ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-7 ಸಾಮಾಜಿಕ ಸಂಶೋಧನೆ ನೋಟ್ಸ್‌ | 1st Puc Sociology 7th Chapter Notes in Kannada

ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-7 ಸಾಮಾಜಿಕ ಸಂಶೋಧನೆ ನೋಟ್ಸ್‌, 1st Puc Sociology 7th Chapter Notes in Kannada Question Answer Mcq Pdf Download, Kseeb Solution For Class 11 Sociology Chapter 7 Notes Social Research Notes in Kannada Samajika Samshodhane Sociology Notes in Kannada

ಅಧ್ಯಾಯ-7 ಸಾಮಾಜಿಕ ಸಂಶೋಧನೆ

ಅಧ್ಯಾಯ-7 ಸಾಮಾಜಿಕ ಸಂಶೋಧನೆ

1st Puc Sociology 7th Chapter Question Answer in Kannada

I. 1 . ಒಂದು ಅಂಕದ ಪ್ರಶ್ನೆಗಳು : ( ಒಂದು ವಾಕ್ಯದಲ್ಲಿ ಉತ್ತರಿಸಿ )

1. ವೀಕ್ಷಣೆ / ಅವಲೋಕನ ಎಂದರೇನು ?

ಅವಲೋಕನ ಎಂದರೆ ಉದ್ದೇಶವಿರಿಸಿಕೊಂಡು ವೀಕ್ಷಣೆ ಮಾಡುವುದು ಎಂದರ್ಥ ಪಿ . ವಿ . ಯಂಗ್‌ರವರು – ಅವಲೋಕನ ಎಂದರೆ ವ್ಯವಸ್ಥಿತ ಉದ್ದೇಶ ಪೂರಕ ಅಧ್ಯಯನವನ್ನು ಘಟನೆಗಳು ಜರುಗಿದಂತೆ ವೀಕ್ಷಿಸುವುದು , ಸಾಮಾಜಿಕ ಪರಿಕಲ್ಪನೆ ಸಂಸ್ಕೃತಿಯ ಸ್ವರೂಪ ಮತ್ತು ಮಾನವನ ವರ್ತನೆಗಳ ಸಂಕೀರ್ಣತೆಯ ಪರಸ್ಪರ ಸಂಭಂಧಗಳ ಅಂಶಗಳನ್ನು ಉದ್ದೇಶಪೂರ್ವಕವಾಗಿ ವೀಕ್ಷಿಸುವುದು . ‘ ಎಂಬುದಾಗಿ ಹೇಳಿದ್ದಾರೆ .

2. ಸಾಮಾಜಿಕ ಸಂಶೋಧನೆ ಎಂದರೇನು ?

ಸಹವರ್ತಿಗಳಾಗಿ ಜೀವಿಸುವ ಜನರ ಕಾರ್ಯ ನಿರ್ವಹಣೆಯ ಪ್ರಕ್ರಿಯೆಗಳ ಪರಿಶೀಲನೆಗೆ ಸಾಮಾಜಿಕ ಸಂಶೋಧನೆ ಎನ್ನುವರು .

3. ಪ್ರಶ್ನಾವಳಿ ಎಂದರೇನು ?

ಮುದ್ರಿತ ಪ್ರಶ್ನೆಗಳಿಗೆ ಉತ್ತರಗಳನ್ನು ತುಂಬಿ ಮಾಹಿತಿ ಸಂಗ್ರಹಿಸುವ ವಿಧಾನಕ್ಕೆ ಪ್ರಶ್ನಾವಳಿ ಎನ್ನುವರು .

4. ಪ್ರಾಥಮಿಕ ದತ್ತಾಂಶ ಎಂದರೇನು ?

ನಿರ್ಧಿಷ್ಟ ಸಮಸ್ಯೆಯ ಪರಿಹಾರಕ್ಕೆ ನಿರ್ಧಿಷ್ಟ ಉದ್ದೇಶದಿಂದ ನಿರ್ಧಿಷ್ಟವಾಗಿ ಸಂಶೋಧನೆಯ ಮೂಲಕ ಸಂಗ್ರಹಿಸುವ ದತ್ತಾಂಶಗಳಿಗೆ ಪ್ರಾಥಮಿಕ ದತ್ತಾಂಶಗಳು ಎನ್ನುವರು . ಸಂಶೋಧನೆ ಪ್ರಥಮ ಬಾರಿಗೆ ಸಂಗ್ರಹಿಸುವ ದತ್ತಾಂಶವನ್ನು ಪ್ರಾಥಮಿಕ ದತ್ತಾಂಶ ‘ ಎನ್ನುವರು .

5. ಮಾಧ್ಯಮಿಕ ದತ್ತಾಂಶ ಎಂದರೇನು ?

ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸುವ ದತ್ತಾಂಶವನ್ನು ಮಾಧ್ಯಮಿಕ ದತ್ತಾಂಶ ಎನ್ನುವರು . ಅಂದರೆ ಬೇರೊಂದು ಉದ್ದೇಶಕ್ಕಾಗಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶಗಳಿಗೆ ಮಾಧ್ಯಮಿಕ ದತ್ತಾಂಶ ಎನ್ನುವರು.

6. ಸಾಮಾಜಿಕ ಸಂಶೋಧನೆ ಒಂದು ವ್ಯಾಖ್ಯೆ ನೀಡಿ .

ಪಿ . ವಿ . ಯಂಗ್‌ರವರು – ‘ ಕ್ರಮಬದ್ಧವಾದ ವಿಧಾನಗಳ ಮೂಲಕ ಹೊಸ ಘಟನೆಗಳನ್ನು ಕಂಡುಹಿಡಿಯುವುದು ಅಥವಾ ಆ ಘಟನೆಗಳನ್ನು ಪರಿಶೀಲಿಸಿ ಅದರ ಪರಿಣಾಮ ಪರಸ್ಪರ ಸಂಬಂಧಗಳ ಸಾಮಾನ್ಯ ವಿವರಣೆ ಮತ್ತು ಪ್ರಕಟಿತ ನಿಯಮಗಳನ್ನು ನಿಯಂತ್ರಿಸುವುದನ್ನು ಸಾಮಾಜಿಕ ಸಂಶೋಧನೆ ‘ ಎನ್ನಬಹುದು ಎಂದಿದ್ದಾರೆ .

7. ಸಂದರ್ಶನ ಮತ್ತು ಪ್ರಶ್ನಾವಳಿಗಳ ನಡುವಿನ ಒಂದು ವ್ಯತ್ಯಾಸವನ್ನು ತಿಳಿಸಿ .

ಸಂದರ್ಶನ ಮತ್ತು ಪ್ರಶ್ನಾವಳಿಗಳ ನಡುವಿನ ಒಂದು ವ್ಯತ್ಯಾಸವೆಂದರೆ – ಸಂದರ್ಶನದಲ್ಲಿ ಉತ್ತರಿಸುವ ವ್ಯಕ್ತಿ ಸಂದರ್ಶಕರು ಕೇಳುವ ಪ್ರಶ್ನೆಗಳಿಗೆ ಮಾತ್ರ ಅವರಿಗೆ ಸಮಾಧಾನವಾಗುವ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ . ವ್ಯಕ್ತಿಗತ ಅಭಿಪ್ರಾಯಗಳು ಪ್ರಯೋಜನಕ್ಕೆ ಬರಲಾರವು . ಆದರೆ ಪ್ರಶ್ನಾವಳಿಗಳಲ್ಲಿ ಪ್ರಶ್ನೆಗೆ ಸೂಕ್ತ ಉತ್ತರವನ್ನು ಕೊಡುವಾಗ ತನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದೆ .

II . ಎರಡು ಅಂಕದ ಪ್ರಶ್ನೆಗಳು : ( 2-3 ವಾಕ್ಯಗಳಲ್ಲಿ ಉತ್ತರಿಸಿ )

1. ಪ್ರಾಥಮಿಕ ದತ್ತಾಂಶ ಹಾಗೂ ಮಾಧ್ಯಮಿಕ ದತ್ತಾಂಶಗಳ ನಡುವಿನ ಎರಡು ವ್ಯತ್ಯಾಸಗಳನ್ನು ತಿಳಿಸಿ.

ಪ್ರಾಥಮಿಕ ದತ್ತಾಂಶ ಹಾಗೂ ಮಾಧ್ಯಮಿಕ ದತ್ತಾಂಶಗಳ ನಡುವಿನ ಎರಡು ವ್ಯತ್ಯಾಸಗಳೆಂದರೆ

ಪ್ರಾಥಮಿಕ ದತ್ತಾಂಶ :

1. ಸಂಶೋಧನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಶೋಧಕನು ಪ್ರಥಮ ಬಾರಿಗೆ ಸಂಗ್ರಹಿಸುವುದು .

2. ಪ್ರಾಥಮಿಕ ದತ್ತಾಂಶವು ಮೂಲ ದತ್ತಾಂಶವಾಗಿದ್ದು ಸಂಶೋಧಕನು ಕ್ಷೇತ್ರದಿಂದ ಸಂಗ್ರಹಿಸುತ್ತಾನೆ .

ಮಾಧ್ಯಮಿಕ ದತ್ತಾಂಶ :

1. ಸಂಶೋಧಕನು ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸುವನು .

2. ಮಾಧ್ಯಮಿಕ ದತ್ತಾಂಶವು ಹಲವಾರು ವಿಧಾನ – ಸಾಧನಗಳನ್ನು ಅನುಸರಿಸಿ ಸಂಗ್ರಹಿಸಲಾಗುತ್ತದೆ .

2. ಅವಲೋಕನ / ವೀಕ್ಷಣೆಯ ಎರಡು ವಿಧಗಳನ್ನು ಕುರಿತು ಬರೆಯಿರಿ ,

ಅವಲೋಕನದ ಎರಡು ವಿಧಗಳೆಂದರೆ

1 ) ನಿಯಂತ್ರಿತ ಮತ್ತು ಅನಿಯಂತ್ರಿತ ಅವಲೋಕನ : ನಿಯಂತ್ರಿತ ಅವಲೋಕನವು ಪ್ರಯೋಗಾಲಯದಲ್ಲಿ ಜರುಗುವುದು . ಇಲ್ಲಿ ವೀಕ್ಷಕನು ಕೆಲವು ಅಧ್ಯಯನದ ಕೆಲವು ಅಂಶಗಳನ್ನು ನಿಯಂತ್ರಣದಲ್ಲಿಡುವನು . ಅನಿಯಂತ್ರಿತ ಅವಲೋಕನವೆಂದರೆ ಸಹಕಾರವಿಲ್ಲದ ಅವಲೋಕನ . ಇದು ಸಹಜ ಪರಿಸರದಲ್ಲಿರುವುದನ್ನು ನಿಯಂತ್ರಣಗಳಿಲ್ಲದೆ ಅವಲೋಕಿಸುವುದು .

2 ) ಸಹಭಾಗಿ ಅವಲೋಕನ ಮತ್ತು ಅನಹಭಾಗಿ ಅವಲೋಕನ: ಸಹಭಾಗಿ ಅವಲೋಕನದಲ್ಲಿ ಸಂಶೋಧಕನು ಸಂಶೋಧನ ಅಧ್ಯಯನದ ಸಾಮಾಜಿಕ ಪರಿಕಲ್ಪನೆಯಲ್ಲಿ ಭಾಗವಹಿಸುವನು . ಪಾಲ್ಗೊಳ್ಳದ ಅವಲೋಕನದಲ್ಲಿ ಸಂಶೋಧಕನು ಏಕಾಂಗಿಯಾಗಿ ಪ್ರತ್ಯೇಕವಾಗಿದ್ದುಕೊಂಡು ವೀಕ್ಷಿಸುವನು .

3. ಎರಡು ವಿಧದ ಸಂದರ್ಶನಗಳನ್ನು ತಿಳಿಸಿರಿ .

ಎರಡು ವಿಧದ ಸಂದರ್ಶನಗಳೆಂದರೆ

1 ) ರಚನಾತ್ಮಕ ಸಂದರ್ಶನ .

2 ) ಮೌಖಿಕ ಅಥವಾ ಅನೌಪಚಾರಿಕ ಸಂದರ್ಶನ .

4 . ಪ್ರಾಥಮಿಕ ದತ್ತಾಂಶದ ಎರಡು ಮೂಲಗಳನ್ನು ತಿಳಿಸಿರಿ .

ಪ್ರಾಥಮಿಕ ದತ್ತಾಂಶದ ಎರಡು ಮೂಲಗಳೆಂದರೆ

1) ಅವಲೋಕನ .

2) ಸಂದರ್ಶನ .

5. ಮಾಧ್ಯಮಿಕ ದತ್ತಾಂಶಗಳ ಎರಡು ವಿಧಗಳನ್ನು ತಿಳಿಸಿರಿ .

1 ) ವೈಯಕ್ತಿಕ ದಾಖಲೆಗಳು ,

2 ) ಸಾರ್ವಜನಿಕ ದಾಖಲೆಗಳು ,

6. ‘ ವಸ್ತು ನಿಷ್ಟತೆ ‘ ಎಂದರೇನು ?

ವೀಕ್ಷಕನ ವೈಯಕ್ತಿಕ ಅಭಿಪ್ರಾಯ , ಪೂರ್ವಗ್ರಹ ಪೀಡಿತ ದೃಷ್ಟಿ , ಅನಿಸಿಕೆಗಳು ಮುಂತಾದ ಆಮಿಷಗಳಿಗೆ ಆಸ್ಪದ ಕೊಡದೆ ಮಾಡುವ ಅವಲೋಕನವನ್ನು ವಸ್ತು ನಿಷ್ಪತೆ ‘ ಎನ್ನುವರು .

7. ಅವಲೋಕನದ ಎರಡು ಅನಾನುಕೂಲತೆಗಳನ್ನು ತಿಳಿಸಿರಿ .

ಅವಲೋಕನದ ಎರಡು ಅನಾನುಕೂಲತೆಗಳೆಂದರೆ-

1) ಈ ವಿಧಾನದಿಂದ ( ಅವಲೋಕನದಿಂದ ) ಸಂಗ್ರಹಿಸಿದ ಮಾಹಿತಿಯನ್ನು ಕ್ರೋಢೀಕರಿಸಲು ಸಾಧ್ಯವಿಲ್ಲ .

2 ) ಅವಲೋಕನ ವಿಧಾನದಿಂದ ಖಾಸಗಿ ನಡವಳಿಕೆಯನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ .

8. ಪ್ರಶ್ನಾವಳಿಯ ಎರಡು ಅನುಕೂಲತೆಗಳನ್ನು ಬರೆಯಿರಿ ,

1 ) ಪ್ರಶ್ನಾವಳಿಯಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸುವ ವ್ಯಕ್ತಿಗಳಿಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶವಿದೆ .

2 ) ಪ್ರಶ್ನಾವಳಿಯ ಪ್ರಶ್ನೆಗಳಿಗೆ ಉತ್ತರಿಸುವವರ ಮೇಲೆ ಭಾವನಾತ್ಮಕ ಒತ್ತಡ ಹೇರುವುದಿಲ್ಲ . ಮುಕ್ತತೆ ಮತ್ತು ಸಮಯದ ಲಭ್ಯತೆಯ ಪ್ರಶ್ನೆಗಳಿಗೆ ಉತ್ತರಿಸುವವರಿಗೆ ದೊರೆಯುತ್ತದೆ . ಇವು ಪ್ರಶ್ನಾವಳಿಯಿಂದಾಗುವ ಅನುಕೂಲಗಳಾಗಿವೆ .

1 Puc Sociology Notes in Kannada 7 Chapter

III , ಐದು ಅಂಕದ ಪ್ರಶ್ನೆಗಳು : ( 10-15 ವಾಕ್ಯಗಳಲ್ಲಿ ಉತ್ತರಿಸಿ )

1. ಪ್ರಾಥಮಿಕ ದತ್ತಾಂಶ ಎಂದರೇನು ?

ಪ್ರಾಥಮಿಕ ದತ್ತಾಂಶದ ಮೂಲವನ್ನು ಚರ್ಚಿಸಿರಿ . ಸಂಶೋಧನೆಗೆ ಸಂಭಂದಿಸಿದ ಮಾಹಿತಿಯನ್ನು ಸಂಶೋಧಕನು ಪ್ರಥಮ ಬಾರಿಗೆ ಸಂಗ್ರಹಿಸುವುದನ್ನು ಪ್ರಾಥಮಿಕ ದತ್ತಾಂಶ ಎನ್ನುವರು . “ ರಾಬರ್ಟ್‌ಸನ್ ಮತ್ತು ರೈಟ್ ” ರವರ ಪ್ರಕಾರ – – ಪ್ರಾಥಮಿಕ ದತ್ತಾಂಶವು ನಿರ್ಧಿಷ್ಟ ಸಂಶೋಧನೆಯ ಸಮಸ್ಯೆಯ ಪರಿಹಾರಕ್ಕೆ ನಿರ್ಧಿಷ್ಟ ಉದ್ದೇಶದಿಂದ ಸಂಗ್ರಹಿಸಿದ ದತ್ತಾಂಶವಾಗಿದೆ . ಪ್ರಾಥಮಿಕ ದತ್ತಾಂಶದ ಮೂಲಗಳೆಂದರೆ ಅವಲೋಕನ , ಸಂದರ್ಶನ , ಪ್ರಶ್ನಾವಳಿ ಮತ್ತು ಸಾಮಾಜಿಕ ಸಮೀಕ್ಷೆ ಇತ್ಯಾದಿ . ಅವಲೋಕನ ಎಂದರೆ ಉದ್ದೇಶವಿರಿಸಿಕೊಂಡು ಪಿ . ವಿ . ಯಂಗ್‌ರವರ ಅಭಿಪ್ರಾಯದಂತೆ – ‘ ಅವಲೋಕನ ಎಂದರೆ ವ್ಯವಸ್ಥಿತ ಮತ್ತು ಉದ್ದೇಶ ಪೂರಕ ಅಧ್ಯಯನವನ್ನು ಘಟನೆಗಳು ಜರುಗಿದಂತೆ ವೀಕ್ಷಿಸುವುದು , ಅವಲೋಕನದಲ್ಲಿ ಎರಡು ವಿಧಗಳಿವೆ ಅವುಗಳೆಂದರೆ

1 ) ನಿಯಂತ್ರಿತ ಮತ್ತು ಅನಿಯಂತ್ರಿತ ಅವಲೋಕನ

2 ) .ಸಹಭಾಗಿ ಅವಲೋಕನ ಮತ್ತು ಅಸಹಭಾಗಿ ಅವಲೋಕನ

ಸಂದರ್ಶನ : ಎಂದರೆ ಅಂತರ್‌ಕ್ರಿಯೆಯ ಪ್ರಕ್ರಿಯೆಯಾಗಿದೆ . ಸಂದರ್ಶನವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು ಅವುಗಳೆಂದರೆ

1 ) ರಚನಾತ್ಮಕ ಸಂದರ್ಶನ ಹಾಗೂ

2) ಮೌಖಿಕ ಸಂದರ್ಶನ . 2 )

ಪ್ರಶ್ನಾವಳಿ : ಮಾಹಿತಿ ಸಂಗ್ರಹಣೆಗೆ ಪ್ರಶ್ನಾವಳಿ ಒಂದು ವಿಧಾನವಾಗಿದೆ . ಮುದ್ರಿತ ಅಥವಾ ಟೈಪ್ ಮಾಡಿದ ಪ್ರಶ್ನೆಗಳ ಪಟ್ಟಿಯೆ ಪ್ರಶ್ನಾವಳಿ ಪ್ರಶ್ನೆಗಳಲ್ಲಿ ಎರಡು ವಿಧಗಳಿವೆ , ಅವುಗಳೆಂದರೆ

1 ) ರಚನಾತ್ಮಕ ಪ್ರಶ್ನಾವಳಿಗಳು .

2 ) ಮೌಖಿಕ ಪ್ರಶ್ನಾವಳಿಗಳು .

ಸಾಮಾಜಿಕ ಸಂಶೋಧನೆಯು ಕೂಡ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ .

2. ಮಾಧ್ಯಮಿಕ ದತ್ತಾಂಶಗಳ ಮೂಲಗಳನ್ನು ಚರ್ಚಿಸಿರಿ .

ಮಾಧ್ಯಮಿಕ ದತ್ತಾಂಶ ಸಂಗ್ರಹಕ್ಕೆ ಹಲವಾರು ವಿಧಾನ , ಸಾಧನಗಳನ್ನು ಅನುಸರಿಸಲಾಗುತ್ತದೆ . ಮಾಧ್ಯಮಿಕ ದತ್ತಾಂಶವನ್ನು ಸಂಶೋಧಕನು ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸುತ್ತಾನೆ . ಮಾಧ್ಯಮಿಕ ದತ್ತಾಂಶಗಳ ಮೂಲಗಳೆಂದರೆ- ವೈಯಕ್ತಿಕ ದಾಖಲೆಗಳು , ಸಾರ್ವಜನಿಕ ದಾಖಲೆಗಳು , ಪುಸ್ತಕಗಳು , ನಿಯತಕಾಲಿಕಗಳು , ಗ್ರಂಥಗಳು , ವಾರ್ಷಿಕ ಪುಸ್ತಕಗಳು , ವಿಶ್ವಕೋಶಗಳು ಮತ್ತು ಇತರ ದಾಖಲೆಗಳು . ಆಧುನಿಕ ನೂತನ ಗಣಕ ಯಂತ್ರಗಳು ವಿವಿಧ ಕಾರ್ಯಗಳನ್ನು ಏಕಕಾಲಕ್ಕೆ ನಿರ್ವಹಿಸುತ್ತವೆ , ವಿವಿಧ ಸಾಫ್ಟ್‌ವೇರ್‌ಗಳು ವಿವಿಧ ವಿನಿಯಾಂಶ ಮಾಹಿತಿ ಮತ್ತು ದತ್ತಾಂಶವನ್ನು ಒದಗಿಸುತ್ತದೆ . ಮಾಹಿತಿ ವಿಶ್ಲೇಷಣೆ ಮಾಹಿತಿ ಆಧಾರಿತ ವರದಿ ರಚನೆಗೆ ನೆರವಾಗುವುದು . ನಕ್ಷೆ , ಕೋಷ್ಟಕ ದತ್ತಾಂಶ ವಿಶ್ಲೇಷಣೆಯನ್ನು ಸಂಶೋಧಕನ ಬೇಡಿಕೆಗೆ ಅಗತ್ಯಕ್ಕೆ ತಕ್ಕಂತೆ ಒದಗಿಸುವುದು .

ಅಂತರ್‌ಜಾಲವು ಜಗತ್ತಿನ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು . ಇತ್ತೀಚಿನ ಹಿತಿ ಬೃಹತ್ತ ಪ್ರಮಾಣದಲ್ಲಿ ಲಭ್ಯವಿದೆ . ಸಾಂಪ್ರಾದಾಯಿಕ ಗ್ರಂಥಾಲಯದಲ್ಲಿ ಮುದ್ರಣದ ಐಸ್ತಕಗಳನ್ನು ಅಷ್ಟು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಡಲು ಸ್ಥಳ ಅವಕಾಶವಿಲ್ಲ . ಅಂತರ್‌ಜಾಲದಲ್ಲಿ ಉಚಿತ ವೆಬ್‌ತಾಣಗಳು , ಗ್ರಂಥಾಲಯ , ಪುಸ್ತಕಗಳು ಇತ್ಯಾದಿ , ಸಂಶೋಧಕರ ಶ್ರಮ , ಸಮಯ ಮತ್ತು ಹಣವನ್ನು ಉಳಿಸಲು ಅಂತರ್‌ಜಾಲ ನೆರವಾಗುವುದು . ಮಾಧ್ಯಮಿಕ ದತ್ತಾಂಶವು ದಾಖಲೆಗಳ ಮೂಲದಿಂದ ಸಂಶೋಧಕನಿಗೆ ಲಭಿಸುವುದು .

3. ಮಾಹಿತಿ ಸಂಗ್ರಹಣೆಯಲ್ಲಿ ಸಂದರ್ಶನ ವಿಧಾನದ ಪಾತ್ರವನ್ನು ಚರ್ಚಿಸಿರಿ .

ಸಾಮಾಜಿಕ ಸಂಶೋಧನಾ ಕ್ಷೇತ್ರದಲ್ಲಿ ಸಂದರ್ಶನವು ಮಾಹಿತಿ ಸಂಗ್ರಹಣೆಯ ಪ್ರತ್ಯಕ್ಷ ವಿಧಾನವಾಗಿದೆ . ಸಂದರ್ಶನವು ಇತರರ ಅಭಿಪ್ರಾಯ ಮತ್ತು ಯೋಚನೆಗಳನ್ನು ತಿಳಿಯಲು ನೆರವಾಗುತ್ತದೆ . ಸಂದರ್ಶನದಲ್ಲಿ ಮೌಖಿಕ ಅಂಶಗಳಲ್ಲದೆ ವ್ಯಕ್ತಿಗಳ ದೈಹಿಕ ಹಾವಭಾವ , ದೃಷ್ಟಿ ಅಥವಾ ನೋಟ ಅಂಗಿನ ಚಲನವಲನಗಳು ಅರ್ಥಪೂರ್ಣವಾಗಿ ಅಭಿವ್ಯಕ್ತಗೊಳ್ಳುತ್ತವೆ . ಸಂದರ್ಶನವು ಜನರ ವ್ಯವಸ್ಥಿತವಾದ ಪರಸ್ಪರ ಸಂಪರ್ಕವನ್ನು ಒಳಗೊಂಡಿದೆ . ಇದೊಂದು ಅಂತಃಕ್ರಿಯೆಯ ವಿಧಾನವಾಗಿದೆ . ಸಂದರ್ಶನವು ರಚನಾತ್ಮಕ ( ಔಪಚಾರಿಕ ) ಹಾಗೂ ಮೌಖಿಕ ಸಂದರ್ಶನ ಎಂಬ ಎರಡು ವಿಧಾನಗಳಿವೆ . ಪೂರ್ವ ನಿಯೋಜಿತ ಪ್ರಶ್ನೆಗಳು ಮತ್ತು ನಿರ್ಧಿಷ್ಟ ಗುಣಮಟ್ಟದ ವಿಧಾನಗಳನ್ನೊಳಗೊಂಡಿದೆ . ಪ್ರಶ್ನೆಗಳಲ್ಲಿ ಒಳಗೊಂಡಿರುವ ಪದಗಳ ಸ್ವರೂಪ ಅಥವಾ ಸ್ವರೂಪಗಳನ್ನು ಕೇಳಬೇಕಾದ ರೀತಿ , ಶೈಲಿ , ಸಂದರ್ಶನ ಪ್ರಕ್ರಿಯೆಯನ್ನು ದಾಖಲಿಸುವ ವ್ಯವಸ್ಥೆ ಪ್ರಕ್ರಿಯೆಯೇ ಒಂದು ನಿರ್ಧಿಷ್ಟ ಗುಣಮಟ್ಟದಾಗಿದೆ . ರಚನಾತ್ಮಕ ಸಂದರ್ಶನವು ಸಾರ್ವತ್ರಿಕ ಮತ್ತು ನಿಖರತೆಯನ್ನು ಒದಗಿಸುತ್ತದೆ . ಇದು ಸ್ಪಷ್ಟ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ . ಮೌಖಿಕ ಸಂದರ್ಶನವು ( ಅನೌಪಚಾರಿಕ ) ಸಂದರ್ಶನವಾಗಿದೆ . ಈ ವಿಧಾನವು ಕಟ್ಟುನಿಟ್ಟಿನ , ಕಠಿಣ ನಿಯಮಗಳಿಗೆ ಹೊರತಾಗಿದೆ . ಸಂದರ್ಶನ ನಡೆಸುವ ವ್ಯಕ್ತಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ . ಸಂದರ್ಶನ ಪ್ರಕ್ರಿಯೆಯಲ್ಲಿ ಸಂದರ್ಶಕನು ಸಂಧರ್ಭಕ್ಕೆ ತಕ್ಕಂತೆ ನಿರ್ಣಯಗಳನ್ನು ಕೈಗೊಳ್ಳಬಹುದು . ಸಂದರ್ಶಕನು ಕೇಳುವ ಪ್ರಶ್ನೆಗಳ ಸ್ವರೂಪ , ಆಯ್ಕೆ , ಸಂಖ್ಯೆ , ಸಂಧರ್ಭ ಇತ್ಯಾದಿಗಳನ್ನು ಸಂದರ್ಶಕನೇ ನಿರ್ಣಯಿಸಬಹುದು . ಸಂದರ್ಶನದ ಸ್ವರೂಪವನ್ನು ಉತ್ತರಿಸುವವರ ಗುಣಮಟ್ಟಕ್ಕೆ ಅನುಗುಣವಾಗಿ ತರಬಹದು , ಈ ಸಂದರ್ಶನವು ಸೌಹಾರ್ದಯುತವಾದ ವಾತಾವರಣವನ್ನು ಸೃಷ್ಟಿಸಿ , ಪರಿಣಾಮಕಾರಿ ಸಂವಹನ ಮತ್ತು ಸಂಪರ್ಕ ಜರುಗುತ್ತದೆ .

4. ಪ್ರಾಥಮಿಕ ಹಾಗೂ ಮಾಧ್ಯಮಿಕ ದತ್ತಾಂಶಗಳ ವ್ಯತ್ಯಾಸಗಳನ್ನು ಚರ್ಚಿಸಿರಿ ,

‘ ಪ್ರಾಥಮಿಕ ಹಾಗೂ ಮಾಧ್ಯಮಿಕ ದತ್ತಾಂಶಗಳ ವ್ಯತ್ಯಾಸಗಳನ್ನು ಈ ರೀತಿ ಗುರುತಿಸಬಹುದಾಗಿದೆ .

ಪ್ರಾಥಮಿಕ ದತ್ತಾಂಶ

1 ) ಈ ದತ್ತಾಂಶವನ್ನು ಕ್ಷೇತ್ರ ಅಧ್ಯಯನ ಅಥವಾ ಪ್ರಯೋಗಾಲಯದಿಂದ ಗಳಿಸಲಾಗುವುದು .

2 ) .ಪ್ರಾಥಮಿಕ ದತ್ತಾಂಶದ ಮೂಲಗಳೆಂದರೆ ಅವಲೋಕನ , ಸಂದರ್ಶನ , ಪ್ರಶ್ನಾವಳಿ , ಸಾಮಾಜಿಕ ಸಮೀಕ್ಷೆಯನ್ನು ಪಡೆಯಲಾಗುವುದು .

3 ) ಸಮಸ್ಯೆಯನ್ನು ಅರ್ಥೈಸಲು ಮತ್ತು ಪರಿಹಾರ ಕಂಡುಕೊಳ್ಳಲು ಪ್ರಾಥಮಿಕ – ದತ್ತಾಂಶವು ಉಪಯುಕ್ತವಾಗಿದೆ

4 ) ಪ್ರಾಥಮಿಕ ದತ್ತಾಂಶವನ್ನು ಸಂಶೋಧಕನು ಪ್ರಥಮ ಬಾರಿಗೆ ಕ್ಷೇತ್ರ ಅಧ್ಯಯನದಿಂದ ಅಥವಾ ಪ್ರಯೋಗಾಲಯದಿಂದ ಸಂಗ್ರಹಿಸುತ್ತಾನೆ .

ಮಾಧ್ಯಮಿಕ ದತ್ತಾಂಶ

1 ) ಮಾಧ್ಯಮಿಕ ದತ್ತಾಂಶ ಸಂಗ್ರಹಕ್ಕೆ ಹಲವಾರು ವಿಧಾನ , ಸಾಧನಗಳನ್ನು ಅನುಸರಿಸಬೇಕಾಗುತ್ತದೆ .

2 ) ಮಾಧ್ಯಮಿಕ ದತ್ತಾಂಶವನ್ನು ಸಂಶೋಧಕನು ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸಲಾಗುತ್ತಿದೆ .

3 ) ಈ ರೀತಿಯ ದತ್ತಾಂಶವು ಮಾಧ್ಯಮಿಕ ದತ್ತಾಂಶದಲ್ಲಿ ಲಭ್ಯವಿಲ್ಲ .

4 ) ಮಾಧ್ಯಮಿಕ ದತ್ತಾಂಶವು ದಾಖಲೆಗಳ ಮೂಲದಿಂದ ಸಂಶೋಧಕನಿಗೆ ಲಭಿಸುವುದು .

5. ಸಂಶೋಧನೆಯ ವ್ಯಾಖ್ಯೆ ನೀಡಿರಿ , ಸಮಾಜ ಸಂಶೋಧನೆ ಎಂದರೇನು ?

ಸಮಾಜಶಾಸ್ತ್ರಜ್ಞರು ಸಂಶೋಧನೆಗೆ ತಮಗೆ ಆದ ಬೇರೆಬೇರೆ ವ್ಯಾಖ್ಯೆ ನೀಡಿದ್ದಾರೆ . ‘ ಸಂಶೋಧನೆ ‘ ಎಂಬ ಪದವು ಲ್ಯಾಟೀನ್ ಭಾಷೆಯ Re ಮತ್ತು Search ಎಂಬ ಪದಗಳಿಂದ ಬಂದಿದೆ . ಅಂದರೆ ಮನರ್ ಶೋಧಿಸು ಎಂದರ್ಥ , ಸರಿಯಾಗಿ ಹುಡುಕುವುದು ಪರಿಶೋಧಿಸುವುದು ಎಂದರ್ಥ ಸಾಮಾನ್ಯವಾಗಿ ಸಂಶೋಧನೆ ಎಂದರೆ ಮನಃ ಹುಡುಕುವುದು , ಪರಿಶೋಧಿಸುವುದು ,

ಕಳೆದುಹೋದ ವಿಷಯ ಅಥವಾ ಹೊಸ ವಿಷಯದ ಅಸ್ಪಷ್ಟತೆಯನ್ನು ಹೋಗಲಾಡಿಸುವ ಪ್ರಕ್ರಿಯೆಯಾಗಿದೆ .

ವಿಲಿಯಂ ಸ್ಕಾಟ್ ರವರ ಪ್ರಕಾರ- ಸಾಮಾಜಿಕ ಸಂಶೋಧನೆಯು ಯಾವುದೇ ಸಂಶೋಧನೆಯ ಮಾನವ ಸಮೂಹಗಳ ಅಧ್ಯಯನಕ್ಕೆ ಪ್ರಾಮುಖ್ಯತೆ ನೀಡುವುದು ಅಥವಾ ಸಾಮಾಜಿಕ ಅಂತರ್‌ಕ್ರಿಯೆಯ ಪ್ರಕ್ರಿಯೆಗಳಿಗೆ ಮಹತ್ವ ನೀಡುವುದಾಗಿದೆ .‌

ಪಿ . ವಿ . ಯಂಗ್‌ರವರು ‘ ಸಾಮಾಜಿಕ ಸಂಶೋಧನೆ ಎಂದರೆ ಕ್ರಮಬದ್ಧವಾದ ವಿಧಾನಗಳ ಮೂಲಕ ಹೊಸ ಘಟನೆಗಳನ್ನು ಕಂಡುಹಿಡಿಯುವುದು ಅಥವಾ ಆ ಹಿಂದಿನ ಘಟನೆಗಳನ್ನು ಪರಿಶೀಲಿಸಿ ಅದರ ಪರಿಣಾಮಗಳು ಪರಸ್ಪರ ಸಂಬಂಧಗಳ ಸಾಮಾನ್ಯ ವಿವರಣೆ ಮತ್ತು ಪ್ರಕಟಿತ ನಿಯಮಗಳನ್ನು ನಿಯಂತ್ರಿಸುವುದಾಗಿದೆ .

ಇ.ಎಸ್.ಬೋಗಾರ್ಡ್ ರವರು- ಸಹವರ್ತಿಗಳಾಗಿ ಜೀವಿಸುವ ಜನರ ಕಾರ್ಯ ನಿರ್ವಹಣೆಯ ಪ್ರಕ್ರಿಯೆಗಳ ಪರಿಶೀಲನೆಯ ಸಾಮಾಜಿಕ ಸಂಶೋಧನೆಯಾಗಿದೆ . ಒಟ್ಟಾರೆ ‘ ಸಂಶೋಧನೆ ‘ ಎಂಬ ಪರಿಕಲ್ಪನೆಯ ಹೊಸ ವಿಷಯವನ್ನು ಮತ್ತು ಜ್ಞಾನವನ್ನು ಹುಡುಕುವ ಪ್ರಯತ್ನವಾಗಿದೆ . ಸಂಶೋಧನೆ ಎಂದರೆ ಜ್ಞಾನದಾಹವನ್ನು ಒಳಗೊಂಡ ವಿಧಾನಗಳ ಅನುಕರಣಿ ಪ್ರಸ್ತುತ ಜ್ಞಾನವನ್ನು ಹೆಚ್ಚಿಸುವ ಪರಿಶೋಧನೆಯನ್ನು ಒಳಗೊಂಡಿದೆ .

6. ಮಾಹಿತಿ ಸಂಗ್ರಹಣೆಯಲ್ಲಿ ಅವಲೋಕನ / ವೀಕ್ಷಣೆಯ ವಿಧಾನದ ಮಹತ್ವವನ್ನು ವಿವರಿಸಿ .

ಅವಲೋಕನ ಎಂದರೆ ಉದ್ದೇಶವಿರಿಸಿಕೊಂಡು ವೀಕ್ಷಣೆ ಮಾಡುವುದು , ಅವಲೋಕನ ಎಂದರೆ ಖಚಿತತೆಯಿಂದ ವೀಕ್ಷಣೆ ಮಾಡುವುದು , ಘಟನೆಗಳು ಜರುಗಿದಂತೆ ವೀಕ್ಷಣೆ ಮೂಲಕ ಅವುಗಳು ಪರಸ್ಪರ ಸಂಬಂಧವನ್ನು ವೀಕ್ಷಿಸುವುದು . ಅವಲೋಕನವು ಘಟನೆಗಳ ಜರುಗುವಿಕೆಯನ್ನು ಉದ್ದೇಶಪೂರ್ವಕವಾಗಿ ಗ್ರಹಿಸುವುದು . ವಸ್ತು ನಿಷ್ಪತೆಯಿಂದ ಅವಲೋಕನ ಮಾಡಿದಾಗ ವೀಕ್ಷಕನ ವೈಯಕ್ತಿಕ ಅಭಿಪ್ರಾಯ , ಪೂರ್ವಗ್ರಹ ಪೀಡಿತ ದೃಷ್ಟಿ , ಅನಿಸಿಕೆಗಳು ಅಧ್ಯಯನದಲ್ಲಿ ಪ್ರವೇಶಿಸುವುದಿಲ್ಲ . ಆದರೆ ವಸ್ತು ನಿಷ್ಪತೆಯಿಂದ ಅವಲೋಕನ ಮಾಡುವುದು ಬಹಳಷ್ಟು ಕಷ್ಟಕರ ಪ್ರಕ್ರಿಯೆಯಾಗಿದೆ .

ಪಿ . ವಿ . ಯಂಗ್‌ರವರ ವ್ಯಾಖ್ಯೆಯಂತೆ – ‘ ಅವಲೋಕನ ಎಂದರೆ ವ್ಯವಸ್ಥಿತ ಉದ್ದೇಶ ಪೂರಕ ಅಧ್ಯಯನವನ್ನು ಘಟನೆಗಳು ಜರುಗಿದಂತೆ ವೀಕ್ಷಿಸುವುದು , ಸಾಮಾಜಿಕ ಪರಿಕಲ್ಪನೆಗಳು , ಸಂಸ್ಕೃತಿಯ ಸ್ವರೂಪ ಮತ್ತು ಮಾನವನ ವರ್ತನೆಗಳ ಸಂಕೀರ್ಣತೆಯ ಪರಸ್ಪರ ಸಂಭಂಧಗಳ ಅಂಶಗಳನ್ನು ಉದ್ದೇಶಪೂರ್ವಕವಾಗಿ ವೀಕ್ಷಿಸುವುದು . ಈ ವ್ಯಾಖ್ಯೆಗಳು ಅವಲೋಕನದ ಮಹತ್ವವನ್ನು ತಿಳಿಸಿಕೊಡುತ್ತದೆ . ಅವಲೋಕನದಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ ಅವುಗಳೆಂದರೆ

1 ) ನಿಯಂತ್ರಿತ ಮತ್ತು ಅಭಿಯಂತ್ರಿತ ಅವಲೋಕನ : ನಿಯಂತ್ರಿತ ಅವಲೋಕನವು ಪ್ರಯೋಗಾಲಯದಲ್ಲಿ ಜರುಗುವುದು , ಇಲ್ಲಿ ವೀಕ್ಷಕರು ಕೆಲವು ಅಧ್ಯಯನದ ಕೆಲವು ಅಂಶಗಳನ್ನು ನಿಯಂತ್ರಣದಲ್ಲಿಡುವನು . ಅನಿಯಂತ್ರಿತ ಅವಲೋಕನವೆಂದರೆ ಸಹಕಾರವಿಲ್ಲದ ಅವಲೋಕನ . ಇದು ಸಹಜ ಪರಿಸರದಲ್ಲಿರುವುದನ್ನು ನಿಯಂತ್ರಣಗಳಿಲ್ಲದ ಅವಲೋಕನವಾಗಿದೆ .

2 ) ಸಹಭಾಗಿ ಅವಲೋಕನ ಮತ್ತು ಅಸಹಭಾಗಿ ಅವಲೋಕನ : ಸಹಭಾಗಿ ಅವಲೋಕನದಲ್ಲಿ ಸಂಶೋಧಕನು ಸಂಶೋಧನ ಅಧ್ಯಯನದ ಸಾಮಾಜಿಕ ಪರಿಕಲ್ಪನೆಯಲ್ಲಿ ಭಾಗವಹಿಸುವನು . ಪಾಲ್ಗೊಳ್ಳದ ಅವಲೋಕನದಲ್ಲಿ ಸಂಶೋಧಕನು ಏಕಾಂಗಿಯಾಗಿ ಪ್ರತ್ಯೇಕವಾಗಿದ್ದುಕೊಂಡು ವೀಕ್ಷಿಸುವುದು . ಒಟ್ಟಾರೆ ಮಾಹಿತಿ ಸಂಗ್ರಹಣೆಯಲ್ಲಿ ಅವಲೋಕನವು ಈ ಕೆಳಕಂಡ ಮಹತ್ವವನ್ನು ಪಡೆದುಕೊಂಡಿದೆ , ಅವುಗಳೆಂದರೆ

ಅವಲೋಕನದಿಂದ ಸಂಗ್ರಹಿಸುವ ಮಾಹಿತಿಯನ್ನು ಘಟನೆಗಳು ಜರುಗಿದಂತೆ ಸಂಗ್ರಹಿಸುವುದರಿಂದ ಗುಣಾತ್ಮಕ ದತ್ತಾಂಶವು ಸಂಶೋಧಕನಿಗೆ ಲಭಿಸುವುದು .

ಈ ವಿಧಾನದಿಂದ ವಿಸ್ತಾರವಾದ ಮತ್ತು ಸಂಕ್ಷಿಪ್ತವಾದ ಮಾಹಿತಿ ದೊರಕುವುದು . ಹೆಚ್ಚು ಸಡಿಲವಾದ ಸ್ಪಷ್ಟವಾದ ಮಾಹಿತಿಯು ವೀಕ್ಷಕನಿಗೆ ಲಭಿಸುವುದು .

ಈ ವಿಧಾನದಲ್ಲಿ ವೀಕ್ಷಕನಿಗೆ ವೀಕ್ಷಿಸಲು ಸ್ವಾತಂತ್ರ್ಯವಿದೆ , ಸಮೂಹದ ಸದಸ್ಯರ ಮಾಹಿತಿ ವೀಕ್ಷಕನಿಗೆ ತಿಳಿಯುವುದು . ಈ ವಿಧಾನದಿಂದ ಇತರ ವಿಧಾನಗಳಲ್ಲಿ ಪ್ರತಿಕ್ರಯಿಸಲು ಸಾಧ್ಯವಾಗದ ವ್ಯಕ್ತಿಗಳಿಗೆ ಮಾಹಿತಿ ನೀಡಲು ಅವಕಾಶ ದೊರೆಯುವುದು .

7. ಸಮಾಜ ಸಂಶೋಧನೆಯಲ್ಲಿ ಅಂತರ್ಜಲ ಮತ್ತು ಗಣಕ ಯಂತ್ರದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ .

ಆಧುನಿಕ ಸಮಾಜವು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಪ್ರಭಾವಕ್ಕೊಳಪಟ್ಟಿದೆ . ಸಮಾಜ ಸಂಶೋಧನೆಯಲ್ಲಿ ಅಂತರ್‌ಜಲ ಹಾಗೂ ಗಣಕಯಂತ್ರಗಳು ಬಹಳ ಮಹತ್ವಪೂರ್ಣವಾಗಿದೆ , ಏಕೆಂದರೆ ಆಧುನಿಕ ನೂತನಗಳಾದ ಯಂತ್ರಗಳು ವಿವಿಧ ಕಾರ್ಯಗಳನ್ನು ಏಕಕಾಲಕ್ಕೆ ಕಾರ್ಯನಿರ್ವಹಿಸುತ್ತವೆ . ವಿವಿಧ “ ಸಾಫ್ಟ್‌ವೇರ್ ಗಳು ವಿವಿಧ ವಿಷಯಗಳ ಮಾಹಿತಿ ಮತ್ತು ದತ್ತಾಂಶಗಳನ್ನು ಒದಗಿಸುತ್ತವೆ .

ಉದಾ : ಸಮಾಜವಿಜ್ಞಾನದ ಸಂಖ್ಯಾಶಾಸ್ತ್ರದ ಪ್ಯಾಕೇಜ್ ಸಾಫ್ಟ್‌ವೇರ್‌ ಮಾಹಿತಿ ವಿಶ್ಲೇಷಣೆ , ಮಾಹಿತಿ ಆಧಾರಿತ ವರದಿ ರಚನೆ ನೆರವಾಗುವುದು . ನಕ್ಷೆ , ಕೋಷ್ಟಕ ದತ್ತಾಂಶ , ವಿಶ್ಲೇಷಣೆಯನ್ನು ಸಂಶೋಧಕನ ಬೇಡಿಕೆ ಅಗತ್ಯಕ್ಕೆ ತಕ್ಕಂತೆ ಒದಗುವುದು . ಅಂತರ್‌ಜಾಲವು ಜಗತ್ತಿನ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು . ಇತ್ತೀಚಿನ ಮಾಹಿತಿ ಬೃಹತ್ ಪ್ರಮಾಣದಲ್ಲಿ ಲಭ್ಯವಿದೆ . ಸಾಂಪ್ರಾದಾಯಿಕ ಗ್ರಂಥಾಲಯದಲ್ಲಿ ಮುದ್ರಣದ ಪುಸ್ತಕಗಳನ್ನು ಅಷ್ಟು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಡಲು ಸ್ಥಳ ಅವಕಾಶವಿಲ್ಲ . ಇದಲ್ಲದೆ 24 ಗಂಟೆಗಳಲ್ಲೂ ಮಾಹಿತಿ ಲಭ್ಯವಿರುತ್ತದೆ , ಅಂತರ್‌ಜಾಲದಲ್ಲಿನ ಉಚಿತ ವೆಬ್‌ತಾಣಗಳು , ಗ್ರಂಥಾಲಯ , ಪುಸ್ತಕಗಳು ಇತ್ಯಾದಿ ಸಂಶೋಧಕನ ಶ್ರಮ ಸಮಯ ಮತ್ತು ಹಣವನ್ನು ಉಳಿಸಲು ಸಾಧ್ಯವಾಗಿದೆ .

ಸಂಶೋಧಕನಿಗೆ ಏಕಕಾಲದಲ್ಲಿ ಮಾಹಿತಿ ಸಂಗ್ರಹ , ವರ್ಗೀಕರಣ ವಿಶ್ಲೇಷಣೆಗೆ ಕಂಪ್ಯೂಟರ್‌ಗಳು ನೆರವಾಗುತ್ತದೆ . ಸಂಶೋಧಕನ ಸಮಯ ಮತ್ತು ಹಣವನ್ನು ಉಳಿಸಲು ಕಂಪ್ಯೂಟರ್‌ಗಳು ನೆರವಾಗುತ್ತದೆ . ಪ್ರಾಥಮಿಕ ದತ್ತಾಂಶ ಪ್ರಥಮ ಬಾರಿ ಮತ್ತು ಇತ್ತೀಚಿನ ಮಾಹಿತಿಯಾಗಿದೆ , ಸಂಶೋಧನೆಯ ಸಮಸ್ಯೆಯನ್ನು ಅರ್ಥೈಸಲು ಮತ್ತು ಪರಿಹಾರ ಕಂಡುಕೊಳ್ಳಲು ಪ್ರಾಥಮಿಕ ದತ್ತಾಂಶವು ಉಪಯುಕ್ತವಾಗಿದೆ .

8. ಪ್ರಶ್ನಾವಳಿ ವಿಧಾನವನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ .

ಮಾಹಿತಿ ಸಂಗ್ರಹಣೆಗೆ ಪ್ರಶ್ನಾವಳಿ ಒಂದು ವಿಧಾನವಾಗಿದೆ . ಪ್ರಶ್ನಾವಳಿಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ . ಅವುಗಳೆಂದರೆ

1 ) ರಚನಾತ್ಮಕ ಪ್ರಶ್ನಾವಳಿಗಳು .

2 ) ಮೌಖಿಕ ಪ್ರಶ್ನಾವಳಿಗಳು . ( ಅರಚನಾತ್ಮಕ ಪ್ರಶ್ನಾವಳಿಗಳು )

1 ) ರಚನಾತ್ಮಕ ಪ್ರಶ್ನಾವಳಿಗಳು , ಈ ಪ್ರಶ್ನಾವಳಿಯಲ್ಲಿ ಪೂರ್ವ ನಿಗದಿತ ಸ್ವರೂಪವಾದ ಮತ್ತು ಮೌಖಿಕ ಸ್ವರೂಪದ ಪ್ರಶ್ನೆಗಳನ್ನು ಸಿದ್ಧಪಡಿಸಲಾಗುತ್ತದೆ . ಎಲ್ಲಾ ಉತ್ತರ ನೀಡುವವರಿಗೆ ಒಂದೇ ರೀತಿಯ ಪ್ರಶ್ನಾವಳಿಯನ್ನು ಒದಗಿಸಲಾಗುತ್ತದೆ . ಇಂತಹ ಪ್ರಶ್ನಾವಳಿಗಳಲ್ಲಿ ಮುಕ್ತ ಅಥವಾ ತೆರೆದ ಪ್ರಶ್ನೆಗಳು ಮತ್ತು ಮುಚ್ಚಿದ ಪ್ರಶ್ನೆಗಳಿರುತ್ತವೆ . ಮುಚ್ಚಿದ ಪ್ರಶ್ನೆಗಳಿಗೆ ಉತ್ತರಗಳು ಕೂಡ ನಿಗದಿತ ಉತ್ತರಗಳಿರುತ್ತವೆ . ಈ ತರಹದ ಉತ್ತರಗಳಲ್ಲಿ ‘ ಹೌದು ‘ ‘ ಇಲ್ಲ ‘ ಎಂಬ ಅಥವಾ ‘ ಸರಿ ‘ ಅಥವಾ ‘ ತಪ್ಪು ‘ ಎಂಬ ಸೀಮಿತ ಉತ್ತರಗಳಿರುತ್ತವೆ . ಮುಕ್ತ ಅಥವಾ ತೆರೆದ ಪ್ರಶ್ನೆಗಳಿಗೆ ಉತ್ತರಿಸುವವರು ಸ್ವತಂತ್ರವಾಗಿ ತಮ್ಮದೇ ಆದ ಮಾತುಗಳಲ್ಲಿ ಉತ್ತರಗಳನ್ನು ಉತ್ತರಿಸಬಹುದು .

2 ) ಮೌಖಿಕ ಪ್ರಶ್ನಾವಳಿಗಳು , ಈ ವಿಧಾನದ ಪ್ರಶ್ನಾವಳಿಗಳಲ್ಲಿ ಪ್ರಶ್ನೆಗಳನ್ನು ಪೂರ್ವ ನಿಗದಿಯಾಗಿ ರಚಿಸದೆ , ಪರಿಗಣಿಸಲಾಗುವುದು . ಈ ಪ್ರಶ್ನೆಗಳ ಸ್ವರೂಪವು ಸಡಿಲವಾದ ಗುಣವನ್ನು ಪ್ರಶ್ನೆಗಳನ್ನು ಕೇಳುವ ಸಂದರ್ಭದಲ್ಲಿ ಅಗತ್ಯಗಳ ಅನುಗುಣ ಪ್ರಶ್ನೆಗಳನ್ನು ಹೊಂದಿರುವುದರಿಂದ ಇದನ್ನು ‘ ಸಂದರ್ಶನ ಮಾರ್ಗದರ್ಶಿ ‘ ಎಂದು ಕರೆಯುವರು . ಇಂತಹ ಪ್ರಶ್ನಾವಳಿಯನ್ನು ವೈಯಕ್ತಿಕ ಅನುಭವ , ಅಭಿಪ್ರಾಯ ಇತ್ಯಾದಿಗಳ ಕುರಿತು ಮಾಹಿತಿ ಸಂಗ್ರಹಿಸಲು ಬಳಸುವರು . ಈ ಸಂದರ್ಭದಲ್ಲಿ ಉತ್ತರಿಸುವವರಿಗೆ ಗರಿಷ್ಪ ಪ್ರಮಾಣದ ಅವಕಾಶವನ್ನು ಪ್ರತಿಕ್ರಿಯಿಸಲು ಒದಗಿಸಲಾಗುವುದು . ಈ ವಿಧಾನದ ಮಹತ್ವದ ಅನುಕೂಲತೆಯೆಂದರೆ ಪ್ರತಿಕ್ರಿಯಿಸುವ ವ್ಯಕ್ತಿಗಳು ಹೋಲಿಸಲಾಗದ ಮತ್ತು ಅಸಂಬಂಧಿತ , ಅಪ್ರಸ್ತುತ ಮಾಹಿತಿಯನ್ನು ಒದಗಿಸುತ್ತಾರೆ .

9. ಸಂದರ್ಶನದ ವಿಧಗಳನ್ನು ಚರ್ಚಿಸಿರಿ .

ಸಾಮಾಜಿಕ ಸಂಶೋಧನಾ ಕ್ಷೇತ್ರದಲ್ಲಿ ಸಂದರ್ಶನವು ಮಾಹಿತಿ ಸಂಗ್ರಹಣೆಯ ಪ್ರತ್ಯಕ್ಷ ವಿಧಾನವಾಗಿದೆ . ಇತರರ ಅಭಿಪ್ರಾಯ ಮತ್ತು ಯೋಚನೆಗಳನ್ನು ತಿಳಿಯಲು ನೆರವಾಗುವುದು . ಸಂದರ್ಶನವನ್ನು ಔಪಚಾರಿಕ ಅಂಶದ ಆಧಾರದಲ್ಲಿ ರಚನಾತ್ಮಕ ಮತ್ತು ಮೌಖಿಕ ಸಂದರ್ಶನ ಎಂದು ವಿಂಗಡಿಸಬಹುದು .

1 ) ರಚನಾತ್ಮಕ ಸಂದರ್ಶನ : ಈ ಸಂದರ್ಶನವು ಪೂರ್ವ ನಿಯೋಜಿತ ಪ್ರಶ್ನೆಗಳು ಮತ್ತು ಮತ್ತು ನಿರ್ಧಿಷ್ಟ ಗುಣಮಟ್ಟದ ವಿಧಾನಗಳನ್ನೊಳಗೊಂಡಿದೆ . ಪೂರ್ವ ನಿಗದಿತ ಪ್ರಶ್ನೆಗಳು ಪ್ರಶ್ನೆಗಳ ಸ್ವರೂಪ ಮತ್ತು ಸಂಖ್ಯೆ , ಪ್ರಶ್ನೆಗಳ ಆಯ್ಕೆ , ಪ್ರಶ್ನೆಗಳಲ್ಲಿ ಒಳಗೊಂಡಿರುವ ಪದಗಳ ಸ್ವರೂಪ ಅಥವಾ ಆಸ್ವರೂಪಗಳನ್ನು ಕೇಳಬೇಕಾದ ರೀತಿ , ಶೈಲಿ , ಸಂದರ್ಶನ ಪ್ರಕ್ರಿಯೆಯನ್ನು ದಾಖಲಿಸುವ ವ್ಯವಸ್ಥೆ ಮತ್ತು ಸಂದರ್ಶನ ಪ್ರಕ್ರಿಯೆಯೇ ಒಂದು ನಿರ್ಧಿಷ್ಟ ಗುಣಮಟ್ಟದಾಗಿರುತ್ತದೆ . ಇದರಿಂದ ಸಂದರ್ಶನವು ಏಕರೂಪದ ಸಾರ್ವತ್ರಿಕತೆ ಮತ್ತು ನಿಖರತೆಯನ್ನು ಒದಗಿಸುತ್ತದೆ . ರಚನಾತ್ಮಕ ಸ್ವರೂಪವು ಒಂದೇ ರೀತಿಯ ಮತ್ತು ಸೃಷ್ಟಿ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ.

2 ) ಮೌಖಿಕ ಸಂದರ್ಶನ : ಈ ವಿಧಾನವು ಕಟ್ಟುನಿಟ್ಟಿನ , ಕಠಿಣ ನಿಯಮಗಳಿಂದ ಹೊರತಾಗಿದೆ . ಈ ವಿಧಾನದಲ್ಲಿ ಸಂದರ್ಭಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಅವಕಾಶವಿದೆ . ಸಂದರ್ಶನ ನಡೆಸುವ ವ್ಯಕ್ತಿಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ . ಸಂದರ್ಶನ ಪ್ರಕ್ರಿಯೆಯಲ್ಲಿ ಸಂದರ್ಶಕನು ಸಂಧರ್ಭಕ್ಕೆ ತಕ್ಕಂತೆ ನಿರ್ಣಯಗಳನ್ನು ಕೈಗೊಳ್ಳಬಹುದು . ಸಂದರ್ಶನದ ಸ್ವರೂಪವನ್ನು ಪ್ರಶ್ನೆಗಳಿಗೆ ಉತ್ತರಿಸುವವರ ಗುಣಮಟ್ಟಕ್ಕೆ ಅನುಗುಣವಾಗಿ ತರಬಹುದು . ಸಂದರ್ಶನ ಪ್ರಕ್ರಿಯೆಯಲ್ಲಿ ಉತ್ತರಿಸುವವರ ಉತ್ತರಗಳನ್ನು ಮತ್ತು ಪ್ರಕ್ರಿಯೆಗಳನ್ನು ಗಮನಿಸಿ ಸಂದರ್ಶನದ ಗುರಿ ಉದ್ದೇಶಗಳಿಗೆ ಮಹತ್ವ ನೀಡಲಾಗುತ್ತದೆ . ಮೌಖಿಕ ಸಂದರ್ಶನವು ಸಂದರ್ಶಕನಿಗೆ ಉತ್ತರಿಸುವವರಿಂದ ಗರಿಷ್ಟ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ . ಇದು ಅನೌಪಚಾರಿಕ ಸ್ವರೂಪದ ಸಂದರ್ಶನವಾಗಿರುವುದರಿಂದ ಇದನ್ನು ಅನೌಪಚಾರಿಕ ಸಂದರ್ಶನ ಎಂದು ಕರೆಯುತ್ತಾರೆ . ಇದು ಸೌಹಾರ್ದಯುತವಾದ ವಾತಾವರಣವನ್ನು ಸೃಷ್ಟಿಸಿ , ಪರಿಣಾಮಕಾರಿ ಸಂವಹನ ಮತ್ತು ಸಂಪರ್ಕ ಜರುಗುತ್ತದೆ .

IV . ಹತ್ತು ಅಂಕದ ಪ್ರಶ್ನೆಗಳು : ( 30-40 ವಾಕ್ಯಗಳಲ್ಲಿ ಉತ್ತರಿಸಿ )

1. ಸಂದರ್ಶನದ ವಿಧಾನದ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ವಿವರಿಸಿ

ಸಂದರ್ಶನ ವಿಧಾನದ ಅನುಕೂಲತೆಗಳೆಂದರೆ

1 ) ಸಂದರ್ಶನ ವಿಧಾನದಿಂದ ನಂಬಲರ್ಹವಾದ ಮತ್ತು ಆಳವಾದ ಜ್ಞಾನವು ಲಭಿಸುವುದು .

2 ) ಈ ವಿಧಾನದಿಂದ ಹಿಂದಿನ ಮಾಹಿತಿ ಮತ್ತು ಭವಿಷ್ಯತ್ತಿನಲ್ಲಿ ಮಾಡಬೇಕಾದ ಯೋಜನೆಗಳ ಕುರಿತು ವಿವರವಾಗಿ ತಿಳಿಯಬಹುದು .

3 ) ಸಂದರ್ಶಕ ಮತ್ತು ಸಂದರ್ಶನೀಯ ವ್ಯಕ್ತಿಗಳೊಡನೆ ನಿಕಟವಾದ ಅಂತರ್‌ಕ್ರಿಯೆ ಜರುಗುವುದರಿಂದ ನಮಗೆ ಆಳವಾದ ಮಾಹಿತಿಯನ್ನು ಈ ವಿಧಾನವು ಒದಗಿಸುತ್ತದೆ .

4 ) ಈ ವಿಧಾನದಿಂದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಗಳಿಸಬಹುದು .

5 ) ಸಂದರ್ಶನದ ವಿಧಾನವನ್ನು ಎಲ್ಲಾ ವರ್ಗಗಳ ಜನರಿಂದ ಮಾಹಿತಿ ಸಂಗ್ರಹ ವಿಧಾನವಾಗಿ ಬಳಸಬಹುದು .

ಸಂದರ್ಶನದ ವಿಧಾನದ ಅನಾನುಕೂಲತೆಯೆಂದರೆ :

1 ) ಸಂದರ್ಶನದಲ್ಲಿ ಉತ್ತರಿಸುವ ಮಾಹಿತಿ ಕೆಲವು ಬಾರಿ ಅಪ್ರಸ್ತುತ ಅಸಮರ್ಪಕವಾಗಿರುತ್ತದೆ .

2) ಈ ವಿಧಾನದಲ್ಲಿ ಸಂದರ್ಶನಕ್ಕೆ ಉತ್ತರಿಸುವವರು , ಸೂಕ್ತ ಆಯ್ಕೆಯಾಗಿರುವುದಿಲ್ಲ . ಅಂದರೆ ತಪ್ಪು ನಮೂನೆಯ ವ್ಯಕ್ತಿಯಿಂದ ಗಳಿಸಿದ ಮಾಹಿತಿ ಸರಿಯಾಗಿರುವುದಿಲ್ಲ .

3) ಸಂದರ್ಶಕನ ಪೂರ್ವಾಗ್ರಹ ಪೀಡಿತ ದೃಷ್ಟಿ ಮತ್ತು ಪೂರ್ವ ನಿಗದಿತ ಚಿಂತನೆಗಳು ಮಾಹಿತಿಯಲ್ಲಿ ಒಳಗೊಳ್ಳುವುದು .

4 ) ಕೆಲವು ಬಾರಿ ಸಂದರ್ಶಕ ಮತ್ತು ಸಂದರ್ಶನದಲ್ಲಿ ಉತ್ತರಿಸುವವರ ನಡುವೆ ತಪ್ಪು ಗ್ರಹಿಕೆ ಮತ್ತು ಭಿನ್ನ ಜೀವನ ಶೈಲಿಯಿಂದಾಗಿ ಗೊಂದಲಗಳುಂಟಾಗುತ್ತವೆ .

5 ) ಕೆಲವು ಸಂದರ್ಭದಲ್ಲಿ ಸಂದರ್ಶನ ವಿಧಾನವೇ ಅಪ್ರಸ್ತುತವಾಗಿರುತ್ತದೆ . ಮಾಹಿತಿ ಸಂಗ್ರಹಣೆಗೆ ಬೇರೊಂದು ವಿಧಾನದ ಅವಶ್ಯಕತೆಯಿರುತ್ತದೆ . ಉದಾ : – ಅವಲೋಕನ ಅಥವಾ ವೀಕ್ಷಣಾವಿಧಾನ .

6 ) ಸಂದರ್ಶನ ನಿರ್ವಹಿಸುವುದು ಸುಲಭವಲ್ಲ . ಇದಕ್ಕೆ ತರಬೇತಿ ಹಾಗೂ ಅನುಭವದ ಅಗತ್ಯವಿರುತ್ತದೆ .

7 ) ಸಂದರ್ಶನದ ವಿಧಾನವು ಹೆಚ್ಚು ದುಬಾರಿ ಮತ್ತು ಹೆಚ್ಚು ಸಮಯವನ್ನು ಬಳಸುತ್ತದೆ .

FAQ

1. ಸಾಮಾಜಿಕ ಸಂಶೋಧನೆ ಎಂದರೇನು ?

ಸಹವರ್ತಿಗಳಾಗಿ ಜೀವಿಸುವ ಜನರ ಕಾರ್ಯ ನಿರ್ವಹಣೆಯ ಪ್ರಕ್ರಿಯೆಗಳ ಪರಿಶೀಲನೆಗೆ ಸಾಮಾಜಿಕ ಸಂಶೋಧನೆ ಎನ್ನುವರು .

2. ಪ್ರಶ್ನಾವಳಿ ಎಂದರೇನು ?

ಮುದ್ರಿತ ಪ್ರಶ್ನೆಗಳಿಗೆ ಉತ್ತರಗಳನ್ನು ತುಂಬಿ ಮಾಹಿತಿ ಸಂಗ್ರಹಿಸುವ ವಿಧಾನಕ್ಕೆ ಪ್ರಶ್ನಾವಳಿ ಎನ್ನುವರು .

ಇತರೆ ವಿಷಯಗಳು :

First Puc Political Science Notes

First PUC History Notes 2022

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf 2022

All Subjects Notes

All Notes App

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh