ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-5 ಸಾಮಾಜಿಕ ಸಂಸ್ಥೆಗಳು ನೋಟ್ಸ್‌ | 1st Puc Sociology Chapter 5 Notes Question Answer

ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-5 ಸಾಮಾಜಿಕ ಸಂಸ್ಥೆಗಳು ನೋಟ್ಸ್‌, 1st Puc Sociology Chapter 5 Notes Question Answer Mcq Pdf in Kannada Medium, Kseeb Solution For Class 11 Sociology Chapter 5 Notes 1st Puc Sociology Chapter 5 Question Answer Social Institutions Notes

 

ಸಮಾಜಶಾಸ್ತ್ರ ಅಧ್ಯಾಯ-5 ಸಾಮಾಜಿಕ ಸಂಸ್ಥೆಗಳು

samajika samsthegalu notes in kannada

1st Puc Sociology 5th Chapter Notes in Kannada

ಒಂದು ಅಂಕದ ಪ್ರಶ್ನೆಗಳು ( ಒಂದು ವಾಕ್ಯದಲ್ಲಿ ಉತ್ತರಿಸಿ )

1 ) ವಿವಾಹ ಎಂದರೇನು ?

ಅನುಮತಿ ನೀಡಬಹುದಾದ ಸಂಗಾತಿಗಳ ನಡುವೆ ಶಾಶ್ವತವಾದ ಬಂಧನವೇ “ ವಿವಾಹ ” .

2 ) ವಿವಾಹದ ಯಾವುದಾದರೂ ಒಂದು ಕಾರ್ಯವನ್ನು ತಿಳಿಸಿ .

ಸಾಮಾಜಿಕ ಐಕ್ಯತೆಯನ್ನು ತರುವುದು ವಿವಾಹದ ಕಾರ್ಯಗಳಲ್ಲಿ ಒಂದಾಗಿದೆ .

3 ) ಕುಟುಂಬವನ್ನು ವ್ಯಾಖ್ಯಾನಿಸಿ .

ಕುಟುಂಬವು ಪುರುಷ ಮತ್ತು ಸ್ತ್ರೀ ಪತಿಪತ್ನಿಯೆಂದು ಸಾಮಾಜಿಕ ಮನ್ನಣೆ ಪಡೆದುಕೊಂಡು ತಮ್ಮ ಮಕ್ಕಳೊಡನೆ ಜೀವಿಸುವ ಸಮೂಹವಾಗಿದೆ

4 ) ಕುಟುಂಬದ ಒಂದು ಪ್ರಾಥಮಿಕ ಕಾರ್ಯವನ್ನು ತಿಳಿಸಿ .

‘ ಭಾವನಾತ್ಮಕ ಬೆಂಬಲ’ವು ಕುಟುಂಬದ ಪ್ರಾಥಮಿಕ ಕಾರ್ಯಗಳಲ್ಲಿ ಒಂದಾಗಿದೆ .

5 ) “ The History of Human Marriage ” ಎಂಬ ಗ್ರಂಥದ ಕರ್ತೃಯಾರು ?

“ The History of Human Marriage ” ಎಂಬ ಗ್ರಂಥದ ಕರ್ತೃ “ ಎಡ್ವಡ್ ವೆಸ್ಟರ್ ಮಾರ್ಕ್ ” .

6 ) ವಿವಾಹಕ್ಕೆ ಒಂದು ವ್ಯಾಖ್ಯೆಯನ್ನು ಬರೆಯಿರಿ .

“ ಎಡ್ವರ್ಡ ವೆಸ್ಟರ್ ಮಾರ್ಕ್ರ ಅಭಿಪ್ರಾಯದಂತೆ ವಿವಾಹವು ಸಂತತಿಯ ಜನನದ ನಂತರವೂ ಮುಂದುವರೆಯುವ ಗಂಡು ಹೆಣ್ಣಿನ ಧೀರ್ಘಕಾಲದ ಸಂಬಂಧ ಎಂದು ವ್ಯಾಖ್ಯಾನಿಸಿದ್ದಾರೆ .

7 ) ಏಕ ಪತ್ನಿತ್ವ ಎಂದರೇನು ?

ಒಬ್ಬ ಪುರುಷ ತನ್ನ ಜೀವಿತಾವಧಿಯಲ್ಲಿ ಒಬ್ಬಳೇ ಪತ್ನಿಯನ್ನು ಜೀವನ ಸಂಗಾತಿಯಾಗಿ ಹೊಂದಿರುವುದನ್ನು ಏಕ ಪತ್ನಿತ್ವ ಎನ್ನುವರು .

8 ) ಬಹು ಪತ್ನಿತ್ವ ಎಂದರೇನು ?

ಒಬ್ಬ ಪುರುಷ ಇಬ್ಬರು ಅಥವಾ ಹಲವಾರು ಸ್ತ್ರೀಯರನ್ನು ವಿವಾಹವಾಗುವ ಪದ್ಧತಿಯನ್ನು “ ಬಹುಪತ್ನಿತ್ವ ” ಎಂದು ಕರೆಯುವರು .

9 ) ಭಗೀನಿ ಬಹುಪತ್ನಿತ್ವ ಎಂದರೇನು ?

ಸಮಾಜದಲ್ಲಿ ಒಬ್ಬ ಪುರುಷ ತನ್ನ ಪತ್ನಿಯ ಸೋದರಿಯನ್ನು ವಿವಾಹವಾಗಲು ಸಮ್ಮತಿಸಲಾಗಿದ್ದು , ಅಂತಹ ವಿವಾಹವನ್ನು ಭಗೀನಿ ಬಹುಪತ್ನಿತ್ವ ಎಂದು ಕರೆಯಲಾಗಿದೆ .

10 ) ಭಗೀನೇತರ ಬಹುಪತ್ನಿತ್ವ ಎಂದರೇನು ?

ಕೆಲವೊಮ್ಮೆ ಪುರುಷರು ಎರಡು ಅಥವಾ ಹೆಚ್ಚಿನ ಸ್ತ್ರೀಯರನ್ನು ವಿವಾಹವಾಗುತ್ತಾರೆ . ಆದರೆ ಇವೆಲ್ಲಾ ಪತ್ನಿಯರು ಸೋದರಿ ಸಂಬಂಧಗಳನ್ನು ಹೊಂದಿರುವುದಿಲ್ಲ , ಇಂತಹ ಪತ್ನಿಗಳು ವಿವಿಧ ಕೌಟುಂಬಿಕ , ಪ್ರಾದೇಶಿಕ , ಸಾಂಸ್ಕೃತಿಕ ಮತ್ತು ಇನ್ನಿತರ ಹಿನ್ನಲೆಯನ್ನು ಹೊಂದಿರುತ್ತಾರೆ . ಈ ರೀತಿಯ ವಿವಾಹವನ್ನು “ ಭಗಿನೇತರ ಬಹುಪತ್ನಿ ವಿವಾಹ ಎಂದು ಪರಿಗಣಿಸಲಾಗಿದೆ .

11 ) ಸೋದರ ಬಹುಪತ್ನಿತ್ವ ಎಂದರೇನು ?

ಸಮಾಜದಲ್ಲಿ ಸಹೋದರರು ಸಾಮೂಹಿಕವಾಗಿ ಒಬ್ಬಳೇ ಸ್ತ್ರೀಯನ್ನು ವಿವಾಹವಾಗುವುದನ್ನು ಸೋದರ ಬಹುಪತ್ನಿತ್ವ ಎಂದು ಕರೆಯುವರು .

12 ) ಸೋದರೇತರ ಬಹುಪತ್ನಿತ್ವ ಎಂದರೇನು ?

ಸ್ತ್ರೀ ಒಬ್ಬ ಸ್ತ್ರೀ ಹಲವಾರು ಪತಿಗಳೊಂದಿಗೆ ಸಂಬಂಧ ಹೊಂದಿದ್ದು ಅವರ ಸೋದರ ಸಂಬಂಧ ಹೊಂದಿರುವುದಿಲ್ಲ ಈ ಎಲ್ಲಾ ಪತಿಯರು ವಿಭಿನ್ನ ಕೌಟುಂಬಿಕ , ಸಾಂಸ್ಕೃತಿಕ , ಪ್ರಾದೇಶಿಕ ಹಿನ್ನಲೆಯನ್ನು ಹೊಂದಿರುತ್ತಾರೆ . ಈ ಪದ್ಧತಿಯನ್ನು ಸೋದರೇತರ ಬಹುಪತ್ನಿತ್ವ ಎನ್ನುವರು .

13 ) ‘ ಫ್ಯಾಮಿಲಿ ‘ ಎಂಬ ಪದದ ನಿಷ್ಪತ್ತಿಯನ್ನು ಬರೆಯಿರಿ .

ಕುಟುಂಬ ಪದದ ಇಂಗ್ಲೀಷ್‌ಪದ ಫ್ಯಾಮಿಲಿ ಆಗಿದೆ ಈ ಪದವೂ ಲ್ಯಾಟಿನ್ ಭಾಷೆಯ ಫಾಮುಲಸ್‌ಯಿಂದ ಬಂದಿದೆ , ಇದರ ಅರ್ಥ ಸೇವಕ ಅಥವಾ ಆಳು ಅಂದಿನ ಪ್ರಾಚೀನ ರೋಮನ್ ಕಾನೂನಿನಲ್ಲಿ ( ಫ್ಯಾಮಿಲಿ ) ಫಾಮುಲಸ್ ಎಂಬ ಪರಿಕಲ್ಪನೆ , ಉತ್ಪಾದಕರ ಸಮೂಹಗಳು , ಗುಲಾಮರು ಮತ್ತು ಇನ್ನಿತರ ಸೇವಕರನ್ನು ಒಳಗೊಂಡಿರುವ ಸಂಕಲನವಾಗಿದ್ದು ಇವೆಲ್ಲಾ ಸದಸ್ಯರು ಒಂದೇ ಪೀಳಿಗೆ ಅಥವಾ ವೈವಾಹಿಕ ಸಂಬಂಧವಾಗಿತ್ತು . ವಾಸ್ತವಿಕವಾಗಿ ಕುಟುಂಬವೆಂದು ಪುರುಷ ಮತ್ತು ಸ್ತ್ರೀಯರು ಪತಿ ಮತ್ತು ಪತ್ನಿಯೆಂದು ಸಾಮಾಜಿಕ ಮನ್ನಣೆ ಪಡೆದುಕೊಂಡು ತಮ್ಮ ಮಕ್ಕಳೊಡನೆ ಜೀವಿಸುವ ಸಮೂಹವಾಗಿದೆ .

14 ) ಕುಟುಂಬದ ಒಂದು ವ್ಯಾಖ್ಯೆಯನ್ನು ಬರೆಯಿರಿ .

ಆಗ್‌ಬರ್ನ್ ಮತ್ತು ನಿಮ್‌ಕಾಫ್‌ರವರು ಕುಟುಂಬವು ಸಾಮಾನ್ಯವಾಗಿ ಸಂತತಿ ರಹಿತ ಅಥವಾ ಸಂತತಿ ಸಹಿತ ಗಂಡ – ಹೆಂಡತಿ ಧೀರ್ಘ ಕಾಲ ಜೀವನ ಮಾಡುವ ಒಂದು ಸಮೂಹ ಎಂದು ವಿವರಿಸಿದ್ದಾರೆ .

15 ) ಅಣು ಕುಟುಂಬ ಎಂದರೇನು ?

ಸೀಮಿತ ಸದಸ್ಯತ್ವವನ್ನು ಹೊಂದಿರುವ ತೀರಾ ಚಿಕ್ಕ ಸಮೂಹಕ್ಕೆ ಅಣು ಕುಟುಂಬ ‘ ಎನ್ನುವರು . ಈ ಸಮೂಹವು ತಂದೆ – ತಾಯಿ ಹಾಗೂ ಒಂದು ಅಥವಾ ಎರಡು ಮಕ್ಕಳಿಂದ ಕೂಡಿರುತ್ತದೆ .

16 ) ಅವಿಭಕ್ತ ಕುಟುಂಬ ಎಂದರೇನು ?

ಅವಿಭಕ್ತ ಕುಟುಂಬದಲ್ಲಿ ತಂದೆ – ತಾಯಿ ಹಾಗೂ ಆ ತಂದೆಯ ತಂದೆ – ತಾಯಿ , ತಂದೆಯ ಅಣ್ಣ – ತಮ್ಮಂದಿರು , ಅವರ ಪತ್ನಿ ಹಾಗೂ ಅವರೆಲ್ಲರ ಮಕ್ಕಳು ಹೀಗೆ ಅವಿಭಕ್ತ ಕುಟುಂಬದಲ್ಲಿ ಹಲವಾರು ಅಣು ಕುಟುಂಬಗಳು ಒಳಗೊಂಡಿರುತ್ತದೆ .

17 ) Education ಎಂಬ ಪದದ ಅರ್ಥವೇನು ?

“ ಎಜುಕೇಷನ್ ” ಎಂಬ ಪದವೂ ಲ್ಯಾಟಿನ್ ಭಾಷೆಯ “ ಎಜುಕೇರ್ ” ನಿಂದ ಉತ್ಪತ್ತಿಯಾಗಿದ್ದು ಅದರ ಮೂಲ ಅರ್ಥ ಬೆಳೆಸು , ಮೇಲೆತ್ತು ಎಂಬುದನ್ನು ಸೂಚಿಸುತ್ತದೆ .

18 ) ಧರ್ಮದ ಒಂದು ವ್ಯಾಖ್ಯೆಯನ್ನು ನೀಡಿರಿ .

ಜೇಮ್ಸ್ ಜಿ . ಫೇಜರ್‌ರವರ ಪ್ರಕಾರ – ಮಾನವನಿಗಿಂತಲೂ ಶ್ರೇಷ್ಠವಾದ ಶಕ್ತಿಯು ನಿಸರ್ಗದ ಮತ್ತು ಮಾನವ ಜೀವನದ ಆಗು ಹೋಗುಗಳನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ನಂಬಿಕೆಯೇ ಧರ್ಮವಾಗಿದೆ .

19 ) ಶಿಕ್ಷಣ ಎಂದರೇನು ?

ಮಕ್ಕಳಿಗೆ ಸಮುದಾಯದ ನೀತಿ – ನಿಯಮಗಳನ್ನು ವರ್ಗಾಯಿಸುವ ಕ್ರಿಯೆ ಹಾಗೂ ಸರಿ – ತಪ್ಪುಗಳನ್ನು ಗ್ರಹಿಸುವ ಪ್ರಕ್ರಿಯೆಯೇ ಶಿಕ್ಷಣವಾಗಿದೆ .

20 ) ಶಿಕ್ಷಣದ ಒಂದು ಕಾರ್ಯವನ್ನು ತಿಳಿಸಿ .

ಸಂರಕ್ಷಣಾತ್ಮಕ ಕಾರ್ಯಗಳು ಶಿಕ್ಷಣದ ಕಾರ್ಯಗಳಲ್ಲಿ ಒಂದಾಗಿದೆ .

21 ) ಶಿಕ್ಷಣದ ಒಂದು ಪ್ರಕಾರವನ್ನು ತಿಳಿಸಿ .

ಔಪಚಾರಿಕ ಶಿಕ್ಷಣವು , ಶಿಕ್ಷಣದ ಒಂದು ಪ್ರಕಾರವಾಗಿದೆ .

22 ) ಔಪಚಾರಿಕ ಶಿಕ್ಷಣ ಎಂದರೇನು ?

ಪೂರ್ವಯೋಜಿತ , ಉದ್ದೇಶಪೂರ್ವಕ ಮತ್ತು ಸ್ಥಾಪಿತ ನಿಯಮಗಳಿಂದ ವ್ಯವಸ್ಥತಿತವಾಗಿರುವ ಶಿಕ್ಷಣವ್ಯವಸ್ಥೆಯನ್ನು ಔಪಚಾರಿಕ ಶಿಕ್ಷಣ ಎನ್ನುವರು .

23 ) ಅನೌಪಚಾರಿಕ ಶಿಕ್ಷಣ ಎಂದರೇನು ?

ಅನಿಶ್ಚಿತ , ಉದ್ದೇಶಪೂರ್ವಕವಲ್ಲದ , ನಿರಂತರವಾಗಿ , ಸಮವಯಸ್ಕರ ಸಮೂಹ , ದುಡಿಮೆಯ ಜಾಗ ಮುಂತಾದ ಕಡೆ ಹಲವಾರು ವಿಷಯ ಕಲಿಯುವ ಪ್ರಕ್ರಿಯೆಗೆ ಅನೌಪಚಾರಿಕ ಶಿಕ್ಷಣ ” ಎನ್ನುವರು .

24 ) ಅನೌಪಚಾರಿಕ ಶಿಕ್ಷಣದ ಒಂದು ನಿಯೋಗಿಯನ್ನು ತಿಳಿಸಿ .

‘ ಕುಟುಂಬ ‘ ಅನೌಪಚಾರಿಕ ಶಿಕ್ಷಣದ ಒಂದು ನಿಯೋಗಿಯಾಗಿದೆ .

25 ) ಎಮಿಲಿ ಡರ್ಖಿಂರವರ ಶಿಕ್ಷಣದ ವ್ಯಾಖ್ಯೆಯನ್ನು ಬರೆಯಿರಿ .

“ ಎಮಿಲಿ ಡರ್ಖಿಂ ” ರವರ ಪ್ರಕಾರ ಯುವ ಪೀಳಿಗೆಯನ್ನು ಸಾಮಾಜೀಕರಣ ಗೊಳಿಸುವ ನಿರಂತರ ಪ್ರಕ್ರಿಯೆಯಾಗಿ ಆಲೋಚನೆ , ಭಾವನೆ ಮತ್ತು ಕ್ರಿಯೆಯನ್ನು ಬೆಳೆಸುವುದೇ ಶಿಕ್ಷಣವಾಗಿದೆ .

26 ) ಔಪಚಾರಿಕ ಶಿಕ್ಷಣದ ಒಂದು ನಿಯೋಗಿಯನ್ನು ತಿಳಿಸಿ .

ಔಪಚಾರಿಕ ಶಿಕ್ಷಣದ ಒಂದು ನಿಯೋಗಿ ಎಂದರೆ ಶಾಲೆ .

1st Puc Sociology samajika samsthegalu Notes Question Answer Pdf in Kannada

II . ಎರಡು ಅಂಕದ ಪ್ರಶ್ನೆಗಳು ( 2-3 ವಾಕ್ಯಗಳಲ್ಲಿ ಉತ್ತರಿಸಿ )

1 ) ವಿವಾಹ ಎಂದರೇನು ? ಯಾವುದಾದರೂ ಒಂದು ವ್ಯಾಖ್ಯಾನ ನೀಡಿ .

‘ ರಾಬರ್ಟ್ ಹೆಚ್ . ಲೂಹಿ ‘ ಯವರು “ ಅನುಮತಿ ನೀಡಬಹುದಾದ ಸಂಗಾತಿಗಳ ನಡುವೆ ಶಾಶ್ವತವಾದ ಬಂಧನವೇ ವಿವಾಹ ” ಎಂದಿದ್ದಾರೆ .

2 ) ವಿವಾಹದ ಯಾವುದಾದರೂ ಒಂದು ಗುಣಲಕ್ಷಣವನ್ನು ವಿವರಿಸಿ .

ವಿವಾಹದ ಒಂದು ಗುಣಲಕ್ಷಣಗಳೆಂದರೆ “ ಸ್ತ್ರೀ ಮತ್ತು ಪುರುಷರ ನಡುವಿನ ಸಂಯೋಗ ” ಒಬ್ಬ ವ್ಯಕ್ತಿ , ಒಬ್ಬ ಸ್ತ್ರೀ ಅಥವಾ ಅನೇಕ ಸ್ತ್ರೀಯರೊಂದಿಗೆ ವಿವಾಹವಾಗುವ ಮುಖಾಂತರ ಶಾಶ್ವತ ಸಂಬಂಧವನ್ನು ಏರ್ಪಡಿಸಿಕೊಂಡಿರುವುದನ್ನು ಕಾಣಬಹುದು ಮತ್ತು ಇವರ ವೈವಾಹಿಕ ಜೀವನವು ಸುದೀರ್ಘದವರೆಗೆ ಬಾಳಿಕೆ ಬರುವಂತಹುದಾಗಿದ್ದು ಅವರ ನಡುವಿನ ಐಹಿಕ ಜೀವನಕ್ಕೆ ಅನುವು ಮಾಡಿಕೊಡುವುದೇ ವಿವಾಹ ಸಂಸ್ಕಾರವಾಗಿದೆ .

3 ) ವಿವಾಹದ ಯಾವುದಾದರೂ ಎರಡು ಕಾರ್ಯಗಳನ್ನು ಪಟ್ಟಿ ಮಾಡಿ .

ವಿವಾಹದ ಎರಡು ಕಾರ್ಯಗಳೆಂದರೆ

ವಿವಾಹ ಕುಟುಂಬ ಸಂರಚನೆಗೆ ವೇದಿಕೆ ನಿರ್ಮಾಣ ಮಾಡುತ್ತದೆ .

ಆರ್ಥಿಕ ಸಹಕಾರಕ್ಕೆ ಅವಕಾಶ ಕಲ್ಪಿಸುತ್ತದೆ .

4 ) ವಿವಾಹ ಎಂದರೇನು ? ಅದರ ಪ್ರಕಾರಗಳನ್ನು ಹೆಸರಿಸಿ .

ಸಂತತಿಯ ಜನನದ ನಂತರವು ಮುಂದುವರೆಯುವ ಗಂಡು – ಹೆಣ್ಣಿನ ಧೀರ್ಘಕಾಲದ ಸಂಬಂಧವೇ “ ವಿವಾಹ ” ಎನ್ನುವರು .

1 ) ಏಕ ಸಂಗಾತಿ ವಿವಾಹ

2 ) ಬಹು ಸಂಗಾತಿ ವಿವಾಹ

3 ) ಬಹು ಪತ್ನಿತ್ವ

4 ) ಬಹು ಪತಿತ್ವ

5 ) ಭಗೀನಿ ಬಹು ಪತ್ನಿತ್ವ

6 ) ಭಗೀನೇತರ ಬಹುಪತ್ನಿ ವಿವಾಹ

7 ) ಸೋದರ ಪತಿತ್ವ

8 ) ಸೋದರೇತರೇತರ ಪತಿತ್ವ

5 ) ಬಹು ಪತಿತ್ವ ಎಂದರೇನು ? ಅದರ ಪ್ರಕಾರಗಳು ಯಾವುವು ?

ಒಬ್ಬ ಸ್ತ್ರೀ ಇಬ್ಬರು ಅಥವಾ ಹಲವಾರು ಪುರುಷರನ್ನು ವಿವಾಹವಾಗುವ ಪದ್ಧತಿಯಾಗಿದೆ , ಇದರ ಪ್ರಕಾರಗಳೆಂದರೆ . 1 . ಸೋದರ ಬಹುಪತಿತ್ವ 2. ಸೋದರೇತರ ಬಹು ಪತಿತ್ವ

6 ) ಬಹು ಪತ್ನಿತ್ವ ಎಂದರೇನು ? ಅದರ ಪ್ರಕಾರಗಳನ್ನು ತಿಳಿಸಿ .

ಒಬ್ಬ ಪುರುಷ ಎರಡು ಅಥವಾ ಹಲವಾರು ಸ್ತ್ರೀಯರನ್ನು ವಿವಾಹವಾಗುವ ಪದ್ಧತಿಗೆ “ ಬಹು ಪತ್ನಿತ್ವ ” ಎನ್ನುವರು . ಅದರ ಪ್ರಕಾರಗಳೆಂದರೆ – 1. ಭಗೀನಿ ಬಹುಪತ್ನಿತ್ವ 2. ಭಗೀನೇತರ ಬಹುಪತ್ನಿತ್ವ

7 ) ಬಹು ಪತಿತ್ವ ಆಚರಣೆಯಿರುವ ಎರಡು ಸಮುದಾಯದ ಉದಾಹರಣೆ ನೀಡಿ .

ನೀಲಗಿರಿಯ ತೊಡರು , ಟಿಬೇಟನ್ನರು , ಅಸ್ಸಾಂನ ಖಾಸೀ ಮತ್ತು ಗರೋ ಸಮುದಾಯಗಳಲ್ಲಿ ಬಹು ಪತಿತ್ವ ಆಚರಣೆಯಲ್ಲಿದೆ .

8 ) ಕುಟುಂಬ ಎಂದರೇನು ? ಯಾವುದಾದರೂ ಒಂದು ವ್ಯಾಖ್ಯೆ ನೀಡಿ .

ಮೆಕ್ಕವರ್ ಮತ್ತು ಫೇಜ್‌ರವರ ಪ್ರಕಾರ “ ಸಂತಾನೋತ್ಪತ್ತಿ ಮಕ್ಕಳ ಲಾಲನೆ ಪಾಲನೆಯ ಉದ್ದೇಶದಿಂದ ಏರ್ಪಾಡುವ ಒಪ್ಪಿಗೆಯನ್ನು ಪಡೆದು ಸ್ತ್ರೀ ಪುರುಷರು ರೂಪಿಸಿಕೊಂಡ ಘಟಕವೇ ಕುಟುಂಬ ” ಎಂಬುದಾಗಿದೆ .

9 ) ಕುಟುಂಬದ ಯಾವುದಾದರೂ ಒಂದು ವಿಶಿಷ್ಟ ಗುಣಲಕ್ಷಣಗಳನ್ನು ವಿವರಿಸಿ .

ಕುಟುಂಬದ ಒಂದು ವಿಶಿಷ್ಟ ಗುಣಲಕ್ಷಣವೆಂದರೆ :

ಕುಟುಂಬವು ಜೈವಿಕ ಅಂಶಗಳ ಆಧಾರ

ಕುಟುಂಬ ಎಂಬ ಸಾಮಾಜಿಕ ಸಂಸ್ಥೆಯನ್ನು ಜೈವಿಕ ಅಂಶಗಳ ಹಿನ್ನಲೆಯಲ್ಲಿ ವಿಶ್ಲೇಷಿಸಲಾಗಿದೆ , ಈ ದೃಷ್ಟಿಕೋನದ ಪ್ರಕಾರ ಪ್ರತಿಯೊಬ್ಬ ಮಾನವ ಜೈವಿಕ ಅಭಿಲಾಷೆಯನ್ನು ಕುಟುಂಬ ವ್ಯವಸ್ಥಿತವಾಗಿ ಈಡೇರಿಸುವ ಸಾಮರ್ಥ್ಯತೆ ಹೊಂದಿದೆ .

10 ) ಕುಟುಂಬದ ಯಾವುದಾದರೂ ಎರಡು ಕಾರಗಳನ್ನು ಪಟ್ಟಿ ಮಾಡಿ .

1 ) ಹೊಸ ಸದಸ್ಯರ ಸೇರ್ಪಡೆ ಮತ್ತು ಭೌತಿಕ ಸಂರಕ್ಷಣೆ

2 ) ನವಜಾತ ಶಿಶುವಿನ ಯುವ ಪೀಳಿಗೆಯ ಸಾಮಾಜೀಕರಣ ಇವು ಕುಟುಂಬದ ಎರಡು ಕಾರಗಳಾಗಿವೆ .

11 ) ಕುಟುಂಬದ ಯಾವುದಾದರೂ ಎರಡು ಮಾಧ್ಯಮಿಕ ಕಾರ್ಯಗಳನ್ನು ಪಟ್ಟಿಮಾಡಿ .

ಕುಟುಂಬದ ಎರಡು ಮಾಧ್ಯಮಿಕ ಕಾರ್ಯಗಳೆಂದರೆ .

1 ) ಆರ್ಥಿಕ ಕಾರ್ಯ

2 ) ಶೈಕ್ಷಣಿಕ ಕಾರ್ಯ

12 ) ಧರ್ಮದ ಎರಡು ಲಕ್ಷಣಗಳನ್ನು ಪಟ್ಟಿಮಾಡಿ .

ಧರ್ಮದ ಎರಡು ಲಕ್ಷಣಗಳೆಂದರೆ ( ಅಂಶಗಳೆಂದರೆ )

1 ) ಧರ್ಮವು ಅಲೌಕಿಕ ಶಕ್ತಿ ಮತ್ತು ಪವಿತ್ರ ಸಂಗತಿಗಳನ್ನು ಒಳಗೊಂಡಿದೆ .

2 ) ನಂಬಿಕೆ ಮತ್ತು ಪದ್ಧತಿಗಳು ಧರ್ಮದ ಭಾಗವಾಗಿದೆ .

13 ) ಧರ್ಮದ ಎರಡು ಕಾರ್ಯಗಳನ್ನು ತಿಳಿಸಿ .

ಧರ್ಮದ ಎರಡು ಕಾರ್ಯಗಳೆಂದರೆ

1 ) ಸಾಮಾಜಿಕ ಐಕ್ಯತೆ

2 ) ಸಾಮಾಜಿಕ ನಿಯಂತ್ರಣ

14 ) ಶಿಕ್ಷಣದ ಅರ್ಥವನ್ನು ಬರೆಯಿರಿ

ಮಕ್ಕಳಿಗೆ ಸಮುದಾಯದ ನೀತಿ – ನಿಯಮಗಳನ್ನು ವರ್ಗಾಯಿಸುವ ಕ್ರಿಯೆ , ಈ ಮೂಲಕ ಸರಿ ತಪ್ಪುಗಳನ್ನು ಗ್ರಹಿಸುವುದೇ ಶಿಕ್ಷಣ .

15 ) ಶಿಕ್ಷಣದ ಎರಡು ಕಾರ್ಯಗಳನ್ನು ತಿಳಿಸಿ

ಶಿಕ್ಷಣದ ಎರಡು ಕಾರ್ಯಗಳೆಂದರೆ

1. ಸಂರಕ್ಷಣಾತ್ಮಕ ಕಾರ್ಯಗಳು , ಹಾಗೂ

2. ಪಾತ್ರ ನಿರ್ವಹಣೆಯ ಪಾತ್ರ

16 ) ಅನೌಪಚಾರಿಕ ಶಿಕ್ಷಣ ಎಂದರೇನು ?

ಅನಿಶ್ಚಿತ ಉದ್ದೇಶ ಪೂರ್ವಕವಲ್ಲದ , ನಿರಂತರವಾಗಿ , ಸಮವಯಸ್ಕರ ಸಮೂಹದಲ್ಲಿ ದುಡಿಮೆಯ ಜಾಗ ಮುಂತಾದ ಕಡೆ ಹಲವಾರು ವಿಷಯ ಕಲಿಯುಗ ಪ್ರಕ್ರಿಯೆಗೆ ಅನೌಪಚಾರಿಕ ಶಿಕ್ಷಣ ಎಂದು ಕರೆಯುವರು .

17 ) ಔಪಚಾರಿಕ ಶಿಕ್ಷಣ ಎಂದರೇನು ?

ಪೂರ್ವಯೋಜಿತ , ಉದ್ದೇಶ ಪೂರ್ವಕ ಮತ್ತು ಸ್ಥಾಪಿತ ನಿಯಮಗಳಿಂದ ವ್ಯವಸ್ಥಿತವಾಗಿರುವ ಶಿಕ್ಷಣ ವ್ಯವಸ್ಥೆಯನ್ನು ಔಪಚಾರಿಕ ಶಿಕ್ಷಣ ಎನ್ನುವರು .

18 ) ಶಿಕ್ಷಣದಲ್ಲಿ ಕುಟುಂಬದ ಪಾತ್ರ ವಿವರಿಸಿ .

ಶಿಕ್ಷಣದಲ್ಲಿ ಕುಟುಂಬವು ಮಹತ್ತರ ಪಾತ್ರವನ್ನು ವಹಿಸುತ್ತದೆ . ಕುಟುಂಬದಿಂದ , ನವಜಾತಶಿಶುಗಳು ತಮ್ಮ ಸಮೂಹದ ಭಾಷೆ , ಆಚಾರ – ವಿಚಾರ , ಸಂಸ್ಕೃತಿ , ಸುತ್ತ ಮುತ್ತಲಿನ ಪರಿಸರದ ಪ್ರಾಮುಖ್ಯತೆ ಮುಂತಾದ ಜೀವಿಸಲು ಅಗತ್ಯವಾದ ವಿಷಯಗಳನ್ನು ಅರಿತುಕೊಳ್ಳುತ್ತಾರೆ .

19 ) ಎಜುಕೇಷನ್ ಎಂಬ ಪದದ ಶಬ್ದೋತ್ಪತ್ತಿಯನ್ನು ವಿವರಿಸಿ .

ಎಜುಕೇಷನ್ ಎಂಬ ಪದವು ಲ್ಯಾಟಿನ್ ಭಾಷೆಯ “ ಎಜುಕೇರ್‌ನಿಂದ ಉತ್ಪತ್ತಿಯಾಗಿದ್ದು ಅದರ ಮೂಲ ಅರ್ಥ ಬೆಳೆಸು ಮೇಲೆತ್ತು ಎಂಬುದನ್ನು ಸೂಚಿಸುತ್ತದೆ .

III . ಐದು ಅಂಕದ ಪ್ರಶ್ನೆಗಳು : ( 10-15 ವಾಕ್ಯಗಳಲ್ಲಿ ಉತ್ತರಿಸಿ )

1 ) ವಿವಾಹದ ಗುಣಲಕ್ಷಣಗಳನ್ನು ವಿವರಿಸಿ

ವಿವಾಹದ ಗುಣಲಕ್ಷಣಗಳು ಇಂತಿವೆ .

1 ) ವಿವಾಹವು ಶಾರ್ವತ್ರಿಕವಾದುದು : ವಿವಾಹವು ಯಾವುದೊಂದು ಸಮಾಜ ಅಥವಾ ಸಮುದಾಯಕ್ಕೆ ಸೀಮಿತವಾಗಿರದೆ , ಇದು ಸಾರ್ವತ್ರಿಕವಾದ ಸಾಮಾಜಿಕ ಸಂಸ್ಥೆಯಾಗಿದೆ ಅನಾದಿಕಾಲದಿಂದ ನಾಗರೀಕ ಸಮಾಜ ಇರುವ ಕಡೆಯಲ್ಲೆಲ್ಲ ವಿವಾಹವು ಆಚರಣೆಯಲ್ಲಿರುವುದು ಕಂಡುಬರುತ್ತದೆ .

2 ) ಸ್ತ್ರೀ ಮತ್ತು ಪುರುಷರ ನಡುವಿನ ಸಂಯೋಗ : ವೈವಾಹಿಕ ಜೀವನವು ಸುದೀರ್ಘದವರೆಗೆ ಅನುವು ಮಾಡಿಕೊಡುವುದೇ ವಿವಾಹ ಸಂಸ್ಕಾರವಾಗಿದೆ . ಸ್ತ್ರೀ ಪುರುಷರ ಸಂಯೋಗ ಪತಿ – ಪತ್ನಿಯ ರೂಪದಲ್ಲಿ ಶಾಶ್ವತವಾಗಿರುತ್ತದೆ .

3 ) ವೈವಾಹಿಕ ಜೀವನವು ಶಾಶ್ವತ ಸ್ವರೂಪದ್ದು: ವೈವಾಹಿಕ ಸಂಬಂಧವು ಪತಿ – ಪತ್ನಿಯರಲ್ಲಿ ಹೆಚ್ಚುಕಾಲ ಬಾಳಿಕೆ ಬರುವಂಥಹುದು , ರೂಢಿ , ಸಂಪ್ರದಾಯ , ಕಾನೂನು ಹಾಗೂ ಧರ್ಮದ ಮನ್ನಣೆ ಇಲ್ಲದೇ ವೈವಾಹಿಕ ಸಂಬಂಧವು ಸಮಾಜ ಬಾಹಿರವಾಗಿರುತ್ತದೆ .

4) ವಿವಾಹಕ್ಕೆ ಸಮಾಜ ಮನ್ನಣೆ ಅಗತ್ಯ : ಸಮಾಜದ ಅಂದರೆ ಲೋಕಾರೂಢಿಯಲ್ಲಿ ಮತ್ತು ಕಾನೂನಿನ ಮೂಲಕ ಸಮಾಜವು ವಿವಾಹಕ್ಕೆ ಮನ್ನಣೆಯನ್ನು ನೀಡುವುದು ಈ ರೀತಿಯ ಮನ್ನಣೆಯಿಂದಾಗಿ ಹುಟ್ಟಿದ ಮಕ್ಕಳ ವಂಶವಾಹಿ , ವಾರಸುಧಾರಕರಾಗುವಿಕೆ , ಆಸ್ತಿಯ ಹಕ್ಕುದಾರಿಗೆ ಮುಂತಾದ ಅಂಶಗಳನ್ನು ನಿರ್ಧರಿಸಲಾಗುತ್ತದೆ .

5 ) ವಿವಾಹವು ಸಾಮಾಜಿಕ ಮತ್ತು ಧಾರ್ಮಿಕ ಸಂಬಂಧದೊಂದಿಗೆ ಹೆಣೆದು ಕೊಂಡಿದೆ . ಯಾವುದೇ ಸಮಾಜವಾದರು ಕೆಲವೊಂದು ಸಂಸ್ಕಾರಗಳು , ಪದ್ಧತಿಗಳು ಮತ್ತು ನಂಬಿಕೆಗಳನ್ನೇ ಒಳಗೊಂಡು ವಿವಾಹ ಸಂಸ್ಕಾರವನ್ನು ಏರ್ಪಡಿಸಲಾಗುತ್ತದೆ , ಸಾಮಾನ್ಯವಾಗಿ , ಸಾರ್ವಜನಿಕವಾಗಿಯೇ ಏರ್ಪಡುವ ವಿವಾಹವು ಸಾಮಾಜಿಕ ಮತ್ತು ಧಾರ್ಮಿಕ ಸಮ್ಮತಿಯೊಂದಿಗೆ ನೇರವೆರಲ್ಪಡುತ್ತದೆ .

6 ) ಪರಸ್ಪರ ಸತ್ತು ಮತ್ತು ಭಾದ್ಯತೆಗಳ ಮನವರಿಕೆ : ವಿವಾಹವು ವ್ಯಕ್ತಿಗಳಿಗೆ ಅವರ ಕರ್ತವ್ಯ ಹಾಗೂ ಹೊಣೆಗಾರಿಕೆಗಳ ಬಗ್ಗೆ ಮನವರಿಕೆ ಮಾಡಿಕೊಡುವುದು . ಉದಾ : ಹೆಂಡತಿ ಮಕ್ಕಳನ್ನು ಸಂರಕ್ಷಿಸುವುದು ಗಂಡನ ಕರ್ತವ್ಯವಾದರೆ , ಗಂಡ ಹಾಗೂ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದು ಪತ್ನಿಯ ನೈತಿಕ ಹೊಣೆಗಾರಿಕೆ

2. ಕುಟುಂಬದ ಮಾಧ್ಯಮಿಕ ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

ಕುಟುಂಬದ ಮಾಧ್ಯಮಿಕ ಕಾರ್ಯಗಳನ್ನು ಸಂಕ್ಷಿಪ್ತವಾಗಿ ಈ ರೀತಿ ವಿವರಿಸಬಹುದು . ಅವುಗಳೆಂದರೆ

1 ) ಆರ್ಥಿಕ ಕಾರ್ಯ : ಇಂದಿನ ಕುಟುಂಬಗಳು ಆದಾಯ – ಸಂಪಾದಿಸುವ ಕೇಂದ್ರ ಬಿಂದುಗಳಾಗಿವೆ . ಈ ನಿಟ್ಟಿನಲ್ಲಿ ಹೊರಗೆ ದುಡಿಯುವ ಸನ್ನಿವೇಷಗಳು ಸೃಷ್ಟಿಯಾಗಿವೆ . ಇವೆಲ್ಲಾ ಬೆಳವಣಿಗೆಯಿಂದ ಕುಟುಂಬಗಳು ಗ್ರಾಹಕರ ಸಮೂಹವಾಗಿ ಮಾರ್ಪಟ್ಟಿವೆ , ವಿವಿಧ ವಲಯಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ದುಡಿಯುತ್ತಿದ್ದಾರೆ .

2 ) ಶೈಕ್ಷಣಿಕ ಕಾರ್ಯ :ಇಂದಿನ ಆಧುನಿಕ ಯುಗದಲ್ಲಿ ನವಜಾತಶಿಶು ಮತ್ತು ಮಕ್ಕಳು ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲಭೂತವಾದ ಕಲೆ ಮತ್ತು ಪ್ರತಿಭೆಗಳನ್ನು ಕಲಿತುಕೊಳ್ಳುತ್ತಾರೆ . ಮಾತೃಭಾಷೆಯ ಕಲಿಕೆ ಕುಟುಂಬದಿಂದ ಪ್ರಾರಂಭವಾಗುವುದು . ಇಂದಿಗೂ ಸಾಂಪ್ರದಾಯಿಕ ಕುಟುಂಬಗಳು ತಮ್ಮದೇ ಆದ ವಂಶಪರಂಪರೆಯಂತೆ ವೃತ್ತಿಗಳನ್ನು ಕೈಗೊಳ್ಳುತ್ತಿದ್ದಾರೆ .

3 ) ಧಾರ್ಮಿಕ ಕಾರ್ಯ: ಕುಟುಂಬವು ಧರ್ಮದ ಬಗ್ಗೆ ಅರಿವು ಮೂಡಿಸುವ ಕೇಂದ್ರವಾಗಿದೆ . ನವಜಾತ ಶಿಶು ಮತ್ತು ಬಾಲ್ಯವ್ಯವಸ್ಥೆಯಲ್ಲಿ ಧಾರ್ಮಿಕ ನಿಷ್ಠೆ ಮತ್ತು ಶಿಸ್ತು ಬೆಳೆಸಿಕೊಳ್ಳಲು ಪ್ರಮುಖವಾದ ಪಾತ್ರವಹಿಸುತ್ತದೆ . ಧಾರ್ಮಿಕ ಕಾರ್ಯಗಳಾದ ಆರಾಧನೆ , ಪೂಜಾ ವೈಖರಗಳು , ಹಬ್ಬ ಹರಿದಿನಗಳು , ಜಾತ್ರೆ – ಸಂಭ್ರಮ ಮುಂತಾದವುಗಳು ಮಕ್ಕಳಲ್ಲಿ ಧಾರ್ಮಿಕ ಭಾವನೆಗಳು ಬೇರೂರುವಂತೆ ಮಾಡುತ್ತದೆ .

4 ) ಮನರಂಜನಾ ಕಾರ್ಯಗಳು: ಮನೆಯ ಎಲ್ಲಾ ಮನರಂಜನೆಗಳ ಕೇಂದ್ರಬಿಂದು . ಸಂಸ್ಕೃತಿಯು ಕುಟುಂಬದ ಸದಸ್ಯರಿಗೆ ಮನೋರಂಜನೆಯ ರಸದೌತಣವನ್ನು ನೀಡುತ್ತದೆ . ಹಬ್ಬ ಹರಿದಿನಗಳ ಆಚರಣೆ , ವಿವಾಹ ಸಮಾರಂಭ, ಧಾರ್ಮಿಕ ಕ್ರಿಯಾವಿಧಿಗಳು ಕುಟುಂಬದೊಳಗೆ ಸಂತಸ – ಸಂಭ್ರಮವನ್ನು ನೀಡುತ್ತಿತ್ತು .

3. ವಿವಾಹದ ಕಾರ್ಯಗಳನ್ನು ಪಟ್ಟಿ ಮಾಡಿ .

ವಿವಾಹದ ಕಾರ್ಯಗಳೆಂದರೆ

1 ) ಲೈಂಗಿಕ ಜೀವನದ ನಿಯಂತ್ರಣ : ಮಾನವನ ಲೈಂಗಿಕ ಜೀವನವನ್ನು ನಿಯಂತ್ರಿಸುವುದರಲ್ಲಿ ಅತ್ಯಂತ ಪ್ರಭಾವಶಾಲಿ ಸಾಧನವೇ ವಿವಾಹ , ಲೈಂಗಿಕ ಜೀವನಕ್ಕೆ ಸಂಪೂರ್ಣ ಅನುಮತಿ ಮತ್ತು ಸಾಮಾಜಿಕ ಮಾನ್ಯತೆ ನೀಡುವುದು ವಿವಾಹ

2 ) ವಿವಾಹವು ಲೈಂಗಿಕ ಸಂಬಂಧಗಳ ಮೇಲೆ ಇತಿ – ಮಿತಿ ಹೇರಿದೆ . ವಿವಾಹ ಸಂಬಂಧವು ಲೈಂಗಿಕ ಸಂಬಂಧಗಳ ಮೇಲೆ ಇತಿ – ಮಿತಿ ಹೇರಿ , ಯಾರು – ಯಾರೊಂದಿಗೆ ಲೈಂಗಿಕ ಸಂಬಂಧ ಹೊಂದಬಾರದೆಂಬ ಸ್ಪಷ್ಟತೆ ನೀಡುತ್ತದೆ .

3 ) ವಿವಾಹ ಕುಟುಂಬ ಶರಜನೆಗೆ ವೇದಿಕೆ ನಿರ್ಮಾಣ ಮಾಡುತ್ತದೆ . ವಿವಾಹ ಮತ್ತು ಕುಟುಂಬ ಪರಸ್ಪರ ಪೂರಕವಾದ ಸಂಸ್ಥೆಯಾಗಿದೆ , ಹೊಸ ಪೀಳಿಗೆ ಜನ್ಮ ತಾಳುತ್ತ ಹಾಗೂ ಬೆಳೆದಂತೆ ಕುಟುಂಬ ವ್ಯವಸ್ಥೆ ಕಾರ್ಯ ಮಗ್ನವಾಗುತ್ತದೆ . ಸಾಮಾಜಿಕ ಮನ್ನಣೆ ಪಡೆದುಕೊಂಡ ವಿವಾಹವು ವಂಶಪರಂಪರೆ ಆಸ್ತಿಯ ಹಕ್ಕು ಮತ್ತು ಉತ್ತರಾಧಿಕಾರಿಯ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಗುರುತಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ.

4 ) ಆರ್ಥಿಕ ಸಹಕಾರಕ್ಕೆ ಅವಕಾಶ ಕಲ್ಪಿಸುತ್ತದೆ : ವಿವಾಹದಿಂದ ದಂಪತಿಗಳಿಗೆ ಆರ್ಥಿಕ ಹೊಣೆಗಾರಿಕೆ ಹೆಚ್ಚಾಗುತ್ತದೆ . ದೈನಂದಿನ ಜೀವನಕ್ಕೆ ಮೂಲಭೂತ ಅಗತ್ಯವಾದ ಆಹಾರ , ವಸತಿ , ಶಿಕ್ಷಣ , ಆರೋಗ್ಯ ಮನೋರಂಜನೆ ಮತ್ತು ಭದ್ರತೆಯ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಶ್ರಮಿಸಬೇಕಾಗಿದೆ , ವಿವಾಹವು ಶ್ರಮವಿಭಜನೆ ಸ್ಪಷ್ಟವಾಗಿ ನಿರೂಪಿಸುತ್ತದೆ .

5 ) ವಿವಾಹವು ಸಂಗಾತಿಗಳಿಗೆ ಭಾವನಾತ್ಮಕ ಮತ್ತು ಬೌದ್ದಿಕ ಉತ್ತೇಜನ ಬೆಳೆಸಿಕೊಳ್ಳಲು ಸಹಾಯಕವಾಗಿದೆ . ವಿವಾಹ ಜೀವನ ಸಂಗಾತಿಗಳನ್ನು ದೈಹಿಕವಾಗಿ ಹತ್ತಿರಗೊಳ್ಳುವುದಲ್ಲದೆ ಪರಸ್ಪರ ತೀರಾ ಆತ್ಮೀಯ ಸಂಬಂಧಗಳನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ . ಸಂಗಾತಿಗಳು ಭಾವನಾತ್ಮಕ ಮತ್ತು ಭೌದ್ಧಿಕ ಸಹಕಾರ ಬೆಳೆಸಿಕೊಳ್ಳುವರು .

6 ) ವಿವಾಹ ಸಾಮಾಜಿಕ ಐಕ್ಯತೆಯನ್ನು ತರುತ್ತದೆ . ವಿವಾಹವು , ಎರಡು ವಿಭಿನ್ನ ಕುಟುಂಬದ ಸಮೂಹಗಳ ಹಾಗೂ ರಕ್ತ ಸಂಬಂಧಗಳಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ . ಎರಡು ವಿಭಿನ್ನ ಧಾರ್ಮಿಕ ಭಾಷೆ , ವರ್ಗಗಳು , ಜನಾಂಗಗಳ ನಡುವೆ ನಡೆಯುವ ವೈವಾಹಿಕ ಸಂಬಂಧಗಳು ಹೊಸ ಸಮಾಜ ನಿರ್ಮಿಸಲು ಸಾಧ್ಯವಾಗಿದೆ .

4 ) ವಿವಾಹದ ಪ್ರಕಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

ವಿವಾಹವನ್ನು ಪ್ರಮುಖವಾಗಿ ಎರಡು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ .

( 1 ) ಏಕ ಸಂಗಾತಿ ವಿವಾಹ .

( 2 ) ಬಹು ಸಂಗಾತಿ ವಿವಾಹ .

1 ) ಏಕ ಸಂಗಾತಿ ವಿವಾಹ – ಈ ವ್ಯವಸ್ಥೆಯಲ್ಲಿ ನಿಗದಿತ ಅವಧಿಯಲ್ಲಿ ಪುರುಷರು ಒಂದೇ ಸ್ತ್ರೀಯನ್ನು ಪತ್ನಿಯಾಗಿ ಮತ್ತು ಸ್ತ್ರೀ ಒಂದೇ ಪುರುಷರನ್ನು ಪತಿಯಾಗಿ ಪಡೆದುಕೊಳ್ಳುತ್ತಾರೆ . ಎಲ್ಲಾ ಸಮಾಜದಲ್ಲಿ ಇದು ಆದರ್ಶಾತ್ಮಕ ವಿವಾಹವೆಂದು ಪರಿಗಣಿಸಲಾಗಿದೆ . ಇದನ್ನು ಏಕ ಸಂಗಾತಿ ವಿವಾಹ ಎನ್ನುವರು . ಬಹುತೇಕ ಎಲ್ಲಾ ಸಮಾಜದಲ್ಲಿ ಒಬ್ಬ ವ್ಯಕ್ತಿ ಜೀವನ ಸಂಗಾತಿಯಾಗಿ ಒಂದೇ ಕಾಲಾವಧಿಯಲ್ಲಿ ಒಬ್ಬರಿಗಿಂತ ಇಬ್ಬರು ಇನ್ನು ಹೆಚ್ಚು ಸಂಗಾತಿಗಳನ್ನು ಹೊಂದಿದ್ದರೆ ಅದನ್ನು ಬಹು ಸಂಗಾತಿ ವಿವಾಹ ಎನ್ನುವರು . ಬಹು ಸಂಗಾತಿ ವಿವಾಹ ಪದ್ಧತಿಯನ್ನು ಎರಡು ಪ್ರಕಾರಗಳಾಗಿ ವಿಂಗಡಿಸಲಾಗಿದೆ .

1 ) ಬಹುಪತ್ನಿತ್ವ ಹಾಗೂ

2 ) ಬಹುಪತಿತ್ವ

1 ) ಬಹುಪತ್ನಿತ್ವ : ಒಬ್ಬ ಪುರುಷ ಎರಡು ಅಥವಾ ಹಲವಾರು ಸ್ತ್ರೀಯರನ್ನು ವಿವಾಹವಾಗುವ ಪದ್ಧತಿಯಾಗಿದೆ .

2 ) ಬಹುಪತಿತ್ವ : ಒಬ್ಬ ಸ್ತ್ರೀಯೋರ್ವಳು ಎರಡು ಅಥವಾ ಹಲವಾರು ಪುರಷರನ್ನು ವಿವಾಹವಾಗುವ ಪದ್ಧತಿಯಾಗಿದೆ .. ಬಹುಪತ್ನಿತ್ವದಲ್ಲಿ ಎರಡು ವಿಧಾನಗಳಿವೆ , ಅವುಗಳೆಂದರೆ

( 1 ) ಭಗಿನೀ ಬಹುಪತ್ನಿತ್ವ

( 2 ) ಭಗಿನೇತರ ಪತ್ನಿತ್ವ

1 ) , ಒಬ್ಬ ಗಂಡು ಹೆಂಡತಿಯ ತಂಗಿಯನ್ನು ವಿವಾಹವಾದರೆ ಅದನ್ನು ‘ ಭಗಿನೀ ಬಹುಪತ್ನಿತ್ವ ‘ ವೆಂದು ಕರೆಯುವರು .

2 ) ಒಬ್ಬ ಗಂಡು ಹೆಂಡತಿಯ ತಂಗಿಯಲ್ಲದೆ ಇತರೆ ಹೆಣ್ಣನ್ನು ಮದುವೆಯಾದರೆ ಅದನ್ನು ಭಗಿನೇತರ ಪತ್ನಿತ್ವ ಎನ್ನುವರು . ಇದೇ ರೀತಿ ಬಹುಪತಿತ್ವದಲ್ಲಿಯೂ ಎರಡು ವಿಧಗಳಿವೆ .

1 ) ಸೋದರ ಬಹುಪತಿತ್ವ : ಸ್ತ್ರೀಯ ಸಹೋದರರು ಸಾಮೂಹಿಕವಾಗಿ ಒಂದೇ ಸ್ತ್ರೀಯನ್ನು ವಿವಾಹವಾದರೆ ಆ ರೀತಿಯ ವಿವಾಹವನ್ನು “ ಸೋದರ , ಬಹುಪತಿತ್ವ ” ಎನ್ನುವರು .

2 ) ಸೋದರೇತರ ಬಹುಪತಿತ್ವ : ಸ್ತ್ರೀಯು ಹಲವಾರು ಪತಿಗಳೊಂದಿಗೆ ಸಂಬಂಧ ಹೊಂದಿದ್ದು ಅವರೆಲ್ಲರೂ ಸೋದರ ಸಂಬಂಧಗಳಾಗಿರುವುದಿಲ್ಲ ಇವರನ್ನು “ ಸೋದರೇತರ ಬಹುಪತಿತ್ವ ” ಎನ್ನುವರು .

5 ) ಕುಟುಂಬದ ಪ್ರಾಥಮಿಕ ಕಾರ್ಯಗಳನ್ನು ಪಟ್ಟಿ ಮಾಡಿ .

ಕುಟುಂಬದ ಪ್ರಾಥಮಿಕ ಕಾರ್ಯಗಳೆಂದರೆ ,

ಹೊಣೆ ಅದರ ಸೇರ್ಪಡೆ ಮತ್ತು ಭೌತಿಕ ಸಂರಕ್ಷಣೆ : ಪ್ರತಿಯೊಂದು ಸಮಾಜಗಳು ಶಾಶ್ವತವಾಗಿ ಸಂತತಿ ಅಸ್ತಿತ್ವ ಹೊಂದಬೇಕಾದರೆ ಹೊಸ ಸದಸ್ಯರ ಕಾಲಾನುಗುಣವಾಗಿ ಜನ್ಮ ನೀಡುತ್ತಾ ಸಮಾಜ ಮುಂದುವರಿಸುವುದು ತೀರಾ ಅಗತ್ಯವಾಗಿದೆ . ಈ ನಿಟ್ಟಿನಲ್ಲಿ ಹೊಸ ಸಂತತಿ ಹಂತ ಹಂತವಾಗಿ ಪ್ರೌಢ ವಯಸ್ಸು ತಲುಪಿ ಇಳಿವಯಸ್ಸಿನ ಸಮೂಹಕ್ಕೆ ಆಹಾರ ಸೌಲಭ್ಯ ಮತ್ತು ಆರೈಕೆ ಮಾಡುತ್ತಾರೆ . ಈ ರೀತಿ ಸಾಮಾಜಿಕ ನಿರೀಕ್ಷೆಯಲ್ಲಿ ಎಲ್ಲಾ ಕಾಲಾವಧಿಗಳಲ್ಲಿ ಕಂಡುಬರುತ್ತದೆ .

ಲೈಂಗಿಕ ವರ್ತನೆಗಳ ನಿಯಂತ್ರಣ : ಕುಟುಂಬ ತನ್ನ ಸದಸ್ಯರ ಲೈಂಗಿಕ ವರ್ತನೆಗಳ ಮೇಲೆ ಕಟ್ಟುಪಾಡು ಹೇರಿದೆ . ಸಮಾಜವು ತನ್ನದೆ ಆದ ಸಾಮಾಜಿಕ ನಿಯಮಗಳನ್ನು ಒಳಗೊಂಡಿದೆ . ನವಜಾತ ಶಿಶುವಿನ ಯುವ ಪೀಳಿಗೆಯ ಸಾಮಾಜೀಕರಣ : ಕುಟುಂಬ ತನ್ನ ಸಮೂಹದಲ್ಲಿ ಜನಿಸಿರುವ ಪ್ರತಿಯೊಂದು ಮಕ್ಕಳ ಸಾಮಾಜೀಕರಣದ ಹೊಣೆಗಾರಿಕೆಯನ್ನು ನಿಭಾಯಿಸಿಕೊಂಡಿದೆ . ಕುಟುಂಬವೂ ನಿರ್ದಿಷ್ಟ ಧಾರ್ಮಿಕ , ಸಾಂಸ್ಕೃತಿಕ ಹಾಗೂ ಇನ್ನಿತರ ಹಿನ್ನಲೆಯ ಆಧಾರವಾಗಿ ತನ್ನ ಹೊಸ ಸದಸ್ಯರಿಗೆ ಸಾಮಾಜಿಕ ನಿಯಮಗಳನ್ನು ವ್ಯಕ್ತಿತ್ವ ರೂಪಿಸಿಕೊಳ್ಳಲು ಒತ್ತಡ ಬೀರುತ್ತದೆ . ಕುಟುಂಬವು ಪ್ರಮುಖವಾದ ಸಂಸ್ಕೃತಿಯ ವಾಹಕವಾಗಿ ಪಾತ್ರ ನಿರ್ವಹಿಸಿದೆ . ಪ್ರತಿಯೊಬ್ಬ ವ್ಯಕ್ತಿಯ ಸಾಮಾಜೀಕರಣ ಪ್ರಕ್ರಿಯೆ ಆರಂಭವಾಗುವುದೇ ಕುಟುಂಬದಿಂದ ಎಂಬುದು ಇಲ್ಲಿ ನಿರೂಪಿತವಾಗುತ್ತದೆ .

ಅಂತಸ್ತಿನ ವರ್ಗಾವಣೆ ಶಾಸ್ತ್ರ : ಕುಟುಂಬವು ಸಂಸ್ಕೃತಿ ವಾಹಕವಾಗಿ ಪಾತ್ರ ನಿರ್ವಹಿಸುತ್ತಾ ತನ್ನ ಸದಸ್ಯರಿಗೆ ‘ ಆರೋಪಿತ ಅಂತಸ್ತು ‘ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ .

ಭಾವನಾತ್ಮಕ ಬೆಂಬಲ : ಕುಟುಂಬ ಪ್ರಾಥಮಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಾ ತನ್ನ ಸದಸ್ಯರಿಗೆ ಪ್ರೀತಿ – ಪ್ರೇಮ ಆತ್ಮೀಯತೆಯನ್ನು ಕಲ್ಪಿಸುತ್ತದೆ . ಭಾವನಾತ್ಮಕ ಭಾವನೆಗಳ ಹೆಚ್ಚು ಪ್ರಕಟಿತ ರೂಪವಾಗಿ ಗೋಚರವಾಗುತ್ತದೆ . ಇದರಿಂದ ಮಾನಸಿಕ ತೃಪ್ತಿ ಅನುಭವಿಸಲು ಸಾಧ್ಯ

ಅಪೇಕ್ಷಿತ ಸಂಸ್ಕೃತಿಯ ಪೂರೈಕೆಯ ಕಾರ್ಯ : ಪ್ರತಿಯೊಂದು ಸಾಮಾಜಿಕ ಸಂಸ್ಥೆಗಳಿಂದ ಸದಸ್ಯರು ನಿರ್ಧಿಷ್ಟ ಬಯಕೆಯ ಈಡೇರಿಕೆಗಳನ್ನು ಅಪೇಕ್ಷಿಸುತ್ತಾರೆ , ಕುಟುಂಬವು ಮೂಲಭೂತ ಸೌಕರ್ಯಗಳಾದ ಆಹಾರ , ವಸತಿ , ಶಿಕ್ಷಣ , ಆರೋಗ್ಯ ಇನ್ನಿತರ ನಿರ್ಧಿಷ್ಟ ಬೇಡಿಕೆಗಳು ಈಡೇರಿಸಲುವಲ್ಲಿ ಸಫಲವಾಗಿದೆ , ಕುಟುಂಬವು ಅಪೇಕ್ಷಿತ ಹಂಬಲಗಳನ್ನು ಈಡೇರಿಸುವ ಸಾಧನವಾಗಿದೆ .

6 . ಕುಟುಂಬದ ಲಕ್ಷಣಗಳನ್ನು ಪಟ್ಟಿಮಾಡಿ .

ಕುಟುಂಬದ ಲಕ್ಷಣಗಳೆಂದರೆ :

ಕುಟುಂಬದ ಸಾರ್ವತ್ರಿಕವಾದುದು . ಮಾನವ ಸಮಾಜದ ಎಲ್ಲಾ ಅಧ್ಯಯನಗಳ ಸಮೀಕ್ಷೆಯಂತೆ – ಕುಟುಂಬವು ಪ್ರತಿಯೊಂದು ಸಮಾಜಗಳ ಶಾಶ್ವತ ಹಾಗೂ ವ್ಯಾಪಕವಾಗಿ ಹರಡಿರುವ ಸಾಮಾಜಿಕ ಸಂಸ್ಥೆಯಾಗಿದೆ . ಇಂತಹ ಸಂಸ್ಥೆಯಿಂದಲೇ ಮಾನವ ಸಮಾಜ ನಿರಂತರವಾಗಿ ಮುಂದುವರಿಯಲು ಹಾಗೂ ಹೊಸ ಪೀಳಿಗೆಯ ಸೃಷ್ಟಿಗೆ ಮೂಲವಾಗಿದೆ .

ಕುಟುಂಬವು ಜೈವಿಕ ಅಂಶಗಳ ಆಧಾರ : ಕುಟುಂಬ ಎಂಬ ಸಾಮಾಜಿಕ ಸಂಸ್ಥೆಯನ್ನು ಜೈವಿಕ ಅಂಶಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ . ಈ ದೃಷ್ಟಿಕೋನದ ಪ್ರಕಾರ ಕುಟುಂಬ ವ್ಯವಸ್ಥಿತವಾಗಿ ಈಡೇರಿಸುವ ಸಾಮರ್ಥ್ಯತೆ ಹೊಂದಿದೆ . ಕುಟುಂಬಗಳು ವಿವಾಹ ಎಂಬ ಸಂಸ್ಕಾರ ಮೂಲಕ ಲೈಂಗಿಕ ತೃಪ್ತಿ ಈಡೇರಿಸಿಕೊಳ್ಳಲು ಅನುಮತಿ ನೀಡುತ್ತದೆ .

ಸೀಮಿತ ಗಾತ್ರ : ಸಮಾಜದ ಪ್ರಾಥಮಿಕ ಸಮೂಹವೇ ಕುಟುಂಬವಾಗಿದೆ . ಕುಟುಂಬವು ಸೀಮಿತ ಸದಸ್ಯತ್ವವನ್ನು ಒಟ್ಟಿಗೆ ಸೇರಿಸುವ ಸಂಬಂಧಗಳ ಬಲೆ . ವಿಸ್ತುತ ಸಾಮಾಜಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಮತ್ತು ಭಾವನಾತ್ಮಕ ಅಂಶಗಳಾದ ಪ್ರೀತಿ – ಪ್ರೇಮ , ಪರಸ್ಪರ ಆತ್ಮೀಯತೆ ಮತ್ತು ಹಲವಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ವ್ಯವಸ್ಥೆಯಾಗಿದೆ .

ಸಾಮಾನ್ಯ ವಾಸಸ್ಥಳ , ಮೂಲಭೂತ ಅವಶ್ಯಕತೆ ಪೂರೈಕೆ ಮತ್ತು ನಾಮಕರಣ ವ್ಯವಸ್ಥೆ . ಕುಟುಂಬದ ಸದಸ್ಯರು ಸಾಮಾನ್ಯವಾಗಿ ಒಂದೇ ಮನೆಯಲ್ಲಿ ವಾಸಿಸುತ್ತಾರೆ . ಕುಟುಂಬವು ತನ್ನ ಸದಸ್ಯರಿಗೆ ಮೂಲಭೂತ ಅಗತ್ಯಗಳಾದ ನೆಲೆ , ಆಹಾರ , ರಕ್ಷಣಾ ವಸತಿ , ಶಿಕ್ಷಣವನ್ನು ಪೂರೈಸುತ್ತದೆ . ಪ್ರತಿಯೊಂದು ಕುಟುಂಬವು ಒಂದು ನಿರ್ಧಿಷ್ಟ ಹೆಸರು ಅಥವಾ ಉಪನಾಮದಿಂದ ಗುರುತಿಸಲ್ಪಡುತ್ತದೆ .

ಸಾಮಾಜೀಕರಣದ ಘಟಕ : ಪ್ರತಿಯೊಂದು ಕುಟುಂಬಗಳು ತಮ್ಮದೇ ಆದ ಮೂಲ ನೆಲೆಯನ್ನು ಹೊಂದಿರುತ್ತಾರೆ . ಮನೆ ಎಂಬ ಭೌತಿಕ ಅಂಶಗಳಿಂದ ಗುರುತಿಸಲ್ಪಟ್ಟಿದೆ . ಇಷ್ಟೇ ಅಲ್ಲದೆ ಕುಟುಂಬಗಳು “ ಮನೆತನ ” ಎಂಬ ಪರಿಕಲ್ಪನೆಯೊಂದಿಗೆ ಗುರುತಿಸುತ್ತಾ ವಿಸ್ತುತ ಅರ್ಥವನ್ನು ಕಲ್ಪಿಸಿದೆ .

7. ಕುಟುಂಬದ ಪ್ರಕಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

ಕುಟುಂಬದ ಪ್ರಕಾರಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು .

ಅವುಗಳೆಂದರೆ :

ಅ ) ಅಣುಕುಟುಂಬ

ಆ ) ಅವಿಭಕ್ತ ಕುಟುಂಬ .

ಅಣುಕುಟುಂಬ : ಅಣುಕುಟುಂಬವು ತೀರಾ ಚಿಕ್ಕ ಸಮೂಹವಾಗಿದ್ದು ಸೀಮಿತ ಸದಸ್ಯತ್ವವನ್ನು ಹೊಂದಿರುತ್ತದೆ . ಈ ಕುಟುಂಬದಲ್ಲಿ ತಂದೆ – ತಾಯಿ ಹಾಗೂ ಅವರ ಮಕ್ಕಳು ಮಾತ್ರ ಇದ್ದು ಒಂದು ಮನೆಯಲ್ಲಿ ವಾಸಿಸುತ್ತಾರೆ . ಅಣುಕುಟುಂಬಗಳು ಸಂಪೂರ್ಣ ಸ್ವಯಂ ಅಧಿಕಾರಯುಕ್ತ ಘಟಕವಾಗಿರುತ್ತದೆ .

ಅವಿಭಕ್ತ ಕುಟುಂಬಗಳು : ಹಲವಾರು ಅಣು ಕುಟುಂಬಗಳ ಸಮನ್ವಯದಿಂದ ಉಂಟಾದ ಕುಟುಂಬಗಳು ಅವಿಭಕ್ತ ಕುಟುಂಬಗಳಾಗಿರುತ್ತದೆ . ಇದರಲ್ಲಿ ತಂದೆ – ತಾಯಿ – ಅವರ ತಂದೆ – ತಾಯಿ , ಅವರ ಮಕ್ಕಳು , ತಮ್ಮಂದಿರು ಅವರ ಪತ್ನಿಯರು ಮಕ್ಕಳು ಮುಂದೆ ದೊಡ್ಡದಾಗುತ್ತ ಅವರ ಸೊಸೆ – ಮೊಮ್ಮಕ್ಕಳು ಹೀಗೆ ಬಹುಸಂಖ್ಯಾ ಸದಸ್ಯರಿಂದ ಈ ಕುಟುಂಬವು ಕೂಡಿರುತ್ತದೆ . ತಂದೆ ಮನೆಯ ಯಜಮಾನನಾಗಿರುತ್ತಾನೆ . ಎಲ್ಲರೂ ಒಟ್ಟಿಗೆ ಸಹಬಾಳ್ವೆ ನಡೆಸುತ್ತಾ ಒಂದೇ ಸೂರಿನೆಡೆ ವಾಸಮಾಡುತ್ತಾರೆ . ಇವರೆಲ್ಲರಿಗೂ ಅಡಿಗೆ ಮನೆಯು ಒಂದೇ ಆಗಿರುತ್ತದೆ . ಅವಿಭಕ್ತ ಕುಟುಂಬಗಳಲ್ಲಿ ಒಂದೇ ಮನೆಯಲ್ಲಿ ರಕ್ತ ಸಂಬಂಧಿ ಸಮೂಹಗಳು ವಾಸಿಸುತ್ತಾರೆ . ಇದಕ್ಕೆ ಉದಾ : – ಹಿಂದೂ ಅವಿಭಕ್ತ ಕುಟುಂಬಗಳು .

8. ಧರ್ಮವನ್ನು ವ್ಯಾಖ್ಯಾನಿಸಿ , ಅದರ ಲಕ್ಷಣಗಳನ್ನು ಪಟ್ಟಿ ಮಾಡಿ .

“ ಮಾನವನಿಗಿಂತಲೂ ಶ್ರೇಷ್ಟವಾದ ಶಕ್ತಿಯು ನಿಸರ್ಗದ ಮತ್ತು ಮಾನವ ಜೀವನದ ಆಗು ಹೋಗುಗಳನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ನಂಬಿಕೆಯೇ ಧರ್ಮ ಎಂಬುದಾಗಿ ‘ ಫೇಜರ್ ‘ ರವರು ಅಭಿಪ್ರಾಯ ಪಡುತ್ತಾರೆ. ಧರ್ಮವು ಈ ಕೆಳಕಂಡ ಲಕ್ಷಣಗಳನ್ನು ಹೊಂದಿದೆ .

1 ) ಧರ್ಮವು ಅಲೌಕಿಕ ಮತ್ತು ಪವಿತ್ರ ಸಂಗತಿಗಳನ್ನು ಒಳಗೊಂಡಿದೆ . ಸಾಮಾನ್ಯವಾಗಿ ಎಲ್ಲಾ ಧರ್ಮಗಳ ಮೂಲ ಕಲ್ಪನೆ ಅಲೌಕಿಕವಾದುದು . ಇದು ನಮ್ಮ ಭೌತಿಕ ಅನುಭವಕ್ಕೆ ನಿಲುಕದ ಅಮೂರ್ತ ಕಲ್ಪನೆಯಾಗಿದ್ದು ಅತಿ ಮನುಷ್ಯ ಶಕ್ತಿಯುಳ್ಳದಾಗಿದೆ . ಇದು ಸರ್ವಶಕ್ತವು , ಅನಂತವು ಅಸಮಾನ್ಯವಾದುದು ಆಗಿದೆ . ಎ.ಬಿ.ಟೈಲರ್ ರವರ ಪ್ರಕಾರ ಅಲೌಕಿಕ ಶಕ್ತಿಯ ಮೇಲಿನ ನಂಬಿಕೆಯನ್ನು ಧರ್ಮವೆನ್ನಲಾಗುವುದು . ಅಲೌಕಿಕ ಶಕ್ತಿಯ ನಂಬಿಕೆಯಲ್ಲಿ ಈ ಇತರ ಶಕ್ತಿಗಳು ಒಳಗೊಂಡಿರುತ್ತದೆ . ಅಲೌಕಿಕ ಶಕ್ತಿಯಲ್ಲು ನಾವು ಎರಡು ಬಗೆಯನ್ನು ಕಾಣಬಹುದು .

( 1 ) ಶಿಷ್ಟ ಶಕ್ತಿ

( 2 ) ದುಷ್ಟ ಶಕ್ತಿ .

ಶಿಷ್ಟ ಶಕ್ತಿ ಎಂದರೆ ದೈವ ಶಕ್ತಿ , ಇದು ಜಪ – ತಪ ಮಂತ್ರಗಳನ್ನು ಒಳಗೊಂಡಿರುತ್ತದೆ . ದುಷ್ಟ ಶಕ್ತಿ ಎಂದರೆ ವಾಮಾಚಾರ , ದೆವ್ವ , ಭೂತ ಮುಂತಾದವುಗಳ ಕಲ್ಪನೆ , ಮಾಟಮಂತ್ರಗಳು ಇದರ ಮುಖ್ಯ ಕಾರ್ಯಗಳು . ಶಿಷ್ಟ ಶಕ್ತಿಯ ಧಾರ್ಮಿಕ ವಿಧಿ ವಿಧಾನಗಳನ್ನು ಪಾವಿತ್ರ್ಯತೆಯನ್ನು ಹೊಂದಿದೆ , ಧರ್ಮ ಮಾರ್ಗವು ಮನುಷ್ಯನನ್ನು ಸಚ್ಚರಿತ್ರನನ್ನಾಗಿ ಮಾಡುತ್ತದೆ .

2 ) ನಂಟಿಕೆ ಮತ್ತು ಪದ್ಧತಿಗಳು ಧರ್ಮದ ಭಾಗವಾಗಿದೆ . ಧಾರ್ಮಿಕ ನಂಬಿಕೆಗಳು ಜ್ಞಾನದ ವಿಧಾನ . ಇದು ಮಾನವನಿಗೂ ದೈವಶಕ್ತಿಗೂ ಇರುವ ಸಂಬಂಧವನ್ನು ತಿಳಿಸುತ್ತದೆ . * * ನಂಬಿಕೆಗಳು ಸಾಮಾನ್ಯವಾಗಿ ವರ್ತಮಾನದ ಭಾವನೆಯನ್ನೇ ಒಳಗೊಂಡಿರುತ್ತದೆ . ಇವು ನಮ್ಮ ಸಂಪ್ರದಾಯಗಳ ಬಗ್ಗೆ ತಿಳಿಸುತ್ತವೆ . ಅವರವರ ಸಂಪ್ರದಾಯಕ್ಕೆ ತಕ್ಕಂತೆ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಲಾಗುವುದು . ಇವು ನಿರ್ದಿಷ್ಟ ಉದ್ದೇಶವನ್ನು ಒಳಗೊಂಡಿರುತ್ತವೆ . ಇವು ಹಲವಾರು ಸಾಂಕೇತಿಕ ಕಾರ್ಯವನ್ನು ಒಳಗೊಂಡಿರುತ್ತದೆ .

3 ) ಧರ್ಮವು ನೈತಿಕ ಸಲಹೆಗಳನ್ನು ಒಳಗೊಂಡಿರುತ್ತದೆ . ಧರ್ಮವು ನೈತಿಕ ಮೌಲ್ಯಗಳ ಆಧಾರವಾಗಿದೆ . ನೈತಿಕ ಸಲಹೆಗಳಿಲ್ಲದ ಧರ್ಮವು ಇರಲು ನಿಜವಾಗಿಯೂ ಸಾಧ್ಯವಿಲ್ಲ . ಧರ್ಮವು ತಪ್ಪು – ಸರಿಗಳ ಅರಿವನ್ನು ಮೂಡಿಸುತ್ತದೆ . ಧರ್ಮವು ಇತರ ಸಾಮಾಜಿಕ ಸಂಸ್ಥೆಗಳಿಗಿಂತ ಹೆಚ್ಚು ಶಕ್ತಿಶಾಲಿಯಾದುದು .

4 ) ಮುಕ್ತಿಯ ವಿಧಾನಗಳು , ಮೋಕ್ಷ ಅಥವಾ ಮುಕ್ತಿ ಹೊಂದುವ ಮಾರ್ಗವು ಧರ್ಮದ ಇತರ ಅಂಶಗಳಿಂದ ನಿಯೋಜಿಸಲ್ಪಟ್ಟಿದೆ . ಅವು ಕೆಲವೇ ಮಾರ್ಗಗಳು ಅಂದರೆ ನಿರ್ಮಾಣ , ಮೋಕ್ಷ ಮತ್ತು ಕ್ರೈಸ್ತರಲ್ಲಿ ಕ್ರಿಸ್ತನ ವಿಮೋಚಕರು , ದೇವಪುತ್ರರು , ಮನುಷ್ಯ ಮಾಡುವ ಕರ್ಮಕ್ಕೆ ತಕ್ಕ ಜೀವನ ನಡೆಸುವರು . ಮನುಷ್ಯರು ಅಲೌಕಿಕ ಶಕ್ತಿಯ ಬಗೆಗಿನ ಕುರಿತಾದ ಸಂಪ್ರದಾಯ ನಂಬಿಕೆಗಳ ವ್ಯವಸ್ಥಿತ ಕ್ರಮವಾಗಿದೆ .

9. ಶಿಕ್ಷಣವನ್ನು ವ್ಯಾಖ್ಯಾನಿಸಿ ಶಿಕ್ಷಣ ಕಾರ್ಯಗಳನ್ನು ಪಟ್ಟಿ ಮಾಡಿ .

ಮಕ್ಕಳಿಗೆ ಸಮುದಾಯದ ನೀತಿ – ನಿಯಮಗಳನ್ನು ವರ್ಗಾಯಿಸುವ ಕ್ರಿಯೆಗೆ ಹಾಗೂ ಸರಿ – ತಪ್ಪುಗಳನ್ನು ಗ್ರಹಿಸುವ ಪ್ರಕ್ರಿಯೇ ‘ ಶಿಕ್ಷಣ ‘ ಎಂಬುದಾಗಿ ಡಬ್ಲ್ಯೂ , ಜಿ . ಸಮ್ಮರ್ ತಿಳಿಸಿದ್ದಾರೆ . . ಶಿಕ್ಷಣದ ಪ್ರಮುಖ ಕಾರ್ಯವಿಧಾನಗಳನ್ನು ಕೆಳಕಂಡ ಅಂಶಗಳ ಮೂಲಕ ವಿಶ್ಲೇಷಿಸಲಾಗಿದೆ . ಅವುಗಳೆಂದರೆ

1 ) ಸಂರಕ್ಷಣಾತ್ಮಕ ಕಾರ್ಯಗಳು ,

2 ) ಪಾತ್ರ ನಿರ್ವಹಣೆಯ ಕಾರ್ಯಗಳು .

3 ) ಸುಧಾರಣಾತ್ಮಕ ಕಾರ್ಯಗಳು ,

1 ) ಸಂರಕ್ಷಣಾತ್ಮಕ ಕಾರ್ಯಗಳು : ಶಿಕ್ಷಣವು ಪ್ರಸಕ್ತ ಕಾಲಕ್ಕೆ ಅನ್ವಯಿಸುವ ಜ್ಞಾನವನ್ನು ಸ್ವೀಕರಿಸಿ ಮತ್ತು ಅಂತಹ ಹೊಸಜ್ಞಾನದ ಬಗ್ಗೆ ಅರಿವು ಮತ್ತು ಸಂಪೂರ್ಣ ನೈಋಣ್ಯತೆಯನ್ನು ಪಡೆದುಕೊಳ್ಳಲು ನೆರವು ನೀಡುತ್ತದೆ . ಶಿಕ್ಷಣ ಕೇವಲ ಆರ್ಥಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಾಧನವಾಗಿರದೆ ರಾಜಕೀಯ , ಸಾಮಾಜಿಕ , ಕಾನೂನು ಪಾಲನೆ ಆರೋಗ್ಯ ಹಾಗೂ ಸಾಮಾಜಿಕ ಸ್ತರ ವಿನ್ಯಾಸದ ಅಸ್ತಿತ್ವದ ಸಂರಕ್ಷಣೆ ಮುಂತಾದ ಕಾರ್ಯಗಳನ್ನು ಮಾಡುತ್ತದೆ .

2 ) ಪಾತ್ರ ನಿರ್ವಹಣೆಯ ಕಾರ್ಯಗಳು : ಶಿಕ್ಷಣವು ಹಲವಾರು ವಿಶೇಷ ಪರಿಣಿತಿ ಅಧ್ಯಯನಗಳನ್ನು ಹಾಗೂ ವಿವಿಧ ಹಂತಗಳ ಶಿಕ್ಷಣದ ಕ್ರಮಗಳನ್ನು ಒಳಗೊಂಡಿದೆ . ಉದಾ : – ಕಲೆ , ವಿಜ್ಞಾನ , ವಾಣಿಜ್ಯ ಎಂಬುದು ವಿಶಾಲ ವರ್ಗೀಕರಣಗಳೊಂದಿಗೆ ಹಲವಾರು ಶಾಖೆಗಳನ್ನು ಒಳಗೊಂಡಿದೆ . ಆಧುನಿಕ ಯುಗದಲ್ಲಿ ಶಿಕ್ಷಣದ ಪಾತ್ರರಿಂದಲೇ ಹಲವಾರು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ . ಈ ಹಿನ್ನೆಲೆಯಲ್ಲಿ ಶಿಕ್ಷಣದ ಆಧಾರದ ಮೇಲೆ ಮತ್ತು ವ್ಯಕ್ತಿಗಳಿಗೆ ನಿರ್ದಿಷ್ಟ ಉದ್ಯೋಗಾವಕಾಶಗಳು ಲಭಿಸುತ್ತವೆ . ಶಿಕ್ಷಣವನ್ನು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಸಾಮಾಜಿಕ ಪರಂಪರೆಯನ್ನು ವೈಭವೀಕರಿಸುವ ಸಾಧನವೇ ಶಿಕ್ಷಣವಾಗಿದೆ .

3 ) ಸುಧಾರಣಾತ್ಮಕ ಕಾರ್ಯಗಳು , ಸಮಾಜದ ಅಭಿವೃದ್ಧಿ ಮತ್ತು ಪ್ರಗತಿಗೆ ಶಿಕ್ಷಣ ಮೂಲಭೂತ ಸಾಧನವಾಗಿದೆ . ಶಿಕ್ಷಣವು ಸ್ಥಾಪಿತಗೊಂಡಿರುವ ಸಾಮಾಜಿಕ ನಿಯಮಗಳನ್ನು ಪ್ರಶ್ನಿಸುವ ಸಾಮರ್ಥ್ಯ ತಡೆಯನ್ನು ಹೊಸ ಪೀಳಿಗೆಗಳು ಬೆಳೆಸಿಕೊಂಡಿದ್ದಾರೆ . ಉದಾ : ಸತಿ ಪದ್ಧತಿ , ಅಸ್ಪೃಶ್ಯತೆ , ಜೀತಪದ್ಧತಿ , ಸ್ತ್ರೀಯರ ಶೋಷಣೆ , ಮೂಢನಂಬಿಕೆ ಮುಂತಾದವು . ಈ ನಿಟ್ಟಿನಲ್ಲಿ ಶಿಕ್ಷಣವನ್ನು “ ಸಾಮಾಜಿಕ ಸುಧಾರಣೆಯ ಸಾಧನ ” ಎಂದು ಕರೆಯಲಾಗಿದೆ . ಶಿಕ್ಷಣವು ಸಾಮಾಜಿಕ ಅನುವರ್ತನೆ ಮತ್ತು ಸಾಮಾಜಿಕ ಚಳುವಳಿಗಳ ಉಗಮಕ್ಕೆ ಸಹಕಾರಿಯಾಗಿ ಸಾಮಾಜಿಕ ಪರಿವರ್ತನೆಯನ್ನು ತರುತ್ತದೆ .

10. ಅನೌಪಚಾರಿಕ ಶಿಕ್ಷಣವನ್ನು ವಿವರಿಸಿ .

ಅನೌಪಚಾರಿಕ ಶಿಕ್ಷಣವು ಶಿಕ್ಷಣದ ಪ್ರಕಾರಗಳಲ್ಲಿ ಒಂದಾಗಿದೆ . ಅನಿಶ್ಚಿತ , ಉದ್ದೇಶಪೂರ್ವಕವಲ್ಲದ , ನಿರಂತರವಾಗಿ ಸಮವಯಸ್ಕರ ಸಮೂಹ , ದುಡಿಮೆಯ ಜಾಗ ಮುಂತಾದ ಕಡೆ ಹಲವಾರು ವಿಷಯ ಕಲಿಯುವ ಪ್ರಕ್ರಿಯೆಯಾಗಿದೆ . ಈ ರೀತಿಯ ಶಿಕ್ಷಣವು ಕುಟುಂಬ , ನೆರೆಹೊರೆ , ಧರ್ಮದಿಂದ ಲಭ್ಯವಿರುವ ವಿಷಯ ಮತ್ತು ವಿಚಾರಗಳ ಸರಮಾಲೆಯಾಗಿದೆ . ಉದಾಹರಣೆಗೆ- ಕುಟುಂಬದಲ್ಲಿನ ಮಕ್ಕಳು ತಮ್ಮ ಸಮೂಹದ , ಭಾಷೆ , ಆಚಾರ ವಿಚಾರ , ಸಂಸ್ಕೃತಿ , ಸುತ್ತಮುತ್ತಲಿನ ಪರಿಸರ ಪ್ರಾಮುಖ್ಯತೆ ಮುಂತಾದ ಜೀವಿಸಲು ಅಗತ್ಯವಾದ ವಿಷಯಗಳನ್ನು ಅರಿತುಕೊಳ್ಳುತ್ತಾರೆ . ಇದರಿಂದ ಮುಂದೆ ಕಾಲಕ್ರಮೇಣ ಕುಟುಂಬದ ಹೊರಗೆ ಸಮವಯಸ್ಕರು , ರಕ್ತ ಸಂಬಂಧಿಗಳು , ಸಾಮೂಹಿಕ ಮಾಧ್ಯಮಗಳಿಂದ ವೈವಿಧ್ಯವಾದ ಹಾಗೂ ಹಲವಾರು ವಿಚಾರಧಾರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಳ್ಳುವರು .

11. ಔಪಚಾರಿಕ ಶಿಕ್ಷಣವನ್ನು ವಿವರಿಸಿ .

ಔಪಚಾರಿಕ ಶಿಕ್ಷಣವು ಶಿಕ್ಷಣದ ಪ್ರಕಾರಗಳಲ್ಲಿ ಒಂದು . ಪೂರ್ವ ಯೋಜಿತ ಉದ್ದೇಶಪೂರ್ವಕ ಮತ್ತು ಸ್ಥಾಪಿತ ನಿಯಮಗಳಿಂದ ವ್ಯವಸ್ಥಿತವಾಗಿರುವ ಶಿಕ್ಷಣ ವ್ಯವಸ್ಥೆಯನ್ನು “ ಔಪಚಾರಿಕ ಶಿಕ್ಷಣ ” ಎನ್ನುವರು . ಪಠ್ಯಕ್ರಮ ಮತ್ತು ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆ ಒಳಗೆ ವಿಚಾರಗಳ ವಿನಿಮಯ ಕೇಂದ್ರಗಳೇ ಔಪಚಾರಿಕ ಶಿಕ್ಷಣವಾಗಿದೆ . ಈ ಔಪಚಾರಿಕ ಶಿಕ್ಷಣದಲ್ಲಿ ಪ್ರಾಥಮಿಕ , ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಎಂದು ವರ್ಗೀಕರಿಸಲಾಗಿದೆ . ಈ ವರ್ಗೀಕರಣವು ವಯೋಮಾನದ ಆಧಾರವಾಗಿದೆ .

ಹಾಗೆಯೇ ಉನ್ನತ ಶಿಕ್ಷಣದಲ್ಲಿ ಕಲೆ , ವಾಣಿಜ್ಯ ಮತ್ತು ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣವೆಂದು ವರ್ಗೀಕರಿಸಲಾಗಿದ್ದು , ಅತಿ ಉನ್ನತವಾದ ಶಿಕ್ಷಣದಲ್ಲಿ ಸಾವಿರಾರು ಶಾಖೆಗಳಾಗಿ ವಿಂಗಡಿಸಲಾಗಿದೆ . ಒಟ್ಟಾರೆ ಪ್ರತಿಯೊಂದು ಶಾಖೆಗಳ ಶಿಕ್ಷಣ ವಿಶಿಷ್ಟ ಕಿರಣ ಮತ್ತು ವಿಶೇಷ ಪರಿಣತಿ ಕಡೆಗೆ ಗಮನ ಹರಿಸಲಾಗಿದೆ .

12 , ಧರ್ಮದ ಸಾಮಾಜಿಕ ಐಕ್ಯತೆಯ ಕಾರ್ಯವನ್ನು ತಿಳಿಸಿ .

ಧರ್ಮದ ಸಾಮಾಜಿಕ ಐಕ್ಯತೆಯ ಕಾರ್ಯಗಳೆಂದರೆ

1 ) ಎಮಿಲಿ ಡರ್ಖೀಂರವರು ಸಮಾಜದ ಜನರ ನಂಬಿಕೆ , ಶ್ರದ್ಧೆ , ಮೌಲ್ಯ , ಭಾವನೆ ಮುಂತಾದವು ಜನರನ್ನು ಒಗ್ಗೂಡಿಸುತ್ತವೆ . ಭಯ , ಭೀತಿ , ರೋಗ – ರುಜಿನಗಳಿಂದ ರಕ್ಷಿಸಿಕೊಳ್ಳಲು ಐಕ್ಯತೆಯಿಂದ ಸಾಮಾಜಿಕವಾಗಿ ಧರ್ಮಾಚರಣೆಯಲ್ಲಿ ತೊಡಗಿರುವುದನ್ನು ಕಾಣಬಹುದು .

2 ) ಮೌಲ್ಯ ಮತ್ತು ನೈತಿಕ ನಿಯಮಗಳನ್ನು ಧರ್ಮವು ಪವಿತ್ರವಾದವು ಎಂದು ವ್ಯಾಖ್ಯಾನಿಸಿ , ಮಾನವನ ಕ್ರಿಯೆಯನ್ನು ನಿರ್ಧರಿಸುತ್ತದೆ . ಸಾಮಾಜಿಕ ಹೊಣೆಗಾರಿಕೆಯನ್ನು ಧಾರ್ಮಿಕ ಕರ್ತವ್ಯವೆಂದು ಪರಿಗಣಿಸಿ ವೈಯಕ್ತಿಕ ಆಸಕ್ತಿಯನ್ನು ಸಾಮಾಜಿಕ ಐಕ್ಯತೆಯನ್ನು ತರುತ್ತದೆ .

3 )ಸಾಮಾಜಿಕ ಪ್ರಾರ್ಥನೆಯ ಸಾಮಾಜಿಕ ಐಕ್ಯತೆಯ ಸಾಧನವಾಗಿ ವ್ಯಕ್ತಿಯನ್ನು ಸಮಾಜದಲ್ಲಿ ಐಕ್ಯಗೊಳಿಸುತ್ತದೆ.

4 ) ಮಲಿನೋವಸ್ಕಿಯವರ ಪ್ರಕಾರ- “ ಹುಟ್ಟು ಸಾವು ಮತ್ತು ಸ್ವಾಭಾವಿಕ ವಿಕೋಪಗಳು ಒಂದು ಸಮೂಹವನ್ನು ಭಾವನಾತ್ಮಕವಾಗಿ ಘಾಸಿಗೊಳಿಸುತ್ತದೆ . ಇಂತಹ ಪರಿಸ್ಥಿತಿಯಲ್ಲಿ ಧಾರ್ಮಿಕ ಆಚರಣೆಯ ಸಮೂಹವನ್ನು ಒಟ್ಟುಗೂಡಿಸುತ್ತದೆ .

5 ) ಧರ್ಮವು ಮೌಲ್ಯಗಳಿಗೆ ಸಮರ್ಥನೆ ನೀಡುತ್ತದೆ .

6 ) ಒಳ್ಳೆಯ ಕೆಲಸಕ್ಕೆ ಗೌರವ ಮತ್ತು ತಪ್ಪಿಗೆ ಶಿಕ್ಷೆ ಸಾಮೂಹಿಕ ಮೌಲ್ಯಗಳನ್ನು ಸಮರ್ಥಿಸಿ ಸಾಮೂಹಿಕ ಐಕ್ಯದಲ್ಲಿ ಸಹಾಯಕವಾಗಿದೆ .

13. ಧರ್ಮದ ಸಾಮಾಜಿಕ ನಿಯಂತ್ರಣ ಕಾರ್ಯವನ್ನು ತಿಳಿಸಿ .

1 ) ಧರ್ಮದ ಸಾಮಾಜಿಕ ನಿಯಂತ್ರಣ ಕಾರ್ಯ ಇಂತಿದೆ ಧರ್ವವು ವ್ಯಕ್ತಿ ಮತ್ತು ಸಾಮುದಾಯಿಕ ವರ್ತನೆಯನ್ನು ನಿಯಂತ್ರಿಸುತ್ತದೆ . ಧರ್ಮವು ಸಾಮಾಜಿಕ ಪರಿವರ್ತನೆಯ ಸಾಧನವಾಗಿದೆ . ಎಂದು ಮ್ಯಾಕ್‌ವೆಬರ್ ತಮ್ಮ ಕೃತಿ ‘ ಪ್ರಾಟೆಸ್ಟಂಟರ ನೀತಿಗಳು ಮತ್ತು ಬಂಡವಾಳ ಶಾಹಿ ತತ್ವ ‘ ದಲ್ಲಿ ಧರ್ಮವು ಆರ್ಥಿಕ ಪ್ರಗತಿಗೆ ಸಾಧ್ಯವಾಗಿದೆ .

2 ) ಧಾರ್ಮಿಕ ಸುಧಾರಣೆಯ ಜೊತೆಗೆ ರಾಷ್ಟ್ರೀಯತೆ , ಸಾಂಸ್ಕೃತಿಕ ಪರಿವರ್ತನೆ , ನಾಗರೀಕ ಹಕ್ಕುಗಳ ಸಂರಕ್ಷಣೆಗೆ ಸಹಕಾರಿಯಾಗಿದೆ .

3 ) ಕಾರ್ಲ್‌ಮಾರ್ಕ್ಸ್‌ರವರು ಧರ್ಮವನ್ನು ಆಸೀಮಿನಂತಹ ಮಾದಕ ವಸ್ತುವಿಗೆ ಹೋಲಿಸಿ ಧರ್ಮವು ಉಳ್ಳವರ ಹಿತ ಕಾಯುತ್ತದೆ ಎಂದಿದ್ದಾರೆ .

4 ) ಧರ್ಮವು ಆರ್ಥಿಕ ಪ್ರಗತಿ , ಸಮಾಜ ಸುಧಾರಣೆ ಮತ್ತು ರಾಷ್ಟ್ರೀಯ ಜಾಗೃತಿಗೆ ಸಹಾಯಕವಾಗಿದೆ .

14. ಶಿಕ್ಷಣದ ಪಾತ್ರ ನಿರ್ವಹಣೆಯ ಪಾತ್ರಗಳನ್ನು ವಿವರಿಸಿ .

ಶಿಕ್ಷಣ ಹಲವಾರು ವಿಶೇಷ ಪರಿಣಿತಿ ಅಧ್ಯಯನಗಳನ್ನು ಹಾಗೂ ವಿವಿಧ ಹಂತಗಳ ಶಿಕ್ಷಣದ ಕ್ರಮಗಳನ್ನು ಒಳಗೊಂಡಿದೆ . ಉದಾ : – ಕಲೆ , ವಿಜ್ಞಾನ , ವಾಣಿಜ್ಯ ಎಂಬುದು ವಿಶಾಲ ವರ್ಗೀಕರಣದೊಂದಿಗೆ ಹಲವಾರು ಶಾಖೆಗಳನ್ನು ಒಳಗೊಂಡಿದೆ . ಒಟ್ಟಾರೆ ಶಿಕ್ಷಣದ ಅರ್ಹತೆಯಿಂದ ವಿವಿಧ ವೃತ್ತಿಗಳಲ್ಲಿ ದುಡಿದು ಅಂತಸ್ತು ಮತ್ತು ಸ್ಥಾನಮಾನಗಳನ್ನು ಗಳಿಸುತ್ತಾರೆ . ಆಧುನಿಕ ಯುಗದಲ್ಲಿ ಶಿಕ್ಷಣದ ಪಾತ್ರದಿಂದಲೇ ಹಲವಾರು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ . ಈ ಹಿನ್ನೆಲೆಯಲ್ಲಿ ಶಿಕ್ಷಣದ ಆಧಾರದ ಮೇಲೆ ಮತ್ತು ವ್ಯಕ್ತಿಗಳಿಗೆ ನಿರ್ದಿಷ್ಟ ಉದ್ಯೋಗಾವಕಾಶಗಳು ಲಭಿಸುತ್ತದೆ . ಶಿಕ್ಷಣದ ಕೊರತೆಯಿಂದ ಹಲವಾರು ಜನ ಕೆಳಅಂತಸ್ತು ಮತ್ತು ಸಾಧಾರಣ ಜೀವನಮಟ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ . ಶಿಕ್ಷಣದ ಯಶಸ್ಸು ಮತ್ತು ವಿಫಲತೆಯಿಂದ ಸಾಮಾಜಿಕ , ಆರ್ಥಿಕ ಪ್ರಗತಿ ಮತ್ತು ಅಧಿಕಾರ ಹಂಚಿಕೆಯನ್ನು ನ್ಯಾಯ ಸಮ್ಮತಗೊಳಿಸಲಾಗಿದೆ . ಶಿಕ್ಷಣವನ್ನು ಸಮಾಜದ ಎಲ್ಲಾ ವರ್ಗದ ಜನರು ವ್ಯಾಪಕ ಅವಲಂಬಿಸಿದ್ದಂತೆ ಅದರ ಗುಣಮಟ್ಟ ಮತ್ತು ನಿರ್ದಿಷ್ಟನಕ್ಕೆ ಕಾಳಜಿ ವಹಿಸಲಾಗಿದೆ . ಇವೆಲ್ಲಾ ಬೆಳವಣಿಗೆಯಿಂದಾಗಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಪ್ರಾಥಮಿಕ , ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆ ವ್ಯಾಪಕವಾಗಿ ಸ್ಥಾಪನೆಗೊಂಡಿದೆ . ಶಿಕ್ಷಣದ ಸಾರ್ವತ್ರಿಕ ಉದ್ದೇಶ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದೆ . ಶಿಕ್ಷಣವನ್ನು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಸಾಮಾಜಿಕ ಪರಂಪರೆಯನ್ನು ವೈಭವೀಕರಿಸುವ ಸಾಧನವೇ ಶಿಕ್ಷಣ . ಆದರೆ ಪ್ರಸಕ್ತ ಸಮಾಜದಲ್ಲಿ ಶಿಕ್ಷಣದ ಉದ್ದೇಶ ಮತ್ತು ವಿಷಯದ ಮಹತ್ವವನ್ನು ರಾಜಕೀಯ ಆರ್ಥಿಕ ಶಕ್ತಿಗಳು ನಿರ್ಧರಿಸುತ್ತದೆ .

15. ಶಿಕ್ಷಣದ ಸಂರಕ್ಷಣಾತ್ಮಕ ಪಾತ್ರಗಳನ್ನು ವಿವರಿಸಿ .

ಅವಶ್ಯಕ ಮಾಹಿತಿಗಳನ್ನು ಹಿರಿಯರು ಯುವ ಪೀಳಿಗೆ ರವಾನೆ ಮಾಡುವ ಪ್ರಯತ್ನವೇ ಶಿಕ್ಷಣದ ಸಂರಕ್ಷಣಾತ್ಮಕ ಕಾರ್ಯವೆಂದು ಪರಿಗಣಿಸಲಾಗಿದೆ . ಸಾಮಾಜಿಕ ಸಂರಚನೆಯಿಂದ ಸಾಮಾಜಿಕ ಮೌಲ್ಯ ಮತ್ತು ಜೀವನ ಶೈಲಿಗಳನ್ನು ಹೊಸ ಪೀಳಿಗೆಗಳಿಗೆ ವರ್ಗಾಯಿಸಬೇಕಾಗಿರುವುದರಿಂದ ಪ್ರತಿಯೊಂದು ಸಮಾಜಗಳಲ್ಲಿ ತಮ್ಮ ಭವ್ಯ ಪರಂಪರೆಯ ಸಂರಕ್ಷಿಸಿ ಮತ್ತು ಯುವ ಪೀಳಿಗೆಗಳು ತಮ್ಮ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಜೀವನವನ್ನು ರೂಪಿಸಿಕೊಳ್ಳಲು ಗಮನ ನೀಡಲಾಗಿದೆ . ಕಾಲಕ್ರಮೇಣ ಪರಿವರ್ತನೆಯಿಂದ ಶಿಕ್ಷಣವು ಮಾರ್ಪಾಡುಗಳಾಗುತ್ತದೆ . ಪ್ರಸಕ್ತ ಕಾಲಕ್ಕೆ ಅನ್ವಯಿಸುವ ಜ್ಞಾನವನ್ನು ಸ್ವೀಕರಿಸಿ ಮತ್ತು ಅಂತಹ ಹೊಸ ಜ್ಞಾನದ ಬಗ್ಗೆ ಅರಿವು ಮತ್ತು ಸಂಪೂರ್ಣ ನೈಪುಣ್ಯತೆಯನ್ನು ಪಡೆದುಕೊಳ್ಳಲು ನೆರವು ನೀಡುತ್ತದೆ . ಶಿಕ್ಷಣ ಕೇವಲ ಆರ್ಥಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಾಧನವಾಗಿರದೆ ರಾಜಕೀಯ , ಸಾಮಾಜಿಕ , ಕಾನೂನು ಪಾಲನೆ , ಆರೋಗ್ಯ ಹಾಗೂ ಸಾಮಾಜಿಕ ಸ್ತರವಿನ್ಯಾಸದ ಅಸ್ತಿತ್ವದ ಸಂರಕ್ಷಣೆ ಮುಂತಾದ ಕಾರ್ಯಗಳನ್ನು ಮಾಡುತ್ತದೆ .

16. ಶಿಕ್ಷಣದ ಸುಧಾರಣಾತ್ಮಕ ಪಾತ್ರಗಳನ್ನು ವಿವರಿಸಿ .

ಸಮಾಜದ ಅಭಿವೃದ್ಧಿ ಮತ್ತು ಪ್ರಗತಿಗೆ ಶಿಕ್ಷಣ ಮೂಲಭೂತ ಸಾಧನವಾಗಿದೆ . ಶಿಕ್ಷಣವು ಸ್ಥಾಪಿತಗೊಂಡಿರುವ ಸಾಮಾಜಿಕ ನಿಯಮಗಳನ್ನು ಪ್ರಶ್ನಿಸುವ ಸಾಮರ್ಥ್ಯತೆಯನ್ನು ಹೊಸ ಪೀಳಿಗೆಗಳು ಬೆಳೆಸಿಕೊಂಡಿದ್ದಾರೆ . ಉದಾ : – ಸತಿಪದ್ಧತಿ , ಅಸ್ಪೃಶ್ಯತೆ , ಜೀತಪದ್ಧತಿ , ಸ್ತ್ರೀಯರ ಶೋಷಣೆ , ಮೂಢನಂಬಿಕೆ ಮುಂತಾದವು ಈ ನಿಟ್ಟಿನಲ್ಲಿ ಶಿಕ್ಷಣವನ್ನು “ ಸಾಮಾಜಿಕ ಸುಧಾರಣಾ ಸಾಧನ ” ಎಂದು ಕರೆಯಲಾಗಿದೆ . ಶಿಕ್ಷಣವು ಸಾಮಾಜಿಕ ಅನುವರ್ತನೆ ಮತ್ತು ಸಾಮಾಜಿಕ ಚಳುವಳಿಗಳ ಉಗಮಕ್ಕೆ ಸಹಾಯಕಾರಿಯಾಗಿ ಸಾಮಾಜಿಕ ಪರಿವರ್ತನೆಯನ್ನು ತರುತ್ತದೆ . ವಿದ್ಯಾರ್ಥಿಗಳ ಪಠ್ಯಕ್ರಮಗಳು ಮತ್ತು ಪರೀಕ್ಷೆಯ ವ್ಯವಸ್ತೆಗೆ ವ್ಯವಸ್ಥಿತ ಪ್ರವಚನಗಳು ಮತ್ತು ವಿದ್ಯಾರ್ಥಿಗಳ ಗ್ರಹಿಸುವಿಕೆ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ . ಒಟ್ಟಾರೆ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ವ್ಯವಹರಿಸುತ್ತಾ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಶಾಲೆಗೆ ದೈಹಿಕ ಮತ್ತು ಮಾನಸಿಕ ಹಾಜರಿಯಾಗುತ್ತ ವಿಷಯಗಳನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ . ಪಠ್ಯಕ್ರಮಗಳು ಮತ್ತು ಪರೀಕ್ಷೆಗಳು ನೆಪಮಾತ್ರವಾಗಿದೆ . ದುಡಿಯುವ ವರ್ಗಗಳನ್ನು ಸೃಷ್ಟಿಸಲು ಇಂದಿನ ಶಿಕ್ಷಣ ಕಾರ್ಯಕ್ರಮಗಳು ಸಹಕಾರಿಯಾಗಿವೆ . ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸ್ವಯಂ ಅಭಿಪ್ರಾಯ ಮತ್ತು ಸೃಜನಶೀಲತೆ ಚಿಂತನೆ ಬೆಳಸಿಕೊಳ್ಳಲು ಶಿಕ್ಷಣ ಅನುವು ಮಾಡಿಕೊಟ್ಟಿದೆ .

17) ಶಿಕ್ಷಣ ಎಂದರೇನು ? ಶಿಕ್ಷಣದ ಮೂರು ವ್ಯಾಖ್ಯೆಗಳನ್ನು ಬರೆಯಿರಿ .

ಕೃಷಿ , ವಿಜ್ಞಾನ , ವೈದ್ಯಕೀಯ , ತಾಂತ್ರಿಕ , ಸಸ್ಯಶಾಸ್ತ್ರ , ಅರ್ಥಶಾಸ್ತ್ರ , ಇತಿಹಾಸ , ವಾಣಿಜ್ಯಶಾಸ್ತ್ರ ಹೀಗೆ ವಿವಿಧ ವಿಜ್ಞಾನಗಳು ಪ್ರಕೃತಿ ಮತ್ತು ಸಮಾಜದ ವಿವಿಧ ಅಂಶಗಳ ಬಗ್ಗೆ ಕೊಡುವ ಜ್ಞಾನವೇ ‘ ಶಿಕ್ಷಣ ‘ ವಾಗಿದೆ . ‘ ಶಿಕ್ಷಣ ‘ ಎಂಬ ಪದದ ತತ್ಸಮಾನ ಪದವೇ Education ಆಗಿದೆ . ಇದು ಲ್ಯಾಟೀನ್ ಭಾಷೆಯ “ ಎಜುಕೇರ್ ” ಎಂಬುದರಿಂದ ಉತ್ಪತ್ತಿಯಾಗಿದ್ದು ಇದರ ಮೂಲ ಅರ್ಥ ‘ ಬೆಳೆಸು ‘ , ‘ ಮೇಲೆತ್ತು ‘ ಎಂಬುದನ್ನು ಸೂಚಿಸುತ್ತದೆ . ಶಿಕ್ಷಣಕ್ಕೆ ವಿವಿಧ ಸಮಾಜಶಾಸ್ತ್ರಜ್ಞರು ಕೊಟ್ಟಿರುವ ವ್ಯಾಖ್ಯೆ ಇಂತಿದೆ .

1 ) ಎಮಿಲಿ ಡಾರ್ಖ ೦ ರವರ ಪ್ರಕಾರ- ಯಾವ ಪೀಳಿಗೆಯನ್ನು ಸಾಮಾಜೀಕರಣಗೊಳಿಸುವ ನಿರಂತರ ಪ್ರಕ್ರಿಯೆಯಾಗಿ , ಆಲೋಚನೆ , ಭಾವನೆ , ಮತ್ತು ಕ್ರಿಯೆಯನ್ನು ಬೆಳೆಸುವುದೇ ಶಿಕ್ಷಣ . ಎಂಬುದಾಗಿ ಅಭಿಪ್ರಾಯ ಪಡುತ್ತಾರೆ .

2 ) ಡಬ್ಲ್ಯೂ ಜಿ . ಸಮ್ನರ್ ರವರು ಹೇಳಿರುವಂತೆ “ ಶಿಕ್ಷಣವು ಮಕ್ಕಳಿಗೆ ಸಮುದಾಯದ ನೀತಿ – ನಿಯಮಗಳನ್ನು ವರ್ಗಾಯಿಸುವ ಕ್ರಿಯೆ , ಈ ಮೂಲಕ ಸರಿ – ತಪ್ಪುಗಳನ್ನು ಗ್ರಹಿಸುವುದು .

3 ) ಎ , ಡಬ್ಲ್ಯೂ ಗ್ರೀನ್ ರವರ ಅಭಿಪ್ರಾಯದಲ್ಲಿ “ ಶಿಕ್ಷಣವು ಯುವ ಪೀಳಿಗೆಯನ್ನು ಪ್ರಜ್ಞಾಪೂರ್ವಕವಾಗಿ ತರಬೇತಿ ನೀಡಿ ವಯಸ್ಕರ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಕ್ರಿಯೆ ಮತ್ತು ಶಾಲೆ ಎಂಬ ಔಪಚಾರಿಕ ಸಂಘಟನೆಯಿಂದ ಪಡೆಯುವ ತರಬೇತಿಯಾಗಿದೆ .

FAQ

1 ) ವಿವಾಹ ಎಂದರೇನು ?

ಅನುಮತಿ ನೀಡಬಹುದಾದ ಸಂಗಾತಿಗಳ ನಡುವೆ ಶಾಶ್ವತವಾದ ಬಂಧನವೇ “ ವಿವಾಹ ” .

2 ) “ The History of Human Marriage ” ಎಂಬ ಗ್ರಂಥದ ಕರ್ತೃಯಾರು ?

“ ಎಡ್ವಡ್ ವೆಸ್ಟರ್ ಮಾರ್ಕ್ ”

3 ) ಏಕ ಪತ್ನಿತ್ವ ಎಂದರೇನು ?

ಒಬ್ಬ ಪುರುಷ ತನ್ನ ಜೀವಿತಾವಧಿಯಲ್ಲಿ ಒಬ್ಬಳೇ ಪತ್ನಿಯನ್ನು ಜೀವನ ಸಂಗಾತಿಯಾಗಿ ಹೊಂದಿರುವುದನ್ನು ಏಕ ಪತ್ನಿತ್ವ ಎನ್ನುವರು .

ಇತರೆ ವಿಷಯಗಳು :

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

All Subjects Notes

All Notes App

Leave a Reply

Your email address will not be published. Required fields are marked *