ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-8 ಪರಿಸರ ಮತ್ತು ಸಮಾಜ ನೋಟ್ಸ್‌ | 1st Puc Sociology Chapter 8 Notes in Kannada

ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-8 ಪರಿಸರ ಮತ್ತು ಸಮಾಜ ನೋಟ್ಸ್‌, 1st Puc Sociology Chapter 8 Notes in Kannada Question Answer Mcq Pdf Download, Kseeb Solution For Class 11 Sociology Chapter 8 Notes Parisara Mattu Samaja Notes in Kannada ಪರಿಸರ ಮತ್ತು ಸಮಾಜ notes Environment and Society

 
1st Puc Sociology Chapter 8
1st Puc Sociology Chapter 8

1st Puc Sociology Chapter 8 Notes in Kannada

I. ಒಂದು ಅಂಕದ ಪ್ರಶ್ನೆಗಳು ( ಒಂದು ವಾಕ್ಯದಲ್ಲಿ ಉತ್ತರಿಸಿ )

1. ಪರಿಸರ ಎಂದರೇನು ?

ನಮ್ಮ ಸುತ್ತಮುತ್ತಲಿನ ಬಾಹ್ಯ ಜಗತ್ತನ್ನು ಪರಿಸರವೆಂದು ಕರೆಯುತ್ತಾರೆ

2. ಪರಿಸರ ಎಂಬ ಪದ ಉತ್ಪತ್ತಿಯಾದುದು ಹೇಗೆ ?


ಪರಿಸರ ಎಂಬ ಪದವು ಆಂಗ್ಲಭಾಷೆಯ Environment ಎಂದು ಕರೆಯುತ್ತಾರೆ, Environment ಎಂಬ ಪದವು ಪ್ರೆಂಚ್‌ ಭಾಷೆಯ Environ ಪದದಿಂದ ಬಂದಿದೆ, Environ ಎಂದರೆ ಆಂಗ್ಲಭಾಷೆಯಲ್ಲಿ Surround ಎಂಬುದಾಗಿ ಅರ್ಥೈಸಲಾಗಿದೆ .

3. ಸಾಮಾಜಿಕ ಪರಿಸರ ಶಾಸ್ತ್ರವನ್ನು ವ್ಯಾಖ್ಯಾನಿಸಿ ,

ಮಾನವ ನಿರ್ಮಿತ ಸಾಮಾಜಿಕ ಪ್ರಪಂಚವೇ ಸಾಮಾಜಿಕ ಪರಿಸರವಾಗಿದೆ . ಜೀವನಾಡಿಗಳನ್ನು ಹೊಂದಿರುವ ಜೀವಂತ ವ್ಯವಸ್ಥೆಗೆ ಸಾಮಾಜಿಕ ಪರಿಸರ ಎನ್ನುವರು .

4. ಜೀವ ಪರಿಸರ ಶಾಸ್ತ್ರದ ಬಗ್ಗೆ ನಿಮಗೇನು ಗೊತ್ತು ?

ಜೀವಿಗಳನ್ನು ಒಳಗೊಂಡಿರುವ ಪರಿಸರವನ್ನು ಜೈವಿಕ ಪರಿಸರ ಎನ್ನುವರು . ಜೀವಿ , ಪ್ರಾಣಿ ಮತ್ತು ಮಾನವನ ಸಂತತಿಯ ಉತ್ಪತ್ತಿಗೆ ಪೂರಕ ಹಾಗೂ ಪೋಷಕವಾಗಿದೆ ಜೀವಿಯು ಹುಟ್ಟಿ , ವಿಕಾಸಗೊಂಡು ಪ್ರಗತಿಯತ್ತ ಸಾಗಲು ಜೈವಿಕ ಪರಿಸರದ ಅಸ್ಥಿತ್ವವು ಅತ್ಯವಶ್ಯಕವಾದುದು . ಜೈವಿಕ ಪರಿಸರವು ಕಲುಷಿತವಾದರೆ ಜೀವಿಗಳು ನಾಶವಾಗುತ್ತವೆ .

5. ಮಾಲಿನ್ಯ ಎಂದರೇನು ?

ಮಾನವ ಚಟುವಟಿಕೆಗಳ ಮೂಲಕ ಪರಿಸರವನ್ನು ವಿರೂಪಗೊಳಿಸುವ ಅಥವಾ ನಿಸರ್ಗದ ಹಿತಕ್ಕೆ ವಿರುದ್ಧವಾಗಿ ಮಾರ್ಪಾಡುಗೊಳಿಸುವುದನ್ನು ಪರಿಸರ ಮಾಲಿನ್ಯ ಎನ್ನಬಹುದು .

6. ವಾಯುಮಾಲಿನ್ಯ ಎಂದರೇನು ?

ವಾಯುಮಂಡಲದಲ್ಲಿ ಮಾನವನ ಅನಪೇಕ್ಷಿತ ತ್ಯಾಜ್ಯ ವಸ್ತುಗಳಿಂದ ತುಂಬಿಸುವುದನ್ನು “ ವಾಯುಮಾಲಿನ್ಯ ” ಎನ್ನುವರು .

7. ಜಲಮಾಲಿನ್ಯ ಎಂದರೇನು ?

ಮಾನವನ ಯಾವುದೇ ರೀತಿಯ ಚಟುವಟಿಕೆಯಿಂದ ನೀರು ಕಲುಷಿತಗೊಳ್ಳುವುದೇ ‘ ಜಲಮಾಲಿನ್ಯ’ವಾಗಿದೆ .

8. ಭೂ ಮಾಲಿನ್ಯ ಎಂದರೇನು ?

ಮಾನವನ ಅನೇಕ ಕಾರ್ಯಗಳಿಂದ ಮಣ್ಣಿನಲ್ಲಿ ಉಂಟಾಗುವ ಹಲವಾರು ಬದಲಾವಣೆ ಹಾಗೂ ಗುಣಮಟ್ಟದಲ್ಲಿ ಹಾಳಾಗಿರುವಿಕೆಯನ್ನು ಭೂ ಮಾಲಿನ್ಯ ಎನ್ನುವರು .

9. ಘನತ್ಯಾಜ್ಯ ಮಾಲಿನ್ಯ ಎಂದರೇನು ?

ಮಾನವ ಬಳಸಿ ಬಿಸಾಡುವ ಗೃಹೋಪಯೋಗಿ ವಸ್ತುಗಳು ಮತ್ತು ಅವುಗಳ ಸಂಸ್ಕರಣೆಯಿಂದ ಉಂಟಾಗುವ ಮಾಲಿನ್ಯವನ್ನು ಘನತ್ಯಾಜ್ಯ ಮಾಲಿನ್ಯ ಎನ್ನುವರು .

10. ಹಸಿರು ಮನೆ ಪರಿಣಾಮ ಎಂಬುದನ್ನು ಪರಿಚಯಿಸಿದ್ದು ಯಾರು ?

ವಿಜ್ಞಾನಿ ಜೋಸೆಫ್ ಪ್ಯೂರಿಯರ್ ಎಂಬಾತನು ಹಸಿರು ಮನೆ ಪರಿಣಾಮವನ್ನು ಪರಿಚಯಿಸಿದನು .

11. ಓರೋನ್ ಪದರ ಎಂದರೇನು ?

ಓರೋನ್ ಎಂಬುದು ಭೂಮಿಯ ಸರಗೋಳ ಎಂಬ ವಾತಾವರಣ ಪ್ರದೇಶದಲ್ಲಿರುವ ಓರೋನ್ ಎಂಬ ನೈಸರ್ಗಿಕ ಅನಿಲದ ಮೊರೆ ಸೂರ್ಯನಿಂದ ಬರುವ ಹಾನಿಕಾರಕ ಅತಿ ನೇರಳೆ ಕಿರಣಗಳನ್ನು ಭೂ ವಾತಾವರಣ ಪ್ರವೇಶಿಸದಂತೆ ತಡೆದು ರಕ್ಷಿಸುತ್ತಿರುವ ಭೂಮಿಯ ಮೇಲಿನ ಪದರವಾಗಿದೆ .

1st Puc Sociology Chapter 8 Question Answer

II . ಎರಡು ಅಂಕದ ಪ್ರಶ್ನೆಗಳು : ( 2-3 ವಾಕ್ಯದಲ್ಲಿ ಉತ್ತರಿಸಿ )

12. ಪರಿಸರದ ಪ್ರಕಾರಗಳು ಯಾವುವು ?

ಪರಿಸರವನ್ನು ಮೂರು ಪ್ರಕಾರಗಳಾಗಿ ವಿಂಗಡಿಸಿದ್ದಾರೆ . ಅವುಗಳೆಂದರೆ

1 ) ಭೌತಿಕ ಪರಿಸರ

2 ) ಜೈವಿಕ ಪರಿಸರ

3 ) ಸಾಮಾಜಿಕ ಪರಿಸರ

13. ಜೀವ ಪರಿಸರ ಶಾಸ್ತ್ರದ ಶಾಖೆಗಳು ಯಾವುವು ?

ಜೀವ ಪರಿಸರ ಶಾಸ್ತ್ರದ ಶಾಖೆಗಳೆಂದರೆ

1) ಪ್ರಾಣಿ ಜೀವ ಪರಿಸರ ಶಾಸ್ತ್ರ

2 ) ಸಸ್ಯ ಜೀವ ಪರಿಸರ ಶಾಸ್ತ್ರ

3 ) ಸಾಮಾಜಿಕ ಅಥವಾ ಮಾನವ ಜೀವ ಪರಿಸರ ಶಾಸ್ತ್ರ ಎಂಬುದಾಗಿದೆ .

14. ಮಾಲಿನ್ಯದ ಮೂಲಗಳು ಯಾವುವು ?

ಮಾಲಿನ್ಯದ ಮೂಲಗಳು ಯಾವುವೆಂದರೆ

1 ) ಘನ ತ್ಯಾಜ್ಯ ವಸ್ತುಗಳು .

2 ) ಶಬ್ದ ಮತ್ತು ರೇಡಿಯೋ ಆಕ್ಟಿವ್ ತ್ಯಾಜ್ಯ ವಸ್ತುಗಳು .

3 ) ಕೃಷಿ ರಾಸಾಯನಿಕಗಳಾದ ರಸಗೊಬ್ಬರಗಳು , ಪೊಟಾಷ್ , ಫಾಸ್ಪೇಟ್ , ರೋಗನಿರೋಧಕಗಳು , ಶಿಲೀಂಧ್ರನಾಶಕ , ಕಳೆನಾಶಕಗಳು , ಬ್ಯಾಕ್ಟಿರಿಯಾ ನಾಶಕಗಳು , ಜಂತುನಾಶಕಗಳು .

4 ) ಫೋಟೋ ರಾಸಾಯನಿಕಗಳಾದ ಓರೋನ್ , ಸ್ಮಾಗ್ , ಸಾರಜನಕದ ಆಕ್ಸೆಡ್ , ಈಥಲೀನ್ ಮುಂತಾದವುಗಳು .

5 ) ಲೋಹಗಳಾದ ಪಾದರಸ , ಸೀಸ , ಕಬ್ಬಿಣ , ನಿಕ್ಕಲ್ , ಸತು , ತವರ , ಕ್ಯಾಡ್ಮಿಯಂ ಮತ್ತು ಕ್ರೋಮಿಯಂಗಳು ,

6 ) ಪ್ಲೋರೈಡ್‌ಗಳು .

7 ) ಸಂಚಯಿಸಲ್ಪಟ್ಟಿರುವ ವಸ್ತುಗಳಾದ ಹೊಗೆ , ಡಾಂಬರು , ಧೂಳು ಮುಂತಾದವು .

8 ) ಆಮ್ಲಗಳಾದ ಗಂಧಕಾಮ್ಲ , ನೈಟ್ರಿಕ್ ಆಮ್ಲಗಳು .

9 ) ಅಪಾಯಕಾರಿ ಅನಿಲಗಳಾದ ಇಂಗಾಲದ ಮೊನಾಡ್ , ಸಾರಜನಕದ ಆಕ್ಸೆಡ್‌ಗಳು , ಗಂಧಕದ ಡೈಯಾಕ್ಸೆಡ್ , ಕ್ಲೋರಿನ್ , ಬೊಮೈನ್ ಮತ್ತು ಅಯೋಡಿನ್‌ಗಳು .

15. ಯಾವುದಾದರೂ ಎರಡು ನೈಸರ್ಗಿಕ ಪರಿಸರದ ವಿಪತ್ತುಗಳು ಹೆಸರಿಸಿ .

ಓರೋನ್ ಪದರ ವಿನಾಶ ಹಾಗೂ ಆಮ್ಲ ಮಳೆ , ಇವು ನೈಸರ್ಗಿಕ ಪರಿಸರದ ವಿಪತ್ತುಗಳಾಗಿವೆ .

16. ಯಾವುದಾದರು ಎರಡು ಮಾನವ ನಿರ್ಮಿತ ಪರಿಸರದ ಅನಾಹುತಗಳನ್ನು ಹೆಸರಿಸಿ .

ಮಾನವ ನಿರ್ಮಿತ ಪರಿಸರದ ಅನಾಹುತಗಳೆಂದರೆ

1 ) ಕಸದ ರಾಶಿ , ಕೊಳಚೆ ನೀರು , ಮತ್ತು ತ್ಯಾಜ್ಯ ವಸ್ತುಗಳಿಂದ ಸಾಂಕ್ರಾಮಿಕ ರೋಗಗಳು ನೀರು ಮತ್ತು ಗಾಳಿಯ ಮೂಲಕ ವೇಗವಾಗಿ ಹರಡುತ್ತಿವೆ .

2) ಕೈಗಾರಿಕೆಗಳು ಮತ್ತು ವಾಹನಗಳಿಂದ ಹೊರ ಬರುವ ಹೊಗೆಯ ಇಂಗಾಲದ ಡೈ ಆಕ್ಸೆಡ್ , ಮೊನಾಕ್ಸೆಡ್ , ಸಾರಜನಕದ ಆಕ್ಸೆಡ್ ಮುಂತಾದವು ಮಾನವನ ಆರೋಗ್ಯವನ್ನು ಹಾಳು ಮಾಡಿ ಹಲವಾರು ರೋಗಗಳಿಗೆ ಕಾರಣವಾಗಿದೆ .

17. ಜಾಗತಿಕ ತಾಪಮಾನ ಎಂದರೇನು ?

ಜನಸಂಖ್ಯೆಯ ಹೆಚ್ಚಳ , ಪರಿಸರದ ಅಸಮರ್ಪಕ ನಿರ್ವಹಣೆ , ಸಂಪನ್ಮೂಲಗಳ ಅತಿಯಾದ ಬಳಕೆ , ಅರಣ್ಯನಾಶ , ರಾಸಾಯನಿಕ ಗೊಬ್ಬರ , ಕ್ರಿಮಿನಾಶಕ , ತ್ಯಾಜ್ಯಗಳನ್ನು ಭೂಮಿಯ ನೀರಿನಲ್ಲಿ ಎಸೆಯುವುದು . ಕೈಗಾರಿಕೆಗಳ ಮಾಲಿನ್ಯ , ಪೆಟ್ರೋಲಿಯಂ ಇಂಧನಗಳನ್ನು ಉರಿಸಿದಾಗ ಉಂಟಾಗುವ ವಾಯುಮಾಲಿನ್ಯ ಮುಂತಾದವುಗಳಿಂದ ಉಂಟಾಗುವ ತಾಪಮಾನಕ್ಕೆ ಜಾಗತಿಕ ತಾಪಮಾನ ಎನ್ನುವರು .

18. ಆಮ್ಲ ಮಳೆ ಎಂದರೇನು ?

ಕೈಗಾರಿಕೆ ಹಾಗೂ ವಾಹನಗಳಿಂದ ಗಂಧಕ ಹಾಗೂ ಸಾರಜನಕದ ಆಸ್ಟ್ರೇಡ್‌ಗಳು ವಿಸರ್ಜನೆಯಾಗುತ್ತದೆ . ಇವು ವಾತಾವರಣದಲ್ಲಿ ಬಹುಧೀರ್ಘಕಾಲ ಉಳಿಯುತ್ತವೆ . ರಾಸಾಯನಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಗಂಧಕಾಮ್ಲ ಮತ್ತು ನೈಟ್ರಿಕ್ ಆಮ್ಲವಾಗಿ ಗುಂಪುಗೊಳ್ಳುತ್ತದೆ . ವಾತಾವರಣ ತೇವಾಂಶವಾದೊಡನೆ ಕೂಡಿ ಆಮ್ಲ ಹನಿಗಳಾಗಿ ಸುರಿಯುವುದನ್ನು ಆಮ್ಲದ ಮಳೆ ಎನ್ನುವರು .

19. ಹಸಿರು ಮನೆ ಪರಿಣಾಮ ಎಂದರೇನು ?

ಅರಣ್ಯನಾಶದಿಂದಾಗಿ ಕಾರ್ಬನ್‌ಡೈಆಕ್ಸೆಡ್ , ಮಿಥೇನ್ , ಕಾರ್ಬನ್ ಮೊನಾಕ್ಸೆಡ್ , ನೈಟ್ರಿಕ್ ಆಕ್ಸೆಡ್ ಮುಂತಾದವುಗಳಿಂದ ಭೂಮಿಯ ಉಷ್ಣತೆ ಹೆಚ್ಚುತ್ತಿರುವುದನ್ನು ಹಸಿರು ಮನೆ ಪರಿಣಾಮ ಎಂಬುದಾಗಿ ಕರೆಯುವರು .

20. ಜೀವ ವೈವಿಧ್ಯತೆ ಎಂದರೇನು ?

ಭೂಮಿಯ ಮೇಲಿರುವ ಎಲ್ಲಾ ರೀತಿಯ ವೈವಿಧ್ಯಮಯ ಜೀವರಾಶಿಯನ್ನು ಜೀವ ವೈವಿಧ್ಯತೆ ಎನ್ನುವರು .

21. ಯಾವುದಾದರು ಎರಡು ಪರಿಸರದ ಚಳುವಳಿಯನ್ನು ಹೆಸರಿಸಿ .

1 ) ಪರಿಸರದ ಸಂರಕ್ಷಣೆಗಾಗಿ ನಡೆದ ಪ್ರಮುಖ ಎರಡು ಚಳುವಳಿಗಳೆಂದರೆ

1) 1973 ರಲ್ಲಿ ‘ ಶ್ರೀ ಸುಂದರ್‌ಲಾಲ್ ಬಹುಗುಣ ‘ ರವರ ನೇತೃತ್ವದಲ್ಲಿ “ ಚಿಕ್ಕೋ ಚಳುವಳಿ ” .

2 ) 1983 ರಲ್ಲಿ ಅಪ್ಪಿಕೋ ಚಳುವಳಿ ,

1st Puc Sociology Chapter 8 Notes in Kannada Pdf

III . ಐದು ಅಂಕದ ಪ್ರಶ್ನೆಗಳು : ( 10-15 ವಾಕ್ಯಗಳಲ್ಲಿ ಉತ್ತರಿಸಿ )

22. ಪರಿಸರದ ಪ್ರಕಾರಗಳನ್ನು ತಿಳಿಸಿ .

ಪರಿಸರದ ಪ್ರಮುಖ ಪ್ರಕಾರಗಳೆಂದರೆ

1 ) ಭೌತಿಕ ಪರಿಸರ ,

2 ) ಜೈವಿಕ ಪರಿಸರ .

3 ) ಸಾಮಾಜಿಕ ಪರಿಸರ .

1 ) ಭೌತಿಕ ಪರಿಸರ .

ಭೌತಿಕ ಪರಿಸರವು ನೆಲ – ಜಲ , ಬೆಟ್ಟ – ಗುಡ್ಡ , ಕಾಡು , ಗ್ರಹ , ನಕ್ಷತ್ರ , ಸರೋವರ , ಖನಿಜ ಸಂಪನ್ಮೂಲ ಮುಂತಾದವುಗಳನ್ನು ಒಳಗೊಂಡಿದೆ . ಇದನ್ನು ಭೌತಿಕ , ಅಥವಾ ಭೌಗೋಳಿಕ ಅಥವಾ ನೈಸರ್ಗಿಕ ಪರಿಸರವೆಂದ ಕರೆಯಲಾಗಿದೆ . ಈ ಭೌತಿಕ ಪರಿಸರವು ಮಾನವ ನಿರ್ಮಿತವಲ್ಲದಿದ್ದರು ಇದರಲ್ಲಿ ಕೆಲವೊಂದು ಅಂಶಗಳು ಮಾನವನ ನಿಯಂತ್ರಣಕ್ಕೆ ಒಳಪಟ್ಟಿದೆ . ಮಾನವನ ಜೀವನದ ವಿವಿಧ ಕ್ಷೇತ್ರಗಳ ಮೇಲೆ ಭೌತಿಕ ಪರಿಸರವು ಪ್ರಭಾವ ಬೀರುತ್ತದೆ . ಉದಾ : – ಜನಸಂಖ್ಯೆ , ಜನಾಂಗೀಯ ಸಮಸ್ಯೆ , ಆರ್ಥಿಕ , ಧಾರ್ಮಿಕ , ರಾಜಕೀಯ ಸಾಮಾಜಿಕ ಆರೋಗ್ಯ , ಸಾಹಿತ್ಯ ಉತ್ಪಾದನೆಯ ಮೇಲೆ ಭೌತಿಕ ಪರಿಸರ ಪರಿಣಾಮ ಬೀರುತ್ತವೆ .

2 ) ಜೈವಿಕ ಪರಿಕರ .

ಜೈವಿಕ ಪರಿಸರವು ಜೀವಿಗಳನ್ನು ಒಳಗೊಂಡಿರುವ ಪರಿಸರವಾಗಿದೆ . ಜೀವಿ , ಪ್ರಾಣಿ ಮತ್ತು ಮಾನವನ ಸಂತತಿಯ ಉತ್ಪತ್ತಿಗೆ ಪೂರಕ ಹಾಗೂ ಪೋಷಕವಾಗಿದೆ . ಜೀವಿಯು ಹುಟ್ಟಿ , ವಿಕಾಸಗೊಂಡು , ಪ್ರಗತಿಯತ್ತ ಸಾಗಲು ಜೈವಿಕ ಪರಿಸರದ ಅಸ್ತಿತ್ವವು ಅತ್ಯವಶ್ಯಕವಾದುದು . ಜೈವಿಕ ಪರಿಸರವು ಕಲುಷಿತವಾದರೆ ಜೀವಿಗಳು ನಾಶವಾಗುತ್ತವೆ .

3 ) ಸಾಮಾಜಿಕ ಪರಿಸರ .

ಸಾಮಾಜಿಕ ಪರಿಸರವು ಮಾನವ ನಿರ್ಮಿತ ಸಾಮಾಜಿಕ ಪ್ರಪಂಚವಾಗಿದೆ . ಇದು ಮಾನವನ ಬದುಕಿಗೆ ಅತ್ಯವಶ್ಯಕವಾದ ಪರಿಸರವಾಗಿದೆ . ಸಮಾಜ ರಹಿತ ವ್ಯಕ್ತಿಯು ಕಲ್ಪನಾತೀತ ಎಂಬುದು ತಜ್ಞರ ಅಭಿಪ್ರಾಯವಾಗಿದೆ . ಸಾಮಾಜಿಕ ಪರಿಸರವು ಜೀವನಾಡಿಗಳನ್ನು ಹೊಂದಿರುವ ಜೀವಂತ ವ್ಯವಸ್ಥೆಯಾಗಿದೆ , ಸಾಮಾಜಿಕ ಪರಿಸರವು ಅಸಹಾಯಕ ಸ್ಥಿತಿಯಲ್ಲಿರುವ ಮಾನವ ಶಿಶುವಿನ ಪಾಲ – ಪೋಷಣೆಯನ್ನು ಮಾಡುತ್ತದೆ . ವ್ಯಕ್ತಿಯಲ್ಲಿ ಅಡಗಿರುವ ಸೂತ್ರ ಪ್ರತಿಭೆ ಸಾಮಾರ್ಥ್ಯಗಳ ವಿಕಾಸಕ್ಕೆ ಅವಕಾಶ ಒದಗಿಸುವುದು .

23. ಎಲ್ಲಾ ಬಗೆಯ ಪರಿಸರ ಮಾಲಿನ್ಯಗಳ ಬಗ್ಗೆ ಟಿಪ್ಪಣಿ ಬರೆಯಿರಿ .

ಪರಿಸರವು ಮಲಿನಗೊಳ್ಳಲ್ಪಡುತ್ತಿರುವ ವಿವಿಧ ರೂಪಗಳು ಈ ಕೆಳಗಿನಂತಿವೆ .

1 ) ವಾಯುಮಾಲಿನ್ಯ : ವಾಯುಮಂಡಲದಲ್ಲಿ ಮಾನವನು ಅನಪೇಕ್ಷಿತ ತ್ಯಾಜ್ಯ ವಸ್ತುಗಳಿಂದ ತುಂಬಿಸುವುದನ್ನು “ ವಾಯುಮಾಲಿನ್ಯ ” ಎನ್ನಬಹುದು . “ ಆಕ್ಸ್‌ಫರ್ಡ್ ” ಶಬ್ದಕೋಶದ ಪ್ರಕಾರ- ವಾಯುಮಾಲಿನ್ಯ ಎಂದರೆ- ಮಾನವ ಚಟುವಟಿಕೆಗಳಿಂದ ಬಿಡುಗಡೆಗೊಳ್ಳುವ ಸಂಯುಕ್ತಗಳು ಭೂಮಿಯ ಮೇಲಿನ ವಾಯುಮಂಡಲಕ್ಕೆ ಸೇರಿಕೊಳ್ಳುವುದರ ಮೂಲಕ ಆಸ್ತಿ , ಮೌಲ್ಯಯುತ ಜೀವಿಗಳಾದ ಸಸ್ಯಗಳು , ಪ್ರಾಣಿಗಳು ಮತ್ತು ಮಾನವರ ಮೇಲೆ ಅಪಾಯಕಾರಿಯಾದ ಪರಿಣಾಮವನ್ನುಂಟು ಮಾಡುತ್ತದೆ .

ವಾಯುಮಾಲಿನ್ಯದಿಂದ ಗಾಳಿಯಲ್ಲಿ ಗಂಧಕದ ಆಕ್ಸೆಡ್ , ಸಿಲಿಕ್ ಹಾಗೂ ಇಂಗಾಲದ ಡೈ ಆಕ್ಸೆಡ್ ಬಿಡುಗಡೆ ಹೊಂದುತ್ತಿದ್ದು ಹಲವಾರು ರೀತಿಯ ಖಾಯಿಲೆಗಳಿಗೆ ಮನುಷ್ಯ ಬಲಿಯಾಗುತ್ತಿದ್ದಾನೆ . ಕೈಗಾರಿಕೆಗಳಿಂದ , ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯದಿಂದ ವಾಯುಮಾಲಿನ್ಯವು ಇಡೀ ಸಮಾಜವನ್ನೇ ರೋಗಗ್ರಸ್ತವನ್ನಾಗಿ ಮಾಡಿದೆ .

2 ) ಜಲಮಾಲಿನ್ಯ : ನೀರು ಕಲುಷಿತಗೊಳ್ಳುತ್ತಿರುವುದೇ ಜಲಮಾಲಿನ್ಯ ನೀರು ವಿಷಕಾರಿ ಪದಾರ್ಥಗಳಿಂದ ಕಲುಷಿತಗೊಂಡು , ಜೀವಿಗಳ ಆರೋಗ್ಯವನ್ನು ಹಾಳುಮಾಡಿ ಅವುಗಳ ಸಾವಿಗೆ ಕಾರಣವಾಗುವುದನ್ನು ಜಲಮಾಲಿನ್ಯ ಎನ್ನಬಹುದು . ಅತಿಯಾದ ಜನಸಂಖ್ಯಾ ಬೆಳವಣಿಗೆ , ಅನಿಯಂತ್ರಿತ ಕೈಗಾರೀಕರಣ , ನಗರೀಕರಣಗಳು ಜಲಮಾಲಿನ್ಯಕ್ಕೆ ಕಾರಣಗಳಾಗಿವೆ . ಜಲಮಾಲಿನ್ಯವು ಮೂರು ಮುಖ್ಯ ಪ್ರಕಾರಗಳಲ್ಲಿ ಉಂಟಾಗುವುದು .

1 ) ಒಳನಾಡಿನ ಮಾಲಿನ್ಯ

2 ) ಅಂತರ್‌ಜಲ ಮಾಲಿನ್ಯ ಹಾಗೂ

3 ) ನಗರ ಮಾಲಿನ್ಯ .

ಕೈಗಾರಿಕೆಗಳ ರಾಸಯನಿಕಗಳು , ಕ್ರಿಮಿನಾಶಕಗಳು , ಬಣ್ಣಗಳು , ಚರಂಡಿಯ ಕಲುಷಿತ ನೀರು ಶುದ್ಧ ನೀರಿಗೆ ಬೆರೆತು ಹಲವಾರು ರೋಗಗಳಿಂದ ಜೀವಿಗಳ ಸಾವಿಗೆ ಕಾರಣವಾಗಿದೆ .

3 ) ಶಬ್ದ ಮಾಲಿನ್ಯ: ಅಹಿತಕರ ಶಬ್ದದ ಪ್ರಮಾಣವು , ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ . ಇದು ಸಹ ಮಾನವನ ಕ್ರಿಯೆಗಳಿಂದಲೇ ಉಂಟಾಗುತ್ತದೆ . ಶಬ್ದ ಮಾಲಿನ್ಯದಿಂದ ಮಾನಸಿಕ ಸಮಸ್ಯೆಗಳು ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ .

4 ) ಮಣ್ಣು ಮಾಲಿನ್ಯ: ಭೂಮಿಯ ಮೇಲೆ ಪದರದಲ್ಲಿ ಸಾವಯವ ಮತ್ತು ಅಸಾವಯವ ವಸ್ತುಗಳಿಂದ ಕೂಡಿದ ಮಾಲಿನ್ಯಕ್ಕೆ ಮಣ್ಣು ಮಾಲಿನ್ಯ ಎನ್ನುವರು . ಇದರಿಂದ ಬೆಳೆಗಳು ನಾಶವಾಗುವುದು , ಜಲಮಾಲಿನ್ಯಕ್ಕೆ ಕಾರಣವಾಗುವುದು .

5 ) ಅಣುವಿಕಿರಣ ಮಾಲಿನ್ಯ: ಕೆಲವು ಮೂಲವಸ್ತುಗಳು ತಾವಾಗಿಯೇ ಚೈತನ್ಯವನ್ನು ಹೊರಚೆಲ್ಲುತ್ತವೆ . ಇವು ಮುಂತಾದವುಗಳಿಂದ ಅಣುವಿಕಿರಣಮಾಲಿನ್ಯ ಉಂಟಾಗುತ್ತದೆ . ವಿಕಿರಣಶೀಲತೆ ಎನ್ನುವರು . ಉದಾಹರಣೆಗೆ ಕ್ಲೋರಿಯಂ , ರೇಡಿಯಂ , ಪೊಟಾಶಿಯಂ ,

6) ತಾಪ ಮಾಲಿನ್ಯ: ಕೈಗಾರಿಕೆಗಳು , ವಾಹನಗಳು ಹಾಗೂ ವಿದ್ಯುತ್ ಸ್ಥಾವರಯಂತ್ರಗಳಿಂದ ಉಷ್ಣತೆ ಉಂಟಾಗಿ ಇದರಿಂದ ತಾಪಮಾಲಿನ್ಯ ಉಂಟಾಗುತ್ತದೆ . ಇದರಿಂದ ವಾಯುಮಾಲಿನ್ಯ ಹಾಗೂ ಜಲಮಾಲಿನ್ಯ ಉಂಟಾಗುತ್ತದೆ . ಇದನ್ನೇ ತಾಪಮಾಲಿನ್ಯ ಎಂದು ಕರೆಯುತ್ತಾರೆ .

7 ) ಕ್ರಿಮಿನಾಶಕಗಳ ಮಾಲಿನ್ಯ: ಕೃಷಿಗೆ ಬಳಸುವ ಕ್ರಿಮಿನಾಶಕಗಳಿಂದ ಈ ರೀತಿಯ ಮಾಲಿನ್ಯವು ವಾತಾವರಣಕ್ಕೆ ಸೇರಿಕೊಂಡು ವಾಯುಮಾಲಿನ್ಯಕ್ಕೆ ಕಾರಣವಾಗಿದೆ .

8 ) ಘನ ತ್ಯಾಜ್ಯ ಮಾಲಿನ್ಯ : ಗೃಹ ಉಪಯೋಗಿ ವಸ್ತುಗಳ , ಬಿಸಾಡುವ ವಸ್ತುಗಳಿಂದಾಗಿ ವಾಯುಮಾಲಿನ್ಯಕ್ಕೆ

9 ) ಸಾಗರ ಮಾಲಿನ್ಯ : ಪೆಟ್ರೋಲಿಯಂ ಸೋರಿಕೆ , ಹಡಗುಗಳಿಂದ ಸೋರುವ ತೈಲಗಳಿಂದ , ಕೈಗಾರಿಕೆಗಳ ತ್ಯಾಜ್ಯಗಳಿಂದ ಸಾಗರದ ನೀರು ಮಲಿನಗೊಂಡು ಸಾಗರ ಮಾಲಿನ್ಯ ಉಂಟಾಗುತ್ತದೆ .

24. ಜೀವ ವೈವಿಧ್ಯತೆ ಎಂದರೇನು ? ವರ್ಣಿಸಿ .

ಭೂಮಿಯ ಮೇಲಿರುವ ಎಲ್ಲಾ ರೀತಿಯ ವೈವಿಧ್ಯಮಯ ಜೀವರಾಶಿಯನ್ನು ‘ ಜೀವ ವೈವಿಧ್ಯತೆ ‘ ಎನ್ನಲಾಗಿದೆ . ಜೀವಿಗಳ ಅಸ್ತಿತ್ವಕ್ಕೆ ಬರುವ ಮುನ್ನ ಪೃಥ್ವಿಯು ( ಭೂಮಿಯು ) ಸಮುದ್ರ , ಮಿಥೇನ್ , ಅಮೋನಿಯಂ , ಜಲಜನಕ , ನೀರಾವಿಯಂತ ಅನಿಲಗಳ ಪಟ್ಟಿಯೊಂದಿಗೆ ಬಂಡಾರ ಶಿಲೆಗಳಿಂದ ಕೂಡಿತ್ತು . ಲಕ್ಷಾಂತರ ವರ್ಷಗಳ ರಾಸಾಯನಿಕ ಮತ್ತು ಭೌತಿಕ ಕ್ರಿಯೆಗಳಿಂದ ಜೀವಿಗಳು ಬೆಳೆಯಲು ಪ್ರಾರಂಭವಾದವು . ಮಾನವ ಸೇರಿದಂತೆ ಭೂಮಿಯ ಮೇಲೆ ಜೀವ ವಿಕಾಸವು ಹಂತ ಹಂತವಾಗಿ ಆಗುತ್ತಾ ಬಂದಿತು .

ಕಣ್ಣಿಗೆ ಕಾಣದಂತಹ ಸೂಕ್ಷ್ಮ ಜೀವಿಗಳಿಂದಿಡಿದು ಗಾಳಿಯಲ್ಲಿ ಹಾರಾಡುವ ಚಿಟೆ , ಪಕ್ಷಿಗಳು ನೀರಿನಲ್ಲಿರುವ ಮೀನು , ತಿಮಿಂಗಲ , ಭೂಮಿಯ ಮೇಲೆ ಇದ್ದ ದೊಡ್ಡ ದೊಡ್ಡ ಡೈನೋಸಾರ್‌ಗಳು ಜೀವಿಸಿದ್ದು ಮಿಲೇನಿಯಂ ವರ್ಷಗಳಿಂದ ರಕ್ಷಿಸಿಕೊಂಡು ಬಂದು ಕ್ರಮೇಣ ವಾಯು , ನೀರು , ಉಷ್ಣಾಂಷಗಳಿಂದ ಕೆಲವು ಡೈನೋಸಾರ್‌ಗಳಂತಹ ಜೀವಿಗಳ ಅಳಿವಿಗೆ ಕಾರಣವಾಗಿದೆ . ವೈವಿಧ್ಯಮಯ ಸಸ್ಯಗಳು , ರೋಗ ನಿವಾರಕ ಗುಣಗಳುಳ್ಳ ಸಸ್ಯಗಳು ಹಾಗೂ ಪ್ರಾಣಿಗಳ ಪೂರೈಕೆ ಹಾಗೂ ಪ್ರಕೃತಿಯ ಸೌಂದರ್ಯವನ್ನು ಕಾಪಾಡಲು ಜೀವ ವೈವಿಧ್ಯವನ್ನು ಇಂದು ನಾವು ರಕ್ಷಿಸಲೇಬೇಕಾಗಿದೆ . ಜೀವಸಂತತಿ ನಶಿಸಿ ಹೋದರೆ ಅದರ ಮುನರ್‌ ಸೃಷ್ಟಿ ಅಸಾಧ್ಯ . ಆದ್ದರಿಂದ ಇದನ್ನು ನಾವು ರಕ್ಷಿಸಬೇಕು .

25. ಜಾಗತಿಕ ತಾಪಮಾನದ ಪರಿಣಾಮಗಳೇನು ?

ಜನಸಂಖ್ಯೆಯ ಹೆಚ್ಚಳ , ಪರಿಸರದ ಅಸಮರ್ಪಕ ನಿರ್ವಹಣೆ , ಸಂಪನ್ಮೂಲಗಳ ಅತಿಯಾದ ಬಳಕೆ , ಅರಣ್ಯನಾಶ , ರಾಸಾಯನಿಕ ಗೊಬ್ಬರ , ಕ್ರಿಮಿನಾಶಕ , ತ್ಯಾಜ್ಯಗಳನ್ನು ಭೂಮಿಯ ಮೇಲೆ ನೀರಿಗೆ ಎಸೆಯುವುದು . ಕೈಗಾರಿಕೆಗಳ ಮಾಲಿನ್ಯ ಪೆಟ್ರೋಲಿಯಂ ಇಂಧನಗಳನ್ನು ಉರಿಸಿದಾಗ ಉಂಟಾಗುವ ತಾಪಮಾನವೇ ಜಾಗತಿಕ ತಾಪಮಾನವಾಗಿದೆ.

ಜಾಗತಿಕ ತಾಪಮಾನದಿಂದ ಸಮುದ್ರ ಮತ್ತು ನದಿಗಳ ನೀರು ಆವಿಯಾಗಿ ಮಣ್ಣಿನ ತೇವಾಂಶ ಕಡಿಮೆಯಾಗಿ ಸಸ್ಯ ಮತ್ತು ಜೀವಿ ಸಂಕುಲಕ್ಕೆ ನೀರು ಸಿಗದೆ ಸಾವನ್ನಪ್ಪುವ ಸಾಧ್ಯತೆ ಇದೆ . ಅನಿರೀಕ್ಷಿತ ಮಳೆ , ಪ್ರವಾಹಗಳು ಉಂಟಾಗಿ ಹೊಸ ಸಾಂಕ್ರಾಮಿಕ ರೋಗಗಳು ಸೃಷ್ಟಿಯಾಗುತ್ತವೆ . ಜಾಗತಿಕ ತಾಪಮಾನವು ವಾಯುಚಲನೆ , ಸಮುದ್ರ ಮತ್ತು ವಾತಾವರಣ ಉಷ್ಣ ಚಲನೆಯ ಮೇಲೆ ಪರಣಾಮ ಬೀರಿ ಇಡೀ ನೈಸರ್ಗಿಕ ವ್ಯವಸ್ಥೆಯನ್ನೇ ಗಂಡಾಂತರಕ್ಕೀಡು ಮಾಡಿತು . ಜಾಗತಿಕ ತಾಪಮಾನವನ್ನು ತಡೆಗಟ್ಟುವುದು ನಾಗರೀಕ ಜಗತ್ತಿನ ಜವಾಬ್ದಾರಿಯಾಗಿದೆ . ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಜಾಗತಿಕ ತಾಪಮಾನದ ಪರಿಣಾಮವನ್ನು ನಿಯಂತ್ರಿಸುವುದು .

26. ಆಮ್ಲ ಮಳೆಯ ಬಗ್ಗೆ ನಿಮಗೇನು ತಿಳಿದಿದೆ ?

ಕೈಗಾರಿಕೆ ಹಾಗೂ ವಾಹನಗಳಿಂದ ಗಂಧಕ ಹಾಗೂ ಸಾರಜನಕ ಆಕ್ಸೆಡ್‌ಗಳು ವಿಸರ್ಜನೆಯಾಗುತ್ತದೆ . ಇವು ವಾತಾವರಣದಲ್ಲಿ ಬಹು ಧೀರ್ಘಕಾಲ ಉಳಿಯುತ್ತವೆ . ರಾಸಾಯನಿಕ ಮತ್ತು ವಾಯು ರಾಸಾಯನಿಕ ಪ್ರತಿಕ್ರಿಯೆಗಳ ಮೂಲಕ ಗಂಧಕಾಮ್ಲ ಮತ್ತು ನೈಟ್ರಿಕ್ ಆಮ್ಲವಾಗಿ ಗುಂಪುಗೊಳ್ಳುತ್ತವೆ . ವಾತಾವರಣ ತೇವಾಂಶದೊಡನೆ ಕೂಡಿ ಆಮ್ಲ ಹನಿಗಳಾಗಿ ಸುರಿಯುವುದನ್ನು ‘ ಆಮ್ಲ ಮಳೆ ‘ ಎನ್ನಲಾಗಿದೆ .

ಸಾಮಾನ್ಯವಾಗಿ ಮಳೆ ಅಥವಾ ಮಂಜು ಭೂಮಿಗೆ ಬಿದ್ದಾಗ ಅದರ ಆಮ್ಲಗುಣ ಏನಾದರೂ ಕಡಿಮೆ ಇದ್ದಲ್ಲಿ ಅಂತಹ ಮಳೆಯನ್ನು “ ಆಮ್ಲ ಮಳೆ ” ಎಂದು ಕರೆಯಲಾಗಿದೆ . ಮಲಿನಕಾರಿ ವಸ್ತುಗಳಾದ ಗಂಧಕದ ಆಕ್ಸೆಡ್‌ಗಳು ಹಾಗೂ ಸಾರಜನಕದ ಆಕ್ಸೆಡ್‌ಗಳು ಕಲ್ಲಿದ್ದಲು , ಪೆಟ್ರೋಲಿಯಂ , ಆಧಾರಿತ ಇಂಧನಗಳನ್ನು ಉರಿಸಿದಾಗ ಹೊರ ಬರುವ ಹೊಗೆ ಮುಂತಾದವುಗಳು ಆಮ್ಲ ಮಳೆಗೆ ಕಾರಣವಾಗಿವೆ .ಆಮ್ಲ ಮಳೆಯ ಪರಿಣಾಮವಾಗಿ ಶಿಲೆಗಳು ಕರಗುತ್ತವೆ . ಕಾಡಿನ ಮರಗಳ ಎಲೆ ಉದುರುತ್ತವೆ .

ಆಮ್ಲ ನೀರು ಎಲೆಯ ಮೇಲೆ ಬಿದ್ದಾಗ ಜೀವಕೋಶಗಳು ನಾಶವಾಗುತ್ತವೆ . ಜಲಚರಗಳ ಮೇಲೂ ಕೂಡ ಪರಿಣಾಮ ಬೀರುವ ಆಮ್ಲ ಮಳೆ , ಭೂಮಿಯ ಫಲವತ್ತತೆಯನ್ನು ನಾಶ ಮಾಡುತ್ತದೆ . ಕೆಲವು ಲೋಹಗಳು ತುಕ್ಕು ಹಿಡಿಯುತ್ತದೆ . ತಾಜ್‌ಮಹಲಿನ ಅಮೃತ ಶಿಲೆಯ ಬಿಳುಪು ಮಾಯವಾಗುತ್ತಿದೆ . ವರ್ಣಚಿತ್ರ , ಗಾಜು , ಆಭರಣಗಳು ತಮ್ಮ ಹೊಳಪಿನ ಗುಣವನ್ನು ಕಳೆದುಕೊಂಡು ಮಸುಕಾಗುತ್ತದೆ . ಇದನ್ನು ಶಿಲಾರ್ಖದ ಅಥವಾ ಶಿಲಾಕೂಪ್ಪ ಎಂದು ಕರೆಯುತ್ತಾರೆ .

ಒಂದು ದೇಶದಲ್ಲಿ ವಿಸರ್ಜಿತವಾಗುವ ತ್ಯಾಜ್ಯದ ಪರಿಣಾಮಗಳು ಮತ್ತೊಂದು ರಾಷ್ಟ್ರದ ಮೇಲೂ ಆಮ್ಲ ಮಳೆಯಾಗಿ ಸುರಿಯುತ್ತದೆ . ಉದಾಹರಣೆಗೆ- ಭಾರತದ ಕೈಗಾರಿಕೆಗಳು ಹಾಗೂ ವಾಹನಗಳ ಹೊಗೆ ವಾಯುಮಂಡಲ ಸೇರುವ ಗಂಧಕ ಹಾಗೂ ಇಂಗಾಲದ ಡೈ ಆಕ್ಸೆಡ್‌ಗಳು ನೆರೆಯ ಪಾಕಿಸ್ತಾನ ಮತ್ತು ಚೀನಾದ ಮೇಲೆ ಆಮ್ಲ ಮಳೆಯಾಗಿ ಸುರಿಯಬಹುದು . ಹೀಗೆ ಆಮ್ಲ ಮಳೆಯ ದುಷ್ಪರಿಣಾಮಗಳು ರಾಷ್ಟ್ರೀಯ ಗಡಿಯನ್ನು ಮೀರುವಂತಾಗಿದೆ . ಆಮ್ಲ ಮಳೆಯನ್ನು ನಿಯಂತ್ರಿಸಬೇಕಾದರೆ ಸಾರ್ವಜನಿಕರಲ್ಲಿ ಪರಿಸರ ಕಾಳಜಿ , ಮತ್ತು ಜಾಗೃತಿ ಮೂಡಿಸಬೇಕು . ಜಗತ್ತಿನ ಎಲ್ಲಾ ರಾಷ್ಟ್ರಗಳು ಕಾರ್ಯಪ್ರವೃತ್ತರಾಗಬೇಕು .

IV . ಹತ್ತು ಅಂಕದ ಪ್ರಶ್ನೆಗಳು ( 30-40 ವಾಕ್ಯಗಳಲ್ಲಿ ಉತ್ತರಿಸಿ )

27. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳು ಯಾವುವು ?

ಪರಿಸರ ಮಾಲಿನ್ಯವು ಆಧುನಿಕ ಜಗತ್ತಿನ ಪ್ರಮುಖ ಸವಾಲಾಗಿದ್ದು ಭವಿಷ್ಯದ ಬದುಕನ್ನು ವಿನಾಶದತ್ತ ಕೊಂಡೊಯ್ಯುವ ಅಪಾಯದ ಸ್ಥಿತಿಯಾಗಿದೆ . ಮನುಷ್ಯ ಮತ್ತು ಮಾನವ ಕೇಂದ್ರಿತ ಚಟುವಟಿಕೆಗಳೇ ಪರಿಸರವನ್ನು ಹಾಳು ಮಾಡುತ್ತಿವೆ . ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಾಳಿ , ಆಕ್ರಮಣ ಮತ್ತು ನಾಶಕ್ಕೆ ಮಾನವನೇ ಸಂಪೂರ್ಣ ಹೊಣೆಗಾರನಾಗಿದ್ದಾನೆ .

ಪರಿಸರ ಮಾಲಿನ್ಯದ ಪ್ರಮುಖವಾದ ಕಾರಣಗಳೆಂದರೆ

1 ) ಜನಸಂಖ್ಯಾ ಸ್ಪೋಟ ಮತ್ತು ಅನುಭೋಗವಾದ ಗೀಳು .

2 ) ನಗರ ಜನಸಾಂದ್ರತೆ ಮತ್ತು ವೈಜ್ಞಾನಿಕ ನಗರೀಕರಣ .

3 ) ನಗರ ಯೋಜನೆ ಇಲ್ಲದಿರುವಿಕೆ ಮತ್ತು ಅವೈಜ್ಞಾನಿಕ ನಿರ್ವಹಣಾ ಕ್ರಮಗಳು .

4 ) ಅಜ್ಞಾನ ಮತ್ತು ಮಾನವನ ದುರಾಸೆ ,

5 ) ಒಳಚರಂಡಿಯ ಹೊಲಸು , ತ್ಯಾಜ್ಯ ಮಾರ್ಜಕಗಳು ಮತ್ತು ಮೃತ ದೇಹಗಳ ದಹನ .

6 ) ಔಷಧಿಗಳು , ಕ್ರಿಮಿನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ . ಕಾರ್ಖಾನೆ ಮತ್ತು ವಾಹನಗಳಿಂದ ಹೊರಬರುವ ದಟ್ಟವಾದ ಹೊಗೆ ಹಾಗೂ

7 ) ರಾಸಾಯನಿಕಗಳು .

8 ) ಅರಣ್ಯನಾಶ ಮತ್ತು ಮಣ್ಣಿನ ಸವೆತ ,

9 ) ಜೈವಿಕ ಮಾಲಿನ್ಯ .

10 ) ವಿಕಿರಣ ಪದಾರ್ಥಗಳು ,

11 ) ವಿವೇಚನಾ ರಹಿತ ಕಾನೂನು ಮತ್ತು ಶಾಸನಗಳ ದುರ್ಬಲತೆ ,

12 ) ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆಯ ಕೊರತೆ ಮತ್ತು ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದಿರುವಿಕೆ .

13 ) ಪ್ರಬಲ ಇಚ್ಚಾಶಕ್ತಿ ಇಲ್ಲದ ಭ್ರಷ್ಟ ಅಪರಾಧಿ ರಾಜಕಾರಣಿಗಳು ಅಧಿಕಾರಿಗಳು ಮತ್ತು ದುರ್ಬಲ ಇಲಾಖೆಗಳು ಕಾರಣಗಳಾಗಿವೆ .

28. ಸಮಾಜದ ಮೇಲೆ ಪರಿಸರ ಮಾಲಿನ್ಯದ ಪರಿಣಾಮವನ್ನು ವಿವರಿಸಿ .

ಸಮಾಜದ ಮೇಲೆ ಪರಿಸರ ಮಾಲಿನ್ಯವು ದುಷ್ಪರಿಣಾಮವನ್ನು ಬೀರುತ್ತಿದ್ದು ಇದು ಜೀವಿಗಳ ಶಾರೀರಿಕ ಹಾಗೂ ಮಾನಸಿಕ ಅಸ್ವಸ್ಯಕ್ಕೆ ಕಾರಣವಾಗಿವೆ . ಸಮಾಜದ ಮೇಲೆ ಪರಿಸರ ಮಾಲಿನ್ಯದ ಪರಿಣಾಮಗಳೆಂದರೆ

1 ) ಪರಿಸರಮಾಲಿನ್ಯವು ಮಾನವನ ಸಮಾಜ ಮತ್ತು ಸಮಸ್ತ ಜೀವ ಜಗತ್ತಿನ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವುದು . ಪರಿಸರ ಮಾಲಿನ್ಯದ ವಿವಿಧ ಕರಾಳ ಮುಖದಿಂದ ಪ್ರಾಣಿ ಜಗತ್ತು ಹಾಗೂ ಸಸ್ಯ ಜಗತ್ತುಗಳು ತಮ್ಮ ಸಹಜ ಸಮತೋಲನವನ್ನು ಕಳೆದುಕೊಳ್ಳುತ್ತವೆ .

2 ) ಕೈಗಾರಿಕೆಗಳು ಮತ್ತು ವಾಹನಗಳಿಂದ ಹೊರಬರುವ ಹೊಗೆಯು ಇಂಗಾಲದ ಡೈ ಆಕ್ಸೆಡ್ , ಮೊನಾಕೈಡ್ , ಸಾರಜನಕದ ಆಕ್ಸೆಡ್‌ಗಳು ಜಲಜನಕ ಮುಂತಾದವು ಮಾನವನ ಆರೋಗ್ಯವನ್ನು ಹಾಳುಮಾಡಿ ಕ್ಷಯ , ಅಸ್ತಮ , ರಕ್ತಹೀನತೆ , ಕಣ್ಣಿನ ಸಮಸ್ಯೆಗಳು , ಕ್ಯಾನ್ಸರ್ , ಚರ್ಮರೋಗ ಇತ್ಯಾದಿ ಕಾಯಿಲೆಗಳು ಹೆಚ್ಚುವಿಕೆ ಹಾಗೂ ಹರಡುವಿಕೆಗೆ ಕಾರಣವಾಗಿದೆ .

3 ) ವಿಶ್ವದ ಉಷ್ಣಾಂಶದ ಹೆಚ್ಚಳ ಮತ್ತು ಆತ್ಮೀಯ ಮಳೆಯಿಂದ ಅರಣ್ಯ ಸಂಪತ್ತು , ಐತಿಹಾಸಿಕ ಸ್ಮಾರಕಗಳು ಕಟ್ಟಡಗಳು ವಿರೂಪಗೊಳ್ಳುತ್ತಿವೆ . ಹವಾಮಾನದಲ್ಲಿ ವ್ಯತ್ಯಾಸ ಉಂಟಾಗಿ ಅನಾವೃಷ್ಟಿ ಹಾಗೂ ಅತಿವೃಷ್ಟಿಗೆ ಕಾರಣವಾಗಿದೆ .

4) ಪರಿಸರ ಮಾಲಿನ್ಯದ ಕೆಟ್ಟ ಪರಿಣಾಮಗಳು ಪ್ರಸ್ತುತ ಮತ್ತು ಭವಿಷ್ಯದ ತಲೆಮಾರುಗಳ ಮೇಲೆ ವ್ಯತಿರಕ್ತ ಪ್ರಭಾವ ಬೀರಿ ಮನೋ ದೈಹಿಕ ವಿಕಲತೆ ಹಾಗೂ ಗುಣಪಡಿಸಲಾಗದ ಕಾಯಿಲೆಗಳನ್ನು ತಂದೊಡ್ಡುವುವು .

5 ) ಕಸದರಾಶಿ , ಕೊಳಚೆನೀರು ಮತ್ತು ತ್ಯಾಜ್ಯ ವಸ್ತುಗಳಿಂದ ಸಾಂಕ್ರಾಮಿಕ ರೋಗಗಳು ನೀರು ಮತ್ತು ಗಾಳಿಯ ಮೂಲಕ ವೇಗವಾಗಿ ಹರಡುತ್ತವೆ .

6 ) ಪರಿಸರ ಮಾಲಿನ್ಯದಿಂದ ಓರೋನ್ ಪದರಗಳು ಘಾಸಿಗೊಂಡಿದೆ . ಅತಿ ತೀಕ್ಷವಾದ ಅತಿ ನೇರಳೆ ಕಿರಣಗಳು ಭೂಮಿಗೆ ನೇರವಾಗಿ ತಲುಪುವುದರಿಂದ ಜೀವ ಸಂಕುಲಕ್ಕೆ ಹಾನಿಯುಂಟಾಗುತ್ತದೆ .

7 ) . ಪ್ರಕೃತಿಯ ಸಹಜ ಸೃಷ್ಟಿಯಾದ ಹಳ್ಳ – ಕೊಳ್ಳ ನದಿ ಮತ್ತು ಹರಿಯುವ ನೀರು ದೋಷಯುಕ್ತವಾಗಿ ಅಲ್ಲಿನ ಜಲಚರಗಳು ನಾಶವಾಗುತ್ತಿವೆ .

8 ) ಸಮುದ್ರದಲ್ಲಿ ತೈಲ ಸೋರುವಿಕೆಯಿಂದ ಜಲಚರ ಸಸ್ಯಗಳು ಪ್ರಾಣಿಗಳು ಸಾವನ್ನಪ್ಪುತ್ತವೆ , ಪ್ರತಿವರ್ಷ ತೈಲ ಸೋರುವಿಕೆಯ ಮಾಲಿನ್ಯದಿಂದ 50.000 ದಿಂದ 250.000 ಕ್ಕು ಹೆಚ್ಚು ಪಕ್ಷಿಗಳು ಸಾವನ್ನಪ್ಪುತ್ತವೆ . ಎಂದು ಅಂದಾಜು ಮಾಡಲಾಗಿದೆ .

9 ) ಡಿಡಿಟಿ ಯಂತಹ ವಿಷಪೂರಿತ ಕೀಟನಾಶಕ ಸಿಂಪಡಿಕೆಯಿಂದ ನರವ್ಯೂಹಕ್ಕೆ ತೀವ್ರ ತರವಾದ ಪರಿಣಾಮ ಉಂಟಾಗುತ್ತದೆ .

10 ) ಅಣುವಿಕಿರಿಣ ಪರಿಣಾಮಗಳಿಂದ ಹಲವು ತಲೆಮಾರುಗಳವರೆಗೂ ದುಷ್ಪರಿಣಾಮಗಳು ಉಂಟಾಗುತ್ತವೆ .

29. ಪರಿಸರದ ಸಮಸ್ಯೆಗಳು ಏಕೆ ಅದೇ ಸಮಯದ ಸಾಮಾಜಿಕ ಸಮಸ್ಯೆಗಳು ಎಂಬುದನ್ನು ವಿವರಿಸಿ .

 • ಪರಿಸರದ ಸಮಸ್ಯೆಗಳು ಅದೇ ಸಮಯದ ಸಾಮಾಜಿಕ ಸಮಸ್ಯೆಗಳಾಗಿವೆ . ಪರಿಸರದ ಸಮಸ್ಯೆಗಳಿಗೆ ಮುಖ್ಯಕಾರಣ ಸಮಾಜ , ಸಮಾಜದ ಶ್ರೇಷ್ಟ ಜೀವಿ ಎನಿಸಿದ ಮನುಷ್ಯನೇ ಮುಖ್ಯ ಕಾರಣ ಎನ್ನಬಹುದಾಗಿದೆ . ಮನುಷ್ಯರ ದುರಾಸೆಯಿಂದಾಗಿ ಸಮಸ್ಯೆಗಳು ಬೆಳೆಯಿತು . ಆ ಸಮಸ್ಯೆಗಳು ಪರಿಸರದ ಸಮಸ್ಯೆಗಳು ಕೂಡ ಆಗಿದೆ .
 • ಮನುಷ್ಯ ತನ್ನ ವಸತಿಗಾಗಿ , ವೈಭೋಗದ ಜೀವನಕ್ಕಾಗಿ ಅರಣ್ಯಗಳನ್ನು ನಾಶಮಾಡತೊಡಗಿದ , ಅರಣ್ಯಗಳ ನಾಶದಿಂದ ಮಳೆ ಕಡಿಮೆಯಾಯಿತು . ಸಮಾಜದಲ್ಲಿ ಜನಸಂಖ್ಯೆ ಬೆಳೆಯತೊಡಗಿತು . ಜನಸಂಖ್ಯೆಯ ಅಧಿಕತೆ ಹಲವಾರು ಸಮಸ್ಯೆಗಳಿಗೆ ಎಡೆಮಾಡಿತು . ಒಂದೆಡೆ ಪರಿಸರದಿಂದ ವೃಕ್ಷಗಳು ನಾಶವಾದಂತೆ ಮಳೆಯು ಮಾಯವಾಯಿತು . ಪರಿಣಾಮ ಬರಗಾಲ , ಅನಾವೃಷ್ಟಿ ,
 • ಅನಾವೃಷ್ಟಿಯಿಂದ ನೀರಿನ ಸಮಸ್ಯೆಯ ಜೊತೆಗೆ ಆಹಾರದ ಸಮಸ್ಯೆ , ಆರೋಗ್ಯ ಸಮಸ್ಯೆ ಒಟೊಟ್ಟಿಗೆ ಬರುವುವು .
 • ಸಮಾಜದ ಜನಸಂಖ್ಯೆಯಿಂದಾಗಿ ಕೈಗಾರಿಕೆಗಳು , ವಾಹನಗಳ ಸಂಖ್ಯೆಯು ಹೆಚ್ಚಾಗಿ ಪರಿಸರದಲ್ಲಿ ವಾಯುಮಾಲಿನ್ಯ , ಶಬ್ದಮಾಲಿನ್ಯ , ಜಲಮಾಲಿನ್ಯವು ಉಂಟಾಗಿ ಹಲವಾರು ರೋಗ ರುಜಿನಗಳಿಗೆ ಕಾರಣವಾಯಿತು.
 • ಪರಿಸರ ಮಾಲಿನ್ಯ ಹೆಚ್ಚಿದಷ್ಟು ಸಮಾಜದಲ್ಲಿ ರಕ್ತದೊತ್ತಡ , ಕ್ಯಾನ್ಸರ್ , ಕ್ಷಯ , ಮುಂತಾದ ಹಲವಾರು ಭಯಂಕರ ಕಾಯಿಲೆ ದುಷ್ಪರಿಣಾಮಗಳು ಹೆಚ್ಚಾಗುತ್ತವೆ . ಮತ್ತೆ ಕೆಲವೊಮ್ಮೆ ಪ್ರಕೃತಿಯ ವಿಕೋಪಗಳಾದ ಅತಿವೃಷ್ಟಿ , ಭೂಕಂಪ , ಸುನಾಮಿ ಸಮಾಜದ ಮೇಲೆ ಭಯಂಕರ ಪರಿಣಾಮವನ್ನುಂಟು ಮಾಡುತ್ತವೆ .
 • ಅಪಾರ ಸಾವು – ನೋವು ಉಂಟಾಗುವುದರ ಜೊತೆಗೆ , ಆಸ್ತಿ ಪಾಸ್ತಿಯ ನಷ್ಟವಾಗುವುದುಂಟು , ಸಮಾಜದಲ್ಲಿ ಒಂದೆಡೆ ಆಹಾರ ಸಮಸ್ಯೆ , ವಸತಿ ಸಮಸ್ಯೆ ನೀರಿನ ಸಮಸ್ಯೆಯ ಜೊತೆ – ಜೊತೆಗೆ ಆರೋಗ್ಯ ಸಮಸ್ಯೆ , ನಿರುದ್ಯೋಗ ಸಮಸ್ಯೆಯು ಉಂಟಾಗುತ್ತದೆ . ” ಏಕೆಂದರೆ ಹೊಲಗದ್ದೆ – ತೋಟ , ಮನೆ – ಮಠಗಳನ್ನು ಕಳೆದುಕೊಂಡು ನಿರ್ಗತಿಕರಾ ಮುಂದಿನ ಜೀವನಕ್ಕೆ ಉದ್ಯೋಗದ ಬೇಟೆಗೆ ತೊಡಗಿರುವುದರಿಂದ ಈ ಸಮಸ್ಯೆಗಳು ಕಾಡತೊಡಗುತ್ತವೆ . ಹೀಗೆ ಪರಿಸರದ ಸಮಸ್ಯೆಗಳು ಅದೇ ಸಮಯದ ಸಾಮಾಜಿಕ ಸಮಸ್ಯೆಗಳು ಆಗುತ್ತವೆ .

30. ಪರಿಸರದ ಸಂರಕ್ಷಣೆಯಲ್ಲಿರುವ ಶಾಸನೀಯ ಮತ್ತು ನೀತಿಧಾನಿಕ ಕ್ರಮಗಳನ್ನು ವಿವರಿಸಿ .

ಪರಿಸರದ ಸಂರಕ್ಷಣೆಯಲ್ಲಿರುವ ಶಾಸನೀಯ ಮತ್ತು ನೀತಿಧಾನಿಕ ಕ್ರಮಗಳೆಂದರೆ

 • 1948 ರ ಕಾರ್ಖಾನೆಗಳ ಕಾಯ್ದೆಯ ಪ್ರಕಾರ , ಯಾವುದೇ ಕಾರ್ಖಾನೆಗಳು ಸ್ಥಾಪಿಸಲು / ವಿಸ್ತರಿಸಲು ಮಂಜುರಾತಿ ಸಮಿತಿಗಳ ಅನುಮೋದನೆಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ .
 • 1962 ಅಣುಶಕ್ತಿ ಕಾಯ್ದೆ , ಅಣುಶಕ್ತಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವು ` ನೇರವಾಗಿ ಕೇಂದ್ರ ಸರ್ಕಾರದ ಆಧೀನಕ್ಕೊಳಪಟ್ಟಿದೆ . ಈ ಕಾಯ್ದೆಯು ಅಣುಶಕ್ತಿಗೆ ಸಂಭಂಧಿಸಿದ ವಿಷಯಗಳನ್ನು ನಿಯಂತ್ರಿಸಿ ನಿರ್ದೇಶಿಸುತ್ತದೆ
 • 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವನ್ಯಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಂಪೂರ್ಣ ರಕ್ಷಣೆ ಒದಗಿಸುತ್ತದೆ . ಈ ಕಾಯ್ದೆಯು ವನ್ಯಜೀವಿಗಳ ಬೇಟೆಯನ್ನು ಪ್ರತಿಬಿಂಬಿಸುತ್ತದೆ . ನಿಯಮವನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ವಿಧಿಸುವುದು .
 • ಜಲಮಾಲಿನ್ಯ ತಡೆ ಮತ್ತು ನಿಯಂತ್ರಣಾ ಕಾಯ್ದೆಯನ್ನು 1974 ರಲ್ಲಿ … ಜಾರಿಗೊಳಿಸಲಾಯಿತು .
 • 1981 ರಲ್ಲಿ ವಾಯುಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ಮೂಲಕ ವಾಯುಮಾಲಿನ್ಯಕ್ಕೆ ತಡೆ ಹಾಕಲಾಯಿತು .
 • 1986 ರ ಪರಿಸರ ಸಂರಕ್ಷಣಾ ಕಾಯ್ದೆ ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಗುರಿಯನ್ನು ಹೊಂದಿದೆ .
 • 1988 ರ ಮೋಟಾರು ವಾಹನ ಕಾಯ್ದೆ ಮೋಟಾರು ವಾಹನಗಳ ಸಂಚಾರದಿಂದ ಉಂಟಾಗುವ ವಾಯುಮಾಲಿನ್ಯಕ್ಕೆ ನಿಯಂತ್ರಣ ಹೇರಿದೆ .
 • 1989 ರ ಶಬ್ದ ಮಾಲಿನ್ಯ ಕಾಯ್ದೆಯ , ವಸತಿ ಪ್ರದೇಶ , ಶಾಲೆ – ಕಾಲೇಜು , ಆಸ್ಪತ್ರೆ , ನ್ಯಾಯಾಲಯ ಮುಂತಾದ ಪ್ರದೇಶಗಳನ್ನು ಶಾಂತಿ ವಲಯ ಎಂದು ಘೋಷಿಸಿ ಇಂತಹ ಪ್ರದೇಶಗಳಲ್ಲಿ ಅತಿಯಾದ ಶಬ್ದ , ಧ್ವನಿವರ್ಧಕಗಳು ಮತ್ತು ಪಟಾಕಿಗಳನ್ನು ಸಿಡಿಸುವುದನ್ನು ಪ್ರತಿ ಬಂಧಿಸುತ್ತದೆ .
 • 1991 ರ ಸಾರ್ವಜನಿಕ ಹೊಣೆಗಾರಿಕಾ ಭದ್ರತಾ ಕಾಯ್ದೆಯಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶ ಕಲ್ಪಿಸಿದೆ .
 • ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳು ರಾಜ್ಯಮಟ್ಟದಲ್ಲಿ ಕ್ರಿಯಾಶೀಲವಾಗಿದ್ದು ರಾಷ್ಟ್ರ ಮಟ್ಟದ ಕೇಂದ್ರದಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿದೆ . ಪರಿಸರ ಇಲಾಖೆಯು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅನೇಕ ಕಾರ್ಯಗಳನ್ನು ಹಾಗೂ ಯೋಜನೆಗಳನ್ನು ಸಮನ್ವಯಗೊಳಿಸುತ್ತದೆ .

31. ಪರಿಸರ ಸಂರಕ್ಷಣೆಯಲ್ಲಿ ವ್ಯಕ್ತಿ ಮತ್ತು ಸಮಾಜದ ಪಾತ್ರವನ್ನು ತಿಳಿಸಿ .

 • ಪರಿಸರ ಮಾಲಿನ್ಯ ಎಂಬುದು ಆಧುನಿಕ ಕೈಗಾರಿಕಾ ಸಮಾಜಗಳಲ್ಲಿ ಕಂಡುಬರುವ ಜಾಗತಿಕ ಸಮಸ್ಯೆಯಾಗಿದೆ . ಇದರ ನಿವಾರಣೆ ಮತ್ತು ಸಂರಕ್ಷಣೆಯು ಎಲ್ಲಾ ‘ ‘ ಆಧುನಿಕ ಸರ್ಕಾರಗಳ ಮತ್ತು ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದೆ .
 • ಪರಿಸರ ಸಂರಕ್ಷಣೆಗೆ ಪೂರಕವಾದ ರಾಷ್ಟ್ರೀಯ ಕೈಗಾರಿಕಾ ನೀತಿ ಮತ್ತು ಪರಿಸರ ನೀತಿಯನ್ನು ರೂಪಿಸುವುದು ,
 • ನಗರ ಯೋಜನೆಯ ಮೂಲಕ ಅವೈಜ್ಞಾನಿಕ ಮತ್ತು ಅನಿಯಂತ್ರಿತ ನಗರೀಕರಣವನ್ನು ನಿಯಂತ್ರಿಸಬೇಕು .
 • ಕಾರ್ಖಾನೆಗಳು ಮತ್ತು ಗೃಹಬಳಕೆಯಿಂದ ಚರಂಡಿಗಳ ಮೂಲಕ ಬರುವ ಕೊಳಚೆ ನೀರನ್ನು ಸಂಸ್ಕರಿಸಿ ನದಿ ಸಮುದ್ರಕ್ಕೆ ಬಿಡುವುದು .
 • ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಮತ್ತು ನಿರಾವೆಯಿಂದ ತ್ಯಾಜ್ಯ ವಸ್ತುಗಳನ್ನು ದೂರ ಸಾಗಿಸಿ ಸಂಸ್ಕರಣಗೊಳಿಸಿದ ನಂತರ ಪುನರ್‌ಬಳಕೆಗೆ ಸಾಧ್ಯವಾಗುವಂತೆ ಮಾಡುವುದು .
 • ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಣಕಸ ಮತ್ತು ಹಸಿ ಕಸಕ್ಕೆ ಪ್ರತ್ಯೇಕ ಕಸದ ತೊಟ್ಟಿಗಳನ್ನು ನಿರ್ಮಿಸುವುದು .
 • ಪರಿಸರ ರಕ್ಷಣೆಯೆಂಬುದು ಸಾರ್ವಜನಿಕ ಜಾಗೃತಿ ಅಭಿಯಾನಯಾಗಬೇಕು
 • ದೇಶದ ರಾಜಕಾರಣಿಗಳು , ನೌಕರಶಾಹಿ , ಅಧಿಕಾರಿಗಳ ವರ್ಗ ಮತ್ತು ಎಲ್ಲಾ ಪ್ರಜೆಗಳು ಪರಿಸರ ಸಂರಕ್ಷಣೆಯೆಂದು ನಮ್ಮೆಲ್ಲರ ಆದ್ಯ ಕರ್ತವ್ಯ ಹೊಣೆಗಾರಿಕೆ ಹಾಗೂ ಮುಂದಿನ ತಲೆಮಾರಿಗೆ ನೀಡಬೇಕಾದ ಚಳುವಳಿ ಎಂಬುದನ್ನು ಮನಗಾಣಬೇಕು .
 • ಪರಿಸರ ಸಂರಕ್ಷಣೆಯ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿ ಅಗತ್ಯವಿರುವ ಹಣಕಾಸಿನ ನೆರವು ನೀಡುವುದು .
 • ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ಎಲ್ಲಾ ಕಾರ್ಯ ಯೋಜನೆಗಳು ನಿಗದಿತ ಕಾಲಾವಧಿಯೊಳಗೆ ಯಶಸ್ವಿಯಾಗುವಂತೆ ನೋಡಿಕೊಳ್ಳುವುದು .
 • ಶೌಚಾಲಯಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು .
 • ಮಾನವನು ಬಳಸುವ ಔಷಧಿಗಳು , ಕೃಷಿಯಲ್ಲಿ ಬಳಸುವ ಕೀಟನಾಶಕ ಮತ್ತು ಕ್ರಿಮಿನಾಶಕಗಳ ಪಾರ್ಶ್ವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು .
 • ಸಾವಯವ ಕೃಷಿಯನ್ನು ಉತ್ತೇಜಿಸುವುದು . ಭಾರತದ ಪರಿಸರ ಸಂರಕ್ಷಣೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೆರೆಡು ಮಹತ್ತರವಾದ ಪಾತ್ರವನ್ನು ವಹಿಸಿವೆ .

FAQ

1. ಪರಿಸರ ಎಂದರೇನು ?

ನಮ್ಮ ಸುತ್ತಮುತ್ತಲಿನ ಬಾಹ್ಯ ಜಗತ್ತನ್ನು ಪರಿಸರವೆಂದು ಕರೆಯುತ್ತಾರೆ

2. ವಾಯುಮಾಲಿನ್ಯ ಎಂದರೇನು ?

ವಾಯುಮಂಡಲದಲ್ಲಿ ಮಾನವನ ಅನಪೇಕ್ಷಿತ ತ್ಯಾಜ್ಯ ವಸ್ತುಗಳಿಂದ ತುಂಬಿಸುವುದನ್ನು “ ವಾಯುಮಾಲಿನ್ಯ ” ಎನ್ನುವರು .

3. ಜಲಮಾಲಿನ್ಯ ಎಂದರೇನು ?

ಮಾನವನ ಯಾವುದೇ ರೀತಿಯ ಚಟುವಟಿಕೆಯಿಂದ ನೀರು ಕಲುಷಿತಗೊಳ್ಳುವುದೇ ‘ ಜಲಮಾಲಿನ್ಯ’ವಾಗಿದೆ .

ಇತರೆ ವಿಷಯಗಳು :

First Puc Political Science Notes

First PUC History Notes 2022

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf 2022

All Subjects Notes

All Notes App

Leave a Reply

Your email address will not be published. Required fields are marked *