ವೈವಿಧ್ಯತೆಯ ವಿಧಗಳನ್ನು ನೋಡಬಹುದು .

53. ಏಕತೆಯನ್ನು ವ್ಯಾಖ್ಯಿಸಿ ಮತ್ತು ಭಾರತದಲ್ಲಿ ಕಾಣುವ ಏಕತೆಯ ವಿಧಗಳನ್ನು ತಿಳಿಸಿ .

ಏಕತೆ ಎಂದರೆ ಐಕ್ಯತೆ , ನಾವೆಲ್ಲಾ ಒಂದು ಭಾವನೆಯನ್ನು ಸೂಚಿಸುತ್ತದೆ . ವಿವಿಧತೆಯಲ್ಲೂ ನಾವೆಲ್ಲಾ ಒಂದೇ ಎಂಬ ಭಾವನೆಯೇ ಏಕತೆ . ಭಾರತದಲ್ಲಿರುವ ಎಲ್ಲಾ ನಿವಾಸಿಗಳಿಗೂ ನಾವೆಲ್ಲಾ ಒಂದೇ ಎಂಬ ಭಾವನೆ ಇರುವುದರ ಜೊತೆಗೆ ಭಾರತೀಯ ಸಂಸ್ಕೃತಿಯೂ ಸಹ ಈ ಮೂಲಭೂತ ಗುಣವನ್ನು ಉಳಿಸಿಕೊಂಡು ಬಂದಿದೆ . ಭಾರತದ ವೈಶಿಷ್ಟ್ಯತೆಯೇ ‘ ವೈವಿಧ್ಯತೆಯಲ್ಲಿ ಏಕತೆ ‘

ಭಾರತದಲ್ಲಿ ಎಷ್ಟೆಲ್ಲಾ ವೈವಿಧ್ಯತೆಗಳಿದ್ದರೂ , ಏಕತೆಯ ಅಂಶವೂ ಶಕ್ತಿಯುತವಾಗಿದೆ . ನಾವೆಲ್ಲಾ ಒಂದೇ , ಒಂದೇ ರಾಷ್ಟ್ರದ ಪ್ರಜೆಗಳು ಎಂಬ ಭಾವನೆ ಅನೇಕ ಕಾರಣಗಳಿಂದ ಏರ್ಪಡುವುದು . ಭಾರತದ ನೈಸರ್ಗಿಕ ಗಡಿಗಳು ಭೌಗೋಳಿಕ ಐಕ್ಯತೆಯನ್ನು ಒದಗಿಸುತ್ತವೆ . ನಮ್ಮ ದೇಶಕ್ಕೆ ಅನೇಕ ಹೆಸರುಗಳಿದ್ದರೂ ‘ ಭಾರತ ವರ್ಷ ‘ ಎಂಬುದು ಎಲ್ಲರ ಮನದಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ . ‘ ಭಾರತ ಮಾತೆ ಎಂಬ ಕಲ್ಪನೆಯೂ ಕೂಡ ಐಕ್ಯತೆಯ ಸಂಕೇತವಾಗಿದೆ . ಹಲವಾರು ಭಾಷೆಗಳಿದ್ದರೂ ಭಾಷಾ ಐಕ್ಯತೆಯು ಕಂಡು ಬರುತ್ತದೆ . ಭಾರತೀಯ ಭಾಷೆಗಳಿಗೆ ಸಂಸ್ಕೃತ ಭಾಷೆಯು ಆಧಾರವಾಗಿದ್ದು , ಐಕ್ಯತೆಗೂ ಕೂಡಾ ಆಧಾರವಾಗಿದೆ . ಸಂಸ್ಕೃತ ಭಾಷೆಯು ಹಿಂದೂ ಸಂಸ್ಕೃತಿಯ ಭಾಷೆಯಾಯಿತಲ್ಲದೆ , ಹಲವಾರು ಹಿಂದೂ ಶಾಸ್ತ್ರಗ್ರಂಥಗಳು ಸಂಸ್ಕೃತ ಭಾಷೆಯಲ್ಲಿಯೇ ರಚಿಸಲ್ಪಟ್ಟವು . ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಭಾಷೆಗಳನ್ನಾಡಲಾಗುತ್ತದೆಯಾದರೂ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳೂ ಜನರ ಸಂಪರ್ಕ ಭಾಷೆಗಳಾಗಿವೆ . ಧಾರ್ಮಿಕ ವೈವಿಧ್ಯತೆಗಳ ನಡುವೆಯೂ ಕೂಡಾ ಧಾರ್ಮಿಕ ಐಕ್ಯತೆಯನ್ನು ನೋಡಬಹುದು . ಪ್ರತಿಯೊಂದು ಧಾರ್ಮಿಕ ಸಮೂಹದ ನಂಬಿಕೆಗಳು ಒಂದೇ ಆಗಿದೆ . ಆತ್ಮ ಅವಿನಾಶಿ ಎಂಬ ನಂಬಿಕೆಯನ್ನು ಎಲ್ಲ ಧರ್ಮಗಳೂ ಹೊಂದಿವೆ . ಜಗತ್ತಿನ ನಶ್ವರತೆಯ ಕುರಿತ ನಂಬಿಕೆ , ಪುನರ್ಜನ್ಮ ಕುರಿತ ನಂಬಿಕೆ , ಮೋಕ್ಷದ ನಂಬಿಕೆ ಮುಂತಾದವು ಎಲ್ಲ ಧರ್ಮಗಳಿಗೂ ಸಮಾನವಾಗಿವೆ .

ಧಾರ್ಮಿಕ ಗ್ರಂಥಗಳು , ಪುರಾಣಗಳು , ಮಹಾಕಾವ್ಯಗಳು , ವೇದಗಳು ವಿಭಿನ್ನ ಸಮೂಹಗಳನ್ನು ಒಂದೇ ಧಾರ್ಮಿಕ ಸಮಾಜವಾಗಿ ಹತ್ತಿರಕ್ಕೆ ತರುತ್ತವೆ ಮತ್ತು ತಮ್ಮ ದೇಶವು ಪವಿತ್ರವೆಂಬ ಭಾವನೆಯನ್ನು ಮೂಡಿಸುತ್ತವೆ . ಕಲೆ , ವಾಸ್ತುಶಿಲ್ಪ , ಉಡುಪು , ಆಹಾರ ಪದ್ಧತಿ , ಸಾಹಿತ್ಯ ಸಂಗೀತ , ನೃತ್ಯ , ಕ್ರೀಡೆ , ಚಲನಚಿತ್ರ , ವೈದ್ಯಕೀಯ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಶೈಲಿಗಳ ಸಮ್ಮಿಶ್ರಣವಿತ್ತಲ್ಲದೆ ಎಲ್ಲರ ಸಂಯೋಜಿತ ಪ್ರಯತ್ನಗಳಿಂದಾಗಿ ಹೊಸ ಸಾಂಸ್ಕೃತಿಕ ನಮೂನೆಗಳು ಉದಯವಾದವು . ಭೌಗೋಳಿಕ ಸ್ಥಿತಿಗಳು , ಐತಿಹಾಸಿಕ ಅನುಭವಗಳು , ಧಾರ್ಮಿಕ ಮೌಲ್ಯಗಳು ಹಾಗೂ ರಾಜಕೀಯ ತತ್ವಾದರ್ಶಗಳ ನೆರವನ್ನು ಪಡೆಯಿತು . ಈ ನೆರವಿನಿಂದ ಹುಟ್ಟು , ಜಾತಿ , ಭಾಷೆ , ಜನಾಂಗ ಮತ್ತು ಧಾರ್ಮಿಕ ಸಮೂಹಗಳನ್ನು ಮೀರಿ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದ ದೊಡ್ಡ ಸಮಾಜವಾಗಿ ಮತ್ತು ಅತ್ಯಂತ ದೊಡ್ಡ ರಾಷ್ಟ್ರವಾಗಿ ಬೆಳೆಯಿತು . ವೈವಿಧ್ಯತೆಯು ಭಾರತದ ವೈಶಿಷ್ಟ್ಯತೆಯಾದರೂ , ಏಕತೆಯು ಕಂಡು ಬರುತ್ತದೆ . ‘ ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯತೆ ‘ , ಈ ಏಕತೆಯು ಕಂಡು ಬರುವ ಅನೇಕ ವಿಧಗಳು ಹೀಗಿವೆ .

( i ) ಪ್ರಾಂತೀಯ ಐಕ್ಯತೆ

( ii ) ಭಾಷಾ ಐಕ್ಯತೆ

( iii ) ಧಾರ್ಮಿಕ ಐಕ್ಯತೆ

( iv ) ಸಾಂಸ್ಕೃತಿಕ ಐಕ್ಯತೆ

( i ) ಪ್ರಾಂತೀಯ ಐಕ್ಯತೆ ( Regional Unity ) : ಭಾರತದ ನೈಸರ್ಗಿಕ ಗಡಿಗಳು ಭೌಗೋಳಿಕ ಐಕ್ಯತೆಯನ್ನು ಒದಗಿಸುತ್ತವೆ . ಅನೇಕ ಹೆಸರುಗಳಿಂದ ಕರೆಯಲ್ಪಡುತ್ತಿದ್ದರೂ ನಮ್ಮ ದೇಶ ಒಂದೇ ಎಂಬ ಭಾವನೆಯಿದೆ . ಭಾರತ ವರ್ಷ , ಭರತಖಂಡ ಜಂಬೂದ್ವೀಪ ಎಂಬೆಲ್ಲಾ ಹೆಸರಿದ್ದರೂ ‘ ಭಾರತವರ್ಷ ‘ ಎಂಬ ಹೆಸರು ಕವಿಗಳು , ರಾಜಕೀಯ ತತ್ವಶಾಸ್ತ್ರಜ್ಞರು ಮತ್ತು ಧಾರ್ಮಿಕ ಚಿಂತಕರ ಮನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ . ಇವರಲ್ಲಿ ಪ್ರತಿಯೊಬ್ಬರೂ , ಭಾರತ ದೇಶವನ್ನು ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ‘ ಭರತ ಚಕ್ರವರ್ತಿಯಿಂದ ಆಳಲ್ಪಟ್ಟ ಏಕ ರಾಷ್ಟ್ರವೆಂದೇ ಪರಿಗಣಿಸಿದ್ದಾರೆ . ‘ ಭಾರತ ಮಾತೆ ‘ ಎಂಬ ಕಲ್ಪನೆಯೂ ಕೂಡ ಭೌಗೋಳಿಕ ಐಕ್ಯತೆಯ ಅರಿವಿನ ಸಂಕೇತವಾಗಿದೆ .

( ii ) ಭಾಷಾ ಐಕ್ಯತೆ ( Linguistic Unity ) : ಭಾರತದಲ್ಲಿ ಹಲವಾರು ಭಾಷೆಗಳಿದ್ದರೂ ಸಹ ಜನರಲ್ಲಿ ಭಾಷಾ ಐಕ್ಯತೆ ಕಂಡು ಬರುತ್ತದೆ . ಏಕೆಂದರೆ ಭಾರತೀಯ ಭಾಷೆಗಳಿಗೆ ಸಂಸ್ಕೃತ ಭಾಷೆಯು ಆಧಾರವಾಗಿದ್ದು , ಐಕ್ಯತೆಗೆ ಕೂಡಾ ಆಧಾರವಾಗಿದೆ . ಸಂಸ್ಕೃತ ಭಾಷೆಯು ಹಿಂದೂ ಸಂಸ್ಕೃತಿಯ ಭಾಷೆಯಾಯಿತಲ್ಲದೆ , ಹಲವಾರು ಹಿಂದೂಶಾಸ್ತ್ರ ಗ್ರಂಥಗಳು ಸಂಸ್ಕೃತದಲ್ಲೇ ರಚಿಸಲ್ಪಟ್ಟವು . ಆಧುನಿಕ ಭಾರತದ ಭಾಷೆಗಳೂ ಕೂಡ ಸಂಸ್ಕೃತ ಮೂಲವನ್ನೇ ಹೊಂದಿದೆ . ದಕ್ಷಿಣ ಭಾರತದ ಭಾಷೆಗಳಲ್ಲೂ ಸಂಸ್ಕೃತ ಭಾಷೆಯ ಪ್ರಭಾವವನ್ನು ಕಾಣಬಹುದು . ಭಾರತದ ವಿವಿಧ ಪ್ರಾಂತಗಳಲ್ಲಿ ವಿವಿಧ ಭಾಷೆಗಳನ್ನಾಡಲಾಗುತ್ತದೆಯಾದರೂ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳು ಜನರ ಸಂಪರ್ಕ ಭಾಷೆಗಳಾಗಿವೆ . ಈ ರೀತಿ ಹಲವಾರು ಭಾಷೆಗಳ ಮಧ್ಯೆಯೂ ಭಾಷಾ ಏಕತೆಯನ್ನು ಸಾಧಿಸಿದೆ .

( iii ) ಧಾರ್ಮಿಕ ಐಕ್ಯತೆ ( Religious Unity ) : ಧಾರ್ಮಿಕ ವೈವಿಧ್ಯತೆಗಳ ನಡುವೆಯೂ ಕೂಡ ಭಾರತದಲ್ಲಿ ಧಾರ್ಮಿಕ ಐಕ್ಯತೆ ಕಂಡುಬರುತ್ತದೆ . ಪ್ರತಿಯೊಂದು ಧಾರ್ಮಿಕ ಸಮೂಹದ ನಂಬಿಕೆಗಳು ಒಂದೇ ಆಗಿವೆ . ಎಂ . ಎನ್ . ಶ್ರೀನಿವಾಸ್‌ರವರ ಅಭಿಪ್ರಾಯದಂತೆ ಭಾರತದಲ್ಲಿ ಕಂಡು ಬರುವ ಏಕತೆಯು ಧಾರ್ಮಿಕ ಸ್ವರೂಪದ್ದಾಗಿದೆ . ಜನರು ಬೇರೆ ಬೇರೆ ದೇವರ ಆರಾಧನೆ ಮಾಡಬಹುದಾದರೂ ಧಾರ್ಮಿಕ ಗ್ರಂಥಗಳಾದ ಪುರಾಣಗಳು , ಬ್ರಾಹ್ಮಣಕಗಳು , ಮಹಾಕಾವ್ಯಗಳು , ವೇದಗಳು ವಿಭಿನ್ನ ಸಮೂಹಗಳನ್ನು ಒಂದೇ ಧಾರ್ಮಿಕ ಸಮಾಜವಾಗಿ ಹತ್ತಿರಕ್ಕೆ ತರುತ್ತವೆ ಮತ್ತು ತಮ್ಮ ದೇಶವು ಪವಿತ್ರವೆಂಬ ಭಾವನೆಯನ್ನು ಮೂಡಿಸುತ್ತವೆ . ವಿವಿಧ ದೇವತೆಗಳ ಆರಾಧಕರು ಬೇರೆ ಬೇರೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬಹುದು ಆದೆ ಅವರೆಲ್ಲರ ಗುರಿ , ಉದ್ದೇಶ ಒಂದೇ ಆಗಿರುತ್ತದೆ . ಧಾರ್ಮಿಕವಾಗಿ ಭಾರತೀಯರೆಲ್ಲರ ಅತ್ಯುನ್ನತ ಗುರಿ ಮೋಕ್ಷ ಸಂಪಾದನೆಯಾಗಿರುತ್ತದೆ . ಎಲ್ಲಾ ಧರ್ಮದವರಿಗೂ ಅ ವ ರ ವ ರ ದೇ ಆದ ಪುಣ್ಯಕ್ಷೇತ್ರಗಳಿರುವುದು . ಎಲ್ಲರ ಉದ್ದೇಶ ಒಂದೇ ಆಗಿರುವುದರಿಂದ ಧಾರ್ಮಿಕ ಐಕ್ಯತೆಯನ್ನು ಹೊಂದಿದೆ .

( iv ) ಸಾಂಸ್ಕೃತಿಕ ಐಕ್ಯತೆ ( Cultural Unity ) : ಕಲೆ , ವಾಸ್ತುಶಿಲ್ಪ , ಉಡುಪು , ಆಹಾರ ಪದ್ಧತಿ , ಸಾಹಿತ್ಯ , ಸಂಗೀತ , ನೃತ್ಯ , ಕ್ರೀಡೆ , ಚಲನಚಿತ್ರ ಮುಂತಾದವುಗಳಲ್ಲಿ ಸಾಂಸ್ಕೃತಿಕ ಐಕ್ಯತೆಯನ್ನು ಕಾಣಬಹುದು . ಧಾರ್ಮಿಕ ವಿಧಿಗಳನ್ನು ಪೂಜೆ ಪುನಸ್ಕಾರಗಳನ್ನು , ಹಬ್ಬ – ಹುಣ್ಣಿಮೆಗಳನ್ನು ಸಭೆ ಸಮಾರಂಭಗಳನ್ನು ದೇಶದಾದ್ಯಂತ ಒಂದೇ ತೆರನಾಗಿ ( ಮಾಡುವ ) ಆಚರಿಸುವ ಕ್ರಮವು ಕಂಡು ಬರುತ್ತದೆ . ದಸರಾ , ದೀಪಾವಳಿ , ಹೋಳಿ , ಗಣೇಶ ಚತುರ್ಥಿ ಇತ್ಯಾದಿ ಹಬ್ಬಗಳನ್ನು ಎಲ್ಲಾ ಸಂಸ್ಕೃತಿಯವರೂ ಹೆಚ್ಚು ಕಡಿಮೆ ಒಂದೇ ರೀತಿಯಾಗಿ ಆಚರಿಸಿ ಸಂಭ್ರಮಿಸುತ್ತಾರೆ . ಹುಟ್ಟು , ಜಾತಿ , ಭಾಷೆ , ಜನಾಂಗ ಮತ್ತು ಧಾರ್ಮಿಕ ಸಮೂಹಗಳನ್ನೂ ಮೀರಿ , ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ ನಮ್ಮ ಭಾರತ .

54. ರಾಷ್ಟ್ರೀಯ ಭಾವೈಕ್ಯತೆಯನ್ನು ವ್ಯಾಖ್ಯಾನಿಸಿ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವ ಎದುರಾಗುವ ಸವಾಲುಗಳನ್ನು ವಿವರಿಸಿ .

ರಾಷ್ಟ್ರೀಯ ಭಾವೈಕ್ಯತೆಗೆ ಪ್ರಾಂತೀಯವಾದ , ಕೋಮುವಾದ , ಭಾಷಾವಾದ ಮತ್ತು ಉಗ್ರವಾದ ಅಥವಾ ಆತಂಕವಾದ ಸವಾಲಗಿರುವ ಅಂಶಗಳಾಗಿವೆ . ರಾಷ್ಟ್ರೀಯ ಭಾವೈಕ್ಯತೆಗೆ ಪ್ರಾಂತೀಯವಾದ , ಕೋಮುವಾದ , ಭಾಷಾವಾದ ಮತ್ತು ಉಗ್ರವಾದ ಅಥವಾ ಆತಂಕವಾದ ಸವಾಲಗಿರುವ ಅಂಶಗಳಾಗಿವೆ . ವಿಭಿನ್ನ ಸಂಸ್ಕೃತಿ ಹೊಂದಿದ ಜನರು ಅತ್ಯುಚ್ಛ ಮಟ್ಟದ ಸಹಕಾರ , ಪರಸ್ಪರ ತಿಳುವಳಿಕೆ ಹಂಚಿಕೊಳ್ಳಲ್ಪಡುವ ಮೌಲ್ಯಗಳು , ಸಮಾನ ಅನನ್ಯತೆ ಮತ್ತು ರಾಷ್ಟ್ರಪ್ರಜ್ಞೆಗಳ ಮೂಲಕ ಒಗ್ಗೂಡುವುದೇ ಭಾವೈಕ್ಯತೆ , ರಾಷ್ಟ್ರದ ಏಕತೆ ಮತ್ತು ಜನರಲ್ಲಿ ತಾವು ಈ ರಾಷ್ಟ್ರಕ್ಕೆ ಸೇರಿದವರೆಂಬ ಭಾವನೆಯನ್ನು ( ಸೂಚಿಸುವುದುದೇ ) ಹೊಂದುವುದೇ ರಾಷ್ಟ್ರೀಯ ಭಾವೈಕ್ಯತೆ . ರಾಷ್ಟ್ರೀಯ ಭಾವೈಕ್ಯತೆಯ ಸವಾಲುಗಳು

( i ) ಪ್ರಾಂತೀಯವಾದ : ಪ್ರಾಂತೀಯತೆಯು ನಿರ್ದಿಷ್ಟ ಪ್ರಾಂತ್ಯವನ್ನು ಕುರಿತಂತೆ ಅತಿಯಾದ ನಿಷ್ಠೆಯನ್ನು ಸೂಚಿಸುತ್ತದೆ . ಇಂತಹ ಭಾವನೆಗಳು ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗುತ್ತದೆ . ಭಾರತವು ಹಲವಾರು ಪ್ರಾಂತೀಯ ವ್ಯತ್ಯಾಸಗಳನ್ನೊಳಗೊಂಡ ದೇಶವಾಗಿದೆ . ಅಸಮತೋಲದ ಕೂಡ ರಾಜ್ಯಗಳ ಮಧ್ಯೆ ಆರ್ಥಿಕ ಯೋಜನೆಗಳು ಅಂತರವನ್ನು ಕಲ್ಪಿಸುತ್ತದೆ . ಔದ್ಯೋಗೀಕರಣದ ಫಲಗಳೂ ಕೂಡ ಅಸಮಾನವಾಗಿ ಹಂಚಿಕೆಯಾಗಿವೆ . ವ್ಯತ್ಯಾಸಗಳು ಹೆಚ್ಚಾದಷ್ಟು , ಪ್ರಾಂತೀಯವಾದವು ಹೆಚ್ಚುತ್ತದೆ . ಪ್ರಾಂತೀಯವಾದವು ನಾಲ್ಕು ರೂಪಗಳಲ್ಲಿ ಕಂಡು ಬರುತ್ತವೆ .

( ಅ ) ಭಾರತೀಯ ಒಕ್ಕೂಟದಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ : ಕೆಲವು ರಾಜ್ಯಗಳ ಜನರು ಭಾರತದ ಸಾರ್ವಭೌಮತ್ವದಿಂದ ಹೊರಬೀಳಬಯಸಿದ ಘಟನೆಗಳು ರಾಷ್ಟ್ರೀಯ ಭಾವೈಕ್ಯತೆಗೆ ಸವಾಲಾಗಿದೆ . ಮದ್ರಾಸ್ ರಾಜ್ಯದ ತಮಿಳು ಸಮುದಾಯ , ಪಂಜಾಬಿನ ಸಿಖ್ ಸಮುದಾಯ , ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ಸಮಸ್ಯೆ ಉಂಟಾಗಿತ್ತು .

( ಆ ) ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ : ಇತ್ತೀಚಿನ ಹಲವಾರು ವರ್ಷಗಳಿಂದ ಈ ಬೇಡಿಕೆಗಳು ಹೆಚ್ಚುತ್ತಿವೆ . ಇದು ಪ್ರಾಂತೀಯವಾದದ ಹೊಸ ರೂಪ . ಮಹಾರಾಷ್ಟ್ರದಲ್ಲಿ ವಿದರ್ಭ ರಾಜ್ಯಕ್ಕಾಗಿ , ಆಂಧ್ರಪ್ರದೇಶದಿಂದ ತೆಲಂಗಾಣಕ್ಕಾಗಿ , ( ಇತ್ತೀಚೆಗೆ ಇದು ಈಡೇರಿದೆ ) ಬುಂದೇಲ್‌ಖಂಡ್ , ವಿಂಧ್ಯ ಮುಂತಾದ ರಾಜ್ಯಗಳಿಗೆ ಬೇಡಿಕೆ ಇಡಲಾಗಿದೆ .

( ಇ ) ಪೂರ್ಣ ಪ್ರಮಾಣದ ರಾಜ್ಯಕ್ಕಾಗಿ : ಕೇಂದ್ರಾಡಳಿತ ಪ್ರದೇಶಗಳು ಯತ್ನಿಸುತ್ತಿರುವುದು ಇನ್ನೊಂದು ಅಭಿವ್ಯಕ್ತಿಯಾಗಿದೆ . ಪ್ರಾಂತೀಯವಾದದ ಉದಾ : ದೆಹಲಿ ,

( ಈ ) ಅಂತರ – ರಾಜ್ಯ ವಿವಾದಗಳು : ಕರ್ನಾಟಕ – ಮಹಾರಾಷ್ಟ್ರ , ಪಂಜಾಬ್ – ಹರಿಯಾಣ ನಡುವೆ ಉಂಟಾದ ವಿವಾದಗಳು . ನದಿ ನೀರಿನ ಹಂಚಿಕೆಯಲ್ಲೂ ವಿವಾದಗಳಿವೆ . ಇವೆಲ್ಲಾ ರಾಷ್ಟ್ರೀಯ ಭಾವೈಕ್ಯತೆಗೆ ಒಂದು ಸವಾಲಾಗಿದೆ .

( ii ) ಕೋಮುವಾದ : ಮೇಲ್ವರ್ಗದವರು ಜನರನ್ನು ವಿಭಜಿಸುವ ಮೂಲಕ ಅಧಿಕಾರವನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಳ್ಳಲು ಹೊಂದಿರುವ ಆಯುಧವಾಗಿದೆ . ಉನ್ನತವರ್ಗದವರು ಬದಲಾವಣೆಯನ್ನು ವಿರೋಧಿಸಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಜನರನ್ನು ಕೋಮು ಮತ್ತು ಧಾರ್ಮಿಕ ಆಧಾರದಲ್ಲಿ ವಿಭಜಿಸುತ್ತಾರೆ .

( iii ) ಭಾಷಾವಾದ : ಭಾಷಾ ವೈವಿಧ್ಯತೆಯು ಭಾಷಾವಾದಕ್ಕೂ ಕಾರಣವಾಗಿದೆ . ಇದು ಕೆಲವೊಮ್ಮೆ ಹಿಂಸಾತ್ಮಕ ಚಳುವಳಿಗೂ ಕಾರಣವಾಗಿ ಭಾವೈಕ್ಯತೆಗೆ ಮಾರಕವಾಗುತ್ತದೆ .

( iv ) ಉಗ್ರವಾದ ಮತ್ತು ಆತಂಕವಾದವೂ ಸಹ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಲು ಉಂಟಾಗುವ ತೊಡಕುಗಳು . ಇಷ್ಟೇ ಅಲ್ಲದೆ ಭ್ರಷ್ಟಾಚಾರ , ಬಡತನ , ನಿರುದ್ಯೋಗ , ಯುವ ಅಶಾಂತಿ , ಶ್ರೀಮಂತರು ಮತ್ತು ಬಡವರ ನಡುವಿನ ಅಂತರ – ಇವೆಲ್ಲಾ ನಿಜಕ್ಕೂ ರಾಷ್ಟ್ರೀಯ ಐಕ್ಯತೆಗೆ ಸವಾಲನೊಡ್ಡುತ್ತದೆ .

ಉಗ್ರವಾದ ಮತ್ತು ಆತಂಕವಾದಗಳು ರಾಷ್ಟ್ರದ ಅಭದ್ರತೆಗೆ ಹೇಗೆ ಕಾರಣವಾಗಿದೆಯೆಂದರೆ

ಇತ್ತೀಚಿನ ವರ್ಷಗಳಲ್ಲಿ ಈ ಉಗ್ರವಾದ ಮತ್ತು ಆತಂಕವಾದವು ಜನರಲ್ಲಿ ಭಯವನ್ನು ಹುಟ್ಟಿಹಾಕುತ್ತಿದೆ . ತಮ್ಮ ಗುರಿಗಳ ಅಥವಾ ಬೇಡಿಕೆಗಳ ಈಡೇರಿಕೆಗಾಗಿ ವ್ಯಕ್ತಿ ಅಥವಾ ಸಮೂಹವು ಹಿಂಸಾಚಾರ ಮಾರ್ಗವನ್ನು ಅನುಸರಿಸುವುದೇ ಆತಂಕವಾದ . ಇದು ಪ್ರಜಾಸತ್ತೆಯ ವಿರೋಧಿಯಾಗಿದೆ . ಆದರೆ ಇಂತಹ ಆತಂಕವಾದಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ನಿರಪರಾಧಿಗಳನ್ನು ಹಿಂಸಾತ್ಮಕವಾಗಿ ಮತ್ತು ಅಪಾಯಕಾರಿ ಮಾರ್ಗಗಳ ಬಳಕೆಯಿಂದ ಶೋಷಿಸುತ್ತಾರೆ . ಇದು ರಾಷ್ಟ್ರದ ಅಭದ್ರತೆಗೆ ಕಾರಣವಾಗುತ್ತಿದೆ . ಜನರು ಸರ್ಕಾರದ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ . ಭಾರತವು ಸ್ವಾತಂತ್ರೋತ್ತರ ಕಾಲದಿಂದಲೂ ಉಗ್ರವಾದದ ಸಮಸ್ಯೆಯನ್ನು ಎದುರಿಸುತ್ತಿದೆ . ನಾಗಾಲ್ಯಾಂಡ್ ( 1951 ) , ಮಿರೋರಾಂ ( 1976 ) , ತ್ರಿಪುರಾ ( 1980 ) , ಪಶ್ಚಿಮ ಬಂಗಾಳದಲ್ಲಿ ಗೋರ್ಖಾಲ್ಯಾಂಡ್ ( 1986 ) ಇವೆಲ್ಲಾ ಭಾರತವು ಎದುರಿಸಿದ ಕೆಲ ಸಮಸ್ಯೆಗಳಾಗಿವೆ . ಭಾರತವು ಕಂಡು ಬರುವ ಉಗ್ರವಾದವು ರಾಜಕೀಯ ಪ್ರೇರಿತವಾದುದಾಗಿದೆ .

ಪ್ರೊ . ರಾಮ್ ಅಹುಜಾ ಅವರ ಪ್ರಕಾರ ಭಾರತದಲ್ಲಿ ಕಂಡು ಬರುವ ಉಗ್ರವಾದವು ನಾಲ್ಕು ಪ್ರಕಾರದ್ದಾಗಿದೆ . ಅವುಗಳು ( i ) ಪಂಜಾಬಿನಲ್ಲಿ ಖಾಲಿಸ್ಥಾನ್ ಮೂಲದ ಉಗ್ರವಾದ ( ii ) ಕಾಶ್ಮೀರದ ಉಗ್ರವಾದಿಗಳ ಆತಂಕವಾದ ( iii ) ಪಶ್ಚಿಮ ಬಂಗಾಳ , ಬಿಹಾರ್ , ಮಧ್ಯಪ್ರದೇಶ , ಒರಿಸ್ಸಾ , ಆಂಧ್ರಪ್ರದೇಶ ಮುಂತಾದೆಡೆಗಳಲ್ಲಿ ಕಂಡು ಬರುವ ನಕ್ಸಲ್ ಉಗ್ರವಾದ ( iv ) ಅಸ್ಸಾಮಿನಲ್ಲಿ ಕಂಡು ಬರುವ ಉಲ್ಟಾ ಉಗ್ರವಾದ . ಖಲಿಸ್ಥಾನ್ ಮೂಲದ ಸಿಖ್ ಉಗ್ರವಾದವು ಧಾರ್ಮಿಕ ಸ್ವರಾಷ್ಟ್ರದ ಕನಸನ್ನು ಆಧರಿಸಿತ್ತು . ಕಾಶ್ಮೀರದ ಉಗ್ರವಾದಿಗಳು ತಮ್ಮದೇ ಆದ ಅನನ್ಯತೆಗಾಗಿ ಹೋರಾಟ ನಡೆಸಿದ್ದಾರೆ . ನಕ್ಸಲೈಟ್ ಉಗ್ರವಾದವು ವರ್ಗ ವೈರತ್ವವನ್ನು ಆಧರಿಸಿದೆ . ಈಶಾನ್ಯ ರಾಜ್ಯಗಳಲ್ಲಿ ಕಂಡುಬರುವ ಉಗ್ರವಾದವು ಅನನ್ಯತೆಯ ಸಮಸ್ಯೆ ಮತ್ತು ಅಸಮಾಧಾನಗಳ ಫಲಶ್ರುತಿಯಾಗಿದೆ . ಇಷ್ಟೇ ಅಲ್ಲದೆ ಭ್ರಷ್ಟಾಚಾರ , ಬಡತನ , ನಿರುದ್ಯೋಗ , ಯುವ ಅಶಾಂತಿ , ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಮುಂತಾದ ಅಂಶಗಳೂ ಕೂಡ ರಾಷ್ಟ್ರೀಯ ಐಕ್ಯತೆಗೆ ಸವಾಲನ್ನೊಡ್ಡುವ ಅಂಶಗಳಾಗಿವೆ . ಆತಂಕವಾದವು ಉಗ್ರವಾದದ ಇನ್ನೊಂದು ರೂಪ ಎನ್ನಬಹುದು . ಇತ್ತೀಚೆಗೆ ಇವು ಹೆಚ್ಚುತ್ತಾ ಬಂದಿದೆ . ಭಾರತದಲ್ಲಿ ಸುಮಾರು 13 ರಾಜ್ಯಗಳಿಗೆ ವ್ಯಾಪಿಸಿದೆ . 2004 ರಿಂದ ಕರ್ನಾಟಕಕ್ಕೂ ಕಾಲಿಟ್ಟಿದೆ . ಇದಕ್ಕೆ ಉದಾಹರಣೆ ತುಮಕೂರಿನ ಪಾವಗಡದ ಒಂದು ಹಳ್ಳಿಯ ಪೋಲೀಸ್ ಸ್ಟೇಷನ್ ಮೇಲೆ ಧಾಳಿ ನಡೆಸಿ ಪೋಲೀಸರನ್ನು ಕೊಂದು ಹಾಕಿದ ಘಟನೆಯನ್ನು ಹೆಸರಿಸಬಹುದು . ಮುಂಬಯಿಯ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ಗಾಳಿ , ಹೀಗೆ ಹಲವಾರು ಕೃತ್ಯಗಳು ಜನರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತದೆ .

ಜನರಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ಎಂದಾದರೆ ರಾಷ್ಟ್ರದ ಅಭಿವೃದ್ಧಿ ಹೇಗೆ ಸಾಧ್ಯ ? ಈ ರೀತಿ ಉಗ್ರವಾದ ಮತ್ತು ಭಯೋತ್ಪಾದಕರ ಹಾವಳಿಯಿಂದರಾಷ್ಟ್ರದಲ್ಲಿ ಅಭದ್ರತೆ ಉಂಟಾಗುತ್ತದೆ . ಇದನ್ನು ತಡೆಗಟ್ಟುವುದು ಹಾಗೂ ನಿರ್ಮೂಲನ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ . ರಾಷ್ಟ್ರ ರಚನೆಯಲ್ಲಿ ಭಾವೈಕ್ಯತೆಯು ಒಂದು ಅತ್ಯಗತ್ಯ ಅಂಶವಾಗಿದೆ . ರಾಷ್ಟ್ರೀಯ ಭಾವನೆಯ ಪ್ರವರ್ತನೆಯು ಯಾವುದೇ ದೇಶದ ರಾಷ್ಟ್ರನೀತಿಯ ಭಾಗವಾಗಿದೆ . ವಿದ್ವಾಂಸರು ರಾಷ್ಟ್ರೀಯ ಭಾವೈಕ್ಯತೆಯನ್ನು ವಿಭಿನ್ನವಾಗಿ ವ್ಯಾಖ್ಯಾನಿಸಿದ್ದಾರೆ . ಅವುಗಳಲ್ಲಿ ಬೆಂಜಾಮಿನ್ ನೀಡಿದ ವ್ಯಾಖ್ಯೆಯು ಸಮಗ್ರವಾಗಿದೆ . ಬೆಂಜಾಮಿನ್‌ರವರ ಪ್ರಕಾರ ‘ ರಾಷ್ಟ್ರೀಯ ಭಾವೈಕ್ಯತೆಯು ದೇಶವೊಂದರ ಸಮಸ್ತ ಜನರು ಒಂದು ಸಾಮಾನ್ಯ ಅನನ್ಯತೆಯೊಂದಿಗೆ ಸ್ವಾಂಗೀಕರಣಗೊಳ್ಳುವಿಕೆಯಾಗಿದೆ . ದೇಶದ ಜನರಲ್ಲಿ ತಾವೆಲ್ಲಾ ಒಂದೇ ರಾಷ್ಟ್ರದವರು ಎಂಬ ಭಾವನೆಯನ್ನು ಮೂಡಿಸುವ ಪ್ರಕ್ರಿಯೆಯೇ ರಾಷ್ಟ್ರೀಯ ಭಾವ್ಯಕ್ಯತೆ .

ರಾಷ್ಟ್ರೀಯ ಭಾವೈಕ್ಯತೆಗೆ ಎದುರಾಗುವ ಸವಾಲುಗಳು ಹೀಗಿವೆ :

( 1 ) ಪ್ರಾಂತೀಯವಾದ

( ii ) ಕೋಮುವಾದ

( iii ) ಭಾಷಾವಾದ

( iv ) ಉಗ್ರವಾದ ಮತ್ತು ಆತಂಕವಾದ

( i ) ಪ್ರಾಂತೀಯತೆ ( Regionalism ) : ಭಾರತವು ಹಲವಾರು ಕ್ರಾಂತೀಯ ವ್ಯತ್ಯಾಸಗಳನ್ನೊಳಗೊಂಡ ದೇಶವಾಗಿದೆ . ಪ್ರಾಂತೀಯವಾದದಿಂದಾಗಿ ಒಂದು ಪ್ರಾಂತದ ಜನರು ಇತರ ಪ್ರಾಂತದ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತೆ ಕೇವಲ ತಮ್ಮ ಪ್ರಾಂತದ ಹಿತಾಸಕ್ತಿಗಳಿಗೆ ಮಾತ್ರ ಆದ್ಯತೆ ಕೊಡುವಂತಾಗಿದೆ . ಪ್ರಾಂತೀಯವಾದವು ಪ್ರತ್ಯೇಕತಾವಾದಕ್ಕೆಡೆ ಮಾಡಿಕೊಡುತ್ತಿದೆಯಲ್ಲದೆ , ಪ್ರತ್ಯೇಕತೆಯ ಚಳುವಳಿಗಳು ಮತ್ತು ಹಿಂಸಾತ್ಮಕ ಚಳುವಳಿಗೆ ಕಾರಣವಾಗಿವೆ . ಸ್ವಾರ್ಥ ರಾಜಕಾರಣಿಗಳಿಂದಾಗಿ ಪ್ರಾಂತೀಯವಾದಕ್ಕೆ ಹೆಚ್ಚು ಬೆಂಬಲ ದೊರೆಯುತ್ತಿದೆ . ಹೀಗಾಗಿ ಪ್ರಾಂತೀಯತೆಯು ರಾಷ್ಟ್ರೀಯ ಹಿತಾಸಕ್ತಿಗಳ ಪ್ರಾಧಾನ್ಯತೆಗೆ ಸವಾಲನ್ನೊಡ್ಡಿದೆ ಮತ್ತು ರಾಷ್ಟ್ರೀಯ ಭಾವಕ್ಯತೆಗೆ ಅಡ್ಡಿಯಾಗಿದೆ . ಪ್ರಾಂತೀಯವಾದವು ನಾಲ್ಕು ರೂಪಗಳಲ್ಲಿ ಕಂಡು ಬರುತ್ತದೆ .

( ii ) ಕೋಮುವಾದ ( Communalism ) : ಒಂದು ಕೋಮು ಅಥವಾ ಧರ್ಮಕ್ಕೆ ಸೇರಿದ ಜನರು ಇನ್ನೊಂದು ಕೋಮು ಅಥವಾ ಧರ್ಮಕ್ಕೆ ಸೇರಿದ ಜನರ ವಿರುದ್ಧ ಹೊಂದಿರುವ ದ್ವೇಷಪೂರಿತ ಭಾವನೆಗಳನ್ನು ಕೋಮುವಾದ ಎನ್ನಬಹುದು . ಬಿಪಿನ್ ಚಂದ್ರ ಅವರು ಹೇಳುವಂತೆ ಕೋಮುವಾದವು ನಿರ್ದಿಷ್ಟ ಸಮಾಜ , ಅರ್ಥವ್ಯವಸ್ಥೆ ಮತ್ತು ರಾಜ್ಯಾಡಳಿತದ ಉತ್ಪನ್ನವಾಗಿದ್ದು ಸಮಸ್ಯೆಗಳನ್ನು ಸೃಷ್ಟಿಸುತ್ತದೆ . ಅಸ್ಟರ್ ಅಲಿ ಎಂಜನೀಯರ್ ಮೊಯಿನ್ ಶಕೀರ್ ಮತ್ತು ಅಬ್ದುಲ್ ಅಹಮದ್ ಅವರು ಕೋಮುವಾದವು ಆರ್ಥಿಕ ಮತ್ತು ರಾಜಕೀಯ ಆಸಕ್ತಿಗಳನ್ನು ಪ್ರವರ್ತಿಸಲು ಬಳಸುವ ಉಪಕರಣವಾಗಿದೆ ಎಂದು ವಿವರಿಸಿದ್ದಾರೆ .

( iii ) ಭಾಷಾವಾದ ( Lingusim ) : ಭಾಷಾವಾದವು ತಮ್ಮ ವಿಶೇಷ ಒಲವು , ಭಾಷೆಯನ್ನು ಕುರಿತು ಗೌರವಾಭಿಮಾನಗಳನ್ನು ಹೊಂದಿರುವುದು ಮತ್ತು ಇತರರ ಭಾಷೆಗಳನ್ನು ಕುರಿತು ಪೂರ್ವಾಗ್ರಹ ಮತ್ತು ದ್ವೇಷಭಾವನೆ ಹೊಂದಿರುವುದನ್ನು ಸೂಚಿಸುತ್ತದೆ . ಭಾರತವು ಹಲವಾರು ಭಾಷೆಗಳನ್ನು ಹೊಂದಿದ್ದು ‘ ಭಾಷೆಗಳ ಸಂಗ್ರಹಾಲಯ ‘ ಎಂದು ಕರೆಯಲ್ಪಟ್ಟಿದೆ . ಭಾಷಾ ವೈವಿಧ್ಯತೆಯು ಭಾಷಾವಾದಕ್ಕೂ ಕಾರಣವಾಗಿದೆ . ರಾಜ್ಯಗಳ ಗಡಿ ಪ್ರದೇಶಗಳಲ್ಲಿ ದ್ವಿಭಾಷೆಗಳು ಕಂಡು ಬರುವುದರಿಂದ ಇಲ್ಲಿ ಭಾಷಾ ಸಂಬಂಧಿತ ಉದ್ವೇಗಗಳು ಹೆಚ್ಚಾಗಿ ಕಂಡುಬರುತ್ತವೆ . ಇದು ರಾಷ್ಟ್ರೀಯ ಭಾವೈಕ್ಯತೆಗೆ ಸವಾಲಾಗಿದೆ .

( iv ) ಉಗ್ರವಾದ ಮತ್ತು ಆತಂಕವಾದ ( Extremism and Terrorsim ) : ಇತ್ತೀಚಿನ ವರ್ಷಗಳಲ್ಲಿ ತೀವ್ರವಾದ ಮತ್ತು ಆತಂಕವಾದಗಳು ರಾಷ್ಟ್ರೀಯ ಭಾವೈಕ್ಯತೆಗೆ ಬಲವಾದ ಸವಾಲಾಗಿ ನಿಂತಿದೆ . ತೀವ್ರವಾದವು ತನ್ನ ಗುರಿಗಳ ಈಡೇರಿಕೆಗಾಗಿ ಯಾವ ಮಟ್ಟದಲ್ಲಾದರೂ ಹಿಂಸಾತ್ಮಕ ಚಳುವಳಿಯನ್ನು ಮಾಡುತ್ತಾರೆ . ಇದರಿಂದ ಆಗುವ ಪ್ರಾಣ ಹಾನಿ , ಆಸ್ತಿಪಾಸ್ತಿಗಳ ಅರಿವೇ ಅವರಿಗಿರುವುದಿಲ್ಲ . ಇಂತಹ ಘಟನೆಗಳಿಂದ ಜನರು ಭಯಭೀತರಾಗುತ್ತಾರೆ . ಇಂತರ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹೇಗೆ ಸಾಧ್ಯವಾಗುವುದು . ಸರ್ಕಾರಕ್ಕೂ , ಜನಕ್ಕೂ ಇವರು ದುಃಸ್ವಪ್ನವಾಗಿದ್ದಾರೆ . ಎಲ್ಲಾ ರೀತಿಯ ಸವಾಲುಗಳಲ್ಲಿ ಇದು ಅತ್ಯಂತ ಕ್ರೂರವಾದ , ಅಮಾನವೀಯ ಕೃತ್ಯ . ಇದನ್ನು ಹೇಗಾದರೂ ಸರಿ ನಿವಾರಿಸಲೇಬೇಕಾದ ಅನಿವಾರತೆಯಿದೆ . ಇದು ನಿಜಕ್ಕೂ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಲು ಇರುವ ಅತ್ಯಂತ ದೊಡ್ಡ ಸವಾಲು . ಇದರ ನಿರ್ಮೂಲನದಿಂದ ಮಾತ್ರ ಶಾಂತಿಯುತ , ನೆಮ್ಮದಿಯ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಬಹುದು .

FAQ

1. ಏಕತೆ ಎಂದರೇನು ?

ಏಕತೆ ಎಂದರೆ ಐಕ್ಯತೆ , ನಾವೆಲ್ಲಾ ಒಂದು ಭಾವನೆಯನ್ನು ಸೂಚಿಸುತ್ತದೆ . ವಿವಿಧತೆಯಲ್ಲೂ ನಾವೆಲ್ಲಾ ಒಂದೇ ಎಂಬ ಭಾವನೆಯೇ ಏಕತೆ .

2. ರಾಷ್ಟ್ರೀಯ ಭಾವೈಕ್ಯತೆ ಎಂದರೇನು ?

ರಾಷ್ಟ್ರೀಯ ಭಾವೈಕ್ಯತೆಯು ರಾಷ್ಟ್ರದ ಏಕತೆ ಮತ್ತು ಜನರಲ್ಲಿ ತಾವು ಈ ರಾಷ್ಟ್ರಕ್ಕೆ ಸೇರಿದವರೆಂಬ ಭಾವನೆಯನ್ನು ಸೂಚಿಸುತ್ತದೆ .

ಇತರೆ ವಿಷಯಗಳು :

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್‌

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

1 thoughts on “ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಭಾರತೀಯ ಸಮಾಜದ ನಿರ್ಮಾಣ ನೋಟ್ಸ್‌ | 2nd Puc Sociology 1st Chapter Notes in Kannada

Leave a Reply

Your email address will not be published. Required fields are marked *

rtgh